Tag: australia

  • ಸ್ಲೆಡ್ಜಿಂಗ್ ಮಾಡಿದ್ದು ನೀವೇ ಅಲ್ವಾ – ರಿಷಬ್ ಪಂತ್‍ರನ್ನ ಸ್ವಾಗತಿಸಿದ ಆಸೀಸ್ ಪ್ರಧಾನಿ

    ಸ್ಲೆಡ್ಜಿಂಗ್ ಮಾಡಿದ್ದು ನೀವೇ ಅಲ್ವಾ – ರಿಷಬ್ ಪಂತ್‍ರನ್ನ ಸ್ವಾಗತಿಸಿದ ಆಸೀಸ್ ಪ್ರಧಾನಿ

    ಸಿಡ್ನಿ: ಹೊಸ ವರ್ಷಾಚರಣೆ ಹಾಗೂ ಸಿಡ್ನಿ ಟೆಸ್ಟ್ ಅಂಗವಾಗಿ ಟೀಂ ಇಂಡಿಯಾ ಆಟಗಾರರಿಗೆ ಆಸ್ಟ್ರೇಲಿಯಾ ಪ್ರಧಾನಿಗಳ ಸರ್ಕಾರಿ ನಿವಾಸದಲ್ಲಿ ಭೇಟಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಆಸೀಸ್ ಪ್ರಧಾನಿ ಸ್ಕಾಟ್ ಮಾರಿಸನ್ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್‍ರನ್ನು ಅಚ್ಚರಿ ರೀತಿಯಲ್ಲಿ ಸ್ವಾಗತಿಸಿ ಮಾತನಾಡಿದ್ದಾರೆ.

    ಆಸ್ಟ್ರೇಲಿಯಾ ಆಟಗಾರರು ಸೇರಿದಂತೆ ಟೀಂ ಇಂಡಿಯಾದ ಎಲ್ಲಾ ಆಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಟೀಂ ಇಂಡಿಯಾದ ಆಟಗಾರನ್ನು ಆಸೀಸ್ ಪ್ರಧಾನಿಗಳಿಗೆ ಪರಿಚಯ ಮಾಡಿಕೊಡಲಾಗುತ್ತಿತ್ತು. ಅಂತೆಯೇ ತಂಡದ ಮ್ಯಾನೇಜರ್ ಸುನಿಲ್ ಸುಭ್ರಮಣ್ಯಂ ಅವರು ರಿಷಬ್ ಪಂತ್ ಅವರನ್ನು ಪ್ರಧಾನಿಗೆ ಪರಿಚಯಿಸಿದ್ದರು.

    https://twitter.com/nibraz88cricket/status/1080404697461084161

    ರಿಷಬ್ ಪಂತ್ ಹೆಸರು ಕೇಳುತ್ತಿದಂತೆ ಅಚ್ಚರಿಗೊಂಡವರಂತೆ ಕಂಡ ಪ್ರಧಾನಿಗಳು, ನೀವೇ ಅಲ್ವಾ ಸ್ಲೆಡ್ಜಿಂಗ್ ಮಾಡಿದ್ದು ಎಂದು ಪ್ರಶ್ನಿಸಿದರು. ಈ ವೇಳೆ ರಿಷಬ್ ಪ್ರಧಾನಿಗಳತ್ತ ನಗೆ ಬೀರಿದ್ದರು. ಬಳಿಕ ಮಾತನಾಡಿದ ಪ್ರಧಾನಿಗಳು, ರಿಷಬ್ ಅವರಿಗೆ ಸ್ವಾಗತ ಕೋರಿ ನಿಮ್ಮಂತ ಸ್ಪರ್ಧಾತ್ಮಕ ಆಟವನ್ನು ಇಷ್ಟಪಡುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದರು.

    ಬಾಕ್ಸಿಂಗ್ ಡೇ ಕ್ರಿಕೆಟ್ ಪಂದ್ಯದ ವೇಳೆ ಆಸೀಸ್ ನಾಯಕ ಟಿಮ್ ಪೈನೆ ಹಾಗೂ ರಿಷಬ್ ಪಂತ್ ಪರಸ್ಪರ ಸ್ಲೆಡ್ಜಿಂಜ್ ನಡೆಸಿ ಕಾಲೆಳೆದುಕೊಂಡಿದ್ದರು. ಮೊದಲು ಆಸೀಸ್ ವಿರುದ್ಧ ಕ್ರಿಕೆಟ್ ಪಂದ್ಯಕ್ಕೆ ಧೋನಿ ಕಮ್ ಬ್ಯಾಕ್ ಮಾಡಿದ್ದನ್ನೇ ಆಸ್ತ್ರವಾಗಿಕೊಂಡಿದ್ದ ಪೈನೆ, ಬಿಗ್ ಬ್ಯಾಶ್ ಟೂರ್ನಿ ಆಡುವಂತೆ ಆಹ್ವಾನ ನೀಡಿದ್ದರು. ಅಲ್ಲದೇ ತಾನು ಪತ್ನಿಯೊಂದಿಗೆ ಸಿನಿಮಾ ಹೋದ ವೇಳೆ ಮಕ್ಕಳನ್ನು ನೋಡಿಕೊಂಡಿರು ಎಂದರು ಕಾಲೆಳೆದಿದ್ದರು. ಬಳಿಕ ಇದಕ್ಕೆ ಟಾಂಗ್ ನೀಡಿದ್ದ ರಿಷಬ್ ಪಂತ್, ಪೈನೆರನ್ನು ತಾತ್ಕಾಲಿಕ ನಾಯಕ ಎಂದು ಕರೆದು ತಿರುಗೇಟು ನೀಡಿದ್ದರು.

    ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಸಿಡ್ನಿ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಐತಿಹಾಸ ದಾಖಲೆ ನಿರ್ಮಾಣ ಮಾಡುವ ವಿಶ್ವಾಸದಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಎಲ್ ರಾಹುಲ್‍ಗೆ ಮತ್ತೊಮ್ಮೆ ಅದೃಷ್ಟದ ಬಾಗಿಲು ಓಪನ್!

    ಕೆಎಲ್ ರಾಹುಲ್‍ಗೆ ಮತ್ತೊಮ್ಮೆ ಅದೃಷ್ಟದ ಬಾಗಿಲು ಓಪನ್!

    ಮುಂಬೈ: ಆಸೀಸ್ ವಿರುದ್ಧದ ಟೆಸ್ಟ್ ಟೂರ್ನಿಯ ಅಂತಿಮ ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ 13 ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದು, ಕನ್ನಡಿಗ ಕೆಎಲ್ ರಾಹುಲ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಜಯ ಪಡೆದು ಆತ್ಮವಿಶ್ವಾಸದಲ್ಲಿರುವ ಟೀಂ ಇಂಡಿಯಾ 4ನೇ ಟೆಸ್ಟ್ ಗೆಲ್ಲುವ ಮೂಲಕ ಆಸೀಸ್ ನೆಲದಲ್ಲಿ ಇತಿಹಾಸ ನಿರ್ಮಿಸುವ ವಿಶ್ವಾಸದಲ್ಲಿದೆ. ಮಹತ್ವದ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ಕೂಡ ಆಡುವ ನಿರೀಕ್ಷೆ ಇದೆ.

    ಪಟ್ಟಿಯಲ್ಲಿ ಟೀಂ ಇಂಡಿಯಾದಲ್ಲಿ ಅನುಭವಿ ವೇಗಿ ಇಶಾಂತ್ ಶರ್ಮಾ ಸ್ಥಾನದಲ್ಲಿ ಉಮೇಶ್ ಯಾದವ್ ಅವಕಾಶ ಪಡೆದಿದ್ದು, ಗಾಯದ ಸಮಸ್ಯೆಯಿಂದ ಇಶಾಂತ್ ಶರ್ಮಾ ಹೊರಗುಳಿದಿದ್ದಾರೆ. ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಇಶಾಂತ್ 3 ಟೆಸ್ಟ್ ಪಂದ್ಯಗಳಿಂದ ಇದುವರೆಗೂ 11 ವಿಕೆಟ್ ಪಡೆದಿದ್ದರು.

    ರೋಹಿತ್ ಶರ್ಮಾ ಕೌಟುಂಬಿಕ ಕಾರಣಗಳಿಂದ ಭಾರತಕ್ಕೆ ಹಿಂದಿರುಗಿದ್ದು, 13 ಬಳಗದಲ್ಲಿ ಕೆಎಲ್ ರಾಹುಲ್ ಅವಕಾಶ ಪಡೆಯುಲು ಪ್ರಮುಖ ಕಾರಣ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ. ಟೀಂ ಇಂಡಿಯಾ ನಾಯಕ ನಾಯಕ ವಿರಾಟ್ ಕೊಹ್ಲಿ ಅಂತಿಮ ಟೆಸ್ಟ್ ಪಂದ್ಯಕ್ಕೆ ಯಾವುದೇ ಬದಲಾವಣೆ ಮಾಡದೇ ಕಣಕ್ಕೆ ಇಳಿಯುವ ನಿರ್ಧಾರ ಕೈಗೊಂಡಿದ್ದರು. ಆದರೆ ರೋಹಿತ್ ಶರ್ಮಾ ಗೈರು ಹಾಜರಿಯಿಂದ ಅನಿವಾರ್ಯವಾಗಿ ಬದಲಾವಣೆ ಮಾಡಬೇಕಿದೆ. ಇತ್ತ ಏಕದಿನ ಕ್ರಿಕೆಟ್ ಸರಣಿಗೆ ರೋಹಿತ್ ಶರ್ಮಾ ತಂಡವನ್ನು ಸೇರಿಕೊಳ್ಳಲಿದ್ದಾರೆ.

    ಈ ಹಿಂದೆ ಆರ್ ಅಶ್ವಿನ್ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ 4ನೇ ಟೆಸ್ಟ್ ಪಂದ್ಯದಿಂದಲೂ ಹೊರ ಉಳಿಯುವ ಸಾಧ್ಯತೆ ಬಗ್ಗೆ ಮಾಹಿತಿ ಲಭಿಸಿತ್ತು. ಸದ್ಯ ಜನವರಿ 3 ರಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯದ ಟಾಸ್‍ಗೂ ಮುನ್ನ ಈ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ. ಅಲ್ಲದೇ ಪಿಚ್ ಸ್ಪಿನ್ನರ್ ಗಳಿಗೆ ನೆರವಾಗಲಿರುವ ಕಾರಣ ಕುಲ್ದೀಪ್ ಯಾದವ್‍ಗೆ ಅಚ್ಚರಿ ಅವಕಾಶ ಲಭಿಸುತ್ತಾ ಅಥವಾ ಕೆ ಎಲ್ ರಾಹುಲ್ ಮತ್ತೊಂದು ಅವಕಾಶ ಪಡೆಯುತ್ತಾರ ಎನ್ನುವುದನ್ನು ಕಾದು ನೋಡಬೇಕಿದೆ.

    ಟೀಂ ಇಂಡಿಯಾ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ರಹಾನೆ, ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಬ್ ಪಂತ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಜಸ್‍ಪ್ರೀತ್ ಬುಮ್ರಾ, ಉಮೇಶ್ ಯಾದವ್.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಡ್ ರೂಮಿನಲ್ಲಿ ಪತ್ನಿಯ ಉಡುಪು ನೋಡಿ ದಂಗಾದ ಪತಿ!

    ಬೆಡ್ ರೂಮಿನಲ್ಲಿ ಪತ್ನಿಯ ಉಡುಪು ನೋಡಿ ದಂಗಾದ ಪತಿ!

    ಕ್ಯಾನ್ಬೆರಾ: ಸಾಮಾನ್ಯವಾಗಿ ಪತ್ನಿಯರು ತಮ್ಮ ಪತಿಯನ್ನು ಆಕರ್ಷಿಸಲು ತುಂಬಾ ಚೆನ್ನಾಗಿರುವ ಅಥವಾ ಹಾಟ್ ಆಗಿರುವ ವಿವಿಧ ರೀತಿ ಉಡುಪುಗಳನ್ನು ಧರಿಸುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಪತಿಯನ್ನು ಆಕರ್ಷಿಸಲು ವಿಚಿತ್ರ ಉಡುಪು ಧರಿಸಿದ್ದು, ಇದರಿಂದ ಪತಿ ಹೆಂಡತಿಯನ್ನೇ ನೋಡಿ ದಂಗಾಗಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ಇತ್ತೀಚಿಗೆ ಫ್ಯಾಷನ್ ಜಗತ್ತಿನಲ್ಲಿ ವಿಭಿನ್ನವಾದ ರೀತಿಯ ಉಡುಪುಗಳು ಅಂದರೆ ಪ್ರಾಣಿ, ಪಕ್ಷಿಗಳ ಚಿತ್ರವಿರುವ ಉಡುಪುಗಳು ಮಾರುಕಟ್ಟೆಗೆ ಬರುತ್ತಿದೆ. ಇಂತಹ ಉಡುಪುಗಳು ಮಹಿಳೆಯರನ್ನು ಬಹುಬೇಗ ಆಕರ್ಷಿಸುತ್ತವೆ. ಆದರೆ ಆಸ್ಟ್ರೇಲಿಯಾ ಮಹಿಳೆ ಇಂತಹ ವಿಚಿತ್ರ ಉಡುಪು ಧರಿಸಿ ಈಗ ಆಸ್ಪತ್ರೆಗೆ ದಾಖಲಾಗಿದ್ದಾಳೆ.

    ಮಹಿಳೆ ಹಾವಿನ ರೂಪದ ಉದ್ದನೆಯ ಸ್ಟಾಕಿಂಗ್ಸ್ ತೊಟ್ಟು ಹಾಸಿಗೆ ಮೇಲೆ ಮಲಗಿದ್ದಾಳೆ. ಈ ವೇಳೆ ಆಕೆಯ ಪತಿ ಬೆಡ್ ರೂಂಗೆ ಬಂದಿದ್ದಾನೆ. ಆಗ ಹಾಸಿಗೆಯ ಮೇಲಿನ ಪತ್ನಿಯ ಕಾಲುಗಳನ್ನು ನೋಡಿ ನಿಜವಾದ ಎರಡು ಹಾವು ಬಂದಿದೆ ಎಂದು ತಿಳಿದು ಪತಿ ದಂಗಾಗಿದ್ದಾನೆ. ಬಳಿಕ ಮೆಲ್ಲಗೆ ಬಂದು ಬೇಸ್‍ಬಾಲ್ ಬ್ಯಾಟ್ ತೆಗೆದುಕೊಂಡು ಹಾವಿನ ತಲೆ ಎಂದುಕೊಂಡು ಪತ್ನಿಯ ಕಾಲಿಗೆ ಹೊಡೆದಿದ್ದಾನೆ. ಪರಿಣಾಮ ಪತ್ನಿಯ ಕಾಲಿಗೆ ಬಲವಾದ ಏಟು ಬಿದ್ದು ರಕ್ತ ಬಂದಿದೆ.

    ನಂತರ ನಿಜಾಂಶ ತಿಳಿದುಕೊಂಡ ಪತಿ ತಕ್ಷಣ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಧರಿಸಿದ್ದ ಹಾವಿನ ಚಿತ್ರದ ಸ್ಟಾಕಿಂಗ್ಸ್ ಮತ್ತು ಇನ್ನೊಂದು ಕಡೆ ಆಕೆಗೆ ಪೆಟ್ಟಾಗಿ ಬ್ಯಾಂಡೇಜ್ ಮಾಡಿರುವ ಫೋಟೋವನ್ನು ಆಸ್ಟ್ರೇಲಿಯಾದ ಫೇಸ್‍ಬುಕ್ ಪೇಜ್ ನಲ್ಲಿ ‘ಗಂಭೀರವಾದ ಪೋಸ್ಟ್’ ಎಂದು ಬರೆದು ನಡೆದ ಘಟನೆಯ ಬಗ್ಗೆ ವಿವರಿಸಿದೆ. ಅಷ್ಟೇ ಅಲ್ಲದೇ ಇನ್ನು ಮುಂದೆ ಮಹಿಳೆಯರು ಪ್ರಾಣಿ ಚಿತ್ರದ ಪ್ರಿಂಟ್ ಇರುವ ಸ್ಟಾಕಿಂಗ್ಸ್ ಉಡುಪನ್ನು ಖರೀದಿಸುವಾಗ ಮತ್ತು ಧರಿಸುವಾಗ ಎಚ್ಚರವಾಗಿರಿ ಎಂದು ತಿಳಿಸಿದೆ.

    ಮಹಿಳೆ ಧರಿಸಿರುವ ಸಾಕ್ಸ್ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗುತ್ತಿದ್ದು, ಈ ಪೋಸ್ಟನ್ನು ಸುಮಾರು 800ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದು, 300ಕ್ಕೂ ಅಧಿಕ ಜನರು ಕಮೆಂಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸೀಸ್ ನಾಯಕ ಪೈನೆ ಚಾಲೆಂಜ್ ಸ್ವೀಕರಿಸಿದ ರಿಷಬ್ ಪಂತ್

    ಆಸೀಸ್ ನಾಯಕ ಪೈನೆ ಚಾಲೆಂಜ್ ಸ್ವೀಕರಿಸಿದ ರಿಷಬ್ ಪಂತ್

    ಮೆಲ್ಬರ್ನ್: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಆಸೀಸ್ ತಂಡ ನಾಯಕ ಟಿಮ್ ಪೈನೆ ಮನೆಗೆ ಭೇಟಿ ನೀಡಿದ್ದು, ಪೈನೆ ಹಾಗೂ ಬೋನಿ ದಂಪತಿಯ ಮಕ್ಕಳನ್ನು ಎತ್ತಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಈ ಮೂಲಕ ಪೈನೆ ಚಾಲೆಂಜ್ ಸ್ವೀಕರಿಸಿದ್ದಾರೆ.

    ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ವೇಳೆ ಪರಸ್ಪರ ಕಾಲೆಳೆದುಕೊಂಡಿದ್ದ ಪೈನೆ ಹಾಗೂ ರಿಷಬ್ ಪಂತ್ ಕ್ರೀಡಾಂಗಣದಲ್ಲಿ ಆಟದ ಹೊರತಾಗಿಯೂ ತಮ್ಮ ಸ್ಲೆಡ್ಜಿಂಗ್ ಮೂಲಕವೂ ಎಲ್ಲರ ಗಮನ ಸೆಳೆದಿದ್ದರು.

    ಮೆಲ್ಬರ್ನ್ ಪಂದ್ಯದ 3ನೇ ದಿನದಾಟದ ವೇಳೆ ಧೋನಿ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿರುವುದನ್ನು ಪ್ರಸ್ತಾಪಿಸಿ ಕಾಲೆಳೆದಿದ್ದ ಪೈನೆ, ಬಿಗ್ ಬ್ಯಾಷ್ ಲೀಗ್ ಆಡುವಂತೆ ಸಲಹೆ ನೀಡಿದ್ದರು. ಅಲ್ಲದೇ ನಾನು ಪತ್ನಿಯೊಂದಿಗೆ ಸಿನಿಮಾಗೆ ತೆರಳಿದ ವೇಳೆ ತನ್ನ ಮಕ್ಕಳನ್ನು ನೋಡಿಕೋ ಎಂದು ಹೇಳಿ ಸ್ಲೆಡ್ಜಿಂಗ್ ಮಾಡಿದ್ದರು. ಬಳಿಕ ಪೈನೆಗೆ ತಿರುಗೇಟು ನೀಡಿದ್ದ ರಿಷಬ್ ಪಂತ್, ಪೈನೆಗೆ ತಾತ್ಕಾಲಿಕ ನಾಯಕ ಎಂದು ಕಾಲೆಳೆದಿದ್ದರು.

    ಸದ್ಯ ಈ ಇಬ್ಬರ ಒಡನಾಟ ಕ್ರೀಡಾಂಗಣದ ಆಚೆಗೂ ಮುಂದುವರೆದಿದ್ದು, ಸದ್ಯ ರಿಷಬ್ ಪಂತ್ ಪೈನೆರ ಕುಟುಂಬವನ್ನ ಭೇಟಿ ಮಾಡಿದ್ದಾರೆ. ಅಲ್ಲದೇ ಪೈನೆ ಮಕ್ಕಳನ್ನು ಎತ್ತಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ಪೈನೆ ಪತ್ನಿ ಬೋನಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಪಂತ್ ಒಬ್ಬ ಉತ್ತಮ ಮಕ್ಕಳ ಪಾಲಕ ಎಂದು ಬರೆದುಕೊಂಡಿದ್ದಾರೆ. ಇದೇ ಚಿತ್ರವನ್ನ ಐಸಿಸಿ ಕೂಡ ಟ್ವೀಟ್ ಮಾಡಿ ಚಾಲೆಂಜ್ ಸ್ವೀಕರಿಸಿದ ರಿಷಬ್ ಪಂತ್ ಎಂದು ಬರೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸ್ಟ್ರೇಲಿಯಾದಲ್ಲಿ ವಿರುಷ್ಕಾ ದಂಪತಿಯಿಂದ ಹೊಸ ವರ್ಷಾಚರಣೆ

    ಆಸ್ಟ್ರೇಲಿಯಾದಲ್ಲಿ ವಿರುಷ್ಕಾ ದಂಪತಿಯಿಂದ ಹೊಸ ವರ್ಷಾಚರಣೆ

    ಮೆಲ್ಬರ್ನ್: ಟೀಂ ಇಂಡಿಯಾ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಆಸ್ಟ್ರೇಲಿಯಾದಲ್ಲಿ ಹೊಸ ವರ್ಷವನ್ನು ಸಂಭ್ರಮಿಸಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಜೊತೆಗಿರುವ ಫೋಟೋಗಳನ್ನು ಹಾಕಿ, ಎಲ್ಲರಿಗೂ ಹೊಸವರ್ಷದ ಶುಭಾಶಯ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

    ಆಸ್ಟೇಲಿಯಾ, ಅಮೆರಿಕ, ನ್ಯೂಜಿಲೆಂಡ್ ಸೇರಿದಂತೆ ಅನೇಕ ದೇಶದ ಜನತೆ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿ ಸಂಭ್ರಮಿಸಿದ್ದಾರೆ. ನ್ಯೂಯಾರ್ಕ್ ನಲ್ಲಿ ಹರಿದು ಹೋಗುವ ಹಡ್ಸನ್ ನದಿ ಸೇತುವೆಯ ಮೇಲೆ ಬಣ್ಣ, ಬಣ್ಣ ಪಟಾಕಿ ಸಿಡಿಸಿ ಹೊಸ ವರ್ಷಾಚರಣೆಯನ್ನು ಸಂಭ್ರಮಿಸಲಾಯಿತು. ನಗರ ಹಾಗೂ ಸೇತುವೆ ಲಕರ್ ಫುಲ್ ದೀಪಗಳಿಂದ ಕಂಗೊಳಿಸುತ್ತಿದೆ. ನ್ಯೂಜಿಲೆಂಡ್‍ನ ಆಕ್ಲೆಂಡ್ ಮಹಾನಗರದಲ್ಲಿ ಸಾವಿರಾರು ಜನರು ಸೇರಿ ಪಟಾಕಿಯ ಮೂಲಕ ನಗರವನ್ನು ಜಗಮಗಿಸುವಂತೆ ಮಾಡಿದ್ದಾರೆ.

    ಹೊಸ ವರ್ಷಾಚರಣೆಯಲ್ಲಿ ತೊಡಗಿರುವ ಜನತೆ ತಮ್ಮ ಆಪ್ತರು, ಸಂಬಂಧಿಕರು, ಸಹೋದ್ಯೋಗಿಗಳ ಜೊತೆಗೆ ಸೇರಿ ಮಧ್ಯರಾತ್ರಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸುತ್ತಿದ್ದಾರೆ. ನಗರದ ಬೀದಿಗಳು ದೀಪಾಲಂಕಾರದಿಂದ ಜಗಮಗಿಸುತ್ತಿವೆ. ಸೇತುವೆ, ಬಹುಮಹಡಿಯ ಕಟ್ಟಡ, ಟವರ್ ಕಂಬಗಳ ಮೇಲೆ ಪಟಾಕಿಗಳನ್ನು ಸಿಡಿಸಿ ಹೊಸ ವರ್ಷವನ್ನು ಸ್ವಾಗತಿಸಲಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೆಲುವಿನ ಮತ್ತಲ್ಲಿ ಬಿಯರ್ ಕುಡಿಯುತ್ತಾ ಎಂಟ್ರಿ ಕೊಟ್ಟ ರವಿಶಾಸ್ತ್ರಿ – ವೈರಲ್ ವಿಡಿಯೋ

    ಗೆಲುವಿನ ಮತ್ತಲ್ಲಿ ಬಿಯರ್ ಕುಡಿಯುತ್ತಾ ಎಂಟ್ರಿ ಕೊಟ್ಟ ರವಿಶಾಸ್ತ್ರಿ – ವೈರಲ್ ವಿಡಿಯೋ

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದ ಟೀಂ ಇಂಡಿಯಾ ಸಂಭ್ರಮದಲ್ಲಿ ತೊಡಗಿದ್ದು, ಈ ವೇಳೆ ಕೋಚ್ ರವಿಶಾಸ್ತ್ರಿ ಬಿಯರ್ ಕುಡಿಯುತ್ತಾ ಬಸ್ಸಿನಿಂದ ಕೆಳಗಿಳಿದು ತೆರಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರವಿಶಾಸ್ತ್ರಿ ಬಿಯರ್ ಕೂಡಿಯುತ್ತಿರುವ ಫೋಟೋ ಹಾಗೂ ವಿಡಿಯೋಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಬರೆದುಕೊಂಡಿದ್ದಾರೆ.

    ಗೆಲುವಿನ ಸಂಭ್ರಮದಲ್ಲಿ ಟೀಂ ಇಂಡಿಯಾ ಆಟಗಾರರು ಮೆಲ್ಬರ್ನ್ ಕ್ರೀಡಾಂಗಣದ ಕೊಠಡಿಯಲ್ಲಿ ಫೋಟೋಗೆ ಪೋಸ್ ನೀಡಿದ ಸಂದರ್ಭದಲ್ಲೂ ಕೋಚ್ ರವಿಶಾಸ್ತ್ರಿ ಬಿಯರ್ ಬಾಟಲಿಯೊಂದಿಗೆ ಗೆಲುವಿನ ನಗೆ ತೋರಿದ್ದಾರೆ. ಬಳಿಕ ಹೋಟೆಲ್ ಕೊಠಡಿಗೆ ತೆರಳುವ ವೇಳೆ ಬಸ್ಸಿನಿಂದ ಕೆಳಗಿಳಿದ ರವಿಶಾಸ್ತ್ರಿ ಮಾಧ್ಯಮಗಳು ಇರುವುದನ್ನು ಲೆಕ್ಕಿಸದೇ ಬಿಯರ್ ಕುಡಿಯುತ್ತಾ ಮುಂದೇ ಸಾಗಿದ್ದಾರೆ. ಈ ದೃಶ್ಯ ತಮ್ಮ ವಿರುದ್ಧ ಟೀಕೆ ಮಾಡಿದ್ದ ವ್ಯಕ್ತಿಗಳಿಗೆ ಟಾಂಗ್ ಕೊಟ್ಟಂತೆ ಕಂಡು ಬಂದಿತ್ತು.

    ರವಿಶಾಸ್ತ್ರಿ ಅವರ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಕೋಚ್ ಟೀಂ ಇಂಡಿಯಾಗೆ ಅಗತ್ಯವಿಲ್ಲ. ರವಿಶಾಸ್ತ್ರಿಗಿಂತ ಅತ್ಯುತ್ತಮ ಕೋಚ್ ಆಯ್ಕೆಗಳು ನಮ್ಮ ಮುಂದಿದೆ. ನೀವು ಗ್ರೇಟ್ ಟೀಂ ಇಂಡಿಯಾದ ಕೋಚ್ ಎಂಬುವುದನ್ನು ಮರೆಯಬಾರದು ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

    https://twitter.com/msd_junior/status/1079408029089509376?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುದ್ದಾದ ಹೆಣ್ಣು ಮಗುವಿನ ತಂದೆಯಾದ ರೋಹಿತ್ ಶರ್ಮಾ

    ಮುದ್ದಾದ ಹೆಣ್ಣು ಮಗುವಿನ ತಂದೆಯಾದ ರೋಹಿತ್ ಶರ್ಮಾ

    ಮುಂಬೈ: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಐತಿಹಾಸಿಕ ಗೆಲವು ಪಡೆದ ಸಂಭ್ರಮದಲ್ಲಿದ್ದ ರೋಹಿತ್ ಶರ್ಮಾಗೆ ಕೆಲವೇ ಗಂಟೆಗಳ ಅಂತರದಲ್ಲಿ ಮತ್ತೊಂದು ಸಿಹಿ ಸುದ್ದಿ ಲಭಿಸಿದ್ದು, ರೋಹಿತ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ.

    ರೋಹಿತ್ ಪತ್ನಿ ರಿತಿಕಾ ಮುಂಬೈನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಸುದ್ದಿ ತಿಳಿಯುತ್ತಿದಂತೆ ಕುಟುಂಬದೊಂದಿಗೆ ಕಾಲ ಕಳೆಯಲು ಇಚ್ಛಿಸಿರುವ ರೋಹಿತ್ ಆಸ್ಟ್ರೇಲಿಯಾದಿಂದ ತವರಿಗೆ ವಾಪಸ್ ಆಗಿದ್ದಾರೆ. ಅಂದಹಾಗೇ 2017 ಡಿ. 13 ರಂದು ರೋಹಿತ್ ಶರ್ಮಾ ಮತ್ತು ರಿತಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ್ದ ರೋಹಿತ್ ಜನವರಿ 3ರಿಂದ ಆರಂಭವಾಗಲಿರುವ ಅಂತಿಮ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸುವುದು ಅನುಮಾನವಾಗಿದೆ. ಈ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನ ಪಡೆಯುವ ಸಾಧ್ಯತೆ ಇದೆ.

    ರೋಹಿತ್ ಶರ್ಮಾ ಆಸೀಸ್ ಸರಣಿಯ ಟೆಸ್ಟ್ ಟೂರ್ನಿಗೆ ಆಯ್ಕೆ ಆಗುವ ಮೂಲಕ ಟೆಸ್ಟ್ ಕ್ರಿಕೆಟ್ ಮಾದರಿಗೆ ಕಮ್ ಬ್ಯಾಕ್ ಮಾಡಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿ ಕ್ರಮವಾಗಿ 37, 1 ರನ್ ಗಳಿಸಿದ್ದ ರೋಹಿತ್ ಗಾಯದ ಸಮಸ್ಯೆಯಿಂದ 2ನೇ ಟೆಸ್ಟ್ ನಿಂದ ಹೊರಗೆ ಉಳಿದಿದ್ದರು. 3ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಅಜೇಯ 63 ರನ್ ಗಳಿಸಿ ತಂಡದ ಸವಾಲಿನ ಮೊತ್ತ ಗಳಿಸಲು ಕಾಣಿಕೆ ನೀಡಿದ್ದರು.

    ಸದ್ಯ ಆಸೀಸ್ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಅಂತರದಲ್ಲಿ ಭಾರತ ಮುನ್ನಡೆ ಸಾಧಿಸಿದೆ. ಜನವರಿ 3ರಿಂದ ಸಿಡ್ನಿ ಅಂಗಳದಲ್ಲಿ ಕೊನೆಯ ಟೆಸ್ಟ್ ಆರಂಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಗೆಲುವು

    ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಗೆಲುವು

    ಮೆಲ್ಬೋರ್ನ್: ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 137 ರನ್‍ಗಳ ಗೆಲುವು ಸಾಧಿಸಿದೆ.

    ಮೆಲ್ಬೋರ್ನ್ ಟೆಸ್ಟ್ ನಲ್ಲಿ ಭಾರತಕ್ಕೆ ಗೆಲುವಿನಂಚಿನಲ್ಲಿ ಮಳೆರಾಯ ಕೈಕೊಟ್ಟಿದ್ದನು. ಕೊನೆಯ ದಿನವಾದ ಇಂದು ಮಳೆಯಿಂದಾಗಿ ಪಂದ್ಯ ಆರಂಭದಲ್ಲಿ ವಿಳಂಬವಾದರೂ ಸಹ ಭಾರತ 137 ರನ್‍ಗಳಿಂದ ಗೆಲುವಿನ ಕೇಕೆ ಹಾಕಿದೆ.

    399 ರನ್‍ಗಳ ಅಸಾಧ್ಯ ಗೆಲುವಿನ ಗುರಿ ಬೆನ್ನಟ್ಟಿದ ಆಸೀಸ್, 261 ರನ್‍ಗಳಿಗೆ ಸರ್ವ ಪತನವಾಯಿತು. 4ನೇ ದಿನದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿತ್ತು. ಇಂದು ಬ್ಯಾಟಿಂಗ್ ಆರಂಭಿಸುವಾಗ ಸ್ವಲ್ಪ ಹೊತ್ತು ಕಾಡಿದ ವರುಣ, 4 ರನ್ ಗಳಿಸುವಷ್ಟರಲ್ಲೇ ಆಸೀಸ್ ಸರ್ವಪತನ ಕಂಡಿತು.

    ಕಡೆ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯ ಪರ ಪ್ಯಾಟ್ ಕಮಿನ್ಸ್ 63 ಹಾಗೂ ನಾಥನ್ ಲಿಯೋನ್ 7 ಗಳಿಸಿದರು. ಭಾರತದ ಪರ ಬೂಮ್ರಾ, ಜಡೇಜಾಗೆ ತಲಾ 3 ವಿಕೆಟ್, ಶಮಿ ಹಾಗೂ ಶರ್ಮಾಗೆ ತಲಾ 2 ವಿಕೆಟ್ ಪಡೆದಿದ್ದಾರೆ.

    4 ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ 2-1 ಮುನ್ನಡೆಯನ್ನು ಕಾಯ್ದುಕೊಂಡಿದೆ. ಜಸ್ಪ್ರೀತ್ ಬೂಮ್ರಾ ಪಂದ್ಯ ಶ್ರೇಷ್ಠರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಕ್ಸಿಂಗ್ ಡೇ ಟೆಸ್ಟ್: ಐತಿಹಾಸಿಕ ಗೆಲುವಿನ ಸನಿಹದಲ್ಲಿ ಟೀಂ ಇಂಡಿಯಾ

    ಬಾಕ್ಸಿಂಗ್ ಡೇ ಟೆಸ್ಟ್: ಐತಿಹಾಸಿಕ ಗೆಲುವಿನ ಸನಿಹದಲ್ಲಿ ಟೀಂ ಇಂಡಿಯಾ

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವಿನ ಸನಿಹದಲ್ಲಿದ್ದು, ಗೆಲ್ಲಲು ಕೇವಲ 2 ವಿಕೆಟ್ ಮಾತ್ರ ಬೇಕಿದೆ.

    ಪಂದ್ಯದ 4ನೇ ದಿನದಾಟದಲ್ಲಿ ಟೀಂ ಇಂಡಿಯಾ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆಸೀಸ್ ತಂಡ 2ನೇ ಇನ್ನಿಂಗ್ಸ್ ನಲ್ಲಿ 253 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿದೆ. ಟೀಂ ಇಂಡಿಯಾ ಪಂದ್ಯದಲ್ಲಿ ಗೆಲುವು ಪಡೆದಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆಯನ್ನು ಸಾಧಿಸಲಿದೆ.

    4ನೇ ದಿನದಾಟವನ್ನು 5 ವಿಕೆಟ್ ಕಳೆದುಕೊಂಡು 54 ರನ್ ಗಳಿಂದ ಆರಂಭಿಸಿದ ಟೀಂ ಇಂಡಿಯಾ 2ನೇ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ಕಳೆದುಕೊಂಡು 106 ರನ್ ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿತು. ಇದರೊಂದಿಗೆ 399 ರನ್ ಗಳ ಸವಾಲಿನ ಮೊತ್ತವನ್ನು ಆಸೀಸ್‍ಗೆ ನೀಡಿತು. ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧ ಶತಕ ಸಿಡಿಸಿ ಭರವಸೆ ಮೂಡಿಸಿದ್ದ ಮಯಾಂಕ್ ಅಗರ್ವಾಲ್ 42 ರನ್ ಗಳಿಸಿ ಔಟಾಗುವ ಮೂಲಕ ಪಾದಾರ್ಪಣೆ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ ದಾಖಲೆ ಮುರಿಯುವ ಅವಕಾಶದಿಂದ ವಂಚಿತರಾದರು. ಗವಾಸ್ಕರ್ 1971 ರ ಪಾದಾರ್ಪಣೆ ಪಂದ್ಯದ 2 ಇನ್ನಿಂಗ್ಸ್ ಗಳಲ್ಲಿ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದರು.

    ಇತ್ತ ಸವಾಲಿನ ಮೊತ್ತ ಬೆನ್ನತ್ತಿದ್ದ ಆಸೀಸ್ ತಂಡದ ವಿರುದ್ಧ ಬಿಗಿ ಬೌಲಿಂಗ್ ದಾಳಿ ನಡೆಸಿ ಇಂಡಿಯಾ ಬೌಲರ್ ಗಳು ಮಾರಕವಾದರು. ಆಸೀಸ್ ಪರ ಮಾರ್ಷ್ 44 ರನ್, ಹೇಡ್ 34 ರನ್, ಖವಾಜಾ 33 ರನ್ ಹಾಗೂ ಅಂತಿಮ ಹಂತದಲ್ಲಿ ಕಮ್ಮಿನ್ಸ್ 41* ಮತ್ತು ಲಯನ್ 1* ರನ್ ಗಳಿಸಿ ಅಂತಿಮ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಟೀಂ ಇಂಡಿಯಾ ಪರ ಜಡೇಜಾ 3 ವಿಕೆಟ್, ಬುಮ್ರಾ, ಶಮಿ ತಲಾ 2 ವಿಕೆಟ್  ಹಾಗೂ  ಇಶಾಂತ್ ಶರ್ಮಾ 1 ವಿಕೆಟ್ ಪಡೆದರು.

    ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಹಾಗೂ 2ನೇ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ಪಡೆದ ಬುಮ್ರಾ ಒಟ್ಟು 8 ವಿಕೆಟ್ ಪಡೆದು ವೃತ್ತಿ ಜೀವನದ ಶ್ರೇಷ್ಠ ಪ್ರದರ್ಶನ ನೀಡಿದರು.

    ಸಂಕ್ಷಿಪ್ತ ಸ್ಕೋರ್:
    ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ – 443/7 ಡಿಕ್ಲೇರ್
    ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ – 151 ಅಲೌಟ್
    ಟೀಂ ಇಂಡಿಯಾ 2ನೇ ಇನ್ನಿಂಗ್ಸ್ – 106/8 ಡಿಕ್ಲೇರ್
    ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ _ 253/8*

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೆಂಡ್ತಿ ಜೊತೆ ಫಿಲ್ಮ್ ಹೋದ್ರೆ ನನ್ನ ಮಗು ನೋಡ್ಕೊ – ಆಸೀಸ್ ನಾಯಕನ ಉದ್ಧಟತನ

    ಹೆಂಡ್ತಿ ಜೊತೆ ಫಿಲ್ಮ್ ಹೋದ್ರೆ ನನ್ನ ಮಗು ನೋಡ್ಕೊ – ಆಸೀಸ್ ನಾಯಕನ ಉದ್ಧಟತನ

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ನಾಯಕ ಪೈನೆ ಮತ್ತೆ ತಮ್ಮ ಉದ್ಧಟತನವನ್ನು ಮೆರೆದಿದ್ದು, ರಿಷಬ್ ಪಂತ್ ವಿರುದ್ಧ ತಮ್ಮ ಸ್ಲೆಡ್ಜಿಂಗ್ ಮುಂದುವರೆಸಿದ್ದಾರೆ.

    ಮೆಲ್ಬರ್ನ್ ಟೆಸ್ಟ್ ಪಂದ್ಯದ ವೇಳೆ ರೋಹಿತ್ ಶರ್ಮಾರನ್ನು ಕೆಣಕಿದ್ದ ಪೈನೆ ಇಂದು ಒಂದು ಹೆಜ್ಜೆ ಮುಂದೆ ಹೋಗಿ ರಿಷಬ್ ಪಂತ್ ಕಾಲೆಳೆದಿದ್ದಾರೆ. 3ನೇ ದಿನದಾಟದ 26ನೇ ಓವರಿನ ಲಯನ್ ಬೌಲಿಂಗ್ ವೇಳೆ ಘಟನೆ ನಡೆದಿದೆ. ಎಂಎಸ್ ಧೋನಿ ಆಸೀಸ್ ವಿರುದ್ಧ ಏಕದಿನ ಟೂರ್ನಿಗೆ ವಾಪಸ್ ಆಗಿದ್ದು, ಟೆಸ್ಟ್ ಸರಣಿ ಮುಗಿದ ಬಳಿಕ ಆಸೀಸ್ ಬಿಗ್ ಬ್ಯಾಶ್ ಲೀಗ್ ಆಡು. ಆಸೀಸ್‍ನ ಹೋಬಾರ್ಡ್ ಪ್ರದೇಶ ಸುಂದರ ತಾಣವಾಗಿದ್ದು, ಆದ್ದರಿಂದ ನೀನು ಹೋಬಾರ್ಟ್ ಹರಿಕೇನ್ಸ್ ತಂಡದ ಪರ ಆಡು. ಅಲ್ಲದೇ ಆಸ್ಟ್ರೇಲಿಯದಲ್ಲೇ ರಜೆ ದಿನಗಳನ್ನು ಮಜಾ ಮಾಡಿ ಎಂದಿದ್ದಾರೆ.

    ಕ್ರೀಡಾ ಸ್ಫೂರ್ತಿಯನ್ನು ಮರೆತಿರುವ ಪೈನೆ ತಮ್ಮ ಮಾತನ್ನು ಮುಂದುವರೆಸಿ, ಆಸ್ಟ್ರೇಲಿಯಾದ ಅದ್ಭುತವಾದ ಜಾಗಕ್ಕೆ ನಿನ್ನನ್ನು ಕರೆದುಕೊಂಡು ಹೋಗುತ್ತೇವೆ. ಊಟಕ್ಕೆ ನಮ್ಮ ಮನೆಗೆ ಬಂದು. ನಾನು ನನ್ನ ಹೆಂಡತಿ ಫಿಲ್ಮ್ ನೋಡಲು ಹೊರಗಡೆ ಹೋದಾಗ ಮನೆಯಲ್ಲಿ ನನ್ನ ಮಕ್ಕಳನ್ನು ನೋಡಿಕೊಂಡು ಇರು ಎಂದು ಹೇಳಿದ್ದಾರೆ. ಪೈನೆ ಸಂಭಾಷಣೆ ಸಂಪೂರ್ಣ ಧ್ವನಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv