Tag: atm

  • ಎಟಿಎಂಗೆ ಹಣ ಹಾಕು ಅಂತ ಕೊಟ್ಟರೆ, ಹಣದೊಂದಿಗೆ ಎಸ್ಕೇಪ್ ಆದ ಭೂಪ

    ಎಟಿಎಂಗೆ ಹಣ ಹಾಕು ಅಂತ ಕೊಟ್ಟರೆ, ಹಣದೊಂದಿಗೆ ಎಸ್ಕೇಪ್ ಆದ ಭೂಪ

    ಬಳ್ಳಾರಿ: ಎಟಿಎಂಗೆ ಹಾಕಬೇಕಿದ್ದ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಬಳ್ಳಾರಿಯ ಬ್ರೂಸ್ ಪೇಟ್ ಪೊಲೀಸರು ಬಂಧಿಸಿದ್ದಾರೆ.

    ಸಿಎಂಎಸ್ ಕಂಪನಿಯಲ್ಲಿ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ ನೀಲಕಂಠ ಬಂಧಿತ ಆರೋಪಿ. ನೀಲಕಂಠನಿಗೆ ಕರ್ಣಾಟಕ ಬ್ಯಾಂಕ್‍ನವರು, ಕರ್ಣಾಟಕ ಬ್ಯಾಂಕ್ ಎಟಿಎಂಗಳಿಗೆ ಹಣ ಹಾಕಲು ಸುಮಾರು 50.18 ಲಕ್ಷ ಹಣ ನೀಡಿದ್ದರು. ನೀಲಕಂಠ ಎಟಿಎಂಗೆ ಹಾಕಲು ಕೊಟ್ಟಿದ್ದ ಹಣದ ಜೊತೆಯಲ್ಲಿ ಎಟಿಎಂನಲ್ಲಿ ಇದ್ದ 6 ಲಕ್ಷ ರೂ. ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದ. ಒಟ್ಟು 56.18 ಲಕ್ಷ ಕದ್ದು ಎಸ್ಕೇಪ್ ಆಗಿದ್ದ. ಇದನ್ನೂ ಓದಿ: ಜಮೀನು ವಿವಾದ – ಕಾರ್ಮಿಕನ ಕಾಲಿನ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ

    ಘಟನೆಯು ಶನಿವಾರ ನಡೆದಿದ್ದು, ಪ್ರಕರಣ ನಡೆದ 24 ಗಂಟೆಯಲ್ಲಿ ಖಚಿತ ಮಾಹಿತಿ ಮೇರೆಗೆ, ಆರೋಪಿಯನ್ನು ಕೊಪ್ಪಳದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕದ್ದ ಹಣದಲ್ಲಿ ನೀಲಕಂಠ ಒಂದು ಮೊಬೈಲ್ ತೆಗೆದುಕೊಂಡಿದ್ದು, ಮೊಬೈಲ್ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆದಿದ್ದಾರೆ.

  • ಶೀಘ್ರದಲ್ಲೇ ಎಟಿಎಂಗಳಲ್ಲಿ QR Code ಸ್ಕ್ಯಾನ್ ಮಾಡಿ ಹಣ ಪಡೆಯಿರಿ

    ಶೀಘ್ರದಲ್ಲೇ ಎಟಿಎಂಗಳಲ್ಲಿ QR Code ಸ್ಕ್ಯಾನ್ ಮಾಡಿ ಹಣ ಪಡೆಯಿರಿ

    ಮುಂಬೈ: ಡಿಜಿಟಲೀಕರಣಕ್ಕೆ ಪುಷ್ಠಿ ನೀಡುವ ಮತ್ತೊಂದು ಮಹತ್ವದ ಯೋಜನೆಯನ್ನು ಆರ್‌ಬಿಐ ಶೀಘ್ರದಲ್ಲೇ ಚಾಲ್ತಿಗೆ ತರಲಿದೆ. ಖಾತೆದಾರರು ಎಟಿಎಂಗಳಲ್ಲಿ ಕಾರ್ಡ್‍ಗಳನ್ನು ಬಳಸಿ ಹಣ ಪಡೆಯವ ಸಂಪದ್ರಾಯವಿದೆ. ಅದರ ಬದಲಿಗೆ ಮೊಬೈಲ್‍ಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಎಟಿಎಂಗಳಿಂದಲೂ ಹಣವನ್ನು ಪಡೆಯಬಹುದಾದ ಯೋಜನೆ ಕೆಲವೇ ದಿನಗಳಲ್ಲಿ ಬರಲಿದೆ.

    ಡಿಜಿಟಲ್ ಯುಗದಲ್ಲಿ ಎಟಿಎಂಗಳಲ್ಲಿ ಕಾರ್ಡ್ ಇಲ್ಲದೇ ಮೊಬೈಲ್ ಮೂಲಕವಾಗಿ ಅಂದರೆ ಗೂಗಲ್ ಪೇ, ಫೋನ್ ಪೇ, ಪೇಟಿಎಂಗಳನ್ನು ಬಳಸಿಕೊಂಡು ಹಣವನ್ನು ಪಡೆಯಬಹುದಾಗಿದೆ. ಇದರ ಜೊತೆಗೆ ಇದೀಗ ನೂತನ ಯೋಜನೆಯನ್ನು ತರುವ ಆಲೋಚನೆಯನ್ನು ಹೊಂದಿದೆ. ಇದರ ಪ್ರಕಾರವಾಗಿ ಎಟಿಎಂಗಳಲ್ಲಿ ಹಣ ಪಡೆಯಲು ಕಾರ್ಡ್‍ಗಳಿಲ್ಲದೇ ಈ ನೂತನ ಆಯ್ಕೆಯನ್ನು ಒದಗಿಸುವಂತೆ ಬ್ಯಾಂಕ್‍ಗಳು ಹಾಗೂ ಎಟಿಎಂ ಆಪರೇಟರ್‌ಗಳನ್ನು ಆರ್‌ಬಿಐ ಕೇಳಿದೆ. ಈಗಾಗಲೇ ಹಲವು ಬ್ಯಾಂಕ್‍ಗಳು ಮೊಬೈಲ್ ಆ್ಯಪ್‍ಗಳನ್ನು ಉಪಯೋಗಿಸಿಕೊಂಡು ಎಟಿಎಂಗಳಲ್ಲಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಇಲ್ಲದೇ ಹಣವನ್ನು ಪಡೆಯುವ ಅವಕಾಶವನ್ನು ಗ್ರಾಹಕರಿಗೆ ನೀಡಿದೆ.

    ಯಾಕೆ ಕ್ಯೂ ಆರ್ ಕೋಡ್?: ಜಾಗತಿಕ ಚಿಪ್‍ಗಳ ಕೊರತೆಯಿಂದಾಗಿ ಕಾರ್ಡ್ ವಿತರಣೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಇದರಿಂದಾಗಿ ಅನೇಕ ಬಾರಿ ಕಾರ್ಡ್ ವಿತರಣೆಯು ವಿಳಂಬವಾಗುತ್ತದೆ. ಇದರಿಂದಾಗಿ ಮೊಬೈಲ್ ಫೋನ್‍ಗಳಲ್ಲಿ ಕ್ಯೂ ಆರ್ ಕೋಡ್‍ನ್ನು ಬಳಸುವಾಗ ಕಾರ್ಡ್‍ಗಳನ್ನು ಮರುಪಡೆಯಲು ಸಹಾಯವಾಗುತ್ತದೆ.

    ಈ ಹಿಂದೆ ಕಾರ್ಡ್‍ಗಳಲ್ಲಿ ಪಿನ್‍ಕೋಡ್ ಕೋಡ್ ನೀಡದೇ ಎಟಿಎಂ ಮೂಲಕ ಹಣವನ್ನು ಪಡೆಯುವ ಅವಕಾಶವನ್ನು ನೀಡುತ್ತು. ಆದರೆ ಅದು ಅಷ್ಟೊಂದು ಭದ್ರತೆಯನ್ನು ಹೊಂದಿರಲಿಲ್ಲ. ಆದರೆ ನೂತನ ಮೂಬೈಲ್ ಮೂಲಕ ಹಣ ತೆಗೆಯುವ ಆಯ್ಕೆಯು ಹೆಚ್ಚು ಭದ್ರತೆಯನ್ನು ಹೊಂದಿದೆ ಹಾಗೂ ಸುರಕ್ಷತೆಯನ್ನು ಹೊಂದಿದೆ. ಇದನ್ನೂ ಓದಿ: ಜನರ ದುಡ್ಡಲ್ಲಿ ಜನಪ್ರತಿನಿಧಿಗಳ ಜಾತ್ರೆ – ಕಡಿಮೆ ದರದ ಪ್ಲಾನ್ ಇದ್ದರೂ ಸಾವಿರಾರು ರೂ. ಫೋನ್ ಬಿಲ್!

    ಕ್ಯೂಆರ್ ಕೋಡ್‍ಗಳ ಮೂಲಕ ಹಣವನ್ನು ಪಡೆಯುವುದರಿಂದ ಡಿಜಿಟಲ್ ಇಂಡಿಯಾಕ್ಕೆ ಮತ್ತೊಂದು ಶಕ್ತಿ ನೀಡಿದಂತಾಗುತ್ತದೆ. ಕ್ಯೂಆರ್ ಸ್ಕ್ಯಾನ್ ಮಾಡಲು ಬ್ಯಾಂಕುಗಳಿಗೆ ಕಷ್ಟದ ಕೆಲಸವಲ್ಲ. ಈಗ ಇರುವ ಸಾಫ್ಟ್‌ವೇರ್ ಅಪ್‍ಡೇಟ್ ಮಾಡಿದರೆ ಸಾಕಾಗುತ್ತದೆ. ಹೀಗಾಗಿ ಶೀಘ್ರವೇ ಇದು ಜಾರಿಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಎಸ್‍ಬಿಐನಲ್ಲಿ 10 ಸಾವಿರಕ್ಕೂ ಹೆಚ್ಚು ಹಣ ಡ್ರಾ ಮಾಡಲು OTP ಅಪ್ಲೈ

  • ಎಸ್‍ಬಿಐನಲ್ಲಿ 10 ಸಾವಿರಕ್ಕೂ ಹೆಚ್ಚು ಹಣ ಡ್ರಾ ಮಾಡಲು OTP ಅಪ್ಲೈ

    ಎಸ್‍ಬಿಐನಲ್ಲಿ 10 ಸಾವಿರಕ್ಕೂ ಹೆಚ್ಚು ಹಣ ಡ್ರಾ ಮಾಡಲು OTP ಅಪ್ಲೈ

    ಬೆಂಗಳೂರು: ಆಧುನಿಕತೆ, ತಂತ್ರಜ್ಞಾನ ಬೆಳೆದಂತೆ ಆನ್‍ಲೈನ್ ವಂಚನೆ ಕೂಡ ಹೆಚ್ಚಾಗುತ್ತಿದೆ. ಬ್ಯಾಂಕ್ ಪಾಸ್, ಎಟಿಎಂ ಮೂಲಕ ಹಣ ಡ್ರಾ ವಿಚಾರದಲ್ಲೂ ಸಾಕಷ್ಟು ತೊಂದರೆ ಜೊತೆಗೆ ಮೋಸವಾಗಿರುವುದು ಕೂಡ ವರದಿ ಆಗಿವೆ. ಹೀಗಾಗಿ ಎಟಿಎಂ ವಹಿವಾಟಿನಲ್ಲಿ ಹೆಚ್ಚು ಸುರಕ್ಷತೆ ತರಲು ಎಸ್‍ಬಿಐ ಹೊಸ ನಿಯಮ ಜಾರಿಗೆ ತಂದಿದೆ. ಎಟಿಎಂ ಹಣ ಡ್ರಾ ನಿಯಮಗಳಲ್ಲಿ ಬದಲಾವಣೆ ತಂದಿದೆ. ಎಸ್‍ಬಿಐ ಎಟಿಯಂನಲ್ಲಿ ಹಣ ಡ್ರಾ ಮಾಡಲು ಓಟಿಪಿ ನಿಯಮ ಜಾರಿಗೆ ತಂದಿದೆ.

    ಹೌದು, ಎಟಿಎಂ ಮೂಲಕ ಜನ ಒಮ್ಮೆಗೆ 20 ರಿಂದ 25 ಸಾವಿರ ಡ್ರಾ ಮಾಡುತ್ತಿದ್ದರು. ಮಧ್ಯರಾತ್ರಿಯಲ್ಲಿ ಬೇರೆ ಅವರ ಎಟಿಎಂ ಕಾರ್ಡ್ ಕದ್ದು ಹಣ ಡ್ರಾ ಮಾಡಿದರೂ ಗೊತ್ತಾಗುತ್ತಿರಲಿಲ್ಲ. ಆದರೀಗ ಮಧ್ಯರಾತ್ರಿಯಲ್ಲಿ ಬೇರೆ ಅವರ ಎಟಿಎಂ ಕಾರ್ಡ್ ಕದ್ದರು ಹಣ ಡ್ರಾ ಮಾಡುವುದು ಕಷ್ಟ. ಕಾರಣ ಎಸ್‍ಬಿಐ ಹೊಸ ನಿಯಮ. ಎಸ್‍ಬಿಐ ಎಟಿಎಂನಿಂದ ಹಣವನ್ನು ಪಡೆಯಲು ಓಟಿಪಿ ನಂಬರ್ ಅನ್ನು ನಮೂದಿಸಬೇಕು. ಈಗ ಹೊಸ ನಿಯಮದ ಪ್ರಕಾರ ಗ್ರಾಹಕರು ಓಟಿಪಿ ಇಲ್ಲದೇ ನಗದು ಹಿಂಪಡೆಯುವಂತಿಲ್ಲ. ನಗದು ಹಿಂಪಡೆಯುವ ಸಮಯದಲ್ಲಿ, ಗ್ರಾಹಕರು ತಮ್ಮ ಮೊಬೈಲ್ ಫೋನ್‍ನಲ್ಲಿ ಓಟಿಪಿ ನಂಬರ್ ಅನ್ನು ಪಡೆಯುತ್ತಾರೆ, ಅದನ್ನು ನಮೂದಿಸಿದ ನಂತರವೇ ಎಟಿಎಂನಿಂದ ಹಣ ಹಿಂಪಡೆಯಲಾಗುತ್ತದೆ. ಡ್ರಾ ಮಾಡುತ್ತೇನೆ ಅಂದರೆ ಓಟಿಪಿಯನ್ನು ನಮೂದಿಸಬೇಕಾಗುತ್ತದೆ. ಮಾಡಬೇಕಾಗುತ್ತದೆ. ಇದನ್ನೂ ಓದಿ: ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲೇ ಮಾತನಾಡಿದ ಕನ್ನಡಿಗ ಸಂಸದ ಚಂದ್ರ ಆರ್ಯ

    ಹೊಸ ನಿಯಮ ಏನು? ಜನ ಏನು ಮಾಡಬೇಕು?
    * ಎಸ್‍ಬಿಐ ಎಟಿಎಂ ನಿಂದ ಹಣ ಪಡೆಯಲು ಓಟಿಪಿ ನಮೂದು ಮಾಡಬೇಕು
    * ಬ್ಯಾಂಕ್ ಅಕೌಂಟ್‍ಗೆ ಕೊಟ್ಟಿರುವ ನಂಬರ್ ಓಟಿಪಿ ಬರುತ್ತದೆ
    * ನಾಲ್ಕು ಅಂಕಿಗಳ ಓಟಿಪಿ ಮೊಬೈಲ್‍ಗೆ ಬರಲಿದೆ
    * ನಗದು ಪಡೆಯಲು ಬ್ಯಾಂಕ್‍ಗೆ ನೀಡಿರುವ ಮೊಬೈಲ್ ನಂಬರ್‍ಗೆ ಬಂದ ಓಟಿಪಿಯನ್ನು ನಮೂದಿಸಬೇಕು

    MONEY

    ಈ ನಿಯಮಗಳು ಏಕೆ?
    * ಗ್ರಾಹಕರನ್ನು ವಂಚನೆಯಿಂದ ರಕ್ಷಿಸಲು ಈ ನಿಯಮ ಜಾರಿ
    * ಎಟಿಎಂ ವಹಿವಾಟಿನಲ್ಲಿ ಈ ಸುರಕ್ಷತೆ ತರಲು ಈ ನಿಯಮ ಜಾರಿ

    ಒಟ್ಟಾರೆ ಎಟಿಎಂ ಗ್ರಾಹಕರಿಗೆ ಎಸ್‍ಬಿಐ ಹೊಸ ನಿಯಮ ಜಾರಿ ಮಾಡಿದೆ. ಈ ನಿಯಮದ ಪ್ರಕಾರ ಸುರಕ್ಷತೆಯನ್ನು ಕಾಪಾಡಬಹುದು ಅಂತ ಹೇಳಲಾಗುತ್ತಿದೆ. ಎಟಿಎಂ ಬಳಕೆದಾರರಿಗೆ ಈ ನಿಯಮದಿಂದ ಎಷ್ಟು ಸುರಕ್ಷತೆ ಇರುತ್ತದೆ ಮತ್ತು ಹೇಗೆ ಇದಕ್ಕೆ ಹೊಂದಿಕೊಂಡು ಹೋಗುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮಳೆಯಿಂದ ಸಂಭವಿಸಿದ ಅವಾಂತರಗಳೇನು?

  • ಜೆಸಿಬಿ ನುಗ್ಗಿಸಿ ಎಟಿಎಂ ಎಗರಿಸಿಕೊಂಡು ಹೋಗಲು ದರೋಡೆಕೋರರಿಂದ ವಿಫಲ ಯತ್ನ!

    ಜೆಸಿಬಿ ನುಗ್ಗಿಸಿ ಎಟಿಎಂ ಎಗರಿಸಿಕೊಂಡು ಹೋಗಲು ದರೋಡೆಕೋರರಿಂದ ವಿಫಲ ಯತ್ನ!

    ಮುಂಬೈ: ಜೆಸಿಬಿಯನ್ನೇ ನುಗ್ಗಿಸಿ ದರೋಡೆಕೋರರು ಎಟಿಎಂ ಎಗರಿಸಿಕೊಂಡು ಹೋಗಲು ವಿಫಲ ಯತ್ನ ನಡೆಸಿದ ಅಚ್ಚರಿಯ ಘಟನೆಯೊಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ.

    ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಅರಗ್ ಎಂಬಲ್ಲಿ ಈ ಘಟನೆ ನಡೆದಿದೆ. ಜೆಸಿಬಿಯಿಂದ ಎಟಿಎಂ ಕಳವುಗೈಯುತ್ತಿರುವ ದೃಶ್ಯ ಅಲ್ಲಿಯೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಸ್ವಾಮೀಜಿಗೆ ಜಾಮೀನು

    ವೀಡಿಯೋದಲ್ಲಿ ರಾತ್ರಿ ವೇಳೆ ದರೋಡೆಕೋರರು ಜೆಸಿಬಿಯನ್ನು ಎಟಿಎಂ ಕೇಂದ್ರಕ್ಕೆ ನುಗ್ಗಿಸಿದ್ದಾರೆ. ನಂತರ ಎಟಿಎಂ ಮೆಷಿನ್ ಅನ್ನು ಜೆಸಿಬಿಯಿಂದ ಎಳೆದಿದ್ದಾರೆ. ಈ ವೇಳೆ ಆದ ಸದ್ದಿನಿಂದ ಎಚ್ಚರಗೊಂಡ ಸ್ಥಳೀಯ ನಿವಾಸಿಗಳು ಎಚ್ಚರಗೊಂಡು ಸ್ಥಳಕ್ಕೆ ಧಾವಿಸಿದ್ದಾರೆ. ಇದರಿಂದ ಗಾಬರಿಗೊಂಡ ಖದೀಮರು ಎಟಿಎಂ ಬಿಟ್ಟು ಜೆಸಿಬಿ ಸಮೇತ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಗ್ರಾಮಸ್ಥರ ಮಾಹಿತಿ ಅಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಕಳ್ಳರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಚುನಾವಣೆವರೆಗೆ ಕಾದು ನೋಡಿ..- ಆಪರೇಷನ್ ಕಮಲ ಸುಳಿವು ಕೊಟ್ಟ ಕಟೀಲ್

     

  • ಶೀಘ್ರದಲ್ಲೇ ಎಲ್ಲಾ ಬ್ಯಾಂಕ್‌ಗಳ ATMಗಳಲ್ಲಿ ಕಾರ್ಡ್ ರಹಿತ ಹಣ ಹಿಂಪಡೆಯುವ ಸೌಲಭ್ಯ ಜಾರಿ: RBI

    ಶೀಘ್ರದಲ್ಲೇ ಎಲ್ಲಾ ಬ್ಯಾಂಕ್‌ಗಳ ATMಗಳಲ್ಲಿ ಕಾರ್ಡ್ ರಹಿತ ಹಣ ಹಿಂಪಡೆಯುವ ಸೌಲಭ್ಯ ಜಾರಿ: RBI

    ಮುಂಬೈ: ಶೀಘ್ರದಲ್ಲೇ ಎಲ್ಲಾ ಬ್ಯಾಂಕ್‍ಗಳ ಎಟಿಎಂಗಳಲ್ಲಿ ಕಾರ್ಡ್ ಬಳಸದೆ ನಗದು ಹಿಂಪಡೆಯುವ ವ್ಯವಸ್ಥೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜಾರಿಗೆ ತರಲು ಮುಂದಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

    ಮುಂಬೈಯಲ್ಲಿ ಹಣಕಾಸು ನೀತಿ ಪರಾಮರ್ಶೆಯಲ್ಲಿ ವಿತ್ತೀಯ ನೀತಿಯ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಮಾಹಿತಿ ಹಂಚಿಕೊಂಡ ಅವರು, ಪ್ರಸ್ತುತ ಎಟಿಎಂ ಮೂಲಕ ಕಾರ್ಡ್ ರಹಿತವಾಗಿ ನಗದು ಹಿಂಪಡೆಯುವ ಸೌಲಭ್ಯವು ಕೆಲವು ಬ್ಯಾಂಕ್‍ಗಳಿಗೆ ಮಾತ್ರ ಸೀಮಿತವಾಗಿದೆ. ಯುಪಿಐ ಬಳಸಿಕೊಂಡು ಎಲ್ಲಾ ಬ್ಯಾಂಕ್‍ಗಳು ಮತ್ತು ಎಟಿಎಂ ನೆಟ್‍ವರ್ಕ್‍ಗಳಲ್ಲಿ ಕಾರ್ಡ್ ರಹಿತವಾಗಿ ಹಣ ಹಿಂಪಡೆಯುವ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈಗಾಗಲೇ ಚರ್ಚೆ ನಡೆಸಲಾಗಿದೆ. ಇದರಿಂದಾಗಿ ಕಾರ್ಡ್ ರಹಿತವಾಗಿ ವ್ಯವಹಾರ ನಡೆಸುವ ಮೂಲಕ ಕಾರ್ಡ್ ಸ್ಕಿಮ್ಮಿಂಗ್, ಕಾರ್ಡ್ ಕ್ಲೋನಿಂಗ್ ಮುಂತಾದ ವಂಚನೆಗಳನ್ನು ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈ ನಡುವೆ ಸರ್ಕಾರಗಳು ನ್ಯಾಯಾಂಗವನ್ನು ನಿಂದಿಸುವ ಪ್ರವೃತ್ತಿ ಆರಂಭಿಸಿವೆ: ಸಿಜೆಐ ಆಕ್ರೋಶ

    ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಬಳಕೆಯ ಮೂಲಕ ಗ್ರಾಹಕರ ದೃಢೀಕರಣವನ್ನು ಸಕ್ರಿಯಗೊಳಿಸಲು ಪ್ರಸ್ತಾಪಿಸಲಾಗಿದೆ. ಆದರೆ ಅಂತಹ ವಹಿವಾಟುಗಳು ಎಟಿಎಂ ನೆಟ್‍ವರ್ಕ್‍ಗಳ ಮೂಲಕ ನಡೆಯುತ್ತದೆ ಎಂದು ಅಭಿವೃದ್ಧಿ ಮತ್ತು ನಿಯಂತ್ರಣ ನೀತಿಗಳ ಹೇಳಿಕೆ ತಿಳಿಸಿದೆ. ಎನ್‍ಪಿಸಿಐ, ಎಟಿಎಂ ನೆಟ್‍ವರ್ಕ್‍ಗಳು ಮತ್ತು ಬ್ಯಾಂಕ್‍ಗಳಿಗೆ ಶೀಘ್ರದಲ್ಲೇ ಪ್ರತ್ಯೇಕ ಸೂಚನೆಗಳನ್ನು ನೀಡಲಾಗುವುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಏಪ್ರಿಲ್ 10 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಖಾಸಗಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಪಡೆಯಬಹುದು – ಆರೋಗ್ಯ ಇಲಾಖೆ

    ಶುಕ್ರವಾರ ಸತತ 11ನೇ ಬಾರಿಗೆ ರೆಪೋ ದರವನ್ನು ಶೇ. 4ರಷ್ಟು ಬದಲಾಯಿಸದೇ ಇಡಲು ನಿರ್ಧರಿಸಿದೆ. ರಿವರ್ಸ್ ರೆಪೋ ದರವನ್ನು ಕೂಡ ಯಥಾಸ್ಥಿತಿಯಲ್ಲಿ ಶೇ. 3.35ರಲ್ಲಿ ಇರಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷ 2022-23ಕ್ಕೆ ಇದು ಮೊದಲ ದ್ವೈಮಾಸಿಕ ಹಣಕಾಸು ನೀತಿಯಾಗಿದೆ. ಆರ್ಥಿಕತೆಯು ಹೊಸ ಮತ್ತು ಬೃಹತ್ ಸವಾಲುಗಳನ್ನು ಎದುರಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ರಷ್ಯಾ-ಉಕ್ರೇನ್ ಸಂಘರ್ಷ ಜಾಗತಿಕ ಆರ್ಥಿಕತೆಯನ್ನು ಹಳಿತಪ್ಪಿಸಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿಯೂ ಆರ್ಥಿಕ ಬಿಕ್ಕಟ್ಟು ತಲೆದೋರಲಿದೆ: ರಾಹುಲ್ ಗಾಂಧಿ

    ರೆಪೋ ದರವು ಕೇಂದ್ರೀಯ ಬ್ಯಾಂಕ್ ಅಂದರೆ ರಿಸರ್ವ್ ಬ್ಯಾಂಕ್ ಇತರ ಬ್ಯಾಂಕ್‍ಗಳಿಗೆ ನೀಡುವ ಸಾಲಕ್ಕೆ ಪಡೆಯುವ ಬಡ್ಡಿಯಾಗಿದೆ. ರಿವರ್ಸ್ ರೆಪೋ ದರವು ವಾಣಿಜ್ಯ ಬ್ಯಾಂಕ್‍ಗಳಿಂದ ಆರ್‌ಬಿಐ ತಾನು ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿಯಾಗಿದೆ. ಆರ್‌ಬಿಐ ರೆಪೋ ದರವನ್ನು ಮೇ 2020ರಿಂದ ದಾಖಲೆಯ ಕನಿಷ್ಠ ಮಟ್ಟದಲ್ಲಿ ಇರಿಸಿದೆ.

  • ಬ್ಯಾಂಕ್, ಎಟಿಎಂ ಬಾಗಿಲಿನಲ್ಲಿ ಮಲ ವಿಸರ್ಜನೆ ಮಾಡಿ ವಿಕೃತಿ

    ಬ್ಯಾಂಕ್, ಎಟಿಎಂ ಬಾಗಿಲಿನಲ್ಲಿ ಮಲ ವಿಸರ್ಜನೆ ಮಾಡಿ ವಿಕೃತಿ

    ಚಾಮರಾಜನಗರ: ಬ್ಯಾಂಕ್ ಹಾಗೂ ಎಟಿಎಂ ಬಾಗಿಲಿನಲ್ಲೇ ಮಲ ವಿಸರ್ಜನೆ ಮಾಡಿದ್ದಲ್ಲದೆ ಬ್ಯಾಂಕ್ ಬಾಗಿಲು ಹಾಗೂ ಬೀಗಕ್ಕೂ ಹೇಸಿಗೆ ಮೆತ್ತಿ ವಿಕೃತ ಮೆರೆದಿರುವ ಘಟನೆ ನಗರದ ಕೆನರಾ ಬ್ಯಾಂಕ್‍ನಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಕರ್ತವ್ಯಕ್ಕೆ ಬಂದ ಸಿಬ್ಬಂದಿ ಶಾಕ್ ಆಗಿ ಬಾಗಿಲು ಹಾಗೂ ಬೀಗಗಳಿಗೆ ಮಲ ಮೆತ್ತಿದ ಕಾರಣ ಬಾಗಿಲು ತೆರೆಯಲಾರದೆ ಪರದಾಡುವಂತಾಯಿತು. ಸ್ಥಳಕ್ಕೆ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಕಾಶ್ಮೀರ್ ಫೈಲ್ಸ್ ಬಗ್ಗೆ ಮಾತನಾಡಿ – ಅಗ್ನಿಹೋತ್ರಿಗೆ ಬ್ರಿಟನ್ ಸಂಸತ್ ಆಹ್ವಾನ

    ಬಳಿಕ ನಗರಸಭೆ ಪೌರಕಾರ್ಮಿಕರು ಗಲೀಜು ಸ್ವಚ್ಛಗೊಳಿಸಿದರು. 11 ಗಂಟೆಯ ನಂತರ ಬ್ಯಾಂಕ್ ಸೇವೆ ಆರಂಭಗೊಂಡಿತು. ಇದನ್ನೂ ಓದಿ: 1 ವರ್ಷ ನನ್ನ ಕೈ, ಕಾಲುಗಳಿಗೆ ಚಿಕಿತ್ಸೆ ಬೇಕಿದೆ: ಉಕ್ರೇನ್‌ನಲ್ಲಿ ಗುಂಡೇಟು ತಿಂದಿದ್ದ ಭಾರತದ ವಿದ್ಯಾರ್ಥಿ

  • ರಷ್ಯಾ ಹಣಕಾಸು ಸಂಸ್ಥೆಗಳಿಗೆ ವೀಸಾ, ಮಾಸ್ಟರ್‌ ಕಾರ್ಡ್‌ ಬ್ಲಾಕ್‌ – ATMಗಳ ಮುಂದೆ ರಷ್ಯನ್ನರ ದಂಡು

    ರಷ್ಯಾ ಹಣಕಾಸು ಸಂಸ್ಥೆಗಳಿಗೆ ವೀಸಾ, ಮಾಸ್ಟರ್‌ ಕಾರ್ಡ್‌ ಬ್ಲಾಕ್‌ – ATMಗಳ ಮುಂದೆ ರಷ್ಯನ್ನರ ದಂಡು

    ಮಾಸ್ಕೋ: ಯುಎಸ್‌ ಪಾವತಿ ಕಾರ್ಡ್‌ ಸಂಸ್ಥೆಗಳಾದ ವೀಸಾ ಮತ್ತು ಮಾಸ್ಟರ್‌ ಕಾರ್ಡ್‌ ತಮ್ಮ ನೆಟ್‌ವರ್ಕ್‌ನಿಂದ ರಷ್ಯಾದ ಹಣಕಾಸು ಸಂಸ್ಥೆಗಳನ್ನು ನಿರ್ಬಂಧಿಸಿವೆ. ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣಕ್ಕೆ ವಿರೋಧ ವ್ಯಕ್ತಪಡಿಸಿರುವ ಅಮೆರಿಕ ಹಲವು ನಿರ್ಬಂಧಗಳನ್ನು ವಿಧಿಸುತ್ತಿದೆ.

    ಸೋಮವಾರದಿಂದಲೇ ಈ ನಿರ್ಬಂಧ ಅನ್ವಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಮಾನವೀಯ ಸಹಾಯಕ್ಕಾಗಿ 15.14 ಕೋಟಿ (2 ಮಿಲಿಯನ್‌ ಡಾಲರ್)‌ ದೇಣಿಗೆ ನೀಡುವುದಾಗಿ ವೀಸಾ ಸ್ಪಷ್ಟಪಡಿಸಿದೆ. ಮಾಸ್ಟರ್‌ ಕಾರ್ಡ್‌ ಕೂಡ 15.14 ಕೋಟಿ ರೂ. ಕೊಡುಗೆ ನೀಡುವುದಾಗಿ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ಸರ್ಕಾರದ ನಿರ್ಬಂಧಗಳ ಪ್ರಕಾರ ವಿಶೇಷವಾಗಿ ಗೊತ್ತುಪಡಿಸಿದ ರಾಷ್ಟ್ರದ್ದು ಎಂದು ಪಟ್ಟಿ ಮಾಡಲಾದ ಘಟಗಳಿಗೆ ವೀಸಾ ತನ್ನ ನೆಟ್‌ವರ್ಕ್‌ಗೆ ಪ್ರವೇಶವನ್ನು ಅಮಾನತುಗೊಳಿಸಿದೆ. ರಷ್ಯಾದ ಕೇಂದ್ರ ಬ್ಯಾಂಕ್‌ ಮತ್ತು ಎರಡನೇ ಅತಿ ದೊಡ್ಡ ಸಾಲದಾತ ವಿಟಿಬಿ ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಯುಎಸ್‌, ಬ್ರಿಟನ್‌, ಯೂರೋಪ್‌ ಮತ್ತು ಕೆನಡಾ ದೇಶಗಳು ರಷ್ಯಾದ ಮೇಲೆ ಹೊಸ ನಿರ್ಬಂಧಗಳನ್ನು ಶನಿವಾರವೂ ಘೋಷಿಸಿವೆ.

    ಹಲವು ನಿರ್ಬಂಧಗಳ ಹಿನ್ನೆಲೆಯಲ್ಲಿ ಬ್ಯಾಂಕ್‌ ಕಾರ್ಡ್‌ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು, ಬ್ಯಾಂಕ್‌ಗಳು ನಗದು ಹಿಂಪಡೆಯುವಿಕೆಯನ್ನು ಮಿತಿಗೊಳಿಸಬಹುದು ಎಂದು ಆತಂಕದಲ್ಲಿ ರಷ್ಯನ್ನರು ಎಟಿಎಂಗಳ ಮುಂದೆ ಅಪಾರ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ. ಭಾನುವಾರ ಮತ್ತು ಸೋಮವಾರ ಎಟಿಎಂಗಳ ಮುಂದೆ ರಷ್ಯನ್ನರ ಉದ್ದದ ಕ್ಯೂ ಇದ್ದ ದೃಶ್ಯಗಳು ಕಂಡುಬಂದಿದ್ದವು. ಇದನ್ನೂ ಓದಿ: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್

    ರಷ್ಯಾ ಕಳೆದ ವಾರ ಉಕ್ರೇನ್‌ ಮೇಲೆ ಯುದ್ಧವನ್ನು ಸಾರಿತು. ಇದಕ್ಕೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಅನೇಕ ಪಾಶ್ಚಿಮಾತ್ಯ ಬ್ಯಾಂಕ್‌ಗಳು, ವಿಮಾನಯಾನ ಸಂಸ್ಥೆಗಳು ರಷ್ಯಾದೊಂದಿಗೆ ಸಂಬಂಧವನ್ನು ಕಡಿತಗೊಳಿಸಿವೆ. ರಷ್ಯಾದ ಕ್ರಮಗಳು ಸ್ವೀಕಾರಾರ್ಹವಲ್ಲ ಎಂದು ವಿರೋಧಿಸಿವೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಶೆಲ್ ದಾಳಿಗೆ ಮಡಿದ ಕನ್ನಡಿಗನಿಗೆ ಸ್ಯಾಂಡಲ್ ವುಡ್ ಕಣ್ಣೀರು

  • ಎಟಿಎಂ ಕಳ್ಳತನಕ್ಕೆ ಯತ್ನ – ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದ ಕಳ್ಳ

    ಎಟಿಎಂ ಕಳ್ಳತನಕ್ಕೆ ಯತ್ನ – ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದ ಕಳ್ಳ

    ಬೀದರ್: ಎಟಿಎಂ ಕಳ್ಳತನ ಮಾಡಲು ಯತ್ನಿಸುತ್ತಿದ್ದ ಕಳ್ಳನೊಬ್ಬ ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಬಸ್ ನಿಲ್ದಾಣ ಬಳಿ ನಡೆದಿದೆ.

    ಬಸವಕಲ್ಯಾಣ ಪಟ್ಟಣದ ಈಶ್ವರ ಸಿಂಗ್ ಕಾಲೋನಿಯ ರಮೇಶ್ ಕಲ್ಲಮೋಡೆ ಬಂಧಿತ ಆರೋಪಿ. ಎಟಿಎಂ ಯಂತ್ರಗಳನ್ನು ಧ್ವಂಸ ಮಾಡಿ ಹಣ ಕದಿಯಲು ಯತ್ನಿಸುತ್ತಿದ್ದ. ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರಿಗೆ ಅವನು ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ:  ಬಿಜೆಪಿಗೆ ಸೇರಿದರೆ ನನ್ನನ್ನು ಹೇಮಾ ಮಾಲಿನಿಯಾಗಿ ಮಾಡುತ್ತಿದ್ದರು: ಜಯಂತ್ ಚೌಧರಿ

    ಕಳ್ಳನನ್ನು ಬಂಧಿಸಿ ಬಸವಕಲ್ಯಾಣ ನಗರ ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಈ ಕುರಿತು ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಜನವರಿ 1 ರಿಂದ ಎಟಿಎಂ ಶುಲ್ಕ ಹೆಚ್ಚಳ

    ಜನವರಿ 1 ರಿಂದ ಎಟಿಎಂ ಶುಲ್ಕ ಹೆಚ್ಚಳ

    ನವದೆಹಲಿ: ಎಟಿಎಂ ಬಳಕೆದಾರರು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‍ನಿಂದ ಉಚಿತ ಮಿತಿಗಿಂತಲೂ ಹೆಚ್ಚು ಬಾರಿ ವಹಿವಾಟು ನಡೆಸಿದ್ದಲ್ಲಿ ಹೆಚ್ಚು ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ಹೊಸ ನಿಯಮ 2022 ರ ಜನವರಿ 1 ರಿಂದ ಜಾರಿಗೆ ಬರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ತಿಳಿಸಿದೆ. ಇದನ್ನೂ ಓದಿ: ಓಮಿಕ್ರಾನ್ ಆತಂಕ- ಮದುವೆ ಸಮಾರಂಭಗಳಲ್ಲಿ 500 ಮಂದಿಗಷ್ಟೇ ಅವಕಾಶ

    RBI

    ಆರ್‌ಬಿಐ ಜೂನ್‍ನಲ್ಲಿ ಮಾಸಿಕ ಮಿತಿಯನ್ನು ಮೀರಿದ ವಹಿವಾಟಿನ ಶುಲ್ಕವನ್ನು ಹೆಚ್ಚಳ ಗೊಳಿಸುವುದಾಗಿ ಘೋಷಿಸಿತ್ತು. ಆರ್‌ಬಿಐ ಈ ಹಿಂದೆ ಹೊರಡಿಸಿದ ಸುತ್ತೋಲೆಯಲ್ಲಿ ಗ್ರಾಹಕರ ತಿಂಗಳಿನ ವಹಿವಾಟಿನ ಮಿತಿ ಹೆಚ್ಚಿದ್ದಲ್ಲಿ ಮುಂದಿನ ವಹಿವಾಟಿಗೆ 21 ರೂ. ಶುಲ್ಕವನ್ನು ವಿಧಿಸುವ ಬಗ್ಗೆ ತಿಳಿಸಿತ್ತು. ಈ ಹೊಸ ದರದ ಬದಲಾವಣೆ ಜನವರಿ 1 ರಿಂದ ಜಾರಿಗೆ ಬರಲಿದೆ. ಇದನ್ನೂ ಓದಿ: ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ

    ಆರ್‌ಬಿಐ ಮಾರ್ಗಸೂಚಿಯ ಪ್ರಕಾರ ಆಕ್ಸಿಸ್ ಬ್ಯಾಂಕ್ ಹಾಗೂ ಇತರ ಬ್ಯಾಂಕ್‍ಗಳ ಉಚಿತ ಮಿತಿಗಿಂತ ಹೆಚ್ಚಿನ ವಹಿವಾಟಿನ ಶುಲ್ಕ 21 ರೂ. ಪ್ಲಸ್ ಜಿಎಸ್‍ಟಿ ಇರಲಿದೆ. ಈ ಹಿಂದೆ 20 ರೂ. ಇದ್ದ ಶುಲ್ಕ 21 ರೂ.ಗೆ ಏರಿಕೆಯಾಗಲಿದೆ.

    ಗ್ರಾಹಕರು ತಮ್ಮ ಎಟಿಎಂನಿಂದ ಮೆಟ್ರೋ ಕೇಂದ್ರಗಳಲ್ಲಿ ಪ್ರತೀ ತಿಂಗಳು 5 ಬಾರಿ ಉಚಿತ ವಹಿವಾಟು ನಡೆಸಬಹುದು. ಮೆಟ್ರೋ ಕೇಂದ್ರ ಅಲ್ಲವಾದಲ್ಲಿ 3 ಬಾರಿ ಉಚಿತ ವಹಿವಾಟಿನ ಸೇವೆ ಇರುತ್ತದೆ. ಈ ಮಿತಿ ದಾಟಿದ್ದಲ್ಲಿ ಮುಂದಿನ ಪ್ರತೀ ವಹಿವಾಟಿನಲ್ಲಿ ನಿಗದಿ ಪಡಿಸಿದಷ್ಟು ಹಣವನ್ನು ಖಾತೆಯಿದ ಕಳೆದುಕೊಳ್ಳುತ್ತಾರೆ.

    ಆಗಸ್ಟ್ 1 ರಿಂದ ಜಾರಿಗೆ ಬಂದಿದ್ದ ಕ್ರಮದಲ್ಲಿ ಎಲ್ಲಾ ಬ್ಯಾಂಕ್ ಕೇಂದ್ರಗಳಲ್ಲಿ ಹಣಕಾಸಿನ ವಹಿವಾಟುಗಳಿಗೆ 15-17 ರೂ. ಹಾಗೂ ಹಣಕಾಸೇತರ ವಹಿವಾಟುಗಳಿಗೆ 5-6 ರೂ. ಶುಲ್ಕವನ್ನು ಹೆಚ್ಚಿಸಲು ಕೆಂದ್ರೀಯ ಬ್ಯಾಂಕ್ ಅವಕಾಶ ನೀಡಿತ್ತು.

  • ಎಟಿಎಂ ಡಿಟೆಲ್ಸ್ ಪಡೆದು 99 ಸಾವಿರ ವಂಚನೆ

    ಎಟಿಎಂ ಡಿಟೆಲ್ಸ್ ಪಡೆದು 99 ಸಾವಿರ ವಂಚನೆ

    ಮೈಸೂರು: ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿ ಎಟಿಎಂ ಮಾಹಿತಿ ಪಡೆದ ಚಾಲಾಕಿಗಳು ಕ್ಷಣಾರ್ಧದಲ್ಲಿ 99,999 ರೂ. ಲಪಟಾಯಿಸಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.

    ಗುಜರಿ ವ್ಯಾಪಾರಿಯಾಗಿರುವ ಬಷೀರ್ ಅಹಮದ್ ವಂಚನೆಗೊಳಗಾದವರು. ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನಲ್ಲಿ ಎಟಿಎಂ ಮಾಡಿಸಿಕೊಡುವುದಾಗಿ ನಂಬಿಸಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ 99,999 ರೂಪಾಯಿಗಳನ್ನು ಲಪಟಾಯಿಸಿ ಪರಾರಿಯಾಗಿದ್ದಾರೆ. ಇದನ್ನೂ ಓದಿ:ಅಪಘಾತ- ಜೀವ ಉಳಿಸಲು ಅಂಗಲಾಚಿದ ಯುವಕ, ಯುವತಿ

    ಬಷೀರ್ ಅಹಮದ್ ನಂಜನಗೂಡಿನ ನೀಲಕಂಠನಗರದಲ್ಲಿ ಗುಜರಿ ವ್ಯಾಪಾರ ಮಾಡುತ್ತಿದ್ದರು. ಅಹಮದ್ ಪತ್ನಿ ಷಹಜಹಾನ್ ಎಂಬುವರನ್ನು ವಂಚಕರು ಮೊಬೈಲ್ ಮೂಲಕ ಸಂರ್ಪಕಸಿದ್ದಾರೆ. ನಂತರ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾರೆ. ಎಟಿಎಂ ಮಾಡಿಸಿಕೊಡುವುದಾಗಿ ನಂಬಿಸಿ ಖಾತೆಯ ಸಂಪೂರ್ಣ ಮಾಹಿತಿ ಪಡೆದು ಈ ಕೃತ್ಯವೆಸಗಿದ್ದಾರೆ ಎಂದು ತಿಳಿದು ಬಂದಿದೆ.

    ಬಷೀರ್ ಅಹಮದ್ ನಂಜನಗೂಡಿನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದು, ಡೆಬಿಟ್ ಕಾರ್ಡ್ ಪಡೆದಿದ್ದರು. ಅಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನಲ್ಲೂ ಖಾತೆ ಹೊಂದಿದ್ದಾರೆ. ಇದರಲ್ಲಿ ಎಟಿಎಂ ಕಾರ್ಡ್ ತೆಗೆದುಕೊಂಡಿರಲಿಲ್ಲ.  ಇದನ್ನೂ ಓದಿ: ಜಯಮೃತ್ಯುಂಜಯ ಸ್ವಾಮೀಜಿ ಶಾಪದಿಂದಲೇ ಯಡಿಯೂರಪ್ಪ ಅಧಿಕಾರ ಹೋಗಿದೆ: ವಿಜಯಾನಂದ ಕಾಶಪ್ಪನವರ್

    ಈ ಮಾಹಿತಿಯನ್ನ ಸಂಗ್ರಹಿಸಿದ ವಂಚಕರು ಎಟಿಎಂ ಮಾಡಿಸಿಕೊಡುವುದಾಗಿ ನಂಬಿಸಿ, ಮೊಬೈಲ್ ನಲ್ಲೇ ಖಾತೆಯ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಒಮ್ಮೆ 49,999 ರೂ. ಮತ್ತೊಮ್ಮೆ 50,000 ರೂ ಹಣ ಡ್ರಾ ಮಾಡಿಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಹಣ ಕಳೆದುಕೊಂಡ ಬಷೀರ್ ಅಹಮದ್ ಮೈಸೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.