Tag: atm

  • ಎಟಿಎಂ ಒಡೆದು ಹಣ ದೋಚಿದ ಪ್ರಕರಣ- ಹಣ ಕಳವಾಗಿಲ್ಲ ಎಂದ ಪೊಲೀಸರು

    ಎಟಿಎಂ ಒಡೆದು ಹಣ ದೋಚಿದ ಪ್ರಕರಣ- ಹಣ ಕಳವಾಗಿಲ್ಲ ಎಂದ ಪೊಲೀಸರು

    – 15 ಲಕ್ಷ ದೋಚಿದ್ದಾರೆ ಅಂದಿದ್ದ ಬ್ಯಾಂಕ್ ಮ್ಯಾನೇಜರ್

    ಚಿಕ್ಕಬಳ್ಳಾಪುರ: ಮಧ್ಯರಾತ್ರಿ ಎಟಿಎಂ ಗೆ ಎಂಟ್ರಿ ಕೊಟ್ಟ ಇಬ್ಬರು ಯುವಕರು ಯಂತ್ರ ಒಡೆದು ಹಾಕಿ ಹಣ ದೋಚಲು ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೇಸಂದ್ರ ಕ್ರಾಸ್ ನಲ್ಲಿ ನಡೆದಿದೆ.

    ಗ್ರಾಮದ ಎಸ್ ಬಿಎಂ ಎಟಿಎಂ ಸೆಂಟರ್ ನಲ್ಲಿ ಘಟನೆ ನಡೆದಿದೆ. ಮುಸುಕುಧಾರಿಗಳಿಗೆ ಬಂದಿರುವ ಇಬ್ಬರು ಯುವಕರು ಮೊದಲು ಸಿಸಿ ಟಿವಿ ಕ್ಯಾಮೆರಾಗಳನ್ನ ಒಡೆದು ಹಾಕಿ ಕೃತ್ಯ ನಡೆಸಿದ್ದಾರೆ. ಬೆಳಗ್ಗೆ ಹಣ ಡ್ರಾ ಮಾಡಲು ಬಂದ ಗ್ರಾಹಕರು ಬ್ಯಾಂಕ್ ಮ್ಯಾನೇಜರ್ ಗೆ ವಿಷಯ ತಿಳಿಸಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಪೇರೇಸಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವೃದ್ಧೆಯ ಹತ್ಯೆ ಮಾಡಿ ಮೃತದೇಹದೊಂದಿಗೆ ಯುವಕ ಸೆಕ್ಸ್!

    ATM

    ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೇರೇಸಂದ್ರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬ್ಯಾಂಕ್ ರಿಜನಲ್ ಮ್ಯಾನೇಜರ್ ಬ್ಯಾಂಕ್‍ಗೆ ಆಗಮಿಸಿ ಮ್ಯಾನೇಜರ್ ಬಳಿ ಮಾಹಿತಿ ಪಡೆದು ತದನಂತರ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ:  ರಾಜೀವ್ ಗಾಂಧಿ ಹೆಸರನ್ನು ಬದಲಾಯಿಸಿ ಶಂಕರಾಚಾರ್ಯರ ಹೆಸರಿಡುವುದು ಸೂಕ್ತ: ಶೋಭಾ

    ಸದ್ಯ ಎಟಿಎಂ ಯಂತ್ರದಲ್ಲಿನ ಹಣದ ಬಾಕ್ಸ್ ಹಾಗೆ ಇದೆ ಎನ್ನಲಾಗಿದ್ದು, ಹಣ ಕಳವಾಗಿಲ್ಲ ಅಂತ ಪೊಲೀಸರು ಹೇಳುತ್ತಿದ್ದಾರೆ. ಇದೊಂದು ಕಳವು ಯತ್ನ ಪ್ರಕರಣ ಅಂತಿದ್ದಾರೆ. ಆದರೆ ಮಧ್ಯಾಹ್ನ ಮಾಧ್ಯಮದವರಿಗೆ 15 ಲಕ್ಷ ಕಳವಾಗಿದೆ ಅಂತ ಬ್ಯಾಂಕ್ ಮ್ಯಾನೇಜರ್ ಪ್ರತಿಕ್ರಿಯೆ ನೀಡಿದ್ರು.

  • ಎಟಿಎಂ ಒಡೆದು ಹಾಕಿ 15 ಲಕ್ಷ ದೋಚಿದ ಖದೀಮರು

    ಎಟಿಎಂ ಒಡೆದು ಹಾಕಿ 15 ಲಕ್ಷ ದೋಚಿದ ಖದೀಮರು

    ಚಿಕ್ಕಬಳ್ಳಾಪುರ: ಮಧ್ಯರಾತ್ರಿ ಎಟಿಎಂಗೆ ಎಂಟ್ರಿ ಕೊಟ್ಟ ಇಬ್ಬರು ಕಳ್ಳರು ಎಟಿಎಂ ಯಂತ್ರ ಒಡೆದು ಹಾಕಿ ಸರಿ ಸುಮಾರು 15 ಲಕ್ಷ ಹಣ ದೋಚಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೇಸಂದ್ರ ಕ್ರಾಸ್‍ನಲ್ಲಿ ನಡೆದಿದೆ.  ಇದನ್ನೂ ಓದಿ: ಹಾಸನದಲ್ಲಿ ಎಟಿಎಂ ದರೋಡೆಗೆ ವಿಫಲ ಯತ್ನ – ಮಷಿನ್‍ ಸಂಪೂರ್ಣ ಜಖಂ

    ATM

    ಗ್ರಾಮದ ಎಸ್‍ಬಿಎಂ ಎಟಿಎಂ ಸೆಂಟರ್ ನಲ್ಲಿ ಘಟನೆ ನಡೆದಿದ್ದು, ಮುಸುಕುಧಾರಿಗಳಾಗಿ ಬಂದ ದರೋಡೆಕೋರರು ಮೊದಲು ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿ ಕೃತ್ಯ ನಡೆಸಿದ್ದಾರೆ. ಬೆಳಿಗ್ಗೆ ಹಣ ಡ್ರಾ ಮಾಡಲು ಬಂದ ಗ್ರಾಹಕರು ಬ್ಯಾಂಕ್ ಮ್ಯಾನೇಜರ್ ಗೆ ವಿಷಯ ತಿಳಿಸಿದ್ದು, ಬ್ಯಾಂಕ್ ಮ್ಯಾನೇಜರ್ ಪೇರೇಸಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೇರೇಸಂದ್ರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.  ಇದನ್ನೂ ಓದಿ: ಸಿಸಿಟಿವಿ ಧ್ವಂಸಗೊಳಿಸಿ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ

    ATM

    ಇತ್ತೀಚೆಗಷ್ಟೇ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೋಹಿನೂರ್ ಗ್ರಾಮದಲ್ಲಿ ಎಸ್‌ಬಿಐ ಬ್ಯಾಂಕ್ ನ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ ಮಾಡಿ ಹಣ ಸಿಗದೇ ದರೋಡೆಕೋರ ಬರಿಗೈಯಲ್ಲಿ ತೆರಳಿದ್ದನು. ಇನ್ನೂ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಳ್ಳತನ ಮಾಡಲು ಬಂದಿದ್ದ ಕಳ್ಳ ಸಿಸಿಟಿವಿ ಗಮನಿಸಿದ ಬಳಿಕ ಎಚ್ಚರಗೊಂಡು ಸಿಸಿಟಿವಿಯನ್ನು ಧ್ವಂಸ ಮಾಡಿ ಅಲ್ಲಿಂದ ಪರಾರಿಯಾಗಿದ್ದನು.

  • ಸಿಸಿಟಿವಿ ಧ್ವಂಸಗೊಳಿಸಿ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ

    ಸಿಸಿಟಿವಿ ಧ್ವಂಸಗೊಳಿಸಿ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ

    ಬೀದರ್ : ಬ್ಯಾಂಕ್ ಎಟಿಎಂ ಹಾಗೂ ಸಿಸಿ ಟಿವಿ ಧ್ವಂಸ ಮಾಡಿ ದರೋಡೆಕೋರ ಕಳ್ಳತನಕ್ಕೆ ವಿಫಲ ಯತ್ನ ಮಾಡಿದ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.

    ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೋಹಿನೂರ್ ಗ್ರಾಮದಲ್ಲಿ ಎಸ್.ಬಿಐ ಬ್ಯಾಂಕ್ ನ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ ಮಾಡಿ ಹಣ ಸಿಗದೆ ದರೋಡೆಕೋರ ಬರಿಗೈಯಲ್ಲಿ ತೆರಳಿದ್ದಾನೆ. ಇದನ್ನೂ ಓದಿ: ಬೈಕ್ ಅಪಘಾತ- ಚಿಕಿತ್ಸೆ ಫಲಿಸದೆ ಸೈನಿಕ ಸಾವು

    ದರೋಡೆಕೋರ ಎಟಿಎಂ ಒಳಗಡೆ ನುಗ್ಗಿ ದರೋಡೆಗೆ ಯತ್ನ ಮಾಡಿದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಕಳ್ಳತನ ಮಾಡಲು ಬಂದಿದ್ದ ಕಳ್ಳ ಸಿಸಿ ಟಿವಿ ಗಮನಿಸಿದ ಬಳಿಕ ಎಚ್ಚರಗೊಂಡು ಸಿಸಿಟಿವಿಯನ್ನು ಧ್ವಂಸ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ.  ಇದನ್ನೂ ಓದಿ: ರೌಡಿಶೀಟರ್​ನಿಂದ ಪಾನ್ ಶಾಪ್ ಮಾಲೀಕನ ಬರ್ಬರ ಹತ್ಯೆ

    ಬ್ಯಾಂಕ್ ಮ್ಯಾನೇಜರ್ ನೀಡಿದ ದೂರಿನ ಅಧಾರದ ಮೇಲೆ ಮಂಠಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರನ ಶೋಧಕ್ಕಾಗಿ ಬಲೆ ಬಿಸಿದ್ದಾರೆ.

  • ಹಾಸನದಲ್ಲಿ ಎಟಿಎಂ ದರೋಡೆಗೆ ವಿಫಲ ಯತ್ನ – ಮಷಿನ್‍ ಸಂಪೂರ್ಣ ಜಖಂ

    ಹಾಸನದಲ್ಲಿ ಎಟಿಎಂ ದರೋಡೆಗೆ ವಿಫಲ ಯತ್ನ – ಮಷಿನ್‍ ಸಂಪೂರ್ಣ ಜಖಂ

    ಹಾಸನ: ಎಟಿಎಂ ದರೋಡೆಗೆ ವಿಫಲ ಯತ್ನ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ನಗರದಲ್ಲಿ ನಡೆದಿದೆ. ಇದನ್ನೂ ಓದಿ: ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್

    ಅರಸೀಕೆರೆಯ ಎಪಿಎಂಸಿ ಬಳಿ ಇರುವ ಕೆನರಾ ಬ್ಯಾಂಕ್‍ಗೆ ಸೇರಿದ ಎಟಿಎಂನಲ್ಲಿ ದರೋಡೆಗೆ ಯತ್ನಿಸಲಾಗಿದ್ದು, ತಡರಾತ್ರಿ ಈ ಘಟನೆ ನಡೆದಿದೆ. ಹೆದ್ದಾರಿ ಪಕ್ಕದಲ್ಲೇ ಎಟಿಎಂ ಇದ್ದು, ಕಳ್ಳರು ಎಟಿಎಂ ಅನ್ನು ಬಹುತೇಕ ಜಖಂ ಗೊಳಿಸಿದ್ದಾರೆ. ಎಟಿಎಂ ಜಖಂ ಗೊಳಿಸಿದ್ದರು ಕೂಡ ಅಂತಿಮವಾಗಿ ಹಣ ಕದಿಯಲಾಗದೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ವೃತ್ತ ನಿರೀಕ್ಷಕ ಸೋಮೇಗೌಡ, ಡಿವೈಎಸ್‍ಪಿ ನಾಗೇಶ್, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಕೆಲವು ತಿಂಗಳ ಹಿಂದೆಯಷ್ಟೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಆಕ್ಸಿಸ್ ಬ್ಯಾಂಕ್‍ನ ಎಟಿಎಂನಲ್ಲಿ ದರೋಡೆ ಮಾಡಲು ದುಷ್ಕರ್ಮಿಗಳು ಪ್ರಯತ್ನಿಸಿದ್ದರು. ಈ ವೇಳೆ ಎಟಿಎಂ ಯಂತ್ರದಲ್ಲಿ ಹಣ ಬರುವ ಸ್ಥಳವನ್ನು ಕೊರೆಯಲು ದುಷ್ಕರ್ಮಿಗಳು ಮುಂದಾಗಿದ್ದರು. ಆದರೆ ಕೊರೆಯಲು ಸಾಧ್ಯವಾಗದ ಕಾರಣ ಮಷಿನ್‍ನನ್ನು ಒಡೆಯಲು ಯತ್ನಿಸಿದಾಗ ಎಟಿಎಂ ಕೊಠಡಿಯಲ್ಲಿ ಇದ್ದ ಸೈರನ್ ಕೂಗಿಕೊಂಡಿದೆ. ಇದರಿಂದ ಗಾಬರಿಗೊಂಡ ಖದೀಮರು ಸ್ಥಳದಿಂದ ಪರಾರಿಯಾಗಿದ್ದರು. ಇದನ್ನೂ ಓದಿ: ಕಲಾಪಕ್ಕೆ ಸಚಿವರ ಹಾಜರಿ ಕಡ್ಡಾಯ- ಸಿಎಂಗೆ ಪತ್ರ ಬರೆದ ಸಭಾಪತಿ ಹೊರಟ್ಟಿ

  • ಇಂದಿನಿಂದ ಹೊಸ ದುಬಾರಿ ಜೀವನ – ಎಲ್‍ಪಿಜಿ ಸಿಲಿಂಡರ್, ಹಾಲು, ಬ್ಯಾಂಕಿಂಗ್ ಚಾರ್ಜ್ ಹೆಚ್ಚಳ

    ಇಂದಿನಿಂದ ಹೊಸ ದುಬಾರಿ ಜೀವನ – ಎಲ್‍ಪಿಜಿ ಸಿಲಿಂಡರ್, ಹಾಲು, ಬ್ಯಾಂಕಿಂಗ್ ಚಾರ್ಜ್ ಹೆಚ್ಚಳ

    ನವದೆಹಲಿ: ಇಂದಿನಿಂದ ಹೊಸ ದುಬಾರಿ ಜೀವನಕ್ಕೆ ಜನರು ಹೊಂದಿಕೊಳ್ಳಬೇಕಿದೆ. ಕೊರೊನಾ ಲಾಕ್‍ಡೌನ್ ವೇಳೆ ನಿರುದ್ಯೋಗ ಸಮಸ್ಯೆ ಮತ್ತು ಆರ್ಥಿಕ ಸಂಕಷ್ಟದ ನಡುವೆ ಬೆಲೆ ಏರಿಕೆ ಹೊಡೆತ ಸಾರ್ವಜನಿಕರ ಮೇಲೆ ಬೀಳಲಿದೆ. ಹಾಲು, ಎಲ್‍ಪಿಜಿ ಸಿಲಿಂಡರ್ ಮತ್ತು ಬ್ಯಾಂಕ್ ಸೇವೆಗಳ ಶುಲ್ಕ ಇಂದಿನಿಂದ ಏರಿಕೆಯಾಗಲಿದೆ.

    ದುಬಾರಿ ಆಯ್ತು ಅಮೂಲ್ ಹಾಲು:
    ಅಮೂಲ್ ಹಾಲು ಇಂದಿನಿಂದ ತನ್ನ ಬೆಲೆಯನ್ನ ಹೆಚ್ಚಿಸಿಕೊಂಡಿದೆ. ದೆಹಲಿ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಅಮೂಲ್ ಉತ್ಪನ್ನಗಳು ತುಟ್ಟಿಯಾಗಲಿವೆ. ಪ್ರತಿ ಲೀಟರ್ ಹಾಲಿನ ಮೇಲೆ ಎರಡು ರೂಪಾಯಿಯನ್ನ ಅಮೂಲ್ ಹೆಚ್ಚಳ ಮಾಡಿಕೊಂಡಿದೆ. ಅಮೂಲ್ ಒಂದೂವರೆ ವರ್ಷದ ಬಳಿಕ ತನ್ನ ಉತ್ಪನ್ನಗಳ ಮೇಲಿನ ಬೆಲೆಯನ್ನು ಏರಿಕೆ ಮಾಡಿಕೊಂಡಿದೆ. ಬುಧವಾರವೇ ಅಮೂಲ್ ತನ್ನ ಬೆಲೆ ಏರಿಕೆಯ ಮಾಹಿತಿಯನ್ನು ನೀಡಿತ್ತು.

    ಇಂದಿನಿಂದ ಅಮೂಲ್ ಗೋಲ್ಡ್ 58 ರೂ. ಪ್ರತಿ ಲೀಟರ್, ಅಮೂಕ್ ತಾಜಾ 46 ರೂ. ಪ್ರತಿ ಲೀ., ಅಮೂಲ್ ಶಕ್ತಿ 52 ರೂ.ಪ್ರತಿ ಲೀಟರ್ ಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಅಮೂಲ್ ಬಳಿಕ ಇನ್ನುಳಿದ ಹಾಲು ಉತ್ಪಾದಕ ಕಂಪನಿಗಳು ಬೆಲೆ ಏರಿಕೆ ಮಾಡುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.

    ಬ್ಯಾಂಕ್ ಚಾರ್ಜ್ ಹೆಚ್ಚಳ:
    ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‍ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ)ತನ್ನ ಸೇವಾ ಶುಲ್ಕವನ್ನು ಹೆಚ್ಚಿಸಿಕೊಂಡಿದೆ. ಈಗ ಗ್ರಾಹಕರು ಎಟಿಎಂನಿಂದ ತಿಂಗಳಿಗೆ ನಾಲ್ಕು ಬಾರಿ ಮಾತ್ರ ಉಚಿತವಾಗಿ ಹಣ ಡ್ರಾ ಮಾಡಬಹುದು. ನಾಲ್ಕಕ್ಕಿಂತ ಹೆಚ್ಚಿನ ವಹಿವಾಟು ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಪ್ರತಿ ವಹಿವಾಟಿನ ಮೇಲೆ 15 ರೂ.ಶುಲ್ಕವನ್ನು ಗ್ರಾಹಕರು ಪಾವತಿಸಬೇಕು.

    ಚೆಕ್ ಬಳಕೆ ಮೇಲೆಯೂ ಶುಲ್ಕ: ಎಟಿಎಂ ಮಾತ್ರ ಅಲ್ಲದೇ ಚೆಕ್ ಬಳಕೆಯ ಮೇಲೆಯೂ ಎಸ್‍ಬಿಐ ಶುಲ್ಕ ವಿಧಿಸುತ್ತಿದೆ. ವಿತ್ತಿಯ ವರ್ಷದಲ್ಲಿ ಒಬ್ಬ ಗ್ರಾಹಕ 10 ಚೆಕ್ ಗಳ ಬಳಕೆಗೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. 10ಕ್ಕಿಂತ ಹೆಚ್ಚಾದ್ರೆ ಬ್ಯಾಂಕಿನ ಶುಲ್ಕ ಪಾವತಿಸಬೇಕು. ಎಸ್‍ಬಿಐ ಜೊತೆ ಆಕ್ಸಿಸ್, ಐಡಿಬಿಐ ಬ್ಯಾಂಕ್ ಸಹ ಎಸ್‍ಎಂಎಸ್, ಲಾಕರ್ ಚಾರ್ಜ್ ಹೆಚ್ಚಿಸಿಕೊಂಡಿವೆ. ಇಂದಿನಿಂದಲೇ ಈ ಹೊಸ ಶುಲ್ಕಗಳು ಅನ್ವಯವಾಗಲಿವೆ.

    ಟಿಡಿಎಸ್ ಕಟ್: ಕಳೆದ ಎರಡು ವರ್ಷಗಳಿಂದ ಐಟಿಆರ್ ಪಾವತಿಸದ ಜನರ ಟಿಡಿಎಸ್ ಜುಲೈನಿಂದ ಹೆಚ್ಚು ಕಟ್ ಆಗಲಿದೆ. 50 ಸಾವಿರ ರೂ.ಕ್ಕಿಂತ ಹೆಚ್ಚು ಟಿಡಿಎಸ್ ಕಟ್ ಆಗುವರಿಗೆ ಮಾತ್ರ ಈ ನಿಯಮ ಅನ್ವಯಿಸಲಿದೆ.

    ಎಲ್‍ಪಿಜಿಯೂ ತುಟ್ಟಿಯಾಯ್ತು:
    ಇದೆಲ್ಲದರ ಜೊತೆ ಎಲ್‍ಪಿಜಿ ಸಿಲಿಂಡರ್ ಬೆಲೆಯೂ ಇಂದಿನಿಂದ ಹೆಚ್ಚಳವಾಗುತ್ತಿದೆ. ಸಬ್ಸಿಡಿ ರಹಿತ ಪ್ರತಿ ಸಿಲಿಂಡರ್ ಮೇಲೆ 25 ರೂ. ಹೆಚ್ಚು ನೀಡಬೇಕು. ಗೃಹ ಬಳಕೆಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 834 ರೂ.ಗೆ ತಲುಪಿದೆ. ಕೋಲ್ಕತ್ತಾದಲ್ಲಿ 861 ರೂಪಾಯಿ, ಬೆಂಗಳೂರಿನಲ್ಲಿ 812 ರೂ.ಇದೆ. ಇನ್ನೂ 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ದೆಹಲಿಯಲ್ಲಿ 1,550 ರೂ.ಗೆ ಏರಿಕೆಯಾಗಿದೆ. ಇದನ್ನೂ ಓದಿ: ಮೋದಿ ಸರ್ಕಾರದಿಂದ ‘ಸಾಲ’ ರೂಪದ ಸಹಾಯ

    ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಜೊತೆ ಸದ್ಯ ಹೊಸ ಹೊಸ ಶುಲ್ಕಗಳು ಜನ ಸಾಮನ್ಯರ ಜೇಬಿಗೆ ಹಂತ ಹಂತವಾಗಿ ಕತ್ತರಿ ಹಾಕಲಿವೆ. ಕಳೆದ ತಿಂಗಳಿನಲ್ಲಿ ಒಟ್ಟು 16 ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಕಂಡಿದೆ. ಇದನ್ನೂ ಓದಿ: ಮೊದಲು ಲಸಿಕೆ, ನಂತರ ಮನ್ ಕೀ ಬಾತ್: ರಾಹುಲ್ ಕಿಡಿ

  • ಎಟಿಎಂನಲ್ಲಿ ಹರಿದ ನೋಟು- ಸಾರ್ವಜನಿಕರಲ್ಲಿ ಆತಂಕ

    ಎಟಿಎಂನಲ್ಲಿ ಹರಿದ ನೋಟು- ಸಾರ್ವಜನಿಕರಲ್ಲಿ ಆತಂಕ

    ಗದಗ: ಎಸ್‍ಬಿಐ ಬ್ಯಾಂಕಿನ ಎಟಿಎಂನಲ್ಲಿ, ಕಳೆದ ಒಂದು ತಿಂಗಳಿನಿಂದ ಬರೀ ಹರಿದ ನೋಟುಗಳು ಬರುತ್ತಿವೆ ಎಂದು ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಜನರು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 2000 ಕೋಟಿ ನೀರಾವರಿ ಕಿಕ್‍ಬ್ಯಾಕ್ ಆರೋಪ, ತನಿಖೆ ಯಾಕಿಲ್ಲ? ಸರ್ಕಾರಕ್ಕೆ ಹೆಚ್‍ಡಿಕೆ ಪ್ರಶ್ನೆ

    ಎಟಿಎಂನಲ್ಲಿ ಬರುತ್ತಿರುವ ಈ ಹರಿದ ನೋಟುಗಳು ಗ್ರಾಮಸ್ಥರಿಗೆ ತಲೆನೋವಾಗಿದೆ ಪರಿಣಮಿಸಿದೆ. ಪ್ರತಿ ಬಾರಿ ಹಣ ಡ್ರಾ ಮಾಡುವಾಗ 500 ರೂಪಾಯಿ ಮುಖ ಬೆಲೆಯ ಹರಿದ, ತುಂಡಾದ ಅಥವಾ ತೇಪೆ ಹಚ್ಚಿದ ನೋಟುಗಳು ಬರುತ್ತಿವೆ. ಹರಿದ ನೋಟುಗಳಿಂದ ಗ್ರಾಹಕರು ಕಂಗಾಲಾಗಿದ್ದು, ಕೈಯಲ್ಲಿ ಹಣವಿದ್ದರೂ ಪುನಃ ಬ್ಯಾಂಕಿಗೆ ಹೋಗಿ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ-ಮಲೆನಾಡು ಭಾಗದಲ್ಲಿ ಮನೆ ಕುಸಿತ

    ಸುತ್ತಲಿನ ಏಳೆಂಟು ಹಳ್ಳಿಯ ನಡುವೆ ಇದೊಂದೆ ಎಟಿಎಂ ಇರೋದರಿಂದ ಅದೆಷ್ಟೇ ಬಾರಿ ಈ ಬಗ್ಗೆ ಬ್ಯಾಂಕ್‍ನವರಿಗೆ ಹೇಳಿದರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳಿಯರು ಹೇಳುತ್ತಿದ್ದಾರೆ. ಡಂಬಳ ಎಟಿಎಂ ಹೊರತು ಪಡಿಸಿದರೆ 27 ಕಿಲೋಮೀಟರ್ ಗದಗ ಬರಬೇಕು ಇಲ್ಲವೇ 24 ಕಿಲೋಮೀಟರ್ ಮುಂಡರಗಿಗೆ ಹೋಗಬೇಕು. ಹೀಗಾಗಿ ಗ್ರಾಮೀಣ ಜನರಿಗಾಗುವ ಈ ಸಮಸ್ಯೆ ಬಗೆಹರಿಸಿ ಅಂತ ಸಾರ್ವಜನಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ವಿಶ್ವ ನಾಯಕರ ಪೈಕಿ ಶೇ.66 ಅಂಕದೊಂದಿಗೆ ಮೋದಿ ನಂಬರ್ 1

  • ಎಟಿಎಂಗೆ ಕನ್ನ- 17.50 ಲಕ್ಷ ಎಗರಿಸಿದ ಖದೀಮರು

    ಎಟಿಎಂಗೆ ಕನ್ನ- 17.50 ಲಕ್ಷ ಎಗರಿಸಿದ ಖದೀಮರು

    ಮಂಡ್ಯ: ಕೊರೊನಾ ನಿಯಂತ್ರಣ ಮಾಡೋದಕ್ಕೆ ರಾಜ್ಯ ಸರ್ಕಾರ ಲಾಕ್‍ಡೌನ್ ಜಾರಿಗೊಳಿಸಿದೆ. ಆದರೆ ಜಿಲ್ಲೆಯಲ್ಲೊಂದು ಕಳ್ಳರ ಗ್ಯಾಂಗ್ ಲಾಕ್‍ಡೌನ್ ಅನ್ನೇ ಬಂಡವಾಳ ಮಾಡಿಕೊಂಡು ಎಟಿಎಂ ಯಂತ್ರದಲ್ಲಿದ್ದ ಬರೋಬರಿ 17.50 ಲಕ್ಷ ರೂ. ಹಣವನ್ನು ಕಳವು ಮಾಡಿದೆ.

    ಮದ್ದೂರಿನ ಸರ್ಕಲ್‍ನಲ್ಲಿ ಎಸ್.ಬಿ.ಐ ಎಟಿಎಂ ಕೇಂದ್ರದ ಮುಂಭಾಗ ಇದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಗ್ಯಾಸ್ ಕಟ್ಟರ್ ನಿಂದ ಸುಟ್ಟು, ಬಳಿಕ ಒಳ ನುಗ್ಗಿ ಎಟಿಎಂ ಯಂತ್ರವನ್ನು ಗ್ಯಾಸ್ ಕಟ್ಟರ್ ನಿಂದ ತುಂಡರಿಸಿ 17.50 ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸ್ಥಳಕ್ಕೆ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಅಶ್ಚಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಮಳವಳ್ಳಿ ಡಿವೈಎಸ್ಪಿ ಲಕ್ಷ್ಮಿ ನಾರಾಯಣ್ ಪ್ರಸಾದ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದ್ದು, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

  • ಎಟಿಎಂ ಹಣ ತುಂಬುವ ವಾಹನದಲ್ಲಿನ 75 ಲಕ್ಷ ಕಳವು- ಸಿಕ್ಕಿಬಿದ್ರೆ ಬಾಯ್ಬಿಡ್ತಾನೆಂದು ಹಣ ಕದ್ದವನನ್ನೇ ಕೊಂದ್ರು

    ಎಟಿಎಂ ಹಣ ತುಂಬುವ ವಾಹನದಲ್ಲಿನ 75 ಲಕ್ಷ ಕಳವು- ಸಿಕ್ಕಿಬಿದ್ರೆ ಬಾಯ್ಬಿಡ್ತಾನೆಂದು ಹಣ ಕದ್ದವನನ್ನೇ ಕೊಂದ್ರು

    – ಹಣ ಹಂಚಿಕೆ ವೇಳೆ ಪ್ಲಾನ್ ಮಾಡಿ ಕೊಲೆ

    ಬೆಂಗಳೂರು: ವಿವಿಧ ಬ್ಯಾಂಕ್ ಗಳಲ್ಲಿ ಸೆಕ್ಯುರಿಟಿ ಗಾರ್ಡ್ ಮತ್ತು ಡ್ರೈವರ್ ಗಳಾಗಿದ್ದ ನಾಲ್ವರು ಸ್ನೇಹಿತರು ಏನಾದರೂ ಮಾಡಿ ಲಕ್ಷ ಲಕ್ಷ ಹಣ ಮಾಡಬೇಕು ಎಂದು ಪ್ಲಾನ್ ಮಾಡಿದ್ದು, ಎಟಿಎಂಗಳಿಗೆ ಹಣ ತುಂಬುವ ವಾಹನದಲ್ಲಿನ ದುಡ್ಡನೇ ಕದಿಯಲು ಪ್ಲಾನ್ ಮಾಡಿದ್ದಾರೆ, ಯಶಸ್ವಿ ಸಹ ಆಗಿದ್ದಾರೆ. ಆದರೆ ಸಿಕ್ಕಿಬೀಳುವ ಭಯದಲ್ಲಿ ಹಣ ಕದ್ದವನನ್ನೇ ಕೊಲೆ ಮಾಡಿದ್ದಾರೆ.

    ನಗರದ ನಾಗವಾರದ ಬಳಿ ಎಟಿಎಂ ವಾಹನದಿಂದ ಹಣ ಕದ್ದೊಯ್ದಿದ್ದು, ಸಕಲೇಶಪುರದ ಬ್ಯುಟಿ ಸ್ಪಾಟ್ ಬಳಿ ಅಬ್ದುಲ್‍ನನ್ನು ಕೊಲೆ ಮಾಡಿದ್ದಾರೆ. ಪ್ರಕರಣರದ ಬೆನ್ನು ಹತ್ತಿದ ಗೋವಿಂದಪುರ ಪೊಲೀಸರು ಮಹೇಶ್, ಮಧುಸೂದನ್, ಪ್ರಸನ್ನ ಹಾಗೂ ಕುಮಾರ್ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಚಿನ್ನಾಭರಣ, ವಾಹನಗಳು ಸೇರಿ ಹದಿನೈದು ಲಕ್ಷ ರೂ. ನಗದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಈ ಭಯಾನಕ ಸತ್ಯವನ್ನು ಬಹಿರಂಗಪಡಿಸಿದ್ದಾರೆ.

    ಸಿಕ್ಕಿಬೀಳುವ ಭಯದಲ್ಲಿ ಕೊಲೆ
    ಅಕ್ಸಿಸ್ ಬ್ಯಾಂಕ್ ನ ಎಟಿಎಂ ವಾಹನದಲ್ಲಿ ಡ್ರೈವರ್ ಆಗಿದ್ದ ಅಬ್ದುಲ್, ನಾನು ಹಣ ಕಳವು ಮಾಡುತ್ತೇನೆ, ನೀವು ನನಗೆ ಸಪೋರ್ಟ್ ಮಾಡಿ ಸಾಕು ಎಂದಿದ್ದ. ಅಬ್ದುಲ್ ನ ಮಾತಿನಂತೆ ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗವಾರದ ಅಕ್ಸಿಸ್ ಬ್ಯಾಂಕ್ ನ ಎಟಿಎಂ ಗೆ ಹಣ ತುಂಬುವ ವೇಳೆ ಅದೇ ವಾಹನದ ಚಾಲಕ ಅಬ್ದುಲ್ ಬರೋಬ್ಬರಿ 75 ಲಕ್ಷ ರೂ. ಹಣ ಎತ್ಕೊಂಡು ಎಸ್ಕೇಪ್ ಆಗಿದ್ದ.

    ಹಣ ಸಿಕ್ಕ ತಕ್ಷಣ ಮಹೇಶ್, ಮಧುಸೂದನ್, ಪ್ರಸನ್ನ ಹಾಗೂ ಕುಮಾರ್ ಚಾಲಕ ಅಬ್ದುಲ್ ಜೊತೆಗೂಡಿದ್ದಾರೆ. ಬಳಿಕ ಎಲ್ಲರೂ ಚಿಕ್ಕಮಗಳೂರು, ಶಿವಮೊಗ್ಗ ಅಂತೆಲ್ಲಾ ಸುತ್ತಾಡಿ, ಸಕಲೇಶಪುರದ ಬ್ಯುಟಿ ಸ್ಪಾಟ್ ಬಳಿ ಕೂತು ಹಣ ಹಂಚಿಕೆ ಶುರು ಮಾಡಿದ್ದರು. ಈ ವೇಳೆ ಪೊಲೀಸರಿಗೆ ಡ್ರೈವರ್ ಅಬ್ದುಲ್ ಕಳವಿನ ಬಗ್ಗೆ ಮಾಹಿತಿ ಸಿಕ್ಕಿದೆ. ಇದನ್ನು ಅರಿತ ಇತರೆ ಸಹಚರರು, ಇವತ್ತಲ್ಲಾ ನಾಳೆ ಅಬ್ದುಲ್ ಸಿಕ್ಕಿಬೀಳುತ್ತಾನೆ ಆಗ ನಾವೆಲ್ಲರೂ ಒಟ್ಟಿಗೆ ಸಿಕ್ಕಿಬೀಳುತ್ತೇವೆ. ಹೀಗಾಗಿ ಅಬ್ದುಲ್ ನನ್ನೇ ಕೊಲೆ ಮಾಡಿದರೆ ನಾವ್ಯಾರು ಸಿಕ್ಕಿಬಿಳಲ್ಲ, ಅರಾಮಾಗಿ ಹಣದೊಂದಿಗೆ ಸೆಟಲ್ ಆಗಬಹುದು ಎಂದು ಪ್ಲಾನ್ ಮಾಡಿದ್ದರು.

    ಅದರಂತೆ ಅಬ್ದುಲ್ ನನ್ನ ಬ್ಯುಟಿ ಸ್ಪಾಟ್ ಬಳಿಯೇ ಕಟ್ಟಿಗೆಗಳಿಂದ ಹಲ್ಲೆ ಮಾಡಿ ಘಾಟಿಯಿಂದ ಕೆಳಗೆ ಎಸೆದು ಕೊಲೆ ಮಾಡಿದ್ದರು. ಈ ಸಂಬಂಧ ಆರೋಪಿಗಳ ಬೆನ್ನುಬಿದ್ದಿದ್ದ ಗೋವಿಂದಪುರ ಪೊಲೀಸರು, ಹಣದೊಂದಿಗೆ ಕೆ.ಆರ್.ಪೇಟೆಯಲ್ಲಿ ತಲೆಮರಿಸಿಕೊಂಡಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಬಳಿಕ ಆರೋಪಿಗಳು ಹಣ ಕದ್ದಿರುವುದು ಹಾಗೂ ಕೊಲೆಯ ಕುರಿತು ಬಾಯ್ಬಿಟ್ಟಿದ್ದಾರೆ.

  • ಎಟಿಎಂ ದರೋಡೆಗೆ ಯತ್ನ – ಸೈರನ್‌ ಕೇಳಿ ಖದೀಮರು ಪರಾರಿ

    ಎಟಿಎಂ ದರೋಡೆಗೆ ಯತ್ನ – ಸೈರನ್‌ ಕೇಳಿ ಖದೀಮರು ಪರಾರಿ

    ಮಂಡ್ಯ: ಎಟಿಎಂನಲ್ಲಿ ದರೋಡೆಗೆ ಯತ್ನದ ವೇಳೆ ಕೊಠಡಿಯಲ್ಲಿದ್ದ ಸೈರನ್‌ ಮೊಳಗಿದ ಪರಿಣಾಮ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಕಳೆದ ರಾತ್ರಿ ನಡೆದಿದೆ.

    ಬಸ್ ನಿಲ್ದಾಣದಲ್ಲಿರುವ ಆಕ್ಸಿಸ್ ಬ್ಯಾಂಕ್‌ನ ಎಟಿಎಂನಲ್ಲಿ ದರೋಡೆ ಮಾಡಲು ದುಷ್ಕರ್ಮಿಗಳು ಕಳೆದ ಮಧ್ಯರಾತ್ರಿ ಬಂದಿದ್ದಾರೆ. ಎಟಿಎಂ ಬಳಿ ಸೆಕ್ಯೂರಿಟಿ ಇಲ್ಲದ ಕಾರಣ ನೇರವಾಗಿ ಎಟಿಎಂ ಒಳಗಡೆಗೆ ನುಗ್ಗಿದ್ದಾರೆ. ನಂತರ ಎಟಿಎಂ ಯಂತ್ರದಲ್ಲಿ ಹಣ ಬರುವ ಸ್ಥಳವನ್ನು ಕೊರೆಯಲು ಮುಂದಾಗಿದ್ದಾರೆ.

     

    ಈ ವೇಳೆ ಕೊರೆಯಲು ಸಾಧ್ಯವಾಗದ ಕಾರಣ ಮಷಿನ್‌ನನ್ನು ಒಡೆಯಲು ಮುಂದಾಗಿದ್ದಾರೆ. ಮಷಿನ್‌ಗೆ ಜೋರಾಗಿ ಒಡೆದ ಕಾರಣ ಎಟಿಎಂ ಕೊಠಡಿಯಲ್ಲಿ ಇದ್ದ ಸೈರನ್‌ ಕೂಗಿಕೊಂಡಿದೆ. ಇದರಿಂದ ಗಾಬರಿಗೊಂಡ ಖದೀಮರು ಸ್ಥಳದಿಂದ ಪರಾರಿಯಾಗಿದ್ದಾರೆ. ಶ್ರೀರಂಗಪಟ್ಟಣ ಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಎಟಿಎಂ ಮಷಿನ್‍ನನ್ನೇ ಹೊತ್ತೊಯ್ದ ಖದೀಮರು

    ಎಟಿಎಂ ಮಷಿನ್‍ನನ್ನೇ ಹೊತ್ತೊಯ್ದ ಖದೀಮರು

    ಚೆನ್ನೈ: ಎಟಿಎಂಗೆ ನುಗ್ಗಿ ಕಳ್ಳತನ ಮಾಡಲು ಯತ್ನಿಸಿದ ನಾಲ್ವರ ಗ್ಯಾಂಗ್ ಎಟಿಎಂ ಮಷಿನ್ ಅನ್ನೇ ಹೊತ್ತೊಯ್ದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಮುಂಜಾನೆ ಸುಮಾರಿಗೆ ಮುಖವಾಡ ಧರಿಸಿದ್ದ ನಾಲ್ವರು ತಿರುಪ್ಪೂರಿನ ಬ್ಯಾಂಕ್ ಆಫ್ ಬರೋಡಾ ಎಟಿಎಂಗೆ ನುಗ್ಗಿದ್ದಾರೆ. ಈ ವೇಳೆ ಹಣ ತೆಗೆಯಲು ಸಾಧ್ಯವಾಗದೆ ಇದ್ದಾಗ ಮಷಿನ್‍ನನ್ನೇ ಎತ್ತಿಕೊಂಡು ಪರಾರಿಯಾಗಿದ್ದಾರೆ.

    ಎಟಿಎಂಗೆ ಹಣ ತೆಗೆದಯಲು ಬಂದು ನೋಡಿದ ಸ್ಥಳೀಯರಿಗೆ ಎಟಿಎಂ ಕಳ್ಳತನವಾಗಿರುವುದು ತಿಳಿದಿದೆ. ಮಷಿನ್ ಇಲ್ಲದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕಳೆದ 2 ವರ್ಷಗಳಿಂದ ರಾತ್ರಿ ಪಾಳಿಯಲ್ಲಿ ಯಾರೋಬ್ಬರು ಎಟಿಎಂಗೆ ಭದ್ರತೆ ನೀಡುತ್ತಿಲ್ಲ. ಹಾಗಾಗಿಯೇ ಈ ಕೃತ್ಯ ನಡೆದಿದೆ ಎಂದು ಬ್ಯಾಂಕ್ ಆರೋಪಿಸಿದೆ. ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ಕಳ್ಳರಿಗಾಗಿ ಬಲೆ ಬಿಸಿದ್ದಾರೆ.