Tag: australia

  • ಆಸ್ಟ್ರೇಲಿಯಾ ವಿರುದ್ಧ ಭಾರತದ ಗೆಲುವು – ಸಂಭ್ರಮದಲ್ಲಿ ಅರೆಬೆತ್ತಲೆ ಫೋಟೋ ಹಂಚಿಕೊಂಡು ಪೂನಂ ಪಾಂಡೆ

    ಆಸ್ಟ್ರೇಲಿಯಾ ವಿರುದ್ಧ ಭಾರತದ ಗೆಲುವು – ಸಂಭ್ರಮದಲ್ಲಿ ಅರೆಬೆತ್ತಲೆ ಫೋಟೋ ಹಂಚಿಕೊಂಡು ಪೂನಂ ಪಾಂಡೆ

    ಮುಂಬೈ: ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟಿ. ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆದ್ದ ನಂತರದಲ್ಲಿ ತನ್ನ ಅರೆಬೆತ್ತಲೆ ಫೋಟೋ ಹಾಕಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಶ್ವಕಪ್ ಟೂರ್ನಿಯಲ್ಲಿ ಭಾರತ ತನ್ನ ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದ್ದು ಈ ಸಂಭ್ರಮ ಆಚರಣೆಗೆ ಬಾಲಿವುಡ್ ನಟಿ ಪೂನಂ ಪಾಂಡೆ ಬೆತ್ತಲಾಗಿರುವ ಫೋಟೋ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿ ಸಂಭ್ರಮ ಪಟ್ಟಿದ್ದಾರೆ.

    ಲಂಡನ್‍ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 36 ರನ್ ಗಳಿಗೆ ಭರ್ಜರಿ ಗೆಲುವು ದಾಖಲಿಸಿತ್ತು. ಇದು ನಿಜಕ್ಕೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂಭ್ರಮ ದಿನವಾಗಿತ್ತು. ಹಾಗೆಯೆ ಪೂನಂ ಪಾಂಡೆ ಸಹ 2019ರ ವಿಶ್ವಕಪ್ ಎಂಬ ಹ್ಯಾಶ್‍ಟ್ಯಾಗ್ ಬಳಸಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

    https://www.instagram.com/p/Byf59EoAQO-/?utm_source=ig_web_copy_link

    ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಡಿದ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಜೂನ್ 13ರಂದು ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾ ಸೆಣೆಸಾಡಲಿದೆ.

  • ಕೊನೆಯ 10 ಓವರ್ ನಲ್ಲಿ 116 ರನ್ – ಭಾರತಕ್ಕೆ 36 ರನ್ ಜಯ

    ಕೊನೆಯ 10 ಓವರ್ ನಲ್ಲಿ 116 ರನ್ – ಭಾರತಕ್ಕೆ 36 ರನ್ ಜಯ

    ಲಂಡನ್: ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯವನ್ನು 36 ರನ್ ಗಳಿಂದ ಗೆಲ್ಲುವ ಮೂಲಕ ಭಾರತ ಸತತ ಎರಡನೇ ಗೆಲುವು ದಾಖಲಿಸಿತು.

    ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿದರೆ, ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 316 ರನ್ ಗಳಿಗೆ ಆಲೌಟ್ ಆಯ್ತು. ಭಾರತದ ಬ್ಯಾಟ್ಸ್ ಮನ್ ಗಳು ಕೊನೆಯ 10 ಓವರ್ ಗಳಲ್ಲಿ 116 ರನ್ ಚಚ್ಚಿದರೆ ಕೊನೆಯ 11 ಓವರ್ ಗಳಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡಿತ್ತು.

    40 ಓವರ್ ಗಳಿಸಿದಾಗ ಭಾರತ 2 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತ್ತು. ಅಂತಿಮವಾಗಿ 50 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿತು. ಟೀಂ ಇಂಡಿಯಾ ಪರ ಶಿಖರ್ ಧವನ್ 117 ರನ್, ರೋಹಿತ್ ಶರ್ಮಾ 57 ರನ್, ವಿರಾಟ್ ಕೊಹ್ಲಿ 82 ರನ್, ಹಾರ್ದಿಕ್ ಪಾಂಡ್ಯ 48 ರನ್ ಹೊಡೆದರು.

    ಆಸ್ಟ್ರೇಲಿಯಾ ಪರ ವಾರ್ನರ್ 56 ರನ್, ಸ್ಮಿತ್ 69 ರನ್, ಕ್ಯಾರಿ 55 ರನ್ ಹೊಡೆದರು. ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ತಲಾ 3 ವಿಕೆಟ್ ಪಡೆದರೆ ಚಹಾಲ್ 2 ವಿಕೆಟ್ ಪಡೆದರು.

  • ಸ್ಟೇಡಿಯಂನಲ್ಲಿ ಆಸೀಸ್ ಅಭಿಮಾನಿಗಳನ್ನ ಹುಡುಕಾಡಿದ ಮೈಕಲ್ ವಾನ್

    ಸ್ಟೇಡಿಯಂನಲ್ಲಿ ಆಸೀಸ್ ಅಭಿಮಾನಿಗಳನ್ನ ಹುಡುಕಾಡಿದ ಮೈಕಲ್ ವಾನ್

    ಓವೆಲ್: ಆಸ್ಟ್ರೇಲಿಯಾ ಕ್ರಿಕೆಟ್ ಟೀಂ ಅಭಿಮಾನಿಗಳ ಸಂಖ್ಯೆಯ ಕುರಿತು ಟ್ವೀಟ್ ಮಾಡುವ ಮೂಲಕ ಇಂಗ್ಲೆಂಡ್‍ನ ಮಾಜಿ ಕ್ರಿಕೆಟರ್ ಮೈಕಲ್ ವಾನ್ ಟ್ರೋಲ್ ಆಗಿದ್ದಾರೆ.

    ಓವಲ್‍ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಲ್ಲಿಯವರೆಗೂ ನಾನು ಆಸ್ಟ್ರೇಲಿಯಾ ತಂಡದ ಆಟಗಾರರು, ಸಿಬ್ಬಂದಿ ಸೇರಿದಂತೆ ಕೇವಲ 33 ಅಭಿಮಾನಿಗಳನ್ನು ನೋಡಿದ್ದೇನೆ ಎಂದು ಮೈಕಲ್ ವಾನ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಧವನ್ ಶತಕ, ರೋಹಿತ್ – ಕೊಹ್ಲಿ ಫಿಫ್ಟಿ – ಆಸೀಸ್‍ಗೆ ಗೆಲ್ಲಲು 353 ರನ್ ಟಾರ್ಗೆಟ್

    ಲಂಡನ್‍ನ ಕೆನ್ನಿಂಗ್ಟನ್ ಓವಲ್‍ನಲ್ಲಿ ಇಂದು ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಪಂದ್ಯ ನಡೆಯುತ್ತಿದೆ. ಕ್ರೀಡಾಂಗಣದ ಎಲ್ಲ ಕಡೆಯೂ ಭಾರತ ತಂಡದ ಅಭಿಮಾನಿಗಳೆ ಇದ್ದಾರೆ. ಹೀಗಾಗಿ ಸ್ಟೇಡಿಯಂನಲ್ಲಿ ನೀಲಿ ಟೀ ಶರ್ಟ್ ಗಳೇ ಕಾಣುತ್ತಿವೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಮೈಕಲ್ ವಾನ್ ಟ್ರೋಲ್ ಆಗಿದ್ದಾರೆ.

    ಇದು ನಮ್ಮ ತಂಡದ ಮೇಲಿನ ಪ್ರೀತಿ ಎಂದು ನೆಟ್ಟಿಗರು ರೀ ಟ್ವೀಟ್ ಮಾಡಿದ್ದಾರೆ. ನಿಮ್ಮನ್ನು ಸೇರಿಸಿ ಏಣಿಕೆ ಮಾಡಿದರೆ 34 ಆಗಬಹುದು ಎಂದು ಅಂಕಿತ್ ಧಾಮಾ ಎಂಬವರು ವ್ಯಂಗ್ಯವಾಡಿದ್ದಾರೆ.

    https://twitter.com/DeveshUTD/status/1137657698428678146

    ಇಂಗ್ಲೆಂಡ್ ಹಾಗೂ ಭಾರತ ಕ್ರಿಕೆಟ್ ಟೀಂ ಪಂದ್ಯದಲ್ಲಿ ನೀವು ಕೇವಲ 17 ಜನರು ಮಾತ್ರ ಇರುತ್ತೀರಿ ಎಂದು ಡೆವೆಸ್ ಲೇವಡಿ ಮಾಡಿದ್ದಾರೆ.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೊಹ್ಲಿ ಪಡೆಗೆ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿ ಬೃಹತ್ ರನ್ ಗುರಿಯನ್ನೇ ಆಸೀಸ್ ಪಡೆಗೆ ನೀಡಿದ್ದಾರೆ. ನಿಗದಿತ 50 ಓವರ್ ಗಳಲ್ಲಿ ಟೀಂ ಇಂಡಿಯಾ 05 ವಿಕೆಟ್ ನಷ್ಟಕ್ಕೆ 352 ರನ್ ರನ್ ಗಳಿಸಿದೆ.

  • ಮ್ಯಾಚ್ ನೋಡಲು ಬಂದ ವಿಜಯ್ ಮಲ್ಯ

    ಮ್ಯಾಚ್ ನೋಡಲು ಬಂದ ವಿಜಯ್ ಮಲ್ಯ

    ಟೌಂಟನ್: ಲಂಡನ್‍ನ ಕೆನ್ನಿಂಗ್ಟನ್ ಓವಲ್‍ನಲ್ಲಿ ಇಂದು ನಡೆಯುತ್ತಿರುವ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಪಂದ್ಯವನ್ನು ನೋಡಲು ಉದ್ಯಮಿ ವಿಜಯ್ ಮಲ್ಯ ಆಗಮಿಸಿದ್ದಾರೆ.

    ವಿಜಯ್ ಮಲ್ಯ ಕ್ರೀಡಾಂಗಣದ ಗೇಟ್ ಬಳಿ ಟಿಕೆಟ್ ನೀಡಿ ಒಳ ಹೋಗುತ್ತಿದ್ದವೇಳೆ ಮಾಧ್ಯಮಗಳು ಪ್ರಶ್ನೆ ಕೇಳುತ್ತಿದ್ದರೂ ಮೌನವಾಗಿದ್ದು ಸ್ವಲ್ಪ ಸಮಯದ ಬಳಿಕ, ನಾನು ಮ್ಯಾಚ್ ನೋಡಲು ಬಂದಿದ್ದೇನೆ ಎಂದು ಕ್ರಿಡಾಂಗಣದ ಒಳಗೆ ಹೋದರು.

    ಐಸಿಸಿ 2019 ಏಕದಿನ ವಿಶ್ವಕಪ್‍ನಲ್ಲಿ ಟೀ ಇಂಡಿಯಾವು ತನ್ನ ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಕೊಹ್ಲಿ ಪಡೆ 27 ಓವರ್ ನಲ್ಲಿ ಒಂದು ವಿಕೇಟ್ ನಷ್ಟಕ್ಕೆ 153 ರನ್ ಕಲೆ ಹಾಕಿದೆ.

    ಮದ್ಯದ ದೊರೆ ವಿಜಯ್ ಮಲ್ಯ ಬ್ಯಾಂಕ್‍ಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ಮರುಪಾವತಿ ಮಾಡದೇ ಲಂಡನ್‍ನಲ್ಲಿ ತಲೆಮರೆಸಿಕೊಂಡಿದ್ದಾರೆ. ಮಲ್ಯ ಗಡಿಪಾರಿಗೆ ಬ್ರಿಟನ್ ಆಂತರಿಕ ಸಂಸತ್ತು ಒಪ್ಪಿಗೆ ನೀಡಿದೆ. ಆದರೆ ಈ ಸಂಬಂಧ ವಿಚಾರಣೆ ಮುಂದೂಡಲಾಗಿದೆ.

    ಕಳೆದ ವರ್ಷ ಡಿಸೆಂಬರಿನಲ್ಲಿ ಈ ಕುರಿತು ವಿಚಾರಣೆ ನಡೆಸಿ ತೀರ್ಪು ನೀಡಿದ್ದ ಲಂಡನ್ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಮಲ್ಯ ಗಡಿಪಾರಿಗೆ ಅನುಮತಿ ನೀಡಿತ್ತು. ಅಲ್ಲದೇ ಗಡಿಪಾರು ಆದೇಶ ನೀಡುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ನ್ಯಾಯಾಲಯದ ತೀರ್ಪಿಗೆ ಸಂಸತ್ ಒಪ್ಪಿಗೆ ಮಾತ್ರ ಬಾಕಿ ಇತ್ತು. ಆದರೆ ಮಲ್ಯ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿ ಬ್ಯಾಂಕ್ ಸಾಲ ಮರು ಪಾವತಿ ಮಾಡಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದರು.

    ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿ ವಿದೇಶದಲ್ಲಿರುವ ಮದ್ಯದ ದೊರೆ ವಿಜಯ್ ಮಲ್ಯ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಅಕ್ರಮ ಹಣ ವರ್ಗಾವಣೆ ತಡೆ ನ್ಯಾಯಾಲಯ (ಪಿಎಂಎಲ್‍ಎ) ಘೋಷಿಸಿದೆ. ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ ಜಾರಿಗೆ ಬಂದ ಬಳಿಕ ಘೋಷಣೆಯಾದ ಮೊದಲ ಉದ್ಯಮಿ ವಿಜಯ್ ಮಲ್ಯ ಆಗಿದ್ದಾರೆ.

    ಸಾಲ ತೆಗೆದುಕೊಂಡು ಮರು ಪಾವತಿಸದೇ ವಿದೇಶದಲ್ಲಿ ನೆಲೆಸಿರುವ ವಿಜಯ್ ಮಲ್ಯರನ್ನ ಆರ್ಥಿಕ ಅಪರಾಧಿ ಎಂದು ಘೋಷಿಸಬೇಕೆಂದು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐ 2018, ನವೆಂಬರ್ ನಲ್ಲಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಇಡಿ ಮತ್ತು ಸಿಬಿಐ ಸುಳ್ಳು ಆರೋಪ ಮಾಡುತ್ತಿದ್ದು, ಸಾಲ ಮರುಪಾವತಿಸಲು ನ್ಯಾಯಾಲಯ ಅವಕಾಶ ನೀಡಬೇಕೆಂದು ಮಲ್ಯ ಪರ ವಕೀಲರು ವಾದ ಮಂಡಿಸಿದ್ದರು. ಇದನ್ನು ಆಲಿಸಿದ ನ್ಯಾಯಾಲಯ ವಿಜಯ್ ಮಲ್ಯ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಕೋರ್ಟ್ 2019 ಜನವರಿ 1ರಂದು ತೀರ್ಪು ನೀಡಿತ್ತು.

  • ಇಂದು ಭಾರತ, ಆಸ್ಟ್ರೇಲಿಯಾ ಫೈಟ್ – ಕೆನ್ನಿಂಗ್ಟನ್ ಓವೆಲ್‍ನಲ್ಲಿ ಹೈವೋಲ್ಟೇಜ್ ಮ್ಯಾಚ್

    ಇಂದು ಭಾರತ, ಆಸ್ಟ್ರೇಲಿಯಾ ಫೈಟ್ – ಕೆನ್ನಿಂಗ್ಟನ್ ಓವೆಲ್‍ನಲ್ಲಿ ಹೈವೋಲ್ಟೇಜ್ ಮ್ಯಾಚ್

    ಸೌತಾಂಪ್ಟನ್: ಲಂಡನ್‍ನ ಕೆನ್ನಿಂಗ್ಟನ್ ಕ್ರೀಡಾಂಗಣ ಇಂದು ಹೈವೋಲ್ಟೇಜ್ ಮ್ಯಾಚ್‍ಗೆ ಸಾಕ್ಷಿಯಾಗಲಿದೆ. ಭಾರತ-ಆಸ್ಟ್ರೇಲಿಯಾ ನಡುವಿನ ಇಂದಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

    ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಸೋಲುಣಿಸಿರುವ ಕೊಹ್ಲಿ ಪಡೆ, ಇಂದು ಆಸ್ಟ್ರೇಲಿಯಾ ವಿರುದ್ಧ ಸೆಣಸುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಆದ ತಪ್ಪುಗಳನ್ನ ತಿದ್ದುಕೊಂಡು ಎಚ್ಚರಿಕೆಯಿಂದಾಡಲು ಕೊಹ್ಲಿ ಪಡೆ ತಂತ್ರ ರೂಪಿಸಿದೆ.

    ಮೊದಲ ಪಂದ್ಯದಲ್ಲೇ ಶತಕ ಸಿಡಿಸಿರುವ ರೋಹಿತ್ ಫಾರ್ಮ್ ನಲ್ಲಿದ್ದು ಆಸಿಸ್‍ಗೆ ನಡುಕ ಹುಟ್ಟಿಸಿದ್ದಾರೆ. ಬ್ಯಾಟಿಂಗ್ ವೈಫಲ್ಯ ಕಂಡ ಧವನ್, ಕೊಹ್ಲಿ ಇಂದಿನ ಪಂದ್ಯದಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಜಾದವ್, ಕೆಎಲ್ ರಾಹುಲ್, ಧೋನಿ, ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಮಿಡಲ್ ಆರ್ಡರ್ ನ ಟ್ರಂಪ್ ಕಾರ್ಡ್ಸ್, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್ ಎದುರಾಳಿಗಳನ್ನ ಕಟ್ಟಿಹಾಕೋ ತಾಕತ್ತು ಹೊಂದಿದ್ದಾರೆ. ಚಹಲ್, ಕುಲ್ದೀಪ್ ಯಾದವ್ ಆಸಿಸ್ ಬ್ಯಾಟ್ಸ್ ಮನ್‍ಗಳನ್ನ ಕಾಡೋದು ಗ್ಯಾರಂಟಿ.

    ಆಸಿಸ್ ರಣತಂತ್ರ, ಕೊಹ್ಲಿ ಬಾಯ್ಸ್ ಪ್ರತಿತಂತ್ರ:
    ಅಫ್ಘಾನಿಸ್ತಾನ್, ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಬೀಗುತ್ತಿರುವ ಫಿಂಚ್ ಪಡೆ ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿದೆ. ಆದರೆ ಎದುರಾಳಿ ಭಾರತ ಏನು ಅಷ್ಟೊಂದು ಸುಲಭ ತುತ್ತಲ್ಲ ಅಂತಲೂ ಗೊತ್ತಿದೆ. ಹಾಗಾಗಿ, ಆಸಿಸರು ರಣತಂತ್ರ ಹೆಣೆದಿದ್ದಾರೆ. ಬಲಿಷ್ಠ ಬ್ಯಾಟಿಂಗ್ ಲೈನ್‍ ಆಪ್ ಹೊಂದಿರುವ ಆಸಿಸ್‍ಗೆ ಡೇವಿಡ್ ವಾರ್ನರ್, ಸ್ಮಿತ್ ಆನೆಬಲ. ಫಿಂಚ್, ಖವಾಜ, ಮ್ಯಾಕ್ಸ್ ವೆಲ್, ಸ್ಟೋಯ್ನಿಸ್, ಅಲೆಕ್ಸ್ ಗೆ ಪಂದ್ಯದ ಗತಿಯನ್ನೇ ಬದಲಿಸೋ ತಾಕತ್ತಿದೆ. ಬಲಿಷ್ಠ ಬೌಲಿಂಗ್ ಪಡೆಯನ್ನೂ ಹೊಂದಿರೋ ಆಸ್ಟ್ರೇಲಿಯಾಗೆ ಕೌಲ್ಟರ್ ನೈಲ್, ಕಮಿನ್ಸ್, ಮಿಚಲ್ ಸ್ಟಾರ್ಕ್, ಝುಂಪಾ ಪ್ರಮುಖ ಅಸ್ತ್ರಗಳಾಗಿವೆ.

    ಒಟ್ಟಿನಲ್ಲಿ, ವಿಶ್ವಕ್ರಿಕೆಟ್‍ನ ದಿಗ್ಗಜರ ಸೆಣಸಾಟ ಫೈನಲ್ ಪಂದ್ಯದಷ್ಟೇ ಕೌತುಕವನ್ನ ಹೆಚ್ಚಿಸಿದೆ. ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ.

  • ಸಂಕಷ್ಟದಲ್ಲಿದ್ದಾಗಲೇ ಕೈ ಬಿಟ್ಟ ಸಿಎಂ ಕುಚುಕು!

    ಸಂಕಷ್ಟದಲ್ಲಿದ್ದಾಗಲೇ ಕೈ ಬಿಟ್ಟ ಸಿಎಂ ಕುಚುಕು!

    ಬೆಂಗಳೂರು: ರಾಜ್ಯದಲ್ಲಿ ಸಂಕಷ್ಟದ ಪರಿಸ್ಥಿತಿ ಇದ್ದಾಗಲೇ ಸಚಿವ ಡಿಕೆ ಶಿವಕುಮಾರ್ ಅವರು ವಿದೇಶಕ್ಕೆ ಹೊರಟಿದ್ದು, ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಹೌದು. ಏನೇ ಸಮಸ್ಯೆ ಇದ್ದರೂ ನಾನೀದ್ದೇನೆ ಎಂದು ಹೇಳುತ್ತಾ, ಸರ್ಕಾರದ ಹಿತ ಕಾಯಲು ನಿಂತಿದ್ದ ಟ್ರಬಲ್ ಶೂಟರ್ ಸಂಕಷ್ಟದ ಸಮಯದಲ್ಲೇ ಕೈ ಕೊಟ್ರಾ ಅನ್ನೋ ಅನುಮಾನವೊಂದು ಮೂಡಿದೆ. ರಾಜ್ಯ ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಇನ್ನು 7 ದಿನಗಳ ಕಾಲ ನಾಟ್ ರೀಚೆಬಲ್‍ನಲ್ಲಿ ಇರಲಿದ್ದಾರೆ.

    ಭಾನುವಾರ ರಾತ್ರಿ ದೆಹಲಿಯಿಂದ ಕುಟುಂಬ ಸಮೇತ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾರೆ. ಮೇ 27ರವರೆಗೆ ಆಸ್ಟ್ರೇಲಿಯಾ ಪ್ರವಾಸ ಮಾಡಲಿರುವ ಡಿಕೆಶಿ, ಸಂಪೂರ್ಣವಾಗಿ ರಾಜಕಾರಣ ಮರೆತು ಕುಟುಂಬದೊಂದಿಗೆ ಕಾಲ ಕಳೆಯಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಮೇ 23 ರ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಅನ್ನುವ ಸ್ಥಿತಿ ಇದೆ. ಇಂತಹ ಸಮಯದಲ್ಲೇ ಡಿ.ಕೆ.ಶಿವಕುಮಾರ್ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾರೆ. ಡಿಕೆಶಿ ಅವರು ಸರ್ಕಾರಕ್ಕೆ ಸಂಕಷ್ಟ ಬಂದಾಗ ದೋಸ್ತಿಗಳ ನಡುವೆ ಭಿನ್ನಾಭಿಪ್ರಾಯ ಬಂದಾಗೆಲ್ಲ ಮುಂದೆ ನಿಂತು ಸರಿಪಡಿಸಿದ್ದರು.

    ಲೋಕ ಸಮರದ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಆತಂಕವಿದ್ದು, ಅದರಲ್ಲೂ ಮೈತ್ರಿ ಸರ್ಕಾರದ ಅಸ್ತಿತ್ವವೇ ಅಲ್ಲಾಡಬಹುದು ಎಂಬ ಮಾತು ಜೋರಾಗಿಯೇ ಕೇಳಿ ಬರುತ್ತಿದೆ. ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಆಸ್ಟ್ರೇಲಿಯಾ ಪ್ರವಾಸ ಕಾಕತಾಳಿಯವೋ ಅಥವಾ ಉದ್ದೇಶ ಪೂರಕವೋ ಅನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

  • ಪೋರ್ನ್ ಚಿತ್ರ ತೋರಿಸಿ ಮಗಳನ್ನೇ ರೇಪ್ ಮಾಡಿ, ಹಣ ನೀಡ್ತಿದ್ದ ತಂದೆ!

    ಪೋರ್ನ್ ಚಿತ್ರ ತೋರಿಸಿ ಮಗಳನ್ನೇ ರೇಪ್ ಮಾಡಿ, ಹಣ ನೀಡ್ತಿದ್ದ ತಂದೆ!

    ಸಿಡ್ನಿ: ಸ್ವಂತ ಮಗಳ ಮೇಲೆಯೇ ತಂದೆ ಅತ್ಯಾಚಾರ ನಡೆಸಿ ನಂತರ ಆಕೆಯ ಬಾಯಿ ಮುಚ್ಚಿಸಲು ಹಣ ನೀಡುತ್ತಿದ್ದ ಅಮಾನವೀಯ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಅಪ್ರಾಪ್ತ ಮಗಳ ಮೇಲೆಯೇ ತಂದೆ 4 ವರ್ಷಗಳಿಂದ ನಿರಂತರ ಅತ್ಯಾಚಾರವೆಸಗಿದ್ದಾನೆ. ಪರಿಣಾಮ  ಬಾಲಕಿ ಗರ್ಭಿಣಿಯಾಗಿದ್ದು, ಆಕೆಗೆ ಗರ್ಭಪಾತವನ್ನೂ ಕೂಡ ಪಾಪಿ ತಂದೆ ಮಾಡಿಸಿದ್ದಾನೆ. ತಾಯಿ ವಿದೇಶಕ್ಕೆ ತೆರಳಿದ ಬಳಿಕ ಬಾಲಕಿ 7 ವರ್ಷದವಳಾಗಿದ್ದಾಗ ತಂದೆ ಜೊತೆ ವಾಸಿಸಲು ಶುರು ಮಾಡಿದ್ದಾಳೆ. ಆದರೆ ಮಗಳಿಗೆ 11 ವರ್ಷವಾಗುತ್ತಿದ್ದಂತೆ ಕಾಮುಕ ತಂದೆ ಮಗಳ ಮೇಲೆಯೇ ವಿಕೃತಿ ಮೆರೆದಿದ್ದಾನೆ. ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದನು.

    ಮಗಳಿಗೆ ಪೋರ್ನ್ ಚಿತ್ರಗಳನ್ನು ತೋರಿಸಿ ಅತ್ಯಾಚಾರ ನಡೆಸುತ್ತಿದ್ದನು. ಅಲ್ಲದೆ ಅತ್ಯಾಚಾರದ ನಂತರ ಮಗಳಿಗೆ ಹಣ ನೀಡಿ ಬಾಯಿ ಮುಚ್ಚಿಸುತ್ತಿದ್ದನು. ಆದರೆ ಬಾಲಕಿಗೆ 15 ವರ್ಷ ತುಂಬಿ ತಿಳುವಳಿಕೆ ಬಂದ ನಂತರ ತಂದೆ ನೀಡುತ್ತಿದ್ದ ಲೈಂಗಿಕ ಕಿರುಕುಳದ ಅರಿವಾಗಿದೆ. ಆಗ ಆಕೆ ತನ್ನ ಸ್ನೇಹಿತರಿಗೆ ತಂದೆ ಕ್ರೌರ್ಯವನ್ನು ಹೇಳಿದ್ದಾಳೆ. ಈ ಬಗ್ಗೆ ಪೊಲೀಸರಿಗೂ ಕೂಡ ಬಾಲಕಿ ದೂರು ನೀಡಿದ್ದು, ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದರು.

    ಈ ಪ್ರಕರಣ ಬೆಳಕಿಗೆ ಬಂದಂತೆ ಪೊಲೀಸರು ತಂದೆಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಬಳಿಕ ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಕಾಮುಕ ತಂದೆಗೆ 18 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ವಿರೋಧಿಸಿ ತಂದೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದನು. ಆದರೆ ಕೋರ್ಟ್ ಮೇ 10ರಂದು ಅರ್ಜಿಯನ್ನು ತಿರಸ್ಕರಿಸಿದೆ.

  • ಟ್ರಂಪ್ ಮುಖವಾಡ ಧರಿಸಿ ಆಭರಣ ಕಳವುಗೈದ ಕಿಲಾಡಿ!

    ಟ್ರಂಪ್ ಮುಖವಾಡ ಧರಿಸಿ ಆಭರಣ ಕಳವುಗೈದ ಕಿಲಾಡಿ!

    ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಯುವಕನೊಬ್ಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಖವಾಡ ಧರಿಸಿ ಕಳ್ಳತನ ಮಾಡಿದ್ದಾನೆ. ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಘಟನೆ ಭಾನುವಾರ ಬೆಳಗ್ಗೆ ಆಸ್ಟ್ರೇಲಿಯಾದ ಕ್ವೀನ್ಸ್‍ಲ್ಯಾಂಡ್‍ನಲ್ಲಿ ನಡೆದಿದೆ. ಇಲ್ಲಿನ ಆಭರಣಗಳ ಅಂಗಡಿಯೊಂದರಲ್ಲಿ ಕಳ್ಳತನ ಮಾಡಲು ಯುವಕ ಈ ವಿನೂತನ ದಾರಿಯನ್ನು ಬಳಸಿಕೊಂಡಿದ್ದಾನೆ. ಇದೀಗ ಕಳ್ಳನ ಸೆರೆಗೆ ಸಹಾಯ ಮಾಡಿ ಎಂದು ಕ್ವೀನ್ಸ್ ಲ್ಯಾಂಡ್ ಪೊಲೀಸರು ಟ್ವೀಟ್ ಮಾಡುವ ಮೂಲಕ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಇತ್ತಿಚಿನ ದಿನಗಳಲ್ಲಿ ಕಳ್ಳರು ಸಿಸಿ ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ವಿಭಿನ್ನ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ಹಾಗೆಯೇ ಆಭರಣಗಳ ಅಂಗಡಿಯಲ್ಲಿ ಕಳ್ಳತನ ಮಾಡಲು ಬಂದ ಯುವಕ, ಟ್ರಂಪ್ ಅವರ ಮುಖವಾಡ ಧರಿಸಿ ಅಂಗಡಿಯ ಗಾಜನ್ನು ಒಡೆದು ಆಭರಣಗಳನ್ನು ಕಳ್ಳತನ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕಳ್ಳತನ ಮಾಡಲು ಬಂದ ಯುವಕ ಟ್ರಂಪ್ ಅವರ ಮುಖವಾಡದ ಜೊತೆಗೆ ಕಪ್ಪು ಬಣ್ಣದ ಕೋಟ್, ಕಪ್ಪು ಟ್ರ್ಯಾಕ್ ಪ್ಯಾಂಟ್, ಬಿಳಿ ಬಣ್ಣದ ಬೂಟ್ ಧರಿಸಿದ್ದಾನೆ. ಒಂದು ಆಭರಣದ ಅಂಗಡಿ ಮತ್ತು ಎಲೆಕ್ಟ್ರಾನಿಕ್ ಅಂಗಡಿಯ ಗಾಜನ್ನು ಒಡೆದು ಕಳವು ಮಾಡಿದ್ದಾನೆ. ದರೋಡೆಕೋರನನ್ನು ಕಂಡಲ್ಲಿ ನಮಗೆ ತಿಳಿಸಬೇಕು ಎಂದು ಕ್ವೀನ್ಸ್‍ಲ್ಯಾಂಡ್ ಪೊಲೀಸರು ಸಾರ್ವಜನಿಕರಲ್ಲಿ ರಿಕ್ವೆಸ್ಟ್ ಮಾಡಿದ್ದಾರೆ.

  • ಮೂರು ಕಣ್ಣಿನ ಹಾವು ನೋಡಿ ದಂಗಾದ್ರು ನೆಟ್ಟಿಗರು!

    ಮೂರು ಕಣ್ಣಿನ ಹಾವು ನೋಡಿ ದಂಗಾದ್ರು ನೆಟ್ಟಿಗರು!

    ಕ್ಯಾನ್ಬೆರಾ: ಸಾಮಾನ್ಯವಾಗಿ ಎರಡು ಕಣ್ಣಿನ ಹಾವನ್ನ ನೋಡಿರುತ್ತೀರಾ. ಅದ್ರೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮೂರು ಕಣ್ಣಿನ ಹಾವೊಂದು ಸಖತ್ ಸದ್ದು ಮಾಡುತ್ತಿದೆ.

    ಹೌದು. ಸಹಜವಾಗಿ ಹಾವುಗಳೆಂದರೆ ಎರಡು ಕಣ್ಣು ಇರುತ್ತೆ. ಆದರೆ ಆಸ್ಟ್ರೇಲಿಯಾದ ಉತ್ತರ ಭಾಗದಲ್ಲಿ ಮೂರು ಕಣ್ಣಿನ ಹಾವೊಂದು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋ ಸಖತ್ ವೈರಲ್ ಆಗಿದೆ. ಬುಧವಾರ ಈ ಬಗ್ಗೆ ಆಸ್ಟ್ರೇಲಿಯಾ ಉತ್ತರ ಭಾಗದ ಅರಣ್ಯ ಇಲಾಖೆ ತಮ್ಮ ಫೇಸ್‍ಬುಕ್ ಫೇಜ್‍ನಲ್ಲಿ ಮೂರು ಕಣ್ಣಿನ ಹಾವಿನ ಫೋಟೋ ಜೊತೆಗೆ ಅದರ ವಿಶೇಷತೆಯನ್ನು ಶೇರ್ ಮಾಡಿದೆ. ಈ ಮೂರು ಕಣ್ಣಿನ ಹಾವಿನ ನೋಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

    ಅರ್ನ್ ಹೆಮ್ ಹೆದ್ದಾರಿಯಲ್ಲಿ ಸಿಕ್ಕಿರುವ ಈ ಹಾವು ಕಾರ್ಪೆಟ್ ಪೈತಾನ್ ಪ್ರಜಾತಿಗೆ ಸೇರಿದ್ದು, ಇದಕ್ಕೆ `ಮಾಂಟಿ ಪೈತಾನ್’ ಎಂದು ಹೆಸರಿಡಲಾಗಿದೆ. ಮಾರ್ಚ್ ನಲ್ಲಿ ಈ ವಿಚಿತ್ರ ಹಾವು ಪತ್ತೆಯಾಗಿತ್ತು. ಆದ್ರೆ ಹುಟ್ಟಿದ ಕೇವಲ ಮೂರೇ ತಿಂಗಳಲ್ಲಿ ಅದು ಸತ್ತು ಹೋಗಿದೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ಅಲ್ಲದೆ ಈ ಬಗ್ಗೆ ಮಾತನಾಡಿದ ಅಧಿಕಾರಿಗಳು, ಆರೋಗ್ಯದ ಸಮಸ್ಯೆ ನಡುವೆಯೂ ಅದು ಮೂರು ತಿಂಗಳ ಕಾಲ ಬದುಕಿದ್ದೇ ಅಚ್ಚರಿಯ ಸಂಗತಿ. ಈ ಮೂರು ಕಣ್ಣಿನ ಹಾವು ಸುಮಾರು 40 ಸೆ.ಮಿ ಉದ್ದವಿತ್ತು ಎಂದಿದ್ದಾರೆ. ಹಾಗೆಯೇ ಈ ಹಾವಿನ ಎಕ್ಸ್-ರೆ ಮಾಡಿ ನೋಡಿದಾಗ ಹಾವಿಗೆ ಎರಡು ತಲೆಯಿಲ್ಲ ಎಂಬುದು ತಿಳಿದುಬಂದಿದೆ. ಆದ್ರೆ ಒಂದೇ ತಲೆಬುರುಡೆಯಲ್ಲಿ ಮೂರನೇ ಕಣ್ಣಿಗೆ ಜಾಗವಿದ್ದು, ಮೂರು ಕಣ್ಣು ಕೂಡ ಕಾರ್ಯ ನಿರ್ವಹಿಸುತ್ತಿತ್ತು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

    https://www.facebook.com/ParksandWildlifeNT/posts/2284844224909161

  • ನಾನು ಸಲಿಂಗಕಾಮಿಯಲ್ಲ – ಆಸೀಸ್ ಆಟಗಾರ ಜೇಮ್ಸ್ ಫಾಲ್ಕ್‌ನರ್‌ ಸ್ಪಷ್ಟನೆ

    ನಾನು ಸಲಿಂಗಕಾಮಿಯಲ್ಲ – ಆಸೀಸ್ ಆಟಗಾರ ಜೇಮ್ಸ್ ಫಾಲ್ಕ್‌ನರ್‌ ಸ್ಪಷ್ಟನೆ

    ಸಿಡ್ನಿ: ಆಸ್ಟ್ರೇಲಿಯಾ ತಂಡದ ಖ್ಯಾತ ಕ್ರಿಕೆಟ್ ಆಟಗಾರರ ಜೇಮ್ಸ್ ಫಾಲ್ಕ್‌ನರ್‌ ತಾನೊಬ್ಬ ಸಲಿಂಗಕಾಮಿಯೆಂದು ಆರ್ಥೈಸುವಂತಹ ಟ್ವೀಟ್ ಮಾಡಿ ಮುಜುಗರಕ್ಕೆ ಒಳಗಾಗಿದ್ದು, ಬಳಿಕ ಇದೀಗ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಆಸೀಸ್ ತಂಡದ ಪ್ರಮುಖ ವೇಗದ ಬೌಲರ್ ಆಗಿರುವ ಜೇಮ್ಸ್ ಫಾಲ್ಕ್‌ನರ್‌, ಸೋಮವಾರ ತಮ್ಮ 29ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ತಾಯಿ ಹಾಗೂ ಗೆಳೆಯನೊಂದಿಗೆ ಊಟ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ನನ್ನ ಬಾಯ್ ಫ್ರೆಂಡ್, ತಾಯಿಯೊಂದಿಗೆ ಹುಟ್ಟುಹಬ್ಬದ ಡಿನ್ನರ್ ಎಂದು ಫೋಟೋದ ಕೆಳಗೆ ಬರೆದುಕೊಂಡಿದ್ದರು.

    https://www.instagram.com/p/Bw1epixh7hN/?utm_source=ig_embed

    ಜೇಮ್ಸ್ ಫಾಲ್ಕ್‌ನರ್‌ ಪೋಸ್ಟ್ ಗೆ ಹಲವು ಕ್ರಿಕೆಟ್ ಆಟಗಾರರರು ಸೇರಿದಂತೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿ, ನೀವು ಸಲಿಂಗಕಾಮಿ ಎಂದು ಧೈರ್ಯವಾಗಿ ಹೇಳಿಕೊಂಡ ನಿಮ್ಮ ನಡೆಗೆ, ನಮ್ಮ ಬೆಂಬಲವಿದೆ ಎಂದು ಪ್ರತಿಕ್ರಿಯೆ ನೀಡಿದ್ದರು. ಆದರೆ ಅಭಿಮಾನಿಗಳ ಈ ಪ್ರತಿಕ್ರಿಯೆಗೆ ಶಾಕ್ ಆದ ಜೇಮ್ಸ್ ಫಾಲ್ಕ್‌ನರ್‌ ಮತ್ತೊಂದು ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

    ನನ್ನ ಈ ಮೊದಲಿನ ಪೋಸ್ಟ್ ಬಗ್ಗೆ ತಪ್ಪು ತಿಳಿದುಕೊಳ್ಳಲಾಗಿದೆ. ನಾನು ಸಲಿಂಗಕಾಮಿ ಅಲ್ಲ. ಆದರೆ ಅಂತಹವರ ಬಗ್ಗೆ ನೀವು ನೀಡಿದ ಬೆಂಬಲ ನೋಡಿ ಹೆಮ್ಮೆ ಅನಿಸುತ್ತಿದೆ. ಪ್ರೀತಿ ಅಂದರೆ ಪ್ರೀತಿ ಅಷ್ಟೇ. ಅಂದಹಾಗೆ ಆತ ನನ್ನ ಗೆಳೆಯ ಮಾತ್ರ. ತುಂಬಾ ಸಮಯದ ಬಳಿಕ ಮನೆಯಲ್ಲಿ ಆತನೊಂದಿಗೆ ಭೇಟಿ ಮಾಡಿದ್ದ ಕಾರಣ ಪೋಸ್ಟ್ ಮಾಡಿದ್ದೆ ಎಂದು ತಿಳಿಸಿದ್ದಾರೆ.

    https://www.instagram.com/p/Bw2-aefB63J/?utm_source=ig_embed

    ಇತ್ತೀಚೆಗೆ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಸಲಿಂಗ ವಿವಾಹವಾಗುವ ಮೂಲಕ ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ಜೇಮ್ಸ್ ಫಾಲ್ಕ್‌ನರ್‌ ಅವರ ಪೋಸ್ಟ್ ಅಭಿಮಾನಿಗಳಲ್ಲಿ ಗೊಂದಲವನ್ನು ಮೂಡಿಸಿತ್ತು. ಈ ಹಿಂದೆ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಸ್ಟಿವನ್ ಡೇವಿಸ್ ತಾವು ಸಲಿಂಗಕಾಮಿ ಎಂಬುದನ್ನು ಬಹಿರಂಗ ಪಡಿಸಿದ್ದರು.