Tag: audio

  • ದಯವಿಟ್ಟು ಎಮೋಷನಲ್ ಆಗಬೇಡಿ-ಸ್ಪೀಕರ್​ಗೆ ಡಿಕೆಶಿ ಮನವಿ

    ದಯವಿಟ್ಟು ಎಮೋಷನಲ್ ಆಗಬೇಡಿ-ಸ್ಪೀಕರ್​ಗೆ ಡಿಕೆಶಿ ಮನವಿ

    – ನಿಮ್ಮ ತೀರ್ಪು ಇತಿಹಾಸ ಸೃಷ್ಟಿಸಬೇಕು

    ಬೆಂಗಳೂರು: ನಿಮ್ಮನ್ನು ಬಹಳ ಚಿಕ್ಕವಯಸ್ಸಿನಿಂದಲೇ ನಾನು ನೋಡಿದ್ದೇನೆ. ಅಂದು ಸ್ಪೀಕರ್ ಆಗಿದ್ದಾಗ ಸಾಕಷ್ಟು ಎಮೋಷನಲ್ ಆಗಿದ್ದನ್ನು ಕೂಡ ನಾನು ಕಂಡಿದ್ದೇನೆ. ಅಲ್ಲದೇ ಅಂದು ಈ ಕುರ್ಚಿ ಬಿಟ್ಟು ಎದ್ದು ಹೋಗಿದ್ದನು ಕೂಡ ನಾನು ಗಮನಿಸಿದ್ದೇನೆ. ಆದ್ರೆ ಇಂದು ಮತ್ತೆ ಎಮೋಷನಲ್ ಆಗಬೇಡಿ ಎಂದು ಸಚಿವ ಡಿಕೆ ಶಿವಕುಮಾರ್ ಅವರು ಸ್ಪೀಕರ್ ರಮೇಶ್ ಕುಮಾರ್ ಅವರಲ್ಲಿ ಮನವಿ ಮಾಡಿಕೊಂಡರು.

    ಇಂದಿನ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿಯವರು ಆಪರೇಷನ್ ಕಮಲ ಮಾಡಿರುವ ಆಡಿಯೋದಲ್ಲಿ 50 ಕೋಟಿ ಕೊಟ್ಟು ಸ್ಪೀಕರ್ ಅವರನ್ನು ಖರೀದಿಸಿರುವ ವಿಚಾರ ಭಾರೀ ಸದ್ದು ಮಾಡಿತ್ತು. ಕಲಾಪದ ಆರಂಭದಲ್ಲೇ ಸ್ಪೀಕರ್ ಈ ವಿಚಾರ ಪ್ರಸ್ತಾಪಿಸಿ ಕಣ್ಣೀರು ಹಾಕಿದ್ರು. ಹೀಗಾಗಿ ಈ ವಿಚಾರದ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ದಯವಿಟ್ಟು ಇದನ್ನು ತುಂಬಾ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಬಗ್ಗೆ ಕೇವಲವಾಗಿ ಮಾತನಾಡಿದವರು, ಖರೀದಿ ಮಾಡಿದ್ದೀವಿ ಎಂದವರು ತಕ್ಕ ಶಿಕ್ಷೆ ಅನುಭವಿಸುತ್ತಾರೆ ಎಂದು ಹೇಳಿದರು.

    ನೀವು ಒಂದು ದೊಡ್ಡ ಸ್ಥಾನದಲ್ಲಿ ಕುಳಿತಿದ್ದೀರಿ. ಇಲ್ಲಿ ಬಹಳ ದೊಡ್ಡ ದೊಡ್ಡ ವಿಚಾರ ಅಡಗಿರುವುದರಿಂದ ಇಂದು ಇಡೀ ದೇಶ ಹಾಗೂ ಹೊರದೇಶದಲ್ಲಿಯೂ ಕರ್ನಾಟಕದ ಪ್ರಜಾಪ್ರಭುತ್ವನ್ನು ಗಮನಿಸುತ್ತಿದೆ. ಹೀಗಾಗಿ ತಾವು ಎಮೋಷನಲ್ ಆಗಿ ಯಾವ ತೀರ್ಮಾನವನ್ನು ತೆಗೆದುಕೊಳ್ಳಬಾರದು. ಇದು ತಮ್ಮ ಒಬ್ಬರದ್ದೇ ವಿಚಾರವಲ್ಲ. ರಾಜ್ಯದ ಒಬ್ಬ ಮುಖ್ಯಮಂತ್ರಿಯಾಗಿರುವವರು ಅವರಿಗೆ ತಿಳಿದ ವಿಚಾರದ ಪತ್ರವನ್ನು ತಮಗೆ ಕೊಟ್ಟು, ಅದನ್ನು ಕೂಡ ತಾವು ಗಮನದಲ್ಲಿಟ್ಟುಕೊಂಡು ಇಂದು ಪ್ರಸ್ತಾಪ ಮಾಡಿದ್ದೀರಿ.

    ಇಲ್ಲಿ ಶಾಸಕ ಹಾಗೂ ಸಚಿವರ ಮರ್ಯಾದೆ ಎಲ್ಲಾ ಹಾಳಾಗಿ ಹೋಗುತ್ತಿದೆ. ಇದರಿಂದ ಇಂದು ನಾವು ಯಾರೂ ಕೂಡ ತಲೆ ಎತ್ತಿ ನಡೆಯೋ ಹಾಗಿಲ್ಲ. ಹೀಗಾಗಿ ತಾವು ಅದನ್ನು ಪ್ರಶ್ನೆ ಮಾಡಿದ್ದೀರಿ. ನಮ್ಮ ಗೌರವವನ್ನು ಉಳಿಸಬೇಕಾದವರು ಹಾಗೆಯೇ ನಮ್ಮನ್ನು ರಕ್ಷಣೆ ಮಾಡಬೇಕಾದವರು ನೀವು. ಹೀಗಾಗಿ ತಾವು ಮೇಲ್ಗಡೆ ಕೂತಂತಹ ಸಂದರ್ಭದಲ್ಲಿ ನಿಮ್ಮದೊಂದು ವಿಚಾರದಲ್ಲಿ ಮಾತ್ರ ನೀವು ತೀರ್ಪು, ಆದೇಶ, ಸಂದೇಶ, ಈ ಸರ್ಕಾರಕ್ಕೆ ಹಾಗೂ ಈ ಮನೆಗೆ ನೀವು ಅವಕಾಶ ಮಾಡಿಕೊಡಬಾರದು ಅಂದ್ರು.

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರು, ಸಚಿವರನ್ನು ನೀವು ರಕ್ಷಣೆ ಮಾಡಬೇಕು. ಸಂಸತ್ತಿನ ವ್ಯವಸ್ಥೆಯಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸಬೇಕು. ಹಳ್ಳಿಗಳಲ್ಲಿ ನಮ್ಮ ಬಗ್ಗೆ ಏನು ಮಾತಾಡ್ತಿದ್ದಾರೆ. ಹೀಗಾಗಿ ಇಲ್ಲಿ ನೀವು ನಿಮ್ಮ ಬಗ್ಗೆ ಮಾತ್ರ ಚರ್ಚೆ ನಡೆಸಬಾರದು ಎಂದು ಅವರು ಹೇಳಿದ್ದಾರೆ.

    ಒಟ್ಟಿನಲ್ಲಿ ಈ ಬಗ್ಗೆ ನೀವು ಕೊಡುವ ಆದೇಶ ಇತಿಹಾಸವಾಗಲೇ ಬೇಕು. ಈ ಮೂಲಕ ತಮ್ಮ ತೀರ್ಪನ್ನು ಇಡೀ ದೇಶ ನೋಡುವಂತಾಗಬೇಕು. ಇಲ್ಲಿ ನಾನು ಯಾರನ್ನೂ ಆರೋಪಿಗಳನ್ನಾಗಿ ಮಾಡಿ ಎಂದು ಹೇಳುತ್ತಿಲ್ಲ. ಆದ್ರೆ ಸಮಗ್ರ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿ, ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೋದಿ ಬಂದು ಕರ್ನಾಟಕದಲ್ಲಿ ಸ್ಪರ್ಧೆ ಮಾಡಲಿ – ಸಿದ್ದರಾಮಯ್ಯ ಸವಾಲು

    ಮೋದಿ ಬಂದು ಕರ್ನಾಟಕದಲ್ಲಿ ಸ್ಪರ್ಧೆ ಮಾಡಲಿ – ಸಿದ್ದರಾಮಯ್ಯ ಸವಾಲು

    – ಯಡಿಯೂರಪ್ಪ ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್

    ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಬಂದು ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿ. ಆವಾಗ ಗೊತ್ತಾಗುತ್ತೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 22 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಬಿಜೆಪಿ ನಾಯಕರ ಹೇಳಿಕೆ ವಿಚಾರದ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು ಈ ಚಾಲೆಂಜ್ ಹಾಕಿದ್ದಾರೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್ ಎಂದು ಲೇವಡಿ ಮಾಡಿದ್ದಾರೆ.

    ಪ್ರಧಾನಿ ಮೋದಿಯವರು ಬರೀ ಸುಳ್ಳು ಹೇಳುತ್ತಾರೆ. ಭಾನುವಾರ ರಫೇಲ್ ಬಗ್ಗೆ ದೇಶದ ಚೌಕಿದಾರ ಮಾತಾಡಿಲ್ಲ. ರೈತರ ಸಾಲವನ್ನು ಅವರೇಕೆ ಮನ್ನಾ ಮಾಡಿಲ್ಲ ಎಂದು ಇದೇ ವೇಳೆ ಪ್ರಶ್ನಸಿದ ಸಿದ್ದರಾಮಯ್ಯ, ರೈತರ ಸಾಲಮನ್ನಾ ಮಾಡುವಂತೆ ಎರಡು ಬಾರಿ ನಿಯೋಗ ಹೋಗಿದ್ದೆ. ಅವರು ಇದೂವರೆಗೂ ರೈತರ ಸಾಲಮನ್ನಾ ಮಾಡಿಲ್ಲ. ನಾವು ಈ ವರ್ಷದ ಬಜೆಟ್‍ನಲ್ಲಿ ಸಾಲಮನ್ನಾಕ್ಕೆ ಹಣ ಇಟ್ಟಿದ್ದೇವೆ. ಮೋದಿಯವರಿಗೆ ಸುಳ್ಳು ಹೇಳುವುದು ಬಿಟ್ಟು ಬೇರೇನು ಗೊತ್ತಿಲ್ಲ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಯಡಿಯೂರಪ್ಪ ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್. ಸಿಎಂ ಆಗಿದ್ದವರು ದುಡ್ಡು ಕೊಟ್ಟು ಶಾಸಕರ ಖರೀದಿಗೆ ಯತ್ನಿಸ್ತಿದ್ದಾರೆ. ನನ್ನದೇ ಧ್ವನಿ ಆಗಿದ್ದರೆ ರಾಜೀನಾಮೆ ಕೊಡ್ತೀನಿ ಎಂದು ಹೇಳಿದ್ದರು. ಈಗ ನನ್ನದೇ ಧ್ವನಿ ಅಂತ ಒಪ್ಪಿಕೊಂಡಿದ್ದಾರೆ, ರಾಜೀನಾಮೆ ಕೊಡ್ತಾರಾ ಎಂದು ಬಿಎಸ್‍ವೈ ಅವರನ್ನು ಪ್ರಶ್ನಿಸಿದ್ರು.

    ಶರಣಗೌಡ ಅವರಿಗೆ ಬಿಎಸ್ ವೈ ಏನು ಹೇಳಿದ್ದಾರೆ ಹೇಳ್ಲಾ ಎಂದ ಮಾಜಿ ಸಿಎಂ, ಹತ್ತು ಕೋಟಿ ನಿಮ್ಮಪ್ಪನಿಗೆ ಕೊಡ್ತೀವಿ, ಮಂತ್ರಿ ಮಾಡ್ತೀವಿ. ನಿಂಗೆ ಟಿಕೆಟ್ ಕೊಡ್ತೀವಿ ಅಂದಿದ್ದಾರೆ. ಅದು ಕುದುರೆ ವ್ಯಾಪಾರ ಅಲ್ವಾ. ಸಿಎಂ ಆಗಿದ್ದವರು ಶಾಸಕರನ್ನು ಕೊಂಡುಕೊಳ್ಳಲು ಹೊರಟಿದ್ದಾರೆ. ಹೀಗಾಗಿ ಅವರು ಇವರು ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್ ಎಂದು ಸಿದ್ದರಾಮಯ್ಯ ಅವರು ಲೇವಡಿ ಮಾಡಿದ್ದಾರೆ.

    ಅಧಿವೇಶನಕ್ಕೆ ನಾಲ್ಕು ಕಾಂಗ್ರೆಸ್ ಶಾಸಕರು ಬಂದಿಲ್ಲ. ಅವರನ್ನು ಡಿಸ್ಕ್ವಾಲಿಫೈ ಮಾಡಲು ಸ್ಪೀಕರ್‍ಗೆ ಮನವಿ ಮಾಡುತ್ತೇವೆ. ಯಡಿಯೂರಪ್ಪ ಕೂಡಲೆ ರಾಜಿನಾಮೆ ಕೊಡಬೇಕು. ಅವರಿಗೆ ಸಾರ್ವಜನಿಕ ಜೀವನದಲ್ಲಿರಲು ನೈತಿಕತೆಯಿಲ್ಲ. ಮೊದಲು ಮಿಮಿಕ್ರಿ ಮಾಡಲಾಗಿದೆ, ಸಾಬೀತುಪಡಿಸಿದ್ರೆ ರಾಜೀನಾಮೆ ಕೊಡ್ತೀನಿ ಅಂದಿದ್ರು. ಈಗ ನಂದೇ ವಾಯ್ಸ್ ಅಂದಿದ್ದಾರೆ. ಹೀಗಾಗಿ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸದನದಲ್ಲಿಂದು ಆಡಿಯೋ, ವಿಡಿಯೋ ವಾರ್- ತನಿಖೆಗೆ ಸೂಚಿಸ್ತಾರಾ ಸ್ಪೀಕರ್ ರಮೇಶ್ ಕುಮಾರ್..?

    ಸದನದಲ್ಲಿಂದು ಆಡಿಯೋ, ವಿಡಿಯೋ ವಾರ್- ತನಿಖೆಗೆ ಸೂಚಿಸ್ತಾರಾ ಸ್ಪೀಕರ್ ರಮೇಶ್ ಕುಮಾರ್..?

    ಬೆಂಗಳೂರು: ಹುಬ್ಬಳ್ಳಿ ಸಮಾವೇಶದ ವೇಳೆ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಇಂದು ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಯಲಿದ್ದು, ಸ್ಪೀಕರ್ ರಮೇಶ್ ಕುಮಾರ್ ಅವರ ಮುಂದಿನ ನಡೆಯ ಬಗ್ಗೆ ಭಾರೀ ಕುತೂಹಲ ಮೂಡಿದೆ.

    ಆಡಿಯೋದಲ್ಲಿ ಮಾತನಾಡಿದ್ದು ತಾನೇ ಎಂದು ಒಪ್ಪಿದ ಬಿಎಸ್‍ವೈ ಹೇಳಿದ್ದು ಹೀಗಾಗಿ ಬಿಎಸ್‍ವೈ ವಿರುದ್ಧ ದೋಸ್ತಿಗಳು ಎಸಿಬಿಗೆ ದೂರು ಕೊಡ್ತಾರಾ ಅಥವಾ ಬಿಎಸ್‍ವೈ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್‍ಗೆ ಸೂಚಿಸ್ತಾರಾ, ಸ್ಪೀಕರ್ ರಮೇಶ್ ಕುಮಾರ್ ಅವರು ಪ್ರಕರಣದ ತನಿಖೆಗೆ ಆದೇಶಿಸುತ್ತಾರಾ ಎಂಬುದು ಸದ್ಯದ ಕುತೂಹಲವಾಗಿದೆ. ಯಾಕಂದ್ರೆ ಆಡಿಯೋ ವಿಚಾರ ಕುರಿತಂತೆ ಭಾನುವಾರ ಸ್ಪೀಕರ್ ಅವರು ನ್ಯಾಯಸಮ್ಮತ ನಿರ್ಣಯ ಕೈಗೊಳ್ಳೋದಾಗಿ ತಿಳಿಸಿದ್ದರು. ಹೀಗಾಗಿ ಸ್ಪೀಕರ್ ನಿರ್ಧಾರದತ್ತ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.


    ಹಾಗಾದ್ರೆ ದೋಸ್ತಿಗಳು ಏನ್ ಮಾಡ್ಬೋದು..?:
    ವಿಧಾನಸಭೆಯಲ್ಲಿಂದು ದೋಸ್ತಿ ಸರ್ಕಾರ ಆಪರೇಷನ್ ಕಮಲ ಆಡಿಯೋ ಪ್ರಕರಣದ ಬಗ್ಗೆ ಗದ್ದಲ ಮಾಡಬಹುದು. ರಮೇಶ್ ಕುಮಾರ್ ಪ್ರಸ್ತಾಪಿಸಿದಾಗ ತನಿಖೆಯ ಆದೇಶ ಸ್ಪೀಕರ್ ವಿವೇಚನೆಗೆ ಬಿಡುವುದು. ಸ್ಪೀಕರ್ ಪ್ರಕರಣವನ್ನು ಎಸಿಬಿ ಸೇರಿದಂತೆ ಸೂಕ್ತ ಸಂಸ್ಥೆಗಳ ತನಿಖೆಗೆ ಒಪ್ಪಿಸಬಹುದು. ಹಕ್ಕು ಬಾದ್ಯತಾ ಸಮಿತಿ ಅಥವಾ ತನಿಖೆಗೆ ಸದನ ಸಮಿತಿ ರಚಿಸುವ ಅವಕಾಶವಿದೆ. ಒಂದು ವೇಳೆ ಸ್ಪೀಕರ್ ತನಿಖೆಗೆ ವಹಿಸದಿದ್ದರೆ ಸರ್ಕಾರವೇ ತನಿಖೆಗೆ ಸೂಚಿಸುವುದು. ಎಸಿಬಿ ತನಿಖೆಗೆ ಆದೇಶ ಮಾಡುವ ಮೂಲಕ ಬಿಎಸ್‍ವೈರನ್ನ ಇಕ್ಕಟ್ಟಿಗೆ ಸಿಲುಕಿಸೋದು. ಆಪರೇಷನ್ ಕಮಲದ ಆಡಿಯೋವನ್ನು ಎಫ್‍ಎಸ್‍ಎಲ್ ತನಿಖೆಗೆ ಒಪ್ಪಿಸುವುದು. ಬಿಜೆಪಿ ವಿಡಿಯೋ ಬಿಡುಗಡೆ ಮಾಡಿದ್ರೆ ಆಡಳಿತ ಪಕ್ಷವೂ ಕೂಡ ಗದ್ದಲಕ್ಕೆ ಇಳಿಯುವುದು.


    ಆಡಿಯೋ ವರ್ಸಸ್ ವಿಡಿಯೋ ಸಮರ:
    ಸದನದಲ್ಲಿಂದು ಬಿಎಸ್‍ವೈ ಆಡಿಯೋ ವರ್ಸಸ್ ಸಿಎಂ ವಿಡಿಯೋ ಸಮರ ನಡೆಯುತ್ತದೆ. ಆಪರೇಷನ್ ಕಮಲದ ಆಡಿಯೋಗೆ ವಿರುದ್ಧವಾಗಿ ಬಿಜೆಪಿ ವಿಡಿಯೋ ರಿಲೀಸ್ ಮಾಡಲಿದೆ. ಸಿಎಂ ಎಚ್‍ಡಿಕೆ ವಿಜುಗೌಡ ಬಳಿಕ 25 ಕೋಟಿ ಕೇಳಿದ ವಿಡಿಯೋ ಬಿಡುಗಡೆಯಾಗಲಿದೆ. ಈ ಮೂಲಕ ಸದನದಲ್ಲಿ ವಿಡಿಯೋ ಹಾಜರುಪಡಿಸಿ ಬಿಜೆಪಿ ತನಿಖೆಗೆ ಒತ್ತಾಯಿಸುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ವಿಧಾನಸಭೆ ಇಂದು ಆಡಿಯೋ, ವಿಡಿಯೋ ಫೈಟ್‍ಗೆ ಸಾಕ್ಷಿಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಜುನಾಥನೇ ತಪ್ಪೊಪ್ಪಿಕೊಳ್ಳಲು ಬುದ್ಧಿಕೊಟ್ಟಿರಬಹುದು- ಎಚ್‍ಡಿಕೆ

    ಮಂಜುನಾಥನೇ ತಪ್ಪೊಪ್ಪಿಕೊಳ್ಳಲು ಬುದ್ಧಿಕೊಟ್ಟಿರಬಹುದು- ಎಚ್‍ಡಿಕೆ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಧರ್ಮಸ್ಥಳದ ಮಂಜುನಾಥನೇ ಬುದ್ಧಿ ಕೊಟ್ಟಿರಬಹುದು. ಆದ್ದರಿಂದ ಅವರು ತಮ್ಮ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ದಿನ ಯಡಿಯೂರಪ್ಪ ಅವರು ಮಿಮಿಕ್ರಿ ಮಾಡಿಸಿದ್ದಾರೆ ಎಂದರು. ಆದರೆ ಇಂದು ಅವರೇ ತಪ್ಪೊಪ್ಪಿಕೊಂಡಿದ್ದಾರೆ. ಬಹುಶಃ ಧರ್ಮಸ್ಥಳದ ಮಂಜುನಾಥನೇ ಒಪ್ಪಿಕೊಳ್ಳಲು ಯಡಿಯೂರಪ್ಪ ಅವರಿಗೆ ಬುದ್ಧಿ ಕೊಟ್ಟಿರಬಹುದು. ಮುಂದೆ ಏನೇನು ಆಗುತ್ತದೋ ಗೊತ್ತಿಲ್ಲ ಎಂದು ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಶಾಸಕನ ಮಗನನ್ನು ಕಳಿಸಿಕೊಟ್ಟು ಕುತಂತ್ರ- ತಪ್ಪೊಪ್ಪಿಕೊಂಡ್ರು ಬಿಎಸ್‍ವೈ

    ನಾಳೆ(ಸೋಮವಾರ) ಬಿಜೆಪಿ ಸಿಡಿ ಬಿಡುಗಡೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾಳೆ ಹಳೆ ಸರಕು ಇಟ್ಟುಕೊಂಡು ಚರ್ಚೆಗೆ ಬರುತ್ತಾರಂತೆ, ಬರಲಿ ನಾನು ಚರ್ಚೆಗೆ ಸಿದ್ಧ. ನಾನು ದುಡ್ಡು ಕೇಳಿಲ್ಲ, ನನ್ನ ಬಳಿ ದುಡ್ಡು ಇಲ್ಲ, ನಮ್ಮ ಪಕ್ಷದ ಶಾಸಕರು ಸಾಲ-ಸೋಲಾ ಮಾಡಿ ಚುನಾವಣೆ ನಡೆಸಿದ್ದರು. ಅವೆಲ್ಲ ಪಕ್ಷದ ಒಳಗೆ ಆಗಿರುವ ಮಾತುಕತೆಗಳು. ನಾನು ಬೇರೆ ಪಕ್ಷದವರನ್ನು ಕರೆದು ಸ್ವೇಚಾಚ್ಛಾರವಾಗಿ ಕೋಟಿ ಕೋಟಿ ಹಣ ಕೊಡುತ್ತೀನಿ ಎಂದು ಮುಖ್ಯಮಂತ್ರಿಯಾಗಿ ಹೇಳಿದ್ದೀನಾ ಎಂದು ತಿರುಗೇಟು ನೀಡಿದ್ದಾರೆ.

    ಅವರ ಬಳಿ ಹೆಚ್ಚು ಹಣ ಇದೆ. ನಾನು ಪ್ರಾದೇಶಿಕ ಪಕ್ಷ ನಡೆಸಬೇಕು. ನನ್ನ ಬಳಿ ದುಡ್ಡಿಲ್ಲ. ಅವರ-ಇವರ ಬಳಿ ಭಿಕ್ಷೆ ಬೇಡಿ ಪಕ್ಷ ನಡೆಸಬೇಕು. ಯಡಿಯೂರಪ್ಪ ಲೂಟಿ ಹೊಡೆದು ದುಡ್ಡು ಇಟ್ಟಿದ್ದಾರೆ, ಕೊಡುತ್ತಾರೆ ಎಂದು ಕಿಡಿಕಾರಿದ್ದಾರೆ.

    ಯಡಿಯೂರಪ್ಪ ಆಡಿಯೋ ವಿಚಾರ ಮುಂದಿನ ಕ್ರಮದ ಬಗ್ಗೆ ಸ್ಪೀಕರ್ ನಿರ್ಧಾರ ಮಾಡುತ್ತಾರೆ. ಬಿಜೆಪಿ ಅವರು ತರುತ್ತಿರುವ ಆಡಿಯೋ ಬಗ್ಗೆ ನಾನು ಅವತ್ತೇ ಚರ್ಚೆ ಮಾಡೋಣ ಅಂತ ಹೇಳಿದ್ದೆ. ಆ ವಿಷಯ ಬಂದಾಗ ನಾನೇ ವಿಧಾನಸಭೆಯಲ್ಲಿ ಚರ್ಚೆ ಮಾಡೋಣ ಅಂತ ಹೇಳಿದ್ದೆ. ಈಗ ಮತ್ತೆ ಅದೇ ಹಳೆ ಸರಕು ತರುತ್ತಿದ್ದಾರೆ. ಚರ್ಚೆಗೆ ನಾನು ಸಿದ್ಧ ಎಂದು ಸವಾಲ್ ಹಾಕಿದ್ದಾರೆ.

    ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಗೆ ನಾನು ದುಡ್ಡು ಕೊಡುತ್ತೀನಿ ಅಂತ ಕರೆದಿಲ್ಲ. ಮೊನ್ನೆ ಯಡಿಯೂರಪ್ಪ ಹೇಳಿದಂತೆ ಗುತ್ತೇದಾರ್ ಹೇಳುತ್ತಿದ್ದರು ಅಷ್ಟೆ. ಸುಭಾಷ್ ಗುತ್ತೇದಾರ್ ನನ್ನ ಬಳಿ ಅರ್ಜಿ ಕೊಡುವುದಕ್ಕೆ ಬಂದಿದ್ದರು. ಆಗ ನೀನು ನಮ್ಮ ಪಕ್ಷದಲ್ಲಿ ಇದ್ದು, ನಮ್ಮ ಜೊತೆ ಎಂಎಲ್‍ಎ ಆದವನು. ಯಾರೋ ಕರೆದರು ಅಂತ ಹೋಗಿ ಈಗ ಅರ್ಜಿ ಹಿಡಿದುಕೊಂಡು ಬಂದಿದ್ದೀಯಾ ಅಲ್ಲ. ನೀನೇ ಮಂತ್ರಿ ಆಗುವ ಅವಕಾಶ ಕಳೆದುಕೊಂಡೆ ಅಂತ ಹೇಳಿದ್ದೆ ಅಷ್ಟೆ. ಅದು ಪಕ್ಷಕ್ಕೆ ಕರೆದಂಗಾ ಎಂದು ಪ್ರಶ್ನೆ ಮಾಡಿದ್ದಾರೆ.

    ನನ್ನ ಬಳಿ ಬಂದ ಯಾವ ಬಿಜೆಪಿ ಶಾಸಕರಿಗೆ ನನ್ನ ಪಕ್ಷಕ್ಕೆ ಬಂದು ಸರ್ಕಾರ ಉಳಿಸಿ ಕೊಡಿಯೆಂದು ಯಾರಿಗೂ ಕೇಳಿಲ್ಲ. ನಾನು ನಿಮ್ಮ ರಾಜಕೀಯ ಜೀವನ ಹಾಳು ಮಾಡೊಲ್ಲವೆಂದು ಹೇಳಿ ಕಳಿಸಿದ್ದೀನಿ. ಅನೇಕ ಬಿಜೆಪಿ ಶಾಸಕರು ನನ್ನ ಸ್ನೇಹಿತರಾಗಿದ್ದಾರೆ. ನನ್ನ ಅಧಿಕಾರ ಉಳಿಸಿಕೊಳ್ಳಲು ನಾನು, ಬಿಜೆಪಿ ಶಾಸಕರ ಭವಿಷ್ಯಕ್ಕೆ ಕುಂದು ತರುವ ಕೆಲಸ ಮಾಡಲಿಲ್ಲ. ಅಂತಹ ಸ್ವಾರ್ಥ ಕೆಲಸ ಮಾಡಲ್ಲ ಅದನ್ನು ಯಡಿಯೂರಪ್ಪ ಅರ್ಥ ಮಾಡಿಕೊಳ್ಳಲಿ ಎಂದು ಟಾಂಗ್ ಕೊಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಎಸ್‍ವೈ ನಿವೃತ್ತಿಗೆ ಡಿಸಿಎಂ ಆಗ್ರಹ- ಇತ್ತ ಆತ್ಮಸಾಕ್ಷಿಗೆ ಡಿಕೆಶಿ ಅಭಿನಂದನೆ

    ಬಿಎಸ್‍ವೈ ನಿವೃತ್ತಿಗೆ ಡಿಸಿಎಂ ಆಗ್ರಹ- ಇತ್ತ ಆತ್ಮಸಾಕ್ಷಿಗೆ ಡಿಕೆಶಿ ಅಭಿನಂದನೆ

    ತುಮಕೂರು/ಬೆಂಗಳೂರು: ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ರಾಜಕೀಯ ನಿವೃತ್ತಿಗೆ ಪಡೆದುಕೊಳ್ಳಲಿ ಎಂದು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಆಗ್ರಹಿಸಿದ್ದಾರೆ. ಇತ್ತ ತನ್ನ ತಪ್ಪೊಪ್ಪಿಕೊಂಡ ಬಿಎಸ್‍ವೈ ಅವರನ್ನು ಸಚಿವ ಡಿಕೆ ಶಿವಕುಮಾರ್ ಅಭಿನಂದಿಸಿದ್ದಾರೆ.

    ತುಮಕೂರಿನಲ್ಲಿ ಮಾತನಾಡಿದ ಡಿಸಿಎಂ, ಆಡಿಯೋ ಸಾಬೀತಾದ್ರೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ರಾಜಕೀಯ ನಿವೃತ್ತಿ ಘೋಷಿಸೋದಾಗಿ ಹೇಳಿದ್ದರು. ಈಗ ಅವರೇ ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ಬಿಎಸ್‍ವೈ ಕೂಡಲೇ ನಿವೃತ್ತಿಯಾಗಲಿ. ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರೆ ಸ್ಪೀಕರ್ ಅವರು ಕೂಡ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡೋದಾಗಿ ಅವರು ಹೇಳಿದ್ರು.  

    ಈ ಬಗ್ಗೆ ಬೆಂಗಳೂರಿನಲ್ಲಿ ಸಚಿವ ಡಿ.ಕೆ ಶಿವಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮದ ಮೂಲಕ ತಿಳಿಯಿತು. ಆದ್ರೆ ಅವರು ಏನ್ ಹೇಳಿಕೆ ನೀಡಿದ್ದರು ಎಂದು ನನಗೆ ಗೊತ್ತಿಲ್ಲ. ತಾವು ಮಾಡಿದ ತಪ್ಪು ಒಪ್ಪಿಕೊಂಡಿದ್ದಾರೆ ಅಂದ್ರೆ ಅಲ್ಲಿ ಮಿಮಿಕ್ರಿ ಪ್ರಶ್ನೆ ಬರೋದಿಲ್ಲ ಅಂದ್ರು. ಇದನ್ನೂ ಓದಿ: ನಾನು ಹಿಟ್ಲರ್ ಅಲ್ಲ, ಆಪರೇಷನ್ ಕಮಲದ ಬಗ್ಗೆ ಗೊತ್ತಿಲ್ಲ: ರಮೇಶ್‍ಕುಮಾರ್

    ರಾಜಕೀಯದಲ್ಲಿ ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ ಎಂದು ಹೇಳಿದ ಡಿಕೆಶಿ ತಪ್ಪೊಪ್ಪಿಕೊಂಡಿರುವ ಬಿಎಸ್‍ವೈ ಅವರ ಆತ್ಮಸಾಕ್ಷಿಗೆ ಇದೇ ವೇಳೆ ಅಭಿನಂದನೆ ಸಲ್ಲಿಸಿದ್ರು. ಈ ಮೂಲಕ ವಿಪಕ್ಷಗಳ ಟೀಕೆಗೆ ಸಚಿವರು ತಿರುಗೇಟು ನೀಡಿದ್ರು. ಆತ್ಮಸಾಕ್ಷಿಯಿಂದಲೇ ನಾನು ನಡೆಯಬೇಕು. ಉಳಿದ ವಿಚಾರವನ್ನು ಸ್ಪೀಕರ್ ಗೆ ಬಿಡೋಣ. ನಾಳೆ ಅವರು ಏನ್ ಹೇಳ್ತಾರೋ, ಪ್ರಕರಣ ಯಾವ ದೃಷ್ಟಿಯಲ್ಲಿ ಹೋಗುತ್ತದೆ ಎಂಬುದನ್ನು ಕಾದುನೋಡೋಣ ಎಂದು ಅವರು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಎಸ್‍ವೈ ಆಪರೇಷನ್ ಆಡಿಯೋ ನಿಜ- ಸಾಬೀತಾಗದಿದ್ರೆ ರಾಜಕೀಯದಿಂದ ನಿವೃತ್ತಿ

    ಬಿಎಸ್‍ವೈ ಆಪರೇಷನ್ ಆಡಿಯೋ ನಿಜ- ಸಾಬೀತಾಗದಿದ್ರೆ ರಾಜಕೀಯದಿಂದ ನಿವೃತ್ತಿ

    – ಮಂಜುನಾಥನ ಸನ್ನಿಧಿಯಲ್ಲಿ ಸಿಎಂ ಮತ್ತೊಂದು ಶಪಥ

    ಬೆಂಗಳೂರು: ಅಪಚಾರ ಎಸಗಿದ್ರೆ ಧರ್ಮಸ್ಥಳ ಮಂಜುನಾಥಸ್ವಾಮಿ ಬಿಡಲ್ಲ. ಮಂಜುನಾಥಸ್ವಾಮಿ ಜೊತೆ ಚೆಲ್ಲಾಟವಾಡಬಾರದು. 12 ವರ್ಷಗಳ ಹಿಂದೆ ಅಪಚಾರವೆಸಗಿದ್ದೆ ಎಂದು ಹೇಳಿದ ಬೆನ್ನಲ್ಲೇ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಮತ್ತೆ ಪ್ರಮಾಣ ಮಾಡಿದ್ದಾರೆ.

    ಇಂದು ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಜೆಟ್ ಗೂ ಮುನ್ನ ಬಿಡುಗಡೆ ಮಾಡಿದ್ದ ಆಡಿಯೋದಲ್ಲಿರೋದು ಬಿಎಸ್ ಯಡಿಯೂರಪ್ಪ ಅವರ ಧ್ವನಿಯೇ ಆಗಿದೆ. ಒಂದು ವೇಳೆ ಈ ವಿಚಾರ ಸಾಬೀತಾಗದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಶಪಥ ಮಾಡಿದ್ದಾರೆ. ಇದನ್ನೂ ಓದಿ: ನನ್ನಿಂದ ಅಪಚಾರವಾಗಿದೆ – ಧರ್ಮಸ್ಥಳದಲ್ಲಿ ಸಿಎಂ ಎಚ್‍ಡಿಕೆ

    ನಾನು ಆಡಿಯೋ ಮಾಡಿಸಿಲ್ಲ. ಕಾರ್ಯಕರ್ತರು ಆಡಿಯೋ ಮಾಡಿದ್ದಾರೆ. ಬಿಎಸ್‍ವೈ ಪುತ್ರ, ಯೋಗೇಶ್ವರ್ ಹಾಗೂ ಅಶ್ವಥ್ ನಾರಾಯಣ ಈ ಆಪರೇಷನ್ ಸೂತ್ರಧಾರರಾಗಿದ್ದಾರೆ. ಆ ಆಡಿಯೋದಲ್ಲಿ ಇರೋದು ಯಡಿಯೂರಪ್ಪ ವಾಯ್ಸೇ ಆಗಿದೆ ಎಂದು ಮತ್ತೊಮ್ಮೆ ಎಚ್‍ಡಿಕೆ ಸ್ಪಷ್ಟಪಡಿಸಿದ್ದಾರೆ.  ಇದನ್ನೂ ಓದಿ: ಅದು ನಕಲಿ ಆಡಿಯೋ, ಸಾಬೀತಾದರೆ ರಾಜಕೀಯ ನಿವೃತ್ತಿ – ಬಿಎಸ್‍ವೈ ಸವಾಲು

    ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಆಡಿಯೋ-ವಿಡಿಯೋ ಬಗ್ಗೆ ಭಾರೀ ಚರ್ಚೆಗಳಾಗುತ್ತಿದೆ. ಎಚ್‍ಡಿಕೆ ಬಿಡುಗಡೆಗೊಳಿಸಿದ್ದ ಆಡಿಯೋ ಸಾಬೀತಾದ್ರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಶುಕ್ರವಾರ ಬಿಎಸ್‍ವೈ ಹೇಳಿದ್ದರು. ಈ ಬೆನ್ನಲ್ಲೆ ಇದೀಗ ಆಡಿಯೋ ಸಾಬೀತಾಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಆಡಿಯೋದಲ್ಲಿರೋದು ಬಿಎಸ್‍ವೈ ಧ್ವನಿಯೆಂದು ನಾನು ಹೇಳಿಲ್ಲ- ಎಚ್‍ಡಿಕೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಡಿಯೋದಲ್ಲಿರೋದು ಬಿಎಸ್‍ವೈ ಧ್ವನಿಯೆಂದು ನಾನು ಹೇಳಿಲ್ಲ- ಎಚ್‍ಡಿಕೆ

    ಆಡಿಯೋದಲ್ಲಿರೋದು ಬಿಎಸ್‍ವೈ ಧ್ವನಿಯೆಂದು ನಾನು ಹೇಳಿಲ್ಲ- ಎಚ್‍ಡಿಕೆ

    ಮಂಗಳೂರು: ಬಿಜೆಟ್ ಮಂಡನೆಗೂ ಮುನ್ನ ಶುಕ್ರವಾರ ಬಿಡಗಡೆ ಮಾಡಿದ ಆಡಿಯೋದಲ್ಲಿ ಯಡಿಯೂರಪ್ಪ ಮಾತನಾಡಿದ್ದಾರೆ ಎಂದು ನಾನು ಹೇಳಿದ್ದೇನಾ ಎಂದು ಕುಮಾರಸ್ವಾಮಿ ಇಂದು ಪ್ರಶ್ನಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋ ಬಗ್ಗೆ ತನಿಖೆ ನಡೆಸಬೇಕಾದಂತಹ ಅವಶ್ಯತೆ ಇದೆ. ಪ್ರಧಾನಿಗಳೇ ಅವರ ಬಗ್ಗೆ ತನಿಖೆ ನಡೆಸುವ ತೀರ್ಮಾನ ಮಾಡಿ ಸಹಕಾರ ಕೊಟ್ಟರೆ ಅವರ ನೇತೃತ್ವದಲ್ಲೇ ತನಿಖೆ ನಡೆಸಲು ಆದೇಶ ಮಾಡುವುದಕ್ಕೂ ತಯಾರಾಗಿದ್ದೇವೆ.

    ನಾನು ಮಾತೇ ಆಡಿಲ್ಲ. ಅದು ಮಿಮಿಕ್ರಿ ಮಾಡಿರುವಂತದ್ದು ಎಂದು ಬಿಜೆಪಿ ನಾಯಕರುಗಳು ಹಾಗೂ ಯಡಿಯೂರಪ್ಪನವರು ಕೂಡ ಹೇಳಿದ್ದಾರೆ. ಆದ್ರೆ ಇದರ ಸತ್ಯಾಸತ್ಯತೆ ಹೊರಗೆ ಬರಬೇಕು. ಆ ದೃಷ್ಟಿಯಿಂದ ಅದರ ಬಗ್ಗೆ ತನಿಖೆ ನಡೆಸುವ ನಿರ್ಧಾರ ಮಾಡಲಾಗುವುದು ಎಂದ ಅವರು, ಯಡಿಯೂರಪ್ಪನವರು ಮಾತನಾಡಿದ್ದಾರೆ ಎಂದು ಹೇಳಿದ್ದೀನಾ ಎಂದು ಪ್ರಶ್ನಿಸಿದ್ರು. ಇದನ್ನೂ ಓದಿ: ದೇವದುರ್ಗ ಐಬಿಯಲ್ಲಿ ಬಿಎಸ್‍ವೈಯಿಂದ ಆಪರೇಷನ್ ಕಮಲ – ಸ್ಫೋಟಕ ಆಡಿಯೋ ಔಟ್

    ಆ ಒಂದು ಆಡಿಯೋದಲ್ಲಿ ಸ್ಪೀಕರ್ ಹೆಸರನ್ನು ತಂದಿದ್ದಾರೆ. ಅಮಿತ್ ಶಾ ಹಾಗೂ ನರೇಂದ್ರ ಮೋದಿಯವರ ಹೆಸರು, ದೇಶದ ಗೌರವಾನ್ವಿತ ಹೈಕೋರ್ಟ್, ಸುಪ್ರೀಂ ಕೋರ್ಟ್ ವಿಷಯವನ್ನೂ ತಂದಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವಂತಹ ವಿಚಾರವಾಗಿದೆ. ಹೀಗಾಗಿ ಇದರ ಬಗ್ಗೆ ಸಮಗ್ರವಾದ ತನಿಖೆ ನಡೆದು ಈ ರೀತಿಯ ಸ್ವೇಚ್ಛಾಚಾರದ ಮಾತುಗಳು ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡುವಂತಹ ವ್ಯಕ್ತಿಗಳಿಗೆ ಕಾನೂನು ವ್ಯಾಪ್ತಿಯೊಳಗೆ ತನಿಖೆ ಮುಖಾಂತರ ಅತ್ಯಾಸತ್ಯತೆ ಹೊರಗೆ ಬಂದು ಇದರಲ್ಲಿ ಯಾರಿದ್ದಾರೆ ಅವರಿಗೆ ಕಾನೂನು ವ್ಯಾಪ್ತಿಯೊಳಗೆ ಶಿಕ್ಷೆಗೆ ಒಳಪಡಿಸಲೇಬೇಕಾದಂತಹ ಅವಶ್ಯಕತೆ ಇದೆ ಎಂದರು. ಇದನ್ನೂ ಓದಿ: ಜೆಡಿಎಸ್ ಶಾಸಕನ ಪುತ್ರನಿಗೆ ಬಿಎಸ್‍ವೈಯಿಂದ ಮಂತ್ರಿಗಿರಿ ಆಫರ್ – ಆಡಿಯೋದಲ್ಲಿ ಏನಿದೆ?

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಹೆಚ್‍ಡಿಕೆ ಅಷ್ಟೇ ಅಲ್ಲ ಸಿದ್ದರಾಮಯ್ಯ ಬಳಿಯೂ ಇದೆ ಆಡಿಯೋ’

    ‘ಹೆಚ್‍ಡಿಕೆ ಅಷ್ಟೇ ಅಲ್ಲ ಸಿದ್ದರಾಮಯ್ಯ ಬಳಿಯೂ ಇದೆ ಆಡಿಯೋ’

    – ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಬಾಂಬ್
    – ಸಮಯ ಬಂದಾಗ ಆಡಿಯೋ ರಿಲೀಸ್

    ಬೆಂಗಳೂರು: ಬಜೆಟ್ ದಿನವೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತರಾತುರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಪರೇಷನ್ ಕಮಲ ಮಾಡಿರುವ ಬಗ್ಗೆ ಆಡಿಯೋ ರಿಲೀಸ್ ಮಾಡಿದ್ದರು. ಈಗ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಳಿಯೂ ಆಪರೇಷನ್ ಆಡಿಯೋ ಇದೆ ಎಂದು ಶಾಸಕ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಶಾಸಕನ ಪುತ್ರನಿಗೆ ಬಿಎಸ್‍ವೈಯಿಂದ ಮಂತ್ರಿಗಿರಿ ಆಫರ್ – ಆಡಿಯೋದಲ್ಲಿ ಏನಿದೆ?

    ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಬಳಿ ಮತ್ತೊಂದು ಆಪರೇಷನ್ ಕಮಲದ ಆಡಿಯೋ ಇದೆ. ಅದನ್ನ ಅವರು ಬಿಡುಗಡೆ ಮಾಡಿಲ್ಲ. ಸಮಯ ಬಂದಾಗ ಬಿಡುಗಡೆ ಮಾಡುತ್ತಾರೆ. ಸಮಿಶ್ರ ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ, ಐದು ವರ್ಷ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ದೇವದುರ್ಗ ಐಬಿಯಲ್ಲಿ ಬಿಎಸ್‍ವೈಯಿಂದ ಆಪರೇಷನ್ ಕಮಲ – ಸ್ಫೋಟಕ ಆಡಿಯೋ ಔಟ್

    ಸಿಎಂ ಕುಮಾರಸ್ವಾಮಿ ಮಂಡಿಸಿದ ಬಜೆಟ್ ಜನಪರವಾಗಿದ್ದು, ಜಿಲ್ಲೆಗೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಪ್ರಸ್ತಾಪ ಮಾಡಿದ್ದಾರೆ. ಹೀಗಾಗಿ ಜನಪರ ಹಾಗೂ ರೈತ ಪರವಾದ ಬಜೆಟ್ ಆಗಿದೆ. ಬಿಜೆಪಿಯವರು ಗಲಾಟೆ ಮಾಡುತ್ತಾರೆ ಅಂತ ಅವರಿಗೆ ಬಜೆಟ್ ಬುಕ್ ನೀಡಲಿಲ್ಲ. ಶುಕ್ರವಾರ ಕೂಡ ರಾಜ್ಯಪಾಲರ ಭಾಷಣದ ವೇಳೆ ಗಲಾಟೆ ಮಾಡುತ್ತಿದ್ದರು. ಈ ಕಾರಣಕ್ಕೆ ಬಜೆಟ್ ಪುಸ್ತಕ ನೀಡಿರಲಿಲ್ಲ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

    ಸದ್ಯದಲ್ಲೇ ಸಿದ್ದರಾಮಯ್ಯ ಅವರು ಮತ್ತೊಂದು ಬಾಂಬ್ ಸಿಡಿಸುತ್ತಾರಾ? ಬಿಎಸ್‍ವೈ ಆ್ಯಂಡ್ ಬಿಜೆಪಿ ತಂಡಕ್ಕೆ ಶಾಕ್ ಕೊಡುತ್ತಾರಾ? ಎಂಬ ಪ್ರಶ್ನೆ ಮೂಡಿದ್ದು, ಒಂದು ವೇಳೆ ಸಿದ್ದರಾಮಯ್ಯ ಬಳಿ ಇರುವ ಆಡಿಯೋದಲ್ಲಿ ರಿಲೀಸ್ ಆದರೆ ಅದರಲ್ಲಿ ಏನಿದೆ ಎಂಬ ಕುತೂಹಲ ಮೂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ ಬಿಡುಗಡೆ ಮಾಡಿರೋದು ಮಿಮಿಕ್ರಿ ಟೇಪ್: ಶ್ರೀರಾಮುಲು

    ಸಿಎಂ ಬಿಡುಗಡೆ ಮಾಡಿರೋದು ಮಿಮಿಕ್ರಿ ಟೇಪ್: ಶ್ರೀರಾಮುಲು

    ಬೆಂಗಳೂರು: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಬಿಎಸ್ ಯಡಿಯೂರಪ್ಪ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಧ್ವನಿ ಮಿಮಿಕ್ರಿ ಮಾಡಿರುವಂತದ್ದು ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಸದನದಲ್ಲಿ ಬಜೆಟ್ ಮಂಡನೆ ಮಾಡಲು ಸರ್ಕಾರಕ್ಕೆ ಸರಿಯಾದ ಸಂಖ್ಯಾಬಲ ಇಲ್ಲ. ಆದ್ದರಿಂದ ಅವರು ಇದನ್ನು ಮರೆಮಾಚಲು ಆಡಿಯೋ ಬಿಡುಗಡೆ ಮಾಡಿದ್ದಾರೆ ಆಷ್ಟೇ. ಬಹುಮತ ಇಲ್ಲದ ಸರ್ಕಾರ ಮಂಡಿಸುವ ಬಜೆಟ್‍ಗೆ ಮನ್ನಣೆ ಇರುವುದಿಲ್ಲ. ಆದರೆ ಬಿಜೆಪಿ ಪಕ್ಷ ಕೋಟಿ ಕೋಟಿ ರೂ. ನೀಡುತ್ತಿದೆ ಎಂದು ಹೇಳಿ ಅವರೇ ತಮ್ಮ ಡಿಮ್ಯಾಂಡ್ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಸುಪ್ರೀಂ ನ್ಯಾಯಾಲಯ ಕೂಡ ಇಂತಹ ಆಡಿಯೋ ನಂಬಿಕೆಗೆ ಅರ್ಹ ಅಲ್ಲ ಎಂದು ಹೇಳಿದೆ. ಇಂದಿನ ತಂತ್ರಜ್ಞಾನದಲ್ಲಿ ಏನನ್ನು ಬೇಕಾದರು ಕೂಡ ಮಾಡಲು ಸಾಧ್ಯವಿದೆ. ಸಮ್ಮಿಶ್ರ ಸರ್ಕಾರದ 2 ಪಕ್ಷಗಳಲ್ಲಿ ಹೊಂದಾಣಿಕೆ ಇಲ್ಲ. ಮುಖ್ಯಮಂತ್ರಿಗಳೇ ಇಂತಹ ಫೇಕ್ ಆಡಿಯೋ ಬಿಡುಗಡೆ ಮಾಡಿದ್ದಾರೆ ಎಂದರೆ ಎಂತಹ ಸ್ಥಿತಿ ನಿರ್ಮಾಣ ಆಗಿದೆ ಎಂಬುದನ್ನು ತಿಳಿಯಬಹುದು. ಆದರೆ ನಾವು ಯಾರನ್ನೂ ಆಪರೇಷನ್ ಕಮಲ ಅಥವಾ ಕಾಂಗ್ರೆಸ್ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಮುಖ್ಯಮಂತ್ರಿಗಳ ಕುರ್ಚಿಗಾಗಿ ಸಿಎಂ ಸ್ಥಾನ ಉಳಿಸಿಕೊಳ್ಳಲು ಇಂತಹ ಕೆಲಸಕ್ಕೆ ಇಳಿದಿದ್ದಾರೆ. ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಬಂದ ಶಾಸಕರನ್ನು ಮಾತನಾಡಿದರೆ ತಪ್ಪು ಎಂದರೆ ನಾವು ಏನು ಮಾಡಲು ಸಾಧ್ಯವಿಲ್ಲ. ರಾಜ್ಯದ ಜನತೆಗೆ ಉತ್ತಮ ಕೆಲಸ ಆಗಬೇಕು ಎಂಬ ಉದ್ದೇಶದಿಂದ ನಾವು ಬಜೆಟ್ ಮಂಡನೆಗೆ ಯಾವುದೇ ಅಡ್ಡಿಪಡಿಸುವುದಿಲ್ಲ. ಆದರೆ ಕಳೆದ ಬಜೆಟ್ ವೇಳೆ ಸರ್ಕಾರ ನೀಡಿದ ಯೋಜನೆಗಳನ್ನೇ ಇನ್ನೂ ಜಾರಿಗೆ ತರಲು ಸಾಧ್ಯವಿಲ್ಲ. ಅದೇ ಯೋಜನೆಗಳನ್ನ ಚುನಾವಣೆಯ ದೃಷ್ಠಿಯಿಂದ ಮತ್ತೆ ಆಶ್ವಾಸನೆಗಳನ್ನು ನೀಡುತ್ತಾರಾ ಎಂಬುದರ ಬಗ್ಗೆ ಕಾದು ನೋಡುತ್ತೇವೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಬ್ಬಳ್ಳಿಯಲ್ಲಿ ನಟಸಾರ್ವಭೌಮನ ಆಡಿಯೋ ಲಾಂಚ್

    ಹುಬ್ಬಳ್ಳಿಯಲ್ಲಿ ನಟಸಾರ್ವಭೌಮನ ಆಡಿಯೋ ಲಾಂಚ್

    – ಪುನೀತ್, ರಚಿತಾ ಸ್ಟೆಪ್‍ಗೆ ಪ್ರೇಕ್ಷಕರು ಫಿದಾ

    ಹುಬ್ಬಳ್ಳಿ: ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಬಹುನಿರೀಕ್ಷಿತ ನಟ ಸಾರ್ವಭೌಮ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

    ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅನುಪಸ್ಥಿತಿಯಲ್ಲಿ, ನಟ ಪುನೀತ್ ರಾಜ್ ಕುಮಾರ್ ನೇತೃತ್ವದಲ್ಲಿ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಯಶಸ್ವಿಯಾಗಿ ನಡೆಯಿತು. ಯಶಸ್ವಿ ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದ ನಾಲ್ಕನೇ ಸಿನಿಮಾ ಇದಾಗಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.

    ಉತ್ತರ ಕರ್ನಾಟಕ ಭಾಗದಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಆದ್ರೆ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಐಟಿ ಬಿಸಿ ತಟ್ಟಿದ್ದು, ನಟ ಪುನೀತ್ ರಾಜ್ ಕುಮಾರ್ ಕೂಡ ಗೈರಾಗುತ್ತಾರೆ ಎನ್ನಲಾಗುತ್ತಿತ್ತು. ಆದರೆ ಮನೆಯ ಮೇಲಿನ ಐಟಿ ದಾಳಿ ಪೂರ್ಣಗೊಂಡಿದ್ದರಿಂದ ಮಧ್ಯಾಹ್ನವೇ ನಗರಕ್ಕೆ ಆಗಮಿಸಿದ ಪುನೀತ್ ರಾಜ್ ಕುಮಾರ್ ಅನುಮಾನಕ್ಕೆ ತೆರೆ ಎಳೆದರು.

    ನೆಹರೂ ಮೈದಾನದಲ್ಲಿ ಕಿಕ್ಕಿರದ ಜನಸ್ತೋಮದ ಮಧ್ಯೆ ಬಹುಕೋಟಿ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಯಶಸ್ವಿಯಾಗಿ ನಡೆಯಿತು. ನಟ ಪುನೀತ್ ರಾಜ್ ಕುಮಾರ್, ನಟಿ ರಚಿತಾರಾಮ್ ಸ್ಟೇಪ್ ಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.

    ಐಟಿ ದಾಳಿ ಬಳಿಕ ನಟ ಪುನೀತ್ ಮನೆಯಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳ ಜೊತೆ ಕೆಲವು ಕ್ಷಣ ಮಾತನಾಡಿದ್ದು, ಅಧಿಕಾರಿಗಳು ಬಂದು ಅವರ ಕೆಲಸ ಏನು ಅದನ್ನು ಮಾಡಿದ್ದಾರೆ. ಅವರಿಗೆ ನಾವು ಸಹಕರಿಸಿದ್ದೇವೆ. ಐಟಿ ಅಧಿಕಾರಿಗಳು ತುಂಬಾ ಪ್ರೊಫೆಶನಲ್ ಆಗಿ ಕೆಲಸ ಮಾಡಿದ್ದಾರೆ. ಏನು ತೊಂದರೆ ಆಗಿಲ್ಲ ಎಂದು ಕಾರು ಹತ್ತಿ ಹೊರಟ್ಟಿದ್ದರು. ಕಾರ್ ಹತ್ತಿದ ತಕ್ಷಣ ಪುನೀತ್ ಫೇಸ್‍ಬುಕ್‍ನಲ್ಲಿ ಲೈವ್ ಬಂದು, ಎಲ್ಲರಿಗೂ ನಮಸ್ಕಾರ, ಇಂದು ಸಂಜೆ ನಮ್ಮ ಸಿನಿಮಾ `ನಟಸಾರ್ವಭೌಮ’ ಆಡಿಯೋ ರಿಲೀಸ್ ಹುಬ್ಬಳ್ಳಿಯಲ್ಲಿ ಆಗುತ್ತಿದೆ. ಆದ್ದರಿಂದ ನಾವೆಲ್ಲ ಬರುತ್ತಿದ್ದೇವೆ. ನಿಮ್ಮನ್ನು ಅಲ್ಲಿಯೇ ಭೇಟಿ ಮಾಡುತ್ತೇವೆ. ಎಲ್ಲರೂ ಬನ್ನಿ ಕಾರ್ಯಕ್ರಮವನ್ನು ಎಂಜಾಯ್ ಮಾಡಿ” ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv