Tag: australia

  • ಖವಾಜಾ ಫಿಫ್ಟಿ – ಸ್ಪರ್ಧಾತ್ಮಕ ಮೊತ್ತ ಪೇರಿಸಿದ ಆಸೀಸ್

    ಖವಾಜಾ ಫಿಫ್ಟಿ – ಸ್ಪರ್ಧಾತ್ಮಕ ಮೊತ್ತ ಪೇರಿಸಿದ ಆಸೀಸ್

    ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 236 ರನ್ ಗಳಿಗೆ ಕಟ್ಟಿಹಾಕಲು ಯಶಸ್ವಿಯಾಗಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ ನಾಯಕ ಆ್ಯರೋನ್ ಫಿಂಚ್‍ ರನ್ನು ಶೂನ್ಯಕ್ಕೆ ಪೆವಿಲಿಯನ್‍ಗಟ್ಟುವ ಮೂಲಕ ಬುಮ್ರಾ ಮೊದಲ ಅಘಾತ ನೀಡಿದರು. ಆದರೆ ತಂಡಕ್ಕೆ ಆಸರೆಯಾದ ಉಸ್ಮಾನ್ ಖವಾಜಾ, ಸ್ಟೋಯ್ನಿಸ್ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿ 2ನೇ ವಿಕೆಟ್‍ಗೆ 84 ರನ್ ಗಳ ಜೊತೆಯಾಟ ನೀಡಿದರು.

    ವಿಶೇಷ ಎಂದರೆ ಫಿಂಚ್ ಇಂದು 100ನೇ ಏಕದಿನ ಪಂದ್ಯವನ್ನು ಆಡಿದ್ದರು. ಆದರೆ ಕಳೆದ 7 ಇನ್ನಿಂಗ್ಸ್ ಗಳಲ್ಲಿ ಕಡಿಮೆ ಮೊತ್ತಕ್ಕೆ ಔಟಾಗುವ ಮೂಲಕ ಫಿಂಚ್ ವೈಫಲ್ಯ ಅನುಭವಿಸಿದ್ದಾರೆ. 0, 8, 0, 14, 6, 6, 3, 8 ರನ್ ಫಿಂಚ್ ಗಳಿಸಿದ ಇತ್ತೀಚಿನ ರನ್ ಮೊತ್ತವಾಗಿದೆ.

    ಟೀಂ ಇಂಡಿಯಾಗೆ ಮುಳುವಾಗುತ್ತಿದ್ದ ಈ ಜೋಡಿಯನ್ನು ಬೇರ್ಪಡಿಸಲು ಸ್ಪಿನ್ನರ್ ಜಾಧವ್ ಯಶಸ್ವಿಯಾದರು. 37 ರನ್ ಗಳಿಸಿದ್ದ ಸ್ಟೋಯ್ನಿಸ್ ವಿಕೆಟ್ ಪಡೆದ ಜಾಧವ್ ಆಸೀಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಇತ್ತ 76 ಎಸೆತ ಎದುರಿಸಿದ್ದ ಖವಾಜಾ ಐದು ಬೌಂಡರಿ, ಆಕರ್ಷಕ ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು. ಅರ್ಧ ಶತಕ ಗಳಿಸಿದ್ದ ಖವಾಜಾರನ್ನ ಕುಲ್ದೀಪ್ ಯಾದವ್ ಪೆವಿಲಿಯನ್‍ಗಟ್ಟಿದರು. ಬಳಿಕ ಬಂದ ಹ್ಯಾಂಡ್ಸ್‍ಕಂಬ್ 19 ರನ್ ಗಳಿಸಿ ಧೋನಿಗೆ ಸ್ಟಂಪಿಂಗ್ ಬಲಿಯಾದರು. ಈ ಹಂತದಲ್ಲಿ ಆಸೀಸ್ 30 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿತ್ತು.

    ಈ ಹಂತದಲ್ಲಿ ಜೊತೆಯಾದ ಸ್ಫೋಟಕ ಆಟಗಾರ ಮ್ಯಾಕ್ಸ್ ವೆಲ್ ಹಾಗೂ ಮೊದಲ ಪಂದ್ಯವಾಡಿದ ಟರ್ನರ್ ನಿಧಾನಗತಿಯಲ್ಲಿ ತಂಡ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. 21 ರನ್ ಗಳಿಸಿದ್ದ ಟರ್ನರ್ ಹಾಗೂ 40 ರನ್ ಗಳಿಸಿದ್ದ ಮಾಕ್ಸ್ ವೆಲ್‍ರನ್ನ ಬೌಲ್ಡ್ ಮಾಡಿ ಮೊಹಮ್ಮದ್ ಶಮಿ ಮಿಂಚಿದರು. ಮ್ಯಾಕ್ಸ್ ವೆಲ್ ಭಾರತ ವಿರುದ್ಧ ಕಳೆದ 3 ಇನ್ನಿಂಗ್ಸ್ ಗಳಲ್ಲಿ 200 ಪ್ಲಸ್ ರನ್ ಗಳಿಸಿದ ಸಾಧನೆ ಮಾಡಿದರು.

    ಅಂತಿಮ ಹಂತದಲ್ಲಿ ತಂಡ ಸವಾಲಿನ ಮೊತ್ತ ಪೇರಿಸಲು ಕಾಣಿಕೆ ನೀಡಿದ ನೈಲ್ 28 ರನ್ ಹಾಗೂ ಅಲೆಕ್ಸ್ ಕ್ಯಾರಿ ಅಜೇಯ 36 ರನ್ ಗಳಿಸಿದರು. ಈ ಜೋಡಿ 61 ರನ್ ಜೊತೆಯಾಟ ನೀಡಿತ್ತು. ನಿಗದಿತ 50 ಓವರ್ ಗಳಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತು. ಭಾರತದ ಪರ ಶಮಿ 44/2, ಕುಲ್ದೀಪ್ ಯಾದವ್ 46/2, ಬುಮ್ರಾ 60/2 ವಿಕೆಟ್ ಪಡೆದರೆ, ಕೇದಾರ್ ಜಾಧವ್ 1 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಷ್ಟ್ರೀಯ ತಂಡಕ್ಕೆ ಮರಳಲು ದ್ರಾವಿಡ್ ಕಾರಣ: ಕೆಎಲ್ ರಾಹುಲ್

    ರಾಷ್ಟ್ರೀಯ ತಂಡಕ್ಕೆ ಮರಳಲು ದ್ರಾವಿಡ್ ಕಾರಣ: ಕೆಎಲ್ ರಾಹುಲ್

    ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಎರಡು ಟಿ20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಆಟಗಾರರ ಕೆಎಲ್ ರಾಹುಲ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.

    ತವರಿನ ಪಂದ್ಯದಲ್ಲಿ ಅರ್ಧ ಶತಕ ಸಿಡಿಸುವ ಅವಕಾಶ ಕಳೆದುಕೊಂಡರು ಸಹ ಬಿರುಸಿನ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದಾರೆ. ಇದೇ ವೇಳೆ ಕಾಫಿ ವಿತ್ ಕರಣ್ ಶೋ ವಿವಾದ ಬಳಿಕ ಮತ್ತೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಕೋಚ್ ರಾಹುಲ್ ದ್ರಾವಿಡ್ ಕಾರಣ ಎಂದಿದ್ದಾರೆ.

    ಪಂದ್ಯದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್, ಇದು ನನಗೆ ಬಹಳ ಕಠಿಣ ಸಮಯವಾಗಿತ್ತು. ಒಬ್ಬ ಆಟಗಾರನಾಗಿ ಕ್ರೀಡಾಂಗಣದಲ್ಲಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಕೂಡ ಕಠಿಣ ಸಂದರ್ಭಗಳನ್ನು ಎದುರಿಸಿದ್ದೇನೆ. ಎಲ್ಲರಿಗೂ ಕಷ್ಟದ ದಿನಗಳು ಇದ್ದೇ ಇರುತ್ತೆ. ಈ ಅವಧಿಯಲ್ಲಿ ಆಟದ ಮೇಲೆ ಹೆಚ್ಚಿನ ಗಮನ ಹರಿಸಲು ಸಮಯ ಸಿಕ್ಕಿತ್ತು. ಎಲ್ಲರಂತೆ ನಾನು ಬಂದ ಸಂಗತಿಗಳನ್ನು ಸ್ವೀಕರಿಸಿದ್ದೇನೆ ಎಂದಿದ್ದಾರೆ.

    ನಾನು ಪಡೆದ ಅವಕಾಶಗಳಿಗೆ ಸೂಕ್ತ ನ್ಯಾಯ ನೀಡಲು, ಅವಕಾಶಗಳನ್ನು ಎಣಿಸುತ್ತಾ ತಲೆ ಕೆಳಗಿಳಿಸಿ ನನ್ನ ಕ್ರಿಕೆಟ್ ಮೇಲೆ ಹೆಚ್ಚಿನ ಗಮನ ಹರಿಸಿದ್ದೆ. ‘ಎ’ ತಂಡದ ಪರ ಆಡಲು ನನಗೆ ಉತ್ತಮ ಅವಕಾಶ ಲಭ್ಯವಾಯಿತು. ಈ ವೇಳೆ ನನಗೆ ಟೀಂ ಇಂಡಿಯಾ ಶ್ರೇಷ್ಠ ಪುತ್ರರ ಪೈಕಿ ಒಬ್ಬರಾದ ದ್ರಾವಿಡ್ ಅವರ ಮಾರ್ಗದರ್ಶನ ಲಭಿಸಿತು. ಪರಿಣಾಮ ನನ್ನ ನ್ಯೂನತೆಗಳಿಂದ ಹೊರಬರಲು ಸಾಧ್ಯವಾಯಿತು ಎಂದಿದ್ದಾರೆ.

    ರಾಷ್ಟ್ರೀಯ ಕ್ರಿಕೆಟ್ ತಂಡದಿಂದ ಬ್ರೇಕ್ ಲಭ್ಯವಾದ ಕಾರಣ ಇಂಡಿಯಾ ಎ ಪರ ಆಡಲು ಅವಕಾಶ ಲಭಿಸಿತು. ಇಲ್ಲಿ ಆಟದ ಮೇಲಿನ ಒತ್ತಡ ಕಡಿಮೆ ಇರುವ ಕಾರಣ ನನ್ನ ಕೌಶಲ್ಯಗಳ ಬಗ್ಗೆ ಗಮನ ನೀಡಿಲು ಸಾಧ್ಯವಾಯಿತು. ಆದರಿಂದಲೇ ಸದ್ಯದ 2 ಪಂದ್ಯಗಳ ಪ್ರದರ್ಶನ ಉತ್ತಮವಾಗಿದೆ. ರಾಹುಲ್ ದ್ರಾವಿಡ್ ಅವರೊಂದಿಗೆ ಹೆಚ್ಚಿನ ಸಮಯ ಕಳೆದೆ. ಅವರೊಂದಿಗೆ ಹೆಚ್ಚು ಮಾತನಾಡಿದ್ದೇನೆ. ಇದೇ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಲು ಕಾರಣವಾಯಿತು. ಮುಂದಿನ ದಿನಗಳಲ್ಲಿಯೂ ಉತ್ತಮ ಪ್ರದರ್ಶನವನ್ನು ಮುಂದುವರಿಸುತ್ತೇನೆ ಎಂದು ತಿಳಿಸಿದರು.

    ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ್ದ ರಾಹುಲ್, 2ನೇ ಪಂದ್ಯದಲ್ಲಿ 47 ರನ್ ಸಿಡಿಸಿ ಔಟಾಗಿದ್ದರು. ಇದರ ನಡುವೆಯೂ ತಂಡ ಸರಣಿ ಸೋಲುಂಡ ಪರಿಣಾಮ ಮುಂದಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಕಮ್ ಬ್ಯಾಕ್ ಮಾಡುವ ವಿಶ್ವಾಸವನ್ನು ತಂಡ ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳೆಯೊಂದಿಗೆ 14 ಸಾವಿರ ಕಿ.ಮೀ ಪ್ರಯಾಣಿಸಿದ ಹೆಬ್ಬಾವು!

    ಮಹಿಳೆಯೊಂದಿಗೆ 14 ಸಾವಿರ ಕಿ.ಮೀ ಪ್ರಯಾಣಿಸಿದ ಹೆಬ್ಬಾವು!

    ಕ್ಯಾನ್ಬೆರಾ: ಸ್ಕಾಟ್ಲೆಂಡ್ ಮಹಿಳೆಯೊಬ್ಬರ ಲಗೇಜಿನಲ್ಲಿ ಹೆಬ್ಬಾವೊಂದು ಬರೋಬ್ಬರಿ 14 ಸಾವಿರ ಕಿ.ಮೀ ಪ್ರಯಾಣ ಮಾಡಿರುವ ಆಘಾತಕಾರಿ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ಸ್ಕಾಟ್ಲೆಂಡ್ ಮೂಲದ ಮರಿಯಾ ಬೋಕ್ಸಾಲ್ ಮಹಿಳೆಯ ಲಗೇಜಿನಲ್ಲಿ ಹೆಬ್ಬಾವು ಕಂಡು ಬಂದಿದೆ. ಬೋಕ್ಸಾಲಾ ಅವರು ರಜೆ ಬಳಿಕ ಆಸ್ಟ್ರೇಲಿಯಾದಿಂದ ಸ್ಕಾಟ್ಲೆಂಡ್‍ಗೆ ತೆರಳುತ್ತಿದ್ದರು. ಅವರ ಜೊತೆ ಲಗೇಜಿನಲ್ಲಿ ಶೂ ಒಳಗೆ ಹೆಬ್ಬಾವು ಸೇರಿಕೊಂಡಿದೆ. ಆದರೆ ಅದನ್ನು ಬೋಕ್ಸಾಲ್ ಗಮನಿಸಿರಲಿಲ್ಲ. ಕೊನೆಗೆ ಹೆಬ್ಬಾವಿನ ಜೊತೆ ಬರೋಬ್ಬರಿ 14,000 ಕಿ.ಮೀವರೆಗೂ ಪ್ರಯಾಣ ಮಾಡಿದ್ದಾರೆ.

    ಮಹಿಳೆ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಏರ್‌ಪೋರ್ಟ್‌ ಗೆ ಬಂದಿದ್ದಾರೆ. ಅಲ್ಲಿ ಬ್ಯಾಗಿನ ಪರಿಶೀಲನೆ ಮಾಡುವಾಗ ಈ ಹೆಬ್ಬಾವು ಪತ್ತೆಯಾಗಿದೆ. ತಕ್ಷಣ ಮಹಿಳೆ ಪ್ರಾಣಿ ರಕ್ಷಣಾ ಸಂಗ್ರಹಾಲಯಕ್ಕೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಕ್ಷಣ ಸ್ಥಳಕ್ಕೆ ಬಂದು ಬ್ಯಾಗಿನಿಂದ ಹೆಬ್ಬಾವನ್ನು ಯಶಸ್ವಿಯಾಗಿ ತೆಗೆದಿದ್ದಾರೆ.

    ಮೊದಲಿಗೆ ನಾನು ಅದನ್ನು ತಮಾಷೆ ಮಾಡಲು ಕುಟುಂಬದವರು ಆಟಿಕೆ ಅಂದರೆ ನಕಲಿ ಹಾವನ್ನು ಇರಿಸಲಾಗಿದೆ ಎಂದುಕೊಂಡಿದೆ. ಆದರೆ ಅದನ್ನು ಹೊರಗಡೆಯಿಂದ ಮುಟ್ಟಿದಾಗ ಅದು ಅಲಗಾಡಿತು. ಆ ಕ್ಷಣ ನನಗೆ ನಿಜವಾಗಿಯೂ ಆಘಾತವಾಗಿತ್ತು ಎಂದು ಬೋಕ್ಸಾಲ್ ಹೇಳಿದ್ದಾರೆ.

    ನಮಗೆ ಕರೆ ಬಂದು ಬ್ಯಾಗಿನಲ್ಲಿ ಶೂ ಒಳಗೆ ಅಡಗಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದೇವೆ. ಮಚ್ಚೆಯುಳ್ಳ ಸ್ಪಾಟ್ಟೆಡ್ ಹೆಬ್ಬಾವು ಎಂದು ಗುರುತಿಸಲಾಗಿದೆ. ಇದು ಶೂ ಒಳಗೆ ತನ್ನ ಪೊರೆಯನ್ನು ಬಿಟ್ಟಿತ್ತು ಎಂದು ಪ್ರಾಣಿ ರಕ್ಷಕ ಅಧಿಕಾರಿ ಟೇಲರ್ ಜಾನ್ಸ್ಟೋನ್ ತಿಳಿಸಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ಇದೇ ಮೊದಲ ಬಾರಿಗೆ ಹಾವು ಪತ್ತೆಯಾಗಿಲ್ಲ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ವ್ಯಕ್ತಿಯೊಬ್ಬ 20 ಜೀವಂತ ಹಾವುಗಳನ್ನು ತನ್ನ ಹ್ಯಾಂಡ್ ಬ್ಯಾಗಿನಲ್ಲಿ ಇಟ್ಟುಕೊಂಡು ಜರ್ಮನಿಯಿಂದ ರಷ್ಯಾಕ್ಕೆ ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದನು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮ್ಯಾಕ್ಸ್ ವೆಲ್ ಅಬ್ಬರದ ಶತಕ – ಕೊಹ್ಲಿ ಪಡೆಗೆ ಸರಣಿ ಸೋಲಿನ ಮುಖಭಂಗ

    ಮ್ಯಾಕ್ಸ್ ವೆಲ್ ಅಬ್ಬರದ ಶತಕ – ಕೊಹ್ಲಿ ಪಡೆಗೆ ಸರಣಿ ಸೋಲಿನ ಮುಖಭಂಗ

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ, ಆಸ್ಟ್ರೇಲಿಯಾ ನಡುವಿನ ಅಂತಿಮ ಟಿ20 ಪಂದ್ಯದಲ್ಲಿ ಆಸೀಸ್ 7 ವಿಕೆಟ್ ಗೆಲುವು ಪಡೆದಿದ್ದು, ಈ ಮೂಲಕ ಸರಣಿಯನ್ನು 2-0 ಅಂತರದಲ್ಲಿ ತನ್ನದಾಗಿಸಿಕೊಂಡಿತು.

    ಟೀಂ ಇಂಡಿಯಾ ನೀಡಿದ 191 ರನ್ ಗಳ ಗುರಿ ಬೆನ್ನಟ್ಟಿದ ಆಸೀಸ್ 2 ಎಸೆತ ಬಾಕಿ ಇರುವಂತೆಯೇ 194 ರನ್ ಸಿಡಿಸಿ ಜಯ ಪಡೆಯಿತು. ಆಸ್ಟ್ರೇಲಿಯಾ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ಮ್ಯಾಕ್ಸ್ ವೆಲ್ ಶತಕ ಸಿಡಿಸಿ ಗೆಲುವಿನ ರೂವಾರಿಯಾದರು. 55 ಎಸೆತಗಳಲ್ಲಿ 7 ಬೌಂಡರಿ, 9 ಸಿಕ್ಸರ್ ಸಿಡಿಸಿದ ಮ್ಯಾಕ್ಸ್ ವೆಲ್ ಅಜೇಯ 113 ರನ್ ಗಳಿಸಿದರು. ಉಳಿದಂತೆ ಆರಂಭಿಕ ಶಾರ್ಟ್ 40 ರನ್ ಹಾಗೂ ಹ್ಯಾಂಡ್ಸ್ ಕಂಬ್ 20 ರನ್ ಗಳಿಸಿ ಅಜೇಯರಾಗಿ ಉಳಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‍ನಲ್ಲಿ ಆರಂಭಿಕ ಜೋಡಿಯಾಗಿ ಕಣಕ್ಕೆ ಇಳಿದ ಧವನ್ ಹಾಗೂ ಕೆಎಲ್ ರಾಹುಲ್ ಉತ್ತಮ ಆರಂಭ ನೀಡಿದರು. ಆರಂಭದಲ್ಲೇ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕೆಎಲ್ ರಾಹುಲ್ ಕೇವಲ 26 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗು 3 ಬೌಂಡರಿಗಳ ಮೂಲಕ 47 ರನ್ ಗಳಿದ್ದ ವೇಳೆ ವೇಗಿ ನಾಥನ್ ಕೌಂಟರ್ ನೈಲ್ ಗೆ ವಿಕೆಟ್ ಒಪ್ಪಿಸಿದ್ದರು. ಪರಿಣಾಮ ಸರಣಿಯಲ್ಲಿ ಸತತ 2ನೇ ಅರ್ಧಶತಕ ಸಿಡಿಸುವ ಅವಕಾಶ ವಂಚಿತರಾದ್ರು.

    ರಾಹುಲ್ ಔಟಾಗುತ್ತಿದಂತೆ 14 ರನ್ ಗಳಿಸಿದ್ದ ಧವನ್ ಕೂಡ ವಿಕೆಟ್ ಒಪ್ಪಿಸಿದರು. ಇತ್ತ ಯುವ ಆಟಗಾರ ಪಂತ್ 1 ರನ್‍ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ರಾಹುಲ್ ಔಟಾಗುತ್ತಿದಂತೆ ಕಣಕ್ಕೆ ಇಳಿದ ನಾಯಕ ಕೊಹ್ಲಿ ಪಂದ್ಯದಲ್ಲಿ ತಮ್ಮ ಕ್ಲಾಸಿ ಪ್ರದರ್ಶನದ ಮೂಲಕ ಗಮನ ಸೆಳೆದರು. ಇತ್ತ ಧೋನಿ ಕೂಡ ಟೀಕೆಗಳಿಗೆ ಉತ್ತರಿಸುವಂತೆ ಬ್ಯಾಟ್ಸ್ ಬೀಸಿದರು. 23 ಎಸೆತಗಳನ್ನು ಎದುರಿಸಿದ ಧೋನಿ 3 ಬೌಂಡರಿ, 3 ಸಿಕ್ಸರ್ ನೆರವಿನಿಂದ 40 ರನ್ ಗಳಿಸಿ ಔಟಾದರು. ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸಿದ ಧೋನಿ ಅಂತರಾಷ್ಟ್ರಿಯ ಕ್ರಿಕೆಟ್ ನಲ್ಲಿ 350 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದರು.

    ಇತ್ತ ನಾಯಕ ಕೊಹ್ಲಿ ಕೂಡ ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸಿ ತಂಡದ ರನ್ ವೇಗವನ್ನು ಹೆಚ್ಚಿಸಿದರು. 38 ಎಸೆತಗಳಲ್ಲಿ 72 ಭರ್ಜರಿ 6 ಸಿಕ್ಸರ್ ಹಾಗೂ 2 ಬೌಂಡರಿ ಸಿಡಿಸಿದ ಕೊಹ್ಲಿ 72 ರನ್ ಗಳಿಸಿ ಔಟಾಗದೆ ಉಳಿದರು. ಪರಿಣಾಮ ಭಾರತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭಾರತ 190 ರನ್ ಗಳಿಸಿತು. ಪಂದ್ಯದಲ್ಲಿ 2 ಬೌಂಡರಿ ಸಿಡಿಸಿದ ವೇಳೆ ಕೊಹ್ಲಿ ಟಿ20 ಮಾದರಿಯಲ್ಲಿ ಒಟ್ಟಾರೆ 223 ಬೌಂಡರಿಗಳನ್ನು ಸಿಡಿಸಿದ ಸಾಧನೆ ಮಾಡಿ ಶ್ರೀಲಂಕಾದ ದಿಲ್ಶನ್ ದಾಖಲೆಯನ್ನು ಸರಿಗಟ್ಟಿದರು. 80 ಪಂದ್ಯಗಳಲ್ಲಿ ದಿಲ್ಶನ್ಲ್ 223 ಬೌಂಡರಿ ಸಿಡಿಸಿದ್ದರು. ಉಳಿದಂತೆ ಭಾರತದ ಪರ ಕೊಹ್ಲಿ ಮತ್ತು ರೋಹಿತ್ ಮಾತ್ರ 200ಪ್ಲಸ್ ಬೌಂಡರಿ ಸಿಡಿಸಿದ ಸಾಧನೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತ, ಆಸೀಸ್ ಟಿ20: ಮೆಟ್ರೋ ಸೇವೆ ವಿಸ್ತರಿಸಿದ ಬಿಎಂಆರ್‌ಸಿಎಲ್

    ಭಾರತ, ಆಸೀಸ್ ಟಿ20: ಮೆಟ್ರೋ ಸೇವೆ ವಿಸ್ತರಿಸಿದ ಬಿಎಂಆರ್‌ಸಿಎಲ್

    ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಇಂದು ಟಿ20 ಸರಣಿಯ ಅಂತಿಮ ಹಾಗೂ 2ನೇ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಪರಿಣಾಮ ಬಿಎಂಆರ್‌ಸಿಎಲ್ ಮೆಟ್ರೋ ಸಂಚಾರ ಅವಧಿಯನ್ನು ವಿಸ್ತರಿಸಿದೆ.

    ಈ ಕುರಿತು ಬಿಎಂಆರ್‌ಸಿಎಲ್ ಮಾಹಿತಿ ನೀಡಿದ್ದು, ರಾತ್ರಿ 12 ಗಂಟೆಯವರೆಗೂ ಕೂಡ ಮೆಟ್ರೋ ಸಂಚಾರ ಲಭ್ಯವಾಗಲಿದೆ. ಅಲ್ಲದೇ ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆವರೆಗೂ ವಿಶೇಷ 50 ರೂ. ಪೇಪರ್ ಟಿಕೆಟ್ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಈ ಪೇಪರ್ ಟಿಕೆಟ್ ಬಳಸಿ ಯಾವುದೇ ನಿಲ್ದಾಣಕ್ಕಾದರೂ ಪ್ರಯಾಣಿಸಬಹುದು .

    ಪಂದ್ಯಾವಳಿ ನಂತರ ಟಿಕೆಟ್ ಗಾಗಿ ಸಾಲು ನಿಲ್ಲುವುದನ್ನು ತಪ್ಪಿಸಲು ಪೇಪರ್ ಟಿಕೆಟ್ ವ್ಯವಸ್ಥೆ ಜಾರಿಗೆ ಮಾಡಿರುವುದಾಗಿ ಮೆಟ್ರೋ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಸ್ಮಾಟ್‍ಕಾರ್ಡ್ ಹೊಂದಿರುವವರು ಎಂದಿನಂತೆಯೇ ಪ್ರಯಾಣಿಸಬಹುದು. ಪ್ರಮುಖವಾಗಿ ನಾಗಸಂದ್ರ, ಮೈಸೂರು ರಸ್ತೆ, ಬೈಯಪ್ಪನಹಳ್ಳಿ ಹಾಗೂ ಯಲಚೇನಹಳ್ಳಿ ನಿಲ್ದಾಣಗಳಿಂದ ರಾತ್ರಿ 11.55ಕ್ಕೆ ಕೊನೆಯ ರೈಲು ಹೊರಡಲಿದೆ.

    ಕೊಹ್ಲಿ ನಾಯಕತ್ವದ ತಂಡಕ್ಕೆ ಈ ಪಂದ್ಯ ಮಹತ್ವದಾಗಿದ್ದು, ಸರಣಿ ಸೋಲಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮಾಡು ಇಲ್ಲವೇ ಮಡಿ ಹೋರಾಟ ನಡೆಸಬೇಕಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಇತ್ತಂಡಗಳು ಎದುರಾಗುತ್ತಿವೆ. ವಿಶಾಖಪಟ್ಟಣ ಪಂದ್ಯದಲ್ಲಿ ರೋಚಕ ಗೆಲುವು ಪಡೆದ ಆಸೀಸ್ ಪಡೆ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ.

    ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊನೆಯ ಎಸೆತದಲ್ಲಿ ಭಾರತಕ್ಕೆ ಸೋಲು!

    ಕೊನೆಯ ಎಸೆತದಲ್ಲಿ ಭಾರತಕ್ಕೆ ಸೋಲು!

    – ಆಸೀಸ್‍ಗೆ 3 ವಿಕೆಟ್ ಗೆಲುವು
    – ಕೊನೆಯ ಓವರ್ ನಲ್ಲಿ 14 ರನ್ ಕೊಟ್ಟ ಉಮೇಶ್ ಯಾದವ್

    ವಿಶಾಖಪಟ್ಟಣ: ಇಲ್ಲಿನ ವೈ ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಆಸೀಸ್ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರೋಚಿತ ಸೋಲು ಕಂಡಿದ್ದು, ಆಸ್ಟ್ರೇಲಿಯಾ ಮೂರು ವಿಕೆಟ್‍ಗಳ ಜಯ ಸಾಧಿಸಿದೆ.

    127 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾಗೆ ಕೊನೆಯ ಓವರ್ ನಲ್ಲಿ 14 ರನ್ ಬೇಕಿತ್ತು. ಉಮೇಶ್ ಯಾದವ್ ಎಸೆದ ಈ ಓವರ್ ನಲ್ಲಿ ಎರಡು ಬೌಂಡರಿ ಸಿಡಿಸಿದ ಪರಿಣಾಮ ಕೊನೆಯ ಎಸೆತದಲ್ಲಿ 2 ರನ್‍ಗಳ ಅಗತ್ಯವಿತ್ತು. ಪ್ಯಾಟ್ ಕಮ್ಮಿನ್ಸ್ ಕೊನೆಯ ಎಸೆತದಲ್ಲಿ 2 ರನ್ ಕದಿಯುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ 2 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆಯನ್ನು ಪಡೆದಿದೆ.

    ಟೀಂ ಇಂಡಿಯಾ ಸುಲಭ ಗುರಿಯನನ್ನು ಬೆನ್ನತ್ತಿದ ಆಸೀಸ್ ಪಡೆ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಸ್ಟೋಯಿನ್ಸ್ 1 ರನ್ ಗೆ ರನೌಟ್ ಆದ್ರೆ, ನಾಯಕ ಫಿಂಚ್ ರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಬುಮ್ರಾ ಶಾಕ್ ನೀಡಿದರು. ಪರಿಣಾಮ 5 ರನ್ ಗಳಿಗೆ ಆಸೀಸ್ ಪ್ರಮುಖ 2 ವಿಕೆಟ್ ಕಳೆದುಕೊಂಡಿತ್ತು.

    ಈ ಹಂತದಲ್ಲಿ ಬಂದ ಸ್ಫೋಟಕ ಆಟಗಾರ ಮ್ಯಾಕ್ಸ್ ವೆಲ್ 43 ಎಸೆತಗಳಲ್ಲಿ 56 ರನ್ ಗಳಿಸಿ ಮಿಂಚಿದರು. ಅರ್ಧ ಶತಕ ಗಳಿಸಿ ಟೀಂ ಇಂಡಿಯಾಗೆ ಮುಳುವಾಗಿದ್ದ ಮ್ಯಾಕ್ಸ್ ವೆಲ್‍ರನ್ನು ಚಹಲ್ ಪೆವಿಲಿಯಗಟ್ಟಲು ಯಶಸ್ವಿಯಾದರೆ, ಆರಂಭಿಕ ಶಾರ್ಟ್ 37 ರನ್ ಗಳಿಸಿ ರನೌಟ್ ಆದರು. ಬಳಿಕ ಬಂದ ಟರ್ನರ್ ಕೂಡ ಬಂದಷ್ಟೇ ವೇಗದಲ್ಲಿ ನಿರ್ಗಮಿಸಿದರು. ಈ ಹಂತದಲ್ಲಿ ಭಾರತ ಪಂದ್ಯ ಗೆಲುವಿನ ಆಸೆ ಮೂಡಿತು. ಇದನ್ನು ಓದಿ: ಕಮ್ ಬ್ಯಾಕ್ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ ಕೆಎಲ್ ರಾಹುಲ್

    ಮಿಂಚಿದ ಬುಮ್ರಾ: 98 ರನ್ ಗಳಿಗೆ 3 ವಿಕೆಟ್ ಗಳಿಸಿ ಸುಸ್ಥಿತಿಯಲ್ಲಿದ್ದ ಆಸೀಸ್‍ಗೆ ಶಾರ್ಟ್ ರನೌಟ್ ಆದ ಬಳಿಕ ರನ್ ವೇಗಕ್ಕೆ ಕಡಿವಾಣ ಬಿತ್ತು. ಕೊನೆಯ 12 ಎಸೆತಗಳಲ್ಲಿ ಆಸೀಸ್ ಗೆಲುವಿಗೆ 16 ರನ್ ಬೇಕಿತ್ತು. ಬೂಮ್ರಾ ಈ ಓವರ್ ನಲ್ಲಿ ಕೇವಲ 2 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಿತ್ತ ಪರಿಣಾಮ ಪಂದ್ಯ ಕುತೂಹಲ ಘಟ್ಟದತ್ತ ತಿರುಗಿತು. ಆದರೆ ಉಮೇಶ್ ಯಾದವ್ ಓವರ್ ನಲ್ಲಿ 2 ಬೌಂಡರಿ ಹೋದ ಪರಿಣಾಮ ಪಂದ್ಯ ಭಾರತದಿಂದ ಕೈ ಜಾರಿತು. ಬುಮ್ರಾ 4 ಓವರ್ ಎಸೆದು 16 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಪರ ಕೆಎಲ್ ರಾಹುಲ್ ಅರ್ಧ ಶತಕ ಹಾಗೂ ನಾಯಕ ಕೊಹ್ಲಿ 24, ಧೋನಿ 29 ರನ್ ಗಳ ನೆರವಿನಿಂದ 7 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿತ್ತು.

    ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ಟೀಂ ಇಂಡಿಯಾ ರೋಹಿತ್ ಶರ್ಮಾ ವಿಕೆಟ್ ಕಳೆದು ಬಹುಬೇಗ ಕಳೆದುಕೊಂಡರೂ ಕೂಡ ಉತ್ತಮ ಆರಂಭ ಪಡೆಯಿತು. ಆರಂಭದ 8.3 ಓವರ್ ಗಳಲ್ಲಿ 69 ರನ್ ಗಳಿಸಿ ಟೀಂ ಇಂಡಿಯಾ ಉತ್ತಮ ಹಂತದಲ್ಲಿತ್ತು. ಕೊಹ್ಲಿ 17 ಎಸೆತಗಳಲ್ಲಿ 24 ರನ್ ಗಳಿಸಿ ಬಿರುಸಿನ ಬ್ಯಾಟಿಂಗ್ ನಡೆಸಿದ್ದರು. ಆದರೆ ಆ್ಯಡಂ ಜಂಪಾ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಭಾರತ ರನ್ ವೇಗಕ್ಕೆ ಕಡಿವಾಣ ಹಾಕಲು ಯಶಸ್ವಿಯಾದರು. ಕೊಹ್ಲಿ ಪಂದ್ಯದಲ್ಲಿ ಆಸೀಸ್ ವಿರುದ್ಧ 500 ರನ್ ಪೂರ್ಣಗೊಳಿಸಿದ ಹೆಗ್ಗಳಿಕೆ ಗಳಿಸಿದರು.

    ಪಂತ್ ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರೆ, ಉತ್ತಮವಾಗಿ ಆಡುತ್ತಿದ್ದ ರಾಹುಲ್‍ರನ್ನು ಕಾಲ್ಟರ್ ನೈಲ್ ಪೆವಿಲಿಯಗಟ್ಟಿದರು. ಈ ಹಂತದಲ್ಲಿ ಟೀಂ ಇಂಡಿಯಾ 12.2 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಬಂದ ಧೋನಿ 37 ಎಸೆತಗಳನ್ನು 29 ರನ್ ಗಳಿಸಿ ಅಜೇಯರಾಗಿ ಉಳಿದರು.

    ಟೀಂ ಇಂಡಿಯಾ 8.3 ಓವರ್ ಗಳಲ್ಲಿ 1 ವಿಕೆಟ್ ಕಳೆದು ಕೊಂಡು 69 ರನ್ ಗಳಿಸಿದರೆ, ಉಳಿದ 11.3 ಓವರ್ ಗಳಲ್ಲಿ 57 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಇತ್ತ ಧೋನಿ 35 ಪ್ಲಸ್ ಎಸೆತ ಎದುರಿಸಿದರೂ ಕೂಡ 29 ರನ್ ಮಾತ್ರ ಗಳಿಸಿ ಟಿ20 ಮಾದರಿಯಲ್ಲಿ ಭಾರತದ ಪರ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ ಆಟಗಾರ ಎನಿಸಿಕೊಂಡರು. ಈ ಹಿಂದೆ 2009ರಲ್ಲಿ ಇಂಗ್ಲೆಂಡ್ ವಿರುದ್ಧ ಜಡೇಜಾ 71.82 ಸ್ಟ್ರೈಕ್ ನಲ್ಲಿ ರನ್ ಗಳಿಸಿದ್ದರು. ಇಂದು ಧೋನಿ 78.37 ಸ್ಟ್ರೈಕ್ ರೇಟ್ ಹೊಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಮ್ ಬ್ಯಾಕ್ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ ಕೆಎಲ್ ರಾಹುಲ್

    ಕಮ್ ಬ್ಯಾಕ್ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ ಕೆಎಲ್ ರಾಹುಲ್

    ವಿಶಾಖಪಟ್ಟಣ: ಕಾಫಿ ವಿತ್ ಕರಣ್ ಶೋ ವಿವಾದ ಬಳಿಕ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ್ದ ಕೆಎಲ್ ರಾಹುಲ್ ಆಸೀಸ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಕಮ್ ಬ್ಯಾಕ್ ಮಾಡಿದ್ದಾರೆ.

    24 ವರ್ಷದ ಕೆಎಲ್ ರಾಹುಲ್ ಕಾಫಿ ವಿತ್ ಕರಣ್ ಶೋ ವಿವಾದ ಪರಿಣಾಮ ಆಸೀಸ್ ಟೂರ್ನಿಯಿಂದ ಹೊರ ನಡೆದಿದ್ದರು. ಆ ಬಳಿಕ ಅವರ ಮೇಲೆ ಬಿಸಿಸಿಐ ವಿಧಿಸಿದ್ದ ಬ್ಯಾನ್ ತೆರವು ಪಡೆದಿದ್ದರೂ ಕಳಪೆ ಫಾರ್ಮ್ ಕಾರಣ ನ್ಯೂಜಿಲೆಂಡ್ ಪ್ರವಾಸದಲ್ಲಿ ಅವಕಾಶ ಪಡೆದಿರಲಿಲ್ಲ.

    ಈ ನಡುವೆ ಕನ್ನಡಿಗ ಟೀಂ ಇಂಡಿಯಾ ಎ ತಂಡದ ಕೋಚ್ ರಾಹುಲ್ ಅವರ ಗರಡಿಗೆ ಸೇರಿದ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಇದನ್ನು ಪರಿಗಣಿಸಿದ ಬಿಸಿಸಿಐ ಆಯ್ಕೆ ಸಮಿತಿ ಕೆಎಲ್ ರಾಹುಲ್ ಅವರಿಗೆ ಆಸೀಸ್ ಟೂರ್ನಿಗೆ ಅವಕಾಶ ನೀಡಿತ್ತು.

    ವಿಶ್ವಕಪ್ ದೃಷ್ಠಿಯಿಂದ ಟೀಂ ಇಂಡಿಯಾಗೆ 3ನೇ ಓಪನರ್ ಆಟಗಾರರ ಅಗತ್ಯವಿದ್ದ ಕಾರಣ ರಾಹುಲ್ ಅವರಿಗೆ ಅವಕಾಶ ನೀಡಲಿದೆ ಎಂದು ಕೂಡ ಬಿಸಿಸಿಐ ಸಮರ್ಥನೆ ನೀಡಿತ್ತು. ಸದ್ಯ ಆಯ್ಕೆ ಸಮಿತಿಯ ತೀರ್ಮಾನವನ್ನು ಗಟ್ಟಿಗೊಳಿಸುವಂತೆ ಬ್ಯಾಟ್ ಬೀಸಿದ ರಾಹುಲ್ ಕೇವಲ 36 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಿಡಿಸಿ 50 ರನ್ ಗಳಿಸಿ ನಿರ್ಗಮಿಸಿದ್ದಾರೆ.

    ಸದ್ಯ ರಾಹುಲ್ ಆಸೀಸ್ ವಿರುದ್ಧದ ಟಿ20 ಮತ್ತು ಏಕದಿನ ಕ್ರಿಕೆಟ್ ಪಂದ್ಯಗಳಿಗೆ ಆಯ್ಕೆ ಆಗಿದ್ದು, ಉತ್ತಮ ಫಾರ್ಮ್ ಮುಂದುವರಿಸಿದರೆ ವಿಶ್ವಕಪ್ 15 ಆಟಗಾರರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುಲು ಸಾಧ್ಯವಾಗುತ್ತದೆ. ಇಂಗ್ಲೆಂಡ್‍ನಲ್ಲಿ ನಡೆಯುಲ್ಲಿರುವ ವಿಶ್ವಕಪ್ ಮುನ್ನ ಭಾರತ ಅಂತಿಮ ಟೂರ್ನಿ ಇದಾಗಿದೆ.

    ರಿಷಬ್ ರನೌಟ್: ಪಂದ್ಯದಲ್ಲಿ ರಾಹುಲ್ ಹಾಗೂ ರಿಷಬ್ ಪಂತ್ ನಡುವೆ ಉಂಟಾದ ಗೊಂದಲದಿಂದಾಗಿ ರಿಷಬ್ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಘಟನೆ ನಡೆಯಿತು. 10ನೇ ಅಂತಿಮ ಎಸೆತದಲ್ಲಿ ಘಟನೆ ನಡೆದಿದ್ದು, ಉತ್ತಮ ಫಿಲ್ಡಿಂಗ್ ಮಾಡಿದ ಮಾಡಿದ ಜೇಸನ್ ಬೆಹ್ರೆಂಡಾರ್ಫ್ ರನೌಟ್ ಮಾಡಿದರು. ಅಂತಿಮವಾಗಿ ಟೀಂ ಇಂಡಿಯಾ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿತು. ಭಾರತ ಪರ ರಾಹುಲ್ 50, ಕೊಹ್ಲಿ 24, ಧೋನಿ ಔಟಾಗದೆ 29 ರನ್ ಗಳಿಸಿದ್ದು, ಬೇರಾವುದೇ ಆಟಗಾರ ಕೂಡ ಎರಡಂಕ್ಕಿ ಮೊತ್ತವನ್ನು ದಾಟಲಿಲ್ಲ.

    https://twitter.com/shaktikapoor143/status/1099677114041884678?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸೀಸ್ ಟಿ20 ಸರಣಿ: ಟೀಂ ಇಂಡಿಯಾದ್ದೇ ಮೇಲುಗೈ

    ಆಸೀಸ್ ಟಿ20 ಸರಣಿ: ಟೀಂ ಇಂಡಿಯಾದ್ದೇ ಮೇಲುಗೈ

    ಮುಂಬೈ: ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ಸಿಮೀತ ಓವರ್ ಸರಣಿಯನ್ನು ಆಡಲಿದೆ. ಫೆ.24 ರಿಂದ ಆರಂಭವಾಗಲಿದ್ದು, ಇದುವರೆಗೂ ಆಡಿರುವ ಪಂದ್ಯಗಳಲ್ಲಿ ಭಾರತವೇ ಮೇಲುಗೈ ಸಾಧಿಸಿದೆ.

    ಕೊಹ್ಲಿ ನಾಯಕತ್ವದ ತಂಡ ತವರಿನಲ್ಲಿ ಈ ಬಾರಿಯೂ ಕೂಡ ಕಠಿಣ ಸವಾಲು ನೀಡಲು ಸಿದ್ಧತೆ ನಡೆಸಿದೆ. ಟೀಂ ಇಂಡಿಯಾ ಇದುವರೆಗೂ ಆಸೀಸ್ ವಿರುದ್ಧ 18 ಟಿ20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 11ರಲ್ಲಿ ಜಯಗಳಿಸಿದೆ. ಆಸ್ಟ್ರೇಲಿಯಾ 6 ಪಂದ್ಯಗಳಲ್ಲಿ ಜಯ ಪಡೆದಿದ್ದರೆ ಒಂದು ಪಂದ್ಯ ಮಾತ್ರ ಫಲಿತಾಂಶವಿಲ್ಲದೇ ಅಂತ್ಯವಾಗಿದೆ.

    ಉಳಿದಂತೆ ಆಸೀಸ್ ವಿರುದ್ಧ ಆಡಿರುವ 7 ಟಿ20 ಸರಣಿಗಳಲ್ಲಿ 3 ಸರಣಿಗಳಲ್ಲಿ ಟೀಂ ಇಂಡಿಯಾ ಗೆದ್ದು ಸಂಭ್ರಮಿಸಿದ್ದು, ಆಸೀಸ್ 1 ಸರಣಿಯಲ್ಲಿ ಮಾತ್ರ ಜಯಗಳಿಸಿದೆ. 3 ಸರಣಿಗಳು ಡ್ರಾ ಆಗಿದೆ. ಟೀಂ ಇಂಡಿಯಾ ನಾಯಕ ಕೊಹ್ಲಿ ತಂಡದ ಟ್ರಂಪ್ ಕಾರ್ಡ್ ಆಗಿದ್ದು, ಆಸೀಸ್ ವಿರುದ್ಧ ಆಡಿರುವ 14 ಟಿ20 ಪಂದ್ಯಗಳಲ್ಲಿ 61ರ ಸರಾಸರಿಯಲ್ಲಿ 488 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ಸರಣಿಯ ವಿಶ್ರಾಂತಿಯ ಬಳಿಕ ಕೊಹ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.

    ಆಸೀಸ್ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲೂ ಭಾರತ ಪರ ಬುಮ್ರಾ ಮೊದಲ ಸ್ಥಾನದಲ್ಲಿದ್ದಾರೆ. 2016 ರಲ್ಲಿ ಆಸೀಸ್ ವಿರುದ್ಧವೇ ಪಾದಾರ್ಪಣೆ ಮಾಡಿದ್ದ ಬುಮ್ರಾ ಇದುವರೆಗೂ 9 ಪಂದ್ಯಗಳಿಂದ 12 ವಿಕೆಟ್ ಪಡೆದಿದ್ದಾರೆ. 23 ರನ್ ನೀಡಿ 3 ವಿಕೆಟ್ ಪಡೆದಿರುವುದು ಬುಮ್ರಾರ ಉತ್ತಮ ಪ್ರದರ್ಶನವಾಗಿದೆ. ಉಳಿದಂತೆ ಆರ್ ಅಶ್ವಿನ್ ಆಸೀಸ್ ವಿರುದ್ಧ ಹೆಚ್ಚು ಪಂದ್ಯಗಳನ್ನು ಆಡಿರುವ ಬೌಲರ್ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸೀಸ್ ಸರಣಿಗೂ ಮುನ್ನವೇ ಟೀಂ ಇಂಡಿಯಾಗೆ ಆಘಾತ

    ಆಸೀಸ್ ಸರಣಿಗೂ ಮುನ್ನವೇ ಟೀಂ ಇಂಡಿಯಾಗೆ ಆಘಾತ

    ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಸಿಮೀತ ಓವರ್ ಗಳ ಸರಣಿ ಆರಂಭ ಆಗುವ ಮೊದಲೇ ಟೀಂ ಇಂಡಿಯಾ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಸರಣಿಯಿಂದ ಹೊರ ಬಿದ್ದಿದ್ದಾರೆ.

    ಹಾರ್ದಿಕ್ ಪಾಂಡ್ಯ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಪರಿಣಾಮ ಬಿಸಿಸಿಐ ತಜ್ಞ ವೈದ್ಯಕೀಯ ತಂಡ ವಿಶ್ರಾಂತಿ ಪಡೆಯಲು ಸೂಚನೆ ನೀಡಿದೆ. ಪಾಂಡ್ಯ ಸ್ಥಾನದಲ್ಲಿ ರವೀಂದ್ರ ಜಡೇಜಾರನ್ನು ಆಯ್ಕೆ ಮಾಡಿದೆ. ಈ ಹಿಂದೆ ಏಷ್ಯಾ ಕಪ್ ವೇಳೆಯೂ ಪಾಂಡ್ಯ ಬೆನ್ನು ನೋವಿನ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದಿದ್ದರು.

    ಬೆಂಗಳೂರಿನ ಕ್ರಿಕೆಟ್ ಆಕಾಡೆಮಿಯಲ್ಲಿ ಟೀಂ ಇಂಡಿಯಾ ಆಟಗಾರರು ತರಬೇತಿ ಪಡೆಯುತ್ತಿದ್ದು, ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾಗೆ ಆಸೀಸ್ ಸರಣಿ ಮಹತ್ವದಾಗಿದೆ. ವಿಶ್ವಕಪ್ ಸರಣಿಗೆ ಟೀಂ ಇಂಡಿಯಾ 15 ಆಟಗಾರರನ್ನು ಆಯ್ಕೆ ಮಾಡಲು ಆಸೀಸ್ ಸರಣಿಯ ಪ್ರದರ್ಶನ ನೆರವಾಗಲಿದೆ.

    ಫೆ.24 ರಿಂದ ಆಸೀಸ್ ವಿರುದ್ಧದ ಸರಣಿ ಆರಂಭವಾಗಲಿದ್ದು, 2 ಟಿ20 ಪಂದ್ಯ ಸೇರಿದಂತೆ 5 ಏಕದಿನ ಕ್ರಿಕೆಟ್ ಪಂದ್ಯಗಳು ನಡೆಯಲಿದೆ. ಕಾಫಿ ವಿತ್ ಕರಣ್ ಶೋನಲ್ಲಿ ಅಸಭ್ಯ ಹೇಳಿಕೆ ನೀಡಿ ನಿಷೇಧಕ್ಕೆ ಒಳಗಾಗಿದ್ದ ಪಾಂಡ್ಯ ನ್ಯೂಜಿಲೆಂಡ್ ಸರಣಿಗೆ ಕಮ್ ಬ್ಯಾಕ್ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಶ್ವಕಪ್ ಟೂರ್ನಿಗೆ 18 ಆಟಗಾರರ ಟೀಂ ಇಂಡಿಯಾ ಸಿದ್ಧ

    ವಿಶ್ವಕಪ್ ಟೂರ್ನಿಗೆ 18 ಆಟಗಾರರ ಟೀಂ ಇಂಡಿಯಾ ಸಿದ್ಧ

    ಮುಂಬೈ: 2019ರ ವಿಶ್ವಕಪ್ ಟೂರ್ನಿಗೆ 18 ಆಟಗಾರರ ಪಟ್ಟಿ ಸಿದ್ಧವಾಗಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ತಿಳಿಸಿದ್ದಾರೆ.

    ವಿಶ್ವಕಪ್ ದೃಷ್ಟಿಯಿಂದ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಪಟ್ಟಿಯಲ್ಲಿರುವ ಆಟಗಾರರು ಆಡುತ್ತಿರುವ ಐಪಿಎಲ್ ತಂಡಗಳ ಪ್ರಾಂಚೈಸಿಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಅಂತಹ ಆಟಗಾರರ ಮೇಲೆ ಆಗುವ ಹೆಚ್ಚಿನ ಒತ್ತಡವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಮಾರ್ಚ್ 23 ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಮೇ 30ರಿಂದ ಜುಲೈ 14ರ ವರೆಗೂ ಇಂಗ್ಲೆಂಡ್‍ನಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಈಗಾಗಲೇ 18 ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಮುಂದಿನ ಅವಧಿಯಲ್ಲಿ ಆಟಗಾರರ ಪಟ್ಟಿ ಬದಲಾಗುವ ಸಾಧ್ಯತೆ ಇದೆ. ಇಲ್ಲಿಯವರೆಗೂ ಆಟಗಾರರ ಮೇಲಿನ ಹೊರೆ ನಿಭಾಯಿಸಿದ್ದು, ಮುಂದಿನ ಅವಧಿಯಲ್ಲೂ ಇಂದು ಮುಂದುವರಿಯುತ್ತದೆ ಎಂದು ಪ್ರಸಾದ್ ತಿಳಿಸಿದ್ದಾರೆ.

    ಆಸೀಸ್ ವಿರುದ್ಧ ಸಿಮೀತ ಓವರ್ ಗಳ ಸರಣಿಗೆ ಆಟಗಾರರ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಸರಣಿಯಲ್ಲಿ ಆಟಗಾರರು ತೋರುವ ಪ್ರದರ್ಶನ ಮೇರೆಗೆ ಆಯ್ಕೆ ತಂಡ ಆಟಗಾರರ ಹೆಸರನ್ನು ಅಂತಿಮಗೊಳಿಸಲಿದೆ. ಸರಣಿಯಲ್ಲಿ ಕೆಎಲ್ ರಾಹುಲ್ ಹಾಗೂ ಪಂತ್ ಸ್ಥಾನ ಪಡೆದಿದ್ದು, ರಾಹುಲ್ ಅವರಿಗೆ ವಿಶ್ವಕಪ್ ತಂಡಕ್ಕೆ ಆಯ್ಕೆ ಆಗಲು ಅಂತಿಮ ಅವಕಾಶವೆಂದೇ ವಿಶ್ಲೇಷಣೆ ಮಾಡಲಾಗಿದೆ. ಆದರೆ ಆಸೀಸ್ ವಿರುದ್ಧ ಸರಣಿಗೆ ದಿನೇಶ್ ಕಾರ್ತಿಕ್ ಅವರನ್ನು ಕೈಬಿಟ್ಟಿರುವುದಕ್ಕೆ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv