Tag: Atmananda Saraswati Swamiji

  • ಸ್ವಾಮೀಜಿ ಮೋಡಿಗೆ 15ರ ಬಾಲೆ ಮರುಳು – ಖಾವಿಧಾರಿ ವಿರುದ್ಧ ಕಿಡ್ನ್ಯಾಪ್ ಕೇಸ್

    ಸ್ವಾಮೀಜಿ ಮೋಡಿಗೆ 15ರ ಬಾಲೆ ಮರುಳು – ಖಾವಿಧಾರಿ ವಿರುದ್ಧ ಕಿಡ್ನ್ಯಾಪ್ ಕೇಸ್

    ಬೆಂಗಳೂರು: ಸ್ವಾಮೀಜಿಯ ಮೋಡಿಗೆ ಮರುಳಾದ 15 ವರ್ಷದ ಬಾಲಕಿ ಮನೆಯವರನ್ನು ನಿರಾಕರಿಸಿ ಸ್ವಾಮೀಜಿ ಬಳಿ ಹೋಗಿದ್ದಾಳೆ ಎಂದು ಪೋಷಕರು ದೂರು ದಾಖಲಿಸಿದ್ದಾರೆ.

    ಆತ್ಮಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಪೋಷಕರು ದೂರು ನೀಡಿದ್ದು, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಭಾರತದ ನೆರವು – ಇರಾನ್ ಸಹಾಯ

    ದೂರಿನಲ್ಲಿ ಏನಿದೆ?
    ಜನವರಿ 1ರಂದು ಬಾಲಕಿ ಬೆಳಗ್ಗೆ 5:30ರ ಸುಮಾರಿಗೆ ತನ್ನ ತಾಯಿಯೊಂದಿಗೆ ಜಗಳ ಮಾಡಿದ್ದಾಳೆ. ತನ್ನ ತಾಯಿ ಹಾಗೂ ಮಾವ ಅವರನ್ನು ಕೂಡಿ ಹಾಕಿದ ಆಕೆ ಮನೆಯ ಚೀಲಕವನ್ನು ಹೊರಗಿನಿಂದ ಲಾಕ್ ಮಾಡಿಕೊಂಡು ಟಿವಿಎಸ್ ಸ್ಕೂಟರ್ ತೆಗೆದುಕೊಂಡು ಎಲ್ಲೋ ಹೋಗಿದ್ದಳು. ಮಗಳು ಓದುತ್ತಿದ್ದ ಶಾಲೆ ಹಾಗೂ ತಿಳಿದಿರುವ ಕಡೆಯೆಲ್ಲಾ ಹುಡುಕಾಡಿ ನೋಡಿದಾಗ ಉತ್ತರಹಳ್ಳಿಯ ಸ್ವಾಮೀಜಿ ಮನೆಯ ಎದುರು ದ್ವಿಚಕ್ರವಾಹನ ನಿಂತಿತ್ತು.

    Atmananda Saraswati Swamiji

    ಈ ಹಿಂದೆ ನನ್ನ ಮಗಳಿಗೆ ದೀಕ್ಷೆ ಕೊಡುವುದಾಗಿ ಹೇಳುತ್ತಿದ್ದ ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಮೇಲೆ ಅನುಮಾನವಿದ್ದು, ಕಾಣೆಯಾಗಿರುವ ನಮ್ಮ ಮಗಳನ್ನು ಹುಡುಕಿಕೊಡುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಯಾವುದೇ ಆರೋಪವಿಲ್ಲದಿದ್ರೂ 3 ವರ್ಷ ಜೈಲುವಾಸ ಅನುಭವಿಸಿದ ಸೌದಿ ರಾಜಕುಮಾರಿ!

    ಸ್ವಾಮೀಜಿ ಗೃಹ ಸಚಿವರಿಂದ ಪೊಲೀಸ್ ಇಲಾಖೆಗೆ ಕ್ರಮ ಕೊಳ್ಳದಂತೆ ಹೇಳಿಸಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೆಲವು ಸ್ವಾಮೀಜಿಗಳ ಜೊತೆ ಸಭೆ ನಡೆಸಿದ್ದರು. ಈ ವೇಳೆ ಆತ್ಮಾನಂದ ಸರಸ್ವತಿ ಸ್ವಾಮೀಜಿ ಭಾಗಿಯಾಗಿದ್ದರು.

    Atmananda Saraswati Swamiji

    ಈ ಮೊದಲು ಸ್ವಾಮೀಜಿ ಬಳಿ ಹೋಗಿದ್ದ ಬಾಲಕಿಯನ್ನು ತಾಯಿ ಮನೆಗೆ ಬಾ ಎಂದರೂ ಬಾರದೇ ಇದ್ದಿದ್ದರಿಂದ ಈ ಪ್ರಕರಣ ನ್ಯಾಯಾಲಯಕ್ಕೆ ಹೋಗಿತ್ತು. ಈ ವೇಳೆ ಪೊಲೀಸರು ಬಾಲಕಿಯನ್ನು ಚೈಲ್ಡ್ ವೆಲ್ಫೇರ್‍ಗೆ ಒಪ್ಪಿಸಿದ್ದರು. ಆದರೆ ನಂತರ ಪೋಷಕರ ಮಡಿಲಿಗೆ ಸೇರಿದ್ದ ಮಗಳು ಇದೀಗ ಮನೆಯವರನ್ನು ಯಾಮಾರಿಸಿ ಸ್ವಾಮೀಜಿಯ ಮನೆಗೆ ಹೋಗಿದ್ದಾಳೆ ಎಂದು ತಿಳಿಸಿದ್ದಾರೆ.