Tag: Australian

  • ಆಸ್ಟ್ರೇಲಿಯಾ ವೀಸಾ ರದ್ದತಿ ನಿರಾಶೆ ತಂದಿದೆ: ನೊವಾಕ್ ಜೊಕೊವಿಕ್

    ಆಸ್ಟ್ರೇಲಿಯಾ ವೀಸಾ ರದ್ದತಿ ನಿರಾಶೆ ತಂದಿದೆ: ನೊವಾಕ್ ಜೊಕೊವಿಕ್

    ಸಿಡ್ನಿ: ಆಸ್ಟ್ರೇಲಿಯಾ ಸರ್ಕಾರ ವೀಸಾ ರದ್ದು ಮಾಡಿರುವುದರಿಂದ ಅತ್ಯಂತ ನಿರಾಶೆಗೊಂಡಿದ್ದೇನೆ. ಆದರೆ ಕೋರ್ಟ್‍ನ ಈ ತೀರ್ಪನ್ನು ನಾನು ಅನುಸರಿಸುತ್ತೇನೆ ಎಂದು ವಿಶ್ವದ ನಂ.1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ತಿಳಿಸಿದ್ದಾರೆ.

    ಜೊಕೊವಿಕ್ ಲಸಿಕೆ ಪಡೆಯದ ಕಾರಣ ವೀಸಾವನ್ನು ಸರ್ಕಾರ ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಜೊಕೊವಿಕ್ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಫೆಡರಲ್ ನ್ಯಾಯಾಲಯದ ಮೂವರು ನ್ಯಾಯಾಧೀಶರು ಆಸ್ಟ್ರೇಲಿಯಾ ಸರ್ಕಾರ ವಿಧಿಸಿದ್ದ ವೀಸಾ ರದ್ದತಿಯನ್ನು ಎತ್ತಿಹಿಡಿದ್ದಿದ್ದು, ಜೊಕೊವಿಕ್‍ನ ಅರ್ಜಿಯನ್ನು ತಿರಸ್ಕರಿಸಿದೆ.

    ಈ ಕುರಿತು ಮಾತನಾಡಿದ ಅವರು, ನಾನು ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇನೆ. ವೀಸಾವನ್ನು ವಜಾಗೊಳಿಸಿರುವುದರಿಂದ ಆಸ್ಟ್ರೇಲಿಯಾದಿಂದ ನಿರ್ಗಮಿಸುತ್ತೇನೆ ಎಂದು ತಿಳಿಸಿದ್ದಾದ್ದಾರೆ. ಇದನ್ನೂ ಓದಿ: ನೊವಾಕ್ ಜೊಕೊವಿಕ್ ವೀಸಾ 2ನೇ ಬಾರಿ ರದ್ದು – 3 ವರ್ಷ ಆಸ್ಟ್ರೇಲಿಯಾಗೆ ಪ್ರವೇಶವಿಲ್ಲ

    ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾಂಡ್ ಸ್ಲಾಂ ಟೂರ್ನಿಯಲ್ಲಿ ಭಾಗವಹಿಸಲು ಜೊಕೊವಿಕ್ ಆಸ್ಟ್ರೇಲಿಯಾಗೆ ಬಂದಿಳಿದಿದ್ದರು. ಈ ವೇಳೆ ಕೋವಿಡ್ ನಿಯಮದ ಪ್ರಕಾರ ಲಸಿಕೆ ಪಡೆದಿರಬೇಕಿತ್ತು. ಆದರೆ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಲಸಿಕೆ ಪಡೆದಿರಲಿಲ್ಲ. ಹಾಗಾಗಿ ವಿಮಾನ ನಿಲ್ದಾಣದಲ್ಲಿ ಅವರ ವೀಸಾವನ್ನು ಆಸ್ಟ್ರೇಲಿಯಾ ಸರ್ಕಾರ ಮೊದಲ ಬಾರಿಗೆ ರದ್ದು ಪಡಿಸಿತ್ತು. ಇದನ್ನೂ ಓದಿ: ಕ್ಯಾಪ್ಟನ್ ಕಿಂಗ್ ಕೊಹ್ಲಿ ಯುಗಾಂತ್ಯ – ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು

    ಆ ಬಳಿಕ ವೈದ್ಯಕೀಯ ಅನುಮತಿ ಪಡೆದು ಆಸ್ಟ್ರೇಲಿಯಾ ಪ್ರವೇಶಿಸಿದ್ದ ಜೊಕೊವಿಕ್‍ಗೆ ಮತ್ತೊಮ್ಮೆ ಹಿನ್ನಡೆಯಾಗಿತ್ತು. ಆಸ್ಟ್ರೇಲಿಯಾ ಸರ್ಕಾರ ಎರಡನೇ ಬಾರಿ ಜೊಕೊವಿಕ್ ವೀಸಾವನ್ನು ರದ್ದುಪಡಿಸಿ 3 ವರ್ಷಗಳವರೆಗೆ ಆಸ್ಟ್ರೇಲಿಯಾಕ್ಕೆ ಪ್ರವೇಶ ನಿಷೇಧಿಸಿದೆ.

    ಆಸ್ಟ್ರೇಲಿಯಾಕ್ಕೆ ಬರುವವರಿಗೆ ಲಸಿಕೆ ಕಡ್ಡಾಯ ಮಾಡಲಾಗಿದೆ. ಲಸಿಕೆ ಪಡೆಯದವರಿಗೆ ವೀಸಾ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಮೊದಲೇ ಪ್ರಕಟಿಸಿತ್ತು. ಹೀಗಿದ್ದರೂ ಜೊಕೊವಿಕ್ ಆಸ್ಟ್ರೇಲಿಯಾದ ವೀಸಾ ಸಿಕ್ಕಿತ್ತು. ಈ ವಿಚಾರ ತಿಳಿದ ಆಸ್ಟ್ರೇಲಿಯಾದ ಜನತೆ ಬಡವರಿಗೆ ಒಂದು ನಿಯಮ, ಶ್ರೀಮಂತರಿಗೆ ಒಂದು ನಿಯಮ. ಇದು ಎಷ್ಟು ಸರಿ ಎಂದು ಖಾರವಾಗಿ ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ ಸರ್ಕಾರ ವೀಸಾವನ್ನೇ ರದ್ದು ಮಾಡಿತ್ತು.

  • ವಿವಾಹಕ್ಕೂ ಮೊದಲೇ ತಂದೆಯಾಗುತ್ತಿದ್ದಾರೆ ಕೆಕೆಆರ್‌ನ ಸ್ಟಾರ್ ಕ್ರಿಕೆಟಿಗ

    ವಿವಾಹಕ್ಕೂ ಮೊದಲೇ ತಂದೆಯಾಗುತ್ತಿದ್ದಾರೆ ಕೆಕೆಆರ್‌ನ ಸ್ಟಾರ್ ಕ್ರಿಕೆಟಿಗ

    ಮೆಲ್ಬರ್ನ್: ಆಸ್ಟ್ರೇಲಿಯಾ ಕ್ರಿಕೆಟಿಗ ಹಾಗೂ ಕೋಲ್ಕತ ನೈಟ್ ರೈಡರ್ಸ್ ತಂಡದ ಮಾರಕ ವೇಗಿ ಪ್ಯಾಪ್ ಕಮಿನ್ಸ್ ಮದುವೆಗೂ ಮೊದಲೇ ತಂದೆಯಾಗುತ್ತಿದ್ದಾರೆ.

    ಕಮಿನ್ಸ್ ಭಾವಿ ಪತ್ನಿ ಬೆಕೆ ಬೋಸ್ಟನ್ ತಮ್ಮ ಚೊಚ್ಚಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಈ ಕುರಿತಾಗಿ ಕಮಿನ್ಸ್ ಹಾಗೂ ಭಾವಿ ಪತ್ನಿ ಬೆಕೆ ಬೀಸ್ಟನ್‍ಗೆ ಕೋಲ್ಕತ್ತಾ ರೈಡರ್ಸ್ ಫ್ರಾಂಚೈಸಿ ಟ್ವೀಟ್ ಮೂಲಕವಾಗಿ ಶುಭ ಕೋರಿದೆ.

    ಕೆಲವು ದಿನಗಳಹಿಂದೆ ಬೆಕೆ ಕಲಡಲ ಕಿಮಾರೆಯಲ್ಲಿ ತಮ್ಮ ಬೇಬಿ ಬಂಪ್ಸ್‍ನೊಂದಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಕೆಲವು ಫೊಟೋವನ್ನುಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ತಾಯಂದಿರ ದಿನದಂದೇ ಎಂತಹ ಸಂತೋಷದ ಸುದ್ದಿಯಿದೆ ಎಂದು ಕೆಕೆಆರ್ ಟ್ವೀಟ್ ಮಾಡುವ ಮೂಲಕವಾಗಿ ಶುಭಕೋರಿದ್ದಾರೆ.

     

    View this post on Instagram

     

    A post shared by Becky Boston ???? (@becky_boston)

    ಆಸ್ಟ್ರೇಲಿಯಾ ಸ್ಟಾರ್ ವೇಗಿ ಕಮಿನ್ಸ್ ಗೆಳತಿ ಬೆಕೆ ಬೋಸ್ಟನ್ ಇಂಗ್ಲೆಂಡ್ ದೇಶದವರು. ಬೆಕೆಯವರು ಒಂದು ಶಾಪಿಂಗ್ ವೆಬ್‍ಸೈಟ್ ನಡೆಸುತ್ತಿದ್ದಾರೆ. 2014ರಲ್ಲಿ ಬೆಕೆ ಬೋಸ್ಟರ್ನ್ ವೇಗಿ ಕಮಿನ್ಸ್ ಜತೆಗಿರುವ ಫೋಟೋವನ್ನು ಮೊದಲ ಬಾರಿಗೆ ಸಾಮಾಜಿಕಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಮೂಲಕವಾಗಿ ತಮ್ಮ ಗೆಳೆತನವನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದರು. ನಂತರ ಬರೋಬ್ಬರು 6 ವರ್ಷಗಳ ನಂತರ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇನ್ನು ಮದುವೆಯಾಗಿಲ್ಲ. ಇದೀಗ ಮದುವೆಗೂ ಮುನ್ನಾ ತಂದೆಯಾಗುತ್ತಿದ್ದಾರೆ

    ಭಾರತದಲ್ಲಿ ನಡೆಯುತ್ತಿದ್ದ 14 ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಕೊರೊನಾ ಕಾರಣದಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಹೀಗಾಗಿ ಆಸ್ಟ್ರೇಲಿಯಾದ ಇತರ ಆಟಗಾರರೊಂದಿಗೆ ಕಮಿನ್ಸ್ ಮಾಲ್ಡೀವ್ಸ್‍ನಲ್ಲಿ ಕ್ವಾರಂಟೈನ್ ಆಗಿದ್ದಾರೆ.

  • ಆಸೀಸ್ ಕ್ರಿಕೆಟಿಗರಿಗೆ ಪಾಕಿಸ್ತಾನದ ಪ್ರಧಾನಿ ಹೆಸರೇ ಗೊತ್ತಿಲ್ಲ: ವಿಡಿಯೋ

    ಆಸೀಸ್ ಕ್ರಿಕೆಟಿಗರಿಗೆ ಪಾಕಿಸ್ತಾನದ ಪ್ರಧಾನಿ ಹೆಸರೇ ಗೊತ್ತಿಲ್ಲ: ವಿಡಿಯೋ

    ಬ್ರಿಸ್ಬೇನ್‍: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರು ಪಾಕಿಸ್ತಾನದ ಪ್ರಧಾನಿ ಹೆಸರನ್ನು ಹೇಳಲು ಪೇಚಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡವು ಮೂರು ಪಂದ್ಯಗಳ ಟಿ-20 ಸರಣಿಯನ್ನು 2-0ರಿಂದ ಸೋಲು ಕಂಡಿದೆ. ಈ ಬೆನ್ನಲ್ಲೇ 2 ಪಂದ್ಯಗಳ ಟೆಸ್ಟ್ ಸರಣಿಗೆ ಉಭಯ ತಂಡಗಳು ಸಿದ್ಧತೆ ನಡೆಸಿವೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಟಿವಿ ಚಾನೆಲ್, ಆಸೀಸ್ ತಂಡದ ಸಾಮಾನ್ಯ ಜ್ಞಾನವನ್ನು ಪರೀಕ್ಷಿಸಲು ಪ್ರಯತ್ನಿಸಿತ್ತು. ಈ ವೇಳೆ ಆಟಗಾರರಿಗೆ ಪಾಕಿಸ್ತಾನದ ಪ್ರಧಾನ ಮಂತ್ರಿಯ ಹೆಸರನ್ನು ಕೇಳಲಾಗಿತ್ತು. ಈ ಪೈಕಿ ಶೇ. 90ರಷ್ಟು ಆಟಗಾರರಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಎಂದು ಹೇಳಲು ಸಾಧ್ಯವಾಗಲಿಲ್ಲ.

    ಆಶ್ಚರ್ಯವೆಂದರೆ ಪಾಕಿಸ್ತಾನವು ಇಮ್ರಾನ್ ಖಾನ್ ನಾಯಕತ್ವದಲ್ಲಿ 1992ರ ವಿಶ್ವಕಪ್ ಟೂರ್ನಿಯಲ್ಲಿ ಗೆದ್ದಿತು. ಈ ಕುತೂಹಲಕಾರಿ ವಿಡಿಯೋ ಈಗ ಈ ವಿಟಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಅಧಿಕೃತ ಟಿವಿ ಚಾನೆಲ್ ಆಸ್ಟ್ರೇಲಿಯಾ ಬ್ರಾಡ್‍ಕಾಸ್ಟಿಂಗ್ ಕಂಪನಿ ಈ ತಮಾಷೆಯ ವಿಡಿಯೋವನ್ನು ಮಾಡಿದೆ. ಇದರಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಘೋಷಿಸಲಾದ 15 ಮಂದಿಯ ತಂಡದಲ್ಲಿರುವ ಆಟಗಾರರು ಸೇರಿದ್ದಾರೆ. ಪಾಕಿಸ್ತಾನದ ಪ್ರಸ್ತುತ ಪ್ರಧಾನಿ ಯಾರು ಎಂದು ಎಲ್ಲರಿಗೂ ಒಂದೇ ಪ್ರಶ್ನೆ ಕೇಳಲಾಗಿತ್ತು. ಉಸ್ಮಾನ್ ಖವಾಜಾ ಮತ್ತು ವೇಗದ ಬೌಲರ್ ಜೋಸ್ ಹ್ಯಾಜೆಲ್‍ವುಡ್ ಹೊರತುಪಡಿಸಿ ಬೇರೆ ಯಾವ ಆಟಗಾರರೂ ಸರಿಯಾದ ಉತ್ತರ ನೀಡಲಿಲ್ಲ.

    ಆಸ್ಟ್ರೇಲಿಯಾದ ವಿರುದ್ಧ ಪಾಕಿಸ್ತಾನವು ಒಟ್ಟು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಮೊದಲನೆಯ ಪಂದ್ಯವು ಬ್ರಿಸ್ಬೇನ್‍ನಲ್ಲಿ ನವೆಂಬರ್ 21ರಿಂದ 25ರವರೆಗೆ ನಡೆಯಲಿದೆ.

  • ಧೋನಿ, ಜಾಧವ್ ಫಿಫ್ಟಿ – ಸರಣಿ ಗೆದ್ದು ದಾಖಲೆ ಬರೆದ ಬ್ಲೂ ಬಾಯ್ಸ್!

    ಧೋನಿ, ಜಾಧವ್ ಫಿಫ್ಟಿ – ಸರಣಿ ಗೆದ್ದು ದಾಖಲೆ ಬರೆದ ಬ್ಲೂ ಬಾಯ್ಸ್!

    – ಟೆಸ್ಟ್, ಏಕದಿನ ಎರಡರಲ್ಲೂ ಟೀಂ ಇಂಡಿಯಾಗೆ ಸರಣಿ
    – ಮತ್ತೊಮ್ಮೆ ತಂಡಕ್ಕೆ ಆಸರೆಯಾದ ಧೋನಿ

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆದ್ದು ದಾಖಲೆ ನಿರ್ಮಿಸಿದ್ದ ಟೀಂ ಇಂಡಿಯಾ ಏಕದಿನ ಟೂರ್ನಿಯನ್ನು 2-1 ಅಂತರದಲ್ಲಿ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಮೂಲಕ ಮೊದಲ ಬಾರಿಗೆ ಆಸೀಸ್ ನೆಲದಲ್ಲಿ ದ್ವೀಪಕ್ಷಿಯ ಸರಣಿ ಗೆದ್ದು ಸಂಭ್ರಮಿಸಿದೆ.

    231 ರನ್‍ಗಳ ಗುರಿಯನ್ನು ಪಡೆದ ಭಾರತ ಧೋನಿ, ಮತ್ತು ಕೇದಾರ್ ಜಾಧವ್ ಅವರ ಸಮಯೋಚಿತ ಅರ್ಧಶತಕದಿಂದಾಗಿ 49.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 234 ರನ್ ಹೊಡೆದು 7 ವಿಕೆಟ್ ಗಳ ಜಯವನ್ನು ಸಂಪಾದಿಸಿತು.

    ಲಾಸ್ಟ್ ಆ 5 ಓವರ್: ಕೊನೆಯ 30 ಎಸೆತಗಳಿಗೆ 44 ರನ್ ಬೇಕಿತ್ತು. 46 ನೇ ಓವರ್ ನಲ್ಲಿ 11 ರನ್, 47 ನೇ ಓವರ್ ನಲ್ಲಿ 6 ರನ್, 48ನೇ ಓವರ್ ನಲ್ಲಿ 13 ರನ್ ಬಂತು. 48ನೇ ಓವರ್ ಮೊದಲ ಎಸೆತದಲ್ಲಿ ಧೋನಿ ಕ್ಯಾಚ್ ಡ್ರಾಪ್ ಆಗಿತ್ತು. ಈ ವೇಳೆ ಎರಡು ರನ್ ಕದಿಯಲು ಹೋಗಿ ಜಾಧವ್ ರನ್ ಔಟ್ ಆಗುವ ಸಾಧ್ಯತೆ ಇತ್ತು. ಈ ವೇಳೆ ಕೂದಲೆಳೆಯ ಅಂತರದಿಂದ ಪಾರಾಗಿದ್ದರು. 49ನೇ ಓವರ್ ನಲ್ಲಿ ಜಾಧವ್ ಮತ್ತು ಧೋನಿ ಬೌಂಡರಿ ಸೇರಿದಂತೆ ಒಟ್ಟು 13 ರನ್ ಹೊಡೆದ ಕಾರಣ ಭಾರತಕ್ಕೆ ಗೆಲುವು ಖಚಿತವಾಯಿತು. ಕೊನೆಯ ಓವರ್ ನಲ್ಲಿ ಜಾಧವ್ ಬೌಂಡರಿ ಚಚ್ಚಿ ಭಾರತಕ್ಕೆ ಜಯವನ್ನು ತಂದಿಟ್ಟರು.

    ಆಸ್ಟ್ರೇಲಿಯಾ ನೀಡಿದ 230 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲಿಲ್ಲ. 9 ರನ್ ಗಳಿಸಿ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ನಾಯಕ ಕೊಹ್ಲಿ, ಧವನ್ ಅವರೊಂದಿಗೆ ಸೇರಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದರು. ಆದರೆ 23 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಧವನ್ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.

    ಈ ಹಂತದಲ್ಲಿ ಬ್ಯಾಟಿಂಗ್ ಆಗಮಿಸಿದ ಮಾಜಿ ನಾಯಕ ಧೋನಿ ಕೂಡ ತಾಳ್ಮೆ ಆಟಕ್ಕೆ ಮುಂದಾದರು. ಈ ಜೋಡಿ 3ನೇ ವಿಕೆಟ್‍ಗೆ 54 ರನ್ ಗಳ ಕಾಣಿಕೆ ನೀಡಿತು. ಕೊಹ್ಲಿ 32 ರನ್ ಗಳಿಸಿದ್ದ ವೇಳೆ ರನೌಟ್ ನಿಂದ ತಪ್ಪಿಸಿಕೊಂಡು ಜೀವದಾನ ಪಡೆದರೂ ಕೂಡ 46 ರನ್ ಗಳಿಸಿದ್ದ ವೇಳೆ ರಿಚರ್ಡ್ ಸನ್‍ಗೆ ವಿಕೆಟ್ ಒಪ್ಪಿಸಿದರು. ವಿಶೇಷವೆಂದರೆ ಸರಣಿಯಲ್ಲಿ 3ನೇ ಬಾರಿಗೆ ರಿಚರ್ಡ್ ಸನ್ ಕೊಹ್ಲಿ ವಿಕೆಟ್ ಪಡೆದರು. ಕೊಹ್ಲಿ 62 ಎಸೆತಗಳಲ್ಲಿ 3 ಬೌಂಡರಿಗಳ ಸಹಾಯದಿಂದ 46 ರನ್ ಗಳಿಸಿದರು. ಇದನ್ನು ಓದಿ: ರವಿಶಾಸ್ತ್ರಿ ದಾಖಲೆ ಮುರಿದು, ಅಗರ್ಕರ್ ದಾಖಲೆ ಸರಿಗಟ್ಟಿದ ಚಹಲ್!

    ಕೊಹ್ಲಿ ಔಟಾಗುತ್ತಿದಂತೆ ಧೋನಿ ಅವರ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಅಲ್ಲದೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಉನ್ನತಿ ಪಡೆದಿದ್ದ ಧೋನಿ ತಾಳ್ಮೆಯಿಂದಲೇ ರನ್ ಪೇರಿಸಿ ವೃತ್ತಿ ಜೀವನದ 70ನೇ ಅರ್ಧ ಶತಕ ಪೂರೈಸಿದರು. ಅಲ್ಲದೇ ತಂಡದವನ್ನು ಗೆಲುವಿನ ದಡ ಸೇರಿಸಿದರು. ತಂಡ ಒತ್ತಡದ ಸಮಯದಲ್ಲಿ ಧೋನಿಗೆ ಸಾಥ್ ನೀಡಿದ ಜಾದವ್ ಕೂಡ ಉತ್ತಮವಾಗಿ ಬ್ಯಾಟ್ ಬೀಸಿದರು. ಅಂತಿಮವಾಗಿ ಧೋನಿ ಔಟಾಗದೇ 87 ರನ್(114 ಎಸೆತ, 6 ಬೌಂಡರಿ) ಜಾಧವ್ ಔಟಾಗದೇ 61 ರನ್ (57 ಎಸೆತ, 7 ಬೌಂಡರಿ) ಹೊಡೆದರು. ಇವರಿಬ್ಬರು ಮುರಿಯದ ನಾಲ್ಕನೇ ವಿಕೆಟ್ ಗೆ 121 ರನ್ ಜೊತೆಯಾಟವಾಡಿ ಭಾರತ ಸರಣಿ ಗೆಲ್ಲುವಂತೆ ಮಾಡಿದರು.

    ಧೋನಿಗೆ ಜೀವದಾನ: ಪಂದ್ಯದಲ್ಲಿ 3 ಬಾರಿ ಜೀವದಾನ ಪಡೆದ ಧೋನಿ ಆಸೀಸ್‍ಗೆ ಮಾರಕವಾದರು. ಧವನ್ ಔಟಾಗುತ್ತಿದಂತೆ ಬ್ಯಾಟಿಂಗ್ ಇಳಿದ ಧೋನಿ 0 ಹಾಗೂ 70 ರನ್ ಗಳಿಸಿದ್ದ ವೇಳೆ ಕ್ಯಾಚ್ ನೀಡಿದ್ದರು. ಆದರೆ ಆಸೀಸ್ ಆಟಗಾರರು 2 ಬಾರಿಯೂ ಕ್ಯಾಚ್ ಚೆಲ್ಲಿದ್ದರು. ಬಳಿಕ 13 ರನ್ ಗಳಿಸಿದ್ದ ವೇಳೆ ರನೌಟ್ ಹಾಗೂ ತಂಡ 109 ರನ್ ಗಳಿಸಿದ್ದ ವೇಳೆ ಧೋನಿ ಕ್ಯಾಚ್ ಪಡೆದಿದ್ದರೂ ಕೂಡ ಅಂಪೈರ್ ಗೆ ಉತ್ತಮವಾಗಿ ಮನವಿ ಸಲ್ಲಿಸದ ಕಾರಣ ಪಾರಾಗಿದ್ದರು. ಇದನ್ನು ಓದಿ: ಕ್ಷಣಾರ್ಧದಲ್ಲಿ ಸ್ಟಂಪಿಂಗ್ – ಧೋನಿ ಕೀಪಿಂಗ್ ನೋಡಿ ಅಚ್ಚರಿಗೊಂಡ ಕೊಹ್ಲಿ

    ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಚಹಲ್ ಬೌಲಿಂಗ್ ದಾಳಿಗೆ ತತ್ತರಿಸಿ 230 ರನ್ ಗಳಿಗೆ ಅಲೌಟ್ ಆಯ್ತು. ಭಾರತದ ಪರ ಚಹಲ್ 6 ವಿಕೆಟ್ ಪಡೆದು ದಾಖಲೆ ನಿರ್ಮಿಸಿದರೆ, ಭುವನೇಶ್ವರ್ ಕುಮಾರ್ ಹಾಗೂ ಶಮಿ ತಲಾ ವಿಕೆಟ್ ಪಡೆದು ಮಿಂಚಿದರು.

    ಮೂರು ಪಂದ್ಯಗಳ ಟಿ 20 ಪಂದ್ಯ 1-1 ರಲ್ಲಿ ಸಮಬಲಗೊಂಡಿತ್ತು. ಎರಡನೇ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಟೆಸ್ಟ್ ಸರಣಿ 2-1 ರಿಂದ ಗೆದ್ದಿದ್ದ ಭಾರತ ಈಗ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಮೊದಲ ಟಿ-20 ಪಂದ್ಯದಲ್ಲಿ ಮಳೆಯಿಂದಾಗಿ ಡಕ್‍ವರ್ಥ್ ಲೂಯಿಸ್ ನಿಯಮದಿಂದ ಪರಿಷ್ಕೃತ ರನ್ ನೀಡಿದ ಪರಿಣಾಮ ಭಾರತ ಗೆಲುವಿನ ಸಮೀಪ ಬಂದು ಸೋತಿತ್ತು. ಆಸ್ಟ್ರೇಲಿಯಾ 4 ರನ್ ಗಳಿಂದ ಈ ಪಂದ್ಯವನ್ನು ಗೆದ್ದುಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv