Tag: Atma Nirbhar Bharat

  • ರಾಷ್ಟ್ರೀಯ ಭದ್ರತಾ ಸಮೂಹಕ್ಕೆ `ಡ್ರೋನ್ ಸಮೂಹ’ ಸೇರ್ಪಡೆ – ಏನಿದರ ವಿಶೇಷತೆ?

    ರಾಷ್ಟ್ರೀಯ ಭದ್ರತಾ ಸಮೂಹಕ್ಕೆ `ಡ್ರೋನ್ ಸಮೂಹ’ ಸೇರ್ಪಡೆ – ಏನಿದರ ವಿಶೇಷತೆ?

    ನವದೆಹಲಿ: ಕೃತಕ ಬುದ್ಧಿಮತ್ತೆ (AI) ತಂತ್ರಾಂಶವೂ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದ `ಡ್ರೋನ್‌ಗಳ ಸಮೂಹ’ ವನ್ನು ಸಶಸ್ತ್ರ ಪಡೆಗಳಿಗೆ ಸೇರಿಸಲಾಗುತ್ತಿದೆ.

    ನಿರ್ದಿಷ್ಟ ಗುರಿಯನ್ನು ನಿಖರವಾಗಿ ಗುರುತಿಸಿ, ಧ್ವಂಸ ಮಾಡಲು ಈ ಡ್ರೋನ್‌ಗಳಲ್ಲಿನ ಕೃತಕ ಬುದ್ಧಿಮತ್ತೆ ತಂತ್ರಾಂಶ ನೆರವಾಗಲಿದೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ನಿಶ್ಚಿತಾರ್ಥ ವರನಿಗೆ ಯುವತಿಯ ಅಶ್ಲೀಲ ಫೋಟೋ ಕಳುಹಿಸಿದ ನೆರೆಮನೆಯವ – ವಧು ಆತ್ಮಹತ್ಯೆ

    ಹೆಸರೇ ಹೇಳುವಂತೆ `ಡ್ರೋನ್‌ಗಳ ಸಮೂಹ’ವು ನಿರ್ದಿಷ್ಟ ಸಂಖ್ಯೆಯ ಡ್ರೋನ್‌ಗಳನ್ನು ಒಳಗೊಂಡಿರುತ್ತದೆ. ಈ `ಡ್ರೋನ್ ಸಮೂಹ’ವನ್ನು ಒಂದೇ ಕೇಂದ್ರದಿಂದ ನಿಯಂತ್ರಿಸಲಾಗುತ್ತದೆ. ಯಾವುದೇ ಕಾರ್ಯಾಚರಣೆ ಕೈಗೊಂಡ ಸಂದರ್ಭದಲ್ಲಿ ವಿವಿಧ ಕಾರಣಗಳಿಂದಾಗಿ ಕೆಲವು ಡ್ರೋನ್‌ಗಳು ಕಾರ್ಯ ನಿಲ್ಲಿಸಿದರೂ, `ಸಮೂಹ’ವು ತನ್ನ ಕಾರ್ಯವನ್ನು ಪೂರ್ಣಗೊಳಿಸಿ ಹಿಂದಿರುಗುತ್ತದೆ’ ಎಂದು ಸೇನೆಯ ಸಾರ್ವಜನಿಕ ಮಾಹಿತಿ ವಿಭಾಗದ ಹೆಚ್ಚುವರಿ ಮಹಾನಿರ್ದೇಶನಾಲಯ ಇಂದು ಟ್ವೀಟ್ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಆರ್ಮಿ ಆತ್ಮ ನಿರ್ಭರ ಭಾರತ್ – ಕೇಂದ್ರ ರಕ್ಷಣಾ ಇಲಾಖೆಯಿಂದ ಮಹತ್ವದ ಘೋಷಣೆ

    ಆರ್ಮಿ ಆತ್ಮ ನಿರ್ಭರ ಭಾರತ್ – ಕೇಂದ್ರ ರಕ್ಷಣಾ ಇಲಾಖೆಯಿಂದ ಮಹತ್ವದ ಘೋಷಣೆ

    ನವದೆಹಲಿ: ರಕ್ಷಣಾ ಇಲಾಖೆಗೆ ಅವಶ್ಯವಿರುವ 101 ವಿವಿಧ ಉಪಕರಣಗಳನ್ನು ಭಾರತದಲ್ಲೇ ಉತ್ಪಾದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇಲಾಖೆಯಲ್ಲಿ ಸ್ವಾವಲಂಬಿ ಸಾಧಿಸುವ ನಿಟ್ಟಿನಲ್ಲಿ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

    ಇಂದು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಇಲಾಖೆಯ 101 ಉಪಕರಣಗಳನ್ನು ಉತ್ಪಾದಿಸಲು ದೇಶಿಯ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಹಲವು ಹಂತದ ಮಾತುಕತೆ ಮುಗಿದಿದ್ದು, ಸುಮಾರು 1 ಲಕ್ಷ 40 ಸಾವಿರ ಕೋಟಿಯ ಉತ್ಪಾದನೆ ಇದಾಗಿದೆ ಎಂದು ಹೇಳಿದ್ದಾರೆ.

    ಮದ್ದು, ಗುಂಡು, ಫಿರಂಗಿ, ಆರ್ಟಿಲರಿ ಗನ್, ರೆಡಾರ್, ಲಘು ಯುದ್ದ ವಿಮಾನ, ಹೆಲಿಕಾಪ್ಟರ್, ಸೋನಾರ್ ಸಿಸ್ಟಮ್, ಶಸ್ತ್ರಸಜ್ಜಿತ ವಾಹನ ಸೇರಿದಂತೆ 101 ವಿವಿಧ ಉಪಕರಣಗಳನ್ನು ದೇಶದಲ್ಲೇ ತಯಾರಿಸಲು ನಿರ್ಧರಿಸಿದೆ. ಇದರಿಂದ ಆತ್ಮನಿರ್ಭರ ಭಾರತಕ್ಕೆ ಉತ್ತೇಜನ ಸಿಗಲಿದೆ ಎಂದು ರಾಜನಾಥ್ ಸಿಂಗ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

    2020 ರಿಂದ 2024ರ ನಡುವೆ ಈ ಮಹತ್ವದ ಕಾರ್ಯ ನಡೆಯಲಿದೆ. ಸಂಪೂರ್ಣವಾಗಿ ರಕ್ಷಣಾ ಸಾಮಗ್ರಿ ದೇಶದಲ್ಲೇ ಉತ್ಪಾದನೆ ಆಗಲಿದೆ. ಇದಕ್ಕಾಗಿ ಪ್ರತ್ಯೇಕ ಬಜೆಟ್ ಮುಖ್ಯಸ್ಥರ ನೇಮಕ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆ, ಜನಸಂಖ್ಯೆ ಮತ್ತು ಬೇಡಿಕೆ ಎಂಬ 5 ಆಧಾರ ಸ್ತಂಭಗಳ ಮೇಲೆ ಸ್ವಾವಲಂಬಿ ಭಾರತಕ್ಕಾಗಿ ಸ್ಪಷ್ಟ ಕರೆ ನೀಡಿದ್ದಾರೆ. ಹೀಗಾಗಿ ಸ್ವಾವಲಂಬಿ ಭಾರತಕ್ಕಾಗಿ `ಆರ್ಮಿ ಆತ್ಮ ನಿರ್ಭರ ಭಾರತ್’ ಹೆಸರಿನ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ರಕ್ಷಣಾ ಇಲಾಖೆ ಘೋಷಿಸಿದೆ ಎಂದು ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಸಶಸ್ತ್ರ ಪಡೆಗಳ ಅವಶ್ಯಕತೆಗಳನ್ನು ಪೂರೈಸಲು ಡಿಆರ್‌ಡಿಒ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನಕಾರಾತ್ಮಕ ಪಟ್ಟಿಯಲ್ಲಿರುವ ವಸ್ತುಗಳನ್ನು ತಯಾರಿಸಲು ಇಂಡಸ್ಟ್ರಿಗಳಿಗೆ ಉತ್ತಮ ಅವಕಾಶವನ್ನು ನೀಡುತ್ತದೆ. ಸೇನಾ ಪಡೆಗಳು, ಸಾರ್ವಜನಿಕ ಮತ್ತು ಖಾಸಗಿಯ ಎಲ್ಲ ಷೇರುದಾರರ ಜತೆ ಹಲವು ಸುತ್ತಿನ ಸಮಾಲೋಚನೆ ನಡೆಸಿದ ಬಳಿಕ ರಕ್ಷಣಾ ಇಲಾಖೆ ಸಾಮಗ್ರಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಮುಂದಿನ ದಿನಗಳಲ್ಲಿ 6 ರಿಂದ 7 ವರ್ಷ ದೇಶೀಯ ಉದ್ಯಮದ ಮೇಲೆ ಸುಮಾರು 4 ಲಕ್ಷ ಕೋಟಿ ರೂ.ಗಳ ಒಪ್ಪಂದಗಳನ್ನು ಮಾಡಲಾಗುವುದು ಎಂದು ಅಂದಾಜಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

  • ಕೋವಿಡ್-19 ಬಿಕ್ಕಟ್ಟು ಸ್ವಾವಲಂಬಿ ಭಾರತಕ್ಕೆ ಸಿಕ್ಕಿದ ಅವಕಾಶ: ಪ್ರಧಾನಿ ಮೋದಿ

    ಕೋವಿಡ್-19 ಬಿಕ್ಕಟ್ಟು ಸ್ವಾವಲಂಬಿ ಭಾರತಕ್ಕೆ ಸಿಕ್ಕಿದ ಅವಕಾಶ: ಪ್ರಧಾನಿ ಮೋದಿ

    ನವದೆಹಲಿ: ವರಮಾನ ಹಂಚಿಕೆ ಆಧಾರದಲ್ಲಿ ಕಲ್ಲಿದ್ದಲು ವಲಯದಲ್ಲಿರುವ ಸರ್ಕಾರದ ಏಕಸ್ವಾಮ್ಯ ವ್ಯವಸ್ಥೆ ರದ್ದುಗೊಳಿಸಿ ಖಾಸಗಿ ಸಂಸ್ಥೆಗಳಿಗೆ ವಾಣಿಜ್ಯ ಗಣಿಗಾರಿಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿದ್ದು, ಈ ಯೋಜನೆಗೆ ಪ್ರಧಾನಿ ಮೋದಿ ಅವರು ಇಂದು ಚಾಲನೆ ನೀಡಿದರು.

    ದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ವ್ಯವಸ್ಥೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹಾಜರಿದ್ದರು. ಕೋವಿಡ್-19 ಹಿನ್ನೆಲೆಯಲ್ಲಿ ‘ಆತ್ಮ ನಿರ್ಭರ್ ಭಾರತ್’ ಯೋಜನೆ ಅಡಿ ಕೇಂದ್ರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಇದರ ಭಾಗವಾಗಿ ಕಲ್ಲಿದ್ದಲು ಕ್ಷೇತ್ರದಲ್ಲಿ ವಾಣಿಜ್ಯ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.

    ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕೊರೊನಾ ವೈರಸ್ ಸಂದರ್ಭದ ಸಂದಿಗ್ಧ ಪರಿಸ್ಥಿತಿಯನ್ನು ಭಾರತ ವಿದೇಶಿ ವಸ್ತುಗಳ ಅಮದು ನಿಲ್ಲಿಸಿ, ಸ್ವಾವಲಂಬಿಯಾಗುವ ಅವಕಾಶವನ್ನಾಗಿ ಬಳಕೆ ಮಾಡಿಕೊಳ್ಳಲಿದೆ. ಕೊರೊನಾ ಬಿಕ್ಕಟ್ಟು ನಮಗೆ ಸ್ವಾವಲಂಬಿ ಪಾಠವನ್ನು ಕಲಿಸಿದ್ದು, ಆಮದು ವಸ್ತುಗಳ ಮೇಲಿನ ಅವಲಂಬನೆಯನ್ನು ಭಾರತ ಕಡಿಮೆ ಮಾಡಲಿದೆ. ಭಾರತ ವಿಶ್ವದಲ್ಲಿ 4ನೇ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ವಿಶ್ವದ 2ನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದ್ದರೂ ಕಲ್ಲಿದ್ದಲನ್ನು ರಫ್ತು ಮಾಡುತ್ತಿಲ್ಲ ಎಂದರು.

    ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಈಗ ಮುಕ್ತವಾಗಿದ್ದು, ಇದು ಎಲ್ಲಾ ಕ್ಷೇತ್ರಗಳಿಗೂ ಸಹಾಯ ಮಾಡುತ್ತದೆ. ಭಾರತ ಶಕ್ತಿಯಲ್ಲಿ ಸ್ವಾವಲಂಬಿಯಾಗಲು ಇಂದು ಬಹುದೊಡ್ಡ ಹೆಜ್ಜೆ ಇಟ್ಟಿದೆ. ಕೋವಿಡ್-19 ಬಿಕ್ಕಟ್ಟನ್ನು ಒಂದು ಅವಕಾಶವನ್ನಾಗಿ ಪರಿವರ್ತಿಸಿ ಆಮದಿನ ಮೇಲಿನ ಅವಲಂಬನೆಯನ್ನು ಇದು ಕಡಿಮೆ ಮಾಡಲಿದೆ. ಹರಾಜು ಪ್ರಕ್ರಿಯೆಯಿಂದ ರಾಜ್ಯಗಳಿಗೆ ಹೆಚ್ಚಿನ ಆದಾಯ ನೀಡುತ್ತದೆ. ಉದ್ಯೋಗ ಅವಕಾಶವನ್ನು ಸೃಷ್ಟಿಸುವುದರೊಂದಿಗೆ ದೂರದ ಪ್ರದೇಶಗಳ ಅಭಿವೃದ್ಧಿಗೂ ಸಹಕಾರಿ ಆಗಲಿದೆ ಎಂದು ತಿಳಿಸಿದರು.

    ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಖಾಸಗಿ ವಲಯ ಆರಂಭ ಹಾಗೂ ಹೂಡಿಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ 41 ಕಲ್ಲಿದ್ದಲು ಗಣಿಗಳನ್ನು ಇ-ಹರಾಜು ಹಾಕಲಿದೆ. ಅಂದಾಜಿನ ಪ್ರಕಾರ 41 ಕಲ್ಲಿದ್ದಲು ಗಣಿಗಳ ಹರಾಜಿನ ಮೂಲಕ ಮುಂದಿನ 5-7 ವರ್ಷಗಳಲ್ಲಿ ದೇಶದಲ್ಲಿ 33 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ. ಈ ಪ್ರಕ್ರಿಯೆಯಿಂದ ರಾಜ್ಯ ಸರ್ಕಾರಗಳಿಗೆ ವಾರ್ಷಿಕ 20 ಸಾವಿರ ಕೋಟಿ ರೂ. ಆದಾಯ ಲಭಿಸಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.