Tag: australia

  • ಬಲೆಗೆ ಬಿತ್ತು 600 ಕೆಜಿ ತೂಕದ ವಿಶ್ವದ ಅತಿ ದೊಡ್ಡ ಮೊಸಳೆ!

    ಬಲೆಗೆ ಬಿತ್ತು 600 ಕೆಜಿ ತೂಕದ ವಿಶ್ವದ ಅತಿ ದೊಡ್ಡ ಮೊಸಳೆ!

    ಮೆಲ್ಬರ್ನ್: 8 ವರ್ಷಗಳ ಕಾರ್ಯಾಚರಣೆಯಲ್ಲಿ ಇದೇ ಮೊದಲ ಬಾರಿಗೆ, 600 ಕೆಜಿ ತೂಕದ ಮೊಸಳೆಯೊಂದು ಆಸ್ಟ್ರೇಲಿಯಾದ ಕ್ಯಾಥರಿನ್ ನದಿಯಲ್ಲಿ ಸೆರೆ ಸಿಕ್ಕಿದೆ.

    2010 ರಿಂದಲೂ ರೆಂಜ್ ಆಫಿಸರ್ ಗಳು  ಕ್ಯಾಥರಿನ್ ನದಿಯಲ್ಲಿ ವಾರ್ಷಿಕವಾಗಿ ಸುಮಾರು 250 ಮೊಸಳೆಗಳನ್ನು ಬಲೆ ಹಾಕಿ ಹಿಡಿಯಲಾಗುತ್ತಿದೆ. ಮೊಸಳೆಗಳು ಜನರನ್ನು ಬಲಿ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಇವುಗಳನ್ನು ಹಿಡಿಯಲಾಗುತ್ತಿದೆ. ಈ ವರ್ಷದಲ್ಲೇ ಒಟ್ಟು 188 ಉಪ್ಪು ನೀರಿನ ಮೊಸಳೆಗಳನ್ನು ಸೆರೆ ಹಿಡಿಯಲಾಗಿದೆ.

    ಇವುಗಳಲ್ಲಿ ಸದ್ಯ ಸೆರೆ ಸಿಕ್ಕಿರುವ ಮೊಸಳೆಯು ಅತ್ಯಂತ ದೊಡ್ಡ ಗಾತ್ರದ ಹಾಗೂ ತೂಕದ ಮೊಸಳೆಯಾಗಿದೆ. ಇದು 60 ವರ್ಷದ ಮೊಸಳೆಯಾಗಿದ್ದು, ಬರೋಬ್ಬರಿ 600 ಕೆಜಿ ತೂಕ ಹೊಂದಿದ್ದು, 4.7 ಮೀಟರ್ ಉದ್ದವಿದೆ. ಇದು ಎರಡು ವಾರಗಳ ಹಿಂದೆಯೇ ಹಾಕಿದ್ದ ಬಲೆಗೆ ಸಿಕ್ಕಿ ಬಿದ್ದಿದ್ದು, ದೈತ್ಯ ಗಾತ್ರದ ಹೊಂದಿರುವದರಿಂದ ಪ್ರಾಣಿ ಸಂಗ್ರಹಾಲಯಕ್ಕೆ ಕಳುಹಿಸಲಾಗಿದೆ.

    2011 ರಲ್ಲಿ ಬಲೆಗೆ ಬಿದ್ದ ಸಾಲ್ಟಿ ಹೆಸರಿನ ಮೊಸಳೆ 4.6 ಮೀ ಉದ್ದವಿದ್ದು, ಸದ್ಯ ಇದು ಜಗತ್ತಿನ ಎರಡನೇ ದೊಡ್ಡ ಗಾತ್ರದ ಮೊಸಳೆಯಾಗಿದೆ.

  • ಟಿ20 ಕ್ರಿಕೆಟ್‍ನಲ್ಲಿ ತನ್ನದೇ ದಾಖಲೆ ಮುರಿದ ಆರೋನ್ ಫಿಂಚ್

    ಟಿ20 ಕ್ರಿಕೆಟ್‍ನಲ್ಲಿ ತನ್ನದೇ ದಾಖಲೆ ಮುರಿದ ಆರೋನ್ ಫಿಂಚ್

    ಹರಾರೆ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ತಮ್ಮ ದಾಖಲೆಯನ್ನು ಆಸೀಸ್ ಆಟಗಾರ ಆರೋನ್ ಫಿಂಚ್ ಉತ್ತಮ ಪಡಿಸಿಕೊಂಡಿದ್ದಾರೆ.

    ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ತ್ರಿಕೋನ ಟೂರ್ನಿಯ ಮೂರನೇ ಪಂದ್ಯದಲ್ಲಿ ಸ್ಫೋಟಕ ಆಟ ಪ್ರರ್ಶಿಸಿದ 31 ವರ್ಷದ ಫಿಂಚ್ ಕೇವಲ 76 ಎಸೆಗಳಲ್ಲಿ 10 ಸಿಕ್ಸರ್, 16 ಬೌಂಡರಿಗಳ ನೆರವಿನಿಂದ 172 ರನ್ ಗಳಿಸುವ ಮೂಲಕ ದಾಖಲೆ ಬರೆದರು. ಆದರೆ ಪಂದ್ಯದ ಕೊನೆಯಲ್ಲಿ ಹಿಟ್ ವಿಕೆಟ್ ಆಗುವ ಮೂಲಕ ಔಟಾದರು.

    ವಿಶೇಷವಾಗಿ ಪಂದ್ಯದಲ್ಲಿ ಫಿಂಚ್ ಹಾಗೂ ಆರಂಭಿಕ ಆಟಗಾರ ಡಾರ್ಸಿ ಶಾರ್ಟ್ ಜೋಡಿ 19.2 ಓವರ್‍ಗಳಲ್ಲಿ 223 ರನ್ ಜೊತೆಯಾಟ ನೀಡುವ ಮೂಲಕ ಟಿ20 ಮಾದರಿಯಲ್ಲಿ ಆಸೀಸ್ ಪರ 200 ಪ್ಲಸ್ ರನ್ ಗಳಿಸಿದ ಜೋಡಿ ಎಂಬ ಇತಿಹಾಸ ಸೃಷ್ಟಿಸಿದರು. ಡಾರ್ಸಿ ಶಾರ್ಟ್ 42 ಎಸೆತಗಳಲ್ಲಿ 46 ಗಳಿಸಿ ಫಿಂಚ್ ಗೆ ಸಾಥ್ ನೀಡಿದರು.

    ಟಿ20 ಮಾದರಿಯಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರಲ್ಲಿ ಫಿಂಚ್ ಮೊದಲ ಸ್ಥಾನದಲ್ಲಿದ್ದರು. 2013 ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಪಂದ್ಯದಲ್ಲಿ ಫಿಂಚ್ 156 ಗಳಿಸಿ ದಾಖಲೆ ಬರೆದಿದ್ದರು. ಅಂತಿಮವಾಗಿ 20 ಓವರ್ ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡ ಆಸೀಸ್ 229 ಗಳಿಸಿತ್ತು. ಆಸೀಸ್ ಬೃಹತ್ ಮೊತ್ತ ಬೆನ್ನತ್ತಿದ್ದ ಜಿಂಬಾಬ್ವೆ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿ ಸೋಲುಂಡಿತು.

    ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಗರಿಷ್ಠ ವೈಯಕ್ತಿಕ ಮೊತ್ತಗಳಿಸಿದ ಆಟಗಾರ ಪಟ್ಟಿಯಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ (ಅಜೇಯ 145 ರನ್), ಎವಿನ್ ಲೆವಿಸ್ (ಅಜೇಯ 125 ರನ್), ಶೇನ್ ವಾಟ್ಸನ್ (ಅಜೇಯ 124 ರನ್) ಗಳಿಸಿ ಕ್ರಮವಾಗಿ 3, 4, 5ನೇ ಸ್ಥಾನ ಪಡೆದಿದ್ದಾರೆ.

  • ವಿಶಿಷ್ಟ ಚೇತನ ಮಕ್ಕಳೊಂದಿಗೆ ಯೋಗ ದಿನಾಚರಣೆ ಆಚರಿಸಿದ ಮ್ಯಾಥ್ಯೂ ಹೇಡನ್

    ವಿಶಿಷ್ಟ ಚೇತನ ಮಕ್ಕಳೊಂದಿಗೆ ಯೋಗ ದಿನಾಚರಣೆ ಆಚರಿಸಿದ ಮ್ಯಾಥ್ಯೂ ಹೇಡನ್

    ಬೆಂಗಳೂರು: ವಿಶ್ವ ಯೋಗ ದಿನಾಚರಣೆ ವಿಶೇಷ ಆಚರಣೆಯ ಅಂಗವಾಗಿ ಅಸೀಸ್ ತಂಡದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಭಾನುವಾರ ನಗರದಲ್ಲಿ ವಿಶಿಷ್ಟ ಚೇತನ ಮಕ್ಕಳೊಂದಿಗೆ ಯೋಗ ದಿನಾಚರಣೆ ಆಚರಿಸಿದರು.

    ನಾಗವಾರದ ಮ್ಯಾನ್ಫೂಕನ್ವೆಕ್ಷನ್ ಸೆಂಟರ್ ನಲ್ಲಿ ಅಕ್ಷರ ಯೋಗ ಟೀಂ ನಿಂದ ಅಂಗವಿಕಲ ಮಕ್ಕಳ ಜತೆ ನಡೆಯುತ್ತಿರುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಮಾತನಾಡಿ, ಯೋಗ ಎನ್ನುವುದು ಒಂದು ಪಾಸಿಟಿವ್ ಎನರ್ಜಿ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ತುಂಬ ಖುಷಿ ಕೊಟ್ಟಿದೆ. ಮಕ್ಕಳ ಜತೆ ಯೋಗ ಮಾಡಿದ್ದು ಸಂತಸ ತಂದಿದೆ ಎಂದು ಹೇಳಿದರು.

    ಯೋಗ ಕಾರ್ಯಕ್ರಮದಲ್ಲಿ ನಟಿ ಸಂಜನಾ ಗರ್ಲಾನಿ, ಆರ್ ವಿ ದೇವರಾಜ್ ಪತ್ನಿ ಮಂಜುಳಾ ದೇವರಾಜ್ ಮತ್ತಿತರರು ಭಾಗವಹಿಸಿದ್ದರು. ಸಾವಿರಾರು ಅಂಗವಿಕಲ ಮಕ್ಕಳು ಪಾಲ್ಗೊಂಡಿದ್ದರು.

  • ಮತ್ತೆ ಮೈದಾನಕ್ಕಿಳಿಯಲಿದ್ದಾರೆ ಬ್ಯಾನ್‍ಕ್ರಾಫ್ಟ್, ಡೇವಿಡ್ ವಾರ್ನರ್

    ಮತ್ತೆ ಮೈದಾನಕ್ಕಿಳಿಯಲಿದ್ದಾರೆ ಬ್ಯಾನ್‍ಕ್ರಾಫ್ಟ್, ಡೇವಿಡ್ ವಾರ್ನರ್

    ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ಒಂದು ವರ್ಷ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‍ಮನ್ ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾನ್ ಕ್ರಾಫ್ಟ್ ಮತ್ತೆ ಮೈದಾನಕ್ಕಿಳಿಯಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಜುಲೈನಲ್ಲಿ ನಡೆಯಲಿರುವ ಸೀಮಿತ ಓವರ್‍ಗಳ ಪಂದ್ಯದಲ್ಲಿ ಇಬ್ಬರೂ ಮತ್ತೆ ವೃತ್ತಿಪರ ಕ್ರಿಕೆಟ್‍ಗೆ ಮರಳಲಿದ್ದಾರೆ.

    ಕಳೆದ ಮಾರ್ಚ್‍ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ವಾರ್ನರ್ ಒಂದು ವರ್ಷ ಮತ್ತು ಬ್ಯಾನ್ ಕ್ರಾಫ್ಟ್ 9 ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ನಿಷೇಧಕ್ಕೊಳಗಾಗಿದ್ದರು. ಇಬ್ಬರ ನಿಷೇಧದ ಅವಧಿ ಇನ್ನೂ ಮುಗಿದಿಲ್ಲವಾದರೂ, ಕ್ರಿಕೆಟ್ ಆಸ್ಟ್ರೇಲಿಯಾ, ಇಬ್ಬರು ಆಟಗಾರರಿಗೂ ಕ್ಲಬ್ ಮಟ್ಟದ ಮತ್ತು ವಿದೇಶಗಳಲ್ಲಿ ದೇಶೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ.

    ವೃತ್ತಿಪರ ಕ್ರಿಕೆಟ್‍ಗೆ ಮರಳಲು ಕಾಯುತ್ತಿರುವ ವಾರ್ನರ್ ಹಾಗೂ ಬ್ಯಾನ್ ಕ್ರಾಫ್ಟ್‍ಗೆ ಕ್ರಿಕೆಟ್ ಆಸ್ಟ್ರೇಲಿಯಾದ ನಿರ್ಧಾರ ಮರುಜೀವ ನೀಡಿದಂತಾಗಿದೆ. ಉತ್ತರ ಆಸ್ಟ್ರೇಲಿಯಾದ ಡಾರ್ವಿನ್‍ನಲ್ಲಿ ಟಿ20 ಮತ್ತು ಏಕದಿನ ಟೂರ್ನಿ ನಡೆಯಲಿದ್ದು, ಇದರಲ್ಲಿ ಡೆಸರ್ಟ್ ಬ್ಲೇಜ್, ಸಿಟಿ ಸೈಕ್ಲೋನ್ಸ್, ನಾರ್ತರ್ನ್ ಟೈಡ್ ಮತ್ತು ಸೌತರ್ನ್ ಸ್ಟೋರ್ಮ್ ಫ್ರಾಂಚೈಸಿಗಳು ಪಾಲ್ಗೊಳ್ಳಲಿವೆ. ಬ್ಯಾನ್ ಕ್ರಾಫ್ಟ್ ಪೂರ್ಣಾವಾಧಿಗೆ ಟೂರ್ನಿಯಲ್ಲಿ ಆಡಲಿದ್ದು, ಡೇವಿಡ್ ವಾರ್ನರ್ ಜುಲೈ 21 ಮತ್ತು 22ರಂದು ನಡೆಯಲಿರುವ ಎರಡು ಏಕದಿನ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ.  ಇದನ್ನು ಓದಿ:  ಬಾಲ್ ಟ್ಯಾಂಪರಿಂಗ್ ಬಳಿಕ ಮಗುವನ್ನು ಕಳೆದುಕೊಂಡ ವಾರ್ನರ್ ದಂಪತಿ

    ಡಾರ್ವಿನ್ ನಲ್ಲಿ ನಡೆಯಲಿರುವ ಸ್ಟ್ರೈಕ್ ಲೀಗ್ ನಲ್ಲಿ ಪಾಲ್ಗೊಳ್ಳುವ ಮೂಲಕ ಕ್ಯಾಮರೂನ್ ಮತ್ತು ವಾರ್ನರ್ ನಮ್ಮನ್ನು ಮತ್ತೆ ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಲು ನಮಗೆ ಅತೀವ ಸಂತೋಷವಾಗುತ್ತಿದೆ. ಇಬ್ಬರು ಅನುಭವಿ ಆಟಗಾರರ ಲಭ್ಯತೆ ಸ್ಥಳೀಯ ಆಟಗಾರರಿಗೆ ನೆರವಾಗಲಿದೆ ಎಂದು ಎಂದು ನಾರ್ತರ್ನ್ ಟೆರಿಟರಿ ಕ್ರಿಕೆಟ್ ನ ಮುಖ್ಯಸ್ಥ ಜೋಯಲ್ ಮೋರಿಸನ್ ಪ್ರತಿಕ್ರಿಯಿಸಿದ್ದಾರೆ.

    ಸೆಪ್ಟಂಬರ್ ಬಳಿಕ ಡೇವಿಡ್ ವಾರ್ನರ್, ಸಿಡ್ನಿ ಕ್ಲಬ್ ರ್ಯಾಂಡ್ವಿಕ್ ಪೀಟರ್‍ಶಾಮ್ ಕ್ಲಬ್ ಪರ ಆಡಲಿದ್ದು, ಈಗಾಗಲೇ ಕ್ಲಬ್‍ನ ತರಬೇತಿ ಶಿಬಿರಗಳಲ್ಲಿ ವಾರ್ನರ್ ಬೆವರು ಹರಿಸುತ್ತಿದ್ದಾರೆ.

  • ಜಸ್ಟಿನ್ ಲ್ಯಾಂಗರ್ ಆಸ್ಟ್ರೇಲಿಯಾದ ನೂತನ ಕೋಚ್

    ಜಸ್ಟಿನ್ ಲ್ಯಾಂಗರ್ ಆಸ್ಟ್ರೇಲಿಯಾದ ನೂತನ ಕೋಚ್

    ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಮಾಜಿ ಟೆಸ್ಟ್ ಓಪನರ್ ಜಸ್ಟಿನ್ ಲ್ಯಾಂಗರ್ ನೇಮಕಗೊಂಡಿದ್ದಾರೆ.

    ಸದ್ಯ ವೆಸ್ಟರ್ನ್ ಆಸ್ಟ್ರೇಲಿಯಾ ಹಾಗೂ ಪರ್ತ್ ಸ್ಕಾಚರ್ಸ್ ತಂಡದ ಕೋಚ್ ಕಾರ್ಯನಿರ್ವಹಿಸುತ್ತಿರುವ 47 ವರ್ಷದ ಜಸ್ಟಿನ್ ಲ್ಯಾಂಗರ್, ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಮುಂದಿನ ನಾಲ್ಕು ವರ್ಷಗಳ ಅವಧಿಯ ಒಪ್ಪಂದಕ್ಕೆ ಸಹಿ ಹಾಕಿದ್ದು, ಮೇ 22ರಂದು ತಂಡವನ್ನು ಸೇರಿಕೊಳ್ಳಲಿದ್ದಾರೆ.

    ಕ್ರಿಕೆಟ್ ಲೋಕವನ್ನೇ ತಲ್ಲಣಗೊಳಿಸಿದ್ದ ಚೆಂಡು ವಿರೂಪಗೊಳಿಸಿದ್ದ ಪ್ರಕರಣದಲ್ಲಿ ನಿರಪರಾಧಿಯಾಗಿದ್ದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದ ಕೋಚ್ ಡ್ಯಾರೆನ್ ಲೆಹ್ಮನ್ ಜಾಗಕ್ಕೆ ಜಸ್ಟಿನ್ ಲ್ಯಾಂಗರ್‍ರನ್ನು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಆಯ್ಕೆಮಾಡಿದೆ. ಲ್ಯಾಂಗರ್ ಟೆಸ್ಟ್, ಏಕದಿನ ಹಾಗೂ ಟಿ-20 ಸೇರಿದಂತೆ ಮೂರು ಮಾದರಿಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಈ ಹಿಂದೆ ಲ್ಯಾಂಗರ್ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

    ಕೋಚ್ ಆಯ್ಕೆಯ ಕುರಿತು ಪ್ರತಿಕ್ರಿಯಿಸಿರುವ ಲ್ಯಾಂಗರ್, ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಅವಕಾಶ ದೊರೆತಿರುವುದು ನನ್ನ ಪಾಲಿಗೆ ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ. 1993ರಿಂದ 2007 ರವರೆಗೂ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರನಾಗಿದ್ದ ಲ್ಯಾಂಗರ್ 105 ಟೆಸ್ಟ್ ಪಂದ್ಯಗಳನ್ನಾಡಿದ್ದು, 23 ಶತಕಗಳು ಸೇರಿದಂತೆ 45.27 ಸರಾಸರಿಯಲ್ಲಿ 7,696 ರನ್‍ಗಳಿಸಿದ್ದಾರೆ. ಲ್ಯಾಂಗರ್ ಅವರ ಈ ನಾಲ್ಕು ವರ್ಷದ ಅವಧಿಯಲ್ಲಿ ಆಸ್ಟ್ರೇಲಿಯಾ ಪ್ರಮುಖವಾಗಿ ಎರಡು ಆಶಸ್ ಸರಣಿ ಹಾಗೂ ಟಿ-20 ವಿಶ್ವಕಪ್ ಟೂರ್ನಿಗಳಲ್ಲಿ ಪಾಲ್ಗೊಳ್ಳಲಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಜೇಮ್ಸ್ ಸದರ್ಲೆಂಡ್, ಜಸ್ಟಿನ್ ಲ್ಯಾಂಗರ್ ತಂಡವನ್ನು ಮುನ್ನಡೆಸಲು ಸೂಕ್ತ ವ್ಯಕ್ತಿ ಎಂದು ನಾವು ಬಲವಾಗಿ ನಂಬುತ್ತೇವೆ. ಅವರು ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುವ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    2013ರಲ್ಲಿ ಕೋಚ್ ಆಗಿ ನೇಮಗೊಂಡು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದ ಲೆಹ್ಮನ್ 2019ರ ಆಶಸ್ ಸರಣಿಯವರೆಗೂ ಕೋಚ್ ಆಗಿ ಮುಂದುವರೆಯಬೇಕಿತ್ತು. ಆದರೆ ಮಾರ್ಚ್‍ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟೆಸ್ಟ್‍ನಲ್ಲಿ ಚೆಂಡು ವಿರೂಪ ಪ್ರಕರಣದಿಂದಾಗಿ ಲೆಹ್ಮನ್ ಕಣ್ಣೀರ ವಿದಾಯ ಹೇಳಿದ್ದರು. ಇದೇ ವೇಳೆ ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಹಾಗೂ ಉಪನಾಯಕರಾಗಿದ್ದ ಡೇವಿಡ್ ವಾರ್ನರ್ ಒಂದು ವರ್ಷದ ನಿಷೇಧ ಶಿಕ್ಷೆಗೆ ಒಳಗಾಗಿದ್ದು, ಈ ಕಾರಣದಿಂದಾಗಿ ಪ್ರಸಕ್ತ ಐಪಿಲ್‍ನಿಂದಲೂ ಹೊರಗುಳಿದಿದ್ದಾರೆ. ಮತ್ತೊಬ್ಬ ಬ್ಯಾಟ್ಸ್‍ಮನ್ ಕ್ಯಾಮರೂನ್ ಬ್ಯಾನ್ ಕ್ರಿಫ್ಟ್ ರನ್ನು 9 ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ.

  • ಹುಟ್ಟುಹಬ್ಬದ ದಿನದಂದೇ ಆಸ್ಟ್ರೇಲಿಯಾ ಕ್ರಿಕೆಟ್‍ನಿಂದ ಸಚಿನ್‍ಗೆ ಅವಮಾನ!

    ಹುಟ್ಟುಹಬ್ಬದ ದಿನದಂದೇ ಆಸ್ಟ್ರೇಲಿಯಾ ಕ್ರಿಕೆಟ್‍ನಿಂದ ಸಚಿನ್‍ಗೆ ಅವಮಾನ!

    ಬೆಂಗಳೂರು: ಇಂದು 45ನೇ ಜನ್ಮ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಅವಮಾನ ಮಾಡಿದೆ ಎಂದು ಆರೋಪಿಸಿ ಸಚಿನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡುತ್ತಿದ್ದಾರೆ.

    ಏಪ್ರಿಲ್ 24 ಸಚಿನ್ ಮತ್ತು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಡೇಮಿಯನ್ ಫ್ಲೆಮಿಂಗ್ ಹುಟ್ಟುಹಬ್ಬ. ಹೀಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ 2000 ಇಸ್ವಿಯಲ್ಲಿ ಪರ್ಥ್ ನಲ್ಲಿ ನಡೆದ ಏಕದಿನ ಪಂದ್ಯದ ವೇಳೆ ಫ್ಲೆಮಿಂಗ್ ಬೌಲಿಂಗ್ ನಲ್ಲಿ ಸಚಿನ್ ಬೌಲ್ಡ್ ಆಗುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿದೆ. ಅಷ್ಟೇ ಅಲ್ಲದೇ ಈ ಟ್ವೀಟ್ ನಲ್ಲಿ ಫ್ಲೆಮಿಂಗ್ ಅವರಿಗೆ ಮಾತ್ರ ಹುಟ್ಟುಹಬ್ಬದ ಶುಭಾಶಯ ಎಂದು ಬರೆದುಕೊಂಡಿದೆ.

    ಈ ಟ್ವೀಟ್ ನೋಡಿದ ಭಾರತದ ಅಭಿಮಾನಿಗಳು ತರಾಟೆಗೆ ತೆಗೆದುಕೊಳ್ಳುತ್ತಿದ್ದು. ಆಸೀಸ್ ಆಟಗಾರರು ಕ್ರಿಕೆಟ್ ಪಂದ್ಯಗಳಿಂದ ಬ್ಯಾನ್ ಆದರೂ ಆಸ್ಟ್ರೇಲಿಯಾ ಇನ್ನೂ ಪಾಠ ಕಲಿತ್ತಿಲ್ಲ ಎನ್ನುವುದಕ್ಕೆ ಈ ವಿಡಿಯೋ ಟ್ವೀಟ್ ಸಾಕ್ಷಿ ಎಂದು ಬರೆದು ತಿರುಗೇಟು ನೀಡಿದ್ದಾರೆ.

    ಡೇಮಿಯನ್ ಫ್ಲೆಮಿಂಗ್ ಹುಟ್ಟುಹಬ್ಬ ಶುಭಾಶಯವನ್ನು ಹೇಳಲು ಸಚಿನ್ ಬೌಲ್ಡ್ ಆಗುತ್ತಿರುವ ವಿಡಿಯೋ ಬಳಸಿದ್ದು ಸರಿಯಲ್ಲ. ಬೇರೆ ಬ್ಯಾಟ್ಸ್ ಮನ್ ಬೌಲ್ಡ್ ಅಗುತ್ತಿರುವ ವಿಡಿಯೋ ಬಳಸಬಹುದಿತ್ತು. ಸಚಿನ್ ಹುಟ್ಟುಹಬ್ಬದ ದಿನ ಎಂದು ಗೊತ್ತಿದ್ದರೂ ಈ ವಿಡಿಯೋ ಪೋಸ್ಟ್ ಮಾಡುವ ಮೂಲಕ ಅವಮಾನ ಮಾಡಿದ್ದಿರಿ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.

    ಈ ವಿಡಿಯೋಗೆ ತಿರುಗೇಟು ಎನ್ನುವಂತೆ ಇನ್ನೊಬ್ಬರು, ಫ್ಲೆಮಿಂಗ್ ಬೌಲಿಂಗ್ ನಲ್ಲಿ ಸಚಿನ್ ಬೌಂಡರಿ ಬಾರಿಸುತ್ತಿರುವ ವಿಡಿಯೋವನ್ನು ಹಾಕಿ, ಸಚಿನ್ ಅವರಿಂದ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಫ್ಲೆಮಿಂಗ್ ಅವರಿಗೆ ಭರ್ಜರಿ ಗಿಫ್ಟ್ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಏಕದಿನ ಮತ್ತು ಟೆಸ್ಟ್ ನಲ್ಲಿ ಒಟ್ಟು 7 ಬಾರಿ ಸಚಿನ್ ರನ್ನು ಫ್ಲೆಮಿಂಗ್ ಔಟ್ ಮಾಡಿದ್ದಾರೆ. ಬ್ರೇಟ್ ಲೀ 14, ಮೆಗ್ರಾತ್ 13, ಗಿಲ್ಲೆಸ್ಪಿ 8 ಬಾರಿ ಸಚಿನ್ ತೆಂಡೂಲ್ಕರ್ ಅವರನ್ನು ಔಟ್ ಮಾಡಿದ್ದಾರೆ.

    48ನೇ ಹುಟ್ಟುಹಬ್ಬವನ್ನು ಫ್ಲೆಮಿಂಗ್ ಭಾರತದಲ್ಲಿ ಆಚರಿಸಿಕೊಂಡಿದ್ದು, ಸದ್ಯ ಐಪಿಎಲ್ ವೀಕ್ಷಣೆ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    20 ಟೆಸ್ಟ್ ಪಂದ್ಯ ಆಡಿರುವ ಫ್ಲೆಮಿಂಗ್ 75 ವಿಕೆಟ್ ಪಡೆದಿದ್ದು, 88 ಏಕದಿನ ಪಂದ್ಯವಾಡಿ 134 ವಿಕೆಟ್ ಪಡೆದಿದ್ದಾರೆ. 1994ರಲ್ಲಿ ಪಾಕ್ ವಿರುದ್ಧ ಟೆಸ್ಟ್ ಕ್ರಿಕೆಟಿಗೆ ಎಂಟ್ರಿಕೊಟ್ಟಿದ್ದ ಫ್ಲೆಮಿಂಗ್ 2001ರಲ್ಲಿ ಫೆಬ್ರವರಿಯಲ್ಲಿ ಭಾರತದ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು. 1994ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯ ಆಡಿದ್ದ ಫ್ಲೆಮಿಂಗ್ 2001ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ್ದರು.

    A Classic cover drive as Birthday gift from one Birthday boy @sachin_rt to another Birthday boy @bowlologist! ???????? pic.twitter.com/TxF1v11UIr

    — शशांक (@iShhhshank) April 24, 2018

  • ಕಾಮನ್‍ವೆಲ್ತ್ 2018: ಪಿವಿ ಸಿಂಧು ಮಣಿಸಿ ಚಿನ್ನ ಗೆದ್ದ ಸೈನಾ – ಭಾರತದ ಪರ ವಿಶೇಷ ದಾಖಲೆ

    ಕಾಮನ್‍ವೆಲ್ತ್ 2018: ಪಿವಿ ಸಿಂಧು ಮಣಿಸಿ ಚಿನ್ನ ಗೆದ್ದ ಸೈನಾ – ಭಾರತದ ಪರ ವಿಶೇಷ ದಾಖಲೆ

    ಗೋಲ್ಡ್ ಕೋಸ್ಟ್ : ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2018 ರ ಕಾಮನ್ ವೆಲ್ತ್ ಗೆಮ್ಸ್ ನ ಬ್ಯಾಡ್ಮಿಂಟನ್ ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ವಿಶ್ವ ಮೂರನೇ ಶ್ರೇಯಾಂಕಿತ ಆಟಗಾರ್ತಿ ಸೈನಾ ನೆಹ್ವಾಲ್, ಪಿವಿ ಸಿಂಧು ವಿರುದ್ಧ ಮೇಲುಗೈ ಸಾಧಿಸಿದ್ದಾರೆ.

    ಭಾರತದ ಸ್ಟಾರ್ ಆಟಗಾರರಾದ ಸಿಂಧು ಹಾಗೂ ಸೈನಾ ನಡುವೆ ನಡೆದ ರೋಚಕ ಹಣಾಹಣಿಯಲ್ಲಿ ಸೈನಾ ಚಿನ್ನಕ್ಕೆ ಮುತ್ತಿಟ್ಟರು. ಈ ಮೂಲಕ ಭಾರತಕ್ಕೆ ಚಿನ್ನ ಪದಕ ತಂದುಕೊಟ್ಟರು. ಅಲ್ಲದೇ ವಯಕ್ತಿಕವಾಗಿ ಕಾಮನ್ ವೆಲ್ತ್ ಗೇಮ್ಸ್ ಬ್ಯಾಡ್ಮಿಂಟನ್ ನಲ್ಲಿ ಎರಡನೇ ಚಿನ್ನ ಗೆದ್ದ ದಾಖಲೆ ಮಾಡಿದರು.

    ಸಿಂಧುರನ್ನು 21-18, 23-21 ನೇರ ಸೆಟ್‍ಗಳಲ್ಲಿ ಮಣಿಸಿವ ಮೂಲಕ ಸೈನಾ ಗೆಲುವು ಪಡೆದರು. ಅನುಭವದ ಬಲವನ್ನು ಉಪಯೋಗಿಸಿಕೊಂಡ ಸೈನಾ ಆರಂಭದಿಂದಲೂ ಪಂದ್ಯದಲ್ಲಿ ಸಿಂಧು ಎಲ್ಲಿಯೂ ಮುನ್ನಡೆ ಸಾಧಿಸುದಂತೆ ಆಕ್ರಮಣಕಾರಿಯಾಗಿ ಆಟವಾಡಿದರು. ಸೈನಾ ನೆಹ್ವಾಲ್ ಆಕ್ರಮಣಕಾರಿ ಆಟಕ್ಕೆ ತಿರುಗೇಟು ನೀಡಲು ಸಿಂಧು ಯತ್ನಿಸಿದರು ಗೆಲುವು ಸಾಧಿಸಲು ವಿಫಲವಾದರು.

    ಸೈನಾ ಅವರ ಚಿನ್ನ, ಸಿಂಧು ಬೆಳ್ಳಿ ಪದಕದೊಂದಿಗೆ ಭಾರತ ಕ್ರೀಡಾಪಟುಗಳು ಈ ಗೇಮ್ಸ್ ನಲ್ಲಿ ಒಟ್ಟು 62 ಪದಕಗಳನ್ನು ಗೆದ್ದಿದ್ದು, ಪದಕಗಳ ಭೇಟೆಯನ್ನು ಮುಂದುವರೆಸಿದ್ದಾರೆ.

  • ಕಾಮನ್ ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಭಾರತದ ಪರ ದಾಖಲೆ ಬರೆದ 15 ವರ್ಷದ ಅನೀಶ್

    ಕಾಮನ್ ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಭಾರತದ ಪರ ದಾಖಲೆ ಬರೆದ 15 ವರ್ಷದ ಅನೀಶ್

    ಗೋಲ್ಡ್ ಕೋಸ್ಟ್ : ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 15 ವರ್ಷದ ಶೂಟರ್ ಅನೀಶ್ ಬನ್ವಾಲಾ ಚಿನ್ನ ಗೆಲ್ಲುವ ಮೂಲಕ ಭಾರತ ಪರ ಚಿನ್ನ ಪದಕ ಗೆದ್ದ ಕಿರಿಯ ಎಂಬ ದಾಖಲೆ ನಿರ್ಮಿಸಿದ್ದಾರೆ.

    25 ಎಮ್ ರ‍್ಯಾಪಿಡ್  ಫೈರ್ ಪಿಸ್ತೂಲ್ ನಲ್ಲಿ ಅನೀಶ್ ಚಿನ್ನವನ್ನು ಗೆದ್ದುಕೊಂಡಿದ್ದು, ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು 16 ನೇ ಚಿನ್ನದ ಪದಕವಾಗಿದೆ. ತಮ್ಮ ಮೊದಲ ಕಾಮನ್ ವೆಲ್ತ್ ಗೇಮ್ಸ್ ಪ್ರಯತ್ನದಲೇ ಚಿನ್ನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದರೊಂದಿಗೆ ಶೂಟಿಂಗ್‍ನ ಮಹಿಳೆಯರ 50 ಮೀಟರ್ ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಭಾರತದ ತೇಜಸ್ವಿನಿ ಬೆಳ್ಳಿ ಪದಕ ಪಡೆದಿದ್ದಾರೆ.

    ಪದಕ ಪಟ್ಟಿಯಲ್ಲಿ ಭಾರತ ಒಟ್ಟು 16 ಚಿನ್ನ, 8 ಬೆಳ್ಳಿ, 10 ಕಂಚಿನ ಪದಕಗಳೊಂದಿಗೆ 3ನೇ ಸ್ಥಾನದಲ್ಲಿ ಮುಂದುವರಿದಿದೆ. ಭಾರತ ಈ ಹಿಂದೆ ಕಾ 2002 ಮ್ಯಾಂಚೆಸ್ಟರ್, 2006 ಮೆಲ್ಬರ್ನ್ ಹಾಗೂ 2010ರ ದೆಹಲಿ ಗೇಮ್ಸ್ ನಲ್ಲಿ ಕ್ರಮವಾಗಿ 30, 22, 38 ಚಿನ್ನದ ಪದಕಗಳನ್ನು ಜಯಿಸಿತ್ತು.

  • ಡೈವ್ ಮಾಡಿ ಸೂಪರ್ ಕ್ಯಾಚ್ – ಆಫ್ರಿಕಾದ ಡೀನ್ ಎಲ್ಗನ್ ವಿಡಿಯೋ ವೈರಲ್

    ಡೈವ್ ಮಾಡಿ ಸೂಪರ್ ಕ್ಯಾಚ್ – ಆಫ್ರಿಕಾದ ಡೀನ್ ಎಲ್ಗನ್ ವಿಡಿಯೋ ವೈರಲ್

    ಜೋಹನ್ಸ್ ಬರ್ಗ್: ಕ್ರಿಕೆಟ್ ನಲ್ಲಿ ಹಲವರು ಕ್ಯಾಚ್‍ಗಳನ್ನು ನೀವು ನೋಡಿರುತ್ತೀರಿ. ಕೆಲವು ಸಾಮಾನ್ಯ ಕ್ಯಾಚ್ ಗಳಾದರೆ ಕೆಲವು ಮರೆಯಲಾಗದಂತಹವು. ಇಂತಹದ್ದೇ ಸರ್ವಶ್ರೇಷ್ಠ ಎನ್ನಬಹುದಾದ ಕ್ಯಾಚ್ ಆಸೀಸ್ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ದಾಖಲಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜೋಹನ್ಸ್ ಬರ್ಗ್ ನಡೆಯುತ್ತಿರುವ ನಾಲ್ಕು ಮತ್ತು ಕೊನೆಯ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ – ದಕ್ಷಿಣ ಆಫ್ರಿಕಾದ ನಡುವಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್ ಪಡೆದ ಕ್ಯಾಚ್ ಇದೀಗ ಕ್ರಿಕೆಟ್ ಪ್ರೇಮಿಗಳನ್ನು ನಿಬ್ಬೆರಗಾಗುವಂತೆ ಮಾಡಿದೆ.

    ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ 488 ರನ್ ಗಳಿದ ವೇಳೆ ಅಲೌಟ್ ಆಗಿತ್ತು, ಬಳಿಕ ಆಸ್ಟ್ರೇಲಿಯಾ 288 ರನ್ ಗಳಿಗೆ 9 ವಿಕೆಟ್ ಕಳೆದು ಕೊಂಡಿತ್ತು. ಈ ವೇಳೆ ಅಸೀಸ್ ನಾಯಕ ಟೀಮ್ ಪೈನೆ (62), ರಬಡ ಬೌಲಿಂಗ್ ವೇಳೆ ಸಿಡಿಸಿದ ಚೆಂಡನ್ನು ಎಲ್ಗರ್ ಚಿರತೆಯಂತೆ ಜಂಪ್ ಮಾಡಿ ಕ್ಯಾಚ್ ಪಡೆದರು.

    ಇದೇ ವೇಳೆ ವಿಕ್ಷಕ ವಿವರಣೆ ನೀಡುತ್ತಿದ್ದ ಆಫ್ರಿಕಾ ತಂಡದ ಮಾಜಿ ಸ್ಮಿತ್ ಸಹ ಅಚ್ಚರಿಗೊಂಡರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

    https://www.youtube.com/watch?v=iM_dQb-q_9U&utm_source=inshorts&utm_medium=referral&utm_campaign=fullarticle

  • ವಿಡಿಯೋ: ಮಗನ ಕ್ರಿಕೆಟ್ ಕಿಟ್ ಅನ್ನು ಕಸದ ತೊಟ್ಟಿಗೆ ಎಸೆದ ಸ್ಮಿತ್ ತಂದೆ

    ವಿಡಿಯೋ: ಮಗನ ಕ್ರಿಕೆಟ್ ಕಿಟ್ ಅನ್ನು ಕಸದ ತೊಟ್ಟಿಗೆ ಎಸೆದ ಸ್ಮಿತ್ ತಂದೆ

    ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಒಂದು ವರ್ಷ ನಿಷೇಧಕ್ಕೆ ಒಳಗಾದ ಆಸೀಸ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಕ್ರಿಕೆಟ್ ಕಿಟ್ ಅನ್ನು ಅವರ ತಂದೆ ಕಸದ ತೊಟ್ಟಿಗೆ ಎಸೆದಿದ್ದಾರೆ.

    ಸ್ಮಿತ್ ಅವರ ತಂದೆ ಪೀಟರ್ ಸ್ಮಿತ್ ಶನಿವಾರ ಕ್ರಿಕೆಟ್ ಕಿಟ್ ಅನ್ನು ಕಸದ ತೊಟ್ಟಿಗೆ ಎಸೆಯುತ್ತಿರುವ ವಿಡಿಯೋವನ್ನು ಆಸೀಸ್ ಮಾಧ್ಯಮವೊಂದು ವರದಿ ಮಾಡಿದೆ. ಈ ವೇಳೆ ಅವರು ತನ್ನ ಮಗ ಕೆಲ ಸಮಯದ ಬಳಿಕ ಸರಿ ಹೋಗುತ್ತಾನೆ ಎಂದು ಹೇಳಿದ್ದಾರೆ.

    https://twitter.com/DesiStuffs/status/980098952870506496?

    ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಟೀಕೆಗೆ ಗುರಿಯಾಗಿದ್ದ ಸ್ಮಿತ್ ದಕ್ಷಿಣ ಆಫ್ರಿಕಾದಿಂದ ಮರಳಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಅಭಿಮಾನಿಗಳ, ಪೋಷಕರ ಕ್ಷಮೆ ಕೇಳಿದ್ದರು. ಅಲ್ಲದೇ ತಮ್ಮ ನಾಯಕತ್ವದ ವಿಫಲತೆಯಿಂದ ಕೃತ್ಯ ನಡೆದಿದ್ದು, ನನ್ನಿಂದಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತು ನನ್ನ ಪೋಷಕರಿಗೆ ತುಂಬಾ ನೋವಾಗಿದೆ. ಇದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ ಎಂದು ಕಣ್ಣೀರಿಟ್ಟಿದ್ದರು. ಮೂಲಗಳ ಪ್ರಕಾರ ಕೆಲ ದಿನಗಳಿಂದ ಪ್ರಕರಣದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ನೊಂದ ಸ್ಮಿತ್ ದುಬೈಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ:  ಆಸ್ಟ್ರೇಲಿಯಾ ಪರ ಮತ್ತೆ ಕ್ರಿಕೆಟ್ ಆಡಲ್ಲ: ಕ್ಷಮೆಯಾಚಿಸಿ ಕಣ್ಣೀರಿಟ್ಟ ವಾರ್ನರ್

    ಆಸೀಸ್ ಆಟಗಾರರು ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಪ್ರಮುಖ ಸಂಸ್ಥೆಗಳ ಪ್ರಯೋಜಕತ್ವವನ್ನು ಕಳೆದುಕೊಂಡಿತ್ತು. ಇದರೊಂದಿಗೆ ಕಳ್ಳಾಟದಲ್ಲಿ ಭಾಗಿಯಾಗಿದ್ದ ವಾರ್ನರ್, ಸ್ಮಿತ್, ಬ್ಯಾನ್ ಕ್ರಾಫ್ಟ್ ರೊಂದಿಗೆ ಖಾಸಗಿ ಸಂಸ್ಥೆಗಳು ಮಾಡಿಕೊಂಡಿದ್ದ ವೈಯಕ್ತಿಕ ಒಪ್ಪಂದವನ್ನು ಮುರಿದುಕೊಂಡಿದ್ದವು. ಇದರಿಂದ ಆಸೀಸ್ ಮಂಡಳಿ ಹಾಗೂ ಆಟಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೇ ಎಂದು ಮಾಧ್ಯಮಗಳು ವರದಿ ಮಾಡಿದ್ದವು.  ಇದನ್ನೂ ಓದಿ: ಚೆಂಡು ವಿರೂಪಗೊಳಿಸುತ್ತಿರೋ ಮತ್ತೊಬ್ಬ ಆಸೀಸ್ ಆಟಗಾರನ ವಿಡಿಯೋ ವೈರಲ್