Tag: atm withdrawal

  • ಮೇ.1 ರಿಂದ ಎಟಿಎಂ ವಿತ್ ಡ್ರಾ ಶುಲ್ಕ 2 ರೂ. ಹೆಚ್ಚಳ

    ಮೇ.1 ರಿಂದ ಎಟಿಎಂ ವಿತ್ ಡ್ರಾ ಶುಲ್ಕ 2 ರೂ. ಹೆಚ್ಚಳ

    ನವದೆಹಲಿ: ಎಟಿಎಂಗಳಿಂದ ಹಣ ವಿತ್ ಡ್ರಾ (ATM Money Withdraw) ಮಾಡುವುದರ ಮೇಲೆ ವಿಧಿಸಲಾಗುವ ಶುಲ್ಕವನ್ನು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಮೇ.1 ರಿಂದ 2 ರೂ. ದುಬಾರಿಯಾಗಲಿದೆ.

    ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡುವ ಶುಲ್ಕವನ್ನು ಹೆಚ್ಚಿಸಲು ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಅನುಮತಿ ನೀಡಿದ್ದು, ಇದೇ ಮೇ. 1ರಿಂದ ಹೊಸ ಶುಲ್ಕಗಳು ಅನ್ವಯಿಸಲಿವೆ.ಇದನ್ನೂ ಓದಿ:ಶ್ರೀಲೀಲಾಗೆ ‘ನೀನೇ ನನ್ನ ಜೀವನ’ ಎಂದ ಬಾಲಿವುಡ್ ನಟ ಕಾರ್ತಿಕ್ ಆರ್ಯನ್

    ಒಂದು ತಿಂಗಳಿಗೆ ಎಟಿಎಂನಿಂದ 5 ಬಾರಿ ಉಚಿತವಾಗಿ ಹಣವನ್ನು ಡ್ರಾ ಮಾಡಬಹುದು. ಅದಕ್ಕಿಂತ ಹೆಚ್ಚು ಬಾರಿ ಹಣ ವಿತ್ ಡ್ರಾ ಮಾಡಲು ಹೋದರೆ 31 ರೂ.ಗಳನ್ನು ಕಡಿತಗೊಳಿಸುತ್ತಿತ್ತು. ಆದರೆ ಇದೀಗ ಈ ಶುಲ್ಕವನ್ನು 2ರೂ.ಗೆ ಏರಿಕೆ ಮಾಡಿದ್ದು, ಗರಿಷ್ಠ ಮಿತಿ ಮೀರಿ ಡ್ರಾ ಮಾಡಿದ್ರೆ 23 ರೂ. ಕಡಿತಗೊಳ್ಳಲಿವೆ. ಈ ಮೂಲಕ 21 ರೂ.ಯಿಂದ 23 ರೂ.ಗೆ ಏರಿಕೆಯಾಗಿದೆ.

    ಪ್ರಸ್ತುತ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಮುಂಬೈ ಮತ್ತು ನವದೆಹಲಿಯಲ್ಲಿ ಖಾತೆ ಹೊಂದಿರುವವರು ತಮ್ಮ ಬ್ಯಾಂಕಿನ ಎಟಿಎಂಗಳಲ್ಲಿ ಮಾಸಿಕ ಐದು ಮತ್ತು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಮೂರು ಉಚಿತ ವಿತ್ ಡ್ರಾ ಮಾಡಿಕೊಳ್ಳಬಹುದು. ಇದರ ಪ್ರಮಾಣದಲ್ಲಿ ಹೆಚ್ಚಳವಾದಾಗ ಆಗ ಈ 2ರೂ. ಏರಿಕೆಯ ಇಂಟರ್‌ಚೇಂಜ್ ಶುಲ್ಕವು (Interchange Cost)  ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ.

    ಇತ್ತೀಚಿನ ದಿನಗಳಲ್ಲಿ ಎಟಿಎಂ ಬಳಕೆ ಸ್ಥಿರವಾಗಿ ಕುಸಿತ ಕಂಡಿದೆ. ಆರ್‌ಬಿಐ ಅಂಕಿಅಂಶಗಳ ಪ್ರಕಾರ, 2023ರ ಜನವರಿಯಲ್ಲಿ 57 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆದಿತ್ತು. ಇನ್ನೂ 2024ರ ಜನವರಿಯಲ್ಲಿ 52.72 ಕೋಟಿ ರೂ.ಗೆ ಇಳಿಕೆ ಕಂಡುಬಂದಿತ್ತು. ಈ ವರ್ಷ ಜನವರಿಯಲ್ಲಿ ಇದು 48.83 ಕೋಟಿ ರೂ.ಗೆ ಇಳಿಕೆಯಾಗಿದೆ.ಇದನ್ನೂ ಓದಿ:ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣ- ರಜತ್, ವಿನಯ್ ಗೌಡ ಜೈಲಿನಿಂದ ರಿಲೀಸ್

  • ಗಮನಿಸಿ, ಎಸ್‍ಬಿಐ ಎಟಿಎಂನಿಂದ ಹಣ ಡ್ರಾ ಮಾಡಿದ್ರೆ 25 ರೂ. ಶುಲ್ಕ ಇಲ್ಲ

    ಗಮನಿಸಿ, ಎಸ್‍ಬಿಐ ಎಟಿಎಂನಿಂದ ಹಣ ಡ್ರಾ ಮಾಡಿದ್ರೆ 25 ರೂ. ಶುಲ್ಕ ಇಲ್ಲ

    – ಸುತ್ತೋಲೆ ಬಳಿಕ ಸ್ಪಷ್ಟನೆ ನೀಡಿದ ಎಸ್‍ಬಿಐ

    ನವದೆಹಲಿ: ಎಟಿಎಂನಿಂದ ಹಣವನ್ನು ಡ್ರಾ ಮಾಡಿದ್ರೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ ಎಂದು ಎಸ್‍ಬಿಐ ಸ್ಪಷ್ಟನೆ ನೀಡಿದೆ.

    ಎಸ್‍ಬಿಐ ಬಡ್ಡಿ  ಮತ್ತು ಮೊಬೈಲ್ ವ್ಯಾಲೆಟ್ ಬಳಸಿ ಎಟಿಎಂನಿಂದ ಹಣ ವನ್ನು ತೆಗೆಯುವ ಗ್ರಾಹಕರಿಗೆ ಮಾತ್ರ 25 ರೂ. ಶುಲ್ಕ ಅನ್ವಯವಾಗಲಿದೆ. ಇದು ಉಳಿತಾಯ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ ಅನ್ವಯವಾಗುವುದಿಲ್ಲ ಎಂದು  ಎಂದು ಎಸ್‍ಬಿಐ ತಿಳಿಸಿದೆ.

    ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾದ ಬಳಿಕ, ಎಸ್‍ಬಿಐ ಆಡಳಿತ ನಿರ್ದೇಶಕ ರಜನೀಶ್ ಕುಮಾರ್ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದು, ಶೀಘ್ರವೇ ಮತ್ತೊಂದು ಸುತ್ತೋಲೆ ಹೊರಡಿಸಲಾಗುವುದು. ಅಷ್ಟೇ ಅಲ್ಲದೇ ನೂತನ ಸೇವಾ ಶುಲ್ಕ ಜೂನ್ 1ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

    ಹೀಗಾಗಿ ಬುಧವಾರ ಎಸ್‍ಬಿಐ ಹೊರಡಿಸಿದ ಸುತ್ತೋಲೆಯಲ್ಲಿ ಏನಿತ್ತು ಎನ್ನುವುದಕ್ಕೆ ಅದರ ಪ್ರತಿಯನ್ನು ಇಲ್ಲಿ ನೀಡಲಾಗಿದೆ.

    ಯಾವುದಕ್ಕೆ ಎಷ್ಟು ಶುಲ್ಕ?
    ಐಎಂಪಿಎಸ್ ಹಣ ವರ್ಗಾವಣೆ:
    1 ಲಕ್ಷ ರೂ.ವರೆಗಿನ ಹಣಕ್ಕೆ 5 ರೂ. ಮತ್ತು ಸೇವಾ ಶುಲ್ಕ ವಿಧಿಸಿದರೆ, 1 ಲಕ್ಷ ದಿಂದ ಮೇಲ್ಪಟ್ಟು 2 ಲಕ್ಷರೂ ವರೆಗಿನ ವ್ಯವಹಾರಕ್ಕೆ  15 ರೂ. ಮತ್ತು ಸೇವಾ ಶುಲ್ಕ ವಿಧಿಸಲಿದೆ. 2 ಲಕ್ಷದಿಂದ ಮೇಲ್ಪಟ್ಟು 5 ಲಕ್ಷ ರೂ.ವರೆಗಿನ ವ್ಯವಹಾರಕ್ಕೆ 25 ರೂ.

    ಚೆನ್ನಾಗಿಲ್ಲದ ನೋಟ್‍ಗಳ ಬದಲಾವಣೆಗೆ:
    5 ಸಾವಿರ ರೂ. ವರೆಗೆ ಅಥವಾ 20 ನೋಟ್‍ಗಳ ಬದಲಾವಣೆಗೆ ಯಾವುದೇ ಶುಲ್ಕ ಇಲ್ಲ. ಆದ್ರೆ 20ಕ್ಕಿಂತ ಹೆಚ್ಚು ನೋಟ್‍ಗಳಿದ್ರೆ ಒಂದು ನೋಟ್‍ಗೆ 2 ರೂ. ಜೊತೆಗೆ ಸೇವಾ ಶುಲ್ಕ ಕೊಡಬೇಕಾಗುತ್ತದೆ. ಇನ್ನು 5 ಸಾವಿರ ರೂ. ಗಿಂತ ಹೆಚ್ಚಿನ ಮೊತ್ತವಿದ್ರೆ ಪ್ರತಿ ನೋಟ್‍ಗೆ 2 ರೂ. ಅಥವಾ ಪ್ರತಿ 1000 ರೂಪಾಯಿಗೆ 5 ರೂ. ಯಾವುದು ಅಧಿಕವೋ ಆ ಮೊತ್ತ ಜೊತೆಗೆ ಸೇವಾ ಶುಲ್ಕ ತೆರಬೇಕಾಗುತ್ತದೆ.

    ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಖಾತೆಗಳ ಸೇವಾ ಶುಲ್ಕ
    10 ಹಾಳೆಗಳ ಚೆಕ್ ಬುಕ್ ಪಡೆಯಲು 30 ರೂ. ಜೊತೆಗೆ ಸೇವಾ ಶುಲ್ಕ ಕೊಡಬೇಕು. ಹಾಗೆ 25 ಹಾಳೆಗಳ ಚೆಕ್‍ಬುಕ್‍ಗೆ 75 ರೂ. ಜೊತೆಗೆ ಸೇವಾ ಶುಲ್ಕ, 50 ಹಾಳೆಗಳ ಚೆಕ್ ಬುಕ್‍ಗೆ 150 ರೂ. ಜೊತೆಗೆ ಸೇವಾ ಶುಲ್ಕ ತೆರಬೇಕಾಗುತ್ತದೆ.

    ಎಟಿಎಂ ಕಾರ್ಡ್‍ಗಾಗಿ
    ಕೇವಲ ರುಪೇ ಕಾರ್ಡ್‍ಗಳನ್ನ ಮಾತ್ರ ಉಚಿತವಾಗಿ ನೀಡಲಾಗುತ್ತದೆ. ಎಟಿಎಂನಿಂದ ಹಣ ವಿತ್‍ಡ್ರಾ ಮಾಡಲು ತಿಂಗಳ ಮೊದಲ 4 ವಿತ್‍ಡ್ರಾವಲ್‍ಗೆ ಯಾವುದೇ ಶುಲ್ಕ ಇರುವುದಿಲ್ಲ. 4 ಕ್ಕಿಂತ ಹೆಚ್ಚಿನ ವಿತ್‍ಡ್ರಾವಲ್ ಮಾಡಿದ ಬಳಿಕ ಎಸ್‍ಬಿಐ ಶಾಖೆಯಲ್ಲೇ ಮತ್ತೆ ವಿತ್‍ಡ್ರಾ ಮಾಡಿದ್ರೆ ಪ್ರತಿ ವಿತ್‍ಡ್ರಾವಲ್‍ಗೆ 50 ರೂ. ಜೊತೆಗೆ ಸೇವಾ ಶುಲ್ಕ, ಬೇರೆ ಬ್ಯಾಂಕ್‍ಗಳ ಎಟಿಎಂನಲ್ಲಿ ವಿತ್‍ಡ್ರಾ ಮಾಡಿದ್ರೆ ಪ್ರತಿ ವಿತ್‍ಡ್ರಾವಲ್‍ಗೆ 20 ರೂ. ಜೊತೆಗೆ ಸೇವಾ ಶುಲ್ಕ ಕೊಡಬೇಕು. ಹಾಗೆ ಎಸ್‍ಬಿಐ ಎಟಿಎಂಗಳಲ್ಲಿ ವಿತ್‍ಡ್ರಾ ಮಾಡಿದ್ರೆ 10 ರೂ. ಜೊತೆಗೆ ಸೇವಾ ಶುಲ್ಕ ವಿಧಿಸಲಾಗುತ್ತದೆ.

  • ಎಸ್‍ಬಿಐ ಖಾತೆದಾರರಿಗೆ ಶಾಕ್- ಎಟಿಎಂಗಳಲ್ಲಿ ತಿಂಗಳಿಗೆ 5ಕ್ಕಿಂತ ಹೆಚ್ಚು ಬಾರಿ ವಿತ್‍ಡ್ರಾ ಮಾಡಿದ್ರೆ ಶುಲ್ಕ

    ಎಸ್‍ಬಿಐ ಖಾತೆದಾರರಿಗೆ ಶಾಕ್- ಎಟಿಎಂಗಳಲ್ಲಿ ತಿಂಗಳಿಗೆ 5ಕ್ಕಿಂತ ಹೆಚ್ಚು ಬಾರಿ ವಿತ್‍ಡ್ರಾ ಮಾಡಿದ್ರೆ ಶುಲ್ಕ

    – ಖಾತೆಗಳಲ್ಲಿ ಕನಿಷ್ಠ ಬಾಕಿ ಉಳಿಸಿಕೊಳ್ಳದಿದ್ದರೆ ದಂಡ

    ನವದೆಹಲಿ: ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರೋ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆದಾರರು ಇಂದಿನಿಂದ ತಮ್ಮ ಖಾತೆಯಲ್ಲಿ ಕನಿಷ್ಠ ಬಾಕಿ ಉಳಿಸಿಕೊಳ್ಳದಿದ್ದರೆ ದಂಡ ಕಟ್ಟಬೇಕಾಗುತ್ತದೆ.

    ಮೆಟ್ರೋ ನಗರಗಳಲ್ಲಿರುವ ಶಾಖೆಗಳ ಎಸ್‍ಬಿಐ ಖಾತೆದಾರರು ತಿಂಗಳಿಗೆ ಕನಿಷ್ಠ 5 ಸಾವಿರ ರೂ. ಬ್ಯಾಲೆನ್ಸ್ ಹೊಂದಿರಬೇಕು. ಕನಿಷ್ಠ ಬಾಕಿ ಉಳಿಸಿಕೊಂಡಿಲ್ಲವಾದ್ರೆ 50 ರಿಂದ 100 ರೂ. ದಂಡ ಕಟ್ಟಬೇಕು. ಇನ್ನು ನಗರ ಪ್ರದೇಶಗಳ ಶಾಖೆಗಳಲ್ಲಿ ಖಾತೆ ಹೊಂದಿರುವವರು 3 ಸಾವಿರ ರೂ., ಅರೆನಗರ ಪ್ರದೇಶಗಳ ಖಾತೆದಾರರು 2 ಸಾವಿರ ರೂ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಖಾತೆದಾರರು 1 ಸಾವಿರ ರೂ. ಕನಿಷ್ಠ ಬಾಕಿ ಉಳಿಸಿಕೊಂಡಿರಬೇಕು. ಈ ನಿಯಮ ಉಲ್ಲಂಘಿಸಿದ್ರೆ 20 ರಿಂದ 50 ರೂ.ವರೆಗೆ ದಂಡ ತೆರಬೇಕು.

    ಎಟಿಎಂ ವಿತ್‍ಡ್ರಾವಲ್‍ಗೂ ನಿಯಮ: ಇನ್ಮುಂದೆ ಎಸ್‍ಬಿಐ ಖಾತೆದಾರರು ಎಟಿಎಂಗಳಿಂದ ಹೆಚ್ಚು ಬಾರಿ ಹಣ ವಿತ್‍ಡ್ರಾ ಮಾಡಿದ್ರೂ ಶುಲ್ಕ ತೆರಬೇಕು. ಇತರೆ ಬ್ಯಾಂಕ್‍ಗಳ ಎಟಿಎಂಗಳಲ್ಲಿ ಎಸ್‍ಬಿಐ ಖಾತೆದಾರರು ತಿಂಗಳಿಗೆ 3ಕ್ಕಿಂತ ಹೆಚ್ಚು ಬಾರಿ ಹಣ ವಿತ್‍ಡ್ರಾ ಮಾಡಿದ್ರೆ 20 ರೂ.ವರೆಗೆ ಶುಲ್ಕ ತೆರಬೇಕು. ಹಾಗೂ ಎಸ್‍ಬಿಐ ಎಟಿಎಂಗಳಲ್ಲಿ ತಿಂಗಳಿಗೆ 5ಕ್ಕಿಂತ ಹೆಚ್ಚು ಬಾರಿ ಹಣ ಡ್ರಾ ಮಾಡಿದ್ರೆ 10 ರೂ. ಶುಲ್ಕ ಕಟ್ಟಬೇಕು. ಒಂದು ವೇಳೆ ಖಾತೆಯಲ್ಲಿ ಡ್ರಾ ಮಾಡಿದ ಬಳಿಕವೂ 25 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣ ಇದ್ದರೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಹಾಗೆಯೇ ಬೇರೆ ಬ್ಯಾಂಕ್‍ಗಳ ಎಟಿಎಂನಲ್ಲಿ ಡ್ರಾ ಮಾಡಿದ ಬಳಿಕವೂ ಖಾತೆಯಲ್ಲಿ 1 ಲಕ್ಷ ರೂ.ಗಿಂತ ಹೆಚ್ಚಿನ ಹಣ ಇದ್ದರೆ ಶುಲ್ಕ ಕಟ್ಟಬೇಕಿಲ್ಲ. ಈ ಎಲ್ಲಾ ನಿಯಮಗಳು ಇಂದಿನಿಂದಲೇ ಜಾರಿಯಾಗಲಿದೆ.

    ಈ ಹೊಸ ನಿಯಮಗಳನ್ನ ಜಾರಿಗೆ ತಂದಿರುವುದನ್ನ ಎಸ್‍ಬಿಐ ಬ್ಯಾಂಕ್ ಸಮರ್ಥಿಸಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ್‍ಧನ್ ಖಾತೆಗಳು ಇರೋದ್ರಿಂದ ಅದನ್ನು ನಿರ್ವಹಿಸುವ ಸಲುವಾಗಿ ಕೆಲವೊಂದಿಷ್ಟು ಶುಲ್ಕ ವಿಧಿಸುವುದು ಅನಿವಾರ್ಯ ಎಂದು ಹೇಳಿದೆ.

    ಇವತ್ತು ನಮ್ಮ ಬಳಿ 11 ಕೋಟಿಯಷ್ಟು ಜನ್‍ಧನ್ ಖಾತೆಗಳಿವೆ. ಇಷ್ಟು ಹೆಚ್ಚಿನ ಸಂಖ್ಯೆಯ ಖಾತೆಗಳನ್ನ ನಿರ್ವಹಣೆ ಮಾಡಲು ಈ ಶುಲ್ಕ ಅಗತ್ಯ. ಹಲವಾರು ಅಂಶಗಳನ್ನ ಪರಿಗಣಿಸಿ, ಸೂಕ್ಷ್ಮವಾಗಿ ಪರಿಶೀಲಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ಹಿಂದೆಯೂ ದಂಡ ವಿಧಿಸಲಾಗುತ್ತಿತ್ತು. ಆದರೆ 2012ರಲ್ಲಿ ಅದನ್ನು ಹಿಂಪಡೆದ ಏಕೈಕ ಬ್ಯಾಂಕ್ ಎಸ್‍ಬಿಐ ಆಗಿತ್ತು ಎಂದು ಎಸ್‍ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.

    ಇಂದಿನಿಂದ ಎಸ್‍ಬಿಐಗೆ ಸಹವರ್ತಿ ಬ್ಯಾಂಕ್‍ಗಳಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೋರ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ್ ಹಾಗೂ ಭಾರತೀಯ ಮಹಿಳಾ ಬ್ಯಾಂಕ್ ವಿಲೀನವಾಗಿದೆ.