ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಆಟೋ ಚಾಲಕರ ಸಂಘದ ರಾಯಭಾರಿ ಆಗಿ ನೇಮಕಗೊಂಡಿದ್ದಾರೆ. ಖಾಕಿ ಶರ್ಟ್ ಧರಿಸಿಕೊಂಡೇ ಆಟೋ ಚಲಾಯಿಸಿ ಖುಷಿ ಪಟ್ಟಿದ್ದಾರೆ.
ಬೆಂಗಳೂರಿನಿಂದ (Bengaluru) ನೂರಾರು ಆಟೋ ಚಾಲಕರು ಆರ್.ಆರ್ ನಗರದ ಅವರ ನಿವಾಸದ ಬಳಿ ಜಮಾಯಿಸಿ ರಚಿತಾರನ್ನ ಅಫಿಷಿಯಲ್ ಆಗಿ ಚಾಲಕರ ಸಂಘದ (Auto Drivers Association) ರಾಯಭಾರಿಯನ್ನಾಗಿ ಮಾಡಿಕೊಳ್ಳುವ ಕಾರ್ಯಕ್ರಮ ಮಾಡಿದ್ದಾರೆ. ಆಟೋ ಎದುರು ಆಟೋ ಚಾಲಕರ ವಸ್ತ್ರದಲ್ಲೇ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ ರಚಿತಾ ರಾಮ್. ಈ ವಿಚಾರವನ್ನ ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.
ʻಅತಿರಥ ಮಹಾರಥ ಸಾರಥಿಗಳಿಗೆ ನನ್ನ ಸಮಸ್ಕಾರ, ನನ್ನನ್ನು ಆಟೋ ಚಾಲಕರ ಸಂಘದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದ್ದಕ್ಕೆ ಧನ್ಯವಾದಗಳುʼ ಎಂದಿದ್ದಾರೆ ರಚಿತಾ. ಅನೇಕ ಮಹಿಳಾ ಆಟೋ ಚಾಲಕಿಯರೂ ಸೇರಿದಂತೆ ಆಟೋ ಚಾಲಕರು ರಚಿತಾ ಮನೆ ಮುಂದೆ ಭರ್ಜರಿಯಾಗಿ ಜಮಾಯಿಸಿದ್ದರು. ಆಟೋ ಚಾಲಕಿಯರ ಜೊತೆ ತಾವೂ ಖಾಕಿ ಶರ್ಟ್ ಧರಿಸಿಯೇ ನಿಂತಿದ್ದರು ರಚಿತಾ. ಇದೀಗ ರಚಿತಾ ರಾಮ್ ಆಟೋ ಚಾಲಕರ ಸಂಘದ ರಾಯಭಾರಿ.
ಓರ್ವ ಯುವತಿ ಜೆಪಿ ನಗರದ ಏಳನೇ ಹಂತದಿಂದ ಆಟೋ ಬುಕ್ ಮಾಡಿದ್ದರು. ಆಟೋ ಲೋಕೇಶನ್‌ಗೆ ಬಂದ ತಕ್ಷಣ ಚಾಲಕ ಬ್ಯಾಗ್ ಇಡುವ ನೆಪದಲ್ಲಿ ಯುವತಿಯ ಮೈ ಮುಟ್ಟಿದ್ದ. ಅಲ್ಲದೇ ನೀನು ಸಿನಿಮಾ ಹಿರೋಯಿನ್ ತರಾ ಇದೀಯಾ ಎಂದಿದ್ದನಂತೆ. ಬಳಿಕ ಯುವತಿ ಆಟೋ ಒಳಗೆ ಕುಳಿತುಕೊಳ್ಳುತ್ತಿದ್ದಂತೆ ಜ್ವರ ಇದೀಯಾ ಎಂದು ಹಣೆ ಮುಟ್ಟಿ ಖಾಸಗಿ ಅಂಗಕ್ಕೆ ಕೈ ಹಾಕಿದ್ದಾನೆ. ಕೂಡಲೇ ಯುವತಿ ಆಟೋದಿಂದ ಜಿಗಿದು ಓಡಿಹೋಗಿದ್ದಾರೆ.
ಈ ಕುರಿತು ಯುವತಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ. ಜೊತೆಗೆ ಆತ ಕೆಲಸ ಮಾಡುತ್ತಿದ್ದ ಕ್ಯಾಬ್ ಕಂಪನಿಗೂ ಮಾಹಿತಿ ನೀಡಿ, ಆತನ ಲೈಸೆನ್ಸ್ ವಿರುದ್ಧ ಕ್ರಮ ತೆಗದುಕೊಳ್ಳಲು ಸೂಚಿಸಿದ್ದಾರೆ. ಸದ್ಯ ಪುಟ್ಟೇನಹಳ್ಳಿ ಪೊಲೀಸರಿಂದ ತನಿಖೆ ಮುಂದುವರಿದಿದೆ.ಇದನ್ನೂ ಓದಿ: ಬಂಗ್ಲೆಗುಡ್ಡೆಯಲ್ಲಿ ಉತ್ಖನನ ಮಾಡುವಂತೆ ರಿಟ್ ಅರ್ಜಿ – ಅರಣ್ಯ ಇಲಾಖೆಯಿಂದಲೂ ಮಾಹಿತಿ ಪಡೆದ ಎಸ್‌ಐಟಿ
ಚಿಕ್ಕಬಳ್ಳಾಪುರ: ಅದು 6 ವರ್ಷಗಳ ಹಿಂದೆ ನಡೆದ ಕಿಡ್ನಾಪ್ ಮತ್ತು ಕೊಲೆ ಪ್ರಕರಣ. ಆರು ವರ್ಷ ಕಳೆದ್ರೂ ನಿಗೂಢವಾಗಿ ಕಾಣೆಯಾಗಿದ್ದ ಆಟೋ ಚಾಲಕನ ಕೊಲೆ ಆಗಿದೆ ಅಂತ ಗೊತ್ತಿದ್ರೂ, ಆರೋಪಿಗಳ ಬಂಧನ ಆಗೇ ಇರಲಿಲ್ಲ. ಮನೆಯವರು ಸಹ ಸತ್ತವನು ಸತ್ತ ಅಂತ ಸುಮ್ಮನಾಗಿದ್ರು. ಇನ್ನೂ ಕೊಲೆ ಮಾಡಿದವರು ಸಹ ಆರಾಮಾಗಿ ಕೆಲಸ ಕಾರ್ಯ ಮಾಡಿಕೊಂಡು ಒಡಾಡಿಕೊಂಡು ಇದ್ರು. ಆದ್ರೆ 6 ವರ್ಷಗಳ ನಂತರ ಕೊಲೆ ಮಾಡಿದ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಲಾಗಿದೆ.
ಹೌದು. ಹೀಗೆ ಪೊಲೀಸರ ಅತಿಥಿಗಳಾಗಿ ಜೈಲು ಸೇರಿರೋ ಆರೋಪಿಗಳ ಹೆಸರು ಹರೀಶ್ ಅಲಿಯಾಸ್ ಅಫಲ್, ದಿವಾಕರ್, ಮಾರ್ತಾಂಡಾ ಅಲಿಯಾಸ್ ಕೊಂಡಾ, ರಂಜಿತ್ ಕುಮಾರ್ ಅಲಿಯಾಸ್ ಎಗ್ ರೈಸ್ ರಂಜಿತ್, ಮಂಜುನಾಥ ಅಲಿಯಾಸ್ ಕಾಡೆಮ್ಮೆ ಅಂತ. ಇದನ್ನೂ ಓದಿ: ಸಮೀರ್‌ಗೆ ತಪ್ಪದ ಸಂಕಷ್ಟ – ಕಡೂರು ಠಾಣೆಯಲ್ಲಿ ಮತ್ತೊಂದು ದೂರು!
ಅಂದಹಾಗೆ ಈಗ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪೊಲೀಸರ ಅತಿಥಿಗಳಾಗಿ ಜೈಲು ಸೇರಿರೋ ಈ ಆರೋಪಿಗಳು 6 ವರ್ಷಗಳಿಂದ ತಮಗೇನು ಗೊತ್ತೆ ಇಲ್ಲ. ತಾವ್ಯಾರನ್ನ ಮರ್ಡರ್ ಮಾಡೇ ಇಲ್ಲ ಕಿಡ್ನಾಪ್ ಅಂತೂ ಮೊದಲೇ ಮಾಡಿಲ್ಲ ಅನ್ನೋ ಹಾಗೆ ಜೀವನ ರೂಪಿಸಿಕೊಂಡು ಒಡಾಡಿಕೊಂಡಿದ್ರು. ಆದ್ರೆ 6 ವರ್ಷಗಳ ನಂತರ ಈಗ ಆರೋಪಿಗಳು ಮಾಡಿರೋ ಕಿಡ್ನಾಪ್ ಕೊಲೆ ಪ್ರಕರಣ ಬಯಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಸವಾರರಿಗೆ ಗುಡ್‌ನ್ಯೂಸ್ – ದಂಡ ಪಾವತಿಗೆ 50% ಡಿಸ್ಕೌಂಟ್
5 ಮಂದಿ ಆರೋಪಿತರು ಸೇರಿದಂತೆ ತಲೆ ಮರೆಸಿಕೊಂಡಿರೋ ಮಹೇಶ್ ಅಲಿಯಾಸ್ ಹಂಡಿಗನಾಳ ಮಹೇಶ. ಹಾಗೂ ತಮಿಳುನಾಡು ಪೊಲೀಸರ ಬಂಧಿಸಿರೋ ಜಾಕಿ ಅಲಿಯಾಸ್ ಶಿವಶಂಕರ್ ಹಾಗೂ ಇತರರು ಸೇರಿ ಶಿಡ್ಲಘಟ್ಟ ಪಟ್ಟಣದ ರಾಜೀವ್ ಗೌಡ ಬಡಾವಣೆಯ ನಿವಾಸಿ 27 ವರ್ಷದ ಗಿರೀಶ್ ನನ್ನ ಕಿಡ್ನಾಪ್ ಮಾಡಿ ಕೊಲೆ ಮಾಡಿದ್ರು. ಶಿಡ್ಲಘಟ್ಟಲ್ಲಿ ಕಿಡ್ನಾಪ್ ಮಾಡಿದ ಆರೋಪಿಗಳು ಗಿರೀಶ್ ನನ್ನ ಕೋಲಾರದ ನರಸಾಪುರ ಹೊಸಕೋಟೆ ಮಾಲೂರು ಮಾರ್ಗದಲ್ಲಿ ಕಾರಿನಲ್ಲಿ ಕಿಡ್ನಾಪ್ ಮಾಡಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ರು. ಬಳಿಕ ಮೃತದೇಹವನ್ನ ತಮಿಳುನಾಡಿನ ಡೆಂಕಣಿಕೋಟೆ ಬಳಿಯ ತಳಿ ರಸ್ತೆಯ ಕೆರೆಯೊಂದರಲ್ಲಿ ಬಿಸಾಡಿ ಬಂದಿದ್ರು. ಅನ್ನೋದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಕೇಸ್ ಹಿನ್ನೆಲೆ ಏನು?
2019ರ ಮೇ 12ರಂದು ಗಿರೀಶ್‌ನನ್ನ ಕಿಡ್ನಾಪ್ ಮಾಡಲಾಗಿತ್ತು. ಕೊಲೆಯಾದ ಗಿರೀಶ್ ಶಿಡ್ಲಘಟ್ಟ ಬಸ್ ನಿಲ್ದಾಣದ ಬಳಿ ಆಟೋ ಚಾಲಕನಾಗಿದ್ದ. ಆರೋಪಿಗಳಾದ ಜಾಕಿ, ಹರೀಶ್ ಜೊತೆ ಗಿರೀಶ್ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದ. ಮೂರ್ನಾಲ್ಕು ಬಾರಿ ಜಗಳಗಳಾಗಿದ್ದು ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ಜಾಕಿ ಹಾಗೂ ಹರೀಶ್. ಪ್ಲ್ಯಾನ್ ಪ್ಲಾನ್ ಮಾಡಿ ಗಿರೀಶ್ ಕೊಲೆ ಮಾಡೋಕೆ ಸಂಚು ರೂಪಿಸಿದ್ರು. ಅಪರಿಚಿತ ಮೃತದೇಹ ಸಿಕ್ಕ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ತಮಿಳುನಾಡಿನ ತಳಿ ಪೊಲೀಸರು 6 ವರ್ಷಗಳ ಕಾಲ ತನಿಖೆ ಮಾಡಿದ್ರೂ ಸೂಕ್ತ ತನಿಖೆ ನಡೆಸಿರಲಿಲ್ಲ. ಕೊನೆಗೆ ಕರ್ನಾಟಕಕ್ಕೆ ಕೇಸ್ ವರ್ಗಾವಣೆ ಮಾಡಿದ್ದು, ಈಗ ಶಿಡ್ಲಘಟ್ಟ ಪೊಲೀಸರು ಪ್ರಕರಣದಲ್ಲಿನ 5 ಮಂದಿ ಆರೋಪಿಗಳನ್ನ ಬಂಧಿಸಿದ್ದು. ಮತ್ತೋರ್ವ ಆರೋಪಿ ಮಹೇಶ್ ಅಲಿಯಾಸ್ ಹಂಡಿಗನಾಳ ಮಹೇಶ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಮುಧೋಳ-ಯಾದವಾಡ ಸಂಪರ್ಕ ಕಡಿತ – ಘಟಪ್ರಭೆಗೆ ಹರಿದು ಬರುತ್ತಿದೆ 62 ಸಾವಿರ ಕ್ಯೂಸೆಕ್ ನೀರು
ಚಿತ್ರದುರ್ಗ: ಅಕ್ರಮ ಸಂಬಂಧಕ್ಕಾಗಿ (Illicit Relationship) ಗಂಡನನ್ನೇ ಕೊಲೆಗೈದು ಮೂಟೆಕಟ್ಟಿ ಎಸೆದಿದ್ದ ಪತ್ನಿ ಪೊಲೀಸರ ಬಲೆಗೆ ಸಿಲುಕಿರುವ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.
ಮೃತ ಆಟೋ ಚಾಲಕ ರವಿಕುಮಾರ್
ಚಿತ್ರದುರ್ಗ ತಾಲೂಕಿನ ಈರಜ್ಜನಹಟ್ಟಿ ಗ್ರಾಮದ ಬಳಿ ಜುಲೈ 20ರಂದು ಆಟೋ ಚಾಲಕ ರವಿಕುಮಾರ್ (51) ಕೊಲೆ ನಡೆದಿದ್ದು, ಮೂಟೆ ಕಟ್ಟಿ ಬಿಸಾಕಿದ ಸ್ಥಿತಿಯಲ್ಲಿ ರವಿಕುಮಾರ್ ಮೃತದೇಹ ಪತ್ತೆಯಾಗಿತ್ತು. ಈ ವೇಳೆ ಪೊಲೀಸರ ಬಳಿ ಹೈಡ್ರಾಮ ಮಾಡಿದ್ದ ಪತ್ನಿ ಸುನಿತಾ, ತನ್ನ ಮಗಳ ಗಂಡನ ಮೇಲೆ ಕೊಲೆ ಆರೋಪ ಹೊರಿಸಿದ್ದಳು. ಆದರೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಅಸಲಿ ಸತ್ಯ ಬಯಲಿಗೆಳೆದಿದ್ದು, ಮೃತ ರವಿಕುಮಾರ್ ಪತ್ನಿ ಸುನೀತಾ, ಪುತ್ರ ವಿಷ್ಣು ಹಾಗು ಆಕೆಯ ಪ್ರಿಯಕರ ಗಣೇಶನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್ – ಶಾಸಕ ಬೈರತಿ ಬಸವರಾಜ್‌ಗೆ ಬಿಗ್ ರಿಲೀಫ್
ಬೆಂಗಳೂರು ಮೂಲದವನಾದ ಗಣೇಶ್ ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಯಾಗಿದ್ದು, ಕೆಲ ತಿಂಗಳಿಂದ ಕೆಳಗೋಟೆ ಬಡಾವಣೆಯಲ್ಲಿ ವಾಸವಾಗಿದ್ದ. ಈ ವೇಳೆ ಸುನೀತಾ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಇವರ ಕಳ್ಳಾಟಕ್ಕೆ ಅಡ್ಡಿಯಾಗಿದ್ದ ರವಿಕುಮಾರ್ ಕೊಲೆಗೆ ಸಂಚು ರೂಪಿಸಿದ್ದರು. ಸುನಿತಾ, ಗಣೇಶನಲ್ಲಿದ್ದ ಹಣದಾಸೆಗೆ ಬಲಿಯಾಗಿ ತನ್ನ ಗಂಡನನ್ನೆ ಕೊಲ್ಲಲು ಸಾಥ್ ನೀಡಿದ್ದಾಳೆ. ಡಿವೈಎಸ್ಪಿ ದಿನಕರ್ ಹಾಗು ಸಿಪಿಐ ಮುದ್ದುರಾಜ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿದ್ದು, ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕರ್ತವ್ಯ ಲೋಪ; ಧಾರವಾಡ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಅಮಾನತು
ಕಾರವಾರ: ತನ್ನ ಸಾವಿನಲ್ಲೂ ಎಂಟು ಜನರಿಗೆ ಅಂಗಾಂಗ ದಾನ ಮಾಡುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಆಟೋ ಚಾಲಕ ಸಾರ್ಥಕತೆ ಮೆರೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಶಿರಳಗಿ ಮೂಲದ ವಿನಾಯಕ ವೆಂಕಟೇಶ ನಾಯ್ಕ ಅವರು ಜುಲೈ 27 ರಂದು ಬೆಂಗಳೂರಿನಲ್ಲಿ ಆಟೋ ಚಲಾಯಿಸುತ್ತಿದ್ದಾಗ ಬೆಂಗಳೂರಿನ ಸೀತಾ ಸರ್ಕಲ್ ಬಳಿ ಬಿಎಂಟಿಸಿ ಬಸ್ ಹಿಂಭಾಗದಿಂದ ರಿಕ್ಷಕ್ಕೆ ಗುದ್ದಿತ್ತು. ಆಟೋದಲ್ಲಿ ಇದ್ದ ಪ್ರಯಾಣಿಕರು ಸಾವು ಕಂಡಿದ್ದರೆ, ವಿನಾಯಕ್ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು.
ಅಪಘಾತದಿಂದ ವಿನಾಯಕ ವೆಂಕಟೇಶ್ ನಾಯ್ಕ ಕೋಮಾಕ್ಕೆ ಜಾರಿದ್ದರು. ಆದರೆ, ಬದುಕಿಗಾಗಿ 13 ದಿನಗಳ ಹೋರಾಟ ನಡೆಸಿದರೂ ಮಿದುಳು ನಿಷ್ಕ್ರಿಯವಾಗಿತ್ತು. ಹೀಗಾಗಿ, ಅವರ ಆಸೆಯಂತೆ ಅಂಗಾಂಗವನ್ನು ದಾನ ಮಾಡಲಾಗಿದ್ದು, ಎಂಟು ಜನರಿಗೆ ಅವರ ಅಂಗಗಳನ್ನು ನೀಡಲಾಗಿದೆ.
ಈ ಮೂಲಕ ತನ್ನ ಸಾವಿನಲ್ಲೂ ಇನ್ನೊಬ್ಬರ ಜೀವನಕ್ಕೆ ಬೆಳಕಾಗಿದ್ದು, ಸಾರ್ಥಕತೆ ಮೆರೆದಿದ್ದಾರೆ. ಭಾನುವಾರ ಅವರ ಮೃತದೇಹವನ್ನು ಸಿದ್ದಾಪುರದ ಶಿರಳಿಗೆ ತರಲಾಗಿದ್ದು, ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.
ಬೆಂಗಳೂರು: ಈಗಾಗಲೇ ಬಸ್ ಟಿಕೆಟ್, ಮೆಟ್ರೋ ದರ ಏರಿಕೆಯಿಂದಾಗಿ ಕಂಗೆಟ್ಟಿರುವ ಬೆಂಗಳೂರಿಗರಿಗೆ (Bengaluru) ಈಗ ಆಟೋ ದರ್ ಏರಿಕೆ ಶಾಕ್ ಕೊಡಲಾಗಿದೆ. ಮುಂದಿನ ಆಗಸ್ಟ್ 1 ರಿಂದಲೇ ಹೊಸ ದರ ಅನ್ವಯವಾಗಲಿದೆ.
ಸದ್ಯ ಬೆಂಗಳೂರಿನಲ್ಲಿ ಆಟೋದ ಕನಿಷ್ಠ ದರ ಈಗ 30 ರೂಪಾಯಿ ಇದೆ. ಪ್ರತಿ ಕಿಲೋಮೀಟರ್‌ಗೆ 15 ರೂಪಾಯಿ ದರ ಇದೆ. ಆದರೆ, ಹೊಸ ದರ 36 ರೂಪಾಯಿಗೆ ಏರಿಕೆಯಾಗಿದೆ. ಮೊದಲ 2 ಕಿಮೀಗೆ 36 ರೂಪಾಯಿ ಇರಲಿದ್ದು, ನಂತರ ಪ್ರತಿ ಕಿಲೋಮೀಟರ್‌ಗೆ 18 ರೂಪಾಯಿವರೆಗೆ ನಿಗದಿ ಮಾಡಲಾಗಿದೆ. ಒಂದು ಟ್ರಿಪ್‌ನಲ್ಲಿ ಮೂರು ಜನ ಮಾತ್ರ ಪ್ರಯಾಣ ಮಾಡಬಹುದಾಗಿದೆ. ಇದನ್ನೂ ಓದಿ: ಎಂಡಿಎಸ್: ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ – ಕೆಇಎ
ಅಲ್ಲದೇ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ವರೆಗೆ ಒನ್ ಅಂಡ್ ಆಫ್ ಚಾರ್ಜ್ (ಸಾಮಾನ್ಯ ದರ+ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು) ಮಾಡಬಹುದಾಗಿದೆ. ಜೊತೆಗೆ ವೇಯ್ಟಿಂಗ್ ಚಾರ್ಜ್ (ಕಾಯುವಿಕೆ ದರ) ಮೊದಲ ಐದು ನಿಮಿಷ ಉಚಿತ ಇರಲಿದೆ. 5 ನಿಮಿಷಗಳ ನಂತರ ಪ್ರತಿ 15 ನಿಮಿಷ ಅಥವಾ ಅರ್ಧ ಭಾಗಕ್ಕೆ 10 ರೂ., ಲಗೇಜ್ ದರ ಮೊದಲ 20 ಕೆಜಿಗೆ ಉಚಿತ ಇರಲಿದೆ. 20 ಕೆಜಿ ಮೇಲ್ಪಟ್ಟ ತೂಕದ ಲಗೇಜ್‌ಗೆ 10 ರೂ. ಹೆಚ್ಚುವರಿ ದರ ನಿಗದಿ ಮಾಡಲಾಗಿದೆ. ಗರಿಷ್ಠ ಪ್ರಯಾಣಿಕರ ಲಗೇಜುಗಳು 50 ಕೆಜಿಗೆ 10 ರೂಪಾಯಿ ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಸಿಎಂಗೆ ಆಹ್ವಾನ ಕೊಡೋ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ: ನಿತಿನ್ ಗಡ್ಕರಿ
ಆಟೋ ದರ ಏರಿಕೆ ಸಂಬಂಧ ಮೊದಲು ಮಾರ್ಚ್ ತಿಂಗಳಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಹಲವು ಆಟೋ ಸಂಘಟನೆಗಳು ಭಾಗಿಯಾಗಿದ್ದವು. ಆಟೋ ದರ ಪರಿಷ್ಕರಣೆ ಸಮಿತಿಯು ಆಟೋ ಚಾಲಕರ ಅಹವಾಲು ಕೇಳಿತ್ತು. ಅಲ್ಲದೆ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಿತ್ತು. ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಮರಾಠಿಯಲ್ಲಿ (Marathi) ಏಕೆ ಮಾತನಾಡುತ್ತಿಲ್ಲ ಎಂದು ಕೇಳಿದಾಗ ರಿಕ್ಷಾ ಚಾಲಕ, ‘ನಾನು ಹಿಂದಿಯಲ್ಲಿ ಮಾತನಾಡುತ್ತೇನೆ’ ಎಂದು ಪದೇ ಪದೇ ಹೇಳಿರುವುದು ವೀಡಿಯೊದಲ್ಲಿದೆ. ಸಾರ್ವಜನಿಕವಾಗಿ ಮರಾಠಿ ಬಳಸದಿರುವ ಬಗ್ಗೆ ಚಾಲಕನನ್ನು ಪ್ರಶ್ನಿಸಿದ್ದರು. ಚಾಲಕ ಹಿಂದಿ ಮತ್ತು ಭೋಜ್‌ಪುರಿಯಲ್ಲಿ ಮಾತನಾಡಲು ಇಷ್ಟಪಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದ.
‘ಯಾರಾದರೂ ಮರಾಠಿ ಭಾಷೆ, ಮಹಾರಾಷ್ಟ್ರ ಅಥವಾ ಮರಾಠಿ ಜನರನ್ನು ಅವಮಾನಿಸಲು ಧೈರ್ಯ ಮಾಡಿದರೆ, ಅವರಿಗೆ ನಿಜವಾದ ಶಿವಸೇನಾ ಶೈಲಿಯಲ್ಲಿ ಉತ್ತರ ಸಿಗುತ್ತದೆ. ನಾವು ಸುಮ್ಮನಿರುವುದಿಲ್ಲ’ ಎಂದು ಶಿವಸೇನೆ ಉದ್ಧವ್ ಬಣದ ಉದಯ್ ಜಾಧವ್ ಎಚ್ಚರಿಸಿದ್ದಾರೆ.
ಆ ಚಾಲಕ ಮಹಾರಾಷ್ಟ್ರ ಮತ್ತು ಮರಾಠಿ ಮನೂಸ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ. ಅವನಿಗೆ ತಕ್ಕ ಪಾಠ ಕಲಿಸಿದ್ದೇವೆ. ರಾಜ್ಯದ ಜನರ ಕ್ಷಮೆಯಾಚಿಸುವಂತೆ ಮಾಡಿದ್ದೇವೆಂದು ತಿಳಿಸಿದ್ದಾರೆ.
-ರೀಲ್ಸ್ ನೋಡಿಕೊಂಡು ಲಾರಿ ಚಲಾಯಿಸಿದ್ದು ಘಟನೆಗೆ ಕಾರಣ ಎಂದು ಆರೋಪ
ಆನೇಕಲ್: ಶಾಲಾ ಬಸ್ ಹಾಗೂ ಲಾರಿ ನಡುವೆ ಸಿಲುಕಿ ಆಟೋ ಅಪ್ಪಚ್ಚಿಯಾಗಿದ್ದು, ಚಾಲಕ ಪವಾಡ ಸದೃಶವಾಗಿ ಪಾರಾಗಿರುವ ಘಟನೆ ಹೊಸೂರು (Hosuru) ಮುಖ್ಯರಸ್ತೆಯ ಕೂಡ್ಲು ಗೇಟ್ (Kudlu Gate) ಬಳಿ ನಡೆದಿದೆ.
ಕೂಡ್ಲು ಗೇಟ್ ಬಳಿ ಹೋಗುತ್ತಿದ್ದಾಗ ಶಾಲಾ ಬಸ್‌ನ ಚಾಲಕ ದಿಢೀರ್ ಬ್ರೇಕ್ ಹಾಕಿದ್ದಾನೆ. ಇದರಿಂದ ಹಿಂದೆ ಇದ್ದ ಆಟೋ ಚಾಲಕ ಕೂಡ ತಕ್ಷಣ ಬ್ರೇಕ್ ಹಾಕಿದ್ದಾನೆ. ಆದರೆ ಆಟೋ ಹಿಂದಿದ್ದ ಲಾರಿ ಚಾಲಕ ಬ್ರೇಕ್ ಹಾಕದೇ ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಾದ ರಭಸಕ್ಕೆ ಶಾಲಾ ಬಸ್ ಹಾಗೂ ಲಾರಿ ನಡುವೆ ಸಿಲುಕಿ ಆಟೋ ಅಪ್ಪಚ್ಚಿಯಾಗಿದೆ.ಇದನ್ನೂ ಓದಿ: ನಮ್ಮ ಸರ್ಕಾರ 5 ವರ್ಷ ಬಂಡೆ ರೀತಿ ಇರುತ್ತೆ: ಒಟ್ಟಾಗಿಯೇ ಇದ್ದೇವೆ ಎಂದು ಹೇಳಿ ಡಿಕೆಶಿಯ ಕೈ ಎತ್ತಿದ ಸಿಎಂ
ಇದೆಲ್ಲದರ ನಡುವೆ ಆಟೋ ಚಾಲಕ ಸಿಲುಕಿ ನರಳಾಡಿದ್ದು, ಸ್ಥಳೀಯರು ಬಂದು ರಕ್ಷಣೆ ಮಾಡಿದ್ದಾರೆ. ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸಣ್ಣ-ಪುಟ್ಟ ಗಾಯಗಳಿಂದ ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹಾಸನ: ಎದೆನೋವು ಕಾಣಿಸಿಕೊಂಡ ಹಿನ್ನೆಲೆ ತಾನೇ ಆಟೋ ಚಲಾಯಿಸಿಕೊಂಡು ಆಸ್ಪತ್ರೆಗೆ ಸೇರಿದ್ದ ಚಾಲಕ ಹೃದಯಾಘಾತದಿಂದ (Heart Attack) ಮೃತಪಟ್ಟಿರುವ ಘಟನೆ ಹಾಸನ (Hassan) ಜಿಲ್ಲೆಯಲ್ಲಿ ನಡೆದಿದೆ.
ಗೋವಿಂದ (37) ಹೃದಯಾಘಾತದಿಂದ ಸಾವನ್ನಪ್ಪಿದ ಆಟೋ ಚಾಲಕ. ಹಾಸನದ ಸಿದ್ದೇಶ್ವರ ನಗರದಲ್ಲಿ ಘಟನೆ ನಡೆದಿದೆ. ಇಂದು ಬೆಳಗ್ಗೆ ಏಳು ಗಂಟೆ ಸಮಯದಲ್ಲಿ ಆಟೋ ಚಲಾಯಿಸುವಾಗ (Auto Driver) ಗೋವಿಂದ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂ ಐತಿಹಾಸಿಕ ದಾಖಲೆಗೆ 1 ಅಡಿಯಷ್ಟೇ ಬಾಕಿ
ತಕ್ಷಣವೇ ಆಟೋ ಚಲಾಯಿಸಿಕೊಂಡು ಗೋವಿಂದ ಜಿಲ್ಲಾಸ್ಪತ್ರೆಗೆ ತೆರಳಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಗೋವಿಂದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಒಂದು ತಿಂಗಳ ಅಂತರದಲ್ಲಿ ಹಾಸನ ಜಿಲ್ಲೆಯಲ್ಲಿ ಹದಿನೇಳು ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಐದು ಹುಲಿಗಳ ಸಾವು – ಹಸು ಕೊಂದಿದ್ದಕ್ಕೆ ವಿಷ ಹಾಕಿದ್ನಾ ಹಸು ಮಾಲೀಕ?
ಹೈದರಾಬಾದ್: 2,000 ರೂ.ಗೆ ಸೆಕ್ಸ್ ಲೈವ್ ಸ್ಟ್ರೀಮ್ ಮಾಡ್ತಿದ್ದ ದಂಪತಿಯನ್ನು (Hyderabad Couple) ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಆದ್ರೆ ದಂಪತಿಯ ಬಗ್ಗೆ ಅಚ್ಚರಿ ಸಂಗತಿಯೊಂದು ಬೆಳಕಿಗೆ ಬಂದಿದೆ.
ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ (Two Daughters). ಪತಿ ವೃತ್ತಿಯಲ್ಲಿ ಕ್ಯಾಬ್ ಡ್ರೈವರ್ ಆಗಿದ್ದರೆ, ಪತ್ನಿ ಗೃಹಿಣಿಯಾಗಿದ್ದಳು. ಮನೆಯಲ್ಲಿ ಆರ್ಥಿಕ ಸಮಸ್ಯೆಯಿದ್ದ ಕಾರಣ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಪತಿ-ಪತ್ನಿ ಇಬ್ಬರು ಕೃತ್ಯಕ್ಕೆ ಇಳಿದಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: 2,000 ರೂ.ಗೆ ಸೆಕ್ಸ್ ಲೈವ್‌ಸ್ಟ್ರೀಮ್ ಮಾಡಿದ ಹೈದರಾಬಾದ್ ಜೋಡಿ ಅರೆಸ್ಟ್!
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೃತ್ಯದಲ್ಲಿ ಭಾಗಿ
ಆರ್ಥಿಕ ಕೊರತೆಯಿಂದ ಮಕ್ಕಳಿಬ್ಬರ ಕಾಲೇಜು ಶುಲ್ಕ (college fees) ಪಾವತಿಸಿರಲಿಲ್ಲ. ಇಬ್ಬರೂ ಪ್ರತಿಭಾನ್ವಿತ ವಿದ್ಯಾರ್ಥಿಗಳೇ ಆಗಿದ್ದರು. ಒಬ್ಬ ಮಗಳು ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದರು, ಮತ್ತೊಬ್ಬಳು ಮಗಳು ಇತ್ತೀಚಿಗೆ ನಡೆದ intermediate ಪರೀಕ್ಷೆಯಲ್ಲಿ 470ಕ್ಕೆ 468 ಅಂಕ ಗಳಿಸಿ, ಕಾಲೇಜು ಪ್ರವೇಶಕ್ಕೆ ತಯಾರಿ ನಡೆಸಿದ್ದಳು. ಈ ನಡುವೆ ಆಟೋ ಚಾಲಕನಾಗಿದ್ದ ಪತಿ ಅನಾರೋಗ್ಯದಿಂದ ಬಳಲುತ್ತಿದ್ದ, ಚಿಕಿತ್ಸೆ ಪಡೆಯೋದಕ್ಕೂ ಹಣ ಇರಲಿಲ್ಲ. ಹೀಗಾಗಿ ಸುಲಭವಾಗಿ ಹಣಗಳಿಸಲು ತಮ್ಮ ಲೈಂಗಿಕ ಕೃತ್ಯವನ್ನು ಲೈವ್‌ಸ್ಟ್ರೀಮ್ ಮಾಡುವ ಕೆಲಸಕ್ಕೆ ಮುಂದಾದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕೋಲ್ಕತ್ತಾದಲ್ಲಿ ಕಾನೂನು ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್; ಟಿಎಂಸಿ ನಾಯಕ ಸೇರಿ ಮೂವರ ಬಂಧನ
ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಅಂಬರ್‌ಪೇಟೆಯ ಮಲ್ಲಿಕಾರ್ಜುನ ನಗರದಲ್ಲಿರುವ ತಮ್ಮ ಮನೆಯಲ್ಲಿ ದಂಪತಿಯನ್ನ ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ದಂಪತಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಮಕ್ಕಳಿಬ್ಬರಿಗೂ ಪೋಷಕರ ಈ ಕೃತ್ಯದ ಬಗ್ಗೆ ತಿಳಿದಿರಲಿಲ್ಲ. ಗುರುತು ಮರೆಮಾಚಲು ಮುಖಕ್ಕೆ ಮಾಸ್ಕ್ ಧರಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧ ಸುಧಾರಿಸಲು 4 ಹಂತದ ಯೋಜನೆ ಪ್ರಸ್ತಾಪಿಸಿದ ರಾಜನಾಥ್ ಸಿಂಗ್
ದಂಪತಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 296 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲತೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67 (ಎ) ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.