Tag: aurad

  • ಚೌವ್ಹಾಣ್‌ Vs ಖೂಬಾ – ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಗೈದ ಕೇಂದ್ರ ಸಚಿವ

    ಚೌವ್ಹಾಣ್‌ Vs ಖೂಬಾ – ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಗೈದ ಕೇಂದ್ರ ಸಚಿವ

    ಬೀದರ್‌: ಮಾಜಿ ಸಚಿವ ಪ್ರಭು ಚವ್ಹಾಣ್‌ (Prabhu Chavan) ಮತ್ತು ಕೇಂದ್ರ ಸಚಿವ ಭಗವಂತ ಖೂಬಾ (Bhagwanth khuba) ಕಿತ್ತಾಟ ಈಗ ದೇವರ ಸನ್ನಿಧಿಗೆ ಬಂದು ತಲುಪಿದೆ.

    ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಪ್ರಭು ಚವ್ಹಾಣ್‌ ಗಂಭೀರ ಆರೋಪ ಮಾಡಿದ ಹಿನ್ನೆಲೆಯಲ್ಲಿ ಖೂಬಾ ಸೋಮವಾರ ಪ್ರಭು ಚವ್ಹಾಣ್‌ ಅವರ ಕ್ಷೇತ್ರ ಔರಾದ್ (Aurad) ಪಟ್ಟಣದಲ್ಲಿರುವ ಐತಿಹಾಸಿಕ ಅಮರೇಶ್ವರ ದೇವಸ್ಥಾನಕ್ಕೆ (Amareshwara Temple ) ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.  ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ವಾರಣಾಸಿಯಲ್ಲಿ ಸ್ಪರ್ಧಿಸಿದರೆ ಪ್ರಧಾನಿ ಮೋದಿ ಸೋಲ್ತಾರೆ: ಸಂಜಯ್‌ ರಾವತ್‌

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚವ್ಹಾಣ್‌ ಕೊಲೆ ಆರೋಪ ಮಾಡಿದ್ದು ನನಗೆ ಶಾಕ್‌ ಆಗಿದೆ. ಆ ಶಾಕ್‌ನಿಂದ ಇನ್ನೂ ನಾನು ಹೊರ ಬಂದಿಲ್ಲ. ಹೀಗಾಗಿ ಎಲ್ಲಾ ಆರೋಪಗಳಿಗೆ ಉತ್ತರ ನೀಡು ಎಂದು ಅಮರೇಶ್ವರನ ಉಡಿಯಲ್ಲಿ ಹಾಕಿದ್ದೇನೆ ಎಂದು ಹೇಳಿದರು.

    ಹಿಂದೆ ಆರೋಪಗಳನ್ನು ಮಾಡಿದಾಗ ನಮ್ಮ ಪಕ್ಷದವರೇ ಎಂದು ಸುಮ್ಮನಿದ್ದೆ. ಆದರೆ ಈ ನೋವಿನಿಂದ ಹೊರಗೆ ಬರಬೇಕು ಎಂದು ಇಂದು ಅಮರೇಶ್ವರನ ಮೊರೆ ಹೋಗಿದ್ದೆನೆ. ಇಂದು ರಾಜಕಾರಣ ಹೊಲಸಾಗಿದ್ದು ಕ್ರಿಮಿನಲ್ ಹಿನ್ನೆಲೆ ಇರುವ ಕೋರ್ಟ್‌ ಕೇಸ್ ಇರುವ ಸಚಿವರೇ ಹೆಚ್ಚಾಗಿದ್ದಾರೆ ಎಂದರು.

     

    ಕೊಲೆ ಮಾಡುತ್ತಾರೆ ಎಂದು ಹೇಳಿದ್ದು ನನ್ನನ್ನು ಘಾಸಿಗೊಳಿಸಿದೆ. ನನ್ನ ಹೇಳಿಕೆಗಳಿಗೆ ನೇರವಾಗಿ ಪ್ರಭು ಚೌವ್ಹಾಣ್‌ ಉತ್ತರ ನೀಡಲಿಲ್ಲ. ದರ್ಪದ, ಅಹಂಕಾರದಿಂದ ಕಾರ್ಯಕರ್ತರು ಪಕ್ಷದಿಂದ ಹೊರ ಹೋಗಿದ್ದಾರೆ. ನೂರು ವರ್ಷ ಬದುಕಿ, ಸಾಯುವತನಕ ನೀವು ಔರಾದ್ ಶಾಸಕರಾಗಿರಿ ಎಂದು ಖೂಬಾ ವಾಗ್ದಾಳಿ ನಡೆಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೆಡಿಎಸ್ ಪಕ್ಷದ ಶಾಲು ಸುಟ್ಟು ಹಾಕಿದ್ದು ಬಿಜೆಪಿ ಕಾರ್ಯಕರ್ತರು- ಜೈಸಿಂಗ್ ರಾಠೋಡ್ ಆರೋಪ

    ಜೆಡಿಎಸ್ ಪಕ್ಷದ ಶಾಲು ಸುಟ್ಟು ಹಾಕಿದ್ದು ಬಿಜೆಪಿ ಕಾರ್ಯಕರ್ತರು- ಜೈಸಿಂಗ್ ರಾಠೋಡ್ ಆರೋಪ

    ಬೀದರ್: ಔರಾದ್ (Aurad) ಕ್ಷೇತ್ರದಲ್ಲಿ ಜೆಡಿಎಸ್ (JDS) ಕಾರ್ಯಕರ್ತರು ಪ್ರಚಾರಕ್ಕೆ ತೆರಳಿದ್ದಾಗ ಪ್ರಭು ಚವ್ಹಾಣ್ (Prabhu Chauhan) ಬೆಂಬಲಿಗರು ಜೆಡಿಎಸ್ ಪಕ್ಷದ ಶಾಲು ಸುಟ್ಟು ಹಾಕಿ ಹಲ್ಲೆಗೆ ಮುಂದಾಗಿದ್ದಾರೆ ಎಂದು ಔರಾದ್ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಜೈಸಿಂಗ್ ರಾಠೋಡ್ (Jaisingh Rathod) ಗಂಭೀರ ಆರೋಪ ಮಾಡಿದ್ದಾರೆ.

    ಇಂದು ಬೀದರ್‌ನಲ್ಲಿ (Bidar) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಔರಾದ್ ಕ್ಷೇತ್ರದಲ್ಲಿ ಪಂಚರತ್ನ ಯೋಜನೆ ಜಾಗೃತಿ ಮೂಡಿಸುತ್ತಿದ್ದು, ಈ ವೇಳೆ ಮಾಳೆಗಾಂವ್ ತಾಂಡಕ್ಕೆ ಹೋದಾಗ ಪ್ರಭು ಚವ್ಹಾಣ್ ಬೆಂಬಲಿಗರು ಮೋದಿ ಮೋದಿ (Narendra Modi) ಎಂದು ಕೂಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಯಾರದ್ದೋ ಮೀಸಲಾತಿ ಕಿತ್ತು ಒಕ್ಕಲಿಗರಿಗೆ ಹಂಚಿದ್ದಾರೆ: ನಂಜಾವಧೂತ ಶ್ರೀ ಕಿಡಿ 

    ಇದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಹಲ್ಲೆ ಮಾಡಲು ಮುಂದಾದಾಗ ನಾವು ಅಲ್ಲಿಂದ ಬೇರೆ ಗ್ರಾಮಕ್ಕೆ ಹೋದೆವು. ನಾವು ಗ್ರಾಮದಿಂದ ಹೋದ ಬಳಿಕ ಬಿಜೆಪಿ (BJP) ಕಾರ್ಯಕರ್ತರು ಜೆಡಿಎಸ್ ಪಕ್ಷದ ಶಾಲುಗಳನ್ನು ಸುಟ್ಟು ಹಾಕಿದ್ದಾರೆ. ಅಲ್ಲದೇ ಜೆಡಿಎಸ್ ಶಾಲುಗಳನ್ನು ಸುಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಬಿಜೆಪಿ ಸರ್ಕಾರ ಬರಲು ಕಾರಣನಾಗಿದ್ದಕ್ಕೆ ನನಗೆ ತುಂಬಾ ನೋವಿದೆ : ಹೆಚ್. ವಿಶ್ವನಾಥ್ 

    ಈ ವೀಡಿಯೋಗಳನ್ನು ಚವ್ಹಾಣ್ ಬೆಂಬಲಿಗರು ನಮಗೂ ಕಳಿಸಿದ್ದಾರೆ. ಆದರೆ ಈ ಬಗ್ಗೆ ಕೇಸ್ ಮಾಡಲು ಹೋದರೆ ನಾಳೆ, ನಾಡಿದ್ದು ಎಂದು ಪೊಲೀಸರು ತಿರುಗಿಸಿದ್ದಾರೆ ಎಂದು ಪ್ರಭು ಚವ್ಹಾಣ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸಿಟ್ಟು, ಸೆಡವಿನ ವ್ಯಕ್ತಿ ಅಂದೊಮ್ಮೆ ಕಣ್ಣೀರು ಹಾಕಿದ್ರು – ಸಿದ್ದರಾಮಯ್ಯ ಲೈಫ್‌ನ ಇಂಟರೆಸ್ಟಿಂಗ್ ಸಂಗತಿಗಳು!

  • ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ 17ರ ಹುಡುಗನ ಸಜೀವ ದಹನ

    ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ 17ರ ಹುಡುಗನ ಸಜೀವ ದಹನ

    – ಸುಟ್ಟ ದೇಹವನ್ನ ತೊಗರಿ ಹೊಲದಲ್ಲಿ ಎಸೆದ್ರು

    ಬೀದರ್: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ 17 ವರ್ಷದ ಹುಡುಗನನ್ನ ಕೊಲೆಗೈದಿರುವ ಘಟನೆ ಜಿಲ್ಲೆಯ ಕಮಲನಗರ ತಾಲೂಕಿನ ಕೋಟಗ್ಯಾಳ ಗ್ರಾಮದಲ್ಲಿ ನಡೆದಿದೆ.

    17 ವರ್ಷದ ಶಿವಕುಮಾರ್ ಹಾವಪ್ಪ ಕೊಲೆಯಾದ ಹುಡುಗ. ಔರಾದ್ ತಾಲೂಕಿನ ನಾಗಮಾರಪಳ್ಳಿ ನಿವಾಸಿಯಾಗಿದ್ದ ಶಿವಕುಮಾರ್ ನನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು ಕೊಂದು ಶವವನ್ನ ರಸ್ತೆಬದಿಯ ತೊಗರಿ ಹೊಲದಲ್ಲಿ ಎಸೆದು ಪರಾರಿಯಾಗಿದ್ದಾರೆ. ಶಿವಕುಮಾರ್ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ದೇವಣಿ ಪಟ್ಟಣದಲ್ಲಿರುವ ಸೋದರಿ ಮನೆಯಿಂದ ಬೈಕ್ ನಲ್ಲಿ ನಾಗಮಾರಪಳ್ಳಿಗೆ ಹಿಂದಿರುಗುತ್ತಿದ್ದನು. ಮಾರ್ಗ ಮಧ್ಯೆಯೇ ಈ ಕೊಲೆ ನಡೆದಿದೆ.

    ಸಂಜೆಯಾದರೂ ಶಿವಕುಮಾರ್ ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೊದಲು ಕೋಟಗ್ಯಾಳ ಗ್ರಾಮದ ಹೊರ ವಲಯದಲ್ಲಿ ಶಿವಕುಮಾರ್ ಬೈಕ್ ಪತ್ತೆಯಾಗಿದೆ. ನಂತರ ಸ್ಥಳದ ಸುತ್ತಮುತ್ತ ಪರಿಶೀಲನೆ ನಡೆಸಿದಾಗ ತೊಗರಿ ಬೆಳೆ ಮಧ್ಯೆ ಶಿವಕುಮಾರ್ ಮೃತದೇಹ ಪತ್ತೆಯಾಗಿದೆ.

    ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ್ ಬ್ಯಾಕೋಡ್, ಡಿವೈಎಸ್‍ಪಿ ಡಾ.ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬಸ್ಥರು ಮತ್ತು ಆತನ ಆಪ್ತರ ಹೇಳಿಕೆಗಳನ್ನ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಪ್ಲಾಸ್ಟಿಕ್ ಮುಕ್ತ ಶಾಲೆ, ಗ್ರಾಮಕ್ಕೆ ಪಣ – ಹಳೆ ಬಟ್ಟೆಯಿಂದಲೇ ಬ್ಯಾಗ್ ತಯಾರಿ

    ಪ್ಲಾಸ್ಟಿಕ್ ಮುಕ್ತ ಶಾಲೆ, ಗ್ರಾಮಕ್ಕೆ ಪಣ – ಹಳೆ ಬಟ್ಟೆಯಿಂದಲೇ ಬ್ಯಾಗ್ ತಯಾರಿ

    – ಔರಾದ್‍ನ ಶಿಕ್ಷಕ ವೀರಕುಮಾರ್ ಇವತ್ತಿನ ಪಬ್ಲಿಕ್ ಹೀರೋ

    ಬೀದರ್: ದೇಶಾದ್ಯಂತ ಏಕ ಬಳಕೆಯ (ಸಿಂಗಲ್ ಯೂಸ್) ಪ್ಲಾಸ್ಟಿಕ್ ನಿಷೇಧಕ್ಕೆ ಜಾಗೃತಿ ನಡೆಯುತ್ತಿದೆ. ಕೆಲವು ಕಡೆ ಜಾರಿಯೂ ಆಗುತ್ತಿದೆ. ಇದಕ್ಕೆ ಕೈಜೋಡಿಸಿರೋ ನಮ್ಮ ಇವತ್ತಿನ ಪಬ್ಲಿಕ್ ಹೀರೋ ಔರಾದ್‍ನ ಠಾಣಾಕುಸನೂರು ಗ್ರಾಮದ ಶಿಕ್ಷಕ ವೀರಕುಮಾರ್. ಪ್ಲಾಸ್ಟಿಕ್ ಬಳಕೆಯ ಕುರಿತು ಶಾಲೆಯಿಂದಲೇ ಮಕ್ಕಳಿಗೆ ಅರಿವು ಮೂಡಿಸುತ್ತಿದ್ದು, ಇದರಲ್ಲಿ ಯಶಸ್ವಿಯೂ ಆಗಿದ್ದಾರೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಠಾಣಾಕುಸನೂರು ಗ್ರಾಮದಲ್ಲಿರುವ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ನ ಆಂಗ್ಲ ಮಾದ್ಯಮ ಶಿಕ್ಷಕರಾದ ವೀರಕುಮಾರ್ ಮಂಠಾಳಕರ್ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದ್ದಾರೆ. 7ನೇಯ ತರಗತಿ ಪಠ್ಯದಲ್ಲಿರುವ “ಅವೈಂಡ್ ಪ್ಲಾಸ್ಟಿಕ್” ಎಂಬ ಪಾಠದಿಂದ ಪ್ರೇರಣೆ ಪಡೆದ ಶಿಕ್ಷಕರು, 400 ವಿದ್ಯಾರ್ಥಿಗಳ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

    ಪ್ರತಿದಿನ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾದ್ರೂ, ತರಕಾರಿ, ಹಣ್ಣ ಹಂಪಲು ತರಲು ತಾವೇ ಕೈಯಾರ ಮಾಡಿಕೊಂಡಿರುವ ಬಟ್ಟೆ ಚೀಲವನ್ನೆ ಬಳಕೆ ಮಾಡುತ್ತಿದ್ದಾರೆ. 1 ರಿಂದ 7 ತರಗತಿವರೆಗೆ ಈ ಯೋಜನೆ ಅನುಷ್ಠಾನ ಮಾಡಿ ಯಶಸ್ವಿಯಾಗಿರೋ ಮೇಷ್ಟ್ರು ವೀರಕುಮಾರ್, ಈಗ ಗ್ರಾಮದಲ್ಲೂ ಆಂದೋಲನಕ್ಕೆ ಮುಂದಾಗಿದ್ದಾರೆ. 100 ಗ್ರಾಮಸ್ಥರಿಗೆ ಮಕ್ಕಳೇ ತಯಾರು ಮಾಡಿರೋ ಬಟ್ಟೆ ಚೀಲವನ್ನು ಉಚಿತವಾಗಿ ನೀಡಿದ್ದಾರೆ.

    ಪ್ಲಾಸ್ಟಿಕ್ ವಾಟರ್ ಬಾಟೆಲ್, ಪ್ಲಾಸ್ಟಿಕ್ ಕವರ್‍ನಲ್ಲಿರೋ ಸ್ನ್ಯಾಕ್ಸ್ ತಿನ್ನದಂತೆ ಮಕ್ಕಳಿಗೆ ಮೇಷ್ಟ್ರು ಸೂಚಿಸಿದ್ದು, ಇದು ಕಾರ್ಯಗತವೂ ಆಗುತ್ತಿದೆ. ಈ ಸ್ಟೋರಿಯನ್ನು ನೋಡೋ ಶಿಕ್ಷಕರೂ ಕೂಡ ತಮ್ಮ ಶಾಲೆಗಳಲ್ಲಿ ಅನುಷ್ಠಾನ ತಂದರೆ ಪ್ಲಾಸ್ಟಿಕ್ ಮುಕ್ತ ಜಾಗೃತಿ ಮತ್ತಷ್ಟು ಪರಿಣಾಮಕಾರಿಯಾಗಲಿದೆ.

  • ನಿಮ್ಮ ಸಾಲಮನ್ನಾ ಕಾಟಾಚಾರದ್ದು-ಸಿಎಂ ಎಚ್‍ಡಿಕೆ ಹಾಗು ಔರಾದ್ ಶಾಸಕರ ನಡುವೆ ಮಾತಿನ ಚಕಮಕಿ

    ನಿಮ್ಮ ಸಾಲಮನ್ನಾ ಕಾಟಾಚಾರದ್ದು-ಸಿಎಂ ಎಚ್‍ಡಿಕೆ ಹಾಗು ಔರಾದ್ ಶಾಸಕರ ನಡುವೆ ಮಾತಿನ ಚಕಮಕಿ

    ಬೀದರ್: ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಔರಾದ್ ಶಾಸಕ ಪ್ರಭು ಚವ್ಹಾಣ್, ನೀವು ಕಾಟಾಚಾರಕ್ಕೆ ಸಾಲಮನ್ನಾ ಮಾಡಿದ್ದೀರಿ ಎಂದು ಆಕ್ರೋಶ ಹೊರಹಾಕಿದರು. ಈ ವೇಳೆ ಕೆಲ ಕ್ಷಣ ಸಿಎಂ ಮತ್ತು ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು.

    ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ನಿಮ್ಮಿಂದ ಹೇಳಿಸಿಕೊಂಡು ನಾನು ಸಾಲಮನ್ನಾ ಮಾಡಬೇಕಾಗಿಲ್ಲ. ನೀವು ಹೇಗೆ ಮಹಾರಾಷ್ಟ್ರದಲ್ಲಿ ಸಾಲಮನ್ನಾ ಮಾಡಿದ್ದೀರಿ ಎಂಬುವುದು ನನಗೆ ಗೊತ್ತಿದೆ. ಸಾಲಮನ್ನಾ ಕುರಿತು ಕರೆದ ಸಭೆಯಲ್ಲಿ ಭಾಗವಹಿಸಬೇಕು. ವಿಧಾನಸಭೆಯಲ್ಲಿ ನಿಮ್ಮ ಮನವಿಯನ್ನು ಸಲ್ಲಿಸಿ. ಇದು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಎಂದು ತಿರುಗೇಟು ನೀಡಿದರು.

    ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಜೂನ್ ತಿಂಗಳವರೆಗಿನ ರೈತರ ಸಾಲಮನ್ನಾ ಮಾಡಲಾಗುವುದು. ಮಾಜಿ ಸಿದ್ದರಾಮಯ್ಯರ ಘೋಷಣೆ ಮಾಡಿದ್ದ ಸಾಲಮನ್ನಾದ 500 ಕೋಟಿ ರೂ. ಅನುದಾನವನ್ನ ಬಿಡುಗಡೆ ಮಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸುಳ್ಳು ಹೇಳುತ್ತಿದ್ದಾರೆ. ಸಾಲಮನ್ನಾದ ಕುರಿತು ರಾಷ್ಟ್ರೀಯ ಬ್ಯಾಂಕ್ ಗಳ ಜೊತೆ ಈಗಾಗಲೇ ಮಾತನಾಡಿದ್ದೇವೆ. ಸಾಲಮನ್ನಾಕ್ಕಾಗಿ ಬಜೆಟ್ ನಲ್ಲಿ 6500 ಕೋಟಿ ಹಣವನ್ನು ತೆಗೆದಿರಿಸಲಾಗಿದೆ ಎಂದು ತಿಳಿಸಿದರು.

    ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ್ದೇನೆ. ಜಿಲ್ಲೆಯ ಅಧಿಕಾರಿಗಳು ಮತ್ತು ಪ್ರತಿನಿಧಿಗಳ ಜೊತೆ ಸಭೆ ನಡೆಸಿ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬರ ಪೀಡಿ ತಾಲೂಕಗಳಲ್ಲಿ ಕುಡಿಯುವ ನೀರಿಗಾಗಿ 50 ಲಕ್ಷ ಬಿಡುಗಡೆ ಮಾಡಲಾಗಿದೆ. ದನಕರುಗಳಿಗೆ ಮೇವಿನ ಸಮಸ್ಯೆ ಆಗದಂತೆ ಜಿಲ್ಲಾಡಳಿತ ಮುಂಜಾಗ್ರತ ಕ್ರಮ ತೆಗೆದುಕೊಂಡಿದೆ. ಶಾಸಕರು ಜಿಲ್ಲೆಯ ಅಭಿವೃದ್ದಿಗೆ ಸಂಬಂಧಿಸಿದಂತೆ ಮನವಿ ನೀಡಿದ್ದಾರೆ. ಬೀದರ್ ಜಿಲ್ಲೆಯನ್ನ ಟೂರಿಸಂ ಗೆ ಹೆಚ್ಚಿನ ಆದ್ಯತೆ ನೀಡೋದರ ಬಗ್ಗೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೆನೆ ಎಂದು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬೀದರ್: ಹಳಿ ತಪ್ಪಿದ ರೈಲು- ಇಬ್ಬರಿಗೆ ಗಂಭೀರ ಗಾಯ

    ಬೀದರ್: ಹಳಿ ತಪ್ಪಿದ ರೈಲು- ಇಬ್ಬರಿಗೆ ಗಂಭೀರ ಗಾಯ

    ಬೀದರ್: ಔರಂಗಾಬಾದ್ ನಿಂದ ಹೈದ್ರಾಬಾದ್‍ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನ ಎಂಜಿನ್ ಸೇರಿದಂತೆ ಮೂರು ಬೋಗಿಗಳು ಹಳಿ ತಪ್ಪಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕಳಗಾಪುರ ಬ್ರಿಡ್ಜ್ ಬಳಿ ನಡೆದಿದೆ.

    ತಡರಾತ್ರಿ 1:45ಕ್ಕೆ ಈ ಘಟನೆ ಸಂಭವಿಸಿದೆ. ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಕೆಲವರಿಗೆ ಸಣ್ಣ ಪಟ್ಟ ಗಾಯಗಳಾಗಿವೆ. ಬ್ರಿಡ್ಜ್ ಬಳಿ ಘಟನೆ ನಡೆದಿದ್ದು, ಭಾರೀ ಅನಾಹುತ ತಪ್ಪಿದೆ.

    ಘಟನೆ ನಡೆದ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ರೈಲ್ವೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.