ಕೋಲಾರ: ಕುಡಿಯಲು (Drinks) ಹಣ ನೀಡದ ಹಿನ್ನೆಲೆ ಯುವಕ ತನ್ನ ಚಿಕ್ಕಮ್ಮನಿಗೆ (Aunt) ಬಿಯರ್ ಬಾಟಲಿಯಿಂದ ತಿವಿದು ಹತ್ಯೆ ಮಾಡಲು ಯತ್ನಿಸಿದ ಘಟನೆ ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ (Bangarpet) ತಾಲೂಕಿನ ದಾಸೇಗೌಡನೂರು ಬಳಿ ನಡೆದಿದೆ.
ಗರುಡ ಕೆಂಪನಹಳ್ಳಿ ಗ್ರಾಮದ ಅನಸೂಯ (35) ಹಲ್ಲೆಗೊಳಗಾದ ಮಹಿಳೆ. ಇದೆ ಗ್ರಾಮದ ಆನಂದ್ (26) ಕೊಲೆಗೆ ಯತ್ನಿಸಿದ ಯುವಕ. ಕೆಲಸಕ್ಕೆ ತೆರಳಿದ್ದ ವೇಳೆ ಕುಡಿತಕ್ಕೆ ಹಣ ನೀಡುವಂತೆ ಯುವಕ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದಿದ್ದಾಗ ಬಿಯರ್ ಬಾಟಲಿಯಿಂದ ಚುಚ್ವಿ ಕೊಲೆಗೆ ಯತ್ನಿಸಿದ್ದಾನೆ. ಇದನ್ನೂ ಓದಿ: ಮೈಸೂರಿನಲ್ಲಿ ಬಗರ್ ಹುಕುಂ ಸಾಗುವಳಿ ಚೀಟಿ ಖಾತೆ ಮಾಡಿಸಲು ಲಂಚ ಕೇಳ್ತಾರೆ – ಯತೀಂದ್ರ ಆರೋಪ
ಗಾಯಾಳು ಮಹಿಳೆ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ಆನಂದನನ್ನು ಕಾಮಸಮುದ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಿಎಂ ಅವರೇ ತುಘಲಕ್ ದರ್ಬಾರಿಗೆ ಇತಿಮಿತಿ ಇರಲಿ: ವಿಜಯೇಂದ್ರ
ಜೈಪುರ: ವ್ಯಕ್ತಿಯೊಬ್ಬ ತನ್ನ ಚಿಕ್ಕಮ್ಮನನ್ನು (Aunt) ಕೊಂದು ಆಕೆಯ ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ರಾಜಸ್ಥಾನದ (Rajasthan) ಜೈಪುರದಲ್ಲಿ ಎಸೆದ ಘಟನೆ ನಡೆದಿದೆ.
ಅನುಜ್ ಶರ್ಮಾ (32) ಬಂಧಿತ ಆರೋಪಿ ಹಾಗೂ ಸರೋಜಾ (64) ಮೃತ ಮಹಿಳೆ. ಅನುಜ್ ತನ್ನ ತಂದೆ, ಸಹೋದರಿ ಹಾಗೂ ಚಿಕ್ಕಮ್ಮ ಸರೋಜಾ ಅವರೊಂದಿಗೆ ಜೈಪುರದ ವಿದ್ಯಾಧರ್ ನಗರದಲ್ಲಿ ವಾಸಿಸುತ್ತಿದ್ದ. ಸರೋಜಾ ತನ್ನ ಪತಿಯ ಮರಣ ನಂತರ ಅನುಜ್ ಮನೆಯಲ್ಲೇ ವಾಸಿಸುತ್ತಿದ್ದರು. ಅಷ್ಟೇ ಅಲ್ಲದೇ ಅನುಜ್‍ನ ತಾಯಿ ಕಳೆದ ವರ್ಷ ಕೋವಿಡ್‍ನಿಂದಾಗಿ ಮೃತಪಟ್ಟಿದ್ದರು.
Rajasthan | On Dec 11, one Anuj from Jaipur reported that his aunt is missing, we found various contradictions in his statements. During probe, we found that he killed his aunt using a hammer & cut her body into pieces using a knife & marble cutter: Paris Deshmukh, DCP North pic.twitter.com/ytGtKhSbsf
ಡಿ. 11ರಂದು ಅನುಜ್‍ನ ತಂದೆ, ಸಹೋದರಿ ಇಂದೋರ್‌ಗೆ ಹೊರಟಿದ್ದರು. ಈ ವೇಳೆ ಅನುಜ್ ತಾನೂ ಬರುವುದಾಗಿ ತಿಳಿಸಿದ್ದ. ಆದರೆ ಅನುಜ್‍ನನ್ನು ಸರೋಜಾ ಹೋಗದಂತೆ ತಡೆದಿದ್ದಾಳೆ. ಇದರಿಂದಾಗಿ ಅನುಜ್‍ನ ತಂದೆ ಹಾಗೂ ಸಹೋದರಿ ಇಬ್ಬರೇ ದೆಹಲಿಗೆ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ ಸರೋಜಾ ಹಾಗೂ ಅನುಜ್ ಇಬ್ಬರೇ ಇದ್ದರು. ಅನುಜ್‍ಗೆ ಚಿಕ್ಕಮ್ಮ ದೆಹಲಿಗೆ (New Delhi) ಹೋಗಲು ಬಿಟ್ಟಿಲ್ಲ ಎಂದು ಕೋಪದಲ್ಲಿದ್ದ. ಅಷ್ಟೇ ಅಲ್ಲದೇ ಈ ವಿಷಯಕ್ಕೆ ಜಗಳ ನಡೆದಿದ್ದು, ಕೋಪದಲ್ಲಿದ್ದ ಅನುಜ್ ಚಹಾ ಮಾಡುತ್ತಿದ್ದ ಸರೋಜಾಳ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾನೆ. ನಂತರ ಆಕೆಯ ದೇಹವನ್ನು ಮಾರ್ಬಲ್ ಕಟರ್‌ನಿಂದ 10 ತುಂಡುಗಳಾಗಿ ಕತ್ತರಿಸಿ ಜೈಪುರ-ಸಿಕರ್ ಹೆದ್ದಾರಿಯಲ್ಲಿ ದೂರದ ಪ್ರದೇಶದಲ್ಲಿ ಎಸೆದಿದ್ದಾನೆ.
ಸರೋಜಾಳ ದೇಹದ ಭಾಗಗಳನ್ನು ಅನುಜ್ ಬಕೆಟ್ (Bucket) ಮತ್ತು ಸೂಟ್‍ಕೇಸ್‍ನಲ್ಲಿ ಸಾಗಿಸಿದ್ದ. ನಂತರ ಪೊಲೀಸ್ ಠಾಣೆಗೆ ಹೋಗಿ ಚಿಕ್ಕಮ್ಮ ಕಾಣೆ ಆಗಿರುವ ಬಗ್ಗೆ ದೂರು ದಾಖಲಿಸಿದ್ದಾನೆ. ಅಷ್ಟೇ ಅಲ್ಲದೇ ಪೊಲೀಸರ ದಾರಿ ತಪ್ಪಿಸಲು ಇತರ ಸಂಬಂಧಿಕರೊಂದಿಗೆ ಅವಳನ್ನು ಅನುಜ್ ಕೂಡ ಹುಡುಕಲು ಪ್ರಾರಂಭಿಸಿದ್ದಾನೆ. ಇದನ್ನೂ ಓದಿ: ಮಂಗಳೂರಿನಲ್ಲಿ ಬಾಲಕಿಯೊಂದಿಗೆ ಅಸಭ್ಯ ವರ್ತನೆ – ಯುವಕನನ್ನ ಕಂಬಕ್ಕೆ ಕಟ್ಟಿ, ಹಿಗ್ಗಾಮುಗ್ಗ ಥಳಿತ
ಪೊಲೀಸರಿಗೆ ತನಿಖೆ ಸಮಯದಲ್ಲಿ ಅನುಜ್ ಸುಳ್ಳು ಹೇಳಿಕೆ ನೀಡಿದ್ದಾನೆ ಎಂಬ ವಿಷಯ ಗೊತ್ತಾಗಿದ್ದು, ಈ ಹಿನ್ನೆಲೆಯಲ್ಲಿ ಆತನ ಚಟುವಟಿಕೆಗಳ ಮೇಲೆ ನಿಗಾ ವಹಿಸಿದ್ದಾರೆ. ಅಷ್ಟೇ ಅಲ್ಲದೇ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಅನುಜ್ ಸೂಟ್‍ಕೇಸ್ ಮತ್ತು ಬಕೆಟ್‍ನೊಂದಿಗೆ ಮನೆಯಿಂದ ಹೊರಹೋಗಿರುವುದು ಕಂಡುಬಂದಿದೆ.
ರಾಂಚಿ: ಅಪಹರಣಕ್ಕೊಳಗಾಗಿದ್ದ ಜಾರ್ಖಂಡ್‍ನ ಮೂರು ವರ್ಷದ ಬಾಲಕನನ್ನು ಪೊಲೀಸರು ರಕ್ಷಿಸಿದ್ದಾರೆ.
ಬಾಲಕನನ್ನು ಆತನ ಸ್ವಂತ ಚಿಕ್ಕಮ್ಮ 1.30 ಲಕ್ಷಕ್ಕೆ ಬಿಹಾರದ ಮಹಿಳೆಯೊಬ್ಬಳಿಗೆ ಮಾರಾಟ ಮಾಡಿದ್ದು, ಇದೀಗ ಆರೋಪಿ ಚಿಕ್ಕಮ್ಮ ಮತ್ತು ಬಾಲಕನನ್ನು ಖರೀದಿಸಿದ ಮಹಿಳೆಯನ್ನು ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ರೆಬಲ್ ಶಾಸಕರ ಕುಟುಂಬದ ಭದ್ರತೆ ಹಿಂಪಡೆದ ಸರ್ಕಾರ- ಶಿಂಧೆ ಆರೋಪ
ಬಿಹಾರದ ಜೆಹಾನಾಬಾದ್ ಜಿಲ್ಲೆಯ ಮಖ್ದುಂಪುರ್ ಪ್ರದೇಶದಲ್ಲಿದ್ದ ಬಾಲಕನನ್ನು ಗುರುವಾರ ರಾತ್ರಿ ರಕ್ಷಿಸಿ ಜಾರ್ಖಂಡ್‍ನ ಹಜಾರಿಬಾಗ್ ಜಿಲ್ಲೆಯ ಮುಫಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿರುವ ಆತನ ಮನೆಗೆ ವಾಪಸ್ ಬಿಡಲಾಯಿತು ಎಂದು ಹೇಳಿದ್ದಾರೆ.
ಜೂನ್ 20ರಂದು ಬಾಲಕ ನಾಪತ್ತೆಯಾಗಿರುವುದಾಗಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಅಪಹರಣಕ್ಕೂ ಮುನ್ನ ಬಾಲಕ ತನ್ನ ಚಿಕ್ಕಮ್ಮನ ಮನೆಯಲ್ಲಿದ್ದನು ಎಂದು ತಿಳಿದ ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಮಗುವನ್ನು ಬಿಹಾರದ ಮಹಿಳೆಗೆ ಮಾರಾಟ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾಳೆ. ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಪಾತ್ರವಿಲ್ಲ: ಶ್ರೀರಾಮುಲು
ನಂತರ ಬಾಲಕನ ತಂದೆಯೊಂದಿಗೆ ಮಖ್ದುಂಪುರಕ್ಕೆ ಪೊಲೀಸರು ತೆರಳಿ ಆತನನ್ನು ರಕ್ಷಿಸಿದ್ದಾರೆ. ಇದೀಗ ಮೇರು ಗ್ರಾಮದ ಬಾಲಕನ ಚಿಕ್ಕಮ್ಮನ ಮನೆಯಲ್ಲಿದ್ದ 1.10 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದು, ಘಟನೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡೆಹ್ರಾಡೂನ್: ಹೆಚ್‍ಐವಿ ಸೋಂಕಿತ ಮಹಿಳೆಯೊಬ್ಬಳು ತನ್ನ ಸ್ವಂತ ಸೋದರಳಿಯನ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಸೋದರಳಿಯನ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವಳು ನನ್ನ ಮಗನ ಜೊತೆ ಬಲವಂತವಾಗಿ ದೈಹಿಕ ಸಂಬಂಧವನ್ನು ಬೆಳೆಸಿದ್ದಾಳೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಬಲವಂತದ ಸುಳ್ಳು ಕೇಸು ಹಾಕಿ ಮಾನಹಾನಿ ಮಾಡುವುದಾಗಿ ಬ್ಲಾಕ್‍ಮೇಲ್ ಮಾಡುತ್ತಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹೋಗಿ ಅಪ್ಪ-ಅಮ್ಮನ ಮಚ್ಚಿನಿಂದ ಕೊಚ್ಚಿ ಕೊಂದ!
ನಂತರ ಬಾಲಕ ತನ್ನ ತಾಯಿಯೊಂದಿಗೆ ನಡೆದ ಘಟನೆಯನ್ನು ವಿವರಿಸಿದ್ದಾನೆ. ಆರೋಪಿ ಮಹಿಳೆ ಪಿಲಿಭಿತ್‍ನಲ್ಲಿ ವಾಸಿಸುತ್ತಿದ್ದಳು. ಹೋಳಿ ಹಬ್ಬದ ವೇಳೆ ಕುಟುಂಬ ಸಮೇತ ತಮ್ಮ ಊರಿಗೆ ಬಂದಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಂದಂರ್ಭ ನೋಡಿಕೊಂಡು ನನ್ನ ಮಗನ ಮೇಲೆ ಮೊದಲ ಬಾರಿ ದೌಜನ್ಯ ಎಸಗಿದ್ದಾಳೆ ಎಂದು ಸಂತ್ರಸ್ತನ ತಂದೆ ಹೇಳಿದ್ದಾರೆ. ಇದನ್ನೂ ಓದಿ: 3 ವರ್ಷದಿಂದ ದೈಹಿಕ ಸಂಪರ್ಕ ಬೆಳೆಸಿ ವಂಚನೆ- ಸತ್ಯ ತಿಳಿದ ಬಳಿಕ ಯುವತಿ ದೂರು
ನನ್ನ ಒಪ್ಪಿಗೆಯಿಲ್ಲದೆ ಅತ್ತೆ ನನ್ನ ಜೊತೆ ಇದನ್ನೆಲ್ಲಾ ಮಾಡಿದ್ದಾಳೆ ಎಂದು ಬಾಲಕ ಹೇಳಿದ್ದಾನೆ. ಈ ಹಿಂದೆ ಬಾಲಕನಿಗೆ ಅವಳು ಮಾನ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಳು. ತಂದೆಯ ಪ್ರಕಾರ, ಆರೋಪಿ ಮಹಿಳೆ ಈ ಹಿಂದೆ ರುದ್ರಪುರಕ್ಕೆ ಬಂದಿದ್ದಳು, ಅಲ್ಲಿಯೂ ಅವನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾಳೆ. ಈ ಹಿಂದೆ ಎಚ್‍ಐವಿ ಸೋಂಕಿನಿಂದಾಗಿ ಡಿಸೆಂಬರ್ ತಿಂಗಳಲ್ಲಿ ಬಾಲಕನ ಮಾವ ನಿಧನರಾಗಿದ್ದರು.
ಅವನಿಗೆ ಮದುವೆಯಾಗಿ ಐದು ವರ್ಷವಾಗಿತ್ತು. ಮದುವೆಯಾಗಿ ಆರು ತಿಂಗಳಾದ ಮೇಲೆ ಆಕೆಯ ಆರೋಗ್ಯ ಹದಗೆಡತೊಡಗಿತ್ತು. ಆಗ ಆರೋಪಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದೆವು. ಈ ವೇಳೆ ಅವಳಿಗೆ ಎಚ್‍ಐವಿ ಸೋಂಕು ತಗುಲಿರುವುದು ಕಂಡು ಬಂದಿತ್ತು. ಇದಾದ ಬಳಿಕ ಅವಳ ಪತಿಯನ್ನೂ ಸಹ ತಪಾಸಣೆಗೊಳಪಡಿಸಿದ್ದು, ಅವನಿಗೂ ಹೆಚ್‍ಐವಿ ಸೋಂಕು ತಗುಲಿದ್ದು, ದಂಪತಿ ಇಬ್ಬರಿಗೂ ಹೆಚ್‍ಐವಿ ಇರುವುದು ಧೃಡವಾಗಿತ್ತು. ಕಳೆದ ವರ್ಷ ಅವಳ ಪತಿ ಕೂಡ ಹೆಚ್‍ಐವಿ ಸೋಂಕಿನಿಂದ ಮೃತಪಟ್ಟಿದ್ದರು. ದಂಪತಿ ಮಗುವಿನ ವೈದ್ಯಕೀಯ ವರದಿ ಮಾತ್ರ ನೆಗೆಟಿವ್ ಬಂದಿತ್ತು.
ಈಗಾಗಲೇ ಆರೋಪಿ ಮಹಿಳೆಯು ಹೆಚ್‍ಐವಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್‍ಐವಿ ಸೋಂಕು ಗಂಡನಿಂದ ಹೆಂಡತಿಗೆ ಹರಡಿದೆಯೇ ಅಥವಾ ಗಂಡನಿಂದ ಹೆಂಡತಿಗೆ ಹರಡಿದೆಯೇ ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಅದೃಷ್ಟವಶಾತ್ ಹುಡುಗನ ಮೆಡಿಕಲ್ ರಿಪೋರ್ಟ್ ನೆಗೆಟಿವ್ ಬಂದಿದ್ದು, ಪೋಷಕರು ಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಒಂದು ತಿಂಗಳ ನಂತರ ಮತ್ತೆ ಪರೀಕ್ಷೆ ಮಾಡಿಸಬೇಕು ಎಂದು ವೈದ್ಯರು ಸೂಚಿಸಿರುವುದಾಗಿ ಅವರು ಹೇಳಿದ್ದಾರೆ.
ಪೋಷಕರ ದೂರಿನ ಮೇರೆಗೆ ರುದ್ರಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಹಿಳೆ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ: ಸ್ನಾನ ಮಾಡಲೆಂದು ಬಾತ್ ರೂಮ್ ಗೆ ಹೋದ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ವರದಕ್ಷಿಣೆಗಾಗಿ ಮಹಿಳೆಯನ್ನು ಕೊಲೆ ಮಾಡಿದ್ದರೆಂದು ಮೃತ ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಬಸವೇಶ್ವರ ನಗರ ನಿವಾಸಿ ಆಶಾ(30) ಮೃತ ಮಹಿಳೆ. ವರದಕ್ಷಿಣೆ ಹಣಕ್ಕಾಗಿ ಆಶಾಳನ್ನು ಕೊಲೆ ಮಾಡಿದ್ದಾರೆಂದು ಮೃತ ಮಹಿಳೆಯ ಕುಟುಂಬದವರು ಗಂಡನ ಮನೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕಳಸೇಗೌಡನಪಾಳ್ಯದ ಆಶಾಳನ್ನು ದೊಡ್ಡಬಳ್ಳಾಪುರ ನಗರದ ಬಸವೇಶ್ವರ ನಗರ ನಿವಾಸಿ ಪೇಂಟರ್ ವೃತ್ತಿಯ ಜಯರಾಮ್‍ರಿಗೆ 2011 ರಲ್ಲಿ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಒಂಬತ್ತು ವರ್ಷ ಹಾಗೂ ಮೂರು ವರ್ಷ ವಯಸ್ಸಿನ ಎರಡು ಹೆಣ್ಣು ಮಕ್ಕಳಿದ್ದಾರೆ. ಮದುವೆ ಸಮಯದಲ್ಲಿ ಜಯರಾಮನಿಗೆ ವರದಕ್ಷಿಣೆ ರೂಪದಲ್ಲಿ 140 ಗ್ರಾಂ ಚಿನ್ನ ಹಾಗೂ ಜೊತೆಯಲ್ಲಿ ನಗದು ಸಹ ನೀಡಲಾಗಿತ್ತು. ಆದರೂ ಮದುವೆಯಾದ ಕೆಲವೇ ವರ್ಷಗಳಲ್ಲಿ ಗಂಡನ ಮನೆಯವರು ದೈಹಿಕ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದಾರೆಂದು ಮೃತಳ ಕುಟುಂಬದವರ ಆರೋಪಿಸಿದ್ದಾರೆ. ಇದನ್ನೂ ಓದಿ:ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು
ಒಂದು ತಿಂಗಳ ಹಿಂದೆ ಫೋನ್ ಮಾಡಿದ ಆಶಾ ಎರಡು ಲಕ್ಷ ಹಣ ನೀಡುವಂತೆ ಗಂಡ ಜಯರಾಮ್, ಅತ್ತೆ ರತ್ನಮ್ಮ, ಜಯರಾಮ್ ಅಕ್ಕನ ಗಂಡ ನಂದಕುಮಾರ್ ಕಿರುಕುಳ ಕೊಡುತ್ತಿದ್ದರೆಂದು ಹೇಳಿದ್ದಳು. ನಮ್ಮ ಬಳಿ ಈಗ ಹಣ ಇಲ್ಲ ಎಂದಿದ್ದೆವು. ಅಂದಿನಿಂದ ಆಕೆ ನಮಗೆ ಫೋನ್ ಮಾಡಿರಲಿಲ್ಲ. ಆಗಸ್ಟ್ 24ರಂದು ಫೋನ್ ಮಾಡಿದ ಆಶಾಳ ಗಂಡ ಜಯರಾಮ್ ಆಶಾಳಿಗೆ ಫಿಡ್ಸ್ ಬಂದಿತ್ತು, ಖಾಸಗಿ ಆಸ್ಪತ್ರೆಗೆ ಸೇರಿಸಿದ್ದೇವೆ ಎಂದಿದ್ದ. ನಾವು ಆಸ್ಪತ್ರೆಗೆ ಹೋದ ಮೇಲೆ ಮಗಳನ್ನು ನೋಡಲು ಬಿಡಲಿಲ್ಲ. ಬುಧವಾರ ಸಂಜೆ ಮಗಳು ಮೃತಪಟ್ಟಿರುವುದಾಗಿ ತಿಳಿಸಿ ಮೃತದೇಹ ನೋಡಲು ಬಿಟ್ಟರು. ನಮ್ಮ ಮಗಳ ಸಾವಿಗೆ ಜಯರಾಮ್ ಮತ್ತು ಮನೆಯವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:ತಂತಿ ಉರುಳಿಗೆ ಸಿಲುಕಿ ಶಿರಸಿಯಲ್ಲಿ ಅಪರೂಪದ ಕಪ್ಪು ಚಿರತೆ ಸಾವು
ಆಶಾಗೆ ಒಂಭತ್ತು ವರ್ಷದ ಮಗಳಿಗೆ ಜಯರಾಮ್ ಮನೆಯವರು ಬರೆ ಹಾಕಿ ಕಿರುಕುಳ ನೀಡಿರುವುದು ಸಹ ತಿಳಿದುಬಂದಿದೆ. ವಿಷಯ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದಿದ್ದು, ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.
ಮೃತಳ ಪೋಷಕರ ಆರೋಪದ ನಡುವೆ ಪತಿ ಜಯರಾಮ್, ಮಂಗಳವಾರ ಸ್ನಾನಕ್ಕೆಂದು ಹೋದ ಹೆಂಡತಿ ಎರಡು ಗಂಟೆಯಾದರೂ ಹೊರ ಬಾರದಿರುವುದನ್ನು ಕಂಡು ಬಾಗಿಲು ಮುರಿದು ಒಳ ಹೋಗಿ ನೋಡಿದಾಗ, ಗೀಸರ್ ವಾಸನೆಗೆ ಫಿಡ್ಸ್ ಬಂದು ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಅಲ್ಲಿಂದ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸಂಜೆ ಪತ್ನಿ ಮೃತಪಟ್ಟಿರುವುದಾಗಿ ಆಸ್ಪತ್ರೆಯವರು ತಿಳಿಸಿದರು. ಮಗಳ ಮೈಮೇಲಿನ ಬರೆಗಳು ಪಠ್ಯದ ಕೆಲಸಗಳನ್ನು ಸರಿಯಾಗಿ ಮಾಡದ ಕಾರಣ ನನ್ನ ಅಕ್ಕನ ಮಗ ಮಾಡಿರುವುದು. ಇದರಲ್ಲಿ ನನ್ನದೇನೂ ತಪ್ಪಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ?: ಶ್ರುತಿ
ಚೆನ್ನೈ: 26 ವರ್ಷದ ಯುವತಿಯೊಬ್ಬಳು ತನ್ನ ಚಿಕ್ಕಮ್ಮ ಹಾಗೂ ಆಕೆಯ ಕುಟುಂಬಕ್ಕೆ ಕೋವಿಡ್-19 ಲಸಿಕೆ ನೀಡುವ ನೆಪದಲ್ಲಿ ನಿದ್ರೆ ಮಾತ್ರೆ ನೀಡಿ ಚಿನ್ನದ ಆಭರಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಆರೋಪಿ ಯುವತಿಯನ್ನು ಸತ್ಯಪ್ರಿಯ ಎಂದು ಗುರುತಿಸಲಾಗಿದ್ದು, ಈಕೆ ಪೆರಂಬಲೂರು ಜಿಲ್ಲೆಯ ಕುನ್ನಂ ತಾಲೂಕಿನ ಕೀಜ್ಕುಡಿಕಾಡು ಗ್ರಾಮದ ನಿವಾಸಿಯಾಗಿದ್ದಾಳೆ. ಅಲ್ಲದೆ ಆನ್‍ಲೈನ್ ಮಾರ್ಕೆಟಿಂಗ್ ಏಜೆನ್ಸಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ.
ಗುರುವಾರ ಸತ್ಯಪ್ರಿಯ ತನ್ನ ಚಿಕ್ಕಮ್ಮ ಕೆ. ರಸತಿ ಮನೆಗೆ ತೆರಳಿದ್ದಾನೆ. ಈ ವೇಳೆ ಚಿಕ್ಕಮ್ಮ, ಚಿಕ್ಕಪ್ಪ ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಕೋವಿಡ್-19 ಲಸಿಕೆ ನೀಡಬಹುದಾ ಎಂದು ಕೇಳಿದ್ದಾಳೆ. ಇದಕ್ಕೆ ರಸತಿ ಅನುಮತಿ ನೀಡಿದ್ದು, ಸತ್ಯಪ್ರಿಯ ಲಸಿಕೆ ಹೆಸರಿನಲ್ಲಿ ನಿದ್ರೆ ಮಾತ್ರೆಯನ್ನು ನೀಡಿದ್ದಾಳೆ.
ಲಸಿಕೆ ಪಡೆದ ಕೆಲ ಹೊತ್ತಿನಲ್ಲಿಯೇ ರಸತಿ, ಪತಿ ಕೃಷ್ಣಮೂರ್ತಿ ಮತ್ತು ಇಬ್ಬರು ಪುತ್ರಿಯರಾದ ಕೃತಿಂಗ ಮತ್ತು ಮೋನಿಕಾ ಪ್ರಜ್ಞೆ ಕಳೆದುಕೊಂಡಿದ್ದಾರೆ. ಬಳಿಕ ಮರು ದಿನ ಬೆಳಗ್ಗೆ ಎಲ್ಲರೂ ಎಚ್ಚರಗೊಂಡ ರಸತಿಗೆ ಮಾಂಗಲ್ಯ ಸರ, ಕೃತಿಗರವರ ಮಾಂಗಲ್ಯ ಸರ, ಮತ್ತೊಂದು ಸರ ಹಾಗೂ ಮೋನಿಕಾರವರ ಸರ ಕಾಣೆಯಾಗಿರುವ ವಿಚಾರವನ್ನು ಕಂಡುಕೊಂಡಿದ್ದಾರೆ. ಹೀಗಾಗಿ ಗಾಬರಿಗೊಂಡ ಕುಟುಂಬಸ್ಥರು ಈ ಸಂಬಂಧಪಟ್ಟಂತೆ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ.
ಇದೀಗ ಪೊಲೀಸರು ಯುವತಿಯನ್ನು ಪತ್ತೆ ಮಾಡಿ ಬಂಧಿಸಿದ್ದು, ವಿಚಾರಣೆ ವೇಳೆ ಯುವತಿ ನಿದ್ರೆ ಮಾತ್ರೆಯನ್ನು ನೀಡಿ ಆಭರಣವನ್ನು ದೋಚಿ ಪರಾರಿಯಾಗಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇದೀಗ ಪೊಲೀಸರು ಯುವತಿ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಾಷಿಂಗ್ಟನ್: ತ್ರಿವಳಿ ಕೊಲೆ ಮಾಡಿದ ವ್ಯಕ್ತಿ ಮೃತಪಟ್ಟ ಮಹಿಳೆಯ ಹೃದಯವನ್ನು ದೇಹದಿಂದ ಹೊರತೆಗೆದು ಆಲೂಗಡ್ಡೆಯೊಂದಿಗೆ ಬೇಯಿಸಿ, ಮತ್ತಿಬ್ಬರನ್ನು ಕೊಲ್ಲುವ ಮುನ್ನ ಉಣಬಡಿಸಿರುವ ಭಯಾನಕ ಘಟನೆ ಅಮೆರಿಕಾದ ಒಕ್ಲಹೋಮದಲ್ಲಿ ನಡೆದಿದೆ.
ಆರೋಪಿಯನ್ನು ಲಾರೆನ್ಸ್ ಪಾಲ್ ಆಂಡರ್ಸನ್ ಎಂದು ಗುರುತಿಸಲಾಗಿದ್ದು, ಆರೋಪಿ ನೆರೆಮನೆಯವಳನ್ನು ಕೊಂದು ಆಕೆಯ ಹೃದಯವನ್ನು ಕತ್ತರಿಸಿ ಹೊರತೆಗೆದಿದ್ದಾನೆ. ಬಳಿಕ ಹೃದಯವನ್ನು ಆರೋಪಿ ತನ್ನ ಚಿಕ್ಕಪ್ಪನ ಮನೆಗೆ ತೆಗೆದುಕೊಂಡು ಹೋಗಿ ಆಲೂಗಡ್ಡೆಯೊಂದಿಗೆ ಬೇಯಿಸಿ, ತನ್ನ ಕೈಯಾರೆ ಚಿಕ್ಕಪ್ಪ ಮತ್ತು ಅವರ ಪತ್ನಿಗೆ ಉಣಬಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಆರೋಪಿ ತನ್ನ ಚಿಕ್ಕಪ್ಪ ಮತ್ತು ಅವರ ನಾಲ್ಕು ವರ್ಷದ ಪುತ್ರಿಯನ್ನು ಮನೆಯಲ್ಲಿ ಕೊಂದಿದ್ದಾನೆ. ಅಲ್ಲದೆ ತನ್ನ ಚಿಕ್ಕಮ್ಮನ ಮೇಲೆ ಕೂಡ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದಾರೆ.
ಸುಮಾರು 20 ವರ್ಷದಿಂದ ಮಾದಕದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಆರೋಪಿಯನ್ನು ಒಕ್ಲಹೋಮ ಗವರ್ನರ್ ಕೆವಿನ್ ಸ್ಟಿಟ್, ಕೆಲವು ವಾರಗಳ ಹಿಂದೆಯಷ್ಟೇ ಬಿಡುಗಡೆಗೊಳಿಸಿದ್ದರು. ಆರೋಪಿ ಬಿಡುಗಡೆ ನಂತರ ಈ ಘಟನೆ ಸಂಭವಿಸಿದೆ.
ನವದೆಹಲಿ: ಭಾರತದ ಮಾಜಿ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರ ಸೋದರತ್ತೆಯ ಕುಟುಂಬದ ಮೇಲೆ ದಾಳಿಕೋರರು ಹಲ್ಲೆ ಮಾಡಿದ್ದು, ಸೋದರಮಾವ ಸಾವನ್ನಪ್ಪಿದ್ದಾರೆ.
ಸುರೇಶ್ ರೈನಾ ಅವರು ಐಪಿಎಲ್-2020ಯಲ್ಲಿ ಭಾಗವಹಿಸಲು ಆಗಸ್ಟ್ 21ರಂದು ಯುಎಇಗೆ ಹೋಗಿದ್ದರು. ಇದರ ನಡುವೆ ಅವರ ಸೋದರಮಾವ ಸಾವನ್ನಪ್ಪಿರುವ ವಿಚಾರ ತಿಳಿದು ಈಗ ವಾಪಸ್ ಆಗಲಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯಿಂದಲೇ ರೈನಾ ಅವರು ಹೊರಬಂದಿದ್ದಾರೆ.
ರಾಷ್ಟ್ರೀಯ ಮಾಧ್ಯಮದ ವರದಿಯ ಪ್ರಕಾರ, ಪಂಜಾಬ್‍ನ ಪಠಾಣ್‍ಕೋಟ್‍ನ ತರಿಯಾಲ್ ಗ್ರಾಮದಲ್ಲಿ ವಾಸವಿರುವ ರೈನಾ ಅವರ ಸೋದರತ್ತೆ ಕುಟುಂಬ ತಮ್ಮ ಮನೆಯ ಮಹಡಿ ಮೇಲೆ ಮಲಗಿತ್ತು. ಈ ವೇಳೆ ಅವರ ಮೇಲೆ ಅಪರಿಚಿತ ದಾಳಿಕೋರರು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಪರಿಣಾಮ ಅವರ ಸೋದರ ಮಾವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಮನೆಯ ಎಲ್ಲ ಸದಸ್ಯರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.
ರೈನಾ ಅವರ ತಂದೆಯ ಸಹೋದರಿ ಆಶಾ ದೇವಿಯವರ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮತ್ತೊಂದೆಡೆ ಅವರ ಚಿಕ್ಕಪ್ಪ, 58 ವರ್ಷದ ಅಶೋಕ್ ಕುಮಾರ್ ಅವರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ರೈನಾರ ಅತ್ತೆ ಮತ್ತು ಅತ್ತೆಯ ಮಕ್ಕಳಾದ 32 ವರ್ಷದ ಕೌಶಲ್ ಕುಮಾರ್ ಮತ್ತು 24 ವರ್ಷದ ಅಪಿನ್ ಕುಮಾರ್ ಕೂಡ ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
Suresh Raina has returned to India for personal reasons and will be unavailable for the remainder of the IPL season. Chennai Super Kings offers complete support to Suresh and his family during this time.
ರೈನಾ ಅವರ ವಿಚಾರವಾಗಿ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಚೆನ್ನೈ ತಂಡದ ಸಿಇಓ ವಿಶ್ವನಾಥನ್, ಸುರೇಶ್ ರೈನಾ ಅವರು ವೈಯಕ್ತಿಕ ಕಾರಣಗಳಿಗಾಗಿ ಭಾರತಕ್ಕೆ ವಾಪಸ್ ಹೋಗುತ್ತಿದ್ದಾರೆ ಮತ್ತು ಮುಂದೆ ಆರಂಭವಾಗುವ ಐಪಿಎಲ್ ಟೂರ್ನಿಯಲ್ಲಿ ಅವರು ಲಭ್ಯವಿರುವುದಿಲ್ಲ. ಈ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸುರೇಶ್ ರೈನಾ ಮತ್ತು ಅವರ ಕುಟುಂಬಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದಿದ್ದರು.
ಶುಕ್ರವಾರಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ವೇಗಿ ದೀಪಕ್ ಚಹರ್ ಅವರು ಸೇರಿದಂತೆ ಕೆಲ ಸಹಾಯ ಸಿಬ್ಬಂದಿಗೆ ಕೊರೊನಾ ಪಾಸಿಟವ್ ಬಂದಿತ್ತು. ಇದರಿಂದ ಶುಕ್ರವಾರದಿಂದ ಅಭ್ಯಾಸವನ್ನು ಆರಂಭ ಮಾಡಬೇಕಿದ್ದ ಚೆನ್ನೈ ತಂಡ ಸೆಪ್ಟೆಂಬರ್ 1ರವರೆಗೆ ಕ್ವಾರಂಟೈನ್‍ನಲ್ಲಿ ಇರಲು ತೀರ್ಮಾನ ಮಾಡಿತ್ತು. ಇದರ ನಡುವೆ ರೈನಾ ಕೂಡ ಹೊರಗೆ ಬಂದಿರುವುದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಹಾವೇರಿ: ತನಗೆ ಮೂವರು ಮಕ್ಕಳಿದ್ದರೂ ಅಣ್ಣನ ಮಗನನ್ನು ತನ್ನ ಸ್ವಂತ ಮಗ ಅನ್ನೋದಕ್ಕಿಂತಲೂ ಹೆಚ್ಚಾಗಿ ಬೆಳೆಸಿದ್ದ. ಆದರೆ ಆ ಅಣ್ಣನ ಮಗ ಚಿಕ್ಕಮ್ಮನಿಗಾಗಿ ಚಿಕ್ಕಪ್ಪನನ್ನೇ ಕೊಲೆ ಮಾಡಿ ಅರೆಸ್ಟ್ ಆಗಿದ್ದಾನೆ.
ಹತ್ಯೆಯಾದ ವ್ಯಕ್ತಿಯನ್ನು ನಾಗೇಂದ್ರಮಟ್ಟಿಯ ನಿವಾಸಿಯಾದ 40 ವರ್ಷ ಯಲ್ಲಪ್ಪ ಎಂದು ಗುರುತಿಸಲಾಗಿದೆ. ಈತ ಮೂರು ಮಕ್ಕಳು ಮಡದಿ ಜೊತೆ ಆಟೋರಿಕ್ಷಾ ಓಡಿಸಿಕೊಂಡು ಜೀವನ ಮಾಡುತ್ತಿದ್ದ ಮತ್ತು ಅನಾಥ ಎಂದು ತನ್ನ ಅಣ್ಣನ ಮಗ ಮಂಜುನಾಥ್(20) ಜೊತೆಯಲ್ಲೇ ಬೆಳೆಸುತ್ತಿದ್ದ.
ಚಿಕ್ಕಮ್ಮ ಉಷಾಳ ಜೊತೆ ಮಂಜುನಾಥ್ ಕದ್ದುಮುಚ್ಚಿ ಲವ್ವಿಡವ್ವಿ ಶುರುವಿಟ್ಟಕೊಂಡಿದ್ದ. ಇದು ಯಲ್ಲಪ್ಪನಿಗೆ ಗೊತ್ತಾದ ನಂತರ ಇಬ್ಬರು ಸೇರಿ ಯಲ್ಲಪ್ಪ ಕೊಲೆ ಮಾಡಿ ಹಾವೇರಿಯ ಹೆಗ್ಗೇರಿ ಕೆರೆಯ ಬಳಿ ಐದು ಲೀಟರ್ ಪೆಟ್ರೋಲ್ ಹಾಕಿ ಸುಟ್ಟು, ಮೃತ ದೇಹವನ್ನು ಬಾವಿಯಲ್ಲಿ ಹಾಕಿ ಬಂದಿದ್ದಾರೆ.
ಡಿಸೆಂಬರ್ 10 ರಂದು ರಾತ್ರಿ ಕುಡಿದ ಮತ್ತಿನಲ್ಲಿ ಮನೆಗೆ ಬಂದಿದ್ದ ಯಲ್ಲಪ್ಪನನ್ನು ಮಂಜುನಾಥ್ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಅದಕ್ಕೆ ಯಲ್ಲಪ್ಪನ ಪತ್ನಿ ಚಿಕ್ಕಮ್ಮ ಉಷಾ ಸಹ ಸಾಥ್ ನೀಡಿದ್ದಾಳೆ. ನಂತರ ಕಳೆದ ಆರು-ಏಳು ತಿಂಗಳಿನಿಂದ ಗಂಡ ಮನೆ ಬಿಟ್ಟು ಹೋಗಿದ್ದಾನೆ ಎಂದು ಗ್ರಾಮಸ್ಥರ ಬಳಿ ಹೇಳಿದ್ದಳು.
6 ತಿಂಗಳ ನಂತರ ಸ್ಥಳೀಯರಿಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಈಗ ಚಿಕ್ಕಮ್ಮ ಉಷಾ ಹಾಗೂ ಮಂಜುನಾಥನನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈ: 75 ವರ್ಷ ವಯಸ್ಸಿನ ಚಿಕ್ಕಮ್ಮನನ್ನು ಕೊಲೆ ಮಾಡಿದ ಆರೋಪದ ಮೇಲೆ 39 ವರ್ಷದ ಮಹಿಳೆಯೊಬ್ಬಳನ್ನು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಖೋಪಾತ್ ಪ್ರದೇಶದಲ್ಲಿ ನಡೆದಿದೆ.
ಶೋಭಾ ಕುಲಕರ್ಣಿ (75) ಕೊಲೆಯಾದ ಮಹಿಳೆ. ಸ್ವಪ್ನ ಕುಲಕರ್ಣಿ (39) ಕೊಲೆ ಮಾಡಿದ ಆರೋಪಿ. ಬೆಳಗಿನ ತಿಂಡಿಯನ್ನು ತಯಾರಿಸಲು ಶೋಭಾ ನಿರಾಕರಿಸಿದ್ದಕ್ಕೆ ಇಬ್ಬರು ನಡುವೆ ಜಗಳ ಶುರುವಾಗಿದೆ. ಇಬ್ಬರ ಜಗಳ ತೀವ್ರ ವಿಕೋಪಕ್ಕೆ ತೆರಳಿ ಸ್ವಪ್ನಾ ಅಡುಗೆ ಮನೆಯಲ್ಲಿ ಇದ್ದ ಚಾಕುವನ್ನು ಎತ್ತಿಕೊಂಡು ತನ್ನ ಚಿಕ್ಕಮ್ಮ ಶೋಭಾ ಅವರಿಗೆ 14 ಬಾರಿ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಕುರಿತು ಮನೆಯ ಅಕ್ಕಪಕ್ಕದವರು ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ದೇಹವನ್ನು ವಶಕ್ಕೆ ಪಡೆದು ಸ್ವಪ್ನಾಳನ್ನು ಬಂಧಿಸಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ರಬೋದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಪ್ನಾವನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಕೊಲೆಗೆ ಸಂಬಂಧಪಟ್ಟಂತೆ ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ.