Tag: auction

  • ಪಾಕ್ ಪ್ರಧಾನಿಯ ಆಡಿಯೋ ಲೀಕ್ – 26 ಕೋಟಿಗೆ ಡಾರ್ಕ್ ವೆಬ್‌ನಲ್ಲಿ ಹರಾಜು

    ಪಾಕ್ ಪ್ರಧಾನಿಯ ಆಡಿಯೋ ಲೀಕ್ – 26 ಕೋಟಿಗೆ ಡಾರ್ಕ್ ವೆಬ್‌ನಲ್ಲಿ ಹರಾಜು

    ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ (Pakistan PM) ಶೆಹಬಾಜ್ ಷರಿಫ್ (Shehbaz Sharif) ಅವರ ಸುಮಾರು 115 ಗಂಟೆಗಳ ಸರ್ಕಾರಿ ಚರ್ಚೆಯ ಆಡಿಯೋ ಲೀಕ್ (Audio Leak) ಆಗಿದ್ದು, ಅದನ್ನು ಡಾರ್ಕ್ ವೆಬ್‌ನಲ್ಲಿ (Dark Web) 3.5 ಮಿಲಿಯನ್ ಡಾಲರ್ (ಸುಮಾರು 29 ಕೋಟಿ ರೂ.ಗೆ) ಹರಾಜು ಮಾಡಲಾಗಿದೆ ಎಂಬ ಆಘಾತಕಾರಿ ಸಂಗತಿಯನ್ನು ಪಿಟಿಐ ನಾಯಕ ಫವಾದ್ ಚೌಧರಿ ತಿಳಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಚೌಧರಿ, ಪ್ರಧಾನ ಮಂತ್ರಿಯವರ ಕಚೇರಿಗೆ ಭದ್ರತೆಯೇ ಇಲ್ಲ. ಇದೀಗ ಸೋರಿಕೆಯಾಗಿರುವ ಆಡಿಯೊ ಡಾರ್ಕ್ ವೆಬ್‌ನಲ್ಲಿ ಭಾರೀ ಮೊತ್ತಕ್ಕೆ ಹರಾಜಾಗಿದೆ. ಇದು ಭದ್ರತಾ ಏಜೆನ್ಸಿಗಳ ವೈಫಲ್ಯ ಎಂದು ಆರೋಪಿಸಿದ್ದಾರೆ.

    ಸೋರಿಕೆಯಾದ ಆಡಿಯೋದಲ್ಲಿ, ಪಾಕಿಸ್ತಾನ ಮುಸ್ಲಿಂ ಲೀಗ್-ಎನ್ ಉಪಾಧ್ಯಕ್ಷ ಮರ್ಯಮ್, ರಕ್ಷಣಾ ಸಚಿವ ಖವಾಜಾ ಆಸಿಫ್, ಕಾನೂನು ಸಚಿವ ಅಜಮ್ ತರಾರ್, ಆಂತರಿಕ ಸಚಿವ ರಾಣಾ ಸನಾವುಲ್ಲಾ, ಮಾಜಿ ಎನ್‌ಎ ಸ್ಪೀಕರ್ ಅಯಾಜ್ ಸಾದಿಕ್ ಹಾಗೂ ಪ್ರಧಾನಿ ಶೆಹಬಾಜ್ ಷರೀಫ್ ನಡುವಿನ ಸಂಭಾಷಣೆಗಳು ಕೇಳಿಬಂದಿದೆ. ಇದನ್ನೂ ಓದಿ: ಟ್ರೈನ್‌ನಲ್ಲೂ ಸವಿಯಬಹುದು ಹಬ್ಬದೂಟ – ನವರಾತ್ರಿ ಹಿನ್ನೆಲೆ ರೈಲ್ವೆಯಿಂದ ಸ್ಪೆಷಲ್ ಮೆನು

    Shehbaz Sharif

    ಆಡಿಯೋ ಸೋರಿಕೆಯ ಮಾಹಿತಿಯನ್ನು ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ತಿಳಿಸಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಧಾನಿ ಭವನದ ಭದ್ರತೆಯನ್ನು ಉಲ್ಲಂಘಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತನಿಖೆಯಿಂದ ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಮ್ಮನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ: ಅಮೆರಿಕಗೆ ನೇರವಾಗಿ ಜೈಶಂಕರ್ ತಿರುಗೇಟು

    Live Tv
    [brid partner=56869869 player=32851 video=960834 autoplay=true]

  • 5G ಹರಾಜು ಮುಕ್ತಾಯ – 1.5 ಲಕ್ಷ ಕೋಟಿ ತಲುಪಿದ ಒಟ್ಟು ಬಿಡ್ ಮೊತ್ತ

    5G ಹರಾಜು ಮುಕ್ತಾಯ – 1.5 ಲಕ್ಷ ಕೋಟಿ ತಲುಪಿದ ಒಟ್ಟು ಬಿಡ್ ಮೊತ್ತ

    ನವದೆಹಲಿ: ಜುಲೈ 26ರಂದು ಪ್ರಾರಂಭವಾಗಿದ್ದ ಭಾರತದ 5ಜಿ ಸ್ಪೆಕ್ಟ್ರಂ ಹರಾಜು ಸೋಮವಾರ ಮುಕ್ತಾಯಗೊಂಡಿದೆ. 1.50 ಲಕ್ಷ ಕೋಟಿ ರೂ. ಮೌಲ್ಯದ ಸ್ಪೆಕ್ಟ್ರಂ ಮಾರಾಟವಾಗಿದ್ದು, ಮುಖೇಶ್ ಅಂಬಾನಿಯವರ ಜಿಯೋ ಅಗ್ರ ಬಿಡ್ಡರ್ ಆಗಿ ಹೊರಹೊಮ್ಮಿದೆ ಎಂದು ವರದಿಗಳು ತಿಳಿಸಿವೆ.

    ರಿಲಯನ್ಸ್ ಇಂಡಸ್ಟ್ರೀಸ್‌ನ ಜಿಯೋ ಪ್ರತಿಸ್ಪರ್ಧಿಗಳಾಗಿ ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಹಾಗೂ ಗೌತಮ್ ಅದಾನಿಯವರ ಅದಾನಿ ಎಂಟರ್‌ಪ್ರೈಸಸ್ 5ಜಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿವೆ. ಇದನ್ನೂ ಓದಿ: 4Gಗಿಂತ 5G ಎಷ್ಟು ಭಿನ್ನ, ಪರಿಣಾಮಕಾರಿ? ಇಲ್ಲಿದೆ ಮಾಹಿತಿ..

    ಕಳೆದ ಬಾರಿ 4ಜಿ ನೆಟ್‌ವರ್ಕ್ 77 ಸಾವಿರ ಕೋಟಿ ರೂ.ಗೆ ಹಾಗೂ 3ಜಿ ನೆಟ್‌ವರ್ಕ್ 50 ಕೋಟಿ ರೂ.ಗೆ ಹರಾಜಾಗಿತ್ತು. ಹೊಸ 5ಜಿ ನೆಟ್‌ವರ್ಕ್ 4ಜಿ ಗಿಂತಲೂ ದ್ವಿಗುಣ ಅಲ್ಟ್ರಾ ಹೈ ಸ್ಪೀಡ್ ಮೊಬೈಲ್ ಇಂಟರ್‌ನೆಟ್ ಸಂಪರ್ಕವನ್ನು ನೀಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಹಿಟ್ಲರ್‌ ವಾಚ್‌ ಹರಾಜು – ಮೊತ್ತ ಎಷ್ಟು ಗೊತ್ತಾ?

    ಈ ವರ್ಷದ ಅಂತ್ಯದ ವೇಳೆಗೆ ದೇಶದ ಪ್ರಮುಖ ನಗರಗಳಲ್ಲಿ 5ಜಿ ಸೇವೆಗಳನ್ನು ನಾವು ನಿರೀಕ್ಷಿಸಬಹುದು ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 5ಜಿ ಹರಾಜು – ಮೊದಲ ದಿನವೇ 1.45 ಲಕ್ಷ ಕೋಟಿ ಮೀರಿದ ಬಿಡ್ ಮೊತ್ತ

    5ಜಿ ಹರಾಜು – ಮೊದಲ ದಿನವೇ 1.45 ಲಕ್ಷ ಕೋಟಿ ಮೀರಿದ ಬಿಡ್ ಮೊತ್ತ

    ನವದೆಹಲಿ: ಭಾರತದ ಅತ್ಯಂತ ವೇಗದ 5ಜಿ ನೆಟ್‌ವರ್ಕ್ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ಮಂಗಳವಾರ ಪ್ರಾರಂಭವಾಗಿದೆ. ಮೊದಲ ದಿನವೇ ಹರಾಜಿನ 4 ಸುತ್ತುಗಳಲ್ಲಿ ಬಿಡ್ ಮೊತ್ತ 1.45 ಲಕ್ಷ ಕೋಟಿ ರೂ. ಮೀರಿದೆ.

    ಇಂದು 5ಜಿ ಹರಾಜಿನ ಮೊದಲ ದಿನವಾಗಿದ್ದು, 4 ಸುತ್ತುಗಳ ಕೊನೆಯಲ್ಲಿ ಬಿಡ್ ಮೊತ್ತ 1.45 ಲಕ್ಷ ಕೋಟಿ ರೂ. ಮೀರಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇದನ್ನೂ ಓದಿ: 5ಜಿ ಹರಾಜು – ಸ್ಪೀಡ್ ಎಷ್ಟಿರುತ್ತೆ ಗೊತ್ತಾ?

    ಹರಾಜು ಪ್ರಕ್ರಿಯೆಯಲ್ಲಿ ಅದಾನಿ ಎಂಟರ್‌ಪ್ರೈಸಸ್, ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ ಹಾಗೂ ವಿ(ವೊಡಾಫೋನ್ ಐಡಿಯಾ) ಕಂಪನಿಗಳು ಭಾಗವಹಿಸಿವೆ. 5ನೇ ಸುತ್ತಿನ ಹರಾಜು ಬುಧವಾರ ನಡೆಯಲಿದೆ. ಇದನ್ನೂ ಓದಿ: ಭಾರತದಲ್ಲೇ ಮೊದಲು – ನಮ್ಮ ಮೆಟ್ರೋದಲ್ಲಿ 5ಜಿ ನೆಟ್‌ವರ್ಕ್ ಪರೀಕ್ಷೆ

    ಇಂದು ಪ್ರಾರಂಭವಾದ ಹರಾಜು ಪ್ರಕ್ರಿಯೆ ಆಗಸ್ಟ್ 1 ರೊಳಗೆ ಪೂರ್ಣಗೊಳಿಸಲು ಕೇಂದ್ರ ಆದೇಶಿಸಿದೆ. ಈ ವರ್ಷದ ಅಂತ್ಯದ ವೇಳೆಗೆ ದೇಶದ ಪ್ರಮುಖ ನಗರಗಳಲ್ಲಿ 5ಜಿ ಸೇವೆಗಳನ್ನು ನಾವು ನಿರೀಕ್ಷಿಸಬಹುದು ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 5ಜಿ ತರಂಗಾಂತರ ಹರಾಜಿಗೆ ಕ್ಯಾಬಿನೆಟ್ ಅನುಮೋದನೆ

    5ಜಿ ತರಂಗಾಂತರ ಹರಾಜಿಗೆ ಕ್ಯಾಬಿನೆಟ್ ಅನುಮೋದನೆ

    ನವದೆಹಲಿ: ಭಾರತ ಸರ್ಕಾರ ಸಾರ್ವಜನಿಕ ಉದ್ಯಮಗಳಿಗೆ 5ಜಿ ಸೇವೆಗಳನ್ನು ಒದಗಿಸಲು ತರಂಗಾಂತರ ಹರಾಜಿಗೆ ಅನುಮತಿ ನೀಡಿದೆ. ಶೀಘ್ರದಲ್ಲೇ ಹೊರಬರಲಿರುವ 5ಜಿ ಸೇವೆ 4ಜಿ ಗಿಂತಲೂ 10 ಪಟ್ಟು ವೇಗವಿರಲಿದೆ ಎಂದು ಸರ್ಕಾರ ತಿಳಿಸಿದೆ.

    20 ವರ್ಷಗಳ ಮಾನ್ಯತೆಯ ಅವಧಿಯೊಂದಿಗೆ ಒಟ್ಟು 72 ಜಿಹೆಚ್‌ಝಡ್ ಸ್ಪೆಕ್ಟ್ರಮ್ ಈ ವರ್ಷದ ಜುಲೈ ಅಂತ್ಯದ ವೇಳೆಗೆ ಹರಾಜಿಗೆ ಇಡಲಾಗುತ್ತದೆ. ವಿವಿಧ ಕಡಿಮೆ(600 MHz, 700 MHz, 800 MHz, 900 MHz, 1800 MHz, 2100 MHz, 2300 MHz) ಮಧ್ಯಮ (3300 MHz) ಹಾಗೂ ಹೆಚ್ಚಿನ(26 GHz) ಆವರ್ತಗಳಲ್ಲಿ ಸ್ಪೆಕ್ಟ್ರಮ್‌ಗಾಗಿ ಹರಾಜು ನಡೆಯಲಿದೆ. ಇದನ್ನೂ ಓದಿ: ಕೊರೊನಾ ರೂಪಾಂತರ ಓಮಿಕ್ರಾನ್, ಡೆಲ್ಟಾ ವಿರುದ್ಧ ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಪರಿಣಾಮಕಾರಿ: ICMR

    5G

    ಪ್ರಸ್ತುತ 4ಜಿ ಸೇವೆಗಳ ಮೂಲಕ ಸಾಧ್ಯವಾಗುವುದಕ್ಕಿಂತಲೂ 10 ಪಟ್ಟು ಹೆಚ್ಚಿನ ವೇಗದ ಹಾಗೂ ಸಾಮರ್ಥ್ಯದ 5ಜಿ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ರೋಲ್ ಔಟ್ ಮಾಡಲು ಟೆಲಿಕಾಂ ಸೇವಾ ಪೂರೈಕೆದಾರರು ಮಧ್ಯಮ ಹಾಗೂ ಹೆಚ್ಚಿನ ಬ್ಯಾಂಡ್ ಸ್ಪೆಕ್ಟ್ರಮ್ ಅನ್ನು ಬಳಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.

    ಇದೇ ಮೊದಲ ಬಾರಿಗೆ ಯಶಸ್ವಿ ಬಿಡ್ದಾರರಿಗೆ ಮುಂಗಡ ಪಾವತಿ ಮಾಡುವ ಯಾವುದೇ ಕಡ್ಡಾಯ ಕ್ರಮವಿಲ್ಲ. ಸ್ಪೆಕ್ಟ್ರಮ್‌ಗಾಗಿ ಪಾವತಿಗಳನ್ನು 20 ಸಮಾನ ವಾರ್ಷಿಕ ಕಂತುಗಳಲ್ಲಿ ಪ್ರತಿ ವರ್ಷದ ಆರಂಭದಲ್ಲಿ ಮುಂಗಡವಾಗಿ ಪಾವತಿಸಬಹುದು. ಇದು ನಗದು ಹರಿವಿನ ಅಗತ್ಯತೆಗಳನ್ನು ಗಮನಾರ್ಹವಾಗಿ ಸರಾಗಗೊಳಿಸುವ ನಿರೀಕ್ಷೆಯಿದೆ ಮತ್ತು ಈ ವಲಯದಲ್ಲಿ ವ್ಯಾಪಾರ ಮಾಡುವ ವೆಚ್ಚವನ್ನು ಕಡಿಮೆ ಮಾಡುತ್ತದೆ. ಬಿಡ್ದಾರರಿಗೆ ಭವಿಷ್ಯದ ಹೊಣೆಗಾರಿಕೆಗಳಿಲ್ಲದೇ 10 ವರ್ಷಗಳ ಬಳಿಕ ಸ್ಪೆಕ್ಟ್ರಮ್ ಅನ್ನು ಒಪ್ಪಿಸುವ ಆಯ್ಕೆಯನ್ನೂ ನೀಡಲಾಗುವುದು ಎಂದು ಕೇಂದ್ರ ತಿಳಿಸಿದೆ. ಇದನ್ನೂ ಓದಿ: ಭಾರತದ ಗೋಧಿ ರಫ್ತನ್ನು 4 ತಿಂಗಳು ಅಮಾನತುಗೊಳಿಸಿದ ಯುಎಇ

    ಈ ಬ್ರಾಡ್‌ಬ್ಯಾಂಡ್ ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಅವಿಭಾಜ್ಯ ಅಂಗವಾಗಿದೆ. 4ಜಿ ಸೇವೆ ಮೂಲಕ 2015ರಲ್ಲಿ ದೊಡ್ಡ ಮಟ್ಟದಲ್ಲಿ ಉತ್ತೇಜನ ಪಡೆದುಕೊಂಡಿದೆ. 2014ರಲ್ಲಿ 10 ಕೋಟಿ ಚಂದಾದಾರರಿದ್ದು, ಈಗ 80 ಕೋಟಿ ಚಂದಾದಾರರು ಬ್ರಾಡ್‌ಬ್ಯಾಂಡ್ ಬಳಕೆ ಮಾಡುತ್ತಿದ್ದಾರೆ. ಇದೀಗ ಹೊಸ ಯುಗದ ವ್ಯವಹಾರ ದೊಡ್ಡ ಮಟ್ಟದ ಲಾಭ ಪಡೆಯಲಿದೆ ಹಾಗೂ ಉದ್ಯಮಗಳಿಗೆ ಹೆಚ್ಚಿನ ಆದಾಯವನ್ನು ಸೃಷ್ಟಿಸುತ್ತದೆ ಎಂದಿದೆ.

    Live Tv

  • 10 ವಿಕೆಟ್ ಕಿತ್ತು ಇತಿಹಾಸ ಬರೆದ ಪಂದ್ಯದ ಜೆರ್ಸಿಯನ್ನು ಹರಾಜಿಗಿಟ್ಟ ಅಜಾಜ್ ಪಟೇಲ್

    ವೆಲ್ಲಿಂಗ್ಟನ್: ಕಳೆದ ವರ್ಷ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಸ್ಪಿನ್ನರ್ ಅಜಾಜ್ ಪಟೇಲ್ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿ ಇತಿಹಾಸ ಬರೆದಾಗ ಧರಿಸಿದ್ದ ಜೆರ್ಸಿಯನ್ನು ಹರಾಜಿಗಿಡಲು ನಿರ್ಧರಿಸಿದ್ದಾರೆ.

    ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪಟೇಲ್, ಹರಾಜಿನಿಂದ ಸಂಗ್ರಹವಾಗುವ ಹಣವನ್ನು ಮಕ್ಕಳ ಆಸ್ಪತ್ರೆಗೆ ವಿವಿಧ ರೂಪದಲ್ಲಿ ದೇಣಿಗೆ ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್

    ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್ ಒಂದರ ಎಲ್ಲಾ 10 ವಿಕೆಟ್ ಪಡೆದು ಅಜಾಜ್ ಪಟೇಲ್ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಂದು ಪಟೇಲ್‌ಗೆ ಟೀಂ ಇಂಡಿಯಾದ ನಾಯಕರಾಗಿದ್ದ ವಿರಾಟ್ ಕೊಹ್ಲಿ ವಿಶೇಷವಾಗಿ ಅಭಿನಂದಿಸಿದ್ದರು. ಅಲ್ಲದೇ ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಹಸ್ತಾಕ್ಷರವಿರುವ ಭಾರತೀಯ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದರು.

    ಇನ್ನಿಂಗ್ಸ್ ಒಂದರಲ್ಲಿ ಎಲ್ಲಾ 10 ವಿಕೆಟ್ ಪಡೆದ ದಿನ ನನ್ನ ಜೀವನದ ಅತ್ಯಂತ ಶ್ರೇಷ್ಠ ಕ್ರಿಕೆಟ್ ದಿನಗಳಲ್ಲಿ ಒಂದು ಎಂದಿದ್ದ ಪಟೇಲ್, ಗುರುವಾರ ಸ್ಟಾರ್‌ಶಿಪ್ ಫೌಂಡೇಶನ್ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಇತಿಹಾಸ ನಿರ್ಮಿಸಿದ ದಿನದಂದು ಧರಿಸಿದ್ದ ಜೆರ್ಸಿಯನ್ನು ಹರಾಜಿಗಿಟ್ಟಿರುವ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್

    ಸ್ಟಾರ್‌ಶಿಪ್ ಫೌಂಡೇಶನ್‌ನ ಪ್ಲೇ ಥೆರಪಿಸ್ಟ್‌ಗಾಗಿ ಹಣವನ್ನು ಸಂಗ್ರಹಿಸಲು ಮುಂಬೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಕಿತ್ತು ಸಾಧನೆ ಮಾಡಿದ ನನ್ನ ಹಸ್ತಾಕ್ಷರವಿರುವ ಶರ್ಟ್ ಹರಾಜಿಗೆ ಇಡಲಾಗುತ್ತಿದೆ. ಇದರಿಂದ ಬರುವ ಹಣ ಮಕ್ಕಳು ಹಾಗೂ ಅವರ ಕುಟುಂಬಗಳಿಗೆ ಸಹಾಯವಾಗಲಿದೆ ಎಂದು ಪಟೇಲ್ ತಿಳಿಸಿದ್ದಾರೆ.

  • ವಿಶ್ವದ 3ನೇ ಅತ್ಯಂತ ದುಬಾರಿ ನಂಬರ್ ಪ್ಲೇಟ್ 70 ಕೋಟಿ ರೂ.ಗೆ ಹರಾಜು

    ವಿಶ್ವದ 3ನೇ ಅತ್ಯಂತ ದುಬಾರಿ ನಂಬರ್ ಪ್ಲೇಟ್ 70 ಕೋಟಿ ರೂ.ಗೆ ಹರಾಜು

    ಅಬುಧಾಬಿ: ಪ್ರತಿಯೊಂದು ವಾಹನಗಳಲ್ಲೂ ನಂಬರ್ ಪ್ಲೇಟ್ ಇರುತ್ತೆ ಅಲ್ವಾ? ಕೆಲವರು ತಮ್ಮ ವಾಹನದ ನಂಬರ್ ಫ್ಯಾನ್ಸಿಯಾಗಿರಬೇಕು ಎಂದು ಇಷ್ಟಪಡುತ್ತಾರೆ. ಶ್ರೀಮಂತರು ಫ್ಯಾನ್ಸಿ ಸಂಖ್ಯೆಗಳಿರುವ ನಂಬರ್ ಪ್ಲೇಟ್‌ಗಳನ್ನು ಖರೀದಿಸಿ ಇನ್ನೊಬ್ಬರ ಗಮನ ಸೆಳೆಯುವಂತೆ ಮಾಡುತ್ತಾರೆ. ಇತ್ತೀಚೆಗೆ ದುಬಾರಿ ನಂಬರ್ ಪ್ಲೇಟ್ ಒಂದು ಮಾರಾಟವಾಗಿ ಸುದ್ದಿಯಾಗಿದೆ.

    ಇತ್ತೀಚೆಗೆ ದುಬೈನ ಮೋಸ್ಟ್ ನೋಬೆಲ್ ನಂರ‍್ಸ್ ಚ್ಯಾರಿಟಿ ವತಿಯಿಂದ ವಿಶೇಷ ಫೋನ್ ಸಂಖ್ಯೆ ಹಾಗೂ ವಿಶೇಷ ಕಾರ್ ನಂಬರ್ ಪ್ಲೇಟ್‌ಗಳ ಹರಾಜು ನಡೆಯಿತು. ಈ ಹರಾಜಿನಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 70 ಕೋಟಿ ರೂ.ಗೆ ವಿಶೇಷ ಸಂಖ್ಯೆಯ ನಂಬರ್ ಪ್ಲೇಟ್ ಖರೀದಿ ಮಾಡಿದ್ದಾರೆ. ಇದು ವಿಶ್ವದ ಮೂರನೇ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಎನಿಸಿಕೊಂಡಿತು. ಇದನ್ನೂ ಓದಿ: ಕಿಚ್ಚ ಸುದೀಪ್ ಅವರ ಕೈರುಚಿ ತಿಂದು ಹೊಗಳಿದ ಡಾಲಿ ಧನಂಜಯ್

    ಎಎ8 ಸಂಖ್ಯೆಯ ನಂಬರ್ ಪ್ಲೇಟ್ ಸುಮಾರು 70 ಕೋಟಿ ರೂ.ಗೆ ಹರಾಜಾಗಿದೆ. ಇದು ವಿಶ್ವದಲ್ಲೇ ಮೂರನೇ ಅತೀ ದುಬಾರಿ ನಂಬರ್ ಪ್ಲೇಟ್ ಎನಿಸಿಕೊಂಡಿದೆ. ಈ ಹಿಂದೆ ಎಎ9 ಸಂಖ್ಯೆಯ ನಂಬರ್ ಪ್ಲೇಟ್ ಕಳೆದ ವರ್ಷ ಸುಮಾರು 79 ಕೋಟಿ ರೂ.ಗೆ ಹರಾಜಾಗಿತ್ತು. ಇದನ್ನೂ ಓದಿ: ವಿಕೆಟ್ ನೀಡಿದ ಪೋಲಾರ್ಡ್‍ಗೆ ಮುತ್ತು ಕೊಟ್ಟು ಸಂಭ್ರಮಿಸಿದ ಕೃನಾಲ್ ಪಾಂಡ್ಯ

    ಇತ್ತೀಚೆಗೆ ನಡೆದ ಮೋಸ್ಟ್ ನೋಬೆಲ್ ನಂರ‍್ಸ್ ಚ್ಯಾರಿಟಿಯ ಹರಜಿನಲ್ಲಿ ಎಫ್55 ಹಾಗೂ ವಿ66 ನಂಬರ್ ಪ್ಲೇಟ್ 8 ಕೋಟಿ ರೂ.ಗೂ ಅಧಿಕ ಬೆಲೆಗೆ ಮಾರಾಟವಾಗಿದೆ. ವೈ66 ನಂಬರ್ ಪ್ಲೇಟ್ 7.91 ಕೋಟಿ ರೂ.ಗೆ ಮಾರಾಟವಾಗಿದೆ.

  • ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಯ್ತು ಅಪರೂಪದ ಕಪ್ಪು ವಜ್ರ

    ಅಬುಧಾಬಿ: 555-ಕ್ಯಾರೆಟ್‌ನ ಪರೂಪದ ಕಪ್ಪು ವಜ್ರವನ್ನು ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಅಪರೂಪದಲ್ಲಿ ಅಪರೂಪದ ವಜ್ರ ಭೂಮಿಯ ವಸ್ತುವೇ ಅಲ್ಲ ಎಂದು ನಂಬಲಾಗಿದೆ.

    ಎನಿಗ್ಮಾ ಹೆಸರಿನ ಅಪರೂಪದ ಕಪ್ಪು ಕಾರ್ಬನಾಡೋ ವಜ್ರವನ್ನು ದುಬೈನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ವಜ್ರವನ್ನು ಫೆಬ್ರವರಿಯಲ್ಲಿ ಹರಾಜಿಗೆ ಇಡಲಿದ್ದು, 5 ಮಿಲಿಯನ್ ಡಾಲರ್‌ಗೆ ಮಾರಾಟವಾಗುವ ಸಾಧ್ಯತೆ ಇದೆ. ಇದರ ಮಾರಾಟಕ್ಕೂ ಮೊದಲು ಸೋಮವಾರ ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಇದನ್ನೂ ಓದಿ: ಹಾಂಕಾಂಗ್‌ನಲ್ಲಿ 2000 ಪ್ರಾಣಿಗಳನ್ನು ಕೊಲ್ಲಲು ಆದೇಶ!

    2.6 ಶತಕೋಟಿ ವರ್ಷಗಳ ಹಿಂದೆ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದಾಗ ಈ ವಜ್ರ ರಚನೆಯಾಗಿದೆ ಎಂದು ಆಭರಣ ತಜ್ಞ ಸೋಫಿ ಸ್ಟೀವನ್ಸ್ ಅಭಿಪ್ರಾಯಪಟ್ಟಿದ್ದಾರೆ. 555.55-ಕ್ಯಾರೆಟ್ ಹೊಂದಿರುವ ವಜ್ರವನ್ನು ಕತ್ತರಿಸುವುದು ಅತ್ಯಂತ ಕಷ್ಟಕರ. ಆದರೂ ತಜ್ಞರು ಅದನ್ನು 55 ಮುಖದ ಆಭರಣವಾಗಿ ಪರಿವರ್ತಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮಿನಿ ಕೃತಕ ಚಂದ್ರ – ಚೀನಾದ ಹೊಸ ಪ್ರಯತ್ನ

    ವಿಭಿನ್ನವಾದ ಈ ವಜ್ರ ಅತಿ ದೊಡ್ಡ ಕಟ್ ಡೈಮಂಡ್ ಎಂದು ಗಿನ್ನೆಸ್ ವಿಶ್ವ ದಾಖಲೆಯನ್ನೂ ಹೊಂದಿದೆ. ದುಬೈನಲ್ಲಿ ಪ್ರದರ್ಶನದ ಬಳಿಕ ವಜ್ರವನ್ನು ಲಾಸ್ ಏಂಜಲೀಸ್ ಮತ್ತು ಲಂಡನ್‌ಗೆ ಕೊಂಡೊಯ್ಯಲಾಗುತ್ತದೆ. ಫೆಬ್ರವರಿ 3ರಿಂದ ಏಳು ದಿನಗಳ ಕಾಲ ಹರಾಜು ನಡೆಯಲಿದೆ ಎಂದು ವರದಿಗಳು ತಿಳಿಸಿವೆ.

  • 21 ಕೆಜಿಯ ಲಡ್ಡು 18.90 ಲಕ್ಷಕ್ಕೆ ಹರಾಜಾಯ್ತು!

    21 ಕೆಜಿಯ ಲಡ್ಡು 18.90 ಲಕ್ಷಕ್ಕೆ ಹರಾಜಾಯ್ತು!

    ಹೈದರಾಬಾದ್: ಬಾಲಾಪುರ ಗಣೇಶನ 21 ಕೆ.ಜಿ ತೂಕದ ಫೇಮಸ್ ಲಡ್ಡು ಭಾನುವಾರ 18.90 ಲಕ್ಷ ರೂಪಾಯಿಗೆ ಹರಾಜು ಹಾಕಲಾಯಿತು.

    ತೆಲಂಗಾಣದ ನಾದಾರ್‌ಗುಲ್ ಎಂಬಲ್ಲಿನ ಉದ್ಯಮಿ ಮರಿ ಶಶಾನ್ ರೆಡ್ಡಿಯಿಂದ ಈ ಲಡ್ಡುವನ್ನು ಆಂಧ್ರಪ್ರದೇಶದ ವಿಧಾನಪರಿಷತ್ ಸದಸ್ಯ ರಮೇಶ್ ಯಾದವ್ ಖರೀದಿಸಿದರು. ಮೊದಲಿಗೆ 1,116ರೂ. ಯಿಂದ ಆರಂಭವಾದ ಹರಾಜು ಪ್ರಕ್ರಿಯೆ ಕೆಲವೇ ನಿಮಿಷಗಳಲ್ಲಿ ನೂರರು ಭಕ್ತರ ಮಧ್ಯೆ ಅಧಿಕ ಮೊತ್ತಕ್ಕೆ ಹರಾಜಾಯಿತು. ಈ ಲಡ್ಡುವನ್ನು ಯಾದವ್ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್. ಜಗನ್ ಮೋಹನ್ ರೆಡ್ಡಿಗೆ ಉಡುಗೊರೆಯಾಗಿ ನೀಡುವುದಾಗಿ ತಿಳಿಸಿದರು.

    2019ರಲ್ಲಿ 17.60 ಲಕ್ಷ ರೂ.ಗೆ ಲಡ್ಡು ಖರೀದಿಸಿದ ಉದ್ಯಮಿ ಮತ್ತು ಕೃಷಿಕ ಕೊಲನು ರಾಮ್ ರೆಡ್ಡಿ ಸಹ ಈ ವರ್ಷ ಹರಾಜಿನಲ್ಲಿ ಭಾಗವಹಿಸಿದ್ದರು. ಹರಾಜನ್ನು ವೀಕ್ಷಿಸಲು ರಾಜ್ಯ ಶಿಕ್ಷಣ ಸಚಿವ. ಪಿ. ಸಬಿತಾ ಇಂದ್ರ ರೆಡ್ಡಿ, ಮಾಜಿ ಶಾಸಕ ಟಿ.ಕೃಷ್ಣ ರೆಡ್ಡಿ ಮತ್ತು ಹಲವಾರು ರಾಜಕಾರಣಿಗಳು ಹಾಜರಿದ್ದರು. ಇದನ್ನೂ ಓದಿ: ಅನುಮತಿ ಇಲ್ಲದೇ ಬಿಸಿಯೂಟದ ಕೋಣೆ ನೆಲಸಮ – ಅಧ್ಯಕ್ಷನ ದರ್ಪಕ್ಕೆ ಗ್ರಾಮಸ್ಥರ ಆಕ್ರೋಶ

    ನಗರದ ಹೊರವಲಯದಲ್ಲಿರುವ ಬಾಲಾಪುರ ಗ್ರಾಮದಲ್ಲಿ ಪ್ರತಿ ವರ್ಷ ಗಣೇಶ ವಿಸರ್ಜನೆಯ ಸಮಯದಲ್ಲಿ ಲಡ್ಡುವನ್ನು ಮೆರವಣಿಗೆ ಮಾಡಲಾಗುತ್ತದೆ. ಪ್ರತಿ ವರ್ಷ ಹರಾಜನ್ನು ಆಯೋಜಿಸುವ ಬಾಲಪುರ ಗಣೇಶ ಉತ್ಸವ ಸಮಿತಿಯ ಪ್ರಕಾರ 1994ರಲ್ಲಿ ನಡೆದ ಮೊದಲ ಹರಾಜಿನಲ್ಲಿ 450 ರೂ.ಗೆ ಲಡ್ಡು ಮಾರಾಟವಾಗಿತ್ತು.

    Laddu

    ಅಂದಿನಿಂದ ಈ ಸಿಹಿ ಲಡ್ಡು ಫೇಮಸ್ ಹಾಗೂ ದುಬಾರಿ ಬೆಲೆಯನ್ನು ಹೊಂದಿದೆ. ಅಲ್ಲದೇ ವಿಜೇತರಿಗೆ ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಉದ್ಯಮಿಗಳು ಹಾಗೂ ರಾಜಕಾರಣಿಗಳು ಪ್ರತಿ ವರ್ಷ ಈ ಲಡ್ಡುಗಾಗಿ ಪರಸ್ಪರ ಪೈಪೋಟಿ ನಡೆಸುತ್ತಾರೆ. 2018ರಲ್ಲಿ 16.60 ಲಕ್ಷ ರೂ.ಗೆ ಈ ಲಡ್ಡು ಹರಾಜಾಗಿತ್ತು. ಆದರೆ ಕಳೆದ ವರ್ಷ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸಾರ್ವಜನಿಕ ಆಚರಣೆಗಳಿಲ್ಲದ ಕಾರಣ ಹರಾಜನ್ನು ರದ್ದುಗೊಳಿಸಲಾಗಿತ್ತು.  ಇದನ್ನೂ ಓದಿ: ಮತ್ತೆ ಒಂದಾಗಲಿರುವ ರಾಜಕುಮಾರ ಜೋಡಿ – ಸೆಟ್ಟೇರಲಿದೆ ಪುನೀತ್, ಸಂತೋಷ್ ಕಾಂಬಿನೇಷನ್‍ನ ಹೊಸ ಸಿನಿಮಾ

  • ಇ-ಹರಾಜಿನಲ್ಲಿ ಭಾಗವಹಿಸಲು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

    ಇ-ಹರಾಜಿನಲ್ಲಿ ಭಾಗವಹಿಸಲು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

    ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನರಿಂದ ಪಡೆದ ಹಲವಾರು ಉಡುಗೊರೆ, ಸ್ಮರಣಿಕೆಗಳು ಹರಾಜಾಗುತ್ತಿದ್ದು, ಜನರು ಈ ಹರಾಜಿನಲ್ಲಿ ಭಾಗವಹಿಸಬೇಕೆಂದು ಮೋದಿ ಕರೆ ನೀಡಿದ್ದಾರೆ.

    ಪ್ರಧಾನ ಮಂತ್ರಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ಸಂಸ್ಕೃತಿ ಸಚಿವಾಲಯವು ಆಯೋಜಿಸಿರುವ ಇ-ಹರಾಜು ಶುಕ್ರವಾರ ಆರಂಭವಾಯಿತು. ಅಕ್ಟೋಬರ್ 7 ರವರೆಗೆ ಹರಾಜು ಪ್ರಕ್ರಿಯೆ ಮುಂದುವರಿಯುತ್ತದೆ. ಹರಾಜಿನ ಮೂರನೇ ಆವೃತ್ತಿ ಇದಾಗಿದ್ದು, ಇದರಲ್ಲಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ಭಾಗವಹಿಸಬಹುದು.  https://pmmementos.gov.in ಮೂಲಕ ಹರಾಜಿನಲ್ಲಿ ನೀವು ಭಾಗಿಯಾಗಬಹುದು.

    ಟ್ವೀಟ್‍ನಲ್ಲಿ ಏನಿದೆ?: ಹರಾಜಿನಲ್ಲಿ ಸಿಗುವ ಹಣವನ್ನು ನಮಾಮಿ ಗಂಗೆ (Namami Gange) ಕಾರ್ಯಕ್ರಮಕ್ಕೆ ಬಳಸಲಾಗುತ್ತದೆ. ನಾನು ಸ್ವೀಕರಿಸಿದ ಹಲವಾರು ಉಡುಗೊರೆಗಳು ಮತ್ತು ಸ್ಮರಣಿಕೆಗಳು ಹರಾಜಾಗುತ್ತಿವೆ. ಈ ಹರಾಜಿನಲ್ಲಿ ನಮ್ಮ ಒಲಿಂಪಿಕ್ಸ್ ಹೀರೋಗಳು ನೀಡಿದ ವಿಶೇಷ ಸ್ಮರಣಿಕೆಗಳು ಕೂಡಾ ಒಳಗೊಂಡಿದೆ. ನೀವು ಹರಾಜಿನಲ್ಲಿ ಭಾಗವಹಿಸಿ. ಆದಾಯವು ನಮಾಮಿ ಗಂಗೆ ಯೋಜನೆಗೆ ಹೋಗುತ್ತದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟಿಗೆ ಟ್ವೀಟ್ ಮಾಡಿದ್ದ ರಾಜಸ್ಥಾನ ಸಿಎಂ ಒಎಸ್‍ಡಿ ರಾಜೀನಾಮೆ!

    ನಮಾಮಿ ಗಂಗೆ ಯೋಜನೆ ಏನು?: ನಮಾಮಿ ಗಂಗೆ ಎನ್ನುವುದು ಗಂಗಾ ನದಿಯ ಸಮಗ್ರ ಸಂರಕ್ಷಣೆ ಮತ್ತು ಪುನರುಜ್ಜೀವನ ಕಾರ್ಯಕ್ರಮ. ಕೇಂದ್ರ ಸರ್ಕಾರವು ಜೂನ್ 2014ರಲ್ಲಿ ಈ ಕಾರ್ಯಕ್ರಮವನ್ನು ಆರಂಭಿಸಿತು. ಇದು ಗಂಗಾ ನದಿಯ ಮಾಲಿನ್ಯ ನಿಯಂತ್ರಣ ಮತ್ತು ಸಂರಕ್ಷಣೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. 2019ರಲ್ಲಿ ಸರ್ಕಾರವು ಪ್ರಧಾನ ಮಂತ್ರಿ ಪಡೆದ 4,000ಕ್ಕೂ ಹೆಚ್ಚು ಉಡುಗೊರೆಗಳನ್ನು ಹರಾಜು ಹಾಕಲಾಗಿತ್ತು. ಹಿಂದಿನ ಹರಾಜಿನ ಆದಾಯವು ನಮಾಮಿ ಗಂಗೆ ಕಾರ್ಯಕ್ರಮಕ್ಕೆ ಹೋಗಿತ್ತು. ಇದನ್ನೂ ಓದಿ:  ಪಂಜಾಬ್ ನೂತನ ಸಿಎಂ ಆಗಿ ಸುಖ್‍ಜಿಂದರ್ ಸಿಂಗ್ ರಂಧಾವಾ

    ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಲೊವ್ಲಿನಾ ಬೊರ್ಗೊಹೈನ್ ಅವರ ಬಾಕ್ಸಿಂಗ್ ಗ್ಲೌಸ್ ಇ-ಹರಾಜಿನಲ್ಲಿ ಅತಿ ಹೆಚ್ಚು ಬಿಡ್ ಪಡೆದಿದೆ. 80 ಲಕ್ಷ ಮೂಲ ಬೆಲೆಯ ಬೊರ್ಗೊಹೈನ್ ಕೈಗವಸುಗಳು 1.92 ಕೋಟಿ ಬಿಡ್ ಪಡೆದಿದೆ. ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಜಾವೆಲಿನ್ 1.5 ಕೋಟಿ ಬಿಡ್ ಪಡೆದಿದೆ. ಚೋಪ್ರಾ ಅವರ ಜಾವೆಲಿನ್ ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ ಹರಾಜಿನಲ್ಲಿ 1 ಕೋಟಿ ಮೂಲ ಬೆಲೆಯನ್ನು ಹೊಂದಿತ್ತು. ಪ್ಯಾರಾಲಿಂಪಿಯನ್ ಅವನಿ ಲೇಖರಾ ಮತ್ತು ಭವಾನಿ ಪಟೇಲ್ ಅವರ ಟೀ ಶರ್ಟ್‍ಗಳು, ಪಿವಿ ಸಿಂಧು ತನ್ನ ಕಂಚಿನ ಪದಕ ವಿಜೇತ ಒಲಿಂಪಿಕ್ಸ್ ಪಂದ್ಯದಲ್ಲಿ ಬಳಸಿದ racket ಕೂಡ ಹರಾಜಿನ ಭಾಗವಾಗಿತ್ತು. ಕ್ರೀಡಾ ಸಾಮಗ್ರಿಗಳ ಹೊರತಾಗಿ, ಇ-ಹರಾಜಿನಲ್ಲಿ ಕೇದಾರನಾಥ ದೇವಸ್ಥಾನ ಮತ್ತು ಏಕತೆಯ ಪ್ರತಿಮೆ, ಪ್ರಧಾನಿಯವರ ಭಾವಚಿತ್ರಗಳು ಮತ್ತು ಛಾಯಾಚಿತ್ರಗಳು ಸೇರಿವೆ. ಮೋದಿಯವರ ಛಾಯಾಚಿತ್ರ ಮತ್ತು ಭಾವಚಿತ್ರಗಳ ಮೂಲ ಬೆಲೆ 2 ಲಕ್ಷ ರೂಪಾಯಿ ಎಂದು ನಿಗದಿಗೊಳಿಸಲಾಗಿದೆ. ಇದನ್ನೂ ಓದಿ:  ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆ- ಸ್ಮರಣಿಕೆಗಳು ಸೆ.17ರಿಂದ ಇ-ಹರಾಜು

  • ಪ್ರಭಾಸ್ ಹಾಡು ಹರಾಜಾಕುತ್ತಿರುವ ಗಿಬ್ರಾನ್

    ಪ್ರಭಾಸ್ ಹಾಡು ಹರಾಜಾಕುತ್ತಿರುವ ಗಿಬ್ರಾನ್

    ಹೈದರಾಬಾದ್: ಟಾಲಿವುಡ್ ನಟ ಬಾಹುಬಲಿ ಖ್ಯಾತಿಯ ಪ್ರಭಾಸ್ ಸಿನಿಮಾದ ಹಾಡನ್ನು ಹರಾಜಾಕಲು ಸಂಗೀತಾ ನಿರ್ದೇಶಕ ಗಿಬ್ರಾನ್ ಮುಂದಾಗಿದ್ದಾರೆ.

    ಕೊರೊನಾದಿಂದ ದೇಶದಲ್ಲಿ ಸಾಕಷ್ಟು ಜನ ಕಷ್ಟ ಪಡುತ್ತಿದ್ದಾರೆ. ಈ ವೇಳೆ ಅನೇಕ ಸೆಲೆಬ್ರೆಟಿಗಳು ತಮ್ಮ ಕೈಲಾದಷ್ಟು ಸಹಾಯ ಜನರಿಗೆ ಮಾಡುತ್ತಿದ್ದಾರೆ. ಅದರಂತೆ ಸಂಗೀತ ನಿರ್ದೇಶಕ ಗಿಬ್ರಾನ್ ಕೂಡ ಸಮಾಜಮುಖಿ ಕಾರ್ಯಗಳನ್ನು ಮಾಡಲು ಇದೀಗ ಸಿದ್ಧರಾಗಿದ್ದಾರೆ. ನಟ ಡಾರ್ಲಿಂಗ್ ಪ್ರಬಾಸ್ ಅಭಿನಯದ ಸಾಹೋ ಸಿನಿಮಾದ ಹಾಡೊಂದನ್ನು ಹರಾಜಿಗೆ ಹಾಕುವ ಮೂಲಕ ಅದರಿಂದ ಬಂದ ಹಣದಲ್ಲಿ ಜನರಿಗೆ ಸಹಾಯ ಮಾಡಲು ಪ್ಲಾನ್ ಮಾಡಿದ್ದಾರೆ.

    ಸಾಹೋ ಸಿನಿಮಾಗೆ ಸಂಗೀತ ನೀಡಿದ್ದ ಗಿಬ್ರಾನ್ ಆ ಚಿತ್ರಕ್ಕಾಗಿ ಒಂದು ಹೀರೋ ಥೀಮ್ ಸಾಂಗ್ ಕಂಪೋಸ್ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಆ ಸಾಂಗ್‍ನನ್ನು ಬಿಡುಗಡೆಗೊಳಿಸಲಾಗಲಿಲ್ಲ. ಆದರೆ ಇದೀಗ ಆ ಹಾಡನ್ನು ಎನ್‍ಎಫ್‍ಟಿ (non-fungible token)  ವೆಬ್‍ಸೈಟ್ ಮೂಲಕ ಹರಾಜು ಹಾಕಲು ನಿರ್ಧರಿಸಿದ್ದು, ಅದರಿಂದ ಬಂದ ಹಣದಲ್ಲಿ ಶೇ 50 ರಷ್ಟು ತಮಿಳುನಾಡು ಸಿಎಂ ರಿಲೀಫ್ ಫಂಡ್‍ಗೆ ದೇಣಿಗೆ ನೀಡುತ್ತೇನೆ. ಲಾಕ್‍ಡೌನ್‍ನಿಂದ ಕೆಲಸವಿಲ್ಲದೆ ಪರದಾಡುತ್ತಿರುವವರಿಗೆ ಸಹಾಯ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ದಾಸನ ಮನವಿಗೆ ಸ್ಪಂದನೆ- ಪ್ರಾಣಿಗಳನ್ನು ದತ್ತು ಪಡೆದ ಅಭಿಮಾನಿಗಳು

    ಈವರೆಗೂ ಆ ಹಾಡನ್ನು ನಿರ್ದೇಶಕ ಸುಜೀತ್ ಹಾಗೂ ನಾನು ಬಿಟ್ಟರೆ ಯಾರು ಕೇಳಿಲ್ಲ. ಅಲ್ಲದೆ ಆ ಹಾಡು ಬಹಳ ಸೊಗಸಾಗಿ ಮೂಡಿಬಂದಿದ್ದು, ನಮ್ಮಿಬ್ಬರಿಗೆ ಬಹಳ ಇಷ್ಟವಾಗಿತ್ತು ಎಂದು ಹೇಳಿದ್ದಾರೆ. ಇದನ್ನು ಓದಿ:ಚಿರುವಿನ ಕೊನೆಯ ದಿನ ನಡೆದಿದ್ದು ಏನು? – ಬಹಿರಂಗ ಪಡಿಸಿದ ಮೇಘನಾ

    ಒಟ್ಟಾರೆ ಇದೇ ಪ್ರಪ್ರಥಮ ಬಾರಿಗೆ ವೆಬ್‍ಸೈಟ್ ಮೂಲಕ ಭಾರತದಲ್ಲಿ ಹಾಡೊಂದು ಹರಾಜಾಗುತ್ತಿದೆ ಎಂದೇ ಹೇಳಬಹುದು.