Tag: attendent

  • ತುಮಕೂರು| ಕಚೇರಿಯಲ್ಲಿರುವಾಗಲೇ ಅಧಿಕಾರಿಗಳನ್ನು ಕೂಡಿ ಹಾಕಿದ ಅಟೆಂಡರ್

    ತುಮಕೂರು| ಕಚೇರಿಯಲ್ಲಿರುವಾಗಲೇ ಅಧಿಕಾರಿಗಳನ್ನು ಕೂಡಿ ಹಾಕಿದ ಅಟೆಂಡರ್

    ತುಮಕೂರು: ಸಣ್ಣ ನೀರಾವರಿ ಇಲಾಖೆಯ (Minor Irrigation Department) ಅಧಿಕಾರಿಗಳು ಮತ್ತು ನೌಕರರ ಮಧ್ಯದ ಜಗಳ ಬೀದಿಗೆ ಬಂದಿದ್ದು, ಅಧಿಕಾರಿಗಳು ಕಚೇರಿ ಒಳಗಡೆ ಇರುವಾಗಲೇ ಅಟೆಂಡರ್ (Attendent) ಕಚೇರಿಗೆ ಬೀಗ ಹಾಕಿ ಪರಾರಿಯಾದ ಪ್ರಸಂಗ ತುಮಕೂರಿನಲ್ಲಿ (Tumakuru) ನಡೆದಿದೆ.

    ತುಮಕೂರು ನಗರದ ವಿದ್ಯಾನಗರದಲ್ಲಿರುವ ಇಲಾಖೆಯ ಕಚೇರಿಗೆ ಮಂಗಳವಾರ ಸಂಜೆ 4:50ರ ವೇಳೆಗೆ ಅಟೆಂಡರ್ ಕೆ.ಎಂ.ಅಜಾಜ್ ಪಾಷ ಬೀಗ ಹಾಕಿದರು. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಪ್ಪೇಸ್ವಾಮಿ, ಇಬ್ಬರು ಎಂಜಿನಿಯರ್ ಸೇರಿ 7 ಜನ ಸಿಬ್ಬಂದಿ ಕಚೇರಿ ಒಳಗೆ ಇದ್ದರು. ಇದನ್ನೂ ಓದಿ: 7 ವಾರಗಳ ಬಳಿಕ ಸರ್ಜರಿ ಮಾಡಿಸದೇ ದರ್ಶನ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಎಂಜಿನಿಯರ್ ತಿಪ್ಪೇಸ್ವಾಮಿ 112ಕ್ಕೆ ಕರೆ ಮಾಡಿದ ತಕ್ಷಣ ಪೊಲೀಸರು ಕಚೇರಿ ಬಳಿಗೆ ಬಂದರು. ಅಜಾಜ್ ಪಾಷಗೆ ಪೊಲೀಸರು ಕರೆ ಮಾಡಿ ಕಚೇರಿಗೆ ಕರೆಸಿಕೊಂಡು, 5:30ಕ್ಕೆ ಬೀಗ ತೆಗೆಸಿದ್ದಾರೆ. ಅಧಿಕಾರಿಗಳು ಸುಖಾಸುಮ್ಮನೆ ಕಿರುಕುಳ ನೀಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಇಲ್ಲ ಸಲ್ಲದ ಆರೋಪ ಮಾಡುತ್ತಾರೆ. ಗೌರವಯುತವಾಗಿ ನಡೆದುಕೊಳ್ಳುತ್ತಿಲ್ಲ. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಬದಲಾವಣೆಯಾಗಿಲ್ಲ. ಪದೇ ಪದೇ ಅವಮಾನ ಮಾಡುತ್ತಾರೆ’ ಎಂದು ಬೇಸತ್ತು ಹೀಗೆ ಮಾಡಿದ್ದೇನೆ ಎಂದು ಪಾಷಾ ದೂರಿದ್ದಾರೆ. ಇದನ್ನೂ ಓದಿ: ಅವರು ತೆರಿಗೆ ವಿಧಿಸಿದ್ರೆ ನಾವು ಅವರ ಮೇಲೆ ಅಷ್ಟೇ ತೆರಿಗೆ ಹಾಕ್ತೀವಿ: ಭಾರತಕ್ಕೆ ಟ್ರಂಪ್‌ ಸಂದೇಶ

  • ಗಾರ್ಡನ್ ಕ್ಲೀನ್ ಮಾಡೋಕೆ ಹೇಳಿದ್ದಕ್ಕೆ ಮಹಿಳಾ ಎಂಜಿನಿಯರ್‌ಗೆ ಮಚ್ಚಿನೇಟು

    ಗಾರ್ಡನ್ ಕ್ಲೀನ್ ಮಾಡೋಕೆ ಹೇಳಿದ್ದಕ್ಕೆ ಮಹಿಳಾ ಎಂಜಿನಿಯರ್‌ಗೆ ಮಚ್ಚಿನೇಟು

    ಹಾಸನ: ಗಾರ್ಡನ್ ಸ್ವಚ್ಛಗೊಳಿಸು ಎಂದು ಹೇಳಿದಕ್ಕೆ ಸಹಾಯಕನೋರ್ವ ಸೆಸ್ಕಾಂ ಎಇಇ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ಹಾಸನದ ಸಂತೆಪೇಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಡೆದಿದೆ.

    ಸೆಸ್ಕಾಂ ಎಇಇ ಸ್ವಾತಿ ದೀಕ್ಷಿತ್ ಅವರ ಮೇಲೆ ಸ್ಟೇಷನ್ ಅಟೆಂಡೆಂಟ್ ಮಂಜುನಾಥ್ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಸಂತೆಪೇಟೆ ವಿದ್ಯುತ್ ವಿತರಣಾ ಕೇಂದ್ರದ ಗಾರ್ಡನ್ ಸ್ವಚ್ಛಗೊಳಿಸುವಂತೆ ಸ್ವಾತಿ ಅವರು ಮಂಜುನಾಥ್‍ಗೆ ಹೇಳಿದ್ದಾರೆ. ಆದರೆ ಈ ಚಿಕ್ಕ ವಿಷಯಕ್ಕೆ ಕೋಪಗೊಂಡ ಮಂಜುನಾಥ್, ಸ್ವಾತಿ ಅವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ತಡೆಯಲು ಬಂದ ಸಹೋದ್ಯೋಗಿ ವೆಂಕಟೇಗೌಡನಿಗೂ ಕೂಡ ಮಚ್ಚಿನೇಟು ಬಿದ್ದಿವೆ.

    ಗಲಾಟೆಯಲ್ಲಿ ಸ್ವಾತಿ ಅವರ ಕುತ್ತಿಗೆ, ತಲೆಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಎರಡು ಬೆರಳು ತುಂಡಾಗಿದೆ. ಸದ್ಯ ಹಲ್ಲೆಗೊಳಗಾದ ಸಿಬ್ಬಂದಿ ಹಾಗೂ ಮಹಿಳಾ ಎಂಜಿನಿಯರ್ ಇಬ್ಬರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ಆರೋಪಿ ಮಂಜುನಾಥ್ ವಿರುದ್ಧ ದೂರು ದಾಖಲಾಗಿದ್ದು, ನಗರಠಾಣೆ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.