Tag: auditor

  • ಯಶ್ ಆಡಿಟರ್ ಮನೆಯಲ್ಲಿ 5 ಗಂಟೆ ಐಟಿ ಶೋಧ – ಮಹತ್ವದ ದಾಖಲೆಗಳು ವಶ

    ಯಶ್ ಆಡಿಟರ್ ಮನೆಯಲ್ಲಿ 5 ಗಂಟೆ ಐಟಿ ಶೋಧ – ಮಹತ್ವದ ದಾಖಲೆಗಳು ವಶ

    ಬೆಂಗಳೂರು: ಇತ್ತೀಚೆಗೆ ರಾಕಿಂಗ್ ಸ್ಟಾರ್ ಸೇರಿದಂತೆ ಸ್ಯಾಂಡಲ್ ವುಡ್ ಸ್ಟಾರ್ ನಟರ ಮನೆ ಮೇಲೆ ಐಟಿ ದಾಳಿ ಬೆನ್ನಲ್ಲೇ ಯಶ್ ಅವರ ಆಡಿಟರ್ ಮನೆ ಮೇಲೂ ಐಟಿ ದಾಳಿ ನಡೆದಿದೆ.

    ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಯಶ್ ಆಡಿಟರ್ ಬಸವರಾಜ್ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಬಸವರಾಜ್ ನಟ ಯಶ್ ಸೇರಿದಂತೆ ಸ್ಯಾಂಡಲ್‍ವುಡ್‍ನ ಕೆಲ ನಿರ್ಮಾಪಕರು ಹಾಗೂ ನಟರ ಆಡಿಟರ್ ಕೂಡ ಆಗಿದ್ದಾರೆ.

    ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಖಾಸಗಿ ವಾಹನಗಳಲ್ಲಿ ಬಂದು ಏಕಕಾಲದಲ್ಲಿ ದಾಳಿ ನಡೆಸಿದ ಒಟ್ಟು 9 ಜನ ಐಟಿ ಅಧಿಕಾರಿಗಳು, ಸತತ 5 ಗಂಟೆಗಳ ಕಾಲ ತಪಾಸಣೆ ನಡೆಸಿದ್ರು. ಕೆಲ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡು ಹೋಗಿರುವ ಅಧಿಕಾರಿಗಳು ಆಡಿಟರ್ ಬಸವರಾಜ್‍ಗೆ ನೋಟಿಸ್ ನೀಡಿ, ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ.  ಇದನ್ನೂ ಓದಿ: ಸ್ಯಾಂಡಲ್‍ವುಡ್ ಐಟಿ ದಾಳಿ ಪ್ರಕರಣ – ಸಿಕ್ಕಿದ್ದು ಕೋಟಿ ಕೋಟಿ ಆಸ್ತಿ !

    ರಾಕಿಂಗ್ ಸ್ಟಾರ್ ಯಶ್ ಅವರ ಮನೆಯಲ್ಲಿ ಬರೋಬ್ಬರಿ 40 ಗಂಟೆ ನಡೆದಿದ್ದ ಐಟಿ ರೇಡ್ ಈಗ ಅಂತ್ಯವಾಗಿತ್ತು. ದಾಳಿಯ ಬಳಿಕ ಯಶ್ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಟಿ ಅಧಿಕಾರಿಗಳು ನಿರ್ಮಾಪಕ ವಿಜಯ್ ಕಿರಂಗದೂರ್ ಮತ್ತು ತಿಮ್ಮೇಗೌಡ ಮನೆ ಮೇಲೆ ದಾಳಿ ಮಾಡಿದ್ದಾರೆ. ಹಾಗಂತ ಇದು ಕೆಜಿಎಫ್ ಚಿತ್ರಕ್ಕೆ ಸಂಬಂಧಪಟ್ಟಿದ್ದಲ್ಲ. ಎರಡು ದಿನ ಮನೆಯಲ್ಲೇ ಇರಬೇಕಾಗಿದ್ದರಿಂದ ರಾಧಿಕಾ ಮತ್ತೆ ಮಗುವನ್ನು ನನಗೆ ಬಿಟ್ಟು ಇರಲು ಕಷ್ಟವಾಯಿತು. ಅಲ್ಲದೇ ಮಗುವಿಗೆ ಸ್ನಾನ ಮಾಡಿಸಬೇಕೆಂದು ಅಮ್ಮ ಚಿಂತೆಯಲ್ಲಿದ್ದರು. ಐಟಿ ಅಧಿಕಾರಿಗಳು ಅವರ ಕರ್ತವ್ಯ ಮಾಡಿದ್ದಾರೆ. ನಾವು ಕೂಡ ನಮ್ಮ ಕೆಲಸವನ್ನು ಮಾಡಿದ್ದೇವೆ ಎಂದು ಹೇಳಿದ್ದರು. ಇದನ್ನೂ ಓದಿ: 109 ಕೋಟಿ ಅಘೋಷಿತ ಆಸ್ತಿ ಪತ್ತೆ – ಇಡಿ ಎಂಟ್ರಿಯಾದ್ರೆ ನಟರಿಗೆ ಸಂಕಷ್ಟ ಗ್ಯಾರಂಟಿ!

    ನನ್ನ ಮನೆಯ ಮೇಲೆ ಮೊದಲ ಬಾರಿ ದಾಳಿ ನಡೆದಿದೆ. ಇದು ಹೊಸ ವಿಚಾರ. ನಮಗೂ ಅರ್ಥ ಮಾಡಿಕೊಳ್ಳುವುದು ಇರುತ್ತೆ, ಅಧಿಕಾರಿಗಳು ಅವರ ಪ್ರೊಸೀಜರ್ ಮಾಡಿದ್ದಾರೆ. ಕೆಲವು ಉಹಾಪೋಹಾಗಳನ್ನು ಮಾಡಬೇಡಿ. ಕೆಲವರು ಇಂತಹ ಅವಕಾಶಕ್ಕಾಗಿ ಕಾಯ್ದುಕೊಂಡು ಇರುತ್ತಾರೆ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಕೆ ಶಿವಕುಮಾರ್‍ಗೆ ಐಟಿಯಿಂದ 7ನೇ ನೋಟಿಸ್- ಆಡಿಟರ್ ಕರೆತರದಂತೆ ಖಡಕ್ ಸೂಚನೆ

    ಡಿಕೆ ಶಿವಕುಮಾರ್‍ಗೆ ಐಟಿಯಿಂದ 7ನೇ ನೋಟಿಸ್- ಆಡಿಟರ್ ಕರೆತರದಂತೆ ಖಡಕ್ ಸೂಚನೆ

    ಬೆಂಗಳೂರು: ಆದಾಯ ತೆರಿಗೆ ಇಲಾಖೆ ಪವರ್ ಮಿನಿಸ್ಟರ್ ಡಿಕೆ ಶಿವಕುಮಾರ್ ಮನೆಯ ಮೇಲೆ ನಿರಂತರವಾಗಿ 4 ದಿನಗಳ ಕಾಲ ದಾಳಿ ನಡೆಸಿ ಮಹತ್ತರ ದಾಖಲೆ ವಶಕ್ಕೆ ಪಡೆದಿತ್ತು.

    ದಾಳಿ ಬಳಿಕ ನಿರಂತರ ವಿಚಾರಣೆ ನಡೆಸುತ್ತಿರುವ ಐಟಿ ಅಧಿಕಾರಿಗಳು, ಬರೋಬ್ಬರಿ 7ನೇ ಬಾರಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಈ ಬಾರಿ ಇಡೀ ಕುಟುಂಬಕ್ಕೆ ನೋಟೀಸ್ ನೀಡಿದ್ದು, ಇಂದು ಕುಟುಂಬ ಸಮೇತ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ.

     

    ಪ್ರತಿ ಬಾರಿಯೂ ಕೂಡ ಚಾರ್ಟೆಡ್ ಅಕೌಂಟೆಂಟ್ ಜೊತೆಯಲ್ಲಿ ವಿಚಾರಣೆಗೆ ಹಾಜರಾಗ್ತಿದ್ದ ಡಿಕೆಶಿ, ಇಂದು ಚಾರ್ಟೆಂಟ್ ಅಕೌಂಟೆಂಟ್ ಬಿಟ್ಟು ಹೆಂಡತಿ, ಮಕ್ಕಳು ಮತ್ತು ತಾಯಿಯ ಜೊತೆಯಲ್ಲಿ ವಿಚಾರಣೆ ಹಾಜರಾಗುವಂತೆ ನೋಟೀಸ್‍ನಲ್ಲಿ ತಿಳಿಸಲಾಗಿದೆ. ಇಂದು ಐಟಿ ಅಧಿಕಾರಿಗಳು ಡಿಕೆಶಿ ಕುಟುಂಬಕ್ಕೆ ಏನೇಲ್ಲಾ ಪ್ರಶ್ನೆಗಳನ್ನು ಕೇಳ್ತಾರೆ..? ಆಡಿಟರ್ ಕರೆತರದಂತೆ ಸೂಚಿಸಿರೋದು ಯಾಕೆ ಅನ್ನೋ ಕುತೂಹಲ ಎಲ್ಲರನ್ನೂ ಕಾಡ್ತಿದೆ.

    ಇದನ್ನೂ ಓದಿ: ಪವರ್ ಮಿನಿಸ್ಟರ್‍ಗೆ ಮತ್ತೆ ಪವರ್ ಫುಲ್ ಶಾಕ್

    ಆಗಸ್ಟ್ 2 ರಂದು ಡಿಕೆ ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಗುಜರಾತ್ ಕಾಂಗ್ರೆಸ್ ಶಾಸಕರು ತಂಗಿದ್ದ ಈಗಲ್ ಟನ್ ರೆಸಾರ್ಟ್ ಮೇಲೂ ದಾಳಿ ನಡೆದಿತ್ತು.

    https://www.youtube.com/watch?v=1hWVXuy2xRs