Tag: Atul Subhash

  • ಟೆಕ್ಕಿ ಅತುಲ್ ಸುಭಾಶ್‌ ಆತ್ಮಹತ್ಯೆ ಕೇಸ್‌- ಮೂವರು ಆರೋಪಿಗಳಿಗೆ ಜಾಮೀನು ಮಂಜೂರು

    ಟೆಕ್ಕಿ ಅತುಲ್ ಸುಭಾಶ್‌ ಆತ್ಮಹತ್ಯೆ ಕೇಸ್‌- ಮೂವರು ಆರೋಪಿಗಳಿಗೆ ಜಾಮೀನು ಮಂಜೂರು

    ಬೆಂಗಳೂರು: ಟೆಕ್ಕಿ ಅತುಲ್ ಸುಭಾಶ್‌ (Atul Subhash) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ಮೂವರು ಆರೋಪಿಗಳಿಗೆ ಬೆಂಗಳೂರು ನ್ಯಾಯಾಲಯ (Bengaluru Court) ಜಮೀನು ಮಂಜೂರು ಮಾಡಿದೆ.

    ನಿಖಿತಾ ಸಿಂಘಾನಿಯಾ, ನಿಶಾ ಸಿಂಘಾನಿಯ ಹಾಗೂ ಅನುರಾಗ್ ಸಿಂಘಾನಿಯಾಗೆ 29ನೇ ಸಿಸಿಹೆಚ್ ಕೋರ್ಟ್ ಜಾಮೀನು (Bail) ನೀಡಿದೆ. ಇದನ್ನೂ ಓದಿ: ಅತುಲ್ ಸುಭಾಷ್ ಆತ್ಮಹತ್ಯೆ | ಹಣಕ್ಕಾಗಿ ಕೇಸ್‌ ಮೇಲೆ ಕೇಸ್‌ – ಪತ್ನಿ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್‌

    ಅತುಲ್ ಆತ್ಮಹತ್ಯೆ ಸಂಬಂಧ ಮೂವರನ್ನ ಬಂಧಿಸಿದ್ದ ಮಾರತಹಳ್ಳಿ ಪೊಲೀಸರು ಬಂಧಿಸಿತ್ತು. ಬಂಧನ ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್‌ ಜ.4 ರಂದು ಜಾಮೀನು ಅರ್ಜಿ ಇತ್ಯರ್ಥ ಮಾಡುವಂತೆ ಕೆಳ ನ್ಯಾಯಾಲಯಕ್ಕೆ ಸೂಚಿಸಿತ್ತು.ಈ ಹಿನ್ನಲೆಯಲ್ಲಿ ಇಂದು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಹೆತ್ತ ಮಗು ತನ್ನ ಬಳಿಯಿಲ್ಲದಿದ್ದರೂ ಅನಾಥ ಮಕ್ಕಳಿಗೆ ಸಹಾಯ – ಅತುಲ್ ಸಮಾಜಮುಖಿ ಕಾರ್ಯಕ್ಕೆ ಮನಸೋತ ಸ್ನೇಹಿತರು

    ಏನಿದು ಪ್ರಕರಣ?
    ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಖಿನ್ನತೆಗೆ ಒಳಗಾಗಿ 40ಕ್ಕೂ ಹೆಚ್ಚು ಪುಟಗಳ ಡೆತ್ ನೋಟ್ ಬರೆದಿಟ್ಟು ಡಿ.9 ರಂದು ಮಂಜುನಾಥ ಲೇಔಟ್‌ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಡೆಪ್ಯೂಟಿ ಮ್ಯಾನೇಜರ್‌ ಆಗಿದ್ದ ಇವರು ಸುಮಾರು 40 ಪುಟಗಳ ಡೆತ್ ನೋಟ್ ಬರೆದಿದ್ದ ಇವರು, ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸಿ ತಾನು ಅನುಭವಿಸಿದ್ದ ಸಂಕಷ್ಟಗಳನ್ನು ವಿವರಿಸಿದ್ದರು.

     

  • ಹೆತ್ತ ಮಗು ತನ್ನ ಬಳಿಯಿಲ್ಲದಿದ್ದರೂ ಅನಾಥ ಮಕ್ಕಳಿಗೆ ಸಹಾಯ – ಅತುಲ್ ಸಮಾಜಮುಖಿ ಕಾರ್ಯಕ್ಕೆ ಮನಸೋತ ಸ್ನೇಹಿತರು

    ಹೆತ್ತ ಮಗು ತನ್ನ ಬಳಿಯಿಲ್ಲದಿದ್ದರೂ ಅನಾಥ ಮಕ್ಕಳಿಗೆ ಸಹಾಯ – ಅತುಲ್ ಸಮಾಜಮುಖಿ ಕಾರ್ಯಕ್ಕೆ ಮನಸೋತ ಸ್ನೇಹಿತರು

    – ಮಕ್ಕಳಿಗೆ ಫ್ರೀ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಟೀಚಿಂಗ್
    – ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

    ಬೆಂಗಳೂರು: ಟೆಕ್ಕಿ ಅತುಲ್ ಸುಭಾಷ್ (Atul Subhash) ಆತ್ಮಹತ್ಯೆ ಕೇಸ್ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅತುಲ್ ಸಾವಿಗೆ ಇಡೀ ದೇಶವೇ ಮರುಗುತ್ತಿದ್ದು, ಆತನನ್ನು ಈ ವ್ಯವಸ್ಥೆಯೇ ಬಲಿ ಪಡೆದಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಇದರ ನಡುವೆ ಅತುಲ್ ಕೇವಲ ಒಬ್ಬ ಎಂಜಿನಿಯರ್ ಆಗಿರಲಿಲ್ಲ, ಬದಲಾಗಿ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದರು.

    ‘ನ್ಯಾಯ ಬಾಕಿಯಿದೆ’ ಎಂಬ ಪದ ಇದೀಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬೆಂಗಳೂರಿನ (Bengaluru) ಟೆಕ್ಕಿ ಅತುಲ್ ಆತ್ಮಹತ್ಯೆ ಇದಕ್ಕೆ ಕಾರಣ. ರಾಷ್ಟ್ರಮಟ್ಟದಲ್ಲಿ ಹಲ್‌ಚಲ್ ಎಬ್ಬಿಸಿದ, ಅತುಲ್ ಒಳಗೊಬ್ಬ ನಿಜವಾದ ಸಮಾಜಮುಖಿ ವ್ಯಕ್ತಿತ್ವವಿತ್ತು. ಜೀವನದಲ್ಲಿ ಅದೆಷ್ಟೋ ನೋವುಗಳನ್ನು ಅನುಭವಿಸುತ್ತಿದ್ದರೂ, ಸಮಾಜಕ್ಕಾಗಿ (Social Work) ಏನಾದರೂ ಮಾಡಬೇಕು, ಬಡವರ ಹಾಗೂ ಅನಾಥರಿಗೆ ಕೈಲಾದ ಸಹಾಯ ಮಾಡಬೇಕು ಎಂಬ ಹಂಬಲವಿತ್ತು. ಇದೇ ಕಾರಣದಿಂದ ‘ಸೇವ್ ಇಂಡಿಯನ್ ಫ್ಯಾಮಿಲಿ’ ಫೌಂಡೇಶನ್ ಸೇರಿದಂತೆ ಕೆಲ ಎನ್‌ಜಿಒಗಳಲ್ಲಿ ಸದಸ್ಯರಾಗಿದ್ದರು. ಈ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಹಾಗೂ ಅನಾಥಾಶ್ರಮಕ್ಕೆ ಸಹಾಯಹಸ್ತ ಚಾಚಿದ್ದ ಅತುಲ್ ಸ್ನೇಹಿತರು ಅತುಲ್‌ನನ್ನು ಗುಣಗಾನ ಮಾಡುತ್ತಿದ್ದಾರೆ. ಇದನ್ನೂ ಓದಿ: 16 ವರ್ಷದಿಂದ ಗದಗ ಮೃಗಾಲಯದಲ್ಲಿ ಘರ್ಜಿಸುತ್ತಿದ್ದ ಹುಲಿ ಸಾವು

    ಇನ್ನೂ ಅತುಲ್ ತನ್ನ ಮಗು ತನ್ನ ಜೊತೆಯಲ್ಲಿ ಇಲ್ಲದಿದ್ದರೂ ಅನೇಕ ಅನಾಥಶ್ರಮಗಳ ಜೊತೆ ಸಂಪರ್ಕ ಹೊಂದಿದ್ದರು. ಅನೇಕ ಅನಾಥ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಜೊತೆಗೆ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿವರಿಸಿದ್ದಾರೆ. ಎಐ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನಲ್ಲಿ ಎಕ್ಸ್‌ಪರ್ಟ್ ಆಗಿದ್ದ ಅತುಲ್, ಅನೇಕ ವಿದ್ಯಾರ್ಥಿಗಳಿಗೆ ಫ್ರೀಯಾಗಿ ಟೀಚಿಂಗ್ ಮಾಡುತ್ತಿದ್ದರು. ಇದೆಲ್ಲವನ್ನೂ ನೆನದು ಅತುಲ್ ಸ್ನೇಹಿತರು ಭಾವುಕರಾದರು. ಒಟ್ಟಿನಲ್ಲಿ ಅತುಲ್‌ನ ಈ ವ್ಯಕ್ತಿತ್ವಕ್ಕೆ ಮಾರುಹೋದ ಅನೇಕ ಜನ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಇದನ್ನೂ ಓದಿ: ಮಹಿಳೆಯರ ಗ್ರಾಮೀಣ ಕ್ರೀಡೋತ್ಸವಕ್ಕೆ ಸಾಕ್ಷಿಯಾದ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ

  • ನನ್ನ ಮೊಮ್ಮಗ ಬದುಕಿದ್ದಾನಾ? – ಮಾಧ್ಯಮದ ಮುಂದೆ ಕಣ್ಣೀರಿಟ್ಟ ಅತುಲ್‌ ತಂದೆ

    ನನ್ನ ಮೊಮ್ಮಗ ಬದುಕಿದ್ದಾನಾ? – ಮಾಧ್ಯಮದ ಮುಂದೆ ಕಣ್ಣೀರಿಟ್ಟ ಅತುಲ್‌ ತಂದೆ

    ನವದೆಹಲಿ: ಹೆಂಡತಿ ಹಾಗೂ ಆಕೆಯ ಕುಟುಂಬಸ್ಥರ ಕಿರುಕುಳದಿಂದ ಬೇಸತ್ತು, ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಟೆಕ್ಕಿ ಅತುಲ್ ಸುಭಾಷ್ (Atul Subhash) ಅವರ ತಂದೆ ತಮ್ಮ ಮೊಮ್ಮಗ ಎಲ್ಲಿ ಎಂದು ಪ್ರಶ್ನೆ ಎತ್ತಿದ್ದಾರೆ.

    ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅತುಲ್ ಸುಭಾಷ್ ಪತ್ನಿ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಮತ್ತು ಸಹೋದರ ಅನುರಾಗ್ ಎಂಬವರನ್ನು ಬಂಧಿಸಲಾಗಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಅತುಲ್ ತಂದೆ ಪವನ್ ಕುಮಾರ್, ಅತುಲ್ ಅವರ ಮಗ ಎಲ್ಲಿದ್ದಾನೆ ಎಂದು ಪ್ರಶ್ನಿಸಿದ್ದಾರೆ.

    ಆರೋಪಿಗಳನ್ನು ಬಂಧಿಸಿದ್ದಕ್ಕಾಗಿ ಪೊಲೀಸರಿಗೆ ಧನ್ಯವಾದ ಅರ್ಪಿಸಿದ ಅವರು, ನಿಕಿತಾ ನಮ್ಮ ಮೊಮ್ಮಗನನ್ನು ಎಲ್ಲಿ ಇರಿಸಿದ್ದಾಳೆಂದು ನಮಗೆ ತಿಳಿದಿಲ್ಲ. ಅವನು ಕೊಲೆಯಾಗಿದ್ದಾನೋ ಅಥವಾ ಬದುಕಿದ್ದಾನೋ? ಅವನ ಬಗ್ಗೆ ನಮಗೆ ಏನೂ ತಿಳಿದಿಲ್ಲ. ನನ್ನ ಮೊಮ್ಮಗ ನಮ್ಮೊಂದಿಗೆ ಇರಬೇಕೆಂದು ನಾನು ಬಯಸುತ್ತೇನೆ ಎಂದು ಭಾವುಕರಾಗಿದ್ದಾರೆ.

    ನ್ಯಾಯ ಸಿಗುವವರೆಗೆ ಅತುಲ್ ಚಿತಾಭಸ್ಮವನ್ನು ವಿಸರ್ಜನೆ ಮಾಡದಿರಲು ಕುಟುಂಬ ನಿರ್ಧರಿಸಿದೆ. ಇದೇ ವೇಳೆ, ʻಜೌನ್‌ಪುರ ಕೌಟುಂಬಿಕ ನ್ಯಾಯಾಲಯದಲ್ಲಿ ಅತುಲ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಭ್ರಷ್ಟರಾಗಿದ್ದಾರೆʼ ಎಂದು ಆರೋಪಿಸಿದ್ದಾರೆ.

    ನಾವು ನಮ್ಮ ಮೊಮ್ಮಗನಿಗಾಗಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ಮನವಿ ಮಾಡುತ್ತೇವೆ ಎಂದು ಭಾವುಕರಾಗಿದ್ದಾರೆ.

    ಪ್ರಕರಣದಲ್ಲಿ ಬಂಧಿಸಲಾದ ಆರೋಪಿಗಳನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

    ಏನಿದು ಪ್ರಕರಣ?
    ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಖಿನ್ನತೆಗೆ ಒಳಗಾಗಿ 40ಕ್ಕೂ ಹೆಚ್ಚು ಪುಟಗಳ ಡೆತ್ ನೋಟ್ ಬರೆದಿಟ್ಟು ಡಿ.9 ರಂದು ಮಂಜುನಾಥ ಲೇಔಟ್‌ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಡೆಪ್ಯೂಟಿ ಮ್ಯಾನೇಜರ್‌ ಆಗಿದ್ದ ಇವರು ಸುಮಾರು 40 ಪುಟಗಳ ಡೆತ್ ನೋಟ್ ಬರೆದಿದ್ದರು. ಆತ್ಮಹತ್ಯೆಗೂ ಮುನ್ನ ಪತ್ನಿ ಹಾಗೂ ಆಕೆಯ ಕುಟುಂಬಸ್ಥರಿಂದ ತಾನು ಅನುಭವಿಸಿದ್ದ ಸಂಕಷ್ಟಗಳನ್ನು ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸಿದ್ದರು.

  • ಟೆಕ್ಕಿ ಅತುಲ್‌ ಆತ್ಮಹತ್ಯೆ ಕೇಸ್‌ – ತಲೆಮರೆಸಿಕೊಂಡಿದ್ದ ಪತ್ನಿ ಬಂಧನ

    ಟೆಕ್ಕಿ ಅತುಲ್‌ ಆತ್ಮಹತ್ಯೆ ಕೇಸ್‌ – ತಲೆಮರೆಸಿಕೊಂಡಿದ್ದ ಪತ್ನಿ ಬಂಧನ

    – ಬೆಂಗಳೂರು ಟೆಕ್ಕಿಯ ಪತ್ನಿ, ಅತ್ತೆ, ಬಾಮೈದಗೆ 14 ದಿನಗಳ ನ್ಯಾಯಾಂಗ ಬಂಧನ

    ಲಕ್ನೋ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಟೆಕ್ಕಿ ಅತುಲ್‌ ಸುಭಾಷ್‌ (Atul Subhash) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪತ್ನಿ ನಿಖಿತಾ ಸಿಂಘಾನಿಯಾಳನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಅತುಲ್‌ ಅತ್ತೆ ನಿಶಾ ಸಿಂಘಾನಿಯಾ ಮತ್ತು ಬಾಮೈದ ಅನುರಾಗ್‌ ಸಿಂಘಾನಿಯಾ ಅರೆಸ್ಟ್‌ ಆಗಿದ್ದರು. ಈಗ ಹರಿಯಾಣದ ಗುರುಗ್ರಾಮದಲ್ಲಿ ಅತುಲ್‌ ಪತ್ನಿ ನಿಖಿತಾ ಪೊಲೀಸರಿಗೆ ಲಾಕ್‌ ಆಗಿದ್ದಾಳೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಟೆಕ್ಕಿ ಅತುಲ್‌ ಆತ್ಮಹತ್ಯೆ ಕೇಸ್‌ – ಅತ್ತೆ, ಬಾಮೈದ ಪೊಲೀಸರ ವಶಕ್ಕೆ

    ಮೂವರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಎಲ್ಲರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದನ್ನೂ ಓದಿ: ಸಾಯುವುದಕ್ಕೆ 2 ನಿಮಿಷ ಮುಂಚೆ ರಾಷ್ಟ್ರಪತಿಗಳಿಗೆ ಇ-ಮೇಲ್‌ ಕಳುಹಿಸಿದ್ದ ಟೆಕ್ಕಿ ಅತುಲ್‌!

    ಪತಿ ಆತ್ಮಹತ್ಯೆ ಬಳಿಕ ನಿಖಿತಾ ಪರಾರಿಯಾಗಿದ್ದರು. ಹುಡುಕಾಟ ಆರಂಭಿಸಿದ್ದ ಮಾರತ್ತಹಳ್ಳಿ ಪೊಲೀಸರು ಮೂರು ದಿನದ ಒಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದ್ದರು. ಇದನ್ನೂ ಓದಿ: ಅತುಲ್ ಸುಭಾಷ್ ಆತ್ಮಹತ್ಯೆ | ಹಣಕ್ಕಾಗಿ ಕೇಸ್‌ ಮೇಲೆ ಕೇಸ್‌ – ಪತ್ನಿ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್‌

  • ಟೆಕ್ಕಿ ಅತುಲ್ ಪತ್ನಿಗೆ ಖಾಕಿ ನೋಟಿಸ್ – 3 ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗದಿದ್ರೆ ಬಂಧನ ಸಾಧ್ಯತೆ

    ಟೆಕ್ಕಿ ಅತುಲ್ ಪತ್ನಿಗೆ ಖಾಕಿ ನೋಟಿಸ್ – 3 ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗದಿದ್ರೆ ಬಂಧನ ಸಾಧ್ಯತೆ

    ಬೆಂಗಳೂರು: ಟೆಕ್ಕಿ ಅತುಲ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮಾರತ್ತಹಳ್ಳಿ ಪೊಲೀಸರು ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಆರೋಪಿಗಳಿಗಾಗಿ ಉತ್ತರ ಪ್ರದೇಶದಲ್ಲಿ ಬೀಡುಬಿಟ್ಟಿದ್ದು,  ತೀವ್ರ ಶೋಧ ನಡೆಸುತ್ತಿದ್ದಾರೆ.

    ಟೆಕ್ಕಿ ಅತುಲ್ (Techie Atul Subhash) ಮಾರತ್ತಹಳ್ಳಿ ಮಂಜುನಾಥ್ ಲೇಔಟ್‌ನ (Manjunath Layout) ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದರು. ಡೆತ್ ನೋಟ್‌ನಲ್ಲಿ ನನ್ನ ಸಾವಿಗೆ ನನ್ನ ಪತ್ನಿ ನಿಖಿತಾ ಹಾಗೂ ಆಕೆಯ ತಾಯಿ, ಸಹೋದರನ ಮೇಲೆ ಆರೋಪ ಮಾಡಿ ಡೆತ್ ನೋಟ್ ಬರೆದಿಟ್ಟು ಸೂಸೈಡ್ ಮಾಡಿಕೊಂಡಿದ್ದರು. ಟೆಕ್ಕಿ ಅತುಲ್ ಸಾವಿಗೆ ಕಾರಣವಾಗಿರೋ ಆರೋಪ ಎದುರಿಸುತ್ತಿರೋ ಆರೋಪಿಗಳನ್ನು ಮಾರತ್ತಹಳ್ಳಿ ಪೊಲೀಸರು ಉತ್ತರ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದು, ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ. ಇನ್ನು ಪ್ರಕರಣ ಪ್ರಮುಖ ಆರೋಪಿಯಾಗಿರುವ ಮೃತ ಅತುಲ್ ಪತ್ನಿ ನಿಖಿತಾ ಬೆಂಗಳೂರು ಪೊಲೀಸರು ಉತ್ತರ ಪ್ರದೇಶಕ್ಕೆ ಬಂದಿರುವ ವಿಚಾರ ತಿಳಿದು ಊರು ಬಿಟ್ಟು ಹೋಗಿದ್ದಾಳೆ. ಆರೋಪಿ ನಿಖಿತಾ ಅವರಿಗೆ ಫೋನ್ ಮೂಲಕ ಸಂಪರ್ಕ ಮಾಡಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗದೇ ನಿಖಿತಾ ಮೊಬೈಲ್ ಸ್ವೀಚ್‌ಆಫ್ ಮಾಡಿಕೊಂಡು ಹೋಗಿದ್ದಾರೆ. ಇದನ್ನೂ ಓದಿ: ‘ಪುಷ್ಪ 2’ ನಟ ಅಲ್ಲು ಅರ್ಜುನ್‌ ಜೈಲಿಂದ ರಿಲೀಸ್‌ – ಜೈಲಲ್ಲಿ ಒಂದು ರಾತ್ರಿ ಕಳೆದ ಸ್ಟಾರ್‌

    ಹಾಗಾಗಿ ಮಾರತ್ತಹಳ್ಳಿ ಪೊಲೀಸರು ಸ್ಥಳೀಯ ಪೊಲೀಸರ ಸಹಾಯ ಪಡೆದು ಉತ್ತರ ಪ್ರದೇಶದಲ್ಲಿರುವ ಆರೋಪಿ ನಿಖಿತಾ ಮನೆಗೆ ಹೋಗಿ ನೋಟಿಸ್ ಹಾಗೂ ಎಫ್‌ಐಆರ್ ಅಂಟಿಸಿ ಬಂದಿದ್ದಾರೆ. ನೋಟಿಸ್‌ನಲ್ಲಿ ಮುಂದಿನ ಮೂರು ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಒಂದು ವೇಳೆ ಆರೋಪಿತ ಮಹಿಳೆ ಪೊಲೀಸರ ಮುಂದೆ ಹಾಜರಾಗದೆ ಹೋದರೆ ಬಹುತೇಕ ನಿಖಿತಾಳನ್ನು ಬಂಧಿಸಿ ಬೆಂಗಳೂರಿಗೆ ಕರೆ ತರಲು ಮಾರತ್ತಹಳ್ಳಿ ಪೊಲೀಸರು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಕೋವಿಡ್ ಅಕ್ರಮದ ತನಿಖೆಗೆ ಕೌಂಟ್ ಡೌನ್ – ಎಫ್‍ಐಆರ್ ದಾಖಲು

  • ಬೆಂಗಳೂರಿನಲ್ಲಿ ಟೆಕ್ಕಿ ಅತುಲ್‌ ಆತ್ಮಹತ್ಯೆ ಕೇಸ್‌ – ಅತ್ತೆ, ಬಾಮೈದ ಪೊಲೀಸರ ವಶಕ್ಕೆ

    ಬೆಂಗಳೂರಿನಲ್ಲಿ ಟೆಕ್ಕಿ ಅತುಲ್‌ ಆತ್ಮಹತ್ಯೆ ಕೇಸ್‌ – ಅತ್ತೆ, ಬಾಮೈದ ಪೊಲೀಸರ ವಶಕ್ಕೆ

    ಬೆಂಗಳೂರು: ಟೆಕ್ಕಿ ಅತುಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮಾರತ್‌ ಹಳ್ಳಿ ಪೊಲೀಸರು ಅತುಲ್ ಅತ್ತೆ ನಿಶಾ ಸಿಂಘನಿಯಾ ಹಾಗೂ ಬಾಮೈದ ಅನುರಾಗ್ ಸಿಂಘಾನಿಯಾನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

    ಉತ್ತರ ಪ್ರದೇಶದ ಜೌನ್ಪುರ ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಾಥಮಿಕ ವಿಚಾರಣೆ ನಡೆಸಲಾಗಿದೆ. ಅತುಲ್ ಪತ್ನಿ ನಿಖಿತಾ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಇಬ್ಬರನ್ನು ನಾಳೆ‌ ಕೋರ್ಟ್ ಅನುಮತಿ ಪಡೆದು ಬೆಂಗಳೂರಿಗೆ ಪೊಲೀಸರು ಕರೆತರಲಿದ್ದಾರೆ.