Tag: Attorneys

  • ಮೈ ಮುಟ್ಟಿದ ವಕೀಲನಿಗೆ ಚೇರ್, ಕಲ್ಲಿನಿಂದ ಹಲ್ಲೆಗೆ ಮುಂದಾದ ಕೋಲಾರದ ವಕೀಲೆ

    ಮೈ ಮುಟ್ಟಿದ ವಕೀಲನಿಗೆ ಚೇರ್, ಕಲ್ಲಿನಿಂದ ಹಲ್ಲೆಗೆ ಮುಂದಾದ ಕೋಲಾರದ ವಕೀಲೆ

    ಕೋಲಾರ: ವಕೀಲರಿಬ್ಬರು ಕೋರ್ಟ್ ಆವರಣದಲ್ಲಿ ಹೈಡ್ರಾಮಾ ಮಾಡಿರುವ ಘಟನೆ ಕೆಜಿಎಫ್ ನ್ಯಾಯಾಲಯದ ಮುಂಭಾಗ ನಡೆದಿದೆ.

    ತನ್ನ ಮೈ ಮುಟ್ಟಿದ್ದಕ್ಕೆ ವಕೀಲೆಯೊಬ್ಬರು ವಕೀಲನಿಗೆ ಚೇರ್ ಹಾಗೂ ಕಲ್ಲಿನಿಂದ ಹೊಡೆಯಲು ಯತ್ನಿಸಿದ್ದಾರೆ. ವಕೀಲೆ ವೆನಿಲ್ಲಾ, ವಕೀಲ ಬಾಬುವಿಗೆ ಚೇರ್ ಎತ್ತೆಸೆದು ಹಲ್ಲೆಗೆ ಯತ್ನ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ – ನಾಲ್ವರು ಈಜುಪಟುಗಳು ಅರೆಸ್ಟ್

    ಸ್ಥಳದಲ್ಲಿ ಇಬ್ಬರು ವಕೀಲರ ಹೈಡ್ರಾಮಾ ಕಂಡು ಜನರು ಕೆಲ ಕಾಲ ಚಕಿತಗೊಂಡಿದ್ದಾರೆ. ಇಬ್ಬರ ಗಲಾಟೆಯನ್ನು ಕಂಡ ಇತರ ವಕೀಲರು ಹಾಗೂ ಸ್ಥಳೀಯರು ಆಕೆಯನ್ನು ಪ್ರಶ್ನೆ ಮಾಡಿದಾಗ ವಕೀಲ ನನ್ನ ಮೈ ಮುಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ರಾಬರ್ಟ್ಸನ್ ಪೇಟೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಇದನ್ನೂ ಓದಿ: ಬ್ಯಾಂಕ್, ಎಟಿಎಂ ಬಾಗಿಲಿನಲ್ಲಿ ಮಲ ವಿಸರ್ಜನೆ ಮಾಡಿ ವಿಕೃತಿ

  • ರಾಯಚೂರು ಕೋರ್ಟ್ ಮುಂದೆ ಜನಜಂಗುಳಿ

    ರಾಯಚೂರು ಕೋರ್ಟ್ ಮುಂದೆ ಜನಜಂಗುಳಿ

    ರಾಯಚೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹೊರಡಿಸಿದ ಕೊರೊನಾ ಮಾರ್ಗಸೂಚಿಯಿಂದ ಕಕ್ಷಿದಾರರಿಗೆ ನ್ಯಾಯಾಲಯ ಒಳಗಡೆ ಪ್ರವೇಶ ನಿಷೇಧಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು ಗೊಂದಲಕ್ಕೊಳಗಾಗಿ ನ್ಯಾಯಾಲಯದ ಮುಂದೆ ಜನಜಂಗುಳಿಯಾಯಿತು.

    ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರ ಆದೇಶದ ಹಿನ್ನೆಲೆ ಕಠಿಣ ನಿಯಮ ಜಾರಿಯಾಗಿದ್ದು, ಕೆಳ ನ್ಯಾಯಾಲಯಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಮುಂದೆ ಕಕ್ಷಿದಾರರು ಕೋರ್ಟ್ ಕಟ್ಟಡದ ಮೆಟ್ಟಿಲು ಏರುವ ಹಾಗಿಲ್ಲ. ನ್ಯಾಯಾಲಯಗಳ ಅಧಿಕೃತ ಇ-ಮೇಲ್ ಮೂಲಕ ಪ್ರಕರಣ ದಾಖಲಿಸಬಹುದು. ಭೌತಿಕ ಪ್ರಕರಣ ದಾಖಲಿಸುವುದಕ್ಕೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಬೇಕು. ತುರ್ತು ಪ್ರಕರಣಗಳಿಗೆ ವೀಡಿಯೋ ಕಾನ್ಫರೆನ್ಸ್ ಮುಖಾಂತರ ನ್ಯಾಯಾಲಯದ ಕಾರ್ಯಕಲಾಪ ನಡೆಸಲು ಸೂಚಿಸಲಾಗಿದೆ. ಇದನ್ನೂ ಓದಿ: ಕೋವಿಡ್-19 ಪ್ರಕರಣ ಏರಿಕೆ – ಮದುವೆ ನೋಂದಣಿ ಸೇವೆ ಸ್ಥಗಿತ!

    ಮುಂದಿನ ಆದೇಶದವರೆಗೆ ಕೋರ್ಟ್ ವೆಬ್ ಸೈಟ್ ಮೂಲಕ ವೀಡಿಯೋ ಕಾನ್ಫರೆನ್ಸ್ ನಲ್ಲೇ ವಾದ-ವಿವಾದ ನಡೆಯಲಿವೆ. ಉಚ್ಚನ್ಯಾಯಾಲಯ ಮುಖ್ಯ ನ್ಯಾಯಾಧೀಶರ ಆದೇಶವನ್ನು ನ್ಯಾಯವಾದಿಗಳು ಸ್ವಾಗತಿಸಿದ್ದಾರೆ.

    ಹೊಸ ನಿಯಮದಿಂದ ಕಾರ್ಯಕಲಾಪ ತಡವಾಗಿ ಆಗಬಹುದು. ಆದರೆ ಯಾರಿಗೂ ತೊಂದರೆಯಾಗುವುದಿಲ್ಲ. ಕಕ್ಷಿದಾರರು ನೇರವಾಗಿ ಕೋರ್ಟ್‍ಗೆ ಬರುವುದು, ನ್ಯಾಯಾಧೀಶರ ಮುಂದೆ ನಿಲ್ಲುವ ಪ್ರಸಂಗವಿಲ್ಲ. ಮುಂದಾಗುವ ಅನಾಹುತ ತಡೆಯಲು ಉತ್ತಮ ಕ್ರಮ ಎಂದು ನ್ಯಾಯವಾದಿಗಳು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನೂ ಓದಿ: ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯಕ್ಕೆ ಸ್ವಚ್ಛತೆ ಮೂಲಕ ಪಾಠ ಕಲಿಸಿದ ಗ್ರಾಮಸ್ಥರು