Tag: australia

  • ವಿಕೆಟ್ ಪಡೆದ ಕೊಹ್ಲಿ ಸಂಭ್ರಮಿಸಿದ್ದು ಹೀಗೆ – ವಿಡಿಯೋ

    ವಿಕೆಟ್ ಪಡೆದ ಕೊಹ್ಲಿ ಸಂಭ್ರಮಿಸಿದ್ದು ಹೀಗೆ – ವಿಡಿಯೋ

    ಸಿಡ್ನಿ: ಬ್ಯಾಂಟಿಂಗ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಇಲೆವೆನ್ ತಂಡದ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್ ಮಾಡಿ ವಿಕೆಟ್ ಪಡೆದು ಸಂಭ್ರಮಿಸಿದ್ದಾರೆ.

    ಪಂದ್ಯದ ಮೂರನೇ ದಿನದಾಟದ ವೇಳೆ 2 ಓವರ್ ಬೌಲ್ ಮಾಡಿದ್ದ ಕೊಹ್ಲಿ, ಅಂತಿಮ ದಿನದಂದು ಮತ್ತೆ ಬೌಲ್ ಹಿಡಿದು ನಿಂತಿದ್ದರು. ಪಂದ್ಯದಲ್ಲಿ ಒಟ್ಟು 7 ಓವರ್ ಎಸೆದ ಕೊಹ್ಲಿ ಅಂತಿಮವಾಗಿ ವಿಕೆಟ್ ಪಡೆಯುವ ಮೂಲಕ ಸಂಭ್ರಮಿಸಿದರು. ಆಸೀಸ್ ತಂಡದ ಪರ ಶತಕ ಸಿಡಿಸಿದ್ದ ವಿಕೆಟ್ ಕೀಪರ್ ಹ್ಯಾರಿ ನೀಲ್ಸನ್ ವಿಕೆಟ್ ಪಡೆದರು. ವಿಕೆಟ್ ಪಡೆಯುತ್ತಿದಂತೆ ಅಚ್ಚರಿ ವ್ಯಕ್ತಪಡಿಸಿದ ಕೊಹ್ಲಿ ಕ್ಷಣ ಸಮಯದ ಬಳಿಕ ಆಟಗಾರರತ್ತ ನೋಡಿ ಸಂಭ್ರಮಿಸಿದರು.

    ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಇದುವರೆಗೂ 8 ವಿಕೆಟ್ ಪಡೆದಿದ್ದು, ವೃತ್ತಿ ಜೀವನದ ಆರಂಭದಲ್ಲಿ ಅರೆ ಕಾಲಿಕ ಸ್ಪಿನ್ನರ್ ಆಗಿ ಬೌಲಿಂಗ್ ಮಾಡುತ್ತಿದ್ದ ಕೊಹ್ಲಿ ಬಳಿಕ ಬ್ಯಾಟಿಂಗ್ ನತ್ತ ಸಂಪೂರ್ಣ ಗಮನ ಹರಿಸಿದ್ದರು. 2016 ರಲ್ಲಿ ಟಿ20 ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬೌಲ್ ಮಾಡಿದ್ದ ಕೊಹ್ಲಿ, ಜಾನ್ಸನ್ ಚಾರ್ಲ್ಸ್ ವಿಕೆಟ್ ಪಡೆದಿದ್ದರು.

    ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ್ದ 358 ರನ್ ಗಳ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಆಸೀಸ್ ಇಲೆವೆನ್ ತಂಡ 544 ರನ್‍ಗಳ ಬೃಹತ್ ಮೊತ್ತ ಪೇರಿಸಿ ಮೊದಲ ಇನ್ನಿಂಗ್ಸ್ ನಲ್ಲಿ 183 ರನ್‍ಗಳ ಬೃಹತ್ ಮುನ್ನಡೆ ಪಡೆಯಿತು.

    https://twitter.com/strangerr_18/status/1068726737461116928

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಆಸೀಸ್ ಮೊದಲ ಟೆಸ್ಟ್ ಮುನ್ನವೇ ಟೀಂ ಇಂಡಿಯಾಗೆ ಆಘಾತ

    ಆಸೀಸ್ ಮೊದಲ ಟೆಸ್ಟ್ ಮುನ್ನವೇ ಟೀಂ ಇಂಡಿಯಾಗೆ ಆಘಾತ

    ಸಿಡ್ನಿ: ಆಸ್ಟೇಲಿಯಾ ವಿರುದ್ಧದ ಮೊದಲ ಟೆಸ್ಟ್ ಆರಂಭಕ್ಕೆ 6 ದಿನಗಳು ಬಾಕಿ ಇರುವ ಸಮಯದಲ್ಲೇ ಟೀಂ ಇಂಡಿಯಾಗೆ ಮೊದಲ ಅಘಾತ ಎದುರಾಗಿದ್ದು, ತಂಡ ಯುವ ಬ್ಯಾಟ್ಸ್‍ಮನ್ ಪೃಥ್ವಿ ಶಾ ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.

    ಟೀಂ ಇಂಡಿಯಾ ಆಸೀಸ್ ವಿರುದ್ಧ ಅಭ್ಯಾಸ ಪಂದ್ಯ ಆಡುತ್ತಿದ್ದು, ಈ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಪೃಥ್ವಿ ಶಾ ಕ್ಯಾಚ್ ಪಡೆಯುವ ಸಂರ್ಭದಲ್ಲಿ ಗಾಯಗೊಂಡಿದ್ದು, ಅಭ್ಯಾಸ ಪಂದ್ಯದ ಮೂರನೇ ದಿನದಾಟದ ವೇಳೆ ಆಸೀಸ್ ಆರಂಭಿಕ ಬ್ಯಾಟ್ಸ್‍ಮನ್ ಮ್ಯಾಕ್ಸ್ ಬ್ರಯಾಂಟ್ ಸಿಡಿಸಿದ ಚೆಂಡನ್ನು ಕ್ಯಾಚ್ ಪಡೆಯಲು ಪೃಥ್ವಿ ಶಾ ಪ್ರಯತ್ನಿಸಿದರು. ಆದರೆ ಈ ವೇಳೆ ಪೃಥ್ವಿ ಅವರ ಬಲಗಾಲಿನ ಪಾದ 90 ಡಿಗ್ರಿ ಸ್ಥಿತಿಯಲ್ಲಿ ತಿರುಗಿ ನೆಲಕ್ಕೆ ಬಿದ್ದಿದ್ದಾರೆ. ಇದರಿಂದ ಹೆಚ್ಚು ನೋವು ಅನುಭವಿಸಿದ ಪೃಥ್ವಿ ಶಾ ರನ್ನು ಟೀಂ ಇಂಡಿಯಾ ವೈದ್ಯಕೀಯ ಸಿಬ್ಬಂದಿ ಹೊತ್ತು ಮೈದಾನದಿಂದ ಹೊತ್ತು ಸಾಗಿಸಿದರು.

    ಈ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ, ಆಡಿಲೇಡ್‍ನಲ್ಲಿ ಡಿಸೆಂಬರ್ 6 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾ ಯುವ ಆಟಗಾರ ಪೃಥ್ವಿ ಶಾ ಅಲಭ್ಯರಾಗಿದ್ದಾರೆ ಎಂದು ಬರೆದುಕೊಂಡಿದೆ. ಅಲ್ಲದೇ ಪೃಥ್ವಿ ಶಾ ಅವರ ಕಾಲಿಗೆ ಇಂದು ಬೆಳಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಅವರಿಗೆ ಚಿಕಿತ್ಸೆ ಹಾಗೂ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧ ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಪೃಥ್ವಿ ಶಾ, ಆಸೀಸ್ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದ ಇನ್ನಿಂಗ್ಸ್‍ನಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದರು. ಸದ್ಯ ಪೃಥ್ವಿ ಶಾರ ಗೈರು ಹಾಜರಿಯಿಂದ ಟೀಂ ಇಂಡಿಯಾ ಆಯ್ಕೆ ಸಮಿತಿಗೆ ತಲೆನೋವು ಉಂಟಾಗಿದ್ದು, ಮೊದಲ ಟೆಸ್ಟ್ ಆರಂಭಿಕ ಜೋಡಿಯಾಗಿ ಮುರಳಿ ವಿಜಯ್ ಅಥವಾ ಕೆಎಲ್ ರಾಹುಲ್ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

    2 ಟೆಸ್ಟ್ ಪಂದ್ಯದ ಮೂರು ಇನ್ನಿಂಗ್ಸ್ ಆಡಿ 237 ರನ್ ಹೊಡೆದಿದರುವ ಪೃಥ್ವಿ ಶಾ ಒಂದು ಶತಕ, ಒಂದು ಅರ್ಧಶತಕ ಹೊಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  •  ಸಚಿನ್ ದಾಖಲೆಯನ್ನ ಮುರಿಯಲಿದ್ದರಾ ರನ್ ಮೆಷಿನ್ ವಿರಾಟ್ ಕೊಹ್ಲಿ?

     ಸಚಿನ್ ದಾಖಲೆಯನ್ನ ಮುರಿಯಲಿದ್ದರಾ ರನ್ ಮೆಷಿನ್ ವಿರಾಟ್ ಕೊಹ್ಲಿ?

    ಮುಂಬೈ: ಟೀಂ ಇಂಡಿಯಾದ ರನ್ ಮೆಷಿನ್, ನಾಯಕ ವಿರಾಟ್ ಕೊಹ್ಲಿ ಆಸೀಸ್ ನೆಲದಲ್ಲಿ ಸಚಿನ್ ದಾಖಲೆಯನ್ನು ಮುರಿಯುವ ಅವಕಾಶವನ್ನು ಹೊಂದಿದ್ದಾರೆ.

    ಸಚಿನ್ ಆಸ್ಟ್ರೇಲಿಯಾ ನೆಲದಲ್ಲಿ 6 ಶತಕಗಳನ್ನು ಸಿಡಿಸಿದ್ದು, ಕೊಹ್ಲಿ ಇದುವರೆಗೂ 5 ಶತಕಗಳನ್ನು ಸಿಡಿಸಿದ್ದಾರೆ. ಇದರಂತೆ ಆಸೀಸ್ ನೆಲದಲ್ಲಿ ಟೀಂ ಇಂಡಿಯಾ ಪರ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಹಿಂದಿಕ್ಕಲು ಕೊಹ್ಲಿ ಅವಕಾಶವನ್ನು ಪಡೆದಿದ್ದಾರೆ. ಡಿಸೆಂಬರ್ 6ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಕೊಹ್ಲಿ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಅಂತಿಮ ಟೆಸ್ಟ್ ಪಂದ್ಯದಲ್ಲೂ ಮಿಂಚಿದ್ದ ವಿರಾಟ್ ಕೊಹ್ಲಿ ಅರ್ಧ ಶತಕ ಸಿಡಿಸಿದ್ದರು. ಅಲ್ಲದೆ ಟಿ20 ಟೂರ್ನಿಯಲ್ಲಿ ಕೊಹ್ಲಿ ನೀಡಿದ ಪ್ರದರ್ಶನ ಅವರ ಮೇಲಿನ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದೆ.

    ಸಚಿನ್ ಆಸೀಸ್ ನೆಲದಲ್ಲಿ ಆಡಿರುವ 20 ಟೆಸ್ಟ್ ಪಂದ್ಯಗಳಲ್ಲಿ ಶೇ.53.20 ಸರಾಸರಿಯಲ್ಲಿ 6 ಶತಕಗಳ ನೆರವಿನಿಂದ 1,809 ರನ್ ಗಳಿಸಿದ್ದಾರೆ. ಕೊಹ್ಲಿ 8 ಟೆಸ್ಟ್ ಪಂದ್ಯಗಳಿಂದ ಶೇ. 62 ರ ಸರಾಸರಿಯಲ್ಲಿ 992 ರನ್ ಸಿಡಿದ್ದು, 8 ರನ್ ಸಿಡಿಸಿದರೆ 1 ಸಾವಿರ ರನ್ ಕೂಡ ಪೂರ್ಣಗೊಳ್ಳಲಿದೆ.  ಉಳಿದಂತೆ ಆಸೀಸ್ ನೆಲದಲ್ಲಿ ಹೆಚ್ಚು ಶತಕ ಸಿಡಿಸಿದ ಟೀಂ ಇಂಡಿಯಾ ಆಟಗಾರ ಪಟ್ಟಿಯಲ್ಲಿ ಮಾಜಿ ನಾಯಕ ಸುನಿಲ್ ಗವಾಸ್ಕರ್ 5 ಶತಕ ಸಿಡಿಸಿ ಸ್ಥಾನ ಪಡೆದಿದ್ದು, ಮಾಜಿ ಆಟಗಾರರ ವಿವಿಎಸ್ ಲಕ್ಷಣ್ 15 ಪಂದ್ಯಗಳಿಂದ 4 ಶತಕ ಗಳಿಸಿದ್ದಾರೆ.

    ಕಳೆದ ಬಾರಿ ಆಸೀಸ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ 4 ಟೆಸ್ಟ್ ಪಂದ್ಯಗಳಲ್ಲಿ ಸೋತು ವೈಟ್ ವಾಶ್ ಆಗಿತ್ತು. ಆದರೆ ಈ ಬಾರಿ ಕೊಹ್ಲಿ ನಾಯಕತ್ವದ ಬಳಗ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವಿಪ್ ಮಾಡುವ ಗುರಿ ಹೊಂದಿದೆ. ಆಸೀಸ್ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿರನ್ನ ಕಟ್ಟಿ ಹಾಕುವ ಬಗ್ಗೆ ಈಗಾಗಲೇ ತಲೆನೋವು ಶುರುವಾಗಿದ್ದು, ಕೊಹ್ಲಿ ನಿಯಂತ್ರಣ ಮಾಡಲು ತಂತ್ರಗಳನ್ನು ರೂಪಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಹ್ಲಿಯ ನಾಗಾಲೋಟ ತಡೆಗೆ ನಿಷೇಧಿತ ಕ್ರಿಕೆಟಿಗರ ಮೊರೆ ಹೋದ ಆಸ್ಟ್ರೇಲಿಯಾ

    ಕೊಹ್ಲಿಯ ನಾಗಾಲೋಟ ತಡೆಗೆ ನಿಷೇಧಿತ ಕ್ರಿಕೆಟಿಗರ ಮೊರೆ ಹೋದ ಆಸ್ಟ್ರೇಲಿಯಾ

    ಸಿಡ್ನಿ: ಕ್ರಿಕೆಟಿಗ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಆರ್ಭಟವನ್ನು ಕಟ್ಟಿಹಾಕಲು ಆಸ್ಟ್ರೇಲಿಯಾ ತಂಡ ನಿಷೇಧಿತ ಆಸಿಸ್ ಆಟಗಾರರ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಮೊರೆ ಹೋಗಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಸ್ಫೋಟಕ ಬ್ಯಾಟ್ಸ್‍ಮನ್ ವಿರಾಟ್ ಕೊಹ್ಲಿಯ ಆಟವನ್ನು ನೋಡಿ ಆಸೀಸ್ ಆಟಗಾರರು ಕಂಗಾಲಾಗಿ ಹೋಗಿದ್ದಾರೆ. ಅಲ್ಲದೇ ಮುಂಬರುವ ಟೆಸ್ಟ್ ಸರಣಿಯಲ್ಲೂ ಕೊಹ್ಲಿ ಇದೇ ರೀತಿ ತನ್ನ ನಾಗಾಲೋಟವನ್ನು ಮುಂದುವರಿಸಿದರೆ ಸರಣಿ ಸೋಲನ್ನು ಅನುಭವಿಸುವುದು ನಿಜವೆಂದು ಭಾವಿಸಲಾಗಿದೆ.

    ಹೀಗಾಗಿ ಖುದ್ದು ಆಸೀಸ್ ತಂಡ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಕ್ಕೊಳಗಾಗಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಆಟಗಾರರ ಮೊರೆ ಹೋಗಿದೆ. ಅಲ್ಲದೇ ಇಬ್ಬರೂ ಆಟಗಾರರು ಕೊಹ್ಲಿಯನ್ನು ಕಟ್ಟಿಹಾಕುವ ಕುರಿತು ಕೆಲ ಮಾಹಿತಿಗಳನ್ನು ಆಸೀಸ್ ಆಟಗಾರರೊಂದಿಗೆ ಹಂಚಿಕೊಂಡಿದ್ದಾರೆಂದು ಹೇಳಲಾಗಿದೆ.

    ಇದಲ್ಲದೇ ಸ್ಮಿತ್ ಹಾಗೂ ವಾರ್ನರ್ ಆಸ್ಟ್ರೇಲಿಯಾ ತಂಡದ ಜೊತೆಗೆ ನೆಟ್ ಪ್ರಾಕ್ಟೀಸ್ ಕೂಡ ನಡೆಸುತ್ತಿದ್ದಾರೆ. ಇದರ ಜೊತೆ ಬೌಲಿಂಗ್ ಕೋಚ್ ಹಾಗೂ ಬೌಲರ್ ಗಳು ತಮ್ಮ ಅನುಭವಗಳನ್ನು ಸಹ ಹಂಚಿಕೊಂಡಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.

    ಡಿಸೆಂಬರ್ 6 ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯ ಅಡಿಲೇಡ್ ನಲ್ಲಿ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊನೆಯ  ಓವರ್‌ನಲ್ಲಿ  ಗೆದ್ದು ಸರಣಿ ಸಮ ಮಾಡಿಕೊಂಡ ಟೀಂ ಇಂಡಿಯಾ!

    ಕೊನೆಯ ಓವರ್‌ನಲ್ಲಿ ಗೆದ್ದು ಸರಣಿ ಸಮ ಮಾಡಿಕೊಂಡ ಟೀಂ ಇಂಡಿಯಾ!

    ಸಿಡ್ನಿ: ಆಸೀಸ್ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಆಟಗಾರ ಧವನ್‍ರ ಬಿರುಸಿನ ಆಟಗಾದ ನೆರವಿನಿಂದ ಟೀಂ ಇಂಡಿಯಾ 6 ವಿಕೆಟ್ ಅಂತರದ ಜಯ ಪಡೆದಿದ್ದು, ಸರಣಿಯನ್ನು 1-1ರಿಂದ ಸಮ ಮಾಡಿಕೊಂಡಿದೆ.

    ರೋಚಕ ಹೋರಾಟದಿಂದ ಕೂಡಿದ್ದ ಪಂದ್ಯದಲ್ಲಿ ಟೀಂ ಇಂಡಿಯಾ ಅಂತಿಮ 30 ಎಸೆತಗಳಲ್ಲಿ 52 ರನ್ ಗಳಿಸುವ ಗುರಿ ಹೊಂದಿತ್ತು. 16ನೇ ಓವರ್ ನಲ್ಲಿ ಕೊಹ್ಲಿ ಸಿಕ್ಸರ್, ಬೌಂಡರಿ ಸಮೇತ 11 ರನ್ ಸಿಡಿಸಿದರು. 17ನೇ ಮತ್ತು 18ನೇ ಓವರ್ ನಲ್ಲಿ 2 ಸಿಕ್ಸರ್ ಸಮೇತ 24 ರನ್ ಹರಿದು ಬಂದವು. 19ನೇ ನಲ್ಲಿ ಕಾರ್ತಿಕ್ ಬೌಂಡರಿ ಸಿಡಿಸಿ ತಂಡದ ಒತ್ತಡವನ್ನ ನಿಭಾಯಿಸಿದರು. ಈ ಓವರ್ ನಲ್ಲಿ 11 ರನ್ ಹರಿದು ಬಂತು.

    ಅಂತಿಮ 6 ಎಸೆತಗಳಿಗೆ 5 ರನ್ ಅಗತ್ಯವಿತ್ತು. ಈ ವೇಳೆ ಕೊಹ್ಲಿ 2 ಬೌಂಡರಿ ಸಿಡಿಸಿ ಭಾರತ ಗೆಲುವು ಖಚಿತ ಪಡಿಸಿದರು. ಅಂತಿಮವಾಗಿ ಭಾರತ 19.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿ ವಿಜಯದ ನಗೆ ಬೀರಿತು. ಕೊಹ್ಲಿ ಔಟಾಗದೇ 61 ರನ್(41 ಎಸೆತ, 4 ಬೌಂಡರಿ, 2 ಸಿಕ್ಸರ್) ದಿನೇಶ್ ಕಾರ್ತಿಕ್ ಔಟಾಗದೇ 22 ರನ್(18 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದರು.

    ಆಸೀಸ್ ವಿರುದ್ಧದ ಟಿ20 ಟೂರ್ನಿಯ ಮಾಡು ಇಲ್ಲವೇ ಮಾಡಿ ಎಂಬಂತೆ ಗೆಲ್ಲಲೇಬೇಕಾದ ಒತ್ತಡದ ಎದುರಿಸಿದ ಟೀಂ ಇಂಡಿಯಾಗೆ ಆರಂಭಿಕರಾದ ಧವನ್, ರೋಹಿತ್ ಉತ್ತಮ ಆರಂಭ ಓದಗಿಸಿದರು. ಇಬ್ಬರು ಮೊದಲ ವಿಕೆಟ್‍ಗೆ 5.3 ಓವರ್ ಗಳಲ್ಲಿ 68 ರನ್ ಕಾಣಿಕೆ ನೀಡಿದರು.

    ಬಿರುಸಿನ ಆಟವಾಡಿದ ಧವನ್ ಕೇವಲ 22 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ 41 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಟೀಂ ಇಂಡಿಯಾಗೆ ಅಘಾತ ನೀಡಿದ ಜಾಂಪಾ 23 ರನ್ ಗಳಿಸಿದ್ದ ರೋಹಿತ್ ವಿಕೆಟ್ ಕಬಳಿಸಿದರು.

    ಈ ಹಂತದಲ್ಲಿ ಬಂದ ಕೆಎಲ್ ರಾಹುಲ್ 14 ರನ್ ಗಳಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಇತ್ತ ಮರು ಎಸೆತದಲ್ಲೇ ರಿಷಭ್ ಪಂತ್ ಶೂನ್ಯ ಸುತ್ತಿದರು. ಈ ಮೂಲಕ 14ನೇ ಓವರ್ ನಲ್ಲಿ ಬೌಲ್ ಮಾಡಿದ ಟೈ ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಿದರು. 2 ವಿಕೆಟ್ ಕಳೆದುಕೊಂಡು 108 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಭಾರತ ಈ ಮೊತ್ತಕ್ಕೆ ಮತ್ತೆರಡು ವಿಕೆಟ್ ಕಳೆದುಕೊಂಡು ಸ್ವಲ್ಪ ಅಪಾಯಕ್ಕೆ ಸಿಕ್ಕಿತು.

    ವಿಕೆಟ್ ಬಿದ್ದರೂ ಬಿರುಸಿನ ಆಟ ಪ್ರದರ್ಶಿಸಿದ ನಾಯಕ ವಿರಾಟ್ ಕೊಹ್ಲಿ 34 ಎಸೆತಗಳಲ್ಲಿ 50 ರನ್ ಸಿಡಿಸಿದರು. ಇತ್ತ ನಾಯಕ ಕೊಹ್ಲಿಗೆ ಸಾಥ್ ನೀಡಿದ ದಿನೇಶ್ ಕಾರ್ತಿಕ್ 18 ಎಸೆತಗಳಲ್ಲಿ 22 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 164 ರನ್ ಪೇರಿಸಿತ್ತು. ಆಸೀಸ್ ಪರ ದಿಟ್ಟ ಆರಂಭ ನೀಡಿದ ನಾಯಕ ಆ್ಯರೋನ್ ಫಿಂಚ್ ಹಾಗೂ ಮ್ಯಾಥ್ಯೂ ಶಾರ್ಟ್ ಬಿರುಸಿನ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‍ಗೆ 8.3 ಓವರ್ ಗಳಲ್ಲಿ 68 ರನ್ ಸಿಡಿಸಿತ್ತು.

    ಈ ವೇಳೆ ದಾಳಿಗಿಳಿದ ಕುಲದೀಪ್ ಯಾದವ್ 23 ಎಸೆತಗಳಲ್ಲಿ 28 ರನ್ ಗಳಿಸಿದ್ದ ಫಿಂಚ್ ವಿಕೆಟ್ ಪಡೆದರು. ಇದಾದ ಬೆನ್ನಲ್ಲೇ ಕೃಣಾಲ್ ಪಾಂಡ್ಯ 33 ರನ್ ಗಳಿಸಿದ್ದ ಶಾರ್ಟ್ ವಿಕೆಟ್ ಪಡೆದರು. ಇದರೊಂದಿಗೆ ಆಸೀಸ್ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದರು. ಬಳಿಕ ಬಂದ ಬೆನ್ ಮೆಕ್ ಡರ್ಮಾಟ್ ಶೂನ್ಯ ಸುತ್ತಿದ್ದರು. ಕಳೆದ ಎರಡು ಪಂದ್ಯದಲ್ಲಿ ಬಿರುಸಿನ ಆಟವಾಡಿದ್ದ ಮಾಕ್ಸ್ ವೆಲ್ 13 ರನ್ ಗಳಿಸಿ ನಿರ್ಗಮಿಸಿದರು.

    ಈ ಹಂತದಲ್ಲಿ ಬಿರುಸಿನ ಪ್ರದರ್ಶನ ನೀಡಿದ ಅಲೆಕ್ಸ್ ಕ್ಯಾರಿ 19 ಎಸೆತಗಳಲ್ಲಿ 27 ರನ್ ಗಳಿಸಿದರು. ಮತ್ತೆ ತಮ್ಮ ಬೌಲಿಂಗ್ ಮೂಲಕ ಕಮಲ್ ಮಾಡಿದ ಕೃಣಾಲ್ ಪಾಂಡ್ಯ ಕ್ಯಾರಿ ವಿಕೆಟ್ ಪಡೆದರು. ಬಳಿಕ ಬಂದ ಕ್ರಿಸ್ ಲಿನ್ 13 ರನ್ ಗಳಿಸಿ ರನೌಟ್‍ಗೆ ಬಲಿಯಾದರೆ, ಅಂತಿಮ ಹಂತದಲ್ಲಿ ಬ್ಯಾಟ್ ಬೀಸಿದ ಮಾರ್ಕಸ್ ಸ್ಟೊಯಿನಿಸ್ 15 ಎಸೆತಗಳಲ್ಲಿ 25 ರನ್ ಹಾಗೂ ನೇಥನ್ ಕೌಲ್ಟರ್ ನೈಲ್ 13ರನ್ ಗಳಿಸಿ ಅಜೇಯರಾಗಿ ಉಳಿದು ತಂಡ ಸವಾಲಿನ ಮೊತ್ತ ಪೇರಿಸಲು ಕಾರಣರಾದರು.

    ಟೀಂ ಇಂಡಿಯಾ 36 ರನ್ ನೀಡಿ ಕೃಣಾಲ್ ಪಾಂಡ್ಯ 4 ವಿಕೆಟ್ ಪಡೆದು ಆಸೀಸ್ ನೆಲದಲ್ಲಿ ಭಾರತ ತಂಡದ ಪರ ಉತ್ತಮ ಸಾಧನೆ ಮಾಡಿದ ಬೌಲರ್ ಎಣಿಸಿಕೊಂಡದರು. ಉಳಿದಂತೆ ಕುಲದೀಪ್ ಯಾದವ್ 1 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಳೆಗೆ ಇಂಡೋ, ಆಸೀಸ್ 2ನೇ ಟಿ20 ಬಲಿ

    ಮಳೆಗೆ ಇಂಡೋ, ಆಸೀಸ್ 2ನೇ ಟಿ20 ಬಲಿ

    ಮೆಲ್ಬೋರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಬೇಕಿದ್ದ 2ನೇ ಟಿ20 ಪಂದ್ಯ ಮಳೆಯಿಂದ ರದ್ದಾಗಿದ್ದು, ಇದರೊಂದಿಗೆ 3 ಪಂದ್ಯಗಳ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಿಲುಕಿದೆ.

    ಸರಣಿಯ ಮುಂದಿನ ಪಂದ್ಯ ಭಾನುವಾರ ನಡೆಯಲಿದ್ದು, ಈಗಾಗಲೇ ಮೊದಲ ಪಂದ್ಯದಲ್ಲಿ ಆಸೀಸ್ ಗೆಲುವು ಪಡೆದಿರುವುದರಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಇದರಿಂದ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ 3ನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಸಮಬಲ ಸಾಧಿಬೇಕಿದೆ.

    ಇಂದು ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳು ಬಿಗು ಬೌಲಿಂಗ್ ದಾಳಿ ನಡೆಸಿದರು. ಟಾಸ್ ಸೋತು ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ಆಸೀಸ್ ಆರಂಭಿಕ ಆಘಾತ ಎದುರಿಸಿತು. ವೇಗಿ ಭುವನೇಶ್ವರ್ ಕುಮಾರ್ ಮೊದಲ ಓವರ್‍ನ 2ನೇ ಎಸೆತದಲ್ಲಿ ನಾಯಕ ಫಿಂಚ್ ವಿಕೆಟ್ ಪಡೆಯುವ ಮೂಲಕ ಮೊದಲ ಆಘಾತ ನೀಡಿದರು. ಇದರ ಬೆನ್ನಲ್ಲೇ ಕ್ರಿಸ್ ಲಿನ್ 13 ರನ್ ಹಾಗೂ 14 ರನ್ ಗಳಿಸಿದ್ದ ಆರಂಭಿಕ ಡಾರ್ಸಿ ಶಾರ್ಟ್ ರನ್ನು ಯುವ ವೇಗಿ ಖಲೀಲ್ ಅಹ್ಮದ್ ಪೆವಿಲಿಯನ್ ನತ್ತ ನಡೆಯುವಂತೆ ಮಾಡಿದರು.

    ಈ ಹಂತದಲ್ಲಿ ಆಸೀಸ್ ಸ್ಫೋಟಕ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಬಿರುಸಿನ ಆಟಕ್ಕೆ ಮುಂದಾಗುತ್ತಿದಂತೆ ಆಲ್‍ರೌಂಡರ್ ಕೃಣಾಲ್ ಪಾಂಡ್ಯ ಮ್ಯಾಕ್ಸ್ ವೆಲ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇರೊಂದಿಗೆ 11 ಓವರ್ ಗಳ ಮುಕ್ತಾಯ ವೇಳೆಗೆ ಆಸೀಸ್ ಪ್ರಮುಖ 5 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿತ್ತು. ಈ ಹಂತದಲ್ಲಿ ಆಸೀಸ್ ರನ್ ವೇಗಕ್ಕೆ ಕುಲದೀಪ್ ಯಾದವ್, ಕೃಣಾಲ್ ಪಾಂಡ್ಯ ಬ್ರೇಕ್ ಹಾಕಿದರು. ಅಲೆಕ್ಸ್ ಕ್ಯಾರೆ 4 ರನ್ ಗಳಿಸಿದರೆ, ಕೇವಲ 9 ಎಸೆತ ಎದುರಿಸಿ 18 ರನ್ ಸಿಡಿಸಿದ ಕೌಲ್ಟರ್ ನೈಲ್ ಭಾರಿ ಹೊಡೆತಕ್ಕೆ ಕೈ ಹಾಕಿ ಭುವನೇಶ್ವರ್ ಕುಮಾರ್ ಬೌಲಿಂಗ್‍ನಲ್ಲಿ ಔಟಾದರು. ಇತ್ತ ವಿಕೆಟ್ ಉರುಳುತ್ತಿದ್ದರು ತಂಡಕ್ಕೆ ಆಸರೆಯಾಗಿದ್ದ ಡರ್ಮಾಟ್ 30 ಎಸೆತಗಳಲ್ಲಿ 32 ರನ್ ಹಾಗೂ ಟೈ 12 ರನ್ ಗಳಿಸಿದ್ದ ವೇಳೆ ವರುಣ ಮಳೆ ಅಡ್ಡಿಪಡಿಸಿದ್ದ ಕಾರಣ ಪಂದ್ಯ ಸ್ಥಗಿತಗೊಂಡಿತ್ತು.

    ಈ ಹಂತದಲ್ಲಿ ಡಕ್‍ವರ್ಥ್ ಲೂಯಿಸ್ ನಿಯಮದ ಅನ್ವಯ ಭಾರತಕ್ಕೆ 11 ಓವರ್ ಗಳಲ್ಲಿ 90 ರನ್ ಗುರಿ ನೀಡಲಾಗಿತ್ತು. ಆದರೆ ಮತ್ತೆ ಮಳೆ ಆಟ ಆರಂಭವಾಗಲು ಅವಕಾಶ ನೀಡಿದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು. ಭಾರತ ಪರ ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ 2 ವಿಕೆಟ್ ಪಡೆದರೆ, ಬೂಮ್ರಾ, ಕುಲದೀಪ್ ಯಾದವ್, ಕೃಣಾಲ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಗೆಲುವಿನ ಸಮೀಪ ಬಂದು ಕೊನೆಯ ಓವರ್‌ನಲ್ಲಿ ಸೋತ ಭಾರತ!

    ಗೆಲುವಿನ ಸಮೀಪ ಬಂದು ಕೊನೆಯ ಓವರ್‌ನಲ್ಲಿ ಸೋತ ಭಾರತ!

    ಬ್ರಿಸ್ಬೇನ್: ಗೆಲುವಿನ ಸಮೀಪ ಬಂದಿದ್ದ ಭಾರತ ಕೊನೆಯ ಓವರ್ ನಲ್ಲಿ ಎಡವಿದ ಪರಿಣಾಮ ಮೊದಲ ಟಿ20 ಪಂದ್ಯವನ್ನು ಆಸ್ಟ್ರೇಲಿಯಾ 4 ರನ್ ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ.

    ಮಳೆಯಿಂದಾಗಿ ಡಕ್‍ವರ್ಥ್ ಲೂಯಿಸ್ ನಿಯಮದ ಅನ್ವಯ ಭಾರತಕ್ಕೆ 17 ಓವರ್ ಗಳಲ್ಲಿ 174 ರನ್ ಗಳ ಗುರಿಯನ್ನು ನೀಡಲಾಗಿತ್ತು. ಗುರಿಯನ್ನು ಬೆನ್ನಟ್ಟಿದ ಭಾರತ 17 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಅಂತಿಮ 6 ಎಸೆತಗಳಲ್ಲಿ ಗೆಲ್ಲಲು 13 ರನ್ ಗುರಿ ಪಡೆದ ಟೀಂ ಇಂಡಿಯಾ ಗೆ ದಿನೇಶ್ ಕಾರ್ತಿಕ್ ಗೆಲುವಿನ ಸಿಹಿ ನೀಡಲು ವಿಫಲರಾದರು. ಓವರ್ ಮೊದಲ ಎಸೆತದಲ್ಲಿ 2 ರನ್ ಸಿಡಿಸಿದ ಪಾಂಡ್ಯ ಹಾಗೂ ಕಾರ್ತಿಕ್ ಕ್ಯಾಚ್ ನೀಡಿ ಪೆವಿಲಿಯನ್ ದಾರಿ ಹಿಡಿದರು. ಬೀಗಿ ಬೌಲಿಂಗ್ ದಾಳಿ ನಡೆಸಿದ ಸ್ಟೋಯಿನಿಸ್ ಆಸೀಸ್ ಗೆಲುವಿಗೆ ಕಾರಣರಾದರು.

    24 ಬಾಲಿಗೆ 60 ರನ್ ಬೇಕಿದ್ದಾಗ 14ನೇ ಓವರ್ ನಲ್ಲಿ 25 ರನ್ ಬಂದಿದ್ದರೆ, 15 ಮತ್ತು 16ನೇ ಓವರ್ ನಲ್ಲಿ ತಲಾ 11 ರನ್ ಬಂದಿತ್ತು. ಹೀಗಾಗಿ ಕೊನೆಯ ಓವರ್ ನಲ್ಲಿ ಭಾರತ ಜಯಗಳಿಸಬಹುದೆಂಬ ವಿಶ್ವಾಸವನ್ನು ಅಭಿಮಾನಿಗಳು ಇಟ್ಟಕೊಂಡರು. ದಿನೇಶ್ ಕಾರ್ತಿಕ್ 30 ರನ್(13 ಎಸೆತ, 4 ಬೌಂಡರಿ, 1 ಸಿಕ್ಸರ್), ರಿಷಭ್ ಪಂತ್ 20 ರನ್(16 ಎಸೆತ, 1 ಬೌಂಡರಿ, 1 ಸಿಕ್ಸರ್) ಸಿಡಿಸಿ ರೋಚಕ ಕೈಮ್ಯಾಕ್ಸ್ ನತ್ತ ಭಾರತವನ್ನು ತಂದಿದ್ದರು. ಆದರೆ ಇಬ್ಬರು ಕೊನೆಯ ಓವರ್ ನಲ್ಲಿ ಔಟಾಗುವ ಮೂಲಕ ಭಾರತ ಸೋಲನ್ನು ಒಪ್ಪಿಕೊಂಡಿತು.

    ಭಾರತದ ಪರ ಶಿಖರ್ ಧವನ್ 76 ರನ್(42 ಎಸೆತ, 10 ಬೌಂಡರಿ, 2 ಸಿಕ್ಸರ್) ಸಿಡಿಸಿ ಮಿಂಚಿದರೆ, ನಾಯಕ ವಿರಾಟ್ ಕೊಹ್ಲಿ 4 ರನ್, ಪಾಂಡ್ಯ 2 ಗಳಿಸಲಷ್ಟೇ ಶಕ್ತರಾದರು. ಆಸೀಸ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಸ್ಟೋಯಿನಿಸ್ ಮತ್ತು ಜಂಪಾ ತಲಾ 2 ವಿಕೆಟ್ ಪಡೆದರು. ಉಳಿದಂತೆ ಟೈ, ಸ್ಟಾನ್ ಲೇಕ್, ಬೆರೆನ್ ಡ್ರಾಪ್ ತಲಾ ಒಂದು ವಿಕೆಟ್ ಪಡೆದರು.

    174 ರನ್ ಗುರಿ ಪಡೆದ ಟೀಂ ಇಂಡಿಯಾಗೆ ಆರಂಭಿಕ ಶಿಖರ್ ಧವನ್ ಮೊದಲ ಓವರಿನಲ್ಲೇ 2 ಬೌಂಡರಿ ಸಿಡಿಸಿ ಬಿರುಸಿನ ಆರಂಭ ನೀಡಿದರು. ಆದರೆ ರೋಹಿತ್ ಶರ್ಮಾ 7 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

    ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಮೊದಲು ಕ್ಷೇತ್ರರಕ್ಷಣೆ ಆಯ್ದುಕೊಂಡಿದ್ದರು. ಕೊಹ್ಲಿ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ ಮಹ್ಮದ್ ಖಲೀಲ್ 7 ರನ್ ಗಳಿಸಿದ್ದ ಡಿಜೆಎಂ ಶಾರ್ಟ್ ವಿಕೆಟ್ ಪಡೆದು ಆಸೀಸ್‍ಗೆ ಮೊದಲ ಆಘಾತ ನೀಡಿದರು. ವಿರಾಟ್ ಕೊಹ್ಲಿ ಪಂದ್ಯದ ನಾಲ್ಕನೇ ಓವರ್ ಬೌಲ್ ಮಾಡಿದ ಬುಮ್ರಾ ದಾಳಿಯಲ್ಲಿ ಆಸೀಸ್ ನಾಯಕ ಆರೋನ್ ಫಿಂಚ್ ಕ್ಯಾಚ್ ಕೈಚೆಲ್ಲಿದರು.

    ಪಂದ್ಯದ ಆರಂಭದಿಂದಲೂ ಟೀಂ ಇಂಡಿಯಾ ಬೌಲರ್‍ಗಳು ಬೀಗಿ ಬೌಲಿಂಗ್ ದಾಳಿ ನಡೆಸಿದರು. ಕೊಹ್ಲಿ ನೀಡಿದ ಜೀವನದಾವನ್ನು ಸಮರ್ಥವಾಗಿ ಬಳಸಿಕೊಂಡ ನಾಯಕ ಫಿಂಚ್ ತಂಡಕ್ಕೆ ಆಸರೆಯಾಗುವ ಮುನ್ಸೂಚನೆ ನೀಡಿದರು. ಈ ಹಂತದಲ್ಲಿ ದಾಳಿಗಿಳಿದ ಕುಲದೀಪ್ ಯಾದವ್ ಫಿಂಚ್ ವಿಕೆಟ್ ಪಡೆದರು.

    ಬಳಿಕ ಬಂದ ಕ್ರಿಸ್ ಲಿನ್ ಬೀರುಸಿನ ಬ್ಯಾಟಿಂಗ್ ನಡೆಸಿ ತಂಡ ಸ್ಕೋರ್ ಹೆಚ್ಚಿಸಿದರು. ಈ ಹಂತದಲ್ಲಿ ಮತ್ತೆ ಮೋಡಿ ಮಾಡಿದ ಕುಲದೀಪ್ ಯಾದವ್ ಲಿನ್‍ಗೆ ಪೆವಿಲಿಯನ್ ಹಾದಿ ತೋರಿದರು. ಕೇವಲ 20 ಎಸೆತ ಎದುರಿಸಿದ ಲಿನ್ 37 ಗಳಿಸಿ ನಿರ್ಗಮಿಸಿದರು.

    ಕುಲದೀಪ್ ದಾಳಿಯಿಂದ ಒತ್ತಡಕ್ಕೆ ಎದುರಿಸಿದ ತಂಡಕ್ಕೆ ಸ್ಫೋಟಕ ಆಟಗಾರ ಮ್ಯಾಕ್ಸ್‍ವೆಲ್ 46 ರನ್ ಸಿಡಿಸಿ ತಂಡ ಸವಾಲಿನ ಮೊತ್ತಗಳಿಸಲು ಕಾರಣರಾದರು. 14ನೇ ಓವರ್ ನಲ್ಲಿ ಆಲ್‍ರೌಂಡರ್ ಕೃಣಾಲ್ ಪಾಂಡ್ಯ ಬೌಲಿಂಗ್‍ನಲ್ಲಿ 23 ಎನ್ ಸಿಡಿಸಿದರು. 16.1 ಓವರ್ ವೇಳೆಗೆ ಮಳೆ ಅಡ್ಡಿ ಪಡಿಸಿದ ಕಾರಣ ಪಂದ್ಯವನ್ನು 17 ಓವರ್‍ಗಳಿಗೆ ಇಳಿಕೆ ಮಾಡಲಾಯಿತು. ಇನ್ನಿಂಗ್ಸ್‍ನಲ್ಲಿ 19 ಎಸೆತಗಳನ್ನು ಎದುರಿಸಿದ ಸ್ಟೊಯಿನಿಸ್ 33 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಆಸ್ಟ್ರೇಲಿಯಾ 17 ಓವರ್ ಗೆ 4 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 2 ತಿಂಗಳ ಬಳಿಕ ಹಾರ್ದಿಕ್ ಬೌಲಿಂಗ್ – ಆಸೀಸ್ ಏಕದಿನ ಟೂರ್ನಿಗೆ ಕಮ್‍ಬ್ಯಾಕ್?

    2 ತಿಂಗಳ ಬಳಿಕ ಹಾರ್ದಿಕ್ ಬೌಲಿಂಗ್ – ಆಸೀಸ್ ಏಕದಿನ ಟೂರ್ನಿಗೆ ಕಮ್‍ಬ್ಯಾಕ್?

    ಮುಂಬೈ: ಟೀಂ ಇಂಡಿಯಾ ಅಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಸುಮಾರು 60 ದಿನಗಳ ಬಳಿಕ ಬೌಲಿಂಗ್ ಅಭ್ಯಾಸ ನಡೆಸಿದ್ದು, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಕಮ್‍ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.

    ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ವೇಳೆ ಗಾಯಗೊಂಡಿದ್ದ ಹಾರ್ದಿಕ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಬಹುದಿನಗಳ ಬಳಿಕ ಮತ್ತೆ ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆಸೀಸ್ ವಿರುದ್ಧದ ಏಕದಿನ ಟೂರ್ನಿಗೆ ಬಿಸಿಸಿಐ ತಂಡವನ್ನು ಆಯ್ಕೆ ಮಾಡಬೇಕಿದ್ದು ಸ್ಥಾನ ಸಿಗುವ ಸಾಧ್ಯತೆಯಿದೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಹಾರ್ದಿಕ್ ಪಾಂಡ್ಯ 2019 ಜನವರಿಯಲ್ಲಿ ಆರಂಭವಾಗಲಿರುವ ಆಸೀಸ್ ಏಕದಿನ ಟೂರ್ನಿಯಲ್ಲಿ ಕಮ್‍ಬ್ಯಾಕ್ ಮಾಡಲು ಶ್ರಮವಹಿಸುತ್ತಿದ್ದೇನೆ. ಇದಕ್ಕಾಗಿ ಫಿಟ್ನೆಸ್ ಕಾಯ್ದುಕೊಳ್ಳಲು ಶ್ರಮವಹಿಸುತ್ತಿದ್ದು, ಮುಂಬೈನಲ್ಲಿ ಕಠಿಣ ಬೌಲಿಂಗ್ ಸೆಷನ್ಸ್‍ಗಳಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

    2016 ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ಹಾರ್ದಿಕ್ ಪಾಂಡ್ಯ, ಉತ್ತಮ ಪ್ರದರ್ಶನದ ನೀಡುವ ಮೂಲಕ ನಿರಂತರವಾಗಿ ತಂಡದ ಸದಸ್ಯರಾಗಿದ್ದರು. 2019ರ ಮೇ-ಜುಲೈ ತಿಂಗಳಲ್ಲಿ ನಡೆಯಲಿರುವ ವಿಶ್ವಕಪ್ ಸದ್ಯ ಹಾರ್ದಿಕ್ ಪಾಂಡ್ಯರ ಬಹುಮುಖ್ಯ ಗುರಿಯಾಗಿದೆ. ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿಯುತ್ತಿದಂತೆ ಆ ಸ್ಥಾನಕ್ಕೆ ಹಾರ್ದಿಕ್ ಸಹೋದರ ಕೃಣಾಲ್ ಪಾಂಡ್ಯ ಆಯ್ಕೆ ಆಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಧೋನಿ ಅನುಪಸ್ಥಿತಿಯಲ್ಲಿ ದಾಖಲೆ ನಿರ್ಮಿಸಲಿರುವ ಟೀಂ ಇಂಡಿಯಾ!

    ಧೋನಿ ಅನುಪಸ್ಥಿತಿಯಲ್ಲಿ ದಾಖಲೆ ನಿರ್ಮಿಸಲಿರುವ ಟೀಂ ಇಂಡಿಯಾ!

    ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ಸರಣಿ ನ.21 ರಂದು ಇಲ್ಲಿನ ಗಬ್ಬಾ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಟಿ20 ಪಂದ್ಯದಿಂದ ಆರಂಭವಾಗಲಿದ್ದು, ಅನುಭವಿ ಆಟಗಾರ ಧೋನಿ ಅನುಪಸ್ಥಿತಿಯಲ್ಲಿ ಕೊಹ್ಲಿ ನಾಯಕತ್ವದ ಯುವಪಡೆ ಆಸೀಸ್ ತಂಡವನ್ನು ಎದುರಿಸುತ್ತಿದೆ.

    ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಆಸೀಸ್ ತಂಡವನ್ನು ಹಿಂದಿಕ್ಕಿ ಟೀಂ ಇಂಡಿಯಾ 2 ನೇ ಸ್ಥಾನವನ್ನು ಪಡೆದುಕೊಂಡಿದೆ. ಇತ್ತ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿದೆ. ಒಂದೊಮ್ಮೆ ಸರಣಿಯಲ್ಲಿ ಟೀಂ ಇಂಡಿಯಾವನ್ನು ಆಸೀಸ್ ವೈಟ್‍ವಾಷ್ ಮಾಡಿದರೆ ಮತ್ತೆ 2ನೇ ಸ್ಥಾನವನ್ನು ಪಡೆಯಲಿದ್ದಾರೆ.

    ಆಸೀಸ್ ವಿರುದ್ಧ ಇದುವರೆಗೂ ಟೀಂ ಇಂಡಿಯಾ ಆಡಿರುವ 15 ಟಿ20 ಪಂದ್ಯದಲ್ಲಿ ಧೋನಿ ಸ್ಥಾನ ಪಡೆದಿದ್ದರು. ಇದೇ ಮೊದಲ ಬಾರಿಗೆ ಆಸೀಸ್ ವಿರುದ್ಧ ಧೋನಿ ಇಲ್ಲದ ಟೀಂ ಇಂಡಿಯಾ ಕಣಕ್ಕೆ ಇಳಿಯುತ್ತಿದೆ. ಆಸೀಸ್ ನೆಲದಲ್ಲಿ 6 ಪಂದ್ಯಗಳನ್ನು ಆಡಿರುವ ಭಾರತ 4 ರಲ್ಲಿ ಗೆದ್ದು, 2ರಲ್ಲಿ ಸೋಲುಂಡಿದೆ. ಉಳಿದಂತೆ ಧೋನಿ ಅವರಂತೆ ಆಸೀಸ್ ವಿರುದ್ಧದ 15 ಪಂದ್ಯಗಳಲ್ಲಿ ಸ್ಥಾನ ಪಡೆದಿದ್ದ ರೋಹಿತ್ ಶರ್ಮಾ 25.72 ಸರಾಸರಿಯಲ್ಲಿ ರನ್ ಗಳಿಸಿದ್ದು, 283 ರನ್ ಗಳಿಸಿದ್ದಾರೆ. ನಾಯಕ ಕೊಹ್ಲಿ 84 ಸರಾಸರಿಯಲ್ಲಿ ಆಸೀಸ್ ವಿರುದ್ಧ ಆಡಿರುವ 5 ಇನ್ನಿಂಗ್ಸ್ ಗಳಲ್ಲಿ 250 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧ ಶತಕಗಳು ಸೇರಿದೆ.

    ಟಿ20 ಕ್ರಿಕೆಟ್‍ನಲ್ಲಿ ರೋಹಿತ್ ಶರ್ಮಾ 96 ಸಿಕ್ಸರ್ ಸಿಡಿಸಿದ್ದು, 103 ಸಿಕ್ಸರ್ ಸಿಡಿಸಿರುವ ಕ್ರಿಸ್ ಗೇಲ್ ದಾಖಲೆಯನ್ನು ಮುರಿಯುವ ಅವಕಾಶ ಹೊಂದಿದ್ದಾರೆ. ಅಲ್ಲದೇ ಟಿ20 ಯಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆಯಲು ರೋಹಿತ್‍ಗೆ (2,206 ರನ್) 65 ರನ್ ಅಗತ್ಯವಿದೆ. ಸದ್ಯ ಗುಪ್ಟಿಲ್ ಟಿ20 ಕ್ರಿಕೆಟ್‍ನಲ್ಲಿ 2,271 ರನ್ ಗಳಿಸಿದ್ದಾರೆ.

    ಟೀಂ ಇಂಡಿಯಾ ಬಲಾಬಲ: ಟೀಂ ಇಂಡಿಯಾ ಹಾಗೂ ಆಸೀಸ್ ತಂಡಗಳ ಬಲಾಬಲ ನೋಡುವುದಾದರೆ ಇತ್ತೀಚೆಗೆ ಆಸ್ಟ್ರೇಲಿಯಾ ಆಡಿರುವ 4 ಟಿ20 ಪಂದ್ಯಗಳಲ್ಲಿ ಸೋಲುಂಡು ಒತ್ತಡದಲ್ಲಿದೆ. ಇತ್ತ ಟೀಂ ಇಂಡಿಯಾ ಇತ್ತೀಚೆಗೆ ಆಡಿರುವ 12 ಟಿ20 ಪಂದ್ಯಗಳಲ್ಲಿ 11 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಇತ್ತಂಡಗಳು ಕೊನೆ ಬಾರಿ ಗುವಾಹತಿಯಲ್ಲಿ ಮುಖಾಮುಖಿಯಾಗಿದ್ದ ಪಂದ್ಯದಲ್ಲಿ ಆಸೀಸ್ ಗೆದ್ದು ಬೀಗಿತ್ತು.

    ಟೀಂ ಇಂಡಿಯಾ ಪರ ಇನ್ನಿಂಗ್ಸ್ ಆರಂಭ ಮಾಡಲಿರುವ ಶಿಖರ್ ಧವನ್, ರೋಹಿತ್ ಶರ್ಮಾ ವರ್ಷದ ಟಾಪ್ 5 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತ ಕೊಹ್ಲಿ ಆಸೀಸ್ ವಿರುದ್ಧ ಆಡಿರುವ 11 ಟಿ20 ಪಂದ್ಯಗಳಲ್ಲಿ 60.42 ಸರಾರಿಯಲ್ಲಿ 423 ರನ್ ಗಳಿಸಿದ್ದಾರೆ. ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್, ರಿಷಭ್ ಪಂತ್, ದಿನೇಶ್ ಕಾರ್ತಿಕ್ ಬಲ ನೀಡುವ ನಿರೀಕ್ಷೆ ಇದೆ. ಬೌಲಿಂಗ್ ವಿಭಾಗದಲ್ಲಿ ಜಸ್‍ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಲ್, ಕುಲದೀಪ್ ಯಾದವ್ ಭಾರತದ ಶಕ್ತಿಯಾಗಿದ್ದಾರೆ.

    ಟೀಂ ಇಂಡಿಯಾ ಇಂತಿದೆ: ನಾಳೆ ನಡೆಯುವ ಪಂದ್ಯಕ್ಕೆ ಬಿಸಿಸಿಐ 12 ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಕೃಣಾಲ್ ಪಾಂಡ್ಯ, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್‍ಪ್ರೀತ್ ಬುಮ್ರಾ, ಖಲೀಲ್ ಅಹ್ಮದ್ ಮತ್ತು ಯಜುವೇಂದ್ರ ಚಹಲ್ ಆಯ್ಕೆ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವಿಶ್ವ ಕ್ರಿಕೆಟ್‍ನಲ್ಲಿ ರಬಾಡ ಅತ್ಯಂತ ಕೆಟ್ಟ ಎಸೆತ – ಲೆಗ್ ಅಂಪೈರ್ ಜೊತೆ ಚರ್ಚಿಸಿ ತೀರ್ಪು ಕೊಟ್ಟ ಅಂಪೈರ್

    ವಿಶ್ವ ಕ್ರಿಕೆಟ್‍ನಲ್ಲಿ ರಬಾಡ ಅತ್ಯಂತ ಕೆಟ್ಟ ಎಸೆತ – ಲೆಗ್ ಅಂಪೈರ್ ಜೊತೆ ಚರ್ಚಿಸಿ ತೀರ್ಪು ಕೊಟ್ಟ ಅಂಪೈರ್

    ಕ್ವೀನ್ಸ್ ಲ್ಯಾಂಡ್: ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೋ ರಬಾಡ ಆಸ್ಟ್ರೇಲಿಯಾ ವಿರುದ್ಧ ಟಿ 20 ಪಂದ್ಯದಲ್ಲಿ ಕೆಟ್ಟದಾಗಿ ಬಾಲ್ ಎಸೆದು ಸುದ್ದಿಯಾಗಿದ್ದಾರೆ.

    9ನೇ ಓವರ್ ನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಕ್ರೀಸ್ ನಲ್ಲಿದ್ದರು. ವೇಗವಾಗಿ ಬಂದ ರಬಾಡ ಬಾಲ್ ಎಸೆದಿದ್ದಾರೆ. ಎಸೆದ ಬಾಲ್ ಮೇಲಕ್ಕೆ ಹಾರಿ ಎಡಗಡೆಗೆ ಹೋಗಿ ಪಾಯಿಂಟ್ ಬಳಿ ನಿಂತಿದ್ದ ಫೀಲ್ಡರ್ ಬಳಿ ಬಿದ್ದಿದೆ.  ಬಾಲ್ ಎಲ್ಲಿಗೋ ಹೋಗಿದ್ದನ್ನು ನೋಡಿ ಎಲ್ಲರೂ ಕಕ್ಕಾಬಿಕ್ಕಿಯಾಗಿದ್ದಾರೆ.

    ಈ ಎಸೆತಕ್ಕೆ ಏನು ತೀರ್ಪು ನೀಡಬೇಕು ಅಂಪೈರ್ ಗೆ ಗೊಂದಲ ಉಂಟಾಗಿ ಲೆಗ್ ಅಂಪೈರ್ ಜೊತೆ ಚರ್ಚಿಸಿದರು. ಬಳಿಕ ಡೆಡ್ ಬಾಲ್ ಎಂದು ಘೋಷಣೆ ಮಾಡಿದರು. ಈಗ ರಬಾಡ ಎಸೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿಶ್ವದ ಕ್ರಿಕೆಟ್ ನ ಅಂತ್ಯ ಕೆಟ್ಟ ಎಸೆತಗಳಲ್ಲಿ ಇಂದು ಒಂದು ಹೇಳಿ ಜನ ಕಮೆಂಟ್ ಮಾಡುತ್ತಿದ್ದಾರೆ.

    ಮಳೆಯಿಂದಾಗಿ 10 ಓವರ್ ಕಡಿತಗೊಂಡಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ನಿಗದಿತ 10 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 87 ರನ್ ಗಳಿಸಿತು. 21 ರನ್ ಗಳಿಂದ ದಕ್ಷಿಣ ಆಫ್ರಿಕಾ ಪಂದ್ಯವನ್ನು ಜಯಗಳಿಸಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews