Tag: auction

  • 800 ರೂ. ಸಿನಿಮಾ ಟಿಕೆಟನ್ನ 1,29,999 ರೂ.ಗೆ ಖರೀದಿಸಿದ ʻಪವನ್‌ ಕಲ್ಯಾಣ್‌ʼ ಅಭಿಮಾನಿ

    800 ರೂ. ಸಿನಿಮಾ ಟಿಕೆಟನ್ನ 1,29,999 ರೂ.ಗೆ ಖರೀದಿಸಿದ ʻಪವನ್‌ ಕಲ್ಯಾಣ್‌ʼ ಅಭಿಮಾನಿ

    ತಮ್ಮಿಷ್ಟದ ನಟನಿಗಾಗಿ ಸರ್ವ ತ್ಯಾಗಕ್ಕೂ ಸಿದ್ಧವಿರುವ ಕೆಲ ಅಭಿಮಾನಿಗಳಿರ್ತಾರೆ. ಅಭಿಮಾನದ ಪರಾಕಾಷ್ಠೆಗೆ ಸಿಕ್ಕಿ ಹಣವನ್ನ ನೀರಿನಂತೆ ಖರ್ಚು ಮಾಡೋದಕ್ಕೂ ಅವರು ಯೋಚಿಸೋದಿಲ್ಲ. ಅಂಥದ್ದೇ ಹುಚ್ಚು ಅಭಿಮಾನಿಯೊಬ್ಬ (Pawan Kalyan fan) ಹೈದ್ರಾಬಾದ್‌ನಲ್ಲಿ ಗಮನ ಸೆಳೆದಿದ್ದಾನೆ. ಕೇವಲ ಒಂದೇ ಒಂದು ಸಿನಿಮಾ ಟಿಕೆಟ್‌ ಅನ್ನು 1,29,999 ರೂಪಾಯಿ ಕೊಟ್ಟು ಖರೀದಿಸಿದ್ದಾನೆ.

    ಆಂಧ್ರ ಡಿಸಿಎಂ ಆಗಿರುವ ನಟ ಪವನ್ ಕಲ್ಯಾಣ್ ಅಭಿಮಾನಿ ಈ ಹುಚ್ಚು ಸಾಹಸ ಮಾಡಿದ್ದಾನೆ. ಪವನ್ ಕಲ್ಯಾಣ್ OG ಸಿನಿಮಾ (OG Movie) ಟ್ರೈಲರ್‌ ರಿಲೀಸ್ ಕಾರ್ಯಕ್ರಮದಲ್ಲಿ ಬೆನಿಫಿಟ್ ಶೋ ಹೆಸರಿನಲ್ಲಿ ಟಿಕೆಟ್ ಹರಾಜು ಕೂಗಲಾಗಿತ್ತು. ಈ ವೇಳೆ ಚೌಟುಪ್ಪಲ್‌ನ ಅಮುದಲ ಪರಮೇಶ್ ಹೆಸರಿನ ಹುಚ್ಚು ಅಭಿಮಾನಿ, ಹರಾಜಿನಲ್ಲಿ 1,29,999 ರೂಪಾಯಿ ಬೆಲೆ ಕೂಗಿ ಚಿತ್ರದ ಮೊದಲ ಟಿಕೆಟ್ ಖರೀದಿಸಿದ್ದಾನೆ. ಇದನ್ನೂ ಓದಿ: ಧ್ರುವ ಸರ್ಜಾ ಜೀವನದ ಜಂಬೂ ಸವಾರಿ – ಸೆ.27ಕ್ಕೆ ಉದಯ ಟಿವಿಯಲ್ಲಿ ಪ್ರಸಾರ

    ಅಂದಹಾಗೆ ಟಿಕೆಟ್ ಬೆಲೆ ಕೇವಲ 800 ರೂಪಾಯಿ ಆಗಿತ್ತಷ್ಟೆ. ಅದಕ್ಕವನು ಹರಾಜಿನಲ್ಲಿ 1,29,999 ದಾಖಲೆ ಬೆಲೆಗೆ ಕೊಂಡುಕೊಂಡಿರುವುದು ವಿಶೇಷ. ಇದನ್ನೂ ಓದಿ: ಅಂಬರೀಶ್‌ಗೆ ಕರ್ನಾಟಕ ರತ್ನ ನೀಡಿ- ಅಭಿಮಾನಿಗಳಿಂದ ಮನವಿ

  • ಹರಾಜಿಗಿದೆ ಅಪರೂಪದ ‘ಗೋಲ್ಕೊಂಡಾ ಬ್ಲೂ ಡೈಮಂಡ್’- ಭಾರತೀಯ ರಾಜ ಮನೆತನದಲ್ಲಿದ್ದ ಈ ವಜ್ರದ ಬಗ್ಗೆ ನಿಮಗೆಷ್ಟು ಗೊತ್ತು?

    ಹರಾಜಿಗಿದೆ ಅಪರೂಪದ ‘ಗೋಲ್ಕೊಂಡಾ ಬ್ಲೂ ಡೈಮಂಡ್’- ಭಾರತೀಯ ರಾಜ ಮನೆತನದಲ್ಲಿದ್ದ ಈ ವಜ್ರದ ಬಗ್ಗೆ ನಿಮಗೆಷ್ಟು ಗೊತ್ತು?

    ಗತ್ತಿನ ಕೆಲವು ಅಪರೂಪದ ವಸ್ತುಗಳ ಪಟ್ಟಿಗೆ ಸೇರುವ ಒಂದು ಅಪರೂಪದ ವಜ್ರ ಅದು ಗೋಲ್ಕೊಂಡಾ ನೀಲಿ ವಜ್ರ.

    ಭಾರತೀಯ ರಾಜ ಮನೆತನಕ್ಕೆ ಸೇರಿದ ವಿಶ್ವದಲ್ಲೇ ಅಪರೂಪದ ಈ ವಜ್ರ ಸಿಕ್ಕಿದ್ದು, ವಿಶ್ವದ ಅತ್ಯಂತ ಪ್ರಾಚೀನ ವಜ್ರದ ಗಣಿಗಳಲ್ಲಿ ಒಂದಾಗಿರುವ ತೆಲಂಗಾಣದ ಗೋಲ್ಕೊಂಡಾ ಗಣಿಗಳಲ್ಲಿ ಸುಮಾರು 13-14ನೇ ಶತಮಾನದ ಕಾಕತೀಯ ರಾಜವಂಶದ ಆಳ್ವಿಕೆಯಲ್ಲಿ.

    ತೆಲಂಗಾಣದ ಹೃದಯ ಭಾಗದಲ್ಲಿರುವ ಗೋಲ್ಕೊಂಡಾ ಪ್ರದೇಶವು ತನ್ನ ಕೋಟೆಯಿಂದಾಗಿ ಪ್ರಸಿದ್ಧಿಯಾಗಿದೆ. ಆದರೆ ಗೋಲ್ಕೊಂಡಾ ಗಣಿಯಲ್ಲಿ ವಜ್ರ ಸಿಗಲು ಪ್ರಾರಂಭವಾದಾಗಿನಿಂದ ಇದು ಅಪರೂಪದ ವಜ್ರಗಳಿಗೆ ಹೆಸರುವಾಸಿಯಾಗಿದೆ. 16ನೇ ಶತಮಾನ ಹಾಗೂ ಅದಕ್ಕೂ ಮುನ್ನ ಸಿಕ್ಕಿರುವ ವಜ್ರಗಳ ಪೈಕಿ ಈ ವಜ್ರ ತನ್ನ ಸೌಂದರ್ಯ, ಶುದ್ಧತೆ ಹಾಗೂ ವಿಶಿಷ್ಟ ಬಣ್ಣದಿಂದಲೇ ಖ್ಯಾತಿಯನ್ನು ಪಡೆದಿದೆ.

    ನೀಲಿ ವಜ್ರ ಹೆಸರು ಬಂದಿದ್ದು ಹೇಗೆ?
    ಸಾಮಾನ್ಯವಾಗಿ ಗೋಲ್ಕೊಂಡಾ ಗಣಿಗಳಲ್ಲಿ ಸಿಗುವ ಹೆಚ್ಚಿನ ವಜ್ರಗಳು ನೀಲಿ ಛಾಯೆಯನ್ನು ಹೊಂದಿರುತ್ತವೆ. ಈ ರೀತಿ ನೀಲಿ ಛಾಯೆಯನ್ನು ಹೊಂದಿರುವ ವಜ್ರಗಳು ಸಾಮಾನ್ಯವಾಗಿ ಗಾಳಿಯಲ್ಲಿ ಅಥವಾ ವಿವಿಧ ದೀಪಗಳ ಬೆಳಕಿನಲ್ಲಿ ಮಾತ್ರ ಗೋಚರಿಸುತ್ತವೆ. ಆದರೆ ಈ ನೀಲಿ ವಜ್ರದ ಗುಣಲಕ್ಷಣ ಎಲ್ಲ ವಜ್ರಗಳಿಗಿಂತಲೂ ವಿಭಿನ್ನವಾಗಿತ್ತು. ಹೀಗಾಗಿ ಅಂದಿನಿಂದ ಈ ವಜ್ರ ಗೋಲ್ಕೊಂಡಾ ನೀಲಿ ವಜ್ರವಾಗಿ ಹೆಸರು ಪಡೆದುಕೊಂಡಿತು. ಇದರ ಜೊತೆಗೆ ಗೋಲ್ಕೊಂಡಾ ಗಣಿಯಿಂದ ಸಿಕ್ಕಿರುವ ಪ್ರಸಿದ್ಧ ವಜ್ರಗಳಾದ ಹೋಪ್ ಡೈಮಂಡ್, ಕೋಹಿನೂರ್, ರೆಜೆಂಡ್ ಡೈಮಂಡ್ ಇತ್ಯಾದಿ. ಇದೀಗ ಈ ವಜ್ರಗಳು ವಿಶ್ವದ ಪ್ರಮುಖ ಮ್ಯೂಸಿಯಂಗಳಲ್ಲಿವೆ.

    ಭಾರತೀಯ ರಾಜ ಮನೆತನದ ಇಂದೋರ್ ಹಾಗೂ ಬರೋಡ ಮಹಾರಾಜರ ಪರಂಪರೆಯ ಸಂಕೇತವಾಗಿ ಗೋಲ್ಕೊಂಡಾ ನೀಲಿ ವಜ್ರ ಮೊದಲ ಬಾರಿಗೆ ಹರಾಜಾಗಲಿದೆ. ಮೇ.14 ರಂದು ಸ್ವಿಡ್ಜರ್ಲ್ಯಾಂಡ್ ನ ಜಿನೀವಾದಲ್ಲಿ ಕ್ರಿಸ್ಟೀಸ್ ಸಂಸ್ಥೆ ನಡೆಸಲಿರುವ ಮ್ಯಾಗ್ನಿಫಿಸೆಂಟ್ ಜುವೆಲ್ಸ್ ಕಾರ್ಯಕ್ರಮದಲ್ಲಿ ಈ ವಜ್ರ ಹರಾಜಿಗಿಡಲಾಗಿದೆ.

    ವಜ್ರದ ಇತಿಹಾಸ:
    1920ರ ದಶಕದಲ್ಲಿ ಇಂದೋರ್ ನ ಮಹಾರಾಜ ಯಶವಂತ್ ರಾವ್ ಹೋಳ್ಕರ್ ಅವರ ಬಳಿ ಈ ವಜ್ರವಿತ್ತು. ಅದಾದ ಬಳಿಕ 1947ರಲ್ಲಿ ಹ್ಯಾರಿ ವಿನ್ ಸ್ಟನ್ ಎಂಬ ಮಾರಾಟಗಾರ ಈ ವಜ್ರವನ್ನು ಖರೀದಿಸಿದ್ದರು. ಬಳಿಕ ಹ್ಯಾರಿ ವಿನ್ ಸ್ಟನ್ ಈ ವಜ್ರವನ್ನ ಅಮೇರಿಕದ ವಾಷಿಂಗ್ಟನ್ ನ ಡಿಸಿ ವಸ್ತು ಸಂಗ್ರಹಾಲಯಕ್ಕೆ ಹಸ್ತಾಂತರಿಸಿದ್ದರು. ಈಗಲೂ ಕೂಡ ಆ ವಜ್ರ ಅಲ್ಲಿಯೇ ಇದೆ.

    ಖ್ಯಾತ ಆಭರಣ ವಿನ್ಯಾಸಗಾರ ಜಾರ್ ಸಿದ್ದಪಡಿಸಿರುವ ಉಂಗುರದಲ್ಲಿ 23.24 ಕ್ಯಾರೆಟ್ ನ ಗೋಲ್ಕೊಂಡಾ ನೀಲಿ ವಜ್ರವನ್ನು ಇರಿಸಲಾಗಿದೆ. ಸದ್ಯ ಕ್ರಿಸ್ಟೀಸ್ ನಡೆಸಲಿರುವ ಹರಾಜು ಪ್ರಕ್ರಿಯೆಯಲ್ಲಿ ಈ ವಜ್ರ ಸುಮಾರು 300 ಕೋಟಿ ರೂ.ಯಿಂದ 430 ಕೋಟಿ ರೂ.ಗೆ ಹರಾಜಾಗಬಹುದು ಎಂದು ಅಂದಾಜಿಸಲಾಗಿದೆ.

    ಏನಿದು ಕ್ರಿಸ್ಟೀಸ್ ಸಂಸ್ಥೆ?
    1766ರಲ್ಲಿ ಜೇಮ್ಸ್ ಕ್ರಿಸ್ಟಿ ಎಂಬುವವರು ಲಂಡನ್ ನಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದರು. ವಿಶ್ವದ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರಸಿದ್ಧ ಹರಾಜು ಕಂಪನಿಗಳಲ್ಲಿ ಈ ಸಂಸ್ಥೆ ಒಂದಾಗಿದೆ. ಅಪರೂಪದ ಆಭರಣಗಳು, ಪ್ರಾಚೀನ ವಸ್ತುಗಳು ಹಾಗೂ ಐಷಾರಾಮಿ ವಸ್ತುಗಳನ್ನ ಹರಾಜಿಗಿಡುವ ಶ್ರೀಮಂತ ಪರಂಪರೆಯನ್ನು ಈ ಸಂಸ್ಥೆ ಹೊಂದಿದೆ. ಜೊತೆಗೆ ಈ ಸಂಸ್ಥೆ ಲಂಡನ್ ಮಾತ್ರವಲ್ಲದೆ ನ್ಯೂಯಾರ್ಕ್, ಜಿನೀವಾ, ಹಾಂಗ್ ಕಾಂಗ್, ಪ್ಯಾರಿಸ್ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಕಚೇರಿಗಳನ್ನು ಹೊಂದಿದೆ.

    ಈ ಸಂಸ್ಥೆ ಇತಿಹಾಸದಲ್ಲಿ ಅತ್ಯಂತ ದುಬಾರಿಯಾದ ವಸ್ತುಗಳನ್ನ ಹರಾಜು ಮೂಲಕ ಮಾರಾಟ ಮಾಡಿ ಹೆಸರುವಾಸಿಯಾಗಿದೆ. ಈ ಪೈಕಿ ಲಿಯೋನಾರ್ಡೊ ಡವಿಂಚಿಯ ಸಾಲ್ವೆಟರ್ ಮುಂಡಿ (ಮೊನಾಲಿಸಾ) ಈ ಪೇಂಟಿಂಗ್ ಅನ್ನು ಹರಾಜು ಮಾಡಿಸಿದ್ದಾರೆ. ಈ ವಜ್ರಕ್ಕೆ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಪ್ರಸಿದ್ಧಿ ಪಡೆಯಬೇಕು ಎಂಬ ಉದ್ದೇಶದಿಂದ ಮೊದಲ ಬಾರಿಗೆ ಹರಾಜಿಗಿಡಲಾಗಿದೆ.

  • ಕನ್ನಡ ಚಲನಚಿತ್ರ ಕಪ್: ಭಾನುವಾರ ಆಟಗಾರರ ಹರಾಜು

    ಕನ್ನಡ ಚಲನಚಿತ್ರ ಕಪ್: ಭಾನುವಾರ ಆಟಗಾರರ ಹರಾಜು

    ಕಿಚ್ಚ ಸುದೀಪ್ ನೇತೃತ್ವದಲ್ಲಿ ನಡೆಯಲಿರುವ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿಯ ಆಟಗಾರರ ಹರಾಜು (Auction) ಪ್ರಕ್ರಿಯೆ ನಾಳೆ ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಲ್ಲಿ ಶಿವರಾಜ್ ಕುಮಾರ್ (Shivaraj Kumar), ಸುದೀಪ್, ಉಪೇಂದ್ರ, ಗಣೇಶ್, ದುನಿಯಾ ವಿಜಯ್ ಮತ್ತು ಡಾಲಿ ಧನಂಜಯ್ ಸೇರಿದಂತೆ ಹಲವಾರು ಕಲಾವಿದರು ಭಾಗಿಯಾಗಲಿದ್ದಾರೆ.  ಡಿಸೆಂಬರ್ 23 ರಿಂದ ಕ್ರಿಕೆಟ್ ಪಂದ್ಯ ಆಯೋಜನೆಯಾಗಿದೆ.

    ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮೆಗಾ ಕ್ರಿಕೆಟ್ ಪಂದ್ಯಾವಳಿ ಆಯೋಜನೆಯಾಗಿದೆ. ಕಿಚ್ಚ ಸುದೀಪ್ (Sudeep) ನೇತೃತ್ವದಲ್ಲಿ ಪ್ರತಿ ವರ್ಷವೂ ಆಯೋಜನೆಗೊಳ್ಳುವ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ (Kannada Film Cup) ಪಂದ್ಯಾವಳಿ ಡಿಸೆಂಬರ್ ನಿಂದ ಆರಂಭವಾಗಲಿದೆ. ಇದರ ಉದ್ಘಾಟನೆ ಸಮಾರಂಭಕ್ಕೆ ಭಾರತೀಯ ಕ್ರಿಕೆಟ್ ದಿಗ್ಗಜರಾದ ಎಂ.ಎಸ್. ಧೋನಿ (MS Dhoni) ಮತ್ತು ಸಚಿನ್ ತೆಂಡೂಲ್ಕರ್ (Sachin Tendulkar) ಆಗಮಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈಗಾಗಲೇ ಇಬ್ಬರ ಜೊತೆ ಮಾತುಕತೆ ಕೂಡ ನಡೆಸಲಾಗಿದೆ.

    ಹಲವಾರು ವರ್ಷಗಳಿಂದ ಕನ್ನಡ ಚಿತ್ರೋದ್ಯಮವನ್ನು ಸಂಘಟಿಸಿಕೊಂಡು ಕ್ರಿಕೆಟ್ (Cricket)) ಪಂದ್ಯಾವಳಿಯನ್ನು ಆಯೋಜನೆ ಮಾಡುತ್ತಾ ಬರಲಾಗಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲ, ಹುಬ್ಬಳಿಯಲ್ಲೂ ಈ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು. ಕನ್ನಡ ಸಿನಿಮಾ ರಂಗದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಈ ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ.

    ನಟರು ತಮ್ಮದೇ ಆದ ತಂಡಗಳನ್ನು ಕಟ್ಟಿಕೊಂಡು ಆಟವಾಡುವುದು ಈ ಕ್ರಿಕೆಟ್ ಪಂದ್ಯದ ಉದ್ದೇಶ. ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕ್ರೀಡೆಗೂ ಉತ್ತೇಜಿಸುವಂತಹ ಕೆಲಸವನ್ನು ಕನ್ನಡ ಚಿತ್ರೋದ್ಯಮ ಮಾಡುತ್ತಾ ಬಂದಿದೆ. ಕೆಸಿಸಿ ಹೆಸರಿನಲ್ಲಿ ಈ ಪಂದ್ಯಗಳು ಆಯೋಜನೆ ಆಗುತ್ತವೆ.

     

    ಶಿವರಾಜ್ ಕುಮಾರ್, ಗಣೇಶ್, ಸುದೀಪ್, ಪುನೀತ್ ರಾಜ್ ಕುಮಾರ್, ಯಶ್, ದರ್ಶನ್, ಉಪೇಂದ್ರ, ಡಾಲಿ ಧನಂಜಯ್ ಹೀಗೆ ಅನೇಕರು ಈ ಪಂದ್ಯದಲ್ಲಿ ಆಡಿದ್ದಾರೆ. ಈ ಕ್ರಿಕೆಟ್ ಪಂದ್ಯದ ಮತ್ತೊಂದು ವಿಶೇಷ ಅಂದರೆ, ನುರಿತ ಕ್ರಿಕೆಟ್ ಆಟಗಾರರು ಕೂಡ ಭಾಗಿ ಆಗಿರುತ್ತಾರೆ. ಭಾರತ ಕ್ರಿಕೆಟ್ ತಂಡದಲ್ಲಿ ಆಡಿರುವ ಮತ್ತು ವಿದೇಶಿ ಕ್ರಿಕೆಟ್ ಆಟಗಾರರು ಕೂಡ ಪಂದ್ಯದಲ್ಲಿ ಆಡಿದ್ದಾರೆ.

  • ಸಿನಿಮಾ ನಂಟಿನ ಸುಕೇಶ್ ನೆಚ್ಚಿನ ಐಷಾರಾಮಿ ಕಾರುಗಳ ಹರಾಜು

    ಸಿನಿಮಾ ನಂಟಿನ ಸುಕೇಶ್ ನೆಚ್ಚಿನ ಐಷಾರಾಮಿ ಕಾರುಗಳ ಹರಾಜು

    ಹುಕೋಟಿ ರೂಪಾಯಿ ವಂಚನೆಯ ಆರೋಪಿ ಸುಕೇಶ್ ಚಂದ್ರಶೇಖರ್ (Sukesh Chandrasekhar) ನೆಚ್ಚಿನ ಐಷಾರಾಮಿ ಕಾರುಗಳನ್ನು ಹರಾಜಿಗೆ ಇಟ್ಟಿದ್ದಾರೆ ಐಟಿ ಅಧಿಕಾರಿಗಳು. ನೂರಾರು ಕೋಟಿ ರೂಪಾಯಿ ವಂಚನೆ ಕೇಸಲ್ಲಿ ಬಂಧನ ಆಗಿರೋ ಸುಕೇಶ್ ಚಂದ್ರಶೇಖರ್, ಸದ್ಯ ದೆಹಲಿ ಕಾರಾಗೃಹದಲ್ಲಿದ್ದಾರೆ. ಹಲವು ಸಂಸ್ಥೆಗಳಿಗೆ ತೆರಿಗೆ ಬಾಕಿ ಉಳಿಸಿಕೊಂಡಿರೋ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಹಲವು ಸ್ವತ್ತುಗಳನ್ನು ವಶಪಡಿಸಿಕೊಂಡಿತ್ತು.

    ಸುಕೇಶ್ ಚಂದ್ರಶೇಖರ್ ಗೆ ಸಂಬಂಧಿಸಿದ 12 ಐಷಾರಾಮಿ ಕಾರುಗಳನ್ನೂ ಜಪ್ತಿ ಮಾಡಿದ್ದ ಐಟಿ ಅಧಿಕಾರಿಗಳು BMW, ರೇಂಜ್ ರೋವರ್, ಜಾಗ್ವಾರ್, ಪೋರ್ಷೆ, ಬೆಂಟ್ಲಿ, ರೋಲ್ಸ್ ರಾಯ್ಸ್, ಲ್ಯಾಂಬೋರ್ಗಿನಿ, ಡುಕಾಟಿ ಡಿಯಾವೆಲ್ ಸೇರಿ ಹಲವು ಐಷಾರಾಮಿ ಕಾರುಗಳನ್ನು ಇದೀಗ ಹರಾಜಿಗೆ (Auction) ಇಟ್ಟಿದ್ದಾರೆ.  ನ.28 ರಂದು ಹರಾಜು ಹಾಕಲು ಮುಂದಾಗಿದ್ದು, ಸುಮಾರು 308 ಕೋಟಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದರ ಪರಿಣಾಮ ಇದಾಗಿದೆ.

    ಈಗ ಕಾರು ಹರಾಜಿನ ಕಾರಣದಿಂದಾಗಿ ಸುದ್ದಿ ಆಗಿರುವ ಸುಕೇಶ್, ಈ ಹಿಂದೆ ಜೈಲಿನಲ್ಲಿದ್ದುಕೊಂಡೇ (Jail) ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಗೆ ಪ್ರೇಮ ಪತ್ರ (Love Letter) ಬರೆಯುವ ಮೂಲಕ ಸುದ್ದಿಯಾಗಿದ್ದ. ನಿನಗಾಗಿ ನಾನು ಎಂತಹ ರಿಸ್ಕ್ ತಗೆದುಕೊಳ್ಳಲೂ ರೆಡಿ ಇರುವುದಾಗಿ ತಿಳಿಸಿದ್ದ. ಈ ಪತ್ರವನ್ನು ಜಾಕ್ವೆಲಿನ್ ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಆದರೆ, ಪತ್ರವನ್ನಂತೂ ಬರೆದು, ಜಾಕ್ವೆಲಿನ್ ಗೆ ಪೋಸ್ಟ್ ಮಾಡಿದ್ದ.

    ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸುಕೇಶ್ ಚಂದ್ರಶೇಖರ್ ಡೇಟಿಂಗ್ ವಿಚಾರ ಗುಟ್ಟಾಗಿ ಉಳಿದಿರಲಿಲ್ಲ. ಇಬ್ಬರೂ ಜೊತೆಯಾಗಿ ಕಳೆದ ಖಾಸಗಿ ಫೋಟೋಗಳು ಕೂಡ ವೈರಲ್ ಆಗಿದ್ದವು. ಇವರ ಪ್ರೇಮಕ್ಕೆ ಸಾಕ್ಷಿ ಎನ್ನುವಂತೆ ಕೋಟಿ ಬೆಲೆಬಾಳುವ ಗಿಫ್ಟ್ ಪಡೆದಿದ್ದಳು ಜಾಕ್ವೆಲಿನ್. ಈ ಉಡುಗೊರೆಗಳೇ ಕೊನೆಗೆ ನಟಿಗೆ ಮುಳುವಾದವು. ಕೋರ್ಟ್ ಮೆಟ್ಟಿಲು ಕೂಡ ಹತ್ತಿಸಿದವು.

    ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕೇಶ್ ಬಂಧನವಾಗುತ್ತಿದ್ದಂತೆಯೇ ಜಾಕ್ವೆಲಿನ್ ಗೂ ಕೂಡ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿತ್ತು. ವಂಚನೆಯ ಹಣದಲ್ಲೇ ನಟಿಗೆ ಉಡುಗೊರೆ ನೀಡಿದ್ದಾನೆ ಎಂದು ಆರೋಪಿಸಲಾಗಿತ್ತು. ಜಾಕ್ವೆಲಿನ್ ಕೂಡ ಬಂಧನವಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ನಟಿ ಮಧ್ಯಂತರ ಜಾಮೀನು  ಪಡೆದುಕೊಂಡರು. ಆದರೂ, ವಿಚಾರಣೆಗೆ ಹೋಗುವುದು ತಪ್ಪಲಿಲ್ಲ.

     

    ನಂತರದ ದಿನಗಳಲ್ಲಿ ಸುಕೇಶ್ ಗೂ ತಮಗೂ ಸಂಬಂಧವಿಲ್ಲ. ಅವನಿಂದಾಗಿ ನನ್ನ ಜೀವನ ಹಾಳಾಯಿತು ಎಂದು ಜಾಕ್ವೆಲಿನ್ ಆರೋಪಿಸಿದರು. ಈಕೆ ಏನೇ ಆರೋಪ ಮಾಡಿದರೂ, ಸುಕೇಶ್ ಮಾತ್ರ ಇನ್ನೂ ಜಾಕ್ವೆಲಿನ್ ಜಪ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಪ್ರೇಮಿಗಳ ದಿನದಂದು ವಿಶ್ ಮಾಡಿದ್ದ. ಹೋಳಿ ಹಬ್ಬಕ್ಕೂ ಸುಕೇಶ್ ಶುಭಾಶಯಗಳನ್ನು ಹೇಳಿದ್ದಾನೆ. ಜೊತೆಗೆ ಪ್ರೇಮ ಸಂದೇಶ ಕಳುಹಿಸಿದ್ದಾನೆ.

  • ದುಬೈನಲ್ಲಿ ನಡೆಯಿತು ಡಾ.ರಾಜ್ ಕಪ್ ಟೀಮ್ ಹರಾಜು ಪ್ರಕ್ರಿಯೆ

    ದುಬೈನಲ್ಲಿ ನಡೆಯಿತು ಡಾ.ರಾಜ್ ಕಪ್ ಟೀಮ್ ಹರಾಜು ಪ್ರಕ್ರಿಯೆ

    ನ್ನಡ ಚಿತ್ರರಂಗದ ನಟರು ಒಟ್ಟಾಗಿ ಆಡುವ ಡಾ.ರಾಜ್ ಕಪ್ ಕ್ರಿಕೆಟ್ (Cricket) ಪಂದ್ಯಾವಳಿ ಸೀಸನ್ 6ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಸ್ಮರಣಾರ್ಥವಾಗಿ ಈ ಬಾರಿ ರಾಜ್ ಕಪ್ ( (Dr. Raj Cup)) ಆಯೋಜಿಸಲಾಗಿದ್ದು, ನಿನ್ನೆ ಜೂನ್ 17 ರಂದು ದುಬೈನಲ್ಲಿ (Dubai) ಟೀಮ್ ಹರಾಜು (Auction) ಪ್ರಕ್ರಿಯೆ ನಡೆಯಿತು. ಈ ಹರಾಜು ಪ್ರಕ್ರಿಯೆಯಲ್ಲಿ ಸ್ಯಾಂಡಲ್ ವುಡ್ ಅನೇಕ ತಾರೆಯರು ಭಾಗಿಯಾಗಿದ್ದರು.

    ನಟರಾದ ನೀನಾಸಂ ಸತೀಶ್, ಡಾಲಿ ಧನಂಜಯ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ ಪನ್ನಗಾಭರಣ, ಚೇತನ್ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ:ರಶ್ಮಿಕಾ ಮಾತ್ರವಲ್ಲ, ಪೂಜಾಗೂ ಠಕ್ಕರ್ ಕೊಡ್ತಿದ್ದಾರೆ ‘ಭರಾಟೆ’ ಬ್ಯೂಟಿ ಶ್ರೀಲೀಲಾ

    ಪಂದ್ಯಾವಳಿಯ ಉದ್ಘಾಟನೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneet Rajkumar) ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ. ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಮೊನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ, ಆಯೋಜಕರಾದ ರಾಜೇಶ್ ಬ್ರಹ್ಮಾವರ, ಅನಿರುದ್ದ, ಮಣಿಕಾಂತ್ ಕದ್ರಿ, ಸಿಂಪಲ್ ಸುನಿ, ರವಿಶಂಕರ್ ಗೌಡ, ಜೇಮ್ಸ್ ಚೇತನ್, ಪವನ್ ಒಡೆಯರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದಾರೆ.

    ರಾಜ್ ಕಪ್ ಆಯೋಜಕರಾದ ರಾಜೇಶ್ ಬ್ರಹ್ಮಾವರ (Rajesh Brahmavar) ಮಾತನಾಡಿ, ಕಳೆದ ಬಾರಿ 8 ತಂಡ ಇತ್ತು. ಈ ಬಾರಿ 12 ತಂಡಗಳಾಗಿವೆ.  1000ಕ್ಕೂ ಹೆಚ್ಚು ಅಪ್ಲೀಕೇಷನ್ ಬಂದಿತ್ತು. ಅವುಗಳಲ್ಲಿ ರೂಲ್ಸ್ ಗೆ ತಕ್ಕಂತೆ ಆಯ್ಕೆ ಮಾಡಲಾಗಿದೆ. 12 ತಂಡಗಳಿಗೆ 12 ಕ್ಯಾಪ್ಟನ್, 12 ವೈಸ್ ಕ್ಯಾಪ್ಟನ್, ಸ್ಟಾರ್ ಕ್ಯಾಪ್ಟನ್ ಇರಲಿದ್ದಾರೆ. ರಾಜ್ ಕಪ್ ಸೀಸನ್ 6ನ್ನು ಆರು ದೇಶಗಳಲ್ಲಿ ಮಾಡುವ ಪ್ಲಾನ್ ನಡೆದಿದೆ. ಶ್ರೀಲಂಕಾ, ಸಿಂಗಾಪುರ, ಮಲೇಷ್ಯಾ, ಬ್ಯಾಂಕಾಕ್ ಮತ್ತು ದುಬೈನಲ್ಲಿ ಪಂದ್ಯ ನಡೆಯಲಿವೆ. ಇನ್ನೊಂದು ದೇಶ ಬಾಕಿ ಉಳಿದಿದೆ.

    ನಟ ಅನಿರುದ್ದ (Aniruddha) ಮಾತನಾಡಿ, ಡಾ.ರಾಜ್ ಕಪ್ ಹೆಸರಲ್ಲೇ ಸಕಾರಾತ್ಮಕತೆ ಇದೆ. ಆ ಒಂದು ವ್ಯಕ್ತಿಗೆ ಮಹಾನ್ ಕಲಾವಿದರಿಗೆ ಅವ್ರ ಹೆಸರಲ್ಲಿ ಅವರ ಸ್ಮರಣಾರ್ಥವಾಗಿ ಕ್ರಿಕೆಟ್ ಪಂದ್ಯಾವಳಿ ಆಡುತ್ತಿರುವುದು ನಿಜಕ್ಕೂ ಸಂತೋಷ. ಅದರಲ್ಲಿ ನಾನು ಭಾಗಿಯಾಗಿದ್ದು, ರಾಜೇಶ್ ಅವಕಾಶ ಕಲ್ಪಿಸಿಕೊಟ್ಟಿದ್ದು, ನನಗೆ ವೈಯಕ್ತಿಕವಾಗಿ ಬಹಳ ಸಂತೋಷವಾಗಿದೆ. ರಾಜೇಶ್ ನನಗೆ ಆತ್ಮೀಯರು. ನನ್ನ ಮೊದಲ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದೇವೆ. ಕ್ರಿಕೆಟ್ ಅನ್ನೋದು ನಿಮಿತ್ತ ಅಷ್ಟೇ. ನಮ್ಮ ಕನ್ನಡ ಚಿತ್ರರಂಗದ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಬಾಂಧವ್ಯ ಇದೆ ಅನ್ನೋದನ್ನು ತೋರಿಸಿಕೊಡುತ್ತದೆ. ಈ ಪಂದ್ಯಾವಳಿ ಯಶಸ್ವಿಯಾಗಲಿ ಎಂದರು.

     

    ಡಾ. ರಾಜ್ ಕಪ್ ಸೀಸನ್ 6 ನಲ್ಲಿ ಒಟ್ಟು 12 ತಂಡಗಳು ಭಾಗಿಯಾಗಲಿದ್ದು, 27 ಮ್ಯಾಚ್ ಗಳು ನಡೆಯಲಿದೆ.  ಡಾಲಿ ಧನಂಜಯ್, ಅನಿರುದ್ದ, ಡಾರ್ಲಿಂಗ್ ಕೃಷ್ಣ , ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ಪ್ರಜ್ವಲ್, ಕೋಮಲ್, ಶ್ರೀನಗರ ಕಿಟ್ಟಿ, ರಾಜುಗೌಡ ನೇತೃತ್ವದ ತಂಡಗಳು ಪಾಲ್ಗೊಳ್ಳಲಿವೆ. ಇನ್ನು, ರಾಜ್ ಕಪ್ ಸೀಸನ್ 6ರ ಲೀಗ್ ಮ್ಯಾಚ್ ಗಳು ವಿದೇಶದಲ್ಲಿ ನಡೆಯಲಿದೆ. ಈ ಬಾರಿ ಲೀಗ್ ಪಂದ್ಯಗಳು ಶ್ರೀಲಂಕಾ, ಸಿಂಗಾಪುರ, ಮಲೇಷ್ಯಾ ಬ್ಯಾಂಕಾಕ್ ಮತ್ತು ದುಬೈನಲ್ಲಿ ನಡೆಯಲಿವೆ. ಈ ಮಹತ್ವದ ರಾಜ್ ಕಪ್ ಟೂರ್ನಿಗಾಗಿ ಸ್ಯಾಂಡಲ್ ವುಡ್ ತಾರೆಯರು, ತಂತ್ರಜ್ಞರ, ರಾಜಕೀಯ, ಮಾಧ್ಯಮದವರು ಭಾಗಿಯಾಗಲಿದ್ದಾರೆ.

  • ಬೇಳೂರು ರಾಘವೇಂದ್ರ ಶೆಟ್ಟಿ ಮನೆ ಹರಾಜು – ಸೆಕ್ಯುರಿಟಿ ಗಾರ್ಡ್ ಕಣ್ತಪ್ಪಿಸಿ ಅಕ್ರಮ ಪ್ರವೇಶ

    ಬೇಳೂರು ರಾಘವೇಂದ್ರ ಶೆಟ್ಟಿ ಮನೆ ಹರಾಜು – ಸೆಕ್ಯುರಿಟಿ ಗಾರ್ಡ್ ಕಣ್ತಪ್ಪಿಸಿ ಅಕ್ರಮ ಪ್ರವೇಶ

    ಬೆಂಗಳೂರು: ಕರ್ನಾಟಕ ಕರಕುಶಲ ವಸ್ತುಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿಯವರ (Beluru Raghavendra Shetty) ಮನೆಯನ್ನು ಬ್ಯಾಂಕ್ ಹರಾಜಿಗಿಟ್ಟಿದೆ. ಆದರೆ ಹರಾಜಿಗೂ ಮುನ್ನವೇ ಬ್ಯಾಂಕ್ (Bank) ಕಾವಲಿಗಿಟ್ಟಿದ್ದ ಸೆಕ್ಯುರಿಟಿ ಗಾರ್ಡ್ ಕಣ್ತಪ್ಪಿಸಿ ಅಕ್ರಮ ಪ್ರವೇಶ ಮಾಡಿದ್ದಾರೆ.

    ಬೇಳೂರು ರಾಘವೇಂದ್ರ ಶೆಟ್ಟಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 5 ಕೋಟಿ ರೂ.ಗೂ ಅಧಿಕ ಸಾಲ (Loan) ಪಡೆದಿದ್ದರು. ಸಾಲವನ್ನು ಮರುಪಾವತಿ ಮಾಡದ ಹಿನ್ನೆಲೆ ನ್ಯಾಯಾಲಯ ರಾಘವೇಂದ್ರ ಅವರ ಮನೆಯನ್ನು ಬ್ಯಾಂಕ್ ವಶಕ್ಕೆ ನೀಡಿತ್ತು. ಇದೀಗ ಬ್ಯಾಂಕ್ 3 ದಿನಗಳಲ್ಲಿ ಮನೆಯನ್ನು ಹರಾಜಿಗಿಡಲು ಮುಂದಾಗಿದೆ.

    ಸಂಜಯನಗರದ ಡಾಲರ್ಸ್ ಕಾಲೋನಿಯಲ್ಲಿ ಎಸ್‌ಎಂಸಿ ಬೆವರ್ಲಿ ಅಪಾರ್ಟ್ಮೆಂಟ್‌ನಲ್ಲಿ ರಾಘವೇಂದ್ರ ಅವರ ಈ ಫ್ಲ್ಯಾಟ್ ಇದೆ. ರಾಘವೇಂದ್ರ ಮಾಡಿದ್ದ ಸಾಲ ಮರುಪಾವತಿ ಮಾಡದ ಹಿನ್ನೆಲೆ ನ್ಯಾಯಾಲಯ ಕಳೆದ ಡಿಸೆಂಬರ್‌ನಲ್ಲಿ ಆದೇಶ ನೀಡಿ ಮನೆಯನ್ನು ಬ್ಯಾಂಕ್ ವಶಕ್ಕೆ ನೀಡಿದೆ. ಇದನ್ನೂ ಓದಿ: ಅನ್ಯಕೋಮಿನವರ ವ್ಯಾಪಾರಕ್ಕೆ ನಿರ್ಬಂಧ ಹೇರಿ – ಈಗ ಕಿಗ್ಗಾದಲ್ಲೂ ಧರ್ಮ ದಂಗಲ್

    ಇದೀಗ ಬ್ಯಾಂಕ್ ವಶಕ್ಕೆ ಪಡೆದಿರುವ ಮನೆಯನ್ನು ಹರಾಜು ಹಾಕಲು ಸಿದ್ಧತೆ ನಡೆಸುತ್ತಿದೆ. ಆದರೆ ಈ ನಡುವೆ ಬುಧವಾರ ಮಧ್ಯರಾತ್ರಿ ರಾಘವೆಂದ್ರ ಶೆಟ್ಟಿ ಕಡೆಯವರು ಮನೆಗೆ ಹಾಕಲಾಗಿದ್ದ ಸೀಲ್ ಅನ್ನು ಒಡೆದು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ.

    ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿರುವುದನ್ನು ತಿಳಿದ ಪೊಲೀಸರು ಹಾಗೂ ಬ್ಯಾಂಕ್ ಅಧಿಕಾರಿಗಳು ಮನೆಯೊಳಗಿದ್ದವರಿಗೆ ಬಾಗಿಲು ತೆರೆಯುವಂತೆ ಸೂಚಿಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಬಾಗಿಲನ್ನು ತೆರೆದಿದ್ದಾರೆ. ಅವರನ್ನು ಬಲವಂತವಾಗಿ ಮನೆಯಿಂದ ಹೊರಹಾಕಲು ಪ್ರಯತ್ನಿಸಿದರೆ ಆತ್ಮಹತ್ಯೆಯ ಬೆದರಿಕೆ ಒಡ್ಡುತ್ತಿದ್ದಾರೆ.

    ಇದೀಗ ಅತಿಕ್ರಮವಾಗಿ ಮನೆ ಪ್ರವೇಶ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ಗೆ ಪ್ರತಿಷ್ಠಿತ ವರ್ಷದ ಗವರ್ನರ್‌ ಪ್ರಶಸ್ತಿ

  • ಸಾಲ ಮಾಡಿ ವಿದೇಶಕ್ಕೆ ಪರಾರಿ – ಫೆಬ್ರವರಿಯಲ್ಲಿ ನೀರವ್‌ ಮೋದಿ ಆಸ್ತಿ ಹರಾಜು

    ಸಾಲ ಮಾಡಿ ವಿದೇಶಕ್ಕೆ ಪರಾರಿ – ಫೆಬ್ರವರಿಯಲ್ಲಿ ನೀರವ್‌ ಮೋದಿ ಆಸ್ತಿ ಹರಾಜು

    ಮುಂಬೈ: ಕೋಟ್ಯಂತರ ರೂ. ಸಾಲ ಮಾಡಿ ದೇಶ ಬಿಟ್ಟು ಪರಾರಿಯಾಗಿರುವ ವಜ್ರ ಉದ್ಯಮಿ ನೀರವ್‌ ಮೋದಿ(Nirav Modi) ಸಂಬಂಧಿಸಿದ ಆಸ್ತಿಯನ್ನು ಹರಾಜು(Auction)  ಹಾಕಲು ಸಾಲ ವಸೂಲಾತಿ ನ್ಯಾಯಮಂಡಳಿ-1(DRT-1) ಮುಂದಾಗಿದೆ.

    ಪುಣೆಯ ಅಪಾರ್ಟ್‌ಮೆಂಟ್‌ನಲ್ಲಿರುವ 398 ಚದರ ಮೀಟರ್ ಮತ್ತು 396 ಚದರ ಮೀಟರ್ ಅಳತೆಯನ್ನು ಹೊಂದಿರುವ ಫ್ಲ್ಯಾಟ್‌ ಮಾರಾಟಕ್ಕೆ ಸಿದ್ಧತೆ ನಡೆದಿದೆ.

    ಈ ಎರಡು ಫ್ಲ್ಯಾಟ್‌ಗಳಿಗೆ ಕ್ರಮವಾಗಿ ರೂ 8.99 ಕೋಟಿ ರೂ. ಮತ್ತು ರೂ 8.93 ಕೋಟಿ ರೂ. ಮೂಲ ಬೆಲೆಯನ್ನು ನಿಗದಿಪಡಿಸಲಾಗಿದ್ದು, ಫೆಬ್ರವರಿ 3 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಗೆ ಬಂದವರಿಗೆ ಯಾರಿಗೆ ಎಷ್ಟು ಲಕ್ಷ ಮೊತ್ತದ ಬಹುಮಾನ?

    ಏನಿದು ಪ್ರಕರಣ?
    ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ(Punjab National Bank) 13 ಸಾವಿರ ಕೋಟಿ ರೂ. ವಂಚಿಸಿದ ಆರೋಪ ನೀರವ್ ಮೋದಿ ಮೇಲಿದೆ. ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ(Mehul Choksi) ವಿರುದ್ಧ ಕೂಡ ಸಿಬಿಐ, ಇಡಿ ಪ್ರಕರಣ ದಾಖಲಿಸಿದೆ. ಪ್ರಕರಣ ಸಂಬಂಧ ಈಗಾಗಲೇ ಮುಂಬೈ ಸೇರಿದಂತೆ ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿಯನ್ನು ತನಿಖಾ ಸಂಸ್ಥೆಗಳು ಮುಟ್ಟುಗೋಲು ಹಾಕಿದೆ.

    ನೀರವ್‌ ಮೋದಿ ಲಂಡನ್‌ನಲ್ಲಿ ನೆಲೆಸಿದ್ದರೆ ಮೆಹುಲ್ ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ನೆಲೆಸಿದ್ದಾರೆ. ಇಬ್ಬರನ್ನು ಭಾರತಕ್ಕೆ ಕರೆ ತರಲು ಕಾನೂನು ಹೋರಾಟ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ದೇವರ ನಾಡಲ್ಲಿ ಐಪಿಎಲ್ ಮಿನಿ ಹರಾಜು – ಭಾರತದ 714 ಸೇರಿ ಒಟ್ಟು 991 ಆಟಗಾರರು ನೋಂದಣಿ

    ದೇವರ ನಾಡಲ್ಲಿ ಐಪಿಎಲ್ ಮಿನಿ ಹರಾಜು – ಭಾರತದ 714 ಸೇರಿ ಒಟ್ಟು 991 ಆಟಗಾರರು ನೋಂದಣಿ

    ಮುಂಬೈ: ದೇವರ ನಾಡು ಕೊಚ್ಚಿಯಲ್ಲಿ (Kochi) ಡಿ.23 ರಂದು ನಡೆಯಲಿರುವ ಐಪಿಎಲ್‌ (IPL) ಮಿನಿ ಹರಾಜಿಗೆ (Auction) ಭಾರತದ 714 ಮಂದಿ ಸೇರಿ ಒಟ್ಟು 991 ಆಟಗಾರರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

    ಅಂತಿಮ ಪಟ್ಟಿಯಲ್ಲಿ ಬೆನ್‍ಸ್ಟೋಕ್ಸ್, ಸ್ಯಾಮ್ ಕರ್ರನ್, ಕೇನ್ ವಿಲಿಯಮ್ಸನ್, ನಿಕೋಲಸ್ ಪೂರನ್‍ರಂತಹ ಸ್ಟಾರ್ ಆಟಗಾರರಿಗೆ 2 ಕೋಟಿ ರೂ. ಮೂಲ ಬೆಲೆ ನಿಗದಿಪಡಿಸಲಾಗಿದೆ. 14 ದೇಶಗಳಿಂದ ಆಟಗಾರರು ಮಿನಿ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಆಸ್ಟ್ರೇಲಿಯಾದಿಂದ ಒಟ್ಟು 57 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ 52, ವೆಸ್ಟ್ ಇಂಡೀಸ್ 33, ಇಂಗ್ಲೆಂಡ್ 31, ನ್ಯೂಜಿಲೆಂಡ್ 27, ಶ್ರೀಲಂಕಾ 23, ಅಫ್ಘಾನಿಸ್ತಾನ 14, ಐರ್ಲೆಂಡ್ 8, ನೆದರ್‌ಲ್ಯಾಂಡ್‌ 7, ಬಾಂಗ್ಲಾದೇಶ 6, ಯುಎಇ 6, ಜಿಂಬಾಬ್ವೆ 6, ನಮೀಬಿಯಾ 5 ಮತ್ತು ಸ್ಕಾಟ್ಲೆಂಡ್‍ನಿಂದ ಇಬ್ಬರು ಆಟಗಾರರು ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಸ್ಮಿತ್ ಬ್ಯಾಟ್‍ನಿಂದ ಹೊಡೆತ ತಿಂದ ಅಂಪೈರ್

    ಒಟ್ಟು 991 ಆಟಗಾರರ ಪಟ್ಟಿಯಲ್ಲಿ 185 ಕ್ಯಾಪ್ಡ್ (ಈಗಾಗಲೇ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ಆಟಗಾರರು), 786 ಅನ್‍ಕ್ಯಾಪ್ಡ್ (3 ಮಾದರಿಯ ಕ್ರಿಕೆಟ್‍ನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಆಟಗಾರರು)  ಮತ್ತು 20 ಅಸೋಸಿಯೇಟ್ ನೇಷನ್ಸ್‌ನ ಆಟಗಾರರಿದ್ದಾರೆ. ಇದೀಗ ಪ್ರತಿ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಗರಿಷ್ಠ 25 ಆಟಗಾರರನ್ನು ಹೊಂದಲು ಅವಕಾಶವಿದೆ. ಹಾಗಾಗಿ ಇದೀಗ ಮಿನಿ ಹರಾಜಿನತ್ತ ಫ್ರಾಂಚೈಸ್‍ಗಳ ಚಿತ್ತ ನೆಟ್ಟಿದೆ. ಇದನ್ನೂ ಓದಿ: 450 ಎಸೆತಕ್ಕೆ 506 ರನ್‌ – ಇಂಗ್ಲೆಂಡ್‌ ಬ್ಯಾಟರ್‌ಗಳ ಆರ್ಭಟಕ್ಕೆ ಹಲವು ವಿಶ್ವದಾಖಲೆ ಉಡೀಸ್‌

    Live Tv
    [brid partner=56869869 player=32851 video=960834 autoplay=true]

  • 1.77 ಕೋಟಿಗೆ ಸೇಲ್ ಆಯ್ತು 1970ರ ದಶಕದ ಸ್ಟೀವ್ ಜಾಬ್ಸ್ ಚಪ್ಪಲಿ

    1.77 ಕೋಟಿಗೆ ಸೇಲ್ ಆಯ್ತು 1970ರ ದಶಕದ ಸ್ಟೀವ್ ಜಾಬ್ಸ್ ಚಪ್ಪಲಿ

    ವಾಷಿಂಗ್ಟನ್: ಆಪಲ್ ಕಂಪನಿಯ ಸಹ-ಸಂಸ್ಥಾಪಕ (Apple co-founder) ಸ್ಟೀವ್ ಜಾಬ್ಸ್ (Steve Jobs) ಅವರು ಧರಿಸುತ್ತಿದ್ದ ಕಂದು ಬಣ್ಣದ ಲೆದರ್ ಚಪ್ಪಲಿ 1.77 ಕೋಟಿಗೆ ($218,750) ಮಾರಾಟವಾಗಿದೆ ಎಂದು ಹರಾಜು (Auctions) ಕಂಪನಿ ಜೂಲಿಯನ್ಸ್ (Julien’s) ತಿಳಿಸಿದೆ.

    ನವೆಂಬರ್ 11 ರಿಂದ ನೇರ ಪ್ರಸಾರವಾದ ಹರಾಜು ಪ್ರಕ್ರಿಯೆ ನವೆಂಬರ್ 13ಕ್ಕೆ ಮುಕ್ತಾಯವಾಯಿತು. ಒಂದು ಜೊತೆ ಕಂದು ಬಣ್ಣದ (Brown Suede) ಸ್ಯೂಡ್ ಲೆದರ್ ಬರ್ಕೆನ್‍ಸ್ಟಾಕ್ ಅರಿಜೋನಾ ಚಪ್ಪಲಿಯನ್ನು (Leather Birkenstock Arizona sandals) ಸ್ಟೀವ್ ಜಾಬ್ಸ್ ಅವರು ಧರಿಸುತ್ತಿದ್ದರು. 1970ರ ಮತ್ತು 1980ರ ದಶಕದಲ್ಲಿ ಸ್ಟೀವ್ ಜಾಬ್ಸ್ ಈ ಚಪ್ಪಲಿಯನ್ನು ಧರಿಸುತ್ತಿದ್ದರು. ಈ ಒಂದು ಜೊತೆ ಚಪ್ಪಲಿ, ಹಿಂದೆ ಸ್ಟೀವ್ ಜಾಬ್ಸ್ ಅವರ ಮನೆ ನಿರ್ವಾಹಕ ಆಗಿದ್ದ ಮಾರ್ಕ್ ಶೆಫ್ ಅವರ ಬಳಿ ಇತ್ತು.

    ಹರಾಜು ಮನೆಯ ವೆಬ್‍ಸೈಟ್‍ನಲ್ಲಿನ ವಿವರಗಳ ಪ್ರಕಾರ, ಆಪಲ್ ಕಂಪನಿಯ ಇತಿಹಾಸದಲ್ಲಿ ಅನೇಕ ಪ್ರಮುಖ ಕ್ಷಣಗಳಲ್ಲಿ ಸ್ಟೀವ್ ಜಾಬ್ಸ್ ಈ ಚಪ್ಪಲಿಗಳನ್ನು ಧರಿಸಿದ್ದರು. 1976ರಲ್ಲಿ ಲಾಸ್ ಆಲ್ಟೋಸ್ ಗ್ಯಾರೇಜ್‍ನಲ್ಲಿ ಆಪಲ್ ಕಂಪ್ಯೂಟರ್ ಅನ್ನು ಆನ್ ಮಾಡುವ ಸಂದರ್ಭದಲ್ಲಿ ಸ್ಟೀವ್ ಜಾಬ್ಸ್ ಇದೇ ಚಪ್ಪಲಿಯನ್ನು ಧರಿಸಿದ್ದರು. ಜಾಬ್ಸ್ ಬಿರ್ಕೆನ್‍ಸ್ಟಾಕ್ಸ್‌ನ ಜಾಣ್ಮೆ ಮತ್ತು ಪ್ರಾಯೋಗಿಕತೆಯನ್ನು ಕಂಡು ಜನ ಬೆರಗಾಗಿದ್ದರು. ಇದನ್ನೂ ಓದಿ: ಯಾರಿಗೂ ನಂಬಿಕೆ ದ್ರೋಹ ಮಾಡ್ಬೇಡಿ- ಗೆಳತಿಯ ಕತ್ತು ಸೀಳಿ ವೀಡಿಯೋ ಹಂಚಿಕೊಂಡ ಕ್ರೂರಿ

    ಈ ಚಪ್ಪಲಿಯನ್ನು ಇಟಲಿಯ ಮಿಲಾನೊದಲ್ಲಿನ ಸಲೋನ್ ಡೆಲ್ ಮೊಬೈಲ್‍ನಲ್ಲಿ ಮಾತ್ರವಲ್ಲದೇ, 2017 ರಲ್ಲಿ ಜರ್ಮನಿಯ ರಹ್ಮ್ಸ್‍ನಲ್ಲಿರುವ ಬರ್ಕೆನ್‍ಸ್ಟಾಕ್ ಪ್ರಧಾನ ಕಚೇರಿಯಲ್ಲಿ, ನ್ಯೂಯಾರ್ಕ್‍ನ ಸೋಹೋದಲ್ಲಿನ ಬಿರ್ಕೆನ್‍ಸ್ಟಾಕ್‍ನಲ್ಲಿ, ಯುನೈಟೆಡ್ ಸ್ಟೇಟ್ಸ್ ಶಾಪ್ಸ್‍ಗಳು ಸೇರಿದಂತೆ ಹಲವೆಡೆ ಪ್ರದರ್ಶನಕ್ಕೆ ಇಡಲಾಗಿತ್ತು. ಕೊಲ್ನ್, ಜರ್ಮನಿಯ ಕಲೋನ್‍ನಲ್ಲಿ ಪೀಠೋಪಕರಣ ಮೇಳ, 2018 ರಲ್ಲಿ ಡೈ ಝೀಟ್ ಮ್ಯಾಗಜೀನ್‍ಗಾಗಿ ಝೀಟ್ ಈವೆಂಟ್ ಬರ್ಲಿನ್ ಮತ್ತು ಇತ್ತೀಚೆಗೆ ಜರ್ಮನಿಯ ಸ್ಟಟ್‍ಗಾರ್ಟ್‍ನಲ್ಲಿರುವ ಹಿಸ್ಟರಿ ಮ್ಯೂಸಿಯಂನಲ್ಲೂ ಇಡಲಾಗಿತ್ತು. ಇದನ್ನೂ ಓದಿ: ಮೆಟ್ಟಿಲು ಹತ್ತುವಾಗ ಎಡವಿದ ಜೋ ಬೈಡನ್ – ಮುಂದೇನಾಯ್ತು ಗೊತ್ತಾ?

    Live Tv
    [brid partner=56869869 player=32851 video=960834 autoplay=true]

  • 2023ರ IPL ಹರಾಜಿಗೆ ಡೇಟ್ ಫಿಕ್ಸ್ – ಬೆಂಗಳೂರಿನಲ್ಲಿ ನಡೆಯಲಿದೆ ಹರಾಜು

    2023ರ IPL ಹರಾಜಿಗೆ ಡೇಟ್ ಫಿಕ್ಸ್ – ಬೆಂಗಳೂರಿನಲ್ಲಿ ನಡೆಯಲಿದೆ ಹರಾಜು

    ಮುಂಬೈ: 2023ರ ಐಪಿಎಲ್ (IPL) ಹರಾಜಿಗೆ ಬಿಸಿಸಿಐ (BCCI) ಸಿದ್ಧತೆ ಆರಂಭಿಸಿದೆ. ಬೆಂಗಳೂರಿನಲ್ಲಿ (Bengaluru) ಡಿಸೆಂಬರ್ 16 ರಂದು ಹರಾಜು (Auction) ಪ್ರಕ್ರಿಯೆ ನಡೆಸಲು ಪ್ಲಾನ್ ಮಾಡಲಾಗಿದೆ ಎಂದು ಮೂಲಗಳಿಂದ ವರದಿಯಾಗಿದೆ.

    ಹರಾಜು ಪ್ರಕ್ರಿಯೆ ಒಂದು ದಿನ ನಡೆಯಲಿದ್ದು, ಕೆಲ ಫ್ರಾಂಚೈಸ್‍ಗಳು ಕೈ ಬಿಟ್ಟ ಆಟಗಾರರು ಮತ್ತು ಹೊಸ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿ ಪ್ರತಿ ತಂಡಕ್ಕೆ ಗರಿಷ್ಠ 95 ಕೋಟಿ ರೂ.ವರೆಗೂ ಖರ್ಚು ಮಾಡುವ ಅವಕಾಶವಿದೆ. ಈ ಮೊತ್ತ ಹೆಚ್ಚಾಗುವ ಅಥವಾ ಕಡಿಮೆಯಾಗುವ ಸಾಧ್ಯತೆಯೂ ಇದೆ. ಇದನ್ನೂ ಓದಿ: ರೋಹಿತ್‍ಗೆ ನೆಟ್ಸ್‌ನಲ್ಲಿ ಇನ್‍ಸ್ವಿಂಗ್ ಎಸೆದ ಹನ್ನೊಂದರ ಪೋರ

    ಮೂಲಗಳ ಪ್ರಕಾರ ಅಂತಿಮ ನಿರ್ಧಾರ ನೂತನ ಐಪಿಎಲ್ ಆಡಳಿತ ಮಂಡಳಿ ಆಯ್ಕೆಗೊಂಡು ಸಭೆ ನಡೆದ ಬಳಿಕ ನಿರ್ಧರಿಸುವ ಸಾಧ್ಯತೆ ಇದೆ. ಅ.18 ರಂದು ಸರ್ವ ಸದಸ್ಯರ ಸಭೆ ಇದ್ದು ಈ ಸಭೆಯಲ್ಲಿ ಮುಂದಿನ ಬಿಸಿಸಿಐ ಅಧ್ಯಕ್ಷ ಮತ್ತು ಐಪಿಎಲ್ ಆಡಳಿತ ಮಂಡಳಿಯ ಆಯ್ಕೆ ನಡೆಯಲಿದೆ. 2023ರ ಐಪಿಎಲ್ ಹರಾಜು ಪ್ರಕ್ರಿಯೆ ನಡೆದು ಬಳಿಕ ಮಾರ್ಚ್ ಅಂತ್ಯದ ವೇಳೆ ಐಪಿಎಲ್ ಆರಂಭವಾಗುವ ನಿರೀಕ್ಷೆ ಇದೆ. ಇದನ್ನೂ ಓದಿ: T20WorldCup: ಶ್ರೀಲಂಕಾ ವಿರುದ್ಧ ನಮೀಬಿಯಾ ಆರ್ಭಟ – ಉದ್ಘಾಟನಾ ಪಂದ್ಯದಲ್ಲೇ 55 ರನ್‌ಗಳ ಭರ್ಜರಿ ಜಯ

    Live Tv
    [brid partner=56869869 player=32851 video=960834 autoplay=true]