Tag: attempt to commit suicide

  • ವಿಧಾನಸೌಧದ ಮುಂದೆಯೇ ವ್ಯಕ್ತಿಯಿಂದ ಆತ್ಮಹತ್ಯೆಗೆ ಯತ್ನ!

    ವಿಧಾನಸೌಧದ ಮುಂದೆಯೇ ವ್ಯಕ್ತಿಯಿಂದ ಆತ್ಮಹತ್ಯೆಗೆ ಯತ್ನ!

    ಬೆಂಗಳೂರು: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನನಗೆ ಮೋಸ ಆಗಿದೆ ಅಂತಾ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಧಾನಸೌಧ ಕೆಂಗಲ್ ಗೇಟ್ ಬಳಿ ನಡೆದಿದೆ.

    ಗೌರಿಬಿದನೂರಿನ ಜಾಲಹಳ್ಳಿ ನಿವಾಸಿ ಗಂಗಾಧರ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಗಂಗಾಧರ್ ಅವರು ಬೆಂಗಳೂರಿನ ಶಿವಪ್ಪ ಎಂಬವರ ಜತೆ ಸೇರಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದು, ಈಗ ಶಿವಪ್ಪ ಅವರಿಂದ ತಮಗೆ ಮೋಸವಾಗಿದ್ದು, ಸೂಕ್ತ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿ ಗಂಗಾಧರ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಸೇವಿಸಿ ಅಸ್ವಸ್ಥರಾಗಿರುವ ಗಂಗಾಧರ್ ಅವರನ್ನು ನಗರದ ಮಲ್ಲಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕೆಲವು ದಿನಗಳ ಹಿಂದೆ ಮೂರು ಎಕರೆ ಜಮೀನು ಮಾರಾಟದಲ್ಲಿ ಶಿವಪ್ಪ 60 ಲಕ್ಷ ರೂ. ಹಣ ಮೋಸ ಮಾಡಿದ್ದಾರೆ. ಈ ಸಂಬಂಧ ಸಂಬಂಧ ನಾನು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಆದರೆ ಶಿವಪ್ಪ ಶಾಸಕ ಬೈರತಿ ಸುರೇಶ್ ಅವರ ಸಂಬಂಧಿಯಾಗಿರುವ ಕಾರಣ ಯಾವುದೇ ಅಧಿಕಾರಿಗಳು ಶಿವಪ್ಪ ಅವರ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಗಂಗಾಧರ್ ಆರೋಪಿಸಿದ್ದಾರೆ.

  • ಆತ್ಮಹತ್ಯೆಗೆ ಯತ್ನಿಸಿ, ಲಾರಿಗೆ ಸಿಕ್ಕು ಎರಡೂ ಕಾಲು ಕಳೆದುಕೊಂಡ!

    ಆತ್ಮಹತ್ಯೆಗೆ ಯತ್ನಿಸಿ, ಲಾರಿಗೆ ಸಿಕ್ಕು ಎರಡೂ ಕಾಲು ಕಳೆದುಕೊಂಡ!

    ಕೊಪ್ಪಳ: ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿ ಲಾರಿಗೆ ಸಿಲುಕಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ಘಟನೆ ಕುಕನೂರು ಪಟ್ಟಣದ ಪ್ರವಾಸಿ ಮಂದಿರದ ಸಮೀಪದಲ್ಲಿ ನಡೆದಿದೆ.

    ಕುಕನೂರು ಪಟ್ಟಣದ ಹುಸೇನ್ ಸಾಬ್ ಕುಷ್ಟಗಿ (30) ಆತ್ಮಹತ್ಯೆಗೆ ಯತ್ನಿಸಿ ಕಾಲುಗಳನ್ನು ಕಳೆದುಕೊಂಡ ವ್ಯಕ್ತಿ. ಅಪಘಾತವನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದ್ದಾನೆ. ಅದೃಷ್ಟವಶಾತ್ ಹುಸೇನ್ ಬದುಕುಳಿದಿದ್ದು, ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿದ್ದಾನೆ.

    ಹುಸೇನ್ ಸಾಬ್ ಮನೆಯಲ್ಲಿ ಜಗಳ ಮಾಡಿಕೊಂಡು ಹೊರ ಬಂದಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದ್ದ ಹುಸೇನ್ ಸಾಬ್ ಎದುರಿಗೆ ಬರುತ್ತಿದ್ದ ಲಾರಿಗೆ ಕೈ ಮುಗಿದು ಚಕ್ರಕ್ಕೆ ಬೀಳಲು ಯತ್ನಿಸಿದ್ದಾನೆ. ತಕ್ಷಣವೇ ಜಾಗೃತಗೊಂಡ ಚಾಲಕ ಎಷ್ಟೇ ಪ್ರಯತ್ನಿಸಿದರೂ ಲಾರಿ ನಿಯಂತ್ರಣಕ್ಕೆ ಸಿಗದೇ ಹುಸೇನ್ ಸಾಬ್ ಕಾಲುಗಳ ಮೇಲೆ ಹಾದು ಹೋಗಿದೆ. ಅತೀಯಾದ ರಕ್ತಸ್ರಾವದಿಂದ ಬಳಲುತ್ತಿದ್ದ ಹುಸೇಸ್ ಸಾಬ್ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

    ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.