Tag: attempt to murder

  • ಹೆಣ್ಣು ಮಗು ಹುಟ್ಟಿದ್ದಕ್ಕೆ ಪತ್ನಿಗೆ ಕರೆಂಟ್ ಶಾಕ್ ನೀಡಿ ಕೊಲೆಗೆ ಯತ್ನಿಸಿದ ಟೆಕ್ಕಿ

    ಹೆಣ್ಣು ಮಗು ಹುಟ್ಟಿದ್ದಕ್ಕೆ ಪತ್ನಿಗೆ ಕರೆಂಟ್ ಶಾಕ್ ನೀಡಿ ಕೊಲೆಗೆ ಯತ್ನಿಸಿದ ಟೆಕ್ಕಿ

    ಹೈದರಾಬಾದ್: ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾರಣಕ್ಕೆ ಟೆಕ್ಕಿಯೊಬ್ಬ ತನ್ನ ಪತ್ನಿಗೆ ಕರೆಂಟ್ ಶಾಕ್ ನೀಡಿ ಕೊಲೆ ಮಾಡಲು ಯತ್ನಿಸಿದ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ.

    ರಾಜರತ್ನಂ ಎಂಬ ಟೆಕ್ಕಿಯೇ ತನ್ನ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ವ್ಯಕ್ತಿ. ಪ್ರಸ್ತುತ ಈ ಕುರಿತು ರಾಜರತ್ನಂ ಪತ್ನಿ ಪ್ರಶಾಂತಿ ಪತಿ ವಿರುದ್ಧ ಶನಿವಾರ ಕೃಷ್ಣ ಜಿಲ್ಲೆಯ ಪೆನಮಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಕಳೆದ ಎರಡು ವರ್ಷಗಳ ಹಿಂದೆ ದಂಪತಿ ಮದುವೆಯಾಗಿದ್ದರು. ಈ ದಂಪತಿಗೆ ಈಗಾಗಲೇ ಒಂದು ಗಂಡು ಮಗು ಇದ್ದು, ಜನವರಿ 28 ರಂದು ಪ್ರಶಾಂತಿ ಅವರು ಎರಡನೇ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

    ಹೆಣ್ಣು ಮಗು ಜನಿಸಿದ ನಂತರ ರಾಜರತ್ನಂ ಪತ್ನಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಆರಂಭಿಸಿದ್ದ. ಮೂಲಗಳ ಪ್ರಕಾರ ಟೆಕ್ಕಿ ಕಚೇರಿಗೆ ತೆರಳದೆ ಮನೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.

    ಪತ್ನಿ ಮಲಗಿರುವ ವೇಳೆ ಆಕೆಯ ಕೈಗೆ ವೈರ್ ಸುತ್ತಿದ್ದ ರಾಜರತ್ನಂ ಕರೆಂಟ್ ಶಾಕ್ ನೀಡಲು ಪ್ರಯತ್ನಿಸಿದ್ದ. ಆದರೆ ಪ್ರಶಾಂತಿ ಎಚ್ಚರಗೊಂಡಿದ್ದರಿಂದ ಘಟನೆಯಿಂದ ಪರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಈ ವೇಳೆ ಪ್ರಶಾಂತಿ ಅವರ ಮೇಲೆ ರಾಜರತ್ನಂ ಹಲ್ಲೆ ನಡೆಸಿದ್ದು, ಅವರ ಮುಖ, ಕತ್ತು ಮತ್ತು ಕೈಗಳ ಮೇಲೆ ಗಾಯವಾಗಿದೆ. ಪತಿ ಹಲವು ದಿನಗಳಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ್ದಾನೆ ಎಂದು ಪ್ರಶಾಂತಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

  • ಹೆಂಡತಿಯನ್ನ ಕಾಡಿಗೆ ಕರೆದುಕೊಂಡು ಹೋಗಿ ಕತ್ತು ಕೊಯ್ದ ಗಂಡ

    ಹೆಂಡತಿಯನ್ನ ಕಾಡಿಗೆ ಕರೆದುಕೊಂಡು ಹೋಗಿ ಕತ್ತು ಕೊಯ್ದ ಗಂಡ

    ಚಿಕ್ಕಬಳ್ಳಾಪುರ: ಹೆಂಡತಿಯನ್ನ ಕಾಡಿಗೆ ಕರೆದುಕೊಂಡು ಹೋದ ಗಂಡನೋರ್ವ ಕಾಡಿನಲ್ಲಿ ಆಕೆಯ ಕತ್ತು ಕೊಯ್ದು ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಬುಡಗವಾರಪಲ್ಲಿ ಗ್ರಾಮದ ಬಳಿ ಆಲಗುರ್ಕಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ಗ್ರಾಮದ ಶ್ರೀನಿವಾಸ್ ಎಂಬಾತ ಚಾಕುವಿನಿಂದ ತನ್ನ ಪತ್ನಿ ಸುಮಾಳ ಕತ್ತು ಕೊಯ್ದಿದ್ದಾನೆ. ಸುಮಾ ಅವರ ಕೈ-ಕಾಲಿಗೂ ಸಹ ಚಾಕುವಿನಿಂದ ಇರಿದು ಶ್ರೀನಿವಾಸ್ ಪರಾರಿಯಾಗಿದ್ದಾನೆ. ಘಟನೆ ನಂತರ ಸುಮಾ ತನ್ನ ಪೋಷಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಸುಮಾ ಪೋಷಕರು ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಸುಮಾಳನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ.

    ಸದ್ಯ ಸುಮಾ ಪ್ರಾಣಾಪಾಯದಿಂದ ಪಾರಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸುಮಾ ಮಾತನಾಡುವ ಪರಿಸ್ಥಿತಿಯಲ್ಲಿಲ್ಲವಾದ್ದರಿಂದ ಆಕೆಯ ಗಂಡ ಈ ರೀತಿ ಮಾಡಲು ಕಾರಣವೇನೆಂಬುದು ತಿಳಿದುಬಂದಿಲ್ಲ.

    ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

     

  • ಕೈ ಕೋಳಗಳಿಂದ್ಲೇ ಪೇದೆಯ ಕುತ್ತಿಗೆ ಬಿಗಿದು ಪರಾರಿಯಾಗಲೆತ್ನಿಸಿದ ಕೈದಿ

    ಕೈ ಕೋಳಗಳಿಂದ್ಲೇ ಪೇದೆಯ ಕುತ್ತಿಗೆ ಬಿಗಿದು ಪರಾರಿಯಾಗಲೆತ್ನಿಸಿದ ಕೈದಿ

    ಮಂಗಳೂರು: ಜೈಲಿನಿಂದ ಕೋರ್ಟಿಗೆ ವಿಚಾರಣೆಗೆಂದು ಕರೆತಂದಿದ್ದ ಕೈದಿಯೊಬ್ಬ ತನ್ನನ್ನು ಹಿಡಿದುಕೊಂಡಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮೂಲತಃ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ನಿವಾಸಿಯಾಗಿದ್ದ ನುಮಾನ್ ಎಂಬ ಆರೋಪಿ ಪೊಲೀಸ್ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಜೈಲಿನಲ್ಲಿದ್ದ ನುಮಾನ್ ನನ್ನು ಕುರಿಯಾಕೋಸ್ ಎಂಬ ಮೀಸಲು ಪಡೆಯ ಪೇದೆ ಕೋರ್ಟ್ ಗೆ ಹಾಜರುಪಡಿಸಲು ಕರೆದುಕೊಂಡು ಬಂದಿದ್ದರು.

    ಕೋರ್ಟ್ ನಲ್ಲಿ ವಿಚಾರಣೆ ಪೂರ್ಣವಾದ ನಂತರ ಜೈಲಿಗೆ ಹಿಂದಿರುಗುವ ಸಮಯದಲ್ಲಿ ಆರೋಪಿ ನುಮಾನ್ ತನಗೆ ಹಾಕಿದ್ದ ಕೈ ಕೋಳಗಳಿಂದಲೇ ಪೇದೆಯ ಕುತ್ತಿಗೆ ಬಿಗಿದು ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಮಯದಲ್ಲಿ ಪೊಲೀಸ್ ಹಾಗೂ ಪೇದೆಯ ನಡುವಿನ ಜಟಾಪಟಿ ಏರ್ಪಟ್ಟಿದ್ದು, ಇದನ್ನು ಗಮನಿಸಿದ ಸಾರ್ವಜನಿಕರು ಹಾಗೂ ಟ್ರಾಫಿಕ್ ಪೊಲೀಸ್ ಪೇದೆಯ ಸಹಾಯಕ್ಕೆ ಆಗಮಿಸಿದ್ದಾರೆ.

    ಬಳಿಕ ಪೊಲೀಸರು ಕೈದಿಯನ್ನು ಜೀಪಿನ ಮೂಲಕ ಜೈಲಿಗೆ ಕರೆದ್ಯೊಯ್ದಿದ್ದು, ಘಟನೆ ಬಗ್ಗೆ ಮಂಗಳೂರಿನ ಬಂದರು ಠಾಣೆಯಲ್ಲಿ ಕೈದಿ ನುಮಾನ್ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.

     

     

     

     

     

  • ಇಬ್ಬರು ಮುದ್ದಾದ ಮಕ್ಕಳ ಕತ್ತು ಕೊಯ್ದು ತಾನೂ ಕತ್ತು ಕೊಯ್ದುಕೊಂಡ ತಾಯಿ

    ಇಬ್ಬರು ಮುದ್ದಾದ ಮಕ್ಕಳ ಕತ್ತು ಕೊಯ್ದು ತಾನೂ ಕತ್ತು ಕೊಯ್ದುಕೊಂಡ ತಾಯಿ

    ಚಿಕ್ಕಬಳ್ಳಾಪುರ: ತಾಯಿಯೊಬ್ಬಳು ಇಬ್ಬರು ಮುದ್ದಾದ ಮಕ್ಕಳ ಕತ್ತನ್ನು ಕೊಯ್ದು, ಕೊನೆಗೆ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಮುನಿಸಿಪಲ್ ಬಡಾವಣೆಯಲ್ಲಿ ನಡೆದಿದೆ.

    ಚಿಕ್ಕಬಳ್ಳಪುರ ತಾಲೂಕಿನ ನಿವಾಸಿ ಅಜ್ಜವಾರ ಗ್ರಾಮದ 27 ವರ್ಷದ ಶಿಲ್ಪಾ ತನ್ನ ಮಕ್ಕಳ ಕತ್ತನ್ನು ಕುಯ್ದ ತಾಯಿ. 11 ವರ್ಷದ ಮಗ ಯೋಗೀಶ್ ಹಾಗೂ 7 ವರ್ಷದ ಅನುಷಾಳ ಕತ್ತು ಕೊಯ್ದು, ಕೊನೆಗೆ ತಾವು ಕತ್ತು ಕೊಯ್ದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಮನೆಯ ಮಾಲೀಕ ಬಂದಿದ್ದರಿಂದ ಶಿಲ್ಪಾ ಮತ್ತು ಅನುಷಾ ಬದುಕುಳಿದಿದ್ದು, ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

    ಶಿಲ್ಪಾರನ್ನು ದೇವನಹಳ್ಳಿ ಮೂಲದ ರವಿಚಂದ್ರ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಕೌಟುಂಬಿಕ ಕಲಹದ ಹಿನ್ನೆಲೆ ಪತಿಗೆ ವಿಚ್ಚೇದನ ನೀಡಿದ್ದ ಶಿಲ್ಪಾ, ಚಿಕ್ಕಬಳ್ಳಾಪುರ ನಗರದ ಮುನಿಸಿಪಲ್ ಬಡಾವಣೆಯಲ್ಲಿರುವ ಶಿವಣ್ಣ ಎಂಬವರ ಮನೆಯಲ್ಲಿ ಮಕ್ಕಳ ಜೊತೆ ವಾಸವಾಗಿದ್ದರು. ಕೈಹಿಡಿದವನನ್ನು ಬಿಟ್ಟು, ಇನ್ನಾರೋ ಜೊತೆ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ಇಟ್ಟುಕೊಂಡಿದ್ದಾನೆ. ಕೊನೆಗೆ ಜೀವನದಲ್ಲಿ ಜಿಗುಪ್ಸೆ ಹೊಂದಿ ತಾನು ಸಾಯಲು ನಿರ್ಧರಿಸಿ, ತಾನು ಸತ್ತರೆ ಮಕ್ಕಳೇಕೆ ಅನಾಥರಾಗಬೇಕು ಅಂತ ಮಕ್ಕಳನ್ನೂ ಸಾಯಿಸಿ ತಾನು ಸಾಯಲು ಮುಂದಾದೆ ಎಂದು ಶಿಲ್ಪಾ ಹೇಳುತ್ತಾರೆ.

    ಘಟನೆಯಲ್ಲಿ ಮಗ ಯೋಗೀಶ್ ಸ್ಥಳದಲ್ಲೇಮ ಸಾವನ್ನಪ್ಪಿದ್ದು, ಮಗಳು ಅನುಷಾ ಮತ್ತು ಶಿಲ್ಪಾ ಇಬ್ಬರೂ ಬದುಕುಳಿದಿದ್ದಾರೆ. ಸದ್ಯಕ್ಕೆ ಚಿಕ್ಕಬಳ್ಳಾಪುರ ಪೊಲೀಸರು ಕೊಲೆ, ಕೊಲೆ ಯತ್ನ, ಹಾಗೂ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.