Tag: audio

  • ಸಿಎಂ ಎಚ್‍ಡಿಕೆ ವಿರುದ್ಧ ಶಾಸಕ ರೇಣುಕಾಚಾರ್ಯ ಕೆಂಡಾಮಂಡಲ

    ಸಿಎಂ ಎಚ್‍ಡಿಕೆ ವಿರುದ್ಧ ಶಾಸಕ ರೇಣುಕಾಚಾರ್ಯ ಕೆಂಡಾಮಂಡಲ

    – ಎಚ್‍ಡಿಕೆಗೆ ಗೌರವವಿದ್ರೆ ಗೌಪ್ಯತೆ ಕಾಪಾಡಲಿ

    ಬೆಂಗಳೂರು: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೈನಿಂಗ್ ವಿಚಾರದಲ್ಲಿ ಎಸ್‍ಐಟಿಯನ್ನು ರಾಜಕೀಯ ದುರ್ಬಳಕೆಗೋಸ್ಕರ ರಚನೆ ಮಾಡಿದ್ರು. ಅಂದು ಕುಮಾರಸ್ವಾಮಿಯವರೇ ಎಸ್‍ಐಟಿಯನ್ನು ವಿರೋಧಿಸಿದ್ದರು. ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋ ಮಾಡಿಸಿದ ಮುಖ್ಯಮಂತ್ರಿಯೇ ಮೊದಲ ಆರೋಪಿಯಾಗಿರುತ್ತಾರೆ. ಆರೋಪಿ ಕೈಕೆಳಗೆ ಎಸ್‍ಐಟಿ ಕೊಟ್ಟರೆ ಕಳ್ಳರ ಕೈಗೆ ಮನೆ ಕೀ ಕೊಟ್ಟಂತೆ ಆಗುತ್ತದೆ ಎಂದು ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸದನದಲ್ಲಿ ಇಂದು ಕೂಡ ಇದೇ ವಾದ ಮಾಡುತ್ತೇವೆ. ಎಸ್‍ಐಟಿ ತನಿಖೆಗೆ ಯಾವುದೇ ಕಾರಣಕ್ಕೂ ನಾವು ಒಪ್ಪುವುದಿಲ್ಲ. ಸಭಾಧ್ಯಕ್ಷರು ಸಭೆ ಕರೆದಿದ್ದಾರೆ. ಯಡಿಯೂರಪ್ಪ ಹಾಗೂ ಬಿಜೆಪಿಯ ಮುಖಂಡರು, ಹಿರಿಯ ಶಾಸಕರು ಭಾಗವಹಿಸಿದ್ದಾರೆ. ಯಾವ ರೀತಿಯಲ್ಲಿ ಅಲ್ಲಿ ನಿರ್ಧಾರವಾಗುತ್ತದೆ. ಅದರ ನಂತರ ನಮ್ಮ ನಾಯಕರು ಏನ್ ಸೂಚನೆ ಕೊಡುತ್ತಾರೆ ಅದರ ಪ್ರಕಾರ ನಾವು ಎಸ್‍ಐಟಿಯನ್ನು ಪ್ರಬಲವಾಗಿ ವಿರೋಧ ಮಾಡುತ್ತೇವೆ ಎಂದು ಹೇಳಿದ್ರು.

    ಇದೂವರೆಗೂ ನಾನು ಸಭಾಧ್ಯಕ್ಷರಿಗೆ ಆರೋಪ ಮಾಡಿಲ್ಲ. ಕುಮಾರಸ್ವಾಮಿಯವರು ರಮೇಶ್ ಕುಮಾರ್ ವಿರುದ್ಧ ಯಾವ ರೀತಿಯ ಶಬ್ಧಗಳನ್ನು ಬಳಸಿದ್ದಾರೆ ಎಂಬುದಕ್ಕೆ ನಮ್ಮಲ್ಲಿ ದಾಖಲೆ ಇದೆ. ಸಭಾಧ್ಯಕ್ಷರ ಪೀಠದ ಗೌರವವನ್ನು ಎತ್ತಿ ಹಿಡಿಯೋದಕ್ಕೋಸ್ಕರ ವಿಚಾರಗಳನ್ನು ಚರ್ಚೆ ಮಾಡಲ್ಲ. ಅಧಿವೇಶನದ ಹೊರಗಡೆ ನಡೆದಿರುವಂತಹ ಚರ್ಚೆಗಳಾಗಿವೆ. ಕುಮಾರಸ್ವಾಮಿಯವರಿಗೆ ನಿಜವಾಗಲೂ ಸ್ಪೀಕರ್ ರಮೇಶ್ ಕುಮಾರ್ ಪೀಠದ ಬಗ್ಗೆ ಗೌರವವಿದ್ದರೆ ಗೌಪ್ಯತೆಯನ್ನು ಕಾಪಾಡಿ ನೇರವಾಗಿ ಸಭಾಧ್ಯಕ್ಷರನ್ನು ಭೇಟಿ ಮಾಡಿ ಅಲ್ಲಿ ದೂರನ್ನು ಕೊಡಬೇಕಾಗಿತ್ತು ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಪ್ರಕರಣದ ಬಗ್ಗೆ ನಮಗೇನೂ ಭಯವಿಲ್ಲ, ಹುಳುಕಿಲ್ಲ. ಕುಮಾರಸ್ವಾಮಿಯವರು ಏನೇನ್ ಮಾಡಿದ್ದಾರೆಂದು ನಮಗೆ ಗೊತ್ತಿಲ್ಲ. 16 ಜನ ಶಾಸಕರನ್ನು ಗೋವಾಕ್ಕೆ ಹೈಜಾಕ್ ಮಾಡಿಲ್ಲವೇ? ಅಲ್ಲಿ ಏನೇನ್ ಮಾತಾಡಿದ್ದರೆ ಎಂದು ನನ್ನ ಬಳಿ ಬರಲಿ. ಬಹಿರಂಗ ಸವಾಲು ಹಾಕುತ್ತೇನೆ. ನಾನು ಗೋವಾದಲ್ಲಿದ್ದೆ. ರಾಜಕಾರಣದಲ್ಲಿ ಇವರೆಲ್ಲ ಸತ್ಯ ಹರಿಶ್ಚಂದ್ರರಾ ಎಂದು ಪ್ರಶ್ನಿಸಿದ ಅವರು, ಕುಮಾರಸ್ವಾಮಿ ಮಾಡಬಾರದದ್ದನ್ನು ಮಾಡಿದ್ದಾರೆ. ಇವರಿಗೆ ಎಷ್ಟು ಆಸ್ತಿಯಿತ್ತು. ಅವರು ಹುಟ್ಟದುಕ್ಕಿಂತ ಮುಂಚೆ ಭೂಮಿ ಇತ್ತಾ? ಇವರ ಕುಟುಂಬ ಯಾವ ರೀತಿ ಇತ್ತು..? ಹಾಸನ ಹಾಗೂ ಹೊಳೆನರಸೀಪುರ ಜನರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ ರೇಣುಕಾಚಾರ್ಯ, ಕುಮಾರಸ್ವಾಮಿಯವರು ಇಂದು ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಸಭಾಧ್ಯಕ್ಷರ ಪೀಠಕ್ಕೆ ಅಗೌರವ ಸಲ್ಲಿಸಿದ್ದಾರೆ. ಹೀಗಾಗಿ ಕುಮಾರಸ್ವಾಮಿಯವರೇ ಮೊದಲನೆ ಆರೋಪಿ ಎಂದು ಅವರು ಸಿಎಂ ವಿರುದ್ಧ ಕೆಂಡಾಮಂಡಲರಾದ್ರು.

    ಈ ಸರ್ಕಾರ, ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇಲಲದಿರುವುದರಿಂದ ಅವರು ಹೋಗಿರುವುದನ್ನು ಬಿಜೆಪಿ ಪಕ್ಷದ ಹಣೆಗೆ ಕಟ್ಟಲು ಬರುತ್ತಾರೆ. ನಾವು ಸರ್ಕಾರ ರಚನೆಗೆ ಕೈ ಹಾಕಿಲ್ಲ. 104 ಶಾಸಕರ ಜನಾದೇಶ ನಮ್ಮ ಪರವಾಗಿದೆ. ಈ ಕಾಂಗ್ರೆಸ-ಜೆಡಿಎಸ್ ವಿರುದ್ಧವಾಗಿದೆ ಎಂದು ಗರಂ ಆದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುರ್ಚಿ ಉಳಿಸಿಕೊಳ್ಳಲು ಸಿಎಂ ಆಡಿಯೋ ತಿರುಚಿದ್ದಾರೆ: ಬಿಎಸ್‍ವೈ ಪುತ್ರ ಆರೋಪ

    ಕುರ್ಚಿ ಉಳಿಸಿಕೊಳ್ಳಲು ಸಿಎಂ ಆಡಿಯೋ ತಿರುಚಿದ್ದಾರೆ: ಬಿಎಸ್‍ವೈ ಪುತ್ರ ಆರೋಪ

    – ಆಡಿಯೋ ಬಗ್ಗೆ ಪ್ರತಿಕ್ರಿಯಿಸಲು ಬಿಎಸ್‍ವೈ ನಕಾರ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಶಾಸಕ ಶಿವನಗೌಡ ಅವರು ಮಾತನಾಡಿರುವ ಆಡಿಯೋ ಸದ್ಯ ಸುದ್ದಿಯಲ್ಲಿದ್ದು, ಈ ಆಡಿಯೋವನ್ನು ರಾಜಕೀಯ ಲಾಭಕ್ಕಾಗಿ ಸಿಎಂ ಕುಮಾರಸ್ವಾಮಿಯವರು ತಿರುಚಿದ್ದಾರೆ ಎಂದು ಬಿಎಸ್‍ವೈ ಪುತ್ರ ವಿಜಯೇಂದ್ರ ಆರೋಪಿಸಿದ್ದಾರೆ.

    ಆಪರೇಷನ್ ಕಂಪ್ಲೀಟ್ ಆಡಿಯೋ ಕುರಿತು ಪಬ್ಲಿಕ್ ಟಿವಿ ಜೊತೆ ಮೊದಲ ಪ್ರತಿಕ್ರಿಯೆ ನೀಡಿದ ಅವರು, ನಾನು ಆಪರೇಷನ್ ಕಮಲದಲ್ಲಿ ತೊಡಗಿಲ್ಲ. ಇಡೀ ಆಡಿಯೋವನ್ನು ತಿರುಚಲಾಗಿದೆ. ಇದೊಂದು ರಾಜಕೀಯ ಷಡ್ಯಂತ್ರ ಎಂದು ಕಿಡಿಕಾರಿದ್ದಾರೆ.

    ಈ ಆಡಿಯೋಗೆ ಸಿಎಂ ಕುಮಾರಸ್ವಾಮಿಯವರೇ ಸೂತ್ರದಾರಿ. ಈ ಪ್ರಕರಣದಲ್ಲಿ ಅವರ ಪಾತ್ರ ಎಷ್ಟಿದೆ ಎಂದು ತನಿಖೆ ನಂತರ ಗೊತ್ತಾಗಲಿದೆ. ಮಾಧ್ಯಮದಲ್ಲಿ ನನ್ನ ಹೆಸರು ಪದೇ ಪದೇ ಪ್ರಸ್ತಾಪ ಆಗುತ್ತಿದೆ. ನಮ್ಮ ತಂದೆ ಯಡಿಯೂರಪ್ಪ ಅವರ ಹೆಸರು ಈ ಪ್ರಕರಣದಲ್ಲಿ ಕೇಳಿಬರುತ್ತಿದೆ. ನಾನು ಅವರ ಮಗನಾಗಿರುವುದರಿಂದ ನಾನು ಈ ಪ್ರಕರಣದಲ್ಲಿ ಭಾಗಿಯಾಗಿದ್ದೇನೆ ಎಂದು ಎಲ್ಲರು ಮಾತನಾಡೋದು ಸಹಜ. ಆದ್ರೆ ನಾನು ಯಾವುದರಲ್ಲೂ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹುಡುಗಾಟಿಕೆ ಆಡ್ಬಿಟ್ರಿ ನೀವು- ಬಿಎಸ್‍ವೈ ಆಡಿಯೋಗೆ ಹೈಕಮಾಂಡ್ ಕೆಂಡಾಮಂಡಲ

    ಈ ಆಡಿಯೋ ಕೇಳಿದಾಕ್ಷಣ ಕೊಲೆಯಾಗಿದೆ ಎಂದು ತೀರ್ಮಾನ ಮಾಡಲು ಆಗಲ್ಲ. ಸಿಎಂ ರಾಜಕೀಯ ಷಡ್ಯಂತ್ರ ಮಾಡಿದ್ದಾರೆ. ಸಿಎಂ ಅವರ ಸ್ಥಾನವನ್ನು ಉಳಿಸಿಕೊಳ್ಳಲು ಆಡಿಯೋವನ್ನು ತಿರುಚಿದ್ದಾರೆ. ಈ ಪ್ರಕರಣ ಎದುರಿಸಲು ನಾವು ರೆಡಿ ಆಗಿದ್ದೇವೆ. ಹೈಕಮಾಂಡ್ ಈ ಬಗ್ಗೆ ಕ್ಲಾಸ್ ತಗೊಂಡಿದ್ದಾರೆ ಎನ್ನುವ ಬಗ್ಗೆ ಗೊತ್ತಿಲ್ಲ ಎಂದು ಸಿಎಂ ವಿರುದ್ಧ ವಿಜಯೇಂದ್ರ ಹರಿಹಾಯ್ದಿದ್ದಾರೆ.

    ಆದ್ರೆ ಕಂಪ್ಲೀಟ್ ಆಡಿಯೋ ಕುರಿತು ಬಿಎಸ್‍ವೈ ಮಾತ್ರ ಮಾಧ್ಯಮಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಯಾವುದೇ ಮಾತನಾಡದೇ ತಮ್ಮ ಕಾರು ಹತ್ತಿ ವಿಧಾನಸೌಧದತ್ತ ಪ್ರಯಾಣ ಬೆಳೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಡುಗಾಟಿಕೆ ಆಡ್ಬಿಟ್ರಿ ನೀವು- ಬಿಎಸ್‍ವೈ ಆಡಿಯೋಗೆ ಹೈಕಮಾಂಡ್ ಕೆಂಡಾಮಂಡಲ

    ಹುಡುಗಾಟಿಕೆ ಆಡ್ಬಿಟ್ರಿ ನೀವು- ಬಿಎಸ್‍ವೈ ಆಡಿಯೋಗೆ ಹೈಕಮಾಂಡ್ ಕೆಂಡಾಮಂಡಲ

    ಬೆಂಗಳೂರು: ಆಪರೇಷನ್ ಕಮಲದ ಕಂಪ್ಲೀಟ್ ಆಡಿಯೋ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಮೇಲೆ ಸಿಟ್ಟಾಗಿದ್ದಾರೆ.

    ಹುಡುಗರನ್ನು ಕಟ್ಟಿಕೊಂಡು ಹುಡುಗಾಟಿಕೆ ಆಡಿ ಬಿಟ್ರಿ ನೀವು. ಲೋಕಸಭಾ ಚುನಾವಣೆಯ ಹೊತ್ತಲ್ಲಿಯೇ ತಲೆತಗ್ಗಿಸುವಂತಾಯ್ತು. ಹೀಗಾಗಿ ಡ್ಯಾಮೇಜ್ ಕಂಟ್ರೋಲ್ ಗೆ ಪರ್ಯಾಯ ಮಾರ್ಗ ಹುಡುಕಿ ಎಂದು ಬಿಎಸ್‍ವೈ ವಿರುದ್ಧ ಶಾ ಕಿಡಿಕಾರಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಅಲ್ಲದೇ ಗುರುವಾರ ಬಿಎಸ್‍ವೈ ಜೊತೆ ಅಮಿತ್ ಶಾ ಮಾತುಕತೆ ನಡೆಸಲಿದ್ದಾರೆ. ರಾಯಚೂರು, ಹೊಸಪೇಟೆ ಶಕ್ತಿಕೇಂದ್ರ ಸಮಾವೇಶದಲ್ಲಿ ಬಿಎಸ್‍ವೈ ಭಾಗವಹಿಸಲಿದ್ದಾರೆ. ಈ ವೇಳೆ ಆಡಿಯೋ ಪ್ರಕರಣದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಎಸ್‍ವೈ ಆಡಿಯೋ ಬಾಂಬ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

    ಬಿಎಸ್‍ವೈ ಆಡಿಯೋ ಬಾಂಬ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

    ಬೆಂಗಳೂರು: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಆಡಿಯೋ ಕೇವಲ ಟ್ರೈಲರ್ ಅಷ್ಟೇ. ಆದ್ರೆ ಅದರ ಕಂಪ್ಲೀಟ್ ಆಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ಶರಣಗೌಡನ ಡೀಲ್ ವೇಳೆ ಬಿಎಸ್‍ವೈ ಜೊತೆ ಇದ್ದಿದ್ದು ಯಾರು..?, ಶರಣಗೌಡ ಸೆಳೆಯಲು ಯಡಿಯೂರಪ್ಪ ಬಿಟ್ಟ ಒಂದೊಂದು ಡೈಲಾಗ್ ಏನು..?, ಬಿಎಸ್‍ವೈ ಪರವಾಗಿ ಶಿವನಗೌಡ ನಾಯಕ್ ಹೇಳಿದ್ದೇನು..?, ಆಪರೇಷನ್ ಕಮಲದ ವಿಚಾರಕ್ಕೆ ಸಂಬಂಧಿಸಿದಂತೆ ಶರಣಗೌಡ ಹೇಳೋದೇನು ಹೀಗೆ ಒಟ್ಟು 82 ನಿಮಿಷಗಳ ಆಪರೇಷನ್ ಕಮಲದ ಆಡಿಯೋ ಲಭ್ಯವಾಗಿದೆ.


    ಆಡಿಯೋದಲ್ಲೇನಿದೆ..?
    ಯಡಿಯೂರಪ್ಪ: ರಕ್ಷಣೆ ಬೇಕು ರಾಜೀನಾಮೆ ಕೊಡೋಕೆ ಎಂದು ಪೊಲೀಸ್ ರಕ್ಷಣೆಯಲಿ ಬಂದು ಸ್ಪೀಕರ್ ಗೆ ರಾಜೀನಾಮೆ ಕೊಡು. ಸ್ಪೀಕರ್ ತಪ್ಪಿಸಿಕೊಂಡು ಓಡಾಡೋಕೆ ಆಗಲ್ಲ. ಅಧಿವೇಶನ ನಡೆಯುವ ಸಮಯದಲ್ಲಿ ಕೊಟ್ಟುಬಿಟ್ರೆ ಅವನು ಬಿದ್ದಿರ್ತಾನೆ ಅಲ್ಲಿ ತಗೊಳ್ಳೇ ಬೇಕು. ಬೇಡ ತಡವಾಗಬಹುದು. ಮ್ಯಾಕ್ಸಿಮಮ್ ಏನು ರೂಲ್ಸ್ ಇರೋದು ಅಂದ್ರೆ ಖುದ್ದು ಅವರೇ ಬಂದು ಕೊಡಬೇಕು ಅಂತ ಇದ್ರ ಒಂದೇ ಕಂಡಿಷನ್ ಬೇರೆ ಏನು ಇಲ್ಲ.

    ಶಿವನಗೌಡ ನಾಯಕ್: ಹೌದು ಸರ್. 24 ಗಂಟೆಯಲ್ಲಿ ಒಪ್ಪಲೇಬೇಕು. ನಿನ್ನ ಅಪ್ಪನ ಒಪ್ಪಿಸಪ್ಪ ಮುಂದಿನದ್ದನ್ನು ಸಾಹೇಬ್ರಿರಿಗೆ ಬಿಡು ಏನಾದರಾಗ ಸಾಹೇಬರು ಒಳ್ಳೇಯದನ್ನೇ ಮಾಡುತ್ತಾರೆ. ನೀನು ರೆಡಿ ಆಗು ರೆಡಿ ಆಗು. ನಾನು ಉಳಿದದ್ದು ವಿಜಯಣ್ಣ ಜೊತೆ ಮಾತಾಡುತ್ತೇನೆ. ಆಯ್ತು ಸಾಹೇಬರ ಆಶಿರ್ವಾದ ತಗೋ. ಶರಣ್ ಗೌಡ ಇನ್ನೊಂದು ಏನು ಅಂದ್ರೆ ನೀವು ಸಮಾಜದವರು ಸಮಾಜದವರೊಬ್ಬರನ್ನು ಮುಖ್ಯಮಂತ್ರಿ ಮಾಡೋಕೆ ಹೆಮ್ಮೆ ಇರಬೇಕು. ಅವನ್ ಯಾರೀ ಕುಮಾರಸ್ವಾಮಿ ರಾಮನಗರ ಹಾಸನದವರು ಸಂಬಂಧ ಇಲ್ಲದಕ್ಕೆ ಸಾಯ್ತಿ.

    ಯಡಿಯೂರಪ್ಪ: ಬಹುತೇಕ ಎಲ್ಲಾ ನಾನ್ ಲಿಂಗಾಯತ ಬರ್ತಿರಾ.. ಇಲಾ ಮಾಡೋಕೆ ಯಾವುದೇ ಅಡ್ಡಿ , ಆಂತಕ, ತೊಂದ್ರೇನೇ ಇಲ್ಲ. ನಾವು ಇದು ಆಗೊಲ್ಲ ಅಂದ್ರೆ ನಿನ್ನನ್ನು ಯಾಕೆ ಕರೀತೀವಿ. ನಿಂಗ್ಯಾಕೆ ತೊಂದ್ರೆ ಕೊಡುತ್ತೀವಿ. ನಿನ್ನ ಫಾದರ್ ಇಲ್ಲೇ ಬೆಂಗಳೂರಲ್ಲಿ ಇರಲಿ. ನೀನು ಕನ್ವಿನ್ಸ್ ಮಾಡಿ ನಿನ್ನ ಪಾಡಿಗೆ ನೀನು ಬಾಂಬೆಗೆ ಬಾ.. ಎಲ್ಲರೂ 15 ಜನ ಆಗ್ಬಿಟ್ಟು ಎಲ್ಲಾ ಹೊರಟಾಗ ನಿನ್ನ ಫಾದರ್ ಜೊತೆಗೆ ಬಂದು ರಾಜೀನಾಮೆ ಕೊಡುವುದು ಅಷ್ಟೇ ತಾನೇ.. ಬಾಂಬೆಗೂ ನಿಮ್ಮ ಫಾದರ್ ಬೆರಬೇಕು ಅಂತಿಲ್ಲ.

    ಶಿವನಗೌಡ: ನೀನು ಬಂದು ಕಣ್ಣಲ್ಲಿ ನೋಡ್ಕೊಂಡು ಬಾ.. ಉಳಿದಿದ್ದೆಲ್ಲಾ ನಾನು ಅಣ್ಣನ ಜೊತೆ ಮಾತನಾಡುತ್ತೇನೆ. ಅದೆಲ್ಲಾ ಓಕೆ ಮಾಡ್ಕೊಂಡುಮುಂದುವರಿಸು. ನೀನು ಧೈರ್ಯ ಮಾಡ್ಬೇಕು. ನಾವೆಲ್ಲ ಇದ್ದೀವಿ. ಜೀವನದಲ್ಲಿ ಒಂದು ಸಾರಿ ಧೈರ್ಯ ಮಾಡಬೇಕು. ಸಾಹೇಬ್ರು ಅದಾರೆ ನಾವು ಇದ್ದೀವಿ. ಸಾಹೇಬ್ರು ಮಾತು ಕೊಟ್ರೆ ತಪ್ಪೋದಿಲ್ಲ. ಅವರು ಅಂತ ಮಾತಿನ ಮನುಷ್ಯ ಎಂದು ಮನುಷ್ಯ ರಾಜಕಾರಣದಲ್ಲಿ ಸಿಗೋದಿಲ್ಲ.

    ಹೀಗೆ ಮಾತು ಮಂದುವರಿಯುತ್ತದೆ. ಒಟ್ಟಿನಲ್ಲಿ ಆಪರೇಷನ್ ಕಮದ ಸಂಪೂಣ್ ಆಡಿಯೋ ಔಟ್ ಆಗಿದ್ದು, ಇಂದು ಸದನದಲ್ಲಿ ಭಾರೀ ಗದ್ದಲವೇಳುವ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಚ್ಚು ಹುಚ್ಚಾಗಿ ಪ್ರಶ್ನೆ ಕೇಳ್ಬೇಡಿ – ಬಿಜೆಪಿ ಶಾಸಕ ಶಿವನಗೌಡ ನಾಯಕ ದರ್ಪ

    ಹುಚ್ಚು ಹುಚ್ಚಾಗಿ ಪ್ರಶ್ನೆ ಕೇಳ್ಬೇಡಿ – ಬಿಜೆಪಿ ಶಾಸಕ ಶಿವನಗೌಡ ನಾಯಕ ದರ್ಪ

    ರಾಯಚೂರು: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೋ ಕುರಿತಂತೆ ಪ್ರಶ್ನಿಸಿದಾಗ ದೇವದುರ್ಗ ಶಾಸಕ ಶಿವನಗೌಡ ನಾಯಕ ಅವರು ಮಾಧ್ಯಮದವರ ಮೇಲೆಯೇ ದರ್ಪ ತೋರಿದ್ದಾರೆ.

    ರಾಯಚೂರಿನ ದೇವದುರ್ಗದ ವೀರಗೋಟದಲ್ಲಿ ಸದನದಿಂದ ಹೊರಬಂದ ವಿಚಾರದ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ನಾನು ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವ ಸ್ಥಳ ಇದಲ್ಲ. ಹುಚ್ಚು ಹುಚ್ಚಾಗಿ ಪ್ರಶ್ನೆ ಕೇಳಬೇಡಿ. ಯಡಿಯೂರಪ್ಪನವರ ಬಗ್ಗೆ, ಆಡಿಯೋ ಬಗ್ಗೆ ನೀವು ಏನೇ ಕೇಳಿದರೂ ಪ್ರತಿಕ್ರಿಯೆ ನೀಡಲ್ಲ. ಇಷ್ಟಲಿಂಗ ಪೂಜೆ ಕಾರ್ಯಕ್ರಮದ ಬಗ್ಗೆ ಕೇಳಿ ಮಾತನಾಡುತ್ತೇನೆ ಎಂದು ಕಿಡಿಕಾರಿದ್ದಾರೆ.

    ಜಿಲ್ಲೆಯ ನಡೆಯುತ್ತಿರುವ ಬಹುದೊಡ್ಡ ಲಿಂಗಪೂಜೆ ಕಾರ್ಯಕ್ರಮ ಇದಾಗಿದೆ. ಇಡೀ ನಾಡಿನ ಜನರು ಸೇರಿ ಮಾಡುವಂತಹ ಕಾರ್ಯಕ್ರಮವಾಗಿದೆ. ಇದೂ ಒಂದು ತಾಲೂಕು ಮತ್ತು ಜಿಲ್ಲೆಗೆ ಸೀಮಿತವಾದ ಕಾರ್ಯಕ್ರಮವಲ್ಲ, ನಾನು ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷನಾಗಿದ್ದೇನೆ. ಕಾರ್ಯಕ್ರಮದ ತಯಾರಿ ನಿರಂತರವಾಗಿ ನಡೆದಿದೆ. ಇಡೀ ದೇಶದಲ್ಲಿ ದಾಖಲೆ ಮಾಡುವ ಕಾರ್ಯಕ್ರಮವಾಗಿದೆ ಎಂದರು.

    ಸದನ ಬಿಟ್ಟು ದೇವದುರ್ಗಕ್ಕೆ ಮರಳಿರುವ ಶಾಸಕ ಶಿವನಗೌಡ ನಾಯಕ, ರಾಯಚೂರಿನ ದೇವದುರ್ಗ ಪ್ರವಾಸಿಮಂದಿರದಲ್ಲಿ ಶಿವನಗೌಡ ಇಂದು ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಧಿಕಾರಿಗಳನ್ನ ಐಬಿಗೆ ಕರೆಸಿಕೊಂಡು ಕ್ಷೇತ್ರದ ಕೆಲಸದಲ್ಲಿ ಶಾಸಕರು ತೊಡಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಪ್ಪಾಗಿದೆ.. ಪ್ಲೀಸ್ ಬಿಟ್ಟುಬಿಡಿ – ಬಿಜೆಪಿ ಶಾಸಕ ಜೆಸಿ ಮಾಧುಸ್ವಾಮಿ ಮನವಿ

    ತಪ್ಪಾಗಿದೆ.. ಪ್ಲೀಸ್ ಬಿಟ್ಟುಬಿಡಿ – ಬಿಜೆಪಿ ಶಾಸಕ ಜೆಸಿ ಮಾಧುಸ್ವಾಮಿ ಮನವಿ

    ಬೆಂಗಳೂರು: ಬಿಜೆಪಿ ಆಪರೇಷನ್ ಕಮಲ ಮಾಡಿದೆ ಎನ್ನಲಾದ ಆಡಿಯೋ ಪ್ರಕರಣ ಇಂದು ಕೂಡ ವಿಧಾಸಭಾ ಕಲಾಪದಲ್ಲಿ ಸದ್ದು ಮಾಡಿದ್ದು, ವಿಶೇಷ ತನಿಖಾ ತಂಡ(ಎಸ್‍ಐಟಿ) ತನಿಖೆಗೆ ಒಪ್ಪಿಸಬೇಡಿ. ನಮ್ಮಿಂದ ತಪ್ಪಾಗಿದೆ. ದಯವಿಟ್ಟು ಕ್ಷಮಿಸಿ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ವಿನಂತಿ ಮಾಡಿಕೊಂಡಿದ್ದಾರೆ.

    ನಮ್ಮಿಂದ ತಪ್ಪಾಗಿದೆ. ಪ್ಲೀಸ್ ಬಿಟ್ಟುಬಿಡಿ. ಎಸ್‍ಐಟಿ ತನಿಖೆ ಬೇಡವೇ ಬೇಡ ಎಂದು ಹೇಳುವ ಮೂಲಕ ವಿಧಾನಸಭಾ ಕಲಾಪದಲ್ಲಿ ಬಿಜೆಪಿ ನಾಯಕರು ಪದೇ ಪದೇ ತಪ್ಪಾಗಿದೆ ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನಿಮ್ಮ ಗೆಳೆಯನಾಗಿ ನಾನು ವಿನಂತಿ ಮಾಡುತ್ತೇನೆ. ನಿಮ್ಮ ಹಿತೈಷಿಯಾಗಿ ಹೇಳುತ್ತಿದ್ದೇನೆ. ದಯಮಾಡಿ ನಿಲ್ಲಿಸಿ. ನಮ್ಮ ತಪ್ಪಾಗಿದೆ ಎಂದು ಒಪ್ಪಿಕೊಳ್ಳುತ್ತೇವೆ. ಹೀಗಾಗಿ ತಮ್ಮ ನಿರ್ಧಾರ ಮರುಪರಿಶೀಲಿಸಿ ಎಂದು ಮಾಧುಸ್ವಾಮಿ ಅವರು ಬಿಎಸ್‍ವೈ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಸೋಮವಾರದ ಕಲಾಪದಲ್ಲಿ ಭಾರೀ ಚರ್ಚೆಯ ಬಳಿಕ ಸ್ಪೀಕರ್ ರಮೇಶ್ ಕುಮಾರ್ ಅವರು ಈ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸುವಂತೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರಿಗೆ ಸೂಚನೆ ನೀಡಿದ್ದರು. ಈ ಬೆನ್ನಲ್ಲೇ ಬಿಜೆಪಿ ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಯಾವುದೇ ಕಾರಣಕ್ಕೂ ಎಸ್‍ಐಟಿ ತನಿಖೆಗೆ ಒಪ್ಪಿಸಬೇಡಿ ಎಂದು ಶಾಸಕ ಮಾಧುಸ್ವಾಮಿಯವರು ಆಗ್ರಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಡಿಯೋ ಟೇಪ್ ಕೇಸ್ – ರಾಷ್ಟ್ರಪತಿಗಳಿಗೆ ದೂರು ನೀಡಲು ಕಾಂಗ್ರೆಸ್ ತೀರ್ಮಾನ

    ಆಡಿಯೋ ಟೇಪ್ ಕೇಸ್ – ರಾಷ್ಟ್ರಪತಿಗಳಿಗೆ ದೂರು ನೀಡಲು ಕಾಂಗ್ರೆಸ್ ತೀರ್ಮಾನ

    ಬೆಂಗಳೂರು: ಬಿಜೆಪಿ ಆಪರೇಷನ್ ಕಮಲ ಮಾಡಿದೆ ಎನ್ನಲಾದ ಆಡಿಯೋವೊಂದನ್ನು ಎಚ್‍ಡಿ ಕುಮಾರಸ್ವಾಮಿ ಅವರು ರಾಜ್ಯ ಬಜೆಟ್ ದಿನದಂದು ಬಿಡುಗಡೆಗೊಳಿಸಿದ್ದು, ಇದೀಗ ಬಿಜೆಪಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ.

    ಹೌದು. ಆಡಿಯೋ ಪ್ರಕರಣ ಸಂಬಂಧ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮತ್ತಷ್ಟು ಡ್ಯಾಮೇಜ್ ಮಾಡಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಬಿಎಸ್‍ವೈ ಮತ್ತು ಬಿಜೆಪಿ ವಿರುದ್ಧ ರಾಷ್ಟ್ರಪತಿಗಳಿಗೆ ಸಾಕ್ಷ್ಯ ಸಮೇತ ದೂರು ನೀಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಶಾಸಕರ ಖರೀದಿ ಹಾಗೂ ಸಾಂವಿಧಾನಿಕ ಹುದ್ದೆಗಳಲ್ಲಿರುವವರ ಹೆಸರು ಬಳಕೆ ಮಾಡಿದ ಹಿನ್ನೆಲೆಯಲ್ಲಿ ಬಿಎಸ್‍ವೈ ಆಡಿಯೋ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಲು ತಯಾರಿ ನಡೆಸಲಾಗಿದೆ. ಅಲ್ಲದೇ ಪ್ರಕರಣ ಸಂಬಂಧ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಧ್ಯಪ್ರವೇಶ ಮಾಡುವಂತೆ ಕಾಂಗ್ರೆಸ್ ನಿಯೋಗ ಮನವಿ ಮಾಡಿಕೊಳ್ಳಲಿದೆ ಎನ್ನಲಾಗಿದೆ.

    ರಾಷ್ಟ್ರಪತಿಗಳಿಗೆ ಆಡಿಯೋ ಕಂಪ್ಲೆಂಟ್ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಗಂಭೀರ ಚರ್ಚೆಯಾಗುತ್ತಿದ್ದು, ನಾಳೆ ಸಂಸತ್ ಅಧಿವೇಶನ ಮುಗಿದ ಕೂಡಲೇ ರಾಷ್ಟ್ರಪತಿಗಳಿಗೆ ದೂರು ನೀಡುವ ಸಾಧ್ಯತೆಗಳಿವೆ. ಸೋಮವಾರ ಲೋಕಸಭೆಯಲ್ಲಿಯೂ ಕೂಡ ದೋಸ್ತಿಗಳು ಬಿಎಸ್‍ವೈ ಮತ್ತು ಬಿಜೆಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಎಸ್‍ವೈಗೆ ಆಪರೇಷನ್ ಆಡಿಯೋ ಕಂಟಕ- ಸಿಕ್ಕ ಅವಕಾಶ ಬಳಸಿಕೊಳ್ಳಲು ದೋಸ್ತಿಗಳು ಪ್ಲಾನ್

    ಬಿಎಸ್‍ವೈಗೆ ಆಪರೇಷನ್ ಆಡಿಯೋ ಕಂಟಕ- ಸಿಕ್ಕ ಅವಕಾಶ ಬಳಸಿಕೊಳ್ಳಲು ದೋಸ್ತಿಗಳು ಪ್ಲಾನ್

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಎಸ್ ಐಟಿ ತನಿಖೆಗೆ ಪ್ರಕ್ರಿಯೆ ಶುರು ಮಾಡಿದೆ.

    ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಯಾರನ್ನ ಎಸ್ ಐಟಿ ಮುಖ್ಯಸ್ಥರನ್ನಾಗಿ ಮಾಡಬೇಕು ಅನ್ನೋ ಚರ್ಚೆ ಯಲ್ಲಿ ತೊಡಗಿದ್ದಾರೆ ಎನ್ನಲಾಗಿದ್ದು, ಅಲೋಕ್ ಕುಮಾರ್ ಅವರನ್ನೇ ಎಸ್ ಐಟಿಗೆ ಮುಖ್ಯಸ್ಥರನ್ನಾಗಿ ಮಾಡಲು ಕುಮಾರಸ್ವಾಮಿ ಒಲವು ತೋರಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

    ಪ್ರಕರಣ ಸಂಬಂಧ ಯಡಿಯೂರಪ್ಪ ಅವರನ್ನು ಅರೆಸ್ಟ್ ಮಾಡಲು ಸಾಧ್ಯವೇ ಅನ್ನೋದರ ಬಗ್ಗೆಯೂ ಚರ್ಚೆಯಾಗುತ್ತಿದೆ ಎನ್ನಲಾಗುತ್ತಿದ್ದು, ಅಧಿವೇಶನದಲ್ಲಿ ಮಾತನಾಡಿರೋ ಆಡಿಯೋವನ್ನೇ ವಾಯ್ಸ್ ಟೆಸ್ಟ್ ಗೆ ಪಡೆಯೋ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಈಗಾಗಲೇ ರಾಜ್ಯ ಅಡ್ವೊಕೇಟ್ ಜನರಲ್ ಜೊತೆ ಒಂದು ಸುತ್ತು ಮಾತಾನಾಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ತನಿಖೆಯಿಂದ ಓಡಿ ಹೋಗುತ್ತಿಲ್ಲ – ಕೊನೆಗೂ ಮೌನ ಮುರಿದ ಬಿಎಸ್‍ವೈ

    ಒಂದು ವೇಳೆ ಬಂಧಿಸಿದ್ರೆ ಮುಂದೇನಾಗಬಹುದು ಅನ್ನೋ ಚರ್ಚೆಯಲ್ಲಿ ತೊಡಗಿರೋ ಕುಮಾರಸ್ವಾಮಿ, ಕೇಂದ್ರದಲ್ಲಿ ರಾಜಿಕೀಯ ನಾಯಕರ ವಿರುದ್ಧ ಮೋದಿ ಸೇಡು ತೀರಿಸಿಕೊಳ್ಳಬೇಕಾದ್ರೆ ನಾವ್ಯಾಕೆ ಸುಮ್ಮನಿರಬೇಕು. ನಮ್ಮ ಶಕ್ತಿಯನ್ನು ತೋರಿಸೋಣ ಅನ್ನೋ ಮನೋದಾಟಿಯಲ್ಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಆಪರೇಷನ್ ಆಡಿಯೋ ಪ್ರಕರಣ – ಎಸ್‍ಐಟಿ ತನಿಖೆ ವಹಿಸಿಕೊಂಡರೆ ತನಿಖೆ ಹೇಗೆ ನಡೆಯುತ್ತೆ?

    ಯಡಿಯೂರಪ್ಪ ಅವರನ್ನು ಬಂಧಿಸಿದ್ರೆ ಆಪರೇಷನ್ ಕಮಲಕ್ಕೆ ಬ್ರೇಕ್ ಬೀಳಲಿದೆ. ಹೀಗಾಗಿ ಮುಂದೆ ಯಾವ ಶಾಸಕರು ಕೂಡ ಬಿಜೆಪಿ ಜೊತೆ ಹೋಗಲು ಇಷ್ಟಪಡುವುದಿಲ್ಲ. ಯಡಿಯೂರಪ್ಪ ಬಂಧನವಾದ್ರೆ ಅವರೂ ಸಹ ಮಾನಸಿಕವಾಗಿ ಕುಗ್ಗಿ ಹೋಗಲಿದ್ದಾರೆ. ಇದರಿಂದ ಅವರು ಸಹ ಆಪರೇಷನ್ ಕಮಲಕ್ಕೆ ಮತ್ತೆ ಕೈ ಹಾಕೋ ಸಾಧ್ಯತೆ ಕಡಿಮೆ ಇದೆ. ಇದರ ಜೊತೆಗೆ ಮಾನಸಿಕವಾಗಿ ನೊಂದ ಯಡಿಯೂರಪ್ಪ ಎಂ.ಪಿ ಎಲೆಕ್ಷನ್ ನಲ್ಲೂ ಪ್ರಚಾರದಿಂದ ದೂರ ಉಳಿಯುವ ಸಾಧ್ಯತೆಗಳಿವೆ. ಈ ಎಲ್ಲಾ ಬೆಳವಣಿಗೆಗಳಿಂದ ದೋಸ್ತಿ ಸರ್ಕಾರಕ್ಕೆ ಅನುಕೂಲವಾಗಲಿದೆ. ಈ ಮೂಲಕ 5 ವರ್ಷ ಸರ್ಕಾರ ಸುಭದ್ರವಾಗಲಿದೆ ಅಂತ ಸಿಎಂ ತಮ್ಮ ಆಪ್ತರ ಬಳಿ ಚರ್ಚೆ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತನಿಖೆಯನ್ನು ಎಸ್‍ಐಟಿಗೆ ಒಪ್ಪಿಸಬೇಡಿ- ಬಿಜೆಪಿ ಶಾಸಕ ಮಾಧುಸ್ವಾಮಿ

    ತನಿಖೆಯನ್ನು ಎಸ್‍ಐಟಿಗೆ ಒಪ್ಪಿಸಬೇಡಿ- ಬಿಜೆಪಿ ಶಾಸಕ ಮಾಧುಸ್ವಾಮಿ

    ಬೆಂಗಳೂರು: ಆಪರೇಷನ್ ಆಡಿಯೋ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸಬೇಡಿ ಎಂದು ಶಾಸಕ ಮಾಧುಸ್ವಾಮಿ ಆಗ್ರಹಿಸಿದ್ದಾರೆ.

    ಕಲಾಪದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತನಿಖೆ ಶಾಸನ ಸಭೆಯ ಅಧ್ಯಕ್ಷರಿಂದ ನಡೆಯಬೇಕು ಎಂದು ನಾವು ಬಹಳ ಸ್ಪಷ್ಟವಾಗಿಯೇ ಹೇಳಿದ್ದೇವೆ. ಅವರು ನೇಮಕ ಮಾಡಬಹುದಾದ ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ನಮ್ಮ ಅಪೇಕ್ಷೆಯಾಗಿದೆ. ಯಾಕಂದ್ರೆ ಈ ಎಲ್ಲಾ ಹಗರಣಗಳ ರೂವಾರಿ ಮುಖ್ಯಮಂತ್ರಿಗಳಾಗಿದ್ದಾರೆ.

    ಅಕಸ್ಮಾತ್ ಯಾರೋ ಒಬ್ಬರು ಸದಸ್ಯ ಸ್ಪೀಕರ್ ಬಗ್ಗೆ ಮಾತನಾಡಿದ್ರೂ ಕೂಡ ಅದನ್ನು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರು ಸಾರ್ವಜನಿಕವಾಗಿ ಚರ್ಚೆಗೆ ಬರುವಂತಹ ಸ್ಥಿತಿಗೆ ತಂದಿದ್ದಾರೆ. ಆ ಮಾತಿಗೆ ಇಷ್ಟೊಂದು ಪ್ರಚಾರ ಕೊಡದೇ ಹೋಗಿದ್ರೆ ಇಂದು ರಮೇಶ್ ಕುಮಾರ್ ಅವರು ಈ ರೀತಿ ಮಾತನಾಡಬೇಕಾದ ಅಗತ್ಯ ಇರಲಿಲ್ಲ ಅಂದ್ರು.

    ಯಾರೋ ಖಾಸಗಿಯಾಗಿ ಮಾತನಾಡಿದ್ದನ್ನು ಪ್ರಚಾರ ಕೊಟ್ಟು ಶಾಸನ ಸಭಾ ಅಧ್ಯಕ್ಷರ ಸ್ಥಾನಕ್ಕೆ ಕಳಂಕ ಬಂತು ಎಂದು ಹೇಳಿ ಅವರು ಮನಸ್ಸಿಗೆ ತೆಗೆದುಕೊಂಡಿದ್ದಾರೆ. ಇವರಿಗೆ ಗೊತ್ತಿತ್ತಲ್ವ ಅವರು ಬಹಳ ಸೂಕ್ಷ್ಮವಾದ ವ್ಯಕ್ತಿಯಾಗಿದ್ದು, ಅವರು ಇಂತಹ ವಿಚಾರಗಳನ್ನು ಮನಸ್ಸಿಗೆ ತೆಗೆದುಕೊಳ್ಳುತ್ತಾರೆ ಎಂದು ಕುಮಾರಸ್ವಾಮಿಗೆ ಗೊತ್ತಿದ್ದು ಅವರು ಅದನ್ನು ಸಾರ್ವಜನಿಕವಾಗಿ ಮಾತಾಡಿ ಇಷ್ಟೊಂದು ದೊಡ್ಡ ಸುದ್ದಿ ಮಾಡುವ ಅವಶ್ಯಕತೆ ಇರಲಿಲ್ಲ. ಚರ್ಚೆಯನ್ನು ಮೊದಲನೇ ಪಾರ್ಟ್‍ಗೆ ನಿಲ್ಲಬಹುದಾಗಿತ್ತು. ತನಿಖೆ ಶುರುವಾದಾಗ ಇದನ್ನು ಹೇಳಬಹುದಾಗಿತ್ತು. ಅವರ ಅಧೀನದಲ್ಲಿರುವ ಇಲಾಖೆಗಳು, ತನಿಖಾ ಸಂಸ್ಥೆಗಳಿಂದ ನ್ಯಾಯವಾದ ತನಿಖೆ ಆಗುತ್ತೆ ಎಂದು ನಮಗೆ ವಿಶ್ವಾಸ ಇಲ್ಲ. ಹೀಗಾಗಿ ಮರುಪರಿಶೀಲನೆ ಮಾಡಿ ಎಂದು ಸದನದಲ್ಲಿ ಸ್ಪೀಕರ್ ಅವರನ್ನು ಕೇಳಿಕೊಳ್ಳುವುದಾಗಿ ಹೇಳಿದ್ದಾರೆ.

    ಸ್ಪೀಕರ್ ಬಗ್ಗೆ ಮಾತನಾಡಿರುವವರನ್ನು ಬಿಟ್ಟು ಬಿಡಿ ಎಂದು ಹೇಳುವ ಸ್ಥಿತಿಯಲ್ಲಿ ನಾವಿಲ್ಲ. ಆದ್ರೆ ಅವರಿಗೆ ಅವಕಾಶ ಕೊಡಬೇಡಿ ಎಂದು ಅವರು ಮನವಿ ಮಾಡಿಕೊಂಡರು. ಇದೇ ವೇಳೆ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಎಲ್ಲಾ ಶಾಸಕರು ಎಸ್‍ಐಟಿ ತನಿಖೆಯನ್ನು ವಿರೋಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕರೀರಿ ಆ ಮಾಧುಸ್ವಾಮಿನ- ಶಾಸಕರ ವಿರುದ್ಧ ಬಿಎಸ್‍ವೈ ಕೆಂಡಾಮಂಡಲ

    ಕರೀರಿ ಆ ಮಾಧುಸ್ವಾಮಿನ- ಶಾಸಕರ ವಿರುದ್ಧ ಬಿಎಸ್‍ವೈ ಕೆಂಡಾಮಂಡಲ

    ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಆಪರೇಷನ್ ಆಡಿಯೋ ಸಾಕಷ್ಟು ಗದ್ದಲವೆಬ್ಬಿಸಿದ್ದು, ಕಲಾಪ ಮುಕ್ತಾಯದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕೆಂಡಾಮಂಡಲರಾಗಿದ್ದಾರೆ.

    ಕಲಾಪ ಮುಗಿಸಿ ಹೊರಬಂದ ನಂತರ ವಿರೋಧ ಪಕ್ಷದ ಮೊಗಸಾಲೆಯಲ್ಲಿ ಕುಳಿತಿದ್ದ ಶಾಸಕರ ಬಳಿ ಬಂದ ಬಿಎಸ್‍ವೈ ಬಂದು ಕರೀರಿ ಆ ಮಾಧುಸ್ವಾಮಿನ ಎಂದು ಗರಂ ಆಗಿದ್ದಾರೆ. ಮಾತನಾಡಲು ಪ್ಲಾನ್ ಇರಲಿಲ್ಲ ಎಂಬುದು ಅವರ ಅಸಮಾಧಾನ ಹಾಗೂ ಸಿಟ್ಟಿಗೆ ಕಾರಣವಾಗಿದೆ. ಪ್ಲಾನ್ ಮಾಡಿಲ್ಲ, ಏನೂ ಇಲ್ಲ. ಒಬ್ಬೊಬ್ಬರೂ ಒಂದೊಂದು ರೀತಿ ಮಾತನಾಡಿದ್ರೆ ಹೇಗೆ. ಎಂದು ಬಿಎಸ್‍ವೈ ಸಿಡಿಮಿಡಿಗೊಂಡಿದ್ದಾರೆ.

    ಕಲಾಪ ಮುಂದೂಡುತ್ತಿದ್ದಂತೆಯೇ ತನ್ನ ಶಾಸಕರನ್ನು ಎಲ್ಲರೂ ಬನ್ನಿ ಎಂದು ಹೇಳಿ ಅಲ್ಲೇ ಇದ್ದ ಕಚೇರಿಗೆ ಶಾಸಕರನ್ನು ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಆಪರೇಷನ್ ಆಡಿಯೋ ಸದನದಲ್ಲಿ ನಡೆದಿಲ್ಲ: ಬಿಜೆಪಿ ಶಾಸಕ ಮಾಧುಸ್ವಾಮಿ

    ಮಾಧುಸ್ವಾಮಿ ಹೇಳಿದ್ದೇನು..?
    ಆಡಿಯೋ ವಿಚಾರವನ್ನು ಅಷ್ಟೊಂದು ಗಂಭಿರವಾಗಿ ತೆಗೆದುಕೊಳ್ಳಬೇಡಿ. ಯಾಕಂದ್ರೆ ಇದು ಸದನದ ಹೊರಗಡೆ ನಡೆದ ಘಟನೆಯಾಗಿದೆ. ಹೊರಗಡೆ ಎಲ್ಲರ ಬಗ್ಗೆ ಮಾತನಾಡುತ್ತಾರೆ. ಅದರ ಆಡಿಯೋಗಳು ನನ್ನಲ್ಲಿದೆ. ನೀವು ಅವಕಾಶ ಕೊಟ್ಟರೇ ಈಗಲೇ ಬಹಿರಂಗಪಡಿಸುತ್ತೇನೆ. ಹೀಗಾಗಿ ಇಷ್ಟು ಸಣ್ಣ ವಿಚಾರವನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದು ಶಾಸಕ ಮಾಧುಸ್ವಾಮಿ ಹೇಳಿದ್ದರು.

    ಒಟ್ಟಿನಲ್ಲಿ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ರಮೇಶ್ ಕುಮಾರ್ ಅವರು ಎಸ್‍ಐಟಿ ತನಿಖೆಗೆ ಸೂಚನೆ ನೀಡಿದ್ದು, 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv