Tag: atta ladoo

  • ಹಬ್ಬಕ್ಕೆ ಮಾಡಿ ಗೋಧಿ ಹಿಟ್ಟಿನ ಲಡ್ಡು

    ಹಬ್ಬಕ್ಕೆ ಮಾಡಿ ಗೋಧಿ ಹಿಟ್ಟಿನ ಲಡ್ಡು

    ಬ್ಬಗಳು ಒಂದೊಂದಾಗಿಯೆ ಬರುತ್ತಿವೆ. ರಕ್ಷಾ ಬಂಧನಕ್ಕೆ ಸಿಹಿ ತಿಂಡಿ ಇದ್ದರೆ ಹಬ್ಬದ ಮೆರಗು ಹೆಚ್ಚಾಗುತ್ತದೆ. ಹಬ್ಬದ ದಿನ ಬಗೆಬಗೆಯಾದ ಸಿಹಿ ತಿಂಡಿಗಳನ್ನು ದೇವರಿಗೆ ನೈವೇದ್ಯ ಅರ್ಪಿಸಿಬೇಕು. ಸಿಹಿ ತಿಂಡಿಗಳು ರುಚಿಯ ಜೊತೆಗೆ ಆರೋಗ್ಯದ ಕಾಳಜಿಯಿಂದಲೂ ತಯಾರಿಸಬೇಕು ಎಂಬುದು ಮುಖ್ಯವಾಗುತ್ತದೆ. ಹೀಗಾಗಿ ನೀವು ಮನೆಯಲ್ಲಿಯೆ ಸರಳವಾಗಿ ಗೋಧಿ ಹಿಟ್ಟಿನ ಲಡ್ಡು ಮಾಡಿ.

    ಬೇಕಾಗುವ ಸಾಮಗ್ರಿಗಳು:

    * ಗೋಧಿ ಹಿಟ್ಟು- 1 ಕಪ್
    * ತುಪ್ಪ – ಅರ್ಧ ಕಪ್
    * ನೀರು – 3 ಚಮಚ
    * ತೆಂಗಿನ ತುರಿ- ಅರ್ಧ ಕಪ್
    * ಬಾದಾಮಿ – 5 ರಿಂದ 6
    * ಗೋಡಂಬಿ – 5 ರಿಂದ 6
    * ಒಣದ್ರಾಕ್ಷಿ – 8-10
    * ಪಿಸ್ತಾ – ¼ ಚಮಚ
    * ಏಲಕ್ಕಿ ಪುಡಿ – ಅರ್ಧ ಚಮಚ
    * ಸಕ್ಕರೆ ಪುಡಿ – ಅರ್ಧ ಕಪ್


    ಮಾಡುವ ವಿಧಾನ:
    * ಮಿಕ್ಸಿಂಗ್ ಬೌಲ್‍ನಲ್ಲಿ ಗೋಧಿ ಹಿಟ್ಟು ತುಪ್ಪ ಸೇರಿಸಿ.
    * ಮಿಶ್ರಣಕ್ಕೆ ಬೆಚ್ಚಗಿನ ನೀರನ್ನು ಸೇರಿಸಿ ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಿ.
    * ಅಂಗೈಯಲ್ಲಿ ಹಿಡಿದಾಗ ಮಿಶ್ರಣ ಒಟ್ಟಿಗೆ ಅಂಟಿಕೊಳ್ಳಬೇಕು.
    * ಬಿಸಿ ಮಾಡಿದ ಬಾಣಲೆಯಲ್ಲಿ ಅರ್ಧ ಕಪ್ ತುಪ್ಪ ಸೇರಿಸಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದನ್ನೂ ಓದಿ:  ಥಟ್ಟನೆ ಮಾಡಿ ಹೆಸರು ಬೇಳೆ ಚಾಟ್

    * ನಂತರ ತೆಂಗಿನ ಪುಡಿ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸ್ಟವ್ ಆಫ್ ಮಾಡಿ.
    * ಕತ್ತರಿಸಿದ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಪಿಸ್ತಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಏಲಕ್ಕಿ ಪುಡಿಯನ್ನು ಸೇರಿಸಿ 10 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ಪುಡಿ ಮಾಡಿದ ಸಕ್ಕರೆಯನ್ನು ಸೇರಿಸಿ ಕೈಬಳಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸಣ್ಣ ಲಡ್ಡುಗಳಾಗಿ ಮಾಡಿದರೆ ಗೋಧಿ ಲಡ್ಡು ಸವಿಯಲು ಸಿದ್ಧವಾಗುತ್ತದೆ.