Tag: ATMs

  • ಎಟಿಎಂ ಹೊತ್ತೊಯ್ದ ಕಳ್ಳರು- ಸಿಕ್ಕಿದ್ದು 6 ಸಾವಿರ ಮಾತ್ರ

    ಎಟಿಎಂ ಹೊತ್ತೊಯ್ದ ಕಳ್ಳರು- ಸಿಕ್ಕಿದ್ದು 6 ಸಾವಿರ ಮಾತ್ರ

    ಮುಂಬೈ: ಕಳ್ಳರು ಖಾಸಗಿ ಬ್ಯಾಂಕ್‍ನ ಎಟಿಎಂ ಮಷೀನ್ ಹೊತ್ತೊಯ್ದಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

    ಉಸಾತ್ನೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಹೊತ್ತೊಯ್ದ ಎಟಿಎಂ ಯಂತ್ರದಲ್ಲಿ ಕೇವಲ 6,000 ರೂ. ಸಿಕ್ಕಿದೆ. ಪ್ರಕರಣದ ಕುರಿತು ಉಲ್ಲಾಸ್‍ನಗರದ ಹಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 380(ಕಳ್ಳತನ) ಹಾಗೂ 427(ವಂಚನೆ) ಅಡಿ ಅನಾಮಧೇಯ ಕಳ್ಳರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲಾಗಿದೆ.

    ಕಳ್ಳರು ಎಟಿಎಂ ಯಂತ್ರವನ್ನು ಹೊತ್ತೊಯ್ಯುವ ಮುನ್ನ ಸ್ಕ್ರೀನ್ ಗಾಜು, ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಳ್ಳರ ಪತ್ತೆಗಾಗಿ ಪೊಲೀಸರು ಇದೀಗ ಬಲೆ ಬೀಸಿದ್ದಾರೆ.

  • ವಿಡಿಯೋ ನೋಡಿ: ಎಟಿಎಂನಿಂದ ಹೊರ ಬಂದ ಗರಿ ಗರಿ ನೋಟುಗಳು

    ವಿಡಿಯೋ ನೋಡಿ: ಎಟಿಎಂನಿಂದ ಹೊರ ಬಂದ ಗರಿ ಗರಿ ನೋಟುಗಳು

    ಲಂಡನ್: ಬಿಟ್‍ಕಾಯಿನ್ ಎಟಿಎಂನಿಂದ ಗರಿ ಗರಿ ನೋಟುಗಳು ಹೊರ ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಲಂಡನ್ ನಗರದ ಟ್ಯೂಬ್ ಸ್ಟೇಷನ್ (ರೈಲು ನಿಲ್ದಾಣ) ಎಟಿಎಂನಿಂದ 20 ಪೌಂಡ್ (ಸುಮಾರು 1,700 ರೂ) ಮುಖಬೆಲೆಯ ನೋಟುಗಳು ಹೊರ ಬಂದಿವೆ.

    ಲಂಡನ್ ನಗರದ ಬಾಂಡ್ ಸ್ಟ್ರೀಟ್ ನ ಟ್ಯೂಬ್ ಸ್ಟೇಷನ್ ನಲ್ಲಿ ವ್ಯಕ್ತಿಯೋರ್ವ ದೊಡ್ಡ ಮೊತ್ತದ ಹಣ ಡ್ರಾ ಮಾಡಿದ ಪರಿಣಾಮ 20 ಪೌಂಡ್ ಮುಖಬೆಲೆಯ ನೋಟುಗಳು ಹೊರ ಬಂದಿವೆ. ನಿಲ್ದಾಣದ ಭದ್ರತಾ ಸಿಬ್ಬಂದಿ ಹಣವನ್ನು ಯಾರು ಎತ್ತಿಕೊಳ್ಳದಂತೆ ಎಚ್ಚರವಹಿಸುತ್ತಿರೋದನ್ನು ವಿಡಿಯೋದಲ್ಲಿ ನೋಡಬಹುದು. ಗ್ರಾಹಕ ಎಟಿಎಂ ಮುಂದೆ ಬ್ಯಾಗ್ ಇಟ್ಟು ಹಣವನ್ನು ತುಂಬಿಕೊಳ್ಳುತ್ತಿದ್ದಾನೆ. ಬ್ಯಾಗ್ ಅಕ್ಕಪಕ್ಕ ಬಿದ್ದಿರುವ ನೋಟುಗಳನ್ನು ಕಾಲಿನಿಂದ ತಳ್ಳಿ ಒಂದೆಡೆ ಸೇರಿಸಿದ್ದಾನೆ.

    ದೊಡ್ಡ ಮೊತ್ತ ಡ್ರಾ ಮಾಡಿದಾಗ ಬಿಟ್ ಕಾಯಿನ್ ಯಂತ್ರ ಒಂದೇ ಸಾರಿ ನಿಧಾನಕ್ಕೆ ಹಣವನ್ನು ಹೊರ ನೀಡಿದೆ. ಸ್ವಲ್ಪ ಸ್ವಲ್ಪ ಹಣ ನೀಡುತ್ತಿದ್ದರಿಂದ ವ್ಯಕ್ತಿ ಕೆಳಗಡೆ ಬ್ಯಾಗ್ ಇರಿಸಿದ್ದಾನೆಂದು ವರದಿಯಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಬಿಟ್‍ಕಾಯಿನ್ ಟೆಕ್ನಾಲಜಿ ಮುಖ್ಯಸ್ಥ ಮತ್ತು ಸಿಇಓ ಆಡಂ ಗ್ರಾಮೊವಸ್ಕಿ, ನಮ್ಮ ಕಂಪನಿಯ ಯಂತ್ರಗಳಿಂದ ಇಂಗ್ಲೆಂಡ್ ನೋಟುಗಳು ಹೊರಬರೋದು ನಿಧಾನವಾಗುತ್ತಿದೆ. ಹೀಗಾಗಿ ಯಂತ್ರಗಳನ್ನು ನೋಟುಗಳಿಗೆ ಅನುಗುಣವಾಗಿ ರೂಪಿಸಬೇಕಿದೆ. ಎಟಿಎಂ ಮುಂದೆ ಬ್ಯಾಗ್ ಇಟ್ಟು ಗ್ರಾಹಕರೊಬ್ಬರು ಹಣ ತುಂಬಿಕೊಳ್ಳುತ್ತಿರುವ ವಿಡಿಯೋ ನಮ್ಮ ಗಮನಕ್ಕೆ ಬಂದಿದೆ. ಲಂಡನ್ ನೋಟುಗಳನ್ನು ಸಪೋರ್ಟ್ ಮಾಡುವ ತಂತ್ರಜ್ಞನವನ್ನು ಎಟಿಎಂಗಳಿಗೆ ಅಳವಡಿಸಲಾಗುವುದು. ನಮ್ಮ ಎಟಿಎಂಗಳು ಒಂದೇ ವ್ಯವಹಾರದಲ್ಲಿ ಹೆಚ್ಚು ಹಣ ನೀಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿಸಿದ್ದಾರೆ.

    ವಿಡಿಯೋದಲ್ಲಿಯ ನಮ್ಮ ಗ್ರಾಹಕ ನಿರ್ಲಕ್ಷ್ಯದಿಂದ ಬ್ಯಾಗ್ ಕೆಳಗಿಟ್ಟು ಹಣ ತುಂಬಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಎಟಿಎಂ ಗಳನ್ನು ಮರುವಿನ್ಯಾಸಗೊಳಿಸಲಾಗುವುದು. ಸುರಕ್ಷತೆ ದೃಷ್ಟಿಯಿಂದ ಯಂತ್ರಗಳಲ್ಲಿ ಕಡಿಮೆ ಮುಖಬೆಲೆಯ ನೋಟುಗಳನ್ನು ಇರಿಸಲಾಗುವುದು ಎಂದು ಆಡಂ ಹೇಳಿದ್ದಾರೆ.

  • ನಿಮಗೆ ತಿಳಿಯದೆ ಖಾತೆಯಿಂದ ಹಣ ಡ್ರಾ ಆಗೋದು ಹೇಗೆ- 1.35 ನಿಮಿಷದ ವೈರಲ್ ವಿಡಿಯೋ ನೋಡಿ

    ನಿಮಗೆ ತಿಳಿಯದೆ ಖಾತೆಯಿಂದ ಹಣ ಡ್ರಾ ಆಗೋದು ಹೇಗೆ- 1.35 ನಿಮಿಷದ ವೈರಲ್ ವಿಡಿಯೋ ನೋಡಿ

    ಬೆಂಗಳೂರು: ನೀವು ಎಟಿಎಂಗೆ ಹೋಗಿ ಹಣ ಡ್ರಾ ಮಾಡಿದರೂ ನಿಮಗೆ ಗೊತ್ತಾಗದ ರೀತಿಯಲ್ಲಿ ನಿಮ್ಮ ಕಾರ್ಡ್ ಮಾಹಿತಿ ಕದ್ದು ಖಾತೆಗೆ ಕನ್ನ ಹಾಕುತ್ತಿದ್ದ ಗ್ಯಾಂಗ್ ಹಿಂದಿನ ರಹಸ್ಯವನ್ನು ಪೊಲೀಸರು ರಿವೀಲ್ ಮಾಡಿದ್ದಾರೆ. ಖದೀಮರು ಗ್ರಾಹಕರ ಖಾತೆಗೆ ಹೇಗೆ ಕನ್ನ ಹಾಕುತ್ತಿದ್ದರು ಎಂಬುದರ ಬಗ್ಗೆ ಜಾಗೃತಿ ಮಾಡಿಸಲು ಪೊಲೀಸರು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.

    1.35 ನಿಮಿಷದ ವಿಡಿಯೋವನ್ನು ತಿರುಪತಿ ಪೊಲೀಸ್ ಪೇಜ್ ನಲ್ಲಿ ಅಪ್ಲೋಡ್ ಮಾಡಿದ್ದು, ಎಟಿಎಂಗೆ ತೆರಳುವ ಗ್ರಾಹಕರ ಕಾರ್ಡ್ ಹಾಗೂ ಪಿನ್ ನಂಬರನ್ನು ಖದೀಮರು ಹೇಗೆ ಪಡೆಯುತ್ತಿದ್ದರು ಎಂಬುದರ ಸಂಪೂರ್ಣ ವಿವರಣೆ ವಿಡಿಯೋದಲ್ಲಿದೆ. ಸದ್ಯ ತಿರುಪತಿ ಪೊಲೀಸರ ಈ ವಿಡಿಯೋ ವೈರಲ್ ಆಗಿದೆ. 

    https://www.facebook.com/tirupatipolice/videos/243380043198168/

    ಮಾಹಿತಿ ಹೇಗೆ ಪಡೆಯುತ್ತಾರೆ?
    ಗ್ರಾಹಕರಂತೆ ಎಟಿಎಂಗೆ ಪ್ರವೇಶ ಪಡೆಯುವ ಖದೀಮರು ಎಟಿಎಂ ಯಂತ್ರಕ್ಕೆ ಸ್ಕಿಮ್ಮಿಂಗ್ ಪ್ಲೇಟ್ ಹಾಗೂ ನಂಬರ್ ಪ್ಯಾಡ್ ಕಾಣುವಂತೆ ಮೈಕ್ರೊ ಕ್ಯಾಮೆರಾ ಅಳವಡಿಸಿ ಹೊರ ಬರುತ್ತಾರೆ. ಗ್ರಾಹಕರು ಎಟಿಎಂ ಯಂತ್ರದೊಳಗೆ ಕಾರ್ಡ್ ಹಾಕಿದಾಗ ಅದರ ಮಾಹಿತಿ ಸ್ಕಿಮ್ಮಿಂಗ್ ಪ್ಲೇಟ್‍ನಲ್ಲಿ ದಾಖಲಾಗುತ್ತದೆ. ಇತ್ತ ಗ್ರಾಹಕರು ಪಿನ್ ನಂಬರ್ ಒತ್ತುವುದು ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ.

    ಗ್ರಾಹಕರು ಎಟಿಎಂನಿಂದ ಹೊರಬರುತ್ತಿದಂತೆ ಮೊದಲು ಅಳವಡಿಸಿದ್ದ ಕ್ಯಾಮೆರಾ ಹಾಗೂ ಸ್ಕಿಮ್ಮಿಂಗ್ ಪ್ಲೇಟ್ ತೆಗೆದುಕೊಂಡು ಆರೋಪಿಗಳು ತೆರಳುತ್ತಾರೆ. ಅದರಲ್ಲಿ ಸಂಗ್ರಹವಾಗಿದ್ದ ಮಾಹಿತಿಯನ್ನು ಲ್ಯಾಪ್‍ಟಾಪ್‍ಗೆ ವರ್ಗಾಯಿಸಿ, ಆ ಮಾಹಿತಿಯ ಅನ್ವಯ ನಕಲಿ ಕ್ರೆಡಿಟ್ ಹಾಗೂ ಡೆಬಿಡ್ ಕಾರ್ಡ್ ತಯಾರಿಸುತ್ತಾರೆ. ಬಳಿಕ ಪಿನ್ ನಂಬರ್ ಬಳಸಿ ಗ್ರಾಹಕರ ಖಾತೆಯಿಂದ ಹಣ ಡ್ರಾ ಮಾಡುತ್ತಾರೆ.

    ಏನಿದು ಸ್ಕಿಮ್ಮಿಂಗ್: ರಹಸ್ಯವಾಗಿ ಎಟಿಎಂ ಯಂತ್ರಕ್ಕೆ ಅಳವಡಿಸುವ ಸಾಧನ ಇದಾಗಿದ್ದು, ಎಟಿಎಂಗೆ ಕಾರ್ಡ್ ಹಾಕುವ ಜಾಗದಲ್ಲಿ ಅಳವಡಿಸಿ ಗ್ರಾಹಕರ ಡೇಟಾಗೆ ಸಂಗ್ರಹಿಸಲಾಗುತ್ತದೆ. ಅಲ್ಲದೇ ಮೈಕ್ರೊ ಕ್ಯಾಮೆರಾ ಮೂಲಕ ನಿಮ್ಮ ಪಿನ್ ಮಾಹಿತಿ ಕೂಡ ಪಡೆಯುತ್ತಾರೆ.

    ಎಚ್ಚರಿಕೆ ವಹಿಸುವುದು ಹೇಗೆ?
    ಸ್ಕಿಮ್ಮಿಂಗ್ ಉಪಕರಣದಿಂದ ಕಾರ್ಡ್ ಮಾಹಿತಿ ಪಡೆದರು ಕೂಡ ಪಿನ್ ನಂಬರ್ ಇಲ್ಲದೆ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಅದ್ದರಿಂದ ಗ್ರಾಹಕರು ಪಿನ್ ನಂಬರ್ ಎಂಟ್ರಿ ಮಾಡುವ ವೇಳೆ ಮತ್ತೊಂದು ಕೈಯಿಂದ ಅಡ್ಡ ಹಿಡಿದು ಪಿನ್ ನಮೂದಿಸಿದರೆ ಮಾಹಿತಿ ಸೋರಿಕೆ ಆಗದಂತೆ ತಡೆಯಬಹುದಾಗಿದೆ. ಅಲ್ಲದೇ ಕಾರ್ಡ್ ರೀಡರ್ ಗಡಸಾಗಿರುವ ಅನುಭವವ ಉಂಟಾದರೆ ಈ ಕುರಿತು ಅಧಿಕಾರಿಗಳ ಗಮನಕ್ಕೆ ತರುವುದು ಉತ್ತಮ. ಇದನ್ನೂ ಓದಿ: ಯಾವ ಎಟಿಎಂ ಕಾರ್ಡ್ ಗಳು ಬೇಗ ಹ್ಯಾಕ್ ಆಗುತ್ತದೆ? ಹೊಸ ಎಟಿಎಂ ಕಾರ್ಡ್ ನಲ್ಲಿರುವ ಭದ್ರತಾ ವಿಶೇಷತೆ ಏನು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv