Tag: audition

  • ಯಶ್ ಜೊತೆ ‘ಟಾಕ್ಸಿಕ್’ನಲ್ಲಿ ನಟಿಸಬೇಕಾ? ಇಲ್ಲಿದೆ ಅವಕಾಶ

    ಯಶ್ ಜೊತೆ ‘ಟಾಕ್ಸಿಕ್’ನಲ್ಲಿ ನಟಿಸಬೇಕಾ? ಇಲ್ಲಿದೆ ಅವಕಾಶ

    ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸೋಕೆ ಅವಕಾಶವನ್ನು ಕಲ್ಪಿಸಿದ್ದಾರೆ ಕೆವಿಎನ್ ಪ್ರೊಡಕ್ಷನ್. ಈ ಕುರಿತಂತೆ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಟಾಕ್ಸಿಕ್ ಸಿನಿಮಾದಲ್ಲಿ ನಟಿಸಲು ಯಾರಿಗೆಲ್ಲ ಅವಕಾಶವಿದೆ ಎನ್ನುವುದನ್ನು ಅವರು ಬರೆದುಕೊಂಡಿದ್ದಾರೆ. ಹಾಗಾಗಿ ಅವರ ರೂಲ್ಸ್ ಫಾಲೋ ಮಾಡಿ, ಯಾರು ಬೇಕಾದರೂ ಆಡಿಷನ್ (Audition) ನಲ್ಲಿ ಭಾಗಿಯಾಗಬಹುದು.

    ಚಿತ್ರದ ಶೂಟಿಂಗ್ ಇನ್ನೂ ನಿಯಮಿತವಾಗಿ ಆರಂಭವೇ ಆಗಿಲ್ಲ. ಆಗಲೇ ಚಿತ್ರದ ಬಗ್ಗೆ ಸಾಕಷ್ಟು ವಿಷಯಗಳು ಆಚೆ ಬರುತ್ತಿವೆ. ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ನಟಿಸ್ತಾರಾ? ಇಂಥದ್ದೊಂದು ಪ್ರಶ್ನೆ ಹಲವು ತಿಂಗಳ ಹಿಂದೆಯೇ ಶುರುವಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಂತೆ ಕಾಣುತ್ತಿದೆ. ಬಿಟೌನ್ ನಲ್ಲಿ ಸುದ್ದಿ ಆಗಿರುವ ಪ್ರಕಾರ, ಸ್ವತಃ ಕರೀನಾ ಅವರೇ ಹೇಳಿಕೊಂಡಂತೆ ಬಾಲಿವುಡ್ (Bollywood) ಚಿತ್ರದಲ್ಲಿ ಕರೀನಾ ನಟಿಸುತ್ತಿದ್ದಾರಂತೆ. ಆದರೆ, ಆ ಸಿನಿಮಾ ಯಾವುದನ್ನು ಎನ್ನುವುದನ್ನು ಸದ್ಯಕ್ಕೆ ಹೇಳಲಾರೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

    ಈ ಹಿಂದೆಯೇ ಸಂದರ್ಶನವೊಂದರಲ್ಲಿ ಕರೀನಾ ಅವರು, ಯಶ್ ಜೊತೆ ಮಾತ್ರ ನಟಿಸುತ್ತೇನೆ. ಪ್ರಭಾಸ್, ಅಲ್ಲು ನಕೋ ಬಾಬಾ ಎಂದಿದ್ದರು. ಯಶ್ ಜೊತೆ ನಟಿಸೋದು ಹೆವ್ವಿ ಇಷ್ಟ. ಅದೇ ಲೈಫ್ ಟೈಮ್ ಅಚೀವ್‌ಮೆಂಟು ಎಂದಿದ್ದರು. ಈ ಮೂಲಕ ತಾವು ಯಶ್ ಜೊತೆ ನಟಿಸುವ ಉತ್ಸಾಹವನ್ನೂ ತೋರಿಸಿದ್ದರು. ಆ ಕನಸು ನನಸಾದಂತೆ ಕಾಣುತ್ತಿದೆ.

    ಈ ನಡುವೆ ಯಶ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಇದೆ. ಟಾಕ್ಸಿಕ್ (Toxic) ಸಿನಿಮಾವನ್ನು ಗೀತು ಮೋಹನ್ ದಾಸ್ (Geethu Mohan Das) ನಿರ್ದೇಶನ ಮಾಡಲಿದ್ದಾರೆ ಎನ್ನುವ ವಿಷಯ ಬಿಟ್ಟರೆ, ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದ ಒಂದೇ ಒಂದು ಫೋಟೋ ಕೂಡ ಆಚೆ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಯಶ್ ಮತ್ತು ಗೀತು ಅವರ ಫೋಟೋ ಸಿಕ್ಕಿದೆ. ಗೋವಾದಲ್ಲಿ ಸಿನಿಮಾದ ಶೂಟಿಂಗ್ ನಡೆದಿದ್ದು, ಆ ಫೋಟೋ ಅದು ಎನ್ನಲಾಗುತ್ತಿದೆ.

    ಟೆಂಪಲ್ ರನ್ ಮುಗಿಸಿಕೊಂಡು ಸದ್ಯ ಯಶ್ (Yash) ಗೋವಾದಲ್ಲಿ (Goa) ಬೀಡು ಬಿಟ್ಟಿದ್ದಾರೆ. ಗೋವಾದ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಸದ್ಯ ಅವರು ಗೋವಾನಲ್ಲಿ ಬೀಡು ಬಿಟ್ಟಿರೋದು ಟಾಕ್ಸಿಕ್ ಸಿನಿಮಾದ ಶೂಟಿಂಗ್ ಗಾಗಿ ಎನ್ನುವ ವಿಚಾರ ಹರಿದಾಡುತ್ತಿತ್ತು. ಅದು ಈಗ ನಿಜವಾಗಿದೆ. ಶೂಟಿಂಗ್ ಸಮಯದ್ದು ಎನ್ನಲಾದ ಫೋಟೋ ವೈರಲ್ ಆಗಿದೆ.

     

    ಟಾಕ್ಸಿಕ್ ಸಿನಿಮಾದ ಬಗ್ಗೆ ಯಾವುದೇ ಅಪ್ ಡೇಟ್ ನೀಡದ ಯಶ್ ಮೊನ್ನೆಯಷ್ಟೇ ಈ ಕುರಿತಂತೆ ಮಾತನಾಡಿದ್ದರು. ತಮ್ಮ 19ನೇ ಸಿನಿಮಾದ ಪ್ರಾಜೆಕ್ಟ್ ಎಲ್ಲಿಗೆ ಬಂತು? ಎಂಬುದರ ಬಗ್ಗೆ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದರು. ಡೈರೆಕ್ಟರ್ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಕೆವಿಎನ್ ಸಂಸ್ಥೆ ಜೊತೆ ಯಶ್ ಕೈಜೋಡಿಸಿದ್ದಾರೆ.

  • ಇಲ್ಲಿ ವಂಶಿಕಾ ಹೆಸರಿನಲ್ಲಿ ವಂಚನೆ, ಅಲ್ಲಿ ಸಲ್ಮಾನ್ ಖಾನ್ ಹೆಸರಲ್ಲೂ ವಂಚನೆ

    ಇಲ್ಲಿ ವಂಶಿಕಾ ಹೆಸರಿನಲ್ಲಿ ವಂಚನೆ, ಅಲ್ಲಿ ಸಲ್ಮಾನ್ ಖಾನ್ ಹೆಸರಲ್ಲೂ ವಂಚನೆ

    ಸ್ಯಾಂಡಲ್ ವುಡ್ ನಲ್ಲಿ ನಿಶಾ ನರಸಪ್ಪ ಎನ್ನುವವರು ಮಾಸ್ಟರ್ ಆನಂದ್ ಮಗಳ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದರೆ, ಅತ್ತ ಬಾಲಿವುಡ್ (Bollywood)ನಲ್ಲೂ ಸಲ್ಮಾನ್ ಖಾನ್ (Salman Khan) ಹೆಸರಿನಲ್ಲಿ ದೋಖಾ (Cheating) ಮಾಡಲಾಗುತ್ತಿದೆ ಎಂದು ಸ್ವತಃ ಸಲ್ಮಾನ್ ಖಾನ್ ತಿಳಿಸಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಸಲ್ಮಾನ್ ಖಾನ್ ಸಂಸ್ಥೆಯಿಂದ ತಯಾರಾಗುವ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಮತ್ತು ಅವರ ಕಂಪೆನಿಯ ಹೆಸರಿನಲ್ಲಿ ಬೇರೆಯವರು ಆಡಿಷನ್ (Audition) ಮಾಡಿ ಹಣ ಪಡೆಯಲಾಗುತ್ತಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಯಾರೋ ಮೋಸ ಹೋಗಬಾರದು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ನ್ಯಾಯಕ್ಕಾಗಿ ಇಂದು ಫಿಲ್ಮ್ ಚೇಂಬರ್ ಮುಂದೆ ನಿರ್ಮಾಪಕ ಎನ್.ಕುಮಾರ್ ಪ್ರತಿಭಟನೆ

    ನಮ್ಮ ಸಂಸ್ಥೆಯಿಂದ ಯಾವುದೇ ಹೊಸ ಸಿನಿಮಾ ಮಾಡುತ್ತಿಲ್ಲ ಮತ್ತು ಸಿನಿಮಾದ ಹೆಸರಿನಲ್ಲಿ ಆಡಿಷನ್ ಕೂಡ ನಡೆಯುತ್ತಿಲ್ಲ. ಕಾಸ್ಟಿಂಗ್ ಡೈರೆಕ್ಟರ್ ಅಥವಾ ಕಾಸ್ಟಿಂಗ್ ಮಾಡಲು ಯಾವುದೇ ಏಜೆನ್ಸಿಗೆ ನಾವು ಅನುಮತಿಯನ್ನೂ ನೀಡಿಲ್ಲ. ಯಾರಾದರೂ ಇ-ಮೇಲ್ ಮಾಡಿದರೆ ಅಥವಾ ಮಸೇಜ್ ಕಳುಹಿಸಿದರೆ, ಯಾರು ರಿಯ್ಯಾಕ್ಟ್ ಮಾಡಬೇಡಿ. ಅಂಥವರ ವಿರುದ್ಧ ದೂರು ನೀಡಿ ಎಂದು ಬರೆದುಕೊಂಡಿದ್ದಾರೆ.

     

    ಸ್ಯಾಂಡಲ್ ವುಡ್, ಬಾಲಿವುಡ್ ನಲ್ಲಿ ಮಾತ್ರವಲ್ಲ ಭಾರತೀಯ ಸಿನಿಮಾ ರಂಗದ ನಾನಾ ಕಡೆಗಳಲ್ಲಿ ಇಂತಹ ವಂಚನೆಗಳು ನಡೆಯುತ್ತಲೇ ಇವೆ. ಈಗಾಗಲೇ ಅನೇಕ ಬಾರಿ ಇಂತಹ ಪ್ರಕರಣಗಳು ಆಚೆ ಬಂದಿವೆ. ಬಂದರೂ ಜನರು ಮೋಸ ಹೋಗುವುದನ್ನು ಮಾತ್ರ ನಿಲ್ಲಿಸಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುದೀಪ್ ಜೊತೆ ನಟಿಸಲು ಹೆಣ್ಣು ಮಗುವಿಗಾಗಿ ಹುಡುಕುತ್ತಿದ್ದಾರೆ ಅನೂಪ್ ಭಂಡಾರಿ

    ಸುದೀಪ್ ಜೊತೆ ನಟಿಸಲು ಹೆಣ್ಣು ಮಗುವಿಗಾಗಿ ಹುಡುಕುತ್ತಿದ್ದಾರೆ ಅನೂಪ್ ಭಂಡಾರಿ

    ಬೆಂಗಳೂರು: ಕಿಚ್ಚ ಸುದೀಪ್ ಅವರ ಜೊತೆ ನಟಿಸಲು ಹೆಣ್ಣು ಮಗುವನ್ನು ನಿರ್ದೇಶಕ ಅನೂಪ್ ಭಂಡಾರಿ ಹುಡುಕುತ್ತಿದ್ದಾರೆ.

    ಅನೂಪ್ ಅವರು ಸುದೀಪ್ ಅವರ ಜೊತೆ ‘ಬಿಲ್ಲಾ ರಂಗ ಭಾಷಾ’ ಸಿನಿಮಾವನ್ನು ನಿರ್ದೇಶಿಸುತ್ತಾರೆ ಎಂಬ ಸುದ್ದಿ ಕೇಳಿ ಬರುತಿತ್ತು. ಆದರೆ ಈಗ ಈ ಚಿತ್ರದ ಬದಲು ಮತ್ತೊಂದು ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶಿಸುತ್ತಿದ್ದಾರೆ. ಸದ್ಯ ಈ ಚಿತ್ರದಲ್ಲಿ ಸುದೀಪ್ ಅವರ ಜೊತೆ ನಟಿಸಲು ಹೆಣ್ಣು ಮಗು ಬೇಕು ಎಂದು ಅನೂಪ್ ಭಂಡಾರಿ ಟ್ವೀಟ್ ಮಾಡಿದ್ದಾರೆ.

    ಅನೂಪ್ ಭಂಡಾರಿ ಅವರು ತಮ್ಮ ಟ್ವಿಟ್ಟರಿನಲ್ಲಿ ಕಿಚ್ಚ ಅವರು ಇರುವ ಪೋಸ್ಟರ್ ಹಾಕಿ “ಸುದೀಪ್ ಅವರ ಜೊತೆ ನಟಿಸಲು 3-7 ವರ್ಷದ ಮುದ್ದಾಗಿ ನಟಿಸಬಲ್ಲ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ಸುವರ್ಣಾವಕಾಶ ಎಂದು ಬರೆದು ಮೇಲ್ ಐಡಿ ಹಾಕಿ” ಟ್ವೀಟ್ ಮಾಡಿದ್ದಾರೆ.

    ಅನೂಪ್ ಅವರ ಹೆಸರಿಡದ ಈ ಸಿನಿಮಾದಲ್ಲಿ ಬಾಲಕಿಯ ಪಾತ್ರ ಮುಖ್ಯವಾಗಿದೆ. ಹಾಗಾಗಿ ಅವರು 3 ರಿಂದ 7 ವರ್ಷದ ಒಳಗಿನ ಹೆಣ್ಣು ಮಗುವಿಗಾಗಿ ಆಡಿಶನ್ ಶುರು ಮಾಡಿದ್ದಾರೆ. ಈ ಸಿನಿಮಾದಲ್ಲಿ ಆಸಕ್ತಿ ಇರುವವರು ಸಂಪರ್ಕಿಸಬಹುದು ಎಂದು ಅನೂಪ್ ಮನವಿ ಮಾಡಿಕೊಂಡಿದ್ದಾರೆ.

    ಈ ಸಿನಿಮಾವನ್ನು ಜಾಕ್ ಮಂಜು ಅವರು ನಿರ್ಮಾಣ ಮಾಡುತ್ತಿದ್ದು, ಸೆಪ್ಟಂಬರ್ ತಿಂಗಳಿನಲ್ಲಿ ಚಿತ್ರೀಕರಣ ಶುರುವಾಗಲಿದೆ. ಈ ಚಿತ್ರಕ್ಕೆ ನಾಯಕಿ ಸೇರಿದಂತೆ ಯಾವುದೇ ಕಲಾವಿದರು ಆಯ್ಕೆ ಆಗಿಲ್ಲ. ಚಿತ್ರತಂಡ ಪ್ರಿಪ್ರೊಡಕ್ಷನ್ ಹಂತದಲ್ಲಿದ್ದು, ಹೆಣ್ಣು ಮಗುವಿನ ಆಯ್ಕೆಗೆ ಈಗ ಆಡಿಶನ್ ನಡೆಸುತ್ತಿದ್ದಾರೆ.

  • ‘ಕೆಜಿಎಫ್ – 2’ ಆಡಿಷನ್‍ಗೆ ಜನವೋ ಜನ

    ‘ಕೆಜಿಎಫ್ – 2’ ಆಡಿಷನ್‍ಗೆ ಜನವೋ ಜನ

    ಬೆಂಗಳೂರು: ಕೆಜಿಎಫ್ ಆಡಿಷನ್‍ಗೆ ಭಾರೀ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದರಿಂದ ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.

    ನಿರ್ದೇಶಕ ಪ್ರಶಾಂತ್ ನೀಲ್ ಅವರು ಹೊಸ ಕಲಾವಿದರಿಗೆ ಕೆಜಿಎಫ್-2ನಲ್ಲಿ ನಟಿಸುವ ಸುವರ್ಣಾವಕಾಶ ನೀಡಿದ್ದರು. ಹೀಗಾಗಿ ಇಂದು ‘ಕೆಜಿಎಫ್ – 2’ ಆಡಿಷನ್‍ಗೆ ಅಪಾರ ಸಂಖ್ಯೆ ಯುವಕರ ಬಂದಿದ್ದಾರೆ.

    ಬೆಂಗಳೂರಿನ ಮಲ್ಲೇಶ್ವರಂನ ಖಾಸಗಿ ಹೋಟೆಲ್‍ನಲ್ಲಿ ‘ಕೆಜಿಎಫ್ – 2’ ಆಡಿಷನ್ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆಡಿಷನ್‍ನಲ್ಲಿ ಭಾಗಿಯಾಗಲು ಜನರು ಕಿಲೋಮೀಟರ್ ಗಟ್ಟಲೆ ಕ್ಯೂ ನಿಂತಿದ್ದಾರೆ. ಬೆಂಗಳೂರು ಮಾತ್ರವಲ್ಲದೇ ಹುಬ್ಬಳ್ಳಿ, ಧಾರವಾಡ ಮತ್ತು ಹಾವೇರಿ ಸೇರಿದಂತೆ ಅನೇಕ ಜಿಲ್ಲೆಯಗಳಿಂದಲೂ ಆಡಿಷನ್‍ಗೆ ಬಂದಿದ್ದಾರೆ. ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

    ಆಡಿಷನ್‍ಗೆ ಮಕ್ಕಳನ್ನು ಕರೆದುಕೊಂಡು ತಾಯಿಯಂದಿರು ಬಂದಿದ್ದಾರೆ. ಇನ್ನೂ ಮೊದಲ ಸಿನಿಮಾದಲ್ಲಿ ಗಡ್ಡಧಾರಿಯಾಗಿ ಮಿಂಚಿದ್ದ ವಿಲನ್‍ಗಳನ್ನು ನೋಡಿ ಅವರಂತೆಯೇ ಗಡ್ಡ ಬೆಳೆಸಿರುವ ಯುವಕರು ಕೂಡ ಬಂದಿದ್ದಾರೆ. ಬಿಸಿಲಿಗೆ ಕ್ಯೂ ನಿಂತು ಸುಸ್ತಾದರೂ ಸರತಿ ಸಾಲಿನಲ್ಲೇ ಕುಳಿತುಕೊಂಡು ಆಡಿಷನ್‍ಗಾಗಿ ಕಾಯುತ್ತಿದ್ದಾರೆ.

    ಡೈಲಾಗ್ ಹೇಳಿ ಆಯ್ಕೆಯಾದೆ:
    ನಾನು ಆಡಿಷನ್ ಕೊಟ್ಟು ವಿಲನ್ ಪಾತ್ರಕ್ಕೆ ಆಯ್ಕೆಯಾಗಿದ್ದೇನೆ. ತುಂಬಾ ಖುಷಿಯಾಗುತ್ತಿದೆ. 20 ಸಿನಿಮಾ ಮಾಡುವುದು ಒಂದೇ, ಕೆಜಿಎಫ್ ಸಿನಿಮಾ ಮಾಡುವುದು ಒಂದೇ. ಇದಕ್ಕಾಗಿ ತುಂಬಾ ಕಷ್ಟ ಪಟ್ಟಿದ್ದೀನಿ. ನಾನು ಅರುಣ್, ಚಾಮರಾಜನಗರದಿಂದ ಬಂದಿದ್ದೀನಿ. ಬಿ.ಕಾಂ ಮಾಡಿದ್ದೇನೆ. ಮುಂದಿನ ದಿನ ಕೆಜಿಎಫ್ ಪಾರ್ಟ್ 2 ನಲ್ಲಿ ನನ್ನನ್ನು ನೋಡಬಹುದು. ನಾನು ಶ್ರೀಮುರಳಿ, ಧ್ರುವಾ ಸರ್ಜಾ ಮತ್ತು ಉದಯ್ ಡೈಲಾಗ್ ಹೇಳಿದೆ. ಮೊದಲು ನಮ್ಮ ಮೇಲೆ ನಮಗೆ ವಿಶ್ವಾಸ ಇದ್ದರೆ, ಖಂಡಿತ ನಾವು ಆಯ್ಕೆಯಾಗುತ್ತೇವೆ ಎಂದು ಹೇಳಿದ್ದಾರೆ.

    ಪ್ರಶಾಂತ್ ನೀಲ್ ಆಡಿಷನ್ ದಿನಾಂಕವನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದರು. “ಇದೇ ಏಪ್ರಿಲ್ 26ರಂದು ಬೆಂಗಳೂರಿನ ಜಿಎಂ ರಿಜಾಯಜ್‍ನಲ್ಲಿ ಆಡಿಷನ್ ನಡೆಯಲಿದೆ. ಏಪ್ರಿಲ್ 26ರ ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಆಡಿಷನ್ ನಡೆಯಲಿದ್ದು, 8 ರಿಂದ 16 ವರ್ಷದ ಹುಡುಗರು ಮತ್ತು 25 ವರ್ಷ ಮೇಲ್ಪಟ್ಟ (ಪುರುಷರು)ಆಸಕ್ತಿಯುಳ್ಳ ಕಲಾವಿದರು ಆಡಿಷನ್‍ನಲ್ಲಿ ಭಾಗವಹಿಸಬಹುದು. ಎಲ್ಲರೂ ಕೇವಲ ಒಂದು ನಿಮಿಷದಲ್ಲಿ ತಮ್ಮ ಡೈಲಾಗ್ ನ್ನು ಒಪ್ಪಿಸಬೇಕು” ಎಂದು ಬರೆದುಕೊಂಡಿದ್ದರು.

  • ಮಿಸೆಸ್ ಇಂಡಿಯಾ ಗೆಲಾಕ್ಸಿ ಆಡಿಷನ್

    ಮಿಸೆಸ್ ಇಂಡಿಯಾ ಗೆಲಾಕ್ಸಿ ಆಡಿಷನ್

    ಬೆಂಗಳೂರು: ಇವತ್ತು ಫ್ಯಾಷನ್ ದುನಿಯಾಕ್ಕೆ ಮಾರು ಹೋಗದವರಿಲ್ಲ. ಬಹುತೇಕ ಹುಡುಗಿಯರು ನಾವು ಮಾಡೆಲ್ ಗಳಾಗಿ ಮಿಂಚಬೇಕು ಅನ್ನೋ ಆಸೆ ಹೊಂದಿರುತ್ತಾರೆ. ಈ ಕನಸನ್ನು ನನಸಾಗಿಸಲು ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಆಡಿಷನ್ ಗಳು ನಡೆಯುತ್ತವೆ. ಅದರಂತೆ ನಗರದ ಖಾಸಗಿ ಹೋಟೆಲ್ ನಲ್ಲಿ, ಮಿಸೆಸ್ ಇಂಡಿಯಾ ಗೆಲಾಕ್ಸಿ ಆಡಿಷನ್ ನಡೆಯಿತ್ತು.

    ರಾಜ್ಯದ ವಿವಿಧೆಡೆಯಿಂದ ಬಂದ ನೂರಾರು ಚೆಲುವಿಯರು ತಮ್ಮ ಬೆಡಗು-ಭಿನ್ನಾಣವನ್ನು ಪ್ರದರ್ಶಿಸಿದರು. ಈ ವೈಯಾರಿಯರ ಜಿಂಗ್ ಚಾಂಕ್ ರ‍್ಯಾಂಪ್ ವಾಕ್ ಎಲ್ಲರನ್ನೂ ಅಟ್ರಾಕ್ಟ್ ಮಾಡಿತ್ತು. ಇಂಡೋ-ವೆಸ್ಟರ್ನ್ ಡ್ರೇಸೆಸ್ಸ್, ಗೌನ್ ಗಳನ್ನು ತೊಟ್ಟು ಬೆಡಗಿಯರು ಮಿಂಚಿದರು.

    ವಿದೇಶಿ ಹಾಡುಗಳ ಹಿನ್ನೆಲೆಗೆ ತಕ್ಕಂತೆ ಹಾಕಿದ ಚೆಲುವೆಯರು ಮೈ ಮಾಟ ಪ್ರದರ್ಶಿಸಿದರು. ತಮ್ಮ ಸೌಂದರ್ಯ, ಪ್ರತಿಭೆಯ ಮೂಲಕ ಸ್ಪರ್ಧೆಯೊಡ್ಡಿದರು. ಜೊತೆಗೆ ಭವಿಷ್ಯದ ಮಾಡೆಲ್ ಗಳಾಗುವ ಭರವಸೆ ತುಂಬಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಲಿವುಡ್‍ಗೆ ಹಾರಿದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್!

    ಬಾಲಿವುಡ್‍ಗೆ ಹಾರಿದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್!

    ಬೆಂಗಳೂರು: ಸ್ಯಾಂಡಲ್‍ವುಡ್ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ಬಾಲಿವುಡ್ ಹಾರಿದ್ದಾರೆ. ಕನ್ನಡದಲ್ಲಿ ಯೂ-ಟರ್ನ್, ಊರ್ವಿ, ಅಪರೇಶನ್ ಅಲಮೇಲಮ್ಮ ಚಿತ್ರದಲ್ಲಿ ನಟಿಸಿ ತಮಿಳು ಚಿತ್ರರಂಗದಲ್ಲಿ ಮಿಂಚಿ ಈಗ ಬಾಲಿವುಡ್‍ಗೆ ಹಾರಿದ್ದಾರೆ.

    ಶ್ರದ್ಧಾ ಶ್ರೀನಾಥ್ ಈಗಾಗಲ್ಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿ ಸೈ ಎನ್ನಿಸಿಕೊಂಡಿದ್ದಾರೆ. ಆದರೆ ಈಗ ಬಾಲಿವುಡ್ ಸ್ಟಾರ್ ನಿರ್ದೇಶಕ ತಿಗ್ಮಾಂಶು ದುಲಿಯಾ ಅವರ ಚಿತ್ರಕ್ಕೆ ನಾಯಕಿಯಾಗಿ ನಟಿಸುವ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ.

    ಶ್ರದ್ಧಾ ತಮ್ಮ ಬಾಲಿವುಡ್‍ನ ಮೊದಲ ಸಿನಿಮಾವನ್ನು ಶಿವರಾತ್ರಿ ದಿನದಂದು ಒಪ್ಪಿಕೊಂಡಿದ್ದಾರೆ. ನನಗೆ ತುಂಬಾನೇ ಖುಷಿಯಾಗುತ್ತಿದೆ. ಬಾಲಿವುಡ್ ಚಿತ್ರರಂಗದಿಂದ ನನಗೆ ಅವಕಾಶ ಸಿಕ್ಕಿದ್ದು ನನಗೆ ನಂಬಲಿಕ್ಕೆ ಸಾಧ್ಯವಿಲ್ಲ. ಸೌತ್ ಸಿನಿರಂಗ ಒಂದೇ ಚಿತ್ರರಂಗ ಇದ್ದ ಹಾಗೆ. ನಮ್ಮ ಅಭಿನಯ ನೋಡಿ ಅವರಿಗೆ ಇಷ್ಟವಾದರೆ ಅವರು ತಮ್ಮ ಸಿನಿಮಾದಲ್ಲಿ ನಾಯಕಿ ಆಗಲು ಅವಕಾಶ ನೀಡುತ್ತಾರೆ. ಆದರೆ ಬಾಲಿವುಡ್ ಆಗಿಲ್ಲ ಎಂದು ಶ್ರದ್ಧಾ ಶ್ರೀನಾಥ್ ತಿಳಿಸಿದ್ದಾರೆ.

    ನಿರ್ದೇಶಕರ ಹತ್ತಿರ ಯಾರೋ ಒಬ್ಬರು ಶ್ರದ್ಧಾ ಅವರ ಹೆಸರನ್ನು ಸೂಚಿಸಿದ್ದರು. ಆಗ ನಿರ್ದೇಶಕ ಶ್ರದ್ಧಾ ಅವರನ್ನು ಕರೆಸಿ ಆಡಿಶನ್ ನಡೆಸಿದ್ದರು. ನಾನು ಆಡಿಶನ್ ಕೊಟ್ಟ ಮೇಲೆ ಅವರು ನನ್ನನ್ನು ನಾಯಕಿಯಾಗಿ ಒಪ್ಪಿಕೊಂಡರು. ನಂತರ ‘ಮಿಲನ್ ಟಾಕೀಸ್’ ಚಿತ್ರಕ್ಕೆ ನಾಯಕಿಯಾಗಲೂ ನನ್ನಿಂದ ಸಹಿ ಹಾಕಿಸಿಕೊಂಡರು ಎಂದು ಶ್ರದ್ಧಾ ಹೇಳಿದ್ದಾರೆ.

    ಈ ಚಿತ್ರದ ಹೆಸರು ‘ಮಿಲನ್ ಟಾಕೀಸ್’ ಆಗಿದ್ದು, ಈ ಚಿತ್ರಕ್ಕೆ ನಾಯಕನಟನ್ನಾಗಿ ಬಾಲಿವುಡ್, ಹಾಲಿವುಡ್ ಖ್ಯಾತಿಯ ಅಲಿ ಫೈಜಲ್ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಂದಿನ ತಿಂಗಳು ನಡೆಯಲಿದ್ದು, ಉತ್ತರ ಪ್ರದೇಶದ ಲಕ್ನೋ, ಮಥುರಾದಲ್ಲಿ ಚಿತ್ರೀಕರಣ ನಡೆಯಲಿದೆ.

  • ಕಲಬುರಗಿಯಲ್ಲಿ ಜೀ ಕನ್ನಡದ ಕಾಮಿಡಿ ಕಿಲಾಡಿಗಳು-2, ಸರಿಗಮಪ ಆಡಿಷನ್

    ಕಲಬುರಗಿಯಲ್ಲಿ ಜೀ ಕನ್ನಡದ ಕಾಮಿಡಿ ಕಿಲಾಡಿಗಳು-2, ಸರಿಗಮಪ ಆಡಿಷನ್

    ಕಲಬುರುಗಿ: ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಜನ್ ಟು ಮತ್ತು ಸರಿಗಮಪ ಲಿಟಲ್ ಚಾಂಪ್ಸ್ ಸೀಜನ್ 14ರ ಆಡಿಷನ್ ಕಲಬುರುಗಿಯಲ್ಲಿ ನಡೆಯಿತು. ನೂರಾರು ಮಕ್ಕಳು ಆಡಿಷನ್‍ನಲ್ಲಿ ಪಾಲ್ಗೊಂಡರು.

    ಮೇಹತಾ ಶಾಲೆಯಲ್ಲಿ ಬೆಳಗ್ಗೆ ಆರಂಭವಾದ ಆಡಿಷನ್ ಸಂಜೆಯವರೆಗೆ ಕೂಡಾ ಮುಂದುವರೆಯಿತು. 13 ಸೀಜನ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ಸರಿಗಮಪ ರಾಜ್ಯಾದ್ಯಂತ ಬಹಳ ಪ್ರಸಿದ್ಧಿ ಪಡೆದಿದೆ.

    ಎಲ್ಲಾ ಮೂವತ್ತು ಜಿಲ್ಲೆಗಳಲ್ಲಿ ಮತ್ತು ಮಹಾ ನಗರಗಳಲ್ಲಿ ಆಡಿಷನ್ ನಡೆಯುತ್ತಿದ್ದು ಪ್ರತಿಭೆಗಳ ಹುಡುಕಾಟ ನಡೆಯುತ್ತಿದೆ. ಜೀ ವಾಹಿನಿಯ ಸುಮಾರು 50ಕ್ಕಿಂತಲೂ ಹೆಚ್ಚು ಸಿಬ್ಬಂದಿ ಆಡಿಷನ್‍ನಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಕಲಬುರಗಿ ನಗರದ ಸೇರಿದಂತೆ ಜಿಲ್ಲೆಯ ಹಲವೆಡೆಯಿಂದ 300ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.

    ಹಾಸ್ಯದ ಬಗ್ಗೆ ಆಸಕ್ತಿಯಿರುವವರು, ಸಂಗೀತ ಕಲಿತ ಮಕ್ಕಳು ಖುಷಿ ಖುಷಿಯಾಗಿ ಆಡಿಷನ್‍ನಲ್ಲಿ ಪಾಲ್ಗೊಂಡರು. ಇನ್ನು ತಮ್ಮ ಮಕ್ಕಳನ್ನು ಈ ಆಡಿಷನ್‍ನಲ್ಲಿ ಭಾಗವಹಿಸಲು ಅವರ ಪೋಷಕರು ಅಷ್ಟೇ ಕಾತುರದಿಂದ ಕಾಯುತ್ತಿರುವುದು ಸರ್ವೇ ಸಾಮಾನ್ಯವಾಗಿತ್ತು.

  • ಉಡುಪಿಯಲ್ಲಿ ಜೀ ಕನ್ನಡದ ಕಾಮಿಡಿ ಕಿಲಾಡಿ-2, ಸರಿಗಮಪ ಆಡಿಷನ್

    ಉಡುಪಿಯಲ್ಲಿ ಜೀ ಕನ್ನಡದ ಕಾಮಿಡಿ ಕಿಲಾಡಿ-2, ಸರಿಗಮಪ ಆಡಿಷನ್

    ಉಡುಪಿ: ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಜನ್ ಟು ಮತ್ತು ಸರಿಗಮಪ ಲಿಟಲ್ ಚಾಂಪ್ಸ್ ಸೀಜನ್ 14ರ ಆಡಿಷನ್ ಉಡುಪಿಯಲ್ಲಿ ನಡೆಯಿತು. ನೂರಾರು ಮಕ್ಕಳು ಆಡಿಷನ್‍ನಲ್ಲಿ ಪಾಲ್ಗೊಂಡರು. ಬೆಳಗ್ಗೆ ಆರಂಭವಾದ ಆಡಿಷನ್ ಸಂಜೆಯವರೆಗೆ ಕೂಡಾ ಮುಂದುವರೆಯಿತು. 13 ಸೀಜನ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ಸರಿಗಮಪ ರಾಜ್ಯಾದ್ಯಂತ ಬಹಳ ಪ್ರಸಿದ್ಧಿ ಪಡೆದಿದೆ.

    ಎಲ್ಲಾ ಮೂವತ್ತು ಜಿಲ್ಲೆಗಳಲ್ಲಿ ಮತ್ತು ಮಹಾ ನಗರಗಳಲ್ಲಿ ಆಡಿಷನ್ ನಡೆಯುತ್ತಿದ್ದು ಪ್ರತಿಭೆಗಳ ಹುಡುಕಾಟ ನಡೆಯುತ್ತಿದೆ. ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ಮುಂಭಾಗದ ಮೈದಾನದಲ್ಲಿ ಈ ಆಡೀಷನ್ ನಡೆಯಿತು. ಜೀ ವಾಹಿನಿಯ ಸುಮಾರು 50ಕ್ಕಿಂತಲೂ ಹೆಚ್ಚು ಸಿಬ್ಬಂದಿ ಆಡಿಷನ್‍ನಲ್ಲಿ ಪಾಲ್ಗೊಂಡರು. ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್, ದೀಕ್ಷಾ ರಾಮಕೃಷ್ಣ, ಹರ್ಷ ಮೈಸೂರು, ಧನುಶ್ ನೇತೃತ್ವದ ಟೀಂ ಪ್ರತಿಭೆಗಳನ್ನು ಆಯ್ಕೆ ಮಾಡಿದರು. ಹಾಸ್ಯದ ಬಗ್ಗೆ ಆಸಕ್ತಿಯಿರುವವರು, ಸಂಗೀತ ಕಲಿತ ಮಕ್ಕಳು ಖುಷಿ ಖುಷಿಯಾಗಿ ಆಡಿಷನ್‍ನಲ್ಲಿ ಪಾಲ್ಗೊಂಡರು.

    ಅಸಿಸ್ಟೆಂಟ್ ಪ್ರೋಗ್ರಾಂ ಪ್ರೊಡ್ಯೂಸರ್ ಸತೀಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಒಳಗೆ ಅಡಗಿರುವ ಪ್ರತಿಭೆಗಳನ್ನು ಹೊರ ತರುವ ಕೆಲಸ ಜೀ ವಾಹಿನಿ ಮಾಡುತ್ತಿದೆ. ರಾಜ್ಯದ ಜನಕ್ಕೆ ಇದೊಂದು ಅವಕಾಶ. ಎಲ್ಲರೂ ಇದನ್ನು ಉಪಯೋಗ ಮಾಡಿಕೊಳ್ಳಬೇಕು. ಸಾವಿರಾರು ಮಂದಿ ಸಂಗೀತ ಕಲಿತಿರುತ್ತಾರೆ. ಆದರೆ ಅದಕ್ಕೆ ಸೂಕ್ತವಾದ ಒಂದು ವೇದಿಕೆ ಸಿಕ್ಕಿರುವುದಿಲ್ಲ. ಜೀ ಕನ್ನಡ ವಾಹಿನಿ ಅಂತದ್ದೊಂದು ವೇದಿಕೆ ಪಡಿಸಿರುವಾಗ ಜನ ಉಪಯೋಗಿಸಿಕೊಳ್ಳಿ ಎಂದು ಕರೆ ನೀಡಿದರು.

    ಕಳೆದ ಬಾರಿ ಸರಿಗಮಪದ ಆಡಿಷನ್‍ನಲ್ಲಿ ಪಾಲ್ಗೊಂಡಿದ್ದೆ. ಎರಡನೇ ಸುತ್ತಿಗೆ ಹೋಗಿದ್ದೆ. ಈ ಬಾರಿ ಕೂಡಾ ಆಡೀಷನ್ ಕೊಟ್ಟಿದ್ದೇನೆ. ಅದೃಷ್ಟ ಇದ್ದರೆ ಆಯ್ಕೆಯಾಗುತ್ತೇನೆ. ತುಂಬಾ ಜನ ವಿದ್ಯಾರ್ಥಿಗಳು ಬಂದಿದ್ದಾರೆ. ಕಾಂಪಿಟೇಷನ್ ಟಫ್ ಆಗಿದೆ. ಆದ್ರೆ ಇಲ್ಲಿ ಪಾಲ್ಗೊಂಡಿದ್ದು ಬಹಳ ಖುಷಿಯಾಗಿದೆ ಎಂದು ಉಡುಪಿಯ ಐಶ್ವರ್ಯ ಹೇಳಿದರು.

     

     

  • ಸರಿಗಮಪ ಲಿಟ್ಲ್ ಚಾಂಪ್ಸ್, ಕಾಮಿಡಿ ಕಿಲಾಡಿಗಳು ಆಡಿಷನ್ ಆರಂಭ: ಯಾವ ದಿನ ಎಲ್ಲಿ?

    ಸರಿಗಮಪ ಲಿಟ್ಲ್ ಚಾಂಪ್ಸ್, ಕಾಮಿಡಿ ಕಿಲಾಡಿಗಳು ಆಡಿಷನ್ ಆರಂಭ: ಯಾವ ದಿನ ಎಲ್ಲಿ?

    ಬೆಂಗಳೂರು: ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಪ್ರಪ್ರಥಮಬಾರಿಗೆ ಜೀ ಕನ್ನಡ ವಾಹಿನಿಯು ಪ್ರತಿಭಾವಂತ ಪ್ರತಿಭೆಗಳ ಆಯ್ಕೆಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಆಡಿಷನ್ ನಡೆಸುತ್ತಿದೆ.

    ನವೆಂಬರ್ 4 ರಿಂದ ಸರಿಗಮಪ ಲಿಟ್ಲ್ ಚಾಂಪ್ಸ್ ಸೀಜನ್ 14 ಹಾಗೂ ಕಾಮಿಡಿ ಕಿಲಾಡಿಗಳು ಸೀಜನ್ 2 ಆಡಿಷನ್ ಆರಂಭವಾಗಿದೆ. ಸರಿಗಮಪ ಲಿಟ್ಲ್ ಚಾಂಪ್ಸ್ ಆಡಿಷನ್‍ನಲ್ಲಿ ಭಾಗವಹಿಸುವವರು 5 ರಿಂದ 13 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಆದರೆ ಕಾಮಿಡಿ ಕಿಲಾಡಿಗಳು ಆಡಿಷನ್‍ಗೆ ಯಾವುದೇ ವಯೋಮಿಯ ಅವಶ್ಯಕತೆ ಇಲ್ಲ. ಯಾರು ಬೇಕಾದರೂ ಆಡಿಷನ್‍ನಲ್ಲಿ ಭಾಗವಹಿಸಬಹುದು. ಮೊದಲು ತುಮಕೂರು ಮತ್ತು ಹಾವೇರಿಯಲ್ಲಿ ಆಡಿಷನ್ ಮುಗಿಸಿದ್ದು, ಇಂದು ಕೋಟೆನಾಡು ಚಿತ್ರದುರ್ಗ ಹಾಗೂ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ.

    ಕೋಟೆನಾಡಿನ ಡಾನ್ ಬಾಸ್ಕೋ ಶಾಲೆಯಲ್ಲಿ ಆಡಿಷನ್ ನಡೆಯುತ್ತಿದ್ದು, ಈ ಆಡಿಷನ್‍ಗೆ ಸುಮಾರು 500ಕ್ಕೂ ಹೆಚ್ಚು ಪ್ರತಿಭಾವಂತರ ವಿದ್ಯಾರ್ಥಿಗಳು, ಯುವಕರು ಮತ್ತು ಯುವತಿಯರು ಭಾಗವಹಿಸಿದ್ದರು. ಸ್ಪರ್ಧಿಗಳ ಆಯ್ಕೆಗಾಗಿ ವಿವಿಧ ಬಗೆಯ ಪ್ರಯೋಗಗಳನ್ನು ಮಾಡುವ ಮೂಲಕ ಅವರಲ್ಲಿ ಅಡಗಿರೋ ಕಲೆ, ಪ್ರತಿಭೆಯನ್ನು ಹೊರ ತರುವ ಪ್ರಯತ್ನವನ್ನು ಜೀ ಕನ್ನಡ ವಾಹಿನಿ ಮಾಡಿದೆ.

    ಸೋಮವಾರ ಶಿವಮೊಗ್ಗ ಮತ್ತು ಕಾರವಾರದಲ್ಲಿ ಆಡಿಷನ್ ನಡೆಯಲಿದ್ದು, ನವೆಂಬರ್ 22 ರಂದು ರಾಮನಗರ ಮತ್ತು ಕೋಲಾರದಲ್ಲಿ ಆಡಿಷನ್ ಕೊನೆಗೊಳ್ಳಲಿದೆ. ಈ ಬಾರಿಯ ಲಿಟ್ಲ್ ಚಾಂಪ್ಸ್ ಮತ್ತು ಕಾಮಿಡಿ ಕಿಲಾಡಿ ಸೀಜನ್ ಗೆ ಪಬ್ಲಿಕ್ ಟಿವಿಯ ಸಹಯೋಗವಿದೆ.

  • ಯುವತಿಯರೇ ಎಚ್ಚರ: ಸಿನಿಮಾದಲ್ಲಿ ಆ್ಯಕ್ಟ್ ಮಾಡ್ಬೇಕು ಅಂತಾ ಆಡಿಷನ್ ಹೋಗೋ ಮೊದ್ಲು ಈ ಸುದ್ದಿ ಓದಿ

    ಯುವತಿಯರೇ ಎಚ್ಚರ: ಸಿನಿಮಾದಲ್ಲಿ ಆ್ಯಕ್ಟ್ ಮಾಡ್ಬೇಕು ಅಂತಾ ಆಡಿಷನ್ ಹೋಗೋ ಮೊದ್ಲು ಈ ಸುದ್ದಿ ಓದಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಲ್ಲಿ ಒಳ್ಳೆ ಸಿನಿಮಾಗಳು ಬರುತ್ತಿರುವಾಗಲೇ ಕನ್ನಡ ಚಿತ್ರರಂಗದ ತಲೆತಗ್ಗಿಸಿವಂತಹ ಕೆಲಸ ಮಾಡಿದ್ದಾರೆ ಕೆಲವರು. ಸಿನಿಮಾ ಮಾಡ್ತಿನಿ ನಿಮಗೆ ಅವಕಾಶಕೊಡ್ತಿನಿ ಅಂತ ಹೇಳಿ ದೂರದ ಪುಣೆಯಲ್ಲಿ ಅವಕಾಶಕ್ಕಾಗಿ ಕಾಯ್ತಿದ್ದ ಹೆಣ್ಣುಮಕ್ಕಳನ್ನ ಯಾಮಾರಿಸಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ರಾಮಾ ಶಾಮಾ ಭಾಮಾ, ಹೃದಯವಂತ, ಮಾತಾಡು ಮಾತಾಡು ಮಲ್ಲಿಗೆ, ರಾಜಾಹುಲಿ ಅಂತ ಸದಭಿರುಚಿ ಸಿನಿಮಾಗಳನ್ನ ಕನ್ನಡ ಸಿನಿರಸಿಕರಿಗೆ ಕೊಟ್ಟ ನಿರ್ಮಾಪಕ ಕೆ. ಮಂಜು ಅವರ ಹೆಸರನ್ನ ನಕಲಿ ನಿರ್ಮಾಪಕ ಬಳಸಿದ್ದಾನೆ.

    ತನ್ನ ಪರಿಚಯ ಹೀಗೆ ಮಾಡ್ತಿದ್ದ:
    ನಾನು ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ. 40 ಸಿನಿಮಾ ನಿರ್ಮಾಣ ಮಾಡಿದ್ದೇನೆ. ಹೊಸ ಸಿನಿಮಾದಲ್ಲಿ ಅಭಿನಯಿಸಲು ನಾಯಕಿಯರು ಬೇಕಾಗಿದ್ದಾರೆ ಅಂತ ಹೇಳಿ ಪುಣೆಯಲ್ಲಿ ಆಡಿಷನ್ ಮಾಡಿದ್ದ.

    ಇಲ್ಲಿ ಕೆಲ ಹುಡುಗಿಯರನ್ನು ಆಯ್ಕೆ ಮಾಡಿ ಹೈದರಾಬಾದ್‍ಗೆ ಜೊತೆಯಲ್ಲಿ ಕರೆದುಕೊಂಡು ಬಂದು ಅಲ್ಲಿಂದ ಬೆಂಗಳೂರಿಗೆ ಕರೆ ತಂದಿದ್ದಾನೆ. ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಲಾಡ್ಜಿಂಗ್ ವ್ಯವಸ್ಥೆ ಮಾಡಿಕೊಟ್ಟ ಬಳಿಕ ಈತ ಸಿನಿಮಾದಲ್ಲಿ ಎಲ್ಲದಕ್ಕೂ ಸಿದ್ಧವಾಗಿರಬೇಕು, ಮದ್ಯಪಾನ ಮಾಡ್ಬೇಕು. ತುಂಡುಬಟ್ಟೆ ಹಾಕಬೇಕು ಅಂತ ಪುಸಲಾಯಿಸಿದ್ದಾನೆ. ಎರಡ್ಮೂರು ದಿನ ಬೆಂಗಳೂರಿನಲ್ಲಿ ಇರಿಸಿಕೊಂಡು ವಾಪಸ್ ಕಳುಹಿಸಿದ್ದಾನೆ.

    ಆಡಿಷನ್ ನಡೆದ ಮೇಲೆ ಆತನಿಂದ ಯಾವುದೇ ಕರೆ ಬರದ ಹಿನ್ನೆಲೆಯಲ್ಲಿ ಆತನಿಂದ ಮೋಸ ಹೋದ ಯುವತಿ, ಸ್ಯಾಂಡಲ್‍ವುಡ್ ನಿರ್ದೇಶಕನಾಗಿರುವ  ಕೆ ಮಂಜು ಅವರ ನಂಬರ್ ಅನ್ನು ಪತ್ತೆ ಮಾಡಿ ವಿಚಾರ ತಿಳಿಸಿದ್ದಾರೆ. ಈ ವೇಳೆ ಅವರು ನಾನು ಯಾವುದೇ ರೀತಿಯ ಆಡಿಷನ್ ಮಾಡಿಲ್ಲ. ನನಗೆ ಗೊತ್ತೆ ಇಲ್ಲ ಎಂದು ಹೇಳಿದ್ದಾರೆ.

    ಇದಾದ ಬಳಿಕ ನಕಲಿ ನಿರ್ಮಾಪಕ ಮಂಜುನಾಥ್‍ಗೆ ಕೆ ಮಂಜು ಅವರು ಕರೆ ಮಾಡಿದಾಗ, ಸರ್ ನಮ್ಮ ಸಂಬಂಧಿಕರ ಸಾವಾಗಿದೆ ಆಮೇಲೆ ಮಾತಾಡ್ತಿನಿ ಅಂತ ಹೇಳಿದ್ದಾನೆ. ಇದಾದ ಬಳಿಕ ಯಾವುದೇ ಫೋನ್ ಬಂದಿಲ್ಲ ಅಂತಾ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.