Tag: audio

  • ಗೊಂದಲ ಬೇಡ, ಶನಿವಾರ ನಟಸಾರ್ವಭೌಮ ಆಡಿಯೋ ರಿಲೀಸ್ – ಪವನ್ ಒಡೆಯರ್ ಸ್ಪಷ್ಟನೆ

    ಗೊಂದಲ ಬೇಡ, ಶನಿವಾರ ನಟಸಾರ್ವಭೌಮ ಆಡಿಯೋ ರಿಲೀಸ್ – ಪವನ್ ಒಡೆಯರ್ ಸ್ಪಷ್ಟನೆ

    ಹುಬ್ಬಳ್ಳಿ: ನಟ ಪುನೀತ್ ರಾಜ್ ಕುಮಾರ್ ಮತ್ತು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ನಿವಾಸದ ಮೇಲೆ ಐಟಿ ದಾಳಿಯಾದ ಹಿನ್ನೆಲೆಯಲ್ಲಿ ಶನಿವಾರ ನಡೆಯಬೇಕಿದ್ದ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಮುಂದೂಡಿಕೆ ಆಗಲಿದೆ ಎನ್ನುವ ಗಾಳಿ ಸುದ್ದಿಗೆ ನಿರ್ದೇಶಕ ಪವನ್ ಒಡೆಯರ್ ಬ್ರೇಕ್ ಹಾಕಿದ್ದಾರೆ.

    ಪವನ್ ಒಡೆಯರ್ ಅವರು ಫೇಸ್‍ಬುಕ್ ನಲ್ಲಿ ಲೈವ್ ಬಂದು, ಎಲ್ಲರಿಗೂ ನಮಸ್ಕಾರ, ನಾಳೆ ‘ನಟಸಾರ್ವಭೌಮ’ ಸಿನಿಮಾದ ಆಡಿಯೋ ರಿಲೀಸ್ ಆಗುತ್ತಾ ಎಂಬ ಎಲ್ಲರಿಗೂ ಗೊಂದಲ ಇದೆ. ಶನಿವಾರ ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ನಟಸಾರ್ವಭೌಮ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ನಿಮ್ಮೆಲ್ಲರ ಸಮ್ಮುಖದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

    ಎಲ್ಲ ಕನ್ನಡಿಗರ ಆಶೀರ್ವಾದ ನಮ್ಮ ಸಿನಿಮಾದ ಧ್ವನಿ ಸುರುಳಿ ಬಿಡುಗಡೆಯ ಕಾರ್ಯಕ್ರಮದ ಮೇಲೆ ಇರಲಿ. ನಿಮ್ಮ ನೆಚ್ಚಿನ ಸ್ಟಾರ್ ಗಳ ಡ್ಯಾನ್ಸ್ ನಾಳೆ ಇರುತ್ತದೆ. ಆದ್ದರಿಂದ ಯಾರಿಗೂ ಯಾವುದೇ ಗೊಂದಲ ಬೇಡ. ಈ ಮೂಲಕ ನಾನು ನಾಳೆ ಎಲ್ಲ ಕನ್ನಡಾಭಿಮಾನಿಗಳು ನೆಹರೂ ಕ್ರಿಡಾಂಗಣಕ್ಕೆ ಬನ್ನಿ ಅಂತ ಹೇಳಲು ಇಷ್ಟಪಡುತ್ತೇನೆ ಎಂದು ಕಾರ್ಯಕ್ರಮ ನಡೆಯುವ ಬಗ್ಗೆ ಪವನ್ ಒಡೆಯರ್ ಸ್ಪಷ್ಟನೆ ಕೊಟ್ಟಿದ್ದಾರೆ.

    ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಶನಿವಾರ ಸಂಜೆ 5 ಗಂಟೆಗೆ ಬಿಡುಗಡೆಯ ಕಾರ್ಯಕ್ರಮ ನಡೆಯಲಿದೆ. ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಕವಿರಾಜ್, ಮತ್ತು ಪವನ್ ವಡೆಯರ್ ಅವರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಹಾಡುಗಳು ಹೇಗಿರಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ.


    ಈ ಹಿಂದೆ ಪವನ್ ಒಡೆಯರ್, ಪುನೀತ್ ರಾಜ್‍ಕುಮಾರ್ ಅವರ `ರಣವಿಕ್ರಮ’ ಚಿತ್ರವನ್ನು ನಿರ್ದೇಶಿಸಿದ್ದರು. ಪುನೀತ್ ಜೊತೆ ರಚಿತಾ ರಾಮ್, ಅನುಪಮಾ ಪರಮೇಶ್ವರ್, ಸಾಧುಕೋಕಿಲಾ, ಬಿ. ಸರೋಜಾ ದೇವಿ, ಚಿಕ್ಕಣ್ಣ, ರವಿಶಂಕರ್ ನಟಿಸಿದ್ದು, ಫೆಬ್ರವರಿ 9 ರಂದು ಚಿತ್ರ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ಸ್ಥಾನವೇ ಹೋಯ್ತು, ಇನ್ನು ಶಾಸಕ ಸ್ಥಾನ ಯಾಕ್ರೀ ಬೇಕು – ಆಪ್ತರ ಬಳಿ ರಮೇಶ್ ಜಾರಕಿಹೊಳಿ ಮಾತು

    ಸಚಿವ ಸ್ಥಾನವೇ ಹೋಯ್ತು, ಇನ್ನು ಶಾಸಕ ಸ್ಥಾನ ಯಾಕ್ರೀ ಬೇಕು – ಆಪ್ತರ ಬಳಿ ರಮೇಶ್ ಜಾರಕಿಹೊಳಿ ಮಾತು

    – ಸಂಪುಟ ವಿಸ್ತರಣೆ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರಕ್ಕೆ ಬಿಗ್ ಶಾಕ್
    – ಈ ವಾರ ಎಲ್ಲವೂ ನಿರ್ಧಾರ

    ಬೆಳಗಾವಿ: ಸಮ್ಮಿಶ್ರ ಸರ್ಕಾರದ 2ನೇ ಹಂತದ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಲು ಅತೃಪ್ತರು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಇದರ ಭಾಗವಾಗಿ ಮಾಜಿ ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಸಚಿವ ಸ್ಥಾನದಿಂದ ಕೈಬಿಟ್ಟ ವಿಚಾರವಾಗಿ ಆಪ್ತವಲಯದಲ್ಲಿ ಅಸಮಾಧಾನ ಹೊರ ಹಾಕಿರುವ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನವೇ ಹೋಯ್ತು, ಇನ್ನು ಶಾಸಕ ಸ್ಥಾನ ಯಾಕೆ ಬೇಕು? ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಾನು ಏನು ಎನ್ನುವುದನ್ನು ತೋರಿಸಿಕೊಡುತ್ತೇನೆ. ನನ್ನೊಂದಿಗೆ ಎಷ್ಟು ಮಂದಿ ಶಾಸಕರಿದ್ದಾರೆ ಅನ್ನೊಂದನ್ನು ಈಗ ಹೇಳಲ್ಲ. ಒಂದು ವಾರ ಕಾದು ನೋಡಿ, ಎರಡು ಮೂರು ದಿನಗಳಲ್ಲಿ ರಾಜೀನಾಮೆ ನೀಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. ಆದರೆ ನಾನು ಬೇಕಾದರೆ ನಾಳೆಯೇ ರಾಜೀನಾಮೆ ನೀಡಬಹುದು ಎಂದು ತಿಳಿಸಿದ್ದಾರೆ.

    ಈ ಕುರಿತು ಶಾಸಕ ರಮೇಶ್ ಜಾರಕಿಹೊಳಿ ಅವರು ಮಾತನಾಡಿರುವ ಆಡಿಯೋ ಧ್ವನಿ ಪಬ್ಲಿಕ್ ಟಿವಿಗೆ ಲಭ್ಯವಿದ್ದು, ರಾಜೀನಾಮೆ ನಿರ್ಧಾರ ಮಾಡಿರುವುದು ನಿಜ, ಆದರೆ ಎಷ್ಟು ಶಾಸಕರು ರಾಜೀನಾಮೆ ನೀಡಿಲಿದ್ದಾರೆ ಎಂಬುದು ಹೇಳಲು ಸಾಧ್ಯವಿಲ್ಲ. ಈ ಕುರಿತು ಕುಳಿತು ಚರ್ಚೆ ನಡೆಸಲು ಸ್ಥಳ ನಿಗದಿ ಮಾಡಲಾಗಿದ್ದು, ಈ ವಾರ ಎಲ್ಲವೂ ನಿರ್ಧಾರ ಆಗಲಿದೆ ಎಂದು ಹೇಳಿದ್ದಾರೆ. ಇದನ್ನು ಓದಿ: ಸಚಿವ ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ  

    ಇದರೊಂದಿಗೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡುವುದು ಖಚಿತವಾಗಿದ್ದು, ಯಾವ ಸಮಯದಲ್ಲಿ ಎಷ್ಟು ಮಂದಿಗೆ ರಾಜೀನಾಮೆ ನೀಡಲಿದ್ದಾರೆ ಎನ್ನುವುದನ್ನು ಮಾತ್ರ ತಿಳಿಯಬೇಕಿದೆ. ಕಾಂಗ್ರೆಸ್ಸಿನ 5 ಜನ ಪರಿಷತ್ ಸದಸ್ಯರು ಹಾಗೂ 5 ರಿಂದ 6 ಜಿಲ್ಲೆಗಳ ಶಾಸಕರು ರಮೇಶ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

    ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಜಾರಕಿಹೊಳಿ ಆಪ್ತ ಕಾಂಗ್ರೆಸ್ ಎಂಎಲ್‍ಸಿ ವಿವೇಕ್ ರಾವ್ ಪಾಟೀಲ್ ಸೇರಿದಂತೆ, ಹಲವು ಮುಖಂಡರು ರಮೇಶ್ ಅವರು ಯಾವುದೇ ನಿರ್ಧಾರ ಕೈಗೊಂಡರೂ ನಮ್ಮ ಬೆಂಬಲವಿರುತ್ತದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಸದ್ಯ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ನಿರ್ಧಾರ ರಾಜ್ಯ ರಾಜಕೀಯ ವಲಯದಲ್ಲಿ ಏನು ಪರಿಣಾಮ ಉಂಟು ಮಾಡಲಿದೆ ಎನ್ನುವುದು ಈ ವಾರ ಗೊತ್ತಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರೀ ಚರ್ಚೆಗೆ ಗ್ರಾಸವಾಯ್ತು ಮನೆಯೊಳಗೆ ಪತ್ತೆಯಾದ ನಾಗ ವಿಗ್ರಹ

    ಭಾರೀ ಚರ್ಚೆಗೆ ಗ್ರಾಸವಾಯ್ತು ಮನೆಯೊಳಗೆ ಪತ್ತೆಯಾದ ನಾಗ ವಿಗ್ರಹ

    – ಆಡಿಯೋ ವೈರಲ್

    ಉಡುಪಿ: ಜಿಲ್ಲೆಯ ಹೆಬ್ರಿ ತಾಲೂಕು ಮುದ್ರಾಡಿ ಗ್ರಾಮದ ಬರ್ಸಬೆಟ್ಟು ಮನೆಯಲ್ಲಿ ನಡೆದ ನಾಗ ಪವಾಡ ಸಾಕಷ್ಟು ಸುದ್ದಿ ಮಾಡಿದ್ದು, ಇದೀಗ ಆ ಘಟನೆ ಭಾರೀ ಚರ್ಚೆಗೀಡಾಗಿದೆ.

    ಶಿವಮೊಗ್ಗದ ತೀರ್ಥಹಳ್ಳಿಯ ಅರಗದ ನಾಗಪಾತ್ರಿ ನಾಗರಾಜ್ ಭಟ್ ಬರ್ಸಬೆಟ್ಟು ಮನೆಯ ಹಾಲ್‍ನ ಅಡಿಭಾಗದಲ್ಲಿ ನಾಗನ ಮೂರ್ತಿ ಇದೆ ಎಂದು ಮನೆಯವರಿಗೆ ತಿಳಿಸಿದ್ದರು. ಹಲವು ಜನರ ಸಮ್ಮುಖದಲ್ಲಿ ಅಗೆದಾಗ ಮೂರ್ತಿ ಪತ್ತೆಯಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪರ-ವಿರೋಧ ವಾದಗಳು ಹುಟ್ಟಿಕೊಂಡಿದ್ದು, ಸಂಬಂಧಪಟ್ಟಂತೆ ಆಡಿಯೋ ಕೂಡ ಹರಿದಾಡುತ್ತಿದೆ.

    ಪೂನಾದಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ತಾನು ಮೋಸ ಹೋಗಿದ್ದೇನೆ. ಆ ನಾಗಪಾತ್ರಿ ಇದೇ ರೀತಿ ತುಂಬಾ ಜನಕ್ಕೆ ಮೋಸ ಮಾಡಿದ್ದಾರೆ ಅನ್ನುವ ಒಂದು ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ನಡುವೆ ಆಡಿಯೋದಲ್ಲಿ ನಾಗರಾಜ್ ಭಟ್ ವಿರುದ್ಧ ಮಾತನಾಡಿರುವ ವ್ಯಕ್ತಿಯೇ ಸ್ವತಃ ಅದು ನನ್ನ ಧ್ವನಿಯೇ ಅಲ್ಲ ಎಂದು ಸಂಭಾಷಣೆ ನಡೆಸಿರುವ ಇನ್ನೊಂದು ಆಡಿಯೋ ಕೂಡ ಹರಿದಾಡುತ್ತಿದೆ. ನಾಗಪಾತ್ರಿ ನಾಗರಾಜ್ ಭಟ್ ಪರವಾಗಿ ಕೂಡ ಆಡಿಯೋ ಹರಿದಾಡುತ್ತಿದೆ.

    ನಾಗ ಪಾತ್ರಿಯ ವಿರುದ್ಧವಾಗಿ ಹರಿದಾಡುವ ಆಡಿಯೋ:
    ಕರೆ ಮಾಡಿದವ: ನೀವು ಒಂದು ವಿಡಿಯೋ ಹಾಕಿದ್ರಿ, ಎಲ್ಲಿ ಇದು? ಎಲ್ಲಿಯಾಗಿದ್ದು, ಇದರ ಬಗ್ಗೆ ಡಿಟೈಲ್ ಸಿಗ್ತದಾ
    ಸುದೀಪ್: ನೀವು ಎಲ್ಲಿಂದ ಮಾತಾಡೋದು
    ಕರೆ ಮಾಡಿದವ: ನಾನು ಪೂನಾದಿಂದ ಮಾತಾಡೋದು, ಆ ಜನ ಡೊಂಗಿ, ಸುಳ್ಳು
    ಸುದೀಪ್: ಪೆರ್ಡೂರಿನಲ್ಲಿ ಕೂಡ ಈ ಹಿಂದೆ ಆಗಿತ್ತು..
    ಕರೆ ಮಾಡಿದವ: ನನ್ನ ಮನೆಯಲ್ಲಿಯೇ ಆಗಿದ್ದು, ಇದನ್ನು ನೋಡಿ ಶಾಕ್ ಆಯ್ತು, ಅದೇ ಮೂರ್ತಿ. ಅದೆ ಇದು, ಪೇಪರ್‍ನಲ್ಲಿರುವ ಚಿತ್ರ ಸೇಮ್ ನನ್ನ ಹತ್ತಿರ ಉಂಟು..

    ಸುದೀಪ್: ಏನು ಹೇಳ್ತಿದ್ದೀರಿ
    ಕರೆ ಮಾಡಿದವ: ನಿಮ್ಮ ಆಣೆ ಹೌದು, ಅವರಿಗೆ ಎರಡು ಹೊಡಿಬೇಕು, ಅವರು ಪೂನಾದ ನನ್ನ ಹೋಟೆಲ್ ಗೆ ಬಂದಿದ್ದರು. ಈ ಘಟನೆ ನನ್ನ ಮನೆಯಲ್ಲಿಯೇ ಆಗಿತ್ತು. ಹಾಗೆ ಮಾಡುವುದು ಸುಮ್ಮನೆ, ಸುಳ್ಳು. ಅವರು ಮೊದಲು ಇಡುವುದು, ನಂತರ ತೆಗೆಯುವುದು
    ಸುದೀಪ್: ಏನ್ ಹೇಳ್ತಿದ್ದೀರಾ ಅಂತ ಮರು ಪ್ರಶ್ನೆ ಹಾಕಿದ್ದಾರೆ.

    ಕರೆ ಮಾಡಿದವ: ನಿಮ್ಮಾಣೆ ಸತ್ಯ, ಬೇಕಾದರೆ ಗಂಗಾಧರ್ ಮನೆಗೆ ಹೋಗಿ ಕೇಳಿ. ಅಗೆಸಿ ಹೊಂಡ ತೋಡಿಸಿ, ನಂತರ ನೀರು ತರಲು ಕಳುಹಿಸುತ್ತಾರೆ. ಮನೆಯವರ ಹತ್ತಿರ ಒಂದೊಂದೆ ಕೊಡಪಾನ ನೀರು ತರಲು ಕಳುಹಿಸುತ್ತಾರೆ. ಅವರು ಆಚೆ ಈಚೆ ಹೋದಾಗ ಮೂರ್ತಿ ಇಡೋದು, ಭಟ್ರ ಮಗ ನಿಕಿತ್ ಇದನ್ನೆಲ್ಲಾ ಮಾಡೋದು, ಅವನಿಗೂ ಎರಡು ಬಿಡಬೇಕು. ಅವರು ತೀರ್ಥಹಳ್ಳಿಯವರು ಮೊದಲು ನನ್ನ ಮನೆಯಲ್ಲಿ ಮಾಡಿದ್ರು. ಆ ನಂತರ ತುಂಬಾ ಮನೆಯಲ್ಲಿ ಮಾಡಿದ್ರು. ನಂಗೆ ಅದೆಲ್ಲಾ ಸುಳ್ಳು ಅಂತಾ ಗೊತ್ತಾಯ್ತು. ಮನೆಯವರು ನೀರು ಹೋದಾಗ ಕಾರಿನಿಂದ ಮೂರ್ತಿ ತಂದು ಇಡುತ್ತಾರೆ, ಅದು ಅಲ್ಲಿಯೇ ಸಿಕ್ಕಿತ್ತು ಅಂತ ಮೋಸ ಮಾಡೋದು.

    ಅವನು ಭಾರಿ ಡೊಂಗಿ. ನನಗೆ ಪರಿಚಯ ಮಾಡಿಕೊಟ್ಟವರಿಗೂ ಅವನ ವಿಚಾರ ತಿಳಿದು ಬೇಸರವಾಯಿತು. ಅವರು ಚಿನ್ನ ಎಲ್ಲಾ ತಗೊಂಡು ಜನಗಳಿಗೆ ಮೋಸ ಮಾಡುತ್ತಿದ್ದಾರೆ. ಆರಂಭದಲ್ಲಿ ನಮ್ಮಲ್ಲಿ ಬರುವಾಗ ಅವರ ಬಳಿ ಏನೂ ಇರಲಿಲ್ಲ. ಈಗ ಎಲ್ಲಾ ಇದೆ. ನಾಗನ ಹೆಸರಿನಲ್ಲಿ ಚಿನ್ನಕ್ಕೆ ಡಿಮಾಂಡ್ ಇಡೋದು. ನನ್ನ ಸಂಬಂಧಿಕರ ಹತ್ತಿರ ಕೂಡ ಉಂಗುರ ತೆಗೆದುಕೊಂಡಿದ್ದಾರೆ. ಜನರ ಹತ್ತಿರ ನಾಗ ದರ್ಶನ ಮಾಡಿ, ನಾಗನನ್ನು ನಂಬಲು ಹೇಳಿ ಕಲೆಕ್ಷನ್ ಮಾಡ್ತಾರೆ. ಇದೆ ರೀತಿ ಮಾಡಿದ್ರೆ ಅವರಿಗೆ ಜನರು ಹೊಡಿತಾರೆ ಅಂತ ಹೇಳಿದ್ದಾರೆ.

    ನಾಗಪಾತ್ರಿ ಪರವಾಗಿ ಹರಿದಾಡುವ ಆಡಿಯೋ ಇಂತಿದೆ;
    ಕರೆ ಮಾಡಿದವ: ರಘು ಶೆಟ್ರ ಅಲ್ವಾ
    ರಘು ಶೆಟ್ಟಿ: ಹೌದು
    ಕರೆ ಮಾಡಿದವ: ನಾನು ಮುದ್ರಾಡಿಯಿಂದ ಮಾತಾಡ್ತಾ ಇದ್ದೇನೆ. ನಿನ್ನೆ ನಾಗನ ಕಲ್ಲು ಸಿಕ್ಕಿದ ವಿಷಯ ಸುಳ್ಳು ಅನ್ನೊ ಆಡಿಯೋ ಹರಿದಾಡ್ತಾ ಇದೆ ಅಂತ ವಿಷಯ ಬಂದಿದೆ
    ರಘು ಶೆಟ್ಟಿ: ನನ್ನ ಹೆಸರು ಬಳಸಿದ್ದು ಯಾರು?
    ಕರೆ ಮಾಡಿದವ: ಆ ವಿಡಿಯೋ ಬೇಕಾದರೆ ನಾನು ಫಾರ್ವರ್ಡ್ ಮಾಡ್ತಾನೆ
    ರಘು ಶೆಟ್ಟಿ: ಅದು ನನಗೆ ಬಂದಿದೆ, ಆ ಸ್ವರ ನನ್ನದಲ್ಲ, ನಾನು ಭಟ್ರ ಹತ್ತಿರ ಅದನ್ನೆ ಹೇಳಿದ್ದೆ, ನನ್ನ ಸ್ವರ ಪರಿಚಯ ಇಲ್ವಾ ಅಂತಾ. ಭಟ್ರು ಕೂಡ ಅದೇ ಹೇಳಿದ್ರು ನಿನ್ನ ಸ್ವರ ಅಲ್ಲಾ ಅಂತಾ. ಭಟ್ರ ಹತ್ತಿರ ಹೇಳಿದ್ದೆ, ನನ್ನ ಸ್ವರ ರೆಕಾರ್ಡ್ ಮಾಡಿ ನೋಡಿ ಆ ಸ್ವರಕ್ಕೆ ಮ್ಯಾಚ್ ಆಗ್ತಾದ ಅಂತ

    ಕರೆ ಮಾಡಿದವ: ನಿನ್ನೆ ಅಷ್ಟು ಖರ್ಚು ಮಾಡಿ ನಾಗಕಲ್ಲು ತೆಗ್ದಿದ್ದಾರೆ, ನಿಮ್ಮ ಹೆಸರನ್ನು ಸೇರಿಸಿ ಆಡಿಯೋ ಬಿಟ್ಟಿದ್ದಾರೆ
    ರಘು ಶೆಟ್ಟಿ: ನನ್ನನ್ನು ಕರೆಯಿರಿ, ಅದು ನಾನಲ್ಲ ನಾನು ಬೇಕಾದರೆ ಕರೆದಲ್ಲಿ ಬರುತ್ತೇನೆ. ಭಟ್ರು ಮತ್ತು ನನಗೆ ಒಳ್ಳೆ ಸಂಬಂಧವಿದೆ. ನಾನು ಆ ವಿಚಾರ ಯಾರ ಬಳಿ ಮಾತಾಡಿಲ್ಲಾ. ಆಡಿಯೋದಲ್ಲಿ ಇರುವ ಸ್ವರ ಯಾರದ್ದು ಅಂತ ಗೊತ್ತಾದರೆ ಭಟ್ರ ಮಗನ ಹತ್ತಿರ ನನಗೆ ತಿಳಿಸಿ ಎಂದಿದ್ದೇನೆ.

    ಕರೆ ಮಾಡಿದವ: ನಿಮ್ಮ ಜೊತೆ ನಡೆಸಿದ ಮಾತುಕತೆಯನ್ನು ವಾಟ್ಸ್ಯಾಪ್ ಮಾಡಬಹುದಾ?
    ರಘು ಶೆಟ್ಟಿ: ತೊಂದರೆ ಇಲ್ಲ ಹಾಕಿ ಅದರಿಂದ ನನಗೆ ತೊಂದರೆ ಇಲ್ಲಾ. ಈ ಹಿಂದೆ ಆಡಿಯೋದಲ್ಲಿ ನನ್ನ ಹೆಸರು ಉಲ್ಲೇಖ ಇಲ್ಲ. ನಾವು ದೇವರ ಮೇಲೆ ನಂಬಿಕೆ ಇರಿಸಿಕೊಂಡಿರುವವರು ನಾವು ಹಾಗೆಲ್ಲಾ ಮಾಡೋಲ್ಲ.

    ಒಟ್ಟಿನಲ್ಲಿ ನಾಗೋದ್ಭವ ವಿಚಾರ ಈಗ ಕರಾವಳಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಸ್ತಿಕರು ಪವಾಡ ಅಂತ ವಾದಿಸಿದರೆ, ನಾಸ್ತಿಕರು ಪ್ರಗತಿಪರರು ಇದನ್ನು ಗಿಮಿಕ್ ಅಂತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನಿಮ್ಮ ದರ್ಶನ್ ಗೆ ಏನೂ ಆಗಿಲ್ಲ- ಆಡಿಯೋ ಮೂಲಕ ಅಭಿಮಾನಿಗಳಲ್ಲಿ ದಾಸ ಮನವಿ

    ನಿಮ್ಮ ದರ್ಶನ್ ಗೆ ಏನೂ ಆಗಿಲ್ಲ- ಆಡಿಯೋ ಮೂಲಕ ಅಭಿಮಾನಿಗಳಲ್ಲಿ ದಾಸ ಮನವಿ

    ಮೈಸೂರು: ಜಿಲ್ಲೆಯ ಹೊರವಲಯದ ಹಿನಕಲ್ ಬಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರ್ ಅಪಘಾತಕ್ಕೀಡಾಗಿ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಯಜಮಾನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ದರ್ಶನ್ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಗಿದ್ದು, ಎಲ್ಲರೂ ಆಸ್ಪತ್ರೆಯತ್ತ ದೌಡಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್ ಅವರು ವಾಟ್ಸಪ್ ಮೂಲಕ ಆಡಿಯೋ ರೆಕಾರ್ಡ್ ಮಾಡಿ ವಿನಂತಿಸಿಕೊಂಡಿದ್ದಾರೆ.

    ದರ್ಶನ್ ಮನವಿಯೇನು?:
    `ಎಲ್ಲರಿಗೂ ನಮಸ್ಕಾರಪ್ಪ… ನನ್ನ ಅನ್ನದಾತರು, ಅಭಿಮಾನಿಗಳಲ್ಲಿ ನನ್ನದೊಂದು ರಿಕ್ವೆಸ್ಟ್.. ದಯವಿಟ್ಟು ನನಗೆ ಏನೂ ಆಗಿಲ್ಲ. ಆರಾಮಾಗಿರಿ.. ಇನ್ನು ಒಂದು ದಿನ ಆಸ್ಪತ್ರೆಯಲ್ಲಿದ್ದು, ನಾಳೆ ಬರುತ್ತೇನೆ. ಆ ಬಳಿಕ ಎಲ್ಲರಿಗೂ ಸಿಗುತ್ತೇನೆ. ಹೀಗಾಗಿ ದಯವಿಟ್ಟು ಯಾರೂ ಆಸ್ಪತ್ರೆಯತ್ತ ಬರಬೇಡಿ. ಇದೊಂದು ನನ್ನ ಮನವಿ ಅಂತಾನೇ ತಿಳಿದುಕೊಳ್ಳಿ. ಯಾಕಂದ್ರೆ ಬೇರೆ ರೋಗಿಗಳು ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ಅವರಿಗೆ ತೊಂದರೆಯಾಗುತ್ತದೆ ಎಂಬುದು ನನ್ನ ಭಾವನೆ. ಒಟ್ಟಿನಲ್ಲಿ ಎಲ್ಲರೂ ಆರಾಮಾಗಿರಿ. ನಿಮ್ಮ ದರ್ಶನ್ ಗೆ ಏನೂ ಆಗಿಲ್ಲ.. ಧನ್ಯವಾದ…’ ಅಂತ ತಿಳಿಸಿದ್ದಾರೆ. ಇದನ್ನೂ ಓದಿ:  ದರ್ಶನ್ ಸದ್ಯದ ಆರೋಗ್ಯ ಸ್ಥಿತಿ ಹೇಗಿದೆ- ಪತ್ನಿ ವಿಜಯಲಕ್ಷ್ಮಿ ವಿವರಿಸಿದ್ದು ಹೀಗೆ

    ಘಟನೆಯೇನು?:
    ಶನಿವಾರ ನಟರಾದ ದರ್ಶನ್, ಸೃಜನ್ ಲೋಕೇಶ್ ಹಾಗೂ ದೇವರಾಜ್ ಕುಟುಂಬ ಮೈಸೂರು ಮೃಗಾಲಯಕ್ಕೆ ತೆರಳಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದರು. ಆ ಬಳಿಕ ಮೈಸೂರಿನಲ್ಲೇ ಉಳಿದುಕೊಂಡು ಇಂದು ಮುಂಜಾನೆ ಅಲ್ಲಿಂದ ಹೊರಟಿದ್ದರು. ಹೀಗೆ ಕಾರ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಮೈಸೂರು ಹೊರವಲಯದ ಹಿನಕಲ್ ಬಳಿ ಕಾರ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದರ್ಶನ್ ಅವರ ಬಲಗೈನ ಮೂಳೆ ಮುರಿದಿದ್ದು, ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಸದ್ಯ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಬಲಗೈಗೆ ರಾಡ್ ಅಳವಡಿಸಲಾಗಿದ್ದು, 24 ಹೊಲಿಗೆ ಹಾಕಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.  ಇದನ್ನೂ ಓದಿ: ಬಲಗೈಗೆ ರಾಡ್ ಅಳವಡಿಸಿ 24 ಹೊಲಿಗೆ- ಯಜಮಾನನ ಶಸ್ತ್ರಚಿಕಿತ್ಸೆ ಯಶಸ್ವಿ

    ಘಟನೆಯಲ್ಲಿ ದೇವರಾಜ್ ಮತ್ತು ಪ್ರಜ್ವಲ್ ದೇವರಾಜು ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರು ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನಲ್ಲಿ ಮುಂಜಾನೆ ಮಳೆಯಾಗುತ್ತಿದ್ದರಿಂದ ರಸ್ತೆ ಸರಿಯಾಗಿ ಕಾಣದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=1Og1WofmDjE

    https://www.youtube.com/watch?v=l3g9Cg7z2T0

  • ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನಕ್ಕೆ ಟ್ವಿಸ್ಟ್!

    ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನಕ್ಕೆ ಟ್ವಿಸ್ಟ್!

    ಉಡುಪಿ: ಉಡುಪಿಯ ಅಷ್ಠಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಲಕ್ಷ್ಮಿವರ ತೀರ್ಥ ಸ್ವಾಮೀಜಿ ಸಾವಿನ ಬಳಿಕ ಹಲವು ಊಹಾಪೋಹಗಳು ಕೇಳಿಬರುತ್ತಿದ್ದು, ಇದೀಗ ಕುಡಿತದ ಚಟವೇ ಸ್ವಾಮೀಜಿಗಳ ನಿಧನಕ್ಕೆ ಕಾರಣವಾಗಿದೆ ಎಂಬ ಚರ್ಚೆ ಆರಂಭವಾಗಿದೆ.

    ಶ್ರೀಗಳು ಆಪ್ತರೊಬ್ಬರು ಈ ಕುರಿತು ಮಾತಾಡಿದ್ದಾರೆ ಎನ್ನಲಾಗಿರುವ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಸ್ವಾಮೀಜಿಗಳು ಕುಡಿತದ ದಾಸರಾಗಿರುವ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಶಿರೂರು ಶ್ರೀಗಳಿಗೆ ಮದ್ಯಪಾನ, ಸ್ತ್ರೀ ಸಂಪರ್ಕ ಇದ್ದಿರೋದಕ್ಕೆ ಹೀಗಾಯ್ತೋ ಏನೋ ಗೊತ್ತಿಲ್ಲ: ಪೇಜಾವರ ಶ್ರೀ

    ಆಡಿಯೋದಲ್ಲೇನಿದೆ?:
    ಕುಡಿತ ಚಟದಿಂದ ಶ್ರೀಗಳ ಲಿವರ್‍ಗೆ ತೊಂದರೆ ಆಗಿತ್ತು. ಐದಾರು ತಿಂಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸ್ವಾಮೀಜಿಗೆ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ಕುಡಿತದ ಚಟ ಬಿಟ್ರೆ ಹೆಚ್ಚು ವರ್ಷ ಬದುಕುತ್ತೀರಿ ಎಂದು ವೈದ್ಯರು ಹೇಳಿದ್ದರು. ಆದ್ರೆ ಮೂರೇ ತಿಂಗಳಿಗೆ ಮತ್ತೆ ಕುಡಿತ ಶುರು ಮಾಡಿದ್ರು ಅಂತ ಆಡಿಯೋದಲ್ಲಿ ಹೇಳಲಾಗಿದೆ. ಇದನ್ನೂ ಓದಿ: ಪಲಿಮಾರು ಶ್ರೀಗೆ 50, ಅಜ್ಜಗೆ 50ಲಕ್ಷ, 1 ಕೋಟಿ ಕೊಟ್ರೆ ಮ್ಯಾಟರ್ ಫಿನಿಶ್- ಶಿರೂರು ಶ್ರೀಗಳ ಆಡಿಯೋ ವೈರಲ್

    ಬಹು ಅಂಗಾಂಗ ವೈಫಲ್ಯದಿಂದ ತೀವ್ರ ಅಸ್ವಸ್ಥರಾಗಿದ್ದ ಶ್ರೀಗಳು ಗುರುವಾರ ಬೆಳಗ್ಗೆ ಹರಿಪಾದ ಸೇರಿದ್ದರು. ಶ್ರೀಗಳ ಸಾವಿನ ಬಳಿಕ ಅವರಿಗೆ ವಿಷಪ್ರಾಶನ ಮಾಡಿಸಲಾಗಿದೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಇದಕ್ಕೆ ಪೂರಕವಾಗಿರುವಂತೆ ಕೆಎಂಸಿ ಆಸ್ಪತ್ರೆಯ ವೈದ್ಯರೂ ದೇಹದಲ್ಲಿ ವಿಷಕಾರಕ ಅಂಶ ಪತ್ತೆಯಾಗಿದೆ ಅಂದಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು. ಸದ್ಯ ದೂರು ದಾಖಲಿಸಿಕೊಂಡಿರೋ ಪೊಲೀಸರು ಶ್ರೀಗಳಿಗೆ ದಿನಾಲೂ ಫಲಾಹಾರ ತರುತ್ತಿದ್ದ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಮಣಿಪಾಲ ಮೂಲದ ಮಹಿಳೆಯನ್ನು ಉಡುಪಿ ಪೋಲಿಸರು ವಿಚಾರಣೆ ಮಾಡ್ತಿದ್ದಾರೆ. ಇನ್ನು ಶ್ರೀಗಳ ಸಾವಿನ ಸಂಬಂಧ ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿಸಿದ್ದ ಅವರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯರನ್ನು ಕೂಡಾ ವಿಚಾರಣೆ ಮಾಡಲಾಗ್ತಿದೆ. ಇದನ್ನೂ ಓದಿ: ಉಡುಪಿಯ ಶಿರೂರು ಶ್ರೀಗಳು ವಿಧಿವಶ

    https://www.youtube.com/watch?v=-p-dNCjn3ok

  • ಪಲಿಮಾರು ಶ್ರೀಗೆ 50, ಅಜ್ಜಗೆ 50ಲಕ್ಷ, 1 ಕೋಟಿ ಕೊಟ್ರೆ ಮ್ಯಾಟರ್ ಫಿನಿಶ್- ಶಿರೂರು ಶ್ರೀಗಳ ಆಡಿಯೋ ವೈರಲ್

    ಪಲಿಮಾರು ಶ್ರೀಗೆ 50, ಅಜ್ಜಗೆ 50ಲಕ್ಷ, 1 ಕೋಟಿ ಕೊಟ್ರೆ ಮ್ಯಾಟರ್ ಫಿನಿಶ್- ಶಿರೂರು ಶ್ರೀಗಳ ಆಡಿಯೋ ವೈರಲ್

    ಉಡುಪಿ: ಶಿರೂರು ಸ್ವಾಮೀಜಿ ಅವರು ತುಳುವಿನಲ್ಲಿ ಮಾತನಾಡಿರುವ ವಾಟ್ಸಪ್ ವಾಯ್ಸ್ ನೋಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಜ್ಜರಿಗೆ ಒಂದು ಕೋಟಿ ಕೊಟ್ರೆ ಮ್ಯಾಟರ್ ಫಿನಿಶ್ ಆಗುತ್ತೆ. 50 ಲಕ್ಷ ಪಲಿಮಾರು ಸ್ವಾಮೀಜಿಗೆ. 50 ಲಕ್ಷ ಅವರಿಗೆ ಕೊಡಬೇಕಂತೆ ಎಂದು ಮಾತನಾಡಿದ್ದಾರೆ. ಸೋದೆ ಸ್ವಾಮೀಜಿ ವಿಶ್ವವಲ್ಲಭ ತೀರ್ಥಶ್ರಿಗಳ ಹೆಸರು ಪ್ರಸ್ತಾಪ ಮಾಡಿದ್ದಾರೆ.

    ಅವರ ಎಂಟು ಸಾವಿರ ಭಕ್ತರಿಂದ ಪ್ರತಿ ಮನೆಯಿಂದ ಒಂದು ಪವನ್ ಚಿನ್ನ ಒಟ್ಟುಗೂಡಿಸ್ತಾರಂತೆ. ಆದ್ರೆ ಆಡಿಯೋದಲ್ಲಿ ಯಾವುದೂ ಸ್ಪಷ್ಟ ಮಾಹಿತಿ ಇಲ್ಲ. ಯಾವ ಸಂದರ್ಭದಲ್ಲಿ ಯಾರಿಗೆ ಈ ಆಡಿಯೋ ಕಳುಹಿಸಿದ್ದಾರೋ ಎಂಬ ಬಗ್ಗೆ ಮಾಹಿತಿಯಿಲ್ಲ.

    ಪಟ್ಟದ ದೇವರನ್ನು ಮರಳಿ ನೀಡುವ ವಿಚಾರದಲ್ಲಿ ವ್ಯವಹಾರ ಮಾತುಕತೆ ನಡೆದಿತ್ತಾ? ಅಥವಾ ಯಾವುದೊ ಮಹತ್ವದ ಯೋಜನೆಗೆ ಹಣ ಸಂಗ್ರಹಿಸುವ ಬಗ್ಗೆ ನಡೆದ ಮಾತುಕತೆಯೋ ಸ್ಪಷ್ಟವಾಗಿಲ್ಲ. ಆಡಿಯೊದ ಮೂಲ ತನಿಖೆ ಮಾಡಿದ್ರೆ ಸಾಕಷ್ಟು ವಿಚಾರ ಬೆಳಕಿಗೆ ಬರುವ ಸಾಧ್ಯತೆ ಇದೆ.

    ಶಿರೂರು ಶ್ರೀ ವಾಟ್ಸಾಪ್ ವಾಯ್ಸ್ ನೋಟ್:

    ಆಗ ನೋಡಿದೆ ನಿನ್ನ ವಾಟ್ಸಪ್…
    ಭಾರಿ ಖುಷಿ ಆಯ್ತು.
    ಅಜ್ಜರದ್ದು ಒಂದು ಡಿಮ್ಯಾಂಡ್ ಉಂಟು ಮಾರಾಯಾ.
    ಅವರಿಗೆ ಒಂದು ಕೋಟಿ ಕೊಡಬೇಕಂತೆ.
    ಐವತ್ತು ಲಕ್ಷ ಪಲಿಮಾರು ಸ್ವಾಮೀಜಿಗೆ ಕೊಡಬೇಕಂತೆ.
    ಐವತ್ತು ಲಕ್ಷ ಅವರಿಗೆ (ಪೇಜಾವರ?) ಬೇಕಂತೆ.
    ಆಮೇಲೆ ಈ ಮ್ಯಾಟರ್ ಫಿನೀಷ್ ಅಂತೆ.

    ಆಮೇಲೆ ಏನೂಂತ ಅಂದ್ರೆ… ಕರ್ನಾಟಕದಲ್ಲಿ ಸೋದೆ ಮಠದ ಶಿಷ್ಯಂದಿರ ಒಟ್ಟು ಎಂಟು ಸಾವಿರ ಮನೆ ಉಂಟಂತೆ. ಎಂಟು ಸಾವಿರ ಮನೆಗೆ ಒಂದೊಂದು ಮನೆಯಿಂದ ಒಂದೊಂದು ಪವನ್ ಚಿನ್ನ ವ್ಯವಸ್ಥೆ ಮಾಡಿ ಕೊಡುತ್ತೇನೆ ಅಂತ ಹೇಳಿದ್ದಾನೆ. ವಿಶ್ವವಲ್ಲಭ (ಸೋದೆ ಮಠಾಧೀಶರು) ಹೇಳಿದ್ದಾನೆ. ಅದನ್ನು ಇವರು ಬೇಡುತ್ತಿದ್ದಾರೆ.

    ವಿಷಯ ಇವತ್ತು ಬೆಳಗ್ಗೆ ಗೊತ್ತಾಯ್ತು. ಇಷ್ಟೇ ವಿಷಯ, ಎಲ್ಲರಿಗೂ ತಿಳಿಸು ಆಯ್ತಾ ಅಂತ ಹೇಳಿದ್ದಾರೆ.

  • ಪ್ರೇಮ್, ಪ್ರಜ್ವಲ್, ಹರಿಪ್ರಿಯಾ ನಟನೆಯ ಲೈಫ್ ಜೊತೆ ಒಂದು ಸೆಲ್ಫಿ ಆಡಿಯೋ ಲಾಂಚ್

    ಪ್ರೇಮ್, ಪ್ರಜ್ವಲ್, ಹರಿಪ್ರಿಯಾ ನಟನೆಯ ಲೈಫ್ ಜೊತೆ ಒಂದು ಸೆಲ್ಫಿ ಆಡಿಯೋ ಲಾಂಚ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸಾರಥಿ ಎಂಬ ಚಿತ್ರದ ಮೂಲಕ ಸ್ಟಾರ್ ನಿರ್ದೇಶಕರಾಗಿ ಹೊರ ಹೊಮ್ಮಿದ್ದವರು ತೂಗುದೀಪ ದಿನಕರ್. ಆನಂತರ ಡೈರೆಕ್ಷನ್ ಕೆಲಸದಿಂದ ಸ್ವಲ್ಪ ವಿರಾಮ ಪಡೆದಿದ್ದ ದಿನಕರ್ ಚಕ್ರವರ್ತಿ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಇದಾದ ನಂತರ ದಿನಕರ್ ಪೂರ್ತಿ ನಟನೆಯಲ್ಲೇ ತೊಡಗಿಸಿಕೊಳ್ಳುತ್ತಾರೆ ಅನ್ನೋ ಮಾತು ಕೇಳಿಬರುತ್ತಿತ್ತು.

    ಆದರೆ ಜನರ ಮಾತನ್ನು ಸುಳ್ಳು ಮಾಡುವಂತೆ ದಿನಕರ್ ಮತ್ತೆ ನಿರ್ದೇಶನಕ್ಕೆ ಇಳಿದು ‘ಲೈಫ್ ಜೊತೆ ಒಂದು ಸೆಲ್ಫೀ’ ಅನ್ನೋ ಆಕರ್ಷಕ ಶೀರ್ಷಿಕೆಯ ಸಿನಿಮಾವನ್ನು ಶುರು ಮಾಡಿದ್ದರು. ಈ ಚಿತ್ರ ಯಾವಾಗ ಶುರುವಾಯಿತು, ಯಾವಾಗ ಮುಗಿಯಿತು ಅನ್ನೋದೂ ತಿಳಿಯದಂತೆ ಸೈಲೆಂಟಾಗಿ ಸಿನಿಮಾ ಚಿತ್ರೀಕರಣ ಪೂರೈಸಿ ಸಿದ್ಧಗೊಂಡಿದೆ. ಮೊನ್ನೆ ದಿನ ‘ಲೈಫ್ ಜೊತೆ ಒಂದು ಸೆಲ್ಫೀ’ ಚಿತ್ರದ ಹಾಡುಗಳನ್ನು ಖುದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದ್ದಾರೆ.

    ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಮತ್ತು ಪ್ರಜ್ವಲ್ ದೇವರಾಜ್ ಒಟ್ಟಾಗಿ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಸಮೃದ್ಧಿ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ಇನ್ನೇನು ಸಿನಿಮಾ ತೆರೆಗೆ ಬರಲಿದೆ. ಅಂದಹಾಗೆ, ಈ ಸಿನಿಮಾಗೆ ದಿನಕರ್ ಅವರ ಪತ್ನಿ ಮಾನಸಾ ದಿನಕರ್ ಕಥೆ ಬರೆದಿದ್ದಾರೆ.

    ಹರಿಪ್ರಿಯಾ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರ ಯುವಕರ ಮನಸ್ಸಿಗೆ ಹತ್ತಿರಾಗುವ ಕಥೆ ಹೊಂದಿದೆಯಂತೆ. ಸಾಧು ಕೋಕಿಲಾ ಮಾಮೂಲಿ ಪಾತ್ರಕ್ಕಿಂತಾ ಭಿನ್ನವಾಗಿ ಕಾಣಿಸಿಕೊಂಡಿದ್ದಾರಂತೆ. ಚೆಂದದ ಚಿತ್ರದ ಹಾಡುಗಳು ಲೋಕಾರ್ಪಣೆಗೊಂಡಿರೋದರಿಂದ ಲೈಫ್ ಜೊತೆ ಒಂದ್ ಸೆಲ್ಫಿ ಬಗೆಗಿನ ಕುತೂಹಲದ ಕಾವು ಹೆಚ್ಚಾಗಲಿರೋದಂತೂ ಸತ್ಯ.

     

  • ಮಹಿಳೆಯೊಬ್ಬರ ಜೊತೆ ಸರಸ ಸಲ್ಲಾಪ? ಶಾಸಕ ಸಿದ್ದು ನ್ಯಾಮಗೌಡಗೆ ಸೇರಿದ್ದು ಎನ್ನಲಾದ ಆಡಿಯೋ ವೈರಲ್!

    ಮಹಿಳೆಯೊಬ್ಬರ ಜೊತೆ ಸರಸ ಸಲ್ಲಾಪ? ಶಾಸಕ ಸಿದ್ದು ನ್ಯಾಮಗೌಡಗೆ ಸೇರಿದ್ದು ಎನ್ನಲಾದ ಆಡಿಯೋ ವೈರಲ್!

    ಬಾಗಲಕೋಟೆ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಅವರು ಮಾತನಾಡಿದ್ದಾರೆ ಎನ್ನಲಾಗಿರುವ ಮೊಬೈಲ್ ಆಡಿಯೋ ಒಂದು ಹೊರಬಿದ್ದಿದ್ದು, ಸಖತ್ ವೈರಲ್ ಆಗಿದೆ.

    ಈ ಆಡಿಯೋದಲ್ಲಿ ಇರುವ ವ್ಯಕ್ತಿಯ ಧ್ವನಿ ಶಾಸಕ ಸಿದ್ದು ನ್ಯಾಮಗೌಡ ಅವರ ಧ್ವನಿಗೆ ಹೋಲಿಕೆ ಇದ್ದು, ಕಾಂಗ್ರೆಸ್ ಮಹಿಳಾ ಕಾರ್ಯಕರ್ತರ ಜೊತೆ ಮೊಬೈಲ್ ನಲ್ಲಿ ಸಂಭಾಷಣೆ ನಡೆಸಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಸಂಭಾಷಣೆಯಲ್ಲಿ ಮಹಿಳೆ ಹಾಗೂ ವ್ಯಕ್ತಿಯ ನಡುವೆ ನಿಕಟ ಪರಿಚಯ ಇರುವುದು ಸ್ಪಷ್ಟವಾಗುತ್ತದೆ.

    21 ನಿಮಿಷವಿರುವ ಆಡಿಯೋದಲ್ಲಿ ಮಹಿಳೆಯೊಂದಿಗೆ ಸರಸ ಸಲ್ಲಾಪ ನಡೆಸಿದ್ದಾರೆ. ಇನ್ನು ಮಹಿಳೆಗೆ ನಿನ್ನನ್ನು ನಗರಸಭೆ ಅಧ್ಯಕ್ಷೆಯನ್ನಾಗಿ ಮಾಡುತ್ತೇನೆ ಎಂದು ಪುಸಲಾಯಿಸಲಾಗಿದೆ. ಕಳೆದ ಮೂರು ದಿನಗಳ ಹಿಂದೆಯೇ ಆಡಿಯೋ ಬಿಡುಗಡೆಯಾಗಿದ್ದು, ಕ್ಷೇತ್ರದ ಎಲ್ಲೆಡೆ ವೈರಲ್ ಆಗಿದೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ನ್ಯಾಮಗೌಡ, ಚುನಾವಣೆ ಸಮೀಪವಾಗುತ್ತಿದಂತೆ ನನ್ನ ವಿರುದ್ಧ ಅಪಪ್ರಚಾರ ನಡೆಲು ಇಂತಹ ನಕಲಿ ಆಡಿಯೋ ಬಿಡುಗಡೆ ಮಾಡಲಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಎಸ್‍ಪಿ ಅವರಿಗೆ ಈಗಾಗಲೇ ದೂರು ನೀಡಿದ್ದೇನೆ. ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    https://www.youtube.com/watch?v=9tl4el4G4-4

  • ರಾಜ್ಯದಲ್ಲಿ ಹಿಂದೂಗಳ ಸರಣಿ ಹತ್ಯೆಗೆ ಖಂಡನೆ- ಸಿಎಂ ವಿರುದ್ಧ ಸಿಡಿದೆದ್ದ ಸೂಲಿಬೆಲೆಯಿಂದ `ಆಕ್ರೋಶದ ನಮಸ್ಕಾರ’

    ರಾಜ್ಯದಲ್ಲಿ ಹಿಂದೂಗಳ ಸರಣಿ ಹತ್ಯೆಗೆ ಖಂಡನೆ- ಸಿಎಂ ವಿರುದ್ಧ ಸಿಡಿದೆದ್ದ ಸೂಲಿಬೆಲೆಯಿಂದ `ಆಕ್ರೋಶದ ನಮಸ್ಕಾರ’

    ಬೆಂಗಳೂರು: ರಾಜ್ಯದಲ್ಲಿ ಹಿಂದೂಗಳ ಸರಣಿ ಹತ್ಯೆ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಚಿಂತಕ ಚಕ್ರವರ್ತಿ ಸೂಲಿಬೆಲೆ ಸಿಡಿದೆದ್ದಿದ್ದಾರೆ.

    ಹಿಂದೂಗಳ ಹತ್ಯೆಗಳಿಗೆ ಆಕ್ರೋಶ ವ್ಯಕ್ತಪಡಿಸಿ `ಆಕ್ರೋಶದ ನಮಸ್ಕಾರ’ ಎನ್ನುತ್ತಲೇ ಭಾವನಾತ್ಮಕವಾಗಿ ಸೂಲಿಬೆಲೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಸೂಲಿಬೆಲೆ ಮಾತನಾಡಿದ ಆಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಆಡಿಯೋದಲ್ಲೇನಿದೆ?: ಪ್ರಿಯ ಸಿದ್ದರಾಮಯ್ಯನವರೇ, ಆಕ್ರೋಶದ ನಮಸ್ಕಾರಗಳು. ನಿಮ್ಮ ಆಳ್ವಿಕೆಯ 5 ವರ್ಷ ಇನ್ನೂ ಪೂರ್ಣಗೊಂಡಿಲ್ಲ. ಅಷ್ಟರಲ್ಲಾಗಲೇ ನೀವು ಕನ್ನಡಿಗರ ಬದುಕನ್ನು ಅಸಹ್ಯಗೊಳಿಸಿಬಿಟ್ಟಿದ್ದೀರಿ. ನಿಮ್ಮ ಸಾಮಾಜ್ಯದಲ್ಲಿ ಮಧ್ಯರಾತ್ರಿ ತರುಣಿಯರು ಬಿಡಿ, ತರುಣರು ನಡೆದಾಡುವುದು ಕಷ್ಟವಾಗಿಬಿಟ್ಟಿದೆ. ನೀವು ಆಳ್ತಾ ಇರೋ ಈ ನಾಡಿನಲ್ಲಿ ಗೋವಿನಂತ ಪಶುಗಳಿಗೇನು… ಸಿಂಹದಂತಹ ತರುಣರಿಗೂ ಬದುಕಿನ ಭೀತಿ ಶುರುವಾಗಿದೆ.

    ರುದ್ರೇಶ್, ರಾಜು, ಕುಟ್ಟಪ್ಪ, ಪರೇಶ್ ಮೇಸ್ತಾ ಅನಾಥ ಶವವಾದರು. ದೀಪಕ್ ಎಂದಿಗೂ ಗಲಾಟೆಗೆ ಹೋದವನಲ್ಲ. ಅಂತವನು ಬರ್ಬರವಾಗಿ ಕೊಲೆಯಾದ. ಕುಡಿದ ಅಮಲಿನಲ್ಲಿ ತೂರಾಡಿದ್ದರೆ, ವೇಗವಾಗಿ ಬೈಕ್ ಓಡಿಸಿ ರಸ್ತೆಗೆ ರಕ್ತ ಚೆಲ್ಲಿದ್ದರೆ ಒಪ್ಪಿಕೊಳ್ಳಬಹುದಿತ್ತೇನೋ. ಆದರೆ ಇವರೆಲ್ಲಾ ಕೇಸರಿ ಶಾಲು ಧರಿಸಿದ್ದವರೆಂಬ ಕಾರಣಕ್ಕೆ ಹೆಣವಾದವರು. ಹೇಳಿ ಇಂತಹ ವೀರಪುತ್ರರ ಸಾವನ್ನು ನೀವು ತುಚ್ಛವಾಗಿ ಕಂಡು, ವ್ಯಂಗ್ಯವಾಗಿ ಹೀಯಾಳಿಸಿದ್ದು ಸರಿಯಾ? ಇದನ್ನು ಓದಿ: ‘ಐದಾರು ಬಾರಿ ಗೆದ್ದರೂ ಐದು ಪೈಸೆ ಉಪಯೋಗವಿಲ್ಲ’: ಅಂಕಣದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದು ಹೀಗೆ

    ನೀವು ಹಾಗೇ ಹೇಳುವಾಗ ಆ ಮಕ್ಕಳ ತಾಯಂದಿರ ಹೃದಯದ ವೇದನೆ ಹೇಗಿರಬಹುದೆಂಬ ಅಂದಾಜು ಆದ್ರೂ ನಿಮಗಿತ್ತೇನೋ.? ಇಲ್ದೇ ಏನೂ, ಮಕ್ಕಳನ್ನು ಕಳಕೊಳ್ಳೋ ದುಃಖ ನಿಮಗೂ ಗೊತ್ತು. ಆದರೆ ಕುರ್ಚಿಗಾಗಿ ಓಡುತ್ತಾ ರಾಜಕೀಯ ದಾಳಗಳನ್ನೆಸೆಯೋ ಭರದಲ್ಲಿ ನೀವು ದುಃಖವನ್ನು ಸಮಾಧಿ ಮಾಡಿ ಮುನ್ನುಗ್ಗಿಬಿಟ್ಟಿದ್ದೀರಿ. ನಿಮ್ಮ ಸಾಹಸ ಮೆಚ್ಚಲೇಬೇಕು. ಆದ್ರೆ ಇಂದು ಸಂಜೆ ಮನೆಗೆ ಹೋದೊಡನೆ ನಿಮ್ಮ ಪತ್ನಿಯ ಕಂಗಳನ್ನು ಕಣ್ಣಿಟ್ಟು ನೋಡಿ. ಹಿರಿಮಗನನ್ನು ಕಳೆದುಕೊಂಡ ಆ ದುಃಖದ ಜ್ವಾಲೆ ಆರಿದ್ಯಾ ಆಂತಾ ಗಮನಿಸಿ. ಮಗನನ್ನು ಕಳಕೊಂಡ ಆಕೆಯೊಳಗಿನ ನೋವು ಇಂಗಿದ್ಯಾ ಅಂತಾ ಹೃದಯದೊಳಗೆ ಇಣುಕಿ ನೋಡಿ.

    ಬಹುಶಃ ಆಕೆಗೆ ಮಾತ್ರ ಇನ್ನೊಬ್ಬ ತಾಯಿಯ ದುಃಖ ಗೊತ್ತಾಗಬಹುದೇನೋ. ನೆನಪಿಡಿ ಎಲ್ಲಾ ಪಾಪದ ಕೊಡ ನಿಮ್ಮ ಹೆಗಲ ಮೇಲಿದೆ. ನೀವು ರಕ್ಷಿಸ್ತೀರಿ ಅನ್ನೋ ಭರವಸೆಯಲ್ಲಿ ಎಲ್ಲಾ ಜಿಹಾದಿಗಳು ಕತ್ತಿ ಹಿಡಿದು ಮುನ್ನುಗ್ತಾ ಇರೋದು. ದೀಪಕ್‍ನ ಕೊಲೆಯಾದಾಗಿನಿಂದ ನನ್ನಮ್ಮನೂ ಕರೆ ಮಾಡುತ್ತಿದ್ದಾಳೆ. ನೆನಪಿರಲಿ ನೊಂದ ಹೃದಯದ ಶಾಪ ನಿಮಗೆ ತಟ್ಟಲಿದೆ. ಮಕ್ಕಳನ್ನು ಕಳಕೊಂಡವರ ನೋವು ನಿಮ್ಮನ್ನು ಸುಡಲಿದೆ. ಹೆತ್ತವರ ಶಾಪದಿಂದ ಪಾರಾಗುವ ಶಕ್ತಿಯನ್ನು ಭಗವಂತ ನಿಮಗೆ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

  • ಗಣಿನಾಡು ಬಳ್ಳಾರಿಯಲ್ಲಿ `ಟಗರು’ ನರ್ತನ – ಆಡಿಯೋ ಲಾಂಚ್ ಮಾಡಿ ಕುಣಿದ ದೊಡ್ಮನೆ ಬ್ರದರ್ಸ್

    ಗಣಿನಾಡು ಬಳ್ಳಾರಿಯಲ್ಲಿ `ಟಗರು’ ನರ್ತನ – ಆಡಿಯೋ ಲಾಂಚ್ ಮಾಡಿ ಕುಣಿದ ದೊಡ್ಮನೆ ಬ್ರದರ್ಸ್

    ಬಳ್ಳಾರಿ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ `ಟಗರು’ ಚಿತ್ರದ ಆಡಿಯೋ ಶನಿವಾರ ಸಂಜೆ ಬಿಡುಗಡೆಯಾಗಿದೆ.

    ಹೊಸಪೇಟೆಯಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಲಕ್ಷಾಂತರ ಪ್ರೇಕ್ಷಕರ ಸಮ್ಮುಖದಲ್ಲಿ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಲಾಯಿತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಶಿವರಾಜ್ ಕುಮಾರ್, ಶಾಸಕ ಆನಂದ ಸಿಂಗ್ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿದರು.

    ಆಡಿಯೋ ಬಿಡುಗಡೆ ವೇಳೆ ಟಗರು ಚಿತ್ರದ ಟೈಟಲ್ ಸಾಂಗ್ ಗೆ ನಟ ಶಿವರಾಜ್ ಕುಮಾರ್ ಹಾಗೂ ಅಂಜನಿಪುತ್ರ ಚಿತ್ರದ ಹಾಡಿಗೆ ಪವರ ಸ್ಟಾರ್ ಪುನೀತ್ ರಾಜಕುಮಾರ್ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ನಟಿ ಮಾನ್ವಿತಾ ಕೂಡಾ ಚಿತ್ರದ ಹಾಡಿಗೆ ಸ್ಟೆಪ್ ಹಾಕಿದ್ರು. ಇನ್ನು ನಟ- ನಟಿಯರು ಡಾನ್ಸ್ ಮಾಡುತ್ತಿದಂತೆ ಪ್ರೇಕ್ಷಕರು ಹುಚ್ಚೆದು ಕುಣಿದ್ರು. ಸಮಾರಂಭದಲ್ಲಿ ಸಾವಿರಾರು ಜನರು ಭಾಗವಹಿಸಿದ ಪರಿಣಾಮ ಪೊಲೀಸರು ಜನರನ್ನು ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಬೇಕಾಯಿತು.

    ಸುಮಾರು ಮೂರು ತಾಸುಗಳ ಕಾಲ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ನಟ ಶಿವಣ್ಣ ಹಾಗೂ ಪುನೀತ್ ರಾಜಕುಮಾರ್ ಹೊಸಪೇಟೆಗೂ ರಾಜ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿ ಯಾವುದೇ ಸಮಾರಂಭ ಮಾಡಿದ್ರೂ ಸಕ್ಸಸ್ ಆಗುತ್ತೆ ಎಂದು ಹರ್ಷ ವ್ಯಕ್ತಪಡಿಸಿದರು.

    ಒಟ್ಟಾರೆ ಟಗರು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಮಾತ್ರ ಪುಲ್ ಪೊಗರಿನಿಂದಲೇ ನಡೆದಿರುವುದು ಚಿತ್ರ ಯಶ್ವಸಿಯಾಗಲಿದೆ ಅನ್ನೋದಕ್ಕೆ ಮುನ್ಸೂಚನೆ ನೀಡಿದಂತೆ ಕಂಡುಬಂದಿತು. ಇನ್ನೂ ಆಡಿಯೋ ಬಿಡುಗಡೆ ವೇಳೆ ನಟ ಯಶ್ ಕೂಡಾ ಚಿತ್ರಕ್ಕೆ ಹಾರೈಸಿದ್ದಾರೆ.

    ಸಮಾರಂಭದಲ್ಲಿ ನಟ ಶಿವರಾಜ್ ಕುಮಾರ್, ನಟಿ ಮಾನ್ವಿತಾ, ನಟ ಮುರಳಿ, ಖಳನಟ ವಷಿಷ್ಠ ಸೇರಿದಂತೆ ಚಿತ್ರರಂಗದ ತಾರೆಯರು ಭಾಗಿಯಾಗಿದ್ದರು. ಸಮಾರಂಭದ ಅಂಗವಾಗಿ ಪ್ರೇಕ್ಷಕರಿಗೆ 20 ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.