Tag: Auto Mobile

  • 99,900 ರೂಪಾಯಿಗೆ TVS ಆರ್ಬಿಟರ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

    99,900 ರೂಪಾಯಿಗೆ TVS ಆರ್ಬಿಟರ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

    ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿ ಟಿವಿಎಸ್, ಇಂದು ‘ಟಿವಿಎಸ್ ಆರ್ಬಿಟರ್’ (TVS Orbiter) ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದರ ಬೆಲೆ ರೂ 99,900 (ಎಕ್ಸ್-ಶೋರೂಮ್, ಬೆಂಗಳೂರು; PM ಇ-ಡ್ರೈವ್ ಸ್ಕೀಮ್ ಸೇರಿದಂತೆ).

    ಆರ್ಬಿಟರ್ 3.1kWh ಬ್ಯಾಟರಿ ಪ್ಯಾಕ್‌ನೊಂದಿಗೆ ಮಾತ್ರ ಲಭ್ಯವಿದ್ದು, ಒಮ್ಮೆ ಚಾರ್ಜ್ ಮಾಡಿದರೆ 158km ಚಲಿಸುತ್ತದೆ ಎಂದು ಕಂಪನಿ ಹೇಳಿದೆ. ಆದರೆ ನಿಜವಾದ ರೇಂಜ್ ಸುಮಾರು 120 ಕಿಮೀ ನೀಡಬಹುದು. ಸ್ಕೂಟರ್‌ನ ಗರಿಷ್ಠ ವೇಗವನ್ನು ಗಂಟೆಗೆ 68 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ.

    ಟಿವಿಎಸ್ ಆರ್ಬಿಟರ್‌ಗೆ ಓಲಾ S1Z ಮತ್ತು ರಿವರ್ ಇಂಡೀ ಸ್ಕೂಟರ್‌ಗಳಲ್ಲಿ ನೀಡಿರುವಂತೆ 14-ಇಂಚಿನ ಮುಂಭಾಗದ ಚಕ್ರ ನೀಡಲಾಗಿದೆ. ಹಿಂಭಾಗದ ಚಕ್ರ 12 ಇಂಚಿದೆ. ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಓವರ್-ದಿ-ಏರ್ ಅಪ್‌ಡೇಟ್‌ಗಳು, ಆಂಟಿ-ಥೆಫ್ಟ್, ಕ್ರ್ಯಾಶ್ ಮತ್ತು ಜಿಯೋ-ಫೆನ್ಸಿಂಗ್ ಒಳಗೊಂಡ ಸುರಕ್ಷತಾ ಎಚ್ಚರಿಕೆಗಳನ್ನು ಕನೆಕ್ಟೆಡ್ ಆಪ್ ಮೂಲಕ ಪಡೆಯಬಹುದಾಗಿದೆ. ಈಕೋ ಮತ್ತು ಪವರ್ ಮೋಡ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್, ಪಾರ್ಕಿಂಗ್ ಅಸಿಸ್ಟ್ (ರಿವರ್ಸ್ ಫಂಕ್ಷನ್) ಮತ್ತು ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಈ ಸ್ಕೂಟರ್‌ ಹೊಂದಿದೆ.

    ಆರ್ಬಿಟರ್‌ನಲ್ಲಿ ಹ್ಯಾಂಡಲ್‌ಬಾರ್-ಮೌಂಟೆಡ್ LED ಹೆಡ್‌ಲ್ಯಾಂಪ್, LED ಲೈಟ್ ಸ್ಟ್ರಿಪ್‌, ಎರಡು ಹೆಲ್ಮೆಟ್‌ಗಳನ್ನು ಇಡಬಹುದಾದ 34-ಲೀಟರ್ ಅಂಡರ್ ಸೀಟ್ ಸ್ಟೋರೇಜ್, ವಿಶಾಲವಾದ 290 ಎಂಎಂ ಫ್ಲಾಟ್ ಫ್ಲೋರ್‌ಬೋರ್ಡ್, ಮುಂತಾದ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಆರ್ಬಿಟರ್ ನಿಯಾನ್ ಸನ್ ಬರ್ಸ್ಟ್, ಸ್ಟ್ರಾಟೋಸ್ ಬ್ಲೂ, ಲೂನಾರ್ ಗ್ರೇ, ಮಾರ್ಟಿಯನ್ ಕಾಪರ್, ಕಾಸ್ಮಿಕ್ ಟೈಟಾನಿಯಂ ಮತ್ತು ಸ್ಟೆಲ್ಲಾರ್ ಸಿಲ್ವರ್ ಎಂಬ ಆರು ಬಣ್ಣಗಳಲ್ಲಿ ಲಭ್ಯವಿದೆ.

  • ಬೆಂಗಳೂರಿನಲ್ಲಿ ICAT ಕೇಂದ್ರ ಸ್ಥಾಪನೆ ಖಚಿತ – ಉನ್ನತ ಅಧಿಕಾರಿಗಳೊಂದಿಗೆ ಹೆಚ್‌ಡಿಕೆ ಚರ್ಚೆ

    ಬೆಂಗಳೂರಿನಲ್ಲಿ ICAT ಕೇಂದ್ರ ಸ್ಥಾಪನೆ ಖಚಿತ – ಉನ್ನತ ಅಧಿಕಾರಿಗಳೊಂದಿಗೆ ಹೆಚ್‌ಡಿಕೆ ಚರ್ಚೆ

    ಮಾನೇಸರ್ (ನವದೆಹಲಿ): ಬೆಂಗಳೂರು ನಗರದಲ್ಲಿ ಅಂತಾರಾಷ್ಟ್ರೀಯ ಆಟೋಮೋಟಿವ್ ಟೆಕ್ನಾಲಜಿ ಕೇಂದ್ರ -ಐಕ್ಯಾಟ್‌ನ 3ನೇ ಕೇಂದ್ರ ಸ್ಥಾಪನೆಯಾಗಲಿದೆ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

    ಹರಿಯಾಣದ ಗುರುಗ್ರಾಮದಲ್ಲಿರುವ ಐಕ್ಯಾಟ್ (ICAT- The International Centre for Automotive Technology)ನ ಎರಡು ಕೇಂದ್ರಗಳಿಗೆ ಭೇಟಿ ನೀಡಿದ ಸಚಿವರು, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನದ ನೆಲೆವೀಡಾದ ಬೆಂಗಳೂರಿನಲ್ಲಿ ಇದರ ಮೂರನೇ ಕೇಂದ್ರ ಸ್ಥಾಪನೆ ಮಾಡುವ ಬಗ್ಗೆ ಐಕ್ಯಾಟ್‌ನ ಉನ್ನತ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ಇದನ್ನೂ ಓದಿ: ಟೆಕ್ಕಿ ಅತುಲ್‌ ಸುಭಾಷ್‌ ಮಗ ಆತನ ತಾಯಿಯ ಜೊತೆಯೇ ಇರಲಿ: ಸುಪ್ರೀಂ ಕೋರ್ಟ್‌ ಅವಕಾಶ

    ಅಲ್ಲದೇ, ದಕ್ಷಿಣದಲ್ಲಿಯೇ ಅತ್ಯಂತ ಆಯಕಟ್ಟಿನ ಹಾಗೂ ವ್ಯೂಹಾತ್ಮಕ ನಗರವೂ ಆಗಿರುವ ಬೆಂಗಳೂರಿನಲ್ಲಿ ಐಕ್ಯಾಟ್ ನ ಹೊಸ ಕೇಂದ್ರ ಬರುವುದು ಅತ್ಯಗತ್ಯವಾಗಿದೆ. ನಾವೀನ್ಯತೆ, ಆವಿಷ್ಕಾರ ಹಾಗೂ ಉದ್ಯಮಶೀಲತೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಅಟೋಮೊಬೈಲ್ ಕ್ಷೇತ್ರದ ಹಬ್ ಆಗಿಯೂ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಐಕ್ಯಾಟ್ ಕೇಂದ್ರ ಸ್ಥಾಪನೆ ಬಗ್ಗೆ ಕೇಂದ್ರದ ನಿರ್ದೇಶಕ ಸೌರಭ್ ದಲೇಲ ಅವರೊಂದಿಗೆ ಚರ್ಚಿಸಿದರು. ಬೆಂಗಳೂರಿನಲ್ಲಿ ಆದಷ್ಟು ಬೇಗ ಐಕ್ಯಾಟ್ ಕೇಂದ್ರ ಆರಂಭ ಮಾಡುವ ಬಗ್ಗೆ ಪ್ರಕ್ರಿಯೆಗಳನ್ನು ಆರಂಭ ಮಾಡುವುದಾಗಿ ಅಧಿಕಾರಿಗಳು ಸಚಿವರಿಗೆ ಸ್ಪಷ್ಟ ಭರವಸೆ ನೀಡಿದರು.

    ಬೆಂಗಳೂರಿನಲ್ಲಿ ಸ್ಥಾಪನೆ ಆಗಲಿರುವ ಈ ಕೇಂದ್ರವು ಎಲೆಕ್ಟ್ರಿಕ್ ವಾಹನ (ಇವಿ) ತಂತ್ರಜ್ಞಾನ, ಸಾಫ್ಟ್‌ವೇರ್ ನಿಯಂತ್ರಿತ ವಾಹನಗಳು (ಎಸ್‌ಡಿವಿಗಳು), ಸ್ವಾಯತ್ತ ವ್ಯವಸ್ಥೆಗಳು ಮತ್ತು ದತ್ತಾಂಶ ಸುರಕ್ಷತೆಯಲ್ಲಿ ಐಕ್ಯಾಟ್ ಕೇಂದ್ರವು ನಿರ್ಣಾಯಕವಾಗಿ ಕೆಲಸ ಮಾಡುತ್ತದೆ. ಅಲ್ಲದೆ, ಈ ಕೇಂದ್ರವು ಬೆಂಗಳೂರಿನಲ್ಲಿ ಸ್ಥಾಪನೆ ಆಗುವುದರಿಂದ ಕರ್ನಾಟಕದ ಜತೆಗೆ ಅದರ ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಅಟೋಮೊಬೈಲ್ ಆವಿಷ್ಕಾರಕ್ಕೆ ಭಾರೀ ಪ್ರಮಾಣದ ಉತ್ತೇಜನ ದೊರೆಯಲಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.

    ಬೆಂಗಳೂರಿನಲ್ಲಿ ಐಕ್ಯಾಟ್ ಕೇಂದ್ರ ಸ್ಥಾಪನೆಗೆ ಕೇಂದ್ರದ ಬೃಹತ್ ಕೈಗಾರಿಕೆ ಸಚಿವಾಲಯದಿಂದ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ಹಾಗೂ ಅದೇ ರೀತಿ ಕರ್ನಾಟಕ ಸರ್ಕಾರದಿಂದ ಸಿಗಬೇಕಿರುವ ಅನುಕೂಲಗಳನ್ನು ಒದಗಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ಐಕ್ಯಾಟ್ ನಿರ್ದೇಶಕರಿಗೆ ಭರವಸೆ ನೀಡಿದರು.

    ಬೆಂಗಳೂರಿನಲ್ಲಿ ಐಕ್ಯಾಟ್ ನ ಮೂರನೇ ಕೇಂದ್ರ ಬಂದರೆ ಅಟೋಮೊಬೈಲ್ ಕ್ಷೇತ್ರಕ್ಕೆ ಮಾತ್ರವಷ್ಟೇ ಅಲ್ಲದೇ, ರಕ್ಷಣೆ ಮತ್ತು ರೇಲ್ವೆ ಕ್ಷೇತ್ರಗಳಿಗೂ ಹೆಚ್ಚು ಉಪಯೋಗ ಆಗುತ್ತದೆ. ಹೊಸ ಅವಕಾಶದ ಬಾಗಿಲುಗಳನ್ನು ತೆರೆಯುತ್ತದೆ. ಅಟೋಮೊಬೈಲ್ ತಂತ್ರಜ್ಞಾನದ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ: ವೈರಲ್ ಆಗಿದ್ದ ಸುಂದರ ಕಣ್ಣಿನ ಮೊನಾಲಿಸಾ ಕುಂಭಮೇಳದಿಂದ ಹೊರನಡೆದಿದ್ಯಾಕೆ?

    ಐಕ್ಯಾಟ್ 3ನೇ ಕೇಂದ್ರದ ವೈಶಿಷ್ಟ್ಯಗಳು?
    * ಐಕ್ಯಾಟ್ 3ನೇ ಕೇಂದ್ರ ಕೇವಲ ಒಂದು ತಂತ್ರಜ್ಞಾನ ಆಧಾರಿತ ಕೇಂದ್ರವಷ್ಟೇ ಆಗಿರದೇ, ಒಟ್ಟಾರೆ ಆರ್ಥಿಕತೆ ಮೇಲೆ ಪ್ರತಿಕೂಲಕರ ಪ್ರಭಾವ ಬೀರುತ್ತದೆ.
    * ಸುಧಾರಿತ ಎಲೆಕ್ಟ್ರಿಕ್ ತಂತ್ರಜ್ಞಾನ ಅಭಿವೃದ್ಧಿ ಮತ್ತು ಮಾಪನಾಂಕ ನಿರ್ಣಯದ ಪ್ರಯೋಗಾಲಯಗಳನ್ನು ಹೊಂದಿರುತ್ತದೆ.
    * ಎಲೆಕ್ಟ್ರಾನಿಕ್ ನಿಯಂತ್ರಿತ ವ್ಯವಸ್ಥೆ (ECU) ಹಾಗೂ ಸೆನ್ಸಾರ್ ತಂತ್ರಜ್ಞಾನ ಅಭಿವೃದ್ಧಿ ವ್ಯವಸ್ಥೆ ಹೊಂದಿರುತ್ತದೆ.
    * ಸೈಬರ್ ಸುರಕ್ಷತೆ ಲ್ಯಾಬ್‌ಗಳು ಮತ್ತು ಅತ್ಯಾಧುನಿಕ ಚಾಲನಾ ನೆರವು ವ್ಯವಸ್ಥೆ (ADAS) ಸಂಶೋಧನೆ ವ್ಯವಸ್ಥೆ ಹೊಂದಿರುತ್ತದೆ.
    * ಸಂಪರ್ಕಿತ ಮತ್ತು ಸ್ವಾಯತ್ತ ಇಲ್ಲವೇ ಏಕೀಕೃತ ನಿಯಂತ್ರಣ ವ್ಯವಸ್ಥೆಯುಳ್ಳ ವಾಹನ ತಂತ್ರಜ್ಞಾನಗಳಿಗೆ ಸೌಲಭ್ಯಗಳನ್ನು ಹೊಂದಿರುತ್ತದೆ.
    * ಸಾಫ್ಟ್‌ವೇರ್ ಆಧಾರಿತ ಅಥವಾ ನಿಯಂತ್ರಿತ ವಾಹನಗಳ (SDVs) ಸಾಫ್ಟ್‌ವೇರ್ ಪರೀಕ್ಷೆ ಮತ್ತು ಅಭಿವೃದ್ಧಿಯನ್ನು ಮಾಡುತ್ತದೆ.
    * ಮಹತ್ವದ್ದಾದ ಆಟೋಮೋಟಿವ್ ದತ್ತಾಂಶವನ್ನು ಸುರಕ್ಷಿತವಾಗಿ ಕಾಪಾಡುವ ವ್ಯವಸ್ಥೆಯನ್ನು ಹೊಂದಿರುತ್ತದೆ.

    ಸಚಿವರ ಕನಸು ನನಸು:
    ಪ್ರಧಾನಿಗಳ ಆತ್ಮನಿರ್ಭರ್ ಭಾರತ್ ಹಾಗೂ ಮೆಕ್ ಇನ್‌ ಇಂಡಿಯಾ ಮೂಲಕ ವಿಕಸಿತ ಭಾರತದ ಕನಸು ಸಾಕಾರಕ್ಕೆ ಐಕ್ಯಾಟ್ ನ ಎರಡು ಕೇಂದ್ರಗಳ ಕೊಡುಗೆ ದೊಡ್ಡದು. ಅದೇ ರೀತಿ ಬೆಂಗಳೂರಿನಲ್ಲಿ ಮೂರನೇ ಅತಿದೊಡ್ಡ ಕೇಂದ್ರ ಸ್ಥಾಪನೆಯಾದರೆ ರಾಜ್ಯಕ್ಕೆ ಹೆಚ್ಚು ಅನುಕೂಲ ಆಗುವುದು ಮಾತ್ರವಲ್ಲದೇ, ದಕ್ಷಿಣದ ರಾಜ್ಯಗಳಲ್ಲಿ ಆಟೋಮೊಟೀವ್ ತಂತ್ರಜ್ಞಾನದ ಬೃಹತ್ ಕ್ರಾಂತಿಯೇ ಆಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

    ಸೋಮವಾರ ಐಕ್ಯಾಟ್ ಕೇಂದ್ರದಲ್ಲಿನ ಚಟುವಟಿಕೆಗಳ ಬಗ್ಗೆ ಹೆಚ್‌ಡಿಕೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಆ ನಂತರ ಇಡೀ ಕೇಂದ್ರದ ಪ್ರಯೋಗಾಲಯಗಳು, ಅಪಘಾತ ಪರೀಕ್ಷೆ ಪ್ರಯೋಗಾಲಯಗಳು, ಪ್ರತಿಧ್ವನಿ ಅಧ್ಯಯನ ಕೇಂದ್ರಗಳು ಹಾಗೂ ಇಂಧನ ಹರಿವಿನ ಪರೀಕ್ಷಾ ಕಾರ್ಯವಿಧಾನಗಳನ್ನು ಸಚಿವರು ಪರಿಶೀಲನೆ ವೀಕ್ಷಿಸಿದರು.

    ಈ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಭಾರತದ ವಾಹನಗಳ ಉತ್ಕೃಷ್ಟತೆಗೆ ಐಕ್ಯಾಟ್ ಕೇಂದ್ರ ಅತಿದೊಡ್ಡ ಕೊಡುಗೆ ನೀಡುತ್ತಿದೆ. ಆವಿಷ್ಕಾರ, ನಾವೀನ್ಯತೆ ಕ್ಷೇತ್ರಗಳಿಗೆ ಇದು ಹೆಚ್ಚು ಆದ್ಯತೆ ಕೊಡುತ್ತಿದೆ. ಇಲ್ಲಿಗೆ ಬಂದಿರುವುದು ನನಗೆ ಬಹಳ ಸಂತೋಷ ತಂದಿದೆ. ಇಲ್ಲಿನ ಸುಧಾರಿತ ಪ್ರಯೋಗಾಲಯಗಳು ಮತ್ತು ಪರೀಕ್ಷಾ ಮೂಲಸೌಕರ್ಯಗಳನ್ನು ಒಳಗೊಂಡಂತೆ ICATನ ಅತ್ಯಾಧುನಿಕ ಸೌಲಭ್ಯಗಳು ಆಟೋಮೋಟಿವ್ ನಾವೀನ್ಯತೆಯಲ್ಲಿ ಭಾರತದ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿವೆ ಎಂದು ಸಚಿವರು ಹೇಳಿದರು. ಇದೇ ವೇಳೆ ಸಚಿವರು ಅತ್ಯಾಧುನಿಕ ಐಟಿ ಆಟೋಮ್ಯಾಟಿವ್ ಕೇಂದ್ರಕ್ಕೆ ಅಡಿಗಲ್ಲು ಹಾಕಿದರು.

  • ಮಹೀಂದ್ರಾ ಎಕ್ಸ್‌ಯುವಿ 400 ಎಲೆಕ್ಟ್ರಿಕ್ ಕಾರು ಅನಾವರಣ

    ಮಹೀಂದ್ರಾ ಎಕ್ಸ್‌ಯುವಿ 400 ಎಲೆಕ್ಟ್ರಿಕ್ ಕಾರು ಅನಾವರಣ

    ಹೀಂದ್ರಾ & ಮಹೀಂದ್ರಾ ಕಂಪನಿಯು (Mahindra & Mahindra) ಬಹುನಿರೀಕ್ಷಿತ ಎಕ್ಸ್‌ಯುವಿ 400 ಎಲೆಕ್ಟ್ರಿಕ್ ಎಸ್‍ಯುವಿಯನ್ನು (Electric xuv) ಅನಾವರಣಗೊಳಿಸಿದೆ. ಇದರ ರೇಂಜ್ ಬರೋಬ್ಬರಿ 456 ಕಿಲೋಮೀಟರ್. ಎಕ್ಸ್‌ಯುವಿ 400 ಜನವರಿ 2023ರಲ್ಲಿ ಬಿಡುಗಡೆಯಾಗಲಿದೆ.

    ಎಕ್ಸ್‌ಯುವಿ 400 ಈಗಾಗಲೇ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ 300 ಕಾರನ್ನೇ (Car) ಹೋಲುತ್ತದೆ. ಡಿಸೆಂಬರ್ 2022ರಲ್ಲಿ ಈ ಹೊಸ ಎಲೆಕ್ಟ್ರಿಕ್ ಕಾರು ಟೆಸ್ಟ್ ಡ್ರೈವ್‍ಗೆ ಲಭ್ಯವಿರಲಿದ್ದು, ಜನವರಿ 2023ರಲ್ಲಿ ಬುಕ್ಕಿಂಗ್‌ ಓಪನ್ ಆಗಲಿದೆ. ಜನವರಿಯಲ್ಲಿ ಕಂಪನಿಯು ಕಾರಿನ ಬೆಲೆಯನ್ನು ತಿಳಿಸಲಿದೆ ಹಾಗೂ ಅದೇ ತಿಂಗಳಲ್ಲಿ ಡೆಲಿವರಿ ಕೂಡ ಆರಂಭಿಸಲಿದೆ. ಇದನ್ನೂ ಓದಿ: 12 ಸಾವಿರ ರೂ. ಒಳಗಿನ ಚೀನಿ ಫೋನ್‌ಗಳನ್ನು ನಿಷೇಧಿಸಲ್ಲ: ಕೇಂದ್ರ ಸರ್ಕಾರ

    ಎಕ್ಸ್‌ಯುವಿ 400 ಕಾರಿನಲ್ಲಿ 39.4kWh ಬ್ಯಾಟರಿ ಇದ್ದು, 150hp ಪವರ್ ಮತ್ತು 310Nm ಟಾರ್ಕ್ ಉತ್ಪಾದಿಸಲಿದೆ. 50kW DC ಫಾಸ್ಟ್ ಚಾರ್ಜರ್ ಮುಖಾಂತರ ಈ ಕಾರನ್ನು 0-80% ಚಾರ್ಜ್ ಮಾಡಲು ಕೇವಲ 50 ನಿಮಿಷಗಳು ಸಾಕು. 7.2 kW/32A ಚಾರ್ಜರ್ ಪಯೋಗಿಸಿದರೆ ಚಾರ್ಜ್ ಆಗಲು 6 ಗಂಟೆ 30 ನಿಮಿಷಗಳು ಬೇಕು. 3.3 kW/16A ಸ್ಟ್ಯಾಂಡರ್ಡ್ ಚಾರ್ಜರ್ ಮೂಲಕ 100% ಚಾರ್ಜ್ ಮಾಡಲು 13 ಗಂಟೆಗಳು ಬೇಕಾಗುತ್ತದೆ. ಈ ಬ್ಯಾಟರಿ IP67 ರೇಟಿಂಗ್ ಹೊಂದಿದೆ. ಇದನ್ನೂ ಓದಿ: ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬಂದ ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡೋ ಮುನ್ನ ಎಚ್ಚರ!

    ಫನ್, ಫಾಸ್ಟ್ ಮತ್ತು ಫಿಯರ್‌ಲೆಸ್‌ ಎಂಬ ಮೂರು ಡ್ರೈವ್ ಮೋಡ್‍ಗಳು ಈ ಕಾರಿನಲ್ಲಿವೆ. ಎಕ್ಸ್‌ಯುವಿ 400 ಕಾರನ್ನು ಕೇವಲ ಒಂದೇ ಪೆಡಲ್ ಬಳಸಿ ಓಡಿಸಬಹುದು ಎಂದು ಮಹೀಂದ್ರಾ ಕಂಪನಿಯು ಹೇಳುತ್ತಿದೆ. ರೀಜೆನರೇಟಿವ್ ಬ್ರೇಕಿಂಗ್ ವ್ಯವಸ್ಥೆ ಅಷ್ಟು ಬಲಶಾಲಿಯಾಗಿರಲಿದೆ ಎಂಬುದು ತಿಳಿಯಬಹುದಾಗಿದೆ.

    ಎಕ್ಸ್‌ಯುವಿ ಸ್ವಯಂಚಾಲಿತ ಹವಾನಿಯಂತ್ರಣ (Air  Conditioner) ವ್ಯವಸ್ಥೆ, ಸನ್‍ರೂಫ್, ಕ್ರೂಸ್ ಕಂಟ್ರೋಲ್, ಆ್ಯಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, 7 ಇಂಚಿನ ಟಚ್‍ಸ್ಕ್ರೀನ್ ಮತ್ತು ಕನೆಕ್ಟಡ್‌ ಕಾರ್ ವ್ಯವಸ್ಥೆಯನ್ನು ಎಕ್ಸ್‌ಯುವಿ 400 ಕಾರು ಒಳಗೊಂಡಿದೆ. 6 ಏರ್‌ ಬ್ಯಾಗ್‌, ನಾಲ್ಕೂ ಚಕ್ರಗಳಿಗೆ ಡಿಸ್ಕ್ ಬ್ರೇಕ್ ನೀಡಲಾಗಿದೆ.

    ಹೊಸ ಎಕ್ಸ್‌ಯುವಿ 400 ಕಾರು ಟಾಟಾ ನೆಕ್ಸಾನ್ ಇವಿ ಮತ್ತು ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಕಾರುಗಳೊಂದಿಗೆ ಪೈಪೋಟಿಗೆ ಇಳಿಯಲಿದೆ. ಇದರ ಬೆಲೆ 16 ಲಕ್ಷದಿಂದ 20 ಲಕ್ಷದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]