Tag: Australia Prime Minister

  • ಆಸ್ಟ್ರೇಲಿಯಾ ಪ್ರಧಾನಿಯಿಂದ ಸಮೋಸಾ ತಯಾರಿ- ಜೊತೆಯಾಗಿ ಸವಿಯೋಣ ಎಂದ ಮೋದಿ

    ಆಸ್ಟ್ರೇಲಿಯಾ ಪ್ರಧಾನಿಯಿಂದ ಸಮೋಸಾ ತಯಾರಿ- ಜೊತೆಯಾಗಿ ಸವಿಯೋಣ ಎಂದ ಮೋದಿ

    ನವದೆಹಲಿ: ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಈ ಭಾನುವಾರವನ್ನು ಗರಿ ಗರಿಯಾದ ಸಮೋಸಾ ಜೊತೆಗೆ ಮಾವಿನ ಚಟ್ನಿ ತಯಾರಿಸುವ ಮೂಲಕ ಕಳೆದಿದ್ದು, ಟ್ವಿಟ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಹಂಚಿಕೊಂಡಿದ್ದಾರೆ.

    ಸಮೋಸಾ ಹಾಗೂ ಮಾವಿನ ಚಟ್ನಿ ಮಾಡಿದ್ದನ್ನು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ಯಾಗ್ ಮಾಡಿ ಸಾಲುಗಳನ್ನು ಬರೆದಿದ್ದಾರೆ. ಟ್ವೀಟ್‍ನಲ್ಲಿ ಬರೆದುಕೊಂಡಿರುವ ಮಾರಿಸನ್, ಭಾನುವಾರದ ವಿಶೇಷ ಸಮೋಸಾ ಹಾಗೂ ಮಾವಿನ ಚಟ್ನಿ ಸಿದ್ಧಪಡಿಸಿದ್ದೇನೆ. ಇದನ್ನು ನರೇಂದ್ರ ಮೋದಿಯವರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಅಲ್ಲದೆ ಈ ವಾರ ವಿಡಿಯೋ ಲಿಂಕ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುತ್ತೇನೆ. ಅವರು ಸಸ್ಯಹಾರಿ, ಹೀಗಾಗಿ ಅವರೊಂದಿಗೆ ಇದನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್‍ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ಹಿಂದೂ ಮಹಾಸಾಗರದೊಂದಿಗೆ ಕನೆಕ್ಟ್ ಆಗಿದ್ದೇವೆ, ಭಾರತೀಯ ಸಮೋಸಾ ಮೂಲಕ ಒಗ್ಗಟ್ಟಾಗಿದ್ದೇವೆ. ಸಮೋಸಾ ಡೆಲಿಶಿಯಸ್ ಆಗಿ ಕಾಣುತ್ತಿದೆ. ಕೊರೊನಾ ವೈರಸ್‍ನ ಗೆಲುವು ಸಾಧಿಸಿದ ಬಳಿಕ ಜೊತೆಯಾಗಿ ಸಮೋಸಾ ಸವಿಯೋಣ. 4ರಂದು ವಿಡಿಯೋ ಮೀಟ್‍ನಲ್ಲಿ ಭೇಟಿಯಾಗೋಣ ಎಂದು ತಿಳಿಸಿದ್ದಾರೆ.

  • ಮೈದಾನದಲ್ಲಿ ಡ್ರಿಂಕ್ಸ್ ಬಾಯ್ ಆಗಿ ಕೆಲಸ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ

    ಮೈದಾನದಲ್ಲಿ ಡ್ರಿಂಕ್ಸ್ ಬಾಯ್ ಆಗಿ ಕೆಲಸ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ

    ಕ್ಯಾನ್ಬೆರಾ: ಆಸ್ಟ್ರೇಲಿಯಾದ ಓವಲ್ ಕ್ರಿಕೆಟ್ ಮೈದಾನದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಅಭ್ಯಾಸದ ಪಂದ್ಯದ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಕ್ರಿಕೆಟ್ ಆಟಗಾರರಿಗೆ ನೀರು ಹಾಗೂ ಪಾನೀಯ ವಿತರಿಸುವ ಮೂಲಕ ಡ್ರಿಂಕ್ಸ್ ಬಾಯ್ ಆಗಿ ಕೆಲಸ ಮಾಡಿದ್ದಾರೆ.

    ಆಸ್ಟ್ರೇಲಿಯಾ ಪ್ರಧಾನಿಗಳ ಇಲೆವನ್ ತಂಡ ಹಾಗೂ ಶ್ರೀಲಂಕಾ ನಡುವಿನ ಅಭ್ಯಾಸದ ಪಂದ್ಯದ ಸಂದರ್ಭದಲ್ಲಿ ಡ್ರಿಂಕ್ಸ್ ಬಾಯ್ ಆಗಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಕಾರ್ಯನಿರ್ವಹಿಸಿದ್ದಾರೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.

    ಮಾರಿಸನ್ ಪ್ರಧಾನಿಯಾಗಿದ್ದರೂ ಸಹ ತನ್ನ ತಂಡದ ಆಟಗಾರರಿಗೆ ನೀರು ಹಾಗೂ ಪಾನೀಯವನ್ನು ಹೊತ್ತೊಯ್ದಿದ್ದು ಕಂಡು ಬಂತು. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದ್ದು, ಪ್ರಧಾನಿಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.

    ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‍ಗಳಲ್ಲಿ 8 ವಿಕೆಟ್‍ಗಳ ನಷ್ಟಕ್ಕೆ ಕೇವಲ 130 ರನ್ ಗಳಿಸಲು ಶಕ್ತವಾಯಿತು. ಆರಂಭಿಕ ಆಟಗಾರ ಹ್ಯಾರಿ ನೀಲ್ಸನ್ 50 ಎಸೆತಗಳಲ್ಲಿ 79 ರನ್ ಗಳಿಸಿದರು. ಆದರೆ ವಿಕೆಟ್‍ಗಳು ಬೇಗನೇ ಉರುಳಿದ್ದರಿಂದ 9 ವಿಕೆಟ್‍ಗಳನ್ನು ಕಳೆದುಕೊಂಡಿತು. ಕೊನೆಗೆ 19.5 ಓವರ್ ನಲ್ಲಿ 132 ರನ್ ಗಳಿಸಿ ಗೆಲುವು ದಾಖಲಿಸಿತು.