Tag: Australian cricketer

  • Six In Six – ಒಂದೇ ಓವರ್‌ನಲ್ಲಿ 6 ವಿಕೆಟ್‌ ಕಿತ್ತು ಇತಿಹಾಸ ಸೃಷ್ಟಿಸಿದ ಆಸೀಸ್‌ ಕ್ರಿಕೆಟಿಗ

    Six In Six – ಒಂದೇ ಓವರ್‌ನಲ್ಲಿ 6 ವಿಕೆಟ್‌ ಕಿತ್ತು ಇತಿಹಾಸ ಸೃಷ್ಟಿಸಿದ ಆಸೀಸ್‌ ಕ್ರಿಕೆಟಿಗ

    ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ (Australia) ನಡೆದ ಗೋಲ್ಡ್ ಕೋಸ್ಟ್‌ನ ಪ್ರೀಮಿಯರ್ ಲೀಗ್‌ನಲ್ಲಿ (Gold Coast’s Premier League) 3ನೇ ಡಿವಿಷನ್ ಕ್ಲಬ್ ಕ್ರಿಕೆಟಿಗನೊಬ್ಬ ಒಂದೇ ಓವರ್‌ನಲ್ಲಿ 6 ವಿಕೆಟ್‌ ಕಿತ್ತು ಹಲವು ದಾಖಲೆಗಳನ್ನ ಉಡೀಸ್‌ ಮಾಡಿದ್ದಾರೆ.

    3ನೇ ಡಿವಿಷನ್ ಕ್ಲಬ್‌ ಕ್ರಿಕೆಟಿಗ ಡಿಸ್ಟ್ರಿಕ್ಟ್ ಕ್ರಿಕೆಟ್ ಕ್ಲಬ್‌ನ ನಾಯಕ ಗರೆಥ್ ಮಾರ್ಗನ್ 6 ವಿಕೆಟ್‌ ಪಡೆದು ಸಾಧನೆ ಮಾಡಿದ್ದಾರೆ. ಗೋಲ್ಡ್‌ ಕೋಸ್ಟ್‌ ಲೀಗ್‌ನಲ್ಲಿ ಸರ್ಫರ್ಸ್ ಪ್ಯಾರಡೈಸ್ ಸಿಸಿ (Surfers Paradise CC) ವಿರುದ್ಧ ನಡೆದ ಪಂದ್ಯದಲ್ಲಿ ಡಿಸ್ಟ್ರಿಕ್‌ ಕ್ರಿಕೆಟ್‌ ಕ್ಲಬ್‌ ರೋಚಕ 4 ರನ್‌ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: World Cup 2023: ಅರ್ಧಶತಕ ಸಿಡಿಸಿದ್ರೂ ಸಚಿನ್‌ ದಾಖಲೆ ಸರಿಗಟ್ಟಿದ ಚೇಸ್‌ ಮಾಸ್ಟರ್‌

    40 ಓವರ್‌ಗಳ ಪಂದ್ಯ ಇದಾಗಿತ್ತು. ಎದುರಾಳಿ ತಂಡ ನೀಡಿದ 17‌8 ರನ್‌ಗಳ ಗುರಿ ಬೆನ್ನತ್ತಿದ್ದ ಪ್ಯಾರಡೈಸ್‌ ಸಿಸಿ 39 ಓವರ್‌ಗಳಲ್ಲಿ 174 ರನ್‌ ಕಲೆಹಾಕಿ, 4 ವಿಕೆಟ್‌ ಕಳೆದುಕೊಂಡಿತ್ತು. ಕೊನೆಯ ಓವರ್‌ನಲ್ಲಿ ಗೆಲುವಿಗೆ 4 ರನ್‌ಗಳ ಅಗತ್ಯವಿತ್ತು. ಈ ವೇಳೆ ಬೌಲಿಂಗ್‌ನಲ್ಲಿ ಚಾಣಾಕ್ಷತೆ ಪ್ರದರ್ಶಿಸಿದ ಮಾರ್ಗನ್‌ ಒಂದೇ ಓವರ್‌ನಲ್ಲಿ 6 ವಿಕೆಟ್‌ಗಳನ್ನ ಕಬಳಿಸಿದರು. ಈ ಮೂಲಕ ತಂಡಕ್ಕೆ ನಾಲ್ಕು ರನ್‌ಗಳ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

    ಮಾರ್ಗನ್‌ ಅವರ ಸ್ಪಿನ್‌ ದಾಳಿಯಲ್ಲಿ ನಾಲ್ಕು ಮಂದಿ ಕ್ಯಾಚ್‌ ನೀಡಿದರೆ, ಇಬ್ಬರು ಕ್ಲೀನ್‌ ಬೌಲ್ಡ್‌ ಆದರು. ಈ ಪಂದ್ಯದಲ್ಲಿ ಒಟ್ಟು ಐವರು ಆಟಗಾರರು ಗೋಲ್ಡನ್‌ ಡಕ್‌ಗೆ ತುತ್ತಾದರು. ಅಲ್ಲದೇ ಮಾರ್ಗನ್‌ ಬ್ಯಾಟಿಂಗ್‌ನಲ್ಲೂ 39 ರನ್‌ ಬಾರಿಸಿದ್ದರು. ಇದನ್ನೂ ಓದಿ: ಕೊಹ್ಲಿ ಬಗ್ಗೆ ನಾನು ಹಾಗೆ ಮಾತಾಡಬಾರದಿತ್ತು – ಕ್ಷಮೆ ಯಾಚಿಸಿದ ಮೆಂಡಿಸ್

    ಆಸ್ಟ್ರೇಲಿಯಾ ಕ್ರಿಕೆಟ್‌ ಕ್ಲಬ್‌ ಮಾಹಿತಿ ಪ್ರಕಾರ, ಇದುವರೆಗೆ ಒಂದೇ ಓವರ್‌ನಲ್ಲಿ ಅತಿಹೆಚ್ಚು ವಿಕೆಟ್‌ ಆಗಿದ್ದು ಎಂದರೆ 5 ಮಾತ್ರ. 2011 ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ಒಟಾಗೋ ವಿರುದ್ಧದ ನ್ಯೂಜಿಲೆಂಡ್‌ನ ನೀಲ್‌ ವ್ಯಾಗ್ನರ್‌, 2013ರಲ್ಲಿ ಯುಸಿಬಿ-ಬಿಸಿಬಿ ವಿರುದ್ಧ ಬಾಂಗ್ಲಾದೇಶದ ಅಲ್-ಅಮಿನ್ ಹೊಸೈನ್ ಮತ್ತು 2019ರಲ್ಲಿ ಭಾರತದ ಅಭಿಮನ್ಯು ಮಿಥುನ್ ಒಂದೇ ಓವರ್‌ನಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದ್ದರು. ಆದ್ರೆ ಮಾರ್ಗನ್‌ ಇವರೆಲ್ಲರ ದಾಖಲೆಯನ್ನ ಚಿಂದಿ ಮಾಡಿದ್ದಾರೆ.

  • ಭಾರತ ಮೂಲದ ಯುವತಿಯೊಂದಿಗೆ ಮ್ಯಾಕ್ಸ್‌ವೆಲ್ ಡೇಟಿಂಗ್

    ಭಾರತ ಮೂಲದ ಯುವತಿಯೊಂದಿಗೆ ಮ್ಯಾಕ್ಸ್‌ವೆಲ್ ಡೇಟಿಂಗ್

    ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಲ್‍ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತ ಮೂಲದ ಯುವತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ.

    ಮ್ಯಾಕ್ಸ್‌ವೆಲ್ ವಿನಿ ರಾಮನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಮಿನಿ ರಾಮನ್ ಮ್ಯಾಕ್ಸ್‌ವೆಲ್ ಜೊತೆಗಿನ ಹಾಟ್ ಫೋಟೋಗಳನ್ನುತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    https://www.instagram.com/p/BuYXAL9Fqgk/

    ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ಹಸನ್ ಅಲಿ ಭಾರತದ ಶಮಿಯಾ ಅಝ್ರೂ ಅವರನ್ನು ಆಗಸ್ಟ್ 20ರಂದು ದುಬೈನಲ್ಲಿ ವಿವಾಹವಾಗಿದ್ದರು. ಈ ಬೆನ್ನಲ್ಲೇ ಮ್ಯಾಕ್ಸ್‌ವೆಲ್ ಭಾರತದ ಯುವತಿಯೊಂದಿಗೆ ಡೇಟಿಂಗ್ ನಡೆಸಿರುವ ಸುದ್ದಿ ರಿವೀಲ್ ಆಗಿದೆ.

    ಭಾರತದಲ್ಲಿ ಜನಿಸಿರುವ ವಿನಿ ರಾಮನ್ ಮೆಲ್ಬೋರ್ನ್ ನಲ್ಲಿ ನೆಲೆಸಿದ್ದು, ಫಾರ್ಮಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ವಿನಿ ಹಾಗೂ ಮ್ಯಾಕ್ಸ್‌ವೆಲ್ ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಈ ಜೋಡಿ ಮದುವೆಯಾಗುವ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.

    ಈ ಹಿಂದೆ ಆಸ್ಟ್ರೇಲಿಯಾದ ಮಾಜಿ ಬೌಲರ್ ಶಾನ್ ಟೈಟ್ ಒಂದು ವರ್ಷದ ಡೇಟಿಂಗ್ ನಂತರ 2014ರಲ್ಲಿ ರೂಪದರ್ಶಿ, ವೈನ್ ಉದ್ಯಮಿ ಮಶೂಮ್ ಸಿಂಘಾ ಅವರನ್ನು ವಿವಾಹವಾಗಿದ್ದರು. ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು 2010ರಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ವಿವಾಹವಾಗಿದ್ದು, ಕಳೆದ ವರ್ಷ ಗಂಡು ಮಗುವನ್ನು ಜನ್ಮ ನೀಡಿದ್ದಾರೆ.