Tag: AusvsPak

  • ಪಾಕಿಸ್ತಾನ್‌ ಜಿಂದಾಬಾದ್‌ ಅನ್ನದೇ ಇನ್ನೇನು ಹೇಳ್ಬೇಕು? – ಪೊಲೀಸ್‌ ಅಧಿಕಾರಿ ಜೊತೆ ಪಾಕ್‌ ಅಭಿಮಾನಿ ವಾಗ್ವಾದ

    ಪಾಕಿಸ್ತಾನ್‌ ಜಿಂದಾಬಾದ್‌ ಅನ್ನದೇ ಇನ್ನೇನು ಹೇಳ್ಬೇಕು? – ಪೊಲೀಸ್‌ ಅಧಿಕಾರಿ ಜೊತೆ ಪಾಕ್‌ ಅಭಿಮಾನಿ ವಾಗ್ವಾದ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ (Australia And Pakistan) ನಡುವಿನ ಪಂದ್ಯದಲ್ಲಿ ಪಾಕ್‌ ಅಭಿಮಾನಿಯೊಬ್ಬ (Pakistani Fan) ಪೊಲೀಸ್‌ ಅಧಿಕಾರಿಯೊಂದಿಗೆ ವಾಗ್ವಾದಕ್ಕಿಳಿದಿದ್ದು, ಇದೀಗ ಜಾಲತಾಣದಲ್ಲಿ ವೀಡಿಯೋ ವೈರಲ್‌ ಆಗಿದೆ.

    ಆಸ್ಟ್ರೇಲಿಯಾ – ಪಾಕಿಸ್ತಾನ (PAK vs AUS) ಪಂದ್ಯ ನಡೆಯುತ್ತಿದ್ದ ವೇಳೆ ಪಾಕಿಸ್ತಾನದ ಕ್ರಿಕೆಟ್‌ ಅಭಿಮಾನಿಯೊಬ್ಬ ʻಪಾಕಿಸ್ತಾನ್‌ ಜಿಂದಾಬಾದ್‌ʼ ಘೋಷಣೆ ಕೂಗಿದ್ದಾನೆ. ಈ ವೇಳೆ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್‌ ಅಧಿಕಾರಿಯೊಬ್ಬರು (Bengaluru Police) ʻಪಾಕಿಸ್ತಾನ್‌ ಜಿಂದಾಬಾದ್‌ʼ ಕೂಗುವಂತಿಲ್ಲ ಎಂದು ತಡೆಯೊಡ್ಡಿದ ನಂತರ ಕೆಲಕಾಲ ವಾಗ್ದಾದ ನಡೆದಿದೆ. ಇದನ್ನೂ ಓದಿ: ಸಿಎಂಗೆ ಕ್ರಿಕೆಟ್‌ ಕ್ರೇಜ್‌ – ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ vs ಪಾಕಿಸ್ತಾನ ಮ್ಯಾಚ್‌ ವೀಕ್ಷಿಸಿದ ಸಿದ್ದರಾಮಯ್ಯ

    ಎಕ್ಸ್‌ ಖಾತೆಯಲ್ಲಿ ಹರಿದಾಡುತ್ತಿರುವ 45 ಸೆಕೆಂಡುಗಳ ವೀಡಿಯೋದಲ್ಲಿ, ಪಾಕ್‌ ಅಭಿಮಾನಿ ಜಿಂದಾಬಾದ್‌ ಘೋಷಣೆ ಕೂಗಲು ಪೊಲೀಸ್‌ ಅಧಿಕಾರಿ ತಡೆಯೊಡ್ಡಿದ್ದಾರೆ. ಆಗ ಪಾಕ್‌ ಅಭಿಮಾನಿ, ನಾನು ಪಾಕಿಸ್ತಾನದವನು, ಪಾಕಿಸ್ತಾನ್‌ ಜಿಂದಾಬಾದ್‌ (Pakistan zindabad) ಅನ್ನದೇ ಇನ್ನೇನು ಹೇಳಬೇಕು? ಭಾರತ್‌ ಮಾತಾಕಿ ಜೈ ಅನ್ನುವಾಗ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಯಾಕೆ ಹೇಳಬಾರದು? ಎಂದು ಅಧಿಕಾರಿಯನ್ನ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: World Cup 2023: ಒಂದೇ ಓವರ್‌ನಲ್ಲಿ 24 ರನ್‌ ಚಚ್ಚಿಸಿಕೊಂಡು ಕೆಟ್ಟ ದಾಖಲೆ ಬರೆದ ಹ್ಯಾರಿಸ್‌ ರೌಫ್‌

    ಬಳಿಕ ಅಧಿಕಾರಿಯ ನಡೆಯನ್ನ ವೀಡಿಯೋ ಮಾಡಿಕೊಂಡಿದ್ದಾನೆ. ಪೊಲೀಸ್‌ ಅಧಿಕಾರಿ ಯಾವುದೇ ಪ್ರತಿಕ್ರಿಯೆ ನೀಡದೇ ಮುಂದೆ ಸಾಗುತ್ತಿದ್ದಂತೆ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಲು ಶುರು ಮಾಡಿದ್ದಾನೆ. ಇದನ್ನೂ ಓದಿ: World Cup 2023: ಸ್ಪಿನ್‌ ದಾಳಿಗೆ ಮಕಾಡೆ ಮಲಗಿದ ಪಾಕ್‌ – ಆಸೀಸ್‌ಗೆ 62 ರನ್‌ ಭರ್ಜರಿ ಜಯ, ಪಾಕ್‌ಗೆ ಹೀನಾಯ ಸೋಲು

    ವೀಡಿಯೋ ಎಕ್ಸ್‌ನಲ್ಲಿ ಹರಿದಾಡುತ್ತಿದ್ದಂತೆ, ನೆಟ್ಟಿಗರು ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬ ಪಾಕಿಸ್ತಾನಿ ತನ್ನ ದೇಶಕ್ಕಾಗಿ ಹುರಿದುಂಬಿಸಲು ಅವಕಾಶ ನೀಡದಿರುವುದು ನಾಚಿಕೆಗೇಡಿನ ಸಂಗತಿ. ಪಾಕಿಸ್ತಾನದ ಒಬ್ಬ ಅಭಿಮಾನಿ ತನ್ನ ದೇಶದ ಪರ ಘೋಷಣೆ ಕೂಗಲು ಬಿಡುತ್ತಿಲ್ಲವೆನ್ನೋದು ಖಂಡನೀಯ. ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಇದನ್ನು ಗಮನಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಪಾಕಿಸ್ತಾನದ ಕ್ರಿಕೆಟ್‌ ಅಭಿಮಾನಿಗಳು ಸಿಡಿದೇಳುವಂತೆ ಪ್ರಚೋದಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: ಒಂದೇ ಓವರ್‌ನಲ್ಲಿ 24 ರನ್‌ ಚಚ್ಚಿಸಿಕೊಂಡು ಕೆಟ್ಟ ದಾಖಲೆ ಬರೆದ ಹ್ಯಾರಿಸ್‌ ರೌಫ್‌

    World Cup 2023: ಒಂದೇ ಓವರ್‌ನಲ್ಲಿ 24 ರನ್‌ ಚಚ್ಚಿಸಿಕೊಂಡು ಕೆಟ್ಟ ದಾಖಲೆ ಬರೆದ ಹ್ಯಾರಿಸ್‌ ರೌಫ್‌

    ಬೆಂಗಳೂರು: ಏಕದಿನ ವಿಶ್ವಕಪ್ ಟೂರ್ನಿಯ 18ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನದ ವಿರುದ್ಧ 62 ರನ್‌ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಆರಂಭಿಕ ಜೋಡಿಯಾದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ (David Warner And Mitchell Marsh) ಅವರ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ (Haris Rauf) ಒಂದೇ ಓವರ್‌ನಲ್ಲಿ 24 ರನ್ ಚಚ್ಚಿಸಿಕೊಂಡು ಬೇಡದ ದಾಖಲೆಯೊಂದನ್ನು ಹೆಗಲಿಗೇರಿಸಿಕೊಂಡಿದ್ದಾರೆ.

    ಶುಕ್ರವಾರ (ಅ.20) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ವಾರ್ನರ್- ಮಾರ್ಷ್ ಜೋಡಿಯು ಆರಂಭದಿಂದಲೂ ಸ್ಫೋಟಕ ಆಟಕ್ಕೆ ಮುಂದಾಗಿತ್ತು. ಈ ವೇಳೆ 9ನೇ ಓವರ್‌ನಲ್ಲಿ ಬೌಲಿಂಗ್‌ ಮಾಡಿದ್ದ ಹ್ಯಾರಿಸ್‌ ರೌಫ್‌ 4, 6, 1, 1w, 4, 4, 4 (24 ರನ್‌) ಚಚ್ಚಿಸಿಕೊಂಡು ಆ ಮೂಲಕ ರೌಫ್ ಪಾಕ್ ಪರ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ದುಬಾರಿ 3ನೇ ಬೌಲರ್ ಎಂಬ ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡರು.

    2011ರಲ್ಲಿ ಭಾರತದ ಜಂಟಿ ಆತಿಥ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಪಾಕ್ ವೇಗಿ ಶೋಯೆಬ್ ಅಖ್ತರ್ ಒಂದೇ ಓವರ್ ನಲ್ಲಿ 30 ರನ್ ನೀಡಿ ಪಾಕ್‌ನ ದುಬಾರಿ ಬೌಲರ್ ಎಂಬ ಅನಗತ್ಯ ದಾಖಲೆ ನಿರ್ಮಿಸಿದ್ದರು. ಅದೇ ಪಂದ್ಯದಲ್ಲಿ ಅಬ್ದುಲ್ ರಜಾಕ್ ಓವರ್ ನಲ್ಲಿ 28 ರನ್ ಕೊಟ್ಟಿದ್ದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹ್ಯಾರಿಸ್ ರೌಫ್ 24 ರನ್ ನೀಡಿ ಪಾಕ್‌ನ 3ನೇ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ.

    2023ರ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧದ ಪಂದ್ಯದಲ್ಲಿ ತಮ್ಮ ಮೊದಲ ಓವರ್ ನಲ್ಲೇ (9ನೇ ಓವರ್‌ನಲ್ಲಿ) ಹ್ಯಾರಿಸ್ ರೌಫ್ ದುಬಾರಿ ಆದರು. ತಮ್ಮ ಓವರ್ ನ ಮೊದಲ ಎಸೆತದಲ್ಲಿ ಡೇವಿಡ್ ವಾರ್ನರ್ ಬೌಂಡರಿ ಬಾರಿಸಿದರೆ, 2ನೇ ಎಸೆತದಲ್ಲಿ ಫೈನ್ ಲೆಗ್ ನ ಕಡೆ 98 ಮೀಟರ್ ಸಿಕ್ಸರ್ ಸಿಡಿಸಿದರು. ಮರು ಎಸೆತದಲ್ಲೇ ಸಿಂಗಲ್ಸ್ ಕದ್ದರು. ಬಳಿಕ ಸ್ಟ್ರೈಕ್‌ಗೆ ಬಂದ ಮಿಚೆಲ್‌ ಮಾರ್ಷ್‌ಗೆ ಮೊದಲ ಎಸೆತವನ್ನು ವೈಡ್ ಎಸೆದರು. ನಂತರದ 3 ಎಸೆತಗಳಲ್ಲಿ ಸ್ಫೋಟಕ ಆಟ ಪ್ರದರ್ಶಿಸಿದ ಮಿಚೆಲ್ ಮಾರ್ಷ್ ಹ್ಯಾಟ್ರಿಕ್ ಬೌಂಡರಿ ಬಾರಿಸಿದರು. ಒಟ್ಟಾರೆ ಹ್ಯಾರಿಸ್ ರೌಫ್ 24 ರನ್ ಚಚ್ಚಿಸಿಕೊಂಡರು.

    3 ವಿಕೆಟ್ ಕಬಳಿಸಿದ ಹ್ಯಾರಿಸ್ ರೌಫ್: ಪಂದ್ಯದ ಮೊದಲ 5 ಓವರ್ ಗಳಲ್ಲಿ 50ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟರೂ ನಂತರದ ಓವರ್ ಗಳಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ ಹ್ಯಾರಿಸ್ ರೌಫ್ ತಮ್ಮ 8 ಓವರ್ ಗಳಲ್ಲಿ 83 ರನ್ ಕೊಟ್ಟು ಪ್ರಮುಖ 3 ವಿಕೆಟ್ ಪಡೆದರು.‌

    2023ರ ವಿಶ್ವಕಪ್ ಟೂರ್ನಿಯಲ್ಲಿ ದುಬಾರಿ ಬೌಲಿಂಗ್
    * ಮತೀಶ ಪತಿರಣ – ಶ್ರೀಲಂಕಾ – 26 ರನ್- ದಕ್ಷಿಣ ಆಫ್ರಿಕಾ ವಿರುದ್ಧ
    * ಹ್ಯಾರಿಸ್ ರೌಫ್ – ಪಾಕಿಸ್ತಾನ – 24 ರನ್- ಆಸ್ಟ್ರೇಲಿಯಾ ವಿರುದ್ಧ
    * ಕಸುನ್ ರಂಜಿತ – ಶ್ರೀಲಂಕಾ – 23 ರನ್- ದಕ್ಷಿಣ ಆಫ್ರಿಕಾ ವಿರುದ್ಧ
    * ಜೆರಾಲ್ಡ್ ಕೋಟ್ಜಿ- ದಕ್ಷಿಣ ಆಫ್ರಿಕಾ – 23 ರನ್- ಶ್ರೀಲಂಕಾ ವಿರುದ್ದ
    * ಹಸನ್ ಮಹ್ಮೂದ್ – ಬಾಂಗ್ಲಾದೇಶ – 23 ರನ್- ಟೀಮ್ ಇಂಡಿಯಾ ವಿರುದ್ಧ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]