ನವದೆಹಲಿ: ಕುಡಿದ ಅಮಲಿನಲ್ಲಿ ಫುಟ್‌ಪಾತ್‌ನಲ್ಲಿ (Footpath) ಮಲಗಿದ್ದವರ ಮೇಲೆ ಆಡಿ ಕಾರು (Audi Car) ಹರಿಸಿದ ಪರಿಣಾಮ ಐವರು ಗಾಯಗೊಂಡಿರುವ ಘಟನೆ ದೆಹಲಿಯ ವಸಂತ್ ವಿಹಾರ್‌ನಲ್ಲಿ (Vasant Vihar) ನಡೆದಿದೆ.
ಆಡಿ ಕಾರು ಚಾಲಕ ಕುಡಿದ ಮತ್ತಿನಲ್ಲಿ ಫುಟ್‌ಪಾತ್ ಮೇಲೆ ಮಲಗಿದ್ದ ರಾಜಸ್ಥಾನದ ಮಹಿಳೆ, ಪತಿ ಮತ್ತು ಮಗಳು ಹಾಗೂ ಮತ್ತೊಂದು ದಂಪತಿ ಮೇಲೆ ಕಾರು ಹರಿಸಿದ್ದಾನೆ. ನೋಯ್ಡಾದಿಂದ ಮನೆಗೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ಮುಕುಟ – ಸೋಮವಾರ ಸಿಗಂದೂರು ಸೇತುವೆ ಲೋಕಾರ್ಪಣೆ
ಗುಜರಾತ್: ಭಾರೀ ಮಳೆಯು ಗುಜರಾತ್‌ನಲ್ಲಿ (Gujarat Rain) ಅನಾಹುತವನ್ನು ಸೃಷ್ಟಿಸಿದ್ದು, ರಾಜ್ಯದಾದ್ಯಂತ ತೀವ್ರ ಜಲಾವೃತ ಮತ್ತು ಪ್ರವಾಹದಂತಹ ಪರಿಸ್ಥಿತಿಗಳನ್ನು ಸೃಷ್ಟಿಸಿದೆ. ವಡೋದರಾದಲ್ಲಿ (Vadodara), ಪರಿಸ್ಥಿತಿಯು ನಿವಾಸಿಗಳಿಗೆ ಭೀಕರವಾಗಿದೆ.
ಸ್ಥಳೀಯರೊಬ್ಬರು ತಮ್ಮ ಸಂಕಟದ ಅನುಭವವನ್ನು ಹಂಚಿಕೊಂಡಿದ್ದಾರೆ. ಎಡೆಬಿಡದೇ ಸುರಿಯುತ್ತಿರುವ ಮಳೆಯು ತನ್ನ ಬಂಗಲೆಯ ಡ್ರೈವಾಲ್‌ನಲ್ಲಿ ನಿಲ್ಲಿಸಿದ್ದ ತನ್ನ ಮೂರು ಕಾರುಗಳನ್ನು ಮುಳುಗಿಸಿ ತೀವ್ರವಾಗಿ ಹಾನಿಗೊಳಿಸಿದೆ ಎಂದು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಗ್ರಾಹಕರಿಗೆ ಉಚಿತವಾಗಿ 100 ಜಿಬಿ ಕ್ಲೌಡ್ ಸಂಗ್ರಹ ನೀಡಲಿದೆ ರಿಲಯನ್ಸ್ ಜಿಯೋ
ವಡೋದರಾ ನಿವಾಸಿಯು ತನ್ನ ವಾಹನಗಳ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಆಡಿ A6 (Audi Car), ಫೋರ್ಡ್ ಇಕೋಸ್ಪೋರ್ಟ್ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳು ಭಾಗಶಃ ನೀರಿನಲ್ಲಿ ಹಲವಾರು ಇಂಚುಗಳಷ್ಟು ಮುಳುಗಿದೆ. ಈ ಬಗ್ಗೆ ಹತಾಶೆಯನ್ನು ವ್ಯಕ್ತಪಡಿಸುತ್ತಾ, ಮೂರು ಕಾರುಗಳನ್ನು ಕಳೆದುಕೊಂಡ ನಂತರ ಜೀವನ ಮಾಡಲು ಏನೂ ಉಳಿದಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ರಸ್ತೆಯಲ್ಲಿ ಕಾರುಗಳನ್ನು ನಿಲ್ಲಿಸಿದ್ದರಿಂದ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ವಾಹನಗಳನ್ನು ಬಂಗಲೆಯೊಳಗೆ ಸುಸಜ್ಜಿತವಾದ ಸ್ಥಳದಲ್ಲಿ ಸುರಕ್ಷಿತವಾಗಿ ನಿಲ್ಲಿಸಲಾಗಿತ್ತು. ಏಳು ಇಂಚುಗಳಷ್ಟು ನೀರು ನನ್ನ ಮನೆಗೆ ನುಗ್ಗಿದೆ. ಹೊರಗೆ ಸುಮಾರು ನಾಲ್ಕು ಅಡಿಗಳಷ್ಟು ಏರಿಕೆಯಾಗಿದ್ದು, ಇಡೀ ನೆರೆಹೊರೆಯ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಗನ್ ರೆಡ್ಡಿಗೆ ಭಾರಿ ಹಿನ್ನಡೆ – ಪಕ್ಷದ ಇಬ್ಬರು ರಾಜ್ಯಸಭಾ ಸಂಸದರು ರಾಜೀನಾಮೆ; ಟಿಡಿಪಿ ಸೇರ್ಪಡೆಗೆ ಸಜ್ಜು
ಮೂರನೇ ಬಾರಿಗೆ ಈ ಸಮಸ್ಯೆಯನ್ನು ಎದುರಿಸುತ್ತಿದ್ದೇನೆ. ಹಿಂದೆ ನಾನಿದ್ದ ಸ್ಥಳದಲ್ಲಿ ಎರಡು ಬಾರಿ ಸಮಸ್ಯೆಯಾಗಿತ್ತು. ಈ ಸ್ಥಳದಲ್ಲಿ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರವಾಹ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಹೇಳಿದ್ದಾರೆ.
ಕೋಲಾರ: ಆಡಿ ಕಾರೊಂದು (Audi Car) ಮರಕ್ಕೆ ಡಿಕ್ಕಿಯಾಗಿ ಭೀಕರ ಅಪಘಾತ ಉಂಟಾದ ಪರಿಣಾಮ ಮೂವರು ವಿದ್ಯಾರ್ಥಿಗಳು (Students) ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಬಚಾವಾದ ಘಟನೆ ಕೋಲಾರ (Kolar) ಹೊರವಲಯದಲ್ಲಿ ನಡೆದಿದೆ.
ಬಂಗಾರಪೇಟೆ (Bangarpet) ಮುಖ್ಯರಸ್ತೆ ಸಹಕಾರ ನಗರದಲ್ಲಿ ಘಟನೆ ನಡೆದಿದೆ. ಮೃತರನ್ನು ಹಾಸನ ಮೂಲದ ಹರ್ಷವರ್ಧನ್, ಬಳ್ಳಾರಿ ಮೂಲದ ಬಸವರಾಜ್ ಹಾಗೂ ಬಂಗಾರಪೇಟೆಯ ನಿಶ್ಚಲ್ ಎಂದು ಗುರುತಿಸಲಾಗಿದೆ. ಮೃತರು ಪ್ರಸಿದ್ಧ ಯೂನಿವರ್ಸಿಟಿವೊಂದರ ವಿದ್ಯಾರ್ಥಿಗಳು. ಬಂಗಾರಪೇಟೆಯ ಸಾಯಿ ಗಗನ್ ಘಟನೆಯಲ್ಲಿ ಪಾರಾಗಿದ್ದಾನೆ. ವಿದ್ಯಾರ್ಥಿಗಳು ಸಾಯಿ ಗಗನ್ ಮನೆಗೆ ಬಂದಿದ್ದರು. ಅಲ್ಲಿಂದ ವಾಪಸ್ ಕೋಲಾರಕ್ಕೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಮಗಳೂರು: ಆಡಿ ಕಾರು (Audi Car) ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ.
ತಾಲೂಕಿನ ಹಿರೇಗೌಜ (Hiregowja) ಗೇಟ್ ಬಳಿ ಈ ಘಟನೆ ನಡೆದಿದ್ದು, ಮೃತನನ್ನು 28 ವರ್ಷದ ದರ್ಶನ್ ಎಂದು ಗುರುತಿಸಲಾಗಿದೆ. ವೇಗವಾಗಿ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ದರ್ಶನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಶಶಿಕುಮಾರ್ ಎಂಬವರಿಗೆ ತೀವ್ರ ಗಾಯಗಳಾಗಿದ್ದರಿಂದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 173ರಲ್ಲಿ ನಡೆದ ಭೀಕರ ಅಪಘಾತದಿಂದ ಬೈಕಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತವಾದ ಕೂಡಲೇ ಕಾರು ಚಾಲಕ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಭೀಕರ ಅಪಘಾತ ; ಮೂವರು ಯುವಕರು ಸಾವು
ಬೆಂಗಳೂರು: ಕಾರು ಗುದ್ದಿದ ರಭಸಕ್ಕೆ ಹಿಂದುಗಡೆ ಮಧ್ಯಭಾಗದಲ್ಲಿ ಕುಳಿತಿದ್ದ ಯುವತಿಯ ತಲೆ ಮುಂಭಾಗದ ಗ್ಲಾಸಿಗೆ ಬಡಿದು ಸಿಕ್ಕಿಕೊಂಡಿತ್ತು ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ತಡರಾತ್ರಿ 1:30ರ ವೇಳೆಗೆ ಕೋರಮಂಗಲ ಮಂಗಳ ಕಲ್ಯಾಣ ಮಂಟಪದಲ್ಲಿ 7 ಮಂದಿಯನ್ನು ಬಲಿ ತೆಗೆದುಕೊಂಡ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವೇಗವಾಗಿ ಬಂದ ಕಾರು ಫುಟ್‍ಪಾತ್ ಹತ್ತಿ ಪಕ್ಕದ ಕಟ್ಟಡದ ಕಾಂಪೌಂಡಿಗೆ ಬಡಿದು ನಂತರ ವಿದ್ಯುತ್ ಕಂಬಕ್ಕೆ ಗುದ್ದಿ ಹಿಂದಕ್ಕೆ ಬಂದಿದೆ. ಅಪಘಾತದ ರಭಸಕ್ಕೆ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಆಡಿ ಕಾರಿನ ಮುಂಭಾಗ ಸಂಪೂರ್ಣ ಅಪ್ಪಚ್ಚಿಯಾಗಿದೆ. ಪಬ್ಲಿಕ್ ಟಿವಿಗೆ ಪ್ರತ್ಯಕ್ಷದರ್ಶಿ ಪ್ರಭು ಅಪಘಾತದ ನಂತರ ಏನಾಯ್ತು ಎಂಬುದನ್ನು ವಿವರಿಸಿದ್ದಾರೆ.
ಪ್ರತ್ಯಕ್ಷದರ್ಶಿಯ ಮಾತು
ನಾನು ಓಲಾ ಕ್ಯಾಬ್ ಓಡಿಸುತ್ತಿದ್ದು ಕಾರು ಪಾರ್ಕ್ ಮಾಡಿ ರೂಮಲ್ಲಿ ನಿದ್ದೆ ಮಾಡುತ್ತಿದ್ದೆ. ರಾತ್ರಿ 1:34ಕ್ಕೆ ಜೋರಾಗಿ ಶಬ್ಧ ಕೇಳಿತು. ಕೂಡಲೇ ಎದ್ದು ನೋಡಿದಾಗ ಕಾರಿನಲ್ಲಿ ದಟ್ಟ ಹೊಗೆ ಬರುತ್ತಿತ್ತು. ಇದನ್ನೂ ಓದಿ : ಕೋರಮಂಗಲದಲ್ಲಿ ಭೀಕರ ಅಪಘಾತ – ಹೊಸೂರು ಶಾಸಕನ ಪುತ್ರ ಸಾವು
ತಕ್ಷಣ ರಸ್ತೆಯಲ್ಲಿ ಬರ್ತಿದ್ದ ಕೆಲವು ವಾಹನ ತಡೆದು ಕಾರಿನಲ್ಲಿ ಇದ್ದವರ ರಕ್ಷಣೆಗೆ ಯತ್ನಿಸಿದೆವು. ಈ ವೇಳೆ ಕೆಲವರು ಪೊಲೀಸ್ ಕಂಟ್ರೋಲ್ ರೂಮಿಗೆ ಮಾಹಿತಿ ನೀಡಿದರು.
ಗುದ್ದಿದ ರಭಸಕ್ಕೆ ಗಾಡಿಯ ಬಾಗಿಲು ತೆಗೆಯಲು ಸಾಧ್ಯವಾಗಿರಲಿಲ್ಲ. ಲಾಕ್ ಆಗಿತ್ತು. 20 ನಿಮಿಷ ಪ್ರಯತ್ನಪಟ್ಟ ಬಳಿಕ ಡೋರ್ ಓಪನ್ ಮಾಡಿದ್ದೆವು. ಈ ವೇಳೆ ಒಬ್ಬ ವ್ಯಕ್ತಿ ಕೆಮ್ಮುತ್ತಿದ್ದರು. ಉಳಿದವರಲ್ಲಿ ಯಾರಿಗೂ ಪ್ರಜ್ಞೆಯೇ ಇರಲಿಲ್ಲ.
ಸ್ಥಳಕ್ಕೆ ಬಂದ ಕೆಲವರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅದರಲ್ಲೂ ಹಿಂದುಗಡೆ ಮಧ್ಯಭಾಗದಲ್ಲಿ ಕುಳಿತಿದ್ದ ಯುವತಿ ತಲೆ ಮುಂಭಾಗದ ಗ್ಲಾಸಿಗೆ ಬಡಿದು ಸಿಕ್ಕಿಕೊಂಡಿತ್ತು. ಕಾರಿನಲ್ಲಿದ್ದವರು ನೈಟ್ ಡ್ರೆಸ್ ಧರಿಸಿದ್ದರು ಮತ್ತು ಅವರ ಕೈ ಕಾಲು ಕಟ್ ಆಗಿತ್ತು. ವಿಪರೀತ ರಕ್ತ ಸುರಿಯುತ್ತಿತ್ತು. ಎಂದು ಘಟನೆಯನ್ನು ವಿವರಿಸಿದರು. ಇದನ್ನೂ ಓದಿ: ಭೀಕರ ಅಪಘಾತವಾದರೂ ಆಡಿ ಕಾರಿನ ಏರ್ ಬ್ಯಾಗ್ ಓಪನ್ ಆಗಿಲ್ಲ ಯಾಕೆ?
ಈ ಅಪಘಾತದ ಬಗ್ಗೆ ಕ್ಯಾಬ್ ಚಾಲಕ ಸತೀಶ್ ದೂರು ನೀಡಿದ ಹಿನ್ನೆಲೆಯಲ್ಲಿ ಆಡುಗೋಡಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಅಭಿಮಾನಿಗಳ ಆಟೋ ಮೇಲೆ ತಮ್ಮ ಆಟೋಗ್ರಾಫ್ ನೀಡಿದ್ದರು. ಆದರೆ ಈಗ ದರ್ಶನ್ ಅಭಿಮಾನಿಯೊಬ್ಬರ ಆಡಿ ಕ್ಯೂ 7 ಕಾರಿನ ಮೇಲೆ ತಮ್ಮ ಆಟೋಗ್ರಾಫ್ ನೀಡಿದ್ದಾರೆ.
ಅಭಿಮಾನಿಗಳು ತಾವು ಖರೀದಿಸಿದ ಕಾರಿನ ಮೇಲೆ ದರ್ಶನ್ ಅವರ ಆಟೋಗ್ರಾಫ್ ಹಾಕಿಸಿಕೊಳ್ಳಬೇಕು ಎಂದುಕೊಳ್ಳುತ್ತಾರೆ. ಅಂತೆಯೇ ದರ್ಶನ್ ಅವರ ಅಭಿಮಾನಿಯೊಬ್ಬರು ಆಡಿ ಕ್ಯೂ 7 ಕಾರನ್ನು ಖರೀದಿ ಮಾಡಿ ಅದಕ್ಕೆ ದರ್ಶನ್ ಅವರ ಆಟೋಗ್ರಾಫ್ ಪಡೆಯಬೇಕೆಂದುಕೊಂಡಿದ್ದರು. ದರ್ಶನ್ ಕೂಡ ಇದೀಗ ಆ ಅಭಿಮಾನಿಯ ಆಸೆಯನ್ನು ನೆರವೇರಿಸಿದ್ದಾರೆ. ಅಭಿಮಾನಿಯ ಆಡಿ ಕಾರ್ ಮೇಲೆ ದರ್ಶನ್ ತಮ್ಮ ಆಟೋಗ್ರಾಫ್ ನೀಡಿದ್ದಾರೆ.
ಈ ಹಿಂದೆ ಅಭಿಮಾನಿಯೊಬ್ಬರು ವಾಹನದಲ್ಲಿ ದರ್ಶನ್ ಇರೋದು ನೋಡಿ ತಮ್ಮ ಗಾಡಿ ನಿಲ್ಲಿಸಿ ಮಾತನಾಡಿಸಿದ್ದರು. ಆಗ ಅಭಿಮಾನಿ ಪೆನ್ನು ಪೇಪರ್ ಹಿಡಿದು ದರ್ಶನ್‍ಗೆ ಆಟೋಗ್ರಾಫ್ ಕೇಳಿದ್ದರು. ಆಗ ದರ್ಶನ್ ಆಟೋಗ್ರಾಫ್ ನೀಡಿ ವಿಭಿನ್ನವಾಗಿ “ಡ್ರೈವ್ ಸೇಫ್” ಎಂದು ಬರೆದಿದ್ದರು.
ಸದ್ಯ ದರ್ಶನ್ ಅವರಿಗೆ ಈಗ ‘ಮೊನಾರ್ಕ್ ಆಫ್ ಸ್ಯಾಂಡಲ್‍ವುಡ್’ ಬಿರುದು ಸಿಕ್ಕಿದೆ. ಮೊನಾರ್ಕ್ ಆಫ್ ಸ್ಯಾಂಡಲ್‍ವುಡ್ ಎಂದರೆ `ಸ್ಯಾಂಡಲ್‍ವುಡ್ ರಾಜಪ್ರಭುತ್ವದ ಸಾರ್ವಭೌಮ’ ಎಂಬ ಅರ್ಥ ಎಂದು ಹೇಳಲಾಗಿದೆ. ದರ್ಶನ್ ಅವರ `ಡಿ ಲಿಗಸ್ಸಿ’ ಅಭಿಮಾನಿಗಳ ತಂಡ ಈ ಬಿರುದನ್ನು ನೀಡಿದೆ.
ಬೆಂಗಳೂರು: ಸ್ಯಾಂಡಲ್ ವುಡ್ ಫೇಮಸ್ ನಟಿ ರಶ್ಮಿಕಾ ಮಂದಣ್ಣ ಅವರ `ಚಮಕ್’ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಇದೀಗ ಹೊಸ ಕಾರೊಂದರ ಒಡತಿಯಾಗಿದ್ದಾರೆ.
ಹೌದು. ನಟಿ ರಶ್ಮಿಕಾ ಮಂದಣ್ಣ ಆಡಿ ಕಾರೊಂದನ್ನು ಖರೀದಿಸಿದ್ದಾರೆ. ಶುಕ್ರವಾರವಷ್ಟೇ ಚಮಕ್ ಚಿತ್ರ ರಿಲೀಸ್ ಆಗಿದ್ದು, ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಈ ಖುಷಿಯ ಬೆನ್ನಲ್ಲೇ ನಿನ್ನೆಯೇ ಕೆಂಪು ಬಣ್ಣದ ಹೊಸ ಆಡಿ ಕಾರೊಂದನ್ನು ಖರೀದಿ ಮಾಡೋ ಮೂಲಕ ತನ್ನ ಖುಷಿಯನ್ನು ಇಮ್ಮಡಿಗೊಳಿಸಿದ್ದಾರೆ. ಇದನ್ನೂ ಓದಿ: ರೈತರಿಗಾಗಿ ಬಿಎಂಡಬ್ಲ್ಯೂ ಕಾರನ್ನೇ ಮಾರಾಟ ಮಾಡ್ತೀನಿ ಎಂದ ಕಿಚ್ಚ
ತಮ್ಮ ಕನಸಿನ ಕಾರು ಖರೀದಿ ಮಾಡಿರುವ ರಶ್ಮಿಕಾ ಭಾವಿ ಪತಿ ನಟ ರಕ್ಷಿತ್ ಶೆಟ್ಟಿ ಜೊತೆ ಫಸ್ಟ್ ರೌಂಡ್ ಹೋಗಿದ್ದಾರೆ. ಅಲ್ಲದೇ ಕಾರು ಖರೀದಿ ಮಾಡಿ ಖುಷಿಯಲ್ಲಿರೋ ರಶ್ಮಿಕಾ, ರಕ್ಷಿತ್ ಜೊತೆ ತಮ್ಮ ಹೊಸ ಕಾರಿನೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಅವುಗಳನ್ನು ಇನ್‍ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: `ಜಾಗ್ವಾರ್’ ಒಡತಿಯಾದ ನಟಿ ಹರಿಪ್ರಿಯಾ!
ನಟ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ `ಚಮಕ್’ ಸಿನಿಮಾ ರಾಜ್ಯಾದ್ಯಂತ ಶುಕ್ರವಾರ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರವನ್ನು ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಜೊತೆಯಾಗಿ ನಿನ್ನೆಯೇ ನರ್ತಕಿ ಚಿತ್ರಮಂದಿರದಲ್ಲಿ ವೀಕ್ಷಿಸಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ನಟನೆಯನ್ನು ಕಂಡ ರಕ್ಷಿತ್ ಶೆಟ್ಟಿ ಹೊಗಳಿದ್ದಾರೆ. ಅಲ್ಲದೇ ಚಿತ್ರಮಂದಿರದಲ್ಲೇ ತನ್ನ ಭಾವಿ ಪತ್ನಿಯನ್ನು ತಬ್ಬಿಕೊಂಡು ಮುದ್ದಾಡಿದ್ದಾರೆ. ಇದನ್ನೂ ಓದಿ: ಮೊದಲ ಮದುವೆ ವಾರ್ಷಿಕೋತ್ಸವಕ್ಕೆ ಭರ್ಜರಿ ಗಿಫ್ಟ್- 3 ಬೆಂಜ್ ಕಾರುಗಳನ್ನು ಖರೀದಿಸಿದ ಯಶ್