Tag: atm

  • ಪ್ರೇಯಸಿ ಅತ್ತೆ ಮಗಳಿಗಾಗಿ 65 ಲಕ್ಷ ಕಳ್ಳತನ- ಎರಡು ಮಕ್ಕಳ ತಂದೆ ಪರಾರಿ

    ಪ್ರೇಯಸಿ ಅತ್ತೆ ಮಗಳಿಗಾಗಿ 65 ಲಕ್ಷ ಕಳ್ಳತನ- ಎರಡು ಮಕ್ಕಳ ತಂದೆ ಪರಾರಿ

    ಬೆಂಗಳೂರು: ಸುಬ್ರಮಣ್ಯ ನಗರದಲ್ಲಿ ಎಟಿಎಂಗೆ ಹಣ ತುಂಬುವ ವಾಹನದ ಚಾಲಕ ಹಣವಿರುವ ಬ್ಯಾಗ್‍ಗಳನ್ನು ಹೊತ್ತು ಎಸ್ಕೇಪ್ ಆಗಿರುವ ಪ್ರಕರಣಕ್ಕೆ ಇದೀಗ ಟಿಸ್ಟ್ ಸಿಕ್ಕಿದೆ.

    ಆರೋಪಿಯನ್ನು ಯೋಗೇಶ್ ಎಂದು ಗುರುತಿಸಲಾಗಿದ್ದು, ಈತ ಸೆಕ್ಯೂರ್ ವಾಲಿಯ ಚಾಲಕನಾಗಿದ್ದ. ಎಟಿಎಂ ಹಣ ಕದ್ದು ಮದುವೆಯಾಗಿ ಪತಿ ಬಿಟ್ಟಿದ್ದ ಅತ್ತೆ ಮಗಳ ಜೊತೆ ಪರಾರಿಯಾಗಿದ್ದಾನೆ.

    ಯೊಗೇಶ್‍ಗೆ ಕೂಡ ಈಗಾಗಲೇ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಆದರೂ ಯೋಗೇಶ್ ಅತ್ತೆ ಮಗಳನ್ನ ಪ್ರೀತಿಸುತ್ತಿದ್ದ. ಪ್ರೇಯಸಿ ಜೊತೆ ಬದುಕು ನಡೆಸಲು 65 ಲಕ್ಷ ಹಣ ದೋಚಿ ಆಟೋದಲ್ಲಿ ಪರಾರಿಯಾಗಿದ್ದ. ನಂತರ ಪ್ರೇಯಸಿ ಅತ್ತೆ ಮಗಳನ್ನ ಪಿಕಪ್ ಮಾಡಿ ಎಸ್ಕೇಪ್ ಆಗಿದ್ದ.

    ಯೋಗೇಶ್ ಮತ್ತು ಆತನ ಪ್ರೇಯಸಿಯ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಿದಾಗ ಯೊಗೇಶ್ ಅತ್ತೆ ಮಗಳೂ ಕೂಡ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಉತ್ತರ ಭಾರತದ ಕಡೆ ಪರಾರಿಯಾಗಿರವ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದು, ವಿಶೇಷ ತಂಡ ರಚಿಸಿ ಸುಬ್ರಹ್ಮಣ್ಯ ನಗರ ಪೊಲೀಸರು ಯೊಗೇಶ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಏನಿದು ಘಟನೆ..?
    ಆರು ದಿನಗಳ ಹಿಂದೆ ನವರಂಗ್ ಬಳಿಯ ಅಕ್ಸಿಸ್ ಬ್ಯಾಂಕ್ ಬಳಿ ಅಧಿಕಾರಿಗಳು ಎಟಿಎಂಗೆ ಹಣ ತುಂಬಲು ಹೋಗಿದ್ದರು. ಇದೇ ಸಮಯದಲ್ಲಿ ವಾಹನದ ಚಾಲಕನಾಗಿದ್ದ ಯೋಗೇಶ್ ಹಣದೊಂದಿಗೆ ಪರಾರಿಯಾಗಿದ್ದನು. ಗನ್ ಮ್ಯಾನ್ ಮತ್ತು ಮ್ಯಾನೇಜರ್ ಎಟಿಎಂಗೆ ದುಡ್ಡು ಹಾಕಲು ಒಳಗೆ ಹೋಗಿದ್ದರು. ಈ ವೇಳೆ ಯೋಗೇಶ್ ವಾಹನದಲ್ಲಿದ್ದ 65 ಲಕ್ಷ ಹಣ ತೆಗೆದುಕೊಂಡು ಎಸ್ಕೇಪ್ ಆಗಿದ್ದನು. ಅದಿಕಾರಿಗಳು ವಾಪಸ್ ಬಂದು ನೋಡುವಷ್ಟರಲ್ಲಿ ಬ್ಯಾಗ್‍ಗಳಲ್ಲಿದ್ದ ಹಣದ ಸಮೇತ ಪರಾರಿಯಗಿರುವುದು ತಿಳಿದು ಬಂದಿತ್ತು. ಎಟಿಎಂ ವಾಹನವನ್ನು ಸ್ಥಳದಲ್ಲೇ ಬಿಟ್ಟು ಹಣವಿರುವ ಬ್ಯಾಗ್‍ಗಳೊಂದಿಗೆ ಪರಾರಿಯಾಗಿದ್ದನು.

  • ಎಟಿಎಂ ಹಣದೊಂದಿಗೆ ಪರಾರಿಯಾದ ಡ್ರೈವರ್

    ಎಟಿಎಂ ಹಣದೊಂದಿಗೆ ಪರಾರಿಯಾದ ಡ್ರೈವರ್

    ಬೆಂಗಳೂರು: ಎಟಿಎಂಗೆ ಹಣ ತುಂಬುವ ವಾಹನದ ಚಾಲಕ ಹಣವಿರುವ ಬ್ಯಾಗ್‍ಗಳನ್ನು ಹೊತ್ತು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಸುಬ್ರಮಣ್ಯ ನಗರದಲ್ಲಿ ನಡೆದಿದೆ.

    ಎಟಿಎಂಗೆ ಹಣ ತುಂಬುವ ವಾಹನದ ಚಾಲಕ ಹಣ ಖದ್ದು ಎಸ್ಕೇಪ್ ಆಗಿದ್ದಾನೆ. ಆಕ್ಸಿಸ್ ಬ್ಯಾಂಕ್‍ಗೆ ಸೇರಿದ್ದ ಸುಮಾರು 50 ಲಕ್ಷ ಹಣವಿದ್ದ ವಾಹನವಾಗಿತ್ತು. ಅಧಿಕಾರಿಗಳು ಎಟಿಎಂಗೆ ಹಣ ತುಂಬಲು ಹೋಗಿರುವ ಸಮಯ ನೋಡಿಕೊಂಡು ಚಾಲಕ ಹಣದೊಂದಿಗೆ ಪರಾರಿಯಾಗಿದ್ದಾನೆ.

    ಗನ್ ಮ್ಯಾನ್ ಮತ್ತು ಮ್ಯಾನೇಜರ್ ಎಟಿಎಂಗೆ ದುಡ್ಡು ಹಾಕಲು ಒಳಗೆ ಹೋಗಿದ್ದರು. ಈ ವೇಳೆ ವಾಹನದಲ್ಲಿದ್ದ ಡ್ರೈವರ್ ವಾಹನದಲ್ಲಿದ್ದ 65 ಲಕ್ಷ ಹಣ ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ. ವಾಪಸ್ಸು ಬಂದು ನೋಡುವಷ್ಟರಲ್ಲಿ ಬ್ಯಾಗ್‍ಗಳಲ್ಲಿದ್ದ ಹಣದ ಸಮೇತ ಪರಾರಿಯಗಿರುವುದು ತಿಳಿದಿದೆ. ಎಟಿಎಂ ವಾಹನವನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಹಣವಿರುವ ಬ್ಯಾಗ್‍ಗಳೊಂದಿಗೆ ಪರಾರಿಯಾಗಿದ್ದಾನೆ. ನವರಂಗ್ ಬಳಿಯ ಅಕ್ಸಿಸ್ ಬ್ಯಾಂಕ್ ಬಳಿ ಈ ಘಟನೆ ನಡೆದಿದೆ.

  • ಕಾರ್ಪೋರೇಷನ್ ಎಟಿಎಂನಲ್ಲಿ ಹಲ್ಲೆ ಪ್ರಕರಣ – 7 ವರ್ಷಗಳ ಬಳಿಕ ಅಪರಾಧಿಗೆ ಶಿಕ್ಷೆ ಪ್ರಮಾಣ ಪ್ರಕಟ

    ಕಾರ್ಪೋರೇಷನ್ ಎಟಿಎಂನಲ್ಲಿ ಹಲ್ಲೆ ಪ್ರಕರಣ – 7 ವರ್ಷಗಳ ಬಳಿಕ ಅಪರಾಧಿಗೆ ಶಿಕ್ಷೆ ಪ್ರಮಾಣ ಪ್ರಕಟ

    ಬೆಂಗಳೂರು: ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿಯನ್ನ ಅಪರಾಧಿ ಎಂದು ಸಿಸಿಹೆಚ್ 65 ಕೋರ್ಟ್ ಆದೇಶ ಹೊರಡಿಸಿದೆ. ಇಂದು ಅಪರಾಧಿ ಮಧುಕರ್ ರೆಡ್ಡಿಗೆ ಶಿಕ್ಷೆ ಪ್ರಕಟವಾಗಲಿದೆ.

    ಸಿಸಿಹೆಚ್ 65 ಕೋರ್ಟ್ ನಿಂದ ಅಪರಾಧಿ ರೆಡ್ಡಿಗೆ ಶಿಕ್ಷೆ ಪ್ರಕಟವಾಗಲಿದೆ. ಬೆಂಗಳೂರಿನ ಕಾರ್ಪೋರೇಷನ್ ಸರ್ಕಲ್ ನಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿರುವಾಗ ಜ್ಯೋತಿ ಉದಯ್ ಎಂಬವರ ಮೇಲೆ ಮಧುಕರ್ ರೆಡ್ಡಿ ಮಾರಣಾಂತಿಕವಾಗಿ ಹಲ್ಲೆಗೈದು ತಲೆ ಮರೆಸಿಕೊಂಡಿದ್ದನು. 2013ರಲ್ಲಿ ಆರೋಪಿಯನ್ನ ಬಂಧಿಸಿ 2017ರಲ್ಲಿ ಅಪರಾಧಿ ರೆಡ್ಡಿ ವಿರುದ್ಧ ದೋಷರೋಪ ಪಟ್ಟಿ ಸಲ್ಲಿಸಲಾಗಿತ್ತು.

    ಘಟನೆ ಸಂಬಂದ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಸತತ ಮೂರು ವರ್ಷಗಳ ಕಾಲ ವಿಚಾರಣೆ ನಡೆಸಿದ್ದರು. ಸತತ ವಿಚಾರಣೆ ಬಳಿಕ ನ್ಯಾಯಾಲಯ ಆರೋಪಿಯನ್ನ ಅಪರಾಧಿ ಎಂದು ಆದೇಶ ನೀಡಿತ್ತು. ಇಂದು ಮಧುಕರ್ ರೆಡ್ಡಿಯ ಶಿಕ್ಷೆ ಪ್ರಕಟವಾಗಲಿದೆ.

  • ಬ್ಯಾಂಕ್, ಎಟಿಎಂ ಕಳ್ಳತನಕ್ಕೆ ಯತ್ನ- ಫೋಟೋ ತೆಗೆದ ಸ್ಥಳೀಯನ ಮೇಲೆ ಹಲ್ಲೆ

    ಬ್ಯಾಂಕ್, ಎಟಿಎಂ ಕಳ್ಳತನಕ್ಕೆ ಯತ್ನ- ಫೋಟೋ ತೆಗೆದ ಸ್ಥಳೀಯನ ಮೇಲೆ ಹಲ್ಲೆ

    ರಾಯಚೂರು: ಜಿಲ್ಲೆಯ ಮಾನ್ವಿಯಲ್ಲಿ ಬ್ಯಾಂಕ್ ಹಾಗೂ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ರಾತ್ರಿ ವೇಳೆ ಸ್ಥಳೀಯರೊಬ್ಬರು ಎಚ್ಚರಗೊಂಡು ಫೋಟೋ ತೆಗೆದ ಹಿನ್ನೆಲೆ ಕಳ್ಳರು ಸ್ಥಳದಿಂದ ಓಡಿ ಹೋಗಿದ್ದಾರೆ.

    ಮಾನ್ವಿಯ ಐಬಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‍ಗೆ ಕನ್ನ ಹಾಕಲು ಕಳ್ಳರು ಮುಂದಾಗಿದ್ದರು. ರಾತ್ರಿ ವೇಳೆ ಬ್ಯಾಂಕ್ ಬಾಗಿಲು ಬೀಗ ಮುರಿಯುವ ಯತ್ನ ವಿಫಲವಾದ ಹಿನ್ನೆಲೆ ಎಟಿಎಂ ಕಳ್ಳತನಕ್ಕೆ ಮುಂದಾಗಿದ್ದರು. ಪಕ್ಕದಲ್ಲೇ ವಾಸವಾಗಿರುವ ಸುಬ್ಬಾರಾವ್ ಎಂಬವರು ಎಚ್ಚರಗೊಂಡು ಫೋಟೋ ತೆಗೆದಿದ್ದಾರೆ.

    ಸುಬ್ಬಾರಾವ್ ಮೇಲೆ ಹಲ್ಲೆ ಮಾಡಿ ಮೊಬೈಲ್ ಕಸಿದುಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಇಬ್ಬರು ಕಳ್ಳರಿಂದ ಈ ಕೃತ್ಯ ನಡೆದಿದೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

  • ಎಟಿಎಂನಿಂದ ಬಂತು ತುಕ್ಕು ಹಿಡಿದ 2 ಸಾವಿರದ ನೋಟು

    ಎಟಿಎಂನಿಂದ ಬಂತು ತುಕ್ಕು ಹಿಡಿದ 2 ಸಾವಿರದ ನೋಟು

    ಧಾರವಾಡ: ಸಾಮಾನ್ಯವಾಗಿ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಂಡರೆ ಹೊಸ ನೋಟುಗಳು ಬರುತ್ತವೆ. ಆದರೆ ಧಾರವಾಡದ ಎಟಿಎಂ ಒಂದರಲ್ಲಿ ತುಕ್ಕು ಹಿಡಿದ ನೋಟು ಬರುತ್ತಿವೆ.

    ಅದೂ 100 ಹಾಗೂ 500 ರೂ. ನೋಟಲ್ಲ, ಬದಲಾಗಿ ಎರಡು ಸಾವಿರದ ನೋಟುಗಳು. ಧಾರವಾಡ ನಗರದ ಕರ್ನಾಟಕ ವಿಶ್ವವಿದ್ಯಾಲಯದ ಎಸ್‍ಬಿಐ ಎಟಿಎಂನಲ್ಲಿ ಈ ನೋಟುಗಳು ಬಂದಿದ್ದರಿಂದ ಡ್ರಾ ಮಾಡಿದ ವ್ಯಕ್ತಿ ಹೌಹಾರಿದ್ದಾನೆ. ಗೌಸ್ ನವಲೂರ ಎಂಬ ವ್ಯಕ್ತಿ ಕಳೆದ ಎರಡು ದಿನಗಳ ಹಿಂದೆ ಈ ಎಸ್‍ಬಿಐ ಎಟಿಎಂನಲ್ಲಿ 10 ಸಾವಿರ ರೂಪಾಯಿ ಡ್ರಾ ಮಾಡಿದ್ದರು.

    ಆದರೆ ಅವುಗಳು ಕಲರ್ ಕಲರ್ ಆಗಿದ್ದನ್ನು ನೋಡಿ, ಚೆಕ್ ಮಾಡಿದ್ರೆ ತುಕ್ಕು ಹಿಡಿದ ಕಬ್ಬಿಣದಂತೆ ನೋಟಿನ ಮೇಲೆ ಬಣ್ಣ ಹತ್ತಿದೆ. ಆಸ್ಪತ್ರೆಗೆ ಹಣ ಬೇಕು ಎಂದು ಡ್ರಾ ಮಾಡಿದ್ದ ಈ ವ್ಯಕ್ತಿಗೆ ಬೇರೆ ಕಡೆ ಹೋಗಿ ನೋಟು ಬದಲಾವಣೆ ಮಾಡಲು ಅವಕಾಶ ಇರಲಿಲ್ಲ. ಹೀಗಾಗಿ ಈ ರೀತಿಯ ನೋಟು ಬಂದಿದ್ದರಿಂದ ಈ ವ್ಯಕ್ತಿ ಪರದಾಟ ನಡೆಸಬೇಕಾಯಿತು. ಅದಕ್ಕೆ ಈ ರೀತಿಯ ನೋಟು ಹಾಕುವವರು ನೋಡಿ ಎಟಿಎಂನಲ್ಲಿ ಹಾಕಬೇಕು. ಇಲ್ಲದೇ ಇದ್ದಲ್ಲಿ ತುರ್ತು ಪರಿಸ್ಥಿತಿ ಇದ್ದವರಿಗೆ ಇದು ದೊಡ್ಡ ಕಷ್ಟ ಎಂದು ಹೇಳಿದ್ದಾರೆ.

  • ಸಹಾಯ ಮಾಡೋ ನೆಪದಲ್ಲಿ ಎಟಿಎಂನಿಂದ ಹಣ ಎಗರಿಸುತ್ತಿದ್ದ ಕಳ್ಳಿ ಅಂದರ್

    ಸಹಾಯ ಮಾಡೋ ನೆಪದಲ್ಲಿ ಎಟಿಎಂನಿಂದ ಹಣ ಎಗರಿಸುತ್ತಿದ್ದ ಕಳ್ಳಿ ಅಂದರ್

    – 8 ಎಟಿಎಂ ಕಾರ್ಡ್, 55 ಸಾವಿರ ನಗದು ವಶ

    ಹಾವೇರಿ: ಎಟಿಎಂ ಆಪರೇಟ್ ಮಾಡೋಕೆ ಬಾರದ ಅಮಾಯಕ ಮತ್ತು ಅನಕ್ಷರಸ್ಥ ಮಹಿಳೆಯರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಪಡೆದು ಅವರಿಗೆ ಗೊತ್ತಾಗದಂತೆ ಪಾಸ್ ವರ್ಡ್ ಪಡೆದು ಹಣ ಎಗರಿಸುತ್ತಿದ್ದ ಆರೋಪಿಯನ್ನು ಹಾನಗಲ್ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಮಹಿಳೆ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳೂರು ಗ್ರಾಮದ ನಿವಾಸಿ 38 ವರ್ಷದ ಕೌಸರಬಾನು ಬಂಕಾಪುರ ಎಂದು ಗುರುತಿಸಲಾಗಿದೆ. ಈಕೆ ಜಿಲ್ಲೆಯ ಹಾನಗಲ್, ಹಿರೇಕೆರೂರು, ರಾಣೆಬೆನ್ನೂರು, ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ, ಶಿಕಾರಿಪುರ ಸೇರಿದಂತೆ ಹಲವೆಡೆ ಜನರನ್ನು ವಂಚಿಸಿ ಎಟಿಎಂ ಕಾರ್ಡ್ ಎಗರಿಸಿ ಹಣ ಲಪಟಾಯಿಸಿದ್ದಾಳೆ.

    ಎಟಿಎಂ ಬರುವ ಅಸಹಾಯಕ ಮತ್ತು ಅನಕ್ಷರಸ್ಥ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ಈಕೆ, ಅವರಿಂದ ಎಟಿಎಂ ಕಾರ್ಡ್ ಎಗರಿಸಿ ಹಣ ದೋಚುತ್ತಿದ್ದಳು. ಸಹಾಯ ಮಾಡುವ ನೆಪದಲ್ಲಿ ಅಮಾಯಕರ ಎಟಿಎಂ ಕಾರ್ಡ್ ತೆಗೆದು ಅವರಿಗೆ ಹಣ ತೆಗೆದುಕೊಡುತ್ತಿದ್ದಳು. ಈ ವೇಳೆ ಹಣ ಎಣಿಸೋದು ಅಥವಾ ಬಣ್ಣಬಣ್ಣದ ಮಾತುಗಳಲ್ಲಿ ತೊಡಗಿ ಅವರ ಎಟಿಎಂ ಕಾರ್ಡ್ಅನ್ನು ಕ್ಷಣಾರ್ಧದಲ್ಲಿ ಬದಲಿಸುತ್ತಿದ್ದಳು. ಹಣ ಡ್ರಾ ಮಾಡೋ ವೇಳೆ ಪಿನ್ ನಂಬರ್ ಗಮನಿಸಿ ಬಳಿಕ ಬೇರೆ ಬೇರೆ ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡುತ್ತಿದ್ದಳು.

    ಆರೋಪಿಯಿಂದ ವಂಚನೆಗೊಳಗಾಗಿದ್ದ ಇಬ್ಬರು ಎಟಿಎಂ ಕಾರ್ಡ್ ಕಳೆದುಕೊಂಡ ಬಗ್ಗೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಿಪಿಐ ಶಿವಶಂಕರ ಗಣಾಚಾರಿ ಮತ್ತು ಪಿಎಸ್‍ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಖತರ್ನಾಕ್ ಕಳ್ಳಿಯನ್ನು ಬಂಧಿಸಿದ್ದಾರೆ. ವಿಶೇಷವಾಗಿ ಆರೋಪಿ ಸೆಕ್ಯೂರಿಟಿ ಗಾರ್ಡ್ ಇಲ್ಲದ ಎಟಿಎಂಗಳ ಬಳಿ ಹೆಚ್ಚಾಗಿದ್ದು, ಸಹಾಯದ ನೆಪದಲ್ಲಿ ಯಾಮಾರಿಸುತ್ತಿದ್ದಳು. ಬಂಧಿತಳಿಂದ ಎಂಟು ಎಟಿಎಂ ಕಾರ್ಡ್ ಮತ್ತು ಐವತ್ತೈದು ಸಾವಿರ ರೂ. ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

  • ಸೆಕ್ಯೂರಿಟಿಯನ್ನ ಬರ್ಬರ ಹತ್ಯೆ ಮಾಡಿ ಎಟಿಎಂ ದರೋಡೆ

    ಸೆಕ್ಯೂರಿಟಿಯನ್ನ ಬರ್ಬರ ಹತ್ಯೆ ಮಾಡಿ ಎಟಿಎಂ ದರೋಡೆ

    ವಿಜಯಪುರ: ಎಟಿಎಂ ಸೆಕ್ಯೂರಿಟಿ ಗಾರ್ಡ್ ನನ್ನು ಬರ್ಬರವಾಗಿ ಹತ್ಯೆಗೈದು ಹಣ ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ.

    ಸಿಂದಗಿ ಪಟ್ಟಣದ ಶಾಪೂರ ಕಾಂಪ್ಲೆಕ್ಸ್‌ನಲ್ಲಿದ್ದ ಐಸಿಐಸಿಐ ಬ್ಯಾಂಕ್‍ನ ಎಟಿಎಂನಲ್ಲಿ ಈ ಘಟನೆ ನಡೆದಿದೆ. ರಾಹುಲ್ ರಾಠೋಡ್ (22) ಕೊಲೆಯಾದ ಯುವಕ. ಈತ ಜಿಲ್ಲೆಯ ಮದಬಾವಿ ತಾಂಡಾ ನಿವಾಸಿಯಾಗಿದ್ದು, ಐಸಿಐಸಿಐ ಬ್ಯಾಂಕ್ ಎಟಿಎಂನ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು.

    ಮಂಕಿ ಕ್ಯಾಪ್ ಹಾಕಿಕೊಂಡು ಬಂದಿದ್ದ ಮೂವರು ಸೋಮವಾರ ರಾತ್ರಿ ಸುತ್ತಿಗೆಯಿಂದ ರಾಹುಲ್ ರಾಠೋಡ್ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾರೆ. ಆರೋಪಿಗಳು ರಾಹುಲ್ ರಾಠೋಡ್ ಹತ್ಯೆ ಮಾಡಿದ ನಂತರ ಎಟಿಎಂನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

    ಮಾಹಿತಿ ತಿಳಿದು ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಟಿಎಂನಲ್ಲಿದ್ದ ಹಣದ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ.

    ಅಲ್ಲದೇ ಸ್ಥಳದಲ್ಲಿ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಬಂದು ಪರಿಶೀಲನೆ ಮಾಡಲಾಗುತ್ತಿದೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೃತ ಮಾಲೀಕನ ಎಟಿಎಂ ಕಾರ್ಡ್ ಬಳಸಿ 34 ಲಕ್ಷ ರೂ. ಡ್ರಾ ಮಾಡಿದ ಮನೆ ಕೆಲಸದಾಕೆ!

    ಮೃತ ಮಾಲೀಕನ ಎಟಿಎಂ ಕಾರ್ಡ್ ಬಳಸಿ 34 ಲಕ್ಷ ರೂ. ಡ್ರಾ ಮಾಡಿದ ಮನೆ ಕೆಲಸದಾಕೆ!

    ಕೋಲ್ಕತ್ತಾ: ಮಹಿಳೆಯೊಬ್ಬಳು ತನಗೆ ಉದ್ಯೋಗ ನೀಡಿದ ಮಾಲೀಕ ಮೃತಪಟ್ಟ ಬಳಿಕ ಆತನ ಎಟಿಎಂನಿಂದಲೇ ಬರೋಬ್ಬರಿ 35 ಲಕ್ಷಕ್ಕೂ ಅಧಿಕ ಹಣ ಡ್ರಾ ಮಾಡಿದ ಘಟನೆಯೊಂದು ನಡೆದಿದೆ.

    ಆರೋಪಿ ಮಹಿಳೆಯನ್ನು ರಿತಾ ರಾಯ್ ಎಂದು ಗುರುತಿಸಲಾಗಿದ್ದು, ಈಕೆ ಕಳೆದ 7 ವರ್ಷಗಳಿಂದ ಸತ್ಯನಾರಾಯಣ್ ಅಗರ್ವಾಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಇದೀಗ ಹಣ ಕದ್ದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಸತ್ಯನಾರಾಯಣ್ ಅವರು ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಮೃತಪಟ್ಟಿದ್ದಾರೆ. ಆ ಬಳಿಕ ನಕಶಿಪರ ನಿವಾಸಿಯಾಗಿರುವ ರಾಯ್, ತನ್ನ ಸಂಬಂಧಿಕರ ಸಹಾಯ ಪಡೆದು ತನ್ನ ಮಾಲೀಕನ ಎಟಿಎಂನಿಂದಲೇ 34,90,000 ಹಣ ಪೀಕಿದ್ದಾಳೆ.

    ಸತ್ಯನಾರಾಯಣ್ ಅವರು ಲಾಕ್‍ಡೌನ್ ಆದ ಮೊದಲ ವಾರದಲ್ಲಿ ತೀರಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಅವರು, ಪ್ರಿನ್ಸ್ ಅನ್ವರ್ ಷಾ ರಸ್ತೆಯ ಸಿಟಿ ಹೈನಲ್ಲಿರುವ ಮನೆಯಲ್ಲಿಯೇ ಇದ್ದರು. ಸತ್ಯನಾರಾಯಣ್ ಮೃತಪಟ್ಟ ಸಂದರ್ಭದಲ್ಲಿ ರಾಯ್, ಅವರ ಬಳಿಯಿದ್ದ ಎಟಿಎಂ ಕಾರ್ಡ್ ಕದ್ದಿದ್ದಾಳೆ. ಅಲ್ಲದೆ ಆ ಬಳಿಕದಿಂದಲೇ ಹಣ ಡ್ರಾ ಮಾಡಲು ಆರಂಭಿಸಿದ್ದಾಳೆ. ಆದರೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆ ಸಂದರ್ಭದಲ್ಲಿ ಯಾರೂ ಬ್ಯಾಂಕಿಗೆ ಹೋಗುತ್ತಿರಲಿಲ್ಲ. ಹೀಗಾಗಿ ಸತ್ಯನಾರಾಯಣ್ ಕುಟುಂಬಕ್ಕೆ ಹಣ ಡ್ರಾ ಮಾಡಿರುವ ವಿಚಾರವೂ ಗೊತ್ತಾಗಿರಲಿಲ್ಲ.

    ಇತ್ತ ಬ್ಯಾಂಕಿನಿಂದ ಸತ್ಯನಾರಾಯಣ್ ಅವರ ಮೊಬೈಲ್ ಗೆ ಮೆಸೇಜ್ ಗಳು ಬರುತ್ತಲೇ ಇತ್ತು. ಆದರೆ ಸತ್ಯನಾರಾಯಣ್ ತೀರಿಕೊಂಡ ಬಳಿಕ ಮೊಬೈಲ್ ಸ್ವಿಚ್ಛ್ ಆಫ್ ಆಗಿತ್ತು. ಹೀಗಾಗಿ ಅವರ ಅಕೌಂಟಿನಿಂದ ಹಣ ಹೋಗುತ್ತಿರುವ ವಿಚಾರ ಕುಟುಂಬದ ಗಮನಕ್ಕೆ ಬಂದಿರಲಿಲ್ಲ. ಸತ್ಯನಾರಾಯಣ್ ಅವರ ಮಗ ಇನ್ನೊಂದು ಫ್ಲ್ಯಾಟ್‍ನಲ್ಲಿ ವಾಸವಾಗಿದ್ದನು. ಮೃತರು ಬಳಸಿದ ಮೊಬೈಲ್ ಸಂಖ್ಯೆ ಸ್ವಿಚ್ಛ್ ಆಫ್ ಆಗಿದ್ದರಿಂದ ಬ್ಯಾಂಕ್ ಅವರ ಕುಟುಂಬದ ಸದಸ್ಯರಿಗೆ ಮೆಸೇಜ್ ಮೂಲಕ ಎಚ್ಚರಿಕೆಗಳನ್ನು ಕಳುಹಿಸಲು ಆರಂಭಿಸಿತ್ತು.

    ಜೂನ್ 1ರಂದು ಸತ್ಯನಾರಾಯಣ್ ಪುತ್ರ ಅನುರಾಗ್ ಬ್ಯಾಂಕಿಗೆ ತೆರಳಿ ಖಾತೆಯ ವಿವರಗಳನ್ನು ತೆಗೆದುಗೊಂಡಾಗ ಮಹಿಳೆ ಹಣ ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಗ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಎಟಿಎಂ ಸಿಸಿಟಿವಿಗಳನ್ನು ಪರೀಶಿಲಿಸಿದಾಗ ಇಬ್ಬರು ವ್ಯಕ್ತಿಗಳೊಂದಿಗೆ ಮಹಿಳೆ ಹಣ ಡ್ರಾ ಮಾಡುತ್ತಿರುವುದು ಬಯಲಾಗಿದೆ. ಸದ್ಯ ಘಟನೆ ಸಂಬಂಧಪಟ್ಟಂತೆ ಆರೋಪಿಗಳನ್ನು ಆಗಸ್ಟ್ 13ರಂದು ಬಂಧಿಸಲಾಗಿದ್ದು, ಆರೋಪಗಳಿಂದ 27 ಲಕ್ಷ ಹಣ ವಶಕ್ಕೆ ಪಡೆದುಕೊಂಡಿದ್ದಾರೆ.

  • ಅಪರಿಚಿತನ ಕೈಗೆ ಎಟಿಎಂ ಕಾರ್ಡ್ ಕೊಟ್ಟು ಲಕ್ಷಾಂತರ ರೂ. ಕಳೆದುಕೊಂಡ

    ಅಪರಿಚಿತನ ಕೈಗೆ ಎಟಿಎಂ ಕಾರ್ಡ್ ಕೊಟ್ಟು ಲಕ್ಷಾಂತರ ರೂ. ಕಳೆದುಕೊಂಡ

    ರಾಯಚೂರು: ಎಟಿಎಂನಿಂದ ಹಣ ಡ್ರಾ ಮಾಡಲು ಅಪರಿಚಿತ ವ್ಯಕ್ತಿಯಿಂದ ಸಹಾಯ ಪಡೆದು ವ್ಯಕ್ತಿಯೋರ್ವ ತನ್ನ ಖಾತೆಯಲ್ಲಿನ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾನೆ.

    ಜಿಲ್ಲೆಯ ಮಾನ್ವಿ ಪಟ್ಟಣದ ತ್ರಿಮೂರ್ತಿ ಗಂಗರಾಜು ಹಣ ಕಳೆದುಕೊಂಡಿರುವ ವ್ಯಕ್ತಿ. ತ್ರಿಮೂರ್ತಿ ಅವರು 2019ರ ನವೆಂಬರ್ 21ರಂದು ಪಟ್ಟಣದ ಎಸ್‍ಬಿಐ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋಗಿದ್ದರು. ಆದರೆ ತಮಗೆ ಡ್ರಾ ಮಾಡಲು ಬರದ ಕಾರಣ ಅಲ್ಲೇ ಇದ್ದ ಅಪರಿಚಿತ ವ್ಯಕ್ತಿಯ ಕೈಯಲ್ಲಿ ಎಟಿಎಂ ಕಾರ್ಡ್ ಕೊಟ್ಟು 2,000 ರೂ. ಡ್ರಾ ಮಾಡಿ ಕೊಡಲು ಕೇಳಿಕೊಂಡಿದ್ದರು. ಆ ವ್ಯಕ್ತಿ ಅವರಿಗೆ ಹಣ ಡ್ರಾ ಮಾಡಿ ಕೊಟ್ಟು ಎಟಿಎಂ ಕಾರ್ಡ್ ಬದಲಿಸಿದ್ದ. ಆದರೆ ಇದನ್ನ ತಿಳಿಯದ ತ್ರಿಮೂರ್ತಿ ಹಾಗೆ ಮನೆಗೆ ಬಂದಿದ್ದರು.

    ಬಳಿಕ 2020ರ ಮಾರ್ಚ್ 23ರಂದು ಪುನಃ ಹಣ ಡ್ರಾ ಮಾಡಲು ಎಟಿಎಂಗೆ ಹೋದಾಗ ತ್ರೀಮೂರ್ತಿ ಅವರಿಗೆ ಆಘಾತವಾಗಿದೆ. ಖಾತೆಯಲ್ಲಿ ಕೇವಲ 1,200 ರೂಪಾಯಿ ಇರುವುದು ಗೊತ್ತಾಗಿದೆ. ಖಾತೆಯಲ್ಲಿನ ಒಟ್ಟು 2,86,163 ರೂಪಾಯಿಗಳನ್ನು ಅವರ ಖಾತೆಯಿಂದ ಅಪರಿಚಿತ ವ್ಯಕ್ತಿ ಡ್ರಾ ಮಾಡಿಕೊಂಡಿದ್ದಾನೆ.

    ಬ್ಯಾಂಕ್ ಮ್ಯಾನೆಜರ್ ಬಳಿ ತೆರಳಿದಾಗ ಎಟಿಎಂ ಕಾರ್ಡ್ ಬದಲಿಯಾಗಿರುವುದು ಬಯಲಾಗಿದೆ. ಅಪರಿಚಿತ ವ್ಯಕ್ತಿಯ ಕೈಗೆ ಎಟಿಎಂ ಕಾರ್ಡ್ ಕೊಟ್ಟು ತ್ರೀಮೂರ್ತಿ ಮೋಸ ಹೋಗಿದ್ದಾನೆ. ವ್ಯಕ್ತಿ ಮಾಹಿತಿ ಸಿಗದೆ ಕೊನೆಗೆ ಎಪ್ರಿಲ್ 30ರಂದು ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಎಟಿಎಂ ಬಳಿ ನಿಲ್ತಿದ್ದ, ಹೆಲ್ಪ್ ಮಾಡ್ಲಾ ಆಂತಿದ್ದ-ಕ್ಷಣಾರ್ಧದಲ್ಲಿ ಕಾರ್ಡ್ ಅದಲು ಬದಲು

    ಎಟಿಎಂ ಬಳಿ ನಿಲ್ತಿದ್ದ, ಹೆಲ್ಪ್ ಮಾಡ್ಲಾ ಆಂತಿದ್ದ-ಕ್ಷಣಾರ್ಧದಲ್ಲಿ ಕಾರ್ಡ್ ಅದಲು ಬದಲು

    -ಹಳ್ಳಿ ಜನರೇ ಇವನ ಟಾರ್ಗೆಟ್
    -ಎಟಿಎಂನಿಂದ ಹೊರ ಬರ್ತಿದ್ದಂತೆ ಹಣ ಮಾಯ

    ಮಂಡ್ಯ: ಹಳ್ಳಿಗಾಡಿನ ಜನರಿಗೆ ಹಾಗೂ ಅನಕ್ಷರಸ್ಥರಿಗೆ ಎಟಿಎಂನಲ್ಲಿ ಸಹಾಯ ಮಾಡುವ ನೆಪದಲ್ಲಿ ಬೇರೆ ಅವರ ಅಕೌಂಟ್‍ನಿಂದ ಎಟಿಎಂನಲ್ಲಿ ಹಣ ದೋಚುತ್ತಿದ್ದ ಖದೀಮನನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಮಂಡ್ಯ ಹಾಗೂ ತುಮಕೂರು ಜಿಲ್ಲೆಯ ಒಟ್ಟು 9 ಎಟಿಎಂಗಳಲ್ಲಿ ಅನಕ್ಷರಸ್ಥರ ಹಾಗೂ ಗ್ರಾಮೀಣ ಭಾಗದವರ ಬ್ಯಾಂಕ್ ಅಕೌಂಟ್‍ನಲ್ಲಿ ಇದ್ದ ಹಣವನ್ನು ಕದಿಯುತ್ತಿದ್ದ ಆರೋಪಿ ಗಿರೀಶ್ ಸಿದ್ದಮನಿಯಪ್ಪನವರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಗಿರೀಶ್ ಹಾವೇರಿ ಜಿಲ್ಲೆಯ ಹಿರೆಕೆರೂರು ತಾಲೂಕಿನ ಹಿರೇಮರುಬ ಗ್ರಾಮದವನಾಗಿದ್ದು, ಮಂಡ್ಯ ಜಿಲ್ಲೆ ಹಾಗೂ ತುಮಕೂರು ಜಿಲ್ಲೆಯಲ್ಲಿ ಅಪರಾಧ ಕೃತ್ಯದಲ್ಲಿ ತೊಡಗಿದ್ದ.

    ಮೊದಲು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಪಟಣ್ಣ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಎರಡು ಎಟಿಎಂಗಳಲ್ಲಿ, ಕುಣಿಗಲ್ ಪೊಲೀಸ್ ಠಾಣೆಯ ಒಂದು ಎಟಿಎಂನಲ್ಲಿ, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಎಟಿಎಂನಲ್ಲಿ, ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಎರಡು ಎಟಿಎಂನಲ್ಲಿ ಹಾಗೂ ಮಳವಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಎರಡು ಎಟಿಎಂಗಳಲ್ಲಿ ಗಿರೀಶ್ ಹಣ ಕದ್ದಿದ್ದಾನೆ. ಒಟ್ಟು 9 ಎಟಿಎಂಗಳಲ್ಲಿ 5,02,400 ರೂಪಾಯಿ ಹಣವನ್ನು ಕಳವು ಮಾಡಿದ್ದಾನೆ.

    ಹೇಗೆ ಕದಿಯುತ್ತಿದ್ದ?

    ಗಿರೀಶ್ ನಕಲಿ ಎಟಿಎಂ ಕಾರ್ಡುಗಳನ್ನು ಬಳಸಿ ಕೃತ್ಯ ನಡೆಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಎಟಿಎಂಗಳಿಗೆ ಬರುವ ಅನಕ್ಷರಸ್ಥರಿಗೆ ಹಾಗೂ ಹಳ್ಳಿಗಾಡಿನ ಜನರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಪಿನ್ ನಂಬರ್ ಗಳನ್ನು ನೋಡಿಕೊಳ್ಳುತ್ತಿದ್ದ. ನಂತರ ಅವರ ಅಸಲಿ ಎಟಿಎಂ ಕಾರ್ಡನ್ನು ತಾನು ಇಟ್ಟುಕೊಂಡು ತನ್ನಲ್ಲಿದ್ದ ನಕಲಿ ಎಟಿಎಂ ಕಾರ್ಡನ್ನು ಅವರಿಗೆ ಕೊಡುತ್ತಿದ್ದ. ನಂತರ ಅಸಲಿ ಎಟಿಎಂ ಬಳಸಿ ಅವರ ಖಾತೆಯಲ್ಲಿದ್ದ ಹಣ ದೋಚುತ್ತಿದ್ದ.

    ಪ್ರಕರಣ ಹೇಗೆ ಬೆಳಕಿಗೆ ಬಂತು?

    ನಾನಾ ಭಾಗಗಳಲ್ಲಿ ಜನರಿಗೆ ಮೋಸ ಮಾಡಿ ಅವರ ಎಟಿಎಂ ಕಾರ್ಡ್ ಮೂಲಕ ಹಣ ದೋಚುತ್ತಿದ್ದ ಗಿರೀಶ್, ಮಂಡ್ಯ ಜಿಲ್ಲೆಯ ಮಳವಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲೂ ಸಹ ತನ್ನ ಕೈಚಳ ತೋರಿಸಿದ್ದಾನೆ. ಮಳವಳ್ಳಿ ಪಟ್ಟಣದ ಕೆನರಾ ಬ್ಯಾಂಕ್ ಎಟಿಎಂಗೆ ಹಣ ಡ್ರಾ ಮಾಡಲು ಬಂದಿದ್ದ ಚೆನ್ನಯ್ಯ ಅವರಿಗೆ ಸಹಾಯ ಮಾಡವ ನೆಪದಲ್ಲಿ ಎಟಿಎಂ ಕಾರ್ಡ್ ಎಗರಿಸಿದ್ದಾನೆ. ನಂತರ ಪಕ್ಕದ ಎಟಿಎಂಗೆ ಬಂದಿದ್ದ ನಾಗರತ್ನಮ್ಮ ಎಂಬುವವರಿಗೂ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಎಗರಿಸಿದ್ದಾನೆ. ನಂತರ ಆ ಎಟಿಎಂ ಕಾರ್ಡುಗಳನ್ನು ಉಪಯೋಗಿಸಿ ಬೇರೆ ಕಡೆಯ ಎಟಿಎಂಗಳಲ್ಲಿ 1.37 ಲಕ್ಷ ರೂ. ಹಣ ಡ್ರಾ ಮಾಡಿದ್ದಾನೆ. ಈ ಕುರಿತು ನಾಗರತ್ನಮ್ಮ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಮಳವಳ್ಳಿ ಪೊಲೀಸರು ಎಟಿಎಂಗಳ ಸಿಸಿ ಟಿವಿಯನ್ನು ಪರಿಶೀಲಿಸುತ್ತಾರೆ. ಬಳಿಕ ಹಣ ಡ್ರಾ ಮಾಡಿರುವ ಎಟಿಎಂ ಸ್ಥಳಗಳನ್ನು ಪರಿಶೀಲಿಸಿದ್ದಾರೆ, ಇದರ ಫೋಟೊ ತೆಗೆದುಕೊಂಡ ಪೊಲೀಸರು, ಗಿರೀಶ್‍ಗಾಗಿ ಹುಡುಕಾಟ ಆರಂಭಿಸುತ್ತಾರೆ. ತನಿಖೆ ಬಳಿಕ ಗಿರೀಶ್ ಬೆಂಗಳೂರಿನ ನಾಗಸಂದ್ರದಲ್ಲಿ ಇರುವುದು ಪೊಲೀಸರಿಗೆ ತಿಳಿಯುತ್ತದೆ. ನಂತರ ಪೊಲೀಸರು ಗಿರೀಶ್‍ನನ್ನು ಬಂಧಿಸಿ ವಿಚಾರಣೆ ಮಾಡಿದಾಗ ತಾನು ಮಾಡಿದ ಕಳ್ಳತನದ ಕುರಿತು ಬಾಯ್ಬಿಟ್ಟಿದ್ದಾನೆ. ಬಂಧಿತ ಗಿರೀಶ್‍ನಿಂದ 5,02,400 ರೂಪಾಯಿ ನಗದು, ಎರಡು ಉಂಗುರ ಹಾಗೂ ಒಂದು ಬೈಕ್‍ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.