Tag: australian foreign minister

  • ಆಸ್ಟ್ರೇಲಿಯಾ ವಿದೇಶಾಂಗ ಸಚಿವರಿಗೆ ಕೊಹ್ಲಿ ಸಹಿ ಇರುವ ಬ್ಯಾಟ್‌ ಗಿಫ್ಟ್‌ ಕೊಟ್ಟ ಜೈಶಂಕರ್‌

    ಆಸ್ಟ್ರೇಲಿಯಾ ವಿದೇಶಾಂಗ ಸಚಿವರಿಗೆ ಕೊಹ್ಲಿ ಸಹಿ ಇರುವ ಬ್ಯಾಟ್‌ ಗಿಫ್ಟ್‌ ಕೊಟ್ಟ ಜೈಶಂಕರ್‌

    ಮೆಲ್ಬರ್ನ್‌: ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಮೆಲ್ಬರ್ನ್‌ನಲ್ಲಿರುವ ಕ್ರಿಕೆಟ್‌ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆಸ್ಟ್ರೇಲಿಯಾ ವಿದೇಶಾಂಗ ಸಚಿವೆ ಮೇರಿಸ್‌ ಪೇನ್ ಅವರಿಗೆ ಭಾರತದ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಸಹಿ ಇರುವ ಬ್ಯಾಟ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಆಸ್ಟ್ರೇಲಿಯಾದಲ್ಲಿ ಆಯೋಜಿಸಿದ್ದ ಕ್ವಾಡ್ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಭಾರತದ ಜೈಶಂಕರ್‌ ಪಾಲ್ಗೊಂಡಿದ್ದರು. ಸಭೆ ಬಳಿಕ ಮೇರಿಸ್‌ ಪೇನ್‌, ಯುಎಸ್‌ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್‌, ಜಪಾನ್‌ ವಿದೇಶಾಂಗ ಸಚಿವ ಹಯಾಶಿ ಯೇಶಿಮಾಸಾ ಅವರೊಂದಿಗೆ ಆಸ್ಟ್ರೇಲಿಯಾದ ಅತಿದೊಡ್ಡ ಕ್ರೀಡಾಂಗಕ್ಕೆ ಭೇಟಿ ಕೊಟ್ಟಿದ್ದರು. ಇದನ್ನೂ ಓದಿ: 6 ವರ್ಷಗಳ ಕಾಲ ಕುತ್ತಿಗೆಯಲ್ಲಿ ಟೈರ್ ಸಿಕ್ಕಿಸಿಕೊಂಡಿದ್ದ ಮೊಸಳೆಗೆ ಕೊನೆಗೂ ಸಿಕ್ತು ಮುಕ್ತಿ!

    ಆಸ್ಟ್ರೇಲಿಯಾ ವಿದೇಶಾಂಗ ಸಚಿವರಿಗೆ ಬ್ಯಾಟ್‌ ನೀಡುತ್ತಿರುವ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಜೈಶಂಕರ್‌, ನ್ಯಾಯಯುತ ಆಟ ಮತ್ತು ಆಟದ ನಿಯಮಗಳ ಸಂದೇಶ ಎಂಬ ಸಾಲನ್ನು ಬರೆದಿದ್ದಾರೆ. ಆ ಮೂಲಕ ಜಾಗತಿಕ ವಿರೋಧದ ಮಧ್ಯೆಯೂ ಚಳಿಗಾಲದ ಒಲಿಂಪಿಕ್ಸ್‌ ನಡೆಸುತ್ತಿರುವ ಚೀನಾಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

    33 ವರ್ಷ ವಯಸ್ಸಿನ ವಿರಾಟ್‌ ಕೊಹ್ಲಿ ಈಚೆಗಷ್ಟೇ ಭಾರತದ ಕ್ರಿಕೆಟ್‌ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕೊಹ್ಲಿ ತನ್ನ ನಾಯಕತ್ವದಲ್ಲಿ ನಡೆದ 68 ಪಂದ್ಯಗಳಲ್ಲಿ 40 ಪಂದ್ಯಗಳ ಗೆಲುವಿನೊಂದಿಗೆ ಅತ್ಯಂತ ಯಶಸ್ವಿ ಭಾರತೀಯ ಟೆಸ್ಟ್‌ ನಾಯಕರೆನಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಈ ಹಿಂದೂ ಕುಟುಂಬ ಫೇಮಸ್..!