Tag: australia

  • ಟಿ20 ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದ ಮಿಚೆಲ್‌ ಸ್ಟಾರ್ಕ್

    ಟಿ20 ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದ ಮಿಚೆಲ್‌ ಸ್ಟಾರ್ಕ್

    ಕ್ಯಾನ್‌ಬೆರಾ: ಆಸ್ಟ್ರೇಲಿಯಾ ತಂಡದ ವೇಗಿ ಮಿಚೆಲ್‌ ಸ್ಟಾರ್ಕ್‌ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ದಿಢೀರ್‌ ವಿದಾಯ ಹೇಳಿದ್ದಾರೆ.

    ಟೆಸ್ಟ್, ಏಕದಿನ ವಿಶ್ವಕಪ್ ಮೇಲೆ ಗಮನ ಹರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. 2027 ರ ಪುರುಷರ ಏಕದಿನ ವಿಶ್ವಕಪ್‌ಗಾಗಿ ತಮ್ಮ ಉತ್ತಮ ಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ ಎಂದು ಸ್ಟಾರ್ಕ್‌ ತಿಳಿಸಿದ್ದಾರೆ.

    ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆದ ಕಳೆದ ಟಿ-20 ವಿಶ್ವಕಪ್ ನಂತರ ಈ ಸ್ವರೂಪದಲ್ಲಿ ಸ್ಟಾರ್ಕ್‌ ಕಾಣಿಸಿಕೊಂಡಿಲ್ಲ. ಭಾರತ ಮತ್ತು ಶ್ರೀಲಂಕಾದಲ್ಲಿ ಮುಂದಿನ ಆವೃತ್ತಿಯ ಪಂದ್ಯಾವಳಿಗೆ ಕೇವಲ ಆರು ತಿಂಗಳ ಮೊದಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

    ಆಸ್ಟ್ರೇಲಿಯಾದ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಆಗಿದ್ದಾರೆ. ಆಡಮ್ ಜಂಪಾ ಮೊದಲ ಸ್ಥಾನದಲ್ಲಿದ್ದಾರೆ. 2012 ರಲ್ಲಿ ಪಾಕಿಸ್ತಾನ ವಿರುದ್ಧ ತಮ್ಮ ಮೊದಲ ಪಂದ್ಯ ಆಡಿದರು. 65 ಪಂದ್ಯಗಳ ವೃತ್ತಿಜೀವನದಲ್ಲಿ ಅವರು 7.74 ರ ಎಕಾನಮಿ ದರದಲ್ಲಿ 79 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಆರು ಟಿ20 ವಿಶ್ವಕಪ್‌ಗಳ ಪೈಕಿ ಐದರಲ್ಲಿ ಆಡಿದ್ದಾರೆ. ಗಾಯದಿಂದಾಗಿ 2016 ರ ಆವೃತ್ತಿಯನ್ನು ಮಾತ್ರ ಕಳೆದುಕೊಂಡಿದ್ದರು. 2021 ರಲ್ಲಿ ದುಬೈನಲ್ಲಿ ಆಸ್ಟ್ರೇಲಿಯಾ ಪ್ರಶಸ್ತಿ ಗೆಲ್ಲುವಲ್ಲಿ ಸ್ಟಾರ್ಕ್‌ ಪ್ರಮುಖ ಪಾತ್ರ ವಹಿಸಿದ್ದರು.

    ಟೆಸ್ಟ್ ಕ್ರಿಕೆಟ್ ನನ್ನ ಅತ್ಯುನ್ನತ ಆದ್ಯತೆಯಾಗಿದೆ. ನಾನು ಆಸ್ಟ್ರೇಲಿಯಾ ಪರ ಆಡಿದ ಪ್ರತಿಯೊಂದು ಟಿ20 ಪಂದ್ಯದ ಪ್ರತಿ ನಿಮಿಷವನ್ನೂ ಪ್ರೀತಿಸುತ್ತೇನೆ. 2021 ರ ವಿಶ್ವಕಪ್ ಅನ್ನು ಮರೆಯಲು ಸಾಧ್ಯವಿಲ್ಲ. ನಾವು ಗೆದ್ದಿದ್ದಕ್ಕಾಗಿ ಮಾತ್ರವಲ್ಲ, ಅದೊಂದು ಅದ್ಭುತ ತಂಡ. ಟೂರ್ನಿ ಹಾದಿಯುದ್ದಕ್ಕೂ ಮೋಜಿನಿಂದ ಕೂಡಿತ್ತು ಎಂದು ನೆನಪಿಸಿಕೊಂಡಿದ್ದಾರೆ.

  • ಸ್ಫೋಟಕ ಶತಕ ಸಿಡಿಸಿ ಗ್ರೀನ್‌ ವಿಶೇಷ ಸಾಧನೆ – 19 ವರ್ಷಗಳ ಬಳಿಕ ಆಸೀಸ್‌ 2ನೇ ಗರಿಷ್ಠ ಮೊತ್ತ

    ಸ್ಫೋಟಕ ಶತಕ ಸಿಡಿಸಿ ಗ್ರೀನ್‌ ವಿಶೇಷ ಸಾಧನೆ – 19 ವರ್ಷಗಳ ಬಳಿಕ ಆಸೀಸ್‌ 2ನೇ ಗರಿಷ್ಠ ಮೊತ್ತ

    – ಅಗ್ರ ಮೂವರು ಬ್ಯಾಟರ್‌ಗಳಿಂದಲೂ ಸಿಡಿದ ಸೆಂಚುರಿ

    ಮೆಕೆ: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ತಂಡ ಅಬ್ಬರಿಸಿ ಬೊಬ್ಬರಿದಿದೆ. ಅಕ್ರಮಾಂಕದ ಮೂವರು ಬ್ಯಾಟರ್‌ಗಳು ಶತಕ ಸಿಡಿಸುವ ಮೂಲಕ ಹರಿಣರ ಮೇಲೆ ಸವಾರಿ ಮಾಡಿದರು. ಭರ್ಜರಿ ಆಟದಲ್ಲಿ ಆಸೀಸ್‌ ಪರ ಒಟ್ಟು 18 ಸಿಕ್ಸರ್‌ ಹಾಗೂ 36 ಬೌಂಡರಿಗಳು ದಾಖಲಾದವು.

    ಆಸ್ಟ್ರೇಲಿಯಾ‌ದ ಮೆಕೆಯಲ್ಲಿರುವ ಗ್ರೇಟ್ ಬ್ಯಾರಿಯರ್ ರೀಫ್ ಅರೆನಾ ಕ್ರೀಡಾಂಗಣದಲ್ಲಿಂದು ನಡೆದ ಕೊನೇ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ನಷ್ಟಕ್ಕೆ 431 ರನ್‌ ಗಳಿಸಿದೆ. ಇದು 19 ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ನ (ODI Cricket) ಇನ್ನಿಂಗ್ಸ್‌ವೊಂದರಲ್ಲಿ ಆಸೀಸ್‌ ಗಳಿಸಿದ‌ 2ನೇ ಗರಿಷ್ಠ ರನ್‌ ಆಗಿದೆ. 2006ರಲ್ಲಿ ದಕ್ಷಿಣ ಆಫಿಕಾ ವಿರುದ್ಧವೇ ಆಸ್ಟ್ರೇಲಿಯಾ 434 ರನ್‌ ಸಿಡಿಸಿತ್ತು. ಆದ್ರೆ ಆ ಪಂದ್ಯದಲ್ಲಿ ಸೋಲು ಕಂಡಿತ್ತು. ಇಂದಿಗೂ ಇದೊಂದು ಐತಿಹಾಸಿಕ ಪಂದ್ಯವಾಗಿದೆ. ಇದನ್ನೂ ಓದಿ: Retirement | ಎಲ್ಲ ಮಾದರಿಯ ಕ್ರಿಕೆಟ್‌ಗೆ ಚೇತೇಶ್ವರ ಪೂಜಾರ ಗುಡ್‌ಬೈ

    ಆಸ್ಟ್ರೇಲಿಯಾ ಅತಿಹೆಚ್ಚು ರನ್‌ ಗಳಿಸಿದ ಟಾಪ್‌-5 ಇನ್ನಿಂಗ್ಸ್‌
    * 434 ರನ್‌ – ದಕ್ಷಿಣ ಆಫ್ರಿಕಾ ವಿರುದ್ಧ – 2006 ರಲ್ಲಿ
    * 431 ರನ್‌ – ದಕ್ಷಿಣ ಆಫ್ರಿಕಾ ವಿರುದ್ಧ – 2025 ರಲ್ಲಿ
    * 417 ರನ್‌ – ಅಫ್ಘಾನಿಸ್ತಾನದ ವಿರುದ್ಧ – 2015ರಲ್ಲಿ
    * 399 ರನ್‌ – ನೆದರ್ಲೆಂಡ್‌ ವಿರುದ್ಧ – 2023 ರಲ್ಲಿ
    * 392 ರನ್‌ – ದಕ್ಷಿಣ ಆಫ್ರಿಕಾ ವಿರುದ್ಧ – 2023 ರಲ್ಲಿ

    ಗ್ರೀನ್‌ ಶೈನ್‌
    ಇನ್ನೂ ಆಸೀಸ್‌ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಕ್ಯಾಮರೂನ್‌ ಗ್ರೀನ್‌ (Cameron Green) ಕೇವಲ 47 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದರು. ಇದು ಆಸ್ಟ್ರೇಲಿಯಾ ಪರ ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ 2ನೇ ವೇಗದ ಶತಕದವೂ ಆಗಿದೆ. 2023ರಲ್ಲಿ ನೆದರ್ಲೆಂಡ್‌ ವಿರುದ್ಧ 40 ಎಸೆತಗಳಲ್ಲಿ ಶತಕ ಸಿಡಿಸಿದ ಮ್ಯಾಕ್ಸ್‌ವೆಲ್‌ ಅಗ್ರ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿ ಆಡಲ್ಲ: ಸಚಿವ ಮನ್ಸುಖ್ ಮಾಂಡವಿಯಾ

    ಅಬ್ಬರಿಸಿ ಬೊಬ್ಬಿರಿದ ಆಸೀಸ್‌
    ಮೊದಲು ಬ್ಯಾಟಿಂಗ್‌ ಆರಂಭಿಸಿದ ಆಸೀಸ್‌ ಪರ ಟ್ರಾವಿಸ್‌ ಹೆಡ್‌ ಹಾಗೂ ಮಿಚೆಲ್‌ ಮಾರ್ಷ್‌ ಜೋಡಿ ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿತು. ಹೆಡ್‌ 103 ಎಸೆತಗಳಲ್ಲಿ 142 ರನ್‌ (5 ಸಿಕ್ಸರ್‌, 17 ಬೌಂಡರಿ) ಚಚ್ಚಿದ್ರೆ, ಮಾರ್ಷ್‌ 106 ಎಸೆತಗಳಲ್ಲಿ 100 ರನ್‌ (5 ಸಿಕ್ಸರ್‌, 6 ಬೌಂಡರಿ) ಬಾರಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಗ್ರೀನ್‌ ಕೇವಲ 47 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದರು. ಒಟ್ಟು 55 ಎಸೆತಗಳಲ್ಲಿ 118 ರನ್‌ (8 ಸಿಕ್ಸರ್‌, 6 ಬೌಂಡರಿ) ಬಾರಿಸಿ ಅಜೇಯರಾಗುಳಿದರು. ಇದರೊಂದಿಗೆ ಅಲೆಕ್ಸ್‌ ಕ್ಯಾರಿ 37 ಎಸೆತಗಳಲ್ಲಿ ಅಜೇಯ 50 ರನ್‌ ಗಳಿಸಿ ಮಿಂಚಿದರು.

    ಸರಣಿ ಗೆದ್ದ ಆಫ್ರಿಕಾ
    ಆಸೀಸ್‌ ನೀಡಿದ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಆಸೀಸ್‌ 135 ರನ್‌ ಗಳಿಗೆ 7 ವಿಕೆಟ್‌ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ. ಆದರೆ ಮೂರು ಪಂದ್ಯಗಳ ಸರಣಿಯಲ್ಲಿ ಆರಂಭಿಕ 2 ಪಂದ್ಯಗಳನ್ನ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ. ಇದನ್ನೂ ಓದಿ: ನವೆಂಬರ್‌ನಲ್ಲಿ ಕೇರಳಕ್ಕೆ ಭೇಟಿ ನೀಡಲಿದ್ದಾರೆ ಅರ್ಜೆಂಟಿನಾದ ಫುಟ್‌ಬಾಲ್ ಆಟಗಾರ ಮೆಸ್ಸಿ

  • ಮತ್ತೆ ಕಮ್‌ಬ್ಯಾಕ್ ಮಾಡ್ತಾರಾ ವಿರಾಟ್ ಕೊಹ್ಲಿ?

    ಮತ್ತೆ ಕಮ್‌ಬ್ಯಾಕ್ ಮಾಡ್ತಾರಾ ವಿರಾಟ್ ಕೊಹ್ಲಿ?

    – ಲಾರ್ಡ್‌ನಲ್ಲಿ ಪ್ರಾಕ್ಟಿಸ್‌ನಲ್ಲಿ ಬ್ಯುಸಿ

    ಲಂಡನ್: ಮುಂಬರುವ ಆಸ್ಟ್ರೇಲಿಯಾ (Australia) ವಿರುದ್ಧದ ಏಕದಿನ ಸರಣಿಗಾಗಿ ಸ್ಟಾರ್ ಇಂಡಿಯಾ (India) ಆಟಗಾರ ವಿರಾಟ್ ಕೊಹ್ಲಿ (Virat Kohli) ಪ್ರ್ಯಾಕ್ಟಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ.

    ಟಿ20 ಮತ್ತು ಟೆಸ್ಟ್ ಪಂದ್ಯಗಳಿಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿ ಏಕದಿನ ಪಂದ್ಯಕ್ಕೂ (ODI) ಕೂಡ ನಿವೃತ್ತಿ ಘೋಷಿಸುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಈ ಚರ್ಚೆಯ ನಡುವೆಯೇ ಕೊಹ್ಲಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ (Lord’s Stadium) ಕಾಣಿಸಿಕೊಂಡಿದ್ದಾರೆ.ಇದನ್ನೂ ಓದಿ: ವರದಕ್ಷಿಣೆ ಕಿರುಕುಳ; ಬೆಂಕಿ ಹಚ್ಚಿ ಮಹಿಳೆ ಕೊಂದ ಪತಿ, ಅತ್ತೆ-ಮಾವ

    ಹೌದು, ಅಕ್ಟೋಬರ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗಾಗಿ ವಿರಾಟ್ ಕೊಹ್ಲಿ ಸಿದ್ಧತೆ ನಡೆಸುತ್ತಿದ್ದು, ಲಾರ್ಡ್ಸ್ ಕ್ರೀಡಾಂಗಣದಲ್ಲಿ ಅಭಿಮಾನಿಗಳೊಂದಿಗೆ ಪೋಸ್ ಕೊಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಐಪಿಎಲ್ ಬಳಿಕ ಬ್ರೇಕ್‌ನಲ್ಲಿರುವ ಕೊಹ್ಲಿ ಸದ್ಯ ಕುಟುಂಬದೊಂದಿಗೆ ಕಾಲಕಳೆಯುತ್ತಿದ್ದು, ಏಕದಿನ ಪಂದ್ಯಕ್ಕಾಗಿ ಪ್ರ್ಯಾಕ್ಟಿಸ್‌ ನಡೆಸುತ್ತಿದ್ದಾರೆ.

    ಮುಂದಿನ ಅ.19ರಿಂದ ಅ.25ರವರೆಗೆ ಆಸ್ಟ್ರೇಲಿಯಾ ವಿರುದ್ಧ ಭಾರತ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಸರಣಿ ಬಳಿಕ ದಿಗ್ಗಜರಾದ ವಿರಾಟ್, ರೋಹಿತ್ ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಪ್ರಸ್ತುತ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ.ಇದನ್ನೂ ಓದಿ: ಶಿವಮೊಗ್ಗ | ಪ್ರಿಯಕರನೊಂದಿಗೆ ಸೇರಿ ಪತಿ ಕೊಂದ ಶಿಕ್ಷಕಿಗೆ ಮರಣದಂಡನೆ

  • ಅನಗತ್ಯ ರನ್‌ ಕದಿಯಲು ಯತ್ನಿಸಿ ಯಡವಟ್ಟು – ಮೈದಾನದಲ್ಲೇ ಬ್ಯಾಟ್‌ ಎಸೆದು ಪಾಕ್‌ ಓಪನರ್ ಆಕ್ರೋಶ

    ಅನಗತ್ಯ ರನ್‌ ಕದಿಯಲು ಯತ್ನಿಸಿ ಯಡವಟ್ಟು – ಮೈದಾನದಲ್ಲೇ ಬ್ಯಾಟ್‌ ಎಸೆದು ಪಾಕ್‌ ಓಪನರ್ ಆಕ್ರೋಶ

    ಇಸ್ಲಾಮಾಬಾದ್‌: ಅನಗತ್ಯ ರನ್‌ ಕದಿಯಲು ಯತ್ನಿಸಿ ರನೌಟ್‌ ಆದ ಪಾಕ್‌ ಆರಂಭಿಕ ಆಟಗಾರ (Pakistani openers) ಮೈದಾನದಲ್ಲೇ ಬ್ಯಾಟ್‌ (Bat) ಎಸೆದು, ಸಹ ಆಟಗಾರನ ಮೇಲೆ ಆಕ್ರೋಶ ಹೊರಹಾಕಿದ ದೃಶ್ಯ ಆಸ್ಟ್ರೇಲಿಯಾದಲ್ಲಿ ನಡೆದ ಟಾಪ್ ಎಂಡ್ ಟಿ20 ಸರಣಿ ವೇಳೆ ಕಂಡುಬಂದಿದೆ.

    ಬೇಡದ ರನ್‌ ಕದಿಯಲು ಯತ್ನಿಸಿ ವಿಕೆಟ್‌ ಒಪ್ಪಿಸಿದ ಪಾಕ್‌ ಮತ್ತೆ ಮಕ್ಕರ್‌ ಆಯಿತಲ್ಲದೇ, ಇಬ್ಬರು ಆರಂಭಿಕ ಆಟಗಾರರ ನಡುವಿನ ಗೊಂದಲವನ್ನ ತೋರಿಸಿದೆ. ಈ ಕುರಿತ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್ – ಇಡಿ ವಿಚಾರಣೆಗೆ ಹಾಜರಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ

    ಸ್ಮರಣೀಯ ಜವಾದ್ರೂ ತಪ್ಪದ ಟೀಕೆ
    ಹೌದು. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಾಪ್ ಎಂಡ್ ಟಿ20 ಸರಣಿಯಲ್ಲಿ ಪಾಕಿಸ್ತಾನ್ ಶಾಹೀನ್ಸ್ ತಂಡವು ಶುಭಾರಂಭ ಪಡೆದುಕೊಂಡಿದೆ. ಗುರುವಾರ (ಆ.14) ಡಾರ್ವಿನ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ಎ ವಿರುದ್ಧ 79 ರನ್‌ಗಳ ಜಯ ಸಾಧಿಸಿತು. ಯಾಸಿರ್ ಖಾನ್ (Yasir Khan), ಖವಾಜಾ ನಫಾಯ್ (Khawaja Nafay) ಮತ್ತು ಅಬ್ದುಲ್ ಸಮದ್ ಅರ್ಧಶತಕಗಳ ನೆರವಿನಿಂದ ಪಾಕಿಸ್ತಾನ್ ಶಾಹೀನ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 227 ರನ್‌ ಪೇರಿಸಿತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ 16.5 ಓವರ್‌ಗಳಲ್ಲಿ 148 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡ ಪರಿಣಾಮ ಪಾಕಿಸ್ತಾನ ಶಾಹೀನ್ಸ್‌ ತಂಡ 79 ರನ್‌ಗಳ ಗೆಲುವು ಸಾಧಿಸಿತು. ಪಾಕ್‌ಗೆ ಇದು ಸ್ಮರಣೀಯ ಗೆಲುವಾದ್ರೂ, ಪಂದ್ಯದಲ್ಲಿ ಮಾಡಿಕೊಂಡ ಯಡವಟ್ಟು ಈಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.

    ಮೊದಲು ಕ್ರೀಸ್‌ಗಿಳಿದ ಶಾಹೀನ್ಸ್‌ ಪರ ಯಾಸಿರ್‌ ಖಾನ್‌ ಹಾಗೂ ಖವಾಜಾ ನಫಾಯ್‌ ಅವರ ಆರಂಭಿಕ ಜೋಡಿ ಸ್ಫೋಟಕ ಆರಂಭ ನೀಡಿತ್ತು. 11 ಓವರ್‌ಗಳಲ್ಲಿ 118 ರನ್‌ಗಳ ಉತ್ತಮ ಜೊತೆಯಾಟ ನೀಡಿ ವಿಕೆಟ್‌ ಕಳೆದುಕೊಳ್ಳದೇ ಉತ್ತಮ ಸ್ಥಿತಿಯಲ್ಲಿತ್ತು. ಆದ್ರೆ ಮೃತ್ಯುಂಜಯ್ ಚೌಧರಿ ಎಸೆದ 12ನೇ ಓವರ್‌ನ ಮೊದಲ ಎಸೆತದಲ್ಲಿ ಅನಗತ್ಯ ರನ್‌ ಕದಿಯಲು ಯತ್ನಿಸಿ ಖವಾಜಾ ವಿಕೆಟ್‌ ಒಪ್ಪಿಸಿದ್ರು. ಇದನ್ನೂ ಓದಿ: ಖ್ಯಾತ ಉದ್ಯಮಿಯ ಮೊಮ್ಮಗಳ ಜೊತೆ ಅರ್ಜುನ್‌ ತೆಂಡ್ಕೂಲರ್‌ ಎಂಗೇಜ್‌

    ವೇಗಿ ಮೃತ್ಯುಂಜಯ್ ಎಸೆದ ಎಸೆತವನ್ನು ಯಾಸಿರ್‌ ಸಿಕ್ಸರ್‌ಗೆ ಅಟ್ಟಲು ಯತ್ನಿಸಿದರು. ಆದ್ರೆ ಬಾಲ್‌ ಪ್ಯಾಡ್‌ಗೆ ಬಡಿದು, ಕಾಲಿಗೆ ತಾಗಿ, ತನ್ನ ಪಕ್ಕದಲ್ಲೇ ಲೆಗ್‌ಸೈಡ್‌ಗೆ ಉರುಳಿತು. ಈ ವೇಳೆ ನಫಾಯ್‌ ಸಿಂಗಲ್‌ಗೆ ಕರೆ ನೀಡಿದ್ರು, ಯಾಸಿರ್‌ ಕೂಡ ಒಂದು ಹೆಜ್ಜೆ ಮುಂದಿಟ್ಟರು. ಚೆಂಡು ಹತ್ತಿರದಲ್ಲೇ ಇದೆ ಎಂದು ಯಾಸಿರ್‌ ಕೈ ತೋರಿಸುವಷ್ಟರಲ್ಲಿ ನಫಾರ್‌ ಕ್ರೀಸ್‌ ಸಮೀಪಕ್ಕೆ ಬಂದಿದ್ದರು. ಪುನಃ ನಾನ್‌ ಸ್ಟ್ರೈಕ್‌ಗೆ ಮರಳುವಷ್ಟರಲ್ಲಿ ಕೀಪರ್‌ ನೂರುಲ್ ಹಸನ್ ಬೌಲರ್‌ಗೆ ಬಾಲ್‌ ಎಸೆದು ರನೌಟ್‌ ಮಾಡುವಲ್ಲಿ ಯಶಸ್ವಿಯಾದರು. ಇದರಿಂದ ಕೆರಳಿದ ನಫಾರ್‌ ಮೈದಾನದಲ್ಲೇ ಬ್ಯಾಟ್‌ ಎಸೆದು ನೀನು ಬರಬಹುದಿತ್ತು ಅಂತ ಆಕ್ರೋಶ ಹೊರಹಾಕಿದ್ರು. 21 ಸೆಕೆಂಡುಗಳ ಈ ವಿಡಿಯೋದಲ್ಲಿ ಇಬ್ಬರ ಆಟಗಾರ ನಡುವಿನ ಸಂವಹನ ಕೊರತೆಯನ್ನು ಎತ್ತಿ ತೋರಿಸಿದ್ದು, ಪಾಕ್‌ ಆಟಗಾರರು ಮತ್ತೊಮ್ಮೆ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

    ಸದ್ಯ ಪಾಕಿಸ್ತಾನ್ ಶಾಹೀನ್ಸ್ ತಂಡವು ಆಗಸ್ಟ್ 16 ರಂದು ಪರ್ತ್ ಸ್ಕಾರ್ಚರ್ಸ್ ಅಕಾಡೆಮಿ ವಿರುದ್ಧ ತನ್ನ ಮುಂದಿನ ಪಂದ್ಯವನ್ನಾಡಲಿದೆ. ಇದನ್ನೂ ಓದಿ: ಮೋದಿ ನಾಯಕತ್ವದಲ್ಲಿ ಭಾರತವು ಬೃಹತ್ ಆರ್ಥಿಕ ಶಕ್ತಿಯಾಗಿ ಅವತರಿಸುತ್ತಿದೆ: ಕುಮಾರಸ್ವಾಮಿ ಗುಣಗಾನ

  • ಕಾಲಿಟ್ಟಲ್ಲೆಲ್ಲಾ ಮರಳಿದ್ದರೂ ಸೌದಿ ಅರೇಬಿಯಾ ಮರಳು ಆಮದು ಮಾಡಿಕೊಳ್ಳುವುದು ಏಕೆ?

    ಕಾಲಿಟ್ಟಲ್ಲೆಲ್ಲಾ ಮರಳಿದ್ದರೂ ಸೌದಿ ಅರೇಬಿಯಾ ಮರಳು ಆಮದು ಮಾಡಿಕೊಳ್ಳುವುದು ಏಕೆ?

    ವಿಶಾಲವಾದ ಮರುಭೂಮಿ ಹೊಂದಿರುವ ದೇಶ ಸೌದಿ ಅರೇಬಿಯಾ. ಇಲ್ಲಿ ಕಣ್ಣು ಹಾಯಿಸಿದಷ್ಟು ದೂರ ಬರೀ ಮರಳೇ ಕಾಣಸಿಗುತ್ತದೆ. ಕಾಲಿಟ್ಟಲ್ಲೆಲ್ಲಾ ಮರಳು ಸಿಗುವ ದೇಶವಾದ ಸೌದಿ ಅರೇಬಿಯಾ (Saudi Arabia) ದುಬಾರಿ ಹಣ ಕೊಟ್ಟು ಮರಳನ್ನು ಆಮದು (Sand Import) ಮಾಡಿಕೊಳ್ಳುತ್ತದೆ. ಅರೇ ತನ್ನಲ್ಲೇ ಅಷ್ಟೊಂದು ಮರಳನ್ನು ಇಟ್ಟುಕೊಂಡು ಹಣಕೊಟ್ಟು ಆಮದು ಮಾಡಿಕೊಳ್ಳುವುದು ಏಕೆ ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲಿ ಮೂಡುತ್ತದೆ. ಆಶ್ಚರ್ಯ ಎನಿಸಿದರೂ ಇದು ಸತ್ಯ. ಹಾಗಿದ್ರೆ ಸುತ್ತಲೂ ಮರಳು ಹೊಂದಿದ್ದರೂ ಬೇರೆಡೆಯಿಂದ ಮರಳು ಆಮದು ಮಾಡಿಕೊಳ್ಳುತ್ತಿರುವುದು ಏಕೆ? ಅಲ್ಲಿರುವ ಮರಳನ್ನು ಯಾಕೆ ಬಳಕೆ ಮಾಡುತ್ತಿಲ್ಲ‌ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಮರಳು ಭೂಮಿಗೆ ಹೆಸರುವಾಸಿಯಾಗಿರುವ ಸೌದಿ ಅರೇಬಿಯಾದಲ್ಲಿ ಮರಳಿಗೆ ಬೇಡಿಕೆ ಹೆಚ್ಚಿದೆ. ಆದ್ದರಿಂದ ಬೇರೆ ದೇಶಗಳಿಂದ ಮರಳನ್ನು ಆಮದು ಮಾಡಿಕೊಳ್ಳುತ್ತಿದೆ. ಸೌದಿ ಅರೇಬಿಯಾ ಆಸ್ಟ್ರೇಲಿಯಾ, ಚೀನಾ ಮತ್ತು ಬೆಲ್ಜಿಯಂನಂತಹ ದೇಶಗಳಿಂದ ಮರಳನ್ನು ಆಮದು ಮಾಡಿಕೊಳ್ಳುತ್ತದೆ. ಇದರ ಹಿಂದೆ ಒಂದು ಬಲವಾದ ಕಾರಣವಿದೆ. ಸೌದಿಯಲ್ಲಿ ಲಭ್ಯವಿರುವ ಮರಳು ಬಳಕೆಗೆ ಮತ್ತು ನಿರ್ಮಾಣ ಕಾರ್ಯಗಳಿಗೆ ಸೂಕ್ತವಲ್ಲ. ಅಲ್ಲದೇ ಸೌದಿಯಲ್ಲಿ ಮರಳು ಬೇಡಿಕೆ ಕೂಡ ಹೆಚ್ಚಿದೆ. ಆದ್ದರಿಂದ ಸೌದಿ ಅರೇಬಿಯಾ ದುಬಾರಿ ಹಣ ನೀಡಿ ಬೇರೆಬೇರೆ ದೇಶಗಳಿಂದ ಮರಳನ್ನು ಆಮದು ಮಾಡಿಕೊಳ್ಳುತ್ತಿದೆ.

    ಸೌದಿಯಲ್ಲಿನ ಮರಳು ಬಳಕೆಗೆ ಯೋಗ್ಯವಲ್ಲ:
    ಸೌದಿ ಅರೇಬಿಯಾದಲ್ಲಿ ದೊರಕುವ ಮರಳು ಬಳಕೆಗೆ ಯೋಗ್ಯವಲ್ಲ. ಕೇವಲ ಕೆಲವು ಪ್ರದೇಶಗಳ ಮರಳು ಮಾತ್ರವೇ ಬಳಕೆಗೆ ಯೋಗ್ಯವಾಗಿದೆ. ಇದರಿಂದಾಗಿ ಸೌದಿ ಅರೇಬಿಯಾ ಬೇರೆಡೆಯಿಂದ ಮರಳನ್ನು ಆಮದು ಮಾಡಿಕೊಳ್ಳುತ್ತದೆ. ವಿಷನ್‌ 2030 ಯೋಜನೆ ಘೋಷಣೆಯಾದ ಬಳಿಕ ಸೌದಿಯಲ್ಲಿ ಮರಳಿಗೆ ಬೇಡಿಕೆ ಹೆಚ್ಚಿದೆ. ಆದ್ದರಿಂದ ದೊಡ್ಡ ಮಟ್ಟದ ನಿರ್ಮಾಣ ಕಾರ್ಯಗಳಿಗೆ ಮರಳಿನ ಅವಶ್ಯಕತೆಯಿದೆ. ಹೀಗಾಗಿ ಸೌದಿ ಬೇರೆ ದೇಶಗಳ ಮೇಲೆ ಅವಲಂಬಿತವಾಗಿದೆ. 

    ಸೌದಿಯಲ್ಲಿ ಸಿಗುವ ಮರಳನ್ನು ಬಳಸದಿರಲು ಕಾರಣವೇನು?
    ಸೌದಿಯಲ್ಲಿ ಸಿಗುವ ಮರಳು ಗಾಳಿಯ ತೀವ್ರತೆಗೆ ಸವೆದು ಹೋಗಿರುತ್ತದೆ .ಮರುಭೂಮಿಯ ಮರಳು ಸಾಮಾನ್ಯವಾಗಿ ನಯವಾಗಿರುತ್ತದೆ ಮತ್ತು ದುಂಡಾಗಿರುತ್ತದೆ. ಏಕೆಂದರೆ ಗಾಳಿಯಿಂದ ಉಂಟಾಗುವ ಸವೆತದಿಂದಾಗಿ ಇದು ಸಿಮೆಂಟ್‌ನೊಂದಿಗೆ ಬಳಸಲು ಸೂಕ್ತವಲ್ಲ.ನಿರ್ಮಾಣದ ವೇಳೆ ನೀರು ಮತ್ತು ಸಿಮೆಂಟ್‌ನೊಂದಿಗೆ ಚೆನ್ನಾಗಿ ಬೆರೆಯುವಂತಹ ಒರಟಾದ ಮರಳನ್ನು ಬಳಸಲಾಗುತ್ತದೆ. ಈ ರೀತಿಯ ಮರಳು ಸಾಮಾನ್ಯವಾಗಿ ನದಿಪಾತ್ರಗಳು, ಸರೋವರಗಳು ಮತ್ತು ಸಮುದ್ರತಳಗಳಲ್ಲಿ ಕಂಡುಬರುತ್ತದೆ. 

    ಆದರೆ ಸೌದಿಯಲ್ಲಿ ದೊರಕುವ ಮರಳು ನಯವಾಗಿದ್ದು, ಸಿಮೆಂಟ್‌ನೊಂದಿಗೆ ಹೊಂದಿಕೊಳ್ಳುವುದಿಲ್ಲ. ಅಲ್ಲದೇ ಈ ಮರಳಿನಿಂದ ಕಟ್ಟಡ ನಿರ್ಮಿಸಿದರೆ ಗಟ್ಟಿಯಾಗಿ ಉಳಿಯುವುದಿಲ್ಲ.  ಸೌದಿ ಅರೇಬಿಯಾ ಜೊತೆಗೆ, ಯುಎಇ ಮತ್ತು ಕತಾರ್ ಕೂಡ ಇದೇ ಕಾರಣಕ್ಕಾಗಿ ಮರಳನ್ನು ಆಮದು ಮಾಡಿಕೊಳ್ಳುತ್ತವೆ. 

    ದುಬೈ ಮತ್ತು ಅಬುಧಾಬಿಯಂತಹ ನಗರಗಳು ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿವೆ ಮತ್ತು ಅಲ್ಲಿ ನಿರ್ಮಿಸುವ ಎತ್ತರದ ಕಟ್ಟಡಗಳು ಮತ್ತು ಆಧುನಿಕ ಮೂಲಸೌಕರ್ಯಗಳಿಗೆ ಉತ್ತಮ ಗುಣಮಟ್ಟದ ಮರಳಿನ ಅಗತ್ಯವಿದೆ. ಗಲ್ಫ್ ರಾಷ್ಟ್ರಗಳ ತ್ವರಿತ ಬೆಳವಣಿಗೆಯು ಜಾಗತಿಕವಾಗಿ ಮರಳಿಗೆ ಹೆಚ್ಚಿನ ಬೇಡಿಕೆಗೆ ಕಾರಣವಾಗುತ್ತಿದೆ ಎಂದು 2024ರಲ್ಲಿ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ವರದಿ ತಿಳಿಸಿದೆ.

    ಸದ್ಯ ಸೌದಿ ಅರೇಬಿಯಾ ದುಬಾರಿ ಬೆಲೆ ನೀಡಿ ಮರಳನ್ನು ಆಮದು ಮಾಡಿಕೊಳ್ಳುತ್ತಿದೆ. ಹಾಗೆ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಆಸ್ಟ್ರೇಲಿಯಾ ಮರಳು ರಫ್ತು ಮಾಡುತ್ತಿದೆ. ದೇಶವು 2023ರಲ್ಲಿ ಒಟ್ಟು 273 ಮಿಲಿಯನ್ ಡಾಲರ್ ಮೌಲ್ಯದ ಮರಳನ್ನು ರಫ್ತು ಮಾಡಿದೆ. ಇದು ಜಾಗತಿಕವಾಗಿ ಎರಡನೇ ಅತಿದೊಡ್ಡ ಮರಳಿನ ರಫ್ತುದಾರ ರಾಷ್ಟ್ರವಾಗಿದೆ. ‌

    ಹಾಗೆ ಸೌದಿ ಅರೇಬಿಯಾ ಆಸ್ಟ್ರೇಲಿಯಾದಿಂದ ಮಾತ್ರವೇ ಬರೋಬ್ಬರಿ 140,000 ಡಾಲರ್‌ ಮೌಲ್ಯದ ಮರಳನ್ನ ಒಂದೇ ವರ್ಷದಲ್ಲಿ ಆಮದು ಮಾಡಿಕೊಂಡಿದೆ.

    ನೈಸರ್ಗಿಕ ಮರಳಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಸೌದಿ ಅರೇಬಿಯಾ ಸೇರಿದಂತೆ ಕೆಲವು ದೇಶಗಳು M-ಸ್ಯಾಂಡ್‌ನಂತಹ ಪರ್ಯಾಯಗಳನ್ನು ಅನ್ವೇಷಿಸುತ್ತಿವೆ. ಇದನ್ನು ನಿರ್ಮಾಣದಲ್ಲಿ ಬಳಸಲು ಸೂಕ್ತವಾಗಿಸಲು ಬಂಡೆಗಳನ್ನು ಪುಡಿಮಾಡಿ ತಯಾರಿಸಲಾಗುತ್ತದೆ. 

    ಇನ್ನು ಸೌದಿಯಲ್ಲಿ ಮರಳು ಮಾತ್ರವಲ್ಲದೇ ಒಂಟೆಗಳನ್ನು ಸಹ ಆಮದು ಮಾಡಿಕೊಳ್ಳಲಾಗುತ್ತದೆ. ಆಸ್ಟ್ರೇಲಿಯಾದಿಂದ ಸೌದಿ ಅರೇಬಿಯಾ ಭಾರೀ ಪ್ರಮಾಣದ ಒಂಟೆಗಳನ್ನು ಆಮದು ಮಾಡಿಕೊಳ್ಳುತ್ತದೆ. ಆಸ್ಟ್ರೇಲಿಯಾದಲ್ಲಿ ಕಾಡು ಒಂಟೆಗಳ ದೊಡ್ಡ ಹಿಂಡುಗಳಿವೆ. ಅದು ಬಹಳ ತಳಿಗಳನ್ನು ಹೊಂದಿದೆ ಮತ್ತು ಸೌದಿ ಅರೇಬಿಯಾದಲ್ಲಿನ ಒಂಟೆಗಳಿಗೆ ಹೋಲಿಸಿದರೆ ಆಸ್ಟ್ರೇಲಿಯಾದ ಒಂಟೆಗಳು ಹೆಚ್ಚು ಆರೋಗ್ಯಕರವಾಗಿದ್ದು, ರೋಗ ನಿರೋಧಕಗಳನ್ನು ಹೊಂದಿದೆ. 

    ಸೌದಿ ಅರೇಬಿಯಾದಲ್ಲಿ ಒಂಟೆಗಳನ್ನು ಸಾಗಾಣಿಕೆ, ಆಹಾರ, ಮತ್ತು ಸೌಂದರ್ಯದ ಸಂಕೇತವಾಗಿ ಬಳಸಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ಒಂಟೆಗಳಿಗಾಗಿ ವಿಶೇಷ ಉತ್ಸವಗಳನ್ನು ನಡೆಸಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ಪ್ರತಿ ವರ್ಷ ಕಿಂಗ್ ಅಬ್ದುಲಜೀಜ್ ಒಂಟೆ ಉತ್ಸವವನ್ನು ನಡೆಸಲಾಗುತ್ತದೆ. ಇದರಲ್ಲಿ ಒಂಟೆಗಳ ಸೌಂದರ್ಯ ಮತ್ತು ಓಟ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಒಂಟೆ ಮಾಂಸ ಮತ್ತು ಹಾಲು ಸೌದಿ ಅರೇಬಿಯಾದಲ್ಲಿ ಜನಪ್ರಿಯ ಆಹಾರವಾಗಿದೆ. ಹೀಗಾಗಿ ಸೌದಿ ಒಂಟೆಗಳನ್ನು ಕೂಡ ಆಮದು ಮಾಡಿಕೊಳ್ಳುತ್ತದೆ.  

     

  • ಆಸ್ಟ್ರೇಲಿಯಾದ ನೈಸರ್ಗಿಕ ವಿಪತ್ತಾದ ‘ಆಲ್ಗಲ್ ಬ್ಲೂಮ್’ – ಈ ಬಿಕ್ಕಟ್ಟಿನ ಹಿಂದಿನ ಕಾರಣವೇನು?

    ಆಸ್ಟ್ರೇಲಿಯಾದ ನೈಸರ್ಗಿಕ ವಿಪತ್ತಾದ ‘ಆಲ್ಗಲ್ ಬ್ಲೂಮ್’ – ಈ ಬಿಕ್ಕಟ್ಟಿನ ಹಿಂದಿನ ಕಾರಣವೇನು?

    ಭೂಮಿಯ ಮೇಲಿರುವ ಪ್ರತಿಯೊಂದು ತನ್ನದೇ ಆದ ವಿಭಿನ್ನ ಲಕ್ಷಣಗಳೊಂದಿಗೆ ಹುಟ್ಟಿಕೊಂಡಿರುತ್ತದೆ. ವಿಭಿನ್ನವಾದ ಗುಣಗಳೊಂದಿಗೆ ತನ್ನಲ್ಲಿ ಹೊಸತನವನ್ನು ಕಂಡುಕೊಳ್ಳುತ್ತದೆ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಹವಾಮಾನ, ಮಳೆ, ಬಿಸಿಲು, ಅದರ ಜೊತೆ ಜೊತೆಗೆ ತಂತ್ರಜ್ಞಾನಗಳ ಬೆಳವಣಿಗೆಯಿಂದಾಗಿ ನಿಸರ್ಗದ ಮೇಲಾಗುತ್ತಿರುವ ಪರಿಣಾಮ ಇವೆಲ್ಲವೂ ಹೊಂದಿಲ್ಲೊಂದು ರೀತಿಯಲ್ಲಿ ಪ್ರತಿಯೊಂದು ಜೀವಿಯ ಮೇಲೆಯೂ ಪ್ರಭಾವ ಬೀರುತ್ತದೆ.

    ಹೌದು, ದಕ್ಷಿಣ ಆಸ್ಟ್ರೇಲಿಯಾದ ಕರಾವಳಿ ತೀರಗಳಲ್ಲಿ ಆಲ್ಗಲ್ ಬ್ಲೂಮ್ ನೈಸರ್ಗಿಕ ವಿಪತ್ತಾಗಿ ಪರಿವರ್ತನೆಗೊಂಡಿದೆ. ಇದರಿಂದಾಗಿ ಪರಿಸರದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದ್ದು, ಜಲಚರ ಜೀವಿಗಳಿಗೆ ಅಪಾಯ ಉಂಟು ಮಾಡುತ್ತಿದೆ. ಅದಲ್ಲದೆ ಮಾನವನ ಉದ್ಯಮದ ಮೇಲೆಯೂ ಪರಿಣಾಮ ಬೀರುತ್ತದೆ. ಏನಿದು ಆಲ್ಗಲ್ ಬ್ಲೂಮ್? ಇದರ ಹಿಂದಿನ ಕಾರಣವೇನು? ಇದೆಲ್ಲದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

    ಏನಿದು ಆಲ್ಗಲ್ ಬ್ಲೂಮ್?
    ಸಾಮಾನ್ಯವಾಗಿ ಹೇಳುವುದಾದರೆ ಆಲ್ಗಲ್ ಬ್ಲೂಮ್ ಎಂದರೆ ಪಾಚಿ ಎಂದರ್ಥ. ನಿಂತ ನೀರು ಅಥವಾ ಸದಾ ಹರಿಯುತ್ತಿರುವ ನೀರಿನ ತಳಭಾಗದಲ್ಲಿ ಬೆಳೆಯುವ ಒಂದು ರೀತಿಯ ಸಸ್ಯ ಜಾತಿಯನ್ನು ಪಾಚಿ ಎಂದು ಕರೆಯಲಾಗುತ್ತದೆ. ಸಮುದ್ರ, ನದಿ ಹಾಗೂ ಕೆರೆಗಳಲ್ಲಿ ಇದು ಬೆಳೆಯುತ್ತದೆ. ಇದನ್ನು ಮೈಕ್ರೋ ಆಲ್ಗಿಗಳು ಎಂತಲೂ ಕರೆಯಲಾಗುತ್ತದೆ. ಇದು ನೀರಿನಲ್ಲಿ ತ್ವರಿತವಾಗಿ ವೃದ್ಧಿಯಾಗುವ ಒಂದು ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆ ಹೆಚ್ಚಾದಾಗ ಇದು ನೀರಿನ ಮೇಲೆಯೂ ತೇಲುತ್ತದೆ. ಇದರಿಂದ ನೀರಿಗೆ ಹಸಿರು, ಕೆಂಪು ಅಥವಾ ನೀಲಿ ಬಣ್ಣ ಬರುತ್ತದೆ. ಇದರಿಂದ ಪರಿಸರಕ್ಕೆ ಹಾಗೂ ಜಲಚರ ಜೀವಿಗಳಿಗೆ ಸಮಸ್ಯೆ ಉಂಟಾಗುತ್ತದೆ.

    ಇದರ ಲಕ್ಷಣಗಳೇನು:
    ನೀರಿನಲ್ಲಿ ಹಸಿರು ಪಾಚಿ ಬೆಳೆದಿದೆ ಎಂದು ಗೊತ್ತಾಗಬೇಕಾದರೆ ನೀರು ಅಥವಾ ನೀರಿನಲ್ಲಿ ಹಸಿರು ಬಣ್ಣ ಕಾಣಿಸುತ್ತದೆ. ಜೊತೆಗೆ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ, ಜಲಚರ ಜೀವಿಗಳ ನಾಶಕ್ಕೆ ಕಾರಣವಾಗುತ್ತದೆ. ಅದಲ್ಲದೆ ನೀರಿನಲ್ಲಿ ವಿಷದ ಪ್ರಮಾಣ ಬಿಡುಗಡೆ ಮಾಡುತ್ತದೆ. ಬಳಿಕ ನೀರಿನಿಂದ ದುರ್ವಾಸನೆ ಉಂಟಾಗುತ್ತದೆ.

    ಇದಕ್ಕೆ ಕಾರಣಗಳೇನು:
    ನೀರಿಗೆ ನೈಟ್ರೋಜನ್, ಪಾಸ್ಪರಸ್ ಹಾಗೂ ಕೃಷಿ ರಾಸಾಯನಿಕಗಳು ಸೇರಿದಾಗ ಈ ಪಾಚಿ ಉಂಟಾಗುತ್ತದೆ. ಜೊತೆಗೆ ತಾಪಮಾನದ ಏರಿಕೆಯಿಂದಾಗಿ ಪಾಚಿ ಬೆಳವಣಿಗೆ ವೃದ್ಧಿಯಾಗುತ್ತದೆ. ನೀರಿನ ಚಲನೆ ಇಲ್ಲದಿದ್ದರೆ ಪಾಚಿ ವೇಗವಾಗಿ ಬೆಳೆಯುತ್ತದೆ. ಇನ್ನು ನೀರಿಗೆ ಬೆಳಕು ಹೆಚ್ಚು ಹರಿದು ಬಂದರೆ ಪಾಚಿ ಫೋಟೋಸಿಂಥೆಸಿಸ್ (ದ್ಯುತಿ ಸಂಶ್ಲೇಷಣೆ) ಮೂಲಕ ವೇಗವಾಗಿ ಹರಡುತ್ತದೆ.

    ಇದೀಗ ದಕ್ಷಿಣ ಆಸ್ಟ್ರೇಲಿಯಾದ ಕರಾವಳಿಯಲ್ಲಿ ಪಾಚಿ ಬೆಳೆದುಕೊಂಡಿದ್ದು ವಿಶಾಲವಾದ ಸಮುದ್ರ ಪ್ರದೇಶವನ್ನು ವಿಷಕಾರಿಯನ್ನಾಗಿ ಮಾಡಿದೆ. ಅಲ್ಲದೆ ಸಾವಿರಾರು ಜಲಚರ ಜೀವಿಗಳನ್ನು ನಾಶಗೊಳಿಸಿದ್ದು, ಸ್ಥಳೀಯ ಕೈಗಾರಿಕಾ ಪ್ರದೇಶಗಳಿಗೂ ಹಾನಿಯಾಗಿದೆ. ಇದೀಗ ಆಸ್ಟ್ರೇಲಿಯಾದ ಕೂರೊಂಗ್ ನಿಂದ ಯಾರ್ಕ್ ದ್ವಿಪದವರೆಗೂ ವಿಸ್ತರಿಸಿದೆ. 400 ಕ್ಕೂ ಹೆಚ್ಚು ಜಲಚರ ಜೀವಿಗಳನ್ನು ನಾಶಪಡಿಸಿದ್ದು, ಮೀನುಗಳು, ಚಿಪ್ಪು ಮೀನು ಹಾಗೂ ಇತರೆ ಜೀವಿಗಳ ಮಾರಣಹೋಮವಾಗಿದೆ.

    ದಕ್ಷಿಣ ಆಸ್ಟ್ರೇಲಿಯಾ ಕರಾವಳಿಯಲ್ಲಿ ಪಾಚಿ ಬೆಳವಣಿಗೆಗೆ ಕಾರಣವೇನು?
    ತಜ್ಞರ ಮಾಹಿತಿ ಪ್ರಕಾರ, ಹವಾಮಾನ ಬದಲಾವಣೆಯಿಂದಾಗಿ ಈ ಬಿಕ್ಕಟ್ಟು ಉಂಟಾಗಿದೆ. ಜೊತೆಗೆ ಸಮುದ್ರದಲ್ಲಿ ಉಷ್ಣತೆಯ ಏರಿಕೆ, ಕೃಷಿ ಮತ್ತು ನಗರದಿಂದ ಹರಿದು ಬರುವ ರಾಸಾಯನಿಕ ಅಂಶಗಳು, ದೀರ್ಘಕಾಲದ ಬರಪರಿಸ್ಥಿತಿ ಹಾಗೂ ನಿಂತಲ್ಲೇ ನೀರು ನಿಲ್ಲುವುದರಿಂದ ಪಾಚಿ ಬೆಳವಣಿಗೆಗೆ ಕಾರಣವಾಗಿದೆ ಎಂದಿದ್ದಾರೆ. ಈಗಾಗಲೇ ಪಾಚಿಯು 4,500 ಚದರ ಕಿಲೋಮಿಟರ್ ಗಳಿಗೂ ಹೆಚ್ಚು ಹಬ್ಬಿಕೊಂಡು, ನೀರನ್ನು ವಿಷಪೂರಿತಗೊಳಿಸಿದ. ಇದರಿಂದಾಗಿ ದಕ್ಷಿಣ ಆಸ್ಟ್ರೇಲಿಯಾದಲ್ಲಿ ಮೀನುಗಾರಿಕಾ ಉದ್ಯಮ ನಶಿಸಿಹೋಗಿದೆ. ಅಲ್ಲದೆ ಕಡಲ ತೀರಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಕೂಡ ಕಡಿಮೆಯಾಗಿದೆ.

    ಮೇ ತಿಂಗಳಲ್ಲಿ ಜನಪ್ರಿಯ ಪ್ರವಾಸೋದ್ಯಮ ತಾಣವಾದ ಕಾಂಗರು ದ್ವೀಪದಲ್ಲಿ ಪಾಚಿ ಬೆಳೆಯಲು ಆರಂಭಿಸಿದೆ ಎಂದು ಸರ್ಕಾರ ತಿಳಿಸಿತ್ತು. ಅದಾದ ಬಳಿಕ ಮೇ ತಿಂಗಳ ಅಂತ್ಯದಲ್ಲಿ ಉಂಟಾದ ಹವಾಮಾನ ಬದಲಾವಣೆಯಿಂದಾಗಿ ಕಾಂಗರು ದ್ವೀಪದಿಂದ ಕೂರಾಂಗ್ ದ್ವೀಪಕ್ಕೆ ಪಸರಿಸಿತು.

    ಸದ್ಯ ಈ ಸಂಬಂಧ ದಕ್ಷಿಣ ಆಸ್ಟ್ರೇಲಿಯಾದ ಪ್ರಧಾನಿ ಪೀಟರ್ ಮಲಿನೌಸ್ಕಾಸ್ ಅವರು ಪಾಚಿಯನ್ನು ನೈಸರ್ಗಿಕ ವಿಕೋಪವೆಂದು ಘೋಷಿಸಿದ್ದಾರೆ. ಆಸ್ಟ್ರೇಲಿಯಾ ಸರ್ಕಾರವು ಇದರ ಪರಿಹಾರಕ್ಕಾಗಿ 79.5 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಮೂಲಕ ಶುಚಿಗೊಳಿಸುವಿಕೆ, ಸಂಶೋಧನೆ ನಡೆಸಲಿದ್ದಾರೆ.

    ಈ ಪಾಚಿಯಿಂದಾಗಿ ದಕ್ಷಿಣ ಆಸ್ಟ್ರೇಲಿಯಾದ ನೈಸರ್ಗಿಕ ಸೌಂದರ್ಯ ಹಾಳಾಗಿದ್ದು, ಜನರ ಮನಸ್ಸಿಗೆ ನೋವನ್ನುಂಟು ಮಾಡಿದೆ. ಅಲ್ಲದೆ ಕೆಲವು ಕರಾವಳಿ ತೀರಗಳಲ್ಲಿ ಮೀನುಗಳು, ಡಾಲ್ಫಿನ್ಗಳ ಮಾರಣಹೋಮವೇ ನಡೆದಿದೆ. ತಜ್ಞರ ಮಾಹಿತಿ ಪ್ರಕಾರ, ಇದೊಂದು ಆರಿಸಲಾಗದ ಬೆಂಕಿಯಾಗಿದ್ದು, ಇದಕ್ಕೆ ಯಾವುದೇ ರೀತಿಯ ಪರಿಹಾರವಿಲ್ಲ. ಯಾವುದೇ ಮಾರ್ಗದಿಂದಲೂ ಪಾಚಿಯ ಬೆಳವಣಿಗೆಯನ್ನು ತಡೆಯಲು ಮನುಷ್ಯರಿಗೆ ಸಾಧ್ಯವಿಲ್ಲ. ಇದು ಹವಾಮಾನವನ್ನು ಅವಲಂಬಿಸಿರುತ್ತದೆ ಎಂದಿದ್ದಾರೆ.

  • ಆಸೀಸ್‌ ಲಕ್ಕಿ ಚಾರ್ಮ್‌ಗಳಿಗೆ ಸೋಲಿನ ರುಚಿ ತೋರಿಸಿದ ಹರಿಣರು – ಹೇಜಲ್ವುಡ್‌ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌

    ಆಸೀಸ್‌ ಲಕ್ಕಿ ಚಾರ್ಮ್‌ಗಳಿಗೆ ಸೋಲಿನ ರುಚಿ ತೋರಿಸಿದ ಹರಿಣರು – ಹೇಜಲ್ವುಡ್‌ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌

    ಲಂಡನ್‌: ಐತಿಹಾಸಿಕ ಲಾರ್ಡ್ಸ್‌ ಕ್ರಿಕೆಟ್‌ ಅಂಗಳದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್‌ (WTC 2025) ಫೈನಲ್‌ ಪಂದ್ಯದಲ್ಲಿ ಆಸೀಸ್‌ ವಿರುದ್ಧ ಗೆದ್ದು ದಕ್ಷಿಣ ಆಫ್ರಿಕಾ (South Africa) ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ಮೂಲಕ 27 ವರ್ಷಗಳ ಬಳಿಕ ಚೋಕರ್ಸ್‌ ಹಣೆಪಟ್ಟ ಕಳಚಿದ್ದು, ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿದೆ. ಇದರೊಂದಿಗೆ ಐಸಿಸಿ (ICC) ಟೂರ್ನಿಯ ಫೈನಲ್‌ ಪಂದ್ಯಗಳಲ್ಲಿ ಸೋಲೇ ನೋಡದ ಸರದಾರರಿಗೂ ʻಲಾರ್ಡ್ಸ್‌ ಬವುಮಾʼ ತಂಡ ಸೋಲಿನ ರುಚಿ ತೋರಿಸಿದೆ.

    ಹೌದು. ಕಳೆದ ಒಂದು ದಶಕದಿಂದ ಫೈನಲ್​ನಲ್ಲಿ ಸೋಲು ಕಾಣದ ಜೋಶ್ ಹೇಜಲ್ವುಡ್‌ (Josh Hazlewood) ಹಾಗೂ ಮಿಚೆಲ್‌ ಸ್ಟಾರ್ಕ್‌ ಗೆಲುವಿನ ನಾಗಾಲೋಟಕ್ಕೆ ಕೊನೆಗೂ ಬ್ರೇಕ್‌ ಬಿದ್ದಿದೆ. ಇದನ್ನೂ ಓದಿ: ದ. ಆಫ್ರಿಕಾ ಈಗ ʻವಿಶ್ವ ಟೆಸ್ಟ್‌ ಚಾಂಪಿಯನ್‌ʼ – 27 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಂಡ ಹರಿಣರು

    ಹೇಜಲ್ವುಡ್‌ 2012ರಿಂದಲೂ ಫೈನಲ್‌ನಲ್ಲಿ ಒಂದೇ ಒಂದು ಬಾರಿಯೂ ಸೋತಿರಲಿಲ್ಲ ಅನ್ನೋದು ಗಮನಾರ್ಹ. 2012ರ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಫೈನಲ್ ಆಡಿದ್ದ ಹೇಜಲ್ವುಡ್‌ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇದಾದ ಬಳಿಕ 2015 ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಕಣಕ್ಕಿಳಿದಿದ್ದ ಜೋಶ್‌ ಆಸ್ಟ್ರೇಲಿಯಾ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

    ಇನ್ನೂ 2020ರ ಬಿಗ್ ಬ್ಯಾಷ್ ಲೀಗ್​ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದಾಗಲೂ ಜೋಶ್ ತಂಡದಲ್ಲಿದ್ದರು. ಹಾಗೆಯೇ 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಐಪಿಎಲ್​ ಟ್ರೋಫಿ ಮುಡಿಗೇರಿಸಿದಾಗಲೂ ಹೇಝಲ್​ವುಡ್ ಪ್ಲೇಯಿಂಗ್‌-11ನಲ್ಲಿದ್ದರು. ಅದಾದ ಬಳಿಕ ಅದೇ ವರ್ಷ ಟಿ20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಜೋಶ್ ಹೇಝಲ್​ವುಡ್ ಪ್ರಮುಖ ಪಾತ್ರವಹಿಸಿದ್ದರು. ಇದನ್ನೂ ಓದಿ: `ಬನ್ನಿ ಹಾಪ್ ಕ್ಯಾಚ್’ ರೂಲ್ಸ್‌ಗೆ ಐಸಿಸಿ ಬ್ರೇಕ್ – ಶೀಘ್ರವೇ ಹೊಸ ರೂಲ್ಸ್

    ಇನ್ನೂ 2023 ರಲ್ಲಿ ಆಸ್ಟ್ರೇಲಿಯಾ ತಂಡದ ಏಕದಿನ ವಿಶ್ವಕಪ್ ಗೆಲ್ಲುವಲ್ಲಿಯೂ ಹೇಜಲ್ವುಡ್‌ ಪಾತ್ರ ಅಪಾರವಾಗಿತ್ತು. ಅಷ್ಟೇ ಅಲ್ಲ 18 ವರ್ಷಗಳ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ಜೋಶ್‌ ನಿರ್ಣಾಯಕ ಪಾತ್ರ ವಹಿಸಿದ್ದರು. ಆರ್‌ಸಿಬಿ ಪರ ಅತಿಹೆಚ್ಚು ಹಾಗೂ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ 2ನೇ ಆಟಗಾರನಾಗಿದ್ದರು.

    ಹೀಗೆ ಕಳೆದ 1 ದಶಕದಿಂದ ಜೋಶ್ ಹೇಜಲ್ವುಡ್‌ ಫೈನಲ್‌ ಪಂದ್ಯಗಳಲ್ಲಿ ಸೋಲಿನ ರುಚಿ ನೋಡಿಯೇ ಇರಲಿಲ್ಲ. ಹೀಗಾಗಿಯೇ ಹೇಝಲ್​ವುಡ್ ಅವರನ್ನು ಅಂತಿಮ ಪಂದ್ಯದ ಲಕ್ಕಿ ಚಾರ್ಮ್​ ಎಂದು ಪರಿಗಣಿಸಲಾಗಿತ್ತು. ಅಲ್ಲದೇ ಮಿಚೆಲ್‌ ಸ್ಟಾರ್ಕ್‌ ಕೂಡ ಫೈನಲ್‌ ಪಂದ್ಯದಲ್ಲಿ ಸೋಲೇ ನೋಡದಿರುವುದು ಮತ್ತೊಂದು ವಿಶೇಷ ಎನಿಸಿತ್ತು. ಆದ್ರೆ ಈ ಬಾರಿ ಫೈನಲ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫಿಕ್ರಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ ಕಿರೀಟಕ್ಕೆ ಮುತ್ತಿಟ್ಟಿದೆ.

    ಫೈನಲ್‌ ಪಂದ್ಯದಲ್ಲಿ ಗೆಲವಿಗೆ 282 ರನ್‌ ಗುರಿ ಪಡೆದ ಆಫ್ರಿಕಾ 5 ವಿಕೆಟ್‌ಗಳ ಗೆಲುವು ಸಾಧಿಸಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಆರ್‌ಸಿಬಿ ಮಾರ್ಕೆಟಿಂಗ್‌ ಹೆಡ್‌ ಸೇರಿ ನಾಲ್ವರಿಗೆ ಷರತ್ತುಬದ್ಧ ಜಾಮೀನು

  • ದ. ಆಫ್ರಿಕಾ ಈಗ ʻವಿಶ್ವ ಟೆಸ್ಟ್‌ ಚಾಂಪಿಯನ್‌ʼ – 27 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಂಡ ಹರಿಣರು

    ದ. ಆಫ್ರಿಕಾ ಈಗ ʻವಿಶ್ವ ಟೆಸ್ಟ್‌ ಚಾಂಪಿಯನ್‌ʼ – 27 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಂಡ ಹರಿಣರು

    ಲಂಡನ್‌: ಕೊನೆಗೂ ದಕ್ಷಿಣ ಆಫ್ರಿಕಾ (South Africa) ತಂಡ ಚೋಕರ್ಸ್‌ ಹಣೆಪಟ್ಟಿ ಕಳಚಿದ್ದು ಐಸಿಸಿ ಟ್ರೋಫಿ ಗೆಲ್ಲಬೇಕೆಂಬ ದಶಕಗಳ ಕನಸು ನನಸು ಮಾಡಿಕೊಂಡಿದೆ. ಇಲ್ಲಿನ ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC 2025) ಫೈನಲ್‌ನಲ್ಲಿ ಆಸೀಸ್‌ ವಿರುದ್ಧ 5 ವಿಕೆಟ್‌ಗಳ‌ ಅಮೋಘ ಜಯ ಸಾಧಿಸಿ ವಿಶ್ವ ಟೆಸ್ಟ್‌ ಚಾಂಪಿಯನ್ಸ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

    2019ರಲ್ಲಿ ವಿಶ್ವ ಟೆಸ್ಟ್‌ ಚಾಂಪಿಯನ್ಸ್‌ ಶಿಪ್‌ ಆರಂಭಿಸಲಾಯಿತು. ಚೊಚ್ಚಲ ಆವೃತ್ತಿಯಲ್ಲೇ ನ್ಯೂಜಿಲೆಂಡ್‌ ಚಾಂಪಿಯನ್‌ ಆದ್ರೆ 2021-25ರ 2ನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾ (Australia) ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಈ ಎರಡೂ ಆವೃತ್ತಿಗಳಲ್ಲೂ ಟೀಂ ಇಂಡಿಯಾ ರನ್ನರ್‌ ಅಪ್‌ ಪ್ರಶಸ್ತಿಗೆ ಪಾತ್ರವಾಗಿತ್ತು. ಇದೀಗ ಮೂರನೇ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

    ಗೆಲುವಿಗೆ 282 ರನ್‌ಗಳ ಗುರಿ ಪಡೆದಿದ್ದ ಆಫ್ರಿಕಾ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಗೆಲುವಿಗೆ ಇನ್ನೂ 69 ರನ್‌ಗಳಷ್ಟೇ ಬೇಕಿತ್ತು. ಈ ನಡುವೆ ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮ್ಮಿನ್ಸ್‌ (Pat Cummins) ಅವರ ಮ್ಯಾಜಿಕ್‌ನಿಂದ ವಿಕೆಟ್‌ ಪಡೆದ ಹೊರತಾಗಿಯೂ ಏಡನ್‌ ಮಾರ್ಕ್ರಂ ಅವರ ಏಕಾಂಗಿ ಹೋರಾಟ ಫಲ ಕೊಟ್ಟಿತು. ಅಂತಿಮವಾಗಿ ದಕ್ಷಿಣ ಆಫ್ರಿಕಾ 5 ವಿಕೆಟ್‌ಗಳ ಗೆಲುವು ಸಾಧಿಸಿ ಟ್ರೋಫಿಗೆ ಮುತ್ತಿಟ್ಟಿತು.

    4ನೇ ದಿನದಾಟದಲ್ಲಿ 69 ರನ್‌ಗಳ ಹಿನ್ನಡೆಯೊಂದಿಗೆ ಕ್ರೀಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ಆಸಿಸ್‌ ಬೌಲರ್‌ಗಳ ಬಿಗಿ ಹಿಡಿತದ ನಡುವೆಯೂ ರನ್‌ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಟೆಂಬ ಬವುಮಾ, ಮಾರ್ಕ್ರಂ ವಿಕೆಟ್‌ ಕಳೆದುಕೊಂಡ ಹೊರತಾಗಿಯೂ 69 ರನ್‌ ಪೇರಿಸಿ ಗೆಲುವಿನ ದಡ ಸೇರಿತು.

    ಮಾರ್ಕ್ರಂ-ಬವುಮಾ ಶತಕದ ಜೊತೆಯಾಟ:
    70 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ದ. ಆಫ್ರಿಕಾ ಸಂಕಷ್ಟಕ್ಕೀಡಾಗಿತ್ತು. ಈ ವೇಳೆ ಜೊತೆಯಾದ ಟೆಂಬಾ, ಮಾರ್ಕ್ರಂ (Aiden Markram) ಜೋಡಿ 3ನೇ ವಿಕೆಟಿಗೆ ಬರೋಬ್ಬರಿ 147 ರನ್‌ಗಳ ಜೊತೆಯಾಟ ನೀಡಿತು. ಆಸೀಸ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಟೆಂಬಾ (Temba Bavuma) 116 ಎಸೆತಗಳಲ್ಲಿ 69 ರನ್‌ ಗಳಿಸಿ ಔಟಾದರು. ಈ ಬೆನ್ನಲ್ಲೇ ಕೊನೆಯವರೆಗೂ ಹೋರಾಡಿದ ಮಾರ್ಕ್ರಂ 207 ಎಸೆತಗಳಲ್ಲಿ 136 ರನ್‌ ಬಾರಿಸಿ ಔಟಾದರು. ರಾಯಲ್‌ ರಿಕಲ್ಟನ್‌ 6 ರನ್‌, ಮುಲ್ಡರ್‌ 27 ರನ್‌, ಸ್ಟಬ್ಸ್‌ 8 ರನ್‌, ಗಳಿಸಿ ಔಟಾದ್ರೆ, ಡೇವಿಡ್ ಬೆಡಿಂಗ್ಹ್ಯಾಮ್ ಅಜೇಯ 21 ರನ್‌, ಕೈಲ್ ವೆರ್ರೆನ್ ಅಜೇಯ 4 ರನ್‌ ಕೊಡುಗೆ ನೀಡಿದರು.

    ಇದಕ್ಕೂ ಮೊದಲು ಬ್ಯಾಟ್‌ ಬೀಸಿದ್ದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 207 ರನ್‌ಗಳಿಗೆ ಆಲೌಟ್‌ ಆಗಿತ್ತು. ಮಿಚೆಲ್‌ ಸ್ಟ್ರಾರ್ಕ್‌ 58 ರನ್‌ ಹೊಡೆದರೆ ಹೇಜಲ್‌ವುಡ್‌ 17 ರನ್‌ ಹೊಡೆದು ಔಟಾದರು. ಕಗಿಸೊ ರಬಾಡ 4 ವಿಕೆಟ್‌, ಲುಂಗಿ ಎನ್‌ಗಿಡಿ 3 ವಿಕೆಟ್‌ ಪಡೆದರು. ಜಾನ್‌ಸೆನ್‌, ಮುಲ್ಡರ್‌, ಮಾರ್ಕ್ರಾಮ್ ತಲಾ ಒಂದೊಂದು ವಿಕೆಟ್‌ ಪಡೆದರು.

    ಚೋಕರ್ಸ್ ಪಟ್ಟ ಕಳಚಿದ ಹರಿಣರು
    ದಕ್ಷಿಣ ಆಫ್ರಿಕಾ ತಂಡ ಇಲ್ಲಿಯವರೆಗೆ ವಿಶ್ವಕಪ್‌, ಟಿ20 ಲೀಗ್‌ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್‌ ಪ್ರವೇಶಿಸುತ್ತಿತ್ತು. ಆದ್ರೆ ಪ್ರತಿ ಬಾರಿಯೂ ಪ್ರತಿ ಬಾರಿಯೂ ಸೆಮಿಫೈನಲ್‌, ಫೈನಲ್‌ನಲ್ಲಿ ಸೋತು ಕಣ್ಣೀರಿನ ವಿದಾಯ ಹೇಳುತ್ತಿತ್ತು.

    ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ 5 ಬಾರಿ ಸೆಮಿಫೈನಲ್‌ನಲ್ಲೇ ಸೋತಿತ್ತು. 1992, 1999, 2007, 2015, 2023 ರಲ್ಲಿ ಸೋಲು ಕಂಡಿತ್ತು. ಇತ್ತೀಚಿನ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲೂ ಸೆಮಿಸ್‌ನಲ್ಲಿ ಕಿವೀಸ್‌ ವಿರುದ್ಧ ಸೋತಿತ್ತು. ಕಳೆದ ವರ್ಷ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತದ ವಿರುದ್ಧ ಸೋತಿತ್ತು. ವಿಶ್ವಕಪ್‌ನ ಲೀಗ್‌ ಹಂತದಲ್ಲಿ ಅದ್ಭುತ ಪ್ರದರ್ಶನ ತೋರಿ ಪದೇ ಪದೆ ನಾಕೌಟ್ ಪಂದ್ಯಗಳಲ್ಲಿ ಎಡವುತ್ತಿರುವ ಕಾರಣ ಆಫ್ರಿಕಾಗೆ ಚೋಕರ್ಸ್ ಪಟ್ಟ ಅಂಟಿಕೊಂಡಿತ್ತು.

  • ಚೋಕರ್ಸ್‌ ಪಟ್ಟ ಕಳಚಿ ಚಾಂಪಿಯನ್‌ ಆಗಲು ಆಫ್ರಿಕಾಗೆ ಬೇಕಿದೆ ಕೇವಲ 69 ರನ್‌!

    ಚೋಕರ್ಸ್‌ ಪಟ್ಟ ಕಳಚಿ ಚಾಂಪಿಯನ್‌ ಆಗಲು ಆಫ್ರಿಕಾಗೆ ಬೇಕಿದೆ ಕೇವಲ 69 ರನ್‌!

    ಲಂಡನ್‌: ಐಪಿಎಲ್‌ನಲ್ಲಿ (IPL) 18 ವರ್ಷದ ಬಳಿಕ ಆರ್‌ಸಿಬಿ (RCB) ಚಾಂಪಿಯನ್‌ ಆಗಿತ್ತು. ಈಗ ದಕ್ಷಿಣ ಆಫ್ರಿಕಾ (South Africa) ತಂಡ ತನಗೆ ಅಂಟಿದ್ದ ಚೋಕರ್ಸ್‌ (Chokers) ಪಟ್ಟವನ್ನು ಕಳಚಿ ಚಾಂಪಿಯನ್‌ ಪಟ್ಟ ಅಲಂಕರಿಸುವ ಎಲ್ಲಾ ಸಾಧ್ಯತೆಯಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ (WTC Final) ಕಳೆದ ಬಾರಿ ಚಾಂಪಿಯನ್‌ ಆಸ್ಟ್ರೇಲಿಯಾವನ್ನು (Australia ಸೋಲಿಸಿ ಐತಿಹಾಸಿಕ ಸಾಧನೆ ನಿರ್ಮಿಸಲು ಕೇವಲ 69 ರನ್‌ಗಳ ಅಗತ್ಯವಿದೆ.

    ಎರಡನೇ ಇನ್ನಿಂಗ್ಸ್‌ನಲ್ಲಿ 282 ರನ್‌ಗಳ ಗುರಿಯನ್ನು ಪಡೆದ ಆಫ್ರಿಕಾ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿ ಸುಭದ್ರ ಸ್ಥಿತಿಯಲ್ಲಿದೆ. ಐಡೆನ್ ಮಾರ್ಕ್ರಾಮ್ (Aiden Markram) ಔಟಾಗದೇ 102 ರನ್‌ (159 ಎಸೆತ, 11ಬೌಂಡರಿ) ಹೊಡೆದರೆ ನಾಯಕ ಟೆಂಬ ಬವುಮಾ (Temba Bavuma) ಔಟಾಗದೇ 65 ರನ್(121‌ ಎಸೆತ, 5 ಬೌಂಡರಿ) ಹೊಡೆದು ಕ್ರೀಸ್‌ನಲ್ಲಿದ್ದಾರೆ. ಇನ್ನು 8 ವಿಕೆಟ್‌ಗಳಿದ್ದು ನಾಳೆ ಯಾವುದೇ ಪವಾಡ ನಡೆಯದೇ ಇದ್ದರೆ, ಮಳೆಯಿಂದ ಪಂದ್ಯ ರದ್ದಾಗದೇ ಇದ್ದರೆ ಮೊದಲ ಬಾರಿಗೆ ಆಫ್ರಿಕಾ ಐಸಿಸಿ ಟ್ರೋಫಿಗೆ ಮುತ್ತಿಕ್ಕಲಿದೆ.

    ಆಫ್ರಿಕಾ ಆರಂಭದಲ್ಲೇ ರಿಕೆಲ್ಟನ್ 9 ರನ್‌ ಗಳಿಸಿ ಔಟಾದಾಗ ಆಘಾತ ಎದುರಿಸಿತ್ತು. ಆದರೆ ಎರಡನೇ ವಿಕೆಟಿಗೆ ಮಾರ್ಕ್ರಾಮ್ ಮತ್ತು ಮುಲ್ಡರ್ 93 ಎಸೆತಗಳಲ್ಲಿ 61 ರನ್‌ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು. ಈ ನಡುವೆ ಮುಲ್ಡರ್‌ 27 ರನ್‌ ಗಳಿಸಿ ಔಟಾದರು. ನಂತರ ಮುರಿಯದ ಮೂರನೇ ವಿಕೆಟಿಗೆ ಮಾರ್ಕ್ರಾಮ್ ಮತ್ತು ಬವುಮಾ 232 ಎಸೆತಗಳಲ್ಲಿ 143 ರನ್‌ ಜೊತೆಯಾಟವಾಡಿ ಗೆಲುವಿನ ಹತ್ತಿರಕ್ಕೆ ತಂಡವನ್ನು ತಂದಿದ್ದಾರೆ.

    ಇದಕ್ಕೂ ಮೊದಲು ಬ್ಯಾಟ್‌ ಬೀಸಿದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 207 ರನ್‌ಗಳಿಗೆ ಆಲೌಟ್‌ ಆಗಿತ್ತು. ಮಿಚೆಲ್‌ ಸ್ಟ್ರಾರ್ಕ್‌ 58 ರನ್‌ ಹೊಡೆದರೆ ಹೇಜಲ್‌ವುಡ್‌ 17 ರನ್‌ ಹೊಡೆದು ಔಟಾದರು.

    ಕಗಿಸೊ ರಬಾಡ 4 ವಿಕೆಟ್‌, ಲುಂಗಿ ಎನ್‌ಗಿಡಿ 3 ವಿಕೆಟ್‌ ಪಡೆದರು. ಜಾನ್‌ಸೆನ್‌, ಮುಲ್ಡರ್‌, ಮಾರ್ಕ್ರಾಮ್ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ದುರಂತ – ಕಪ್ಪು ಪಟ್ಟಿ ಧರಿಸಿ ಟೀಂ ಇಂಡಿಯಾ ಆಟಗಾರರಿಂದ ಮೌನಾಚರಣೆ

    ಚೋಕರ್ಸ್ ಪಟ್ಟ
    ದಕ್ಷಿಣ ಆಫ್ರಿಕಾ ತಂಡ ಇಲ್ಲಿಯವರೆಗೆ ವಿಶ್ವಕಪ್‌, ಟಿ 20 ಲೀಗ್‌ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಆಫ್ರಿಕಾ ಸೆಮಿಫೈನಲ್‌ ಪ್ರವೇಶಿಸುತ್ತಿತ್ತು. ಆದರೆ ಸೆಮಿಫೈನಲ್‌ನಲ್ಲಿ ಪ್ರತಿ ಬಾರಿಯೂ ಸೋಲು ಕಾಣುತ್ತಿತ್ತು.

    ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ 5 ಬಾರಿ ಸೆಮಿಫೈನಲ್‌ನಲ್ಲೇ ಸೋತಿತ್ತು. 1992, 1999, 2007, 2015, 2023 ರಲ್ಲಿ ಸೋಲು ಕಂಡಿತ್ತು. ವಿಶ್ವಕಪ್‌ನ ಲೀಗ್‌ ಹಂತದಲ್ಲಿ ಅದ್ಭುತ ಪ್ರದರ್ಶನ ತೋರಿ ಪದೇ ಪದೆ ನಾಕೌಟ್ ಪಂದ್ಯಗಳಲ್ಲಿ ಎಡವುತ್ತಿರುವ ಕಾರಣ ಆಫ್ರಿಕಾಗೆ ಚೋಕರ್ಸ್ ಪಟ್ಟ ಅಂಟಿಕೊಂಡಿತ್ತು.

  • ಕಮ್ಮಿನ್ಸ್‌ ಬೆಂಕಿ ಬೌಲಿಂಗ್‌ – 218 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯಾ

    ಕಮ್ಮಿನ್ಸ್‌ ಬೆಂಕಿ ಬೌಲಿಂಗ್‌ – 218 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯಾ

    ಲಂಡನ್‌: ನಾಯಕ ಪ್ಯಾಟ್‌ ಕಮ್ಮಿನ್ಸ್‌ (Pat Cummins) ಅವರ ಮಾರಕ ಬೌಲಿಂಗ್‌ ನೆರವಿನಿಂದ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ನಲ್ಲಿ (WTC Final) ಆಸ್ಟ್ರೇಲಿಯಾ (Australia) 218 ರನ್‌ಗಳ ಮುನ್ನಡೆ ಸಾಧಿಸಿದೆ.

    ಬುಧವಾರ 43 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ (South Africa) 95 ರನ್‌ ಸೇರಿಸಿ 138 ರನ್‌ಗಳಿಗೆ ಆಲೌಟ್‌ ಆಯ್ತು.

    ನಾಯಕ ಟೆಂಬಾ ಬವುಮಾ 36 ರನ್‌ ಹೊಡೆದರೆ ಡೇವಿಡ್ ಬೆಡಿಂಗ್ಹ್ಯಾಮ್ 45 ರನ್‌ ಹೊಡೆದು ಔಟಾದರು. ಪ್ಯಾಟ್‌ ಕಮ್ಮಿನ್ಸ್‌ ಅವರು 28 ರನ್‌ ನೀಡಿ 6 ವಿಕೆಟ್‌ ಪಡೆಯುವ ಮೂಲಕ ಆಫ್ರಿಕಾ ಬ್ಯಾಟಿಂಗ್‌ ಶಕ್ತಿಯನ್ನೇ ಕೆಡವಿದರು.

    ನಂತರ ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 8 ವಿಕೆಟ್‌ ನಷ್ಟಕ್ಕೆ 144 ರನ್‌ ಗಳಿಸಿದೆ. ಅಲೆಕ್ಸ್‌ ಕ್ಯಾರಿ 43 ರನ್‌ (50 ಎಸೆತ, 5 ಬೌಂಡರಿ) ಹೊಡೆದು ಔಟಾದರು. ಎರಡನೇ ಇನ್ನಿಂಗ್ಸ್‌ನಲ್ಲಿ 218 ರನ್‌ ಮುನ್ನಡೆಯಲ್ಲಿರುವ ಆಸ್ಟ್ರೇಲಿಯಾ ಉಳಿದ 2 ವಿಕೆಟ್‌ ಗಳಿಂದ ಎಷ್ಟು ರನ್‌ ಗಳಿಸುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.

     

    ಎರಡನೇ ದಿನ ಒಟ್ಟು 14 ವಿಕೆಟ್‌ ಪತನಗೊಂಡಿದೆ. ಕಗಿಸೋ ರಬಡಾ ಮತ್ತು ಲುಂಗಿ ಎನ್‌ಗಿಡಿ ತಲಾ ಮೂರು ವಿಕೆಟ್‌ ಪಡೆದರೆ ಜಾನ್‌ಸೆನ್‌ ಮತ್ತು ಮುಲ್ಡರ್‌ ತಲಾ ಒಂದೊಂದು ವಿಕೆಟ್‌ ಪಡೆದರು.