Tag: australia

  • Ind vs Aus T20I | ಮೊದಲ ಪಂದ್ಯ ಮಳೆಯಾಟಕ್ಕೆ ಬಲಿ – ಭಾರತಕ್ಕೆ ನಿರಾಸೆ

    Ind vs Aus T20I | ಮೊದಲ ಪಂದ್ಯ ಮಳೆಯಾಟಕ್ಕೆ ಬಲಿ – ಭಾರತಕ್ಕೆ ನಿರಾಸೆ

    ಕ್ಯಾನ್ಬೆರಾ: ಭಾರತ ಮತ್ತು ಆಸ್ಟ್ರೇಲಿಯಾ (Ind vs AUS) ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಮಳೆಯಾಟವೇ ಮೇಲಾಗಿದೆ. ನಿರಂತರ ಮಳೆ (Rain) ಸುರಿಯುತ್ತಿದ್ದ ಕಾರಣ ಇಂದಿನ ಪಂದ್ಯವನ್ನ ರದ್ದುಗೊಳಿಸಲಾಗಿದೆ.

    ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟಿ20 ಸರಣಿ ಇಂದಿನಿಂದ ಶುರುವಾಗಿದ್ದು, ಮೊದಲ ಪಂದ್ಯ ಮಳೆಗೆ ಬಲಿಯಾಗಿದೆ. ಕ್ಯಾನ್ಬೆರಾದ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 35 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿತು. 5 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 43 ರನ್‌ ಗಳಿಸಿದ್ದಾಗ ಮೊದಲ ಬಾರಿಗೆ ಮಳೆ ಶುರುವಾಯ್ತು. ಕೆಲ ಕಾಲ ಬಿಡುವು ಕೊಟ್ಟಿತ್ತು. ಇದನ್ನೂ ಓದಿ: ಆಸೀಸ್‌ ವಿರುದ್ಧ 2 ಸಿಕ್ಸರ್‌ ಸಿಡಿಸಿ ವಿಶೇಷ ದಾಖಲೆ ಬರೆದ ಸೂರ್ಯ

    ಮತ್ತೆ ಬ್ಯಾಟಿಂಗ್‌ ಶುರು ಮಾಡಿದ ಗಿಲ್‌, ಸೂರ್ಯಕುಮಾರ್‌ ಯಾದವ್‌ (Suryakumar Yadav) ಜೋಡಿ ಆಸೀಸ್‌ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿತು. 10ನೇ ಓವರ್‌ನ ಮೊದಲ 4 ಎಸೆತಗಳಲ್ಲೇ ವೇಗಿ ನಾಥನ್‌ ಎಲ್ಲಿಸ್‌ಗೆ ಸೂರ್ಯ 15 ರನ್‌ ಬಾರಿಸಿದ್ದರು. ಇದರೊಂದಿಗೆ ಭಾರತ ಬೃಹತ್‌ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿತ್ತು. ಅಲ್ಲದೇ ಪಂದ್ಯ ಗೆಲ್ಲುವ ವಿಶ್ವಾಸವೂ ಇತ್ತು. ಆದ್ರೆ ಮಳೆಯ ಬಿಡುವುಕೊಡದ ಹಿನ್ನೆಲೆ ಪಂದ್ಯವನ್ನು ಯಾವುದೇ ಫಲಿತಾಂಶವಿಲ್ಲದೇ ರದ್ದುಗೊಳಿಸಲಾಯಿತು. ಅಕ್ಟೋಬರ್‌ 31ರ ಶುಕ್ರವಾರ ಮೆಲ್ಬರ್ನ್‌ ಕ್ರೀಡಾಂಗಣದಲ್ಲಿ 2ನೇ ಟಿ20 ಪಂದ್ಯ ನಡೆಯಲಿದೆ. ಇದನ್ನೂ ಓದಿ: ICC ODI Rankings | ನಿವೃತ್ತಿ ವದಂತಿ ನಡುವೆಯೂ ನಂ.1 ಪಟ್ಟಕ್ಕೇರಿದ ಹಿಟ್‌ಮ್ಯಾನ್‌

    ಭಾರತದ ಪರ ಆರಂಭಿಕ ಅಭಿಷೇಕ್‌ ಶರ್ಮಾ 19 ರನ್‌ ಗಳಿಸಿ ಔಟಾದ್ರೆ, ನಾಯಕ ಸೂರ್ಯಕುಮಾರ್‌ ಯಾದವ್‌ 39 ರನ್‌ (24 ಎಸೆತ, 2 ಸಿಕ್ಸರ, 3 ಬೌಂಡರಿ), ಶುಭಮನ್‌ ಗಿಲ್‌ 37 ರನ್‌ (20 ಎಸೆತ, 1 ಸಿಕ್ಸರ್‌, 4 ಬೌಂಡರಿ) ಗಳಿಸಿ ಅಜೇಯರಾಗುಳಿದರು.

  • ಆಸೀಸ್‌ ವಿರುದ್ಧ 2 ಸಿಕ್ಸರ್‌ ಸಿಡಿಸಿ ವಿಶೇಷ ದಾಖಲೆ ಬರೆದ ಸೂರ್ಯ

    ಆಸೀಸ್‌ ವಿರುದ್ಧ 2 ಸಿಕ್ಸರ್‌ ಸಿಡಿಸಿ ವಿಶೇಷ ದಾಖಲೆ ಬರೆದ ಸೂರ್ಯ

    ಕ್ಯಾನ್ಬೆರಾ: ಆಸ್ಟ್ರೇಲಿಯಾ (Australia) ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 2 ಭರ್ಜರಿ ಸಿಕ್ಸರ್‌ ಸಿಡಿಸುವ ಮೂಲಕ ಟೀಂ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ವಿಶೇಷ ದಾಖಲೆ ಬರೆದಿದ್ದಾರೆ.

    ಹೌದು. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಇಂದು ಭಾರತ ಆಡುತ್ತಿದೆ. ಕ್ಯಾನ್ಬೆರಾದ ಮನುಕಾ ಓವಲ್ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ (Team India) 9.4 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 97 ರನ್‌ ಗಳಿಸಿದೆ. ಬಳಿಕ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಇದನ್ನೂ ಓದಿ: ICC ODI Rankings | ನಿವೃತ್ತಿ ವದಂತಿ ನಡುವೆಯೂ ನಂ.1 ಪಟ್ಟಕ್ಕೇರಿದ ಹಿಟ್‌ಮ್ಯಾನ್‌

    ಕ್ರೀಸ್‌ಗಿಳಿದ ಬೆನ್ನಲ್ಲೇ ಜೋಶ್‌ ಹೇಜಲ್ವುಡ್‌ಗೆ ಮೊದಲ ಸಿಕ್ಸರ್‌ (Sixes) ಬಾರಿಸಿದ ಸೂರ್ಯ 10 ಓವರ್‌ನ 3ನೇ ಎಸೆತದಲ್ಲಿ ನಾಥನ್‌ ಎಲ್ಲಿಸ್‌ಗೆ‌ ಭರ್ಜರಿ ಸಿಕ್ಸರ್‌ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 150 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚಿ ಸಿಕ್ಸರ್‌ ಸಿಡಿಸಿದ ವಿಶ್ವದ 5ನೇ ಬ್ಯಾಟರ್‌ ಹಾಗೂ ಭಾರತದ 2ನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 205 ಸಿಕ್ಸರ್‌ ಸಿಡಿಸಿರುವ ರೋಹಿತ್‌ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ವೈಯಕ್ತಿಕ ಹಗೆತನಕ್ಕೆ ಬಲಿಯಾಗ್ತಿದೆಯೇ ಟೀಂ ಇಂಡಿಯಾ – ಇನ್ನೂ ಮುಗಿದಿಲ್ವಾ ಕೊಹ್ಲಿ-ಗಂಭೀರ್‌ ಮುನಿಸು?

    T20I ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ವಿಶ್ವದ ಟಾಪ್‌-5 ಬ್ಯಾಟರ್ಸ್‌
    * ರೋಹಿತ್‌ ಶರ್ಮಾ – 159 ಪಂದ್ಯ – 205 ಸಿಕ್ಸರ್‌
    * ಮೊಹಮ್ಮದ್‌ ವಸೀಮ್‌ – 91 ಪಂದ್ಯ – 187 ಸಿಕ್ಸರ್
    * ಮಾರ್ಟಿನ್‌ ಗಪ್ಟಿಲ್‌ – 122 ಪಂದ್ಯ – 173 ಸಿಕ್ಸರ್
    * ಜೋಸ್‌ ಬಟ್ಲರ್‌ – 144 ಪಂದ್ಯ – 172‌ ಸಿಕ್ಸರ್‌
    * ಸೂರ್ಯಕುಮಾರ್‌ ಯಾದವ್‌ – 91 ಪಂದ್ಯ – 150 ಸಿಕ್ಸರ್‌

  • Shreyas Iyer In ICU | ಪಕ್ಕೆಲುಬು ಗಾಯದಿಂದ ರಕ್ತಸ್ರಾವ – ಐಸಿಯುನಲ್ಲಿ ಶ್ರೇಯಸ್‌ ಅಯ್ಯರ್‌ಗೆ ಚಿಕಿತ್ಸೆ

    Shreyas Iyer In ICU | ಪಕ್ಕೆಲುಬು ಗಾಯದಿಂದ ರಕ್ತಸ್ರಾವ – ಐಸಿಯುನಲ್ಲಿ ಶ್ರೇಯಸ್‌ ಅಯ್ಯರ್‌ಗೆ ಚಿಕಿತ್ಸೆ

    ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೇ ಪಂದ್ಯದಲ್ಲಿ ಕ್ಯಾಚ್‌ ಹಿಡಿಯವ ವೇಳೆ ಎಡ ಪಕ್ಕೆಲುಬು ಗಾಯಕ್ಕೆ ತುತ್ತಾಗಿ ಟೀಂ ಇಂಡಿಯಾ ಉಪನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಂತರಿಕ ರಕ್ತಸ್ರಾವದಿಂದ ಬಳಲುತ್ತಿರುವ ಅಯ್ಯರ್ ಅವರನ್ನ ಸಿಡ್ನಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    34ನೇ ಓವರ್‌ನಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್‌ ಕ್ಯಾರಿ (Alex Carey) ಬಾರಿಸಿದ ಚೆಂಡನ್ನು ಹಿಡಿಯಲು ಹಿಂದಕ್ಕೆ ಓಡಿ ಅದ್ಭುತ ಕ್ಯಾಚ್ ಪಡೆದುಕೊಂಡಿದ್ದರು. ಆ ಸಂದರ್ಭದಲ್ಲಿ ಅಯ್ಯರ್ ಪಕ್ಕೆಲುಬಿನ ಗಾಯಕ್ಕೆ ಒಳಗಾಗಿ ಮೈದಾನ ತೊರಿದಿದ್ದರು. ಅಲ್ಲದೇ ಡ್ರೆಸ್ಸಿಂಗ್‌ ರೂಮ್‌ಗೆ ಬರ್ತಿದ್ದಂತೆ ಅಯ್ಯರ್‌ ಅವರನ್ನ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವರದಿಯಲ್ಲಿ ಆಂತರಿಕ ರಕ್ತಸ್ರಾವವಾಗಿರುವುದು ಪತ್ತೆಯಾಗಿದ್ದು, ಕಳೆದ ಎರಡು ದಿನಗಳಿಂದ ಐಸಿಯುನಲ್ಲೇ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಿಳಿದುಬಂದಿದೆ.

    ರಕ್ತಸ್ರಾವದಿಂದ ಸೋಂಕು ಹರಡುವುದನ್ನ ತಪ್ಪಿಸುವ ಉದ್ದೇಶದಿಂದ ಚೇತರಿಕೆಯ ಆಧಾರದಲ್ಲಿ ಅವರನ್ನು ಎರಡರಿಂದ ಏಳು ದಿನಗಳ ಕಾಲ ವೈದ್ಯರ ಮೇಲ್ವಿಚಾರಣೆಯಲ್ಲಿಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

    ಬಿಸಿಸಿಐ ಹೇಳೋದೇನು?
    ಸ್ಕ್ಯಾನ್‌ ವರದಿಯಲ್ಲಿ ಪಕ್ಕೆಲುಬು ಗಾಯವಾಗಿರುವುದು ಕಂಡುಬಂದಿದೆ. ಆದ್ರೆ ವೈದ್ಯಕೀಯವಾಗಿ ಸ್ಥಿರವಾಗಿದ್ದು, ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ. ಸಿಡ್ನಿ ಮತ್ತು ಭಾರತದ ತಜ್ಞರ ಸಮನ್ವಯದೊಂದಿಗೆ ಬಿಸಿಸಿಐ ವೈದ್ಯಕೀಯ ತಂಡವು ಅಯ್ಯರ್‌ ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅದಕ್ಕಾಗಿ ವೈದ್ಯಕೀಯ ತಂಡವನ್ನ ಸಿಡ್ನಿಯಲ್ಲೇ ಇರಿಸಲಾಗಿದೆ ಎಂದು ಬಿಸಿಸಿಐ (BCCI) ಹೇಳಿದೆ.

    ಆರಂಭದಲ್ಲಿ ಅಯ್ಯ‌ರ್ ಸುಮಾರು 3 ವಾರಗಳ ಕಾಲ ಆಟದಿಂದ ಹೊರಗುಳಿಯಬೇಕಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ಪರಿಸ್ಥಿತಿ ಗಮನಿಸಿದರೆ ಅವರ ಚೇತರಿಕೆಯ ಅವಧಿ ಇನ್ನಷ್ಟು ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

  • 12 ವರ್ಷಗಳ ಬಳಿಕ ಆಸೀಸ್‌ ವಿರುದ್ಧ ಅಜೇಯ ಶತಕದ ಜೊತೆಯಾಟ; ಈಗಲೂ ಅದೇ ಜೋಶ್‌

    12 ವರ್ಷಗಳ ಬಳಿಕ ಆಸೀಸ್‌ ವಿರುದ್ಧ ಅಜೇಯ ಶತಕದ ಜೊತೆಯಾಟ; ಈಗಲೂ ಅದೇ ಜೋಶ್‌

    ಸಿಡ್ನಿ: ಒಬ್ಬ ಕ್ರಿಕೆಟ್‌ ಲೋಕದ ಕಿಂಗ್‌ (King Of Cricket), ಮತ್ತೊಬ್ಬ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಹಿಟ್‌ಮ್ಯಾನ್‌. ಯೆಸ್‌. ರೋ-ಕೊ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ? ಕ್ರಿಕೆಟ್‌ ಜಗತ್ತಿನಲ್ಲಿ ದಂತಕಥೆಗಳಾಗಿ ಉಳಿಯುವ ಈ ಜೋಡಿ ಅಭಿಮಾನಿಗಳಿಗೆ ಎಂದಿಗೂ ಅಚ್ಚುಮೆಚ್ಚು.

    ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಕ್ರಿಕೆಟ್‌ ಅಂಗಳದಲ್ಲಿ ಇಂದು ನಡೆದ ಏಕದಿನ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ರೋಹಿತ್‌ ಶರ್ಮಾ (Rohit Sharma) ಹಾಗೂ ವಿರಾಟ್‌ ಕೊಹ್ಲಿ (Virat Kohli) ಜೋಡಿ ಅಮೋಘ ಶತಕದ ಜೊತೆಯಾಟ ನೀಡಿ ಅಭಿಮಾನಿಗಳನ್ನ ರಂಜಿಸಿದೆ. 13 ವರ್ಷಗಳ ಬಳಿಕ ಆಸ್ಟ್ರೇಲಿಯಾ ವಿರುದ್ಧವೇ ವಿಕೆಟ್‌ ಬಿಟ್ಟುಕೊಡದೇ ರೋ-ಕೊ ಜೋಡಿ ಗೆಲುವು ತಂದುಕೊಟ್ಟಿದೆ. ಆದ್ರೆ ಅಂದು ಇಬ್ಬರೂ ಶತಕ ಸಿಡಿಸಿ ಅಬ್ಬರಿಸಿದರು. ಇಂದು ರನ್‌ ಕೊರತೆಯಿಂದ ರೋಹಿತ್‌ ಒಬ್ಬರೇ ಶತಕಗಳಿಸಲು ಸಾಧ್ಯವಾಯಿತು.

    2013ರಲ್ಲಿ ಏನಾಗಿತ್ತು?
    2013ರಲ್ಲಿ ಭಾರತ ಮತ್ತು ಆಸೀಸ್‌ (Asutralia) ನಡುವೆ 7 ಪಂದ್ಯಗಳ ಏಕದಿನ ಸರಣಿ ಆಯೋಜನೆಗೊಂಡಿತ್ತು. ಭಾರತ 3ರಲ್ಲಿ ಗೆಲುವು ಸಾಧಿಸಿತ್ತು. ಆಸ್ಟ್ರೇಲಿಯಾ 2ರಲ್ಲಿ ಗೆದ್ದಿದ್ದರೆ. 2 ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೇ ರದ್ದಾಗಿತ್ತು. ಈ ಸರಣಿಯ 2ನೇ ಪಂದ್ಯ ಜೈಪುರದ ಸವಾಯಿ ಮಾನ್ಸಿಂಗ್‌ ಕ್ರೀಡಾಂಗಣದಲ್ಲಿ ನಡೆದಿತ್ತು. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಆಸ್ಟ್ರೇಲಿಯಾ 5 ವಿಕೆಟ್‌ ನಷ್ಟಕ್ಕೆ 359 ರನ್‌ ಗಳಿಸಿ ಭಾರತಕ್ಕೆ 360 ರನ್‌ ಗುರಿ ನೀಡಿತ್ತು.

    ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಭಾರತ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿತ್ತು. ಆದ್ರೆ ಸ್ಫೋಟಕ ಪ್ರದರ್ಶನ ನೀಡುತ್ತಿದ್ದ ಶಿಖರ್‌ ಧವನ್‌ 86 ಎಸೆತಗಳಲ್ಲಿ 95 ರನ್‌ ಗಳಿಸಿದ್ದರು, ಶತಕದ ಅಂಚಿನಲ್ಲಿದ್ದಾಗಲೇ ವಿಕೆಟ್‌ ಒಪ್ಪಿಸಿ ನಿರಾಸೆ ಅನುಭವಿಸಿದ್ರು. ಬಳಿಕ ಕ್ರೀಸ್‌ಗಿಳಿದ ಕೊಹ್ಲಿ, ರೋಹಿತ್‌ ಶರ್ಮಾ ಜೊತೆಗೂಡಿ, ಇಬ್ಬರೂ ಅಬ್ಬರಿಸಲು ಶುರು ಮಾಡಿದರು. ಕೊಹ್ಲಿ 52 ಎಸೆತಗಳಲ್ಲಿ ಅಜೇಯ ಶತಕ ಗಳಿಸಿದ್ರೆ, ರೋಹಿತ್‌ ಅಜೇಯ 141 ರನ್‌ (123 ಎಸೆತ, 17 ಬೌಂಡರಿ, 4 ಸಿಕ್ಸರ್)‌ ಗಳಿಸುವ ಮೂಲಕ ಗೆಲುವು ತಂದುಕೊಟ್ಟಿದ್ದರು. ಅಂದು 104 ಎಸೆತಗಳಲ್ಲಿ 186 ರನ್‌ ಜೊತೆಯಾಟ ನೀಡಿದ ಈ ಜೋಡಿ 12 ವರ್ಷಗಳ ಬಳಿಕ ಶತಕದ ಜೊತೆಯಾಟ ನೀಡಿ (170 ಎಸೆ‌ತಗಳಲ್ಲಿ 168 ರನ್‌ಗಳ ಅಜೇಯ ಜೊತೆಯಾಟ) ಮತ್ತೊಮ್ಮೆ ಅಬ್ಬರಿಸಿದೆ.

    ಇಂದು ಏನಾಯ್ತು?
    ಮೊದಲು ಟಾಸ್‌ ಗೆದ್ದ ಆಸ್ಟ್ರೇಲಿಯಾ ಬೃಹತ್‌ ಮೊತ್ತ ಪೇರಿಸುವ ಉತ್ಸಾಹದಿಂದ ಬ್ಯಾಟಿಂಗ್‌ ಆಯ್ದುಕೊಂಡಿತು. ಮೊದಲ ವಿಕೆಟ್‌ಗೆ ಟ್ರಾವಿಸ್‌ ಹೆಡ್‌ ಹಾಗೂ ಮಿಚೆಲ್‌ ಮಾರ್ಷ್‌ ಜೋಡಿ 9.2 ಓವರ್‌ಗಳಲ್ಲಿ 61 ರನ್‌ ಕಲೆಹಾಕಿತ್ತು. ಈ ವೇಳೆ ಡೇಂಜರಸ್‌ ಬ್ಯಾಟರ್‌ ಟ್ರಾವಿಸ್‌ ಆಟಕ್ಕೆ ಸಿರಾಜ್‌ ಬ್ರೇಕ್‌ ಹಾಕಿದರು. ನಂತರದಲ್ಲಿ ಮ್ಯಾಟ್ ರೆನ್ಶಾ ಅರ್ಧಶತಕ ಗಳಿಸಿದ್ದು ಬಿಟ್ಟರೆ, ಉಳಿದ ಆಟಗಾರರು ಅಲ್ಪಮೊತ್ತಕ್ಕೆ ಪೆವಿಲಿಯನ್‌ ಸೇರಿಕೊಂಡರು. ಹೀಗಾಗಿ ಆಸ್ಟ್ರೇಲಿಯಾ 46.4 ಓವರ್‌ಗಳಲ್ಲೇ 236 ರನ್‌ಗಳಿಗೆ ಆಲೌಟ್‌ ಆಯಿತು.

    ಚೇಸಿಂಗ್‌ ಆರಂಭಿಸಿದ ಭಾರತ ಕೇವಲ 38.3 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 237 ರನ್‌ ಗಳಿಸಿ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಆರಂಭಿಕನಾಗಿ ಕಣಕ್ಕಿಳಿದ 38 ವರ್ಷ ವಯಸ್ಸಿನ ರೋಹಿತ್‌ ಶರ್ಮಾ ಕೊನೆಯವರೆಗೂ ವಿಕೆಟ್‌ ಬಿಟ್ಟುಕೊಡದೇ ಅಜೇಯ 121‌ ರನ್‌ (125 ಎಸೆತ, 13 ಬೌಂಡರಿ, 3 ಸಿಕ್ಸರ್)‌ ಗಳಿಸಿದ್ರೆ, ವಿರಾಟ್‌ ಕೊಹ್ಲಿ ಅಜೇಯ 74 ರನ್‌ (81 ಎಸೆತ, 7 ಬೌಂಡರಿ) ಚಚ್ಚಿದರು. ನಿವೃತ್ತಿಯ ಅಂಚಿನಲ್ಲಿರುವ ಈ ಜೋಡಿ ಆಸ್ಟ್ರೇಲಿಯಾ ವಿರುದ್ಧ ದಶಕದ ಬಳಿಕ ಅಬ್ಬರಿಸಿದ್ದು ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತು. ಈ ಜೋಡಿಯ ಹಳೆಯ ಫೋಟೋಗಳೆಲ್ಲವೂ ಈಗ ವೈರಲ್‌ ಆಗುತ್ತಿವೆ.

  • ಶತಕ ಸಿಡಿಸಿ ಕ್ರಿಕೆಟ್‌ ದೇವರ ದಾಖಲೆ ಸರಿಗಟ್ಟಿದ ಶರ್ಮಾ – ಕೊಹ್ಲಿ ದಾಖಲೆಯೂ ಉಡೀಸ್‌

    ಶತಕ ಸಿಡಿಸಿ ಕ್ರಿಕೆಟ್‌ ದೇವರ ದಾಖಲೆ ಸರಿಗಟ್ಟಿದ ಶರ್ಮಾ – ಕೊಹ್ಲಿ ದಾಖಲೆಯೂ ಉಡೀಸ್‌

    ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿಂದು ಮಾಜಿ ನಾಯಕ ರೋಹಿತ್‌ ಶರ್ಮಾ ಭರ್ಜರಿ ಶತಕ ಸಿಡಿಸಿದ್ದಾರೆ. ಕೊನೆಯವರೆಗೂ ವಿಕೆಟ್‌ ಬಿಟ್ಟುಕೊಡದ ಶರ್ಮಾ 125 ಎಸೆತಗಳಲ್ಲಿ ಅಜೇಯ 121 ರನ್‌ ಸಿಡಿಸಿದ್ದಾರೆ. ಈ ಶತಕದೊಂದಿಗೆ ಕ್ರಿಕೆಟ್‌‌ ದೇವರು ಸಚಿನ್‌ ತೆಂಡೂಲ್ಕರ್‌ ಅವರ ಅಪರೂಪದ ದಾಖಲೆಯೊಂದನ್ನ ಸರಿಗಟ್ಟಿದ್ದಾರೆ. ಜೊತೆಗೆ ವಿರಾಟ್‌ ಕೊಹ್ಲಿ ಅಪರೂಪದ ದಾಖಲೆಯನ್ನೂ ಮುರಿದಿದ್ದಾರೆ.

    ಹೌದು. ಸರಣಿಯ ಕೊನೆಯ ಪಂದ್ಯದಲ್ಲಿ ಅಜೇಯ ಶತಕ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ಶತಕ ಸಿಡಿಸಿದ್ದ ಸಚಿನ್‌ ತೆಂಡಲ್ಕೂರ್‌ ಅವರ ದಾಖಲೆಯನ್ನ ಸರಿಗಟ್ಟಿದರು. ಜೊತೆಗೆ 8 ಶತಕ ಸಿಡಿಸಿದ್ದ ಕಿಂಗ್‌ ಕೊಹ್ಲಿಯ ದಾಖಲೆಯನ್ನು ಮುರಿದರು. ಆಸೀಸ್‌ ವಿರುದ್ಧ ಕೊಹ್ಲಿ 51 ಇನ್ನಿಂಗ್ಸ್‌ಗಳಲ್ಲಿ 8 ಶತಕ ಸಿಡಿಸಿದ್ರೆ, ತೆಂಡೂಲ್ಕರ್‌ 70 ಇನ್ನಿಂಗ್ಸ್‌ಗಳಲ್ಲಿ 9 ಶತಕ ಸಿಡಿಸಿದ್ದರು. ಆದ್ರೆ ಹಿಟ್‌ ಮ್ಯಾನ್‌ ಶರ್ಮಾ ಕೇವಲ 49 ಇನ್ನಿಂಗ್ಸ್‌ಗಳಲ್ಲೇ ಆಸೀಸ್‌ ವಿರುದ್ಧ 9 ಶತಕ ಸಿಡಿಸಿ ದಾಖಲೆ ಬರೆದರು.

    ಆಸ್ಟ್ರೇಲಿಯಾ ವಿರುದ್ಧ ಅತಿಹೆಚ್ಚು ಶತಕ ಸಿಡಿಸಿದ ಟಾಪ್‌-5 ಬ್ಯಾಟರ್ಸ್‌
    * ರೋಹಿತ್‌ ಶರ್ಮಾ – 49 ಇನ್ನಿಂಗ್ಸ್‌ – 9 ಶತಕ
    * ಸಚಿನ್‌ ತೆಂಡೂಲ್ಕರ್‌ – 70 ಇನ್ನಿಂಗ್ಸ್‌ – 9 ಶತಕ
    * ವಿರಾಟ್‌ ಕೊಹ್ಲಿ – 53 ಇನ್ನಿಂಗ್ಸ್‌ – 8 ಶತಕ
    * ಡೆಸ್ಮಂಡ್ ಹೇನ್ಸ್ – 64 ಇನ್ನಿಂಗ್ಸ್‌ – 6 ಶತಕ
    * ವಿವಿಯನ್‌ ರಿಚರ್ಡ್ಸ್‌ – 54 ಇನ್ನಿಂಗ್ಸ್‌ – 3 ಶತಕ

    ರೋ-ಕೊ ಆರ್ಭಟಕ್ಕೆ ಕಾಂಗರೂ ಪಡೆ ಕಂಗಾಲು
    ಸಿಡ್ನಿ ಅಂಗಳದಲ್ಲಿಂದು ನಡೆದ ಏಕದಿನ ಸರಣಿಯ 3ನೇ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 46.4 ಓವರ್‌ಗಳಲ್ಲಿ 236 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಭಾರತ ಕೇವಲ 38.3 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 237 ರನ್‌ ಗಳಿಸಿ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

    ರೊಹಿತ್‌ ಬೊಂಬಾಟ್‌ ಶತಕ
    ಆರಂಭಿಕನಾಗಿ ಕಣಕ್ಕಿಳಿದ 38 ವರ್ಷ ವಯಸ್ಸಿನ ರೋಹಿತ್‌ ಶರ್ಮಾ ಕೊನೆಯವರೆಗೂ ವಿಕೆಟ್‌ ಬಿಟ್ಟುಕೊಡದೇ ಅಜೇಯ 121‌ ರನ್‌ (125 ಎಸೆತ, 13 ಬೌಂಡರಿ, 3 ಸಿಕ್ಸರ್)‌ ಗಳಿಸಿದ್ರೆ, ವಿರಾಟ್‌ ಕೊಹ್ಲಿ ಅಜೇಯ 74 ರನ್‌ (81 ಎಸೆತ, 7 ಬೌಂಡರಿ) ಚಚ್ಚಿದರು. ಆಸೀಸ್‌ ಪರ ಜೋಶ್‌ ಹೇಜಲ್ವುಡ್‌ ಒಂದು ವಿಕೆಟ್‌ ಪಡೆದರು.

    ಮೊದಲು ಟಾಸ್‌ ಗೆದ್ದ ಆಸ್ಟ್ರೇಲಿಯಾ ಬೃಹತ್‌ ಮೊತ್ತ ಪೇರಿಸುವ ಉತ್ಸಾಹದಿಂದ ಬ್ಯಾಟಿಂಗ್‌ ಆಯ್ದುಕೊಂಡಿತು. ಮೊದಲ ವಿಕೆಟ್‌ಗೆ ಟ್ರಾವಿಸ್‌ ಹೆಡ್‌ ಹಾಗೂ ಮಿಚೆಲ್‌ ಮಾರ್ಷ್‌ ಜೋಡಿ 9.2 ಓವರ್‌ಗಳಲ್ಲಿ 61 ರನ್‌ ಕಲೆಹಾಕಿತ್ತು. ಈ ವೇಳೆ ಡೇಂಜರಸ್‌ ಬ್ಯಾಟರ್‌ ಟ್ರಾವಿಸ್‌ ಆಟಕ್ಕೆ ಸಿರಾಜ್‌ ಬ್ರೇಕ್‌ ಹಾಕಿದರು. ನಂತರದಲ್ಲಿ ಮ್ಯಾಟ್ ರೆನ್ಶಾ ಅರ್ಧಶತಕ ಗಳಿಸಿದ್ದು ಬಿಟ್ಟರೆ, ಉಳಿದ ಆಟಗಾರರು ಅಲ್ಪಮೊತ್ತಕ್ಕೆ ಪೆವಿಲಿಯನ್‌ ಸೇರಿಕೊಂಡರು. ಹೀಗಾಗಿ ಆಸ್ಟ್ರೇಲಿಯಾ 46.4 ಓವರ್‌ಗಳಲ್ಲೇ 236 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು.

    ಆಸ್ಟ್ರೇಲಿಯಾ ಪರ ನಾಯಕ ಮಿಚೆಲ್‌ ಮಾರ್ಷ್‌ 41 ರನ್‌, ಟ್ರಾವಿಸ್‌ ಹೆಡ್‌ 29 ರನ್‌, ಮ್ಯಾಥಿವ್‌ ಶಾರ್ಟ್‌ 30 ರನ್‌, ಮ್ಯಾಟ್‌ ರೆನ್‌ಶಾ 56 ರನ್‌ (58 ಎಸೆತ, 2 ಬೌಂಡರಿ), ಅಲೆಕ್ಸ್‌ ಕ್ಯಾರಿ 24 ರನ್‌, ಕೂಪರ್‌ ಕಾನ್ನೋಲ್ಲಿ 23 ರಮ್‌, ಮಿಚೆಲ್‌ ಓವೆನ್‌ 1 ರನ್‌, ಮಿಚೆಲ್‌ ಸ್ಟಾರ್ಕ್‌ 2 ರನ್‌, ನಥಾನ್‌ ಎಲ್ಲಿಸ್‌ 16 ರನ್‌, ಆಡಂ ಝಂಪಾ ಅಜೇಯ 2 ರನ್‌ ಗಳಿಸಿದ್ರೆ ಜೋಶ್‌ ಹ್ಯಾಜಲ್‌ವುಡ್‌ ಶೂನ್ಯ ಸುತ್ತಿದರು.

    ಟೀಂ ಇಂಡಿಯಾ ಪರ ಹರ್ಷಿತ್‌ ರಾಣಾ 4 ವಿಕೆಟ್‌ ಕಿತ್ತರೆ, ಮೊಹಮ್ಮದ್‌ ವಾಷಿಂಗ್ಟನ್‌ ಸುಂದರ್‌ 2 ವಿಕೆಟ್‌, ಸಿರಾಜ್‌, ಪ್ರಸಿದ್ಧ್‌ ಕೃಷ್ಣ, ಕುಲ್ದೀಪ್‌ ಯಾದವ್‌, ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • ರೋ-ಕೊ ಆರ್ಭಟಕ್ಕೆ ಕಾಂಗರೂ ಪಡೆ ಕಂಗಾಲು – ವೈಟ್‌ವಾಶ್‌ನಿಂದ ಪಾರು, ಭಾರತಕ್ಕೆ 9 ವಿಕೆಟ್‌ಗಳ ಭರ್ಜರಿ ಜಯ

    ರೋ-ಕೊ ಆರ್ಭಟಕ್ಕೆ ಕಾಂಗರೂ ಪಡೆ ಕಂಗಾಲು – ವೈಟ್‌ವಾಶ್‌ನಿಂದ ಪಾರು, ಭಾರತಕ್ಕೆ 9 ವಿಕೆಟ್‌ಗಳ ಭರ್ಜರಿ ಜಯ

    ಸಿಡ್ನಿ: ಹಿಟ್‌ ಮ್ಯಾನ್‌ ರೋಹಿತ್‌ ಶರ್ಮಾ (Rohit Sharma) ಅಮೋಘ ಶತಕ, ಕಿಂಗ್‌ ಕೊಹ್ಲಿಯ (Virat Kohli) ಆಕರ್ಷಕ ಅರ್ಧಶತಕದ ಬ್ಯಾಟಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ ಭಾರತ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೈಟ್‌ವಾಶ್‌ ಆಗುವುದನ್ನ ತಪ್ಪಿಸಿಕೊಂಡಿದೆ.

    ಸಿಡ್ನಿ ಅಂಗಳದಲ್ಲಿಂದು ನಡೆದ ಏಕದಿನ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್‌ಮಾಡಿದ ಆಸ್ಟ್ರೇಲಿಯಾ (Australia) 46.4 ಓವರ್‌ಗಳಲ್ಲಿ 236 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಭಾರತ ಕೇವಲ 38.3 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 237 ರನ್‌ ಗಳಿಸಿ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

    ಚೇಸಿಂಗ್‌ ಆಂಭಿಸಿದ ಭಾರತ 10.2 ಓವರ್‌ಗಳಲ್ಲಿ 69 ರನ್‌ ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡಿತ್ತು. ಬೃಹತ್‌ ಮೊತ್ತ ಪೇರಿಸುವ ಉತ್ಸಾಹದಲ್ಲಿದ್ದ ಕ್ಯಾಪ್ಟನ್‌ ಶುಭಮನ್‌ ಗಿಲ್‌ 26 ಎಸೆತಗಳಲ್ಲಿ 24 ರನ್‌ ಗಳಿಸಿ ಪೆವಿಲಿಯನ್‌ ಸೇರಿಸಿಕೊಂಡರು. ಬಳಿಕ ಜೊತೆಗೂಡಿದ ವಿರಾಟ್‌ ಕೊಹ್ಲಿ – ರೋಹಿತ್‌ ಶರ್ಮಾ ಕೊನೆಯವರೆಗೂ ವಿಕೆಟ್‌ ಬಿಟ್ಟುಕೊಡದೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಮುರಿಯದ 2ನೇ ವಿಕೆಟ್‌ಗೆ ಈ ಜೋಡಿ 170 ಎಸೆತಗಳಲ್ಲಿ 168 ರನ್‌ ಕಲೆಹಾಕಿತು.

    ರೊಹಿತ್‌ ಬೊಂಬಾಟ್‌ ಶತಕ
    ಆರಂಭಿಕನಾಗಿ ಕಣಕ್ಕಿಳಿದ 38 ವರ್ಷ ವಯಸ್ಸಿನ ರೋಹಿತ್‌ ಶರ್ಮಾ ಕೊನೆಯವರೆಗೂ ವಿಕೆಟ್‌ ಬಿಟ್ಟುಕೊಡದೇ ಅಜೇಯ 121‌ ರನ್‌ (125 ಎಸೆತ, 13 ಬೌಂಡರಿ, 3 ಸಿಕ್ಸರ್)‌ ಗಳಿಸಿದ್ರೆ, ವಿರಾಟ್‌ ಕೊಹ್ಲಿ ಅಜೇಯ 74 ರನ್‌ (81 ಎಸೆತ, 7 ಬೌಂಡರಿ) ಚಚ್ಚಿದರು. ಆಸೀಸ್‌ ಪರ ಜೋಶ್‌ ಹೇಜಲ್ವುಡ್‌ ಒಂದು ವಿಕೆಟ್‌ ಪಡೆದರು.

    ಮೊದಲು ಟಾಸ್‌ ಗೆದ್ದ ಆಸ್ಟ್ರೇಲಿಯಾ ಬೃಹತ್‌ ಮೊತ್ತ ಪೇರಿಸುವ ಉತ್ಸಾಹದಿಂದ ಬ್ಯಾಟಿಂಗ್‌ ಆಯ್ದುಕೊಂಡಿತು. ಮೊದಲ ವಿಕೆಟ್‌ಗೆ ಟ್ರಾವಿಸ್‌ ಹೆಡ್‌ ಹಾಗೂ ಮಿಚೆಲ್‌ ಮಾರ್ಷ್‌ ಜೋಡಿ 9.2 ಓವರ್‌ಗಳಲ್ಲಿ 61 ರನ್‌ ಕಲೆಹಾಕಿತ್ತು. ಈ ವೇಳೆ ಡೇಂಜರಸ್‌ ಬ್ಯಾಟರ್‌ ಟ್ರಾವಿಸ್‌ ಆಟಕ್ಕೆ ಸಿರಾಜ್‌ ಬ್ರೇಕ್‌ ಹಾಕಿದರು. ನಂತರದಲ್ಲಿ ಮ್ಯಾಟ್ ರೆನ್ಶಾ ಅರ್ಧಶತಕ ಗಳಿಸಿದ್ದು ಬಿಟ್ಟರೆ, ಉಳಿದ ಆಟಗಾರರು ಅಲ್ಪಮೊತ್ತಕ್ಕೆ ಪೆವಿಲಿಯನ್‌ ಸೇರಿಕೊಂಡರು. ಹೀಗಾಗಿ ಆಸ್ಟ್ರೇಲಿಯಾ 46.4 ಓವರ್‌ಗಳಲ್ಲೇ 236 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು.

    ಆಸ್ಟ್ರೇಲಿಯಾ ಪರ ನಾಯಕ ಮಿಚೆಲ್‌ ಮಾರ್ಷ್‌ 41 ರನ್‌, ಟ್ರಾವಿಸ್‌ ಹೆಡ್‌ 29 ರನ್‌, ಮ್ಯಾಥಿವ್‌ ಶಾರ್ಟ್‌ 30 ರನ್‌, ಮ್ಯಾಟ್‌ ರೆನ್‌ಶಾ 56 ರನ್‌ (58 ಎಸೆತ, 2 ಬೌಂಡರಿ), ಅಲೆಕ್ಸ್‌ ಕ್ಯಾರಿ 24 ರನ್‌, ಕೂಪರ್‌ ಕಾನ್ನೋಲ್ಲಿ 23 ರಮ್‌, ಮಿಚೆಲ್‌ ಓವೆನ್‌ 1 ರನ್‌, ಮಿಚೆಲ್‌ ಸ್ಟಾರ್ಕ್‌ 2 ರನ್‌, ನಥಾನ್‌ ಎಲ್ಲಿಸ್‌ 16 ರನ್‌, ಆಡಂ ಝಂಪಾ ಅಜೇಯ 2 ರನ್‌ ಗಳಿಸಿದ್ರೆ ಜೋಶ್‌ ಹ್ಯಾಜಲ್‌ವುಡ್‌ ಶೂನ್ಯ ಸುತ್ತಿದರು.

    ಟೀಂ ಇಂಡಿಯಾ ಪರ ಹರ್ಷಿತ್‌ ರಾಣಾ 4 ವಿಕೆಟ್‌ ಕಿತ್ತರೆ, ಮೊಹಮ್ಮದ್‌ ವಾಷಿಂಗ್ಟನ್‌ ಸುಂದರ್‌ 2 ವಿಕೆಟ್‌, ಸಿರಾಜ್‌, ಪ್ರಸಿದ್ಧ್‌ ಕೃಷ್ಣ, ಕುಲ್ದೀಪ್‌ ಯಾದವ್‌, ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • ಗಿಲ್‌ ಪಡೆ ಮೇಲೆ ಕ್ಲೀನ್‌ ಸ್ವೀಪ್‌ ತೂಗುಗತ್ತಿ – ಇಂದೇ ಗುಡ್‌ಬೈ ಹೇಳ್ತಾರಾ ರೋ-ಕೊ?

    ಗಿಲ್‌ ಪಡೆ ಮೇಲೆ ಕ್ಲೀನ್‌ ಸ್ವೀಪ್‌ ತೂಗುಗತ್ತಿ – ಇಂದೇ ಗುಡ್‌ಬೈ ಹೇಳ್ತಾರಾ ರೋ-ಕೊ?

    – ದಿಗ್ಗಜರಿಗೆ ಗೆಲುವಿನ ವಿದಾಯ ಸಿಗುತ್ತಾ?

    ಸಿಡ್ನಿ: ಮಾಜಿ ನಾಯಕರಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಆಸೀಸ್ ನೆಲದಲ್ಲಿ ವೃತ್ತಿಜೀವನದ ಕೊನೇ ಪಂದ್ಯಕ್ಕೆ ಸಜ್ಜಾಗಿದ್ದು ಎಂಬ ಮಾತುಗಳು ಕೇಳಿಬಂದಿದ್ದು, ಇಂದೇ ನಿವೃತ್ತಿ ಘೋಷಿಸುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ. ಈ ಇಬ್ಬರು ದಿಗ್ಗಜರಿಗೆ ಪಂದ್ಯವನ್ನು ಸ್ಮರಣೀಯವನ್ನಾಗಿಸುವ ಸವಾಲು ಶುಭಮಾನ್ ಗಿಲ್ ಬಳಗದ ಮುಂದಿದೆ.

    ಹಿಂದೆಂದೂ ಆಸೀಸ್‌ಗೆ ಕ್ಲೀನ್‌ಸ್ವೀಪ್ ಸಾಧಿಸಲು ಅವಕಾಶ ನೀಡದ ಭಾರತ ಈಗ ಆ ಭೀತಿಯಲ್ಲಿದೆ. ಸಿಡ್ನಿ (Sydney) ಅಂಗಳದಲ್ಲಿಂದು ನಡೆಯಲಿರುವ ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ತಂಡ, ಏಕದಿನ ಸರಣಿ (ODI series) ವೈಟ್‌ವಾಷ್‌ನಿಂದ ಪಾರಾಗುವ ಕಠಿಣ ಪರೀಕ್ಷೆ ಎದುರಿಸಲಿದೆ.

    ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸತತ 2 ಪಂದ್ಯ ಗೆದ್ದು ಸರಣಿ ತನ್ನದಾಗಿಸಿಕೊಂಡಿರುವ ಆಸಿಸ್‌ಗೆ ಇದು ಆಟಕ್ಕುಂಟು ಲೆಕ್ಕಕ್ಕಿಲದ ಪಂದ್ಯವಾಗಿದೆ. ಚೊಚ್ಚಲ ಬಾರಿಗೆ ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಎದುರು ಕ್ಲೀನ್‌ ಸ್ವೀಪ್ ಸಾಧಿಸಲು ಹೋರಾಡಲಿದೆ. ರೋಹಿತ್- ಕೊಹ್ಲಿ ಆಸೀಸ್‌ನಲ್ಲಿ ಕೊನೆಯ ಬಾರಿಗೆ ಕಣಕ್ಕಿಳಿಯುವುದರ ಜೊತೆಗೆ ಸರಣಿ ಸೋಲಿನ ಅಂತರ ತಗ್ಗಿಸುವ ಒತ್ತಡ ಗಿಲ್ ಪಡೆಗಿದೆ.

    ಆಸ್ಟ್ರೇಲಿಯಾದಲ್ಲಿ ಮುಂದಿನ ಎರಡು ವರ್ಷ ಭಾರತ ಯಾವುದೇ ಏಕದಿನ ಸರಣಿ ಆಡದಿರುವುದರಿಂದ ರೋ-ಕೊ ಪಾಲಿಗೆ ಇದು ಆಸೀಸ್‌ನಲ್ಲಿ ಬಹುತೇಕ ಕೊನೇ ಪಂದ್ಯ ಎನಿಸಿದೆ.

    2007-08ರ ಕಾಮನ್ವೆಲ್ತ್ ಬ್ಯಾಂಕ್ ಸರಣಿಯಲ್ಲಿ ರೋಹಿತ್ ಮೊದಲ ಬಾರಿ ಅಸ್ಟ್ರೇಲಿಯಾ ಪ್ರವಾಸ ಕೈಗೊಂಡರೆ, ಕೊಹ್ಲಿ 2011-12ರ ಟೆಸ್ಟ್ ಸರಣಿಯ ಅಡಿಲೇಡ್ ಪಂದ್ಯದಲ್ಲಿ ಶತಕದೊಂದಿಗೆ ಗಮನಸೆಳೆದಿದ್ದರು. ಆಧುನಿಕ ಕ್ರಿಕೆಟ್‌ನ ದಿಗ್ಗಜ ಕೊಹ್ಲಿ ಸರಣಿಯ ಎರಡು ಪಂದ್ಯಗಳಲ್ಲಿ ಸತತ 2 ಶೂನ್ಯ ಸಂಪಾದನೆಯೊಂದಿಗೆ ನಿರಾಸೆ ಮೂಡಿಸಿದ್ದಾರೆ. ಟೆಸ್ಟ್ ನಾಯಕನಾಗಿ ಇಂಗ್ಲೆಂಡ್‌ನಲ್ಲಿ ರನ್ ಹೊಳೆ ಹರಿಸಿದ್ದ ಶುಭಮನ್ ಗಿಲ್, ಏಕದಿನದಲ್ಲಿ ವಿಲರಾಗಿದ್ದಾರೆ. ಎರಡು ಪಂದ್ಯಗಳಲ್ಲಿ ಕ್ರಮವಾಗಿ 10, 9 ರನ್ ಮಾತ್ರ ಕಲೆಹಾಕಿದ್ದಾರೆ. ಆರಂಭಿಕ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್‌ರಿಂದ ಪೈಪೋಟಿ ಎದುರಿಸುತ್ತಿರುವ ರೋಹಿತ್ ಶರ್ಮಾ, ಹಿಂದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ತುಸು ನಿರಾಳರಾಗಿದ್ದಾರೆ. ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಹಾಗೂ ಕೆಎಲ್ ರಾಹುಲ್‌ರಿಂದ ಹೆಚ್ಚಿನ ರನ್‌ ಕೊಡುಗೆಯ ನಿರೀಕ್ಷೆ ಇದೆ.

    ಸಿಡ್ನಿಯಲ್ಲಿ ಭಾರತ ಇದುವರೆಗೆ ಅಡಿರುವ ಐದು ಪಂದ್ಯಗಳ ಪೈಕಿ 1ರಲ್ಲಿ ಮಾತ್ರ ಗೆದ್ದಿದೆ. ಇಂದಿನ ಪಂದ್ಯದಲ್ಲಿ ವೈಟ್‌ವಾಶ್‌ ತಪ್ಪಿಸಿಕೊಳ್ಳಲಾದ್ರೂ ಈ ಪಂದ್ಯ ಗೆಲ್ಲಲೇಬೇಕಿದೆ.

  • 17 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಕೆಟ್ಟ ಸಾಧನೆ ಬರೆದ ಕೊಹ್ಲಿ

    17 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಕೆಟ್ಟ ಸಾಧನೆ ಬರೆದ ಕೊಹ್ಲಿ

    ಅಡಿಲೇಡ್: 17 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಬಾರಿ ವಿರಾಟ್‌ ಕೊಹ್ಲಿ  ಕೆಟ್ಟ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ (Australia) ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲೂ ಕೊಹ್ಲಿ (Virat Kohli) ಶೂನ್ಯಕ್ಕೆ ಔಟಾಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

    ನಾಯಕ ಶುಭಮನ್‌ ಗಿಲ್‌ 9 ರನ್‌ ಗಳಿಸಿ ಬಾರ್ಟ್ಲೆಟ್‌ಗೆ ವಿಕೆಟ್‌ ಒಪ್ಪಿಸಿದರು. ನಂತರ ಬಂದ ಕೊಹ್ಲಿ 4 ಎಸೆತ ಎದುರಿಸಿ ಎಲ್‌ಬಿಗೆ ಔಟಾದರು. ಈ ಮೂಲಕ 17 ರನ್‌ಗಳಿಗೆ ಎರಡು ಅಮೂಲ್ಯ ವಿಕೆಟ್‌ಗಳನ್ನು ಭಾರತ ಕಳೆದುಕೊಂಡಿತು.  ಇದನ್ನೂ ಓದಿ:  ಏಷ್ಯಾಕಪ್‌ ವಿವಾದದ ಬೆನ್ನಲ್ಲೇ ನವೆಂಬರ್‌ನಲ್ಲಿ ಪಾಕ್‌ ವಿರುದ್ಧ ಆಡಲಿದೆ ಭಾರತ

    ಅ.19 ರಂದು ಪರ್ತ್‌ನಲ್ಲಿ ನಡೆದ ಪಂದ್ಯದಲ್ಲೂ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದರು. ಸರಣಿಯೊಂದರಲ್ಲಿ ಕೊಹ್ಲಿ ಸತತ ಎರಡು ಬಾರಿ ಶೂನ್ಯಕ್ಕೆ ಇಲ್ಲಿಯವರೆಗ ಔಟ್‌ ಆಗಿರಲಿಲ್ಲ. ಈ ಹಿಂದೆ 2021 ರಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ಟೆಸ್ಟ್‌ ಮತ್ತು ಟಿ20 ಪಂದ್ಯದಲ್ಲಿ ಸತತ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದರು.

    ಈ ಪಂದ್ಯಲ್ಲಿ ಸೊನ್ನೆ ಸುತ್ತುವ ಮೂಲಕ ಕೊಹ್ಲಿ ಏಕದಿನದಲ್ಲಿ ಒಟ್ಟು 40 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ವಿರಾಟ್‌ ಕೊಹ್ಲಿ ಜುಲೈ 3 ರಂದು ಐಪಿಎಲ್‌ ಫೈನಲ್‌ ಪಂದ್ಯದ ಬಳಿಕ ಯಾವುದೇ ಟೂರ್ನಿಯಲ್ಲಿ ಭಾಗವಹಿಸರಲಿಲ್ಲ.

    ಐಪಿಲ್‌ ಬಳಿಕ ಕೊಹ್ಲಿ ಕುಟುಂಬದ ಸದಸ್ಯರ ಜೊತೆಗೆ ಯುಕೆಗೆ ಹೋಗಿದ್ದರು. ಅಲ್ಲಿ ಫಿಟ್ನೆಸ್‌ ಕಾಪಾಡಿಕೊಂಡಿದ್ದರೂ ಪಂದ್ಯದ ಅಭ್ಯಾಸ ಮಾಡಿಕೊಂಡಿರಲಿಲ್ಲ.

    ಒಟ್ಟು ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಜಯಗಳಿಸಿದೆ. ಅ.25 ರಂದು ಮೂರನೇ ಏಕದಿನ ಪಂದ್ಯ ನಡೆಯಲಿದೆ.

  • ಕಾಂತಾರ ಚಾಪ್ಟರ್ 1 – ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಬಿಡುಗಡೆಗೆ ಸಿದ್ಧ

    ಕಾಂತಾರ ಚಾಪ್ಟರ್ 1 – ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಬಿಡುಗಡೆಗೆ ಸಿದ್ಧ

    ಹುನಿರೀಕ್ಷಿತ ಚಲನಚಿತ್ರ ಕಾಂತಾರ ಚಾಪ್ಟರ್ 1 (Kantara Chapter 1), ಇದೇ ಅಕ್ಟೋಬರ್ 2 ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ರಿಷಬ್ ಶೆಟ್ಟಿ (Rishab Shetty) ಅವರು ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ (Hombale Films) ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.

    ಆಸ್ಟ್ರೇಲಿಯಾ (Australia) ಮತ್ತು ನ್ಯೂಜಿಲೆಂಡ್‌ನಲ್ಲಿನ (New Zealand) ವೀಕ್ಷಕರಿಗಾಗಿ ಈ ಚಿತ್ರವನ್ನು ಡ್ರೀಮ್ ಸ್ಕ್ರೀನ್ಸ್ ಇಂಟರ್‌ನ್ಯಾಷನಲ್ ವಿತರಿಸಲಿದ್ದು, ಅಲ್ಲಿನ ಸಿನಿಪ್ರಿಯರು ಈ ದೈವಿಕ ಕಥೆಯನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಮಿನಿ ಫ್ರಾಕ್ ಧರಿಸಿ ರಂಗೀಲಾರೆ ಎಂದು ಕುಣಿದ ಊರ್ಮಿಳಾ

    ಜಾಗತಿಕವಾಗಿ ಮೆಚ್ಚುಗೆ ಗಳಿಸಿದ್ದ ಕಾಂತಾರ (2022) ಚಿತ್ರದ ಪ್ರಿಕ್ವೆಲ್ ಆಗಿರುವ ಈ ಸಿನಿಮಾ, ನಮ್ಮ ಸಂಸ್ಕೃತಿ, ಜಾನಪದ ಮತ್ತು ಆಧ್ಯಾತ್ಮಿಕತೆಯ ಬೇರುಗಳನ್ನು ಮತ್ತಷ್ಟು ಆಳವಾಗಿ ಪರಿಚಯಿಸಲಿದೆ.

    ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರವು ಭಾರತೀಯ ಹಾಗೂ ಜಾಗತಿಕ ಸಿನಿಪ್ರಿಯರಿಗೆ ಒಂದು ಅದ್ಭುತ ಅನುಭವ ನೀಡಲಿದೆ. ಕಾಲಾತೀತ ಕಥೆಗಳನ್ನು ಸೃಷ್ಟಿಸುವ ಹೊಂಬಾಳೆ ಫಿಲ್ಮ್ಸ್ನ ದೂರದೃಷ್ಟಿಯ ಭಾಗವಾಗಿರುವ ಕಾಂತಾರ ಚಾಪ್ಟರ್ 1, ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.

  • ಮಲ್ಲಿಗೆ ಮುಡಿದ ನಟಿ ನವ್ಯಾಗೆ ಆಸ್ಟ್ರೇಲಿಯಾದಲ್ಲಿ 1 ಲಕ್ಷ ದಂಡ

    ಮಲ್ಲಿಗೆ ಮುಡಿದ ನಟಿ ನವ್ಯಾಗೆ ಆಸ್ಟ್ರೇಲಿಯಾದಲ್ಲಿ 1 ಲಕ್ಷ ದಂಡ

    ಕ್ಯಾನ್ಬೆರಾ: ಮಲ್ಲಿಗೆ ಮುಡಿದು ಮೆಲ್ಬೋರ್ನ್ ಏರ್‌ಪೋರ್ಟ್‌ಗೆ (Melbounre International Airport) ಬಂದಿಳಿದ ನಟಿ ನವ್ಯಾ ನಾಯರ್‌ಗೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ.

    ಕೇರಳದ ಕೊಚ್ಚಿಯಿಂದ ನಟಿ ನವ್ಯಾ ನಾಯರ್  (Navya Nair) ಓಣಂ ಹಬ್ಬಕ್ಕೆಂದು ಆಸ್ಟ್ರೇಲಿಯಾಗೆ (Australia) ತೆರಳಿದ್ದರು. ಈ ವೇಳೆ ವಿಮಾನ ಹತ್ತುವ ಮುನ್ನ ಆಕೆಯ ತಂದೆ ಮಲ್ಲಿಗೆ ಹೂವನ್ನು ತಂದುಕೊಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ಅವರು ಹೂವನ್ನು ಒಂದು ಬ್ಯಾಗ್‌ನಲ್ಲಿ ಇಟ್ಟುಕೊಂಡು ಮೆಲ್ಬೋರ್ನ್‌ನಲ್ಲಿ ಇಳಿದಿದ್ದರು. ಇದನ್ನು ಗಮನಿಸಿದ ವಿಮಾನ ನಿಲ್ದಾಣದ ಅಧಿಕಾರಿಗಳು 1.14 ಲಕ್ಷ ರೂ. ದಂಡವನ್ನು ವಿಧಿಸಿದ್ದಾರೆ ಎಂದು ನಟಿ ಆಸ್ಟ್ರೇಲಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.ಇದನ್ನು ಓದಿ: ಮದ್ದೂರಿನಲ್ಲಿ ಗಣೇಶ ಮೆರವಣಿಗೆ – ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ

    ಆಸ್ಟ್ರೇಲಿಯಾದ ನಿಯಾಮಾವಳಿಗಳ ಪ್ರಕಾರ, ಕೀಟಗಳು, ರೋಗಕಾರಕಗಳಂತಹ ಜೈವಿಕ ಅಪಾಯಗಳನ್ನು ತಡೆಯವ ಉದ್ದೇಶದಿಂದ ಯಾವುದೇ ಸಸ್ಯದ ಭಾಗವನ್ನಾದರೂ ವಿದೇಶಗಳಿಂದ ಆಸ್ಟ್ರೇಲಿಯಾಗೆ ತರುವ ಬಗ್ಗೆ ಮೊದಲ ಮಾಹಿತಿ ನೀಡಬೇಕು.

    ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ, ಇದೊಂದು ಅನುಭವ. ಈ ರೀತಿಯ ಅನುಭವಗಳು ಹೊಸದನ್ನು ಕಲಿಸುತ್ತವೆ ಎಂದು ಬರೆದುಕೊಂಡಿದ್ದಾರೆ.