Tag: australia

  • ಇಬ್ಬರು ಶೂನ್ಯಕ್ಕೆ ಔಟಾದರೂ ಕೊನೆಯವರೆಗೆ ಹೋರಾಡಿ ಸೋತ ಭಾರತ

    ಇಬ್ಬರು ಶೂನ್ಯಕ್ಕೆ ಔಟಾದರೂ ಕೊನೆಯವರೆಗೆ ಹೋರಾಡಿ ಸೋತ ಭಾರತ

    – ಆಸ್ಟ್ರೇಲಿಯಾಗೆ 12 ರನ್‌ಗಳ ಜಯ
    – 2-1 ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

    ಸಿಡ್ನಿ: ನಾಯಕ ವಿರಾಟ್‌ ಕೊಹ್ಲಿ ಸಾಹಸದ ಹೊರತಾಗಿಯೂ ಕೊನೆಯ ಟಿ20 ಪಂದ್ಯವನ್ನು 12 ರನ್‌ಗಳಿಂದ ಆಸ್ಟ್ರೇಲಿಯಾ ಗೆಲ್ಲುವ ಮೂಲಕ ಭಾರತದ ಕ್ಲೀನ್‌ ಸ್ವೀಪ್‌ ಕನಸನ್ನು ಭಗ್ನಗೊಳಿಸಿದೆ.

    ಗೆಲ್ಲಲು 187 ರನ್‌ಗಳ ಕಠಿಣ ಗುರಿಯನ್ನು ಪಡೆದ ಭಾರತ ಉತ್ತಮವಾಗಿಯೇ ಆಡುತ್ತಿತ್ತು. ಆದರೆ ಹಾರ್ದಿಕ್‌ ಪಾಂಡ್ಯ ಬೆನ್ನಲ್ಲೇ ವಿರಾಟ್‌ ಕೊಹ್ಲಿ ಔಟಾದ ಕಾರಣ ಅಂತಿಮವಾಗಿ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 174 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಇನ್ನಿಂಗ್ಸ್‌ನ 2ನೇ ಎಸೆತದಲ್ಲಿ ಕೆಎಲ್‌ ರಾಹುಲ್‌ ಶೂನ್ಯಕ್ಕೆ ಔಟಾದರು. ಎರಡನೇ ವಿಕೆಟ್‌ಗೆ ಶಿಖರ್‌ ಧವನ್‌ ಮತ್ತು ಕೊಹ್ಲಿ 8.5 ಓವರ್‌ಗಳಲ್ಲಿ 74 ರನ್‌ ಜೊತೆಯಾಟವಾಡಿದರು.

    ಧವನ್‌ 28 ರನ್‌ ಗಳಿಸಿ ಔಟಾದರೆ ಸಂಜು ಸ್ಯಾಮ್ಸನ್‌ 10, ಶ್ರೇಯಸ್‌ ಅಯ್ಯರ್‌ 0 ಸುತ್ತಿದರು. ಹಾರ್ದಿಕ್‌ ಪಾಂಡ್ಯ 20 ರನ್‌(13 ಎಸೆತ, 1 ಬೌಂಡರಿ, 2 ಸಿಕ್ಸರ್‌) ಹೊಡೆದರೆ ವಿರಾಟ್‌ ಕೊಹ್ಲಿ 85 ರನ್‌(61 ಎಸೆತ, 4 ಬೌಂಡರಿ, 3 ಸಿಕ್ಸರ್‌) ಚಚ್ಚಿದರು. ಕೊನೆಯಲ್ಲಿ ಶಾರ್ದೂಲ್‌ ಠಾಕೂರ್‌ 17 ರನ್‌(7 ಎಸೆತ, 2 ಸಿಕ್ಸರ್‌) ಹೊಡೆದರು.

    ಆಸ್ಟ್ರೇಲಿಯಾದ ಪರವಾಗಿ ಆರಂಭಿಕ ಆಟಗಾರ ಮಾಥ್ಯೂ ವೇಡ್‌ 80 ರನ್‌(53 ಎಸೆತ, 7 ಬೌಂಡರಿ, 2 ಸಿಕ್ಸರ್)‌ ಗ್ಲೇನ್‌ ಮ್ಯಾಕ್ಸ್‌ವೆಲ್‌ 54 ರನ್‌(36 ಎಸೆತ, 3 ಬೌಂಡರಿ, 3 ಸಿಕ್ಸರ್‌) ಹೊಡೆದಿದ್ದರು.

  • 22 ಬಾಲಿಗೆ 42 ರನ್ – ಪಾಂಡ್ಯ ಸ್ಫೋಟಕ ಆಟ,  ಭಾರತಕ್ಕೆ ಸರಣಿ

    22 ಬಾಲಿಗೆ 42 ರನ್ – ಪಾಂಡ್ಯ ಸ್ಫೋಟಕ ಆಟ, ಭಾರತಕ್ಕೆ ಸರಣಿ

    – 6 ವಿಕೆಟ್‍ಗಳಿಂದ ಎರಡನೇ ಪಂದ್ಯ ಗೆದ್ದು ಬೀಗಿದ ಇಂಡಿಯಾ

    ಸಿಡ್ನಿ: ಇಂದು ನಡೆದ ಭಾರತ ವರ್ಸಸ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಭಾರತ ತಂಡ 6 ವಿಕೆಟ್‍ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಎರಡು ಪಂದ್ಯ ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ.

    ಇಂದು ಸಿಡ್ನಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ನಾಯಕ ಮ್ಯಾಥ್ಯೂ ವೇಡ್ ಮತ್ತು ಸ್ಟೀವ್ ಸ್ಮಿತ್ ಅವರು ಭರ್ಜರಿ ಬ್ಯಾಟಿಂಗ್‍ನಿಂದ ನಿಗಧಿತ 20 ಓವರಿನಲ್ಲಿ ಭರ್ಜರಿ 194 ರನ್ ಸಿಡಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಇಂಡಿಯಾ ತಂಡ ಹಾರ್ದಿಕ್ ಪಾಂಡ್ಯ ಮತ್ತು ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್‍ನಿಂದ ಇನ್ನೂ ಎರಡು ಬಾಲ್ ಉಳಿದಂತೆ 195 ರನ್ ಹೊಡೆದು ಜಯ ಸಾಧಿಸಿತು.

    ಪಾಂಡ್ಯ ಸ್ಫೋಟಕ
    ಇಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸೂಪರ್ ಆಗಿ ಬ್ಯಾಟ್ ಬೀಸಿದರು. ಕೊಹ್ಲಿ ಔಟ್ ಆದ ಬಳಿಕ ಬ್ಯಾಟಿಂಗ್ ಬಂದ ಪಾಂಡ್ಯ, 22 ಬಾಲಿನಲ್ಲಿ 3 ಬೌಂಡರಿ ಮತ್ತು ಎರಡು ಸಿಕ್ಸರ್ ಸಮೇತ 42 ರನ್ ಸಿಡಿಸಿದರು. ಕೊನೆಯ ಓವರಿನಲ್ಲಿ 14 ರನ್ ಬೇಕಿದ್ದಾಗ ಸಿಕ್ಸರ್ ಸಿಡಿಸಿ ಭಾರತಕ್ಕೆ ಗೆಲುವನ್ನು ತಂದಿಟ್ಟರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಕೂಡ ಉತ್ತಮವಾಗಿ ಬ್ಯಾಟ್ ಬೀಸಿದರು.

    ಆಸ್ಟ್ರೇಲಿಯಾ ನೀಡಿದ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾಗೆ ಆರಂಭಿಕರಾದ ಕೆ.ಎಲ್. ರಾಹುಲ್ ಮತ್ತು ಶಿಖರ್ ಧವನ್ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮೊದಲ ವಿಕೆಟ್‍ಗೆ ಈ ಜೋಡಿ ಅರ್ಧಶತಕದ ಜೊತೆಯಾಟವಾಡಿತು. ಈ ವೇಳೆ ಐದನೇ ಓವರ್ ಎರಡನೇ ಬಾಲಿಗೆ 22 ಬಾಲಿಗೆ 30 ರನ್ ಸಿಡಿಸಿದ್ದ ಕೆಎಲ್ ರಾಹುಲ್ ಅವರು ಆಂಡ್ರ್ಯೂ ಟೈ ಅವರಿಗೆ ಔಟ್ ಅದರು. ಈ ವೇಳೆ 9 ಓವರಿಗೆ ಇಂಡಿಯಾ ಒಂದು ವಿಕೆಟ್ ಕಳೆದುಕೊಂಡು 81 ರನ್ ಗಳಸಿತ್ತು.

    ನಂತರ ನಾಯಕ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಸ್ಫೋಟಕ ಆಟಕ್ಕೆ ಮುಂದಾದರು. ಆದರೆ ಅರ್ಧಶತಕ ಸಿಡಿಸಿ ಮುನ್ನುಗುತ್ತಿದ್ದ ಶಿಖರ್ ಧವನ್ ಅವರು 36 ಬಾಲಿಗೆ 52 ರನ್ ಸಿಡಿಸಿ ಔಟ್ ಅದರು. ಶಿಖರ್ ಧವನ್ ನಂತರ ಬಂದು ಭರ್ಜರಿಯಾಗಿ ಬ್ಯಾಟ್ ಬೀಸಿದ ಸಂಜು ಸ್ಯಾಮ್ಸನ್ 10 ಬಾಲಿಗೆ 15 ರನ್ ಹೊಡೆದು ಔಟ್ ಅದರು. ನಂತರ ವಿರಾಟ್ ಕೊಹ್ಲಿಯವರು ಕೂಡ 24 ಬಾಲಿಗೆ 40 ರನ್ ಸಿಡಿಸಿ ಪೆವಿಲಿಯನ್ ಸೇರಿದರು.

    ಆ ನಂತರ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ತಾಳ್ಮೆಯ ಆಟಕ್ಕೆ ಮುಂದಾಗಿ ಭಾರತವನ್ನು ಗೆಲುವಿನ ಹಂತಕ್ಕೆ ತಂದರು. ಕೊನೆಯ ಎರಡು ಓವರಿನಲ್ಲಿ 26 ರನ್‍ಗಳ ಅವಶ್ಯಕತೆ ಇತ್ತು. ಆಗ ಹಾರ್ದಿಕ್ ಪಾಂಡ್ಯ ಎರಡು ಬೌಂಡರಿ ಸಿಡಿಸಿ 19ನೇ ಓವರಿನಲ್ಲಿ 12 ರನ್ ಬಂದಿತ್ತು. ಕೊನೆಯ ಓವರಿನಲ್ಲಿ 14 ರನ್ ಬೇಕಿತ್ತು. ಆ ಓವರಿನಲ್ಲಿ ಎರಡು ಸಿಕ್ಸರ್ ಸಿಡಿಸಿದ ಪಾಂಡ್ಯ ಇನ್ನೂ ಎರಡು ಬಾಲ್ ಉಳಿದಂತೆ ಭಾರತಕ್ಕೆ ಗೆಲುವು ತಂದಿತ್ತರು.

  • ಅಸೀಸ್ ವಿರುದ್ಧ ಟಿ-20 ಸರಣಿ ವಶಪಡಿಸಿಕೊಳ್ಳಲು ಭಾರತಕ್ಕೆ 195ರನ್‍ಗಳ ಗುರಿ

    ಅಸೀಸ್ ವಿರುದ್ಧ ಟಿ-20 ಸರಣಿ ವಶಪಡಿಸಿಕೊಳ್ಳಲು ಭಾರತಕ್ಕೆ 195ರನ್‍ಗಳ ಗುರಿ

    ಸಿಡ್ನಿ: ಇಂದು ನಡೆಯುತ್ತಿರುವ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ನಡುವಿನ ಎರಡನೇ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಇಂಡಿಯಾಗೆ 195ರನ್‍ಗಳ ಟಾರ್ಗೆಟ್ ನೀಡಿದೆ.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಮ್ಯಾಥ್ಯೂ ವೇಡ್ ಮತ್ತು ಡಿ ಆರ್ಸಿ ಶಾರ್ಟ್ ಉತ್ತಮ ಆರಂಭ ನೀಡಿದರು. ಆದರೆ 9 ರನ್ ಗಳಸಿದ್ದ ಡಿ ಆರ್ಸಿ ಶಾರ್ಟ್ ಟಿ ನಟರಾಜನ್ ಅವರ ಬೌಲಿಂಗ್‍ನಲ್ಲಿ ಐಯ್ಯರ್ ಗೆ ಕ್ಯಾಚ್ ನೀಡಿ ಹೊರನಡೆದರು. ಇದಾದ ನಂತರ ಭರ್ಜರಿಯಾಗಿ ಬ್ಯಾಟ್ ಬೀಸಿದ ವೇಡ್ 25 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ನಂತರ ಕ್ಯಾಚ್ ಬಿಟ್ಟು ಕೊಹ್ಲಿ ಹೊಡೆದ ರನ್ ಔಟ್‍ಗೆ ವೇಡ್ 58 ರನ್‍ ಗಳಸಿ ಔಟ್ ಆದರು.

    ನಂತರ ಜೊತೆಯಾದ ಸ್ಟೀವನ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಅಬ್ಬರ ಆಟಕ್ಕೆ ಮುಂದಾದರು. ಫೋರ್ ಸಿಕ್ಸರ್ ಗಳ ಸುರಿಮಳೆಗೈಯುತ್ತಿದ್ದ ಈ ಜೋಡಿಗೆ 12ನೇ ಓವರ್ ನಾಲ್ಕನೇ ಬಾಲಿನಲ್ಲಿ ಶಾರ್ದೂಲ್ ಠಾಕೂರ್ ಶಾಕ್ ನೀಡಿದರು. 13 ಬಾಲಿಗೆ 22 ರನ್ ಗಳಸಿದ್ದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಮ್ಯಾಕ್ಸ್ ವೆಲ್ ಅವರನ್ನು ಔಟ್ ಮಾಡಿದರು. ಈ ನಂತರ 38 ಬಾಲಿಗೆ 46 ರನ್ ಸಿಡಿಸಿದ್ದ ಸ್ಟೀವನ್ ಸ್ಮಿತ್ ಚಹಲ್ ಅವರ ಬೌಲಿಂಗ್‍ನಲ್ಲಿ ಪಾಂಡ್ಯಗೆ ಕ್ಯಾಚ್ ಕೊಟ್ಟು ಹೊರನಡೆದರು.

    18ನೇ ಓವರಿನಲ್ಲಿ ದಾಳಿಗೆ ಬಂದ ನಟರಾಜನ್ ಅವರು ಮೂರನೇ ಬಾಲಿನಲ್ಲಿ 18 ಬಾಲಿಗೆ 26 ರನ್ ಗಳಿಸಿದ್ದ ಮೊಯಿಸಸ್ ಹೆನ್ರಿಕ್ಸ್ ಅವರನ್ನು ಬಲಿ ಪಡೆದುಕೊಂಡರು. ಆ ನಂತರ ಬಂದ ಯಾವುದೇ ಬ್ಯಾಟ್ಸ್ ಮ್ಯಾನ್ ಅಕ್ರಮಣಕಾರಿಯಾಗಿ ಬ್ಯಾಟ್ ಬೀಸಲಿಲ್ಲ. ಹೀಗಾಗಿ ಒಂದು ಹಂತದಲ್ಲಿ 200 ರನ್ ಗಡಿ ದಾಟುವ ಸನಿಹದಲ್ಲಿದ್ದ ಆಸೀಸ್ ಭಾರತ ಬಿಗಿ ಬೌಲಿಂಗ್ ದಾಳಿಯಿಂದ 194 ರನ್ ಗಳಸಿತು.

  • ಮೊದಲ ಪಂದ್ಯದಲ್ಲೇ ನಟರಾಜನ್ ಸೂಪರ್ ಬೌಲಿಂಗ್ – ಟೀಂ ಇಂಡಿಯಾಗೆ 11 ರನ್‍ಗಳ ರೋಚಕ ಜಯ

    ಮೊದಲ ಪಂದ್ಯದಲ್ಲೇ ನಟರಾಜನ್ ಸೂಪರ್ ಬೌಲಿಂಗ್ – ಟೀಂ ಇಂಡಿಯಾಗೆ 11 ರನ್‍ಗಳ ರೋಚಕ ಜಯ

    ಕ್ಯಾನ್ಬೆರಾ: ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲನೇ ಟಿ-20 ಪಂದ್ಯದಲ್ಲಿ ಭಾರತ 11 ರನ್‍ಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದೆ. ಅಂತಾರಾಷ್ಟೀಯ ಟಿ-20ಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ವೇಗಿ ಟಿ ನಟರಾಜನ್ ಭರ್ಜರಿ ಪ್ರದರ್ಶನ ತೋರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಇಂದು ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, ಆರಂಭದಲ್ಲಿ ಕೆಎಲ್ ರಾಹುಲ್ ಅರ್ಧಶತಕ ಮತ್ತು ಕೊನೆಯಲ್ಲಿ ರವೀಂದ್ರ ಜಡೇಜಾ ಅವರ ಸ್ಫೋಟಕ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ 160 ರನ್ ಪೇರಿಸಿತ್ತು. ಇದನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಉತ್ತಮ ಆರಂಭ ಕಂಡರೂ ನಟರಾಜನ್ ಮತ್ತು ಚಹಲ್ ಅವರ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದುಕೊಂಡು 150 ರನ್ ಹೊಡೆದು 11 ರನ್ ಅಂತರದಿಂದ ಸೋತಿತು.

    ನಟರಾಜನ್ ಬೌಲಿಂಗ್ ಕಮಾಲ್:
    ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ನಟರಾಜನ್ ವರುಣ್ ಚಕ್ರವರ್ತಿಗೆ ಗಾಯವಾದ ಕಾರಣ ಆಸೀಸ್ ಟೂರ್ನಿಗೆ ಆಯ್ಕೆಯಾಗಿದ್ದರು. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡ ನಟರಾಜನ್ ತಾವಾಡಿದ ಮೊದಲ ಪಂದ್ಯದಲ್ಲೇ ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಕಿತ್ತು 30 ರನ್ ನೀಡಿದರು. ನಟರಾಜನ್‍ಗೆ ಉತ್ತಮ ಸಾಥ್ ನೀಡಿದ ಯುಜ್ವೇಂದ್ರ ಚಹಲ್ ನಾಲ್ಕು ಓವರ್ ಸ್ಪಿನ್ ಮಾಡಿ ಮೂರು ವಿಕೆಟ್ ಕಿತ್ತು 25 ರನ್ ನೀಡಿದರು.

    ಭಾರತ ನೀಡಿದ 161 ಟಾರ್ಗೆಟ್ ಬೆನ್ನಟ್ಟಲು ಬಂದ ಆಸೀಸ್ ಪಡೆಗೆ ಉತ್ತಮ ಆರಂಭ ದೊರಕಿತು. ಆರಂಭಿಕರಾಗಿ ಕಣಕ್ಕಿಳಿದ ಡಿ ಆರ್ಸಿ ಶಾರ್ಟ್ ಮತ್ತು ಆರೋನ್ ಫಿಂಚ್ ಉತ್ತಮ ಆರಂಭ ನೀಡಿದರು. ಈ ಜೋಡಿ ಅರ್ಧಶತಕದ ಜೊತೆಯಾಟವಾಡಿ ಮುನ್ನುಗುತ್ತಿತ್ತು ಆದರೆ ಏಳನೇ ಓವರಿನಲ್ಲಿ ಹಾರ್ದಿಕ್ ಪಾಂಡ್ಯ 26 ಬಾಲಿಗೆ 35 ರನ್ ಗಳಿಸಿದ್ದ ಫಿಂಚ್ ಅನ್ನು ಔಟ್ ಮಾಡಿದರು. ನಂತರ ಬಂದ ಸ್ಟೀವನ್ ಸ್ಮಿತ್ ಚಹಲ್ ಸ್ಪಿನ್ ಮೋಡಿಗೆ 12 ರನ್ ಗಳಿಸಿ ಪೆವಿಲಿಯನ್ ಸೇರಿದರು.

    ನಂತರ ಕ್ರೀಸಿಗೆ ಬಂದ ಸ್ಫೋಟಕ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಅನ್ನು ಟಿ ನಟರಾಜನ್ ಔಟ್ ಮಾಡಿದರು. ನಂತರ ಜೊತೆಯಾದ ಡಿ ಆರ್ಸಿ ಶಾರ್ಟ್ ಮತ್ತು ಮೊಯಿಸಸ್ ಹೆನ್ರಿಕ್ಸ್ ಉತ್ತಮ ಜೊತೆಯಾಟವಾಡಿದರು. ಆದರೆ 14ನೇ ಓವರಿನಲ್ಲಿ 34 ರನ್ ಸಿಡಿಸಿದ್ದ ಆರ್ಸಿ ಶಾರ್ಟ್ ಅನ್ನು ಔಟ್ ಮಾಟುವ ಮೂಲಕ ಟಿ ನಟರಾಜನ್ ಅವರು ಪಂದ್ಯಕ್ಕೆ ತಿರುವು ನೀಡಿದರು. ನಂತರ ಬಂದ ಮ್ಯಾಥ್ಯೂ ವೇಡ್ 7 ರನ್ ಗಳಿಸಿ ಚಹಲ್‍ಗೆ ಔಟ್ ಆದರು.

    ಈ ಮೂಲಕ ಪಂದ್ಯ ಭಾರತದ ಕಡೆ ವಾಲಿತು. ನಂತರ ಬ್ಯಾಟಿಂಗ್ ಬಂದ ಮಿಚೆಲ್ ಸ್ಟಾರ್ಕ್ ಅನ್ನು ಟಿ ನಟರಾಜನ್ ಬೌಲ್ಡ್ ಮಾಡಿದರು. 20 ಬಾಲಿಗೆ 30 ರನ್ ಸಿಡಿಸಿ ಆಡುತ್ತಿದ್ದ ಮೊಯಿಸಸ್ ಹೆನ್ರಿಕ್ಸ್ ದೀಪಕ್ ಚಹರ್ ಬೌಲಿಂಗ್‍ನಲ್ಲಿ ಔಟ್ ಆಗಿ ಹೊರನಡೆದರು. ಕೊನೆಯ ಓವರಿನಲ್ಲಿ ಆಸ್ಟ್ರೇಲಿಯಾಗೆ ಗೆಲ್ಲಲು 25 ರನ್ ಬೇಕಿತ್ತು. ಆದರೆ ಶಮಿ ಅವರ ಬಿಗಿಯಾದ ಬೌಲಿಂಗ್ ದಾಳಿಯಿಂದ 15 ರನ್ ಮಾತ್ರ ಆಸ್ಟ್ರೇಲಿಯಾಕ್ಕೆ ಬಂತು ಪರಿಣಾಮ 11 ರನ್‍ಗಳ ಅಂತರದಲ್ಲಿ ಪಂದ್ಯವನ್ನು ಸೋತಿತು.

  • ರಾಹುಲ್ ಸ್ಟಂಪ್ ಹಿಂದೆ ಹೇಳಿದ್ದನ್ನು ನಾನೆಂದೂ ಮರೆಯಲ್ಲ: ಕ್ಯಾಮರೂನ್ ಗ್ರೀನ್

    ರಾಹುಲ್ ಸ್ಟಂಪ್ ಹಿಂದೆ ಹೇಳಿದ್ದನ್ನು ನಾನೆಂದೂ ಮರೆಯಲ್ಲ: ಕ್ಯಾಮರೂನ್ ಗ್ರೀನ್

    ಕ್ಯಾನ್ಬೆರಾ: ಆತ ಸ್ಟಂಪ್ ಹಿಂದೆ ಹೇಳಿದ್ದನ್ನು ನಾನೆಂದೂ ಮರೆಯಲ್ಲ ಎಂದು ಹೇಳುವ ಮೂಲಕ ಆಸ್ಟ್ರೇಲಿಯಾದ ಯುವ ಆಟಗಾರ ಕ್ಯಾಮರೂನ್ ಗ್ರೀನ್ ಭಾರತದ ವಿಕೆಟ್ ಕೀಪರ್, ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಹಾಡಿಹೊಗಳಿದ್ದಾರೆ.

    ಬುಧವಾರ ಕ್ಯಾನ್ಬೆರಾದಲ್ಲಿ ನಡೆದ ಮೂರನೇ ಏಕದಿನ ಪಂದ್ಯವನ್ನು ಭಾರತ ತಂಡ 13ರನ್‍ಗಳ ಅಂತರದಿಂದ ಗೆದ್ದುಕೊಂಡಿದೆ. ಆದರೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲೆರೆಡು ಪಂದ್ಯಗಳನ್ನು ಗೆದ್ದ ಆಸ್ಟ್ರೇಲಿಯಾ ತಂಡ ಸರಣಿಯನ್ನು ವಶಪಡಿಸಿಕೊಂಡಿದೆ. ಮೂರನೇ ಏಕದಿನ ಸರಣಿಯಲ್ಲಿ ಆಸೀಸ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಕ್ಯಾಮರೂನ್ ಗ್ರೀನ್ ಪಾದಾರ್ಪಣೆ ಮಾಡಿದ್ದಾರೆ.

    ಪಂದ್ಯ ಮುಗಿದ ಬಳಿಕ ಮಾತನಾಡಿರುವ ಗ್ರೀನ್, ನಾನು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಹೋದಾಗ ರಾಹುಲ್ ವಿಕೆಟ್ ಕೀಪಿಂಗ್‍ನಲ್ಲಿ ನಿಂತಿದ್ದರು. ಈ ವೇಳೆ ರಾಹುಲ್ ಅವರು ನರ್ವಸ್ ಆಗಿದ್ದೀಯಾ ಎಂದು ಪ್ರಶ್ನೆ ಮಾಡಿದರು. ನಾನು ಆಗ ಹೌದು ಸ್ವಲ್ಪ ನರ್ವಸ್ ಆಗಿದ್ದೇನೆ ಎಂದು ಹೇಳಿದೆ. ಆಗ ರಾಹುಲ್ ಅವರು ತಕ್ಷಣ ಏನೂ ಆಗಲ್ಲ ಚೆನ್ನಾಗಿ ಆಡು ಯಂಗ್ ಸ್ಟಾರ್ ಎಂದರು. ಅವರು ಹೇಳಿದ ಮಾತನ್ನು ನಾನು ಯಾವತ್ತು ಮರೆಯಲ್ಲ ಎಂದು ಹೇಳಿದ್ದಾರೆ.

    ಕ್ಯಾಮರೂನ್ ಗ್ರೀನ್ ಆಸ್ಟ್ರೇಲಿಯಾದ ಪರವಾಗಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡಿದ 230ನೇ ಆಟಗಾರ ಎನಿಸಿಕೊಂಡಿದ್ದಾರೆ. ಭಾರತ ವಿರುದ್ಧ ಮೂರನೇ ಏಕದಿನದೊಂದು ಆಸೀಸ್‍ನ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರಿಂದ ಕ್ಯಾಪ್ ಪಡೆದ ಗ್ರೀನ್, ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿ ಯಾವುದೇ ವಿಕೆಟ್ ಪಡೆಯದೇ 27 ರನ್ ನೀಡಿದ್ದರು. ಇದೇ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಗ್ರೀನ್, 27 ಬಾಲಿಗೆ 21 ರನ್ ಹೊಡೆದು ಔಟ್ ಆಗಿದ್ದರು.

  • ಬುಮ್ರಾಗೆ ಮ್ಯಾಕ್ಸ್ ವೆಲ್ ಬೌಲ್ಡ್ – ಭಾರತಕ್ಕೆ 13 ರನ್‍ಗಳ ರೋಚಕ ಜಯ

    ಬುಮ್ರಾಗೆ ಮ್ಯಾಕ್ಸ್ ವೆಲ್ ಬೌಲ್ಡ್ – ಭಾರತಕ್ಕೆ 13 ರನ್‍ಗಳ ರೋಚಕ ಜಯ

    – ಮೊದಲ ಪಂದ್ಯದಲ್ಲೇ ಮಿಂಚಿದ ನಟರಾಜನ್

    ಕ್ಯಾನ್ಬೆರಾ: ಇಂದು ನಡೆದ ಆಸ್ಟ್ರೇಲಿಯಾ ಮತ್ತು ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಡಿಯಾ 13 ರನ್‍ಗಳ ಅಂತರದಲ್ಲಿ ಗೆದ್ದು ಬೀಗಿದೆ. ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಗುವುದರಿಂದ ತಪ್ಪಿಸಿಕೊಂಡಿದೆ.

    ಇಂದು ಕ್ಯಾನ್ಬೆರಾ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ವಿರಾಟ್ ಕೊಹ್ಲಿಯವರ ಅರ್ಧಶಕ ಮತ್ತು ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಸ್ಫೋಟಕ ಆಟದಿಂದ ನಿಗಧಿತ 50 ಓವರಿನಲ್ಲಿ 302 ರನ್ ಗಳಿತ್ತು. ಈ ಗುರಿಯನ್ನು ಬೆನ್ನಟ್ಟಿ ಆಸೀಸ್ ತಂಡ ಜಸ್ಪ್ರೀತ್ ಬುಮ್ರಾ, ಟಿ ನಟರಾಜನ್ ಮತ್ತು ಶಾರ್ದೂಲ್ ಠಾಕೂರ್ ಬೌಲಿಂಗ್ ದಾಳಿಗೆ ನಲುಗಿ 13 ರನ್‍ಗಳ ಅಂತರದಿಂದ ಸೋತಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯವನ್ನು ಗೆದ್ದು ಕೊನೆಯ ಪಂದ್ಯವನ್ನು ಸೋಲುವ ಮೂಲಕ ಆಸ್ಟ್ರೇಲಿಯಾ ಸರಣಿಯನ್ನು ಗೆದ್ದುಕೊಂಡಿತು.

    ಟಿ ನಟರಾಜನ್ ಮಿಂಚು
    ಇಂದಿನ ಪಂದ್ಯದಲ್ಲಿ ಭಾರತದ ಪರ ಪಾದಾರ್ಪಣೆ ಪಂದ್ಯವಾಡಿದ ಟಿ ನಟರಾಜನ್, ತಮ್ಮ ಕೋಟಾದ 10 ಓವರ್ ಬೌಲ್ ಮಾಡಿ 70 ರನ್ ನೀಡಿ ಎರಡು ವಿಕೆಟ್ ಕಿತ್ತು ಮಿಂಚಿದರು. ಜೊತೆಗೆ ಶಾರ್ದೂಲ್ ಠಾಕೂರ್ 10 ಓವರ್ ಉತ್ತಮವಾಗಿ ಬೌಲ್ ಮಾಡಿ 51 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಬುಮ್ರಾ ಪ್ರಮುಖ ಹಂತದಲ್ಲಿ ಮ್ಯಾಕ್ಸ್ ವೆಲ್ ಔಟ್ ಮಾಡಿ ಎರಡು ವಿಕೆಟ್ ಕಿತ್ತು ಪಂದ್ಯಕ್ಕೆ ತಿರುವು ನೀಡಿದರು.

    ಇಂಡಿಯಾ ನೀಡಿದ್ದ 303 ರನ್ ಗುರಿಯನ್ನು ಬೆನ್ನಟ್ಟಲು ಬಂದ ಆಸೀಸ್‍ಗೆ ಟಿ ನಟರಾಜನ್ ಶಾಕ್ ನೀಡಿದರು. 7 ರನ್ ಗಳಿಸಿ ಆಡುತ್ತಿದ್ದ ಮಾರ್ನಸ್ ಲ್ಯಾಬುಸ್ಚಾಗ್ನೆ ನಟರಾಜನ್ ಬೌಲಿಂಗ್ ಬೌಲ್ಡ್ ಆದರು. ನಂತರ ಬಂದ ಸ್ಟೀವನ್ ಸ್ಮಿತ್‍ಅನ್ನು ಶಾರ್ದೂಲ್ ಠಾಕೂರ್ ಬೌಲ್ಡ್ ಮಾಡಿದರು. ನಾಯಕ ಆರೋನ್ ಫಿಂಚ್ ಬಿಟ್ಟರೆ ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಯಾವ ಆಟಗಾರನೂ ಸರಿಯಾಗಿ ಬ್ಯಾಟ್ ಬೀಸಲಿಲ್ಲ. ಫಿಂಚ್ ಅವರು 82 ಬಾಲಿಗೆ 75 ರನ್ ಸಿಡಿಸಿ ಜಡೇಜಾ ಅವರಿಗೆ ಔಟ್ ಆದರು.

    ಇದಾದ ನಂತರ ಬಂದ ಮೊಯಿಸಸ್ ಹೆನ್ರಿಕ್ಸ್ 22 ರನ್ ಮತ್ತು ಕ್ಯಾಮರೂನ್ ಗ್ರೀನ್ 21 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಬಂದ ಗ್ಲೆನ್ ಮ್ಯಾಕ್ಸ್ ವೆಲ್ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಜೊತೆ ಸೇರಿಕೊಂಡು ಸ್ಫೋಟಕ ಆಟಕ್ಕೆ ಮುಂದಾದರು. ಆದರೆ 38 ಬಾಲಿಗೆ ನಾಲ್ಕು ಸಿಕ್ಸರ್ ಮತ್ತು ಮೂರು ಬೌಂಡರಿ ಸಮೇತ 59 ರನ್ ಸಿಡಿಸಿದ್ದ ಮ್ಯಾಕ್ಸ್ ವೆಲ್ ಅನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿ ಪಂದ್ಯಕ್ಕೆ ತಿರುವು ನೀಡಿದರು. ನಂತರ ಬಂದ ಯಾವುದೇ ಬ್ಯಾಟ್ಸ್ ಮ್ಯಾನ್ ಮ್ಯಾಜಿಕ್ ಮಾಡದ ಕಾರಣ ಆಸೀಸ್ ಸೋತಿತು.

    ಇದಕ್ಕೂ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಮೊದಲೇ ಶಿಖರ್ ಧವನ್ ಅವರನ್ನು ಕಳೆದುಕೊಂಡಿತ್ತು. ಆದರೆ ನಂತರ ಬಂದ ನಾಯಕ ಕೊಹ್ಲಿ 78 ಬಾಲಿಗೆ ಐದು ಬೌಂಡರಿ ಸಮೇತ 63 ರನ್ ಸಿಡಿಸಿದರು. ಕೊಹ್ಲಿ ಔಟ್ ಆದ ನಂತರ ಐಯ್ಯರ್ ಮತ್ತು ರಾಹುಲ್ ಕೂಡ ಔಟ್ ಆದರು. ಆದರೆ ನಂತರ ಒಂದಾದ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಅಬ್ಬರದ ಆಟಕ್ಕೆ ಮುಂದಾದರು. ಹಾರ್ದಿಕ್ 76 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 7 ಬೌಂಡಿರಿ ಸಮೇತ ಭರ್ಜರಿ 92 ರನ್ ಸಿಡಿಸಿದರು. ಪಾಂಡ್ಯಗೆ ಉತ್ತಮ ಸಾಥ್ ನೀಡಿದ ಜಡೇಜಾ 50 ಬಾಲ್‍ನಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿ ಸಮೇತ 66 ರನ್ ಸಿಡಿಸಿದರು.

  • 51 ರನ್ ಗಳಿಂದ ಎರಡನೇ ಏಕದಿನ ಪಂದ್ಯ ಗೆದ್ದ ಆಸೀಸ್

    51 ರನ್ ಗಳಿಂದ ಎರಡನೇ ಏಕದಿನ ಪಂದ್ಯ ಗೆದ್ದ ಆಸೀಸ್

    ಸಿಡ್ನಿ: ಇಂದು ನಡೆದ ಪಂದ್ಯವನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಏಕದಿನ ಸರಣಿಯನ್ನ ತನ್ನದಾಗಿಸಿಕೊಂಡಿದೆ. ಮೂರು ಪಂದ್ಯಗಳಲ್ಲಿ ಎರಡನ್ನ ಆಸೀಸ್ ಬಳಗ ಗೆದ್ದಿದ್ದು, ಕೊನೆಯ ಮ್ಯಾಚ್ ಬಾಕಿ ಉಳಿದಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಆಸ್ಟ್ರೇಲಿಯಾ 398 ರನ್ ಕಲೆ ಹಾಕಿತ್ತು.

    ಬೃಹತ್ ಮೊತ್ತವನ್ನ ಬೆನ್ನಟ್ಟಿದ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 338 ರನ್ ಕಲೆ ಹಾಕಿ 51 ರನ್ ಗಳ ಅಂತರದಿಂದ ಸೋಲನ್ನ ಒಪ್ಪಿಕೊಂಡಿತು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ವೃತ್ತಿಜೀವನದ 59ನೇ ಅರ್ಧ ಶತಕ ದಾಖಲಿಸಿದರು. ಜಾಶ್ ಹೇಝಲ್‍ವುಡ್ ಬೌಲಿಂಗ್ ನಲ್ಲಿ ಮೊಯ್ಸೆಸ್ ಹೆನ್ರಿಕ್ಸ್ ಗೆ ಕ್ಯಾಚ್ ನೀಡಿ ಔಟಾದ್ರು. ಇತ್ತ ಕೆ.ಎಲ್.ರಾಹುಲ್ ಒನ್ ಡೇ ಕೆರಿಯರ್ ನ 8ನೇ ಅರ್ಧಶತಕ ದಾಖಲಿಸಿ ಆಡಮ್ ಝಾಂಪ ಬಾಲ್ ನಲ್ಲಿ ಔಟ್ ಆದ್ರು.

    ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ (30) ಮತ್ತು ಮಯಾಂಕ್ ಆಗರ್ವಾಕಲ್ (28) ಜೊತೆಯಾಟದಲ್ಲಿ 58 ರನ್ ಪೇರಿಸಿ ಪಂದ್ಯಕ್ಕೆ ಉತ್ತಮ ಆರಂಭ ನೀಡಿದ್ದರು. ಪ್ಯಾಟ್ ಕಮ್ಮಿನ್ಸ್ ಮೊದಲಿಗೆ ಅಗರ್ವಾಲ್ ಮತ್ತು ಶಿಖರ್ ಧವನ್ ವಿಕೆಟ್ ಪಡೆದರು. ನಂತರ ಬಂದ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಜೊತೆಯಾಟದಲ್ಲಿ 98 ರನ್ ಸೇರಿಸಿದರು. ಅಯ್ಯರ್ ನಂತರ ಬಂದ ಕೆ.ಎಲ್.ರಾಹುಲ್ ಕ್ಯಾಪ್ಟನ್ ಕೊಹ್ಲಿಗೆ ಜೊತೆಯಾದ್ರು. ಈ ಇಬ್ಬರ ಆಟದಲ್ಲಿ 72 ರನ್ ತಂಡದ ಪಾಲಾಯ್ತು. ಕೊಹ್ಲಿ ಪೆವಿಲಿಯನ್ ಗೆ ತೆರಳಿದ ಬಳಿಕ ಜೊತೆಯಾದ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಾ ಜೋಡಿ 63 ರನ್ ಸೇರಿಸಿತು. ಆದ್ರೆ ಗೆಲುವು ಆಸ್ಟ್ರೇಲಿಯಾದ ಪಾಲಾಯ್ತು.

    ವಿದೇಶದಲ್ಲಿ ಸತತ ಎರಡನೇ ಬಾರಿ ಒನ್ ಡೇ ಸರಣಿಯನ್ನ ಸೋತಿದೆ. ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ಭಾರತದ ವಿರುದ್ಧ 3-0 ಅಂತರದಲ್ಲಿ ಗೆಲುವು ದಾಖಲಿಸಿತ್ತು. ಇದೀಗ ಆಸ್ಟ್ರೇಲಿಯಾ ಮೂರು ಪಂದ್ಯಗಳಲ್ಲಿ ಗೆದ್ದು ಸರಣಿಯನ್ನ ತನ್ನದಾಗಿಸಿಕೊಂಡಿದೆ.

    ಆಸ್ಟ್ರೇಲಿಯಾ:
    ಸ್ಮಿತ್ 104 ರನ್ (64 ಎಸೆತ, 14 ಬೌಂಡರಿ, 2 ಸಿಕ್ಸರ್), ಡೇವಿಡ್ ವಾರ್ನರ್ 83 ರನ್(77 ಎಸೆತ, 7ಬೌಂಡರಿ, 3 ಸಿಕ್ಸರ್) ಲಬುಶೇನ್ 70 ರನ್(61 ಎಸೆತ, 5 ಬೌಂಡರಿ) ಗ್ಲೇನ್ ಮ್ಯಾಕ್ಸ್ ವೆಲ್ 63 ರನ್(29 ಎಸೆತ, 4 ಬೌಂಡರಿ, 4 ಸಿಕ್ಸರ್), ನಾಯಕ ಫಿಂಚ್ 60 ರನ್(69 ಎಸೆತ, 6 ಬೌಂಡರಿ, 1 ಸಿಕ್ಸರ್) ಹೊಡೆದರು.

    ಸೈನಿ 7 ಓವರ್ ಮಾಡಿ 70 ರನ್ ನೀಡಿ ದುಬಾರಿಯಾದರು. 10 ಓವರ್ ಎಸೆದ ಬುಮ್ರಾ 79 ರನ್, ಶಮಿ 73 ರನ್ ನೀಡಿದರು. ಚಹಲ್ 9 ಓವರ್ ಎಸೆದು 71 ರನ್ ನೀಡಿದರು.

    ಭಾರತ:
    ಶಿಖರ್ ಧವನ್ 30 (ಬೌಂಡರಿ 5), ಮಾಯಾಂಕ್ ಅಗರ್ವಾಲ್ 28 ರನ್ (ಬೌಂಡರಿ 4), ವಿರಾಟ್ ಕೊಹ್ಲಿ (ನಾಯಕ) 89 ರನ್ (7 ಬೌಂಡರಿ 2 ಸಿಕ್ಸ್), ಶ್ರೇಯಸ್ ಅಯ್ಯರ್ 38 ರನ್ (5 ಬೌಂಡರಿ), ಕೆಎಲ್ ರಾಹುಲ್ (ವಿಕೆಟ್‍ಕೀಪರ್) 76 ರನ್ (4 ಬೌಂಡರಿ 5 ಸಿಕ್ಸ್), ಹಾರ್ದಿಕ್ ಪಾಂಡ್ಯ 28 ರನ್ (1 ಬೌಂಡರಿ 1 ಸಿಕ್ಸ್), ರವೀಂದ್ರ ಜಡೇಜಾ 24 ರನ್ (1 ಬೌಂಡರಿ 2 ಸಿಕ್ಸ್), ನವದೀಪ್ ಸೈನಿ 10 ರನ್* (1 ಬೌಂಡರಿ), ಮೊಹಮ್ಮದ್ ಶಮಿ 1 ರನ್, ಜಸ್‍ಪ್ರೀತ್ ಬುಮ್ರಾ 0, ಯುಜ್ವೇಂದ್ರ ಚಹಲ್ 4 ರನ್

  • ಮ್ಯಾಚ್ ನೋಡಲು ಹೋಗಿ ಆಸ್ಟ್ರೇಲಿಯಾ ಹುಡುಗಿ ಜೊತೆ ಲವ್- ಪ್ರಪೋಸ್ ವಿಡಿಯೋ ವೈರಲ್

    ಮ್ಯಾಚ್ ನೋಡಲು ಹೋಗಿ ಆಸ್ಟ್ರೇಲಿಯಾ ಹುಡುಗಿ ಜೊತೆ ಲವ್- ಪ್ರಪೋಸ್ ವಿಡಿಯೋ ವೈರಲ್

    – ಪ್ರಪೋಸ್ ಮಾಡುತ್ತಿದ್ದಂತೆ ಒಪ್ಪಿದ ಯುವತಿ

    ಕ್ಯಾನ್ಬೆರಾ: ಇಂಡಿಯಾ-ಆಸ್ಟ್ರೇಲಿಯಾ ಹೈ ಓಲ್ಟೇಜ್ 2ನೇ ಅಂತರಾಷ್ಟ್ರೀಯ ಏಕದಿನ ಪಂದ್ಯದ ಮಧ್ಯೆ ಮತ್ತೊಂದು ವಿಚಾರ ಗಮನ ಸೆಳೆದಿದ್ದು, ಇದೀಗ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಭಾರತ ಕ್ರಿಕೆಟ್ ತಂಡದ ಅಭಿಮಾನಿಯೊಬ್ಬ ಆಸ್ಟ್ರೇಲಿಯಾ ಯುವತಿಗೆ ಪ್ರಪೋಸ್ ಮಾಡುವ ಮೂಲಕ ಗಮನ ಸೆಳೆದಿದ್ದಾನೆ.

    ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಆಸ್ಟ್ರೇಲಿಯಾದ ಸಿಡ್ನಿಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯ ನಡೆಯುತ್ತಿರುವಾಗಲೇ ಪ್ರಪೋಸ್ ಮಾಡಿದ್ದಾನೆ. ಹಲವು ಜನರ ಮಧ್ಯೆ ಭಾರತ ಕ್ರಿಕೆಟ್ ತಂಡದ ಅಭಿಮಾನಿ ಆಸ್ಟ್ರೇಲಿಯಾ ಯುವತಿಗೆ ಪ್ರೇಮ ನಿವೇದನೆ ಮಾಡಿದ್ದಾನೆ.

    ಕ್ರಿಕೆಟ್ ಪಂದ್ಯ ನೋಡಲು ಅಪಾರ ಪ್ರಮಾಣದಲ್ಲಿ ಜನ ಸೇರಿದ್ದು, ಇದರ ಮಧ್ಯೆ ಯುವಕ ಪ್ರಪೋಸ್ ಮಾಡಿದ್ದಾನೆ. ಮೊಣಕಾಲೂರಿ ಯುವತಿಗೆ ಪ್ರೇಮನಿವೇದನೆ ಮಾಡಿಕೊಂಡಿದ್ದಾನೆ. ಇನ್ನೂ ಆಶ್ಚರ್ಯವೆಂಬಂತೆ ಯುವತಿ ಈತನ ಪ್ರೇಮನಿವೇದನೆಯನ್ನು ಒಪ್ಪಿಕೊಂಡಿದ್ದಾಳೆ. ಹೀಗಾಗಿ ಯುವಕನಿಗೆ ಇದು ಲಕ್ಕಿ ಡೇ ಎಂದು ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಹಲವು ಜನರ ಗದ್ದಲದ ನಡುವೆ ಯುವಕ ಪ್ರಪೋಸ್ ಮಾಡುವ ಮೂಲಕ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾನೆ.

    ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 390 ರನ್‍ಗಳನ್ನು ಭಾರತ ಬೆನ್ನಟ್ಟಿದೆ. ಸಂಜೆ 4.30ರ ಹೊತ್ತಿಗೆ ಭಾರತ 4 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿದೆ.

  • ಬಾಡಿ ಚೆಕ್‌ ಮಾಡಲು ಬಂದ ರಾಹುಲ್‌ಗೆ ಪಂಚ್‌ ಕೊಟ್ಟ ಫಿಂಚ್‌

    ಬಾಡಿ ಚೆಕ್‌ ಮಾಡಲು ಬಂದ ರಾಹುಲ್‌ಗೆ ಪಂಚ್‌ ಕೊಟ್ಟ ಫಿಂಚ್‌

    ಸಿಡ್ನಿ: ಟೀಂ ಇಂಡಿಯಾದ ವಿಕೆಟ್‌ ಕೀಪರ್‌ ಕೆಎಲ್‌ ರಾಹುಲ್‌ ಅವರಿಗೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಆರನ್‌ ಫಿಂಚ್‌ ಅವರು ಕೈಯಿಂದ ಪಂಚ್‌ ಮಾಡಿದ್ದಾರೆ.

    ಎರಡನೇ ಪಂದ್ಯದಲ್ಲಿ ನವದೀಪ್‌ ಸೈನಿ 12ನೇ ಓವರ್‌ ಬೌಲ್‌ ಮಾಡುತ್ತಿದ್ದರು. ಗಂಟೆಗೆ 146 ಕಿ.ಮೀ ವೇಗದಲ್ಲಿ ಎಸೆದ 5ನೇ ಎಸೆತವನ್ನು ಹೊಡೆಯಲು ಫಿಂಚ್‌ ಪ್ರಯತ್ನ ಪಟ್ಟಿದ್ದರು. ಆದರೆ ಬಾಲ್‌ ಬ್ಯಾಟ್‌ಗೆ ಸಿಗದೇ ಹೊಟ್ಟೆಗೆ ಬಡಿಯಿತು. ಫುಲ್‌ ಟಾಸ್‌ ಆಗಿದ್ದ ಕಾರಣ ಅಂಪೈರ್‌ ನೋಬಾಲ್‌ ನೀಡಿದರು.

    ಬಳಿಕ ಫಿಂಚ್‌ ಮತ್ತು ವಾರ್ನರ್‌ ಮಾತನಾಡುತ್ತಿದ್ದರು. ಈ ವೇಳೆ ಹತ್ತಿರ ಬಂದ ರಾಹುಲ್‌ ಗ್ಲೌಸ್‌ ನೋಡಿ ಎಡಕೈಯಲ್ಲಿ ದೇಹ ಮುಟ್ಟಲು ಯತ್ನಿಸಿದಾಗ ಫಿಂಚ್‌ ಎರಡು ಕೈಯಲ್ಲಿ ರಾಹುಲ್‌ ಹೊಟ್ಟೆಗೆ ಮೆಲ್ಲಗೆ ಕೈಯಿಂದ ಪಂಚ್‌ ಮಾಡಿದ್ದಾರೆ. ನಂತರ ಇಬ್ಬರು ಆಟಗಾರರು ನಕ್ಕಿದ್ದಾರೆ.

    ಈ ಹಿಂದೆ ಆಸ್ಟ್ರೇಲಿಯಾದ ಆಟಗಾರರು ಎದುರಾಳಿ ತಂಡದ ಆಟಗಾರರನ್ನು ಕಿಚಾಯಿಸುತ್ತಿದ್ದರು. ಆದರೆ ಐಪಿಎಲ್‌ನಿಂದ ಆಟಗಾರರ ವರ್ತನೆಯೇ ಬದಲಾಗಿದ್ದು ಎಲ್ಲರೂ ಸ್ನೇಹಿತರಂತೆ ಆಡುತ್ತಿದ್ದಾರೆ.

    ಟಾಸ್‌ ಗೆದ್ದು ಬ್ಯಾಟಿಂಗ್‌ ಆರಿಸಿಕೊಂಡ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು 389 ರನ್‌ ಗಳಿಸಿದೆ.

    ಸ್ಮಿತ್‌ 104 ರನ್‌ (64 ಎಸೆತ, 14 ಬೌಂಡರಿ, 2 ಸಿಕ್ಸರ್‌), ಡೇವಿಡ್‌ ವಾರ್ನರ್‌ 83 ರನ್‌(77 ಎಸೆತ, 7ಬೌಂಡರಿ, 3 ಸಿಕ್ಸರ್‌) ಲಬುಶೇನ್‌ 70 ರನ್‌(61 ಎಸೆತ, 5 ಬೌಂಡರಿ) ಗ್ಲೇನ್‌ ಮ್ಯಾಕ್ಸ್‌ವೆಲ್‌ 63 ರನ್‌(29 ಎಸೆತ, 4 ಬೌಂಡರಿ, 4 ಸಿಕ್ಸರ್‌), ನಾಯಕ ಫಿಂಚ್‌ 60 ರನ್‌(69 ಎಸೆತ, 6 ಬೌಂಡರಿ, 1 ಸಿಕ್ಸರ್‌) ಹೊಡೆದರು.

    ಸೈನಿ 7ಓವರ್‌ ಮಾಡಿ 70 ರನ್‌ ನೀಡಿ ದುಬಾರಿಯಾದರು. 10 ಓವರ್‌ ಎಸೆದ ಬುಮ್ರಾ 79 ರನ್‌, ಶಮಿ 73 ರನ್‌ ನೀಡಿದರು. ಚಹಲ್‌ 9 ಓವರ್‌ ಎಸೆದು 71 ರನ್‌ ನೀಡಿದರು.

    https://twitter.com/Gajal_Dalmia/status/1332908132717142019

     

  • ಆಸೀಸ್ ವಿರುದ್ಧದ ಟೆಸ್ಟ್ ಸರಣಿ – ಓಪನರ್ ಆಗಿ ಕನ್ನಡಿಗನನ್ನು ಆಯ್ಕೆ ಮಾಡಿದ ಸಚಿನ್

    ಆಸೀಸ್ ವಿರುದ್ಧದ ಟೆಸ್ಟ್ ಸರಣಿ – ಓಪನರ್ ಆಗಿ ಕನ್ನಡಿಗನನ್ನು ಆಯ್ಕೆ ಮಾಡಿದ ಸಚಿನ್

    – ರಾಹುಲ್, ಪೃಥ್ವಿ ಶಾ ಆಡಿಸುವುದು ತಂಡಕ್ಕೆ ಬಿಟ್ಟ ವಿಚಾರ

    ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಓಪನರ್ ಆಗಿ ಕಣಕ್ಕಿಳಿಯುವುದು ಸೂಕ್ತ ಎಂದು ಮಾಸ್ಟರ್ ಬ್ಲಸ್ಟರ್ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್, ಏಕದಿನ ಮತ್ತು ಟಿ-20 ಸರಣಿಯನ್ನು ಆಡಲು ಭಾರತ ಪ್ರವಾಸ ಕೈಗೊಂಡಿದೆ. ಈಗಾಗಲೇ ಅಭ್ಯಾಸ ಆರಂಭ ಮಾಡಿರುವ ಟೀಂ ಇಂಡಿಯಾ, ಆಸೀಸ್ ನೆಲದಲ್ಲೇ ಆಸ್ಟ್ರೇಲಿಯಾವನ್ನು ಬಗ್ಗು ಬಡಿಯುವ ತವಕದಲ್ಲಿದೆ. ಹೀಗಿರುವಾಗ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯವಾಡಿ ತವರಿಗೆ ಮರಳಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ರೋಹಿತ್ ಶರ್ಮಾ ಮೊದಲ ಎರಡು ಟೆಸ್ಟ್ ಗೆ ಅಲಭ್ಯವಾಗಲಿದ್ದಾರೆ ಎನ್ನಲಾಗಿದೆ.

    ಈ ರೀತಿಯ ಸಮಯದಲ್ಲಿ ಸಚಿನ್ ತೆಂಡೂಲ್ಕರ್ ಅವರು ಮಯಾಂಕ್ ಅಗರ್ವಾಲ್ ಟೆಸ್ಟ್ ಇನ್ನಿಂಗ್ಸ್ ಓಪನ್ ಮಾಡುವುದು ಸೂಕ್ತ. ಮಯಾಂಕ್ ನನಗೆ ಗೊತ್ತಿರುವ ಪ್ರಕಾರ ಬಹಳ ಒಳ್ಳೆಯ ಓಪನರ್. ಒಂದು ವೇಳೆ ರೋಹಿತ್ ಕೂಡ ಫಿಟ್ ಆಗಿ ಓಪನ್ ಮಾಡುವಂತಾದರೆ ಭಾರತ ತಂಡಕ್ಕೆ ಒಳ್ಳೆಯ ಆರಂಭ ದೊರೆಯುತ್ತದೆ. ಇವರನ್ನು ಬಿಟ್ಟರೆ ಕೆಎಲ್ ರಾಹುಲ್ ಮತ್ತು ಪೃಥ್ವಿ ಶಾ ಆಡಿಸುವ ನಿರ್ಧಾರ ತಂಡಕ್ಕೆ ಬಿಟ್ಟಿದ್ದು, ಯಾಕೆಂದರೆ ಅವರಿಗೆ ಯಾರು ಫಾರ್ಮ್‍ನಲ್ಲಿ ಇದ್ದಾರೆ ಎಂದು ತಿಳಿದಿರುತ್ತದೆ ಎಂದು ಸಚಿನ್ ಹೇಳಿದ್ದಾರೆ.

    ಮಯಾಂಕ್ ಅಗರ್ವಾಲ್ ಅವರು ಕಳೆದ 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ಅಂದು ಪೃಥ್ವಿ ಶಾ ಗಾಯಗೊಂಡ ಕಾರಣ ಅವರ ಜಾಗಕ್ಕೆ ಆಯ್ಕೆಯಾದ ಮಯಾಂಕ್, ಆಡಿದ ಮೊದಲ ಪಂದ್ಯದಲ್ಲೇ ಮೆಲ್ಬರ್ನ್ ಮೈದಾನದಲ್ಲಿ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಜೊತೆಗೆ ಈ ಸರಣಿಯಲ್ಲಿ ಒಟ್ಟು 195 ರನ್ ಸಿಡಿಸಿ ನಾನೊಬ್ಬ ಉತ್ತಮ ಟೆಸ್ಟ್ ಆಟಗಾರ ಎಂಬುದನ್ನು ಸಾಬೀತು ಮಾಡಿದ್ದರು.

    ಇದರ ಜೊತೆಗೆ ಈ ಬಾರಿಯ ಐಪಿಎಲ್‍ನಲ್ಲಿ ಉತ್ತಮ ಫಾರ್ಮ್ ನಲ್ಲಿದ್ದ ಮಯಾಂಕ್ ಅಗರ್ವಾಲ್, ತಾವಾಡಿದ 11 ಪಂದ್ಯಗಳಿಂದ ಒಂದು ಭರ್ಜರಿ ಶತಕ ಮತ್ತು ಎರಡು ಅರ್ಧಶತಕದ ನೆರವಿನಿಂದ ಬರೋಬ್ಬರಿ 424 ರನ್ ಸಿಡಿಸಿದ್ದರು. ಇದರಿಂದ ಆಸ್ಟ್ರೇಲಿಯಾದಲ್ಲಿ ನಡೆಯುವ ಮೂರು ಮಾದರಿಯ ಪಂದ್ಯಗಳಿಗೆ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ.

    ಭಾರತ-ಆಸ್ಟ್ರೇಲಿಯಾ ಪ್ರವಾಸ ನವೆಂಬರ್ 27ರಂದು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಏಕದಿನ ಪಂದ್ಯದ ನಂತರ ಉಭಯ ತಂಡಗಳು ಮೂರು ಪಂದ್ಯಗಳ ಟಿ-20 ಸರಣಿ ಆಡಲಿವೆ. ನಂತರ ಡಿಸೆಂಬರ್ 17ರಿಂದ ಇಂಡಿಯಾ ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ.