Tag: Auto Rate

  • ಬೆಂಗಳೂರು ಜನಕ್ಕೆ ಆಟೋ ದರ ಏರಿಕೆ ಶಾಕ್ – ಕನಿಷ್ಠ ದರ 36 ರೂ.ಗೆ ಏರಿಕೆ

    ಬೆಂಗಳೂರು ಜನಕ್ಕೆ ಆಟೋ ದರ ಏರಿಕೆ ಶಾಕ್ – ಕನಿಷ್ಠ ದರ 36 ರೂ.ಗೆ ಏರಿಕೆ

    ಬೆಂಗಳೂರು: ಈಗಾಗಲೇ ಬಸ್ ಟಿಕೆಟ್‌, ಮೆಟ್ರೋ ದರ ಏರಿಕೆಯಿಂದಾಗಿ ಕಂಗೆಟ್ಟಿರುವ ಬೆಂಗಳೂರಿಗರಿಗೆ (Bengaluru) ಈಗ ಆಟೋ ದರ್‌ ಏರಿಕೆ ಶಾಕ್‌ ಕೊಡಲಾಗಿದೆ. ಮುಂದಿನ ಆಗಸ್ಟ್‌ 1 ರಿಂದಲೇ ಹೊಸ ದರ ಅನ್ವಯವಾಗಲಿದೆ.

    ಸದ್ಯ ಬೆಂಗಳೂರಿನಲ್ಲಿ ಆಟೋದ ಕನಿಷ್ಠ ದರ ಈಗ 30 ರೂಪಾಯಿ ಇದೆ. ಪ್ರತಿ ಕಿಲೋಮೀಟರ್‌ಗೆ 15 ರೂಪಾಯಿ ದರ ಇದೆ. ಆದರೆ, ಹೊಸ ದರ 36 ರೂಪಾಯಿಗೆ ಏರಿಕೆಯಾಗಿದೆ. ಮೊದಲ 2 ಕಿಮೀಗೆ 36 ರೂಪಾಯಿ ಇರಲಿದ್ದು, ನಂತರ ಪ್ರತಿ ಕಿಲೋಮೀಟರ್‌ಗೆ 18 ರೂಪಾಯಿವರೆಗೆ ನಿಗದಿ ಮಾಡಲಾಗಿದೆ. ಒಂದು ಟ್ರಿಪ್‌ನಲ್ಲಿ ಮೂರು ಜನ ಮಾತ್ರ ಪ್ರಯಾಣ ಮಾಡಬಹುದಾಗಿದೆ. ಇದನ್ನೂ ಓದಿ: ಎಂಡಿಎಸ್: ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ – ಕೆಇಎ

    ಅಲ್ಲದೇ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ವರೆಗೆ ಒನ್ ಅಂಡ್ ಆಫ್ ಚಾರ್ಜ್ (ಸಾಮಾನ್ಯ ದರ+ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು) ಮಾಡಬಹುದಾಗಿದೆ. ಜೊತೆಗೆ ವೇಯ್ಟಿಂಗ್‌ ಚಾರ್ಜ್‌ (ಕಾಯುವಿಕೆ ದರ) ಮೊದಲ ಐದು ನಿಮಿಷ ಉಚಿತ ಇರಲಿದೆ. 5 ನಿಮಿಷಗಳ ನಂತರ ಪ್ರತಿ 15 ನಿಮಿಷ ಅಥವಾ ಅರ್ಧ ಭಾಗಕ್ಕೆ 10 ರೂ., ಲಗೇಜ್‌ ದರ ಮೊದಲ 20 ಕೆಜಿಗೆ ಉಚಿತ ಇರಲಿದೆ. 20 ಕೆಜಿ ಮೇಲ್ಪಟ್ಟ ತೂಕದ ಲಗೇಜ್‌ಗೆ 10 ರೂ. ಹೆಚ್ಚುವರಿ ದರ ನಿಗದಿ ಮಾಡಲಾಗಿದೆ. ಗರಿಷ್ಠ ಪ್ರಯಾಣಿಕರ ಲಗೇಜುಗಳು 50 ಕೆಜಿಗೆ 10 ರೂಪಾಯಿ ನಿಗದಿ ಮಾಡಲಾಗಿದೆ. ಇದನ್ನೂ ಓದಿ:  ಸಿಎಂಗೆ ಆಹ್ವಾನ ಕೊಡೋ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ: ನಿತಿನ್ ಗಡ್ಕರಿ

    ಆಟೋ ದರ ಏರಿಕೆ ಸಂಬಂಧ ಮೊದಲು ಮಾರ್ಚ್ ತಿಂಗಳಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಹಲವು ಆಟೋ ಸಂಘಟನೆಗಳು ಭಾಗಿಯಾಗಿದ್ದವು. ಆಟೋ ದರ ಪರಿಷ್ಕರಣೆ ಸಮಿತಿಯು ಆಟೋ ಚಾಲಕರ ಅಹವಾಲು ಕೇಳಿತ್ತು. ಅಲ್ಲದೆ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಿತ್ತು. ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ದರ ಏರಿಕೆಗೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ.

  • ಬಸ್, ಮೆಟ್ರೋ ಬಳಿಕ ಪ್ರಯಾಣಿಕರಿಗೆ ಮತ್ತೊಂದು ಶಾಕ್ – ಇಂದೇ ಫೈನಲ್ ಆಗುತ್ತಾ ಆಟೋ ದರ ಏರಿಕೆ?

    ಬಸ್, ಮೆಟ್ರೋ ಬಳಿಕ ಪ್ರಯಾಣಿಕರಿಗೆ ಮತ್ತೊಂದು ಶಾಕ್ – ಇಂದೇ ಫೈನಲ್ ಆಗುತ್ತಾ ಆಟೋ ದರ ಏರಿಕೆ?

    – ಆಟೋ ದರ ಪರಿಷ್ಕರಣಾ ಸಭೆ ಇಂದು

    ಬೆಂಗಳೂರು: ಮೆಟ್ರೋ, ಬಿಎಂಟಿಸಿ ಬಸ್ ದರ ಏರಿಕೆ ಬೆನ್ನಲ್ಲೆ ಈಗ ಬೆಂಗಳೂರಿಗೆ ಮಗದೊಂದು ದರ ಏರಿಕೆ ಶಾಕ್ ಎದುರಾಗಿದೆ. ಇಂದು ಆಟೋ ದರ ಪರಿಷ್ಕರಣೆಯ ಬಗ್ಗೆ ಸಭೆ ನಡೆಯಲಿದ್ದು, ಆಟೋ ದರ ಏರಿಕೆಯ ಬಿಸಿ ಶೀಘ್ರದಲ್ಲಿಯೇ ತಟ್ಟಲಿದೆ.

    ಇಂದು ಆಟೋ ದರ ಏರಿಕೆ ಸಂಬಂಧ ಸಾರಿಗೆ ಇಲಾಖೆಯು ಆಟೋ ಚಾಲಕ ಸಂಘಟನೆ ಕರೆದಿದೆ. ಇಂದಿನ ಸಭೆಯಲ್ಲೇ ದರ ಪರಿಷ್ಕರಣೆ ಬಗ್ಗೆ ಬಹುತೇಕ ಫೈನಲ್ ಆಗುವ ಸಾಧ್ಯತೆ ಇದೆ.

    ಈಗ 2 ಕಿಮೀಗೆ ಮಿನಿಮಮ್ ದರ 30 ರೂ. ಇದೆ. ಸದ್ಯ 30 ರೂ.ನಿಂದ 40 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. ಬೆಳಗ್ಗೆ 11 ಗಂಟೆಗೆ ಇನ್ ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸಭೆ ನಡೆಯಲಿದೆ.

    ಸಾರಿಗೆ ಇಲಾಖೆ ಅಧಿಕಾರಿಗಳು ಆಟೋ ಚಾಲಕ ಸಂಘಟನೆ ಮುಖ್ಯಸ್ಥರ ಜೊತೆ ಸಭೆ ಮಾಡಲಿದ್ದಾರೆ. ಚಾಲಕ ಸಂಘಟನೆಯ ಒಟ್ಟು ಅಭಿಪ್ರಾಯ ಪಡೆದು ದರ ಏರಿಕೆಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

    ಸಭೆಯಲ್ಲಿ ದರ ಏರಿಕೆಯ ಪ್ರಸ್ತಾಪವನ್ನು ಸಿದ್ಧಮಾಡಿ ಜಿಲ್ಲಾಧಿಕಾರಿಗಳಿಗೆ ರವಾನೆ ಮಾಡಲಾಗುತ್ತದೆ. ಒಂದು ವಾರದಲ್ಲಿ ಬಹುತೇಕ ಪರಿಷ್ಕೃತ ದರ ಪ್ರಕಟವಾಗುವ ಸಾಧ್ಯತೆ ಇದೆ.

    2021 ರಲ್ಲಿ ದರ ಪರಿಷ್ಕರಣೆ ಆಗಿತ್ತು. ಈಗ ಮತ್ತೆ ಆಟೋ ದರ ಏರಿಕೆಗೆ ಸಜ್ಜಾಗಿದೆ. ಒಟ್ಟಾರೆ ದರ ಏರಿಕೆಯ ಬಿಸಿ ಜನರ ಜೇಬುನ್ನು ನಿರಂತರವಾಗಿ ಸುಡಲಿದೆ.

    ಇತ್ತ ಸಭೆಗೂ ಮುನ್ನ ಅನೇಕ ಸಂಘಟನೆಗಳು ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿವೆ. ಫ್ರೀ ಬಸ್, ಮೆಟ್ರೋ ಪ್ರಯಾಣ ಹಿನ್ನೆಲೆ ದರ ಏರಿಕೆಯಾದರೆ ಆಟೋ ಬಳಕೆದಾರರ ಸಂಖ್ಯೆ ಇನ್ನಷ್ಟು ಇಳಿಕೆ ಆಗಬಹುದು. ಈ ಹಿನ್ನೆಲೆಯಲ್ಲಿ ಇಂದಿನ ಸಭೆಯಲ್ಲೂ ದರ ಏರಿಕೆ ಸಂಬಂಧ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಸಂಘಟನೆಗಳ ಅಭಿಪ್ರಾಯ ಆಧಾರದ ಮೇಲೆ ಅಂತಿಮವಾಗಿ ಸಾರಿಗೆ ಇಲಾಖೆ ನಿರ್ಧರಿಸಬಹುದು.

  • ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ – ಇಂದಿನಿಂದ ಆಟೋ ದರ ಕಾಸ್ಟ್ಲಿ

    ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ – ಇಂದಿನಿಂದ ಆಟೋ ದರ ಕಾಸ್ಟ್ಲಿ

    ಬೆಂಗಳೂರು: ಇಂದಿನಿಂದ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಏರಿಕೆಯಾಗಿದೆ.

    ಪೆಟ್ರೋಲ್, ಡಿಸೇಲ್, ತರಕಾರಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನೆಲ್ಲೇ ಇದೀಗ ಜನ ಸಾಮಾನ್ಯರಿಗೆ ಆಟೋ ದರ ಏರಿಕೆ ಬಿಸಿ ತಟ್ಟಿದೆ. ಈ ಹಿಂದೆ 2013 ರಲ್ಲಿ ಏರಿಕೆಯಾಗಿದ್ದ ಆಟೋ ಪ್ರಯಾಣ ದರ 8 ವರ್ಷದ ಬಳಿಕ ಇಂದಿನಿಂದ ಪರಿಷ್ಕೃತ ದರ ಜಾರಿಗೆಯಾಗಿದೆ.

    ಕೊರೊನಾ ಹೊಡೆತದಿಂದ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಕುರಿತಂತೆ ಹಲವು ಬಾರಿ ಜಿಲ್ಲಾಡಳಿತಕ್ಕೆ ದರ ಏರಿಕೆ ಮಾಡುವಂತೆ ಆಟೋ ಸಂಘಟನೆಗಳು ಮನವಿ ಮಾಡಿದ್ದವು. ಅದರಂತೆ ಆಟೋ ಚಾಲಕರ ಮನವಿಗೆ ಸ್ಪಂದಿಸಿರುವ ಜಿಲ್ಲಾಡಳಿತ ಇಂದಿನಿಂದ ಆಟೋ ಪ್ರಯಾಣ ದರ ಏರಿಕೆಗೊಳಿಸಲು ಅನುಮತಿ ನೀಡಿದ್ದಾರೆ. ಆದರೆ ಆಟೋವನ್ನೇ ಅವಲಂಬಿಸಿದ್ದ ಜನಸಾಮಾನ್ಯರಿಗೆ ಹೊರೆಯಾಗಿದ್ದರೆ, ಮತ್ತೊಂದೆಡೆ ಇದರಿಂದ ಆಟೋ ಚಾಲಕರು ಮಾತ್ರ ಸಂತಸಗೊಂಡಿದ್ದಾರೆ. ಇದನ್ನೂ ಓದಿ: ಇನ್ನೂ ಕಾಯಲು ಸಿದ್ಧವಿಲ್ಲ: ಮಲ್ಯಗೆ ಶಿಕ್ಷೆ ವಿಧಿಸಲು ಸಿದ್ಧ ಎಂದು ಸುಪ್ರೀಂ

    ಇಂದಿನಿಂದ ಜಾರಿ ಆಗಲಿರುವ ಪರಿಷ್ಕೃತ ಆಟೋ ದರ:
    * ಮಿನಿಮಾಮ್ ಚಾರ್ಜ್ 25 ರಿಂದ 30ಕ್ಕೆ ಏರಿಕೆ.
    * ಕಿ.ಮಿ ಗೆ 13 ರಿಂದ 15 ರೂಗೆ ಏರಿಕೆ.
    * ಮೊದಲ 2 ಕಿಮೀಗೆ 30 ರೂಪಾಯಿ ನಿಗದಿ..
    * ನಂತರದ ಪ್ರತಿ ಕಿಮೀ ಗೆ 15 ರೂಪಾಯಿ
    * ಮೊದಲ ಐದು ನಿಮಿಷ ಕಾಯುವಿಕೆ ಉಚಿತ
    * ಐದು ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ 5 ರೂ.
    * 20 ಕೆ.ಜಿ ವರೆಗೆ ಲಗೇಜ್ ಸಾಗಣೆ ಉಚಿತ
    * 21 ಕೆ.ಜಿಯಿಂದ 50 ಕೆ.ಜಿ ವರೆಗೆ 5ರೂ. ದರ ನಿಗದಿ
    * ರಾತ್ರಿ ವೇಳೆ ಸಾಮಾನ್ಯ ಮೀಟರ್ ದರ ಮತ್ತು ಅರ್ಧದಷ್ಟು ಹೆಚ್ಚು (30+15) ಪಡೆಯಲು ಅವಕಾಶ. ಇದನ್ನೂ ಓದಿ: ಲೈವ್ ವೇಳೆ ವರದಿಗಾರ್ತಿಗೆ ಕಿರುಕುಳ, ಕಪಾಳಮೋಕ್ಷ

    ದರ ಏರಿಕೆಗೆ ಕಾರಣಗಳೇನು?
    * ಇಂಧನ ಗ್ಯಾಸ್ ಬೆಲೆ ಏರಿಕೆಯಾಗಿರುವುದು.
    * ಆಟೋದ ಬಿಡಿ ಭಾಗಗಳ ಬೆಲೆ ಏರಿಕೆ.
    * ಆರ್‍ಟಿಓ ದರ, ಇನ್ಸುರೆನ್ಸ್ ಬೆಲೆ ದುಪ್ಪಟ್ಟು ಆಗಿರುವುದು.
    * ಆರ್‍ಟಿಓ ಫೈನ್ ಜಾಸ್ತಿ ಆಗಿರುವುದು.
    * ಕಳೆದ 8 ವರ್ಷಗಳಂದ ಆಟೋ ಪ್ರಯಾಣ ದರ ಏರಿಕೆಯಾಗದಿರುವುದು.

  • ಡಿಸೆಂಬರ್ 1 ರಿಂದ ಬೆಂಗಳೂರಿನಲ್ಲಿ ಆಟೋ ದರ ಹೆಚ್ಚಳ

    ಡಿಸೆಂಬರ್ 1 ರಿಂದ ಬೆಂಗಳೂರಿನಲ್ಲಿ ಆಟೋ ದರ ಹೆಚ್ಚಳ

    ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯು ಬೆಂಗಳೂರಿನಲ್ಲಿ ಆಟೊ ರಿಕ್ಷಾ ಪ್ರಯಾಣ ದರವನ್ನು ಏರಿಕೆ ಮಾಡಿದ್ದು, ಡಿಸೆಂಬರ್ 1 ರಿಂದ ಹೊಸ ದರ ಜಾರಿಯಾಗಲಿದೆ.

    ಪ್ರಸ್ತುತ ಎರಡು ಕಿಲೋ ಮೀಟರ್‌ಗೆ 25 ರೂಪಾಯಿ ಇದ್ದ ಆಟೋ ದರವನ್ನು ಇದೀಗ 30 ರೂಪಾಯಿಗೆ ಏರಿಸಲಾಗಿದೆ. ಪ್ರಸ್ತುತ ಪ್ರತಿ ಕಿಲೋಮೀಟರ್‌ಗೆ ಆಟೋ ದರ 12.50 ರೂಪಾಯಿ ಇತ್ತು. ಆದರೆ ಇನ್ನೂ ಮುಂದೆ ಆಟೋ ದರವನ್ನು 15 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಬೆಂಗಳೂರು ನಗರ ಜಿಲ್ಲೆಯಿಂದ ಆದೇಶ ಜಾರಿಗೊಳಿಸಿದೆ. ಅಲ್ಲದೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಆಟೋರಿಕ್ಷಾಗಳಿಗೂ ಇದೇ ದರ ಅನ್ವಯವಾಗುತ್ತದೆ. ಇದನ್ನೂ ಓದಿ: ಕ್ಯಾನ್ಸರ್‌ನಿಂದ ಗೆದ್ದು ಬಂದವರು ತಮ್ಮ ಕಥೆಗಳನ್ನು ಹೇಳಬೇಕು: ಮನಿಷಾ ಕೊಯಿರಾಲಾ

    ರಾತ್ರಿ ವೇಳೆಯಲ್ಲಿ ಅಂದರೆ ರಾತ್ರಿ 10 ರಿಂದ ಬೆಳಗಿನ ಜಾವ 5 ಗಂಟೆವರೆಗೆ ಆಟೋ ದರ+ ಆಟೋದರದ ಅರ್ಧಪಟ್ಟು ಹೆಚ್ಚು ಹಣ ನೀಡಬೇಕು ಮತ್ತು 90 ದಿನಗಳ ಒಳಗೆ ಹೊಸ ಪರಿಷ್ಕೃತ ದರವನ್ನು ಆಟೋ ಮೀಟರ್‌ಗಳಲ್ಲಿ ಅಳವಡಿಸಬೇಕು ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಗುಂಡು ಹಾರಿಸಿ ತಂದೆ, ಮಗನ ಹತ್ಯೆ – ನಿರ್ಲಕ್ಷ್ಯ ತೋರಿದ ಇಬ್ಬರು ಪೊಲೀಸರ ಅಮಾನತು