Tag: Atmanirbhar Bharat

  • ವಿಶ್ವದಲ್ಲಿ ನಮಗೆ ಯಾರೂ ಶತ್ರುಗಳಿಲ್ಲ, ಬೇರೆ ದೇಶದ ಮೇಲಿನ ಅವಲಂಬನೆಯೇ ನಮ್ಮ ದೊಡ್ಡ ಶತ್ರು – ಮೋದಿ

    ವಿಶ್ವದಲ್ಲಿ ನಮಗೆ ಯಾರೂ ಶತ್ರುಗಳಿಲ್ಲ, ಬೇರೆ ದೇಶದ ಮೇಲಿನ ಅವಲಂಬನೆಯೇ ನಮ್ಮ ದೊಡ್ಡ ಶತ್ರು – ಮೋದಿ

    – ಚಿಪ್ ಆಗಲೀ ಶಿಪ್ ಆಗಲಿ ಭಾರತದಲ್ಲೇ ನಿರ್ಮಾಣವಾಗಲಿದೆ
    – ಭಾರತ ವಿಶ್ವಬಂಧು ಭಾವನೆಯಲ್ಲಿ ಮುಂದೆ ಸಾಗುತ್ತಿದೆ ಎಂದ ಪ್ರಧಾನಿ

    ಗಾಂಧಿನಗರ: ಭಾರತ ವಿಶ್ವಬಂಧು ಭಾವನೆಯಲ್ಲಿ ಮುಂದೆ ಸಾಗುತ್ತಿದೆ. ನಮಗೆ ವಿಶ್ವದಲ್ಲಿ ಯಾರೂ ಶತ್ರುಗಳಿಲ್ಲ (No Enemy). ಆದ್ರೆ ಬೇರೆ ದೇಶದ ಮೇಲಿನ ಅವಲಂಬನೆಯೇ ನಮ್ಮ ದೊಡ್ಡ ಶತ್ರು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಎಚ್ಚರಿಸಿದರು.

    ಗುಜರಾತ್‌ನ (Gujarat) ಭಾವನನಗರದಲ್ಲಿ ನಡೆದ ‘ಸಮುದ್ರ ಸೆ ಸಮೃದ್ಧಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು 34,200 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು. ಬಳಿಕ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಟ್ರಂಪ್‌ 50% ಸುಂಕ ನೀತಿಗೆ ಗುದ್ದು ನೀಡಿದರು. ಆತ್ಮನಿರ್ಭರ ಭಾರತದ ಮಹತ್ವವನ್ನು ಪ್ರತಿಪಾದಿಸುತ್ತಾ, ಭಾರತದಲ್ಲೇ ತಯಾರಾದ ಉತ್ಪನ್ನ (Made In India) ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ವಿದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು ಎಂದು ದೇಶದ ಜನತೆಗೆ ಕರೆ ನೀಡಿದರು.

    ಇಂದು ಭಾರತ ವಿಶ್ವಬಂಧು ಭಾವನೆಯಿಂದ ಮುಂದುವರಿಯುತ್ತಿದೆ. ಹಾಗಾಗಿ ಜಗತ್ತಿನಲ್ಲಿ ನಮಗೆ ಯಾವುದೇ ದೊಡ್ಡ ಶತ್ರು ಇಲ್ಲ. ಆದ್ರೆ ಇತರರ ಮೇಲಿನ ಅವಲಂಬನೆಯೇ ನಮಗೆ ದೊಡ್ಡ ಶತ್ರು. ಆದ್ದರಿಂದ ನಾವು ಒಟ್ಟಾಗಿ ಈ ಅವಲಂಬನೆಯ ಶತ್ರುವನ್ನು ಸೋಲಿಸಬೇಕು ಎಂದು ಕರೆ ನೀಡಿದರು.

    ಮುಂದುವರಿದು, ವಿದೇಶಿ ಅವಲಂಬನೆ ಹೆಚ್ಚಾದಷ್ಟು ದೇಶದ ವೈಫಲ್ಯ ಹೆಚ್ಚಾಗುತ್ತದೆ. ಹಾಗಾಗಿ ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನ ಹೊಂದಿರುವ ನಾವು ದೇಶದ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಆತ್ಮನಿರ್ಭರವಾಗಬೇಕು. ಇತರರ ಮೇಲೆ ಅವಲಂಬಿತರಾಗಿದ್ದರೆ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಭಾರತದ ಅಭಿವೃದ್ಧಿಯನ್ನು ಇತರ ದೇಶಗಳ ಮೇಲೆ ಬಿಡಬಾರದು. ಭವಿಷ್ಯದ ಪೀಳಿಗೆಯನ್ನು ಪಣಕ್ಕಿಡಬಾರದು. 140 ಕೋಟಿ ದೇಶವಾಸಿಗಳ ಭವಿಷ್ಯವನ್ನ ನಾವು ಇತರರಿಗೆ ಬಿಡಲು ಸಾಧ್ಯವಿಲ್ಲವೆಂದೂ ಪ್ರಧಾನಿ ಹೇಳಿದರು.

    ಒಂದು ರಾಷ್ಟ್ರ – ಒಂದು ದಾಖಲೆ
    ಇದೇ ವೇಳೆ ಭಾರತೀಯ ಪೋರ್ಟ್‌ (ಬಂದರು)ಗಳ ದಾಖಲಾತಿಗೆ ಸಂಬಂಧಿಸಿದ ಸುಧಾರಣೆಗಳನ್ನು ಪರಿಚಯಿಸುವುದಾಗಿ ಹೇಳಿದ ಅವರು, ಶೀಘ್ರದಲ್ಲೇ ಭಾರತೀಯ ಬಂಧರುಗಳಿಗೆ ʻಒಂದು ರಾಷ್ಟ್ರ – ಒಂದು ದಾಖಲಾತಿʼ ಎಂಬ ಹೊಸ ಸುಧಾರಣೆ ತರಲಿದ್ದೇವೆ. ಇದು ವ್ಯಾಪಾರವನ್ನು ಸುಲಭಗೊಳಿಸುತ್ತದೆ ಎಂದು ತಿಳಿಸಿದರು.

    ಚಿಪ್ ಆಗಲೀ ಶಿಪ್ ಆಗಲಿ ಭಾರತದಲ್ಲೇ ನಿರ್ಮಾಣ
    ಅಲ್ಲದೇ ಭಾರತದಲ್ಲಿ ತಯಾರಿಸಬೇಕಾದ ವೈವಿಧ್ಯಮಯ ಉತ್ಪನ್ನಗಳ ಕುರಿತು ಮಾತನಾಡಿ, ಚಿಪ್‌ ಆಗಲಿ ಶಿಪ್‌ ಆಗಲಿ ನಾವು ಎಲ್ಲವನ್ನೂ ಭಾರತದಲ್ಲೇ ತಯಾರಿಸಬೇಕು. ಅದಕ್ಕಾಗಿ ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಾವು ದೇಶದ ಸಂಪತನ್ನು ಕಾಪಾಡಿಕೊಳ್ಳಲು ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.

    ಇದೇ ವೇಳೆ ಭಾರತದಲ್ಲಿ ಉಕ್ಕಿನಿಂದ ತಯಾರಿಸಿದ ಐಎನ್‌ಎಸ್ ವಿಕ್ರಾಂತ್‌ ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ಮೋದಿ, ಸ್ವಾವಲಂಬನೆಯ ಅಗಾಧ ಸಾಮರ್ಥ್ಯಕ್ಕೆ ಉದಾಹರಣೆ ನೀಡಿದರು. ಭಾರತ 40ಕ್ಕೂ ಹೆಚ್ಚು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಪರಿಚಯಿಯಿಸಿದೆ ಎಂದು ವಿವರಿಸಿದರು.

  • ಸೇನಾ ಹೆಲಿಕಾಪ್ಟರ್‌ಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ಕಂಪನಿಗಳಿಗೆ ರಕ್ಷಣಾ ಸಚಿವಾಲಯದಿಂದ ಅನುಮತಿ

    ಸೇನಾ ಹೆಲಿಕಾಪ್ಟರ್‌ಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ಕಂಪನಿಗಳಿಗೆ ರಕ್ಷಣಾ ಸಚಿವಾಲಯದಿಂದ ಅನುಮತಿ

    ನವದೆಹಲಿ: ಭಾರತೀಯ ಮಿಲಿಟರಿ ಹಾರ್ಡ್ವೇರ್ ವಲಯದಲ್ಲಿ `ಆತ್ಮ ನಿರ್ಭರ ಭಾರತ್’ಗೆ ಉತ್ತೇನ ನೀಡಲು ರಕ್ಷಣಾ ಸಚಿವಾಲಯ ಮುಂದಾಗಿದ್ದು, ಅದಕ್ಕಾಗಿ ರಕ್ಷಣಾ ಸ್ವಾಧೀನ ಪ್ರಕ್ರಿಯೆ (DAP) ಕೈಪಿಡಿಯನ್ನು ತಿದ್ದುಪಡಿ ಮಾಡಲು ನಿರ್ಧರಿಸಿದೆ. ಇದರೊಂದಿಗೆ ಖಾಸಗಿ ವಲಯವು ಭಾರತೀಯ ರಕ್ಷಣಾ PSUಗಳೊಂದಿಗೆ (ಸಾರ್ವಜನಿಕ ವಲಯದ ಉದ್ಯಮ) ಅಗತ್ಯವಿರುದ್ಧ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲು ಅನುವು ಮಾಡಿಕೊಡುತ್ತದೆ ಎಂದು ವರದಿಯಾಗಿದೆ.

    ಅಧಿಕಾರಿಗಳ ಪ್ರಕಾರ, ಉದ್ಯಮದಲ್ಲಿನ ಈ ಸಹಯೋಗವನ್ನು ಭಾರತೀಯ ಮಲ್ಟಿ-ರೋಲ್ ಹೆಲಿಕಾಪ್ಟರ್ (IMRH) ತಯಾರಿಕೆ ಮತ್ತು ಅಭಿವೃದ್ಧಿಯಲ್ಲಿ ಪರೀಕ್ಷಿಸಲಾಗುತ್ತದೆ. ಅಂತಿಮವಾಗಿ ಭಾರತೀಯ ಮಿಲಿಟರಿಯ ಪ್ರಸ್ತುತ ದಾಸ್ತಾನುಗಳಲ್ಲಿ ರಷ್ಯಾದ ನಿರ್ಮಿತ ಎಲ್ಲಾ Mi-17 ಮತ್ತು Mi-8 ಹೆಲಿಕಾಪ್ಟರ್‌ಗಳನ್ನು ಬದಲಾಯಿಸುತ್ತದೆ. ಇದರೊಂದಿಗೆ ವಾಯು ದಾಳಿ, ಜಲಾಂತರ್ಗಾಮಿ ನೌಕೆಗಳು, ಮಿಲಿಟರಿ ಸಾರಿಗೆ ಹಾಗೂ ಮೊದಲಾದ ವಿಭಾಗಗಳಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದನ್ನೂ ಓದಿ: ಹೈದರಾಬಾದ್‍ಗೆ ಬರುತ್ತಿದ್ದ ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

    ಖಾಸಗಿ ವಲಯದ ಕಂಪನಿಗಳು ಈಗಾಗಲೇ ಯೋಜನೆಯಲ್ಲಿ ಭಾಗವಹಿಸಲು ಉತ್ಸುಕತೆ ತೋರಿದ್ದು, ಮುಂದಿನ 7 ವರ್ಷಗಳಲ್ಲಿ ಶಸ್ತ್ರಾಸ್ತ್ರ ಉತ್ಪಾದನೆ ಪ್ರಾರಂಭಿಸಲು ರಕ್ಷಣಾ ಸಚಿವಾಲಯ ತಿಳಿಸಿದೆ. ಫ್ರೆಂಚ್ ಸಫ್ರಾನ್ ಕಂಪನಿಯು ಈಗಾಗಲೇ (ಜುಲೈ 8ರಂದು) ಭಾರತೀಯ HAL ಸಹಿಹಾಕಿದೆ. ಈ ಮೂಲಕ ನೌಕಾರೂಪ ಸೇರಿದಂತೆ IMRH ಎಂಜಿನ್ ಅನ್ನು ಉತ್ಪಾದಿಸಿ, ಅಭಿವೃದ್ಧಿಪಡಿಸಲು ಹಾಗೂ ಹೊಸದಾಗಿ ಜಂಟಿ ಉದ್ಯಮ ಸೃಷ್ಟಿಸಲು ಮುಂದಾಗಿವೆ ಎಂದು ಮಾಧ್ಯಮಗಳು ವರದಿಮಾಡಿವೆ.

    ಖಾಸಗಿ ವಲಯದ ಕಂಪೆನಿಗಳು ಉತ್ಪಾದನೆಯ ಶೇ.25 ಪ್ರತಿಶತವನ್ನು 3ನೇ ದೇಶಗಳಿಗೆ ರಫ್ತುಮಾಡಲು ಹಾಗೂ ವಿದೇಶಿ ವಿನಿಮಯವನ್ನೂ ಮಾಡಿಕೊಳ್ಳಲು ಅನುಮತಿಸಲಾಗುತ್ತದೆ. ಅಭಿವೃದ್ಧಿ ಹೊಂದಿದ IMRH ಅನ್ನು ಖರೀದಿಸಲು ಭಾರತೀಯ ಸಶಸ್ತ್ರ ಪಡೆಗಳಿಗೆ ತಿಳಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ಹೆಲಿಕಾಪ್ಟರ್ ತಯಾರಿಸಿದರೆ, ಸಮಯಕ್ಕೆ ಮುಂಚಿತವಾಗಿ ಖರೀದಿಸುವಂತೆ ಖಾಸಗಿ ಕಂಪನಿಗಳು ಕೋರಿವೆ.

    ಖಾಸಗಿ ವಲಯವು ಶೇ.51 ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಹಾಗೂ ಭಾರತೀಯ ಪಿಎಸ್‌ಯು ಗಳೊಂದಿಗೆ ಜಂಟಿ ಉದ್ಯಮ ರೂಪಿಸಲು ಅನುಮತಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ದೇವಸ್ಥಾನದ ಆವರಣದಲ್ಲಿ ಮಾಂಸ ಎಸೆದ ದುಷ್ಕರ್ಮಿಗಳು- 3 ಮಾಂಸದ ಅಂಗಡಿಗಳಿಗೆ ಬೆಂಕಿ

    IMRH ಮುಂಬರುವ 5 ರಿಂದ 7 ವರ್ಷಗಳಲ್ಲಿ ಹೆಲಿಕಾಪ್ಟರ್‌ಗಳನ್ನು ಹೊರತರುವ ನಿರೀಕ್ಷೆಯಿದೆ. ಭಾರತೀಯ ನೌಕಾಪಡೆಯು ತನ್ನ ಮೊದಲ ಜಲಾಂತರ್ಗಾಮಿ ವಿರೋಧಿ ಯುದ್ಧದ ಸಿರ್ಕೋರ್ಸ್ಕಿ MH-60R ಸೀಹಾಕ್ ಹೆಲಿಕಾಪ್ಟರ್‌ಗಳನ್ನು ಈ ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿ ವಿತರಿಸುವ ನಿರೀಕ್ಷೆಯಿದೆ. ಮೊದಲ 2-3 ಹೆಲಿಕಾಪ್ಟರ್‌ಗಳನ್ನು ಈಗಾಗಲೇ USನ  ಸ್ಯಾನ್ ಡಿಯಾಗೋ ನೌಕಾ ನಿಲ್ದಾಣದಿಂದ ತರಬೇತಿ ಉದ್ದೇಶಗಳಿಗಾಗಿ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದೆ. ಉಳಿದ 21 ಹೆಲಿಕಾಪ್ಟರ್‌ಗಳ ವಿತರಣೆಗಳು 2.3 ಶತಕೋಟಿ ಡಾಲರ್ ಫೆಬ್ರವರಿ 2020ರ ಒಪ್ಪಂದದಂತೆ ಆಗಲಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಆತ್ಮನಿರ್ಭರ್ ಆಗಬೇಕೆಂಬ ಹಂಬಲ ಬಿಪಿನ್ ಅವರಿಗಿತ್ತು: ಬೊಮ್ಮಾಯಿ

    ಭಾರತ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಆತ್ಮನಿರ್ಭರ್ ಆಗಬೇಕೆಂಬ ಹಂಬಲ ಬಿಪಿನ್ ಅವರಿಗಿತ್ತು: ಬೊಮ್ಮಾಯಿ

    ಬೆಂಗಳೂರು: ಭಾರತ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಆತ್ಮನಿರ್ಭರ್ ಆಗಬೇಕೆಂಬ ಹಂಬಲವಿದ್ದ ಬಿಪಿನ್ ರಾವತ್ ಅವರು ಸ್ಥಳೀಯವಾಗಿ ರಕ್ಷಣಾ ಉಪಕರಣಗಳ ತಯಾರಿಕೆಯನ್ನು ಪ್ರಾರಂಭಿಸಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಆರ್‌ಡಿಓ ಹಾಗೂ ಹಲವಾರು ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುವಲ್ಲಿ ಅವರ ಪ್ರೇರಣೆಯೂ ಇದೆ. ಹೊಸ ಆವಿಷ್ಕಾರ, ಉಪಕರಣಗಳನ್ನು ತಯಾರು ಮಾಡಿ ಸೇನೆಗಳಿಗೆ ಸರಬರಾಜು ಮಾಡುವುದಷ್ಟೇ ಅಲ್ಲ, ಖಾಸಗಿ ವಲಯದಲ್ಲಿಯೂ ಉತ್ಪಾದನೆ ಮಾಡಲು ಜ್ಞಾನವನ್ನು ವರ್ಗಾಯಿಸಿ ಬಹಳ ಪ್ರೋತ್ಸಾಹ ನೀಡಿದ್ದರು ಎಂದರು. ಇದನ್ನೂ ಓದಿ: 200 ಕೋಟಿ ರೂ. ವಂಚನೆ ಪ್ರಕರಣ – ಇಡಿ ಮುಂದೆ ವಿಚಾರಣೆಗೆ ಹಾಜರಾದ ಜಾಕ್ವೆಲಿನ್

    ಯುದ್ಧಭೂಮಿಯಲ್ಲಿ ಹೊಸ ವಿಧಾನಗಳ ಅನುಷ್ಠಾನ:
    ಮೂರು ಪಡೆಯ ಮುಖ್ಯಸ್ಥರಾದ ಬಿಪಿನ್ ರಾವತ್ ಅವರ ದುರ್ಮರಣದಿಂದ ಇಡೀ ದೇಶವೇ ದಿಗ್ಭ್ರಮೆಗೆ ಒಳಗಾಗಿದೆ. ಘಟನೆ ಹೇಗಾಯ್ತು ಎನ್ನುವುದು ಮುಖ್ಯವಾಗಿರುವುದರಿಂದ ವಾಯುಪಡೆ ತನಿಖೆಯನ್ನು ಕೈಗೊಂಡಿದೆ. ರಾವತ್ ಅವರು ಸೈನ್ಯವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದರು. ಯುದ್ಧ ಭೂಮಿಯಲ್ಲಿ ಹೊಸ ವಿಧಾನಗಳನ್ನು ಕಂಡುಕೊಂಡು ಅನುಷ್ಠಾನವನ್ನೂ ಮಾಡಿದರು ಎಂದು ಹೇಳಿದರು.

    ದಿಟ್ಟ ನಿಲುವು:
    ಭಾರತದ ಸುರಕ್ಷತೆಯ ಬಗ್ಗೆ ಹಿಂದೆಂದೂ ತೆಗೆದುಕೊಂಡಿರದ ಹಲವಾರು ದಿಟ್ಟ ನಿಲುವನ್ನು ಪ್ರದರ್ಶಿಸಿದ್ದ ಅವರು ಚೀನಾ, ಭಾರತದ ಗಡಿಯಲ್ಲಿ ನಡೆದ ಚಕಮಕಿಯಲ್ಲಿ ದೇಶವನ್ನು ಬಹಳ ಗಟ್ಟಿಯಾಗಿ ನಿಲ್ಲಿಸಿ, ಚೀನಾವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಅವರ ನಾಯಕತ್ವ ಮುಂದಿನ ದಿನಗಳಲ್ಲಿ ನಮಗೆ ಬಹಳ ಅವಶ್ಯಕವಾಗಿತ್ತು ಎಂದರು. ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಬಿಪಿನ್‌ ರಾವತ್‌ ಅವ್ರು ಕುಡಿಯಲು ನೀರು ಕೇಳಿದ್ದರು- ಪ್ರತ್ಯಕ್ಷದರ್ಶಿ ಮಾತು

    ಜೀವನ ಚರಿತ್ರೆ ಪ್ರೇರಣಾದಾಯಕ:
    ಅವರ ಸೇವೆಯನ್ನು ಗುರುತಿಸಿಯೇ ನಮ್ಮ ಪ್ರಧಾನ ಮಂತ್ರಿಗಳು ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದ್ದರು. ಇಡೀ ಭಾರತ ಒಬ್ಬ ನಾಯಕನನ್ನು ಕಳೆದುಕೊಂಡಿದೆ. ನಮ್ಮೆಲ್ಲರಿಗೂ ಅವರ ಜೀವನ ಚರಿತ್ರೆ ಪ್ರೇರಣಾದಾಯಕವಾಗಿದೆ. ಅವರ ತ್ಯಾಗ ಬಲಿದಾನಗಳ ಬಗ್ಗೆ ಮಕ್ಕಳಿಗೆ ತಿಳಿಸುವಂತಾಗಬೇಕು. ಮುಂದಿನ ಪೀಳಿಗೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅವರ ಕಾರ್ಯಕ್ರಮಗಳನ್ನು ಮುಂದುವರೆಸಿ ನಿಜವಾದ ಶ್ರದ್ದಾಂಜಲಿಯನ್ನು ಸಲ್ಲಿಸಬೇಕು ಎಂದು ಹೇಳಿದರು.

    PM MODI

    ಕರ್ನಾಟಕದೊಂದಿಗೆ ಸಂಬಂಧ:
    ಕರ್ನಾಟಕದೊಂದಿಗೆ ಅವರು ಅವಿನಾಭಾವ ಸಂಬಂಧ ಹೊಂದಿದ್ದರು. ಕೊಡಗಿನೊಂದಿಗೆ ವಿಶೇಷ ಸಂಬಂಧ ಅವರಿಗಿತ್ತು. ಜನರಲ್ ಕಾರಿಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಬಗ್ಗೆ ಅಪಾರ ಗೌರವವಿತ್ತು. ಅವರ ಶೌರ್ಯವನ್ನು ಪದೇ, ಪದೇ ಹೇಳುತ್ತಿದ್ದರು. ಇಲ್ಲಿನ ಜನರು ಹಾಗೂ ಸೈನಿಕರ ಬಗ್ಗೆ ಪ್ರೀತಿಯನ್ನು ಹೊಂದಿದ್ದರು ಎಂದು ಸ್ಮರಿಸಿದರು. ಇದನ್ನೂ ಓದಿ: ಬ್ಯಾಂಕ್‍ಗಳಿಗೆ 4 ದಿನ ರಜೆ- ತುರ್ತು ವಹಿವಾಟುಗಳನ್ನು ಇಂದೇ ಮುಗಿಸಿಕೊಳ್ಳಿ

  • ದಸರೆಯಲ್ಲೂ ಆತ್ಮ ನಿರ್ಭರ ಭಾರತ – ಚೈನಾ ಬಲ್ಬ್‌ಗಳು ಬ್ಯಾನ್

    ದಸರೆಯಲ್ಲೂ ಆತ್ಮ ನಿರ್ಭರ ಭಾರತ – ಚೈನಾ ಬಲ್ಬ್‌ಗಳು ಬ್ಯಾನ್

    ಮೈಸೂರು: ಈಗ ದೇಶದೆಲ್ಲೆಡೆ ಆತ್ಮ ನಿರ್ಭರ ಭಾರತದ ಸದ್ದಿದೆ. ಈ ಬಾರಿ ದಸರೆಯಲ್ಲೂ ಆತ್ಮ ನಿರ್ಭರ ಭಾರತದ ಮಾತು ಬೆಳಕಿನ ರೂಪದಲ್ಲಿ ಪ್ರಜ್ವಲಿಸಲಿದೆ. ಅಂದರೆ ದಸರಾಗೆ ಚೈನಾ ಬಲ್ಬ್‌ಗಳನ್ನು ಬ್ಯಾನ್ ಮಾಡಲಾಗಿದೆ.

    ದಸರಾಗೆ ದಿನಗಣನೆ ಆರಂಭವಾಗಿದೆ. ಹೀಗಾಗಿ ದಸರಾ ಸಿದ್ಧತೆಯೂ ಜೋರಾಗಿದೆ. ಅರಮನೆಯ ದೀಪಾಲಂಕಾರಕ್ಕಾಗಿ ಬಲ್ಬ್‌ಗಳ ಪರಿಶೀಲನೆ ಹಾಗೂ ಕೆಟ್ಟು ಹೋದ ಬಲ್ಬ್‌ಗಳನ್ನು ಬದಲಾಯಿಸುವ ಕೆಲಸ ಆರಂಭವಾಗಿದೆ. ಈ ಬಾರಿ ಮೈಸೂರು ದಸರಾ ದೀಪಾಲಂಕಾರದ ವಿಶೇಷತೆಯೆಂದರೆ ಆತ್ಮ ನಿರ್ಭರ ಭಾರತಕ್ಕೆ ಒತ್ತು ಕೊಡಲಾಗಿದೆ.

    ಈ ಬಾರಿಯ ದಸರೆಯ ದೀಪಾಲಂಕಾರದಲ್ಲಿ ಚೈನಾದ ಬಲ್ಬ್‌ಗಳನ್ನು ಬಳಸದಿರಲು ನಿರ್ಧರಿಸಲಾಗಿದೆ. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ಈಗಾಗಲೇ ಚೈನಾ ಆ್ಯಪ್‍ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಇದೀಗ ಮೈಸೂರು ದಸರೆಯಲ್ಲಿ ಚೈನಾ ಬಲ್ಬ್‌ಗಳನ್ನು ಬ್ಯಾನ್ ಮಾಡಲಾಗುತ್ತಿದೆ.

    ಮೈಸೂರು ದಸರಾ ವೇಳೆ 60 ರಿಂದ 75 ಕಿಲೋಮೀಟರ್ ಉದ್ದದ ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗುತ್ತದೆ. 150ಕ್ಕೂ ಹೆಚ್ಚು ವೃತ್ತಗಳು ಜಗಮಗಿಸುತ್ತಿರುತ್ತದೆ. ಇದಕ್ಕಾಗಿ ಮುಂಬೈ, ದೆಹಲಿ ಮತ್ತು ಕೊಲ್ಕತ್ತಾದಿಂದ ಬಲ್ಬ್‌ಗಳು ಹಾಗೂ ವಿವಿಧ ಬಿಡಿಭಾಗಗಳನ್ನು ತರಿಸಿಕೊಳ್ಳಲಾಗುತ್ತದೆ. ಈ ಬಾರಿ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಚೀನಾದ ಯಾವುದೇ ವಸ್ತುಗಳನ್ನು ದಸರಾ ದೀಪಾಲಂಕಾರದಲ್ಲಿ ಬಳಸದಿರಲು ನಿರ್ಧರಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ ತಿಳಿಸಿದ್ದಾರೆ.

    ದೀಪಾಲಂಕಾರದಲ್ಲಿ ಚೈನಾ ಬಲ್ಬ್‌ಗಳು ಬ್ಯಾನ್ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕೇವಲ ದೀಪಾಲಂಕಾರದಲ್ಲಿ ಮಾತ್ರವಲ್ಲ ಸಾಧ್ಯವಾದಷ್ಟು ಎಲ್ಲಾ ಕಡೆಯೂ ಚೈನಾ ವಸ್ತಗಳ ಬ್ಯಾನ್‍ಗೆ ಜಿಲ್ಲಾಡಳಿತ ಮುಂದಾಗಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

  • ‘ಆತ್ಮನಿರ್ಭರ’ ಪ್ಯಾಕೇಜ್‍ಗೆ ಕೇಂದ್ರ ಸಂಪುಟ ಸಮ್ಮತಿ

    ‘ಆತ್ಮನಿರ್ಭರ’ ಪ್ಯಾಕೇಜ್‍ಗೆ ಕೇಂದ್ರ ಸಂಪುಟ ಸಮ್ಮತಿ

    ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದ 20 ಲಕ್ಷ ಕೋಟಿ ರೂಪಾಯಿ ಮೊತ್ತದ ವಿಶೇಷ ಪ್ಯಾಕೇಜ್‍ಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇವತ್ತು ಅನುಮೋದನೆ ನೀಡಿದೆ.

    ಪ್ರಧಾನಿ ನಿವಾಸದಲ್ಲಿ ನಡೆದ ಸಂಪುಟ ಸಭೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ರೈತರು, ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗೋ ಪ್ಯಾಕೇಜ್‍ಗೆ ಒಪ್ಪಿಗೆ ನೀಡಲಾಯಿತು. ರೈತರು ಉತ್ಪನ್ನಗಳನ್ನು ಅವರ ಇಚ್ಛಿತ ಸ್ಥಳಗಳಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡುವ ಎಂಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮಧ್ಯೆ, ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 11 ರೂಪಾಯಿ ಹೆಚ್ಚಾಗಿದೆ.

    ಯಾವುದಕ್ಕೆ ಸಮ್ಮತಿ:
    – ಸಣ್ಣ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ
    – ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಂಕಷ್ಟ ನಿಧಿಗೆ 40 ಸಾವಿರ ಕೋಟಿ ರೂ.
    – ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಷೇರು ಮಾರುಕಟ್ಟೆ ಪ್ರವೇಶಿಸುವ ಸಲುವಾಗಿ 50 ಸಾವಿರ ಕೋಟಿ ರೂ.
    – ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂಪಾಯಿ ಸಾಲ
    – ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಸ್ಥಾಪನೆ
    – 3 ಲಕ್ಷ ರೂಪಾಯಿವರೆಗಿನ ಬೆಳೆ ಸಾಲದ ಮೇಲಿನ ಬಡ್ಡಿ ವಿನಾಯ್ತಿ ಅವಧಿ ಆಗಸ್ಟ್ 31ರವರೆಗೆ ವಿಸ್ತರಣೆ
    – 14 ಮುಂಗಾರು ಬೆಳೆಗಳ ಮೇಲಿನ ಬೆಂಬಲ ಬೆಲೆ ಶೇಕಡಾ 50-80ರ ನಡುವೆ ಹೆಚ್ಚಳ
    – ರೈತರು ತಾವು ಬಯಸಿದ ಸ್ಥಳಗಳಲ್ಲಿ ಉತ್ಪನ್ನ ಮಾರಲು ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ

  • 20.97 ಲಕ್ಷ ಕೋಟಿ ರೂ. ಪ್ಯಾಕೇಜ್ ಲೆಕ್ಕ ಕೊಟ್ಟ ಸೀತಾರಾಮನ್

    20.97 ಲಕ್ಷ ಕೋಟಿ ರೂ. ಪ್ಯಾಕೇಜ್ ಲೆಕ್ಕ ಕೊಟ್ಟ ಸೀತಾರಾಮನ್

    – 1 ವರ್ಷದವರೆಗೆ ಕಂಪನಿಗಳ ದಿವಾಳಿ ಕ್ರಮ ಇಲ್ಲ

    ನವದೆಹಲಿ: ಕೊರೊನಾ ಪರಿಹಾರ ಪ್ಯಾಕೇಜ್‍ನ ಐದನೇ ಮತ್ತು ಕೊನೆಯ ಹಂತದ ಘೋಷಣೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ವಿವರಿಸಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್‍ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಹಣ ನೀಡಲಾಗಿದೆ ಎಂದು ವಿವರಿಸಿದ್ದಾರೆ.

    ನಿರ್ಮಲಾ ಸೀತಾರಾಮನ್ ಅವರು ಇಂದು ನರೇಗಾ, ಆರೋಗ್ಯ, ಶಿಕ್ಷಣ, ವ್ಯವಹಾರ, ಕಂಪನಿಗಳ ಕಾಯ್ದೆಗಳಿಗೆ ಸಂಬಂಧಿಸಿದ ಕೆಲವು ಮಾಹಿತಿ ಪ್ರಕಟಿಸಿದರು. ನರೇಗಾ ಯೋಜನೆಗೆ ಹೆಚ್ಚುವರಿಯಾಗಿ 40 ಸಾವಿರ ಕೋಟಿ ರೂ. ನೀಡಲಾಗಿದೆ. ಒಂದು ವರ್ಷದವರೆಗೆ ಕಂಪನಿಗಳ ಮೇಲೆ ಯಾವುದೇ ದಿವಾಳಿತ ಕ್ರಮ ಇರುವುದಿಲ್ಲ. ಅಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ಖಾಸಗಿ ಕಂಪನಿಗಳನ್ನು ತೆರೆಯಲಾಗುವುದು. ಕೊರೊನಾ ವೈರಸ್ ಬಳಿಕ ಕೇಂದ್ರ ಸರ್ಕಾರ ಒಟ್ಟು 20,97,530 ಕೋಟಿ ರೂ. ಪ್ಯಾಕೇಜ್ ಘೋಷಿಸಿವೆ ಎಂದು ಹಣಕಾಸು ಸಚಿವರು ಮಾಹಿತಿ ನೀಡಿದ್ದಾರೆ.

    ಕೊರೊನಾ ವೈರಸ್ ಉಂಟು ಮಾಡಿದ ಸಂಕಷ್ಟದಿಂದಾಗಿ ರಾಜ್ಯಗಳು ಮತ್ತು ಕೇಂದ್ರದ ಆದಾಯ ಕಡಿಮೆಯಾಗುತ್ತಿದೆ. ಇದರ ಹೊರತಾಗಿಯೂ ರಾಜ್ಯಗಳಿಗೆ ನಿರಂತರವಾಗಿ ಸಹಾಯ ಮಾಡುತ್ತಿದ್ದೇವೆ. ಸಾಲ ಮಿತಿಯನ್ನು ಶೇ.3ರಿಂದ ಶೇ.5ಕ್ಕೆ ಏರಿಸಲಾಗಿದೆ. ಇದರಿಂದ ರಾಜ್ಯಗಳಿಗೆ ಹೆಚ್ಚುವರಿ 4.28 ಲಕ್ಷ ಕೋಟಿ ರೂ. ದೊರೆಯುತ್ತದೆ ಎಂದು ಸೀತಾರಾಮಾನ್ ತಿಳಿಸಿದ್ದಾರೆ.

    ಪ್ರಧಾನಿ ಮೋದಿ ಅವರ ಭಾಷಣಕ್ಕೂ ಮುನ್ನ 1,92,800 ಕೋಟಿ ರೂ. ಪ್ಯಾಕೇಜ್ ಘೋಷಿಸಲಾಗಿತ್ತು. ಆ ಬಳಿಕ ವಿತ್ತ ಸಚಿವೆ ಸೀತಾರಾಮನ್ ಅವರು ಮೊದಲ ಸುದ್ದಿಗೋಷ್ಠಿಯಲ್ಲಿ 5,94,550 ಕೋಟಿ ರೂ, ಎರಡನೇ ಸುದ್ದಿಗೋಷ್ಠಿ 3.10 ಲಕ್ಷ ಕೋಟಿ ರೂ. ಘೋಷಿಸಿದ್ದರು. ಆ ಬಳಿಕ ಮೂರನೇ ಸುದ್ದಿಗೋಷ್ಠಿಯಲ್ಲಿ 1.50 ಲಕ್ಷ ಕೋಟಿ ರೂ., ನಾಲ್ಕನೇ ಸುದ್ದಿಗೋಷ್ಠಿಯಲ್ಲಿ 8,100 ಕೋಟಿ ರೂ, ಹಾಗೂ ಇಂದು ಐದನೇ ಸುದ್ದಿಗೋಷ್ಠಿಯಲ್ಲಿ 40 ಸಾವಿರ ಕೋಟಿ ರೂ. ಘೋಷಿಸಿದರು. ಜೊತೆಗೆ ಆರ್‌ಬಿಐ 8,01,603 ಕೋಟಿ ರೂ. ಪ್ಯಾಕೇಜ್ ನೀಡಿತ್ತು. ಈ ಎಲ್ಲ ಮೊತ್ತವು 20,97,053 ಕೋಟಿ ರೂ. ಆಗಿದೆ ಎಂದು ಹೇಳಿದರು.