Tag: auto rickshaw driver

  • ಸಾಲ ತೀರಿಸದ್ದಕ್ಕೆ ಆಟೋ ಚಾಲಕನ ಪತ್ನಿಯನ್ನೇ ಪದೇ ಪದೇ ರೇಪ್‌ ಮಾಡಿದ ಫೈನಾನ್ಸರ್

    ಸಾಲ ತೀರಿಸದ್ದಕ್ಕೆ ಆಟೋ ಚಾಲಕನ ಪತ್ನಿಯನ್ನೇ ಪದೇ ಪದೇ ರೇಪ್‌ ಮಾಡಿದ ಫೈನಾನ್ಸರ್

    ಗಾಂಧಿನಗರ: ವ್ಯಕ್ತಿಯೊಬ್ಬ ಫೈನಾನ್ಸರ್ ನೀಡಿದ್ದ 50,000 ರೂ.ಗಳನ್ನು ಮರುಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಆತನ ಪತ್ನಿ (Wife) ಮೇಲೆ ಅತ್ಯಾಚಾರವೆಸಗಿದ ಘಟನೆ ಗುಜರಾತ್‍ನ (Gujarat) ಅಹಮದಾಬಾದ್‍ನಲ್ಲಿ ನಡೆದಿದೆ.

    ಖಾಸಗಿ ಫೈನಾನ್ಸರಾದ ಅಜಿತ್ ಸಿನ್ಹ್ ಚಾವ್ಡಾ ಎಂಬಾತನಿಂದ ಆಟೋ ಚಾಲಕನೊಬ್ಬ (Auto Rickshaw Driver) ಸಾಲ ಪಡೆದಿದ್ದ. ಆದರೆ ಆ ಸಾಲವನ್ನು ತೀರಿಸಲು ವಿಫಲವಾಗಿದ್ದ. ಈ ಹಿನ್ನೆಲೆಯಲ್ಲಿ ಚಾವ್ಡಾ ಸಾಲ ಮಾಡಿದ್ದ ಆಟೋ ಚಾಲಕನ ಮನೆಗೆ ಬಂದು ಆತನ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಜೊತೆಗೆ ಕೃತ್ಯವನ್ನು ಚಿತ್ರೀಕರಿಸಿದ್ದಾನೆ.

    ಅಷ್ಟೇ ಅಲ್ಲದೇ, ಚಾವ್ಡಾ ಆಟೋ ಚಾಲಕನ ಹೆಂಡತಿಯನ್ನು ಬಲವಂತವಾಗಿ ದೇವಸ್ಥಾನಕ್ಕೆ ಕರೆದೊಯ್ದು ಅವಳ ಹಣೆಗೆ ಸಿಂಧೂರ ಹಚ್ಚಿ ಅವಳನ್ನು ತನ್ನ ಹೆಂಡತಿ ಎಂದು ಘೋಷಿಸಿದ್ದಾನೆ. ಬಳಿಕ ಸಂತ್ರಸ್ತೆಯ ಮನೆಗೆ ಆಗಾಗ್ಗೆ ಭೇಟಿ ನೀಡಿ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಕಾಸ್ ಕೊಟ್ರೆ ಮಾತ್ರ ಚಿಕಿತ್ಸೆ – ಸಿಬ್ಬಂದಿ ಲಂಚವತಾರ ಬಯಲು

    ಘಟನೆಗೆ ಸಂಬಂಧಿಸಿ ಸಂತ್ರಸ್ತೆ ದೂರು ದಾಖಲಿಸಲು ರಾಜ್‍ಕೋಟ್ ತಾಲೂಕಾ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಆದರೆ ಅವರು ದೂರು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಅದಾದ ಬಳಿಕ ಆಕೆ ನ್ಯಾಯಾಲಯದ ಮೊರೆ ಹೋಗಿದ್ದು, ಅಲ್ಲಿ ಪೊಲೀಸರಿಗೆ ದೂರು ದಾಖಲಿಸಿಕೊಳ್ಳುವಂತೆ ತಿಳಿಸಿದೆ.

    BRIBE

    ತನ್ನ ವಿರುದ್ಧ ದೂರು ದಾಖಲಾದ ಬಗ್ಗೆ ತಿಳಿದ ಚಾವ್ಡಾ ಸಂತ್ರಸ್ತೆಯ ಪತಿ ಪಡೆದಿದ್ದ ಸಾಲದ ಮರುಪಾವತಿ ಮೊತ್ತದಲ್ಲಿ ವಿನಾಯತಿ ನೀಡುತ್ತೇನೆ ಎಂದು ಆಮಿಷವೊಡ್ಡಿದ್ದಾನೆ. ಅದಕ್ಕೆ ಒಪ್ಪದಿದ್ದಾಗ ಚಾವ್ಡಾ ತನ್ನ ಸಹಚರರಿಗೆ ಹೇಳಿ ಮಹಿಳೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಹಿಳೆಯ ಕೈಗೆ ಗಾಯವಾಗಿದೆ. ಘಟನೆಗೆ ಸಂಬಂಧಿಸಿ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿ ಮೂವರು ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ: ಸಾರ್ವಜನಿಕರಿಗೆ ನಿತ್ಯವೂ ಕಿರುಕುಳ ಆರೋಪ – PSI ಗೀತಾಂಜಲಿ ಅಮಾನತು

    Live Tv
    [brid partner=56869869 player=32851 video=960834 autoplay=true]