Tag: atm vehicle

  • ATM ವಾಹನಗಳಲ್ಲಿ ಸಾಗುಸುತ್ತಿದ್ದ 4.75 ಕೋಟಿ ಹಣ ಸೀಜ್

    ATM ವಾಹನಗಳಲ್ಲಿ ಸಾಗುಸುತ್ತಿದ್ದ 4.75 ಕೋಟಿ ಹಣ ಸೀಜ್

    ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಎಟಿಎಂ ವಾಹನಗಳಲ್ಲಿ ಸಾಗಿಸುತ್ತಿದ್ದ 4.75 ಕೋಟಿ ರೂ. ಹಣವನ್ನು ಹೆಬ್ಬಗೋಡಿ ಪೊಲೀಸರು ಸೀಜ್ ಮಾಡಿದ್ದಾರೆ.

    ರೈಟರ್ಸ್ ಕಂಪನಿಯ ಮೂರು ವಾಹನಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶುಕ್ರವಾರ 10 ಲಕ್ಷದಷ್ಟು ಹೆಚ್ಚುವರಿ ಹಣ ಸಾಗಾಟ ಹಿನ್ನೆಲೆ ದೂರು ದಾಖಲಾಗಿತ್ತು. ಹಣ ಸಾಗಿಸಲು ಆರ್‌ಬಿಐ (RBI) ಮಾರ್ಗಸೂಚಿಯನ್ನು ಪಾಲನೆ ಮಾಡಿಲ್ಲ. ನಿಯಮ ಉಲ್ಲಂಘಿಸಿದ ಪರಿಣಾಮ ಎಟಿಎಂ ವಾಹನಗಳನ್ನು ವಶಕ್ಕೆ ಪಡೆದು ಹಣವನ್ನು ಸೀಜ್ ಮಾಡಲಾಗಿದೆ. ಇದನ್ನೂ ಓದಿ: ಪೊಲೀಸರ ಭರ್ಜರಿ ಭೇಟೆ – ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ

    ಆರ್‌ಬಿಐ ಮಾರ್ಗಸೂಚಿ ಮೀರಿ ಹಲವು ಬ್ಯಾಂಕ್‌ಗಳ ಹಣವನ್ನು ಎಟಿಎಂ ವಾಹನಗಳಲ್ಲಿ ಸಾಗಿಸಲಾಗುತ್ತಿತ್ತು. ವೀರಸಂದ್ರ ಸಿಗ್ನಲ್ ಬಳಿಯ ಚೆಕ್‌ಪೋಸ್ಟ್ ಬಳಿ ಹಣವನ್ನು ಸೀಜ್ ಮಾಡಲಾಗಿದೆ.

    ಆರ್‌ಬಿಐ ಕ್ರಮದ ಪ್ರಕಾರ, ಒಟ್ಟು ಮೊತ್ತದ ಸ್ಕ್ಯಾನ್ ಜನರೇಟ್ ಆಗಿರಬೇಕು. ಆದರೆ ಇಲ್ಲಿ ಸಾಗಿಸುತ್ತಿದ್ದ ಮೂರು ವಾಹನಗಳಿಗೂ ಮೊತ್ತದ ಸ್ಕ್ಯಾನರ್ ಜೆನರೇಟ್ ಆಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಎಂಗೇಜ್ಮೆಂಟ್ ಆಗಿದ್ದವಳಿಂದಲೇ ಹತ್ಯೆಗೆ ಯತ್ನ- ಪ್ರಾಣಾಪಾಯದಿಂದ ಯುವಕ ಪಾರು

  • ಎಟಿಎಂ ವಾಹನದಲ್ಲಿ ಅನುಮಾನಾಸ್ಪದವಾಗಿ ಸಾಗಿಸುತ್ತಿದ್ದ ಕೋಟ್ಯಂತರ ರೂ. ವಶಕ್ಕೆ

    ಎಟಿಎಂ ವಾಹನದಲ್ಲಿ ಅನುಮಾನಾಸ್ಪದವಾಗಿ ಸಾಗಿಸುತ್ತಿದ್ದ ಕೋಟ್ಯಂತರ ರೂ. ವಶಕ್ಕೆ

    ಬೆಂಗಳೂರು: ಎಟಿಎಂ ವಾಹನದಲ್ಲಿ ಅನುಮಾನಾಸ್ಪದವಾಗಿ ಸಾಗಿಸುತ್ತಿದ್ದ ಕೋಟ್ಯಂತರ ರೂ. ಹಣವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ನಗರದ ಹಲಸೂರು ಬಳಿಯ ಗುರುದ್ವಾರದ ಚೆಕ್ ಪೋಸ್ಟ್ ಬಳಿ ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ್ದು, ಕೂಡ್ಲಿಗೇಟ್ ನಿಂದ ಹಲಸೂರು ರಸ್ತೆ ಕಡೆಗೆ ತೆರಳುತ್ತಿದ್ದ ವಾಹನವನ್ನು ಪರಿಶೀಲಿಸಿದಾಗ ಕೋಟ್ಯಂತರ ರೂ.  ಪತ್ತೆಯಾಗಿದೆ. ಎಟಿಎಂ ವಾಹನದಲ್ಲಿ ಬ್ಯಾಗ್ ಗಳ ಮೂಲಕ ಹಣವನ್ನು ಸಾಗಿಸಲಾಗುತ್ತಿತ್ತು. ಅನುಮಾನಾಸ್ಪದ ಹಣ ಎಂದು ತಿಳಿಯುತ್ತಿದ್ದಂತೆ ಚುನಾವಣಾ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

    ಸಿಎಂಎಸ್ ಏಜೆನ್ಸಿಗೆ ಸೇರಿದ ಎಟಿಎಂ ವಾಹನ ಇದಾಗಿದ್ದು, ಅಂದಾಜು ಎರಡು ಕೋಟಿ ರೂ.ಗೂ ಅಧಿಕ ಹಣ ಇದೆ. ವಿಚಾರಣೆ ವೇಳೆ ಹಣ ಸಾಗಾಟದ ಬಗ್ಗೆ ಚಾಲಕ ಹಾಗೂ ಗನ್ ಮ್ಯಾನ್ ಮಾಹಿತಿ ನೀಡಿಲ್ಲ. ದಾಖಲೆಗಳಿಲ್ಲದೆ ಹಣ ಸಾಗಿಸಲಾಗುತ್ತಿತ್ತು ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಚುನಾವಣಾಧಿಕಾರಿಗಳು ದಾಖಲೆ ಕೇಳಿದರೆ, ಬಿಟ್ಟು ಬಂದಿದ್ದೇವೆ ಎಂದು ಎಟಿಎಂ ವಾಹನದ ಚಾಲಕ ಹಾಗೂ ಗನ್ ಮ್ಯಾನ್ ಸಬೂಬು ಹೇಳಿದ್ದಾರೆ. ಸರಿಯಾಗಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಒಬ್ಬ ಅಧಿಕಾರಿ, ಗನ್ ಮ್ಯಾನ್, ಡ್ರೈವರ್ ಅವರನ್ನು ವಾಹನ ಸಮೇತ ಭಾರತಿನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಪೂರ್ವ ವಿಭಾಗ ಡಿಸಿಪಿ ಶರಣಪ್ಪ, ಎಸಿಪಿ ಫಾತೀಮಾ, ಇನ್ಸ್‌ಪೆಕ್ಟರ್ ಜಿ.ಪಿ.ರಮೇಶ್ ಪೊಲೀಸ್ ಠಾಣೆಗೆ ಆಗಮಿಸಿದ ಬಳಿಕ ಹಣ ಪರಿಶೀಲಿಸಿ, ವಿಚಾರಣೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • 90 ಲಕ್ಷದೊಂದಿಗೆ ಎಟಿಎಂ ಸಿಬ್ಬಂದಿ ಎಸ್ಕೇಪ್ ಕೇಸ್- ಬಳ್ಳಾರಿಯಲ್ಲಿ ಆರೋಪಿಗಳು ಅರೆಸ್ಟ್

    90 ಲಕ್ಷದೊಂದಿಗೆ ಎಟಿಎಂ ಸಿಬ್ಬಂದಿ ಎಸ್ಕೇಪ್ ಕೇಸ್- ಬಳ್ಳಾರಿಯಲ್ಲಿ ಆರೋಪಿಗಳು ಅರೆಸ್ಟ್

    ಬೆಂಗಳೂರು: 90 ಲಕ್ಷ ಎಟಿಎಂ ಹಣದೊಂದಿಗೆ ಸಿಬ್ಬಂದಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬೆಂಗಳೂರಿನ ಪಶ್ಚಿಮ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಬಳ್ಳಾರಿಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ನಾರಾಯಣಸ್ವಾಮಿ, ನರಸಿಂಹರಾಜು ಹಾಗೂ ಸಹಚರರಾದ ರಿಯಾಜ್ ಮತ್ತು ಜಗದೀಶ್ ಬಂಧಿತ ಆರೋಪಿಗಳು. ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಆರೋಪಿಗಳನ್ನು ಖಾಕಿ ಪಡೆ ಬಂಧಿಸಿದೆ. ಆರೋಪಿಗಳಿಂದ 80 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ.

    ಜ. 29ರಂದು 90 ಲಕ್ಷ ರೂ. ಹಣ ಇದ್ದ ಟಾಟಾ ಸುಮೋ ಸಮೇತ ಆರೋಪಿಗಳು ಪರಾರಿಯಾಗಿದ್ದರು. ಸಿಎಂಎಸ್ ಏಜೆನ್ಸಿಗೆ ಸೇರಿದ ಎಟಿಎಂ ವಾಹನ ಇದಾಗಿತ್ತು.

    ಸಿಎಂಎಸ್ ಕಂಪನಿಯಲ್ಲಿ ಮೂರು ವರ್ಷಗಳಿಂದ ಆರೋಪಿಗಳು ಕೆಲಸ ಮಾಡುತ್ತಿದ್ದರು. ಗನ್ ಮ್ಯಾನ್ ಗೆ ಬಾಳೆ ಹಣ್ಣು ತರಲು ಹೇಳಿ ಎಟಿಎಂ ವಾಹನದೊಂದಿಗೆ ಎಸ್ಕೇಪ್ ಆಗಿದ್ದರು. ಬಳಿಕ ಮಾದನಾಯಕನಹಳ್ಳಿ ಸಮೀಪದ ಕಿತ್ತನಹಳ್ಳಿ ಬಳಿ ಟಾಟಾ ಸುಮೋ ಬಿಟ್ಟು, ಹಣದ ಸಮೇತ ಬಳ್ಳಾರಿಗೆ ಪರಾರಿಯಾಗಿದ್ದರು. ಈ ಬಗ್ಗೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಎಟಿಎಂ ಹಣ ದೋಚಲು 15 ದಿನಗಳಿಂದ ಆರೋಪಿಗಳು ಪ್ಲಾನ್ ಮಾಡಿದ್ದರು. ನಾರಾಯಣಸ್ವಾಮಿ ಸ್ನೇಹಿತರ ಬಳಿ 15 ಲಕ್ಷ ಸಾಲ ಮಾಡಿದ್ದು, ಸಾಲ ತೀರಿಸಲು ಹಣ ದೋಚಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.