Tag: atm

  • ಕಾರ್ಡ್ ಹಾಕಿದ್ರೆ ಎಟಿಎಂನಲ್ಲಿ ಬರುತ್ತೆ ಮೋದಕ- ವಿಡಿಯೋ ನೋಡಿ!

    ಕಾರ್ಡ್ ಹಾಕಿದ್ರೆ ಎಟಿಎಂನಲ್ಲಿ ಬರುತ್ತೆ ಮೋದಕ- ವಿಡಿಯೋ ನೋಡಿ!

    ಮುಂಬೈ: ಎಟಿಎಂನಿಂದ ಹಣ ಬರುವುದು ಗೊತ್ತೆ ಇದೆ. ಆದರೆ ಮಹಾರಾಷ್ಟ್ರದ ಒಂದು ಕಡೆ ಕಾರ್ಡ್ ಹಾಕಿದರೆ ಮೋದಕ ಬರುತ್ತದೆ.

    ಹೌದು, ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪುಣೆಯ ಸಹಕಾರ ನಗರದಲ್ಲಿ ಎಟಿಎಂ (ಎನಿ ಟೈಮ್ ಮೋದಕ) ಯತ್ರವನ್ನು ಸಿದ್ಧ ಪಡಿಸಲಾಗಿದೆ. ಎಟಿಎಂನಿಂದ ಮೋದಕ ಹೊರ ಬರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಗಿಟ್ಟಿಸಿಕೊಂಡಿದೆ.

    ಸಹಕಾರ ನಗರದ ನಿವಾಸಿ ಸಂಜೀವ್ ಕುಲಕರ್ಣಿ ಎಂಬವರು ಈ ಎಟಿಎಂ ಯಂತ್ರವನ್ನು ಅಭಿವೃದ್ಧಿಪಡಿಸಿ, ಅದರೊಳಗೆ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ಭಕ್ತರು ಗಣೇಶನ ಆಶೀರ್ವಾದ ಪಡೆದು, ಬಳಿಕ ವಿಶೇಷ ಕಾರ್ಡ್ ಹಾಕಿದರೆ ಮೋದಕ ಬರುವಂತೆ ತಂತ್ರಜ್ಞಾನವನ್ನು ಅಳವಡಿಸಿದ್ದಾರೆ. ಕಾರ್ಡ್ ಹಾಕಿದ ಬಳಿಕ ಪುಟ್ಟ ಡಬ್ಬಿ ಹೊರ ಬರುತ್ತದೆ. ಅದರೊಳಗೆ ಮೋದಕವಿದ್ದು, ಮುಚ್ಚಳದ ಮೇಲೆ ಓಂ ಎಂದು ಬರೆಯಲಾಗಿರುತ್ತದೆ.

    ಸಾಮಾನ್ಯ ಎಟಿಎಂ ನಂತೆಯೇ ಅದನ್ನು ಸಿದ್ಧಪಡಿಸಲಾಗಿದ್ದು, ಬಟನ್‍ಗಳ ಮೇಲೆ ಸಂಖ್ಯೆ ಹಾಗೂ ಸೂಚನೆ ಬದಲಾಗಿ, ಕ್ಷಮೆ, ಭಕ್ತಿ, ಪ್ರೀತಿ, ಶಾಂತಿ, ಜ್ಞಾನ ಮತ್ತು ದಾನ ಎಂದು ಬರೆಯಲಾಗಿದೆ.

    ತಂತ್ರಜ್ಞಾನ ಮತ್ತು ಸಂಸ್ಕೃತಿಯನ್ನು ಒಟ್ಟಿಗೆ ಕೂಡಿಸಿಕೊಂಡು ಮುಂದುವರಿಯುವ ಸಂಕೇತವಾಗಿ ಈ ಎಟಿಎಂ ಸಿದ್ಧಪಡಿಸಲಾಗಿದೆ. ಇದಕ್ಕಾಗಿಯೇ ತಯಾರಿಸಿದ ವಿಶೇಷ ಕಾರ್ಡ್ ತೋರಿಸಿದರೆ ಪ್ರಸಾದದ ರೂಪದಲ್ಲಿ ಮೋದಕ ಪಡೆಯಬಹುದು ಎಂದು ಯಂತ್ರವನ್ನು ಅಭಿವೃದ್ಧಿ ಪಡಿಸಿದ ಸಂಜೀವ್ ಕುಲಕರ್ಣಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ನಕಲಿ ಎಟಿಎಂ ಕಾರ್ಡ್ ಬಳಸಿ ಖದೀಮರಿಂದ ಹಣ ಡ್ರಾ!

    ನಕಲಿ ಎಟಿಎಂ ಕಾರ್ಡ್ ಬಳಸಿ ಖದೀಮರಿಂದ ಹಣ ಡ್ರಾ!

    ಮೈಸೂರು: ಖದೀಮರು ವ್ಯಕ್ತಿಯೊಬ್ಬರ ನಕಲಿ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಮೈಸೂರು ಮೂಲದ ವ್ಯಕ್ತಿಯಾದ ಗೌತಮ್ ಎಂಬವರ ಅಕೌಂಟ್‍ನಲ್ಲಿ ನಕಲಿ ಎಟಿಎಂ ಕಾರ್ಡ್ ಬಳಸಿ ಚನ್ನಪಟ್ಟಣದ ಎಟಿಎಂ ನಲ್ಲಿ ಹಣ ಡ್ರಾ ಮಾಡಿದ್ದಾರೆ. ಹಿನಕಲ್ ನ ಕೆನರಾ ಬ್ಯಾಂಕ್ ನಲ್ಲಿ ಗೌತಮ್ ಖಾತೆ ಹೊಂದಿದ್ದು, ಖಾತೆಯಲ್ಲಿ 31,500 ರೂ. ಹಣ ಇತ್ತು. ಅದನ್ನು ನಕಲಿ ಎಟಿಎಂ ಕಾರ್ಡ್ ಬಳಸಿ ಎಟಿಎಂ ನಿಂದ ಡ್ರಾ ಮಾಡಲಾಗಿದೆ.

    ಬಳಿಕ ಚನ್ನಪಟ್ಟಣದ ಎಟಿಎಂವೊಂದರಲ್ಲಿ ಹಣ ಡ್ರಾ ಆಗಿರುವ ಬಗ್ಗೆ ಗೌತಮ್‍ನ ಮೊಬೈಲ್‍ಗೆ ಮೆಸೇಜ್ ಬಂದಿದೆ. ಹಣ ಡ್ರಾ ಆಗಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಕೂಡ ಖಚಿತಪಡಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಇದೇ ರೀತಿ ಮೂರ್ನಾಲ್ಕು ಜನರ ಖಾತೆಯಿಂದ ಹಣ ಡ್ರಾ ಮಾಡಲಾಗಿದೆ. ಈ ಸಂಬಂಧ ಗೌತಮ್ ಮೈಸೂರು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಟಿಎಂಗೆ ಹಣ ತುಂಬಲು ಸಮಯ ನಿಗದಿ- ಗೃಹ ಸಚಿವಾಲಯದಿಂದ ಆದೇಶ

    ಎಟಿಎಂಗೆ ಹಣ ತುಂಬಲು ಸಮಯ ನಿಗದಿ- ಗೃಹ ಸಚಿವಾಲಯದಿಂದ ಆದೇಶ

    ನವದೆಹಲಿ: ನಗರ ಪ್ರದೇಶದ ಎಟಿಎಂ ರಾತ್ರಿ 9 ಗಂಟೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಂಜೆ 6ರ ನಂತರ ಹಣ ಹಾಕುವಂತಿಯಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಹೊಸ ಆದೇಶಕ್ಕೆ ಮುಂದಾಗಿದೆ.

    ಹೊಸ ಆದೇಶವನ್ನು ಫೆಬ್ರವರಿ 8, 2019ರಿಂದ ದೇಶದಲ್ಲಿ ಜಾರಿಗೆ ತರಲಾಗುತ್ತದೆ. ಭದ್ರತೆ ಉದ್ದೇಶದಿಂದ ಇಂತಹ ನಿರ್ಧಾರ ಕೈಗೊಳ್ಳಲಾಗುತ್ತದೆ. ಎಂದು ಗೃಹ ಸಚಿವಾಲಯ ತಿಳಿಸಿದೆ.

    ದೇಶದಾದ್ಯಂತ ಎಟಿಎಂಗಳಿಗೆ ಹಣ ಭರ್ತಿ ಮಾಡುವ ಖಾಸಗಿ ಏಜೆನ್ಸಿಗಳು ನಿತ್ಯವೂ ಸುಮಾರು 8 ಸಾವಿರ ವಾಹನಗಳನ್ನು ಬಳಕೆ ಮಾಡಿಕೊಳ್ಳುತ್ತಿವೆ. ಇವು ಬ್ಯಾಂಕ್ ಪರವಾಗಿ ಒಂದು ದಿನದಲ್ಲಿ ಒಟ್ಟು 15 ಸಾವಿರ ಕೋಟಿ ರೂ. ಹಣವನ್ನು ಎಟಿಎಂಗಳಿಗೆ ಭರ್ತಿ ಮಾಡುತ್ತವೆ.

    ಏಕೆ ಈ ಆದೇಶ?
    ಎಟಿಎಂಗಳಿಗೆ ಹಣ ಭರ್ತಿ ಮಾಡಲು ಹೋಗುವ ವಾಹನಗಳ ಮೇಲೆ ದಾಳಿ, ಎಟಿಎಂ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಅಷ್ಟೇ ಅಲ್ಲದೆ ಕೆಲವೊಮ್ಮೆ ಎಟಿಎಂಗೆ ಭರ್ತಿ ಆಗಬೇಕಾಗಿದ್ದ ಹಣವನ್ನು ಖಾಸಗಿ ಏಜೆನ್ಸಿಗಳು ತಮ್ಮ ಬಳಿಯೆ ಇಟ್ಟುಕೊಳ್ಳುತ್ತಿವೆ. ಇದನ್ನು ತಡೆಯುವ ಉದ್ದೇಶದಿಂದ ಈ ಹೊಸ ಕಾರ್ಯಾಚರಣಾ ನಿಯಮಗಳನ್ನು ತರಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

    ಆದೇಶದಲ್ಲಿ ಏನಿದೆ?
    ನಗರ ಪ್ರದೇಶದ ರಾತ್ರಿ 9 ಗಂಟೆ, ಗ್ರಾಮೀಣ ಪ್ರದೇಶದಲ್ಲಿ ಸಂಜೆ 6 ಗಂಟೆ ಹಾಗೂ ನಕ್ಸಲ್ ಪೀಡಿತ ಎಟಿಎಂ ಗಳಿಗೆ ಸಂಜೆ 4 ಗಂಟೆಯ ಒಳಗಾಗಿಯೇ ಹಣ ಭರ್ತಿ ಮಾಡಬೇಕು. ಜೊತೆಗೆ ಹಣ ಸಾಗಿಸುವ ವಾಹನದಲ್ಲಿ ಇಬ್ಬರು ಸಶಸ್ತ್ರ ಗಾರ್ಡ್‍ಗಳು ಕಡ್ಡಾಯವಾಗಿ ಇರಬೇಕು.

    ಎಟಿಎಂಗಳಿಗೆ ಹಣ ಭರ್ತಿ ಮಾಡಲು ಹೊರಟ ವಾಹನದಲ್ಲಿ ಚಾಲಕ, ಇಬ್ಬರು ಸಶಸ್ತ್ರ ಭದ್ರತಾ ಸಿಬ್ಬಂದಿ ಹಾಗೂ ಇಬ್ಬರು ಎಟಿಎಂ ಅಧಿಕಾರಿಗಳು ಇರಬೇಕು. ಒಬ್ಬ ಭದ್ರತಾ ಸಿಬ್ಬಂದಿ ಚಾಲಕನ ಪಕ್ಕದಲ್ಲಿ, ಮತ್ತೊಬ್ಬರು ಹಣ ಇರುವ ಜಾಗದಲ್ಲಿ ಕುಳಿತುಕೊಳ್ಳಬೇಕು. ಅಷ್ಟೇ ಅಲ್ಲದೆ ವಾಹನಕ್ಕೆ ಜಿಪಿಎಸ್ ಅಳವಡಿಸಿರುವ ವಾಹನವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕೆಂದು ತಿಳಿಸಲಾಗಿದೆ.

    ಎಟಿಎಂಗೆ ಹಣ ಭರ್ತಿ ಮಾಡುವ ವಾಹನದಲ್ಲಿ 5 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಸಾಗಿಸುವಂತಿಲ್ಲ. ಖಾಸಗಿ ಭದ್ರತಾ ಏಜೆನ್ಸಿಗಳು ವ್ಯಕ್ತಿಯ ವಿಳಾಸ, ಮೂಲ ದಾಖಲೆ, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಮಾಹಿತಿ ಇಲ್ಲದೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಂತಿಲ್ಲ ಎಂದು ಹೊಸ ಆದೇಶದಲ್ಲಿ ಸೇರಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 100 ರೂ. ಡ್ರಾ ಮಾಡಿದ್ರೆ, 2 ಸಾವಿರ ರೂ. ನೋಟು ಬಂತು

    100 ರೂ. ಡ್ರಾ ಮಾಡಿದ್ರೆ, 2 ಸಾವಿರ ರೂ. ನೋಟು ಬಂತು

    -ಕೆಲವೇ ಕ್ಷಣಗಳಲ್ಲಿ 8.71 ಲಕ್ಷ ಹಣ ಡ್ರಾ

    ಪಾಟ್ನಾ: ಎಟಿಎಂನಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಬಿಹಾರದ ಹನಾಬಾದ್‍ನಲ್ಲಿ 100 ರೂ. ನೋಟಿನ ಬದಲಾಗಿ 2000 ರೂ. ನೋಟು ಬಂದಿದೆ.

    ಶುಕ್ರವಾರ ಜಹನಾಬಾದ್ ನಗರದ ಇಂಡಿಯನ್ ಬ್ಯಾಂಕ್‍ನ ಎಟಿಎಂನಲ್ಲಿ ನೂರು ರೂಪಾಯಿ ನೋಟಿನ ಬದಲಾಗಿ 2 ಸಾವಿರ ರೂ. ಮುಖಬೆಲೆಯ ನೋಟುಗಳು ಬಂದಿವೆ. ಮೊದಲಿಗೆ ಸುದ್ದಿ ಹರಡುತ್ತಿದ್ದಂತೆ ಒಂದು ಕ್ಷಣ ಜನರು ನಂಬಿರಲಿಲ್ಲ. ಎಟಿಎಂ ಬಳಿ ಬಂದಾಗ 100 ರೂ. ಪಡೆಯಲು ಸೂಚಿಸಿದಾಗ 2 ಸಾವಿರ ರೂ. ನೋಟ್ ಬಂದಿದೆ.

    ಸುದ್ದಿ ತಿಳಿಯುತ್ತಿದ್ದಂತೆ ಜನರು ಎಟಿಎಂ ಮುಂದೆ ಹಣ ಪಡೆಯುವಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಎಟಿಎಂನಲ್ಲಿದ್ದ 436 ನೋಟುಗಳು ಖಾಲಿ ಆಗುವರೆಗೂ ಜನರು ಸರತಿ ಸಾಲಿನಲ್ಲಿ ನಿಂತಿದ್ದರು ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

    ಎಟಿಎಂನಲ್ಲಿ ಹಣ ಹಾಕುವ ಅಧಿಕಾರಿಯ ತಪ್ಪಿನಿಂದಾಗಿ ಈ ಘಟನೆ ನಡೆದಿದೆ. ಎಟಿಎಂನಲ್ಲಿ ಹಣ ಹಾಕುವಾಗ ಮೂರು ಕೆಸೆಟ್ (ಬಾಕ್ಸ್) ಗಳು ಇರುತ್ತವೆ. 100 ರೂ., 500 ರೂ. ಮತ್ತು 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನಿಡುವ ಮೂರು ಕೆಸೆಟ್ ಇರುತ್ತವೆ. ಯಂತ್ರದ ಕೆಸೆಟ್‍ನಲ್ಲಿ ಹಣ ಇಡುವಾಗ ಅಧಿಕಾರಿ 100 ರೂ. ಸ್ಥಾನದಲ್ಲಿ 2 ಸಾವಿರ ರೂ. ನೋಟುಗಳನ್ನು ಇಟ್ಟಿದ್ದಾರೆ. ಬರೋಬ್ಬರಿ 8,72,000 ರೂ. ಹಣವನ್ನು ಜನರು ಡ್ರಾ ಮಾಡಿದ್ದಾರೆ. ಎಲ್ಲ ಗ್ರಾಹಕರ ಮಾಹಿತಿ ನಮ್ಮ ಬಳಿ ಲಭ್ಯವಿದ್ದು, ಎಲ್ಲರಿಂದಲೂ ಹಣ ಹಿಂಪಡೆಯಲಾಗುವುದು ಎಂದು ಇಂಡಿಯನ್ ಬ್ಯಾಂಕ್‍ನ ಮ್ಯಾನೇಜರ್ ಅಭಿಷೇಕ್ ಕುಮಾರ್ ತಿಳಿಸಿದ್ದಾರೆ.

  • ಎಟಿಎಂ ನಲ್ಲಿಯೇ ಯುವಕ-ಯುವತಿ ರಾಸಲೀಲೆ!

    ಎಟಿಎಂ ನಲ್ಲಿಯೇ ಯುವಕ-ಯುವತಿ ರಾಸಲೀಲೆ!

    ಮಾಸ್ಕೋ: ಜೋಡಿಯೊಂದು ಅಸಭ್ಯವಾಗಿ ಎಟಿಎಂನಲ್ಲಿ ರಾಸಲೀಲೆ ನಡೆಸಿದ್ದು, ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಘಟನೆ ರಷ್ಯಾದಲ್ಲಿನ ಸಮರ ನಗರದಲ್ಲಿ ನಡೆದಿದ್ದು, ನಗರದಲ್ಲಿರುವ ಬ್ಯಾಂಕಿನ ಎಟಿಎಂನಲ್ಲಿ ಈ ರೀತಿ ಅಸಭ್ಯವಾಗಿ ವರ್ತಿಸಿದ್ದಾರೆ. ಈ ದೃಶ್ಯವನ್ನು ದಾರಿಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ವಿಡಿಯೋ ಮಾಡಿದ್ದಾರೆ.

    ವಿಡಿಯೋದಲ್ಲಿ ರಸ್ತೆ ಪಕ್ಕದಲ್ಲಿದ್ದ ಬ್ಯಾಂಕೊಂದರಲ್ಲಿ ಎಟಿಎಂ ಮಷೀನ್ ಇರಿಸಲಾಗಿತ್ತು. ಆ ಬ್ಯಾಂಕಿನ ಸುತ್ತಾ ಗ್ಲಾಸಿನಿಂದ ಮುಚ್ಚಲಾಗಿದೆ. ಯುವಕ-ಯುವತಿ ಎಟಿಎಂ ಒಳ ಹೋಗಿ ಇಬ್ಬರು ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ಎಲ್ಲ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ರಸ್ತೆಯ ಪಕ್ಕದಲ್ಲಿಯೇ ಎಟಿಎಂ ಇದ್ದುದ್ದರಿಂದ ದಾರಿಯಲ್ಲಿ ಹೋಗುವವರೆಲ್ಲರೂ ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆದ ಮೇಲೆ ಅನೇಕರು ಯುವಕ-ಯುವತಿಯ ಬಗ್ಗೆ ಅನೇಕ ಕಮೆಂಟ್ ಮಾಡಿದ್ದಾರೆ. ಎಟಿಎಂನಲ್ಲಿದ್ದ ಜೋಡಿ ಕಂಠಪೂರ್ತಿ ಕುಡಿದಿದ್ದು, ಅವರ ಪಕ್ಕದಲ್ಲಿ ಬಿಯರ್ ಬಾಟಲ್ ಗಳಿವೆ ಎಂದು ಕಮೆಂಟ್ ಮಾಡಿದ್ದಾರೆ.

    ಮತ್ತೊಬ್ಬರು ಯುವತಿ ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡಿದ್ದು, ಅದನ್ನು ತೀರಿಸಲು ಎಟಿಎಂ ಒಳಗೆ ಇದ್ದಾಳೆ ಎಂದು ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಅದನ್ನು ವಿಡಿಯೋ ಮಾಡುವ ಬದಲು ಪೊಲೀಸರಿಗೆ ಕರೆ ಮಾಡಿ ತಿಳಿಸಿಬೇಕಿತ್ತು ಎಂದು ಹೇಳಿದ್ದಾರೆ.

    ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವ-ಯುವತಿಯ ವಿಡಿಯೋ ಬಗ್ಗೆ ವ್ಯಂಗ್ಯವಾಗಿ ಕಮೆಂಟ್ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸಿಸಿಟಿವಿಗೆ ಛತ್ರಿ ಹಿಡಿದು ಎಟಿಎಂನಿಂದ 14 ಲಕ್ಷ ರೂ. ಕಳ್ಳತನ- ದುಬೈನಲ್ಲಿ ಆರೋಪಿ ಅರೆಸ್ಟ್

    ಸಿಸಿಟಿವಿಗೆ ಛತ್ರಿ ಹಿಡಿದು ಎಟಿಎಂನಿಂದ 14 ಲಕ್ಷ ರೂ. ಕಳ್ಳತನ- ದುಬೈನಲ್ಲಿ ಆರೋಪಿ ಅರೆಸ್ಟ್

    ಕಲಬುರಗಿ: ಸಿಸಿಟಿವಿಗೆ ಛತ್ರಿ ಹಿಡಿದು ಎಟಿಎಂಗೆ ಕನ್ನ ಹಾಕಿ 14 ಲಕ್ಷ ರೂ. ಹಣ ದೋಚಿ ದುಬೈಗೆ ಪರಾರಿಯಾಗಿದ್ದ ಆರೋಪಿಯನ್ನು ಜಿಲ್ಲೆಯ ವಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಶಿವಕುಮಾರ್ (25) ಬಂಧಿತ ಆರೋಪಿ. ಜಿಲ್ಲೆಯ ಚಿತ್ತಾಪುರ ತಾಲೂಕಿನ ಕುಂಬಾರಹಳ್ಳಿ ಗ್ರಾಮದ ಬಳಿಯಿರುವ ಇಂಡಿಯಾ ಒನ್ ಎಟಿಎಂ ನಲ್ಲಿ ಜೂನ್ 06 ರಂದು ಶಿವಕುಮಾರ್, ಜಗದೇವಪ್ಪ (23) ಹಾಗೂ ಜಗನ್ನಾಥ್ (26) ಸೇರಿ ಎಟಿಎಂ ಪಾಸ್ ವರ್ಡ್ ಬಳಸಿ ಕಳ್ಳತನ ಮಾಡಿದ್ದರು. ಬಳಿಕ ಶಿವಕುಮಾರ್ ದುಬೈಗೆ ಎಸ್ಕೇಪ್ ಆಗಿದ್ದ.

    ಎಟಿಎಂ ಕಳ್ಳತನ ಕುರಿತು ಮಾಹಿತಿ ಪಡೆದ ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದರು. ಪ್ರಾಥಮಿಕ ತನಿಖೆ ವೇಳೆ ಎಟಿಎಂ ಅಳವಡಿಸಿದ್ದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದರು. ದೃಶ್ಯಗಳಲ್ಲಿ ಎಟಿಎಂನಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳು ಸಿಸಿಟಿವಿಗೆ ಛತ್ರಿ ಅಡ್ಡ ಹಿಡಿದು ಕೃತ್ಯ ಎಸಗಿದ್ದರು.

    ಆರೋಪಿಗಳು ಸಿಕ್ಕಿ ಬಿದಿದ್ದು ಹೇಗೆ:
    ಎಟಿಎಂ ನಲ್ಲಿ ಕಳ್ಳತನ ನಡೆದ ಬಳಿಕ ಎಟಿಎಂ ಗನ್‍ಮ್ಯಾನ್ ಆಗಿದ್ದ ಬಂಧಿತ ಜಗದೇವಪ್ಪ 10 ದಿನಗಳ ಕಾಲ ನಾಪತ್ತೆಯಾಗಿದ್ದ. ಅಲ್ಲದೇ ಕಳ್ಳತನ ಎಸಗಿದ್ದ ಆರೋಪಿಗಳು ಎಟಿಎಂ ಪಿನ್ ಕೋಡ್ ಬಳಸಿ ಕಳ್ಳತನ ಮಾಡಿದ್ದರು. ಈ ಮಾಹಿತಿಯನ್ನ ಪಡೆದ ಪೊಲೀಸರು ಜಗದೇವಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಜಗನ್ನಾಥನನ್ನು ಬಂಧಿಸಿದ್ದು, ಬಂಧಿತರಿಂದ 10.20 ಲಕ್ಷ ರೂ. ನಗದು, ಬೈಕ್, ಮೊಬೈಲ್, 12 ಎಟಿಎಂ ಪಾಸ್ ವರ್ಡ್ ವಶಕ್ಕೆ ಪಡೆದಿದ್ದರು.

    ಅಲ್ಲದೇ ಬಂಧಿತರನ್ನು ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿದ ವೇಳೆ ಆರೋಪಿಗಳು ಶಿವಕುಮಾರ್ ದುಬೈಗೆ ಎಸ್ಕೇಪ್ ಆಗಿದ್ದರ ಕುರಿತು ಬಾಯ್ಬಿಟ್ಟಿದ್ದಾರೆ. ಬಳಿಕ ಆರೋಪಿಗಳಿಂದ ಪಡೆದ ಮಾಹಿತಿ ಅನ್ವಯ ಪೊಲೀಸರು ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಇಂದು ಮುಂಜಾನೆ ವಾಡಿ ಪೊಲೀಸರು ಆರೋಪಿಯನ್ನು ಬಂಧಿಸಿ ದುಬೈನಿಂದ ವಾಪಸ್ ಕರೆತಂದಿದ್ದಾರೆ.

  • ಔಷಧಿಗಾಗಿ ಹಣ ಡ್ರಾ ಮಾಡಿದ್ರೆ ಬಂತು ಹರಿದ ನೋಟುಗಳು- ಗ್ರಾಹಕ ಕಂಗಾಲು

    ಔಷಧಿಗಾಗಿ ಹಣ ಡ್ರಾ ಮಾಡಿದ್ರೆ ಬಂತು ಹರಿದ ನೋಟುಗಳು- ಗ್ರಾಹಕ ಕಂಗಾಲು

    – ಬ್ಯಾಂಕಿನಲ್ಲಿ ಕೇಳಿದ್ರೆ ನಮಗೆ ಬರಲ್ಲ, ನಾವು ಹಾಕಿಲ್ಲ ಅಂದ್ರು

    ದಾವಣಗೆರೆ: ಎರಡು ಸಾವಿರ ಮುಖಬೆಲೆಯ ನೋಟುಗಳು ಬಂದಾಗಿನಿಂದ ಜನರಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಅದರಲ್ಲೂ ಎಟಿಎಂ ಗಳಲ್ಲಿ ಹರಿದ ಹಾಗೂ ಬಣ್ಣ ಹೋಗಿರುವ ನೋಟುಗಳು ಗ್ರಾಹಕರ ಕೈ ಸೇರುತ್ತಿವೆ.

    ದಾವಣಗೆರೆಯ ಎಸ್.ಎಸ್ ಆಸ್ಪತ್ರೆಯಲ್ಲಿರುವ ಎಸ್.ಬಿ.ಎಂ ಎಟಿಎಂನಲ್ಲಿ ರಾಜು ಅವರಿಗೆ ಎಟಿಎಂ ನಿಂದ ಹರಿದ ಎರಡು ಸಾವಿರ ನೋಟುಗಳು ಬಂದಿವೆ. ತಂದೆಯನ್ನು ಆಸ್ಪತ್ರೆಗೆ ಸೇರಿಸಿ ಔಷಧಿ ತೆಗೆದುಕೊಳ್ಳಲು ಎಟಿಎಂ ನಿಂದ ಆರು ಸಾವಿರ ಹಣ ಡ್ರಾ ಮಾಡಿದಾಗ ಹರಿದ ಎರಡು ಸಾವಿರ ನೋಟುಗಳು ಬಂದಿವೆ. ಇದನ್ನೂ ಓದಿ: ಎಟಿಎಂನಲ್ಲಿ ಹರಿದ, ಮಸಿ ಹತ್ತಿದ 2 ಸಾವಿರ ನೋಟುಗಳು ಪತ್ತೆ

    ನೋಟು ಬದಲೀಕರಣ ಮಾಡುವಂತೆ ಎಸ್.ಬಿಎಂ ಬ್ಯಾಂಕಿನಲ್ಲಿ ವಿಚಾರಿಸಿದ್ದಾರೆ. ಆದರೆ ಅವರು ನಮಗೆ ಬರುವುದಿಲ್ಲ. ನಾವು ಎರಡು ಸಾವಿರ ನೋಟುಗಳನ್ನು ಎಟಿಎಂನಲ್ಲಿ ಹಾಕಿಲ್ಲ. ಬೇರೆ ಬ್ಯಾಂಕಿನಲ್ಲಿ ಹೋಗಿ ವಿಚಾರಿಸಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಟಿಎಂನಿಂದ ಡ್ರಾ ಮಾಡ್ದಾಗ ಸುಟ್ಟ, ಹರಿದ, ಮಸಿ ಮೆತ್ತಿಕೊಂಡ 6 ನೋಟುಗಳು ಬಂದ್ವು!

    ಮೂರು-ನಾಲ್ಕು ಬ್ಯಾಂಕ್ ಗಳಲ್ಲಿ ವಿಚಾರಿಸಿದರೂ ನೋಟುಗಳನ್ನು ಬದಲೀಕರಣ ಮಾಡಿಕೊಟ್ಟಿಲ್ಲ. ಇತ್ತ ಹಣವಿಲ್ಲದೆ ನೋಟುಗಳ ಬದಲೀಕರಣ ಮಾಡದೇ ರಾಜು ಒದ್ದಾಡುತ್ತಿದ್ದಾರೆ. ನಮ್ಮಂತೆ ಯಾರಿಗೂ ಆಗಬಾರದು, ಆಸ್ಪತ್ರೆಯಲ್ಲಿ ಇರುವವರಿಗೆ ಔಷಧಿಗಾಗಿ ಹಣ ಹೊಂದಿಸಿದರೆ, ಈಗ ಎಟಿಎಂನಿಂದ ಹರಿದ ನೋಟುಗಳು ಬಂದಿವೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

  • ಹೊಸ 100 ರೂ. ನೋಟು ಎಟಿಎಂನಲ್ಲಿ ಅಳವಡಿಸಲು 100 ಕೋಟಿ ರೂ. ಖರ್ಚು!

    ಹೊಸ 100 ರೂ. ನೋಟು ಎಟಿಎಂನಲ್ಲಿ ಅಳವಡಿಸಲು 100 ಕೋಟಿ ರೂ. ಖರ್ಚು!

    ಮುಂಬೈ: 100 ರೂ. ಮುಖ ಬೆಲೆಯ ಹೊಸ ನೋಟು ಮುದ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೂಚಿಸಿದ ಬೆನ್ನಲ್ಲೇ ಈ ಹೊಸ ನೋಟುಗಳ ವಿನ್ಯಾಸಕ್ಕೆ ತಕ್ಕಂತೆ ಎಟಿಎಂಗಳಲ್ಲಿ ಬದಲಾವಣೆ ಮಾಡಲು 100 ಕೋಟಿ ಖರ್ಚಾಗಲಿದೆ ಎಂಬ ಮಾಹಿತಿ ಲಭಿಸಿದೆ.

    ದೇಶದಲ್ಲಿ 2.4 ಲಕ್ಷ ಕೋಟಿ ಎಟಿಎಂ ಗಳಿ ಸೇವೆಗೆ ಲಭ್ಯವಿದೆ. ಎಲ್ಲ ಎಟಿಎಂಗಳಲ್ಲಿ ಹೊಸ ನೋಟಿನ ವಿನ್ಯಾಸಕ್ಕೆ ತಕ್ಕಂತೆ ತಂತ್ರಜ್ಞಾನ ಬದಲಾಯಿಸಿ ಅಳವಡಿಸುವ ಅನಿವಾರ್ಯತೆ ಇರುವುದಾಗಿ ಪೈನಾಷಿಯಲ್ ಸಾಫ್ಟ್ ವೇರ್ ಸಿಸ್ಟಮ್ ಒಕ್ಕೂಟದ ಅಧ್ಯಕ್ಷರು ತಿಳಿಸಿದ್ದಾರೆ.

    ನೋಟು ನಿಷೇಧ ಬಳಿಕ ಮುದ್ರಣ ಮಾಡಲಾದ 200 ರೂ. ಮುಖ ಬೆಲೆಯ ಹೊಸ ನೋಟುಗಳ ವಿನ್ಯಾಸಕ್ಕೆ ತಕ್ಕಂತೆ ಎಟಿಎಂಗಳಲ್ಲಿ ಬದಲಾವಣೆ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಈ ಮಧ್ಯೆ ಹೊಸ 100 ರೂ. ನೋಟಿನ ಅಳವಡಿಕೆಗೆ 100 ಕೋಟಿ. ರೂ ವೆಚ್ಚವಾಗಲಿದೆ.

    ದೇಶದಲ್ಲಿರುವ 2.4 ಲಕ್ಷ ಎಟಿಎಂ ಗಳಲ್ಲಿ ಹೊಸ ಬದಲಾವಣೆ ಮಾಡಲು 100 ಕೋಟಿ ರೂ. ವೆಚ್ಚದೊಂದಿಗೆ 12 ತಿಂಗಳ ಅವಧಿಯ ಬೇಕಾಗುತ್ತದೆ ಎಂದು ಹಿಟಾಚಿ ಸೇವಾ ಸಂಸ್ಥೆಯ ಎಂಡಿ ಲೂನಿ ಆ್ಯಂಟೋನಿ ತಿಳಿಸಿದ್ದಾರೆ.

    ಆರ್‌ಬಿಐ ಕೆಲ ದಿನಗಳ ಹಿಂದೆಯಷ್ಟೇ ಹೊಸ ವಿನ್ಯಾಸದ 100 ರೂ. ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ನೂತನ 100 ರೂಪಾಯಿಯ ಹೊಸ ನೋಟು ಲ್ಯಾವೆಂಡರ್(ನೀಲಿ) ಬಣ್ಣ ಹೊಂದಿದ್ದು, 66 ಮಿ.ಮೀ. ಘಿ 142 ಮಿ.ಮೀ. ಅಳತೆಯಲ್ಲಿದೆ. ನೋಟಿನ ಹಿಂಭಾಗದಲ್ಲಿ ಗುಜರಾತ್ ನ ಐತಿಹಾಸಿಕ `ರಾಣಿ ಕಿ ವಾವ್’ನ ಚಿತ್ರವನ್ನು ಹೊಂದಿರಲಿದೆ. ಅಲ್ಲದೇ ಈಗಾಗಲೇ ಚಾಲ್ತಿಯಲ್ಲಿರುವ 100 ರೂ. ಮುಖಬೆಲೆಯ ನೋಟುಗಳು ಚಾಲ್ತಿಯಲ್ಲಿರುತ್ತವೆ ಎಂದು ತಿಳಿಸಿದ್ದ ಆರ್‌ಬಿಐ ಮುಂದಿನ ದಿನಗಳಲ್ಲಿ ಹೊಸ ವಿನ್ಯಾಸದ ನೋಟುಗಳ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ಮಾಹಿತಿ ನೀಡಿತ್ತು.

  • ಎಟಿಎಂನಲ್ಲಿ ಬಂತು ಪೀಸ್ ಪೀಸ್ ನೋಟು – ಗ್ರಾಹಕ ಶಾಕ್

    ಎಟಿಎಂನಲ್ಲಿ ಬಂತು ಪೀಸ್ ಪೀಸ್ ನೋಟು – ಗ್ರಾಹಕ ಶಾಕ್

    ಬೆಂಗಳೂರು: ಎಟಿಎಂನಲ್ಲಿ ಗರಿ ಗರಿ ನೋಟ್ ಬರುತ್ತೆ ಅಂತಾ ಡ್ರಾ ಮಾಡಿದ್ದ ಗ್ರಾಹಕನಿಗೆ ಪೀಸ್ ಪೀಸ್ ಆದ ನೋಟುಗಳು ಸಿಕ್ಕಿದೆ.

    ನಗರದ ನಂದಿನಿ ಲೇಔಟ್‍ನ ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ತೆಗೆದ ನೋಟು ಪೀಸ್ ಪೀಸ್ ಆಗಿ ಬಂದಿವೆ. ಗ್ರಾಹಕ ಜಯರಾಜ್ ಶನಿವಾರ ಹಣ ಡ್ರಾ ಮಾಡಿದ್ದಾರೆ. ಡ್ರಾ ಮಾಡಿದ ಹಣವನ್ನು ಮನೆಯಲ್ಲಿ ನೋಡಿದ್ದಾರೆ. ಅಲ್ಲಿ ಪುಡಿ ಪುಡಿಯಾಗಿ ನೋಟುಗಳು ಉದುರಿವೆ.

    ಈ ಪುಡಿಯಾಗಿರುವ ಕಳಪೆ ನೋಟಿನ ಬಗ್ಗೆ ಆರ್  ಬಿಐ ಅಧಿಕಾರಿಗಳ ಗಮನಕ್ಕೆ ತರಲು ನಾನು ಮುಂದಾಗಿದ್ದೇನೆ. ಸೋಮವಾರ ಆರ್ ಬಿಐ  ಅಧಿಕಾರಿಗಳನ್ನು ಭೇಟಿ ಮಾಡಿ ನೋಟು ನೀಡಿ ಪರಿಹಾರ ಕೇಳುತ್ತೇನೆ. ಹೊಸ ನೋಟು ಬಂದು ಒಂದು ವರ್ಷ ಆಗಿಲ್ಲ. ಆಗಲೇ ಈ ರೀತಿಯ ಕಳಪೆ ನೋಟುಗಳು ಬರುತ್ತಿರುವ ಕಾರಣ ಇದರ ಬಗ್ಗೆ ತನಿಖೆಯಾಗಬೇಕು ಎಂದು ಜಯರಾಜ್ ಆಗ್ರಹಿಸಿದ್ದಾರೆ.

  • ಲ್ಯಾಬ್‍ನಲ್ಲಿ ಎಟಿಎಂ ಎಗರಿಸಿ, 20 ಸಾವಿರ ರೂ. ಡ್ರಾ: ಬಾಲಕರ ಕೈಚಳಕ

    ಲ್ಯಾಬ್‍ನಲ್ಲಿ ಎಟಿಎಂ ಎಗರಿಸಿ, 20 ಸಾವಿರ ರೂ. ಡ್ರಾ: ಬಾಲಕರ ಕೈಚಳಕ

    ಶಿವಮೊಗ್ಗ: ಮೆಡಿಕಲ್ ಲ್ಯಾಬೋರೇಟರಿಯಲ್ಲಿ ಇಬ್ಬರು ಬಾಲಕರು ಚಾಣಾಕ್ಷತನದಿಂದ ಎಟಿಎಂ ಎಗರಿಸಿ, 20 ಸಾವಿರ ರೂಪಾಯಿ ಡ್ರಾ ಮಾಡಿರುವ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಭದ್ರಾವತಿ ತಾಲೂಕಿನ ಮತ್ತಿಗಟ್ಟದ ಮಲ್ಲೇಶಪ್ಪ ಎಟಿಎಂ ಜೊತೆ ಹಣವನ್ನೂ ಕಳೆದುಕೊಂಡ ವ್ಯಕ್ತಿ. ಇದೇ ವರ್ಷ ಮಾರ್ಚ್ 7 ರಂದು ಮಲ್ಲೇಶಪ್ಪ ಅವರು ತಮ್ಮ ಮಗಳನ್ನು ಚಿಕಿತ್ಸೆಗಾಗಿ ಕರೆದುಕೊಂಡು ಬಂದಾಗ ಈ ಘಟನೆ ನಡೆದಿದೆ.

    ನಗರದ ಪಾರ್ಕ್ ಬಡಾವಣೆಯಲ್ಲಿರುವ ಮಲ್ನಾಡ್ ಡಯಾಗ್ನೋಸ್ಟಿಕ್‍ಗೆ ಮಗಳನ್ನು ಮಲ್ಲೇಶಪ್ಪ ಕರೆದುಕೊಂಡು ಬಂದಿದ್ದರು. ಮಲ್ಲೇಶಪ್ಪ ಅವರು ತಮ್ಮ ಎಟಿಎಂ ಮೂಲಕ ಲ್ಯಾಬ್ ಶುಲ್ಕ ಪಾವತಿಸಿದ್ದರು. ಈ ವೇಳೆ ಅಲ್ಲಿಯೇ ಇದ್ದ ಬಾಲಕರು ಎಟಿಎಂ ಪಿನ್ ನಂಬರ್ ತಿಳಿದುಕೊಂಡಿದ್ದಾರೆ. ಮಲ್ಲೇಶಪ್ಪ ಅವರನ್ನು ಹಿಂಬಾಲಿಸಿ, ರಿಪೋರ್ಟ್ ಗಾಗಿ ಕಾಯುತ್ತಿದ್ದ ವೇಳೆ ಚಾಣಾಕ್ಷತನದಿಂದ ಎಟಿಎಂ ಕಾರ್ಡ್ ಕಳ್ಳತನ ಮಾಡಿದ್ದಾರೆ.

    ತಕ್ಷಣವೇ ಅಲ್ಲಿಂದ ಪರಾರಿಯಾದ ಬಾಲಕರು ಸಮೀಪದ ಎಟಿಎಂನಲ್ಲಿ 20 ಸಾವಿರ ರೂ. ಡ್ರಾ ಮಾಡಿದ್ದಾರೆ. ಲ್ಯಾಬಿನಲ್ಲಿಯೇ ಕಾರ್ಡ್ ಕಳೆದಿದೆ ಎಂಬ ಶಂಕೆ ವ್ಯಕ್ತವಾಗಿದ್ದರಿಂದ ಇಂದು ವಿಚಾರಿಸಲು ಮಲ್ಲೇಶಪ್ಪ ಬಂದಿದ್ದರು. ಆಗ ಸಿಸಿಟಿವಿ ಕ್ಯಾಮೆರಾದಲ್ಲಿ ಬಾಲಕರ ಕರಾಮತ್ತು ಬೆಳಕಿಗೆ ಬಂದಿದೆ. ಈ ಬಗ್ಗೆ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.