Tag: australia

  • ಟೀಂ ಇಂಡಿಯಾ ಇಂದು ಗೆದ್ದರೆ ಆಸೀಸ್ ವಿರುದ್ಧ ಮತ್ತೊಂದು ದಾಖಲೆ – ಮತ್ತೆ ನಂ.1

    ಟೀಂ ಇಂಡಿಯಾ ಇಂದು ಗೆದ್ದರೆ ಆಸೀಸ್ ವಿರುದ್ಧ ಮತ್ತೊಂದು ದಾಖಲೆ – ಮತ್ತೆ ನಂ.1

    ನಾಗ್ಪುರ: ಆಸ್ಟ್ರೇಲಿಯಾ ವಿರುದ್ಧದ 5 ಏಕದಿನ ಸರಣಿಯ ಕೊನೆಯ ಪಂದ್ಯ ಇಂದು ನಾಗ್ಪುರದ ವಿದರ್ಭ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ. ಆದರೆ ಇಂದಿನ ಪಂದ್ಯವನ್ನು ಗೆದ್ದರೆ ಭಾರತ ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಇದೇ ಮೊದಲ ಬಾರಿಗೆ ಗೆದ್ದಂತಾಗುತ್ತದೆ.

    ಈ ಸರಣಿಗೂ ಮುನ್ನ ಒಟ್ಟು 7 ಬಾರಿ ಭಾರತ-ಆಸೀಸ್ 5 ಅಥವಾ 5ಕ್ಕೂ ಹೆಚ್ಚು ಪಂದ್ಯಗಳ ಅಟವಾಡಿದ್ದು, ಇದರಲ್ಲಿ 2 ಬಾರಿ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡವನ್ನು 2 ಬಾರಿ 3-2 ಅಂತರದಿಂದ ಸೋಲಿಸಿದೆ. ಎರಡು ಬಾರಿಯೂ ಭಾರತದಲ್ಲೇ ಸರಣಿ ಗೆದ್ದಿದೆ ಎನ್ನುವುದೇ ವಿಶೇಷ. 1986ರಲ್ಲಿ ಮೊದಲ ಬಾರಿ ಹಾಗೂ 2013ರಲ್ಲಿ 2ನೇ ಬಾರಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಸೋಲಿಸಿತ್ತು.

    ಮತ್ತೆ ನಂಬರ್ 1 ಪಟ್ಟ: ಮತ್ತೊಂದು ಪ್ರಮುಖ ವಿಚಾರವೆಂದರೆ ಇಂದಿನ ಪಂದ್ಯದಲ್ಲಿ ಭಾರತ ಗೆದ್ದರೆ ಮತ್ತೆ ಐಸಿಸಿ ಶ್ರೇಯಾಂಕದಲ್ಲಿ ನಂ.1 ಪಟ್ಟಕ್ಕೇರಲಿದೆ. ಸೆಪ್ಟೆಂಬರ್ 24ರಂದು ಇಂದೋರ್ ನಲ್ಲಿ ನಡೆದ ಪಂದ್ಯದ ಬಳಿಕ ಟೀಂ ಇಂಡಿಯಾ ನಂಬರ್ 1 ಪಟ್ಟಕ್ಕೇರಿತ್ತು. ಆದರೆ 4ನೇ ಪಂದ್ಯವನ್ನು ಸೋತ ಹಿನ್ನೆಲೆಯಲ್ಲಿ ನಂ.2ಕ್ಕೆ ಇಳಿದಿದೆ. ಸದ್ಯ ದಕ್ಷಿಣ ಆಫ್ರಿಕಾ 119 ಅಂಕಗಳ ಜೊತೆ ನಂ.1 ಸ್ಥಾನದಲ್ಲಿದೆ. ಸಮಾನವಾದ 119 ಅಂಕಗಳೊಂದಿಗೆ ಟೀಂ ಇಂಡಿಯಾ 2ನೇ ಸ್ಥಾನದಲ್ಲಿದೆ. ಇಂದು ಭಾರತ ಪಂದ್ಯ ಗೆದ್ದರೆ ಭಾರತದ ಅಂಕ 120ಕ್ಕೆ ಏರಿಕೆಯಾಗಲಿದೆ. ಈ ಮೂಲಕ ಮತ್ತೆ ನಂಬರ್ 1 ಪಟ್ಟಕ್ಕೇರುವ ಆಸೆ ಜೀವಂತವಾಗಿದೆ.

    ಇದುವರೆಗೆ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಭಾರತದಲ್ಲಿ 55 ಪಂದ್ಯಗಳನ್ನಾಡಿದೆ. ಇದರಲ್ಲಿ 24 ಪಂದ್ಯಗಳಲ್ಲಿ ಟೀಂ ಇಂಡಿಯಾ ಹಾಗೂ 26 ಪಂದ್ಯಗಳಲ್ಲಿ ಆಸೀಸ್ ಗೆದ್ದಿದೆ. ಬಾಕಿ 5 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ. ಒಂದು ವೇಳೆ ಭಾರತ ಗೆದ್ದರೆ ಇಂಡಿಯಾದಲ್ಲಿ ಆಡಿದ ಒಟ್ಟು ಪಂದ್ಯಗಳ ಫಲಿತಾಂಶ 26-25ರ ಅಂತರಕ್ಕೆ ತಲುಪಲಿದೆ. ಆಸೀಸ್ ಹಾಗೂ ಟೀಂ ಇಂಡಿಯಾ ಇದುವರೆಗೆ ಒಟ್ಟಾರೆಯಾಗಿ 127 ಏಕದಿನ ಪಂದ್ಯಗಳನ್ನಾಡಿದ್ದು ಇದರಲ್ಲಿ ಭಾರತ 44 ಹಾಗೂ ಆಸೀಸ್ 73 ಪಂದ್ಯಗಳನ್ನು ಗೆದ್ದಿವೆ. ಒಟ್ಟು 10 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ.

    ವಿದರ್ಭ ಮೈದಾನದಲ್ಲಿ: ಇಲ್ಲಿ ಭಾರತ ಒಟ್ಟು 4 ಪಂದ್ಯಗಳನ್ನಾಡಿದ್ದು ಇದರಲ್ಲಿ 2ನ್ನು ಗೆದ್ದು 2 ಪಂದ್ಯದಲ್ಲಿ ಸೋತಿದೆ. ಆಸೀಸ್ ವಿರುದ್ಧ 2 ಪಂದ್ಯವನ್ನಾಡಿದ್ದು ಅದರಲ್ಲಿ 2 ಪಂದ್ಯದಲ್ಲಿಯೂ ಗೆದ್ದಿರುವುದು ವಿಶೇಷ. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಈ ಕ್ರೀಡಾಂಗಣದಲ್ಲಿ ಕೊನೆಯ ಪಂದ್ಯವನ್ನಾಡಿತ್ತು. ಅಕ್ಟೋಬರ್ ತಿಂಗಳಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳ ಗೆಲುವು ಸಾಧಿಸಿತ್ತು.


     

  • ಬಾಲ್ ಇದೆ ಎಂದು ಸುಮ್ನೆ ಥ್ರೋ ಮಾಡಿದ್ದಕ್ಕೆ ಬಿತ್ತು ಭಾರೀ ದಂಡ

    ಬಾಲ್ ಇದೆ ಎಂದು ಸುಮ್ನೆ ಥ್ರೋ ಮಾಡಿದ್ದಕ್ಕೆ ಬಿತ್ತು ಭಾರೀ ದಂಡ

    ಬ್ರಿಸ್ಬೆನ್: ಗುರುವಾರ ಇಂಟರ್‍ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಕ್ರಿಕೆಟ್ ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿತ್ತು. ನಿಯಮ ಜಾರಿ ಮಾಡಿ 24 ಗಂಟೆಯೊಳಗೆ ಆಸ್ಟ್ರೇಲಿಯಾದಲ್ಲಿ ಕ್ಲಬ್ ಕ್ರಿಕೆಟ್ ಆಟಗಾರರೊಬ್ಬರು ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ವಿಧಿಸಲಾಗಿದೆ.

     ಹೌದು. ಆಸ್ಟ್ರೇಲಿಯಾದ ಕ್ಲಬ್ ಕ್ರಿಕೆಟ್‍ನಲ್ಲಿ ಕ್ವೀನ್ಸ್ ಲ್ಯಾಂಡ್ ಬುಲ್ಸ್ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಎಲೆವನ್ ತಂಡಗಳ ಮಧ್ಯೆ ಜೆಎಲ್‍ಟಿ ಕಪ್‍ನ ಏಕದಿನ ಪಂದ್ಯ ನಡೆಯುತ್ತಿತ್ತು. 26ನೇ ಓವರ್ ನ ಮೊದಲ ಎಸೆತವನ್ನು ಆಸ್ಟ್ರೇಲಿಯಾ ಎಲೆವನ್ ಆಟಗಾರ ಪರಮ್ ಉಪ್ಪಲ್ ಆಫ್ ಸೈಡ್ ಹೊಡೆದರು.

    ಬಾಲ್ ಫಿಲ್ಡ್ ಮಾಡುತ್ತಿದ್ದ ಲ್ಯಾಬಸ್ಚ್ಯಾನ್ ಕೈಗೆ ಸಿಕ್ಕಿತ್ತು. ಆದರೆ ಲ್ಯಾಬಸ್ಟ್ಯಾನ್ ಕೈಯಿಂದ ಬಾಲ್ ಜಾರಿ ಹಿಂದಕ್ಕೆ ಹೋಗಿತ್ತು. ಈ ಸಂದರ್ಭದಲ್ಲಿ ಕೈಯಲ್ಲಿ ಬಾಲ್ ಇಲ್ಲದೇ ಇದ್ದರೂ ಬಾಲ್ ಇದೆ ಎಂದು ಬಿಂಬಿಸಲು ಥ್ರೋ ಮಾಡಿದ್ದಾರೆ. ಥ್ರೋ ಮಾಡಿದ್ದನ್ನು ನೋಡಿ ಬ್ಯಾಟ್ಸ್ ಮನ್ ಗಳು ಒಮ್ಮೆಲೆ ಪಿಚ್ ನಲ್ಲಿ ಓಡುವುದನ್ನು ನಿಲ್ಲಿಸಿದ್ದಾರೆ. ನಂತರ ಬಾಲ್ ಕೈಯಲ್ಲಿ ಇಲ್ಲದೇ ಸುಮ್ಮನೆ ಥ್ರೋ ಮಾಡಿದ್ದು ಎಂದು ತಿಳಿದು ಬ್ಯಾಟ್ಸ್ ಮನ್ ಗಳು ರನ್ ಓಡಿದ್ದಾರೆ.

    ಬಾಲ್ ಇದೆ ಎಂದು ಮೋಸ ಮಾಡಿ ಐಸಿಸಿಯ ಹೊಸ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಆನ್‍ಫಿಲ್ಡ್‍ನಲ್ಲಿದ್ದ ಅಂಪೈರ್ ಗಳಿಬ್ಬರು ಮಧ್ಯೆ ಮಾತುಕತೆ ನಡೆದು ಕ್ವೀನ್ಸ್ ಲ್ಯಾಂಡ್ ಕ್ರಿಕೆಟ್ ತಂಡಕ್ಕೆ 5 ರನ್‍ಗಳ ದಂಡ ವಿಧಿಸಿತು. ಈ ಮಊಲಕ ಐಸಿಸಿ ಜಾರಿ ಮಾಡಿದ ಕೆಲವು ನಿಯಮಗಳಿಗೆ ವಿಶ್ವದಲ್ಲಿಯೇ ಮೊದಲ ಬಾರಿಗೆ ದಂಡ ವಿಧಿಸಿಕೊಂಡ ಮೊದಲ ತಂಡ ಎನ್ನುವ ಕುಖ್ಯಾತಿಗೆ ಕ್ವೀನ್ಸ್ ಲ್ಯಾಂಡ್ ತಂಡ ಪಾತ್ರವಾಗಿದೆ.

    ಹೊಸ ನಿಯಮದ ಪ್ರಕಾರ ಸ್ಟ್ರೈಕರ್ ತಂಡದ ಬ್ಯಾಟ್ಸ್‍ಮನ್ ರನ್ ಓಡದಂತೆ ತಡೆಯಲು ಅಥವಾ ಮೋಸಗೊಳಿಸಲು ಯಾವುದೇ ಫಿಲ್ಡರ್ ಉದ್ದೇಶ ಪೂರ್ವಕವಾಗಿ ಪ್ರಯತ್ನ ಮಾಡುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘನೆಯಾದರೆ ವಿರುದ್ಧದ ತಂಡಕ್ಕೆ 5 ರನ್‍ಗಳನ್ನು ಕೊಡುವ ಅಧಿಕಾರ ಅಂಪೈರ್ ಗಳಿಗೆ ಇರುತ್ತದೆ.

    ಬ್ಯಾಟ್ಸ್ ಮನ್‍ಗಳು ರನ್ ಓಡುವ ವೇಳೆ ಫಿಲ್ಡಿಂಗ್‍ನಲ್ಲಿರುವ ಯಾವೊಬ್ಬ ಆಟಗಾರನನ್ನು ಕೈಯಲ್ಲಿಲ್ಲದ ಬಾಲನ್ನು ಎಸೆಯಲು ಅಥವಾ ಭಯಪಡಿಸಲು ಯತ್ನಿಸಿದರೂ ನಿಯಮ ಉಲ್ಲಂಘನೆಯಾಗಿದೆ ಎಂದು ಪರಿಗಣಿಸಲಾಗುತ್ತದೆ.

    ಆನ್‍ಫಿಲ್ಡ್‍ನಲ್ಲಿ ಆಟಗಾರರು ಏನಾದರೂ ಎದುರಾಳಿ ತಂಡದ ಆಟಗಾರರಿಗೆ ತೊಂದರೆ ಅಥವಾ ಅಂಪೈರ್ ನಿರ್ಣಯಕ್ಕೆ ಎದುರು ಮಾತನಾಡಿ ಆಕ್ರೋಷ ವ್ಯಕ್ತಪಡಿಸಿದರೆ 4ನೇ ಹಂತ ತಪ್ಪು ಎಂದು ತೀರ್ಮಾನಿಸಿ ಆ ಆಟಗಾರರನ್ನು ಮೈದಾನದಿಂದ ಹೊರಗೆ ಕಳುಹಿಸಬಹುದಾಗಿದೆ.

    ಫುಟ್ ಬಾಲ್ ನಲ್ಲಿ ಹೇಗೆ ಕಠಿಣ ನಿಯಮಗಳಿದೆಯೋ ಅದೇ ರೀತಿಯ ಕೆಲ ಕಠಿಣ ನಿಮಯಗಳನ್ನು ಐಸಿಸಿ ಕಳೆದ ಗುರುವಾರ ಜಾರಿ ಮಾಡಿತ್ತು.

  • ಆಸೀಸ್ ವಿರುದ್ಧ 53 ಸಿಕ್ಸರ್ ಬಾರಿಸಿ ರೋಹಿತ್ ಶರ್ಮಾ ದಾಖಲೆ!

    ಆಸೀಸ್ ವಿರುದ್ಧ 53 ಸಿಕ್ಸರ್ ಬಾರಿಸಿ ರೋಹಿತ್ ಶರ್ಮಾ ದಾಖಲೆ!

    ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕ್ರಿಕೆಟಿಗ ಎಂಬ ಖ್ಯಾತಿಗೆ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 28ರಂದು ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಸೋತರೂ ರೋಹಿತ್ ಶರ್ಮಾ ದಾಖಲೆ ಮಾಡಿದ್ದಾರೆ.

    ಈ ಪಂದ್ಯದಲ್ಲಿ 55 ಎಸೆತಗಳನ್ನು ಎದುರಿಸಿದ್ದ ರೋಹಿತ್ ಶರ್ಮಾ 5 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 65 ರನ್ ಗಳಿಸಿದ್ದರು. 5 ಸಿಕ್ಸರ್ ಗಳ ನೆರವಿನಿಂದ ರೋಹಿತ್ ಶರ್ಮಾ ಸಿಕ್ಸರ್ ಗಳ ಅರ್ಧ ಶತಕದ ಗಡಿ ದಾಟಿದರು. ಈ ಮೂಲಕ ಆಸೀಸ್ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಗೆ ಪಾತ್ರರಾದರು. ರೋಹಿತ್ ಶರ್ಮಾ ಒಟ್ಟು 27 ಪಂದ್ಯಗಳಲ್ಲಿ 53 ಸಿಕ್ಸರ್ ಬಾರಿಸಿದ್ದಾರೆ.

     ಟಾಪ್ 10 ಸಿಕ್ಸರ್ಸ್: ಆಸ್ಟ್ರೇಲಿಯಾ ವಿರುದ್ಧ ಹೆಚ್ಚು ಸಿಕ್ಸರ್ ಬಾರಿಸಿ ರೋಹಿತ್ ಶರ್ಮಾ ಸೇರಿ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ಆಟಗಾರ ಇಯಾನ್ ಮಾರ್ಗನ್ 43 ಪಂದ್ಯಗಳಿಂದ 39 ಸಿಕ್ಸ್, ಭಾರತದ ಸಚಿನ್ ತೆಂಡುಲ್ಕರ್ 71 ಪಂದ್ಯಗಳಲ್ಲಿ 35, ನ್ಯೂಜಿಲೆಂಡ್ ತಂಡದ ಬ್ರೆಂಡನ್ ಮೆಕಲ್ಲಂ 47 ಪಂದ್ಯದಲ್ಲಿ 33, ಪಾಕಿಸ್ತಾನದ ಶಹೀದ್ ಆಫ್ರಿದಿ 45 ಪಂದ್ಯಗಳಿಂದ 28 ಸಿಕ್ಸರ್, ಇಂಡಿಯಾದ ಮಹೇಂದ್ರ ಸಿಂಗ್ ಧೋನಿ 47 ಪಂದ್ಯಗಳಿಂದ 27, ವಿಂಡೀಸ್ ನ ಕೀರನ್ ಪೊಲಾರ್ಡ್ 21 ಪಂದ್ಯಗಳಿಂದ 27, ವಿಂಡೀಸ್ ನ ವಿಲಿಯನ್ ರಿಚಡ್ರ್ಸ್ 54 ಪಂದ್ಯಗಳಿಂದ 26, ಪಾಕಿಸ್ತಾನದ ವಸೀಂ ಅಕ್ರಂ 49 ಪಂದ್ಯಗಳಲ್ಲಿ 26, ನ್ಯೂಜಿಲೆಂಡ್ ನ ಮಾರ್ಟಿನ್ ಗಪ್ಟಿಲ್ 23 ಪಂದ್ಯಗಳಲ್ಲಿ 24 ಸಿಕ್ಸರ್ ಬಾರಿಸಿ ದಾಖಲೆ ಮಾಡಿದ್ದಾರೆ.

  • ಟೀಂ ಇಂಡಿಯಾ ದಾಖಲೆ ಕನಸು ಭಗ್ನ -ಬೆಂಗಳೂರಲ್ಲಿ ಕೊಹ್ಲಿ ಪಡೆಗೆ ಸೋಲು

    ಟೀಂ ಇಂಡಿಯಾ ದಾಖಲೆ ಕನಸು ಭಗ್ನ -ಬೆಂಗಳೂರಲ್ಲಿ ಕೊಹ್ಲಿ ಪಡೆಗೆ ಸೋಲು

    ಬೆಂಗಳೂರು: ಟೀಂ ಇಂಡಿಯಾದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು 21 ರನ್ ಗಳಿಂದ ಸೋಲಿಸಿತು. ಈ ಮೂಲಕ ಸತತ 10 ಗೆಲುವಿನ ಸವಿಯ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾ ಕನಸು ಕನಸಾಗಿಯೇ ಉಳಿಯಿತು.

    50 ಓವರ್ ಗಳಲ್ಲಿ ಗೆಲ್ಲಲು 335 ಟಾರ್ಗೆಟ್ ಬೆನ್ನತ್ತಿದ ಭಾರತ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 313 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಮಹೇಂದ್ರ ಸಿಂಗ್ ಧೋನಿ ಔಟಾಗುವವರೆಗೆ ಟೀಂ ಇಂಡಿಯಾ ಗೆಲುವಿನ ನಿರೀಕ್ಷೆಯಲ್ಲಿತ್ತು.

    ಅಜಿಂಕ್ಯಾ ರಹಾನೆ ಹಾಗೂ ರೋಹಿತ್ ಶರ್ಮಾ ಮೊದಲ ವಿಕೆಟ್ ಗೆ ಶತಕದ ಜೊತೆಯಾಟ ನೀಡಿದರು. ಮಧ್ಯದಲ್ಲಿ ಬಂದ ಹಾರ್ದಿಕ್ ಪಾಂಡ್ಯ 3 ಸಿಕ್ಸರ್ ಗಳನ್ನು ಸಿಡಿಸಿದರೂ ಭಾರತದ ಗೆಲುವಿಗೆ ಇದು ಸಾಕಾಗಲಿಲ್ಲ. ರಹಾನೆ 53, ರೋಹಿತ್ ಶರ್ಮಾ 65, ವಿರಾಟ್ ಕೊಹ್ಲಿ 21, ಪಾಂಡ್ಯ 41, ಕೇದಾರ್ ಜಾಧವ್ 67, ಮನೀಷ್ ಪಾಂಡೆ 33, ಧೋನಿ 13, ಅಕ್ಷರ್ ಪಟೇಲ್ 5, ಮೊಹಮ್ಮದ್ ಶಮಿ 6 ಹಾಗೂ ಉಮೇಶ್ ಯಾದವ್ 2 ರನ್ ಗಳಿಸಿದರು.

    ಆಸ್ಟ್ರೇಲಿಯಾ ಪರವಾಗಿ ರಿಚಡ್ರ್ಸನ್ 3, ಕಾಲ್ಟರ್‍ನೈಲ್2, ಕಮಿನ್ಸ್ ಹಾಗೂ ಝಂಪಾ ತಲಾ 1 ವಿಕೆಟ್ ಗಳಿಸಿದರು.

    ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕಿಳಿಯಿತು. ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಶತಕ ಬಾರಿಸಿದರು. 119 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 12 ಬೌಂಡರಿಗಳ ನೆರವಿನಿಂದ 124 ರನ್ ಗಳಿಸಿದರು. ಆಸ್ಟ್ರೇಲಿಯಾದ ಆಕ್ರಮಣಕಾರಿ ಆಟ ಎಷ್ಟಿತ್ತೆಂದರೆ ತಂಡದ ಮೊದಲ ವಿಕೆಟ್ ಪತನವಾಗಿದ್ದತ 35ನೇ ಓವರ್ ನಲ್ಲಿ. 35ನೇ ಓವರ್ ನ ಕೊನೆಯ ಎಸೆತದಲ್ಲಿ ತಂಡದ ಮೊತ್ತ 231 ರನ್ ಆಗಿದ್ದಾಗ ಡೇವಿಡ್ ವಾರ್ನರ್ ಔಟಾದರು. ವಾರ್ನರ್ ಗೆ ಫಿಂಚ್ ಉತ್ತಮ ಜೊತೆಯಾಟ ನೀಡಿದರೂ ಶತಕ ವಂಚಿತರಾದರು. 96 ಎಸೆತಗಳಲ್ಲಿ ಫಿಂಚ್ 10 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 94 ರನ್ ಗಳಿಸಿ ಔಟಾದರು. ಹೆಡ್ 29, ಸ್ಮಿತ್ 3, ಹ್ಯಾಂಡ್ಸ್ ಕಾಂಬ್ 43, ಸ್ಟಾಯ್ನಿಸ್ 15, ವೇಡ್ 3 ರನ್ ಗಳಿಸಿದರು.

    ಟೀಂ ಇಂಡಿಯಾ ಪರವಾಗಿ ಉಮೇಶ್ ಯಾದವ್ 4 ಹಾಗೂ ಕೇದಾರ್ ಜಾಧವ್ 1 ವಿಕೆಟ್ ಪಡೆದರು. ನಿಗದಿತ 50 ಓವರ್ ಗಳು ಮುಗಿದಾಗ ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿತ್ತು.

    https://twitter.com/BCCI_Tv/status/913429402817613824

  • ಸತತ 10ನೇ ಗೆಲುವು ಸಾಧಿಸಿ ದಾಖಲೆ ಮಾಡುತ್ತಾ ಟೀಂ ಇಂಡಿಯಾ!

    ಸತತ 10ನೇ ಗೆಲುವು ಸಾಧಿಸಿ ದಾಖಲೆ ಮಾಡುತ್ತಾ ಟೀಂ ಇಂಡಿಯಾ!

    ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಟೀಂ ಇಂಡಿಯಾ ದಾಖಲೆ ಮಾಡುತ್ತಾ..? ಅಥವಾ ಮಳೆರಾಯ ಭಾರತದ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕ್ತಾನಾ..?

    ಆಸ್ಟ್ರೇಲಿಯಾ ವಿರುದ್ಧ ಇಂದು ನಡೆಯಲಿರುವ 4ನೇ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ ವಿರಾಟ್ ಕೊಹ್ಲಿ ಪಡೆ ಸತತ 4 ಏಕದಿನ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಗೆದ್ದ ಮೊದಲ ತಂಡ ಎನಿಸಿಕೊಳ್ಳಲಿದೆ. ಈ ಹಿಂದೆ ಭಾರತ 2 ಬಾರಿ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳನ್ನು ಗೆದ್ದಿತ್ತು. 1986ರಲ್ಲಿ 6 ಪಂದ್ಯಗಳ ಸರಣಿಯನ್ನು 3-2 ಹಾಗೂ 2013ರಲ್ಲಿ 7 ಪಂದ್ಯಗಳ ಸರಣಿಯನ್ನು 3-2 ಅಂತರದಿಂದ ಗೆದ್ದಿತ್ತು.

    ಬೆಂಗಳೂರಿನಲ್ಲಿ ನಡೆಯುವ ಈ ಪಂದ್ಯವನ್ನು ಭಾರತ ಗೆದ್ದರೆ ಸತತ 10ನೇ ಜಯ ಗಳಿಸಿದರೆ ಮತ್ತೊಂದು ದಾಖಲೆಯೂ ಭಾರತ ತಂಡಕ್ಕೆ ಸಿಗಲಿದೆ. ಟೀಂ ಇಂಡಿಯಾ ಈ ವರ್ಷ ಜುಲೈಯಿಂದ ಸೆಪ್ಟೆಂಬರ್ ವರೆಗೆ ಸತತ 9 ಪಂದ್ಯಗಳನ್ನು ಗೆದ್ದಿದೆ. ಈ ಹಿಂದೆ 2008ರ ನವೆಂಬರ್ ನಿಂದ 2009ರ ಫೆಬ್ರವರಿವರೆಗೆ ನಡೆದ 9 ಪಂದ್ಯಗಳನ್ನು ಸತತವಾಗಿ ಭಾರತ ಗೆದ್ದಿತ್ತು. ಇದೇ ಜುಲೈ 24ರಂದು ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಗೆದ್ದಿರುವ ಟೀಂ ಇಂಡಿಯಾ ಹಳೆಯ ದಾಖಲೆಯನ್ನು ಸರಿಗಟ್ಟಿದೆ.

    ಈ ವರ್ಷ ಜುಲೈನಲ್ಲಿ ಆಂಟಿಗಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 11 ರನ್ ಗಳಿಗೆ ಸೋತ ಬಳಿಕ ಭಾರತ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಆದರೆ ಆಸ್ಟ್ರೇಲಿಯಾ ಜನವರಿ 26ರಂದು ಪಾಕಿಸ್ತಾನವನ್ನು ಸೋಲಿಸಿದ ಬಳಿಕ ನಂತರ ಯಾವುದೇ ಪಂದ್ಯವನ್ನು ಗೆದ್ದಿಲ್ಲ. ದಕ್ಷಿಣ ಆಫ್ರಿಕಾ 5 ಹಾಗೂ ಆಸ್ಟ್ರೇಲಿಯಾ 6 ಬಾರಿ ಸತತ 10 ಪಂದ್ಯಗಳನ್ನು ಗೆದ್ದ ದಾಖಲೆ ಮಾಡಿದೆ. ಸತತ 10 ಏಕದಿನ ಪಂದ್ಯವನ್ನು ಇಂಗ್ಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಎರಡೆರಡು ಬಾರಿ ಗೆದ್ದ ದಾಖಲೆ ಮಾಡಿದ್ದರೆ ನ್ಯೂಜಿಲೆಂಡ್ 1 ಬಾರಿ 10 ಪಂದ್ಯವನ್ನು ನಿರಂತರವಾಗಿ ಗೆದ್ದಿದೆ.

     

    ಬೆಂಗಳೂರಿನಲ್ಲಿ ಇಂದಿ ಬೆಳಗ್ಗಿನಿಂದಲೂ ಮೋಡ ಮುಸುಕಿದ ವಾತಾವರಣವಿದ್ದು ಯಾವುದೇ ಕ್ಷಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಹೀಗಾಗಿ ಇಂದಿನ ಪಂದ್ಯ ಸಂಪೂರ್ಣ 50 ಓವರ್ ಆಡಲು ಸಾಧ್ಯವಾಗುತ್ತಾ ಎನ್ನುವುದು ಸದ್ಯದ ಕುತೂಹಲಕಾರಿ ಪ್ರಶ್ನೆ.

     

  • ರವಿಶಾಸ್ತ್ರಿ ರಣತಂತ್ರವನ್ನು ಹಾಡಿ ಹೊಗಳಿದ ಕೊಹ್ಲಿ

    ರವಿಶಾಸ್ತ್ರಿ ರಣತಂತ್ರವನ್ನು ಹಾಡಿ ಹೊಗಳಿದ ಕೊಹ್ಲಿ

    ಇಂದೋರ್: ಟೀಂ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾವಣೆ ಮಾಡಿ 4ನೇ ಬ್ಯಾಟ್ಸ್‍ಮನ್ ಆಗಿ ಹಾರ್ದಿಕ್ ಪಾಂಡ್ಯರನ್ನ ಕಣಕ್ಕಿಳಿಸಿ ಪಂದ್ಯವನ್ನು ಗೆಲ್ಲಿಸಿದ ಕೋಚ್ ರವಿಶಾಸ್ತ್ರಿ ಐಡಿಯಾವನ್ನು ನಾಯಕ ವಿರಾಟ್ ಕೊಹ್ಲಿ ಹಾಡಿ ಹೊಗಳಿದ್ದಾರೆ.

    ಈ ಬಗ್ಗೆ ಕೊಹ್ಲಿ ಮಾತನಾಡಿ ಭಾರತದ ಗೆಲುವಿಗೆ ಹಾರ್ದಿಕ್ ಪಾಂಡ್ಯ ಶ್ರಮ ದೊಡ್ಡದು. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‍ನಲ್ಲೂ ಭಾರತವನ್ನು ಗೆಲ್ಲಿಸುವ ಸಾಮಥ್ರ್ಯ ಹೊಂದಿದ್ದಾರೆ. ಹೀಗಾಗಿ ಭಾರತ ತಂಡದ ಆಲ್ ರೌಂಡರ್ ವಿಭಾಗದಲ್ಲಿ ದೊಡ್ಡ ಆಸ್ತಿಯಾಗಿ ಹೊರಹೊಮ್ಮಿದ್ದಾರೆ. ಉಪಾಯದಿಂದ ಆಸ್ಟ್ರೇಲಿಯಾವನ್ನು ಮಣಿಸಿ ಸರಣಿ ಪಡೆದು ಏಕದಿನ ಕ್ರಿಕೆಟ್‍ನಲ್ಲಿ ರ್ಯಾಂಕಿಂಗ್ ಪಟ್ಟಿಯಲ್ಲಿ 1ನೇ ಸ್ಥಾನ ಪಡೆದುಕೊಳ್ಳುವಲ್ಲಿ ಸಹಾಯವಾಯಿತು ಇದಕ್ಕೆಲ್ಲ ಕೋಚ್ ರವಿಶಾಸ್ತ್ರೀ ಐಡಿಯಾವೇ ಕಾರಣ ಎಂದು ಹೇಳಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಆಲ್‍ರೌಂಡರ್ ಪ್ರದರ್ಶನ ನೀಡಿತು. 294 ರನ್‍ಗಳ ಗುರಿ ಬೆನ್ನತ್ತಿದ ಭಾರತ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿ ಹಾರ್ದಿಕ್ ಪಾಂಡ್ಯನನ್ನು 4ನೇ ಕ್ರಮಾಂಕಕ್ಕೆ ಇಳಿಸಿತ್ತು. ಬಿರುಸಿನ ಆಟವಾಡಿದ ಪಾಂಡ್ಯ 72 ಬಾಲ್‍ಗಳಲ್ಲಿ 78 ರನ್ ಬಾರಿಸಿ ಪಂದ್ಯದ ಗೆಲುವಿಗೆ ಕಾರಣರಾಗಿದ್ದರು. ಬೌಲಿಂಗ್‍ನಲ್ಲಿ ಒಂದು ವಿಕೆಟ್ ಮತ್ತು ಅರ್ಧಶ ಶತಕ ಸಿಡಿಸಿದ್ದ ಪಾಂಡ್ಯಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಸಿಕ್ಕಿತ್ತು. ಈ ಮೂಲಕ ಈ ಪಾಂಡ್ಯ ತಂಡದ ಪ್ರಮುಖ ಆಲ್ ರೌಂಡರ್ ಆಗಿ ಹೊರ ಹೊಮ್ಮಿದ್ದಾರೆ.

    ಬಿಸಿಸಿಐ ಹಾಗೂ ಆಯ್ಕೆ ಸಮಿತಿ ನೀಡಿದ ಅವಕಾಶವನ್ನು ನಾನು ಸರಿಯಾಗಿ ಬಳಿಸಿಕೊಂಡು ಗುರುತಿಸಿಕೊಂಡಿದ್ದೇನೆ. ನನಗೆ ತುಂಬಾ ಖುಷಿ ತಂದಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

    ಇನ್ನು ಪಂದ್ಯ ಕೈ ತಪ್ಪಿದರ ಬಗ್ಗೆ ಮಾತನಾಡಿದ ಸ್ಟಿವ್ ಸ್ಮಿತ್ 37-38ನೇ ಓವರ್ ವರೆಗೆ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದೆವು. ನಮ್ಮ ಗುರಿ 330 ರನ್ ಇತ್ತು. ಆದರೆ ಭಾರತದ ಬೌಲರ್‍ಗಳು ನಮ್ಮ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಹಾರ್ದಿಕ್ ಪಾಂಡ್ಯ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು ಎಂದರು.

    ಭವಿಷ್ಯದ ಸ್ಪಿನ್ನರ್‍ಗಳಾದ ಯಾದವ್-ಚಾಹಲ್:
    ಹೊಸ ಪ್ರತಿಭೆಯ ಸ್ಪಿನ್ ಬೌಲರ್‍ಗಳನ್ನು ಬೆಂಬಲಿಸಿ ಪಂದ್ಯಗಳಿಗೆ ಹಾಕಿಕೊಳ್ಳಬೇಕು ಎಂಬ ಮಾತು ಕೇಳಿ ಬರುತ್ತಿದ್ದ ಕಾರಣ ಯಜುವೇಂದ್ರ ಚಾಹಲ್, ಮತ್ತು ಕುಲದೀಪ್ ಯಾದವ್‍ಗೆ ಅವಕಾಶ ನೀಡಿತ್ತು. ಅಂತಯೇ ಕಳೆದ ಪಂದ್ಯದಲ್ಲಿ ಕುಲದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರು. ಜೊತೆಗೆ ಚಾಹಲ್ ಕೂಡ ಉತ್ತಮ ಸ್ಪಿನ್ ದಾಳಿ ನಡೆಸಿ ಗಮನ ಸೆಳೆದಿದ್ದಾರೆ. ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಪಿನ್ ಬೌಲಿಂಗ್ ನಡೆಸಿ ಐ ಆಮ್ ಬ್ಯಾಕ್ ಅನ್ನೋ ತರ ಬೌಲ್ ಮಾಡಿದರು.

    ಆಟಗಾರರಿಗೆ ಅವಕಾಶ?
    ಮೂರು ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಮೂರು ಪಂದ್ಯಗಳನ್ನು ಆಡದೇ ಇರುವ ಆಟಗಾರರನ್ನು ಉಳಿದ ಎರಡು ಪಂದ್ಯಗಳಿಗೆ ಪರಿಗಣಿಸಬಹುದು ಎನ್ನುವ ಮಾತುಗಳು ಕೇಳಿ ಬಂದಿದೆ.

     

  • ಆಸೀಸ್ ಸೋಲಿಸಿ ಏಕದಿನದಲ್ಲಿ ನಂಬರ್ ಒನ್ ಸ್ಥಾನಕ್ಕೆ ಜಿಗಿದ ಟೀಂ ಇಂಡಿಯಾ

    ಆಸೀಸ್ ಸೋಲಿಸಿ ಏಕದಿನದಲ್ಲಿ ನಂಬರ್ ಒನ್ ಸ್ಥಾನಕ್ಕೆ ಜಿಗಿದ ಟೀಂ ಇಂಡಿಯಾ

    ದುಬೈ: ಇಂದೋರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು 5 ವಿಕೆಟ್ ಗಳೊಂದಿಗೆ ಗೆಲ್ಲುವ ಮೂಲಕ ಟೀಂ ಇಂಡಿಯಾ ಈಗ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿದೆ.

    ಸೆಪ್ಟೆಂಬರ್ 24ಕ್ಕೆ ಅಂತ್ಯಗೊಂಡ ಹೊಸ ಶ್ರೇಯಾಂಕ ಪಟ್ಟಿಯ ಪ್ರಕಾರ ಒಟ್ಟು 48 ಪಂದ್ಯಗಳಿಂದ 5,764 ಅಂಕಗಳೊಂದಿಗೆ 120 ರೇಟಿಂಗ್ ಸಂಪಾದಿಸಿದ ಭಾರತ ಮೊದಲ ಸ್ಥಾನವನ್ನು ಪಡೆದಿದೆ.

    50 ಪಂದ್ಯಗಳಿಂದ 5,957 ಅಂಗಳೊಂದಿಗೆ ದಕ್ಷಿಣ ಆಫ್ರಿಕಾ 119 ರೇಟಿಂಗ್ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, 50 ಪಂದ್ಯಗಳಿಂದ ಆಸ್ಟ್ರೇಲಿಯಾ 5,709 ಅಂಕ, 114 ರೇಟಿಂಗ್ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.

    ಟೆಸ್ಟ್ ನಲ್ಲಿ 36 ಪಂದ್ಯಗಳಿಂದ 4,493 ಅಂಕಗಳೊಂದಿಗೆ 125 ರೇಟಿಂಗ್ ಸಂಪಾದಿಸಿ ಭಾರತ ಮೊದಲ ಸ್ಥಾನದಲ್ಲಿದ್ದರೆ, ಟಿ20ಯಲ್ಲಿ 13 ಪಂದ್ಯಗಳನ್ನು ಆಡಿರುವ ಭಾರತ 2,328 ಅಂಕಗಳೊಂದಿಗೆ 116 ರೇಟಿಂಗ್ ಪಾಯಿಂಟ್ ಪಡೆಯುವ ಮೂಲಕ 5ನೇ ಸ್ಥಾನವನ್ನು ಪಡೆದುಕೊಂಡಿದೆ.

     

     

  • ಇಂದೋರ್ ಭಾರತದ ಪಾಲಿಗೆ ಅದೃಷ್ಟದ ತಾಣ ಅನ್ನೋದು ಮತ್ತೆ ಸಾಬೀತಾಯ್ತು!

    ಇಂದೋರ್ ಭಾರತದ ಪಾಲಿಗೆ ಅದೃಷ್ಟದ ತಾಣ ಅನ್ನೋದು ಮತ್ತೆ ಸಾಬೀತಾಯ್ತು!

    ಇಂದೋರ್: ಆಸ್ಟ್ರೇಲಿಯಾವನ್ನು 5 ವಿಕೆಟ್ ಗಳಿಂದ ಬಗ್ಗು ಪಡೆಯುವ ಮೂಲಕ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ ಭಾರತದ ಪಾಲಿಗೆ ಅದೃಷ್ಟದ ತಾಣ ಎನ್ನುವುದು ಮತ್ತೆ ಸಾಬೀತಾಗಿದೆ.

    ಈ ಮೂಲಕ ಒಂದೇ ಕ್ರೀಡಾಂಗಣದಲ್ಲಿ ಸತತ 5 ಪಂದ್ಯವನ್ನು ಗೆದ್ದ ದಾಖಲೆಗೆ ಭಾರತ ಪಾತ್ರವಾಗಿದೆ. ಇದುವರೆಗೆ ಭಾರತ ಯಾವುದೇ ಕ್ರೀಡಾಂಗಣದಲ್ಲಿ ಸತತ 5 ಪಂದ್ಯವನ್ನು ಗೆದ್ದಿರುವ ದಾಖಲೆಗಳಿಲ್ಲ.

    ಶಾರ್ಜಾ, ಮೀರ್ ಪುರ, ದೆಹಲಿ ಹಾಗೂ ವಿಶಾಖಪಟ್ಟಣಂನಲ್ಲಿ ಭಾರತ ಸತತ 4 ಪಂದ್ಯಗಳನ್ನು ಗೆದ್ದಿತ್ತು. ಇದರ ಜೊತೆಗೆ ಟೀಂ ಇಂಡಿಯಾ ಸತತ 4 ಪಂದ್ಯಗಳನ್ನು ಆಸ್ಟ್ರೇಲಿಯಾ ವಿರುದ್ಧ ಗೆದ್ದಂತಾಗಿದು. ಇದು ಕೂಡಾ ಭಾರತದ ಪಾಲಿಗೆ ದಾಖಲೆ.

    ಈ ಹಿಂದೆ  ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳನ್ನು ಗೆದ್ದಿದ್ದರೆ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಲಾ ಒಂದೊಂದು ಗೆಲುವು ಒಲಿದಿತ್ತು. ಈಗ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲೂ ಗೆಲ್ಲುವ ಮೂಲಕ ತನ್ನ ಅಜೇಯ ಗೆಲುವಿನ ಸರಣಿಯನ್ನು ಟೀಂ ಇಂಡಿಯಾ ಮುಂದುವರಿಸಿದೆ.

    2006ರಲ್ಲಿ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಜಯ ಸಾಧಿಸಿದ್ದರೆ, 2008ರಲ್ಲಿ ಮತ್ತೆ ಇಂಗ್ಲೆಂಡ್ ವಿರುದ್ಧ 54 ರನ್ ಗಳ ಜಯವನ್ನು ಸಾಧಿಸಿತ್ತು. 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 153 ರನ್ ಗಳಿಂದ ಗೆದ್ದಿದ್ದರೆ, 2015 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 22 ರನ್ ಗಳಿಂದ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು.

    ಜಸ್‍ಪ್ರೀತ್ ಬುಮ್ರಾ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರೆ, ಚಹಲ್ ಮತ್ತು ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.

  • ಆಸೀಸ್‍ಗೆ ಮತ್ತೆ ಮುಖಭಂಗ: ಸರಣಿ ಗೆದ್ದ ಟೀಂ ಇಂಡಿಯಾ

    ಆಸೀಸ್‍ಗೆ ಮತ್ತೆ ಮುಖಭಂಗ: ಸರಣಿ ಗೆದ್ದ ಟೀಂ ಇಂಡಿಯಾ

    ಇಂದೋರ್: ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯವನ್ನು ಭಾರತ 5 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಸರಣಿಯನ್ನು ಗೆದ್ದುಕೊಂಡಿದೆ.

    ಗೆಲ್ಲಲು 294 ರನ್ ಗಳ ಸವಾಲು ಸ್ವೀಕರಿಸಿದ ಭಾರತ 5 ವಿಕೆಟ್ ಗಳನ್ನು ಕಳೆದುಕೊಂಡು 47.5 ಓವರ್ ಗಳಲ್ಲಿ ಗುರಿಯನ್ನು ಮುಟ್ಟಿತು. ಈ ಮೂಲಕ ಇನ್ನು ಎರಡು ಪಂದ್ಯಗಳು ಬಾಕಿ ಇರುವಂತೆಯೇ ಸರಣಿಯನ್ನು ಗೆದ್ದುಕೊಂಡಿದೆ.

    ಅಜಿಂಕ್ಯಾ ರಹಾನೆ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್ ಗೆ 21.4 ಓವರ್ ಗಳಲ್ಲಿ 139 ರನ್ ಗಳ ಜೊತೆಯಾಟ ಹಾಕುವ ಮೂಲಕ ಭದ್ರ ಬುನಾದಿ ಹಾಕಿದರು. ರೋಹಿತ್ ಶರ್ಮಾ 71 ರನ್(62 ಎಸೆತ, 6 ಬೌಂಡರಿ, 4 ಸಿಕ್ಸರ್), ಅಜಿಂಕ್ಯಾ ರಹಾನೆ 70 ರನ್(76 ಎಸೆತ, 9 ಬೌಂಡರಿ) ಹೊಡೆದರೆ ಕೊಹ್ಲಿ 28 ರನ್(35 ಎಸೆತ, 2 ಬೌಂಡರಿ) ಹೊಡೆದು ಔಟಾದರು.

    ಕೇದಾರ್ ಜಾದವ್ 2 ರನ್ ಹೊಡೆದರೆ, ಕೊನೆಯಲ್ಲಿ 5ನೇ ವಿಕೆಟ್ ಗೆ ಹಾರ್ದಿಕ್ ಪಾಂಡ್ಯ ಮತ್ತು ಮನೀಷ್ ಪಾಂಡೆ 78 ರನ್ ಗಳ ಜೊತೆಯಾಟವಾಡಿದರು. ಗೆಲುವಿನ 10 ರನ್ ಬೇಕಿದ್ದಾಗ ಪಾಂಡ್ಯ 78 ರನ್(72 ಎಸೆತ, 5 ಬೌಂಡರಿ, 4 ಸಿಕ್ಸರ್) ಹೊಡೆದು ಕ್ಯಾಚ್ ನೀಡಿ ಹೊರನಡೆದರು. ಮನೀಷ್ ಪಾಂಡೆ ಔಟಾಗದೇ 36 ರನ್(32 ಎಸೆತ, 6 ಬೌಂಡರಿ), ಧೋನಿ ಔಟಾಗದೇ 3 ರನ್ ಹೊಡೆಯುವ ಮೂಲಕ ಗೆಲುವಿನ ದಡ ಸೇರಿಸಿದರು.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಆರನ್ ಫಿಂಚ್ 124 ರನ್(125 ಎಸೆತ, 12 ಬೌಂಡರಿ, 5 ಸಿಕ್ಸರ್) ನಾಯಕ ಸ್ಮಿತ್ 63 ರನ್( 71 ಎಸೆತ, 5 ಬೌಂಡರಿ) ಡೇವಿಡ್ ವಾರ್ನರ್ 42 ರನ್(44 ಎಸೆತ, 4 ಬೌಂಡರಿ, 1 ಸಿಕ್ಸರ್) ಹೊಡೆಯುವ ಮೂಲಕ 6 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿತು.

    37.5 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 224 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿ ಆಸ್ಟ್ರೇಲಿಯಾ 260 ರನ್ ಗಳಿಸಿದ್ದಾಗ 6 ವಿಕೆಟ್ ಕಳೆದುಕೊಂಡಿತ್ತು. ಆರಂಭದಲ್ಲಿ ಹೆಚ್ಚು ರನ್ ಬಿಟ್ಟು ಕೊಟ್ಟಿದ್ದ ಭಾರತೀಯ ಬೌಲರ್ ಗಳು ಕೊನೆಯ 12 ಓವರ್ ಗಳು 69 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ರನ್‍ಗೆ ಕಡಿವಾಣ ಹಾಕಿದ್ದು ಸರಣಿ ಗೆಲ್ಲಲು ಸಹಕಾರಿ ಆಯ್ತು. 1 ವಿಕೆಟ್ ಕಿತ್ತು 78 ರನ್ ಹೊಡೆದ ಹಾರ್ದಿಕ್ ಪಾಂಡ್ಯ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

     

  • ಧೋನಿ ಇಂದು ಸ್ಪಿನ್ ಬೌಲಿಂಗ್ ಮಾಡ್ತಾರಾ?

    ಧೋನಿ ಇಂದು ಸ್ಪಿನ್ ಬೌಲಿಂಗ್ ಮಾಡ್ತಾರಾ?

    ಇಂದೋರ್: ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳಲು ಟೀಂ ಇಂಡಿಯಾ ಭರ್ಜರಿ ಸಿದ್ಧತೆ ನಡೆಸಿದೆ. ಭಾನುವಾರ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಶನಿವಾರ ನಡೆದ ನೆಟ್ ಪ್ರ್ಯಾಕ್ಟೀಸ್ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಸ್ಪಿನ್ ಬೌಲ್ ಮಾಡಿದರು.

    ಈಗಾಗಲೇ ಕಳೆದ ಎರಡು ಪಂದ್ಯಗಳಲ್ಲಿ ಆಸೀಸ್ ತಂಡ ಭಾರತದ ಸ್ಪಿನ್ನರ್ ಗಳ ದಾಳಿ ಎದುರಿಸುವಲ್ಲಿ ವಿಫಲವಾಗಿತ್ತು. ಆದರಲ್ಲೂ 2ನೇ ಪಂದ್ಯದಲ್ಲಿ ಕುಲದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದರು.

    ಹೋಳ್ಕರ್ ಕ್ರೀಡಾಂಗಣದಲ್ಲಿ ಅಭ್ಯಾಸದ ವೇಳೆ ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಚಾಹಲ್ ಜೊತೆ ಧೋನಿ ಕೂಡಾ ಸ್ಪಿನ್ ಬೌಲಿಂಗ್ ಪ್ರ್ಯಾಕ್ಟೀಸ್ ಮಾಡಿದ್ದಾರೆ. ಆಫ್ ಸ್ಪಿನ್ ಹಾಗೂ ಲೆಗ್ ಸ್ಪಿನ್ ದಾಳಿ ನಡೆಸಿ ಧೋನಿ ಎಂಜಾಯ್ ಮಾಡಿದ್ದಾರೆ.

    ಇದರ ವೀಡಿಯೋವನ್ನು ಬಿಸಿಸಿಐ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರತದ ಸ್ಪಿನ್ ದಾಳಿಗೆ ಸೇರ್ಪಡೆಯಾಗಿದ್ದು ಯಾರೆಂದು ನೋಡಿ ಎಂದು ಕ್ಯಾಪ್ಷನ್ ಕೊಟ್ಟಿದೆ. ಜೊತೆಗೆ ಇನ್ನೊಂದು ಟ್ವೀಟ್ ನಲ್ಲಿ ಧೋನಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಧೋನಿ ಸ್ಮೈಲ್ ಫೋಟೋ ಹಾಕಲಾಗಿದೆ.

    ಇಂದಿನ ಪಂದ್ಯವನ್ನು ಭಾರತ ಗೆದ್ದರೆ ಭಾರತ 5 ಮ್ಯಾಚ್ ಗಳ ಸರಣಿಯನ್ನು ಗೆದ್ದಂತಾಗುತ್ತದೆ. ಆದರೆ ಇಂದಿನ ಪಂದ್ಯದಲ್ಲಾದರೂ ಆಸೀಸ್ ತಂಡ ಸ್ಪಿನ್ನರ್ ಗಳನ್ನು ದಿಟ್ಟವಾಗಿ ಎದುರಿಸುತ್ತಾ ಎನ್ನುವುದೇ ಎಲ್ಲರ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ. ಯಾಕೆಂದರೆ ಈ ಪಂದ್ಯವನ್ನೂ ಸೋತರೆ ಆಸೀಸ್ ಸರಣಿಯನ್ನು ಗೆಲ್ಲುವ ಆಸೆಯನ್ನು ಕೈ ಬಿಡಬೇಕಾಗುತ್ತದೆ.