Tag: australia

  • ಕೋವಿಡ್-19 ಲಸಿಕೆ ಪಡೆದು 7.4 ಕೋಟಿ ರೂ. ಗೆದ್ದ ಯುವತಿ

    ಕೋವಿಡ್-19 ಲಸಿಕೆ ಪಡೆದು 7.4 ಕೋಟಿ ರೂ. ಗೆದ್ದ ಯುವತಿ

    ಕ್ಯಾನ್ಬೆರಾ: ಕೋವಿಡ್-19 ಲಸಿಕೆ ಪಡೆದ ಯುವತಿ ಬರೋಬ್ಬರಿ 7.4 ಕೋಟಿ ರೂ. ಬಹುಮಾನ ಗೆದ್ದು, ರಾತ್ರೋರಾತ್ರಿ ಮಿಲಿಯನೇರ್ ಆಗಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ಕೊರೊನಾ ಸೋಂಕು ಇನ್ನೂ ಪೂರ್ತಿಯಾಗಿ ಹೋಗಿಲ್ಲ. ಆದ್ದರಿಂದ ಪ್ರಪಂಚದಾದ್ಯಂತ ಸರ್ಕಾರಗಳು ಕೋವಿಡ್-19 ಲಸಿಕೆಗಳನ್ನು ತೆಗೆದುಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸಲು ಹಲವು ಆಫರ್ ಗಳನ್ನು ಕೊಡುತ್ತಿದೆ. ಅದೇ ರೀತಿ ಆಸ್ಟ್ರೇಲಿಯಾದಲ್ಲಿ ಲಸಿಕೆ ಪಡೆದರೆ ಲಾಟರಿ ಕೊಡುತ್ತಿದ್ದಾರೆ. ಈ ಹಿನ್ನೆಲೆ 25 ವರ್ಷದ ಸಿಡ್ನಿ ಯುವತಿಗೆ 7.4 ಕೋಟಿ ರೂ. ಲಾಟರಿ ಹೊಡೆದಿದ್ದು, ರಾತ್ರೋರಾತ್ರಿ ಈ ಯುವತಿ ಮಿಲಿಯನೇರ್ ಆಗಿದ್ದಾಳೆ. ಇದನ್ನೂ ಓದಿ: ವನ್ಯಜೀವಿ ಸಾಕ್ಷ್ಯಚಿತ್ರಕ್ಕಾಗಿ ಅಂಜನಾದ್ರಿ ಸುತ್ತ ಓಡಾಡಿದ್ದ ಅಪ್ಪು

    ಕೊರೊನಾವೈರಸ್ ಲಸಿಕೆ ಪಡೆದ ಲಕ್ಷಾಂತರ ಆಸ್ಟ್ರೇಲಿಯನ್ನರಲ್ಲಿ ‘ಜೋನ್ನೆ ಝು’ ಯುವತಿ ಅದೃಷ್ಟದ ಡ್ರಾದಲ್ಲಿ ಮಿಲಿಯನೇರ್ ಆಗಿದ್ದಾಳೆ. ಭಾನುವಾರ, ದಿ ಮಿಲಿಯನ್ ಡಾಲರ್ ವ್ಯಾಕ್ಸ್ ಅಲೈಯನ್ಸ್ ಲಾಟರಿಯ ವಿಜೇತರನ್ನು ಘೋಷಿಸಿದ್ದು, ಇದರಲ್ಲಿ 25 ವರ್ಷದ ‘ಜೋನ್ನೆ ಝು’ ವಿಜೇತಶಾಲಿ ಎಂದು ಹೇಳಲಾಗಿದೆ. ಈ ಯುವತಿ ಕೋವಿಡ್-19 ವ್ಯಾಕ್ಸಿನೇಷನ್ ಹಾಕಿಸಿಕೊಂಡಿದ್ದು, 7.4 ಕೋಟಿ ರೂ. ಗೆದ್ದಿದ್ದಾಳೆ.

    ಈ ಕುರಿತು ಮಾತನಾಡಿದ ಜೋನ್ನೆ ಝು, ಈ ಹಣದಿಂದ ನಾನು ನನ್ನ ಕುಟುಂಬವನ್ನು ಒಳ್ಳೆಯ ಮನೆಯಲ್ಲಿ ಇರಿಸಲು ಬಯಸುತ್ತೇನೆ. ಅವರಿಗೆ ಉಡುಗೊರೆಗಳನ್ನು ಖರೀದಿಸುತ್ತೇನೆ. ಉಳಿದ ಹಣವನ್ನು ಭವಿಷ್ಯಕ್ಕಾಗಿ ಕೂಡಿ ಇಡುತ್ತೇನೆ. ಇದರ ಜೊತೆಗೆ ಹೆಚ್ಚಿನ ಹಣವನ್ನು ಗಳಿಸಿ ಜನರಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಬೆಟ್ಟದ ಹೂವು ಚಿತ್ರದಲ್ಲಿ ನಟನೆ ಮಾಡಲ್ಲವೆಂದು ಅಪ್ಪು ಹಠಮಾಡಿದ್ದರು: ಹೊನ್ನಾವಳ್ಳಿ ಕೃಷ್ಣ

    ಬಹುಮಾನ ಫೋಷಿಸುವ ಹಿಂದಿನ ದಿನ ಯಾರೋ ನನಗೆ ಫೋನ್ ಮಾಡಿದರು. ಆ ಸಮಯದಲ್ಲಿ ನಾನು ಕೆಲಸದಲ್ಲಿದ್ದೆ. ನನಗೆ ಫೋನ್ ರಿಸೀವ್ ಮಾಡಲು ಸಾಧ್ಯವಾಗಲಿಲ್ಲ. ನಂತರ ನಾನು ಆ ನಂಬರ್ ಗೆ ಕಾಲ್ ಮಾಡಿದೆ. ಆಗ ಅವರು ನೀವು ಲಾಟರಿ ಗೆದ್ದಿದ್ದೀರಿ ಎಂದು ಹೇಳಿದಾಗ ನನಗೆ ಸಂತೋಷ ತಡೆದುಕೊಳ್ಳಲು ಆಗಲಿಲ್ಲ ಎಂದು ತಿಳಿಸಿದರು.

    ಈ ಬಹುಮಾನವನ್ನು ಆಸ್ಟ್ರೇಲಿಯನ್ನರಲ್ಲಿ ವ್ಯಾಕ್ಸಿನೇಷನ್ ದರಗಳನ್ನು ಹೆಚ್ಚಿಸಲು ಮಿಲಿಯನ್ ಡಾಲರ್ ವ್ಯಾಕ್ಸ್ ಯೋಜನೆಯನ್ನು ಮಾಡಲಾಗಿದೆ. ಗೆದ್ದವರಿಗೆ 1 ಮಿಲಿಯನ್ ನಗದು ಜೊತೆಗೆ 100 ಗಿಫ್ಟ್ ಕಾರ್ಡ್ ಮತ್ತು 1000 ಡಾಲರ್ ಅನ್ನು ಕೊಂಡಳಾಗುತ್ತೆ.

  • ಕೊವ್ಯಾಕ್ಸಿನ್ ಲಸಿಕೆ ಪಡೆದವರು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಬಹುದು

    ಕೊವ್ಯಾಕ್ಸಿನ್ ಲಸಿಕೆ ಪಡೆದವರು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಬಹುದು

    ನವದೆಹಲಿ: ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆ ಪಡೆದ ವ್ಯಕ್ತಿಗಳಿಗೆ ಆಸ್ಟ್ರೇಲಿಯಾ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ಆಸ್ಟ್ರೇಲಿಯಾ ಹೈ ಕಮಿಷನರ್ ಬ್ಯಾರಿ ಓಫಾರೆಲ್ ಹೇಳಿದ್ದಾರೆ.

    ಆಸ್ಟ್ರೇಲಿಯದ ಔಷಧಿ ಮತ್ತು ಲಸಿಕೆ ನಿಯಂತ್ರಣ ಮಂಡಳಿ “ಚಿಕಿತ್ಸಕ ಸರಕುಗಳ ಆಡಳಿತವು”(ಟಿಜಿಎ) ವರದಿ ಆಧರಿಸಿ ಬ್ಯಾರಿ ಓಫಾರೆಲ್ ಈ ಹೇಳಿಕೆ ನೀಡಿದ್ದು, ಆಸ್ಟ್ರೇಲಿಯಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಿಸುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೊವ್ಯಾಕ್ಸಿನ್ ಪರಿಣಾಮಕಾರಿತ್ವವನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಕೊವ್ಯಾಕ್ಸಿನ್ ಪರಿಣಾಮಕಾರಿಯಾಗಿದ್ದು ಅದು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಎಂದು ವರದಿಗಳ ಆಧಾರದ ಮೇಲೆ ಟಿಎಜಿ ನಿರ್ಧಾರ ಮಾಡಿದ್ದು ಅನುಮತಿಗೆ ಒಪ್ಪಿದೆ. ಇದನ್ನೂ ಓದಿ: ಗೌಪ್ಯವಾಗಿ ಬೂಸ್ಟರ್ ಡೋಸ್ ಪಡೆಯುತ್ತಿರುವ ಆರೋಗ್ಯ ಸಿಬ್ಬಂದಿ

    ಆಸ್ಟ್ರೇಲಿಯಾ ಸರ್ಕಾರದ ಈ ನಿರ್ಧಾರದಿಂದ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಗೆ ಅನುಕೂಲವಾಗಲಿದ್ದು, ಹೆಚ್ಚು ಜನರ ಸಂಚಾರಕ್ಕೆ ಸಹಕಾರಿಯಾಗಲಿದೆ. ಇದನ್ನೂ ಓದಿ: ಮಿಸ್ ಕೇರಳ ಸುಂದರಿಯರ ದುರಂತ ಅಂತ್ಯ

    ಕೊವ್ಯಾಕ್ಸಿನ್ ಲಸಿಕೆಗೆ ಈವರೆಗೂ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿಲ್ಲ, ಈಗಾಗಲೇ ಎರಡು ಹಂತದಲ್ಲಿ ಸಭೆಗಳನ್ನು ನಡೆಸಿರುವ ತಜ್ಞರ ಸಮಿತಿ ಹೆಚ್ಚುವರಿ ಮಾಹಿತಿಯನ್ನು ಕೇಳಿದ್ದು ಮೂರನೇ ಹಂತದ ಸಭೆಯಲ್ಲಿ ಬಹುತೇಕ ಮಾನ್ಯತೆ ಸಿಗುವ ಸಾಧ್ಯತೆಗಳಿದೆ. ಅದಕ್ಕೂ ಮುನ್ನ ಆಸ್ಟ್ರೇಲಿಯ ಸರ್ಕಾರ ನೀಡಿರುವ ಈ ಮಾನ್ಯತೆ ಕೊವ್ಯಾಕ್ಸಿನ್ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.

  • ಒಂದೇ ಕೈಯಲ್ಲಿ ರಾಧಾ ಯಾದವ್ ಸ್ಟನ್ನಿಂಗ್ ಕ್ಯಾಚ್

    ಒಂದೇ ಕೈಯಲ್ಲಿ ರಾಧಾ ಯಾದವ್ ಸ್ಟನ್ನಿಂಗ್ ಕ್ಯಾಚ್

    ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಹಿಳಾ ಬಿಗ್‍ಬಾಶ್ ಲೀಗ್‍ನಲ್ಲಿ ಭಾರತದ ರಾಧಾ ಯಾದವ್ ಹಾರಿ ಒಂದೇ ಕೈಯಲ್ಲಿ ಸ್ಟನ್ನಿಂಗ್ ಕ್ಯಾಚ್ ಹಿಡಿಯುವ ಮೂಲಕ ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿದ್ದಾರೆ.

    ಸಿಡ್ನಿ ಸಿಕ್ಸರ್ಸ್ ಮತ್ತು ಬ್ರಿಸ್ಬೇನ್ ನಡುವಿನ ಪಂದ್ಯದಲ್ಲಿ ಮಿಲನ್ ಡು ಪ್ರೀಜ್ ಪಾಯಿಂಟ್ ಮೇಲೆ ಬಾಲ್‍ನ್ನು ಬೌಂಡರಿ ಗಟ್ಟಲು ಪ್ರಯತ್ನಿಸಿದರು. ಈ ವೇಳೆ ಪಾಯಿಂಟ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರಾಧಾ ಯಾದವ್ ಚಂಗನೆ ಹಾರಿ ಒಂದೇ ಕೈಯಲ್ಲಿ ಅದ್ಭುತವಾದ ಕ್ಯಾಚ್ ಹಿಡಿದರು. ಇದನ್ನು ಕಂಡ ಅಭಿಮಾನಿಗಳು ಆಶ್ಚರ್ಯಚಕಿತರಾದರು. ತಂಡ ಸಹ ಆಟಗಾರ್ತಿಯರು ಯಾದವ್ ಕ್ಯಾಚ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಟಿ20 ವಿಶ್ವಕಪ್ #BoycottPakistan ಬಿಸಿಬಿಸಿ ಚರ್ಚೆ

    ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್‍ಬಾಶ್ ಲೀಗ್‍ನಲ್ಲಿ ಭಾರತದ 8 ಮಂದಿ ಆಟಗಾರ್ತಿಯರು ಆಡುತ್ತಿದ್ದು, ಅವರು ಪ್ರತಿನಿಧಿಸುತ್ತಿರುವ ತಂಡದ ಪರವಾಗಿ ಭರ್ಜರಿ ಪ್ರದರ್ಶನ ಕೊಡುವ ಮೂಲಕ ವಿಶ್ವ ಕ್ರಿಕೆಟ್‍ನ ಗಮನಸೆಳೆಯುತ್ತಿದ್ದಾರೆ. ಇದನ್ನೂ ಓದಿ: ಚಾಂಪಿಯನ್ ಆಟಗಾರರಿಗಿಲ್ಲ T20 ವಿಶ್ವಕಪ್ ಆಡುವ ಅದೃಷ್ಟ

  • ಹೈದಾರಾಬಾದ್‍ಗೆ ಬೇಡವಾದ ಡೇವಿಡ್ ವಾರ್ನರ್

    ಹೈದಾರಾಬಾದ್‍ಗೆ ಬೇಡವಾದ ಡೇವಿಡ್ ವಾರ್ನರ್

    ದುಬೈ: ತನ್ನ ಹೊಡಿಬಡಿ ಬ್ಯಾಟಿಂಗ್ ಶೈಲಿಯ ಮೂಲಕ ಎಲ್ಲರ ಗಮನಸೆಳೆದಿದ್ದ ಆಸೀಸ್ ಓಪನರ್ ಡೇವಿಡ್ ವಾರ್ನರ್ ಐಪಿಎಲ್‍ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದರು, ಆದರೆ ಎಸ್‌ಆರ್‌ಎಚ್‌ ತಂಡ ಈ ಬಾರಿಯ ಐಪಿಎಲ್‍ನಲ್ಲಿ ಕೇವಲ ಒಂದು ಪಂದ್ಯವನ್ನು ಆಡಿಸಿ ವಾರ್ನರ್‌ನ್ನು ತಂಡದಿಂದ ಹೊರಗಿಟ್ಟಿದೆ.

    ವಿಶ್ವ ಕ್ರಿಕೆಟ್ ಕಂಡ ಉತ್ತಮ ಬ್ಯಾಟ್ಸ್‌ಮ್ಯಾನ್‌ಗಳಲ್ಲಿ ಡೇವಿಡ್ ವಾರ್ನರ್ ಕೂಡ ಒಬ್ಬರು ಬ್ಯಾಟಿಂಗ್ ಬಂದು ಬೌಂಡರಿ ಸಿಕ್ಸರ್‍ ಗಳನ್ನು ಮನಬಂದಂತೆ ಚಚ್ಚುವ ಅವರ ಆಟವನ್ನು ಕಂಡು ಕ್ರಿಕೆಟ್ ಪ್ರೇಮಿಗಳು ಮೆಚ್ಚಿಕೊಂಡಿದ್ದರು. ಆದರೆ ವಾರ್ನರ್ ಈ ಬಾರಿ ಐಪಿಎಲ್‍ನಲ್ಲಿ ಮಂಕಾಗಿದ್ದಾರೆ. ಇದನ್ನೂ ಓದಿ: ಧೋನಿಯ ಹಸ್ತಾಕ್ಷರದ ಬ್ಯಾಟ್, ಜೆರ್ಸಿ ಪಡೆದ ಯಶಸ್ವಿ ಜೈಸ್ವಾಲ್

    14ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಸತತ ಸೋಲಿನಿಂದ ಕಂಗೆಟ್ಟ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ನಾಯಕತ್ವದ ಬದಲಾವಣೆ ಮಾಡಲಾಗಿತ್ತು. ನಾಯಕನ ಪಟ್ಟದಿಂದ ಡೇವಿಡ್ ವಾರ್ನರ್ ಅವರನ್ನು ಕೆಳಗಿಳಿಸಿ ಕೇನ್ ವಿಲಿಯಮ್ಸನ್ ಅವರಿಗೆ ಹೈದರಾಬಾದ್ ತಂಡದ ನಾಯಕನ ಪಟ್ಟ ಕಟ್ಟಲಾಗಿತ್ತು.

    ಹೈದರಾಬಾದ್ ತಂಡ ವಾರ್ನರ್ ನಾಯಕತ್ವದಲ್ಲಿ 2016ರಲ್ಲಿ ಐಪಿಎಲ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತ್ತು. ಹೈದರಾಬಾದ್ ಪರ ವಾರ್ನರ್ 1015 ರಿಂದ 2019ರ ಮಧ್ಯೆ ಮೂರು ಬಾರಿ ಅತೀ ಹೆಚ್ಚು ರನ್ ಸಿಡಿಸಿ ಆರೆಂಜ್ ಕ್ಯಾಪ್‍ನ ಒಡೆಯನಾಗಿದ್ದರು. ಹಾಗೆ ಕಳೆದ 6 ಸೀಸನ್‍ಗಳಲ್ಲಿ ಹೈದರಾಬಾದ್ ತಂಡದ ಪರ 500ಕ್ಕೂ ಹೆಚ್ಚು ರನ್ ಸಿಡಿಸಿದ ಆಟಗಾರನಾಗಿ ವಾರ್ನರ್ ಮಿಂಚಿದ್ದರು. ಇದನ್ನೂ ಓದಿ: ಪಂಜಾಬ್ ವಿರುದ್ಧ ಆರ್​ಸಿಬಿಗೆ 6 ರನ್ ಜಯ – ಫ್ಲೇ ಆಫ್‍ಗೆ ಎಂಟ್ರಿ

    ವಾರ್ನರ್ ಹೈದರಾಬಾದ್ ತಂಡವನ್ನು 2015, 2016, 2017 ಮತ್ತು 2020ರ ಸೀಸನ್‍ಗಳಲ್ಲಿ ಪ್ಲೇ ಆಫ್ ಹಂತಕ್ಕೆ ಏರಿಸಿದ್ದರು. ಅಷ್ಟೇ ಅಲ್ಲದೆ ಐಪಿಎಲ್‍ನಲ್ಲಿ ವಾರ್ನರ್ 150 ಪಂದ್ಯಗಳನ್ನು ಆಡಿ 139.96 ಸ್ಟ್ರೈಕ್ ರೇಟ್‍ನಲ್ಲಿ 5,449 ರನ್ ಗಳಿಸಿದ್ದಾರೆ. ಇದು ಮಾತ್ರವಲ್ಲದೆ ಐಪಿಎಲ್ ಇತಿಹಾಸದಲ್ಲೇ 50 ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ಮಿಂಚುತ್ತಿರುವ ಅನ್ ಕ್ಯಾಪ್ಡ್ ಪ್ಲೇಯರ್ಸ್

    2021ರ ಐಪಿಎಲ್‍ನಲ್ಲಿ ಹೈದರಾಬಾದ್ ಪರ 8 ಪಂದ್ಯಗಳನ್ನು ಆಡಿರುವ ವಾರ್ನರ್ 2 ಅರ್ಧಶತಕ ಸಹಿತ 195ರನ್ ಗಳಿಸಿದ್ದಾರೆ. ಈ ನಡುವೆ ಸೆಕೆಂಡ್ ಇನ್ನಿಂಗ್ಸ್ ಐಪಿಎಲ್‍ನಲ್ಲಿ ಕೇವಲ ಒಂದು ಪಂದ್ಯವಾಡಿಸಿ ತಂಡದಿಂದ ದೂರ ಇರಿಸಿ ಪಂದ್ಯದ ವೇಳೆ ಹೋಟೆಲ್‍ನಲ್ಲೇ ಇರುವಂತೆ ಫ್ರಾಂಚೈಸಿ ಮಾಡಿರುವುದು ವಿಪರ್ಯಾಸ.

  • ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ

    ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ

    ವಾಷಿಂಗ್ಟನ್: ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಡೆಯುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

    ಸಾಂಕ್ರಾಮಿಕ ನಂತರದ ಕಾಲದಲ್ಲಿ ಉಭಯ ನಾಯಕರು ನಡೆಸಿದ ಮೊದಲ ಮುಖಾಮುಖಿ ಭೇಟಿ ಇದಾಗಿತ್ತು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯನ್ನು ಇನ್ನಷ್ಟು ಬಲವರ್ಧನೆಗೊಳಿಸಲು 2020ರ ಜೂನ್ 4ರಂದು ಕಾರ್ಯತಂತ್ರ ಪಾಲುದಾರಿಕೆಯ ಭಾಗವಾಗಿ ನರೇಂದ್ರ ಮೋದಿ ಮತ್ತು ಮಾರಿಸನ್ ನಡುವೆ ನಾಯಕರ ವರ್ಚುವಲ್ ಶೃಂಗಸಭೆ ನಡೆದಿತ್ತು. ಇದನ್ನೂ ಓದಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿವಾದ – ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

    ಸಭೆಯ ವೇಳೆ, ಪ್ರಧಾನಮಂತ್ರಿಗಳು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಪ್ರಾಮುಖ್ಯತೆಯ ಹಲವು ವಿಷಯಗಳ ಕುರಿತು ವಿಸ್ತೃತ ಮಾತುಕತೆ ನಡೆಸಿದರು. ಇತ್ತೀಚೆಗೆ ನಡೆದ ಮೊದಲ ಭಾರತ-ಆಸ್ಟ್ರೇಲಿಯಾ ವಿದೇಶಾಂಗ ಮತ್ತು ರಕ್ಷಣಾ ಸಚಿವರ 2+2 ಮಾತುಕತೆ ಸೇರಿದಂತೆ ಉಭಯ ದೇಶಗಳ ನಡುವಿನ ನಿರಂತರ ಉನ್ನತ ಮಟ್ಟದ ಸಮಾಲೋಚನೆಗಳ ಕುರಿತು ಅವರು ತೃಪ್ತಿ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಾನಮರ್ಯಾದೆ ಇಲ್ಲದ ಸರ್ಕಾರದ ವಿರುದ್ಧ ಜನರ ಧ್ವನಿಯಾಗಿ ಹೋರಾಟ: ಡಿ.ಕೆ ಶಿವಕುಮಾರ್

    ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಅಡಿಯಲ್ಲಿ 2020ರ ಜೂನ್ ತಿಂಗಳಲ್ಲಿ ನಡೆದ ನಾಯಕರ ವರ್ಚುವಲ್ ಶೃಂಗಸಭೆಯಿಂದೀಚೆಗೆ ನಡೆದ ಪ್ರಗತಿಯನ್ನು ಪ್ರಧಾನಮಂತ್ರಿಗಳು ಪರಾಮರ್ಶಿಸಿದರು ಮತ್ತು ಇಂಡೋ-ಪೆಸಿಫಿಕ್ ಪ್ರಾಂತ್ಯವನ್ನು ಮುಕ್ತ, ಸ್ವತಂತ್ರ ಮತ್ತು ಸಮೃದ್ಧ ಹಾಗೂ ನಿಯಮಾಧಾರಿತವನ್ನಾಗಿ ಮಾಡುವ ನಿಟ್ಟಿಮಲ್ಲಿ ಮುಂದುವರಿಯಲು ಪರಸ್ಪರ ಅನುಕೂಲಕ್ಕಾಗಿ ನಿಕಟ ಸಹಕಾರ ಮುಂದುವರಿಸಲು ಸಂಕಲ್ಪ ಕೈಗೊಂಡರು. ಪ್ರಸ್ತುತ ನಡೆಯುತ್ತಿರುವ ದ್ವಿಪಕ್ಷೀಯ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ(ಸಿಇಸಿಎ) ಮಾತುಕತೆಗಳ ಬಗ್ಗೆ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಆ ಹಿನ್ನೆಲೆಯಲ್ಲಿ, ಸ್ಕಾಟ್ ಮಾರಿಸನ್ ಅವರ ಭಾರತದ ವಿಶೇಷ ವ್ಯಾಪಾರ ಪ್ರತಿನಿಧಿಯಾಗಿ ಮಾಜಿ ಪ್ರಧಾನಿ ಟೋನಿ ಅಬಾಟ್ ಅವರು ಭಾರತಕ್ಕೆ ಭೇಟಿ ನೀಡುವುದನ್ನು ಸ್ವಾಗತಿಸಿದರು ಮತ್ತು ಡಿಸೆಂಬರ್ 2021ರೊಳಗೆ ಮಧ್ಯಂತರ ಒಪ್ಪಂದವನ್ನು ಪ್ರಕಟಿಸುವ ಸಾಧ್ಯತೆ ಬಗ್ಗೆ ಉಭಯ ದೇಶಗಳು ಬದ್ಧತೆಯನ್ನು ವ್ಯಕ್ತಪಡಿಸಿದವು.

    ಅಂತಾರಾಷ್ಟ್ರೀಯ ಸಮುದಾಯವು ಹವಾಮಾನ ಬದಲಾವಣೆಯ ಸಮಸ್ಯೆಯನ್ನು ತುರ್ತಾಗಿ ಪರಿಹರಿಸುವ ಅಗತ್ಯವನ್ನು ಪ್ರಧಾನಮಂತ್ರಿಗಳು ಒತ್ತಿ ಹೇಳಿದರು. ಆ ನಿಟ್ಟಿನಲ್ಲಿ ಮೋದಿ ಪರಿಸರ ಸಂರಕ್ಷಣೆ ಕುರಿತು ವಿಸ್ತೃತ ಸಂವಾದದ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು ಮತ್ತು ಉಭಯ ನಾಯಕರು ಸ್ವಚ್ಛ ತಂತ್ರಜ್ಞಾನಗಳನ್ನು ಒದಗಿಸುವ ಸಾಧ್ಯತೆಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು. ಎರಡೂ ದೇಶಗಳು ಅತ್ಯಂತ ಕ್ರಿಯಾಶೀಲ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿದ್ದು, ಇವು ಸಾಂಕ್ರಾಮಿಕ ನಂತರದ ಜಗತ್ತಿನಲ್ಲಿ ಪೂರೈಕೆ ಸರಣಿ ಸ್ಥಿತಿಸ್ಥಾಪಕತ್ವ ವೃದ್ಧಿ ಸೇರಿದಂತೆ ಎಲ್ಲ ಸವಾಲುಗಳನ್ನು ಎದುರಿಸಲು ಇನ್ನಷ್ಟು ನಿಕಟವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿಗಳು ಒಪ್ಪಿದರು. ಇದನ್ನೂ ಓದಿ: ಭಾರತದ ಲಸಿಕಾಕರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕಮಲಾ ಹ್ಯಾರಿಸ್

    ಇಬ್ಬರೂ ನಾಯಕರು ಆಸ್ಟ್ರೇಲಿಯಾದ ಆರ್ಥಿಕತೆ ಮತ್ತು ಸಮಾಜಕ್ಕೆ ಅನಿವಾಸಿ ಭಾರತೀಯರು ನೀಡಿರುವ ಅಪಾರ ಕೊಡುಗೆಯನ್ನು ಶ್ಲಾಘಿಸಿದರು ಮತ್ತು ಜನರ ನಡುವಿನ ಸಂಬಂಧ ಹೆಚ್ಚಳದ ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಸಿದರು. ನರೇಂದ್ರ ಮೋದಿ ಅವರು ಸ್ಕಾಟ್ ಮಾರಿಸನ್ ಅವರಿಗೆ ಶೀಘ್ರವೇ ಭಾರತ ಭೇಟಿ ಕೈಗೊಳ್ಳಬೇಕು ಎಂಬ ತಮ್ಮ ಆಹ್ವಾನ ಪುನರುಚ್ಚರಿಸಿದರು.

  • ವಧು ಬೇಕಾಗಿದ್ದಾಳೆ, ಅಂಗಡಿ ಮುಂದೆ ಬೋರ್ಡ್-ಆಸ್ಟ್ರೇಲಿಯ, ಇಂಗ್ಲೆಂಡ್‍ನಿಂದ ಬಂತು ಆಫರ್

    ವಧು ಬೇಕಾಗಿದ್ದಾಳೆ, ಅಂಗಡಿ ಮುಂದೆ ಬೋರ್ಡ್-ಆಸ್ಟ್ರೇಲಿಯ, ಇಂಗ್ಲೆಂಡ್‍ನಿಂದ ಬಂತು ಆಫರ್

    ತಿರುವನಂತಪುರಂ: ಮದುವೆಗೆ ವಧು ಬೇಕೆಂದು ಅಂಗಡಿ ಮುಂದೆ ಬೋರ್ಡ್ ಹಾಕಿದ ಹಳ್ಳಿ ಹೈದನಿಗೆ ಆಸ್ಟ್ರೇಲಿಯ, ಇಂಗ್ಲೆಂಡ್‍ನಿಂದ ಆಫರ್ ಬಂದಿರುವುದು ಕೇರಳದಲ್ಲಿ ಸುದ್ದಿಯಾಗಿದೆ.

    ಕೇರಳದ ವಲ್ಲಾಚಿರ ಎಂಬ ಊರಿನವರಾದ 33 ವರ್ಷದ ಎನ್.ಎನ್. ಉನ್ನಿಕೃಷ್ಣನ್ ಮದುವೆಯಾಗಲು ಹುಡುಗಿಗಾಗಿ ಹಲವು ವರ್ಷಗಳಿಂದ ಹುಡುಕಾಟ ನಡೆಸಿದ್ದರು. ಆದರೆ ಯಾವ ಹುಡುಗಿಯೂ ಹೊಂದಿಕೆಯಾಗಿರಲಿಲ್ಲ. ವಲ್ಲಾಚಿರದಲ್ಲಿ ತನ್ನದೇ ಆದ ಅಂಗಡಿಯನ್ನು ಇಟ್ಟುಕೊಂಡಿರುವ ಉನ್ನಿಕೃಷ್ಣನ್ ಯಾವುದೇ ಮಧ್ಯವರ್ತಿಯ ಸಹಾಯವಿಲ್ಲದೆ ತಾನೇ ಹುಡುಗಿಯನ್ನು ಹುಡುಕಿಕೊಳ್ಳಲು ನಿರ್ಧರಿಸಿದರು. ಅದಕ್ಕಾಗಿ ತಮ್ಮ ಅಂಗಡಿಯ ಮುಂದೆ ವಧು ಬೇಕಾಗಿದ್ದಾಳೆ ಎಂದು ಬೋರ್ಡ್ ಒಂದನ್ನು ಹಾಕಿ ಅದರ ಕೆಳಗೆ ತಮ್ಮ ನಂಬರನ್ನು ನಮೂದಿಸಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ಶಾಕ್ – ಮತ್ತೆ ಎಲ್‍ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ

    ನಾನು ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿದ್ದೇನೆ. ಜಾತಿ, ಧರ್ಮ ಯಾವುದಾದರೂ ತೊಂದರೆಯಿಲ್ಲ ಎಂದು ಉನ್ನಿಕೃಷ್ಣನ್ ಫಲಕದಲ್ಲಿ ಬರೆದು, ಅಂಗಡಿ ಎದುರು ನೇತು ಹಾಕಿದ್ದಾರೆ. ಇತ್ತೀಚೆಗೆ ಈ ಅಂಗಡಿಗೆ ಬಂದಿದ್ದ ಅವರ ಗೆಳೆಯರೊಬ್ಬರು ಈ ಫಲಕವನ್ನು ನೋಡಿ ಅದರ  ಫೋಟೋ ತೆಗೆದುಕೊಂಡು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡಿದ್ದರು. ಅದುವರೆಗೂ ಸುತ್ತಮುತ್ತಲಿನ ಊರುಗಳಲ್ಲಿ ಹುಡುಗಿಗಾಗಿ ಹುಡುಕಾಡುತ್ತಿದ್ದ ಉನ್ನಿಕೃಷ್ಣನ್‍ಗೆ ಈ ಒಂದು ಪೋಸ್ಟ್​ನಿಂದ ಈಗ ಆಸ್ಟ್ರೇಲಿಯ, ಇಂಗ್ಲೆಂಡ್‍ನಿಂದಲೂ  ಫೋನ್ ಕಾಲ್‍ಗಳು ಬಂದಿವೆಯಂತೆ. ಇದನ್ನೂ ಓದಿ: ಸುದೀಪ್ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್ – ಬಿಡುಗಡೆಯಾಗಲಿದೆ ಆಡಿಯೋ ಬುಕ್

    ನನ್ನ ತಲೆಬುರುಡೆಯಲ್ಲಿ ಗೆಡ್ಡೆ ಬೆಳೆದಿದ್ದರಿಂದ ಈಗಾಗಲೇ ಆಪರೇಷನ್ ಆಗಿದೆ. ಈಗ ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ಇನ್ನಾದರೂ ಜೀವನದಲ್ಲಿ ಸೆಟಲ್ ಆಗಬೇಕೆಂದು ಮದುವೆಯಾಗಲು ನಿರ್ಧರಿಸಿದೆ. ಆದರೆ ಯಾರೂ ನನ್ನನ್ನು ಮದುವೆಯಾಗಲು ಮುಂದೆ ಬರಲಿಲ್ಲ. ನನಗೆ ನನ್ನದೇ ಸ್ವಂತದ್ದೊಂದು ಅಂಗಡಿಯಿದೆ. ನಮ್ಮ ಮನೆ ಬಳಿಯೇ ಲಾಟರಿ ಅಂಗಡಿಯೊಂದನ್ನು ತೆರೆದಿದ್ದೇನೆ. ಅಲ್ಲಿಯೇ ಟೀಯನ್ನು ಕೂಡ ಮಾರುತ್ತೇನೆ. ಬ್ರೋಕರ್ ಮೂಲಕ ಹುಡುಗಿಯನ್ನು ಹುಡುಕುವುದು ಇಷ್ಟವಿಲ್ಲದ ಕಾರಣಕ್ಕೆ ಈ ರೀತಿ ಅಂಗಡಿಯೆದುರು ನನಗೆ ನಾನೇ ಜಾಹೀರಾತು ಕೊಟ್ಟುಕೊಂಡಿದ್ದೇನೆ. ನಮ್ಮ ಮನೆಯವರು ಕೂಡ ಹುಡುಗಿಯನ್ನು ಹುಡುಕುತ್ತಿದ್ದಾರೆ. ಆದರೆ ಇನ್ನೂ ನನಗೆ ಸರಿಯೆನಿಸುವ ಹುಡುಗಿ ಸಿಕ್ಕಿಲ್ಲ ಎಂದು ಉನ್ನಿಕೃಷ್ಣನ್ ಹೇಳಿದ್ದಾರೆ. ಇದನ್ನೂ ಓದಿ: ಸುದೀಪ್‍ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ನೀರಜ್ ಚೋಪ್ರಾ

    ಈ ಬೋರ್ಡ್‍ನ  ಫೋಟೋ ತೆಗೆದು ಉನ್ನಿಕೃಷ್ಣನ್ ಅವರ ಸ್ನೇಹಿತ ತಮ್ಮ ಫೇಸ್‍ಬುಕ್ ಪೇಜಿನಲ್ಲಿ ಹಾಕಿಕೊಂಡಿದ್ದರು. ಮಲಯಾಳಂನಲ್ಲಿ ಬರೆದಿದ್ದ ಆ ಬೋರ್ಡ್‍ನ ಅರ್ಥವನ್ನು ಇಂಗ್ಲಿಷ್‍ನಲ್ಲಿ ಅನುವಾದಿಸಿ  ಫೋಸ್ಟ್ ಮಾಡಿದ್ದರು. ನನ್ನನ್ನು ಮದುವೆಯಾಗಲು ಇಚ್ಛಿಸುವ ಯಾವುದೇ ಧರ್ಮ, ಜಾತಿಯ ಹುಡುಗಿ ಈ ನಂಬರ್‍ಗೆ ಸಂಪರ್ಕಿಸಿ ಎಂದು ಬರೆದಿದ್ದ ಆ ಬೋರ್ಡ್ ಅನ್ನು ನೋಡಿ ಅನೇಕರು ಇಂಪ್ರೆಸ್ ಆಗಿದ್ದಾರೆ. ಇದೀಗ ಆ  ಫೋಸ್ಟ್ ನೋಡಿದ ಆಸ್ಟ್ರೇಲಿಯ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ವಾಸವಾಗಿರುವ ಮಲೆಯಾಳಿಗಳು ಕೂಡ ಫೋನ್ ಮಾಡಿ ತಮ್ಮ ಕುಟುಂಬದಲ್ಲಿ ಹುಡುಗಿ ಇರುವುದಾಗಿ ತಿಳಿಸುತ್ತಿದ್ದಾರೆ. ಹಲವರು ಫೋನ್ ಮಾಡಿ ಜಾತಿ, ಧರ್ಮವನ್ನು ಲೆಕ್ಕಿಸದೆ ಮದುವೆಯಾಗಲು ಬಯಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

    ಮದುವೆಗೆ ಹುಡುಗಿಯನ್ನು ಹುಡುಕಲು ಬ್ರೋಕರ್ ಬಳಿ ಹೋಗಬೇಕು, ನೆಂಟರಿಷ್ಟರ ಬಳಿ ವಿಚಾರಣೆ ಮಾಡಬೇಕೆಂಬ ಕಾಲವೆಲ್ಲ ಹಳೆಯದಾಯ್ತು. ಈಗೇನಿದ್ದರೂ ತಮಗೆ ಬೇಕಾದ ಹುಡುಗಿಯನ್ನು ಹುಡುಕಿಕೊಳ್ಳಲು ಬೇಕಾದಷ್ಟು ಹೊಸ ಹೊಸ ಆಯ್ಕೆಗಳಿವೆ.

  • ಕಲ್ಲಂಗಡಿ ಹಣ್ಣಿನ ಪಿಜ್ಜಾ ವೀಡಿಯೋ ವೈರಲ್

    ಕಲ್ಲಂಗಡಿ ಹಣ್ಣಿನ ಪಿಜ್ಜಾ ವೀಡಿಯೋ ವೈರಲ್

    ಕ್ಯಾನ್ಬೆರಾ: ಪಿಜ್ಜಾ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ, ಅದರಲ್ಲಿಯೂ ಈಗ ಹಲವು ವಿಭಿನ್ನ ಟೇಸ್ಟಿ ಪಿಜ್ಜಾಗಳಿದ್ದು, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ  ಇಷ್ಟ ಪಡುತ್ತಾರೆ. ಸದ್ಯ ವ್ಯಕ್ತಿಯೋರ್ವ ಕಲ್ಲಂಗಡಿ ಹಣ್ಣಿನಿಂದ ಪಿಜ್ಜಾ ತಯಾರಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ವೀಡಿಯೋವನ್ನು ಓಲಿ ಪ್ಯಾಟರ್ಸನ್ ಎಂಬವರು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಮೊದಲಿಗೆ ಕಲ್ಲಂಗಡಿ ಹಣ್ಣನ್ನು ಕತ್ತರಿಸುತ್ತಾರೆ. ಬಳಿಕ ಅದನ್ನು ಗ್ರಿಲ್ ಮೇಲೆ ಬೇಯಿಸಿಕೊಳ್ಳುತ್ತಾರೆ. ನಂತರ ಅದನ್ನು ಪಕ್ಕಕ್ಕೆ ತೆಗೆದುಕೊಂಡು ಬಾರ್ಬೆಕ್ಯೂ ಸಾಸ್‍ನನ್ನು ಹಚ್ಚಿ, ಅದರ ಸುತ್ತಾ ಚೀಸ್ ಉದುರಿಸುತ್ತಾರೆ ಮತ್ತು ಪೆಪ್ಪೆರೋನಿ ಹರಡಿ, ಚೀಸ್ ಕರಗುವವರೆಗೂ ಓವೆನ್‍ನಲ್ಲಿಟ್ಟು ಬೇಯಿಸಿದ್ದಾರೆ. ಕೊನೆಗೆ ತಯಾರಾದ ಕಲ್ಲಂಗಡಿ ಪಿಜ್ಜಾವನ್ನು ಹೊರ ತೆಗೆದು ಕಟ್ ಮಾಡಿ ಪಿಜ್ಜಾ ಸವಿದಿದ್ದಾರೆ.ಇದನ್ನೂ ಓದಿ:ಬಾಲಕಿಗೆ ಸೆಕ್ಸ್ ವೀಡಿಯೋ ಕಳಿಸ್ತಿದ್ದ ಆಂಟಿ ವಿರುದ್ಧ FIR

    ಸದ್ಯ ಓಲಿ ಪ್ಯಾಟರ್ಸನ್ ಪಿಜ್ಜಾ ರೆಸಿಪಿ ವೀಡಿಯೋ ನೋಡಿ ಡೊಮಿನೋಸ್ ಆಸ್ಟ್ರೇಲಿಯಾ ಪ್ರೇರಿತಗೊಂಡು ಇದನ್ನು ಟ್ರೈ ಮಾಡಲು ಪ್ರಯತ್ನಿಸಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದನ್ನೂ ಓದಿ:ಇನ್‍ಸ್ಟಾಗ್ರಾಂ ಖಾತೆ ಹ್ಯಾಕ್ – ಅಂತರಾಷ್ಟ್ರೀಯ ಷಡ್ಯಂತ್ರ ಎಂದ ಕಂಗನಾ

     

    View this post on Instagram

     

    A post shared by Oli Paterson (@elburritomonster)

  • ಡೇವಿಡ್ ವಾರ್ನರ್ ಕನ್ನಡ ಪ್ರೀತಿಗೆ ಕನ್ನಡಿಗರು ಫಿದಾ

    ಡೇವಿಡ್ ವಾರ್ನರ್ ಕನ್ನಡ ಪ್ರೀತಿಗೆ ಕನ್ನಡಿಗರು ಫಿದಾ

    ಸಿಡ್ನಿ: ಆಸ್ಟ್ರೇಲಿಯಾ ತಂಡದ ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ ತಮ್ಮ ಮಗಳ ವೀಡಿಯೋ ಒಂದಕ್ಕೆ ಕನ್ನಡ ಹಾಡೊಂದನ್ನು ಬಳಸಿಕೊಂಡು ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಕನ್ನಡಿಗರು ವಾರ್ನರ್ ಕನ್ನಡ ಪ್ರೀತಿಗೆ ಮೆಚ್ಚುಗೆ ಸೂಚಿಸಿದ್ದಾರೆ.

    ವಾರ್ನರ್‍ ಗೆ ಭಾರತ ಮತ್ತು ಇಲ್ಲಿನ ಸಿನಿಮಾ, ಹಾಡುಗಳೆಂದರೆ ತುಂಬಾ ಇಷ್ಟ. ವಾರ್ನರ್ ತಮ್ಮ ಬಿಡುವಿನ ವೇಳೆಯಲ್ಲಿ ಕುಟುಂಬದೊಂದಿಗೆ ಭಾರತದ ಹಾಡುಗಳಿಗೆ ಹೆಜ್ಜೆಹಾಕುವ ಮೂಲಕ ರಂಜಿಸುತ್ತಿರುತ್ತಾರೆ. ಅದರಲ್ಲೂ ವಾರ್ನರ್‍ಗೆ ದಕ್ಷಿಣ ಭಾರತದ ಸಿನಿಮಾಗಳ ಮೇಲೆ ವಿಶೇಷವಾದ ಒಲವಿದೆ. ಹಾಗಾಗಿ ಪ್ರತಿ ಬಾರಿ ಇಲ್ಲಿನ ಸಿನಿಮಾ ಹಾಡುಗಳನ್ನು ಕೇಳುತ್ತಿರುತ್ತಾರೆ. ಅದಲ್ಲದೆ ವಾರ್ನರ್ ಹೈದರಾಬಾದ್ ತಂಡದ ಪರ ಆಡುವುದರಿಂದ ತೆಲುಗು ಹಾಡುಗಳಿಗೆ ಸಾಕಷ್ಟು ಬಾರಿ ನೃತ್ಯ ಮಾಡಿದ್ದಾರೆ. ಇದನ್ನೂ ಓದಿ:ಆರ್​ಸಿಬಿ ತಂಡಕ್ಕೆ ಮೈಕ್ ಹೆಸನ್ ನೂತನ ಕೋಚ್

    ಇದೀಗ ವಾರ್ನರ್ ತಮ್ಮ ಮಗಳ ಮುದ್ದಾದ ವೀಡಿಯೋ ಒಂದಕ್ಕೆ ಕನ್ನಡದ ಚೌಕ ಚಿತ್ರದ ”ಅಪ್ಪ ಐ ಲವ್ ಯು ಪಾ” ಎಂಬ ಹಾಡನ್ನು ಬಳಸಿಕೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಸಾವಿರಾರು ಕನ್ನಡಿಗರು ವಾರ್ನರ್ ಕನ್ನಡ ಪ್ರೀತಿಗೆ ಸಲಾಂ ಹೊಡೆದಿದ್ದಾರೆ.

     

    View this post on Instagram

     

    A post shared by David Warner (@davidwarner31)

    ಈ ವೀಡಿಯೋದಲ್ಲಿ ವಾರ್ನರ್ ಮಗಳು ಐಪಿಎಲ್ ವೇಳೆ ಗ್ಯಾಲರಿಯಲ್ಲಿ ಕೂತು ವಾರ್ನರ್‍ ಗೆ ಹುರಿದುಂಬಿಸಿರುತ್ತಾಳೆ. ಇದಕ್ಕೆ ವಾರ್ನರ್ ನಾನು ನನ್ನ ಕುಟುಂಬವನ್ನು ಕ್ರಿಕೆಟ್ ಅಂಗಳದಲ್ಲಿ ಮತ್ತೆ ಕಾಣಲು ಬಯಸುತ್ತೇನೆ. ನಾವು ನಮ್ಮ ಅಭಿಮಾನಿಗಳ ಮುಂದೆ ಆಡುವ ಕ್ಷಣದಿಂದ ವಂಚಿತರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಿರಾಜ್ ವಿಕೆಟ್ ಪಡೆದ ಬಳಿಕ ವಿಶೇಷ ಸಂಭ್ರಮಾಚರಣೆಯ ಕಹಾನಿ ರಿವೀಲ್

  • ಮೊದಲ ಬಾರಿಗೆ ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿದ ಭಾರತೀಯ ಮಹಿಳಾ ಹಾಕಿ ತಂಡ

    ಮೊದಲ ಬಾರಿಗೆ ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿದ ಭಾರತೀಯ ಮಹಿಳಾ ಹಾಕಿ ತಂಡ

    – ಕ್ವಾರ್ಟರ್ ಫೈನಲ್  ನಲ್ಲಿ ಆಸ್ಟ್ರೇಲಿಯಾಗೆ ಸೋಲು

    ಟೋಕಿಯೋ: ಭಾರತೀಯ ಮಹಿಳಾ ಹಾಕಿ ತಂಡ ಇತಿಹಾಸ ರಚಿಸಿದ್ದು, ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದೆ. ಕ್ವಾರ್ಟರ್ ಫೈನಲ್ ನಲ್ಲಿ ಮೂರು ಬಾರಿ ಒಲಿಂಪಿಕ್ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಭಾರತ 1-0 ಅಂತರದಲ್ಲಿ ಸೋಲಿಸಿತು.

    ಭಾರತದ ಗುರ್‍ಜಿತ್ ಕೌರ್ 22ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಲಾಭ ಪಡೆದು ಗೋಲ್ ದಾಖಲಿಸಿದರು. ಆಗಸ್ಟ್ 4ರಂದು ಅರ್ಜೆಂಟಿನಾ ವಿರುದ್ಧ ಭಾರತ ಸೆಮಿಫೈನಲ್ ಆಡಲಿದೆ. ಅರ್ಜೆಂಟಿನಾ ಕ್ವಾರ್ಟರ್ ಫೈನಲ್ ನಲ್ಲಿ ಜರ್ಮನಿ ತಂಡವನ್ನು 3-0 ಅಂತರದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಇದನ್ನೂ ಓದಿ: ಸಿಂಧುಗೆ ಜಯ – ಭಾರತಕ್ಕೆ ಕಂಚಿನ ಸಿಂಧೂರ

    ಹಾಕಿಯಲ್ಲಿ ಭಾರತ ಮುನ್ನುಗ್ಗುತ್ತಿದ್ದು, ಎರಡು ದಿನಗಳಲ್ಲಿ ಎರಡು ಗೆಲುವು ಸಿಕ್ಕಿದೆ. ಭಾನುವಾರ ಪುರುಷರ ಹಾಕಿ ಟೀಂ 41 ವರ್ಷದ ಬಳಿಕ ಒಲಿಂಪಿಕ್ ನಲ್ಲಿ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದೆ. ಪುರುಷರ ಹಾಕಿ ತಂಡ ಕ್ವಾರ್ಟರ್ ಫೈನಲ್ ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು 3-1 ಅಂತರದಲ್ಲಿ ಕಟ್ಟಿ ಹಾಕಿ ಸೆಮಿಫೈನಲ್ ತನ್ನ ಸ್ಥಾನ ಕಾಯ್ದಿರಿಸಿಕೊಂಡಿತು. ಇದನ್ನೂ ಓದಿ: ಹಾಕಿಯಲ್ಲಿ ಭಾರತದ ಸಾಧನೆ – 41 ವರ್ಷದ ಬಳಿಕ ಸೆಮಿ ಪ್ರವೇಶ

    https://www.youtube.com/watch?v=kJvgIFOXzx8
  • ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರಾ ಬೆನ್ ಸ್ಟೋಕ್ಸ್?

    ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರಾ ಬೆನ್ ಸ್ಟೋಕ್ಸ್?

    ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ನಂಬರ್ ಒನ್ ಆಲ್‍ರೌಂಡರ್ ಬೆನ್ ಸ್ಟೋಕ್ಸ್ ಭಾರತ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರ ನಡೆದಿದ್ದಾರೆ. ಮಾನಸಿಕ ಆರೋಗ್ಯದ ಸುಧಾರಣೆಗಾಗಿ ನಾನು ಸರಣಿಯಿಂದ ಹೊರನಡೆದಿರುವುದಾಗಿ ತಿಳಿಸಿದ್ದು ಈಗ ಚರ್ಚೆಗೆ ಕಾರಣವಾಗಿದೆ.

    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭಕ್ಕೆ ಕೆಲದಿನಗಳಷ್ಟೆ ಬಾಕಿ ಉಳಿದುಕೊಂಡಿದೆ. ಈ ನಡುವೆ ಅಂತಿಮ ಕ್ಷಣದಲ್ಲಿ ಮಾನಸಿಕ ಆರೋಗ್ಯದ ಸುಧಾರಣೆಗಾಗಿ ಮತ್ತು ಬೆರಳಿನ ಗಾಯಕ್ಕೆ ಚಿಕಿತ್ಸೆ ಪಡೆಯಲು ನಾನು ಹೊರಗುಳಿಯುದಾಗಿ ಸ್ಟೋಕ್ಸ್ ಹೇಳಿದ್ದಾರೆ. ಇದನ್ನು ಗಮನಿಸುತ್ತಿದ್ದಂತೆ ಸ್ಟೋಕ್ಸ್ ಮಾನಸಿಕ ಖಿನ್ನತೆಗೆ ಒಳಗಾಗಿರುವುದು ಯಾಕೆ ಎಂಬ ಪ್ರಶ್ನೆ ಉದ್ಭವಿಸಿದೆ.

    ಸ್ಟೋಕ್ಸ್ ಅವರ ಈ ನಿರ್ಧಾರದಿಂದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಶಾಕ್ ಆಗಿದ್ದರು ಕೂಡ, ಅವರಿಗೆ ವಿಶ್ರಾಂತಿ ನೀಡಲು ಒಪ್ಪಿಕೊಂಡಿದೆ. ಈ ನಡುವೆ ತಂಡದ ಸಹ ಆಟಗಾರರು ಕೂಡ ಸ್ಟೋಕ್ಸ್ ಅವರ ನಡೆಗೆ ಬೆಂಬಲ ಸೂಚಿಸಿದ್ದಾರೆ.

    ಸ್ಟೋಕ್ಸ್ ಅವರು ಈ ವರ್ಷದ ಆರಂಭದಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಬಳಿಕ ಐಪಿಎಲ್‍ಗಾಗಿ ಭಾರತಕ್ಕೆ ಆಗಮಿಸಿದ್ದರು. ರಾಜಸ್ಥಾನ್ ತಂಡದ ಪರ ಆಡುತ್ತಿದ್ದ ಸ್ಟೋಕ್ಸ್ ಬೆರಳಿನ ಗಾಯಕ್ಕೆ ತುತ್ತಾಗಿ 14ನೇ ಆವೃತ್ತಿಯ ಐಪಿಎಲ್‍ನಿಂದ ಹೊರಗುಳಿದಿದ್ದರು. ಇದೆಲ್ಲದರ ನಡುವೆ ಕೊರೊನಾದಿಂದಾಗಿ ತಂಡದಲ್ಲಿರುವ ಬಯೋ ಬಬಲ್‍ನಿಂದಾಗಿ ಸ್ಟೋಕ್ಸ್ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ: ಹಾಕಿಯಲ್ಲಿ ಭಾರತದ ಸಾಧನೆ – 41 ವರ್ಷದ ಬಳಿಕ ಸೆಮಿ ಪ್ರವೇಶ

    ಕ್ರಿಕೆಟ್‍ನಲ್ಲಿ ಈ ಹಿಂದೆ ಆಸ್ಟ್ರೇಲಿಯಾದ ಆಟಗಾರ ಗ್ಲೇನ್ ಮ್ಯಾಕ್ಸ್​ವೆಲ್ ಮಾನಸಿಕ ಖಿನ್ನತೆಗೆ ಒಳಗಾಗಿ ಕ್ರಿಕೆಟ್‍ನಿಂದ ದೂರ ಉಳಿದಿದ್ದರು. ಬಳಿಕ ಇದೀಗ ಮತ್ತೆ ಕ್ರಿಕೆಟ್ ಆಡುತ್ತಿದ್ದಾರೆ. ಇದೀಗ ಸ್ಟೋಕ್ಸ್ ಮಾನಸಿಕ ಖಿನ್ನತೆ ಕುರಿತು ಹೇಳಿಕೊಂಡಿದ್ದು ಅದಷ್ಟು ಬೇಗ ಇದರಿಂದ ಹೊರಬರಲಿ ಎಂಬುದು ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.