Tag: atm

  • ಎಟಿಎಂ ಹಲ್ಲೆಕೋರ ಬೆಂಗ್ಳೂರಿಗೆ: ಫೆ.28ರಿಂದ 15ದಿನ ವಿಚಾರಣೆ

    ಎಟಿಎಂ ಹಲ್ಲೆಕೋರ ಬೆಂಗ್ಳೂರಿಗೆ: ಫೆ.28ರಿಂದ 15ದಿನ ವಿಚಾರಣೆ

    ಬೆಂಗಳೂರು: ನಗರದ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಆರೋಪಿ ಮಧುಕರ್ ರೆಡ್ಡಿಯನ್ನು ಶೀಘ್ರವೇ ಬೆಂಗಳೂರು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.

    ಫೆಬ್ರವರಿ 28ರಿಂದ 15 ದಿನಗಳ ಕಾಲ ಆರೋಪಿ ಮಧುಕರ್ ರೆಡ್ಡಿ ವಿಚಾರಣೆಗಾಗಿ ಬೆಂಗಳೂರು ಪೊಲೀಸರ ವಶಕ್ಕೆ ಒಪ್ಪಿಸಲು ಮದನಪಲ್ಲಿ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಎಟಿಎಂ ಹಲ್ಲೆಕೋರನನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಲು ಬೆಂಗಳೂರು ಪೊಲೀಸರು ಇದೀಗ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

    ಫೆಬ್ರವರಿ 4 ರಂದು ಮದನಪಲ್ಲಿಯಲ್ಲಿ ಕ್ರಿಮಿನಲ್ ಮಧುಕರ್ ರೆಡ್ಡಿ ಸೆರೆಸಿಕ್ಕಿದ್ದ. ಬಳಿಕ ಮಧುಕರ್‍ರೆಡ್ಡಿಯನ್ನು ಬಾಡಿ ವಾರೆಂಟ್ ಮೇಲೆ ಪಡೆಯಲು ಕರ್ನಾಟಕ ಸೇರಿ 3 ರಾಜ್ಯಗಳು ಪ್ರಯತ್ನ ಮಾಡಿದ್ದವು. ಆದ್ರೆ, ಎರಡು ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳ ಸಂಬಂಧ ಮಧುಕರ್ ರೆಡ್ಡಿ ಆಂಧ್ರ ಪೊಲೀಸರ ವಶವಾಗಿದ್ದು, ಸದ್ಯ ಆತನ ವಿಚಾರಣೆ ಮುಂದುವರೆದಿದೆ. `ನನಗೆ ಮಹಿಳೆಯರನ್ನು ಕಂಡ್ರೇ ಆಗಲ್ಲ. ಎಲ್ಲಿ ಹೋದ್ರೂ ನಾನು ಕೊಂದಿರೋದು ಮಹಿಳೆಯರನ್ನೇ’ ಈಗಾಗಲೇ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ.

     

  • ಎಲ್ಲಿ ಹೋದ್ರೂ ನಾನು ಕೊಂದಿರೋದು ಮಹಿಳೆಯರನ್ನೇ- ಎಟಿಎಂ ಹಂತಕ ಬಿಚ್ಚಿಟ್ಟ ಭಯಾನಕ ಸತ್ಯ

    ಎಲ್ಲಿ ಹೋದ್ರೂ ನಾನು ಕೊಂದಿರೋದು ಮಹಿಳೆಯರನ್ನೇ- ಎಟಿಎಂ ಹಂತಕ ಬಿಚ್ಚಿಟ್ಟ ಭಯಾನಕ ಸತ್ಯ

    ಬೆಂಗಳೂರು: ಬೆಂಗಳೂರಿನ ಕಾರ್ಪೋರೇಷನ್ ಬ್ಯಾಂಕ್ ಎಟಿಎಂ ನಲ್ಲಿ ಹಣಕ್ಕಾಗಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿ ಮಧುಕರ್ ಪೊಲೀಸ್ ವಶದಲ್ಲಿದ್ದು, ಇದೀಗ ಭಯಾನಕ ಮಾಹಿತಿಯೊಂದನ್ನ ಹೊರಹಾಕಿದ್ದಾನೆ.

    `ನನಗೆ ಮಹಿಳೆಯರನ್ನು ಕಂಡ್ರೇ ಆಗಲ್ಲ. ಎಲ್ಲಿ ಹೋದ್ರೂ ನಾನು ಕೊಂದಿರೋದು ಮಹಿಳೆಯರನ್ನೇ’ ಅಂತಾ ಎಟಿಎಂ ಹಂತಕ ಮಧುಕರ್‍ರೆಡ್ಡಿ ಹೊಸ ಸ್ಟೇಟ್‍ಮೆಂಟ್ ಕೊಟ್ಟಿದ್ದಾನೆ. ಅದಕ್ಕೆ ಮಹಿಳಾ ಜೆಡ್ಜ್ ಕಾರಣವಂತೆ..!

    ಆಂಧ್ರದ ಧರ್ಮಾವರಂ, ಪಿಲೆರೋ, ವಿಜಯವಾಡ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮಧುಕರ ರೆಡ್ಡಿ ನಡೆಸಿರೋ ಅಟ್ಟಹಾಸ ಒಂದೆರೆಡಲ್ಲ. ಎರಡು ಮರ್ಡರ್ ಕೇಸ್‍ಗಳು, ಒಂದು ಕೊಲೆ ಯತ್ನ ಕೇಸ್‍ಗಳ ವಿಚಾರಣೆ ನಡೆಯುತ್ತಿವೆ. ಈ ಕೇಸ್‍ಗಳಿಗೂ ಮುನ್ನ ತನ್ನ ಹುಟ್ಟೂರಿನಲ್ಲಿ ಜಮೀನು ವಿವಾದವೊಂದಕ್ಕೆ ಸಂಬಂಧಪಟ್ಟಂತೆ, ಚಿಕ್ಕಪ್ಪನ ಮಗನ ಮೇಲೆ ಬಾಂಬ್ ಹಾಕಿ ಕೊಲೆ ಮಾಡಿದ್ದ. ಈ ಪ್ರಕರಣದ ತೀರ್ಪಿನ ವೇಳೆ ಮಹಿಳಾ ಜಡ್ಜ್‍ವೊಬ್ಬರು ಮಧುಕರ್ ರೆಡ್ಡಿಗೆ ಕಠಿಣ ಶಿಕ್ಷೆ ವಿಧಿಸಿದ್ದರಂತೆ. ಆಗ ಮಧುಕರ್ ರೆಡ್ಡಿ ಹಲ್ಲು ನೋವಿನ ನೆಪ ಹೇಳಿ ಎಸ್ಕೇಪ್ ಆಗಿದ್ದ. ಅಲ್ಲಿಂದೀಚೆಗೆ ಆಂಧ್ರದ ಮೂರು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಣಕ್ಕಾಗಿ ಇಬ್ಬರು ಮಹಿಳೆಯನ್ನು ಕೊಲೆ ಮಾಡಿದ್ರೆ, ಒಬ್ಬರ ಮೇಲೆ ಕೊಲೆ ಯತ್ನ ಮಾಡಿದ್ದ. ಆಗಿನಿಂದ ನನಗೆ ಮಹಿಳೆಯರನ್ನ ಕಂಡ್ರೆ ಆಗೋದಿಲ್ಲ ಎಂದಿದ್ದಾನೆ.

    ಇದೇ ಮನಸ್ಥಿತಿಯಲ್ಲಿದ್ದ ಈ ಪಾತಕಿ, ಬೆಂಗಳೂರಿನ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆಯನ್ನು ಹಣಕ್ಕಾಗಿ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ಬೆಂಗಳೂರು ಪೊಲೀಸರ ಕೈಗೆ ಸಿಕ್ಕ ಮೇಲಷ್ಟೇ ಈ ವಿಕೃತ ಮನಸ್ಥಿಯ ಮತ್ತಷ್ಟು ಭಯಾನಕ ವಿಷಯಗಳು ಬಹಿರಂಗವಾಗಬೇಕಿದೆ.

    ಎಟಿಎಂ ಹಲ್ಲೆಕೋರ ಮಧುಕರ್ ರೆಡ್ಡಿ ಇನ್ನೇನು ಬೆಂಗಳೂರು ಪೊಲೀಸರ ವಶಕ್ಕೆ ಬಂದೇ ಬಿಟ್ಟ ಅಂತ ಅಂದುಕೊಳ್ಳುವಾಗಲೇ ಸೀಮಾಂದ್ರ ಪೊಲೀಸ್ರು ಕೋರ್ಟಿಗೆ ಮತ್ತೊಂದು ಅರ್ಜಿ ಹಾಕಿದ್ದಾರೆ. ನಮ್ಮ ಕೇಸ್‍ಗಳು ಇವೆ. ಹಾಗಾಗಿ ನಮ್ಮ ಅರ್ಜಿಗೆ ಆದ್ಯತೆ ಕೊಡಿ ಅಂತಾ ಪಟ್ಟು ಹಿಡಿದಿದ್ದಾರೆ. ಆದ್ರೆ ಫೆಬ್ರವರಿ 28ರ ವರೆಗೆ ಮಧುಕರ್ ರೆಡ್ಡಿ ಬೆಂಗಳೂರು ಪೊಲೀಸರಿಗೆ ಸಿಗೋದು ಅನುಮಾನ.

  • ಊಟದ ದುಡ್ಡಿಗಾಗಿ ಎಟಿಎಂನಲ್ಲಿ ಮಚ್ಚು ಬೀಸಿದ್ನಂತೆ ಮಧುಕರ್!

    ಬೆಂಗಳೂರು: ನಗರದ ಎಟಿಎಂನಲ್ಲಿ ಜ್ಯೋತಿ ಎಂಬವರ ಮೇಲೆ ಹಲ್ಲೆ ಮಾಡಿದ್ದ ಸೈಕೋ ಮಧುಕರ್ ರೆಡ್ಡಿ ಪೊಲೀಸರ ಮುಂದೆ ಒಂದೊಂದೇ ಮಾಹಿತಿ ಬಾಯ್ಬಿಡ್ತಿದ್ದಾನೆ. ಈತ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ಕಾರಣ ಊಟಕ್ಕಾಗಿ ಅಂತೆ. ಹೌದು, ಪೊಲೀಸರ ಮುಂದೆ ಅವನೇ ಹೇಳಿರೋ ಪ್ರಕಾರ ಹಣವಿಲ್ಲದೆ ಎರಡು ದಿನದಿಂದ ಊಟ ಮಾಡಿರಲಿಲ್ಲವಂತೆ.

    ಮೂರು ವರ್ಷಗಳ ಹಿಂದೆ ಆಂಧ್ರದಲ್ಲಿ ಕೊಲೆ ಮಾಡಿ, ಬೆಂಗಳೂರಿಗೆ ಓಡಿ ಬಂದೆ. ಇದ್ದ ಬದ್ದ ದುಡ್ಡು ಮುಗಿದ ಮೇಲೆ ಎರಡು ದಿನ ಊಟ ಇಲ್ಲದೇ ಹಾಗೆ ಇದ್ದೆ. ಕೊನೆಗೆ ಊಟಕ್ಕೆ ದುಡ್ಡು ಪಡೆಯೋ ಉದ್ದೇಶದಿಂದ ಹಲವಾರು ಎಟಿಎಂಗಳ ಮುಂದೆ ವಾಚ್ ಮಾಡಿದ್ದೆ. ಆದ್ರೆ ಜನ ದಟ್ಟಣೆಯ ಕಾರಣಕ್ಕೆ ಭಯ ಆಗಿತ್ತು. ಕೊನೆಗೆ ಕಾರ್ಪೊರೇಷನ್ ಎಟಿಎಂಗೆ ಮಹಿಳೆಯೊಬ್ಬರು ಹೋಗಿದ್ದನ್ನು ನೋಡಿ ಅಂದು ಬೆಳಗ್ಗೆ ಯಾರೂ ಇಲ್ಲದಿದ್ದಾಗ ಎಟಿಎಂಗೆ ನುಗ್ಗಿದೆ. ಎಟಿಎಂ ಕಾರ್ಡ್ ಕಸಿದುಕೊಂಡು ಪಿನ್ ನಂಬರ್ ಕೇಳಿದೆ. ಆದ್ರೆ ಅವರು ಹೇಳಲಿಲ್ಲ. ಹಾಗಾಗಿ ಮಹಿಳೆ ಮೇಲೆ ಹಲ್ಲೆ ಮಾಡಿದೆ ಅಂತ ಪೊಲೀಸರ ಮುಂದೆ ಹೇಳಿದ್ದಾನೆ.

    ಆಂಧ್ರದಲ್ಲಿ ಕೊಲೆ ಮಾಡಿ ಬಂದಿದ್ದ ಮಧುಕರ್, ದುಡ್ಡು ಮುಗಿದ ಮೇಲೆ ಕಬ್ಬನ್‍ಪಾರ್ಕ್‍ನಲ್ಲಿ ಎರಡು ದಿನ ಕಾಲ ಕಳೆದಿದ್ದ. ಅದೆಲ್ಲಿಂದಲೋ ಒಂದು ಮಚ್ಚನ್ನು ಕದ್ದಿದ್ದ. ಇದೇ ಮಚ್ಚನ್ನು ಎಟಿಎಂನಲ್ಲಿ ಬಳಸಿದೆ ಅಂತ ಹೇಳಿದ್ದಾನೆ. ಸದ್ಯ ಬೆಂಗಳೂರಿನ ಕ್ರೈಂ ಬ್ರಾಂಚ್ ಪೊಲೀಸರು ಮದನಪಲ್ಲಿಯಲ್ಲಿ ಬೀಡು ಬಿಟ್ಟು ಮತ್ತಷ್ಟು ಮಾಹಿತಿ ಕಲೆ ಹಾಕ್ತಿದ್ದಾರೆ.

  • ಎಟಿಎಂ ಹಲ್ಲೆಕೋರ ಮಧುಕರ್ ರೆಡ್ಡಿಗಾಗಿ 3 ರಾಜ್ಯಗಳ ಪೈಪೋಟಿ

    ಬೆಂಗಳೂರು: ಎಟಿಎಂ ಹಲ್ಲೆಕೋರ ಮಧುಕರ್ ರೆಡ್ಡಿಗಾಗಿ ಆಂಧ್ರ, ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಪೈಪೋಟಿ ಶುರುವಾಗಿದೆ.

    ಮೂರು ರಾಜ್ಯಗಳಲ್ಲೂ ಮಧುಕರ್ ರೆಡ್ಡಿ ಅಪರಾಧ ಮಾಡಿರೋ ಹಿನ್ನೆಲೆಯಲ್ಲಿ ತನಿಖೆಗಾಗಿ ಪೊಲೀಸರು ಮಧುಕರ್ ರೆಡ್ಡಿಯನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಇಂದು ಮಧುಕರ್‍ನನ್ನು ಆಂಧ್ರ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದಾರೆ. ಮಧುಕರ್ ರೆಡ್ಡಿಯನ್ನ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಆಂಧ್ರ ಪೊಲೀಸರು ಮನವಿ ಮಾಡಲಿದ್ದಾರೆ. ಆಂಧ್ರ ಬಳಿಕ ಕರ್ನಾಟಕ ಪೊಲೀಸರು ಮಧುಕರ್‍ನನ್ನು ವಶಕ್ಕೆ ಪಡೆಯಲಿದ್ದಾರೆ.

    ಇದೇ ಸಂದರ್ಭದಲ್ಲಿ ಬೆಂಗಳೂರು ಪೊಲೀಸರು ತಾಂತ್ರಿಕ ವಿಚಾರಣೆ ಮುಗಿಸುವ ಸಾಧ್ಯತೆ ಇದೆ. ಸಿಸಿಟಿವಿ ದೃಶ್ಯಾವಳಿ, ಬೆರಳಚ್ಚು ದೃಢೀಕರಣ ಎಲ್ಲವನ್ನೂ ಮುಗಿಸಲಿದ್ದಾರೆ. ಈಗಾಗ್ಲೇ ಬೆಂಗಳೂರು ಪೊಲೀಸರು ಚಿತ್ತೂರಿನಲ್ಲಿ ಬೀಡು ಬಿಟ್ಟಿದ್ದು, ಸೋಮವಾರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಚಿತ್ತೂರಿಗೆ ತೆರಳಲಿದ್ದಾರೆ. ಮೂರು ವರ್ಷದ ಹಿಂದೆ ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದಾಗ ಹೇಮಂತ್ ನಿಂಬಾಳ್ಕರ್ ಜಂಟಿ ಪೊಲೀಸ್ ಆಯುಕ್ತರಾಗಿದ್ದರು.

    ತನಿಖಾ ತಂಡ ಮೂರು ತಿಂಗಳು ಆಂಧ್ರದಲ್ಲಿ ಬೀಡು ಬಿಟ್ಟು ತನಿಖೆ ನಡೆಸಿದೆ. ಸೋಮವಾರದ ಬಳಿಕ ಕರ್ನಾಟಕ ಪೊಲೀಸರು ಮಧುಕರ್‍ನನ್ನು ವಶಕ್ಕೆ ಪಡೆದು ತಾಂತ್ರಿಕ ಕೆಲಸ ಮುಗಿಸಲಿದ್ದಾರೆ.

    ಮೂರು ರಾಜ್ಯಗಳಲ್ಲಿ ಮಧುಕರ್‍ನ ಅಪರಾಧಗಳು:

    ಆಂಧ್ರ :
    > 2005 ರ ಆನಂದ ರೆಡ್ಡಿ ಕೊಲೆ ಪ್ರಕರಣ ( ನೀರಿನ ವಿಚಾರಕ್ಕೆ ಬಾಂಬ್ ಇಟ್ಟು ಕೊಲೆ ಮಾಡಿದ್ದ)
    > 2011ರಲ್ಲಿ ಕಡಪ ಜೈಲಿನಿಂದ ಎಸ್ಕೇಪ್ ಆಗಿದ್ದ ಪ್ರಕರಣ
    > 2013, ನ. 10 ಧರ್ಮಾವರಂ ಕೊಲೆ ಪ್ರಕರಣ ( ಪ್ರಮೀಳಮ್ಮ)
    > ಹೈದ್ರಾಬಾದ್ ಮತ್ತು ಗುಂಟೂರಿನಲ್ಲಿ ಕೊಲೆ ಯತ್ನ ಪ್ರಕರಣಗಳು

    ಕರ್ನಾಟಕ:
    2013, ನ.19 ರಂದು ಎಟಿಎಂನಲ್ಲಿ ಜ್ಯೋತಿ ಉದಯ್ ಕೊಲೆ ಯತ್ನ ಪ್ರಕರಣ

    ಕೇರಳ: 
    > ಎರ್ನಾಕುಲಂನಲ್ಲಿ ನಡೆದ ಎರಡು ಸರ ಅಪಹರಣ ಪ್ರಕರಣ
    > ಎಟಿಎಂನಲ್ಲಿ ನಡೆದ ಕೊಲೆ ಯತ್ನ ಪ್ರಕರಣ

  • ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿದ್ದ 3 ತಿಂಗಳಿನಲ್ಲಿ ಆರೋಪಿ ಅರೆಸ್ಟ್

    ಬೆಂಗಳೂರು: ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ನ್ಯಾಯಾಲಯಕ್ಕೆ 2016ರ ನವೆಂಬರ್‍ನಲ್ಲಿ ಸಿ ರಿಪೋರ್ಟ್ ಸಲ್ಲಿಸಿದ್ದರು. ಸಿ ರಿಪೋರ್ಟ್ ಸಲ್ಲಿಸಿದ್ದ ಮೂರೇ ತಿಂಗಳ ಒಳಗಡೆ ಆರೋಪಿ ಮಧುಕರ್ ರೆಡ್ಡಿಯ ಬಂಧನವಾಗಿದೆ.

    ಆಂಧ್ರಪ್ರದೇಶ, ತಮಿಳುನಾಡು ಸೇರಿ ಹಲವೆಡೆ ಸಿಕ್ಕಿರುವ ಸಾಕ್ಷ್ಯಗಳನ್ನು ಆಧಾರಿಸಿ ಹುಡುಕಾಟ ನಡೆಸಿದ್ದೇವೆ ಆದರೆ ಆರೋಪಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದರು.

    ಸಿ ರಿಪೋರ್ಟ್ ಸಲ್ಲಿಕೆಯಾಗಿದ್ದರೂ ವಿಶೇಷ ತಂಡಗಳು ಆರೋಪಿ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಲಿವೆ. ಸಣ್ಣ ಸುಳಿವು ಸಿಕ್ಕರೂ ನ್ಯಾಯಾಲಯದ ಅನುಮತಿ ಪಡೆದು ಮತ್ತೆ ಪ್ರಕರಣದ ತನಿಖೆ ಮುಂದುವರಿಸಲಾಗುವುದು ಪೊಲೀಸರು ತಿಳಿಸಿದ್ದರು.

    ಏನಿದು ಸಿ ರಿಪೋರ್ಟ್
    ಪ್ರಕರಣ ನಡೆದಿರುತ್ತದೆ. ಆದರೆ, ತನಿಖೆ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳಿಂದ ಆರೋಪಿ ಸಿಕ್ಕಿಲ್ಲ ಎನ್ನುವುದನ್ನು ನ್ಯಾಯಾಲಯಕ್ಕೆ ತಿಳಿಸಲು ಸಿ ರಿಪೋರ್ಟ್ ಸಲ್ಲಿಸಲಾಗುತ್ತದೆ.

    10 ಲಕ್ಷ ರೂ. ಬಹುಮಾನ:
    ರಾಜ್ಯ ಸರ್ಕಾರ ಆರಂಭದಲ್ಲಿ ಆರೋಪಿ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಹೇಳಿತ್ತು. ಆದರೆ 2014ರ ನವೆಂಬರ್ 29 ರಂದು ಅಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಆರೋಪಿಯ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ತಿಳಿಸಿದ್ದರು. ಆರೋಪಿಯ ಪತ್ತೆಗಾಗಿ 500ಕ್ಕೂ ಹೆಚ್ಚು ಸಿಬ್ಬಂದಿ, 15 ವಿಶೇಷ ತಂಡಗಳು ಕೆಲಸ ಮಾಡಿತ್ತು.

    ಅಂದು ಏನಾಗಿತ್ತು?
    2013ರ ನವೆಂಬರ್ 19ರಂದು ಬೆಳಗ್ಗೆ ಬೆಂಗಳೂರಿನ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿನ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಕಾರ್ಪೊರೇಷನ್  ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಅವರ ಮೇಲೆ ಅಪರಿಚಿತ ವ್ಯಕ್ತಿ ಎಲ್‍ಐಸಿ ಕಟ್ಟಡದಲ್ಲಿರುವ ಎಟಿಎಂನಲ್ಲಿ 2013ರ ನ.19ರಂದು ಬೆಳಗ್ಗೆ 7.10ರ ಸುಮಾರಿಗೆ ಹಲ್ಲೆ ನಡೆಸಿದ್ದ.

    ಹಲ್ಲೆ ನಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೃತ್ಯ ನಡೆದು 3 ವರ್ಷ ಕಳೆದಿದ್ದರೂ ಆರೋಪಿ ಸಿಕ್ಕಿರಲಿಲ್ಲ. ಹಲ್ಲೆಯಿಂದ ಗಾಯಗೊಂಡಿದ್ದ ಜ್ಯೋತಿ ಉದಯ್ ಅವರು ಕೆಲವು ತಿಂಗಳ ಕಾಲ ಚಿಕಿತ್ಸೆ ಪಡೆದು, ಗುಣಮುಖರಾಗಿ ಬ್ಯಾಂಕಿನಲ್ಲಿ ಕೆಲಸ ಮುಂದುವರಿಸಿದ್ದಾರೆ. ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

  • ಎಟಿಎಂ ಹಲ್ಲೆಕೋರ ಸಿಕ್ಕಿ ಬಿದ್ದಿದ್ದು ಹೇಗೆ?

    ಬೆಂಗಳೂರು: ಎಟಿಎಂ ಹಲ್ಲೆಕೋರ ಕೊನೆಗೂ ಸಿಕ್ಕಿದ್ದಾನೆ. ಮೂರು ವರ್ಷಗಳ ಕಾಲ ಬೆಂಗಳೂರು ಪೊಲೀಸರ ತಲೆ ತಿಂದಿದ್ದ ಆರೋಪಿಯನ್ನು ಆಂಧ್ರದ ಮದನಪಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಮಧುಕರ್ ರೆಡ್ಡಿ ಬಂಧಿತ ಆರೋಪಿ. ಜ.31 ರ ಸಂಜೆ ಮಧುಕರ ರೆಡ್ಡಿಯನ್ನು ಮದನಪಲ್ಲಿಯ ನಿಮ್ಮನಪಲ್ಲಿ ಸಂಚಾರಿ ಪೊಲೀಸರು ಗುರುತಿಸಿದ್ದರು. ಎಟಿಎಂ ಸಿಸಿಟಿವಿ ಫೋಟೋ ಗುರುತಿನ ಆಧಾರದಲ್ಲಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಆರಂಭಿಸಿದ್ದರು.

    ವಿಚಾರಣೆಯ ಆರಂಭದಲ್ಲಿ ಅನುಮಾನಸ್ಪಾದವಾಗಿ ಮಾತನಾಡುತ್ತಿದ್ದ. ಮೂರು ದಿನಗಳಿಂದ ಸತತ ವಿಚಾರಣೆ ಬಳಿಕ ಬೆಂಗಳೂರಿನಲ್ಲಿ ಎಟಿಎಂ ಒಳಗಡೆ ಮಹಿಳೆ ಮೇಲೆ ಹಲ್ಲೆ ನಡೆಸಿದ್ದು ನಾನೇ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಧರ್ಮಾವರಂನಲ್ಲಿ ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದ ಈತನ ಮೇಲೆ ಕಡಪ ಜೈಲಿನಿಂದ ಪರಾರಿಯಾಗಿದ್ದ ಪ್ರಕರಣ ದಾಖಲಾಗಿತ್ತು. ಹಿಂದೂಪುರ ಮತ್ತು ಮದನಪಲ್ಲಿ ಮಧುಕರ್ ರೆಡ್ಡಿ ವಾಸವಾಗಿದ್ದ ವಿಚಾರ ಈಗ ತಿಳಿದು ಬಂದಿದೆ.

    ಆರಂಭದಲ್ಲಿ ಆರೋಪಿಯ ಮಾಹಿತಿಯನ್ನು ಪೊಲೀಸರು ಲೀಕ್ ಮಾಡಿರಲಿಲ್ಲ. ಕೊನೆಗೆ ಮಧುಕರ್ ರೆಡ್ಡಿಯೇ ಆರೋಪಿ ಎಂದ ಬಳಿಕ ಸ್ಪಷ್ಟನೆ ನೀಡಿದ್ದಾರೆ.

    ಅಂದು ಏನಾಗಿತ್ತು?: 2013ರ ನವೆಂಬರ್ 19ರಂದು ಬೆಳಗ್ಗೆ ಬೆಂಗಳೂರಿನ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿನ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಕಾರ್ಪೊರೇಷನ್ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಅವರ ಮೇಲೆ ಅಪರಿಚಿತ ವ್ಯಕ್ತಿ ಎಲ್‍ಐಸಿ ಕಟ್ಟಡದಲ್ಲಿರುವ ಎಟಿಎಂನಲ್ಲಿ ಹಲ್ಲೆ ನಡೆಸಿದ್ದ.

    ಹಲ್ಲೆ ನಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೃತ್ಯ ನಡೆದು 3 ವರ್ಷ ಕಳೆದಿದ್ದರೂ ಆರೋಪಿ ಸಿಕ್ಕಿರಲಿಲ್ಲ. ಹಲ್ಲೆಯಿಂದ ಗಾಯಗೊಂಡಿದ್ದ ಜ್ಯೋತಿ ಉದಯ್ ಅವರು ಕೆಲವು ತಿಂಗಳ ಕಾಲ ಚಿಕಿತ್ಸೆ ಪಡೆದು, ಗುಣಮುಖರಾಗಿ ಬ್ಯಾಂಕಿನಲ್ಲಿ ಕೆಲಸ ಮುಂದುವರಿಸಿದ್ದಾರೆ. ಆರೋಪಿಯ ಬಗ್ಗೆ ಸುಳಿವು ಕೊಟ್ಟವರಿಗೆ ಸರ್ಕಾರ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು.

    https://www.youtube.com/watch?v=RXXpBObVE1Q

  • 3 ವರ್ಷಗಳ ನಂತರ ಬೆಂಗಳೂರಿನ ಎಟಿಎಂ ಹಲ್ಲೆಕೋರ ಅರೆಸ್ಟ್

    ಬೆಂಗಳೂರು: ನಗರದ ಎಟಿಎಂವೊಂದರಲ್ಲಿ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಎಟಿಎಂನಲ್ಲಿ ಹಣ ತಗೆಯಲು ಬಂದಿದ್ದ ಜ್ಯೋತಿ ಉದಯ್ ಎಂಬ ಮಹಿಳೆಯ ಮೇಲೆ ದುಷ್ಕರ್ಮಿಯೊಬ್ಬ ಮಚ್ಚಿನಿಂದ ಹಲ್ಲೆ ಮಾಡಿ ಹಣ ಕಸಿದು ಪರಾರಿಯಾಗಿದ್ದ. ಈ ಭಯಾನಕ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಘಟನೆ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿತ್ತು. ಘಟನೆ ಬಗ್ಗೆ ಎಸ್‍ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಇದೀಗ ಮೂರು ವರ್ಷಗಳ ನಂತರ ನಗರ ಕೆಂದ್ರ ವಿಭಾಗದ ಪೊಲೀಸರು, ಶಂಕಿತ ಆರೋಪಿಯನ್ನು ಆಂಧ್ರದ ಮದನಪಲ್ಲಿಯಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ಗೌಪ್ಯ ಸ್ಥಳದಲ್ಲಿರಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಅಂದು ಏನಾಗಿತ್ತು?: 2013ರ ನವೆಂಬರ್ 19ರಂದು ಬೆಳಗ್ಗೆ ಬೆಂಗಳೂರಿನ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿನ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಕಾರ್ಪೊರೇಷನ್ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಅವರ ಮೇಲೆ ಅಪರಿಚಿತ ವ್ಯಕ್ತಿ ಎಲ್‍ಐಸಿ ಕಟ್ಟಡದಲ್ಲಿರುವ ಎಟಿಎಂನಲ್ಲಿ ಹಲ್ಲೆ ನಡೆಸಿದ್ದ.

    ಹಲ್ಲೆ ನಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೃತ್ಯ ನಡೆದು 3 ವರ್ಷ ಕಳೆದಿದ್ದರೂ ಆರೋಪಿ ಸಿಕ್ಕಿರಲಿಲ್ಲ. ಹಲ್ಲೆಯಿಂದ ಗಾಯಗೊಂಡಿದ್ದ ಜ್ಯೋತಿ ಉದಯ್ ಅವರು ಕೆಲವು ತಿಂಗಳ ಕಾಲ ಚಿಕಿತ್ಸೆ ಪಡೆದು, ಗುಣಮುಖರಾಗಿ ಬ್ಯಾಂಕಿನಲ್ಲಿ ಕೆಲಸ ಮುಂದುವರಿಸಿದ್ದಾರೆ.

    ಆರೋಪಿಯ ಬಗ್ಗೆ ಸುಳಿವು ಕೊಟ್ಟವರಿಗೆ ಸರ್ಕಾರ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು.

    https://www.youtube.com/watch?v=RXXpBObVE1Q