ರಾಯಚೂರು: ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಪಕ್ಷಾಂತರ ಪರ್ವ ನಡೆದಿದೆ. ಪ್ರತಿನಿತ್ಯ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ನಿರಂತರ ನಡೆಯುತ್ತಿದೆ. ಬಿಜೆಪಿ ಬಿಡಲು ಮುಂದಾಗಿರುವ ಕಾರ್ಯಕರ್ತರ ಮನವೊಲಿಸಲು ಶಾಸಕ ಕೆ.ಶಿವನಗೌಡ ನಾಯ್ಕ್ (K.Shivanagouda Naik) ನಯವಾಗಿ ಬೆದರಿಕೆ (Threat) ಹಾಕಿದ್ದಾರೆ ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ.
ಬಿಜೆಪಿಗೆ ಬರೀ ರಾಜೀನಾಮೆ ಅಷ್ಟೇ ನೀಡಿದ್ದೀಯಾ. ಬೇರೆ ಪಾರ್ಟಿಗೆ ಇನ್ನೂ ಸೇರಿಲ್ಲ. ನಮ್ಮಲ್ಲಿಯೇ ಉಳಿದುಕೊಳ್ಳಿ. ಒಂದು ತಪ್ಪು ಮಾಡಿದ್ದೀರಿ, ಎರಡನೇ ತಪ್ಪು ಮಾಡಬೇಡಿ. ನಿಮಗೆ ಒಳ್ಳೆಯದಾಗುವುದಿಲ್ಲ. ಹಿಂದೆಯೂ ಒಳ್ಳೆಯದಾಗಿಲ್ಲ ಅಂದರೆ ಮುಂದೆಯೂ ನಿಮಗೆ ಒಳ್ಳೆಯದಾಗುವುದಿಲ್ಲ. ಆ ಕೆಲಸ ಮಾಡಬೇಡಿ. ಇಲ್ಲೇ ಇದ್ದು ಏನಾದರೂ ಸರಿ ಮಾಡಿಕೊಂಡು ಹೋಗೋಣ ಎಂದು ಮನವೊಲಿಸಿದ್ದಾರೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಸೋಲಿಸಲು ಜಿದ್ದಿಗೆ ಬಿದ್ದಿರುವ ಬಿಜೆಪಿಗೆ ಅಭ್ಯರ್ಥಿ ಆಯ್ಕೆಯ ಟೆನ್ಶನ್
ನಾನು ನಿಮಗಾಗಿ ಕಾಯುವುದಾ ಬೇಡವಾ? ನಮ್ಮನ್ನು ಬಿಟ್ಟು ಮುಂದಕ್ಕೆ ಹೋಗ್ತೀರಾ? ನಮ್ಮನ್ನು ಬಿಟ್ಟು ಹೋದ ಬಹಳ ಮಂದಿ ಏನೇನಾಗಿದ್ದಾರೆ ನೋಡಿಕೊಳ್ಳಿ ಎಂದು ನಯವಾಗಿ ಬೆದರಿಕೆ ಹಾಕಿದ್ದಾರೆ. ಎಲ್ಲಾ ಪಕ್ಷಗಳಲ್ಲಿ ಹೀಗೆ ಇರುತ್ತವೆ. ಆ ತಪ್ಪು ನೀವೂ ಮಾಡಬೇಡಿ ಎಂದು ಶಾಸಕ ಕೆ.ಶಿವನಗೌಡ ನಾಯ್ಕ್ ಕಾರ್ಯಕರ್ತನ ಜೊತೆ ಮಾತನಾಡಿದ್ದಾರೆ. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತ ತಲುಪಿದ ಹಾಸನ ಟಿಕೆಟ್ ದಂಗಲ್ – ಇಂದು ಹೆಚ್‌ಡಿಕೆ, ರೇವಣ್ಣ ಸಂಧಾನ
ಹಾಸನ: ಚುನಾವಣೆ (Election) ಹೊತ್ತಲ್ಲೇ ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D.Revanna) ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ (K.M.Shivalinge Gowda) ನಡುವೆ ನಡೆದಿರುವ ಮಾತುಕತೆಯ ಆಡಿಯೋ (Audio) ಇದೀಗ ವೈರಲ್ (Viral) ಆಗಿದೆ.
ರೇವಣ್ಣ: ಏನ್ ಶಿವಲಿಂಗಣ್ಣ, ನಾನ್ ಹೇಳೋದು.. ಅವು, ಇವು ಆಡ್ತವೆ ಅಂತ ನೀನು ಆಡಲು ಹೋಗಬೇಡ. ಯಾವತ್ತಾದರೂ ನಾನು ನಿನಗೆ ಕೆಟ್ಟದು ಮಾಡಿದ್ದೀನಾ? ಕೆಎಂಶಿ: ನಾನು ಯಾರಿಗಾದರೂ ಅನ್ಯಾಯ ಮಾಡಿದ್ದೀನಾ ಅಣ್ಣಾ? ರೇವಣ್ಣ: ನಾನೆಲ್ಲಿ ಹಾಗಂತ ಹೇಳಿದ್ದೀನಿ? ಕೆಎಂಶಿ: ನಾನು ರಾಜಿ ಮಾಡ್ಕತಿನಿ ತಡಿ ಅಂತ ಹೇಳಿದ್ದೀನಲ್ಲಣ್ಣ. ಅಷ್ಟರಲ್ಲಿ ನನ್ನ ಕರೆಯದೆ ಸಭೆ ಮಾಡಿದ್ದೀರಾ? ರೇವಣ್ಣ: ನನಗೆ ಇರೋದು ಇನ್ನಾ 39 ದಿನ. ನಿನ್ನ ಹತ್ರಲೇ ಬರ್ತರೆ, ನಿಂದೆ ವೈರ್‌ಲೆಸ್ ಆಗ್ತಾರೆ. ಕೆಎಂಶಿ: ಯಾವುದಾದರೂ ವೈರ್‌ಲೆಸ್ ಹಾಕಲಿ. ಅವರಂಗೆ ನನಗೆ ಎಡಿಟ್ ಮಾಡಲು ಆಗಲ್ಲ. ರೇವಣ್ಣ: ನಾನು ಅವತ್ತಿಂದ ಹೇಳಿಲ್ವಾ? ಕುಮಾರಣ್ಣ, ನಾನು ಗೆಲ್ಲಿಸಿಕೊಂಡು ಬರ್ತಿವಿ ಅಂತಾ? ಕೆಎಂಶಿ: ರೇವಣ್ಣ ಹತ್ರ ಹೋಗು ಡಿಸಿಸಿ ಬ್ಯಾಂಕ್ ವಿಚಾರಕ್ಕೆ ಅಂತ ಹೇಳಿದ್ದೀನಿ. ಎರಡು ವರ್ಷದ ಹಿಂದೇನೇ ಅವನ್ಯಾವನೋ ಬರ್ತನೆ. ಕಾಂಗ್ರೆಸ್‌ನಲ್ಲಿ ನಿಂತರೆ ನಾನು ಗೆಲ್ತೀನಿ ಅಂತಾ ಹೇಳಿದ್ದೀನಿ. ಎರಡು ವರ್ಷ ಆಗಿದೆ. ರೇವಣ್ಣ: ಅದು ನನಗೆ ಗೊತ್ತಿಲ್ಲ. ಕೆಎಂಶಿ: ಈ ಮಾತ್ರೆ ಅನ್ನೋನು ಬಂದಿದ್ದನಲ್ಲಾ? ರೇವಣ್ಣ: ಸ್ವಲ್ಪ ತಾಳ್ಮೆಯಿಂದ ಕೇಳ್ಕಳೋ. ನನ್ನ ನಿನ್ನ ಸಂಬಂಧ ಹದಿನೆಂಟು ವರ್ಷದ್ದು. ಶಿವಲಿಂಗೇಗೌಡಗೆ ತೊಂದರೆ ಆಗಬಾರದು ಅಂತಾ ನನ್ನ ಭಾವನೆ ಇದೆ. ಅದರ ಮೇಲೆ ನಿನ್ನಿಷ್ಟ. ಅವತ್ತು ನೀನು ಏನು ಹೇಳ್ದೆ. ಯಾವುದೇ ಕಾರಣಕ್ಕೂ ನಾನು ಅವನ ಎದುರು ಸೋಲುವುದಾರೆ ನಿಲ್ಲಲ್ಲ. ಯಾವನಾದ್ರು ನಿಲ್ಸಣ ಅಂದೆ. ಕೆಎಂಶಿ: ನಾನು ಈಗಲೂ ನಿಲ್ತೀನಿ ಅಂತ ಎಲ್ಲಿ ಹೇಳಿದ್ದೀನಿ ಹೇಳಿ? ರೇವಣ್ಣ: ನೋಡಯ್ಯ ನಿನ್ನ ಹಣೇಲಿ ಬರೆದಿರೋದು ಯಾರು ತಪ್ಸಕೆ ಆಗಲ್ಲ. ಕೆಎಂಶಿ: ನನ್ನ ಹಣೆಗಿಣೆ ಪರೀಕ್ಷೆ ಇಲ್ಲೆ ಜನರ ಎದುರೇ ಮಾಡ್ತೀನಿ. ಜನರೇ ನನ್ನ ಹಣೆ ಪರೀಕ್ಷೆ ಮಾಡೋರು. ನಾನು ಐವತ್ತು ಸಾವಿರದಲ್ಲಿ ಗೆಲ್ತೀನಿ ಅಂತಾ ಈಗ ಹೇಳಿದ್ದಲ್ಲ. ಎರಡು ವರ್ಷ ಆಯಿತೆ. ಅವನ್ಯಾವನೋ ಚೀಟ್ ಮಾಡ್ಕಂಡು ಇಟ್ಕಂಡು ಈಗ ಹಾಕವ್ನೆ. ಯಡಿಯೂರಪ್ಪನ ಸಿ.ಡಿ ಮಾಡಿ ಬಂದವನು ಇಲ್ಲೂ ಮಾಡ್ತವ್ನೆ ಸಿ.ಡಿ. ಕೆಎಂಶಿ: ಡಿಸಿಸಿ ಬ್ಯಾಂಕ್ ನಮ್ಮ ಹತ್ರ ಇಲ್ಲ. ರೇವಣ್ಣ ಅವರದ್ದು ಅವರ ಹತ್ರ ಹೋಗು ಅಂದಿದ್ದೀನಿ. ಆ ನನ್ಮಗ ರೇವಣ್ಣ ಹತ್ರಕ್ಕೆ ಹೋಗು ಅಂತಾ ಹೇಳಿದ್ನಾ. ಎಡಿಟ್ ಮಾಡಿ ಹಾಕವ್ನೆ. ರೇವಣ್ಣ: ಲೋನ್‌ಗೂ ನನಗೂ ಸಂಬಂಧವಿಲ್ಲ. ಕೆಎಂಶಿ: ನನ್ನ ಜೀವಮಾನ ಇರೋವರೆಗೂ ನಿಮ್ಮನ್ನೆಲ್ಲ ಏಕವಚನದಲ್ಲಿ ಮಾತನಾಡಲ್ಲ. ಅಂತಹ ಥರ್ಡ್ ಕ್ಲಾಸ್ ಅಲ್ಲ ನಾನು. ಅವನು ಇಂತಹವು ಎಡಿಟ್ ಮಾಡಿ ಐವತ್ತು ಸಿ.ಡಿ, ವ್ಯಾಟ್ಸಪ್ ಬಿಟ್ಟ ನನ್ನ ಮೇಲೆ ನಾನು ಮಾತಾಡಿದಂಗೆ ಮಿಮಿಕ್ರಿ ಮಾಡ್ತಾನೆ. ನಾನು ಮಾತಾಡಿದಂಗೆ ಮಾತಾಡುಸ್ತಾನೆ. ಏನು ಮಾಡೋಣ ಅಂಥವು ಏಸು ಎಟ್ಕಂಡವ್ನೋ ಇನ್ನುವೇ ಯಾವಾಗ ಯಾವಾಗ ಬಿಡಕೆ. ರೇವಣ್ಣ: ನಾನು ಹೇಳೋದು ಸುಮ್ನೆ. ಯಾವನೋ, ಯಾವನೋ ಹೇಳ್ತನೆ ಅಂತಾ ಕೇಳೋದು ಬೇಡ ಕಣೋ. ಕೆಎಂಶಿ: ನಾನು ಯಾರ ಮಾತು ಕೇಳಿಲ್ಲ. ರೇವಣ್ಣ: ಮತ್ತೆ ಏನ್ ಮಾಡಣ ನಾನು. ಕೆಎಂಶಿ: ಒಂದು ಗುಂಪು ರಾಜಿ ಆಗಬೇಕು. ರೇವಣ್ಣ: ನೀನು ಏನು ಹೇಳ್ತಿಯಾ ಕೇಳ್ತಿನಿ, ನನಗೇನು. ಕೆಎಂಶಿ: ಆ ಗುಂಪು ರಾಜಿಯಾಗೋವರೆಗೆ, ನಾಳಿಕ್ಕೆ ಅರಸೀಕೆರೆ ತುಂಬಾ ಬಾವುಟ ಕಟ್ಟವ್ರೆ ಈಗೇನ್ ಮಾಡ್ತಿರಾ ಮಾಡಿ. ರೇವಣ್ಣ: ಅರಸೀಕೆರೆ ತುಂಬಾ ಬಾವುಟ ಕಟ್ಟಿದ್ರೆ, ನಾನು ಮೊನ್ನೆನೇ ಹೇಳಿ ಬಂದಿಲ್ವಾ. ಕೆಎಂಶಿ: ನೀವು ಹೇಳ ಬಂದವ್ರು, ಅಟ್‌ಲಿಸ್ಟ್ ಹದಿನೈದು ದಿನದೊಳಗೆ ಒಂದು ಸಭೆ ಮಾಡಬೇಕು. ಮಾಡದಿದ್ದರೆ ಮಾಡು ಇಲ್ಲ ಅಂದಿದ್ರೆ ಬೇರೆ ದಾರಿ ಮಾಡ್ಕತಿವಿ ಅಂತ ಹೇಳಿದ್ರೆ ನಾನು ಒಪ್ಕತಿದ್ದೆ.
ರೇವಣ್ಣ: ನಾಳೆ ಸಭೆ ರದ್ದು ಮಾಡನೇನಯ್ಯ. ಕೆಎಂಶಿ: ಅದೆಂಗೆ ಸಭೆ ರದ್ದು ಮಾಡಲು ಆಗುತ್ತೆ? ರೇವಣ್ಣ: ಇವತ್ತು ಹೇಳು, ಸಭೆ ರದ್ದು ಮಾಡಿ ಇನ್ನೂ ಹದಿನೈದು ದಿನದಲ್ಲಿ ಶಿವಲಿಂಗೇಗೌಡರೇ ಸಭೆ ಕರಿತರೆ ಅಂತ ಹೇಳಿ ಬಿಡ್ಲೇನಯ್ಯ. ಕೆಎಂಶಿ: ಇಲ್ಲಾ, ಅವೆಲ್ಲಾ ಆಗಲ್ಲ ಈಗ. ಬಂದು ಮಾಡ್ಕಂಡು ಹೋಗಿ. ನಾಳೆ ನಮ್ಮ ಮನೇಲಿ ಮದುವೆ. ಅದುನ್ನು ಗೊತ್ತಿಲ್ಲದಂಗೆ ಅವನು ಲೋಫರ್ ನನ್ಮಕ್ಕಳು ನಿಮಗೆ ಡೇಟ್ ಮಿಸ್ ಮಾಡಿ ಹೇಳಿದ್ದಾರೆ. ನಮ್ಮ ಸ್ವಂತ ಬಾಮೈದನ ಮದುವೆ. ರೇವಣ್ಣ: ನಾಳೆ ಸಭೆಲಿ ಏನು ಹೇಳಬೇಕು ಹೇಳಪ್ಪ. ಕೆಎಂಶಿ: ಏನಾದ್ರು ಹೇಳಿ. ಅವರ ಮನೇಲಿ ಮದುವೆ ಇದೆ, ಬರಕ್ಕಿಲ್ಲ ಅಂತ ಹೇಳಿ. ರೇವಣ್ಣ: ಅವರು ಬರಕ್ಕಾಗಲ್ಲ ಅವರು ಇಲ್ಲೇ ಇರ್ತಾರೆ ಅಂಥ ಹೇಳ್ಲಾ? ಕೆಎಂಶಿ: ಇರ್ತೀನಿ ಅಂತಾ ಪದ ಬೇಡ. ನಾನು ಇರ್ತೀನಿ, ಹೋಗ್ತೀನಿ ಅನ್ನೋದನ್ನ ನಿಮ್ಮ ಮನೆಗೆ ಬಂದು ಹೇಳ್ತೀನಿ. ದೊಡ್ಡವರಿಗೆ ಹೇಳ್ದಲೇ ನಾನು ಎಲ್ಲೂ ಹೋಗಲ್ಲ. ಎಲ್ಲಿಗೂ ಬರಲ್ಲ. ನನ್ನ ಜಡ್ಜ್ಮೆಂಟ್, ಅಸೆಸ್‌ಮೆಂಟ್ ಇದಿಯಲ್ಲಾ ಅದು ಯಾವತ್ತು ಸುಳ್ಳು ಆಗಲ್ಲ. ಈಗ ಏನಿಲ್ಲ ಕುರುಬರವೆಲ್ಲಾ 75% ಅವನಿಗೆ ಹೋಗ್ತವೆ. ನಮ್ಮ ಒಕ್ಕಲಿಗರವು ಅವನ್ಯಾರೋ ಅಶೋಕ ಅನ್ನವನಿಗೆ ಹೋಗ್ತಾವೆ. ಈ ಒಕ್ಕಲಿಗರವು 50%, 60% ಹೋಗ್ತವೆ. ಇಲ್ಲಿ ಕಾಂಗ್ರೆಸ್ ಬಂದ್ರು ಗೆಲ್ಲಕೆ ಏನು ಆಗಲ್ಲ. ನಾವೇನು ಅಷ್ಟು ದಡ್ಡರಲ್ಲ ರಾಜಕಾರಣದಲ್ಲಿ ಯಾವೋ ಗೊತ್ತಿಲ್ಲದವು ನಾಯಿ, ನರಿ, ಊರು ಗೊತ್ತಿಲ್ಲದವು ಬಂದು ಹೇಳ್ತಾರೆ ಅಂತ ಕೇಳಕೆ ಹೋಗ್ಬೇಡಿ. ರೇವಣ್ಣ: ಲೇ ದೇವ್ರಾಣೆ, ನನ್ನ ತಂದೆ ಮೇಲೆ ಆಣೆ ಮಾಡಿ ಹೇಳ್ತೀನಿ. ನಾನು ನಿನಗೆ ಬಿಡಬೇಕು ಅಂತಿಲ್ಲ. ನಿನ್ನೆನೂ ಟ್ರೈ ಮಾಡ್ದೆ, ನೀನು ಮೀಟಿಂಗ್‌ನಲ್ಲಿದ್ದೆ. ಕೆಎಂಶಿ: ನಾನು ನಿನ್ನೆ ಎಸ್ಟಿಮೇಟ್ ಕಮಿಟಿ ಮೀಟಿಂಗ್ ಇತ್ತಲ್ಲ, ಅಲ್ಲಿಗೆ ಹೋಗಿದ್ದೆ. ರೇವಣ್ಣ: ಶಿವಲಿಂಗಣ್ಣ ನನ್ನ ಜೊತೆ ಗೆಲ್ಲಿಸಿಕೊಳ್ಳಬೇಕು ಅಂತ ಅಷ್ಟೇ ಕಣೋ. ಕೆಎಂಶಿ: ಗೆಲ್ಲಿಸಿಕೊಳ್ಳಲು ಎಲ್ಲಾ ಕ್ಷೇತ್ರದಂತಲ್ಲಾ ಇದು. ರೇವಣ್ಣ: ನಾನು ನಿನ್ನ ಬಿಟ್ಟಿರಕೆ ಆಗಲ್ಲ ಕಣೋ ದಯಮಾಡಿ. ನೀನು ಏನಾದ್ರು ಅನ್ಕೋ ನಿನ್ನ ಬಿಟ್ಟಿರಲು ನನಗೆ ಆಗಲ್ಲ ಕಣೋ ದಯಮಾಡಿ. ನನ್ ಮಾತು ಕೇಳೋ ಆ ಜವರೇಗೌಡ ಅವರೆಲ್ಲ ಆಡಿಕೊಳ್ಳಂಗೆ ಆಗುತ್ತೆ ಕಣೋ ಶಿವಲಿಂಗಣ್ಣ. ಕೆಎಂಶಿ: ಜವರೇಗೌಡರು ಬೆನ್ನೆಲುಬು ಇಲ್ಲದ ರಾಜಕಾರಣಿ. ರೇವಣ್ಣ: ಯಾರು ಏನೇನ್ ಮಾಡಿದರೆ ಅಂತಾ ಎಲ್ಲಾ ನಿನಗೆ ಗೊತ್ತಿದೆಯಲ್ಲೋ ಶಿವಲಿಂಗಣ್ಣ. ಕೆಎಂಶಿ: ಎಲ್ಲಾ ನನಗೆ ಗೊತ್ತಿದೆ. ಗೊತ್ತಿರೋದಕ್ಕೆ ಎಲ್ಲರಿಗೂ ಒಂದೇ ಉತ್ತರ ನಂದು. ರೇವಣ್ಣ: ನಾನು ಹೇಳದು ನಿನ್ನ ಒಳ್ಳೆಯದಕ್ಕೋಸ್ಕರ. ನೀನೇ ಮಂತ್ರಿಯಾಗಯ್ಯ ಅಲ್ಲೇ ಘೋಷಣೆ ಮಾಡ್ತಿನಿ. ಕೆಎಂಶಿ: ಇನ್ನೂಂದು ನಾಲ್ಕೈದು ದಿನ ಕಾಯ್ದಿದ್ರೆ ಏನಾಗೋದು. ಮಂತ್ರಿ ತಗೊಂಡು ತಿಪ್ಪೆಗುಂಡಿಗೆ ಎಸಿರಿ ಯಾವ ನನ್ಮಗನಿಗೆ ಬೇಕು. ರೇವಣ್ಣ: ನನಗೆ ಯಾವನಿಗೆ ಮಂತ್ರಿ ಬೇಕಾಗಿದೆ. ಕೆಎಂಶಿ: ನಾವೇನ್ ಅಂತಹ ಥರ್ಡ್ ಕ್ಲಾಸ್ ನನ್ಮಕ್ಕಳಲ್ಲ. ಮಂತ್ರಿಗೆ ಅದಕ್ಕೆ ಇದಕ್ಕೆ ಆಸೆ ಪಡೋಕೆ. ರೇವಣ್ಣ: ಇನ್ನೂ ಒಂದು ಅರ್ಧಗಂಟೆ ಕುಮಾರಣ್ಣನ ಹತ್ರ ಮಾತಾಡಿ ನಿನ್ನ ಹತ್ರ ಮಾತಾಡ್ತಿನಿ ತಡಿ. ಕೆಎಂಶಿ: ಆಯ್ತು ಮಾತಾಡಣ. ಇದನ್ನೂ ಓದಿ: ಬಿಡಿಎದಿಂದ ಕರಗ ಮಂಟಪ ಅಭಿವೃದ್ಧಿಗೆ 6 ಕೋಟಿ ರೂ.: ಎಸ್.ಆರ್ ವಿಶ್ವನಾಥ್
ಮೈಸೂರು: ಐಎಎಸ್ (IAS) ಅಧಿಕಾರಿ ರೋಹಿಣಿ ಸಿಂಧೂರಿ (Rohini sindhuri) ವಿರುದ್ಧ ಜೆಡಿಎಸ್ ಶಾಸಕ ಸಾ.ರಾ ಮಹೇಶ್ (Sa Ra Mahesh) ಅವರಿಂದು 1 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಅಲ್ಲದೇ ನಾನು ಬೇಕಿದ್ದರೆ ರಾಜಕಾರಣ (Politics) ಬಿಡುತ್ತೇನೆಯೇ ಹೊರತು ಇಂತಹ ಗೋಮುಖಗಳ ಮುಖವಾಡ ಕಳಚುವುದನ್ನು ಬಿಡುವುದಿಲ್ಲ. ಕಷ್ಟಪಟ್ಟು ಬೆಳೆದ ನನಗೆ ತಮ್ಮ ತಪ್ಪು ಮುಚ್ಚಿಕೊಳ್ಳಲು ಕೆಸರು ಎರಚಿದರು. ನನಗೆ ಆದ ಅನ್ಯಾಯದ ವಿರುದ್ಧ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ. ರಾಜಕಾರಣದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಆದರೆ ಎಲ್ಲರೂ ಭ್ರಷ್ಟರಲ್ಲ. ಇವರು ಎಲ್ಲರನ್ನೂ ಭ್ರಷ್ಟರೆಂದು ಬಿಂಬಿಸಲು ಯತ್ನಿಸುತ್ತಾರೆ. ಇಂಥವರ ಮುಖವಾಡ ಕಳಚುತ್ತೇನೆ ಎಂದು ಸವಾಲು ಹಾಕಿದ್ದಾರೆ.
ನಂತರ ಸಾರಾ ಮಹೇಶ್ ಅವರ ಪರ ವಕೀಲ (Lawyer) ಅರುಣ್ ಕುಮಾರ್ ಮಾತನಾಡಿ, ಮಾನನಷ್ಟ ಮೊಕದ್ದಮೆ ಹೂಡುವ ಮುನ್ನಾ ರೋಹಿಣಿ ಸಿಂಧೂರಿ ಅವರಿಗೆ ಲೀಗಲ್ ನೋಟಿಸ್ ಕೊಟ್ಟಿದ್ದೆವು. ನೋಟಿಸ್‌ಗೆ ರೋಹಿಣಿ ಸಿಂಧೂರಿ ಅವರು ಉತ್ತರ ಕೊಟ್ಟಿದ್ದು, ಸಾರಾ ಮಹೇಶ್ ವಿರುದ್ಧ ಮಾತನಾಡಿರೋ ಧ್ವನಿ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ ಇದು ಖಾಸಗಿ ಸಂಭಾಷಣೆ ಎಂದು ಹೇಳಿದ್ದಾರೆ. ಇದೇ ಉತ್ತರದ ಆಧಾರದ ಮೇಲೆ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ ಎಂದು ತಿಳಿಸಿದ್ದಾರೆ.
2ನೇ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ (District Session Court) ರೋಹಿಣಿ ಸಿಂಧೂರಿ ಅವರಿಗೆ ನೋಟಿಸ್ ಜಾರಿಯಾಗಿದೆ. ಅಕ್ಟೋಬರ್ 20 ರೊಳಗೆ ರೋಹಿಣಿ ಸಿಂಧೂರಿ ಉತ್ತರ ಕೊಡಬೇಕು ಎಂದು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕಲಬುರಗಿ: 545 ಪಿಎಸ್‍ಐ ಹುದ್ದೆಗಳ ನೋಟಿಫಿಕೇಶನ್ ಮುಗಿದಿದೆ. 402ರಲ್ಲಿ ಮಾಡೋಣ ಎಂಬ ಮಾತುಗಳ ಜೊತೆಗೆ ಪರೀಕ್ಷಾ ಕೇಂದ್ರವನ್ನೇ ಮೊದಲು ಬುಕ್ ಮಾಡಲು ಅರ್ಜಿ ಸಂಖ್ಯೆಯನ್ನು ಬೇಗನೇ ಕಳುಹಿಸಿ ಎಂಬ ಹಲವಾರು ಸಂಭಾಷಣೆಗಳನ್ನು ಹೊಂದಿರುವ ಸ್ಫೋಟಕ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಅವರು, ಪಿಎಸ್‍ಐ ನೇಮಕಾತಿಯ ಸಂಬಂಧ ಇಬ್ಬರು ಆರೋಪಿಗಳ ಸಂಭಾಷಣೆಯಿದೆ. ಇದರಲ್ಲಿ ಓರ್ವ ವ್ಯಕ್ತಿ ಪಿಎಸ್‍ಐ ಆಗಿ ಆಯ್ಕೆಯಾಗಿದ್ದಾನೆ. ಇನ್ನೋರ್ವ ವ್ಯಕ್ತಿ ಮಧ್ಯವರ್ತಿಯಾಗಿದ್ದಾನೆ. ಈ ಪ್ರಕರಣದಲ್ಲಿ ಮೇಲಿಂದ ಕೆಳಗಿನವರೆಗೂ ಭ್ರಷ್ಟಾಚಾರ ನಡೆದಿದೆ ಎಂದು ಕಿಡಿಕಾರಿದ್ದಾರೆ.
ಈ ಆಡಿಯೋ ಮೂಲಕ ತಿಳಿಯುವುದೆನೆಂದರೆ, ಈ 545ರ ಅಕ್ರಮ ಜೊತೆ, ಜೊತೆಗೆ ಮುಂದಿನ 402 ಪೋಸ್ಟ್‌ಗಳನ್ನು ಸಹ ಬುಕ್ ಮಾಡಲಾಗಿದೆ. ಈ ಸಂಬಂಧ 371 ಜೆ ಸರಿಯಾಗಿ ಜಾರಿ ಆಗಿಲ್ಲ ಅಕ್ರಮ ನಡೆದಿದೆ ಎಂದು ಹೈದರಾಬಾದ್ ಕರ್ನಾಟಕದ ಅಭ್ಯರ್ಥಿಗಳು ಕೋರ್ಟ್‍ಗೆ ಹೋಗಿದ್ದಾರೆ. ಆದರೂ ಏನು ಆಗಲ್ಲ ಅಂತ ಆಯ್ಕೆಯಾದ ಪಿಎಸ್‍ಐ ಹೇಳುತ್ತಾನೆ. ಈ ಸರ್ಕಾರದಲ್ಲಿ ನಮ್ಮ ಭಾಗದವರ ಪರಿಸ್ಥಿತಿ ನೋಡಿ. ಈ ಪ್ರಕರಣದಲ್ಲಿ ಸರ್ಕಾರ, ಪರೀಕ್ಷಾ ಕೇಂದ್ರ, ಸಿಬ್ಬಂದಿ ಎಲ್ಲರೂ ಶಾಮಿಲಾಗಿದ್ದಾರೆ. ಅಭ್ಯರ್ಥಿಯ ಎಕ್ಸಾಂ ಸೆಂಟರ್ ಬುಕ್ ಮಾಡುವುದರಿಂದ ಹಿಡಿದು ಎಲ್ಲಾ ಕೂಡ ನೇಮಕಾತಿ ಪರೀಕ್ಷೆಯಲ್ಲಿ ಬುಕ್ ಆಗುತ್ತವೆ ಎಂದು ತಿಳಿಸಿದ್ದಾರೆ.
ಪಿಎಸ್‍ಐ 545 ಪರೀಕ್ಷೆಗೂ ಮ್ಯಾಚ್ ಫಿಕ್ಸಿಂಗ್, ನಂತರ ಮುಂದೆ ನಡೆಯುವ 402 ಪಿಎಸ್‍ಐ ಪರೀಕ್ಷೆಗೂ ಮ್ಯಾಚ್ ಫಿಕ್ಸಿಂಗ್ ಮಾಡಲಾಗಿದೆ. ಇಡೀ ಪ್ರಕರಣದ ಸಾಮಾನ್ಯ ಮಾಹಿತಿ ಕಣ್ಣ ಮುಂದೆಯೇ ಕಾಣುತ್ತಿದೆ. ಆದರೆ ತನಿಖಾ ಅಧಿಕಾರಿಗಳ ಮಾಹಿತಿ ಗೊತ್ತಿಲ್ಲವಾ? ಈ ಅಕ್ರಮದಲ್ಲಿ ನೇಮಕವಾದವರು ಶ್ರೀರಾಮ ಸೇನೆ, ಬಿಜೆಪಿ ಹಾಗೂ ಎಬಿವಿಪಿ ಕಾರ್ಯಕರ್ತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಜ್ಞಾನ ಜ್ಯೋತಿ ಶಾಲೆ ಪರೀಕ್ಷಾ ಕೇಂದ್ರ ನೀಡದಂತೆ ಹಿಂದಿನ ಡಿಡಿಪಿಐ ತಿರಸ್ಕರಿಸಿದರು. ಆದರೂ ಸಹ ರೆಕೆಮೆಂಡ್ ಮಾಡಿ ಸೆಂಟರ್ ನೀಡಿದ್ದು ಯಾರು? ಸಂಸದರು, ಶಾಸಕರು ಯಾಕೆ ಶಿಫಾರಸ್ಸು ಪತ್ರ ಕೊಟ್ಟರು. 545 ಜನ ಆಯ್ಕೆಯಾದವರಲ್ಲಿ, ಈಗಾಗಲೇ ಮುಂದಿನ 402 ಪಿಎಸ್‍ಐ ನೇಮಕಾತಿ ಡ್ಯೂಟಿ ಸಹ ನೀಡಲಾಗಿದೆ. ರಾಜೇಶ್ ಹಾಗರಗಿ ಅವರ ಜಾಮೀನು ತಿರಸ್ಕೃತಗೊಂಡಿದೆ. ದಿವ್ಯಾ ಸಹ ಬೆಲ್‍ಗೆ ಅರ್ಜಿ ಹಾಕಿದ್ದಾರೆ. ಲಾಯರ್ ಜೊತೆ ಲಿಂಕ್ ಇರುವ ದಿವ್ಯಾಳನ್ನು ಏಕೆ ಬಂಧಿಸುತ್ತಿಲ್ಲ. ನೇಮಕಾತಿಯಲ್ಲಿ ಎಡಿಜಿಪಿ ಹೆಸರು ಸಹ ಈ ಪ್ರಕರದಲ್ಲಿ ಕೇಳಿ ಬರುತ್ತಿದೆ. ಹೀಗಾಗಿ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ. ಅವರ ಮೇಲೆ ಕೂಡ ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ.
57 ಸಾವಿರ ಯುವಕರ ನೌಕರಿಯ ಭವಿಷ್ಯವಿದೆ. ತನಿಖಾಧಿಕಾರಿ ಚೇಂಜ್ ಮಾಡುವುದು ಸರಿಯಲ್ಲ. ಈ ಪರೀಕ್ಷೆಯಲ್ಲಿ ಸಾಕಷ್ಟು ಜನ ಅಕ್ರಮದಿಂದ ನೇಮಕವಾಗಿದ್ದಾರೆ. ಹೀಗಾಗಿ ಈ ಪರೀಕ್ಷೆ ಬಗ್ಗೆ ಸರ್ಕಾರ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ಆಡಿಯೋದಲ್ಲಿರುವ ಓರ್ವ ವ್ಯಕ್ತಿ ಯಾರು ಅಂತ ನನಗೆ ಗೊತ್ತಿದೆ. ನನಗೆ ಸಿಕ್ಕ ಆಡಿಯೋ ಪೊಲೀಸರಿಗೆ ಸಿಗಲ್ವಾ ಎಂದು ಪ್ರಶ್ನಿಸಿದ್ದಾರೆ.
ಈ ಆಡಿಯೋದಲ್ಲಿ ಆಯ್ಕೆಯಾದವರು ನಾನು ಎಚ್.ಕೆ ಭಾಗದವರು ಸಿಂದಗಿಯಲ್ಲಿ ಇದ್ದಿನಿ ಅಂತ ಹೇಳಿದ್ದಾರೆ. ಅಕ್ರಮದಲ್ಲಿ ಭಾಗಿಯಾದ ಮಹಾಂತೇಷ್ ಪಾಟೀಲ್ 2019ರಲ್ಲಿ ರಾಜೀನಾಮೆ ನೀಡಿದ್ದಾರೆ.
ಹಗರಣದಲ್ಲಿ ದಿವ್ಯಾ-ಮಹಾಂತೇಷ ಯಾರೇ ಆಗಿರಲಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ವ್ಯಕ್ತಿ-1 2004 ರ ಕೆಎಎಸ್‍ನಲ್ಲಿ ಆದಂತೆ ಮತ್ತೆನಾದರೂ
ವ್ಯಕ್ತಿ-2 ಏನು ಆಗೋಲ್ಲ. ಎಲ್ಲಿ ಎಲ್ಲಾ ದೊಡ್ಡವರಿದ್ದಾರೆ ಜಾಸ್ತಿಯಿದಾರೆ. ದೊಡ್ಡವರೇ ಶಾಮೀಲಾಗಿದಾದ್ದಾರೆ. ಗೌಡ್ರೆ ನಮ್ಮವರು ಒಬ್ರಿದಾರೆ. ದುಡ್ಡು ಸಾಕಷ್ಟಿದೆ
ವ್ಯಕ್ತಿ-1 ಈ ಸರ್ತಿ ಆಗೋಲ್ಲ, 402 ಗೆ ಹಾಕಿ. ಬೇಗ ಆಪ್ಲಿಕೇಶನ್ ನಂಬರ್ ವಾಟ್ಸಪ್ ಮಾಡ್ಲಿಕ್ಕೆ ಹೇಳಿ, ಬೇರೆ ನಂಬರ್‍ನಿಂದ ಮಾಡಲಿ. ಸೆಂಟರ್ ಹಾಕಿಸಿಕೊಂಡು ಬರಬೇಕು.
ವ್ಯಕ್ತಿ-2 ಮುಂದಿನ ಪ್ರೋಸಿಜರ್ ಹೇಳ್ತೆನೆ, ಆಪ್ಲಿಕೇಶನ್ ನಂಬರ್‌ನಲ್ಲಿ ಹಾಕಿದ್ದ ಮೊಬೈಲ್ ನಂಬರ್ ಬಿಟ್ಟು ಬೇರೆ ನಂಬರ್‌ನಿಂದ ಆಪ್ಲಿಕೇಶನ್ ನಂಬರ್‌ನಿಂದ ಅಪ್ಲಿಕೇಶನ್ ನಂಬರ್ ಕಳುಹಿಸಲು ಹೇಳಿ
ಬೆಂಗಳೂರು: ಹುಬ್ಬಳ್ಳಿ ಗಲಾಟೆ ಮೊದಲೇ ಗೊತ್ತಿತ್ತು ಎಂದು ಹಿಂದೂ ಮುಖಂಡ ಭರತ್ ಶೆಟ್ಟಿ ಅವರು ಹುಬ್ಬಳ್ಳಿ ಗಲಾಟೆ ಬಗ್ಗೆ ಮಾತನಾಡಿರುವ ಆಡಿಯೋ ವೈರಲ್ ಇದೀಗ ಆಗುತ್ತಿದೆ.
ಸ್ನೇಹ ಸಮ್ಮೇಳನದ ನೇತೃತ್ವವನ್ನು ವಹಿಸಿದ್ದ ಭರತ್ ಶೆಟ್ಟಿ ಅವರ ಸ್ಪೋಟಕ ಆಡಿಯೋವೊಂದು ಬಹಿರಂಗವಾಗಿದ್ದು, ಈ ಆಡಿಯೋದಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಹುಬ್ಬಳ್ಳಿ ಗಲಾಟೆಗಾಗಿಯೇ ಮಾಡಿರುವುದಾಗಿ ಹೇಳಿದ್ದಾರೆ. ಈ ಆಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆ ಮಧ್ಯೆ ಈಗ ವೈಮನಸ್ಸು ಮೂಡಿದ್ದು, ಹುಬ್ಬಳ್ಳಿ ಗಲಾಟೆ ಮೊದಲೇ ಹೇಗೆ ಗೊತ್ತಾಗಲು ಸಾಧ್ಯ? ಇದು ಪೂರ್ವ ನಿಯೋಜಿತ ಕೃತ್ಯನಾ ಎಂದು ಕೆಲ ಹಿಂದೂ ಸಂಘಟನೆ ಸದಸ್ಯರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ರಾಷ್ಟ್ರ ರಕ್ಷಣಾ ವೇದಿಕೆಯ ಪುನೀತ್ ಕೆರೆಹಳ್ಳಿ ಮಾತನಾಡಿ, ಈ ಘಟನೆಯಯನ್ನು ಗಮನಿಸಿದರೆ ಹಿಂದೂ ಸಂಘಟನೆಯನ್ನು, ಕಾರ್ಯಕರ್ತರನ್ನು ಬೇರೆ ರೀತಿಯಲ್ಲಿ ಬಿಂಬಿಸುವ ಷಡ್ಯಂತ್ರ ನಡೆಯುತ್ತಿದೆ ಎಂಬ ಯೋಚನೆ ಬರುತ್ತಿದೆ. ಸ್ನೇಹ ಸಮ್ಮಿಲನ ಏಕಾಏಕಿ ನಡೆದಿದೆ? ಇದು ಹಿಂದೂ ಸಂಘಟನೆಯ ದಿಕ್ಕು ತಪ್ಪಿಸಿದೆ. ಭರತ್ ಶೆಟ್ಟಿಗೆ ನಿಜವಾಗಿಯೂ ಇದರ ಬಗ್ಗೆ ಮಾಹಿತಿಯಿತ್ತಾ ಎನ್ನುವುದರ ಬಗ್ಗೆ ಸೂಕ್ತ ತನಿಖೆ ನಡೆಯಬೇಕು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡುತ್ತೇವೆ ಎಂದು ತಿಳಿಸಿದರು.
ಇತ್ತಿಚಿನ ದಿನಗಳಲ್ಲಿ ಏಕಾಏಕಾಯಾಗಿ ನಡೆಯುತ್ತಿರುವ ಬೆಳವಣಿಗೆಗಳು, ಭರತ್ ಶೆಟ್ಟಿ ಅವರು ಹಿಂದೂ ಕಾರ್ಯಕರ್ತರ ಹೋರಾಟದ ದಿಕ್ಕನ್ನು ತಪ್ಪಿಸಿರುವುದು. ಇದಾದ ಬಳಿಕ ಅವರು ಹೇಳಿರುವ ಹೇಳಿಕೆಗಳು ಗೊಂದಲವನ್ನು ಸೃಷ್ಟಿಸುತ್ತಿದೆ. ಇವೆಲ್ಲವೂ ಭರತ್ ಶೆಟ್ಟಿ ಅವರೇ ನೀಡುತ್ತಿರುವ ಹೇಳಿಕೆಗಳಾ ಅಥವಾ ಭರತ್ ಶೆಟ್ಟಿ ಅವರ ಹಿಂದೆ ಬೇರಾದರೂ ಇದ್ದರಾ, ಇವೆಲ್ಲಾ ಸಂಶಯಕ್ಕೆ ಎಡೆ ಮಾಡಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಘಟನೆ ಬಗ್ಗೆ ಗೊತ್ತಾದ ಕೂಡಲೇ ಭರತ್ ಶೆಟ್ಟಿ ಅವರು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕಾಗಿತ್ತು. ಘಟನೆಯನ್ನು ತಡೆಯುವಂತಹ ಕೆಲಸ ಮಾಡಬೇಕಿತ್ತು. ಗೊತ್ತಿದ್ದು ಯಾಕೆ ಸುಮ್ಮನಿದ್ದರು. ಇದರಲ್ಲಿ ಏನೂ ಹುನ್ನಾರಾ ಇದೆ ಎನ್ನುವುದರ ಕುರಿತು ತನಿಖೆ ನಡೆದರೆ ಗೊತ್ತಾಗುತ್ತದೆ ಎಂದರು. ಇದನ್ನೂ ಓದಿ:ಹುಬ್ಬಳ್ಳಿ ಹಿಂಸಾಚಾರ ಪೂರ್ವನಿಯೋಜಿತ ಸಂಚು: ಬಿರುಗಾಳಿ ಎಬ್ಬಿಸಿದ ವಾಟ್ಸಪ್ ಆಡಿಯೋ
ಬೆಳಗಾವಿ : ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಕ್ಷೇತ್ರದ ಸಮಸ್ಯೆ ಹೇಳಲು ಫೋನ್ ಮಾಡಿದ್ದ ಮಹಿಳೆಗೆ ಏರು ಧ್ವನಿಯಲ್ಲಿ ಅವಾಜ್ ಹಾಕಿದ್ದಾರೆ.
ಬೆಳಗಾವಿ ನಗರದ ಬಾಂದುರ ಗಲ್ಲಿಯಲ್ಲಿ ಒಳ ಚರಂಡಿ ಸಮಸ್ಯೆ ಬಗ್ಗೆ ದೂರು ನೀಡಲು ಮಹಿಳೆ ಶಾಸಕ ಅನಿಲ್ ಬೆನಕೆ ಅವರಿಗೆ ಕರೆ ಮಾಡಿದ್ದರು. ಈ ವೇಳೆ ಗೋವಾದಲ್ಲಿ ಚುನಾವಣಾ ಪ್ರಚಾರದಲ್ಲಿ ಇದ್ದೇನೆ ಫೋನ್ ಇಡಿ ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಇನ್ನೂ ಈ ಕೆಲಸ ಮೊದಲು ಆಗಬೇಕು, ಆ ಕೆಲಸ ಆಮೇಲೆ ಆಗಬೇಕು ಅಂತಾ ಹೇಳುವುದಕ್ಕೆ ನೀವು ಯಾರು? ಎಂದು ಮಹಿಳೆಗೆ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹಿಜಬ್‌ಗಾಗಿ ಮುಂದುವರಿದ ಹೋರಾಟ
ಈ ಸಂದರ್ಭದಲ್ಲಿ ದಯವಿಟ್ಟು ನಮ್ಮ ಕಡೆ ನೋಡಿ, ಕ್ಷೇತ್ರಕ್ಕೆ ಬನ್ನಿ ಎಂದು ಮಹಿಳೆ ಅಂಗಲಾಚಿದ್ದಾರೆ. ಗೋವಾ ಚುನಾವಣೆ ಪ್ರಚಾರದಲ್ಲಿದ್ದೇನೆ ಬರುತ್ತೇನೆ ಫೋನ್ ಇಡಿ ಎಂದು ಶಾಸಕ ಅನಿಲ್ ಬೆನಕೆ ಅವಾಜ್ ಹಾಕಿರುವ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಉಡುಪಿ ಹಿಜಬ್ ವಿವಾದ – NSUI ಭೇಟಿ ನಿರಾಕರಿಸಿದ ಕಾಲೇಜು ಆಡಳಿತ ಮಂಡಳಿ
ಮೈಸೂರು: ಉನ್ನತ ಅಧಿಕಾರಿ ಜೊತೆ ಟಿಎಚ್‍ಓ ಡಾ. ನಾಗೇಂದ್ರ ಮಾತಾಡಿದ್ದಾರೆ ಎನ್ನಲಾಗುತ್ತಿರುವ ಆಡಿಯೋ ವೈರಲ್ ಆಗಿದ್ದು, ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಆರೋಗ್ಯಾಧಿಕಾರಿ ನಾಗೇಂದ್ರ ಶುಕ್ರವಾರ ಬೆಳಗ್ಗೆ ತಮ್ಮ ಮೈಸೂರಿನ ಆಲನಹಳ್ಳಿ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು. ಕಳೆದ ಒಂದು ವರ್ಷದಿಂದ ನಂಜನಗೂಡಿನಲ್ಲಿ ತಾಲೂಕು ಆರೋಗ್ಯಾಧಿಕಾರಿಯಾಗಿ ನಾಗೇಂದ್ರ ಕಾರ್ಯನಿರ್ವಹಿಸುತ್ತಿದ್ದರು.
ಡಾ. ನಾಗೇಂದ್ರ ಅವರಿಗೆ ಜಿಲ್ಲಾ ಪಂಚಾಯಿತಿ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಅವರಿಂದ ಒತ್ತಡ ಇತ್ತು ಎನ್ನಲಾಗಿದೆ. ಕೊರೊನಾ ಟೆಸ್ಟ್ ಟಾರ್ಗೆಟ್ ಹೆಚ್ಚು ನೀಡಿ ಕಡ್ಡಾಯವಾಗಿ ಮಾಡಲೇಬೇಕೆಂದು ಒತ್ತಡ ಹಾಕಲಾಗಿದೆ. ಇಲಾಖೆಯಲ್ಲಿ ನೌಕರರ ಸಂಖ್ಯೆ ಬಹಳ ಕಡಮೆ ಇದ್ದರೂ ಹೆಚ್ಚುವರಿ ಕೆಲಸ ನೀಡುತ್ತಿದ್ದರು. ಜೊತೆಗೆ 6 ತಿಂಗಳಿಂದ ಒಂದು ದಿನವೂ ರೆಜೆ ನೀಡದೆ ಕೆಲಸ ಮಾಡಿಸಿಕೊಂಡಿದ್ದಾರೆ. ಈಗ ಉನ್ನತ ಅಧಿಕಾರಿ ಜೊತೆ ನಾಗೇಂದ್ರ ಮಾತಾಡಿದ್ದಾರೆ ಎನ್ನಲಾಗುತ್ತಿರುವ ಆಡಿಯೋ ವೈರಲ್ ಆಗಿದ್ದು, ಕುಟುಂಬಸ್ಥರು ನ್ಯಾಯಕ್ಕಾಗಿ ಪಟ್ಟುಹಿಡಿದಿದ್ದಾರೆ.
ಮಂಗಳೂರು: ಮಾಜಿ ಸಚಿವ ಯು.ಟಿ.ಖಾದರ್ ವಿರುದ್ಧ ಅವಾಚ್ಯ ಪದಗಳಿಂದ ಬೈದ ಆಡಿಯೋ ಒಂದು ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಪ್ರಧಾನಿ ಮೋದಿ ಕರೆಯಂತೆ ಭಾನುವಾರ ರಾತ್ರಿ 9 ಗಂಟೆಗೆ ಯು.ಟಿ.ಖಾದರ್ ಅವರು ಕೂಡ, ತಮ್ಮ ಮೊಬೈಲ್‍ನ ಫ್ಲಾಶ್ ಲೈಟ್ ಬೆಳಗಿದ್ದರು. ಇದರಿಂದ ಕೋಪಗೊಂಡ ಮುಸ್ಲಿಂ ಯುವಕನೊಬ್ಬ ಬ್ಯಾರಿ ಭಾಷೆಯಲ್ಲಿ ಖಾದರ್ ಅವರ ವಿರುದ್ಧ ಅವಾಚ್ಯ ಪದಗಳಿಂದ ಬೈದು ಆಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾನೆ.
ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದೀಪ ಬೆಳಗದೆ ಇರುವುದನ್ನು ಪ್ರಸ್ತಾಪಿಸಿದ ಯುವಕ, ”ಇದು ಸಿದ್ದರಾಮಯ್ಯ ಅವರ ಗಟ್ಸ್ ಅಂದ್ರೆ. ಯು.ಟಿ.ಖಾದರ್ ಅವರ ಮೂತ್ರ ಕುಡಿಯಲಿ. ನಾನು ಲೈಟ್ ಆರಿಸಲ್ಲ, ಕ್ಯಾಂಡಲ್ ಕೂಡ ಹೊತ್ತಿಸಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಖಾದರ್‌ಗೆ ಹೀಗೆ ಹೇಳಲಿಕ್ಕೆ ಏನು ಸಮಸ್ಯೆ? ಬೆಳಗ್ಗೆಯೇ ಕ್ಯಾಂಡಲ್ ರೆಡಿ ಮಾಡಿ ಇಟ್ಟಿದ್ದೇ ಅಂತಾನೆ ಈ ಖಾದರ್. ಮುಸ್ಲಿಂ ಸಮುದಾಯದ ಮರ್ಯಾದೆ ತೆಗೀಲಿಕ್ಕೆ ಇರುವವ ನೀನು. ಸಿದ್ದರಾಮಯ್ಯರ ಹಾಗೆ ಮಾತನಾಡೋ ಎದೆಗಾರಿಕೆ ಬೇಕು. ಅದಿದ್ದರೆ ಮಾತ್ರ ರಾಜಕೀಯ, ಇಲ್ಲಂದ್ರೆ ಬರಬಾರದು” ಎಂದು ಆಡಿಯೋದಲ್ಲಿ ಬೈದಿದ್ದಾನೆ.
ಚಿಕ್ಕಬಳ್ಳಾಪುರ: ಕೋಚಿಮುಲ್ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರಿಗೆ ಮುಖಭಂಗವಾಗಿದ್ದು, ಈ ಸಂಬಂಧ ಶಾಸಕರ ಬೆಂಬಲಿಗ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಚಿಕ್ಕಬಳ್ಳಾಪುರ ಕೋಚಿಮುಲ್ ನಿರ್ದೇಶಕ ಸ್ಥಾನವು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಪಾಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಬಗ್ಗೆ ಸುಧಾಕರ್ ಬೆಂಬಲಿಗರಾದ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಚನ್ನಕೇಶವ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ದ್ಯಾವಪ್ಪ ಮೊಬೈಲ್ ಮೂಲಕ ಮಾತನಾಡಿದ್ದಾರೆ. ಈ ಇಬ್ಬರ ನಡುವಿನ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಂಭಾಷಣೆಯಲ್ಲಿ ಕೆಲ ಕೀಳುಮಟ್ಟದ ಪದ ಪ್ರಯೋಗ ಮಾಡಿರುವ ಬೆಂಬಲಿಗರು ಏನಣ್ಣ ಹೀಗಾಗಾಯ್ತೋ? ಜೆಡಿಎಸ್‍ನವರಿಗೆ ಎಷ್ಟು ಬೇಗ ರೆಕ್ಕೆ ಪುಕ್ಕ ಬಂದುಬಿಡ್ತು, ನಮ್ಮ ಜೊತೆ 98 ಮಂದಿ ಮತದಾರರಿದ್ದರು. ನಮ್ಮ ಜೊತೆ ಬಂದರು ಆಣೆ, ಪ್ರಮಾಣ ಮಾಡಿದರು. ಆದರೆ ಅದರಲ್ಲಿ ಕೆಲವರು ಜೆಡಿಎಸ್‍ನವರಿಗೆ ಮತ ಹಾಕಿಬಿಟ್ಟು ದ್ರೋಹ ಮಾಡಿದ್ದಾರೆ ಎಂದು ಮಾತನಾಡಿದ್ದಾರೆ.
ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿಯ ಕೆಲ ಒಡಕುಗಳನ್ನು ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್‍ನ ಅಕ್ರಮವಾಗಿ ಹಣ ಮಾಡಿದ್ದಾರೆ. ನಮ್ಮ ಶಾಸಕರು ಏನು ಮಾಡಲಿಲ್ಲ. ಆದರೂ ಕರೆ ಮಾಡಿ ಸಾಕಷ್ಟು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾತನಾಡಿರುವುದು ಆಡಿಯೋದಲ್ಲಿದೆ.
ಈ ಚುನಾವಣೆ ಶಾಸಕ ಸುಧಾಕರ್ ಅವರಿಗೆ ಸಾಕಷ್ಟು ಪ್ರತಿಷ್ಠೆಯಾಗಿತ್ತು. ಆದರೆ ಕಾಂಗ್ರೆಸ್‍ಗೆ ಭಾರೀ ಹಿನ್ನಡೆಯಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. 7 ನಿಮಿಷ 56 ಸೆಕೆಂಡಿನ ಈ ಆಡಿಯೋ ವೈರಲ್ ಆಗಿದ್ದು, ಇದು ಜೆಡಿಎಸ್‍ನವರಿಗೆ ಒಂದು ರೀತಿಯ ಆಶ್ರಯವಾಗಿವಾಗಿದೆ.
ಬೆಂಗಳೂರು: ನೀವು ಬಡವರೆಲ್ಲ ಕಾಂಗ್ರೆಸ್‍ಗೆ ವೋಟ್ ಹಾಕ್ತೀರಾ ನಾವು ನಿಮಗೆ ಯಾಕೆ ಅಭಿವೃದ್ಧಿ ಮಾಡಬೇಕು. ನಮ್ಮ ವಾರ್ಡ್ ನಲ್ಲಿ ಮಾತ್ರ ಅಲ್ಲ ಇಡೀ ದೇಶದಲ್ಲೇ ಬಡವರೇ ಮೋಸಗಾರರು. ನಿಯತ್ತೇ ಇಲ್ದೆ ಇರೋರೆಲ್ಲ ಬಡತನದಲ್ಲೇ ಉಳಿದಿದ್ದಾರಾ ಎಂದು ದಾಸರಹಳ್ಳಿ ಕ್ಷೇತ್ರದ ಬಿಜೆಪಿ ಎಂಎಲ್‍ಎ ಮುನಿರಾಜ್ ಶಿಷ್ಯ ಮಲ್ಲಸಂದ್ರ ಕಾರ್ಪೊರೇಟರ್ ಲೊಕೇಶ್ ಹೇಳಿದ್ದಾರೆ.
ಶ್ರೀಮಂತರಿರುವ ಬೂತ್ ಗಳಲ್ಲಿ ಬಿಜೆಪಿಗೆ ಲೀಡ್ ಬಂದಿದೆ ಅಂತ ಲೊಕೇಶ್ ಲೆಕ್ಕ ಕೊಟ್ಟಿದ್ದಾರೆ. ದಾಸರಹಳ್ಳಿ ಕ್ಷೇತ್ರದ ಕಲ್ಯಾಣ ನಗರ, ಪ್ರಶಾಂತ್ ನಗರ, ಬಿಎಚ್‍ಎಂ ಲೇಔಟ್‍ಗಳಲ್ಲಿ ಆಫೀಷಿಯಲ್‍ಗಳು ಇದ್ದಾರೆ ಯಾರಿಗೂ ದುಡ್ಡು ಕೊಟ್ಟಿಲ್ಲ ಆದ್ರೂ ಆ ಎಲ್ಲ ಬೂತ್‍ಗಳಲ್ಲಿ ಬಿಜೆಪಿ ಲೀಡ್ ಬಂದಿದೆ.
ಫ್ರೀ ಮನೆ ಕೊಟ್ರು ಕಾಂಗ್ರೆಸ್‍ಗೆ ವೋಟ್ ಹಾಕೋ ನಿಮ್ಗೆ ನಾವ್ಯಾಕೆ ಅಭಿವೃದ್ಧಿ ಮಾಡ್ಬೇಕು ಅನ್ನೋದಾಗಿ ಮತ ನೀಡಿದ ಜನರಿಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದು, ಆ ಆಡಿಯೋ ಪಬ್ಲಿಕ್‍ಟಿವಿಗೆ ಲಭ್ಯವಾಗಿದೆ. ಸ್ಥಳೀಯರು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಪತ್ರ ಬರೆದು ದೂರು ಸಹ ನೀಡಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಆಡಿಯೋ ಕ್ಲಿಪ್:
ಲೋಕೇಶ್ – ನಿಮಗೆಲ್ಲ ಮನೆ ಕೊಟ್ಟಿಲ್ಲ ಅಂತಾ ಬೈಯ್ಕೋಬೇಡ ನೀವೆಲ್ಲ ಬಡವರು, ಮನೆಕೊಟ್ರೆ ಯಾರು ವೋಟ್ ಹಾಕಲ್ಲ, ನೀವೇ ಅಲ್ಲ ಯಾರು ವೋಟ್ ಹಾಕಲ್ಲ, ಮೇಲಗಡೆ ಇದ್ದಾರಲ್ಲ ಸ್ಲಂ ಅವರು ಎಲ್ಲಾ ಕಾಂಗ್ರೆಸ್‍ಗೆ ವೋಟ್ ಹಾಕ್ತಾರೆ.. ಬಡವರಿಗೆ ಹೆಲ್ಪ್ ಮಾಡಿದ್ರೆ ಯಾವುದು ಶಾಶ್ವತ ಅಲ್ಲ, ಇವತ್ತಿನ ಪರಿಸ್ಥಿತಿ ಅಲ್ಲಿ, ಮನೆ ಕೊಟ್ರಲ್ಲ ಎಂಎಲ್‍ಎ, ಎಂಎಲ್‍ಎ ಗೊತ್ತಿಟ್ಟುಕೊಂಡು ಅವರಿಗೆ ವೋಟ್ ಹಾಕ್ತಾರೆ ಸಾರ್ವಜನಿಕ – ವಿಜಯಲಕ್ಷ್ಮೀ ಲೇಔಟ್‍ನಲ್ಲಿ ಅಂತಾ ಕೆಲಸ ಆಗಿಲ್ಲ ಲೋಕೇಶ್ – ವಿಜಯಲಕ್ಷ್ಮೀ ಲೇಔಟ್ ನಿನಗೆ ಬರಲ್ಲ ಬಿಡು, ವಿಜಯಲಕ್ಷ್ಮೀ ಲೇಔಟ್ ಬರಲ್ಲ, ಅಕಡೆ ಬರೋದು, ಏಕಾ ಫ್ರೀ ಮನೆಗಳು ಯಾವುದು ವೋಟ್ ಬರಲ್ಲ, ಸಾರ್ವಜನಿಕ – ಬಡವರು, ಬಗ್ಗರು ವೋಟ್ ಹಾಕ್ತಾರೆ.. ಲೋಕೇಶ್ – ಧರ್ಮಸ್ಥಳ ಮಂಜುನಾಥಸ್ವಾಮಿ ಆಣೆಗೂ ಬಡವ ವೋಟ್ ಹಾಕಲ್ಲ ತಿರುಪತಿ ವೆಂಕಟರಮಣಸ್ವಾಮಿ ಆಣೆಗೂ ಬಡವರಿಂದ ಯಾವುದೇ ವೋಟ್ ಬರಲ್ಲ, ಬಡವನೇ ದೊಡ್ಡ ಮೋಸ ಆಫ್ ಗಾಡ್… ಬಡವನೇ ಮೋಸ.. ಬಡವರು ಕಾಂಗ್ರೆಸ್ ಲೀಡ್, ಕಲ್ಯಾಣನಗರ ಅಫೀಷಿಯಲ್ ಬಿಜೆಪಿ ಲೀಡ್, ನಮ್ ಮನೆ ಮುಂದೇಗಡೆ ಅಫಿಷಿಯಲ್ ಬಿಜೆಪಿ ಲೀಡ್.. ಎಲ್ಲೆಲ್ಲಿ ಬಡವರು ಇದ್ದಾರೋ ಅಲ್ಲೆಲ್ಲ ಕಾಂಗ್ರೆಸ್‍ಗೆ ಕೊಡ್ತಾರೆ.