Tag: Attendence

  • ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮಕ್ಕಳ ಹಾಜರಾತಿಗೆ Facial Recognition ತಂತ್ರಜ್ಞಾನ- ಸರ್ಕಾರ ಆದೇಶ

    ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮಕ್ಕಳ ಹಾಜರಾತಿಗೆ Facial Recognition ತಂತ್ರಜ್ಞಾನ- ಸರ್ಕಾರ ಆದೇಶ

    ಬೆಂಗಳೂರು: ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮಕ್ಕಳ ಹಾಜರಾತಿಗೆ ಇನ್ನುಮುಂದೆ ಆನ್‌ಲೈನ್ ಸಿಸ್ಟಮ್ ಜಾರಿಯಾಗಲಿದೆ. ಪ್ರಸಕ್ತ ವರ್ಷದಿಂದಲೇ Facial Recognition ತಂತ್ರಜ್ಞಾನ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೆ ಸರ್ಕಾರ ಮತ್ತು ಶಿಕ್ಷಣ ‌ಇಲಾಖೆ ಆದೇಶ ಹೊರಡಿಸಿದೆ. 2025-26ನೇ ಶೈಕ್ಷಣಿಕ ಸಾಲಿನಿಂದಲೇ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.

    ಈ ವರ್ಷದ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಈ ಕಾರ್ಯಕ್ರಮದ ಬಗ್ಗೆ ಘೋಷಣೆ ‌ಮಾಡಿದರು. ಅದರಂತೆ ʼನಿರಂತರʼ ಹೆಸರಿನಲ್ಲಿ ಕಾರ್ಯಕ್ರಮ ಅನುಷ್ಠಾನ ಆಗುತ್ತಿದೆ. ಮೊಬೈಲ್ ಆಧಾರಿತ AI-Driven Facial Recognition Attendance system ಇದಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಈ ವ್ಯವಸ್ಥೆ ಜಾರಿಯಾಗುತ್ತಿದ್ದು, 52,686 ಶಾಲೆಗಳಲ್ಲಿ ಆನ್‌ಲೈನ್ ಹಾಜರಾತಿ ವ್ಯವಸ್ಥೆ ಬರಲಿದೆ. ಇದರಲ್ಲಿ 46‌,460 ಸರ್ಕಾರಿ ಶಾಲೆಗಳು 6,226 ಅನುದಾನಿತ ಶಾಲೆಗಳಲ್ಲಿ AI ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿ ಒಳಗೆ ಬರಲಿದೆ. ಒಟ್ಟು 52,55,738 ವಿದ್ಯಾರ್ಥಿಗಳ ಹಾಜರಾತಿ ಆನ್‌ಲೈನ್ ಮೂಲಕ ಸೆರೆ ಹಿಡಿಯಬಹುದು. ಇದರಲ್ಲಿ 40,74,525 ಸರ್ಕಾರಿ ಶಾಲಾ ಮಕ್ಕಳು 11,81,213 ಅನುದಾನಿತ ಶಾಲಾ ಮಕ್ಕಳಿಗೆ ಹೊಸ ಹಾಜರಾತಿ ವ್ಯವಸ್ಥೆ ಅನ್ವಯ ಆಗಲಿದೆ.

    ಸ್ಮಾರ್ಟ್ ಹಾಜರಾತಿ ಪ್ರಯೋಜನಗಳೇನು?
    *ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಸಮಯದಲ್ಲಿ ಲಭ್ಯವಾಗುತ್ತದೆ. ವಿದ್ಯಾರ್ಥಿಗಳ ಹಾಜರಾತಿಯಲ್ಲಿ ನಿಖರತೆ ದೊರೆಯುತ್ತದೆ.
    *ಪ್ರಸ್ತುತ ಹಾಜರಾತಿ ದಾಖಲಾತಿಯಲ್ಲಿನ ವ್ಯವಸ್ಥೆಯಲ್ಲಿನ ನ್ಯೂನ್ಯತೆ ಸರಿಪಡಿಸಿ ನಿಖರ ಹಾಜರಾತಿಯನ್ನು ನಿತ್ಯವೂ ಪಡೆಯಬಹುದು.
    *ಯಾವುದೇ ಶಾಲೆಯಲ್ಲಿ ಹಾಜರಾತಿಯಲ್ಲಿ ಕೊರತೆ ಬಂದರೆ ನಿತ್ಯವೂ ಮೇಲ್ವಿಚಾರಣೆ ಮಾಡಬಹುದು.
    *ವಿವಿಧ ಪ್ರೋತ್ಸಾಹದಾಯಕ ಯೋಜನೆಗಳ ಅನುಷ್ಠಾನಕ್ಕೆ ನಿಖರ ಮಾಹಿತಿ ಲಭ್ಯವಾಗುತ್ತದೆ.
    *ವಿದ್ಯಾರ್ಥಿಗಳ ನಿಖರ ಮಾಹಿತಿ ಸಿಗುವುದರಿಂದ ಅನಗತ್ಯ, ಹೆಚ್ಚುವರಿ ಅನುದಾನ ಹಂಚಿಕೆ ತಡೆಗಟ್ಟಬಹುದು.
    *ನಿತ್ಯವೂ ಹಾಜರಾತಿ ಲಭ್ಯವಾಗುವುದರಿಂದ ಶಾಲೆಗಳಲ್ಲಿನ ಶೈಕ್ಷಣಿಕ ವ್ಯವಸ್ಥೆ ಸುಧಾರಿಸಬಹುದು.

  • ಹೊಸದಾಗಿ ನಿಯೋಜನೆಗೊಂಡ ಪಿಡಿಒಗೆ ಹಾಜರಾತಿ ನೀಡದ ಸಿಬ್ಬಂದಿ

    ಹೊಸದಾಗಿ ನಿಯೋಜನೆಗೊಂಡ ಪಿಡಿಒಗೆ ಹಾಜರಾತಿ ನೀಡದ ಸಿಬ್ಬಂದಿ

    – ಗೋಡೆ ಮೇಲೆಯೇ ಹಾಜರಾತಿ ಬರೆಯುತ್ತಿರುವ ಪಿಡಿಒ

    ದಾವಣಗೆರೆ: ಹೊಸದಾಗಿ ನಿಯೋಜನೆಗೊಂಡ ಗ್ರಾಮ ಪಂಚಾಯ್ತಿ ಪಿಡಿಒಗೆ ಅಧ್ಯಕ್ಷರು ಹಾಗೂ ಸಿಬ್ಬಂದಿ ಹಾಜರಾತಿ ಪುಸ್ತಕ ನೀಡದ ಹಿನ್ನೆಲೆಯಲ್ಲಿ ಗೋಡೆಯ ಮೇಲೆಯೇ ಹಾಜರಾತಿ ಬರೆದು ಹೋದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೇವಿಕೆರೆ ಗ್ರಾಮದಲ್ಲಿ ನಡೆದಿದೆ.

    ಈ ಗ್ರಾಮ ಪಂಚಾಯ್ತಿಗೆ ಗೋವರ್ಧನ್ ಎಂಬವರು ಪಿಡಿಒ ಇದ್ದು, ಈಗ ಹೆಚ್ಚುವರಿ ಪಿಡಿಒ ಆಗಿ ಗಾಯತ್ರಿ ಎಂಬವರನ್ನು ನೇಮಕ ಮಾಡಿದ್ದಾರೆ. ಇದರಿಂದ ಹೆಚ್ಚುವರಿಯಾಗಿ ನೇಮಕವಾದ ಪಿಡಿಒ ಅವರನ್ನು ವಿರೋಧಿಸಿ ದೇವಿಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಸದಸ್ಯರು ಪ್ರತಿಭಟನೆ ನಡೆಸಿದರು.

    ಗಾಯತ್ರಿ ಅವರನ್ನು ನೇಮಕ ಮಾಡಿರುವ ಇಒ ಆದೇಶ ಸರಿಯಲ್ಲ. ಕೆಲವೆಡೆ ಅಧಿಕಾರಿಗಳಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಅಂತಹ ಸ್ಥಳದ ಬದಲು ಪಿಡಿಒ ಇರುವಲ್ಲಿ ಮತ್ತೊಬ್ಬರನ್ನು ನಿಯೋಜಿಸಿರುವ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಸದಸ್ಯರು ಆರೋಪಿಸಿದರು.

    ಅಲ್ಲದೆ ಮೂರ್ನಾಲ್ಕು ವರ್ಷಗಳ ಹಿಂದೆ ಗಾಯತ್ರಿ ಅವರು ದೇವಿಕೆರೆ ಪಂಚಾಯ್ತಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಸರಿಯಾಗಿ ಕಚೇರಿಗೆ ಬಾರದೆ ಜನರ ಕೈಗೂ ಸಿಗದ ಕಾರಣ ಇಲ್ಲಿಂದ ವರ್ಗಾವಣೆ ಮಾಡಲಾಗಿತ್ತು ಈಗ ಮತ್ತೆ ಪಿಡಿಒ ಆಗಿ ಬಂದಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಆರೋಪಿಸಿದ್ದಾರೆ.

    ಹೊಸದಾಗಿ ನೇಮಕವಾದ ಪಿಡಿಒ ಗಾಯತ್ರಿ ಯವರು ಗ್ರಾಮ ಪಂಚಾಯತಿಗೆ ಬಂದು ಗೋಡೆಯ ಮೇಲೆ ತಮ್ಮ ಹಾಜರಾತಿ ಯನ್ನು ಬರೆದು ವಾಟ್ಸಾಪ್ ನಲ್ಲಿ ಇಒ ಅವರಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ.