Tag: australia

  • ಉದ್ದನೆ ಕೂದಲಿನ, ತುಟಿಗೆ ಬಣ್ಣ ಹಚ್ಚಿ ದೈತ ದಾಂಡಿಗನಾಗಿ ಗಮನಸೆಳೆದ ಸೈಮಂಡ್ಸ್ ಇನ್ನು ನೆನಪು ಮಾತ್ರ

    ಉದ್ದನೆ ಕೂದಲಿನ, ತುಟಿಗೆ ಬಣ್ಣ ಹಚ್ಚಿ ದೈತ ದಾಂಡಿಗನಾಗಿ ಗಮನಸೆಳೆದ ಸೈಮಂಡ್ಸ್ ಇನ್ನು ನೆನಪು ಮಾತ್ರ

    ಸಿಡ್ನಿ: ಆಸ್ಟ್ರೇಲಿಯಾ ತಂಡದಲ್ಲಿ ದೈತ ಆಲ್‍ರೌಂಡರ್ ಆಗಿ ವಿಶ್ವದ ಗಮನಸೆಳೆದಿದ್ದ ಆಂಡ್ರ್ಯೂ ಸೈಮಂಡ್ಸ್ ಇಂದು ಕಾರು ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರ ಸಾವಿಗೆ ಮಾಜಿ ಆಟಗಾರರಾದ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್ ಸಹಿತ ಹಲವು ಮಾಜಿ ಹಾಗೂ ಹಾಲಿ ಆಟಗಾರರು ಕಂಬನಿ ಮಿಡಿದಿದ್ದಾರೆ.

    ಹೌದು 1988 ರಿಂದ 2009ರ ವರೆಗೆ ಆಸ್ಟ್ರೇಲಿಯಾ ತಂಡದಲ್ಲಿ ತನ್ನ ವಿಶಿಷ್ಟ ಕೂದಲಿನ ವಿನ್ಯಾಸ ಮತ್ತು ತುಟಿಗೆ ಬಿಳಿ ಬಣ್ಣದೊಂದಿಗೆ ಮೈದಾನದಲ್ಲಿ ಗೋಚರಿಸುತ್ತಿದ್ದ ಸೈಮಂಡ್ಸ್, ಇಂದು ಕಾರು ಅಪಘಾತದಲ್ಲಿ ಮರಣ ಹೊಂದಿ ವಿಶ್ವ ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳಿದ್ದಾರೆ. ಇದನ್ನೂ ಓದಿ: ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ – ಭಾರತ ಚಾಂಪಿಯನ್‌, ಇತಿಹಾಸ ಸೃಷ್ಟಿ

    ಸೈಮಂಡ್ಸ್ ಕ್ರಿಕೆಟ್ ಮೈದಾನದಲ್ಲಿ ಹೋರಾಟಗಾರ ಆಸ್ಟ್ರೇಲಿಯಾ ತಂಡಕ್ಕೆ ಮಧ್ಯಮಕ್ರಮಾಂಕದಲ್ಲಿ ಬಲಿಷ್ಠ ದಾಂಡಿಗನಾಗಿ ಎದುರಾಳಿ ಆಟಗಾರರಿಗೆ ಸಿಂಹಸ್ವಪ್ನರಾಗಿದ್ದರು. ಸೈಮಂಡ್ಸ್ ಆಟದೊಂದಿಗೆ ಹಲವು ವಿವಾದಗಳನ್ನು ತನ್ನ ಮೈಮೇಲೆ ಎಳೆದುಕೊಂಡು ಹೆಸರುವಾಸಿಯಾದವರು. ಇದನ್ನೂ ಓದಿ:  ಆಸ್ಟ್ರೇಲಿಯಾ ಮಾಜಿ ಆಟಗಾರ ಸೈಮಂಡ್ಸ್‌ ರಸ್ತೆ ಅಪಘಾತದಲ್ಲಿ ಸಾವು

    2009ರಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿ ವೇಳೆ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಸೈಮಂಡ್ಸ್ ನಡುವಿನ ಮಂಕಿಗೇಟ್ ಪ್ರಕರಣ ಬಾರಿ ಚರ್ಚೆಗೆ ಕಾರಣವಾಗಿತ್ತು. ಹರ್ಭಜನ್ ಪಂದ್ಯದ ವೇಳೆ ಸೈಮಂಡ್ಸ್‌ಗೆ ಮಂಕಿ ಎಂದಿದ್ದರು ಎಂದು ಆಸ್ಟ್ರೇಲಿಯಾ ತಂಡ ದೂರಿತ್ತು. ಇದು ಜನಾಂಗೀಯ ನಿಂದನೆಗೆ ಗುರಿಯಾಗಿತ್ತು. ಆ ಬಳಿಕ ಐಪಿಎಲ್‍ನಲ್ಲಿ ಇವರಿಬ್ಬರೂ ಕೂಡ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಜೊತೆಯಾಗಿ ಆಡಿ ಉತ್ತಮ ಸಂಬಂಧವನ್ನು ಹೊಂದಿದ್ದರು. ಇದನ್ನೂ ಓದಿ: IPLಗೆ ಗುಡ್ ಬೈ ಹೇಳಿದ CSK ಸ್ಟಾರ್ ಅಂಬಾಟಿ ರಾಯುಡು?

    ಸೈಮಂಡ್ಸ್ ಆಸ್ಟ್ರೇಲಿಯಾ ತಂಡ 2 ಬಾರಿ ವಿಶ್ವಕಪ್ ಗೆದ್ದಾಗ ತಂಡದಲ್ಲಿದ್ದ ಆಲ್‍ರೌಂಡರ್. ಆಸ್ಟ್ರೇಲಿಯಾ ತಂಡದಲ್ಲಿ ಖಾಯಂ ಸದಸ್ಯನಾಗಿದ್ದ ಸೈಮಂಡ್ಸ್ ಮೂರು ಮಾದರಿ ಕ್ರಿಕೆಟ್‍ಗೂ ಹೊಗ್ಗಿಕೊಂಡ ಲೆಜೆಂಡ್ ಆಟಗಾರರಾಗಿದ್ದರು. ಆಸ್ಟ್ರೇಲಿಯಾ ಪರ 26 ಟೆಸ್ಟ್ ಪಂದ್ಯಗಳಿಂದ 2 ಶತಕ, 10 ಅರ್ಧಶತಕ ಸಹಿತ 1,462 ರನ್, 24 ವಿಕೆಟ್, ಏಕದಿನ ಕ್ರಿಕೆಟ್‍ನಲ್ಲಿ 198 ಪಂದ್ಯಗಳಿಂದ 6 ಶತಕ, 30 ಅರ್ಧಶತಕ ಸಹಿತ 5,088 ರನ್ 133 ವಿಕೆಟ್ ಮತ್ತು ಟಿ20 ಕ್ರಿಕೆಟ್‍ನಲ್ಲಿ 14 ಪಂದ್ಯದಲ್ಲಿ 2 ಅರ್ಧಶತಕ ಸಹಿತ 337 ರನ್, 8 ವಿಕೆಟ್ ಪಡೆದು ಮಿಂಚಿದ್ದರು.

    ಐಪಿಎಲ್‍ನಲ್ಲಿ ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದರು. 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ಚಾಂಪಿಯನ್ ಆದಾಗ ತಂಡದಲ್ಲಿ ಸೈಮಂಡ್ಸ್ ಇದ್ದರು.

  • ಆಸ್ಟ್ರೇಲಿಯಾ ಮಾಜಿ ಆಟಗಾರ ಸೈಮಂಡ್ಸ್‌ ರಸ್ತೆ ಅಪಘಾತದಲ್ಲಿ ಸಾವು

    ಆಸ್ಟ್ರೇಲಿಯಾ ಮಾಜಿ ಆಟಗಾರ ಸೈಮಂಡ್ಸ್‌ ರಸ್ತೆ ಅಪಘಾತದಲ್ಲಿ ಸಾವು

    ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಆಲ್‌ ರೌಂಡರ್‌, ಸ್ಫೋಟಕ ಬ್ಯಾಟ್ಸ್‌ಮನ್‌ ಆಂಡ್ರ್ಯೂ ಸೈಮಂಡ್ಸ್‌(46) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

    ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಆಲಿಸ್ ನದಿ ಸೇತುವೆ ಬಳಿ ಇರುವ ಹರ್ವೆ ರೇಂಜ್ ರಸ್ತೆಯಲ್ಲಿ ನಡೆದ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ.

    ಮಾರ್ಚ್‌ನಲ್ಲಿ ಶೇನ್ ವಾರ್ನ್ ಮತ್ತು ರಾಡ್ ಮಾರ್ಷ್ ಅವರ ದುರಂತ ಸಾವಿನ ನಂತರ ಈ ವರ್ಷ ಹಠಾತ್‌ ನಿಧನರಾದ ಮೂರನೇ ಆಸ್ಟ್ರೇಲಿಯಾದ ಕ್ರಿಕೆಟರ್‌ ಆಗಿದ್ದಾರೆ. ಇದನ್ನೂ ಓದಿ: IPLಗೆ ಗುಡ್ ಬೈ ಹೇಳಿದ CSK ಸ್ಟಾರ್ ಅಂಬಾಟಿ ರಾಯುಡು?

    ಶನಿವಾರ ರಾತ್ರಿ 11 ಗಂಟೆಯ ವೇಳೆ ಸೇತುವೆ ಬಳಿ ಸಂಚರಿಸುತ್ತಿದ್ದಾಗ ಸೈಮಂಡ್ಸ್‌ ಕಾರು ರಸ್ತೆಯಿಂದ ಉರುಳಿದೆ ಎಂದು ಕ್ವೀನ್ಸ್‌ಲ್ಯಾಂಡ್‌ ಪೊಲೀಸರು ತಿಳಿಸಿದ್ದಾರೆ. ದುರಂತ ಸಂಭವಿಸುವ ಸಮಯದಲ್ಲಿ ಸೈಮಂಡ್ಸ್‌ ಒಬ್ಬರೇ ಕಾರಿನಲ್ಲಿ ಸಂಚರಿಸುತ್ತಿದ್ದರು.

    1999 ಮತ್ತು 2007 ರ ಅವಧಿಯಲ್ಲಿ ಸೈಮಂಡ್ಸ್‌ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು. 198 ಏಕದಿನ, 26 ಟೆಸ್ಟ್‌, 14 ಟಿ 20 ಪಂದ್ಯಗಳನ್ನು ಸೈಮಂಡ್ಸ್‌ ಆಡಿದ್ದರು. ಐಪಿಎಲ್‌ನಲ್ಲಿ ಡೆಕ್ಕನ್‌ ಚಾರ್ಜರ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡದ ಪರ ಆಡಿದ್ದರು.

  • T20 ವಿಶ್ವಕಪ್‌ಗೂ ಮುನ್ನ ಭಾರತ, ಆಸ್ಟ್ರೇಲಿಯಾ T20 ಸರಣಿ

    T20 ವಿಶ್ವಕಪ್‌ಗೂ ಮುನ್ನ ಭಾರತ, ಆಸ್ಟ್ರೇಲಿಯಾ T20 ಸರಣಿ

    ಮುಂಬೈ: ಅಕ್ಟೋಬರ್-ನವೆಂಬರ್‌ನಲ್ಲಿ ನಿಗದಿಯಾಗಿರುವ 8ನೇ ಆವೃತ್ತಿಯ ಟಿ20 ವಿಶ್ವಕಪ್‌ಗೂ ಮುನ್ನ ತವರಿನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 3 ಟಿ20 ಪಂದ್ಯಗಳ ಸರಣಿ ಆಡಲಿದೆ. ಇದರೊಂದಿಗೆ 2023ರಲ್ಲಿ ಆಸೀಸ್ ತಂಡ ಮತ್ತೊಮ್ಮೆ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಫೆಬ್ರವರಿ-ಮಾರ್ಚ್‌ನಲ್ಲಿಯೂ 4 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ ಎಂದು ವರದಿಯಾಗಿದೆ.

    eng ind t20 virat kohli rohit sharma

    ಸದ್ಯ ಆಸ್ಟ್ರೇಲಿಯಾದ ಮುಂದಿನ ಕ್ರಿಕೆಟ್ ಸರಣಿಗಳ ವೇಳಾಪಟ್ಟಿ ಪ್ರಕಾರ, ಆಸೀಸ್ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, 3 ಟಿ20 ಪಂದ್ಯಗಳನ್ನಾಡಲಿದೆ. ಬಳಿಕ ಕೆಲ ದಿನಗಳಲ್ಲೇ ಟಿ20 ವಿಶ್ವಕಪ್ ನಡೆಯಲಿರುವುದರಿಂದ ಉಭಯ ತಂಡಗಳಿಗೂ ಇದು ಮಹತ್ವದ ಸರಣಿ ಎನಿಸಿಕೊಂಡಿದೆ. ಇದನ್ನೂ ಓದಿ: ‘ಸಮ’ಬಲಶಾಲಿಗಳ ಹೋರಾಟದಲ್ಲಿ 62 ರನ್‌ಗಳ ಜಯ – ಪ್ಲೇ ಆಫ್‌ಗೆ ಗುಜರಾತ್ ಟೈಟನ್ಸ್ ಭರ್ಜರಿ ಎಂಟ್ರಿ

    ಐಪಿಎಲ್ ಬಳಿಕ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಜೂ.9ರಿಂದ 19ರ ವರೆಗೆ ತವರಿನಲ್ಲಿ 5 ಪಂದ್ಯಗಳ ಟಿ20 ಸರಣಿ ಆಡಲಿದ್ದು, ನಂತರ 2 ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಮತ್ತು 3 ಟಿ20, 3 ಏಕದಿನ ಪಂದ್ಯಗಳನ್ನು ಆಡಬೇಕಿದೆ.

    T20 IND

    2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಆಸ್ಟ್ರೇಲಿಯಾ ಈ ಬಾರಿಯ ವಿಶ್ವಕಪ್ ಟೂರ್ನಿಯ ಆತಿಥ್ಯವನ್ನು ವಹಿಸಿಕೊಳ್ಳಲಿದೆ. ಮುಂದಿನ ತಿಂಗಳ ಜೂನ್-ಜುಲೈನಿಂದಲೇ ವಿವಿಧ ದೇಶದ ತಂಡಗಳೊಂದಿಗೆ ಟಿ20, ಟೆಸ್ಟ್ ಹಾಗೂ ಏಕದಿನ ಇನ್ನಿಂಗ್ಸ್ ಪಂದ್ಯಗಳು ಪ್ರಾರಂಭವಾಗಲಿದ್ದು, 2023ರ ಅಕ್ಟೋಬರ್ – ನವಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನೊಂದಿಗೆ ಈ ಆಸ್ಟ್ರೇಲಿಯಾದ ಸರಣಿ ಅಂತ್ಯಗೊಳ್ಳಲಿದೆ. ಇದನ್ನೂ ಓದಿ: ಝೀರೋ.. ಝೀರೋ.. ಝೀರೋ – ಶೂನ್ಯ ಸುತ್ತಿದ ಕೊಹ್ಲಿಗೆ ರಾಕಿಭಾಯ್ ಸ್ಟೈಲ್‌ನಲ್ಲಿ ಟ್ರೋಲ್

    ಕಳೆದ ಬಾರಿಯ ಟೂರ್ನಿಯಿಂದ ಲೀಗ್ ಹಂತದಲ್ಲಿಯೇ ಹೊರಬಿದ್ದಿದ್ದ ಟೀಂ ಇಂಡಿಯಾ ಈ ಬಾರಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಣಕ್ಕಿಳಿದು ಟ್ರೋಫಿ ಗೆಲ್ಲುವತ್ತ ಚಿತ್ತ ಹರಿಸಿದೆ.

    T20

    2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಭಾರತ ಆಸ್ಟ್ರೇಲಿಯಾವನ್ನು 2 – 1 ಅಂತರದಲ್ಲಿ ಸೋಲಿಸಿ ಸರಣಿಯನ್ನು ವಶಪಡಿಸಿಕೊಂಡಿತ್ತು. ಇಂಡಿಯಾ-ಆಸಿಸ್ ನಡುವೆ ಇದುವರೆಗೆ ಒಟ್ಟು 23 ಟಿ20 ಪಂದ್ಯಗಳು ನಡೆದಿದ್ದು ಈ ಪೈಕಿ ಭಾರತ 13 ಪಂದ್ಯಗಳಲ್ಲಿ ಗೆದ್ದಿದ್ದರೆ, ಆಸ್ಟ್ರೇಲಿಯಾ 9 ಪಂದ್ಯಗಳಲ್ಲಿ ಗೆದ್ದಿದೆ ಉಳಿದ ಒಂದು ಪಂದ್ಯಗಳಲ್ಲಿ ಫಲಿತಾಂಶ ಕಾಣದೇ ಅಂತ್ಯಗೊಂಡಿದೆ.

  • ನೆದರಲ್ಯಾಂಡ್ಸ್ ಕ್ರಿಕೆಟ್ ತಂಡದ ಕೋಚ್ ರಯಾನ್ ಕ್ಯಾಂಪ್ಬೆಲ್‍ಗೆ ಹೃದಯಾಘಾತ

    ನೆದರಲ್ಯಾಂಡ್ಸ್ ಕ್ರಿಕೆಟ್ ತಂಡದ ಕೋಚ್ ರಯಾನ್ ಕ್ಯಾಂಪ್ಬೆಲ್‍ಗೆ ಹೃದಯಾಘಾತ

    ಆಮ್ಸ್ಟಡ್ರ್ಯಾಮ್: ನೆದರಲ್ಯಾಂಡ್ ಕ್ರಿಕೆಟ್ ತಂಡದ ಕೋಚ್ ಮತ್ತು ಆಸ್ಟ್ರೇಲಿಯಾದ ಮಾಜಿ ಅಂತಾರಾಷ್ಟ್ರೀಯ ಆಟಗಾರ ರಯಾನ್ ಕ್ಯಾಂಪ್ಬೆಲ್ ಅವರು ಹೃದಯಾಘಾತದಿಂದ ಬಳಲುತ್ತಿದ್ದು, ಸ್ಟೋಕ್ ಹೊಡೆದು ತೀವ್ರ ನಿಗಾ ಘಟಕದಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

    ಮಾಹಿತಿ ಪ್ರಕಾರ ಮಂಗಳವಾರ ಬೆಳಗ್ಗೆ ಕ್ಯಾಂಪ್‍ಬೆಲ್ ಅವರು ತಮ್ಮ ಕುಟುಂಬದೊಂದಿಗೆ ಆಟದ ಮೈದಾನದಲ್ಲಿದ್ದಾಗ ಇದ್ದಕ್ಕಿದಂತೆ ಕುಸಿದುಬಿದ್ದಿದ್ದಾರೆ. ಈ ವೇಳೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಇದನ್ನೂ ಓದಿ: ಐಪಿಎಲ್ 2022: ದೆಹಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರ ಮಿಚೆಲ್ ಮಾರ್ಷ್‍ಗೆ ಕೋವಿಡ್ ದೃಢ

     

    View this post on Instagram

     

    A post shared by Ryan Campbell (@cambo19)

    ಕ್ಯಾಂಪ್‍ಬೆಲ್ ಅವರು ಇತ್ತೀಚೆಗೆ ರಾಷ್ಟ್ರೀಯ ತಂಡದ ಮೂರು ಏಕದಿನ ಮತ್ತು ಒಂದು ಟಿ-20 ಪ್ರವಾಸಕ್ಕಾಗಿ ನ್ಯೂಜಿಲೆಂಡ್‍ಗೆ ಭೇಟಿ ನೀಡಿದ್ದರು. ನೆದಲ್ಯಾರ್ಂಡ್ಸ್ ತಂಡವು ಏಕದಿನ ಸರಣಿಯನ್ನು 0-3 ಅಂತರದಲ್ಲಿ ಕಳೆದುಕೊಂಡಿತ್ತು. ಈ ವೇಳೆ ಅವರು ಪರ್ತ್‍ನಲ್ಲಿರುವ ತಮ್ಮ ಮನೆಗೆ ಸ್ನೇಹಿತರು ಮತ್ತು ಕುಟುಂಬವನ್ನು ಭೇಟಿ ಮಾಡಲು ಏಳು ದಿನಗಳ ಸಣ್ಣ ವಿರಾಮವನ್ನು ತೆಗೆದುಕೊಂಡಿದ್ದರು. ಪರ್ತ್‍ಗೆ ಭೇಟಿ ನೀಡಿದಾಗ ಅವರು ಪಿಟೀಲು ವಾದಕರಾಗಿ ಫಿಟ್ ಆಗಿಯೇ ಇದ್ದರು ಎಂದು ಅವರ ಆಪ್ತ ಸ್ನೇಹಿತ ಮತ್ತು ಪತ್ರಕರ್ತ ಗರೆಥ್ ಪಾರ್ಕರ್ ವರದಿ ಮಾಡಿದ್ದಾರೆ. ಇದನ್ನೂ ಓದಿ: ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಗಂಡುಮಗು ಸಾವು

     

    View this post on Instagram

     

    A post shared by Ryan Campbell (@cambo19)

    ಬಲಗೈ ಬ್ಯಾಟರ್-ಕೀಪರ್ ಆದ ಅವರು 2002ರಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡು ಪಂದ್ಯಗಳಿಗೆ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದರು. ಕ್ಯಾಂಪ್‍ಬೆಲ್ 2016 ರಲ್ಲಿ ವಿಶ್ವ ಟಿ-20ಯಲ್ಲಿ ಆಸ್ಟ್ರೇಲಿಯಾ ಸೇರಿಕೊಳ್ಳುವ ಮೊದಲು ಹಾಂಗ್ ಕಾಂಗ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು ಅಂತರಾಷ್ಟ್ರೀಯ ಎರಡು ಪಂದ್ಯಗಳನ್ನು ಆಡಿದ ಬಳಿಕ ನಿವೃತ್ತಿ ಘೋಷಿಸಿದ್ದರು. ನಂತರ 2017ರಲ್ಲಿ ನೆದಲ್ಯಾರ್ಂಡ್ಸ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು.

  • ಮೋದಿ ತವರಿಂದ ಐಟಂ ತರಿಸಿಕೊಂಡು ಖಿಚಡಿ ತಯಾರಿಸಿದ ಆಸ್ಟ್ರೇಲಿಯಾ ಪ್ರಧಾನಿ

    ಮೋದಿ ತವರಿಂದ ಐಟಂ ತರಿಸಿಕೊಂಡು ಖಿಚಡಿ ತಯಾರಿಸಿದ ಆಸ್ಟ್ರೇಲಿಯಾ ಪ್ರಧಾನಿ

    ಸಿಡ್ನಿ: ಭಾರತದ ಜೊತೆ ನೂತನ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿದ್ದನ್ನು ಸಂಭ್ರಮಾಚರಿಸಲು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಖಿಚಡಿಯನ್ನು ತಯಾರಿಸಿ ಇನ್ಸ್‌ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಇನ್ಸ್‌ಸ್ಟಾಗ್ರಾಮ್‍ನಲ್ಲಿ ಏನಿದೆ?: ಭಾರತದೊಂದಿಗಿನ ನಮ್ಮ ಹೊಸ ವ್ಯಾಪಾರ ಒಪ್ಪಂದವನ್ನು ಆಚರಿಸಲು ನಾನು ಇಂದು ರಾತ್ರಿ ಖಿಚಡಿಯನ್ನು ಮಾಡಲು ಆಯ್ಕೆ ಮಾಡಿದ್ದಾನೆ. ಅದಕ್ಕೆ ಬೇಕಾದ ಸಾಮಾಗ್ರಿಗಳೆಲ್ಲವೂ ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟೂರು ಗುಜರಾತ್‍ನಿಂದ ಬಂದಿದೆ ಎಂದು ತಿಳಿಸಿದ್ದಾರೆ.

     

    View this post on Instagram

     

    A post shared by Scott Morrison (@scottmorrisonmp)

    ಪ್ರಧಾನಿ ಮೋದಿಗೆ ಖಿಚಡಿ ಎಂದರೆ ತುಂಬಾ ಇಷ್ಟ. ಮೋದಿ ಅವರು ಹಲವಾರು ಸಂದರ್ಶನಗಳಲ್ಲಿ ಅಕ್ಕಿ, ಉದ್ದಿನಬೇಳೆ, ತರಕಾರಿಗಳು ಮತ್ತು ತುಪ್ಪದಿಂದ ತಯಾರಿಸಿದ ಭಾರತೀಯ ಸಾಂಪ್ರದಾಯಿಕ ಖಾದ್ಯ ಖಿಚಡಿಯೆಂದರೆ ತಮಗಿಷ್ಟ ಎಂದು ಹೇಳಿದ್ದರು. ಜೊತೆಗೆ ಅದನ್ನು ತಯಾರಿಸಲು ಇಷ್ಟಪಡುತ್ತೇನೆ ಎಂದು ಹಲವು ಸಂದರ್ಶನದಲ್ಲಿ ಹೇಳಿದ್ದರು. ಇದನ್ನೂ ಓದಿ: ಬೊಮ್ಮಾಯಿಯವ್ರೇ ನೀವು ಹಸುವಿನ ವೇಷ ತೊಟ್ಟ ಗೋಮುಖವ್ಯಾಘ್ರ ಆಗೋದು ಬೇಡ: ದಿನೇಶ್ ಗುಂಡೂರಾವ್

    ಏಪ್ರಿಲ್ 2ರಂದು ವರ್ಚುವಲ್ ಸಮಾರಂಭದಲ್ಲಿ ಆಸ್ಟ್ರೇಲಿಯಾವು ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿತು. ಇದರನ್ವಯ ಶೇ. 85 ಆಸ್ಟ್ರೇಲಿಯನ್ ಸರಕುಗಳನ್ನು ಸುಂಕಗಳಿಂದ ಮತ್ತು ಶೇ. 95 ಭಾರತೀಯ ಉತ್ಪನ್ನಗಳಿಂದ ವಿನಾಯಿತಿ ನೀಡುತ್ತದೆ. ಎರಡು ದೇಶಗಳ ನಡುವಿನ ರಫ್ತುಗಳನ್ನು ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಿಸುವ ಸಲುವಾಗಿ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಆಸ್ಟ್ರೇಲಿಯಾದ ಅತಿದೊಡ್ಡ ಮೂಲವಾಗಿರುವ ಭಾರತವು ಒಪ್ಪಂದದಿಂದ ಹೆಚ್ಚು ಪ್ರಯೋಜನ ಪಡೆಯುತ್ತದೆ. ಇದನ್ನೂ ಓದಿ: ನಾವು ಹೋಟೆಲ್‍ಗೆ ಹೋದ್ರೆ ಮೋದಿ, ಶಾ ಒಟ್ಟಿಗೆ ಬರುತ್ತಾರೆ ಅವರ ಬಿಲ್ ನಾವೇ ಕಟ್ಟಬೇಕು: ಶ್ರೀನಿವಾಸ್

  • ಜಪಾನ್ ಲಸಿಕೆ ಪಟ್ಟಿಯಲ್ಲಿ ಕೋವ್ಯಾಕ್ಸಿನ್‌ಗೆ ಮಾನ್ಯತೆ

    ಜಪಾನ್ ಲಸಿಕೆ ಪಟ್ಟಿಯಲ್ಲಿ ಕೋವ್ಯಾಕ್ಸಿನ್‌ಗೆ ಮಾನ್ಯತೆ

    ಹೊಸದಿಲ್ಲಿ: ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯನ್ನು ಜಪಾನ್ ಮಾನ್ಯತೆ ಪಡೆದ ಲಸಿಕೆಗಳ ಪಟ್ಟಿಯಲ್ಲಿ ಸೇರಿಸಿದೆ. ಇದು ಉಭಯ ದೇಶಗಳ ನಡುವಿನ ಪ್ರಯಾಣವನ್ನು ಸುಲಭಗೊಳಿಸುವ ಉದ್ದೇಶ ಹೊಂದಿದೆ.

    ಜಪಾನ್ ಸರ್ಕಾರವು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಅನ್ನು ಮಾನ್ಯತೆ ಪಡೆದ ಲಸಿಕೆಗಳ ಪಟ್ಟಿಯಲ್ಲಿ ಸೇರಿಸಿದ್ದು, ಏಪ್ರಿಲ್ 10ರಿಂದ ಭಾರತದಿಂದ ಜಪಾನ್‌ಗೆ ಪ್ರಯಾಣಿಸಲು ಮತ್ತಷ್ಟು ಅನುಕೂಲವಾಗುತ್ತದೆ ಎಂದು ಭಾರತ್ ಬಯೋಟೆಕ್ ಟ್ವೀಟ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಕೋವ್ಯಾಕ್ಸಿನ್ ಲಸಿಕೆ ಪೂರೈಕೆ ಸ್ಥಗಿತಗೊಳಿಸಿದ WHO

    ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳೂ ಪ್ರಯಾಣಕ್ಕೆ ಅನುಕೂಲವಾಗುವಂತೆ ಕೋವ್ಯಾಕ್ಸಿನ್ ಗುರುತಿಸಿವೆ ಎನ್ನಲಾಗಿದೆ.

  • ವಿಶ್ವಕಪ್‍ನಲ್ಲಿ ದಾಖಲೆ ಬರೆದ ಮಿಚೆಲ್ ಸ್ಟಾರ್ಕ್, ಅಲಿಸ್ಸಾ ಹೀಲಿ ದಂಪತಿ

    ವಿಶ್ವಕಪ್‍ನಲ್ಲಿ ದಾಖಲೆ ಬರೆದ ಮಿಚೆಲ್ ಸ್ಟಾರ್ಕ್, ಅಲಿಸ್ಸಾ ಹೀಲಿ ದಂಪತಿ

    ಸಿಡ್ನಿ: ಆಸ್ಟ್ರೇಲಿಯಾ ಪುರುಷರ ಕ್ರಿಕೆಟ್ ತಂಡದಲ್ಲಿ ಮಿಚೆಲ್ ಸ್ಟಾರ್ಕ್ ಮಿಂಚುಹರಿಸಿದರೆ, ಮಹಿಳಾ ವಿಭಾಗದಲ್ಲಿ ಅಲಿಸ್ಸಾ ಹೀಲಿ ಸಾಧನೆಯ ಶಿಖರವನ್ನೇರಿ ಈ ದಂಪತಿಗಳಿಬ್ಬರು ನೂತನ ದಾಖಲೆಯೊಂದನ್ನು ಬರೆದಿದ್ದಾರೆ.

    ಹೌದು ದಂಪತಿಗಳಿಬ್ಬರೂ ಕೂಡ ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ಶ್ರೇಷ್ಠ ಕ್ರೀಡಾಪಟುಗಳಾಗಿ ತಂಡಕ್ಕೆ ಕೊಡುಗೆ ನೀಡಿದ್ದಾರೆ. ಈ ಹಿಂದೆ 2019ರ ಪುರುಷರ ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಮಿಚೆಲ್ ಸ್ಟಾರ್ಕ್ ಬೌಲಿಂಗ್ ಮೂಲಕ ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿ ಪ್ರಶಸ್ತಿ ಗೆಲ್ಲಲು ಸಹಕಾರಿಯಾಗಿದ್ದರು. ಇದೀಗ ಮಹಿಳಾ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ಮಹಿಳಾ ತಂಡದಲ್ಲಿ ಅಲಿಸ್ಸಾ ಹೀಲಿ ಭರ್ಜರಿ ಬ್ಯಾಟಿಂಗ್ ಮೂಲಕ ತಂಡ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿ ಗಮನಸೆಳೆದಿದ್ದಾರೆ. ಇದನ್ನೂ ಓದಿ: ದಾಖಲೆಯ 7ನೇ ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡ ಆಸೀಸ್ ಮಹಿಳೆಯರು

    2019ರ ಪುರುಷರ ವಿಶ್ವಕಪ್ ಟೂರ್ನಿಯ 10 ಪಂದ್ಯಗಳಲ್ಲಿ ಒಟ್ಟು 27 ವಿಕೆಟ್ ಕಿತ್ತು ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇದೀಗ 2022ರ ಮಹಿಳಾ ವಿಶ್ವಕಪ್‍ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಅಲಿಸ್ಸಾ ಹೀಲಿ 2 ಶತಕ ಮತ್ತು 2 ಅರ್ಧಶತಕ ಸಹಿತ 509 ರನ್ ಸಿಡಿಸಿ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ್ತಿಯಾಗಿ ಮೂಡಿಬಂದಿದ್ದಾರೆ. ಈ ಮೂಲಕ ದಂಪತಿ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ಧೋನಿ ಸಿಕ್ಸರ್ ಬಾರಿಸಿದ ಬ್ಯಾಟ್

    ಆಸ್ಟ್ರೇಲಿಯಾ ತಂಡಕ್ಕೆ ದಂಪತಿಗಳಿಬ್ಬರೂ ಕೂಡ ಹಲವು ವರ್ಷಗಳಿಂದ ಶ್ರೇಷ್ಟಮಟ್ಟದ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ. ಇವರಿಬ್ಬರ ಆಟ ಹೀಗೆ ಮುಂದುವರಿಯಲಿ ಇನ್ನಷ್ಟು ಉತ್ತಮ ಪ್ರದರ್ಶನದ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ನೆರವಾಗಲಿ ಎನ್ನುವುದು ಅಭಿಮಾನಿಗಳ ಆಶಯವಾಗಿದೆ.

  • ದಾಖಲೆಯ 7ನೇ ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡ ಆಸೀಸ್ ಮಹಿಳೆಯರು

    ದಾಖಲೆಯ 7ನೇ ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡ ಆಸೀಸ್ ಮಹಿಳೆಯರು

    ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್‍ನಲ್ಲಿ ನಡೆಯುತ್ತಿದ್ದ ಮಹಿಳಾ ವಿಶ್ವಕಪ್‍ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 71 ರನ್‍ಗಳ ಅಂತರದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿದೆ. ಈ ಮೂಲಕ ದಾಖಲೆಯ 7ನೇ ಬಾರಿ ವಿಶ್ವಕಪ್‍ನ್ನು ಎತ್ತಿಹಿಡಿದಿದೆ.

    ಆಸ್ಟ್ರೇಲಿಯಾ ನೀಡಿದ 357 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಮಧ್ಯಮಕ್ರಮಾಂಕದ ಬ್ಯಾಟರ್ ನ್ಯಾಟ್ ಸಿವರ್ ಅಜೇಯ 148 ರನ್ (121 ಎಸೆತ, 15 ಬೌಂಡರಿ, 1 ಸಿಕ್ಸ್) ಹೊರತಾಗಿಯು ಇತರ ಬ್ಯಾಟರ್‌ಗಳ ವೈಫಲ್ಯದಿಂದಾಗಿ 43.4 ಓವರ್‌ಗಳಲ್ಲಿ 285 ರನ್‍ಗಳಿಗೆ ಆಲೌಟ್ ಆಯಿತು. ಈ ಮೂಲಕ ಆಸ್ಟ್ರೇಲಿಯಾ ತಂಡ 71 ರನ್‍ಗಳ ಅಂತರದ ಜಯ ಸಾಧಿಸಿತು. ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ಧೋನಿ ಸಿಕ್ಸರ್ ಬಾರಿಸಿದ ಬ್ಯಾಟ್

    ಈ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮ್ಯಾನ್‌ಗಳು ಭರ್ಜರಿ ಪ್ರದರ್ಶನ ನೀಡಿ ಫೈನಲ್ ಫೈಟ್ ಹೆಚ್ಚಿಸಿದರು. ರಾಚೆಲ್ ಹೇನ್ಸ್ 68 ರನ್ (93 ಎಸೆತ,7 ಬೌಂಡರಿ) ಮತ್ತು ಬೆತ್ ಮೂನಿ 62 ರನ್ (47 ಎಸೆತ, 8 ಬೌಂಡರಿ) ಸಿಡಿಸಿ ಮಿಂಚಿದರು. ಇವರಿಬ್ಬರಿಗಿಂತಲೂ ಬಿರುಸಿನ ಬ್ಯಾಟಿಂಗ್‍ಗೆ ಮುಂದಾದ ಅಲಿಸ್ಸಾ ಹೀಲಿ 170 ರನ್ (138 ಎಸೆತ, 26 ಬೌಂಡರಿ) ಚಚ್ಚಿ ಆಸ್ಟ್ರೇಲಿಯಾ ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ 50 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 356 ರನ್ ಪೇರಿಸಿತು. ಇದನ್ನೂ ಓದಿ: ಕ್ಯಾಮೆರಾಮ್ಯಾನ್‌ಗೆ ಬಡಿದ ತಿಲಕ್ ವರ್ಮಾರ ಬಿಗ್ ಹಿಟ್

    ಈ ಹಿಂದಿನ ಮಹಿಳಾ ವಿಶ್ವಕಪ್ ಇತಿಹಾಸವನ್ನು ಗಮನಿಸಿದಾಗ ಆಸ್ಟ್ರೇಲಿಯಾ ವಿಶ್ವಕಪ್‍ನಲ್ಲಿ 7 ಬಾರಿ ಪ್ರಶಸ್ತಿ ಜಯಿಸಿ ಅತ್ಯಂತ ಯಶಸ್ವಿ ತಂಡವಾಗಿ ಗೋಚರಿಸಿದೆ. ಆ ಬಳಿಕ ಇಂಗ್ಲೆಂಡ್ 4 ಬಾರಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದೆ. ಇನ್ನೂ ಟೀಂ ಇಂಡಿಯಾ 2005 ಮತ್ತು 2017ರಲ್ಲಿ ಫೈನಲ್‍ನಲ್ಲಿ ಸೋತು ರನ್ನರ್ ಅಪ್ ಆಗಿ ತೃಪ್ತಿಪಟ್ಟಿದೆ.

     

  • ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ 29 ಪುರಾತನ ವಸ್ತುಗಳನ್ನು ಪರಿಶೀಲಿಸಿದ ಮೋದಿ

    ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ 29 ಪುರಾತನ ವಸ್ತುಗಳನ್ನು ಪರಿಶೀಲಿಸಿದ ಮೋದಿ

    ನವದೆಹಲಿ: ಆಸ್ಟ್ರೇಲಿಯಾದಿಂದ ಇಂದು ಭಾರತಕ್ಕೆ ಮರಳಿದ 9-10ನೇ ಶತಮಾನದ ಹಿಂದಿನ  29 ಪುರಾತನ ವಸ್ತುಗಳನ್ನು ಪ್ರಧಾನಿ ನರೇಂದ್ರ ಮೋದಿ ಪರಿಶೀಲನೆ ನಡೆಸಿದರು.

    ಐತಿಹಾಸಿಕ ಹಿನ್ನೆಲೆಯಿರುವ 29 ಪುರಾತನ ವಸ್ತುಗಳನ್ನು ಇಂದು ಆಸ್ಟ್ರೇಲಿಯಾ ಭಾರತಕ್ಕೆ ವಾಪಸ್ ಕಳುಹಿಸಿದೆ. ಈ ಪುರಾತನ ವಸ್ತುಗಳಲ್ಲಿ ಶಿವ ಹಾಗೂ ಅವನ ಶಿಷ್ಯರು, ಭಗವಾನ್ ವಿಷ್ಣು ಮತ್ತು ಅವನ ರೂಪಗಳ ಮೂರ್ತಿ ಜೈನ ಸಂಪ್ರದಾಯ, ಭಾವಚಿತ್ರಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ಹೊಂದಿವೆ.

    ಪುರಾತನ ವಸ್ತುಗಳು 9-10ನೇ ಶತಮಾನದ ಹಿಂದಿನಿದ್ದಾಗಿದೆ. ಆಸ್ಟ್ರೇಲಿಯಾದಿಂದ ಮರಳಿದ ಎಲ್ಲಾ ಪುರಾತನ ವಸ್ತುಗಳು ಮರಳು, ಅಮೃತಾಶಿಲೆ, ಕಂಚು, ಹಿತ್ತಾಳೆ, ಕಾಗದಗಳಿಂದ ರಚಿಸಲ್ಪಟ್ಟವಾಗಿದೆ. ಈ ಶಿಲ್ಪಗಳು ಮತ್ತು ವರ್ಣಚಿತ್ರಗಳು ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸುತ್ತವೆ.

    ಭಾರತವು ಇತರೆ ರಾಷ್ಟ್ರಗಳಿಂದಲೂ ಹಲವಾರು ಪ್ರಾಚೀನ ವಸ್ತುಗಳನ್ನು ಮರಳಿ ತಂದಿದೆ. ಕಳೆದ ಸಪ್ಟೆಂಬರ್‍ನಲ್ಲಿ ಪ್ರಧಾನಿ ಮೋದಿ ಅವರು ಯುಎಸ್‍ನಿಂದ 157 ಕಲಾಕೃತಿಗಳು ಹಾಗೂ ಪ್ರಾಚೀನ ವಸ್ತುಗಳನ್ನು ಮರಳಿ ತಂದಿದ್ದರು. ಇದನ್ನೂ ಓದಿ: 13 ಗಂಟೆಯಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಸ್ವಿಮ್ಮಿಂಗ್ ಮಾಡಿದ 13ರ ಬಾಲಕಿ

    ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾದ ಕೌಂಟರ್ ಸ್ಕಾಟ್ ಮಾರಿಸನ್ ಇಂದು ವರ್ಚುವಲ್ ಶೃಂಗಸಭೆಯನ್ನು ನಡೆಸಲಿದ್ದಾರೆ. ಇದನ್ನೂ ಓದಿ: ಯೋಗಿ ಪ್ರಮಾಣವಚನಕ್ಕೂ ಮುನ್ನವೇ ಹೊರಬಿತ್ತು ಸಚಿವ ಆಕಾಂಕ್ಷಿಗಳ ಪಟ್ಟಿ- ರೇಸ್‍ನಲ್ಲಿ ಯಾರಿದ್ದಾರೆ ನೋಡಿ

  • ಆಸ್ಟ್ರೇಲಿಯಾದಲ್ಲಿ ಸೆನ್ಸಾರ್ ಆದ ಕನ್ನಡದ ಮೊದಲ ಸಿನಿಮಾ ‘ಜೇಮ್ಸ್’

    ಆಸ್ಟ್ರೇಲಿಯಾದಲ್ಲಿ ಸೆನ್ಸಾರ್ ಆದ ಕನ್ನಡದ ಮೊದಲ ಸಿನಿಮಾ ‘ಜೇಮ್ಸ್’

    ನ್ನೆರಡು ದಿನಗಳು ಕಳೆದರೆ, ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲೇ 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಜಗತ್ತಿನ ವಿವಿಧ ದೇಶಗಳಲ್ಲೂ ಸಿನಿಮಾ ಪ್ರದರ್ಶನಕ್ಕೆ ಏರ್ಪಾಟು ಮಾಡಲಾಗಿದೆ. ಆಸ್ಟ್ರೇಲಿಯಾವೊಂದರಲ್ಲಿ 150ಕ್ಕೂ ಹೆಚ್ಚಿನ ಶೋಗಳು ನಡೆಯುತ್ತಿರುವುದು ಮತ್ತೊಂದು ವಿಶೇಷ.

    ಆಸ್ಟ್ರೇಲಿಯಾದಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿರುವುದರಿಂದ ಅಲ್ಲಿಯೂ ಸಿನಿಮಾವನ್ನು ಸೆನ್ಸಾರ್ ಮಾಡಲಾಗಿದೆ. ಹಾಗಾಗಿ ಆ ದೇಶದಲ್ಲಿ ಸೆನ್ಸಾರ್ ಆದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಜೇಮ್ಸ್ ಪಾತ್ರವಾಗಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ಯು.ಎಸ್ ನಲ್ಲೂ ಜೇಮ್ಸ್ ಸಿನಿಮಾವನ್ನು ಬರಮಾಡಿಕೊಳ್ಳಲು 25ಕ್ಕೂ ಹೆಚ್ಚು ಸೇಟ್ಸ್  ರೆಡಿಯಾಗಿವೆಯಂತೆ. ವಾರಂತ್ಯಕ್ಕೆ ಈ ಶೋಗಳ ಸಂಖ್ಯೆಯೂ ಹೆಚ್ಚಾಗಲಿ ಎಂದಿದ್ದಾರೆ ಚಿತ್ರದ ನಿರ್ದೇಶಕ ಚೇತನ್ ಕುಮಾರ್. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದಕ್ಕೆ ಭಾರೀ ರೆಸ್ಪಾನ್ಸ್ ಸಿಗುತ್ತಿದೆಯಂತೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!

     

    ಈಗಾಗಲೇ ಜೇಮ್ಸ್  ಸಿನಿಮಾಗಾಗಿ ರಾಜ್ಯದಲ್ಲಿ ಅನೇಕ ತಯಾರಿ ಮಾಡಿಕೊಳ್ಳಲಾಗಿದೆ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ವಾರದಿಂದಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಬಹುತೇಕ ಚಿತ್ರಮಂದಿರಗಳಲ್ಲಿ ಪುನೀತ್ ಅವರ ಕಟೌಟ್ ಹಾಕಲಾಗಿದೆ.