Tag: australia

  • ಬಿಡ್ಡನ ಅಡ್ಡಾದಲ್ಲಿ ಕಾಣಿಸಿಕೊಂಡ ವಾರ್ನರ್: ನೀನು ಚೆನ್ನಾಗಿದ್ದೀಯಾ ತಾನೇ ಎಂದು ಕಾಲೆಳೆದ ಕೊಹ್ಲಿ

    ಬಿಡ್ಡನ ಅಡ್ಡಾದಲ್ಲಿ ಕಾಣಿಸಿಕೊಂಡ ವಾರ್ನರ್: ನೀನು ಚೆನ್ನಾಗಿದ್ದೀಯಾ ತಾನೇ ಎಂದು ಕಾಲೆಳೆದ ಕೊಹ್ಲಿ

    ಮೆಲ್ಬರ್ನ್: ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್ ಸೋಶಿಯಲ್ ಮೀಡಿಯಾದಲ್ಲಿ ಬೇರೆ ಬೇರೆ ಅವತಾರದಲ್ಲಿ ಕಾಣಿಸಿಕೊಳ್ಳುವುದು ತಿಳಿದಿರುವಂತಹ ವಿಷಯ. ಇದೀಗ ವಾರ್ನರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಫಿಲಂನಲ್ಲಿ ಅಲ್ಲು ಅವರ ಬಿಡ್ಡನ ಅಡ್ಡಾದಲ್ಲಿ ಅಬ್ಬರಿಸಿರುವ ಲುಕ್‍ನ್ನು ವಾರ್ನರ್ ಇನ್ಸ್ಟಾಗ್ರಾಂನಲ್ಲಿ ಹಾಕಿರುವ ವಿಡಿಯೋ ವೈರಲ್ ಆಗಿದೆ.

    ವಿಡಿಯೋವನ್ನು ವಾರ್ನರ್ ಇನ್ಸ್ಟಾದಲ್ಲಿ ಹಾಕುತ್ತಿದ್ದಂತೆ ನೆಟ್ಟಿಗರ ಗಮನ ಸೆಳೆದಿದ್ದು ಅನೇಕ ಕಾಮೆಂಟ್‍ಗಳ ಸುರಿಮಳೆ ಹರಿದು ಬಂದಿದೆ. 7 ಲಕ್ಷಕ್ಕೂ ಅಧಿಕ ನೆಟ್ಟಿಗರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇತ್ತ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ “ಗೆಳೆಯ ನೀನು ಚೆನ್ನಾಗಿದ್ದೀಯಾ ತಾನೇ?” ಎಂದು ಕಾಮೆಂಟ್ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಮಿಚೆಲ್ ಜಾನ್ಸನ್ ಕೂಡ ಪ್ರತಿಕ್ರಿಯಿಸಿದ್ದು, ಒಂದ್ಸಲ ನಿಲ್ಲಿಸಪ್ಪಾ ಎಂಬಾರ್ಥದಲ್ಲಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಯುಪಿಯಲ್ಲಿ ಕಾಣೆಯಾಗಿದ್ದ ಯೋಗಿನಿ ವಿಗ್ರಹ ಯುಕೆಯಲ್ಲಿ ಪತ್ತೆ

     

    View this post on Instagram

     

    A post shared by David Warner (@davidwarner31)

    ಸದ್ಯ ಡೇವಿಡ್ ವಾರ್ನರ್ ಇಂಗ್ಲೆಂಡ್ ವಿರುದ್ಧ ಆ್ಯಶಸ್ ಸರಣಿ ಆಡುತ್ತಿದ್ದು, ಇದರ ನಡುವೆಯೂ ವಿಡಿಯೋ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವುದು ವಿಶೇಷ. ಸರಣಿಯ ಮೊದಲ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ವಾರ್ನರ್ 94 ರನ್ ಗಳಿಸಿದ್ದರು. ಎರಡನೇ ಪಂದ್ಯಕ್ಕೆ ವಾರ್ನರ್ ಅಲಭ್ಯರಾಗುವ ಸಾಧ್ಯತೆಯಿದೆ. ಮೊದಲ ಪಂದ್ಯದಲ್ಲಿ ವಾರ್ನರ್ ಗಾಯಗೊಂಡಿದ್ದು, 3ನೇ ದಿನದಂದು ಮೈದಾನಕ್ಕೆ ಕಣಕ್ಕಿಳಿದಿರಲಿಲ್ಲ.

  • ಆಸ್ಟ್ರೇಲಿಯಾಗೆ 9 ವಿಕೆಟ್‌ಗಳ ಭರ್ಜರಿ ಜಯ – ಮೈಲಿಗಲ್ಲು ಬರೆದ ಲಿಯಾನ್

    ಆಸ್ಟ್ರೇಲಿಯಾಗೆ 9 ವಿಕೆಟ್‌ಗಳ ಭರ್ಜರಿ ಜಯ – ಮೈಲಿಗಲ್ಲು ಬರೆದ ಲಿಯಾನ್

    ಬ್ರಿಸ್ಬೇನ್: ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ 9 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ 5 ಪಂದ್ಯಗಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

    ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 297 ರನ್‌ಗಳಿಗೆ ಆಲೌಟ್ ಆಯ್ತು. 20 ರನ್‌ಗಳ ಗುರಿಯನ್ನು ಪಡೆದ ಆಸ್ಟ್ರೇಲಿಯಾ 5.1 ಓವರ್‌ನಲ್ಲಿ 1 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.

    ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ನಥನ್ ಲಿಯಾನ್ ಇಂಗ್ಲೆಡ್ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್ ಪಡೆದು ಮೈಲಿಗಲ್ಲನ್ನು ಸೃಷ್ಟಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 17ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಇಂಗ್ಲೆಂಡ್ ವಿರುದ್ಧದ 73ನೇ ಓವರ್‌ನಲ್ಲಿ 400ನೇ ವಿಕೆಟ್‌ನ್ನು ಪಡೆದರು. ಲಿಯಾನ್ 91 ರನ್‌ಗಳನ್ನು ನೀಡಿ 4 ವಿಕೆಟ್‌ಗಳನ್ನು ಪಡೆದು ಇಂಗ್ಲೆಂಡ್ ಆಟಗಾರರನ್ನು ಕಟ್ಟಿಹಾಕಿದರು. ಇದನ್ನೂ ಓದಿ: ಓಮಿಕ್ರಾನ್ ಭೀತಿ: ಮುಂಬೈನಲ್ಲಿ 144 ಸೆಕ್ಷನ್ ಜಾರಿ- ರ‍್ಯಾಲಿ, ಮೆರವಣಿಗೆಗೆ ನಿಷೇಧ

    ಲಿಯಾನ್ ತನ್ನ 101ನೇ ಟೆಸ್ಟ್‌ನಲ್ಲಿ, ಈ ಸಾಧನೆ ಮಾಡಿದ್ದಾರೆ. ಇಂಗ್ಲೆಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಲಿಯಾನ್ ಅವರು ಡೇವಿಡ್ ಮಲಾನ್ ಅವರ ವಿಕೆಟ್ ಪಡೆಯುವ ಮೂಲಕ 400 ವಿಕೆಟ್‌ಗಳನ್ನು ಪಡೆದ 17ನೇ ಆಟಗಾರರಾಗಿ ಹೊಮ್ಮಿದ್ದಾರೆ. ಶೇನ್ ವಾರ್ನ್ ಮತ್ತು ಗ್ಲೇನ್ ಮೆಕ್‌ಗ್ರಾತ್ ನಂತರ ಆಸ್ಟ್ರೇಲಿಯಾ ಬೌಲರ್‌ಗಳಲ್ಲಿ ಮೂರನೇ ಆಟಗಾರರಾಗಿ ಲಿಯಾನ್ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: ಮತದಾನ ಮಾಡಿದ ಸದಸ್ಯರಿಂದ ಮತ ಪತ್ರ ಬಹಿರಂಗ- ಚುನಾವಣಾಧಿಕಾರಿಗೆ ದೂರು

    ಶೇನ್ ವಾರ್ನ್(708) ಅಗ್ರಸ್ಥಾನದಲ್ಲಿದ್ದರೆ, ಮಾಜಿ ಬೌಲಿಂಗ್ ದಿಗ್ಗಜ ಮೆಕ್‌ಗ್ರಾತ್(563) ಎರಡನೇ ಸ್ಥಾನದಲ್ಲಿದ್ದಾರೆ. ಡೆನ್ನಿಸ್ ಲಿಲ್ಲಿ (355) ಮತ್ತು ಮಿಚೆಲ್ ಜಾನ್ಸನ್ (313) ಕ್ರಮವಾಗಿ ಪಟ್ಟಿಯಲ್ಲಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

  • ಅಪ್ಪುಗೆ ವಿಶೇಷವಾಗಿ ಗೌರವ ಸಲ್ಲಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್

    ಅಪ್ಪುಗೆ ವಿಶೇಷವಾಗಿ ಗೌರವ ಸಲ್ಲಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್

    – ವಾರ್ನರ್ ಅಭಿಮಾನಕ್ಕೆ ಅಭಿಮಾನಿಗಳು ಫಿದಾ

    ಸ್ಯಾಂಡಲ್‍ವುಡ್ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನೆಲ್ಲಾ ಅಗಲಿ 1 ತಿಂಗಳಾದ್ರೂ ಅವರು ಇಲ್ಲದಿರೋ ಸತ್ಯವನ್ನು ನಮಗೆಲ್ಲಾ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಇಡೀ ಕರುನಾಡು ಪ್ರತಿದಿನ ಅಪ್ಪು ನೆನದು ಕೊರಗುತ್ತಿದೆ. ಎಲ್ಲೇ ನೋಡಿದರೂ ಅಪ್ಪು ಫೋಟೋನೇ ಕಾಣಿಸುತ್ತಿದೆ. ಈ ಮಧ್ಯೆ ಆಸ್ಟ್ರೇಲಿಯಾ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ಅಪ್ಪುಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ಹೌದು. ರಾಜಕುಮಾರ ಚಿತ್ರದ `ಬೊಂಬೆ ಹೇಳುತೈತೆ’ ಹಾಡಿಗೆ ರೀ ಫೇಸ್ ಆ್ಯಪ್ ಮೂಲಕ ಮಾಡಿ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ಜೊತೆಗೆ ಹ್ಯಾಶ್ ಟ್ಯಾಗ್ ಬಳಸಿ ರೆಸ್ಪೆಕ್ಟ್ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅಪ್ಪುಗೆ ವಾರ್ನರ್ ಡಿಫರೆಂಟ್ ಆಗಿ ನಮನ ಸಲ್ಲಿಸಿದ್ದಾರೆ. ವಾರ್ನರ್ ವಿಶೇಷ ಗೌರವಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ‘ಅಪ್ಪುಶ್ರೀ’ ಪ್ರಶಸ್ತಿ ನೀಡುವಂತೆ ಆಗ್ರಹಿಸಿ ಬರಿಗಾಲಲ್ಲಿ ಪಾದಯಾತ್ರೆ

    ವಾರ್ನರ್ ಅವರ ವೀಡಿಯೋ ನೋಡಿ ಅಪ್ಪು ಅಭಿಮಾನಿಗಳು ಧನ್ಯವಾದ ಅರ್ಪಿಸಿದ್ದಾರೆ. ಕನ್ನಡ ಮೇಲಿರುವ ಪ್ರೀತಿ, ಅಪ್ಪು ಮೇಲಿರುವ ಗೌರವಕ್ಕೆ ಧನ್ಯವಾದ ಅಂತ ಕಾಮೆಂಟ್ ಮಾಡುತ್ತಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಕೂಡ ವಾರ್ನರ್ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದಾರೆ. ಹೃದಯಂತರಾಳದ ನಮನಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಕನಸಿನ ಯೋಜನೆ, ವನ್ಯಜೀವಿ ಆಧಾರಿತ ಚಿತ್ರ ‘ಗಂಧದ ಗುಡಿ’ಯ ಟೀಸರ್ ಡಿಸೆಂಬರ್ 6ಕ್ಕೆ ರಿಲೀಸ್

    ಇತ್ತ ಪುನೀತ್ ರಾಜ್‍ಕುಮಾರ್ ಅವರ ಕನಸು ಇಂದು ನನಸಾಗ್ತಿದೆ. ಕನ್ನಡ ನಾಡಿನ ಅರಣ್ಯಸಂಪತ್ತು, ವನ್ಯಜೀವಿ ಸಂಪತ್ತಿನ ಬಗ್ಗೆ ಚಿತ್ರಿಸಿರೋ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಟೀಸರ್ ಬಿಡುಗಡೆ ಆಗ್ತಿದೆ. ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು `ಹಿಂದೆಂದೂ ಕಾಣದ ಸಿನಿಮಾ ಅನುಭವ. ನಿಮ್ಮ ಮುಂದೆ’ ಅಂತ ಟ್ವೀಟ್ ಮಾಡಿದ್ದಾರೆ. ಪಿಆರ್‍ಕೆ ಆಡಿಯೋ ಯೂಟ್ಯೂಬ್ ಚಾನೆಲ್‍ನಲ್ಲಿ ಬೆಳಗ್ಗೆ 10 ಗಂಟೆಗೆ ಟೈಟಲ್ ಟೀಸರ್ ಬಿಡುಗಡೆ ಆಗಲಿದೆ ಅಂತ ಟ್ವೀಟ್ ಮಾಡಿದ್ದಾರೆ. ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಅಪ್ಪು ಈ ಟೀಸರ್ ಬಿಡುಗಡೆಗೆ ಸಿದ್ಧತೆ ನಡೆಸಿದ್ದರು.

     

    View this post on Instagram

     

    A post shared by David Warner (@davidwarner31)

     

  • 6 ತಿಂಗಳ ಮಗನ ತಲೆಯನ್ನು ನೆಲಕ್ಕೆ ಜಜ್ಜಿಕೊಂದ ತಂದೆಗೆ 8.5 ವರ್ಷ ಜೈಲು ಶಿಕ್ಷೆ

    6 ತಿಂಗಳ ಮಗನ ತಲೆಯನ್ನು ನೆಲಕ್ಕೆ ಜಜ್ಜಿಕೊಂದ ತಂದೆಗೆ 8.5 ವರ್ಷ ಜೈಲು ಶಿಕ್ಷೆ

    ಕ್ಯಾನ್ಬೆರಾ: 6 ತಿಂಗಳ ಮಗನ ತಲೆಯನ್ನು ನೆಲಕ್ಕೆ ಜಜ್ಜಿಕೊಂದ ತಂದೆಗೆ ಆಸ್ಟ್ರೇಲಿಯಾದ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.

    ಕಳೆದ ವರ್ಷದ ಏಪ್ರಿಲ್ 11ರಂದು ಪಿಜ್ಜಾ ಆರ್ಡರ್ ಮಾಡಿದ್ದ ತಂದೆ ಕೂಲ್‍ಡ್ರಿಂಕ್ಸ್ ಬರದೆ ಇರುವ ವಿಚಾರಕ್ಕೆ ಸಿಟ್ಟಿಗೆದ್ದು ಮಗನನ್ನು ಹೊಡೆದು ಕೊಂದಿದ್ದ. ಈ ವಿಚಾರವಾಗಿ ತಾಯಿ ಪೊಲೀಸರಲ್ಲಿ ದೂರು ನೀಡಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ 8.5 ವರ್ಷದ ಜೈಲು ಶಿಕ್ಷೆ ವಿಧಿಸಿದೆ.

    ಈ ಪ್ರಕರಣದ ಹಿನ್ನಲೆ ಏನು:  ಪ್ರಕರಣದ ಹಿನ್ನೆಲೆ ಏನು?: ವ್ಯಕ್ತಿಯೊರ್ವ ಪಿಜ್ಜಾವನ್ನು ಮತ್ತು ಅದರೊಂದಿಗೆ ಪಾನೀಯವನ್ನು ಆರ್ಡರ್ ಮಾಡಿದ್ದನು. ಆದರೆ ಪಿಜ್ಜಾ ವಿತರಕನು ಆರ್ಡರ್ ಮಾಡಿದ್ದನ್ನು ಬಿಟ್ಟು ಬೇರೆ ಪಿಜ್ಜಾವನ್ನು ಆತನಿಗೆ ನೀಡಿದ್ದು, ಅದರಲ್ಲಿ ಪಾನೀಯ ಬಾಟಲಿ ಬಂದಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆತ ಹೆಂಡತಿ, ಮಕ್ಕಳಿಗೆ ಹೊಡೆಯುತ್ತಾನೆ. ಇದನ್ನೂ ಓದಿ: ನಾಯಕರಿಗೆ ಗತಿ ಇಲ್ಲ, ಅಭ್ಯರ್ಥಿಗಳಿಗಂತೂ ದಟ್ಟ ದಾರಿದ್ರ್ಯ- ಕಾಂಗ್ರೆಸ್ ವಿರುದ್ಧ ಹೆಚ್‍ಡಿಕೆ ಕಿಡಿ

    ವಿಕ್ಟೋರಿಯಾದಲ್ಲಿ ವಾಸಿಸುವ ಇವಾಂಡರ್ ವಿಲ್ಸನ್ ಪಿಜ್ಜಾ ಆರ್ಡರ್ ಮಾಡಿದ್ದಾನೆ. ಪಾನೀಯ ಬಾಟಲಿ ಇಲ್ಲದಿರುವುದನ್ನು ಕಂಡು ಕೋಪಗೊಂಡಿದ್ದಾನೆ. ಇವಾಂಡರ್ ತನ್ನ ಕೋಪವನ್ನು ಹೆಂಡತಿ ಚೆಲ್ಸಿಯಾ ಸ್ಮಿತ್ ಬಳಿ ತೋರಿಸಿಕೊಂಡಿದ್ದು, ಆಕೆಗೆ ಸರಿಯಾಗಿ ಹೊಡೆದಿದ್ದಾನೆ. ಮಕ್ಕಳ ಮುಂದೆಯೇ ಆಕೆಯನ್ನು ಎಳೆದಾಡಿಕೊಂಡು ಹೊಡೆದಿದ್ದಾನೆ. ಇದನ್ನೂ ಓದಿ: ಗೋ ಕಳ್ಳರಿಗೆ ಸಹಾಯ ಮಾಡಿದ್ದ ಪೊಲೀಸರ ಬಗ್ಗೆಯಷ್ಟೇ ಮಾತನಾಡಿದ್ದೇನೆ: ಆರಗ ಜ್ಞಾನೇಂದ್ರ

    ಇವಾಂಡರ್ ವಿಲ್ಸನ್ ಸರಿಯಾದ ಪಿಜ್ಜಾ ನೀಡಿಲ್ಲವೆಂದು ಹೆಂಡತಿ ಚೆಲ್ಸಿಯಾ ಸ್ಮಿತ್ ಮೇಲೆ ಕೋಪ ತೋರಿಸಿದ್ದಲ್ಲದೆ, ಆಕೆಯ ತಲೆ ಕೂದಲು ಹಿಡಿದುಕೊಂಡು ಎಳೆದಾಡಿದ್ದಾನೆ. ನಂತರ ಮುಖಕ್ಕೆ ಗುದ್ದಿದ್ದಾನೆ. ಮಗ ಜಾಕೋಬಿ ತನ್ನ ತಂದೆಯ ಕ್ರೂರ ರೂಪವನ್ನು ನೋಡಿ ಅಳಲು ಪ್ರಾರಂಭಿಸಿದ್ದ. ಅದೇ ವಿಷಯವು ತಂದೆಯನ್ನು ಕೆರಳಿಸಿತು. ಮಗನಿಗೆ ಸುಮ್ಮನಿರಲು ಹೇಳಿದ್ದರೂ ಅವನು ಅಳು ನಿಲ್ಲಿಸದಿದ್ದಾಗ, ಮಗನನ್ನು ಎಳೆದು ಬೀಸಾಡಿ, ತಲೆಯನ್ನು ನೆಲಕ್ಕೆ ಬಡಿಯುತ್ತಾನೆ. ಇದನ್ನೂ ಓದಿ:  ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ

    ಮಗನ ಸ್ಥಿತಿಯನ್ನು ಕಂಡ ತಾಯಿ ಇವಾಂಡರ್ ವಿಲ್ಸನ್ ತಕ್ಷಣ ಆಸ್ಪತ್ರೆಗೆ ಮಗನನ್ನು ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಮಗ ಸಾವನ್ನಪ್ಪಿದ್ದ. ಈ ಎಲ್ಲ ವಿಚಾರವನ್ನು ತಾಯಿ ಚೆಲ್ಸಿಯಾ ಸ್ಮಿತ್ ಪೊಲೀಸರಲ್ಲಿ ಹೇಳಿದ್ದಳು. . ಇದನ್ನೂ ಓದಿ: ನನ್ನ ಹುಟ್ಟಿಸಿದ್ಯಾಕೆ?- ತಾಯಿಯ ಹೆರಿಗೆ ಮಾಡಿಸಿದ್ದ ವೈದ್ಯರ ವಿರುದ್ಧ ಯುವತಿ ಕೇಸ್

  • ಕಪ್ ಗೆಲ್ಲಲು ಲಕ್ಕಿ ಕಲರ್ ಆದ ಹಳದಿ ಜೆರ್ಸಿ

    ಕಪ್ ಗೆಲ್ಲಲು ಲಕ್ಕಿ ಕಲರ್ ಆದ ಹಳದಿ ಜೆರ್ಸಿ

    ನವದೆಹಲಿ: ಕ್ರಿಕೆಟ್‍ನಲ್ಲಿ ಸೋಲು ಗೆಲುವು ಆಟಗಾರರ ಆಟದ ಮೇಲೆ ನಿಂತಿರುತ್ತದೆ. ಇದರ ಜೊತೆ ಕೆಲವೊಂದು ಬಾರಿ ಅದೃಷ್ಟ ಕೈಹಿಡಿದರೆ ಮಾತ್ರ ಗೆಲುವು ಸಿಗುವಂತಹ ನಿದರ್ಶನಗಳು ಸಾಕಷ್ಟು ಬಾರಿ ಕಾಣಸಿಕ್ಕಿದೆ. ಈ ವರ್ಷ ಪ್ರತಿಷ್ಠಿತ ಟೂರ್ನಿಗಳಲ್ಲಿ ಹಳದಿ ಜೆರ್ಸಿ ಧರಿಸಿದ ತಂಡಗಳಿಗೆ ಟ್ರೋಫಿ ಗೆಲ್ಲುವ ಅದೃಷ್ಟ ಒಲಿದು ಬಂದಿದೆ.

    ಇದಕ್ಕೆ ಸೂಕ್ತ ನಿದರ್ಶನವೆಂಬಂತೆ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಹಳದಿ ಜೆರ್ಸಿ ಧರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆದರೆ, ಟಿ20 ವಿಶ್ವಕಪ್‍ನಲ್ಲಿ ಯೆಲ್ಲೋ ಜೆರ್ಸಿ ಧರಿಸಿದ್ದ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಗೆದ್ದಿತ್ತು. ಇದೀಗ ಈ ಸರದಿಗೆ ಇನ್ನೊಂದು ಸೇರ್ಪಡೆ ಎಂಬಂತೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ವಿಜೇತ ತಂಡ ತಮಿಳುನಾಡು ಕೂಡ ಹಳದಿ ಬಣ್ಣದ ಜೆರ್ಸಿ ಧರಿಸಿತ್ತು. ಈ ತಂಡ ಕೂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದನ್ನೂ ಓದಿ: ಕೊನೆಯ ಎಸೆತದಲ್ಲಿ ಸಿಕ್ಸರ್‌, ತಮಿಳುನಾಡಿಗೆ ಟ್ರೋಫಿ – ಕರ್ನಾಟಕಕ್ಕೆ ವಿರೋಚಿತ ಸೋಲು

    ಈ ಮೂರು ತಂಡಗಳು ಟ್ರೋಫಿ ಗೆದ್ದ ಬಳಿಕ ಹಳದಿ ಜೆರ್ಸಿ ಅದೃಷ್ಟದ ಬಗ್ಗೆ ಸುದ್ದಿಯಾಗುತ್ತಿದ್ದು, ಈ ಮೂರು ತಂಡಗಳು ಕೂಡ ಟಿ20 ಮಾದರಿಯಲ್ಲಿ ಹಳದಿ ಜೆರ್ಸಿ ತೊಟ್ಟ ತಂಡವಾಗಿ ಕಣಕ್ಕಿಳಿದು ಟ್ರೋಫಿ ಗೆದ್ದಿರುವುದು ವಿಶೇಷ. ಅದರಲ್ಲೂ ತಮಿಳುನಾಡು ತಂಡ 2021ರಲ್ಲಿ ಹಳದಿ ಜೆರ್ಸಿಯಲ್ಲಿ ಎರಡು ಬಾರಿ ಚಾಂಪಿಯನ್ ಆಗಿದೆ. ಈ ವರ್ಷದ ಆರಂಭದಲ್ಲಿ ಬರೋಡ ತಂಡವನ್ನು ಸೋಲಿಸಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದಿದ್ದ ತಮಿಳುನಾಡು ತಂಡ. ಇದೀಗ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಫೈನಲ್‍ನಲ್ಲಿ ಸೋಲಿಸಿ ಚಾಂಪಿಯನ್ ಆಗಿದೆ. ಇದನ್ನೂ ಓದಿ: ಚಹರ್ ಸಿಕ್ಸ್‌ಗೆ ಸೆಲ್ಯೂಟ್ ಹೊಡೆದ ರೋಹಿತ್

    ಹಳದಿ ಬಣ್ಣದ ಪರ ಒಲವು ಇರುವ ಮಂದಿ ಸಾಮಾಜಿಕ ಜಾಲತಾಣದಲ್ಲಿ ಹಳದಿ ಬಣ್ಣದ ಬಗ್ಗೆ ಮಾತನಾಡುತ್ತಿದ್ದರೆ ಉಳಿದವರು ಆಟದಲ್ಲಿ ಅದೃಷ್ಟ ಒಂದೇ ಮುಖ್ಯ ಅಲ್ಲ. ಆಟಗಾರರು ಚೆನ್ನಾಗಿ ಆಡಿದರೆ ಪಂದ್ಯ ಗೆಲ್ಲಬಹುದು ಎಂದು ಪ್ರತ್ಯುತ್ತರ ನೀಡುತ್ತಿದ್ದಾರೆ. ಇದನ್ನೂ ಓದಿ: ಸೂಪರ್ ಫೀಲ್ಡಿಂಗ್, ಕೀಪಿಂಗ್ – ನಾಯಿಗೆ ಹೆಸರು ಕೊಡಿ ಎಂದ ಸಚಿನ್

  • ಟಿ20 ವಿಶ್ವಕಪ್ ಗೆದ್ದ ಖುಷಿಗೆ ಬೂಟ್‍ನಲ್ಲಿ ಬಿಯರ್ ಸೇವಿಸಿದ ಆಸ್ಟ್ರೇಲಿಯಾ ಆಟಗಾರರು

    ಟಿ20 ವಿಶ್ವಕಪ್ ಗೆದ್ದ ಖುಷಿಗೆ ಬೂಟ್‍ನಲ್ಲಿ ಬಿಯರ್ ಸೇವಿಸಿದ ಆಸ್ಟ್ರೇಲಿಯಾ ಆಟಗಾರರು

    ದುಬೈ: ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಆಟಗಾರರು ಭರ್ಜರಿ ಸಂಭ್ರಮಾಚರಣೆ ಮಾಡಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ತಂಡದ ಇಬ್ಬರು ಆಟಗಾರರು ಬೂಟ್‍ನಲ್ಲಿ ಬಿಯರ್ ಕುಡಿದು ಸಂಭ್ರಮಿಸಿದ್ದಾರೆ.

    ನಿನ್ನೆ ನಡೆದ ಅಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್‍ಗಳಿಂದ ಬಗ್ಗು ಬಡಿದು ಚೊಚ್ಚಲ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡು ಬೀಗಿತ್ತು. ಆಸೀಸ್ ವಿಶ್ವಕಪ್ ಟ್ರೋಫಿ ಜೊತೆಗೆ 1.6 ಮಿಲಿಯನ್ ಡಾಲರ್, ಸುಮಾರು 12 ಕೋಟಿ ರೂಪಾಯಿಗಳ ನಗದು ಬಹುಮಾನ ಗೆದ್ದು ಸಂಭ್ರಮಿಸಿತು. ಇದನ್ನೂ ಓದಿ: ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ

     

    View this post on Instagram

     

    A post shared by ICC (@icc)

    ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್ ಸ್ಟೋಯಿನಸ್ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಂ ನಲ್ಲಿ ನಡೆದ ಆಟಗಾರರ ಸಂಭ್ರಮಾಚರಣೆಯಲ್ಲಿ ಮೊದಲು ವೇಡ್ ತಮ್ಮ ಕಾಲಿನ ಶೂ ಬಿಚ್ಚಿ ಅದಕ್ಕೆ ಬಿಯರ್ ಸುರಿದು ಕುಡಿದಿದ್ದಾರೆ. ಆ ಬಳಿಕ ಸ್ಟೋಯಿನಿಸ್ ಕೂಡ ಅದೇ ರೀತಿ ಬಿಯರ್ ಕುಡಿದು ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಹೀಗೆ ಆಸೀಸ್ ಆಟಗಾರರು ಶೂ ನಲ್ಲಿ ಬಿಯರ್ ಕುಡಿಯುತ್ತಿರುವ ವೀಡಿಯೋವನ್ನು ಐಸಿಸಿ ಪೋಸ್ಟ್ ಮಾಡಿದ್ದು, ಇದೀಗ ಈ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಟೀಂ ಇಂಡಿಯಾಗೆ ಬಲ ತುಂಬಲಿದ್ದಾರೆ ನಾಲ್ವರು ಕನ್ನಡಿಗರು

  • ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ

    ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ

    ದುಬೈ: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್‍ಗಳಿಂದ ಬಗ್ಗು ಬಡಿದ ಆಸ್ಟ್ರೇಲಿಯಾ ತಂಡ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಬೀಗಿದೆ.

    ಗೆಲ್ಲಲು 173 ರನ್‍ಗಳ ಟಾರ್ಗೆಟ್ ಬೆನ್ನುಹತ್ತಿದ ಆಸ್ಟ್ರೇಲಿಯಾ ತಂಡ 18.5  ಓವರ್‌ ಗಳಲ್ಲಿ  2 ವಿಕೆಟ್‌ ಕಳೆದುಕೊಂಡು 173 ರನ್ ಸಿಡಿಸಿ ಪಂದ್ಯ ಗೆದ್ದುಕೊಂಡಿತು. ಇದನ್ನೂ ಓದಿ: ಟೀಂ ಇಂಡಿಯಾಗೆ ಬಲ ತುಂಬಲಿದ್ದಾರೆ ನಾಲ್ವರು ಕನ್ನಡಿಗರು

    ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಕಳೆದ ಪಂದ್ಯದ ಪ್ರದರ್ಶನವನ್ನು ಮುಂದುವರೆಸಿ 53 ರನ್ (38 ಎಸೆತ, 4 ಬೌಂಡರಿ, 3 ಸಿಕ್ಸ್) ಸಿಡಿಸಿ ತಂಡಕ್ಕೆ ಆಸರೆಯಾದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಮಿಚೆಲ್ ಮಾರ್ಷ್ 2ನೇ ವಿಕೆಟ್‍ಗೆ 92 ರನ್ (59 ಎಸೆತ) ಜೊತೆಯಾಟವಾಡಿದರು. ವಾರ್ನರ್ ಔಟ್ ಆದ ಬಳಿಕವು ತನ್ನ ಆರ್ಭಟ ಮುಂದುವರೆಸಿದ ಮಾರ್ಷ್  ಕಡೆಯವರೆಗೆ ಬ್ಯಾಟ್‍ಬೀಸಿ 77 ರನ್‌ (50 ಎಸೆತ, 6 ಬೌಂಡರಿ, 4 ಸಿಕ್ಸ್‌) ಸಿಡಿಸಿ ಆಸ್ಟ್ರೇಲಿಯಾಗೆ ಗೆಲುವು ತಂದುಕೊಟ್ಟರು.

    ಈ ಪ್ರಶಸ್ತಿ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಟ್ರೋಫಿ ಜೊತೆ 1.6 ಮಿಲಿಯನ್ ಡಾಲರ್ ಎಂದರೆ ಸುಮಾರು 12 ಕೋಟಿ ರೂಪಾಯಿಯನ್ನು ನಗದು ಬಹುಮಾನವನ್ನು ಪಡೆದುಕೊಂಡಿತು. ದ್ವಿತೀಯ ಸ್ಥಾನ ಪಡೆದ ನ್ಯೂಜಿಲೆಂಡ್ ತಂಡ 800 ಮಿಲಿಯನ್ ಡಾಲರ್(6 ಕೋಟಿ ರೂಪಾಯಿ) ನಗದು ಬಹುಮಾನ ಪಡೆಯಿತು. ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರರನ್ನು ಅಣಕಿಸಿದ ಶಾಹೀನ್ ಶಾ ಆಫ್ರಿದಿಗೆ ಚಾಟಿ ಬೀಸಿದ ನೆಟ್ಟಿಗರು

    ವಿಲಿಯಮ್ಸನ್ ಹೋರಾಟ ವ್ಯರ್ಥ
    ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಆಸ್ಟ್ರೇಲಿಯಾ ಲೆಕ್ಕಾಚಾರದಂತೆ ನ್ಯೂಜಿಲೆಂಡ್ ಆರಂಭಿಕ ಜೋಡಿಯನ್ನು 3.5 ಓವರ್ ಆಗುವಷ್ಟರಲ್ಲಿ ಪೆವಿಲಿಯನ್ ಕಳುಹಿಸಲಾಗಿತ್ತು. ನ್ಯೂಜಿಲೆಂಡ್‍ನ ಆರಂಭಿಕ ಆಟಗಾರ ಡೇರಿಲ್ ಮಿಚಲ್ 11 ರನ್ (8 ಎಸೆತ, 1 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಇನ್ನೋರ್ವ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಕೂಡ 28 ರನ್ (35 ಎಸೆತ, 3 ಬೌಂಡರಿ) ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಒಂದಾದ ನಾಯಕ ಕೇನ್ ವಿಲಿಮ್ಸನ್ ಮತ್ತು ಗ್ಲೆನ್ ಫಿಲಿಪ್ಸ್ ಜೋಡಿ 3ನೇ ವಿಕೆಟ್‍ಗೆ 68 ರನ್ (37 ಎಸೆತ)ಗಳ ಜೊತೆಯಾಟವಾಡಿ ತಂಡದ ಸ್ಕೋರ್ ಹಚ್ಚಿಸಿತು. ಗ್ಲೆನ್ ಫಿಲಿಪ್ಸ್ 18 ರನ್ (17 ಎಸೆತ, 1 ಬೌಂಡರಿ, 1 ಸಿಕ್ಸ್)ಗೆ ಸುಸ್ತಾದರು. ಆದರೆ ಒಂದು ಕಡೆ ಬೌಂಡರಿ, ಸಿಕ್ಸರ್‍ಗಳ ಅಬ್ಬರದೊಂದಿಗೆ ಭರ್ಜರಿ ಬ್ಯಾಟಿಂಗ್ ನಡೆಸಿದ ವಿಲಿಯಮ್ಸನ್ 85 ರನ್ (48 ಎಸೆತ, 10 ಬೌಂಡರಿ, 3 ಸಿಕ್ಸ್) ಬಾರಿಸಿ ತಂಡಕ್ಕೆ ದೊಡ್ಡ ಮೊತ್ತ ಕಲೆಹಾಕಲು ನೆರವಾದರು.

    ಅಂತಿಮವಾಗಿ ನ್ಯೂಜಿಲೆಂಡ್ ತಂಡ ನಿಗದಿತ ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 172 ರನ್ ಪೇರಿಸಿತು. ಆಸ್ಟ್ರೇಲಿಯಾ ಪರ ಜೋಶ್ ಹ್ಯಾಜಲ್‍ವುಡ್ 3 ವಿಕೆಟ್ ಕಿತ್ತು ಮಿಂಚಿದರೆ, ಇನ್ನುಳಿದ 1 ವಿಕೆಟ್ ಆಡಮ್ ಜಂಪಾ ಪಾಲಾಯಿತು.

  • ಟಿ20 ವಿಶ್ವಕಪ್ ಫೈನಲ್‍ಗೆ ಕ್ಷಣಗಣನೆ – ಆಸೀಸ್ vs ಕಿವೀಸ್ ಟ್ರ್ಯಾಕ್ ರೆಕಾರ್ಡ್

    ಟಿ20 ವಿಶ್ವಕಪ್ ಫೈನಲ್‍ಗೆ ಕ್ಷಣಗಣನೆ – ಆಸೀಸ್ vs ಕಿವೀಸ್ ಟ್ರ್ಯಾಕ್ ರೆಕಾರ್ಡ್

    ದುಬೈ: ಟಿ20 ವಿಶ್ವಕಪ್ ಇದೀಗ ಕೊನೆಯ ಹಂತಕ್ಕೆ ತಲುಪಿದೆ. ವಿಶ್ವದ ಎರಡು ಬಲಿಷ್ಠ ತಂಡಗಳು ಬಲಾಢ್ಯ ತಂಡಗಳನ್ನು ಮಣ್ಣು ಮುಕ್ಕಿಸಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡ ಫೈನಲ್ ಕಾದಾಟಕ್ಕೆ ಸಜ್ಜಾಗಿದೆ.

    ಫೈನಲ್‍ಗೇರಿರುವ ಎರಡು ತಂಡಗಳಿಗೂ ಈ ಬಾರಿ ಪ್ರಶಸ್ತಿ ಗೆದ್ದರೆ ಅದು ಚೊಚ್ಚಲ ಬಾರಿಯ ಪ್ರಶಸ್ತಿಯಾಗಲಿದೆ. ವಿಶ್ವಕಪ್ ಆರಂಭಕ್ಕೂ ಮೊದಲು ಎರಡು ತಂಡಗಳು ಕೂಡ ಪ್ರಶಸ್ತಿ ಸುತ್ತಿಗೇರುವ ಪ್ರಮುಖ ತಂಡಗಳಾಗಿ ಗುರುತಿಸಿಕೊಂಡಿದ್ದವು. ಆದರೆ ಆಸ್ಟ್ರೇಲಿಯಾ ತಂಡದ ಮೇಲೆ ಹೆಚ್ಚಿನ ಭರವಸೆ ಇದ್ದರೆ, ನ್ಯೂಜಿಲೆಂಡ್ ತಂಡದ ಮೇಲೆ ಭರವಸೆ ಕಮ್ಮಿಇತ್ತು. ಆದರೆ ಕಿವೀಸ್ ತಮ್ಮ ಅಮೋಘ ಆಟದ ಮೂಲಕ ಫೈನಲ್‍ಗೆ ಲಗ್ಗೆ ಇಟ್ಟಿದೆ. ಇದನ್ನೂ ಓದಿ: ನನ್ನ ಕುಟುಂಬಕ್ಕೆ ಭದ್ರತೆ ಕೊಡಿ ಎಂದು ಮೋದಿಗೆ ಮನವಿ ಸಲ್ಲಿಸಿದ ಪಾಕ್ ಕ್ರಿಕೆಟಿಗನ ಪತ್ನಿ

    ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಎರಡು ತಂಡಗಳ ಟಿ20 ಕ್ರಿಕೆಟ್ ಟ್ರ್ಯಾಕ್ ಗಮನಿಸಿದಾಗ ಎರಡು ತಂಡಗಳು ಪರಸ್ಪರ 14 ಪಂದ್ಯಗಳನ್ನು ಆಡಿವೆ. 14 ಪಂದ್ಯದಲ್ಲಿ 9 ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದರೆ, 5 ಪಂದ್ಯಗಳನ್ನು ನ್ಯೂಜಿಲೆಂಡ್ ತಂಡ ಗೆದ್ದುಕೊಂಡಿದೆ. ಟಿ20 ವಿಶ್ವಕಪ್‍ನಲ್ಲಿ 1 ಬಾರಿ ಎರಡು ತಂಡಗಳು ಮುಖಾಮುಖಿ ಆಗಿದ್ದು, ಅದರಲ್ಲಿ ನ್ಯೂಜಿಲೆಂಡ್ ತಂಡ ಮೇಲುಗೈ ಸಾಧಿಸಿದೆ. ಈ ಬಾರಿ ಎರಡು ತಂಡಗಳು ಕೂಡ ಬಲಿಷ್ಠವಾಗಿ ಗೋಚರಿಸುತ್ತಿದ್ದು, ಯಾವ ತಂಡ ವಿಶ್ವಕಪ್ ಮುಡಿಗೇರಿಸಿಕೊಳ್ಳಲಿದೆ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರರನ್ನು ಅಣಕಿಸಿದ ಶಾಹೀನ್ ಶಾ ಆಫ್ರಿದಿಗೆ ಚಾಟಿ ಬೀಸಿದ ನೆಟ್ಟಿಗರು

  • ಟೀಂ ಇಂಡಿಯಾ ಆಟಗಾರರನ್ನು ಅಣಕಿಸಿದ ಶಾಹೀನ್ ಶಾ ಆಫ್ರಿದಿಗೆ ಚಾಟಿ ಬೀಸಿದ ನೆಟ್ಟಿಗರು

    ಟೀಂ ಇಂಡಿಯಾ ಆಟಗಾರರನ್ನು ಅಣಕಿಸಿದ ಶಾಹೀನ್ ಶಾ ಆಫ್ರಿದಿಗೆ ಚಾಟಿ ಬೀಸಿದ ನೆಟ್ಟಿಗರು

    ದುಬೈ: ಟಿ20 ವಿಶ್ವಕಪ್‍ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲಿನ ಬಳಿಕ ಪಾಕಿಸ್ತಾನ ತಂಡದ ವೇಗಿ ಶಾಹೀನ್ ಶಾ ಆಫ್ರಿದಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ.

    ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಕಂಡಿತ್ತು. ಈ ಸೋಲಿನಲ್ಲಿ ಆಫ್ರಿದಿ ಪ್ರಮುಖ ಪಾತ್ರವಹಿಸಿದ್ದರು. ಭಾರತ ಪ್ರಮುಖ ಮೂರು ಆಟಗಾರರಾದ ಕೆ.ಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಪಡೆದು ಮಿಂಚಿದ್ದರು. ನಂತರ ಸ್ಕಾಟ್ಲೆಂಡ್ ವಿರುದ್ಧ ಪಂದ್ಯದಲ್ಲಿ ಅಭಿಮಾನಿಗಳು ರೋಹಿತ್ ಶರ್ಮಾ, ಕೆಎಲ್ ರಾಹುಲ್, ಕೊಹ್ಲಿ ಎಂದು ಕೂಗಿದಾಗ ಶಾಹಿನ್ ಅಫ್ರಿದಿ ಈ ಮೂವರು ಆಟಗಾರರು ಔಟ್ ಆದ ಸನ್ನಿವೇಶವನ್ನು ಕೈ ಸನ್ನೆಯ ಮೂಲಕ ಮಾಡಿ ತೋರಿಸಿ ವ್ಯಂಗ್ಯವಾಡಿದ್ದರು. ದನ್ನೂ ಓದಿ: ವೇಡ್‌ ಹ್ಯಾಟ್ರಿಕ್‌ ಸಿಕ್ಸರ್‌ – ಆಸ್ಟ್ರೇಲಿಯಾ ಫೈನಲಿಗೆ, ಪಾಕ್‌ ಮನೆಗೆ

    https://twitter.com/Azzy_sh/status/1458879896856502273

    ಇದೀಗ ಇದಕ್ಕೆ ತಿರುಗೇಟು ಎಂಬಂತೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮ್ಯಾಥ್ಯೂ ವೇಡ್ ಆಫ್ರಿದಿ ಬೌಲಿಂಗ್‍ನಲ್ಲಿ ಬ್ಯಾಕ್ ಟು ಬ್ಯಾಕ್ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿ ತಂಡವನ್ನು ಗೆಲ್ಲಿಸಿಕೊಟ್ಟಿದ್ದರು. ಇದನ್ನೂ ಓದಿ: ಪಂದ್ಯ ಗೆದ್ದರೂ ಸಂಭ್ರಮಿಸದ ನೀಶಮ್ ಫೋಟೋ ವೈರಲ್

    https://twitter.com/kailashsk123/status/1458881989965082646

    ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಾಣುತ್ತಿದ್ದಂತೆ ಆಫ್ರಿದಿ ಟೀಂ ಇಂಡಿಯಾ ಆಟಗಾರರ ಬಗ್ಗೆ ಅಣಕಿಸಿದ ಕೈ ಸನ್ನೆ ಮತ್ತು ಮ್ಯಾಥ್ಯೂ ವೇಡ್ ಸಿಕ್ಸ್ ನ ವಿವಿಧ ಭಂಗಿಯನ್ನು ಹಾಕಿ ನೆಟ್ಟಿಗರು ಆಫ್ರಿದಿಯ ಚಳಿ ಬಿಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಫ್ರಿದಿ ಇದೀಗ ಫುಲ್ ಟ್ರೆಂಡಿಂಗ್ ಆಗಿದ್ದಾರೆ. ಇದನ್ನೂ ಓದಿ: ಐಪಿಎಲ್ ಬಿಡ್ಡಿಂಗ್‍ನಲ್ಲಿ ಈ ಇಬ್ಬರಿಗೆ ಭಾರೀ ಬೇಡಿಕೆ

  • ವೇಡ್‌ ಹ್ಯಾಟ್ರಿಕ್‌ ಸಿಕ್ಸರ್‌ – ಆಸ್ಟ್ರೇಲಿಯಾ ಫೈನಲಿಗೆ, ಪಾಕ್‌ ಮನೆಗೆ

    ವೇಡ್‌ ಹ್ಯಾಟ್ರಿಕ್‌ ಸಿಕ್ಸರ್‌ – ಆಸ್ಟ್ರೇಲಿಯಾ ಫೈನಲಿಗೆ, ಪಾಕ್‌ ಮನೆಗೆ

    ದುಬೈ: 19ನೇ ಓವರಿನಲ್ಲಿ ಮ್ಯಾಥ್ಯೂ ವೇಡ್ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ಪರಿಣಾಮ ಆಸ್ಟ್ರೇಲಿಯಾ ರೋಚಕ 5 ವಿಕೆಟ್‌ ಜಯ ಸಾಧಿಸಿ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಲೀಗ್‍ನ ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಫೈನಲ್ ಪ್ರವೇಶಿಸುವ ಕನಸು ಕಂಡಿದ್ದ ಪಾಕಿಸ್ತಾನದ ಕನಸು ಭಗ್ನವಾಗಿದೆ.

    ಪಾಕಿಸ್ತಾನ ನೀಡಿದ 177 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 19 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 177 ರನ್‌ ಹೊಡೆಯಿತು. ಈ ಮೂಲಕ ಎರಡನೇ ಬಾರಿ ಆಸ್ಟ್ರೇಲಿಯಾ ಫೈನಲ್‌ ಪ್ರವೇಶಿಸಿತು.

    ಕೊನೆಯ 18 ಎಸೆತಗಳಿಗೆ 38 ರನ್‌ ಬೇಕಿತ್ತು. 18 ನೇ ಓವರಿನಲ್ಲಿ 15 ರನ್‌ ಬಂದಿತ್ತು. ಶಾಹಿನ್‌ ಅಫ್ರಿದಿ ಎಸೆದ 19ನೇ ಓವರ್‌ನಲ್ಲಿ 22 ರನ್‌ ಬಂತು. 19 ನೇ ಓವರಿನ ಕೊನೆಯ ಮೂರು ಎಸೆತದಲ್ಲಿ ವೇಡ್‌ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟರು.

    ವೇಡ್ ಮತ್ತು ಸ್ಟೋಯಿನಿಸ್ ಮುರಿಯದ 6ನೇ ವಿಕೆಟಿಗೆ 41 ಎಸೆತಗಳಿಗೆ 81 ರನ್‌ ಚಚ್ಚಿದರು. ವಾಡೆ 41 ರನ್(17‌ ಎಸೆತ, 2 ಬೌಂಡರಿ, 4 ಸಿಕ್ಸರ್)‌ ಸ್ಟೋಯಿನಿಸ್ 40 ರನ್‌(31 ಎಸೆತ, 2 ಬೌಂಡರಿ, 2 ಸಿಕ್ಸರ್‌) ಹೊಡೆದರು.

    ಆಸ್ಟ್ರೇಲಿಯಾ ತಂಡ ಆರಂಭದಿಂದಲೇ ವಿಕೆಟ್‍ಗಳನ್ನು ಕಳೆದುಕೊಳ್ಳುತ್ತ ಸಾಗಿತ್ತು. ನಾಯಕ ಆರನ್ ಫಿಂಚ್ ಶೂನ್ಯ ಸುತ್ತಿದರೆ, ಸ್ಟೀವ್ ಸ್ಮಿತ್ 5 ರನ್‍ಗೆ ಸುಸ್ತಾದರು. ಆದರೆ ಆಸ್ಟ್ರೇಲಿಯಾ ತಂಡಕ್ಕೆ ಒಂದು ಕಡೆ ಆಸರೆಯಾಗಿದ್ದ ಡೇವಿಡ್ ವಾರ್ನರ್ ಉತ್ತಮವಾಗಿ ಬ್ಯಾಟ್‌ ಬೀಸಿ 49 ರನ್ (30 ಎಸೆತ, 3 ಬೌಂಡರಿ, 3 ಸಿಕ್ಸ್) ಬಾರಿಸಿ ವಿಕೆಟ್ ಒಪ್ಪಿಸಿದರು. ನಂತರ ಮಾರ್ಕಸ್ ಸ್ಟೋಯಿನಿಸ್ ಮತ್ತು ಮ್ಯಾಥ್ಯೂ ವೇಡ್ ಆಸ್ಟ್ರೇಲಿಯಾ ಗೆಲುವಿಗೆ ಹೋರಾಟ ನಡೆಸಿ ಗೆಲುವು ತಂದು ಕೊಟ್ಟರು.

    ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡಕ್ಕೆ ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ 71 ರನ್ (60 ಎಸೆತ) ಸೇರಿಸಿತು. ಈ ವೇಳೆ ದಾಳಿಗಿಳಿದ ಜಂಪಾ, ಬಾಬರ್ ಅಜಮ್ 39 ರನ್ (34 ಎಸೆತ, 5 ಬೌಂಡರಿ) ವಿಕೆಟ್ ಪಡೆಯವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಐಪಿಎಲ್ ಬಿಡ್ಡಿಂಗ್‍ನಲ್ಲಿ ಈ ಇಬ್ಬರಿಗೆ ಭಾರೀ ಬೇಡಿಕೆ

    ನಂತರ ಜೊತೆಯಾದ ಮೊಹಮ್ಮದ್ ರಿಜ್ವಾನ್ ಮತ್ತು ಫಖರ್ ಜಮಾನ್ ಮತ್ತಷ್ಟು ವೇಗವಾಗಿ ರನ್ ಗಳಿಸಲು ಮುಂದಾದರು. ಆಸೀಸ್ ಬೌಲರ್‍ಗಳ ಬೆಂಡೆತ್ತಿದ ಈ ಜೋಡಿ ಕೂಡ ಉತ್ತಮವಾದ ಜೊತೆಯಾಟವಾಡಿತು. 2ನೇ ವಿಕೆಟ್‍ಗೆ ಈ ಜೋಡಿ 72 ರನ್ (46 ಎಸೆತ) ಒಟ್ಟುಗೂಡಿಸಿತು. ರಿಜ್ವಾನ್ 67 ರನ್ (52 ಎಸೆತ, 3 ಬೌಂಡರಿ, 4 ಸಿಕ್ಸ್) ಬಾರಿಸಿ ಔಟ್ ಆದರು. ಫಖರ್ ಜಮಾನ್ ಇನ್ನಿಂಗ್ಸ್ ಅಂತ್ಯದವರೆಗೆ ಬ್ಯಾಟ್ ಬೀಸಿ ಅಜೇಯ 55 ರನ್ (32 ಎಸೆತ, 3 ಬೌಂಡರಿ, 4 ಸಿಕ್ಸ್) ಸಿಡಿಸಿದರು. ಅಂತಿಮವಾಗಿ 20 ಓವರ್‍ ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 176 ರನ್ ಪೇರಿಸಿತು. ಇದನ್ನೂ ಓದಿ: ಐಪಿಎಲ್‍ನ ನೂತನ ತಂಡ ಅಹಮದಾಬಾದ್‍ನ ಕೋಚ್ ಆಗಲಿದ್ದಾರೆ ರವಿಶಾಸ್ತ್ರಿ?

    ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 2 ವಿಕೆಟ್ ಕಿತ್ತು ಮಿಂಚಿದರೆ, ಪ್ಯಾಟ್ ಕಮ್ಮಿನ್ಸ್ ಮತ್ತು ಆ್ಯಡಂ ಜಂಪಾ ತಲಾ 1 ವಿಕೆಟ್ ಪಡೆದರು.